ಒಂದು ಹೇಳಿಕೊಳ್ಳಲು – ಅಭಿವ್ಯಕ್ತಿಸಲು – ದುಸ್ತರವೆನಿಸುವ, ಆದರೆ, ತಮ್ಮ ತಮ್ಮ ಅನುಭಾವ – ಅಪರೋಕ್ಷಾನುಭೂತಿಯ ಮೂಲಕ, ಅಪರಮಹಿಮಾನ್ವಿತವಾದ – ಚಿರಂತನ ಚೇತನ ಸರ್ವ ರೀತಿಯ ಆಗುಹೋಗುಗಳಿಗೂ ಕಾರಣವಾಗಿ ದ್ಯೋತಕವಾಗಿದೆ, ಎಂಬುದು ದೈವೀಶಕ್ತಿ – ಭಗವಂತ – ಪರಮಾತ್ಮ – ಎಂದೆಲ್ಲ ತಿಳಿಯಬರುತ್ತದೆ. ಇಂಥ ದಿವ್ಯ ಪ್ರಜ್ಞೆಯಿಂದ ತಮಿಳುನಾಡಿನ ದ್ರಾವಿಡ ವೈಷ್ಣವ ಸಂತರಾದ ಆಳ್ವಾರರು ತಮಿಳಿನಲ್ಲಿ ಹಾಡಿದ್ದು – ನಾಲಾಯಿರ ದಿವ್ಯ ಪ್ರಬಂಧ – ದ್ರಾವಿಡಾಮ್ನಯ – ದ್ರಾವಿಡ ವೇದ – “ಆಳ್ವಾರರ ಭಕ್ತಿ ಭಾವಗೀತೆಗಳು” ಎಂದೆಲ್ಲ ಕರೆಯುವುದು. ದೈವ ಸಾಕ್ಷಾತ್ಕಾರದ ಏಕ ಮೇವ ಧ್ಯೇಯದಿಂದ ಅನೇಕ ಮಂತ್ರದ್ರಷ್ಟಾರ ಋಷಿಗಳು, ದರ್ಶಿಸಿ (ಕಾಣ್ಕೆ) ತಿಳಿಯಪಡಿಸಿದ ವೇದಮಂತ್ರಗಳ ಹಾಗೆಯೇ, ಅಷ್ಟೇ ಪ್ರಮಾಣಕರವಾದದ್ದು ವಿಶ್ವಾಸಾರ್ಹ ಶ್ರೇಯಸ್ಕರ ನಮ್ಮ ಆಳ್ವಾರುಗಳ ಹಾಡುಗಳು. ನಮ್ಮಳ್ವಾರರು, ಮಧುರಕವಿ, ಕುಲಶೇಖರರಲ್ಲದೆ, ಇವರೆಲ್ಲರಿಗೂ ಬಹಳ ಹಿಂದೆಯೇ ಆಗಿಹೋದ ಪೊದತ್ತಾಳ್ವಾರ್ (ಭೂತಯೋಗಿಯೆಂದು ಇನ್ನೊಂದು ಹೆಸರು), ಪೇಯಾಳ್ವಾರ್ (ಉನ್ಮಾದಿ), ಪೊಯ್ ಹೈ ಆಳ್ವಾರ್ (ಸರೋಯೋಗಿ) ಮೊದಲಾಗಿ ಹನ್ನೆರಡು ಮಂದಿ ಆಳ್ವಾರರು (ಆಂಡಾಳ್ ಎಂಬುವ ಹೆಣ್ಣು ಕೂಡ ಸೇರಿ!) ತಮ್ಮ ತಮ್ಮ ಅನುಭವದ ಆನಂದವನ್ನು – ಶ್ರೀಮನ್ನಾರಾಯಣನ ದಿವ್ಯ ವೈಭವ – ಮಹಿಮೆ – ತಮ್ಮ ಸಮಾಜ – ಸಂಸ್ಕೃತಿ ದರ್ಶನ – ಎಲ್ಲವನ್ನೂ ಹೊರಹೊಮ್ಮಿಸಿದ್ದಾರೆ – ದಿವ್ಯ ಪ್ರಬಂಧಗಳ ಮೂಲಕ! ಅದರಲ್ಲಿಯೂ ನಮ್ಮಾಳ್ವಾರವರನ್ನು ಕುರಿತಂತೆ (ಶ್ರೀಶಠಗೋಪ ಕೋಪವೆಂಬ ಶಠ – “ಅಹಂ” ಅನ್ನು ಜಯಿಸಿದವರು) – “ಪ್ರಪನ್ನ ಜನಕೂಟಸ್ಥ”, ವೇದವನ್ನು ತಮಿಳಿನಲ್ಲಿ ರಚಿಸಿ ಹಾಡಿದವರೆಂದೆಲ್ಲ ಖ್ಯಾತಿಯಿದೆ! ಉಳಿದೆಲ್ಲ ದರ್ಶನಗಳಿಗೆ – ತತ್ವ ಸಿದ್ಧಾಂತಗಳಿಗೆ – ಆಕರ, ದಿವ್ಯ ಪ್ರಬಂಧ ಪಾಶುರಗಳಲ್ಲಿ ಲಭಿಸಿರುವುದು –

೧. ಪ್ರಬಂಧ – ಹಿಂದೆ ಹಾಡಿನ ರೂಪಾದುಲ್ಲದ್ದ ಸಾಹಿತ್ಯ ಪ್ರಕಾರ ಉದಾ : ತ್ಯಾಗರಾಜರ “ನೌಕಾವಿಹಾರ” ಈಗಿನ – ಬೇರೆ ರೀತಿಯ ಸಾಹಿತಿಕ ಪ್ರಕಾರ ಪ್ರಬಂಧವು! ವಿಶಿಷ್ಟಾದ್ವೈತ ಸಿದ್ಧಾಂತಕ್ಕೆ ದಿವ್ಯ ಪ್ರಬಂಧಗಳು ಮುಖ್ಯ ಆಕರ, ಎಂಬುವದು ಗಣನೀಯ ಅಂಶ.

ಆಳ್ವಾರ್ರುಗಳು, ಭಕ್ತಿ ಪ್ರಧಾನರಸಸ್ಯಂದಿಯಾಗಿ ರಚಿಸಿರುವ ನಾಲಾಯಿರ ದಿವ್ಯ ಪ್ರಬಂಧಗಳಲ್ಲಿ ವಿಶಿಷ್ಟಾದ್ವ್ಯತದ ಮೂಲ – ವೇದೋಪನಿಷತ್ತುಗಳು, ಇತಿಹಾಸ ಪುರಾಣಗಳು, ಪಾಂಚರತ್ರಾದಿ ಆಗಮ, ವೇದವ್ಯಾಸರ ಬ್ರಹ್ಮ ಸೂತ್ರ – ಇವೆಲ್ಲದರ ಎಳೆಗಳೂ, ಪ್ರಭಾವವೂ, ಸ್ಪಷ್ಟವಾಗಿ ಕಾಣಬರುತ್ತದೆ. ಉಳಿದ ಸಿದ್ಧಾಂತ – ಮತತತ್ವಗಳಿಗೆ – ಪ್ರಸ್ಥಾನತ್ರಯ (ಬ್ರಹ್ಮಸೂತ್ರ – ವೇದೋಪನಿಷತ್ತು, ಭಗವದ್ಗೀತೆ)ಗಳಿಗಿರುವಂತೆ ವಿಸಿಷ್ಟಾದ್ವೈತ್ವದಲ್ಲಿ ವೇದೆ – ಗೀತೆ, ಬ್ರಹ್ಮಸೂತ್ರ, ದಿವ್ಯ ಪ್ರಬಂಧಗಳು – ಎಂಬುದಾಗಿ ನಾಲ್ಕು ಸಿದ್ಧವಾಗುತ್ತವೆ. ಆಳ್ವಾರರುಗಳ ದಿವ್ಯಪ್ರಬಂಧಗಳೂ, ಅವರು ಸವಿದ ಭಗವತ್ಪ್ರೇಯ ಹಾಗೂ ಭಗವದನುಭವದ ಪರೀವಾಹಗಳಾದರೂ, ತತ್ವ – ಪುರುಷಾರ್ಥ ಸ್ವರೂಪವನ್ನು ಬಹಳ ಖಚಿತವಾಗಿ ತೋರಿಸಿ ಕೊಡುವುದು ಪರಿಗಣನಾರ್ಹ, ಶ್ರತಿ, ಸ್ಮೃತಿ – ಇತಿಹಾಸಗಳ ಆನಂತರದ ಕಾಲಕ್ಕೆ ಸೇರಿದ ಆಚಾರ್ಯರುಗಳಿಗೂ ಪೂರ್ವದಲ್ಲಿ ಮೂಡಿಬಂದಿರುವ ದಿವ್ಯಪ್ರಬಂಧಗಳು ಯಾವ ತೆರನಾಗಿ ಶ್ರೀವೈಷ್ಣವ ಸಿದ್ಧಾಂತವು ಅನಾದಿಕಾಲದಿಂದ ವಿಚ್ಛೇದವಿಲ್ಲದೆಯೇ ನಿರಂತರವಾಗಿ ಬೆಳೆದು ಬಂದಿದೆಯೆಂಬುದನ್ನು ಪ್ರಮಾಣೀಕರಿಸುತ್ತದೆ.

ಶ್ರೀಮನ್ನಾರಾಯಣನ ಸರ್ವೋತ್ತಮತ್ವ (ಶ್ರೀ ತತ್ವೆಂದೂ ಕರೆಯುವುದಿದೆ) ಆತನ ಪರ – ಸೌಲಭ್ಯತ್ವ, ಪ್ರಪತ್ತಿ – ಮೋಕ್ಷದ ಉಪಾಯತ್ವ, ಕೈವಲ್ಯದ ಅಲ್ಪತ್ವ ಹಾಗೂ ಭಗವಂತನ ನಿತ್ಯ ಕೈಂಕರ್ಯಲಾಭ – ಇವು ಆಳ್ವಾರರುಗಳ ಪ್ರಬಂಧಗಳ ಅಂತರಂಗ ಗುಣವಿಶೇಷ, ಎನ್ನಬಹುದು.

ಆಳ್ವಾರರ ಗೀತೆಗಳು ತಮಿಳು ಭಾಷೆಯಲ್ಲಿ ರಚಿತ ಆಗಿವೆ. ಈಗಿನವರಿಗೆ ಅರ್ಥ ಮಾಡಿಕೊಳ್ಳುವುದೂ ಕಷ್ಟ ಸಾಧ್ಯವೇ! ಇತರ ಭಾಷೆಗಳವರಿಗೆ ಇವು ದೂರವಾದವು ಎಂದೂ ಅನ್ನಿಸುತ್ತದೆ. ಜೊತೆಗೆ, “ಉಭಯ ವೇದಾಂತ” ಎನ್ನುವ ವಿಶೇಷ ಹೆಸರು ಪಡೆದಿರುವ ವಿಶಿಷ್ಟಾದ್ವೈತದ ಸ್ವರೂಪ ಅರಿಯಲು – ಸಂಸ್ಕೃತದಲ್ಲಿರುವ ವೇದ, ಇತ್ಯಾದಿಗಳ ಹಾಗೆಯೇ “ದ್ರಾವಿಡ – ವೇದಾಂತ”ವೆಂದೇ ಹೆಸರಾದ ಆಳ್ವಾರರ ದಿವ್ಯ ಪ್ರಬಂಧಗಳನ್ನು ಅಧ್ಯಯನ ಮಾಡುವುದು ಅತ್ಯಗತ್ಯ. ಈನಿಟ್ಟಿನಲ್ಲಿ ಆಳ್ವಾರ್ – ಆಚಾರ್ಯ ಪರಂಪರೆ, ಎಂಬುವ ಹಂತಗಳನ್ನು ಗುರುತಿಸಬೇಕಾಗುತ್ತದೆ – ಶತಮಾನಗಳ ಅಂತರದಿಂದಾಗಿ

ಆಳ್ವಾರರು ಎಂದರೆ ?

ಅ) ಭಕ್ತಿಯಲ್ಲಿ ಅದ್ದವರು, – ಮುಳುಗಿರುವವರು, ಭಗವಂತನ ಭಕ್ತಿ ಸಾಮ್ರಾಜ್ಯವನ್ನು ಆಳುವವರು, ಎಂದೆಲ್ಲ ಅರ್ಥ, ತಮಿಳುನಾಡು – ಕೇರಳಗಳ ವೈಷ್ಣವ ಭಕ್ತ – ಸಂತರಿವರು. ಸಾಮಾನ್ಯವಾಗಿ ಹಿಂದಣ

ಆ) ಎಲ್ಲ ವಿಷ್ಣು ವಿನಾಲಯಗಳಲ್ಲಿಯೂ ಆಳ್ವಾರರ ಪ್ರತ್ಯೇಕ ವಿಗ್ರಹಗಳು ಸಾಲಾಗಿರುವುದನ್ನು ಕಾಣುತ್ತೇವೆ. (ಶ್ರೀರಂಗ, ಶ್ರೀರಂಗಪಟ್ಟಣ, ಕರ್ನಾಟಕದ ಮಳೂರು, ಕಳಲೆ, ದೇವನೂರು ಕಡೂರು, ಮೇಲುಕೋಟೆ, ಕಾಂಚೀಪುರ, ತಿರುವಳ್ಳೂರು, ದಿವ್ಯದೇಶಗಳು ಹೀಗೆ) ಹಾಗೂ ಪೂಜಾ ಸಮಯದಲ್ಲಿ ಶಾತ್ತುಮುರೈ – ಅಂದರೆ ಭಗವಂತನಿಗೆ ಅರ್ಪಿಸುವ ಮಂಗಳಾ ಶಾಸನ, ವೇದ ಮಂತ್ರ ಪುಷ್ಪ – ಪ್ರಬಂಧಗಳ ಪಠನೆಯೂ ಒಳಗೊಂಡಂತೆ!

ಇ) ದಕ್ಷಿಣ ಭಾರತ ತಮಿಳು ನಾಡಿನಲ್ಲಿ – ಪುರಾಣೇತಿಹಾಸ – ವೇದಾಂತದರ್ಶನ ಶಾಖೆಗಳ ನಡುವಿನ ಅವಧಿಯಲ್ಲಿ ಬೆಳಗಿದವರು.

ದೈವದಾಲೋಚನೆಯಲ್ಲೇ ಗಾಢವಾಗಿ ಮುಳುಗಿದವರು, ಭಗವಂತನ ಗುಣ, ಹಿರಿಮೆ ಗರಿಮೆ, ವೈಭವಗನ್ನು ತಮಿಳಿನಲ್ಲಿ ಹಾಡಿದರು.

ಉ) ಆಳ್ವಾರ್ರು‍ಗಳಲ್ಲಿ ಯಾವುದೇ ರೀತಿಯ ಜಾತಿ – ಪಂಗಡ ಭೇದಗಳಿಲ್ಲವೇ ಇಲ್ಲ. ಶತಶತಮಾನಗಳ ಹಿಂದೆಯೇ ಮಾನವ ಜಾತಿ ತಾನೊಂದೇ ಎಂದು ಅನುಸರಿಸಿದವರು! ಆದರೆ, ಸಮಾಜ ಮಾಡಿಕೊಂಡಿರುವ ವಿವಿಧ ಜಾತಿಗಳಲ್ಲಿ ಹುಟ್ಟಿ ಬಂದವರು, ದೇವನೊಲಿದ ಕುಲಜರು ಎನ್ನುವುದು ಸೂಕ್ತ ಆದೀತು!

ಊ) ಆಳ್ವಾರರನ್ನು ದೇವದೂತರ ಅವತಾರವೆಂದೇ ಪರಿಗಣಿಸಿದ (ವಿಷ್ಣುವಿನ ಆಯುಧಗಳಾದ ಶಂಕ, ಚಕ್ರ, ಧನುಸ್ಸು, ಖಡ್ಗ, ಗದೆ, ಆಭರಣಗಳಾದ ಕೌಸ್ತುಭ, ಶ್ರೀವತ್ಸ ಹೀಗೆ ಎಲ್ಲದರ ಅಂಶರು)

ಋ) ಹರಿಜನ (ರಾಮಾನುಜರು ತಿರುಕುಲತ್ತಾರ್‌” – ಶ್ರೇಷ್ಠ ಕುಲದವರೆಂದೇ – ಕ್ರಿ.ಶ.೧೧ – ೧೨ ಶತಮಾನಗಳಲ್ಲೆ – ಗಾಂಧಿಯವರಿಗೆ ಬಹು ಮುನ್ನವೇ – ಪರಿಗಣಿಸಿ, ಗೌರವಿಸಿದರು ಎಂಬುವುದು ಮನನೀಯ) ಕುಲಜನಿದ್ದಾನೆ – ತಿರುಪಾಣಿ – ಕ್ಷತ್ರಿಯರು (ಕುಲಶೇಖರರು), ವೆಲ್ಲಾಳರು – ಹರದರು, ಶೂದ್ರರು, ಬ್ರಾಹ್ಮಣರು, ಎಲ್ಲರೂ ಇದ್ದಾರೆ. ಶ್ರೀರಂಗದಲ್ಲಿ ಇಂದೂ ಕಾಣುವ ದೇವಾಲಯ ಪ್ರಾಕಾರ, ಮಂಟಪ, ಎಲ್ಲವೂ ಕಳ್ಳರ ಕುಲದ ತಿರುಮಂಗೈ ನಿರ್ಮಿಸಿದ್ದು!

ಎ) ಆಳ್ವಾರರ ಬದುಕಿನ ಅವಧಿಯು, ಹಿರಿಯ ಸಂಶೋಧಕ – ವಿದ್ವಾಂಸರ ಅಭಿಮತದಂತೆ – ಕ್ರಿ.ಶ. ೭ – ೯ರ ಶತಕಗಳ ಕಾಲ ಮಾನ

ಸನಾತನ ಸಂಪ್ರದಾಯದಂತೆ, ದ್ವಾಪರಯುಗದಂತ್ಯ – ಕಲಿಯುಗದಾರಂಭ ವರ್ಷಗಳೆಂದು :

ಏ) ಆಳ್ವಾರರುಗಳು ರಚಿಸಿ, ಹಾಡಿ ಹೋದ ನಂತರ ಲುಪ್ತವಾದ ಪ್ರಬಂಧಗಳನ್ನು ಒಟ್ಟುಗೂಡಿಸಿ, ಸಂಕಲಿಸಿ – ಸಂಘಟಿಸಿದರು, ಆನಂತರದಲ್ಲಿ ಬಂದ ಯೋಗಿನಾಥಮುನಿಗಳು! ಆಚಾರ್ಯ ಪರಂಪರೆ ಇವರಿಂದ ಆರಂಭವಾಯಿತು.

ಆಳ್ವಾರರ ನೀತಿಗಳು ಪ್ರಧಾನತಃ ಪ್ರಾರ್ಥನಾಸ್ತೋತ್ರ ಸಮುಚ್ಚಯ ಆದರೂ ಇಲ್ಲಿಯ ಇಹದ ಬದುಕನ್ನು ಮಾಯೆ – ಮಿಥ್ಯೆ ಎಂದೆಲ್ಲ ತಿರಸ್ಕರಿಸದೆ, ಶೂನ್ಯ – ನಿರಾಶೆ ಪಡದೆ, ಬದುಕುವ ವ್ಯಕ್ತಿ – ಸಮುದಾಯ ಹಿತ – ಸ್ವಾಸ್ಥ್ಯ ಬಯಸುವ ದೈವದರ್ಶನಕ್ಕಾಗಿ ಹಂಬಲಿಸುವ ಗಾಢತ್ವ – ಒಂದು ರೀತಿಯ ಜ್ಞಾನ ರಶ್ಮಿಗಳು, ಎನ್ನುವುದು ಸೂಕ್ತವಾದೀತು, ನಾಲ್ಕು ಸಾವಿರ ಸಾಲುಗಳ ಈ ಪಾಶುರಗಳು ಉನ್ನತ ಕಾವ್ಯಗುಣವುಳ್ಳ ರಚನೆಗಳು – ಸನಾತನ ಧರ್ಮ – ಸಂಸ್ಕೃತಿ – ಸದಾಚಾರ – ಮಾನವೀಯ ಮೌಲ್ಯಗಳು – ನಾಡಿನ ಪ್ರೇಮ ಇವೆಲ್ಲ ಅಡಕವುಳ್ಳವು. ಜ್ಞಾನ (ಧೀಶಕ್ತಿ ಎಂಬರ್ಥದಲ್ಲಿ), ಪ್ರಜ್ಞೆ ಭಕ್ತಿ ಸಮರ್ಪಣಾಭಾವ ಏಕದೈವನಿಷ್ಠೆ. – ಭಕ್ತ – ನಾಯಕ – ನಾಯಕೀಭಾವ – ಕಿಂಕರ – ಹೀಗೆ ಎಲ್ಲ ಸ್ತರಗಳನ್ನೊಳಗೊಂಡ ದಿವ್ಯ ಪ್ರಬಂಧಗಳಿವು.

ತಮಿಳು, ನಾಡಿನ ಜನನುಡಿಯಾಗಿದ್ದು ಆ ನುಡಿಗಟ್ಟಿನಲ್ಲಿಯೇ ರಚಿತಗೊಂಡುದರಿಂದಾಗಿ, ಇಡೀ ದ್ರಾವಿಡ ದೇಶದಲ್ಲಿ ಪಾಮರಪಂಡಿತರಾದಿ ಎಲ್ಲರಲ್ಲಿಯೂ ಈ ದಿವ್ಯಪ್ರಬಂಧಗಳು ಪ್ರಸಾರವಾಗಿವೆ, ಈಗಲೂ ಉಳಿದೆದೆ. ಒಂದು ನಾಡಿನ ನುಡಿ ಎಷ್ಟು ಗಾಢವಾದ ಪ್ರಭಾವ ಬೀರಬಲ್ಲುದು, ಹಾಗೂ ಆಂದೋಲನ – ಚಳುವಳಿಗಳು ನಡೆಯಲು ಪ್ರೇರಕ ಶಕ್ತಿಯಾಗಬಲ್ಲುದೆನ್ನಲು ಆಳ್ವಾರರ ‘ದಿವ್ಯಪ್ರಬಂಧ’ಗಳು, ನಾಯನ್ಮಾರರ ‘ತೇವಾರ’ಗಳು ಸಾಕ್ಷಿಯಾಗುತ್ತವೆ. ಇದರಿಂದಾಗಿ ಗೀರ್ವಾಣ ಭಾಷೆ – ಸಂಸ್ಕೃತದಷ್ಟೇ ದಿವ್ಯಪ್ರಬಂಧಗಳಿಗೂ ಗೌರವ ಸಂದಿತು, ಸಲ್ಲುತ್ತಲಿದೆ.

ಭಕ್ತಿ ಪಂಥ – ಪಥ, ತಮಿಳಿನ ತೋಂಡೀ ಸಾಹಿತ್ಯ (ತೊಂಡರೆಂದರೆ ಭಕ್ತರು – ಅವರು ರಚಿಸಿದ್ದು ತೋಂಡೀ ಸಾಹಿತ್ಯ, ಕನ್ನಡ ಹರಿದಾಸರಕೃತಿ – ಕೀರ್ತನ ಸಂಪದದಲ್ಲಿಯೂ “ತೊಂಡ” ಪದ – ಭಕ್ತರೆಂಬರ್ಥದಲ್ಲಿ ಅನ್ವಯವಾಗಿದೆ) ದ್ರಾವಿಡ ವೇದ, ದ್ರವಿಡೋಪನಿಷತ್ತೆಂದೇ ನಾಲಾಯಾರ ಪ್ರಬಂಧ ಖ್ಯಾತಿಗಳಿಸಿವೆ. ಬಹುಜನ ಪ್ರಿಯ ಆಗಿವೆ, ಯಾವುದೇ ಕಾಮ್ಯೇಚ್ಛೆಯಿಂದ – ಅಗ್ರಹಾರ, ಕಡಗ – ಕಂಕಣ – ಪದವಿಗಾಗಿ ಹೊಸೆದ ಶಬ್ಬಗಳಲ್ಲ – ಗಿಳಿ – ಕೋಗಿಲೆ – ಭಾರಧ್ವಾಜ ಪಕ್ಷಿಗಳ ಹಾಗೆ ಸಹಜ ಆಗಿ ಹಾಡಿದವರು ಆಶೆಯಿರದ ಆಳ್ವಾರರು.

ಆಳ್ವಾರರನ್ನು ಕುರಿತಂತೆ ಕೆಲವು ಧ್ಯಾನಶ್ಲೋಕ ಉಲ್ಲೇಖಿಸಬಹುದು; ಅಸ್ಮದ್ಗುರು ಪರಮಗುರ್ರೂ‍ಯತಿವರ ಪೂರ್ಣೌ ಸಯಾಮುನಂ ರಾಮಮ್ |

ಪದ್ಮಾಕ್ಷನಾಥ ಶಠಜಿತ್ಸೇನೇಶ ರಮಾ ರಮಾಪರ್ತೀ ವಂದೇ ||
ಕಾಸಾರಭೂತ ಮಹದಾಹ್ವಯ ಭಕ್ತಿಸಾರಾನ್ |
ಸೇವೇ ಶಠಾರಿ ಕುಲಶೇಖರ ವಿಷ್ಣುಚಿತ್ತಾನ್ ||
ಭಕ್ತಾಂಘ್ರಿರೇಣು ಮುನಿವಾಹ ಚತುಷ್ಕವೀಂದ್ರಾನ್ |
ಮಾಧುರ್ಯಗಾನ ತುಲಸೀವನಜಾಯತೀಂರ್ದ್ರಾ ||

ಈ ಮುಂದೆ ತಿಳಿಸುವ ಹನ್ನೆರಡು ಆಳ್ವಾರರೂ ಈ ಶ್ಲೋಕದಲ್ಲಿ ಉಲ್ಲೇಖರಾಗಿದ್ದಾರೆ. ಆಳ್ವಾರರುಗಳಿಗೆ “ದಿವ್ಯಸೂರಿ”ಗಳೆಂದೂ ಕರೆಯುವುದಿದೆ. ಇದಕ್ಕೆ ಕಾರಣ ಅವರು ಸಾದಿಸಿದ

ದರ್ಶನದೈವದ ಕಾಣ್ಕೆ – “ಪಾದ್ಮತಂತ್ರಎಂಬುವ ಗ್ರಂಥದಲ್ಲಿ ಹೀಗಿದೆ :

ಸೂರಿ ಸಹೃದ್ಭಾಗವತ : ಸಾತ್ವತ : ಪಂಚಕಾಲವಿತ್ |
ಏಕಾಂತಿಕಃ ತನ್ಮಯಶ್ಚ ಪಾಂಚರಾತ್ರಿಕ ಇತ್ಯಪಿ ||
ಸರ್ವೇ ಸಮಾನಶ್ಚತ್ವಾರೋ ಗೋತ್ರ ಪ್ರವರ ವರ್ಜಿತಾಃ |
ಉತ್ಕರ್ಷೋ ನಾಪಕರ್ಷಶ್ಚ ಜಾತಿತಸ್ತ್ರೀಷು ಸಮ್ಮತಃ ||
ಫಲೇಶು ನಿಸ್ವೃಹಾಸ್ಸರ್ವೇ ದ್ವಾದಶಾಕ್ಷರ ಚಿಂತಕಾಃ |
ಮೋಕ್ಷೈಃ ನಿಶ್ಚಯಾಶ್ಯಾವಸೂತಕಾ ಶೌಚವರ್ಜಿತಾಃ ||

ಚೆನ್ನಾಗಿ ಎಲ್ಲ ತಿಳಿದವರು, ಭಾಗವತರು, ಸಾತ್ವತರು (ಸಾತ್ವಿಕರು) ಪಂಚಸಂಸಾಕರ (ಸಮಾಶ್ರಯ, ಪುಂಡ್ರಧಾರಣ, ಮಂತ್ರದೀಕ್ಷೆ, ಇತ್ಯಾದಿ) ಏಕಾಂತರು (ದೈವದಾಶೇಮಾತ್ರಾ) ತನ್ಮಯರು, ಪಾಂಚರಾತ್ರದಾಗಮ ಶ್ರದ್ಧೆಯುಳ್ಳವರು, ಜಾತಿಮತ ಯಾವುದೇ ಮಾನವ ನಿರ್ಮಿತ ಬಂಧಕಗಳಿರದವರು, ‘ದೈವನೊಲಿದಾತನೆ ಭಕ್ತನೆ ಕುಲಜ’ನೆಂಬ ಗುಣದವರು, ನಿಸ್ಪೃಹತೆ – ಫಲಾಪೇಕ್ಷೆ ಇರದವರು, ಓಂನಮೋನಾರಾಯಣಾಯ“! ಎಂಬ ಅಷ್ಟಾಕರ, ಓಂನಮೋ ಭಗವತೇ ವಾಸುದೇವಾಯ ಎಂಬ ದ್ವಾದಶಾಕ್ಷರ ಚಿಂತಕರು, ಮುಕ್ತಿಯಲ್ಲೂ ಆಸೆಯಿಲ್ಲ – ಯಾವುದೇ ಇಂದ್ರಿಯ ಅಶೌಚವಿಲ್ಲ – ಹಾಗೂ ಭಗವಂತನಲ್ಲಿಯೇ ಗಾಢಮನಸ್ಸು! ಇವು ಆಳ್ವಾರರ ಗುಣಗಳು, ಇದಕ್ಕೆ ಅನುಗುಣವಾಗಿ ಯೋಗ, ತಪ, ಜಪ – ಮನನ, ಇಂದ್ರಿಯಗಳ ನಿಯಂತ್ರಣ, ಆಹಾರನಿಯಮ, ಸುಖದುಃಕ ಸಮಾನತ್ವ, ಅಪರಿಗ್ರಹ, ಆಚರಿಸಿದರು ಆಳ್ವಾರರು, ಭಗವದ್ಗೀತೆಯ – ನಾಲ್ಕನೆಯ ಅಧ್ಯಾಯ – ೨೪ನೆಯ ಶ್ಲೋಕವು ಭಾಗವತಧರ್ಮ ಕುರಿತು ಹೀಗೆ ತಿಳಿಸುತ್ತದೆ :

ಬ್ರಹ್ಮಾರ್ಪಣಂ ಬ್ರಹ್ಮಹವಿಃ ಬ್ರಹ್ಮಾಗ್ನೌಬ್ರಹ್ಮಣಾಹುತಂ |
ಬ್ರಹ್ಮೈವ ತೇನಗಂತ್ಯವ್ಯಂ | ಬ್ರಹ್ಮಕರ್ಮ ಸಮಾಧಿನಾ ||

“ಜ್ಞಾನಿಯಾದ ಭಾಗವತನಿಗೆ ತಾನು ಮಾಡುವ ಕರ್ಮ – ಕರ್ಮಸಾಧಕವಾಗುವ ಸಾಮಗ್ರಿಗಳು, ಅರ್ಪಿಸುವ ಹವಿಸ್ಸು | ತದರ್ಪಣ ರೂಪವಾದ ಕರ್ಮಸಮಸ್ತವೂ ಬ್ರಹ್ಮಾತ್ಯಕ – ಸರ್ವವೂ ಬ್ರಹ್ಮ ಮಯವಾಗಿ ಕಾಣಿಸುತ್ತದೆ.”

ಪ್ರಹ್ಲಾದನಾರದ ಪರಾಶರ ಪುಂಡರೀಕ ವ್ಯಾಸ ಅಂಬರೀಷ
ಶುಕಶೌನಕ ಭೀಷ್ಮ ದಾಲಾಭ್ಯನ್ |
ರುಕ್ಮಾಂಗದ ಅರ್ಜುನ ವಸಿಷ್ಠ ವಿಭೀಷಣಾದೀನ್
ಪುಣ್ಯಾನಿಮಾನ್ ಪರಮ ಭಾಗವತಾನ್ ಸ್ಮರಾಮಿ ||

ಎಂಬುವಂತೆಯೆ ಹನ್ನೆರಡು ಜನ ಆಳ್ವಾರ ಸಂತರೂ ಭಾಗವತರೇ ಆಗಿದ್ದಾರೆ ಇಲ್ಲ ಪ್ರಪತ್ತಿ/ಶರಣಾಗತಿಗೇ ಪ್ರಾಧಾನ್ಯತೆ..

ಪೂಜನಾದ್ವಿಷ್ಣುಭಕ್ತಾನಾಂ | ಪುರುಷಾರ್ಥೋಸ್ತಿ ನೇತರಃ |
ತೇಷುವಿದ್ವೇಷತಃ ಕಿಂಚಿನ್ನಾಸ್ತಿ ನಾಶಕಮಾತ್ಮ ನಾಂ ||

ವಿಷ್ಣುಭಕ್ತರಾದವರ ಪೂಜನ/ಆರಾಧನೆ/ ಆಧರಿಸುವುದಕ್ಕೆ ಮಿಗಿಲಾದದ್ದೇನಿದೆ? ಹಾಗೆಯೇ ವಿಷ್ಣುಭಕ್ತರನ್ನು ದ್ವೇಷಿಸುವುದಕ್ಕಿಂತ ಆತ್ಮನಾಶನ ಕಾರ್ಯ ಇನ್ನೊಂದಿಲ್ಲ.

ಶ್ರೀ ಕುಲಶೇಖರಾಳ್ವಾರ್ ತನ್ನ ‘ಮುಕುಂದಮಾಲಾ’ ಸ್ತೋತ್ರದಲ್ಲಿ ಕೈಂಕರ್ಯ, ವಿಷ್ಣು ಭಕ್ತರ ಕೈಂಕರ್ಯ ಕುರಿತಂತೆ ಹೇಳುತ್ತಾರೆ : “……. ತ್ವದ್ವೃತ್ಯ ಭೃತ್ಯ ಪರಿಚಾರಕ ಭೃತ್ಯ ಭೃತ್ಯಸ್ಯ ಭೃತ್ಯ ಇತಿಮಾಂ ಸ್ಮರಲೋಕನಾಥ…….” ಆಳ್ವಾರರು ಪರಮೈಕಾಂತಿಗಳು ಏಕಾಂತಿಕಮತ – ಎಂಬುದನ್ನು ಈ ಮಾಲೆ ತಿಳಿಸಿದೆ:

ಸೂರಿಸುಹೃದ್ಬಾಗವತ ಸ್ಸಾತ್ವತಃ ಪಂಚಕಾಲವಿತ್‌ |
ಏಕಾಂತಿಕಃ ತನ್ಮಯಶ್ಚ ಪಾಂಚರಾತ್ರಿಕ ಇತ್ಯಪಿ

ಇದು ಭಾಗವತಧರ್ಮದ ಸಾರ ತುಂಬ ಪ್ರಾಚೀನ ಧರ್ಮವಿದು ಭಗವಂತ ಯಾವಾಗಲೂ ವಾತ್ಸಲ್ಯ – ಕೃಪೆ – ಕರುಣೆ – ಪ್ರೇಮ ಗುಣಗಳೊಡಗೂಡಿದವನು.

ಆಳ್ವಾರರ ಚಿಂತನೆ ಇದೇ ನಿಟ್ಟಿನಲ್ಲಿ ಸಲಿಲದಂತೆ ಹರಿಯುತ್ತದೆ.

ಆಳ್ವಾರರ ತಿಳಿಯ ಹೇಳುವ – ಈ ಭಾಗವತಮತದಲ್ಲಿ ವಿಷ್ಣುವಿಗೇ ಪ್ರಾಧಾನ್ಯ. ಋಗ್ವೇದದಲ್ಲಿ ವಿಷ್ಣುವು ಒಬ್ಬದೇವತೆ, ಕ್ರಮೇಣ ವರುಣ, ವಿಷ್ಣು, ಆದಿತ್ಯ, ಭಗ, ಎಲ್ಲ ನಾಮಾಂಕಿತ ಒಬ್ಬನೇ ಭಗವಂತನ ವಿವಿಧ ನಾಮಗಳೆಂದೂ ಏಕದೇವೋಪಾಸನೆಗೇ ಪ್ರಾಮುಖ್ಯತೆಯೆಂದೂ ಆನಂತರ ದಾರ್ಶನಿಕರಿಂದ ಪರಿಗಣಿಸಲ್ಪಟ್ಟಿತು ಏಕಂಸದ್ವಿಪ್ರಾ ಬಹುಧಾವದಂತಿಎಂಬುವುದು ಪ್ರಮಾಣ­ “ಏಕೋನಾರಾಯಣೋಹರಿ; ಶಿವಶ್ಚನಾರಾಯಣ;, ಶಕ್ರಶ್ಚನಾರಾಯಣ: – ಎಂದೆಲ್ಲ ನಾರಾಯಣೋಪನಿಷತ್ ಪ್ರಾರ್ಥಿಸುವುದುಪರಮಃಸ್ವರಾಟ್” – ಎಂಬುವ ಮಹಾವಿಷ್ಣುವಿಗೇ! ವಿಷ್ಣುಶ್ರೀಕೃಷ್ಣವಾಸುದೇವಃ ಸರ್ವಮ್ ಇತಿ – ಎಂಬುವ ಪರಮಾತ್ಮನ ಸರ್ವವ್ಯಾಪ್ತತ್ವ ಇದೆಲ್ಲ ಆಳ್ವಾರ್ ಸಂತರ ಚಿಂತನೆಗಳೇ!

ದೇವರ ಅವತಾರಗಳಲ್ಲಿ ಪ್ರಮುಖವಾದದ್ದು: ಪರ, ವ್ಯೂಹ, ವಿಭವ, ಹಾರ್ದ, ಅರ್ಚಾ/ಅರ್ಚಿಃ ಎಂಬುವುವು ಆರನೆಯದೇ ಅವತಾರ ಸ್ವರೂಪರನ್ನು ಕುರಿತದ್ದು. ಆಳ್ವಾರರು ಅವತಾರಸ್ವರೂಪರು ಎಂದೇ ಪರಿಗಣಿಸಲ್ಪಟ್ಟಿದ್ದಾರೆ.

ಆಳ್ವಾರರ ಹಿನ್ನೆಲೆ, ಎಲ್ಲ ತಿಳಿಯಲು ನಮಗೆ ಇರುವ ಆಕರಗಳು, ‘ಗುರುಪರಂಪರಾ ಪ್ರಭಾವ’, “ದಿವ್ಯಸೂರಿಚರಿತೆ”, ಹಾಗೂ “ಪ್ರಪನ್ನಾಮೃತ” ಎಂಬುವ ಗ್ರಂಥಗಳು. ಇದರ ಜತೆಗೆ ದಿವ್ಯಪ್ರಬಂಧಗಳನ್ನು ತಲಸ್ಪರ್ಶಿಯಾಗಿ ಓದಿಕೊಂಡಲ್ಲಿ ಸ್ವಲ್ಪ ಮಟ್ಟಿಗೆ ತಿಳಿಯಬಹುದೇನೋ! ಕ್ರಿ.ಶ. ೧೩ – ೧೪ರ ಅವಧಿಯಲ್ಲಿದ್ದು ನೂರಾರು ‌ಗ್ರಂಥ – ಸ್ತೋತ್ರ – ವ್ಯಾಖ್ಯಾನ – ನಾಟಕ – ಎಲ್ಲವನ್ನು ರಚಿಸಿರುವ ಶ್ರೀ ವೇದಾಂತದೇಶಿಕರು, ತಮ್ಮ ಗುರು ಪರಂಪರಾಸಾರ ದಲ್ಲಿ ತಿಳಿಸುತ್ತಾರೆ.

ಪೂರ್ವೋತ್ಪನ್ನೇಷು ಭೂತೇಷು ತೇಷುತೇಷು ಕಲೌಪ್ರಭುಃ |
ಅನುಪ್ರವಿಶ್ಯ ಕುರುತೇ ಯತ್ ಸಮಿಹತಮಚ್ಯುತಃ ||
ಕಲೌಖಲು ಭವಿಷ್ಯಂತಿ ನಾರಾಯಣ ಪರಾಯಣಾಃ ಕ್ವಚಿತ್ ಕ್ವಚಿತ್
ಮಹಭಾಗಾ ದ್ರಮಿಡೇಷು ಭೂರಿಶಃ || ತಾಮ್ರಪರ್ಣೀ ನದೀಯತ್ರ
ಕೃತಮಾಲಾಪಯಸ್ವಿನೀ |
ಕಾವೇರಿಚ ಮಹಾಭಾಗಾ ಪ್ರತೀಚೀಚ ಮಹಾನದೀ ||
ಎನು ಮಹರ್ಷಿ (ಶುಕನ್) ಅರುಳ್ ಚ್ಚೈದಾನ್ ||

(ಶುಕಮಹರ್ಷಿ ನುಡಿದಿದ್ದಾರೆ ಇದೇ ತೆರನಾಗಿ ಶ್ರೀದೇಶಿಕರು “ದಯಾಶತಕ” ಎಂಬ ಸ್ತೋತ್ರ ಗ್ರಂಥದಲ್ಲಿ ಆಳ್ವಾರುಗಳನ್ನು ನಮಿಸಿದ್ದಾರೆ.

ಕೃತಿನ : ಕಮಲಾವಾಸ ಕಾರುಣ್ಣೈ ಕಾಂತಿನೋ ಭಜೇ |
(ಕಾರುಣ್ಯ ಏಕಾಂತಿನಃ)
ಧತ್ತೇ ಯತ್ ಸೂಕ್ತಿ ರೂಪೇಣ ತ್ರಿವೇದೀ ಸರ್ವಯೋಗ್ಯತಾಂ |

“ಸಂಸ್ಕೃತ ಅಧ್ಯಯನ ಮಾಡಿ, ವೇದಗಳ ಅರ್ಥವನ್ನು ಅರಿಯುವುದು ಕ್ಲೇಶಕರವೇ! ಕಾರಣ, ಆಗಾಧವಾದ ಒಂದು ವೇದವೋದಿ ಅದರ ಅಂತರಂಗ ಸಾರಾಂಶ – ಸ್ವಾರಸ್ಯ ತಿಳಿದುಕೊಳ್ಳಲು ಅದೆಷ್ಟೋ ವತ್ಸರಗಳೇ! ಹೀಗಿರವಲ್ಲಿ, ಮೂರು ವೇದಗಳ ಸಾರ (ತ್ರಿವೇದೀ) ವನ್ನರಿಯುವುದು, ಒಬ್ಬ ಮನುಷ್ಯನ ಆಯುಸ್ಸಿನಲ್ಲಿ ದುಸ್ತರವೇ! ನಮ್ಮ ದ್ರಾವಿಡ ವೈಷ್ಣವ ಸಂತರಾದ ಆಳ್ವಾರರುಗಳು, ಸರ್ವರೂ ತಿಳಿಯುವಂತಹ ದೇಶೀಯ ನುಡಿ – ನುಡಿಗಟ್ಟಿನಲ್ಲಿ ಮೂರು ವೇದಗಳ ಸಾರವನ್ನು ಮನವೊಗುವಂತೆ ತಿಳಿಸಿದ್ದಾರಲ್ಲ !

ಇಂತಹ ಪರಮೈಕಾಂತಿಗಳಾದ ಆಳ್ವಾರ್ ಮಹನೀಯರಿಗೆ ನಮಿಸುತ್ತೇನೆ“,

ಆಳ್ವಾರ್ ಪರಂಪರೆಯಾದ ಒಂದೆರಡು ಶತಮಾನದ ನಂತರದಲ್ಲಿ ಬಂದವರು ಆಚಾರ್ಯರು – ಮೊದಲಿಗರೇ, ನಾಥಮುನಿಗಳು! ದಿವ್ಯಪ್ರಬಂಧಗಳನ್ನು ಸಂಕಲಿಸಿ, ಸಂಘಟಿಸಿ, ಎಲ್ಲಾ ವಿಷ್ಣು ದೇವಾಲಯಗಳಲ್ಲಿಯೂ ದೇವತಾರ್ಚನೆ – ಮಂತ್ರಪುಷ್ಪದ ಸಮಯದಲ್ಲಿ, ವೇದಮಂತ್ರಗಳ ಸಂಗಡವೇ ದಿವ್ಯಪ್ರಬಂಧದನುಸಂಧಾನವನ್ನು ಏರ್ಪಡಿಸಿದರು. ಕ್ರಿ.ಶ. ೯ನೇ ಶತಮಾನದಲ್ಲಿ ನಾಥಮುನಿವರ್ಯರು ಏರ್ಪಡಿಸಿದ್ದು ಶತಶತಮಾನಗಳ ನಂತರ ಈಗಲೂ ಅನುಚಾನವಾಗಿ ನಡೆದುಕೊಂಡು ಬರುತ್ತಲಿದೆ.

ನಾಥ ಮುನಿಗಳ ತರುವಾಯ ಆಚಾರ್ಯ ಪೀಠಕ್ಕೆ ಯಾಮುನಾಚಾರ್ಯರು (“ಆಳವಂದಾರ್” – ಭಕ್ತರ “ಮನವನ್ನಾಳ ಬಂದವರು” ಎಂದು ಕರೆಯುತ್ತಾರೆ) ಹಾಗೂ ಆಮೇಲೆ, ಆಚಾರ್ಯ ರಾಮಾನುಜರು (ಕ್ರಿ.ಶ. ೧೦೧೭ – ೧೧೩೭) ಇದು ಶ್ರೀ ವೈಷ್ಣವಸ ಪರಂಪರೆ, ರಾಮಾನುಜಾಚಾರ್ಯರ ತರುವಾಯ, ವಿಶಿಷ್ಟಾದ್ವೈತೆದಲ್ಲಿ ಬಂದ ಪ್ರಮುಖರು, ತಮಿಳುನಾಡಿನ ‘ತೂಪ್ಪಿಲ್’ ಎಂಬುವ ಅಗ್ರಹಾರದಲ್ಲಿ ಜನಿಸಿ, ಆನಂತರ ಶ್ರೀರಂಗದಲ್ಲಿ ನೆಲಸಿದ ಶ್ರೀ ವೇದಾಂತ ದೇಶಿಕರು, (ವೇದಾಂತಾಚಾರ್ಯ, ವೇಂಕಟನಾಥರೆಂದೂ ಹೆಸರಿವೆ) ಮಣವಾಳ ಮಹಾಮುನಿಗಳು, ಪಿಳ್ಳೈಲೋಕಾಚಾರ್ಯರು ಹೀಗೆ ಪರಂಪರೆ ಮುಂದುವರಿದಿದೆ. ಬಹುಶ್ರುತ ವಿದ್ವಾಂಸರು (ಇತ್ತೀಚಿನ ಕಾಂಚೀಪುರದ ಪ್ರತಿವಾದಿಭಯಂಕರಂ ಅಣ್ಣಂಗರಾಚಾರ್ಯರು, ಶ್ರೀ ಅಭಿನವರಂಗನಾಥರಂಥ ಸಹೃದಯಿ ವಿದ್ವಾಂಸರು, ಇನ್ನೂ ಅನೇಕರು.

ಆಳ್ವಾರರ ಬದುಕಿನ ಇತಿ ವೃತ್ತ – ಅವರ ಕೃತಿಗಳ ಬಗ್ಗೆ ಅನುಕ್ರಮವಾಗಿ ಹೀಗಿದೆ ಪೊಯ್‌ಹೈ ಆಳ್ವಾರ್ (ಪೊಯ್‌ಗೈ ಎಂದೂ ಉಚ್ಚರಿಸುತ್ತಾರೆ) ಪೂದತ್ತಾಳ್ವಾರ್, ಪೇಯಾಳ್ವಾರ್,

ಆನಂತರದವರು, ತಿರುಮಳಿಶೈ ಆಳ್ವಾರ್, ಕುಲಶೇಖರಾಳ್ವಾರ್
ಪೆರಿಯಾಳ್ವಾರ್ (ವಿಷ್ಣು ಚಿತ್ತರು ಎಂದೂ ಇನ್ನೊಂದು ಹೆಸರು!)
ಆಂಡಾಳ್ (ಅಯೋನಿಜೆ, ಪೆರಿಯಾಳ್ವಾರರ ಸಾಕು ಮಗಳು)
ತೊಂಡರಡಿಪ್ಪೊಡಿಯಾಳ್ವಾರ್ (ಭಕ್ತಾಂಘ್ರಿರೇಣು), ತಿರುಪ್ಪಾಣಿ (ಯೋಗಿವಾಹ)
ತಿರುಮಂಗೈ ಆಳ್ವಾರ್ (ಕಲಿಯನ್, ಪರಕಾಲನ್) ಎಂದೂ ಹೆಸರಿದ

ನಮ್ಮಾಳ್ವಾರ್ (ನಮ್ಮ ಆಳ್ವಾರರು – ಪ್ರೀತಿಯಿಂದ ಇತರರು ಕರೆದ್ದು, ಮಾರನ್ ಮತ್ತು ಶಠಗೋಪನ್ ಎಂದೂ ಹೆಸರಿವೆ!) ಮಧುರ ಕವಿಯಾಳ್ವಾರ್, ಹೀಗೆ ಒಟ್ಟು ಹನ್ನೆರಡು ಜನ ಆಳ್ವಾರರು.

ನಾಲಾಯಿರ ದಿವ್ಯ ಪ್ರಬಂಧ ತಿರುವಾಯ್ಮೊಳಿಸಿರಿಬಾಯನುಡಿ

ಆಳ್ವಾರರು ಬದುಕಿ ಮರೆಯಾದ ನಂತರ, ಕಾಲಕ್ರಮೇಣ, ನಾಲಾಯಿರ ಸಾಲುಗಳ ದಿವ್ಯ ಪ್ರಬಂಧಗಳು ಲುಪ್ತವಾಗಿ ಹೋದವು. ಇದೆಲ್ಲವೂ ಇತಿಹಾಸವೇ! ಅವುಗಳನ್ನು ಮತ್ತೆ ಸಂಕಲಿಸಿ ಇಡೀ ಮಾನವ ಸಮುದಾಯಕ್ಕೆ ತಲುಪಿಸುವ ಅತ್ಯಮೂಲ್ಯ ಕಾರ್ಯ ಕೈಗೊಂಡವರು – ಯೋಗಿ ನಾಥಮುನಿಗಳು (ಕ್ರಿ.ಶ. ೯೧೬), ತಿರುವಾಯ್ಮೊಳಿ ಹಾಡಿದ ನಮ್ಮಳ್ವಾರರನ್ನು ಅವರ ಜೀವಿತಾವಧಿಯಲ್ಲಿ ಸಂದರ್ಶಿಸಲಾಗಲಿಲ್ಲ.

ನಾಥಮುನಿಗಳು ಮಹಾಯೋಗ ಸಾಧಕರು, ದೈವಭಕ್ತ, ಒಮ್ಮೆ ತಿರುಕ್ಕುಡಂದೈ ಕ್ಷೇತ್ರಕ್ಕೆ (ಈಗಿನ ಕುಂಭ ಕೋಣ ಪರಿಸರ) ತೆರಳಿದ್ದಾರೆ. ಅಲ್ಲಿ ಶಾರ್ಙ್ಗಪಾಣಿ (ಉಪ್ಪಿಲಿ ಯಪ್ಪನ್ ಒಪ್ಪಿಲಿಯಪ್ಪ – ಉಪ್ಪಿರದ ನಿವೇದನ) ವಿಷ್ಣುವಿನಾಲಯದಲ್ಲಿ ಮೇಲು ನಾಡಿಂದ (ತಿರುನಾರಾಯಣಪುರ – ಮೇಲುಕೋಟೆ) ಆಗಮಿಸಿದ್ದ ಭಾಗವತರು ದೇವರ ಮುಂದುಗಡೆ, “ಆರಾವಮುದೇ” (ಆರದ ಅಮೃತವೇ) ಎಂದು ಆರಂಭಗೊಳ್ಳುವ ನಮ್ಮಾಳ್ವಾರರ ಹತ್ತುಪಾಶುರಗಳನ್ನು (ತಿರುವಾಯ್ದೊಳಿ) ಸೊಗಸಾಗಿ ಹಾಡಿದುದನ್ನು ಆಲಿಸಿದರು. ಆ ರಚನೆಗಳ ವಾಕ್ ಶಿಲ್ಪಕ್ಕೆ, ಭಕ್ತಿ ಭಾವಕ್ಕೆ ಮಾರುಹೋದರು! “ಈ ಪಾಶುರಗಳನ್ನು ರಚಿಸಿರುವ ಮಹಾನುಭಾವರು ಯಾರು ಸ್ವಾಮಿ” ಎಂಬುದಾಗಿ ವಿಚಾರಿಸಲು, ಭಾಗವತರು, “ಇದು ನಮ್ಮಾಳ್ವಾರರ ತಿರುವಾಯ್ಮೊಳಿಯ ಒಂದು ತುಣುಕು, ಇಷ್ಟು ಮಾತ್ರ ನಮಗೆ ಗೊತ್ತು, ಉಳಿದುದೇನೂ ನಾವರಿಯೆವು” ಎಂದು ನುಡಿದು ನಡೆದರು. “ಆದರೆ ನಮ್ಮಳ್ವಾರರು ಅವತರಿಸಿದ್ದು ಆಳ್ವಾರ್ ತಿರುನಗರಿಯಲ್ಲಿ” ಎಂದೂ ತಿಳಿಸಿದರು.

ತಿರುಹೂರ್ ನಗರಿ! ಆಳ್ವಾರ್ ತಿರುನಗರಿಗೆ ತೆರಳಿದ ನಾಥಮುನಿಗಳು, ಅಲ್ಲಿಯೂ ಅನೇಕರನ್ನು ವಿಚಾರಿಸಲು, ಹೆಚ್ಚು ಪ್ರಯೋಜನವಾಗಲಿಲ್ಲ ಒಂದು ವಿಚಾರ ಮಾತ್ರ ತಿಳಿಯಿತು: – ವೃದ್ಧರಾಗಿದ್ದ ಪರಾಂಕುಶದಾಸರೆಂಬುವರು ಮಧುರ ಕವಿಯಾಳ್ವಾರರ ಪ್ರಿಯ ಶಿಷ್ಯರು, ಅವರನ್ನು ವಿಚಾರಿಸಿದರೆ,” ಮಧುರ ಕವಿಯಾಳ್ವಾರರು ತಮ್ಮ ಗುರು ನಮ್ಮಳ್ವಾರರನು ಕುರಿತಂತೆ ಗುರುಭಕ್ತಿ ಗೀತ ರಚಿಸಿದ್ದಾರೆ. “ಕಣ್ಣಿನುಣ್ ಶಿರುತ್ತಾಂಬು” ಎಂಬುವ ದಿವ್ಯ ಪ್ರಬಂಧ, ಇದನ್ನು ಒಂದೇ ಭಕ್ತಿ – ನಿಷ್ಠೆಯಿಂದ ಹನ್ನೆರಡು ಸಾವಿರ ಸಲ – ನಮ್ಮಾಳ್ವಾರರು ಇದ್ದ ಹುಣಸಎಮರ (ಪುಳಿ ಮರಮ್ – ಈಗಲೂ ಇದೆ!) ದೆದುರು ಕುಳಿತು – ಪಠಿಸಿದಲ್ಲಿ ಆಗ್ಗೆ ನಮ್ಮಾಳ್ವಾರ್ ಪ್ರತ್ಯಕ್ಷರಾಗಿ ತಾವು ರಚಿಸಿರುವ ‘ತಿರುವಾಯ್ಮೊಳಿ’ ದಿವ್ಯಪ್ರಬಂಧ ಹಾಗೂ ಇತರ ದಿವ್ಯ ಪ್ರಬಂಧಗಳನ್ನು ತಿಳಿಸುತ್ತಾರೆ.” ಎಂಬುವ ಅಂಶವನ್ನು! ಪರಾಂಕುಶದಾಸರು “ಇದು ನಾನು ಹಿರಿಯರಿಂದ ಕೇಳಿರುವ ಸಂಗತಿ” ಎಂದು ನಿವೇದಿಸಿದರು.

ನಾಥಮುನಿಗಳು ಹಠಯೋಗಸಾಧಕರು! ದೇವರ ಪ್ರಾರ್ಥನೆಗೈದು, ನಮ್ಮಾಳ್ವಾರ್ ಹಾಗೂ ಮಧುರ ಕವಿಯಾಳ್ವರ್ರ‍ರನ್ನು ನಮ್ರತೆಯಿಂದ ಸ್ಮರಿಸಿ, ನಮ್ಮಳ್ವಾರರು ಕುಳಿತಿದ್ದ ಹುಣಸೆಮರದ ಪೊಟರೆಯೆದುರು ಅಚಲವಾಗಿ ಕುಳಿತರು. ೧೨೦೦೦ ಸಲ “ಕಣ್ಣಿನುಣ್ ಶಿರುತ್ತಾಂಬು” ಪ್ರಬಂಧವನ್ನು ಪಠಿಸಿದರು! ತುಂಬಾ ಅಲೌಕಿಕ ಹಾಗೂ ಅಚ್ಚರಿಯ ಸಂಗತಿಯೆಂದರೆ, ನಾಥಮುನಿಗಳ ಜಪ – ಪ್ರಬಂಧ ಪಠಣಕ್ಕೆ ಮನಕರಗಿದಂತೆ, ನಮ್ಮಾಳ್ವಾರರು ಪ್ರತ್ಯಕ್ಷರಾಗಿ, ಯೋಗಿಗೆ ತಿರುವಾಯ್ಮೊಳಿ ಹಾಗೂ ಇತರ ಆಳ್ವಾರರ ದಿವ್ಯಪ್ರಬಂಧಗಳನ್ನು ಮನಮುಟ್ಟುವ ಹಾಗೆ ಉಪದೇಶಿಸಿ, ಅರ್ಥ ತಿಳಿಸಿ ಅಂತರ್ಧಾನರಾದರು! ಇದು ಐತಿಹ್ಯ ಅದರೆ ಅತ್ಯನ್ನತ ಯೋಗ ಪ್ರಪಂಚದಲ್ಲಿ ನಡೆಯದುದೇನಲ್ಲ, ಯೋಗಸಿದ್ಧರಿಗೆ ಎಲ್ಲವೆಲ್ಲವೂ ಸಾಧ್ಯವೇ!

ನಾಥಮುನಿಗಳ ಈ ಶ್ರಮ ಸಹಿತ ಸಂಗ್ರಹ, ಈ ವರೆಗೆ ಪಠಿಸುವವರೆಲ್ಲರೂ ಕೃತಜ್ಞತೆ – ವಿನಯಗಳಿಂದ ನಮಿಸುವಂತೆ ಪ್ರೇರಿಸುತ್ತದೆ! ತಾವು ಪಡೆದುಕೊಂಡ “ನಾಲಾಯಿರ ದಿವ್ಯ ಪ್ರಬಂಧ”ಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ ನಾಥಮುನಿಗಳು ಪ್ರಮುಖತಃ “ಇಶೈಪಾ” ಎಂದರೆ ಸಂಗೀತಕ್ಕೆ ಹಾಡಲು ಅಳವಡಿಸಿದ್ದು ಎಂದೂ

“ಇಯ ಲ್ ಪಾ (ಇಯರ್‌ಪಾ)” ಎಂದರೆ ಗಾಯನಕ್ಕೆ ಅಳವಡಿಸದಿರುವುದೆಂದೂ ಎರಡು ಭಾಗ ಮಾಡಿದ್ದಾರೆ. ಈಗಳೂ ಇವು ತಿಳಿದ ಗುರುಮುಖೇನ ಕಲಿಯಲು ಸಾಧ್ಯ, ಕಲಿತು ವಾಚೋ ವಿಧೇಯ ಮಾಡಿಕೊಂಡಿರುವ ಮಹನೀಯರನೇಕ! ಗೋಷ್ಠಿಗಳಲ್ಲಿ ಒಂದೇ ಕಂಠದಲ್ಲಿ ಹಾಡುವ ರೀತಿಯ ಸೊಗಸು!

ಆಳ್ವಾರರ ದಿವ್ಯ ಪ್ರಬಂಧ ಸಮುದಾಯಕ್ಕೆ ಸೇರ್ಪಡೆಯಾಗುವುದು, ಹನ್ನೆರಡು ಜನ ಆಳ್ವಾರರ ಕೃತಿಗಳು, ತಿರುವರಂಗತ್ತಮುದನಾರ್ (ಶ್ರೀರಂಗದ ಅಮೃತದಂತಿದ್ದ ಭಕ್ತ!) ಎಂಬುವ ರಾಮಾನುಜರ ಅಂತರಂಗ ಭಕ್ತರು ರಚಿಸಿರುವ “ರಾಮಾನುಜನೂತ್ತಂದಾದಿ” (ರಾಮಾನುಶನೂತ್ತಂದಾದಿ)ಯೂ ಸೇರುತ್ತವೆ. ಒಟ್ಟು ವಿವರ ಹೀಗೆ ನೀಡಬಹುದು:

ಪ್ರತ್ಯೇಕ ವಿವರವನ್ನೊಳಗೊಂಡ ಪುಟವನ್ನು ಕೊನೆಗೆ ಲಗತ್ತಿಸಿದೆ ದಯವಿಟ್ಟು ಗಮನಿಸಿ

೧. ನಾಲಾಯಿರ ದಿವ್ಯ ಪ್ರಬಂಧಗಳ ಪಾಶುರಗಳನ್ನು ನಿಷ್ಕರ್ಷೆ ಮಾಡುವಲ್ಲಿ

ಅ. ಶ್ರೀ ವೇದಾಂತ ದೇಶಿಕರು ನೀಡುವ ವಿವರ ಹೀಗೆ;

ತಿರುಮುಂಗೈ ಆಳ್ವಾರರ ‘ಪೆರಿಯಮಡಲ್’ ಪ್ರಬಂಧ – ೭೮ ಪಾಶುರಗಳು

ತಿರುಮುಂಗೈ ಆಳ್ವಾರರ ‘ಶಿರಯಮಡಲ್’ ಪ್ರಬಂಧ – ೪೦ ಪಾಶುರಗಳು

ತಿರುವರಂಗತ್ತಮದನಾರ್ – ರಾಮಾನುಶನೂತ್ತಂದಾದಿ ಪ್ರಬಂಧ – ೧೦೮ ಪಾಶುರಗಳು

ಒಟ್ಟು     ೨೨೬ ಆಗುತ್ತದೆ.

ಇದಕ್ಕೆ ಇತರ ಪ್ರಬಂಧ ಸಂಖ್ಯೆ        ೩೭೭೪ ಸೇರಿಸಿದರೆ

ಒಟ್ಟಾರೆ  ೪೦೦೦ (ನಾಲಾಯಿರ)

ಆಗುತ್ತದೆ.

ಆ. ಆಪ್ಪಿಳ್ಳೈ ಆಶಿರಿಯರ್ ಎಂಬುವ ಮಹನೀಯರು ನಾಲ್ಕು ಸಾವಿರ ಪ್ರಬಂಧಗಳೆಂದು ನಿಷ್ಕರ್ಷಿಸುವಲ್ಲಿ :

ತಿರುಮಂಗೈ ಆಳ್ವಾರರ – “ಶಿರಿಯಮಡಲ್” – ೭೭ ೧/೨ ಪಾಶುರಗಳು

ತಿರುಮಂಗೈ ಆಳ್ವಾರರ – “ಪೆರಿಯಮಡಲ್” – ೧೪೮ ೧/೨ ಪಾಶುರಗಳು

ಒಟ್ಟು ೨೨೬ ಆಗುತ್ತದೆ.

ಇತರ ಪ್ರಬಂಧಗಳು ೩೭೭೪

ಒಟ್ಟಾರೆ ೪೦೦೦ ನಾಲಾಯಿರ ಪದ್ಯಗಳು ಎನ್ನುತ್ತಾರೆ.

ಇದೀಗ “ರಾಮಾನುಶನೂತ್ತಂದಾದಿ”ಯನ್ನು ಸೇರಿಸಿದರೂ ಅಥವಾ ಸೇರಿಸದೆಯೇ ಇದ್ದರೂ, ಎಲ್ಲರೂ ಆಯಾಯ ಪಾಶುರಗಳ ಬಗ್ಗೆ ಅಪಾರ ಗೌರವಸ್ಥಾನ ನೀಡಿ, ದಿವ್ಯ ಪ್ರಬಂಧಗಳ ಸಂಗಡವೇ ತಪ್ಪದೆ ಪಾರಾಯಣ ಮಾಡುತ್ತಾರೆ

ನಾಲ್ಕು ಸಾವಿರ ಪದ್ಯಗಳ – ನಾಲಾಯಿರ ದಿವ್ಯ ಪ್ರಬಂಧಗಳನ್ನು – ಬಹಳ ಹಿಂದಿನಿಂದಲೂ “ದ್ರಾವಿಡ ವೇದ” ವೆಂಬುದಾಗಿ ಅಂಗೀಕರಿಸಿದ್ದಾರೆ.

ಈ ಪ್ರಬಂಧಗಳಲ್ಲಿ ವೇದಗಳ ಉಲ್ಲೇಖವಿದೆ:

ಪೆರಯತಿರುಮೊಳಿ (೫-೫-೯ – ಶಂದೋಗನ್ ಪೌಳೀಯನ್ ಪಿಂದ್ ಅಳಲ್ ಓಂಬಂ ತ್ಯೆತ್ತೀರಿಯನ್ ಸಾಮವೇದಿ

ತಿರುವಾಯ್ಮೊಳಿ (), “ನಾನ್ಮರೈನೂಲ್ಗಳುಮ್ ಶಾರಾದೇ

(ನಾಲ್ಕು ವೇದಗಳ ಎಳೆಯನ್ನು ಹೊಂದಿದೆ)

ಮೊದಲಾದವನ್ನು ಉಲ್ಲೇಖಿಸಬಹುದು

ವೇದಗಳಿಂದಲೇ ಶ್ರೀಹರಿಯನ್ನು ಅರಿಯಬೇಕು

ವೇದಗಳು ಅವನನ್ನೇ ಅರಸುತ್ತಿವೆ.

ಮಧುರ ಕವಿಯಾಳ್ವಾರರು ತಮ್ಮ

ಕಣ್ಣಿನುಣ್ ಶಿರುತ್ತಾಂಬುವಿನಲ್ಲಿ

ನಮ್ಮಾಳ್ವಾರರು ತಿರುವಾಯ್ಮೊಳಿಯ ೧೦೦೦ ಪಾಶುರಗಳಲ್ಲಿ ರಹಸ್ಯವಾದ ವೇದಾರ್ಥಗಳನ್ನೇ ಹಾಡಿರುತ್ತಾರೆ”೦ದೇ ಪ್ರಶಂಸಿಸಿದ್ದಾರೆ.

ಅರುಳಿನಾನ್ ಅವ್ವರು ಮರೈಯಿನ್ ಪೊರುಳ್ ಉಳ್ ಪೊರುಳ್ಎಂದರೆ, ವೇದದ ಅಂತರಾರ್ಥವನ್ನು ನಿರೂಪಿಸಿದ್ದಾರೆ ನಮ್ಮಾಳ್ವಾರರು.