ಮನುಷ್ಯ ನಿರ್ಮಿಸಿಕೊಂಡ ಜಾತಿಯಲ್ಲಿ ಎಷ್ಟೇ ನಿಕೃಷ್ಟರಾಗಲಿ, ಎಷ್ಟೇ ಜ್ಞಾನವಿಹೀನರಾಗಲಿ ಭಗವಂತನ ಧೃಢವಾದ ಭಕ್ತರಾಗಿದ್ದರೆ ಸಾಕಷ್ಟೆ. ಅಂಥವರ ದಾಸರ ದಾಸರ ದಾಸನಾಗಲು ತಾನು ಸದಾಸಿದ್ದನೆಂಬುವುದನ್ನು ನಮ್ಮಳ್ವಾರ್ ವಿವರಿಸಿದರು.

“ಕುಲಗಳ ನೆಲೆಯೆನಿಸಿದ ಜಾತಿಗಳು ನಾಲ್ಕಕ್ಕೂ ಕೆಳಗಿಳಿದವರು
ಅರಿವಿಲ್ಲದವರು, ಚಂಡಾಲರಿಗಿಂತರಲ್ಲೂ ಚಂಡಾಲರಾದರು
[ಸುದರ್ಶನ] ಚಕ್ರವನು ಹಿಡಿದವನ,
ಮಣಿವಣ್ಣನ ಸ್ವಾಮಿಯ ಆಳೆಂದು [ಇಂದ್ರ ನೀಲಮಣಿಬಣ್ಣದವನ]
ಮನದೊಳರಿತರೆ ಅಂತಪ್ಪ ಅಡಿಯಾಳುಗಳ ಅಡಿಯಾಳುಗಳು
ನಮ್ಮೊಡೆಯರು ಅಂಥವರ ಅಡಿಗಳೇ ನಮಗೆ ಶರಣು ಶರಣು
ಏಳು ದ್ವೀಪಗಳನ್ನೆಲ್ಲಾ ಒಳಗೊಂಡು ಲೋಕಕ್ಕೆಲ್ಲಾ
ಅದ್ವಿತೀಯ ಸಾರ್ವಭೌಮರಾಗಿದ್ದರಸರು ತಮ್ಮ
ಎಲ್ಲವನ್ನು ಕಳೆದುಕೊಂಡು ದಟ್ಟದರಿದ್ರರಾಗಿ ದಟ್ಟರಾತ್ರಿ ಕತ್ತಲಲಿ
ಭಿಕ್ಷೆಗಾಗಿ ಸ್ಮರಿಸುತ್ತಾ ಕತ್ತಲಲಿ ಕಾಣದೆ ಕರಿನಾಯಿ ತಾಗಿ ಕಾಲು ಕಚ್ಚಿಸಿಕೊಂಡಿರಲ್ಲ
ಇದೆಂಥ ದಾರುಣವೀ ಬದುಕು! ತಡಮಾಡದೆ ಶ್ರೀ ಮನ್ನಾರಣನ
ಪಾದ ದಾಸರಾಗಿ ನಿಮ್ಮನ್ನು ನೀವು ಕಾಪಾಡಿಕೊಳ್ಳಿರಿ ದೈವದೊಲಮೆಗೆ ಪಾತ್ರರಾಗಿರಿ
[ತಿರುವಾಯ್ ಮಾಳಿ – ೪ – ೧ – ೧]

“ಎನ್ನೊಡೆಯ ನೀನೊಂದು ದಿವ್ಯ ಜ್ಯೋತಿ
ಅದರ ಬಿಸಿಯಿಂದ ನನ್ನ ಹೃದಯ ಕರಗುತಿದೆ
ನನ್ನಾತ್ಮ ಬೇಯುತಿದೆ
ನನ್ನಾತ್ಮ ಉರುಗಿ ನಿನ್ನಲಿ ಬೆರೆಯುವುದೆಂದಿಗೆ (ಉರುಗಿ – ಜಫ್! ಎಂದು
ಊದಿ ಜಾಗೃತಗೊಳಿಸುವುದು)
ಎಂಬ ಹಂಬಲು ನನ್ನದು”:
೧೦ ಕೋಗಿಲೆಗಳಿರಾ ಇಂಚರದ ಕೂಗು ನಿಮ್ಮದು
ಕೆಂದಾವರೆಯಂತಹ ಕಣ್ಣಿನ ಸೊಬಗಿನ ನನ್ನ ಸ್ವಾಮಿಯ ಕಡೆಗೆ
[ನೀವು] ನನ್ನ ದೂತಿಯರಾಗಿ ಹೋಗಬಾರದೇಕೆ?
ಅದರಿಂದ ನಿಮಗೇನು ಕೆಡಕು ಉಂಟಾದೀತು?

ಈ ತೆರನಾದ ಚಿಂತನೆ, ನರ್ಮಾಳ್ವಾರರಂತೆಯೇ ಉಳಿದ ಆಳ್ವಾರರಲ್ಲಿಯೂ ಸಾಂದ್ರವಾಗಿದೆ ‘ತಿರುವರಗಮುತ್ತನದಾರ್’ ಎಂಬುವ ಸಂತರ ಶ್ರೀ ರಾಮಾನುಜನೊತ್ತಂದಾದಿ [೧೦೮ ಪದ್ಯಗಳು] ಇಲ್ಲಿ ವಿವೇಚನೆಗೆ ತೆಗೆದುಕೊಂಡಿಲ್ಲ ವಿಸ್ತರದಭಯ.

ಇದು ಆಳ್ವಾರರ ಸಂದೇಶ ಮನೋಭಿಪ್ರಾಯ – ಸುಸಂಗತತ್ವ. ದ್ರಾವಿಡ ವೈಷ್ಣವ ಸಂತರಾದ ಆಳ್ವಾರರುಗಳ ದಿವ್ಯ ಪ್ರಬಂಧಗಳನಿತೂ ಭಗವತ್ಪ್ರೇಮದ ಪರೀವಾಹವಾಗಿವೆ. ಅವರ ದಿವ್ಯ ಸೂಕ್ತಿಗಳು ಮಾನವೀಯ ಮೌಲ್ಯ ಸಾಂಸ್ಕೃತಿಕ ರೂಪರೇಷೆಗಳನ್ನು ಒಳಗೊಂಡವು ಎಂಬುವುದು ಸರ್ವಥಾಗಮನೀಯ ಹಾಗೂ ಸದಾಅನುಸರಣೀಯ.

ಜೀವ – ಈಶರ ನಿತ್ಯ ಸಂಬಂಧವನ್ನು ಮನಗಾಣಿಸುವ ಗುಣವುಳ್ಳವು ಆಳ್ವಾರರದು ಭಕ್ತಿಪಂಥ, ಆದರೆ, ಮಟಮಟ ಕರ್ಮಠತನ ಅಲ್ಲಿಲ್ಲ | ಅಂತು ಅನುಭಾವದ ಸೆಲೆಯಿದೆ | ಮಡಿ ಮೈಲಿಗೆ, ಮೇಲು ಕೀಳುಗಳ ಕಟ್ಟು ಇಲ್ಲ ಪ್ರೇಮಭಕ್ತಿಗಳ ಸಂಗಮವಿದೆ. ಬುದ್ದಿಗಿಂತಲೂ ಭಾವನೆಗೆ ಹೆಚ್ಚು ಬೆಲೆ ಜ್ಞಾನ ಮಾರ್ಗಕ್ಕಿಂತಲೂ ಭಕ್ತಿಮಾರ್ಗ ಸುಲಭ, ದೃಡವಾದದ್ದು – ಸುಗಮವೂ ಆದದ್ದು.

ಭಗವಂತನೊಬ್ಬನೇ ಉಪಾಸ್ಯ, ಆತನಲ್ಲಿ ಪರಮಸ್ನೇಹವಿರಬೇಕು ಏಕದೇವೋಪಾಸನೆ – ಶ್ರೀ ಮನ್ನಾರಾಯಣನೇ ಜಗತ್ತಿಗೆ ಸರ್ವೋತ್ತಮ – ಕಾರಣಕರ್ತ ಕೃಪೆಯೇ ಆತನ ವಕ್ಷಸ್ಥಲ, ನಿವಾಸಿನೀ ಲಕ್ಷೀದೇವಿ, ದೇವರು, ತಂದೆ – ತಾಯಿ, ಬಂಧು – ಸಖ, ಮಂತ್ರಿ – ಒಡೆಯ, ಗುರು ಕಾಂತ [ಪ್ರಿಯಕರ] ಎಲ್ಲವೆಲ್ಲವೂ ಕೂಡ ಅವನೇಜೀವನು ಪರಮಾತ್ಮನ ಸೊತ್ತು ದೇಹವೇ ಆತ್ಮವಲ್ಲ ನಾನು ನನ್ನದಲ್ಲವು – ದೈವವೇ ಎಲ್ಲವು. ಆದರೆ ಪ್ರಯತ್ನ, ಪರಿಶ್ರಮ, ನಿರಂತರ ಅಗತ್ಯ, ಅದೇ ಕರ್ಮ ಕ್ರಿಯಾ ಯೋಗ ಭಕ್ತಿ – ಪ್ರಪತ್ತಿ – ಶರಣಾಗತಿ – ಅದೇ ಸರ್ವತ್ರ ಸುಖ ವಿನೀನೇ ನನದೆಲ್ಲ, ನೀನಲ್ಲದೆ ಎನಗಿನ್ನಾರಿಲ್ಲಹಿ – ಎಂಬುವ ಸಮರ್ಪಣ ಭಾವ, ಅಲ್ಲಿ ಭಕ್ತರು ಮುಖ್ಯವೇ ವಿನಹ, ಸಣ್ಣ ಭಾವನೆಯಲ್ಲಿಲ್ಲ [ಜಾತಿ ಕುಲ ಭೇದ ಮೊದಲಾದವು] ಆಳ್ವಾರರದು ಸಾರ್ವತ್ರಿಕ ಹಿತ ಸದಾ ಬಯಸುವ ಸದುದ್ದೇಶ ಅದರಿಂದಾಗಿ, ಅವರು – ಅವರ ದಿವ್ಯ ಪ್ರಬಂಧ ಗೀತೆಗಳು ಚಿರಕಾಲ ಉಳಿಯುತ್ತದೆ

ಆಳ್ವಾರರ ತತ್ವದೃಷ್ಟಿ

೧. ಪರಬ್ರಹ್ಮ ವಸ್ತು ನಾರಾಯಣ ನಾಮ – “ವಿಷ್ಣು, ವಾಸುದೇವ, ನಾರಾಯಣ ಹೀಗೆ ಮಹಾವಿಷ್ಣು ಸರ್ವೇಶ್ವರನೆಂಬುವ ಪ್ರತಿಪಾದನೆ ಶ್ರೀಮನ್ನಾರಾಯಣನೇ ಪರತತ್ವ

೨. ಶ್ರೀ – ಭೂದೇವಿಯರಿಗೆ ಹೇಗೋ ಹಾಗೇಯೇ ನಪ್ಪಿನ್ವೈ ಪಿರಾಟ್ಟಿ, ನಾರಣಪತಿ ಈ (ಪಿರಾಟ್ಟಿ – ತಮಿಳಲ್ಲಿ – ತಾಯಿ – ತಾಯಾರ್ ಎಂಬುದಾಗಿ)

೩. ದಿವ್ಯ ಸ್ವರೂಪ ದಿವ್ಯ ಮಂಗಳ ವಿಗ್ರಹ ವಿಶಿಷ್ಟ – ಆತನದು ವಿಶ್ವ ಮೋಹಕ, ರೂಪು, ಚಿರಂತನವಾದದ್ದು ಕಾಳಮೇಘ ಸದೃಶ, ಶಂಖ (ಪಾಂಚಜನ್ಯ), ಚಕ್ರ (ಸುದರ್ಶನ) ಗದ (ಕೌಮೋದಕೀ), ಖಡ್ಗ (ನಂದಕೀ), ಬಿಲ್ಲು (ಶಾರ್ಙ್ಗ) ಇತ್ಯಾದಿ ಆಯುಧ ಭೂಷಿತ

೪. ಭಗವಂತ ಪರಾತ್ವೃರ, ಸೌಲಭ್ಯ, ಗುಣ ವಿಶೇಷಯುತ, ಪ್ರಾಕೃತ ಲೋಕಕ್ಕೆ ಸದಾ ಪ್ರಭುವಾಗಿರುವ ಹಾಗೆಯೇ, ಮುಕ್ತರು ಸೇವಿಸುವ, ಅಪ್ರಾಕೃತ ಲೋಕಕ್ಕೆ ಪ್ರಭುವೀತ

೫. ಪ್ರಪಂಚವೇ ಭಗವಂತ ತನ್ನ ಶರೀರವಾಗಿ ಹೊಂದಿರುವುದು! ಆತನ ಹೊರತಾದ ಉಳಿದೆಲ್ಲದಕ್ಕೂ ಆತನೇ ಆತ್ಮ – ಪರಮ ಆತ್ಮ

೬. ವೇದ ಶ್ರುತಿ ಸ್ಮೈತಿಗಳಿಗೆ, ಮೀರಿದವ ಭಗವಂತ, ಆದರೂ, ವೇದಗಳಿಂದ (ಆಮ್ನಾಯಗಳೆಂದು ಹೇಳುತ್ತಾರೆ) ಶ್ರೀ ಹರಿಯನ್ನು ಅರಿಯರು ಸಾಧ್ಯ (೧೦ ಆಳ್ವಾರ್ರ‍ರ ನಿರೂಪಣೆಗಳು ವೇದ ವಿರುದ್ಧವಾದುದು

೭. ಭಗವಂತನ ಕಲ್ಯಾಣಗುಣ – ಸೌಲಭ್ಯ, ವಾತ್ಸಲ್ಯ, ಸೌಶೀಲ್ಯ, ಕೃಪೆ, ಕಾರುಣ್ಯ ಇತ್ಯಾದಿ ದಿವ್ಯ ಪ್ರಬಂಧಗಳ ತಿರುಳು – ಜ್ಞಾನ, ವೈರಾಗ್ಯ, ಭಕ್ತಿ ಪ್ರಧಾನ.

೮. ಭಗವಂತನ ಐದು ವ್ಯೂಹ ಅವತಾರ – ವಿಭವ, ಅರ್ಚಾ, ವತಾರಗಳ ವರ್ಣನೆ, ಇಲ್ಲಿ ಆಳ್ವಾರರು ಮನಸೋತು ಬಣ್ಣಿಸಿದ್ದಾರೆ.

೯. ಭಗವಂತನಿಗೆ ನಿತ್ಯಕೈಂಕರ್ಯವನ್ನು ಪರಿಶುದ್ಧವಾಗಿ ಸಲ್ಲಿಸುವಿಕೆ, ಆಳ್ವಾರರಿಗೆ ಆತನ ಶ್ರೀಪಾದ ಸೇವೆಯೇ ಪರಮ ಪುರುಷಾರ್ಥ

೧೦. ಭಗವತ್ ಶೇಷತ್ವ – ಭಾಗವತ ಶೇಷತ್ವದಲ್ಲಿ ಪರ್ಯವಸಾನ ಆಗಬೇಕು ಭಗವಂತನಷ್ಟೇ ಭಾಗವತನಿಗೆ ಪ್ರಾಧಾನ್ಯತೆ.

೧೧. ಶ್ರೀ ವೈಷ್ಣವ ಸಿದ್ಧಾಂತದ ರಹಸ್ಯ ತ್ರಯ ಆಳ್ವಾರರು ಪದೇ ಪದೇ ಉಲ್ಲೇಖಿಸುತ್ತಾರೆ ತಮ್ಮ ದಿವ್ಯ ಪ್ರಬಂಧಗಳಲ್ಲಿ ಮೂಲ ಮಂತ್ರವಾದ ಓಂ ನಮೋ ನಾರಾಯಣಾಯ, ದ್ವಯಮಂತ್ರ – ಶ್ರೀಮನ್ನಾರಾಯಣ ಚರಣೌಶರಣಂ ಪ್ರಪದ್ಯೇ ಶ್ರೀಮತೇ ನಾರಾಯಣಾಯ! ಚರಮಶ್ಲೋಕ – ಅರ್ಥ ಸರ್ವಧರ್ಮಾನ್ ಪರಿತ್ಯಜ್ಯ, ಮಾಮೇಕಂ ಶರಣಂ ವ್ರಜ ಅಹಂತ್ವಾಂ ಸರ್ವ ಪಾಪೇಭ್ಯೋ ಲೋಕ್ಷಮಿಷ್ಯಾಮಿ ಮಾಶುಚಃ!” (ನನ್ನೊಬ್ಬನಲ್ಲಿಯೇ ಶರಣಾಗತಿ ಮಾಡು ನಾನು ನಿನ್ನನ್ನು ರಕ್ಷಿಸಿ, ಮುಕ್ತಿ ನೀಡುವೆ. ನಿನ್ನ ಎಲ್ಲದುರಿತಗಳನ್ನು ನಾಶ ಮಾಡಿ ರಕ್ಷಿಸುವೆನು)

ಇದರಲ್ಲಿ ” ಓಂ ನಮೋ ನಾರಾಯಣಾಯ”

ಎಂಬುವುದು “ನಮೋ ನಾರಾಯಣಾಯ”ವನ್ನು ಪ್ರಣವ (ಓಂ ಕರಸಹಿತ) ಸಹಿತ ಉಚ್ಚರಿಸಬೇಕೆಂದು ಕುಲಶೇಖರಾಳ್ವಾರ್ ತಮ್ಮ “ಮುಕುಂದಮಾಲಾ ಸ್ತುತಿ”ಯಲ್ಲಿ ಘೋಷಿಸುತ್ತಾರೆ. – ಮಂತ್ರ (ನಮೋನಾರಾಯಣಾಯ) ಸಪ್ರಣವಮ್ (ಓಂಕಾರ ಸಮೇತ), ಪ್ರಣಾಮ ಸಹಿತಮ್ (ನಮನದೊಂದಿಗೆ)

೧೨. ಭಗವಂತನಲ್ಲಿ ಅಪಾರ ಆತ್ಮೀಯತೆ – ಅನನ್ಯ ಭಾವದಿಂದ ಪ್ರೇಮ ಶರಣಾಗತಿ – ಇದರಿಂದ ಭವದ ವಿಮೋಚನೆ – ಹುಟ್ಟು ಸಾವುಗಳಿಂದ ಮುಕ್ತಿ

೧೩. ಭಗವಂತನ ದಿವ್ಯ ಮಹಿಮೆ ವಿಶೇಷಗಳನ್ನು ಕೊಂಡಾಡಿ, ಈ ದಿನದಾನಂದದಲ್ಲಿ ಆಳ್ವಾರರು ತಮ್ಮನ್ನು ತಾವೇ ಮರೆತರು, ಅವರ ಹೃದಯಾಂತರಾಳದಿಂದ ಹೊರಹೊಮ್ಮಿದ ದಿವ್ಯಪ್ರಬಂಧಗಳು – ಆಳ್ವಾರರ ಭಾವನೆ, ಅನುಭವದ ಆಯಾಮಗಳನ್ನು ಪ್ರತಿಬಿಂಬಿಸಿತು.

೧೪. ಈ ಲೋಕದ ಬಗ್ಗೆ ಆಳ್ವಾರ್‌ನಂತರ ಭಾವನೆ, ಪ್ರತಿಕ್ರಿಯೆ?

ಜನರ ನೋವು – ಅಳಲು, ಆಳ್ವಾರರನ್ನು ನೋವಿಗೀಡು ಮಾಡಿವೆ. ಜನರ ಕುರಿತ ಅನುಕಂಪ, ಸಹಾನುಭೂತಿ ಇದೆ. “ನನ್ನ ವಿನಯಯುತ ವಿಜ್ಞಾಪನೆ, ಓ ಪ್ರಭೂ! ಮನುಷ್ಯರಾಗಿ ನಾವು ಅಜ್ಞಾನದ ದುಃಖ, ಕೆಟ್ಟನಡತೆ, ಮಲಿನಶರೀರ ಕಾಮಗಳಲ್ಲಿ ನಾದಿಹೋಗದಂತೆ ಅನುಗ್ರಹಿಸು ತಂದೆ ” – ಇದು ಆಳ್ವಾರರ ಪ್ರಾರ್ಥನೆ, “ಈ ಲೋಗರನ್ನು ಕಾಪಾಡು – ಅವರನ್ನು ನೀನು ಸಂರಕ್ಷಿಸಬೇಕೇವಿನಹ ಮೋಹದ ಅಚ್ಛಾದನೆಯಲ್ಲಿ ಅವರ ಉಸಿರು ಕಟ್ಟಿಸದಿರು” ಎಂದು ಬೇಡುತ್ತಾರೆ. ಎಚಿತಹ ಸಾತ್ವಿಕ – ನಿಶ್ಚಲ ಭಕ್ತನ ಬೇಡಿಕೆ ಇವು!

೧೫. ಭಗವಂತನ – ಭಕ್ತರ ಸಹವಾಸಬೇಕೆಂದು ಆಳ್ವಾರರು ಹಂಬಲಿಸುತ್ತಾರೆ ಲೋಕದ ಡೊಂಕನ್ನು ತಿದ್ದಲು ಮೊದಲಿಗೆ ಆ ಓರೆಕೋರೆಗಳಿಗೆ ತಮ್ಮನ್ನು ಈಡು ಮಾಡದಿರೆಂಬುದಾಗಿ ನಮ್ಮಾಳ್ವಾರ್ ಪ್ರಾರ್ಥಿಸುತ್ತಾರೆ! (ಲೋಕದ ಡೊಂಕ ನಿವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ)

೧೬. ಭಗವಂತನ ದಿವ್ಯವಾದ – ಶಾಶ್ವತವಾದ ಆನಂದ – ಅದನ್ನು ಪಡೆವುದೇ ಆಳ್ವಾರರ ತುಡಿತ – ಆಭೀಪ್ಸೆ ಅಭೀಷ್ಯೆ. ಎಲ್ಲರಿಗೂ ಆ ಅಳಿಯದಾನಂದ ಲಭಿಸಲಿ, ವಿದ್ವೇಷ ಎಮ್ಮೊಳನೆ ಇರದಿರಲ್ಲಿ ಇದು ಆಳ್ವಾರರ ಮೊರ.

ಸಾಮಾನ್ಯವಾದ ರೀತಿಯಲ್ಲಿ ತಿಳಿಸುವದಾದರೆ, ಆಳ್ವಾರರಿಂದ – ಆಚಾರ್ಯರ – ರಾಮಾನುಜರ (ಕ್ರಿ.ಶ.೧೦೧೭೧೧೩೭) “ದರ್ಶನ” ಹೆಸರಾದ ವಿಶಿಷ್ಟಾದ್ವೈತದಲ್ಲಿ ಒಂದು ಸರ್ವಸಮತ ರುಚಿಯುಳ್ಳ ವೈಶಿಷ್ಟ್ಯವಿದೆ. ದೇಶದಲ್ಲಿ, ಕ್ಷೋಭೆಗೊಂಡು ಮಲಿನವಾಗಿ ಹೋಗುತ್ತಿದ್ದ ಭಕ್ತಿ ಪಂಥವನ್ನು (ಭಕ್ತಿಯ ವಿವಿಧ ವಿಚಾರಗಳು) ಪುನರುತ್ಥಾನಗೊಳಿಸಿದ ಯಶಸ್ಸು ರಾಮಾನುಜದರ್ಶನಕ್ಕೆ ಸೇರಿದ್ದು, ತಾನು ಕಾಣದ, ಆದರೆ ಅನುಭವಿಸಬಲ್ಲ, ಅನುಭಾವಿಸಬಲ್ಲ ಗೋಜಲು ಧಾವಂತಗೊಂಬುವ ಮನವನ್ನು ತನುವನ್ನು ಶಾಂತ – ಸ್ವಸ್ಥ ಆಗಿಸುವ ಪರಿಕರಗಳಾದ ಧ್ಯಾನ – ಭಕ್ತಿ ಭಗವಂತನ ಪ್ರೇಮದ ಅಮೃತ ಸೇಚನ ವೊದಗಿಸಿತು, ಆಳ್ವಾರರ ಭಕ್ತಿಗೀತೆಗಳು!

ಭಕ್ತಿಮಾರ್ಗಕ್ಕೆ ಯಾವುದೇ ವರ್ಣಾಶ್ರಮದ ಭೇದವಿಲ್ಲ ; ಸರ್ವೋದಯ ಆಧ್ಯಾತ್ಮಿಕ ಮನೋಧರ್ಮ – ಪ್ರಪತ್ತಿ (ಶರಣಾಗತಿ) ಯಾರಿಗೆ ತಾನೆ ಅಗತ್ಯವಿರದು? ವಿನಯಯುತ ಬದುಕು ಖಂಡಿತ ಉತ್ತಮವಲ್ಲವೇ?

ಆಳ್ವಾರರ ನಂತರ ಆಚಾರ್ಯರು – ನಾಥಮುನಿ, ಈಶ್ವರ ಮುನಿ, ಯಾಮುನರು, ರಾಮಾನುಜ ಆಚಾರ್ಯರು! ಇವರು ಪರೋಪಕಾರಿಗಳೇ! “ಆಚಿನೋತಿಃ ಶಾಸ್ತ್ರಾರ್ಥಾನ್, ಆಚಾರೇ ಸ್ಥಾಪಯತ್ಯಪಿ! ಸ್ವಯಮಾಚರತೇ ಯಸ್ಮಾತ್ತ ಸ್ಮಾದಾಚಾರ್ಯ ಉಚ್ಯತೇ ಎಂಬುದು “ಆಚಾರ್ಯ” ಪದದ ವಿವರಣೆ, ಮರೆವಂತಹುದಲ್ಲ.

ಭಗವಂತನ ದಿವ್ಯಾನುಭವವೇ ಆಳ್ವಾರರ ನಿಷ್ಠೆ ಅದರೊಂದಿಗೆ ಜ್ಞಾನೋಪದೇಶ ನೀಡುವುದೇ ಆಚಾರ್ಯರ ವೈಶಿಷ್ಟ್ಯವಾಗಿದೆ ಮರೆವಂತಿಲ್ಲ. ಅನಾದಿಯಾದ ಆಳ್ವಾರರ – ರಾಮಾನುಜ ದರ್ಶನಕ್ಕೆ ಪರಮ ಆಧಾರವಾದವು ನಾಲಾಯಿರ ದಿವ್ಯ ಪ್ರಬಂಧಮಾಲೆ!

ಶ್ರೀಮನ್ನಾರಾಯಣನೇ ಇದನ್ನು ಮೊಟ್ಟಮೊದಲು ಉಪದೇಶಿಸಿದ್ದು ಎಂಬುದಾಗಿಯೇ ಪ್ರಸಿದ್ಧ :

೧. ವೇದ – ವೇದಾಂತಗಳು, ಅವುಗಳ ಉಪಬೃಂಹಣವಾದ ಸ್ಮೃತಿ, ಪುರಾಣ, ಇತಿಹಾಸ ಮೊದಲಾದವು ಹಾಗೂ ಮುಖ್ಯವಾಗಿ ಪ್ರಸ್ಥಾನತ್ರಯಗಳು (ವೇದೋಪನಿಷತ್ತು – ಭಗವದ್ಗೀತೆ, ಬ್ರಹ್ಮಸೂತ್ರಗಳು)

೨. ದ್ರಾವಿಡ ಪ್ರಬಂಧಗಳು – ದ್ರಾವಿಡ ವೈಷ್ಣವಸಂತರ ದಿವ್ಯ ಪ್ರಜ್ಞೆ

೩. ಪಾಂಚರಾತ್ರದಿ ಆಗಮಗಳು

ಈ ದರ್ಶನ ಹೀಗೆ ಸಮಗ್ರವಾಗಿ ಶ್ರುತಿ ಪ್ರಾಮಾಣ್ಯವನ್ನು ಅಂಗೀಕರಿಸುತ್ತದೆ. ವೇದಗಳು – ಕರ್ಮಕಾಂಡ ಹಾಗೂ ಜ್ಞಾನ ಕಾಂಡ ಎಂದೆರಡು ವಿಧ ತಾನೆ? ಇವೆರಡೂ ಒಂದಕ್ಕೆ ಒಂದು ಪೂರಕವಾಗಿ ಕೂಡಿಕೊಂಡು ಒಂದೇ ಶಾಸ್ತ್ರವಾಗಿದೆ ಎಂಬುವುದೇ ವಿಶಿಷ್ಟಾದ್ವೈತ ದರ್ಶನದ ತೀರ್ಮಾನ ಪೂರ್ವಕಾಂಡವು ವಿವೇಚಿಸುವ ಕರ್ಮ ವಿಚಾರ, ಭಗವಂತನನ್ನು ಸೇವಿಸುವ ಆರಾಧನಾ ವಿಶೇಷ. ಉತ್ತರಕಾಂಡಾ – ಬ್ರಹ್ಮ ವಿಚಾರ ವಿವೇಚಿಸುವ ಆರಾಧ್ಯ ವಸ್ತು ವಿಶೇಷ ಎಂಬುವದೇ ಇಲ್ಲಿರುವ ವಿವರ ಇದರಿಂದಾಗಿ ವೇದೋಪನಿಷತ್ತುಗಳ ಹಾಗೆಯೇ ಆಳ್ವಾರರ ದಿವ್ಯ ಪ್ರಬಂಧಗಳೂ ವಿಶಿಷ್ಟಾದ್ವೈತಕ್ಕೆ ಆಧಾರವಾಗಿದೆ. ನಮ್ಮಾಳ್ವಾರರೇ ಮೊದಲಾದ ಭಕ್ತರು, ದಿವ್ಯಸೂರಿಗಳು ತಮ್ಮ ಜ್ಞಾನ ಚಕ್ಷುಸ್ಸಿನಿಂದ ಸಾಕ್ಷಾತ್ಕಾರಿಸಿಕೊಂಡ ಶ್ರೀಹರಿಪರಮತತ್ವವನ್ನು ತಮ್ಮ ಸೂಕ್ತಿಗಳಲ್ಲಿ ಉಪದೇಶಿಸಿರುವುದು ಗಣನೀಯ ವೇದಂ ತಮಿಳ್ ಶೆಯ್ದಮಾರನ್ ಎಂದೇ ನಮ್ಮಾಳ್ವಾರರನ್ನು ಗೌರವಿಸುವುದು; ವೇದಕ್ಕೆ ಎಲ್ಲೂ ಆಳ್ವಾರರು ವಿರೋಧಿ ಅಲ್ಲ. ಹಾಗೆಯೇ ತಮಿಳು ವೇದ (ದ್ರಾವಿಡವೇದ) ಮತ್ತು ಸಂಸ್ಕೃತ ವೇದಗಳ ಸಾರಸರ್ವಸ್ವವನ್ನು ರಾಮಾನುಜದರ್ಶನ ಪ್ರತಿಪಾದಿಸುವ ಕಾರಣ, ಇದಕ್ಕೆ “ಉಭಯವೇದಾಂತ” ವೆಂದ, ಖ್ಯಾತಿಯಾಗಿದೆ.

ಈ ಬರಹವನ್ನು ರಾಮಾನುಜಾಚಾರ್ಯರು ಸಾಕ್ಷಾತ್ತಾಗಿ ಕಂಚಿ ವರದರಾಜಸ್ವಾಮಿಯಿಂದ, ಗುರುವರ್ಯ ಕಾಂಚೀಪೂರ್ಣರ ಮೂಲಕ ಪಡೆದುಕೊಂಡ ಕೆಲವು ಅಂಶಗಳನ್ನು ಉಲ್ಲೇಖಿಸುವುದರ ಮೂಲಕ ಸಮರೋಪಗೊಳಿಸಬಹುದು.

ವಿಶಿಷ್ಟಾದ್ವೈತದ ಮೂಲತತ್ವಗಳು ಇವು

ವರದರಾಜ ತಿಳಿಸಿದ :

೧. ನಾನೇ ಪರತತ್ವ (ಶ್ರೀ ಮನ್ನಾರಾಯಣ)

೨. ಜೀವ ಈಶರಿಗೇ ಭೇದ ಸಿದ್ಧವಾದುದು

೩. ಶರಣಾಗತಿಯೇ ಮೋಕ್ಷಕ್ಕೆ ಪರಮೋಪಾಯ (ಯಾರು ಇದನ್ನು ತಳ್ಳಿ ಹಾಕುವಂತಿಲ್ಲ)

೪. ಭಗವಂತನ ಭಕ್ತರಿಗೆ ಅಂತಿಮ ಕಾಲದಲ್ಲಿ ದೈವಸ್ಮರಣೆಯ ನಿರ್ಬಂಧವಿಲ್ಲ, ತಾವು ಸರಿಯಾಗಿ ಇರುವಾಗ, ದೈವಸ್ಮರಣೆ, ಇದ್ದರೆ ಅದೇ ಕಡೆಯಲ್ಲಿ ಕಾಯುತ್ತದೆ.

೫. ದೇಹದ ಅವಸಾನ ಆದ ಮೇಲೆ ಮೋಕ್ಷ

೬. ಮಹಾಪೂರ್ಣರನ್ನು ಗುರುಗಳಾಗಿ ಆಶ್ರಯಿಸು (ರಾಮಾನುಜರಿಗೆ ಅಧ್ಯಯನ ಮಾಡಿಸಿದ ಇನ್ನೊಬ್ಬ ಗುರುವರಿಯರು)

ಇದನ್ನು ಈ ಮಾಹಿತಿ ತಂತ್ರಜ್ಞಾನ, ವಿದ್ಯುನ್ಮಾನ ಯುಗ ನಂಬಬೇಕೆ! ನಂಬಿಕೆಯೇ ಎಲ್ಲಕ್ಕೂ ಪರಮಾಧಾರ; ನೆಮ್ಮದಿತರಲು ನಂಬುಗೆ ಮುಖ್ಯ ಮನಃಶಾಂತಿ – ಸಮಾಧಾನಗಳಿಗೆ ಸದಾ ಅಗತ್ಯ ಆದದ್ದೆ – ಶರಣಾಗುವೆನೆಂಬುವ ನಮ್ರತೆ. ಇಲ್ಲಿ ಸಾತ್ವಿಕತೆಯಿದೆ, ಪಂದೆತನವಿಲ್ಲ, ದೃಢತೆಯಿದೆ. ಅದೇ ಆಳ್ವಾರರ ಮಾರ್ಗ – ಸರ್ವೇಪಿಸುಖಿನ ಸಂತು ಎಂಬುವ ಸದಾಶಯ – ಭಗವಂತನ ಸಾಮ್ರಾಜ್ಯ ಭಕ್ತಿ ಸಾಮ್ರಾಜ್ಯ ಆಳುವ ಆಳ್ವಾರರ ಬೆಳಕಿನ ಪುಂಜ – ದಿವ್ಯ ಪ್ರಬಂಧಗಳ ವಿಸ್ತರ ಅಧ್ಯಯನ ನೆಮ್ಮದಿಗೆ ಆಕರವೆನಿಸುತ್ತದೆ. ಇದೇ ಈ ಬರಹದ ಲಕ್ಷ್ಯ.

ಆಳ್ವಾರರ ದಿವ್ಯ ಪ್ರಬಂಧಗಳು ಕರ್ನಾಟಕ ಭಕ್ತಿ ಪರಂಪರೆಯ ಮೇಲೆ ಮೂಡಿಸಿದ ಅನುಸ್ಯೂತವಾದ ಪ್ರಭಾವ ಹಾಗೂ ಅವರ ಭಕ್ತಿಗೀತೆಗಳಲ್ಲಿ ಅಡಕಗೊಂಡಿರುವ ಸಮಷ್ಟಿ ಸ್ವಾಸ್ಥ್ಯಚಿಂತನೆಯ ಕುರಿತು ಜನತೆಯಲ್ಲಿ ಪ್ರೇರಿಸುವ ಅಂಶಗಳನ್ನು ಒಳಗೊಂಡಿರುವುದು, ಮೇಲ್ಕಂಡ ಅವಲೋಕನದಿಂದ ಸುವಿದಿತ ಆಗುತ್ತದೆ.

ಮೊದಲನೆಯದಾಗಿ, ಭಕ್ತಿ – ಎಂಬುದರ ವಿಶ್ವವಿಖ್ಯಾತ – ವಿಶ್ವವ್ಯಾಪೀ ದ್ರವ್ಯ – ನಮಗೆ ಅನೇಕ ಮಿತಿಗಳಿವೆ, ನಮಗಿಂತಲೂ ಸರ್ವಶಕ್ತನಾದ ದಿವ್ಯ ದಿವ ಚೇತನವಿದೆ. – ಅದನ್ನು ನಮ್ರತೆಎ, ಪ್ರಪತ್ತಿ – ಶರಣಾಗತಿ ಭಾವದಿಂದ ಆಶ್ರಯಿಸು ಎಂಬುವ ಸಾರವತ್ತಾದ ಪ್ರೇರಣೆಯನ್ನು ಆಳ್ವಾರರು ತಮ್ಮ ದಿವ್ಯ ಪ್ರಬಂಧಗಳ ಮೂಲಕ ಸಾರಿರುವುದು. ಇಲ್ಲಿ ಅವರ “ತಮಿಳು” ಕನ್ನಡದ ಕನ್ನಡಿಗರಿಗೆ ಹೊರತೆನಿಸಲಿಲ್ಲ ದ್ರಾವಿಡ ಭಾಷೆಯ ಸಂಬಂಧ ಮಾತ್ರ ಕಾರಣವಲ್ಲ. ಅಲ್ಲಿ ತಮಿಳುನಾಡಿಂದ ಕರ್ನಾಟಕಕ್ಕೆ ಬಂದ ರಾಮಾನುಜಾಚಾರ್ಯರ ಸರ್ವಸುಧಾರಣಾ ಮನೋಧರ್ಮ – ಸಮತಾಭಾವನೆ, ಎಲ್ಲರೂ ದೇವರ ದೃಷ್ಟಿ ಮನವ ನಿರ್ಮಿತ ಜಾತಿ ಭೇದ ಭಾವನೆ ಕಟ್ಟಿಕೊಂಡಿರುವ ಅಡ್ಡಗೋಡೆಗಳಾಗಿ ಸಮಾಜವನ್ನೇ ಛಿದ್ರಗೊಳಿಸುತ್ತಿವೆ ಎಂಬುವ ನೋವು ರಾಮಾನುಜರನ್ನು ಸದಾ ಕಾಡುತ್ತಿತ್ತು. ಶತಶತಮಾನಗಳ ಹಿಂದೆಯೇ ಅವರಲ್ಲಿದ್ದ ಸರ್ವೋದಯ ಚಿಂತನೆ ಪ್ರಾಯೋಗಿಕವಾಗಿ ಆಗಿದ್ದಲ್ಲಿ ಹಿಂದಿನ ಸಮಾಜದ ಭಿನ್ನತೆ ಕಡಿಮೆಯಾಗುತ್ತಿತ್ತೇನೋ ಎಂದು ಹಂಬಲಿಸುವಂತಾಗುತ್ತದೆ. ಅವರಲ್ಲಿದ್ದ ದಯೆಯ ನೆಲೆ, ಮಾನವತಾವಾದ, ಪ್ರೇಮ ಮೊದಲಾದ ಅಂಶಗಳು; ಹಾಗೆಯೇ ಆಚಾರ್ಯರ ಆಗಮನಕ್ಕೆ ಬಹು ಮೊದಲೇ, ಕನ್ನಡದ ಮೇಲುಕೋಟೆಯ ಹಲರು – ಶ್ರೀ ವೈಷ್ಣವರು ತಮಿಳುನಾಡಿನ ದೇವಾಲಯದಲ್ಲಿ – ನಾಥಮುನಿಗಳ ಸಮಕ್ಷಮ – “ಆರಾವಮುದೇ”.

“ಆರಾದ ಅಮುದೇ (ಅಮೃತವೇ) ಈ ನಿನ್ನ ದಾಸನ ಒಡಲು ನಿನ್ನನ್ನೇ ಕುರಿತ ಪ್ರೇಮದಿಂದ” ಎನ್ನುವ ಮುಂದೆ ಹತ್ತು ಪಾಶುರ ಹಾಡಿದ್ದ – ಲುಪ್ತವಾಗಿದ್ದ ಪ್ರಬಂಧಗಳು ಸಂಪೂರ್ಣ ಪಡೆಯುವಿಕೆಗೆ ಸಾಧನೆ ನಡೆಸಲು ಪ್ರೇರಣೆಯಾದದ್ದು! ಇದು ಕನ್ನಡದವರಕರ್ನಾಟಕದವರ (ಮೇಲುಕೋಟೆಯ) ಕೊಡುಗೆ ಎಂದೆನಿಸುತ್ತದೆ. ಸಂತೋಷವಾಗುತ್ತದೆ.

ಆಳ್ವಾರರ ಹಾಡುಗಳ ತಿಳಿಗನ್ನಡವತರಣಿಕೆ – ಇಂಥ ಕೃತಿಸಮುಚ್ಚಯವು ಯಾವುದೇ ಆಧ್ಯಾತ್ಮಿಕ ಸಾಹಿತ್ಯ – ಧಾರ್ಮಿಕವಲ್ಲದ ಸಾಹಿತ್ಯದಲ್ಲಿಯೂ ದೊರೆವುದು ದುರ್ಲಭ ಎಂದೆನಿಸಿದರೆ ಉತ್ಪ್ರೇಕ್ಷೆಯಲ್ಲ, ಜೀವನ ಪ್ರೀತಿ, ಜೀವನ ಮೌಲ್ಯ, ಎಲ್ಲರ ಒಳ್ಳಿತನ್ನು ಬಯಸುವ ಸರ್ವೋದಯ ಧರ್ಮ ಹಾಗೂ ಆಳ್ವಾರರು ಸ್ವತಃ ಸಮಾಜದ ವಿಚ್ಛಿದ್ರ ಶಕ್ತಿಯಾಗಿರುವ ಹುಟ್ಟು ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಅಂಶಗಳು ಇವೆ. ಇದೊಂದು ಮಾನವೀಯತೆಗೆ ಕೊಡುಗೆ, ಎನ್ನಿಸುತ್ತದೆ.

ಭಕ್ತಿ ಪರಂಪರೆಗೆ ಸೊಗಸಾದ ನೆಲೆ ಕರ್ನಾಟಕವೆಂಬುದು ಸುವಿದಿತ ಬಹುಶ್ರುತ ಅಂಶವಲ್ಲವೇ! ಎಲ್ಲ ದೇಶ – ವಿದೇಶೀ ಅನ್ಯದೇಶೀ ಮತಧರ್ಮ ಇಲ್ಲಿವೆ. ಸುಧಾರಣೆ, ಧರ್ಮ ಸಹಿಷ್ಣುತೆ – ಸಾಮರಸ್ಯ ಕನ್ನಡಿಗರದ್ದು. ಈ ನಿಟ್ಟಿನಲ್ಲಿ ಆಳ್ವಾರರ ಪ್ರಬಂಧಗಳು ಬಹುಜನಪ್ರಿಯ ಆಗುತ್ತದೆ. ಇನ್ನೂ ಶ್ರೀವೈಷ್ಣವ – ಅಯಂಗಾರ್ – ಚೌಕಟ್ಟನ್ನು ದಾಟಿ ಎಲ್ಲರೆಲ್ಲರ ಮನಗಳಲ್ಲಿ ಅನುರಣನಗೊಳಿಸಬೇಕಿದೆ ಇದರಿಂದ ಈಗಿನ ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲಿ ಏನು ಪ್ರಯೋಜನ! ಬಾಳ್ವೆ ಇರುವುದೇ ಸ್ವೀಕರಣೆಗೆ, ಲಾಭಕ್ಕೆ ಪ್ರಯೋಜನಕ್ಕೆ ಮಾತ್ರವಲ್ಲ, ಮನುಷ್ಯರ, ಒಂದಾಗಿ ಪ್ರಾಣಿಗಳನ್ನು ಕೂಡ ದಯೆಯಿಂದ ಪಾಲಿಸುವ ಉನ್ನತ ಮಟ್ಟದ ಮಾನವೀಯಗುಣ ಮೈಗೂಡಿಸಿಕೊಳ್ಳುವುದಕ್ಕೆ ದಿಟಕ್ಕೂ ಆಳ್ವಾರರ ಪ್ರಬಂಧ ಸಂಪದ ಈ ದಿಸೆಯಲ್ಲಿ ಶಾಂತಿ – ಸರ್ವ ಸೌಖ್ಯ – ನೆಮ್ಮದಿ – ತೃಪ್ತಿ – ನಾರಾಯಣ ಭಕ್ತಿ (ಎಂದಾಗ ಕೇವಲ ಹರಿಪಾರಮ್ಯ ಮಾತ್ರವಲ್ಲ ಸರ್ವೇಶ್ವರ, ಸರ್ವಶಕ್ತ, ಎಂಬುವ ಭಾವನೆಯಿಂದ) ಧರ್ಮದ ಬದುಕಿನ ಸಾಂತ್ವನ ನೀಡುವ ಚೈತನ್ಯದ ನೆಲೆ ಇವು ಆಗುತ್ತವೆಂಬುದು ಆದೀತು.

ಇಡೀ ಭಕ್ತಿ ಪರಂಪರೆಯ ಪರಿವೀಕ್ಷಣೆಯ ಬೆಳಕಿನಲ್ಲಿ ಆಳ್ವರರ ದಿವ್ಯ ಪ್ರಬಂಧಗಳು “ಆಸೆ ತೀರುವಂತೆ ಸೇರುವ ಶ್ರೀ ಹರಿ ಬ್ರಹ್ಮ – ಹರನನ್ನು ಕರೆದು, ನನ್ನಲ್ಲಿ ಕವಿಯುವ ಮಿಥ್ಯ ತೊಡೆಯಯ್ಯ ಕುಲ – ಶಿಲ್ಪ(ಸಿರಿ) – ಎಲ್ಲ ತರುವುದೇ ನಿನ್ನ ಅರಿವು ಎಂಬುವುದು ಈ ವಿಚಾರ – ಪ್ರೇರಣೆ – ಅತ್ಯಮೂಲ್ಯ ಹಾಗೂ ಅಪೇಕ್ಷಣೀಯತಾನೆ?ಸ

ಆಳ್ವಾರರ ಕೆಲವು ಪಾಶುರಗಳು

ಆಳ್ವಾರ್ ಮಹನೀಯರು ರಚಿಸಿ ಹಾಡಿರುವ “ನಾಲಾಯಿರ ದಿವ್ಯ ಪ್ರಬಂಧಂ”
ಅಥವಾ, ದ್ರಾವಿಡ ಪ್ರಬಂಧಗಳನ್ನು ಕುರಿತಂತೆ ಪ್ರಸ್ತಾಪಿಸಿದ್ದೇವೆ
ಕೆಲವು ಪಾಶುರಗಳನ್ನು (ಪದ್ಯಗಳನ್ನು) ಮೂಲ ಶಂದಮಿಳ್ – ಅದಕ್ಕೆ ತಿಳಿಗನ್ನನುಡಿಯ
ನೆಳಲನ್ನು – ಪ್ರಯತ್ನಿಸಿ, ನೀಡಿದ್ದೇನೆ ;

ಪೊಯ್ ಹೈ ಆಳ್ವಾರರ ಮುದಲ್ ಮೊದಲ ತಿರುವಂದಾದಿ” –

‘ವೈಯಮ್ ತಹಳಿಯಾ ವಾರ್‌ಕಡಲೇ ನೆಯ್ಯಾಹ
ವೆಯ್ಯ ಕದಿರೋನ್ ಏಳಕ್ಕಾಹ – ಶಯ್ಯ
ಶುಡರಾಳಿಯಾನ್ ಅಡಿಕ್ಕೇ ಶೂಟ್ಟಿನೇನ್ ಶೂಲ್‌ಮಾಲೈ
ಇಡರಾಳಿ ನೀಂಗುಹವೇ ಎನ್ರು’

ಬುವಿಯೇ ಹಣತೆಯಾಗಿ ತುಂಬಿದ ಕಡಲು ನೆಯ್ಯಾಗಿ
ಬೆಂಗದಿರ ರವಿಯೇ ಸೊಡರ ಕುಡಿಯಾಗಿರಲು
ಹೊಳೆಹೊಳೆವ ಸುದರ್ಶನವ ಪಿಡಿಸಿಹನ ಚೆನ್ನಡಿಗೆ
ನುಡಿಮಾಲೆಯಿದನು ಮುಡಿಸಿ ಅರ್ಪಿಸಿಹೆನು,
ಅಳಲ ಕಡಲಾದ ಸಂಸಾರ ನೀಗಲೆಂದು………..

ಪೊದತ್ತಾಳ್ವಾರ್ ಇರಂಡಾಂ ಎರಡನೆಯ ತಿರುವಂದಾದಿ

‘ಅನ್ಬೇ ತಹಳಿಯಾ ಆರ್ವಮೇ ನೆಯ್ಯಾಹ
ಇನ್ಬರುಹುಶಿಂದೈ ಇಡುತಿರಿಯಾ, ನನ್ಬುರುಹಿ
ಜ್ಞಾನಚ್ಚುಡರ್ ವಿಳಕ್ಕೇತ್ತಿನೇನ, ನನ್ಬುರಹಿ
ಜ್ಞಾನತ್ತುಮಿಳ್‌ಪುರಿಂದ ನಾನ್’

ಭಕುತಿಯೇ ಹಣತೆ ಆತನಹೊಂದುವ ಅಭಿನವೇಶವೇ ನೆಯ್ಯಾಗಿ
ಆನಂದದಲ್ಲಿ ಕರಗಿದ ಚಿಂತೆಭಾವವೇ ಬತ್ತಿಯಾಗಲು
ಬೆಳಗಿದೆನೀ ಸುಜ್ಞಾನವುಂಟುಮಾಳ್ವ ಮಾಡುವ ಸೊಡರ, ಜ್ಞಾನಸ್ವರೂಪಾತ್ಮಕಂಗೆ
ತಿಳಿವಿನಾ ತಮಿಳರಿತ ನಾನು ಈ ಸಿರಿನಾರಾಯಣಂಗೆ !

ಪೇಯಾಳ್ವಾರ್ ಮೂನ್ರಾಂ ಮುರನೆಯ ತಿರುವಂದಾದಿ

‘ತಿರುಕ್ಕಂಡೇನ್ ಪೊನ್ಮೇನಿ ಕಂಡೇನ್ ತಿಹಳುಮ್
ಅರುಕ್ಕನ್ ಅಣಿ ನಿರಮುಂ ಕಂಡೇನ್ – ಶೆರುಕ್ಕಿಳರುಮ್
ಪೊನ್ನಾಳಿ ಕಂಡೇನ್ ಪುರಿಶಂಗಂ, ಕೈಕಂಡೇನ್
ಎನ್ನಾಳಿವಣ್ಣನ್‌ಪಾಲ್ ಇನ್ರು’

ಎನ್ನೊರೆಯ ಕಡಲ್ವಣ್ಣನಿಕಟ ಸನಿಹದಲೆ ಕಂಡೆ ಸಿರಿದೇವಿಯನು
ಹೊನ್ನೊಡಲವನ ಕಂಡೆ, ಬೆಳ ಬೆಳಗುವ ಮೂಡುವತರಣಿತೆರ ಚ್ವೆಹೊಗರಕಂಡೆನು,
ಸಮರದಲ್ಲಿ ವರ್ಧಿಸುವ ಚೆಲುವಿನಾ ಸುದರ್ಶನಚಕ್ರವನು ಕಂಡೆ!
ಅದೋ, ಎಡಗೈಲಿ ಪಿಡಿದಾ ಪಾಂಚಜನ್ಯ ಸಿರಿಶಂಖ ಪಿಡಿದವನ ಕಂಡೆ!
‘ಉಲಹುಂ ಛಲಹಿರನ್ದ ಊಳಿಯಂ ಒಣ್‌ಕೇಳ್
ವಿಲಹು ಕರುಂಗಡಲುಂ ವೆರ್ಪುಂ – ಉಲಹಿನಿಲ್

ಶೆಂದೀಯಂ ಮಾರುತಮುಂ ವಾನುಂ ತಿರುಮಾಲ್ – ತನ್
ಪುಂದಿಯಲ್ ಆಯ್ ಪುಣರ್ಪು’

ಲೋಕ – ಲೋಕವಡಗಿದ ನಂತರದೆ ಉಳಿದ ಪ್ರಳಯಂಕಾಲ,
ಅದದೊ, ಬಣ್ಣದತರಂಗ ಏಳುತಿಹ ನೀಲ್ಗಡಲು, ಬೆಟ್ಟಗಳ
ಈಜಗದೆ ಜ್ವಲಿಪ ಪಾವಕ, ಸಮಿರ, ಬಿತ್ತರದೆತ್ತರದಾಗಸ,
ಈ ಎಲ್ಲವೆಲ್ಲ ಶ್ರೀಯಃ ಪತಿತನ್ನ ಸಂಕಲ್ಪದಿಂದಗೈದ ಸೃಷ್ಟಿ

‘ಇರೈಯುಂ ನಿಲನುಂ ಇರುವಿಶುಂಬುಂ ಕಾತ್ತುಂ
ಅರೈಪುನಲುಂ ಶೆಂದೀಯಂ ಆವಾನ್’

ಅವನೇ ಸರ್ವೇಶ, ಬುವಿ, ವಿಶಾಲಬಾನು, ಬೀಸುವ ಗಾಳಿ,
ಸದ್ದಗೈವ ಜಲರಾಶಿ, ಹೊಳೆದು ಕಾಂತಿಹಯ ಬೆಂಕಿ,
ಲೀಕಾವಿಭೂತಿಹುತ ಅವನೆನ್ನ ನಾರಣ!

‘ಉಳನ್ ಕಂಡಾಯ್ ನನ್ನೆಂಜೇ ಉತ್ತಮನ್ ಎನ್ರುಂ
ಉಳನ್ ಕಂಡಾಯ್ ಉಳ್ಳುವಾರ್ ಉಳ್ಳತ್ತು – ಉಳನ್ ಕಂಡಾಯ್
ವೆಳ್ಳತ್ತಿನ್ ಉಳ್ಳಾನುಂ ವೇಂಗಡತ್ತು ಮೇಯಾನುಂ
ಉಳ್ಳುತ್ತಿನ್ ಉಳ್ಳಾನ್ ಎನ್ರೋರ್’

ಎಲೆಎನ್ನ ಮನವೇ ಆ ಪುರುಷೋತ್ತಮನೆಮ್ಮ ಅಸ್ತಿತ್ವಕ್ಕೆ ಕಾರಣನು
ಎಲ್ಲೆಲ್ಲೂ ಇಹನು, ಜಾನಿಪರ ಮನದಲಿಹನು, ಕಂಡೆಯಾ ಎಲೆ ಮನವೇ!
ಹಾಲ್ಗಡಲಲಿಹನವನು ತಿರುವೇಂಗಡ ಮಲೆಯಪ್ಪನಿಂತಿಹ ಆಸ್ವಾಮಿಯು
ಎಮ್ಮೆದೆಯಲೇ ನಿಚ್ಚವಾಸಿಸುತಿಹನೆಂಬುವ ನಿಶ್ಚಯಿಸೆಲೆ ಎನ್ನಮನವೇ!

ಉಣರ್ವಾರ್ ಆರ್ ಉನ್ ಪೆರುಮೈ ಊಳಿದೋರುಅ

ಯುಗಯುಗಗಳಿದ್ದು ಯತ್ಕಗೈದರೂ ನಿನ್ನ ಮಹಿಮೆಯಳವ ಯಾರು ಅರಿಯಬಲ್ಲರು ನಾರಣಾ!

‘ಅಡಿಮೂನ್ರಿಲ್ ಇವ್ವುಲಹಂ ಅನ್ರಳಂದಾಯ್ ಪೋಲುಂ
ಅಡಿಮೂನ್ರಿರಂದು ಅವನಿಕೊಂಡಾಯ್, ಪಡಿನಿನ್ರ
ನೀರೋದಮೇನಿ ನೆಡುಮಾಲೇ ನಿನ್ ಅಡಿಯೈ
ಯಾರ್ ಓದವಲ್ಲಾರ್ ಅರಿಂದು?’

ಮೂರಡಿಯ ನೆಲ ಯಾಚಿಸಿದೆ ಬುವಿಯನೇ ಅಳೆದೆ
ಅಂದು ಆ ಮೂರಡಿಯಲೆ ಈ ಮೋಸವೆಲ್ಲವನಳೆದುಕೊಂಡೆಯಲ್ತೆ!
ತಿರೆಯಲಿ ತಣ್ಪಾದ ಗುಣವುಳ್ಳ ವಾರಾಶಿಯಂತ ದಿವ್ಯ ಮಂಗಲ ಮೂರ್ತಿ,
ನಿನ್ನ ಕೆನ್ನಡಿಗಳ ಮಹಿಯೆಯನದಾರರಿತು ಪೇಳಬಲ್ಲರು!

‘ತಿರುಮಾಲೈ ಅಲ್ಲದು ತೆಯ್‌ವಮೆನ್ರು ಏತ್ತೇನ್
ವರುಂ ಆರು ಎನ್ ಎನ್ಮೇಲ್ ವಿನೈ’

ಸರ್ವೇಶನೀತಂಗೆ ಸೇರಿಹ ಆತುಮ ವಸ್ತುವನೆನದೆಂದು ಭಾವಿಸೆನು
ಸಂಸಾರಿಗಳೊಡನೆ ಸೇರೆನಾನು – ಉತ್ತಮರೆಂದೆ ಕರೆಯಿಸಿಕೊಂಬ
ಡಿಂಗರಿಗರ ಸಂಗಡವಲ್ಲದೆ ನಾನು ಸೇರೆನಿತರರ ಜೊತೆ
ಶ್ರೀಮನ್ನಾರಾಯಣ ನನುಳಿದು ಇತರರ ದೇವತೆಯೆಂದು ನುತಿಸೆ!
ಎನ್ನ ಮೇಲೆ ದುರಿತವಾವರಿಪ ಬಗೆಯಂತಿರುವುದು!

‘ಪಾಟ್ಟುಂ ಮುರೈಯುಂ ಪಡುಕತೈಯುಂ ಪಲ್‌ಪೊರುಳುಂ
ಈಟ್ಟಿಯತೀಯುಂ ಇರುವಿಶುಂಬುಂ ಕೇಟ್ಟ
ಮನುವುಂ ಶುರುದಿ ಮರೈ ನಾನ್ಗುಂ, ಮಾಯನ್
ತನ್ ಮಾಯೈಯಿಲ್ ಪಟ್ಟ ತರ್ಪ್ಪು’

ಈ ಲೋಕದ ಗೀತಹಾಡುರಾಗಂಗಳು, ಸಾಹಿತ್ಯ ಇತಿಹಾಸಪುರಾಣಗಳು
ರಾಮಾಯಣಾ ದಿ – ಪಂಚಭೂತ – ಕಾರಣನಿಹ ಪಾವಕ, ಬಿತ್ತರದಾಗಸ,
ಶ್ರುತಿಗಳವಾಪ್ತನೆಂದು ನಾವು ತಿಳಿದಿಹ ಮನು, ನಾಲ್ಕು ವೇದಗಳು
ಇವೆಲ್ಲವೆಲ್ಲವಾ ಅಚ್ಚರಿಗೊಳಿಪ ಆ ದೇವಸಂಕಲ್ಪದ ತತ್ವಗಳು.