೩. “ಕುಲವಿಲ್ಲದವನಿಗೆ ಕುಲವನ್ನಿತ್ತ ರಂಗನಾಥನ ಅತಿಶಯ ಕೃಪೆಯನ್ನು ಕೊಂಡಾಡುವರು “ಭಾರವಾದಹಳೆಯ ಪಾಪದ ಅಂಚನ್ನು ಬಿಡಿ – ಬಿಡಿಸಿ ನನ್ನನ್ನ ತನ್ನ ಕುಳಮಾಡಿ (ತನ್ನವನಾಗಿಸಿ) ನಿಲ್ಲಿಸಿದನು! ನಿಲ್ಲಿಸಿದ್ದಲ್ಲದೆ ನನ್ನ ಒಳಗೆ ಹೊಕ್ಕು ಬಿಟ್ಟನಲ್ಲ!

. ಅಲಮಾಮರತ್ತಿನಿಲೈ ಮೇಲೊರು ಬಾಲಕನಾಯ್ ಞಲ (ಆಲ) ಮೇಲು ಮುಂಡಾನರಂಗತ್ತರವಿನಣೈಯಾನ್ ಕೋಲಮಾಮಣಿಯರ ಮೂಮುತ್ತುತ್ತಾಮುಮಂ ಮುಡಿವಿಲ್ಲಡೋರೆಲಿಲ್ಲ ನೀಲ || ಮೇನಿಯ್ಯೆಯೋ ನಿಲೈಕೊಂಡದೆನೆಂಜಿನೈಯೇ ||

ಪ್ರಳಯ ಸಮಯ ಅನಂತಶಾಖೆಗಳುಳ್ಳ ಆಲದ ಮರದ ಒಂದು ಎಲೆಯ (ವಟವೃಕ್ಷ) ಮೇಲೆ ತಂದೆ – ತಾಯಿ (ತಾನೇ ಲೋಕವನ್ನು ಸೃಜಿಸಿಆಳ್ವ) ಅದ್ವಿತೀಯನಾದ ಬಾಲಕನಾತನಾಗಿದ್ದ | ಎಲ್ಲಾ ಲೋಕಗಳನ್ನು ತನ್ನ ಹೊಟ್ಟೆಯ ಒಳಗಿರಿಸಿಕೊಂಡಿದ್ದನವನು | ಎಲ್ಲಾವೆಲ್ಲ ಕಾಲದಲ್ಲೂ ಶ್ರೀರಂಗ ಕ್ಷೇತ್ರದಲ್ಲಿ ಆದಿಶೇಷನ ಪರ್ಯಂಕದಲ್ಲಿ ಯೋಗ ನಿದ್ರೆಯಲ್ಲಿ ಜಾಗರೂಕನಾಗಿರುವವನು********* ತುಂಬ ಅನರ್ಘ್ಯವೆನಿಸುವ ಮುತ್ತು ರತ್ನಹಾರಗಳಿಂದ ಚೆಲುವೇ ಮೈಯಾಂತವನು! “ಹೀಗೆ ಆ ಮಹಾನ್ ದೇವದೇವನ ಸೌಂದರ್ಯ ಅನುಭವಿಸಿ ನನ್ನ ಮನ ತಳೆದ ಗಾಂಭೀರ್ಯವನ್ನು ನನಗುಂಟಾದ ಅನುಭವಗಳು ಹೋಗಲಾಡಿಸಿಬಿಟ್ಟರೆ? ಈ ಪೂರ್ಣವಾದ ಅನುಭವಕ್ಕೆ ವಿಚ್ಛೇದವುಂಟಾದರೆ ನನ್ನ ಗತಿಯೇನು?”.

ಇದು ತಿರುಪ್ಪಾಣಾಳ್ವಾರರ ಆರ್ತಭಾವ ಭಗವಂತನೀತ ನನ್ನನ್ನು ತನ್ನ [ಆಳು] ಕಿಂಕರನಾಗಿ ಮಾಡಿಕೊಂಡಿದ್ದಾನೆ. ಆಮಮ, ಅಹಹ! ಇವನ ಕರುಣೆಯೆನ್ನ ಮೇಲೆ ಎನಿತು ಕಂಡನೇ? ಭಕುತಿ ಸುಲಭನಿವನೆಂಬುದು ಕಂಡುಕೊಂಡೇನೇ? ತಿರುಪಾಣಿಯವರ ಕವಿತೆ – ಪ್ರಬಂಧ ಕೇವಲ ಹತ್ತು ಪಾಶುರಗಳಾದರೂ ಅದರ ಮಹತ್ವ ಮಾತ್ರ ತುಂಬ ಹಿರಿದು, ಪಕ್ವ ಆದದ್ದೆನಿಸುತ್ತದೆ.

ತಿರುಮಂಗೈ ಆಳ್ವಾರ್

ನೀಲನ್, ಪರಕಾಲನ್, ಕಲಿಯನ್, ಎಂದೆಲ್ಲ ಹೆಸರಾದ ಈತ ಶೂರ, ಧೀಮಂತ! ಎಲ್ಲಾ ವಿಷ್ಣು ದೇವಾಲಯಗಳಲ್ಲಿಯೂ ಆಳ್ವಾರರ ಪಂಕ್ತಿಯಲ್ಲಿ ಖಡ್ಗ – ಢಾಲು ಹಿಡಿದು ಅಷ್ಟೇ ಭಕ್ತಿಮುದ್ರೆ ಇರುವ ತಿರುಮಂಗೈ ಮೂರ್ತಿ, ಸುಂದರ ಮಂಗೈ, ಎಂದರೆ ತಾಯಿ, ಜಗದ್ಧಾತ್ರಿ ಇಲ್ಲಿ ತಿರುಮಂಗೈ ಎಂದರೆ, ಜಗನ್ಮಾತೆ ಲಕ್ಷ್ಮೀದೇವಿಯ ವರಪ್ರಸಾದ ಪಾತ್ರರಾದ ಆಳ್ವಾರರವರು.

ನಮಗೆ ಪ್ರಿಯವೆನಿಸಿದ ಬದರೀಕ್ಷೇತ್ರ ಯಾತ್ರೆ ಮಾಡಿದೆವೆನ್ನಿ ಸಾಲಗ್ರಾಮ ದೊರೆಯ ಪವಿತ್ರ ಕ್ಷೇತ್ರ [ಈಗಲೂ ಹೆಲಿಕಾಪ್ಟರ್ ಕೂಡ ಅಗಮ್ಯ ಸಾಲಿಗ್ರಾಮ ಕ್ಷೇತ್ರಕ್ಕೆ] – ಇಲ್ಲೆಲ್ಲ ‘ತಿರುಮಂಗೈ ಆಳ್ವಾರ್ “ಸನ್ನಿಧಿ ಎಂಬುವ ಫಲಕ ಕಂಡಾಗ ನಮದೆಷ್ಟು ಸಂತೋಷ ೧೧ – ೧೨ ಶತಮಾನಗಳ ಹಿಂದೆ ಅದೆಷ್ಟು ದುರ್ಗಮವಾಗಿತ್ತು ಬದರೀ ಪ್ರಯಾಣ! ಕಲಿಯಾದ ತಿರುಮಂಗೈ ಅದಾವುದನ್ನೂ ಲೆಕ್ಕಿಸಲ್ಲಿಲ್ಲ. ಆತನ ಭಕ್ತಿಯೂ ಶ್ರೀಮಂತ – ಪ್ರಬಂಧಗಳೂ ಶ್ರೀಮಂತವೇ ೧೧೬೨ ಪಾಶುರಗಳ ಪ್ರಬಂಧಗಳನ್ನು ತಿರುಮಂಗೈ ಅದ್ಭುತರೀತಿಯಲ್ಲಿ ವಿಸ್ಮಯಕಾರಕವಾದ ಛಂದೋಬಂಧದಲ್ಲಿ ರಚಿಸಿದ್ದಾರೆ.

ಹಾವಿನ ಹಾಸುಗೆ, ಹಾಲಿನ ಕಡಲು – ಒಂದು ವಿಷ ಇನ್ನೊಂದು ಅಮೃತ ತನ್ನ ಉದರದಿಂದಲೇ ನಾಭಿಯ ಮೂಲಕ ಸೃಜನೆಯ ಕಮಲ – ಕಮಲಜ ಬ್ರಹ್ಮ ಹೀಗೆ ನಿರಂತರ ಚಟುವಟಿಕೆಯಿರುವಲ್ಲಿ ನಿದ್ರೆ ಮಂಪರು – ಬರಲು ಎಲ್ಲಾದರೂ ಸಾಧ್ಯವೇ?

ತಿರುಮಂಗೈ – ನೀಲನೆಂಬ ಹೆಸರಿನಲ್ಲಿ ಕಳ್ಳರ ಕುಲದಲ್ಲಿ ಜನಿಸಿದ [ನಮ್ಮ ಸಮಾಜದಲ್ಲಿ ಹಿಂದೆ ಇಂಥ ಒಂದು ಸಮುದಾಯವಿತ್ತು] ಬೆಟ್ಟ, ಗುಡ್ಡ, ಕಾಡಿನಲ್ಲಿ ವಾಸಿಸುತ್ತಿದ್ದ ಬೇಡರು ಹೊಟ್ಟೆಪಾಡಿಗೆ, ದಾರಿಹೋಕರನ್ನು ಸುಲಿಯುವ ಕಳ್ಳರಾದರು! ಚೋರ ಮಂಡಲದ ತಿರುಕ್ಕುರೈಯಲೂರ್ ತಮಿಳು ದೇಶದ ಒಂದು ದಿವ್ಯ ಕ್ಷೇತ್ರ ಸನಿಹ ಕಳ್ಳರ ಕುಲ ನಾಯಕನಾದ – ನೀಲನೆಂಬಾತನಿಗೆ ತಿರುಮಂಗೈ ಮಗನಾಗಿ ಜನಿಸಿದ.

ತಂದೆ ಚೋಳರಾಜನ ಸೇನಾನಿ ತಿರುಮಂಗೈ ಎಂಬುವ ಪ್ರದೇಶಕ್ಕೊಡೆಯ ವೀರತನದ ಶೌರ್ಯದ ಪರಿಸರದಿಂದ ಮಗನೂ ಕಲಿಯೇ ಆದ ತಿರುಮಂಗೈಮನ್ನನ್ಎಂದೇ ಪ್ರಸಿದ್ಧನಾದ! ಸೈನ್ಯಕ್ಕೆ ಸೇರಿದ ತಿರುಮಂಗೈ ಕಾಲಕ್ರಮೇಣ ಸೇನಾಧೀಶರೂ ಆದರು ಇವರ ಪರಾಕ್ರಮ – ನಿಷ್ಠೆ ಮೆಚ್ಚಿದ ರಾಜ, ಚೋಳ ರಾಜ್ಯದ ತಿರುವಳಿನಾಡು ಎಂಬುವ ಪ್ರದೇಶದ ಪಾಳೆಯಗಾರನಾಗಿ ನೇಮಿಸಿದ.!

ತಿರುಮಂಗೈ ಚಿಗುರು ಮೀಸೆಯ ಜವ್ವಸಿಗ – ಇನ್ನೂ ಮದುವೆ ಆಗಿರಲಿಲ್ಲ ಯಾರಿಗೂ ಹೇದರುವವನಲ್ಲ! ಆರೋಗ್ಯ ಯೌವ್ವನ ಐಶ್ವರ್ಯ – ಗಳಿಂದ ಮೆರೆಯುತ್ತಿದ್ದು ರಸಿಕ, ಸಂಗೀತ, ನಾಟಕ, ಪದ್ಮರಚನೆ, ವ್ಯಾಯಮ, ಆಟೋಟ! ವೈರಾಗ್ಯದ ಸುಳಿವೂ ಇರಲಿಲ್ಲ ಇಂದ್ರಿಯ ಸುಖದಾಸೆ – ಬೆಂಕಿಗೆ ಹೊಯ್ದ ತುಪ್ಪ ಇಂದ್ರಿಯ ಬ್ಪೆಟ, ಖುಷಿ ಇಲ್ಲದ ಬದುಕು, ಹುರುಳಿಲ್ಲದ ಒಣನಾರೆಂದು ತಿರುಮಂಗೈ ಭಾವಿಸಿದ್ದ!

ಹೀಗೆಯೇ ಕೆಲವು ದಿನ ಸಂದವು – ತಿರುವಳಿ ನಾಡಿನಲ್ಲಿ “ತಿರುವೆಳ್ಳಕ್ಕುಳಂ” ಎಂಬ ಶ್ರೇಷ್ಟವಾದ ನೀರನ್ನುಳ್ಳ ಕೊಳ ಒಂದು ದಿನ ಕೆಲವು ಅಪ್ಸರೆ ಕನ್ನಿಕೆಯರು ಕೊಳದೆಡೆಗೆ ವಿಹಾರಕ್ಕಾಗಿ ಬಂದರು, ಕೊಳದ ತಾವರೆ ಹೂಗಳಿಗೆ ಮನಸೋತ “ತಿರುಮಾಮಗಳ್” ಎಂಬುವ ಅಪ್ಸರ ಕನ್ಯೆ ಕೊಳದ ಸೋಪಾನದ ಮೇಲೆ, ನೀರಂಚಿನಲ್ಲಿ ನಿಂತೇ ಅರಳಿದ ತಾವರೆ ಹೂಗಳನ್ನು ಕೊಯ್ಯುತ್ತಿದ್ದಳು. ಎಷ್ಟು ಹೊತ್ತಿಗೂ ತಿರುಮಾಮಗಳ್ ಹಿಂತಿರುಗದುದನ್ನು ಕಂಡು ಉಳಿದವರು ಇವಳನ್ನಲ್ಲಿಯೇ ತೊರೆದು, ಮರೆಯಾದರು. ಈಕೆಯು ಏನೂ ತೋಚದೆ ಅಲ್ಲಿಯೇ ನಿಂತಳು. ಆಸಮಯದಲ್ಲಿ ಔಷದ ಮೂಲಿಕೆಗಳನ್ನು ಹುಡುಕುತ್ತ ವೈದ್ಯನೊಬ್ಬ ಕೊಳದ ಬಳಿ ಬಂದ. ಅವನು ಪೂಸಿಕೊಂಡಿದ್ದ ಚಂದನ, ಹಣೆಯಲ್ಲಿ ತ್ರಿಪುಂಡ, ವೈಷ್ಣವನೆಂಬುದನ್ನು ಸಾರುವಂತಿತ್ತು. ಸ್ನಾನ ಮಾಡಲು ಕೊಳದಲ್ಲಿಳಿದ ತನ್ನ ಕಾರ್ಯ ಪೂರೈಸಿಕೊಂಡ, ಅಲ್ಲೇ ಇದ್ದ ತಿರುಮಾಮಗಳನ್ನು ಕಂಡ, ಅಮ್ಮ ನೀನು ಯಾರು? ಇಲ್ಲಿ ಒಬ್ಬಳೇ ನಿಂತಿದೀಯ! ಎಂದು ಪ್ರಶ್ನಿಸಿದ.

“ನಾನು ನನ್ನ ಗೆಳತಿಯರೊಂದಿಗೆ ವಿಹರಿಸಲೆಂದು ಇಲ್ಲಿಗೆ ಬಂದೆ – ನನ್ನನ್ನು ಒಂಟಿಯಾಗಿ ಮಾಡಿ ಅವರು ಹೊರಟು ಹೋಗಿಬಿಡುವುದೇ? ನನಗೆ ಇನ್ನಾರು ದಿಕ್ಕು? ಹಿಂದಿರುಗಲು ಹೇಗೆ ಸಾಧ್ಯ? ನನ್ನನ್ನು ನೀವೇ ನಿಮ್ಮ ಮನೆಗೆ ಕರೆದುಕೊಂಡು ಹೋಗುವಿರೇನು? ಕನ್ಯೆಯ ಮಾತಿಗೆ, ವೈದ್ಯನು ಸಮ್ಮತಿಸಿದ ಆತನಿಗೂ ಮಕ್ಕಳಿರಲಿಲ್ಲ. ಆನಂದದಿಂದಲೇ ಮನೆಗೆ ಕರೆದುಕೊಂಡು ಹೋದ. ತಾವರೆಯ ಕೊಳದ ಸಮೀಪ ದೊರಕಿದುದರಿಂದ, “ಕುಮುದವಲ್ಲಿ” ಎಂದು ಹೆಸರಿಟ್ಟ. ದಿನ ದಿನಕ್ಕೂ ಚೆಲುವೆಯಾಗಿ, ಕಣ್ಣು – ಮನಸ್ಸು ಆಕರ್ಷಿಸುತ್ತಿದ್ದ ಹೆಣ್ಣಿಗೆ ಅನುರೂಪನಾದ ವರನನ್ನು ಹುಡುಕಬೇಕೆಂದುಕೊಂಡ.

ತಿರುಮಂಗೈಗೆ ಹೇಗೋ ಈ ಸುದ್ದಿ ತಲುಪಿತು. ಏನೋ ನೆಪ ಮಾಡಿಕೊಂಡು ವೈದ್ಯನ ಮನೆಗೆ ಬಂದ, ಕುಮದವಲ್ಲಿಯನ್ನು ಕಂಡ, ಓಹ್ಹ್! ಎಂಥ ಸುಂದರಿ! “ಸ್ವಾಮಿ ವೈದ್ಯರೆ, ಈ ಹಿಂದೆ ತಮಗೆ ಮಗಳಿರಲಿಲ್ಲವಲ್ಲ, ಈ ಲಾವಣ್ಯವತಿ ತಮಗೆ ಹೇಗೆ?

ನಡೆದದ್ದನ್ನು ವೈದ್ಯ ತಿಳಿಸಿದ ಮಾತಿನ ಕೊನೆಗೆ, “ನನಗೆ ಈ ರತ್ನ ಲಭಿಸಿದ್ದರಿಂದ ಇನ್ನೊಂದು ಹೊಸ ಯೋಚನೆ ಆವರಿಸುತ್ತಿದೆ! ಈಕೆಗೆ ಸರಿಯಾದ ಜೋಡಿ ವರನನ್ನು ಹುಡುಕ ಬೇಕಲ್ಲವೇ.

ನೀವು ಯೋಚಿಸುವ ಅಗತ್ಯವಿಲ್ಲ ವೈದ್ಯರೆ – ನನ್ನ ಮನಸ್ಸು ನಿಮ್ಮ ಈ ಸಾಕುಮಗಳನ್ನು ಮದುವೆಯಾಗಲು ಪ್ರೇರಿಸುತ್ತಿದೆ ನಿಮಗೆ ಇದು ಒಪ್ಪಿಗೆಯೇ?

ವೈದ್ಯನಿಗೆ ತರುಣ ತಿರುಮಂಗೈ ಸರಿಯಾದ ವರನೆಂದು ಅನಿಸಿತ್ತು “ಆದೀತು ತಿರುಮಂಗೈ ಆದರೂ ಕುಮದವಲ್ಲಿಯನ್ನು ಒಂದು ಮಾತು ಕೇಳಿ ನೋಡುತ್ತೇನೆ” ಎಂದನು.

ಕುಮುದವಲ್ಲಿಯು ನುಡಿದಳು “ನನಗೆ ಸಮ್ಮತಿ ಇರುವದಾದರೂ ವಿಷ್ಣುಭಕ್ತನಲ್ಲದ ಯಾರನ್ನೂ ನಾನು ಮದುವೆ ಆಗಲಾರೆ, ಈತ ವೈಷ್ಣವನಾಗಲಿ, ನನ್ನ ಇನ್ನೊಂದು ಷರತ್ತೆಂದರೆ, ಅಥವಾ ವ್ರತವೆಂದೂ ಸರಿಯೆ, “ಪ್ರತಿನಿತ್ಯವೂ ವಿಷ್ಣುಭಕ್ತರಿಗೆ ಆರೋಗಣೆಗೈದನಂತರ ನಾವು ಊಟಮಾಡಬೇಕು” ಎಂದು ಹೇಳಿದಳು ಸಂತಸಗೊಂಡ ತಿರುಮಂಗೈ ಸಮ್ಮತಿಸಿದ ಇಬ್ಬರ ಮದುವೆಯು ನೆರವೇರಿತು.

ಕುಮುದವಲ್ಲಿಯ ಪ್ರೇಮ ತಿರುಮಂಗೈಯನ್ನು ಆವರಿಸಿಬಿಟ್ಟಿತು ಆಕೆಗೆ ನೀಡಿದ ಮಾತಿನಂತೆ ವಿಷ್ಣುಭಕ್ತರ ಕೈಂಕರ್ಯ ನಡೆಸುತ್ತಾ ಬಂದ ಇದರ ವೆಚ್ಚಕ್ಕಾಗಿ ತನ್ನ ಬೊಕ್ಕಸ ಬರಿದು ಮಾಡಿದ ಆ ಚೋಳರಾಜ ಇದನ್ನು ತಿಳಿದವನೇ ತಿರುಮಂಗೈಯನ್ನು ಬಂಧಿಸಿ ತರಲು ಹೇಳಿದ.

ದೈವಕೃಪೆ ತಿರುಮಂಗೈಗೆ ಭೂಮಿಯ ಉತ್ಖನನದಲ್ಲಿ ಒಂದು ಗುಪ್ರ ನಿಧಿಯು ದೊರಕಿತು! ಹಣವನ್ನು ದೊರೆಗೆ ತೆತ್ತು ಸ್ವತಂತ್ರನಾದ.

ಆದರೆ, ಸೇನಾನಿ – ಪಾಳೆಯ ಪಟ್ಟು! ಹೋದವು ಬದುಕಲು ತಿರುಮಂಗೈ, ಕಳ್ಳತನದ ಹಾದಿ ಹಿಡಿದ. ಕುಮುದವಲ್ಲಿಯ ಮುಖ ಯಾವತ್ತು ಬಾಡಕೂಡದು ಇಷ್ಟೇ ಅವನ ಧ್ಯೇಯ.

ಪ್ರಯಾಣಿಕರನ್ನು ದೋಚಿದ ದಾರಿಗಳ್ಳನ ಕಾಟ ತಡೆಯಲು ಅಸಾಧ್ಯವಾಯಿತು. ಆದರೆ ಒಂದು ಕಳ್ಳ ಬದುಕಿನ ಮುಳ್ಳು ಪೊದೆಗಳ ನಡುವೆ ತಿರುಮಂಗೈಯ ಆತ್ಮದ ಮೊಗ್ಗು ನಿಧಾನವಾಗಿ ಅರಳುತ್ತಿತ್ತು. ಕಡುಪಾಪಿ ಪುಣ್ಯಜೀವಿಯಾಗುವ ಸುಸಮಯ ಬಂದಿತು.

ಭಗವಂತನೇ ಇದಕ್ಕೆ ಚಾಲನೆ ನೀಡಿದ ಒಂದು ದಿನ ತಿರುಮಂಗೈ ಮರದ ಮೇಲೇರಿ ದಾರಿಕಾಯುತ್ತಿದ್ದಾನೆ, ಶ್ರೀ ಮನ್ನಾರಾಯಣನೇ ಮದುವೆ ವರನಂತೆ, ಲಕ್ಷ್ಮೀದೇವಿ ಮದುವಣಿಗಿತ್ತಿಯಾಗಿ ಮೈತುಂಬಾ ಒಡವೆಗಳನ್ನು ಹೇರಿಕೊಂಡ ದಿಬ್ಬಣ ಸಹಿತ ಬರುತ್ತಿದ್ದಾರೆ. ಇದೆಲ್ಲ ಅರಿಯಯ ಕಳ್ಳ ತಿರುಮಂಗೈ ತನ್ನ ಅನುಚರರೊಂದಿಗೆ ಹಟಾತ್ತಾನೆ ಮದುವೆ ತಂಡದವರ ಮೇಲೆರಗಿದ ಗಂಡು ಹೆಣ್ಣು ಉಳಿದು, ಮಿಕ್ಕೆಲ್ಲರೂ ಓಡಿಹೋದರು.

ಅವರ ಆಭರಣಗಳನ್ನೆಲ್ಲವನ್ನು ದೋಚಿದ ತಿರುಮಂಗೈ ಗಂಟನ್ನು ಎತ್ತಲು ಹೋದರೆ ಎತ್ತಲು ಆಗದಷ್ಟು ಭಾರ! ಪಾದದಲ್ಲಿದ್ದ ಚಿನ್ನದ ಕಡಗವನ್ನು ಕಂಡ ತಿರುಮಂಗೈ! ಇರಲಿ, ಎಂದವನೆ, ಮತ್ತೆ ಗಂಟು ಎತ್ತಲೆತ್ನಿಸಿದರೆ, ಆಗುತ್ತಿಲ್ಲ! “ಲೇಯ್ ಮದುಮಗ” ನೀನೇನು ಮಂತ್ರವಾದಿಯೇನೊ? ಏನೊ ಮಂತ್ರ ಒಡ್ಡಿದೀಯೆ ಈ ಗಂಟು ಎತ್ತಲಾಗುತ್ತಿಲ್ಲ. ಮದುವಣಿಗ ತನ್ನ ನಲ್ಲೆಯೆಡೆ ನೋಡಿ, ನಗುತ್ತ ಹೇಳಿದ ಪರಾಕ್ರಮಿ ಅಲ್ಲವೇ ನೀನು ಗಂಟೆತ್ತಲೂ ಆಗುವುದಿಲ್ಲವೇ ಹೋಗಲಿ ಅದಾಗುವಂತಹ ಒಂದು ಮಂತ್ರ ಹೇಳಿಕೊಡುತ್ತೇನೆ, ಸಮೀಪಬಾ, ನನ್ನ ಹತ್ತಿರವೇ ತಲೆಬಾಗಿ, ಕಿವಿಗೊಡು ಎಂದು ಪ್ರೀತಿಯಿಂದ ನುಡಿದ.

ತಿರುಮಂಗೈ ನಿನಗೆ ನಾನು ತಲೆಬಾಗುವುದು ಸಾಧ್ಯವಿಲ್ಲ, ನಿನ್ನನ್ನು “ಇದೋ ಮಂತ್ರ, ಮನಸ್ಸಿಟ್ಟು ಹೇಳು ಓಂ ನಮೋ ನಾರಾಯಣಾಯ “ಮೂರು ಸಲ ಹೇಳು” ಮಧುಮಗನ ಮಾತನ್ನು ತಿರುಮಂಗೈ ಪಾಲಿಸಿದ, ಗಂಟನ್ನು ಎತ್ತಲು ಹೋದರೆ ಅದು ಸುಲಭ ಸಾಧ್ಯವೇ ಆಯ್ತು! ಇನ್ನು ಆ ಗಂಡಿನ ಕಾಲ್ಗಡಗ ಹೆಣ್ಣಿನ ಪದಕ! ಬಲವಾಗಿ ಹಲ್ಲಿಂದ ಕಚ್ಚಿ ಕಾಲ್ಗಡಗ ಕೀಳಲು ನೋಡಿದ! ಅದೇ ತಕ್ಕ ಸಮಯ, ತಿರುಮಂಗೈಗೆ ಈ ತನಕ ಆಗಿರದ ಅಪರೂಪದವಾದ ಅನುಭವ! ತಲೆಯೆತ್ತಿ ನೋಡಿದರೆ ದಿವ್ಯದಂಪತಿಗಳಾದ ಲಕ್ಷ್ಮೀನಾರಾಯಣರು! ಕಳ್ಳನೆದೆ ಕರಗಿ ಸ್ರವಿಸಿತು, ಪಶ್ಚಾತ್ತಾಪ ಮನೆ ಮಾಡಿತು ಹಿಂದೆ ಕಲಿತ ದೇವತಾಸ್ತುತಿ ಜತೆಗೆ ತಾನಾಗಿ ಹೊರಸೂಸಿದ ಆಶು ಕವಿತೆ, ತಿರುಮಂಗೈ ಭಕ್ತಿಯಿಂದ ಉನ್ಮಾದಿಯಾಗಿ ಬಿಟ್ಟ! “ಛೇಛೇ, ನನ್ನ ಜೀವನೇ!” ಎಂದು ಪರಮಾತ್ಮನಲ್ಲಿ ಮನಮುಟ್ಟಿ ಮತ್ತೆ ಮತ್ತೆ ನಮಿಸಿದ ದಿವ್ಯ ಪ್ರಬಂಧ ಸಾಲ್ಗಳನ್ನೇ ಹಾಡಿದ, ಸಂತನಾದ ತಿರುಮಂಗೈ! ಕುಮುದವಲ್ಲಿಯೂ ಸಂತೋಷಗೊಂಡಳು ಗಂಡನಿಗೆ ತಕ್ಕ ಮಡದಿಯಾದಳು. ಜೀವನದಲ್ಲೇ ಒಂದು ವಿರಳವಾದ ತಿರುವು! ಅನೇಕ ಸಂತ ಭಕ್ತರ ಬದುಕಿನಲ್ಲಿ ಹೀಗೆ ಅನಿರೀಕ್ಷಿತಗಳು ನಡೆಯುತ್ತವೆ, ಸಮಾಜಕ್ಕೆ ಇವರು ಒಳ್ಳೆಯದು ಮಾಡಲು ಶ್ರಮಿಸುತ್ತಾರೆ.

ತಿರುಮಂಗೈ ಆಳ್ವಾರರ ರಚನೆಗಳೆಂದರೆ

ಪೆರಿಯ ತಿರುಮೊಳಿ ತಿರುಕ್ಕುರುನ್ದಾಂಡಗಮ್ ತಿರುವೆಳ್ಳಕ್ಯುಟ್ರಿರುಕ್ಕೆ ಹಾಗೂ ಜಾನಪದ ದೇಸಿ ಛಂದಸ್ಸು ರಚನೆಯ ಶಿರಿಯ, ತಿರುಮಡಲ್ ಪೆರಿಯತಿರುಮಡಲ್, ತಿರುಮಂಗೈಯವರ ಕವಿತೆಯ ಅಂತರಂಗದ ಸ್ವಾರಸ್ಯವನ್ನಾಗಲಿ ಮಡಲುಗಳ ಚೆಂದದಬೆಡಗನ್ನಾಗಲೀ ಭಕ್ತಕವಿಯು ತೋಡಿಕೊಂಬುವ ಭಾವೋತ್ಕರ್ಷವನ್ನಾಗಲೀ, ಸಮಾಜದ ಓರೆಕೋರೆಗಳಿಗೆ ಮನಪುಗುವಂತೆ ತಿಳಿಸುವ ರೀತಿಯನ್ನಾಗಲೀ ಬಣ್ಣಿಸಲು ಇಲ್ಲಿ – ಪ್ರಬಂಧ ವಿಸ್ತರದ ಭಯದಿಂದ ಆಗದೆನ್ನಿಸುತ್ತದೆ ಒಂದು ಕಡೆ, ಆತನ ಪ್ರಬಂಧ ಪಾಶುರ ದಭ ದಭ [ಜಲಪಾತ] ಯೆನ್ನಿಸುವಂತಿದ್ದರೆ, ಇನ್ನೋಂದೆಡೆ ಮೈದಾನದಲ್ಲಿ ಹರಿವ ತೊರೆ! ತಾವು ಸಂದರ್ಶಿಸಿದ ಕ್ಷೇತ್ರ – ಆರ್ಚಾಮೂರ್ತಿಗಳ ವಿವರಗಳನ್ನು ಪ್ರಬಂಧಗಳಲ್ಲಿ ಹಾಡಿದ್ದಾರೆ ಹಿಮಾಲಯದಿಂದ ಕನ್ಯಾಕುಮಾರಿತನಕ ಪರ್ಯಟನೆ ಮಾಡಿದ್ದಾರೆ ಒಂಭತ್ತನೆಯ ಶತಮಾನದಲ್ಲೇ ಇದು ಒಂದು ಸ್ವಾರಸ್ಯಕರ ಪ್ರವಾಸ – ತೀರ್ಥಯಾತ್ರ ಪ್ರಬಂಧ

ಇನ್ನೊಂದು ವಿಶೇಷ, ಈಗಲೂ ಶ್ರೀರಂಗದ ದೇವಾಲಯ – ಬೃಹತ್ ಪ್ರಾಕಾರ ಎಲ್ಲ ಬಹುಪಾಲು ತಿರುಮಂಗೈ ಆಳ್ವಾರ್ರು‍ ನಿರ್ಮಿಸಿದವು, ಎಂಬುದು ಶತಶತಮಾನಗಳಿಂದ ಪ್ರಚಲಿತ ಆಗಿದೆ.

ತಮ್ಮ ಬದುಕಿನ ಬಗ್ಗೆ ವಿವರ ವೀಯದ ತಿರುಮಂಗೈ ಕೊನೆಯ ದಿನಗಳನ್ನು [ಕುಮುದವಲ್ಲಿ ರಹಿತ] ತಿರುಕ್ಕುರುಂಗುಡಿ ಎಂಬುವ ದ್ರಾವಿಡ ವೈಷ್ಣವ ದಿವ್ಯ ದೇಶದಲ್ಲಿ ಬದುಕಿ ಪರಮಪದಿಸಿದರು “ಪೆರಿಯ ತಿರುಮೊಳಿ” – ೧೦೮೪ ಪಾಶುರಗಳ ದಿವ್ಯ ಪ್ರಬಂಧವಚಿತೂ ತಿರುಮಂಗೈಯವರ ಪಾಂಡಿತ್ಯ, ಪ್ರತಿಭೆಗಳನ್ನು ಅಭಿವ್ಯಕ್ತಿಸುತ್ತಿದೆ. ಈತನಿಗೆ ಖಂಡಿತಾ ಶಾಸ್ತ್ರೀಯ ಶಿಕ್ಷಣ ಒದಗಿದ್ದಿರಲೇಬೇಕು ಎಂದೆನ್ನಿಸುತ್ತದೆ. ಹನ್ನೊಂದು ಪತ್ತು ಅಥವಾ ಶತಕಗಳು ಈ ಪ್ರಬಂಧದಲ್ಲಿದೆ ಅಂದರೆ, ಒಂದೊಂದು ಪತ್ತು – ಹತ್ತು ದಶಕಗಳು ಕೊನೆಯದಾಗಿ ಹನ್ನೊಂದನೆಯ ಶತಕದಲ್ಲಿ ಎಂಟು ಪತ್ತುಗಳು ಮಾತ್ರ [10×100=1000+8×10=80+4=1084]ಪೆರಿಯತಿರುಮೊಳಿ ಹೆಸರಿಗೆ ತಕ್ಕಂತೆ ದೊಡ್ಡದಾದ ದಿವ್ಯಪ್ರಬಂಧವೇ ಸರಿ ತಾನು ಅಚಲವಾಗಿ ನಂಬಿ ಸೇವಿಸುವ ದೈವ – ಭಕ್ತನು ಅನುಭವಿಸುವ ವಿವಿಧ ರೀತಿಯ ಭಾವಗಳು – ನಾಯಿಕಭಾವ, ಸಖ್ಯ ಪ್ರೇಮ, ವಿರಹ, ಪೌರಾಣಿಕಾ ಹಿನ್ನೆಲೆ – ಹೀಗೆ ಎಲ್ಲವೂ ಪೆರಿಯ ತಿರುಮೊಳಿಯ ಪದ್ಯಗಳಲ್ಲಿ ಗುರುತಿಸಿದ್ದಾರೆ. ಆಳ್ವಾರರು ಇದು ಎಷ್ಟರ ಮಟ್ಟಿಗೆ ಈಗಿನ ವಾತಾವರಣದಲ್ಲಿ ಪ್ರಸ್ತುತ/ಯಾ/ಸುಸಂಗತ ಆದಾತು? ಆ ಕಾವ್ಯದ ಜಾನಪದ ಸೊಗಡೇ ಬಹು ಅಪರೂಪವಾದದು ಪೆರಿಯ ತಿರುಮೊಳಿಯ ಸಾರವನ್ನು ಗ್ರಹಿಸಿದರೂ ದೈವದ ಅಪ್ರಮೇಯತ್ವದ ಬಗ್ಗೆ ವಿಶ್ವಾಸ ಒಡಮೂಡುತ್ತದೆ ಉತ್ತಮ ನಡೆ ಎನ್ನುವುದು ಇಂದಿನ ಚರ್ಚಾಸ್ಪದ ಯುಗದ ಧಾವಂತಕ್ಕೆ ಬೇಕಾದ ಪರಿಕರವನ್ನು ಒದಗಿಸುತ್ತದೆ, ಮೂಗು ಹಿಡಿದು ಕರ್ಮಠತನದಿಂದ ಕುಳ್ಳಿರಬೇಕಿಲ್ಲವಾದರೂ, ಧ್ಯಾನಕ್ಕೆ ಅಗತ್ಯವಾದ ಅಂಶಗಳನ್ನು ತಿರುಮಂಗೈ ಚಿಂತನ ನಡೆಸಿದ್ದಾರೆ.

ಒಂದು ಉದಾಹರಣೆಗೆ :   

ವಾಡಿನೇನ್ ವಾಡಿ ವರುಂದಿನೇನ್ಮನತ್ತಾಲ್
ಪೆರುಂತುಯರ್ ಇಡುಂಬೈಯಿಲ್ ಪಿರಂದು
ಕೂಡಿನೇನ್ ಕೂಡಿ ಇಳೈಯವರ್ ತಮ್ಮೊಡು
ಅವರ್ ತರುಂ ಕಲವಿಯೇ ಕರುದಿ
ಓಡಿನೇನ್ ಓಡಿಉಯ್ವತೋಲ್ಪೆರುಳಾಲ್
ಉಣರ್ವೆನುಂ ಪೆರುಂಬದಂ ತಿರಿಂದು
ನಾಡಿನೇನ್ ನಾಡಿನಾನ್ ಕಂಡುಕೊಂಡೇನ್
ನಾರಾಯಣವೆನ್ರುಂ ನಾಮಮ್ [ಪೆ.ತಿ ಮೊಳಿ ]

ಬಾಡಿದೆನು ಬಾಡಿಮನಮರುಗಿದೆನು, ಹಿರಿಯ ದೂಸರ ದೊಡ್ಡದಾಧಧೂಳು ಈ ಬಾಳಿನಲ್ಲಿ ಹುಟ್ಟಿ ಕೂಡಿದೆನು; ಹರೆಯದ ಹೆಣ್ಣುಗಳ ಕೂಡಿ ಅವರು ಕೊಡುವ ಸಂಬಂಧವಾಶಿಸಿ ಓಡಿದೆನು; ಓಡಿ ಉಳಿಸುವ ಒಂದು ವಸ್ತುವಿಂದ ಜ್ಞಾನವೆಂಬ ಹಿರಿಯ ಪದವಿ ತಿಳಿದು ನಾಡಿದೆನು; ನಾಡಿ ನಾನು ಕಂಡು ಕೊಂಡೆನು “ನಾರಾಯಣಾ” ನಮೋ ಎಂಬ ಹೆಸರನು [ಮಂತ್ರಂ ಸಪ್ರಣವಂ ಪ್ರಣಾಮ ಸಹಿತಂ ಓಂ ನಮೋ ನಾರಾಯಣಾಯ]

ತಿರುಮಂಗೈ ಕಂಡುಕೊಂಡ – ದರ್ಶನ – ಕುಲಂ ತರುಂ ಶೆಲ್ವಂತಂದಿಡುಂ ಶ್ರೀಮನ್ನಾರಾಯಣನ ದಿವ್ಯನಾಮವು ಅನುಸಂಧಾನ ಮಾಡುವವರಿಗೆ ಅದು ಉತ್ತಮವಾದ ಕುಲ – ಐಸಿರಿಯನ್ನೇ ತಂದು ಕೊಡುತ್ತದೆ.

“ಮನುಷ್ಯ ಜನ್ಮ ಅಸ್ಥಿರ; ಈ ನಮ್ಮ ಸ್ವಾಮಿ ಪರಮಕೃಪಾಳು! ನನ್ನನ್ನುದ್ದರಿಸಿದ ನೀವೆಲ್ಲ ಹೀಗೆ ಉತ್ತಮಹಾದಿಯನುಸರಿಸಬಾರದೇ

ತಿರುಮಂಗೈಯವರು ನುತಿಸುವ ಶ್ರೀ ನರಸಿಂಹ ನಾಮಗಳು, ಸಾಲಿಗ್ರಾಮ ಕ್ಷೇತ್ರದ [ಗಂಡಕೀನದಿ] ದಿವ್ಯವಾದ ಅನುಭವ, ಎಲ್ಲವನ್ನು ಹೃದಯಂಗಮವಾದ ರೀತಿಯಲ್ಲಿ ಬಣ್ಣಿಸಿದ್ದಾರೆ, ಭಗವಂತನ “ಪರತ್ವ ಸೌಲಭ್ಯ” ಪರಮವಾದ ಕರುಣೆ – ಕೃಪೆ – ಪ್ರಸಾದ ಎಲ್ಲವನ್ನೂ ಆಳ್ವಾರರು ತಮ್ಮ ತಿರುಮೊಳಿಯಲ್ಲಿ ಬಣ್ಣಿಸಿದ್ಧಾರೆ. ಥಟ್ಟನೆ ಅರಿವಿನ ಸೌದಾಮಿನಿಯ ಝಳಪನ್ನು ಪಡೆದ ಭಕ್ತ ತಿರುಮಂಗೈ, ಮನತುಂಬಿ ಹಾಡಿದ್ದಾರೆ, ಎನ್ನಿಸುತ್ತದೆ.

ತಿರುಕ್ಕುರುಂದಾಂಡಹಂ

ತಿರುಮಂಗೈಯವರಿಗೆ ನಾಲ್ಕವಿಪ್ಪೆರುಮಾಳ್ ಎಂಬ ಹೆಸರು ಸಂದಿತ್ತು! ಆಶು, ವ್ಮಧುರಂ, ಚಿತ್ರಮ್, ವಿಸ್ತಾರಮ್ – ಈ ನಾಲ್ಕು ವಿಧವಾದ ಪದ್ಯರಚನೆಯಲ್ಲಿ ಶ್ರೇಷ್ಟರೆನ್ನಿಸಿಕೊಂಡರು! ತಮ್ಮ ಪರಿತಾಪವನ್ನೇ ಈ ಪದ್ಯದಲ್ಲಿ ಹೊರಗೆಡಹುವ ನಿಟ್ಟುಸಿರು ಈ ಪದ್ಯ – ಕಳ್ಳನು ನಾನು, ಕೆಡಕ ಮಾಡಿದ್ದೇನೆ ದಿಟವೇ, ಕಂಡ ವಿಷಯಕ್ಕೆ ಅಲೆದಿದ್ದೇನೆ ನಿಜವೆ, ಆದರೂ ತಿಳಿದವನಾದೆನು – ಉದ್ಧಾರ ಆಗುವ ಹಾದಿಯನ್ನು ಸೇರಿದೆ. ಬೇಗನೇ ದೇವರ ಅನುಗ್ರಹವನ್ನು ಪಡೆದೆನು ಒಳಗೆಲ್ಲ ಕರಗಿ ಕೊರಲು ಸಡಿಲಾಗಿ ದನಿಗಟ್ಟು, ಮೈಯೆಲ್ಲ ಕಣ್ಣೀರ [ಕಂಬನಿ] ಸೇರಿರಲು ಕಗ್ಗತ್ತಲು ರಾತ್ರಿಯಲ್ಲಿ, ಹಗಲಲ್ಲಿ, ನಾನು ಕೂಗಿ ಕರೆಯುತಿಹೆನು ನಾರಾಯಣ, ನಾರಾಯಣ ಎಂಬ ಹೆಸರನ್ನು!

ತಿರುಂನೆಡುಂದಾಂಡಹಮ್

೩೦ ಪಾಶುರಗಳಿವೆ ಸರಳ, ಹೃದಯಸ್ಪರ್ಶಿ ಹಾಡು ಇದರಲ್ಲಿ ಭಗವಂತನ ಮಹಾ ಮಹಿಮತ್ವ, ಅವನಲ್ಲಿ ತೋರುವ ಭಕ್ತಿಯ ಅತಿಶಯತೆ ಇವುಗಳನ್ನು ಆಳ್ವಾರರು ಭಾವಪೂರ್ಣವಾಗಿ ಹಾಡುತ್ತಾರೆ. ನಾಯಕ – ನಾಯಕಿಯ ಭಾವದ ಸಾಲುಗಳು ಇವು ಪೊನ್ನಲರ್ನ್ದನರುಂ ಶೆರುಂದಿಪ್ಪೊಳಿನೊಡೇ ಹೊನ್ನಿನಂಥ ಬಣ್ಣ ಸುವಾಸನೆಯುಳ್ಳ ಸುರಹೊನ್ನೆ ಹೂ ಉಳ್ಳ ಶ್ರೀರಂಗವೂ ನನ್ನೂರು! ಇದೇ ತೆರನಾಗಿ “ರಥಬಂಧ”ವೆಂಬುವ ರಚನೆ

ತಿರುವೆಳುಕ್ಕೂತಿರುಕ್ಕೈ ಪ್ರಬಂಧ ೪೭ ಸಾಲು ಮಾತ್ರ ಸಂಭಾಷಣೆಯ ಸ್ವರೂಪದ ರಚನೆಯಿದು. [ತಿರುಂನೆಕುಂದಾಂಡಹಮ್ ಹಾಗೂ ತಿರುನೆಡುಂದಾಂಡಹಂ} ಎರಡೂ ಪ್ರಬಂಧಗಳು “ದಂಡಕ” ಎಂಬುದು ಸಾಹಿತ್ಯ ಪ್ರಕಾರಾದವು ಒಂದೇ ಸಮ ನೀರು ಸುರಿವಂತೆ, ಅಥವಾ ಎಣ್ಣೆಯನ್ನು ಸುರಿವಂತೆ ಆರೀತಿಯಲ್ಲಿ ಪಾಶುರ/ಪದ್ಯ ರಚನೆಯು ಒಂದೇ ಸಮ ಪ್ರವಹಿಸುತ್ತದೆ! ಮೊದಲ ಪ್ರಬಂಧ – ನಾಯಕ – ನಾಯಕೀ ವಿರಹ ವ್ಯಸನವನ್ನು ಬಣ್ಣಿಸುತ್ತದೆ.

ತಿರುಮಂಗೈ ಆಳ್ವಾರರು, ಒಂದು ರೀತಿಯಲ್ಲಿ ಹೋಲಿಸುವುದಾದರೆ, ಕನ್ನಡದ ಕನಕದಾಸರಿಗೆ, ಸರ್ವಜ್ಞ ಕವಿಗೆ, ಶಿವಶರಣರಿಗೆ ಹೋಲಿಸಬಹುದೆಂದೆನ್ನಿಸುತ್ತದೆ! ಇದಕ್ಕೆ ಪ್ರಮುಖ ಕಾರಣ, ಕನಕನ “ಮುಂಡಿಗೆ”ಗಳು ಸರ್ವಜ್ಞನ ಒಡಪು [ಒಗಟು/ಬೆಡಗಿನ ತ್ರಿಪದಿ, ಹಾಗೂ [ವಚನಗಳಿಂದ] ಶಿವಶರಣದ ಬೆಡಗಿನ ವಚನಗಳು ತಿರುಮಂಗೈ ಸಮಾಜದಲ್ಲಿ ಕೆಳಸ್ತರದಿಂದ ಬಂದು ತಮ್ಮ ಏಕಾಂತಿಕ ಸತತ ಸಾಧನೆಯಿಂದ, ಯೋಗಿ ಆಳ್ವಾರರಾದದ್ದು ಅವರ ಹಿಂದಿನ ಗ್ರಾಮೀಣ ಪರಿಸರ – ಅಲ್ಲಿನ ಮಜಲುಗಳು – ದಟ್ಟವಾದ ಅನುಭವ ಜಾನಪದ ಸೊಗಡು – ಈ ಎಲ್ಲಾ ಮೌಲಿಕ ಅಂಶಗಳು ಅಳವಟ್ಟು “ಮಡಲ್” ಎಂಬ ಗ್ರಾಮೀಣ ಛಂದದಲ್ಲಿ ದಿವ್ಯಪ್ರಬಂಧ – ಭಕ್ತಿದರ್ಶನ ಗೀತೆಗಳನ್ನು ಸಲೀಸಾಗಿ ಹಾಡುವಂತೆ ಪ್ರೇರಿಸಿದೆ, ಅದರಲ್ಲಿ ಅವರು ಪರಿಪೂರ್ಣವಾದ ಸಾಥಕ್ಯ ಪಡೆಯುತ್ತಾರೆ. “ಕನಕನನ್ನು ಕೆಣಕಬೇಡ, ಕೆಣಕಿತಿಣುಕ ಬೇಡ ಕನಕನ ಮೇಲೆ ವ್ಯಾಸಮುನಿ ದಯಮಾಡಲು/ಮಠದವರೆಲ್ಲ ದೂರಿಕೊಂಬರು ನಾಡಾಡಿಯೆಂಬೆನೆ ಈತನಾಡುವ ಮಾತುಗಳು” ಎಂದು ಪ್ರಶಂಸಿಸುವ ಪುರಂದರದಾಸರ ಮಾತುಗಳನ್ನು ತಿರುಮಂಗೈಗೂ ಹೋಲಿಸಬೇಕೆನ್ನಿಸುತ್ತದೆ ಕಾರಣ ಆ ಚೇತನದ ಸಾಧನೆ.

ತಮಿಳು ನುಡಿ – ನುಡಿಗಟ್ಟಿನ ಛಂದೋ ಪ್ರಕಾರಗಳಲ್ಲಿ ಪ್ರಚಲಿತವಾದ ಪ್ರಕಾರಗಳು ಅಂದಾದಿ” [ತಿರುವಂದಾದಿಗಳು – ಮೊದಲ ಮೊದಲ ಮೂವರು ಆಳ್ವಾರರು ಹಾಡಿರುವ ಮುನ್ನೂರು ಪಾಶುರಗಳು] ಇಯರ್‌ಪಾ, ಇಯಳ್‌ಪಾ, ಇಶೈಪಾ, ದಂಡಕಂ, ತಿರುವಾಂಯ್ಮೊಳಿ ತಿರುಪ್ಪಾವೈ ವಿಶಿಷ್ಟಛಂದಸ್ಸು ಹಾಗೂ “ಮಡಲ್” ಜನಪದಛಂದ [ಕವಿರಾಜಮಾರ್ಗಕಾರ ಹೆಸರಿಸುವ ಭಾಜನೆ ಹಬ್ಬ – ಹಾಡುವ ಕಾವ್ಯ ಜನಪದಗೀತೆಗಳು ನೆನಪಾಗುತ್ತವೆ] ಮುಂತಾದವು. ತಿರುಮಂಗೈ ಆಳ್ವಾರರು ಹಾಡಿರುವ ಎರಡು ದಿವ್ಯ ಪ್ರಬಂಧಗಳು ಶಿರಿಯಮಡಲ್ [ಚಿಕ್ಕದು] ಹಾಗೂ ಪೆರಿಯ ಮಡಲ್ [ದೊಡ್ಡದು] ಭಗವಂತನಲ್ಲಿ ಕಾಮ ಅನುರಾಗ – ಮೋಹ ಏಕಮೇವ ಪ್ರೇಮ ಇದು “ತಿರುಮಡಲ್” ಪ್ರಬಂಧಗಳ ಛಂದಸ್ಸಿನ ನಡೆ ಹಾಗೂ ಸಾರ. ‘ಮಡಲ್ಎಂದರೆ ನಾಯಕ [ಇಲ್ಲಿ ಆಳ್ವಾರರೆ] ನಾಯಿಕೆ [ಇಲ್ಲಿ ಆಳ್ವಾರರೆ] ನಾಯಿಕೆ [ಇಲ್ಲಿ ಆಳ್ವಾರರೇ ನಾಯಿಕಾ ಭಾವದಲ್ಲಿರುವವರು] ಇಬ್ಬರು ಗುಣಗಳಲ್ಲಿ ಯಾವುದೂ ಕೊರೆಯಿಲ್ಲ ನಾಯಿಕಾ ಭಾವದಲ್ಲಿರುವವರು] – ಇಬ್ಬರೂ ಗುಣಗಳಲ್ಲಿ ಯಾವುದೂ ಕೊರೆಯಿಲ್ಲ ನಾಯಿಕೆ ತನ್ನ ಸಖಿಯರೊಡನೆ ಉದ್ಯಾನವನದಲ್ಲಿ ಹೂ ತಿರಿದು ತರಹೋದಳು, ನಾಯಕ ತನ್ನ ಪುರುಷತ್ವ ಎಂಬಂತೆ ಬೇಟೆಗೆಂದು ಹೊರಹೊರಟ ಅದೇ ಉದ್ಯಾನವನ ಪ್ರವೇಶಿಸಿದ. ದೈವ ಸಂಕಲ್ಪದಿಂದ ಹೀಗಾಯಿತು. ನಾಯಕಿಯ ಪ್ರಿಯ ಸಖಿ ಅನ್ಯ ಪತಿಯಾಗಿದ್ದಳು [ಬೇರೆಯವರಲ್ಲಿ ಅನುರಕ್ತೆ ಎಂಬ ಹಾಗೆ] ಇಬ್ಬರಿಗೂ [ನಾಯಕ – ನಾಯಕಿ] ದೃಷ್ಠಿಬಂಧ ಉಚಿಟಾಗಿ, ಅದೇ ಕಾರಣದಿಂದ ಸಂಶ್ಲೇಷವುಂಟಾಯಿತು. ಇವರಿಬ್ಬರನ್ನು ಸಮಾಗಮ ಮಾಡಿಸಿದ ದೈವವೇ ಮುಂದೆ ಅಗಲಿಸಿತು ಕೂಡ! ನಾಯಕ ನಾಯಕಿಯರಲ್ಲಿ ವಿರಹ, ನೋವು – ಶರೀರಗಳಲ್ಲಿ ದೇಹಕಾಂತಿಯು ಕುಂದಿತಷ್ಟೆ ಇದನ್ನು ಗಮನಿಸಿದ ಇವರ ಹಿರಿಯರು ಇವರ ಬಗೆಗೆ ಸಂದೇಹಪಟ್ಟರು, ಚಲನವಲನಗಳ ಬಗ್ಗೆ ಕಾವಲಿರಿಸಿದರು ಅದೇ ಕಾರಣದಿಂದಲೇ ಈ ಇಬ್ಬರ ಅಭಿನಿವೇಶವೂ ತೀವ್ರವಾಯಿತು ಒಬ್ಬರಿಗೊಬ್ಬರು ಲಭಿಸದ ಕಾರಣ ಮಡಲೂರುವ ಸಾಹಸ ಕೈಗೊಳ್ಳುತ್ತಾರೆ ಇವರು! ಮಡಲು – ನೋವಿನಿಂದ ಅಳಲುಪಡುವುದು ತನ್ನ ಪ್ರಿಯಕರನ ಗುಣ – ಹಾನಿ – ಕುಂದು ಎಲ್ಲ ಬೆಳಸಿ ಸಾಹಸದಿಂದ ಅವನನ್ನು ತನ್ನ ವಶಪಡಿಸಿಕೊಳ್ಳದೆ ಇರೆನೆಂಬ ಸಾಹಸ ಪ್ರವೃತ್ತಿಯೆ “ಮಡಲ್” – ಒಂದು ರೀತಿ ನಿಂದಾಸ್ತುತಿಯೂ ಬೆರೆತಿರುತ್ತದೆ. ನಿಂದಿಸುವುದರ ಮೂಲಕ ಸ್ತುತಿಸುವ ಪರಿ “ಶಿರಿಯ ಮಡಲ್” ಪ್ರಬಂಧದಲ್ಲಿ ಶ್ರೀ ಕೃಷ್ಣಾವತಾರದಲ್ಲಿ ಆಳ್ವಾರರು ಅಭಿನಿವೇಶವನ್ನು ಹೊಂದಿ ಆತನನ್ನು ತನ್ನವನ್ನಾಗಿ ಪಡೆದು ಕೊಳ್ಳಲಾಶಿಸಿದರು ದೇವರಿಗೇ ಸವಾಲು ಒಡ್ಡಿ ಕಾಯ್ದರು ಇಂದಲ್ಲ ನಾಳೆ ಬಂದೇ ಬರುವನುವನು ಎಂಬ ಕೆಚ್ಚಿಂದ!

ತಿರುನರೈಯೂರ್ ಅಥವಾ ನಾಯಚ್ಚಿಯೂರ್ ಕೋಯಿಲ್ ಸ್ವಾಮಿಗೆ ಸಂಬಂಧಿಸಿ ಹಾಡಿರುವ ಪ್ರಬಂಧಗಳಿವು. ಶಿರಿಯ ಮಡಲ್‌ನಲ್ಲಿ ೧೫೫ (ನೂರಐವತ್ತೈದು) ಸಲುಗಳಿವೆ, ಪೆರಿಯ ಮಡಲ್‌ನಲ್ಲಿ ೨೯೭ (ಇನ್ನೂರತೊಂಭತ್ತೇಳು) ಸಾಲುಗಳಿವೆ – ನಾಲ್ಕು ವಿಧದ ಪುರುಷಾರ್ಥ (ಧರ್ಮ, ಅರ್ಥ, ಕಾಮ, ಮೋಕ್ಷ)ಗಳಲ್ಲಿ ಕಾಮವೇ ಪರಮ ಪುರುಷಾರ್ಥ. ಆ ಕಾಮವು ಭಗವಂತನಲ್ಲಿಯೇ ಆಗಬೇಕು ಲೌಕಿಕ – ಕ್ಷಣಿಕ – ವಿಷಯಗಳಲ್ಲಲ್ಲ! ಇದನ್ನು ಸಾಧಿಸಲು ಪರಮಾತ್ಮನಲ್ಲೇ ಶರರ್ಣಾತಿ ಮಾಡಬೇಕು ಇದು ಶಿರಿಯಪೆರಿಯಮಡಲ್ಗಳ ಪ್ರತಿಪಾದನೆ ಹಾಗೂ ಧ್ಯೇಯ.

ನಾಯಿಕೆಯ ನಾಯಕ ಭಾವನೆಯು ಕನಸಿನಲ್ಲಿಯೋ ವಾಸ್ತವದಲ್ಲೋ ಒಮ್ಮೆ ಕಂಡಾಗ್ಗೆ, ಅವನಲ್ಲಿ ಅಪಾರ ಪ್ರೀತಿ ಹೊಂದಿದವಳಾಗಿ ಆ ಪ್ರಿಯನನ್ನು ಪಡೆಯಲು ಮೊದ ಮೊದಲು ಮೌನದಿಂದ ದುಃಖಿಸುತ್ತಿದ್ದು, ಕೊನೆಗೆ ಅವನನ್ನು ಪಡೆಯದೆ ಬದುಕಲು ಅಸಾಧ್ಯವೆನಿಸಿ, ಆಗ ಅವನಲ್ಲಿ ತನಗೆ ಇರುವ “ಅವ್ಯಾಹತವಾದ ಪ್ರೇಮವನ್ನು “ಸಂಕೋಚವಿರದೆಯೇ ಬಹಿರಂಗಪಡಿಸುವುದು, “ಮಡಲ್” ಎನ್ನಿಸುತ್ತದೆ.

“ಪೊನ್ನುಲಹಿಲ್ ವಾನವರುಮ್ ಪೊಮಹಳುಮ್ ಪೋತ್ತಿಶ್ವೆಯಮ್ ನನ್ನುದಲೀರ್! ನಂಬಿ ನರೈಯೂರರ್ ಮನ್ನುಲಹಿಲ್ (ತಿರುನರೈಯೂರಿನ ದೈವ) ಎನ್ನಿಲೈಮ್ಯೆಕಂಡುಂ ಇರಂಗಾರೇಯಾಮಾಹಿಲ್ ಮನ್ನು ಮಡಲೂರ್ವನ್‌ವೆಂದು (ಪೆರಿಯ ಮಡಲ್ ಆರಂಭ)

ದೇವರ ಆಗಲಿಕೆ, ವಿರಹ, ತನಗಾಗಕೂಡದು ನಾಯಿಕೆಯೋಗಿ ತಿರುಮಂಗೈವಿಲಸುವ ವಿಪ್ರಲಂಭ ಭಾವ, ಆತ್ಮತಿಶಯವಾಗಿ ತಾನು ಪ್ರೇಮಿಸುವ ಭಗವಂತನಿಗಾಗಿಯೇ ತಿರುಮಂಗೈವಿಲಪಿಸುವವಿಪ್ರಲಂಭಾವ, ……….ತಿರುಮಂಗೈ (ನಾಯಕೀ ಭಾವದಲ್ಲಿ) ಮಡಲೂಡಲು ನಿಶ್ಚಯಿಸುತ್ತಾಳೆ ಮಡನಲ್ಲಿ ತನನ್ನೇ ತಾನೂ ಗಾಸಿಮಾಡಿಕೊಂಬುವಾಗ ಆಪ್ರೀಯಕರನ ರಣಸತಿ, ಲಿಂಗಪತಿಭಾವ, – ಶರಣರಲ್ಲಿಯೂ ಉತ್ಕಟವಾಗಿ ಇದೆ ಮಡಲೂರಲು ನಿಶ್ಚಯಿಸುತ್ತಾಳೆ. ಆ ಪ್ರಿಯಕರನ ಮೈಯಲ್ಲಿ ತೀವ್ರವಾದ ಗಾಯವಾಗುತ್ತದೆ, ಅಲ್ಲವೇ? ಯಾವ ನಾಚಿಕೆ – ಸಂಕೋಚ ಅವನಿಗಿಲ್ಲ, ಪ್ರೇಯಸಿಗೆ ತನ್ನ ಭಾವನೆ ಪ್ರೇಮ ತಿಳಿಸುವ ವಿಧಾನವಿದು. ಪ್ರೇಯಸಿಯನ್ನು ಪಡೆಯಬೇಕು ಒಲ್ಲವೇ ಬದುಕಿರಕೂಡದು – ಇಷ್ಟು ಉದ್ದೇಶ. ಇದೇ “ಮಡಲೂರು” ಎಂಬುದಾಗಿ ಒಟ್ಟಾರೆ ತಿರುಮಂಗೈ ಆಳ್ವಾರ್ ರಚನಗಳು, ಅವರ ಅನುಭವ ವೈವಿಧ್ಯಗಳಿಂದಾಗಿ ಸಮಾಜೋಧಾರ್ಮಿಕ ಸಾಂಸ್ಕೃತಿಕ ಅಧ್ಯಯನಕ್ಕೆ ಆಧಾರವೊದಗಿಸುವ ಆಕರವಾಗುತ್ತದೆ.

ಕೋಲುರಿ ಮುಂದೆ ನಡೆವಂಥ ಮುಪ್ಪು ನಮ್ಮ ಮೇಲೆ ಸುಳಿಯುವ ಮುನ್ನ | ಕಾಲೂರಿನಿಂತಾಗ ತೂರಾಡುವ ಗತಿಯು ನಮಗೆ ಬರುವ ಮುನ್ನ | ಹೆತ್ತ ತಾಯಂತೆ ನಟಿಸಿಬಂದ ರಕ್ಕಸಿಯ ಉಸಿರನ್ನು ಹೀರಿದ (ಪೂತನಿಯ) ನಮ್ಮೊಡೆಯ, ಸ್ವಾಮಿಗೆ ತಲೆಬಾಗುವಮನವೇ.

ಪೆರಿಯಾಳ್ವಾರ್\ವಿಷ್ಣುಚಿತ್ತರು\ವಿಟ್ಟುಚಿತ್ತನ್ (ತಮಿಳಲ್ಲಿ) ಪೆರಿಯಾಳ್ವರ್

ಸುಮಾರು ಕ್ರಿ.ಶ ೮ – ೯ರ ಅವಧಿಯಲ್ಲಿ ಅವತರಿಸಿದರು ಪೆರಿಯಾಳ್ವಾರರು. ಕುಲಶೇಖರರ ತರುವಾಯ ಗುರುಪರಂಪರೆಯ ಕ್ರಮದಲ್ಲಿ ಬಂದ ಸ್ಮರಣೀಯರು, ಬ್ರಾಹ್ಮಣ ಸಂಪ್ರದಾಯ, ತಮಿಳುನಾಡಿನ ಶ್ರೀವಿಲ್ಲಿಪುತ್ತೂರು (ಇಂದಿಗೂ ಪ್ರಸಿದ್ಧ ಶ್ರೀವೈಷ್ಣವ ದಿವ್ಯದೇಶ) ಪೆರಿಯಾಳ್ವಾರ್ ಜನ್ಮಸ್ಥಳ ಮನೆ – ಮನೆತನದ ಸಂಸ್ಕಾರ, ಸಹಜವಾಗಿಯೇ ದೈವ ಭಕ್ತಿ. ಶ್ರೀ ಮನ್ನಾರಾಯಣ, ವಿಷ್ಣುವಿನಲ್ಲೇ ಗಾಢವಾದ ಮನನೆಟ್ಟವರಾದ್ದರಿಂದ ಇವರಿಗೆ “ವಿಷ್ಣುಚಿತ್ತ”ರೆಂದು ಕರೆಯುವುದಿತ್ತು. ಊರಿನ ದೇವರು ವಿಟಪತ್ರಶಾಯಿಗೆ (ಆಲದ ಎಲೆಯ ಮೇಲೆ ಮಲಗಿದಾತ) ಪ್ರತಿನಿತ್ಯ ಹೂವಿನಕೈಂಕರ್ಯ ಇವರದೇ! ತಾಯಿಗೆ ಮಗುವಿನಲ್ಲಿರುವ – ಯಶೋಧೆಗೆ ಕೃಷ್ಣನಲ್ಲಿದ್ದ ಪ್ರೇಮದಂತೆ, ಈ ಆಳ್ವಾರರಿಗೆ ವಟಪತ್ರಶಾಯಿಯಲ್ಲಿ ವಾತ್ಸಲ್ಯ ಭಕ್ತಿ, ಪೆರಿಯಾಳ್ವಾರರ ಮನಸ್ಸು ತಾಯಿಯಂತಹ ಮನಸ್ಸು ತನ್ನ ಪುಟ್ಟನಿಗೆ, ಕೃಷ್ಣನಿಗೆ ಯಾವ ಸಮಯದಲ್ಲಿ ಏನು ವಿಪತ್ತು ಸಂಭವಿಸುವುದೋ ಎಂಬುವ ಯೋಚನೆ ತಾಯಿಗಿದ್ದೇ ಇರುತ್ತದೆ ತಾನೆ? ಕಾಲ ದೇಶಗಳಿಗೆ ಅತೀತನಾದ ಜಗದೀಶ್ವರ ಕೂಡ ಈ ಜಗತ್ತಿನ ಕಟ್ಟು ಕಟ್ಟಳೆಗೆ ಸಿಲುಕಿದ್ದನಲ್ಲ, ಎಂಬುವ ಮಾತೃ ಹೃದಯದ ಚಿಂತೆ ಸದಾ ಆಳ್ವಾರರಿಗೆ ಶ್ರವಣಂ, ಕೀರ್ತನೆ ಸ್ಮರಣೆ, ಪಾದಸೇವನೆ, ಅರ್ಚನೆ, ವಂದನೆ, ದಾಸ್ಯ, ಸೆಡ್ಯಿ, ಆತ್ಮನಿವೇದನೆ ಮಾಡಿಕೊಳ್ಳುವುದು ಹೀಗೆ ಒಂಭತ್ತು ವಿಧದ ಭಕ್ತಿಯ ವಾತ್ಸಲ್ಯವೇ ಆಳ್ವಾರರಲ್ಲಿ ನಾವು ಕಾಣುತ್ತೇವೆ ಅವರ ದಿವ್ಯ ಪ್ರಬಂಧ ಮಾಲೆಯ ಆಧ್ಯಾಯನದಿಂದ.

ತಿರುಪ್ಪಲ್ಲಾಂಡು ಅಂದರ, ಶ್ರೇಷ್ಟವಾದ ಪರಹು ಭಗವಂತನ ಗುಣ ವಿಶೇಷಗಳನ್ನು ಸಾರಿ, ಸ್ತುತಿಸಿ, ಹೊಗಳುವಿಕೆ, ಪ್ರಶಂಸೆ ಮಾಡುವಿಕೆ! ಇದನ್ನು ಆಳ್ವಾರರು ಮನದುಂಬಿ ಹಾಡಿದ್ದಾರೆ, ಪ್ರತಿನಿತ್ಯ ಅನುಸರಿಸುವ ಪೂಜಾಕ್ರಮದಲ್ಲಿ ಕೆಲವು ಗೊತ್ತಾದ ದಿವ್ಯ ಪ್ರಬಂಧಗಳನ್ನು ಕೂಡ ಹಾಡುವುದು ಸಂಪ್ರದಾಯ ತಿರುಪ್ಪಲ್ಲಾಂಡಿಗೆ ಒಂದು ಮುಖ್ಯ ಸ್ಥಾನವಿದೆ. ನಾಲಾಯಿರ ಅಧ್ಯಯನ ಮಾಡುವಾಗಲೆಲ್ಲಾ ತಿರುಪ್ಪಲ್ಲಾಂಡು ಮೊದಲಲ್ಲಿ ಹಾಡಿ, ಆನಂತರ, ಪ್ರಬಂಧ ಮುಗಿದ ಮೇಲೆ ಪುನಃ ತಿರುಪ್ಪಲ್ಲಾಂಡಿನಿಂದ ಸಮಾರೋಪ! ದೇವಕಾರ್ಚನೆ ದೇವರಿಗೆ ಮಂಗಳಾರತಿ ಬೆಳಗಿದಾಗ, ಪಲ್ಲಾಂಡು. ಪಲ್ಲಾಂಡು, ಪಲ್ಲಾಯಿರತ್ತಾಂಡು ಪಲಕೋಟಿನೂರಾಯಿರಂ ಪಲ್ಲಾಂಡು ಎಂದು ಹಾಡುವುದು ರೂಢಿ ಇದರ ಸಂಬಂಧದಲ್ಲಿ ಒಂದು ಐತಿಹ್ಯವಿದೆ ದೇವ ಕೃಪೆಯಿಂದ ವಿಷ್ಣು ಚಿತ್ತರು ಶ್ರುತಿ, ಸ್ಮೃತಿ, ಪುರಾಣ, ಇತಿಹಾಸವೇ ವೇದೋಪ ನಿಷತ್ತುಗಳ ಪಾಠ ಎಲ್ಲದರಲ್ಲೂ ಸರ್ವಜ್ಞರನ್ನಿಸಿಕೊಂಡರು! ಒಮ್ಮೆ ಅವರು ಆಗ್ಗೆ ಆಳುತ್ತಿದ್ದ ರಾಜನ ಆಸ್ಥಾನದಲ್ಲೇ ಶ್ರೀ ಮನ್ನಾರಾಯಣ ಪರತತ್ವ ಹರಿಸರ್ವೋತ್ತ ಮತೆಯನ್ನು ಆಧಾರಸಹಿತ ಸಮರ್ಥವಾಗಿ ಸ್ಥಾಪಿಸಿದರು! ಆಗ ಆಳ್ವರರ ಭಕ್ತಿಗೆ ಮೆಚ್ಚಿ ಗರುಡವಾಹನನಾದ ಶ್ರೀ ವಿಷ್ಣುದೇವತೆಯೇ ಪ್ರತ್ಯೆಕ್ಷನಾದ! ಇದಲ್ಲದೆ, ರಾಜ ಇದೇ ಉದ್ದೇಶದಿಂದ ಕಟ್ಟಿಸಿದ್ದ ನಿಧಿಯ ಚೀಲವು ತಾನಾಗಿಯೇ ವಿಷ್ಣುಚಿತ್ತಾರ ಬಳಿ ಬಿದ್ದಿತಂತೆ! ಅವರು ಇದಕ್ಕೆಲ್ಲಾ ಮನಗೊಡುವವರಲ್ಲ ತಾನಾಯಿತು, ತನ್ನ ಸ್ವಾಮಿ ಚಿಂತನ, ಪ್ರತ್ಯಕ್ಷನಾದ ಪರಮಾತ್ಮನ ದಿವಸೌಂದರ್ಯ, ಸೌಕುಮಾರ್ಯ ಲಾವಣ್ಯಯೌವ್ವನಾದಿ ಗುಣಗಳು ಮೈವೆತ್ತರ ರೂಪಶ್ರೀ ಆಳ್ವಾರರು ಇದೇನು ಕನಸೊ ನನಸೋ ಎಂದು ಭಾವಾವಿಷ್ಣುರಾದರು ತನಗೆ ದೇವರೇ ದರ್ಶನ ನೀಡಿದ್ದಾನೆ! ಆತ ಸರ್ವಶಕ್ತ, ಸರ್ವಜ್ಞ, ಸರ್ವಾಂತರಯಾಮಿ, ಸರ್ವವ್ಯಾಪಕ, ಸರ್ವರಕ್ಷಕ ಎನ್ನುತ್ತಾರೆ] ಎಂಬುದನ್ನು ಮರೆತ ಆಳ್ವಾರ್, ಇಂತಹ ಸೌಂದರ್ಯಕ್ಕೆ ಯಾರ ಕ್ರೂರ ದೃಷ್ಟಿಯು ತಾಗುವುದೋ, ಸೌಂದರ್ಯವು ಕುಂದಿಬಿಡುವುದೋ ಎಂಬುವ ಭೀತಿ ತುಮುಲಗಳಿಂದ ತನ್ನ ಸ್ವಾಮಿಗೆ ಸಕಲ ಕ್ಷೇಮ ಲಾಭವಿರಲಿ ಎಂದು ಕೋರುವ ಮಂಗಳಾಶಾಸನ ಪಧ್ಯ ತಿರುಪ್ಪಲ್ಲಾಂಡನ್ನುತಾನೇರಿದ್ದ ಆನೆಯ ಘಂಟೆಗಳನ್ನಾಡಿಸುತ್ತ ಹಾಡಿದರು.

ಆಳ್ವಾರರು ಅತಿಶಯವಾದ ಭಕ್ತಿ, ನಿಷ್ಠೆ – ಇವುಗಳಿಗೆ ಶ್ರೀ ಮನ್ನಾರಾಯಣನು ತನ್ನ ಶ್ರೀದೇವಿಯರ ಸಹಿತ ಗರುಡಾರೂಢನಾಗಿ ಆಳ್ವಾರರನ್ನು ಹರಸಿದನು. ಮುಂದೆ, ತನ್ನ ಸಾಕು ಮಗಳಾದ ಗೋದಾದೇವಿ [ಆಂಡಾಳ್] ಮುಡಿದು ಕೊಟ್ಟ ಹೂ ಮಾಲೆಯನ್ನು ದೇವರಿಗೆ ಅನುಗಾಲ ಅರ್ಪಿಸುತ್ತಾ ಬಂದದ್ದರಿಂದ, ದೇವರಿಗೇ ಮಗಳಾದ ಆಂಡಾಳ್ ದೇವಿಯನ್ನು ಧಾರೆಯೆರೆದು ಕೊಟ್ಟ ಮಾವನಂತೆ ಆದರು “ಪೆರಿಯಳ್ವಾರ್ ತಿರುಮೊಳಿ” ೧೭೩ ಪಾಶುರಗಳ ದಿವ್ಯ ಪ್ರಬಂಧ, ಇವುಗಳನ್ನು ಐದು ಪತ್ತುಗಳಾಗಿ ವಿಭಾಗ ಮಾಡಿ ಹಾಡುತ್ತಾರೆ. ಮೊದಲನೆಯ ನಾಲ್ಕು ಪತ್ತಿನಲ್ಲಿ ಹತ್ತು ತಿರುಮೊಳಿ ಇವೆ, ಐದನೆಯ ಪತ್ತು ನಾಲ್ಕು ತಿರುಮೊಳಿಯನ್ನು ಹೊಂದಿದೆ, ಒಟ್ಟು ಮೊದಲನೆಯ ಪತ್ತಿನಲ್ಲಿ – ೧೧೭ ಪಾಶುರಗಳು, ಎರೆಡು – ನಾಲ್ಕನೆ ಪತ್ತುಗಳಲ್ಲಿ – ತಲಾ ೧೦೫ ಪಾಶುರ ಐದನೆಯ ಪತ್ತಿನಲ್ಲಿ ೪೧ ಪಾಶುರಗಳನ್ನು “ತಿರುಪ್ಪಲ್ಲಾಂಡು” ಒಂದೊಂದು ಪದ್ಯಗಳನ್ನು ಗಮನಿಸಬಹುದು!

ಪಲ್ಲಾಂಡು ಪಲ್ಲಾಂಡು ಪಲ್ಲಾಯಿರತ್ತಾಂಡು ಪಲಕೋಡಿ ನೂರಾಯಿರಮ್ “ಪಲ್ಲಾಂಡು” ಮಲ್ಲಾಣ್ಡ ವೆಣ್ಡೋಳ್ ಮಣಿವಣ್ನಾ ಉನ್ ಶೆವ್ವಡಿ ಶೇವಿತಿರುಕ್ಕಾಪ್ಪು ಎಂಬುದು ಸುಪ್ರಸಿದ್ಧ ತಿರುಕ್ಕಾಪ್ಪು ಎಂದರೆ, ನಾನು ಹಾಡುವ ಪ್ರಬಂಧದ ಸಾಲುಗಳು ನಿನಗೆ ಶ್ರೀರಕ್ಷೆಯಾಗಿರಲಿ, ಎನ್ನ ಪ್ರಭುವೇ ಎಂಬುದಾಗಿ ಸರ್ವೇಶ್ವರನನ್ನು ಪ್ರಾರ್ಥಿಸುತ್ತಾರೆ.