ದಕ್ಷಿಣ ಭಾರೆತದ ಆಳ್ವಾರರು ಈ ಕೃತಿಯನ್ನು ಕೆಲವು ಮೂಲಗಳಿಂದ ಆಧರಿಸಿ ಆದಷ್ಟೂ ದಿವ್ಯ ಪ್ರಬಂಧದ ಸೊಗಸನ್ನು ಹಾಗೂ ಸಾರ್ವತ್ರಿಕ ಮೌಲ್ಯಗಳನ್ನು ಅಭಿವ್ಯಕ್ತಿಸಲು ನಮ್ರನಾಗಿ ಪ್ರಯತ್ನಿಸಿದ್ದೇನೆ. ಈ ದಿಸೆಯಲ್ಲಿ ಕೃತಿಯನ್ನು ಬೆಳಕಿಗೆ ತರುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಆಭಾರಿಯಾಗಿದ್ದೇನೆ. ಪ್ರಕಟಣೆಗೆ ಅವಕಾಶವಿತ್ತ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎ. ಮುರಿಗೆಪ್ಪ, ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಹಸ್ತಪ್ರತಿಯನ್ನು ಪರಿಶೀಲಿಸಿ ಸಲಹೆಗಳನ್ನು ನೀಡಿದ ಪ್ರೊ. ಎ.ವಿ. ನಾವಡ ಅವರಿಗೆ, ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಸುಬ್ಬಣ್ಣ ರೈ ಅವರಿಗೆ ಕೃತಜ್ಞತೆಗಳು. ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ, ಪ್ರಕಟಣ ಸಹಾಯಕರಾದ ಡಾ. ಎಸ್. ಮೋಹನ್, ಮುಖಪುಟ ರಚಿಸಿದ ಶ್ರೀ ಕೆ.ಕೆ. ಮಕಾಳಿ, ಪುಟವಿನ್ಯಾಸಗೊಳಿಸಿದ ಶ್ರೀನಿವಾಸ ಕೆ. ಕಲಾಲ್ ಅವರಿಗೆ ಮತ್ತು ಈ ಬಗ್ಗೆ ಸಹಕರಿಸಿರುವ ಎಲ್ಲರಿಗೂ ನನ್ನ ಪ್ರಣಾಮಗಳು

ಡಾ. ಎನ್.ಕೆ. ರಾಮಶೇಷನ್
ಮೈಸೂರು