ಉಂಡರಿಯಪ್ಪ ಪವಿತ್ರವಾದ ಪೆಸಹ(ಕ್ರೈಸ್ತ ಹಬ್ಬ) ದೊಂದಿಗೆ ಉಂಡರಿಯಪ್ಪ ಎಂಬ ಕೇರಳದ ತಿಂಡಿಗೆ ಸಂಬಂಧವಿದೆ. ಇದು ಕ್ರಿಶ್ಚಿಯನ್ನರ ಪರಂಪರೆಯ ಒಂದು ಕೊಂಡಿ ಕೂಡ ಆಗಿದೆ. ಹಳೆಯ ಒಡಂಬಡಿಕೆ ಪೆಸಹ ಪ್ರಾಣ್ಯ ದಿನಗಳ ಮುಕ್ತಾಯವೇ ಹೊಸ ಒಡಂಬಡಿಕೆಯ ಪೆಸಹ. ಇಸ್ರೇಲೀ ಜನರು ಈಜಿಪ್ಟ್‌ದಾಸ್ಯದ ಕ್ರೌರ್ಯದಿಂದ ಉಬ್ಬಸ ಪಡುತ್ತ ಗಟ್ಟಿಯಾಗಿ ರೋದಿಸುತ್ತಾರೆ. (ಪುರಳ ೨ – ೨೩). ಅವರ ರೋದನ ಶ್ರೀ ಸನ್ನಿಧಿಗೆ ತಲಪಿದ ಕಾರಣ ಕರುಣಾಮಯನಾದ ದೇವರು ಮನುಷ್ಯನಾಗಿ ಬೆತ್ಲೆ ಹೇಮಿನ ದನಗಳ ಕೊಟ್ಟಿಗೆಯಲ್ಲಿ ಹುಟ್ಟಿದ. ಬೈಬಲ್‌ನ ದೇವರು ನೊಂದ ಮನುಷ್ಯನೊಂದಿಗೆ ಬೆರೆಯುವುದಕ್ಕೋಸ್ಕರ ಅವತಾರ ತಳೆದವನು. ಯಾಹುವೇ ಎಂಬ ಮಾತಿನ ಅರ್ಥ ಹೀಗೆ ಅನ್ವರ್ಥವಾಗುತ್ತದೆ.

ಪೆಸಹ ಎಂಬ ಮಾತಿನ ಅರ್ಥ ‘ದಾಟಿ ಹೋಗುವುದು’ ಎಂದು ಈಜಿಪ್ಟ್‌ನ ದಾಸ್ಯದಿಂದ ಆಯ್ಕೆಗೊಂಡ ಜನರು ದಾಟಿಹೋದ ವಿಮೋಚನೆ ಎಂಬುದು ಅದರ ಪೂರ್ತಿಯಾದ ಅರ್ಥ. ಯೇಸು ಕ್ರಿಸ್ತನ ಅಂತ್ಯಭೋಜನ ಪೆಸಹದ ಅವಿಭಾಜ್ಯ ಅಂಗವೇ ಆಗಿರುತ್ತದೆ. ಯೇಸುವು ತನ್ನ ಹನ್ನೆರಡು ಜನ ಶಿಷ್ಯರೊಂದಿಗೆ ಶಿಲುಬೆಯೇರುವ ಮೊದಲು ಸೇವಿಸಿದ ಭೋಜನವು ವಿಶೇ, ಗಮನ ಸೆಳೆಯುವ ಘಟನೆಯಾಗಿದೆ. ಯೇಸುವಿನ ಶತ್ರುಗಳಿಗೆ ತೋಡಿ ಕೊಡುವ ಯೂದಾಸ್ ಕೂಡ ಈ ಔತಣದಲ್ಲಿ ಭಾಗವಹಿಸಿದ. ವಂಚಕನ ಕುರಿತಾದ ಸೂಚನೆಯನ್ನು ಯೇಸು ಮುಂಚಿತವಾಗಿ ನೀಡಿದ ಕೂಡ. ಶಿಲುಬೆಯಲ್ಲಿ (ಕಾರ್‌ಏರಿಯಿಲ್) ಅರ್ಪಿಸಲಿರುವ ಆತ್ಮ ಬಲಿದಾನದ ಪರಮೋನ್ನತ ಅರ್ಚನೆಯಾಗಿತ್ತು. ಪೆಸಹಾ ದಿನದಂದು ನಡೆದ ಅಂತ್ಯ ಭೋಜನ. ರೊಟ್ಟಿಯನ್ನು ದ್ರಾಕ್ಷಾರಸವನ್ನು ಸ್ವಂತ ಕೈಗಳಿಂದ ಶಿಷ್ಯರಿಗೆ ಹಂಚಿ ನೀಡಿದ. ಈ ಸೇವೆ ಪಾಪ ಮೋಚನವನ್ನು ಹೊಸ ಬದುಕನ್ನೂ ನೀಡುವುದೆಂದೂ ವ್ಯಕ್ತಪಡಿಸಿದ. ಈ ಘಟನೆಯು ಪವಿತ್ರಬಲಿದಾನ ಎಂಬ ಪರಮೋನ್ನತವಾದ ಬಲಿದಾನವಾಗಿ ಪರಿಗಣಿಸಲ್ಪಟ್ಟಿದೆ.

ಸಿರಿಯನ್ ಕ್ರಿಶ್ಚಿಯನ್ನರು ವರ್ಷದಲ್ಲೊಂದು ಬಾರಿ ಪೆಸಹಾ ದಿನದಂದು ಸಿದ್ಧಪಡಿಸಿ ಸೇವಿಸುವ ವಿಶಿಷ್ಟವಾದ ಒಂದು ತಿನಿಸು ಉಂಡರಿಯಪ್ಪ. ಇಸ್ರಾಯೆಲಿಯನ್ನರ ಅರಸನಾದ ನಸ್ರಾಯೇಲೆ ಈಶೋ ಎಂಬುದರ ಹ್ರಸ್ವ ರೂಪವಾದ JNRJ ಯ ವ್ಯವಹಾರ ರೂಪ ‘ಉಂಡರಿ’ಯೇಸುವನ್ನು ಗಲ್ಲಿಗೇರಿಸಿದ ಶಿಲುಬೆಯ ಮೇಲೆ ಬರೆದಿಟ್ಟ ಬರಹ JNRJ ಪೆಸಹಾದಿನದಂದು ಊಟದ ಬಳಿಕ ಸಾಧಾರಣ ಪ್ರವೃತ್ತಿಗಳಿಗೆ ಉಂಡರಿಯಪ್ಪ ಮತ್ತು ಹಾಲನ್ನು ನೀಡಲಾಗುತ್ತದೆ.

ಇದು ಒಂದು ವಿಶೇಷವಾದ ಕಾರ್ಯಕ್ರಮ. ಇಲ್ಲಿ ಕಾರ್ಮಿಕನಾಗುವವನು ಮನೆಯ ಯಜಮಾನ. ಸ್ನಾನ ಮುಗಿಸಿ ಶುದ್ಧನಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಈ ತಿಂಡಿಯನ್ನು ತಂಡು ಮಾಡಿ ಸುತ್ತಲೂ ಸೇರಿದ ಕುಟುಂಬ ಸದಸ್ಯರಿಗೆ ಹಿರಿತನದ ಸರದಿಪ್ರಕಾರ ನೀಡಲಾಗುತ್ತದೆ. ಜತೆಗೆ ಪ್ರತ್ಯೇಕ ಪಾತ್ರೆಗಳಲ್ಲಿ ಸಿದ್ಧಪಡಿಸಿದ ‘ಹಾಲು’ ಎಂಬ ಪಾನೀಯವನ್ನು ಕೂಡ. ಸದಸ್ಯರು ಈ ವಿಶೇಷ ತಿನಿಸನ್ನು ಆಗಲೇ ಸೇವಿಸುತ್ತಾರೆ. ಬಳಿಕ ಪಾಪಗಳ ಓದ ಸಮೇತವಾದ ಪ್ರಾರ್ಥನೆಯಲ್ಲಿ ಹೊರತು ಇತರ ಯಾವುದೇ ವ್ಯವಹಾರಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಈ ತಿನಿಸುಗಳನ್ನು ಎಲ್ಲರೂ ತಿಂದು ಮುಗಿಸುತ್ತಾರೆ, ಬಾಕಿ ಮಾಡುವುದೆಂದಿಲ್ಲ. ಹಾಗೇನಾದರೂ ಬಾಕಿಯಾದರೆ ಬೆಂಕಿಗೆ ಹಾಕಿ ಬಿಡುತ್ತಾರೆ.

ಉಂಡರಿಯಪ್ಪ: ಒಂದು ಹಾನೆ ಅ‌ಕ್ಕಿಗೆ ಎರಡು ತೆಂಗಿನ ಕಾಯಿಗಳು ಎಂಬ ಪ್ರಮಾಣದಲ್ಲಿ ಅಕ್ಕಿಪುಡಿಯನ್ನು ಹುರಿದುಕೊಂಡು ತೆಂಗಿನ ಹಾಲು ಮತ್ತು ಬಿಸಿ ನೀರು ಸೇರಿಸಿಕೊಂಡು ನೆನೆಸಿ ಇಡಬೇಕು. ಸುಮಾರು ಇನ್ನೂರೈವತ್ತು ಗ್ರಾಂ ಉದ್ದು ನೆನೆಹಾಕಿದ್ದನ್ನು ಹೆಚ್ಚು ನೀರು ಸೇರಿಸಿಕೊಳ್ಳದೆ ಅರೆಯಬೇಕು. ತೆಂಗಿನತುರಿ, ಜೀರಿಗೆ, ಕೆಂಪು ನೀರುಳ್ಳಿ, ಬೆಳ್ಳುಳ್ಳಿಗಳನ್ನು ಚೆನ್ನವಾಗಿ ಅರೆದು ಉದ್ದಕ್ಕೆ ಅಕ್ಕಿ ಹುಡಿಗಳನ್ನು ಚೆನ್ನಾಗಿ ಮಿಶ್ರಮಾಡಬೇಕು. ಪೆಸಹಾದಿನದ ಮಧ್ಯಾಹ್ನವೇ ಬಾಳೆ ಎಲೆ ಕೊಯ್ದು ಬಾಡುವುದಕ್ಕಾಗಿ ಬಿಸಿಲಲ್ಲಿ ಹಾಕಲಾಗುತ್ತದೆ. ಬಾಳೆ ಎಲೆ ಕೊಯ್ದು ಹರಡಿಕೊಂಡು ಹಬೆಯಲ್ಲಿ ಬೇಯಿಸಿ ಕೊಳ್ಳುತ್ತಾನೆ. ಹಿಂದಿನ ಕಾಲದಲ್ಲಿ ತಾಮ್ರದ ದೊಡ್ಡಪಾತ್ರೆಯಲ್ಲಿ ಗೆರಟೆಗಳನ್ನು ಕವು ಚಿಟ್ಟು ಬಾಳೆಯೆಲೆಗಳನ್ನು ಕೊಯ್ದು ತಂದು ಬಾಕಿಯಾಗುವ ಅದರ ದುಂಡುಗಳನ್ನೆಲ್ಲ ಗೆಂಟೆಗಲ ಮೇಲೆ ಹರಡಿ ಸಮತಟ್ಟಾಗಿಸಿ ಅದರ ಮೇಲೆ ಇಟ್ಟು ಅಪ್ಪನನ್ನು ಬೇಯಿಸುತ್ತಿದ್ದ ಕ್ರಮ ಇತ್ತು. ಈ ಉಂಡರಿಯಪ್ಪದ ಮಿಶ್ರಣವನ್ನೇ ಬಳಸಿಕೊಂಡು ಬಾಳೆ ಎಲೆಯಲ್ಲಿ ಇನ್ನಷ್ಟು ದೊಡ್ಡದಾಗಿ ಹರಡಿಕೊಂಡು ಶಿಲುಬೆ ಅಪ್ಪ (ಕುಂಶಪ್ಪಂ) ತಯಾರಿಸುತ್ತಾರೆ. ‘ಓಶಾನ ಶನಿವಾರ’ ಸಿಕ್ಕಿದ ಗರಿಗಳನ್ನು ಶಿಲುಬೆಯಾಕಾರಕ್ಕೆ ಕತ್ತರಿಸಿಕೊಂಡು ಮನೆಯ ಯಜಮಾನ ಕುಂಶಪ್ಪ ಬೇಯಲು ಇಟ್ಟುದರ ಮೇಲೆ ಅದನ್ನು ಇಡುತ್ತಾನೆ. ನಾಲ್ಕು ಕಡೆಗಳಲ್ಲೂ ಉಪ್ಪು, ಅರಿಸಿನ (ಒಣ) ಹಾಕಲಾಗುತ್ತದೆ. ಯಜಮಾನ ಸ್ನಾನ ಮಾಡಿ ಶುದ್ಧಿಯಾದ ಬಳಿಕವಷ್ಟೇ ಈ ಕೆಲಸ ಮಾಡಬೇಕು. ಈ ಕುಂಶಪ್ಪವನ್ನೇ ಆ ಬಳಿಕ ಕುಟುಂಬದ ಸದಸ್ಯರಿಗೆ ಪಾಲು ಮಾಡಿ ಕೊಡಲಾಗುತ್ತದೆ. ಉಂಡರಿಯಪ್ಪವನ್ನು ಕೆಂಡದಲ್ಲಿ ಸುಟ್ಟು ಕೂಡ ತಯಾರಿಸುವ ಕ್ರಮವೂ ಇದೆ.

ಹಾಲು: ಇದರ ಹೆಸರು ಸೂಚಿಸುವ ಹಾಗೆ ಇದು ನಾವು ಸಾಮಾನ್ಯವಾಗಿ ತಿಳಿದುಕೊಂಡಿರುವ ಹಾಲಲ್ಲ. ಬಣ್ಣವು ಹಾಗೆ ಇರುವುದರಿಂದ ಮಾತ್ರ ಹಾಲು ಎಂದು ಕರೆಯುತ್ತಾರೆ. ಕುದಿಸಿಕೊಂಡು ಸೋತಿತೆಗೆದ ಬೆಲ್ಲದ ನೀರಿಗೆ ತೆಂಗಿನ ಕಾಯಿಯ ತನಿಹಾಲನ್ನು (ಮೊದಲು ಹಿಂಡಿದ ಹಾಲು) ಬಿಟ್ಟು ಎರಡನೇ ಬಾರಿ ಮೂರನೇ ಬಾರಿ ಹಿಂಡಿದ ತೆಂಗಿನಹಾಲನ್ನು ಸೇರಿಸಿ ಒಲೆಯಲ್ಲಿಟ್ಟು ತಳ ಮಗುಚುತ್ತ ಬೇಯಿಸಬೇಕು. ಶುಂಠಿ, ಏಲಕ್ಕಿ, ಜೀರಿಗೆ ಇವನ್ನೂ ಅದರ ಜತೆ ಬೆರೆಸಬಹುದು. ಎಳೆಯ ತೆಂಗಿನ ಗರಿಯನ್ನು ಶಿಲುಬೆಯಾಕಾರದಲ್ಲಿ ಕತ್ತರಿಸಿ ತೆಗೆದು, ಇದರಲ್ಲಿ ನೀರು ಸೇರಿಸದೆ, ಅರಸಿನದ ಕೊಂಬುಗಳನ್ನು ಹಾಕಬಹುದು. ಹೀಗೆ ಹಾಕುವ ಅರಸಿನದ ಕೊಂಬನ್ನಾಗಲೀ ಶಿಲುಬೆಯ್ನನಾಗಲಿ ಹಾಳಿನ ಪಾತ್ರೆಗೆ ಹಾಕಿದುದು, ಬಡಿಸುವಾಗ ಯಾರಿಗೆ ಸಿಗುತ್ತದೋ ಅವರಿಗೆ ಅದು ದೊಡ್ಡ ಭಾಗ್ಯವೆಂದೂ ದೈವಾನುಗ್ರಹವೆಂದೂ ತಿಳಿಯಲಾಗುತ್ತದೆ. ಸ್ವಲ್ಪ ಅಕ್ಕಿ ಹುಡಿಯನ್ನು ತನಿ ಹಾಲಲ್ಲಿ ಕಲಸಿ ಮೇಲೆ ಹೆಸರಿಸಿದ ವಸ್ತುಗಳನ್ನು ಸೇರಿಸಿ ಕುದಿಯಲು ಆರಂಭಿಸುವಾಗ ಕೆಳಗಿಳಿಸಬೇಕು. ಪೆಸಹ ಗುರುವಾರ ಸಹ ಭೋಜನದ ಗುರುವಾರ ಆಹಾರವಾಗಿ ಮೇಲೆ ಹೇಳಿದ ಕುಂಶಪ್ಪವನ್ನೂ ಉಂಡರಿಯಪ್ಪನನ್ನು ಹಾಲನ್ನು ಸ್ವೀಕರಿಸುತ್ತಾರೆ.

ಯೇಸು ಶಿಲುಬೆಯಲ್ಲಿ ಅರ್ಪಿಸಿದ ದಿವ್ಯಯಾಗದ ನೆನಪನ್ನು ಹುಟ್ಟಿಸುವ ಉಂಡರಿಯಪ್ಪ ಮತ್ತು ಹಾಲು ವರ್ಷದಲ್ಲೊಮ್ಮೆ ತಯಾರಿಸಲ್ಪಟ್ಟ ಆಹಾರವಾಗಿ ಸೇವಿಸಲ್ಪಡುವುದು ಯೇಸುಕ್ರಿಸ್ತನ ದಿವ್ಯಸಾನ್ನಿಧ್ಯಕ್ಕಾಗಿ ಪಡೆಯುವ ಪಾಲು ಎಂದು ಕ್ರಿಶ್ಚಿಯನ್ನರು ನಂಬುತ್ತಾರೆ.

– ಕೆ.ವಿ.ಎಫ್. ಅನುವಾದ ಕೆ.ಕೆ.

ಉಗಾದಿ ತೆಲುಗರು ಆಚರಿಸುವ ಹಬ್ಬಗಳಲ್ಲಿ ಉಗಾದಿ ವರ್ಷದ ಮೊದಲನೆಯ ಹಬ್ಬ. ಇವರಿಗೆ ಚೈತ್ರಮಾಸದಲ್ಲಿ ಬರುವ ಶುಕ್ಷಪಕ್ಷದ ಹುಣ್ಣಿಮೆಯಿಂದ ಚಾಂದ್ರಮಾನ ಸಂವತ್ಸರ ಆರಂಭವಾಗುತ್ತವೆ. ಈ ದಿನವೇ ಉಗಾದಿ. ಇದು ವಸಂತಮಾಸದಲ್ಲಿ ಬರುವ ಹಬ್ಬ. ಈ ಹಬ್ಬವನ್ನು ಕುರಿತು ಪ್ರಾಚೀನ ಶಾಸನಗಳಲ್ಲಿ ಸಾಹಿತ್ಯದಲ್ಲಿ ಸಾಕಷ್ಟು ಮಾಹಿತಿಗಳು ಕಂಡುಬರುತ್ತವೆ.

ಉಗಾದಿ ಹಬ್ಬದ ದಿನ ಮುಂಜಾನೆ ಎದ್ದು ತಲೆಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುತ್ತಾರೆ. ಕೆಲವು ಜಿಲ್ಲೆಗಳಲ್ಲಿ ಈ ಹಬ್ಬವನ್ನು ಎರಡು ದಿವಸ ಆಚರಿಸುತ್ತಾರೆ. ಮೊದಲನೆಯ ದಿನ ಅಭ್ಯಂಜನ ಸ್ನಾನ ಮಾಡಿ ಅನಂತರ ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ತಮ್ಮ ಇಷ್ಟದೈವವನ್ನು ಪೂಜಿಸುತ್ತಾರೆ. ಅನಂತರ ಯುಗಾದಿ ‘ಪಚ್ಚಡಿ’ ಎಂದು ಹೆಸರಾದ ವಿಶಿಷ್ಟ ಪ್ರಸಾದವನ್ನು ದೇವರಿಗೆ ನಿವೇದನೆ ಮಾಡಿ ಎಲ್ಲರೂ ಸ್ವೀಕರಿಸುತ್ತಾರೆ. ಇದು ಪ್ರಧಾನವಾಗಿ ಬೇವಿನ ಹೂವಿನಿಂದ ತಯಾರಿಸುವ ಪ್ರಸಾದ. ಇದರಲ್ಲಿ ಹೊಸ ಹುಣಿಸೆ ಹಣ್ಣಿನರಸ, ಹೊಸ ಬೆಲ್ಲ, ಬೇವಿನ ಹೂಗಳು, ಎಳೆ ಮಾವಿನ ಕಾಯಿತುರಿ, ಮೆಣಸಿನಕಾಯಿ ಚೂರುಗಳನ್ನು ಬೆರೆಸುತ್ತಾರೆ. ಕೆಲವರು ಉಪ್ಪನ್ನು ಸಹ ಹಾಕುವರು. ಇದರೊಂದಿಗೆ ಜೇನು ಬೆರೆಸುವುದು ಕೆಲವು ಕಡೆ ರೂಢಿಯಲ್ಲಿದೆ. ಇದು ಪ್ರಸಾದ ರೂಪದಲ್ಲಿ ಕಂಡುಬಂದರೂ ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳು ಸೇರಿಕೊಂಡಿವೆ. ಬೇವಿನ ಕಹಿ ರಕ್ತಶುದ್ಧಿ ಮಾಡುತ್ತದೆ. ಮಾವಿನಕಾಯಿ ತುರಿ ಸೂರ್ಯ ತಾಪದಿಂದ ದೇಹವನ್ನು ರಕ್ಷಿಸುತ್ತದೆ.

ಈ ‘ಪಚ್ಚಡಿ’ ಯನ್ನು ಕುರಿತಂತೆ ನಂಬಿಕೆಯೊಂದು ತೆಲುಗರಲ್ಲಿ ಕಂಡುಬರುತ್ತದೆ. ಪಚ್ಚಡಿ(ಪ್ರಸಾದ) ಯನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡುವವರೆಗೆ ರುಚಿ ನೋಡಬಾರದು. ಪ್ರಸಾದವೆಂದು ಕೊಟ್ಟಾಗಲೇ ಸ್ವೀಕರಸಬೇಕು. ಹೀಗೆ ಪ್ರಸಾದವನ್ನು ಸ್ವೀಕರಿಸಿ ಉಪಯೋಗಿಸಿದ ಮೇಲೆ ಅದರಲ್ಲಿ ಕಹಿ ಹೆಚ್ಚಾದರೆ ಆ ವರ್ಷ ಕಹಿಯಾಗಿರುತ್ತದೆಂದೂ, ಸಿಹಿ ಹೆಚ್ಚಾದರೆ ಜೀವನ ವರ್ಷ ಪೂರ್ತಿ ಸಿಹಿಯಾಗಿರುತ್ತದೆಂದೂ ಹಿರಿಯರು ಹೇಳುತ್ತಿರುತ್ತಾರೆ. ಒಟ್ಟಿನಲ್ಲಿ ಈ ಪ್ರಸಾದವನ್ನು ಸ್ವೀಕರಿಸಿದವರಿಗೆ ಶುಭವಾಗುತ್ತದೆ ಎಂಬುದು ಒಂದು ಭಾವನೆ. ಬೆಳಿಗ್ಗೆ ಪೂಜೆ ಆದ ಮೇಲೆ ಮಧ್ಯಾಹ್ನ, ‘ಪಂಚಾಂಗ ಶ್ರವಣ’ ಎಂಬ ಕಾರ್ಯಕ್ರಮವಿರುತ್ತದೆ. ಎಂದರೆ ಒಬ್ಬ ಪುರೋಹಿತನು ಪಂಚಾಂಗವನ್ನು ಪಠನಮಾಡುತ್ತಿದ್ದರೆ, ಪಕ್ಕದಲ್ಲಿ ಕುಳಿತವರು ನಿಷ್ಠೆಯಿಂದ ಕೇಳುತ್ತಾರೆ. ಇದು ಪಂಚಾಂಗ ಶ್ರವಣ, ಪಂಚಾಂಗವೆಂದರೆ – ಐದು ಅಂಗಗಳಿಂದ ಕೂಡಿದ್ದು. ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎಂಬುದು ಆ ಐದು ಅಂಗಗಳು. ಪಂಚಾಂಗ ಶ್ರವಣದಲ್ಲಿ ಪ್ರಧಾನವಾಗಿ ಆ ವರ್ಷದ ರಾಶಿಫಲಗಳು, ರಾಜಪೂಜ್ಯ, ರಾಜಾದಾಯಗಳು ಎಂದು ಕರೆಯಲ್ಪಡುವ ಕಂದಾಯ ಫಲಗಳನ್ನು ಕುರಿತು ಎಲ್ಲರೂ ಆಸಕ್ತಿ ತೋರಿಸುತ್ತಾರೆ. ಪಂಚಾಂಗದಲ್ಲಿ ಆ ವರ್ಷ ಯಾರಿಗೆ ಯಾವ ರೀತಿಯ ಫಲಗಳು ದೊರೆಯುತ್ತವೆ ಎಂಬ ಅಂಶಗಳನ್ನು ಪುರೋಹಿತ ಓದಿ ತಿಳಿಸುತ್ತಾನೆ. ಇದು ವಸಂತ ಕಾಲವಾದುದರಿಂದ ‘ವಸಂತ ನವರಾತ್ರಿಗಳು’ ಈ ಸಂದರ್ಭದಲ್ಲಿ ಆಚರಿಸಲ್ಪಡುತ್ತವೆ. ಚೈತ್ರ ಶುದ್ಧ ಹುಣ್ಣಿಮೆಯ ಮೊದಲು ನವಮಿಯವರೆಗೆ ಒಂಬತ್ತು ದಿನ ‘ವಸಂತ ನವರಾತ್ರಿ’ಗಳನ್ನು ಆಚರಿಸುತ್ತಾರೆ. ಇತ್ತೀಚೆಗೆ ಈ ಆಚರಣೆ ಕಣ್ಮರೆಯಾಗುತ್ತಿದೆ. ಆದರೆ ಒಂದು ಕಾಲದಲ್ಲಿ ವಸಂತ ಜಲವನ್ನು ಎರಚಿಕೊಳ್ಳುವುದು ಮುಂತಾದ ಸಂಭ್ರಮಗಳಿರುತ್ತಿದ್ದವು. ಜನ ಅರಿಸಿನ ಸುಗಂಧ ದ್ರವ್ಯಗಳನ್ನು ಕಲಸಿದ ಆ ನೀರನ್ನು ಪರಸ್ಪರ ಎರಚಿಕೊಂಡು ಮನರಂಜನೆ ಪಡೆಯುತ್ತಿದ್ದರು.

ನದೀ ಪ್ರಾಂತಗಳಲ್ಲಿ ವಾಸಿಸುವ ರೈತರು ಯುಗಾದಿ ದಿನದಂದು ‘ಏರುವಾಕ’ ಎಂಬ ಆಚರಣೆಯನ್ನು ಮಾಡುತ್ತಾರೆ. ನೇಗಿಲಿಗೆ ‘ಏರು’ ಎಂದು ಹೆಸರು. ‘ಏರುವಾಕ’ ಎಂದರೆ ವ್ಯವಸಾಯವನ್ನು ಪ್ರಾರಂಭಿಸುವುದು ಎಂದು ಅರ್ಥ. ಈ ದಿವಸ ಎತ್ತುಗಳಿಗೂ ನೇಗಿಲಿಗೂ ಪೂಜೆ ಮಾಡಿ ವ್ಯವಸಾಯದ ಕೆಲಸಗಳಿಗೆ ಶುಭಾರಂಭವನ್ನು ಮಾಡುತ್ತಾರೆ.

ಇಂದು ಕಂಡುಬರದಿದ್ದರೂ ಒಂದು ಕಾಲದಲ್ಲಿ ಉಗಾದಿ ಹಬ್ಬಕ್ಕೆ ತನ್ನದೇ ಆದ ಮಹತ್ತ್ವವಿತ್ತು. ಆ ದಿನ ಮನೆಗಳನ್ನು ಸುಣ್ಣ ಬಣ್ಣಗಳಿಂದ ಅಲಂಕರಿಸಿ, ಸಾರಿಸಿ ಗುಡಿಸಿ ಶುದ್ಧ ಮಾಡುತ್ತಿದ್ದರು. ಕೆಮ್ಮಣ್ಣಿನಿಂದ ಹೊಸ್ತಿಲನ್ನು ಸಾರಿಸುವುದು. ಕೆಮ್ಮಣ್ಣಿನಿಂದ ಅಥವಾ ಅಕ್ಕಿಹಿಟ್ಟಿನಿಂದಲೂ ರಂಗೋಲಿ ಎಲೆಗಳಿಂದ ತೋರಣ ಕಟ್ಟುತ್ತಿದ್ದರು. ಈ ಪದ್ಧತಿ ಇಂದಿಗೂ ಅನೇಕ ಕಡೆ ಚಾಲ್ತಿಯಲ್ಲಿದೆ. ಆಂಧ್ರ ಪ್ರದೇಶದಲ್ಲಿ ಮಾತ್ರವಲ್ಲದೆ ಈ ಹಬ್ಬವನ್ನು ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಬಂಗಾಳ ಪ್ರಾಂತಗಳಲ್ಲಿ ಸಹ ಆಚರಿಸುತ್ತಾರೆ. ಪ್ರಾಂತೀಯ ಭೇದಗಳು ಕೆಲವು ಅಲ್ಲಲ್ಲಿ ಕಂಡುಬರುತ್ತವೆ. ಇದನ್ನು ‘ದೊಡ್ಡಹಬ್ಬ’ ಎಂದು ಕೆಲವರು ಕರೆಯುತ್ತಾರೆ.

ಹಬ್ಬದ ಎರಡನೆಯ ದಿನ ‘ಹೊಸತೊಡುಗೆ’ ಎಂದು ಅನೇಕ ಪ್ರಾಂತಗಳಲ್ಲಿ ಆಚರಣೆಯಲ್ಲಿದೆ. ಮೊದಲನೆಯ ದಿನ ಸಿಹಿ ಊಟಮಾಡಿದರೆ ಎರಡನೆಯ ದಿನ ಖಾರದ ಊಟ ಮಾಡುವವರು ಇದ್ದಾರೆ. ಸಾಮಾನ್ಯವಾಗಿ ಈ ದಿನ ಮಾಂಸದ ಅಡುಗೆ ಇರುತ್ತದೆ. ಮೊದಲ ದಿನ ಮೈಗೆಲ್ಲ ಎಣ್ಣೆಹಚ್ಚಿಕೊಂಡಿದ್ದವರು ಈ ದಿನ ಸೀಗೆಕಾಯಿ, ರಾಗಿಹಿಟ್ಟಿನಿಂದ ಚೆನ್ನಾಗಿ ಮೈ ತೊಳೆದುಕೊಂಡು ಹೊಸಬಟ್ಟೆಯನ್ನು ಧರಿಸುತ್ತಾರೆ. ಹೊಸಬಟ್ಟೆ ತೊಡುವ ದಿನವೆಂದೂ, ಹೊಸತೊಡುಗೆ ಎಂದೂ ಈ ದಿನವನ್ನು ಕರೆಯುತ್ತಾರೆ. ಅನೇಕ ಬಗೆಯ ಗ್ರಾಮೀಣ ಕ್ರೀಡೆಗಳನ್ನು ಈ ದಿನದ ವಿಶೇಷವೆಂದು ನಡೆಸುತ್ತಾರೆ. ‘ಕೋಳಿ ಪಂದ್ಯ’ ಈ ಹಬ್ಬದ ವಿಶೇಷಗಳಲ್ಲಿ ಪ್ರಾಧಾನ್ಯ ಪಡೆದಿದೆ. ಬರಿಕ್ಕೆಯಿಂದ ತೆಂಗಿನ ಕಾಯಿ ಒಡೆಯುವವರು ಹಿಂದೆ ಇರುತ್ತಿದ್ದರಂತೆ.

ಯುಗಾದಿ ಶಬ್ದವನ್ನು ಯುಗ – ಆದಿ – ಎಂಬ ಅರ್ಥದಲ್ಲಿ ಕೆಲವರು ಉಪಯೋಗಿಸುತ್ತಾರೆ. ‘ಉಗ’ ಎಂದರೆ ಉಡು – ಗಮನ (ನಕ್ಷತ್ರ ಗಮನ) ಎಂಬ ಅರ್ಥವಿದೆ. ಚಂದ್ರಮಾನ ಆರಂಭವಾಗುತ್ತದೆ. ಆದ್ದರಿಂದ ಉಗ – ಆದಿ – ಎಂದೇ ಕೆಲವರು ಕರೆಯುತ್ತಾರೆ. ಏನೇ ಆದರೂ ಉಗಾದಿ ತೆಲುಗಿನವರಿಗೆ ವಿಶೇಷವಾದ ಹಬ್ಬ.

– ಪಿ.ಆರ್.ಎಚ್. ಅನುವಾದ ವಿ.ಆರ್.

ಉಚ್ಚಬಲಿ ಉತ್ತರ ಕೇರಳದ ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ‘ಮಲಯರ್’, ‘ಪಾಣರ್’ ಸಮುದಾಯದವರು ನಡೆಸುತ್ತಿದ್ದ ಮಂತ್ರ ಸಂಬಂಧವಾದ ಆಚರಣೆಯನ್ನು ‘ಉಚ್ಚಬಲಿ’ ಎಂದು ಕರೆಯುತ್ತಿದ್ದರು. ಸಮಾಜದ ಮೇಲ್ವರ್ಗದವರು ತಮ್ಮ ಮನೆಗಳಲ್ಲಿ ಇದನ್ನು ನಡೆಸುತ್ತಿದ್ದರು. ವಾರ್ಷಿಕವಾಗಿ ನಡೆಸುವ ವೆಳ್ಳೊರವೀಡ್’ (ತುಲಾ ೨೦, ೨೧, ೨೨), ‘ಚುವಟ್ಟ್‌ವಲೀನ ವೀಡ್’ (ಕುಂಭ ೧೩, ೧೪, ೧೫), ‘ಕಲ್ಲಿಡಿಲ್’ (ಕುಂಭ೧೬, ೧೭) ಎಂಬೀ ತರವಾಡುಗಳಲ್ಲಿ ಮಾತ್ರವೇ ಈ ಉಚ್ಚಬಲಿಯನ್ನು ನಡೆಸುತ್ತಿದ್ದರು. ಕುಟುಂಬಕ್ಕೆ ಸಂಪತ್ತು ಮತ್ತು ಕ್ಷೇಮ ದೊರೆಯಲು ‘ಉಚ್ಚಬಲಿ’ಯನ್ನು ನಡೆಸಲಾಗುತ್ತದೆ.

ನಡು ಮಧ್ಯಾಹ್ನದ ಹೊತ್ತಿನಲ್ಲಿ ಕಾಳಿಗೆ ಕೊಡುವ ಬಲಿ ಎಂಬರ್ಥದಲ್ಲಿ ಇದಕ್ಕೆ ‘ಉಚ್ಚಬಲಿ’ ಎಂಬ ಹೆಸರು ಬಂತು. ‘ಕಣ್ಣೀರ್ ಪಾಟಿ’ನ ಅಂಗವಾಗಿ ಉಚ್ಚಬಲಿ ಕೊಡುವುದನ್ನು ‘ಉಚ್ಚೇಲಿತ್ಕಣ್ಣೀರ್’ ಎಂದು ಹೇಳುವರು. ಬೆಳಿಗ್ಗೆ ಆರಂಭಗೊಳ್ಳುವ ‘ಕಣ್ಣೀರ್ ಪಾಟ್’ ಮರುದಿನ ಮಧ್ಯಾಹ್ನದ ತನಕ ಮುಂದುವರಿಯುತ್ತದೆ. ಆ ಬಳಿಕ ‘ಉಚ್ಚಬಲಿ’ ನಡೆಯುತ್ತದೆ. ಕೆಲವು ಪ್ರದೇಶಗಳಲ್ಲಿ ‘ಉಚ್ಚಬಲಿ’ ಯ ನಂತರ ತರವಾಡಿನ ಮಂತ್ರಮೂರ್ತಿಗಳನ್ನು, ಕೊನೆಗೆ ತೀಚಾಮುಂಡಿ ಅಥವಾ ವಿಷ್ಣುಮೂರ್ತಿಯ ಒತ್ತೆಕೋಲವನ್ನು ನಡೆಸುತ್ತಿದ್ದರು. ಹೆಚ್ಚಿನ ಕಡೆಗಳಲ್ಲಿ ‘ಉಚ್ಚಬಲಿ’ಯ ಜೊತೆಗೆ ‘ಕಣ್ಣಿರ್ ಪಾಟ್’ ನ್ನು ನಡೆಸುತ್ತಾರೆ. ಕಳಿಯಾಟದ ಭಾಗವಾಗಿ ‘ಉಚ್ಚಬಲಿ’ಯನ್ನು ನಡೆಸುವಾಗ ಒಂದಕ್ಕಿಂತ ಹೆಚ್ಚು ‘ಉಚ್ಚಬಲಿ’ ಕೋಲಗಳಿರುತ್ತವೆ.

ಉಚ್ಚೇಲಿ ಕಣ್ಣೀರ್: ಮನುಷ್ಯರಿಗೆ, ಪ್ರಾಣಿಗಳಿಗೆ, ಮರಗಿಡಗಳಿಗೆ, ಕಟ್ಟಡಗಳು ಮುಂತಾದವುಗಳಿಗೆಲ್ಲಾ ‘ಕಣ್ಣೀರ್ (evil eye) ಬರುವ ಸಾಧ್ಯತೆಗಳಿವೆ. ಇದನ್ನು ತಡೆಗಟ್ಟುವುದಕ್ಕಾಗಿ ‘ಕಣ್ಣೀರ್ ಪಾಟ್’ ನಡೆಸುತ್ತಾರೆ. ಇದರ ಅಂಗವಾಗಿ ‘ಉಚ್ಚಬಲಿ’ ಕೂಡಾ ನಡೆಯುತ್ತವೆ. ಇದು ಕೇವಲ ಒಬ್ಬ ವ್ಯಕ್ತಿಯ ಕ್ಷೇಮಕ್ಕೆ ಮಾತ್ರವಲ್ಲ, ಬದಲಾಗಿ ಇಡೀ ಕುಟುಂಬದ ಕ್ಷೇಮಕ್ಕೆ ಮತ್ತು ಐಶ್ವರ್ಯಕ್ಕಾಗಿ ನಡೆಸಲಾಗುತ್ತದೆ.

ಬೆಳಗ್ಗೆ ಆಚಾರ ಕ್ರಮಗಳು ಆರಂಭಗೊಳ್ಳುತ್ತವೆ. ಮೊದಲಿಗೆ ಗಣಪತಿ ವಂದನೆಯು ನಡೆಯುತ್ತದೆ. ಬಳಿಕ ಮಂತ್ರ ಮೂರ್ತಿಗಳಿಗೆ ‘ಮುತಿರ್ಚ’ (ನೈವೇದ್ಯ)ವನ್ನಿಡುತ್ತಾರೆ. ಇದರ ಜೊತೆಯಲ್ಲಿಯೇ ಆಯುಧ ಪೂಜೆಯೂ ನಡೆಯುತ್ತದೆ. ಭಸ್ಮದಿಂದ ಪಟ್ಕೋನ ಅಥವಾ ಪರಿಚವರ್ಣ ಹುಂಡಿಯಿಂದ ಸುದರ್ಶನ ಕಳಂವನ್ನು ಬರೆಯುತ್ತಾರೆ. ‘ಕಳಂ’ನ ನಾಲ್ಕು ಭಾಗಗಳಲ್ಲಾಗಿ ಬಟ್ಟೆಯನ್ನಿಡುತ್ತಾರೆ. ಅನಂತರ ತರವಾಡಿನ ಹಿರಿಯ ವ್ಯಕ್ತಿಯನ್ನು ‘ಕಳಂ’ನಲ್ಲಿ ಕೂರಿಸುವರು. ಆಮೇಲೆ ಅವರ ಶರೀರದ ಸಂಧಿಗಳ ಎದುರಿಗೆ ದೀಪದ ಬತ್ತಿ (ತಿರಿ)ಯನ್ನುರಿಸಿ ಮಂತ್ರ ಹೇಳುವರು. ಮಂತ್ರದ ಕೊನೆಯಲ್ಲಿ ಬತ್ತಿಯನ್ನು ‘ಕುರುದಿ’ಗೆ ಹಾಕುವರು. ಆಚರಣೆಯನ್ನು ನಡೆಸುವ ಬತ್ತಿಯನ್ನು ‘ಕುರುದಿ’ಗೆ ಹಾಕುವರು. ಆಚರಣೆಯನ್ನು ನಡೆಸುವ ತರವಾಡಿನ ಸ್ತ್ರೀಯು ದೀಪ ನಿವಾಳಿಸುವುದು ಮತ್ತು ಕುರುದಿಯಿಂದ ನಿವಾಳಿಸುವ ಕ್ರಿಯೆಗಳನ್ನು ನಡೆಸುತ್ತಾರೆ.

ಅನಂತರ ‘ಪಿಣಿ’ ಆಚರಣೆಯಲ್ಲಿ ತಲೆಗೆ ಅಕ್ಕಿ ಹಾಕುವ ಕ್ರಮ ನಡೆಯುತ್ತದೆ. ಈ ವೇಳೆ ದೇವರಿಗೆ ವಂದಿಸಿ ಹಾಡು ಹಾಡುವರು. ಇದನ್ನು ‘ಅರಿಚಾರ್ತಲ್’ ಎಂದು ಕರೆಯುವರು. ಇದರೊಂದಿಗೆ ‘ಕಣ್ಣೀರ್‌ಪಾಟ್’ ಆರಂಭವಾಗುತ್ತದೆ. ಈ ನಡುವೆ ‘ಪಿಣಿ’ಯ ಸಂಬಂಧಿಕರು ಬತ್ತ – ಅಕ್ಕಿಯನ್ನುಪಯೋಗಿಸಿ ನೀವಾಳಿಸುವರು. ಬಳಿಕ ಬತ್ತವನ್ನು ನೆಲಕ್ಕೆ ಹಾಕಿ, ಕಾಲಿನಿಂದ ಮೆಟ್ಟಿ ಒತ್ತುವರು.

ಮುಂದಿನ ಕ್ರಿಯೆ ‘ಮುರಂ ಉಳಿ(ಯಿ) ಯಲ್’, ‘ಮೊರ’ದಲ್ಲಿ ಕತ್ತಿ, ಹಿಡಿಸೂಡಿ, ಹಳೆಯಸೌಟು, ವೀಳ್ಯದೆಲೆ, ಅಡಿಕೆ, ಭತ್ತ, ಅಕ್ಕಿ, ಅರಸಿನ, ಮಸಿ, ಉಪ್ಪು ಎಂಬಿವುಗಳನ್ನಿಟ್ಟು; ಎರಡು ಗೆರಟೆಗಳಲ್ಲಿ ಕಪ್ಪು ಗುರುದಿ (ಭಸ್ಮ ಕಲಿಸಿದ್ದು) ಮತ್ತು ಕೆಂಪುಗುರುದಿ(ಸುಣ್ಣದಿಂದ ತಯಾರಿಸಿದ) ಅದೇ ರೀತಿ ಸನ್ಣಪಾತ್ರೆಯಲ್ಲಿ ಸ್ವಲ್ಪ ತೆಂಗಿನ ಎಣ್ಣೆಯನ್ನು ತೆಗೆದಿಡುವರು. ಮೊರವನ್ನು ಪೀಣಿಯಾಳಿಗೆ ಸುತ್ತ ನಿವಾಳಿಸುವರು. ಅನಂತರ ಗುರುದಿಯನ್ನು ಅಂಗಳದಲ್ಲಿ ಚೆಲ್ಲುತ್ತಾರೆ. ಉಳಿದ ವಸ್ತುಗಳನ್ನು ಹೊರಗೆ ಹೊತ್ತಿಸುವರು. ಮುಂದಿನ ಕ್ರಮವಾಗಿದೆ ‘ಶರಮೊಳಿ(ಯಿ)ಕ್ಕಲ್’ ಪಿಳಿಯಾಳು ‘ಏರಿಞತ್ತೂಕಿಲ್’, ‘ನೆಚ್ಚತ್ತೂಕಿಲ್’, ‘ಞರತೂಕಿಲ್’ ಎಂಬುವುದರ ಜೊತೆಗೆ ‘ಶರ’ ವನ್ನು ಹಿಡಿದು ಸ್ವತಃ ನಿವಾಳಿಸುವುದಾಗಿದೆ ಈ ಕ್ರಿಯೆ. ಬಳಿಕ ಎದ್ದು ನಿಂತು ‘ತುಕಿಲ್ ಕೆಟ್ಟ್‌’ನ್ನು ಮೂರು ತುಂಡುಮಾಡಿ ನೆಲಕ್ಕೆಸೆದು, ಅದರ ಮೇಲೆ ಶೂಲವನ್ನು ಚುಚ್ಚುವರು. ಆಮೇಲೆ ಕೆಲವು ಗುರುದಿಯನ್ನು ಎರೆಯುವರು. ಈ ಸಮಯದಲ್ಲಿ ‘ಉಮ್ಮಟ್ಟಕುಳಿಯನ್’ ಎಂಬ ತೆಯ್ಯಂ (ಭೂತ) ಬಂದು ಆಂಗಿಕಾಭಿನಯ ನಡೆಸುತ್ತದೆ. ನೃತ್ಯದ ಕೊನೆಯಲ್ಲಿ ಮಹಿಳೆಯ ತಲೆಯ ಮೇಲೆ ಅಕ್ಕಿ ಹಾಕುವರು. ಮಧ್ಯರಾತ್ರಿಯಲ್ಲಿ ನಡೆಯುವ ಈ ಕ್ರಿಯೆಯು ನಂತರ, ಬೆಳಗ್ಗಿನಿಂದ ಉಚ್ಚಬಲಿ ಕ್ರಿಯೆ ಆರಂಭಗೊಳ್ಳುತ್ತದೆ.

ಈ ಕ್ರಿಯೆ ಹೋಮಾದಿಗಳೊಂದಿಗೆ ಪ್ರಾರಂಭಗೊಳ್ಳುತ್ತದೆ. ಕ್ರಿಯೆ ನಡೆಯುವ ಸ್ಥಳದಲ್ಲಿ ಒಂದು ಹೊಂಡ ತೋಡಿ ಜೀವಂತ ಕೋಳಿಯೊಂದನ್ನು ಪೂರ್ವಕ್ಕೆ ಅಭಿಮುಖವಾಗಿ ನಿಲ್ಲಿಸುವರು. ಹೊಂಡ ಮುಚ್ಚುವುದರೊಳಗೆ ‘ಉಮ್ಮಟ್ಟಕುಳಿಯನ್’ ಆಗಮಿಸಿ ಕೋಳಿಯನ್ನು ಬಲಿ ಕೊಡುತ್ತದೆ. ಆ ಬಳಿಕ ಕೆಂಪು ಬಟ್ಟೆಯ ಕಿರೀಟವನ್ನೂ, ತೆಂಗಿನ ಗರಿ (ತಿರಿ)ಯಿಂದ ತಯಾರಿಸಿದ ಉಡುಪನ್ನೂ, ಮುಖಕ್ಕೆ ಅರಿಸಿನ, ಭಸ್ಮವನ್ನು ಹಚ್ಚಿದ ‘ಉಚ್ಚೇಲ ತೆಯ್ಯಂ’ ಆಗಮಿಸುತ್ತದೆ. ವಾದ್ಯ ಘೋಷದೊಂದಿಗೆ ತೆಯ್ಯಂ (ಭೂತ) ನೃತ್ಯ ಮಾಡುವದು. ಜೊತೆಯಲ್ಲಿ ಸರಳ ವೇಷದೊಂದಿಗೆ ಎರಡು ಚಿಕ್ಕ ಕೋಲಗಳೂ ಈ ಜರುಗುತ್ತವೆ. ಇವುಗಳನ್ನು ಪಿಶಾಚಿಗಳೆನ್ನುವರು. ನಡು ಮಧ್ಯಾಹ್ನವಾಗುವಾದ’ಉಚ್ಚಲತೆಯ್ಯಂ’ ತನ್ನ ಮೊಣಕ್ಕೆ ಕೆಳಗೆ ‘ಪಾಂದೋ'(ಮಡಲಿನ ನಡುವಲ್ಲಿರುವ ಕೊತ್ತಲಿಂಗೆಯ ಬಿಡಿಭಾಗದ ನಾರು) ನಿಂದ ಗಟ್ಟಿಯಾಗಿ ಕಟ್ಟಿ ಕಟ್ಟಿ ರಕ್ತ ಹರಿದಯದಂತೆ ತಡೆದು ನಿಲ್ಲಿಸುವರು. ಅನಂತರ ಕತ್ತಿಯಿಂದ ಇರಿದು ರಕ್ತ ಬರಿಸುತ್ತಾರೆ. ಮೇಲಕ್ಕೆ ಚಿಮ್ಮುವ ರಕ್ತವನ್ನು ತೆಯ್ಯಂ ಸ್ವತಃ ತನ್ನ ಮುಖಕ್ಕೆ ಬೀಳುವಂತೆ ಮಾಡುತ್ತದೆ. ಸಂಪೂರ್ಣವಾಗಿ ರಕ್ತದಲ್ಲಿ ಮುಳುಗಿದ ‘ಉಚ್ಚೇಲತಯ್ಯಂ’ ಅಂಗಳ ಬೀಳುತ್ತವೆ. ಇದರೊಂದಿಗೆ ಪಿಶಾಚಿ ಕೋಲಗಳೆರಡು ಅಲ್ಲಿಂದ ಹೋಗುತ್ತವೆ. ಬಿದ್ದಿರುವ ಕೋಲದ ಮೇಲೆ ಬಿಳಿ ಬಟ್ಟೆ ಹೊದಿಸಿ ಮರಣಾನಂತರ ಕ್ರಿಯೆಗಳನ್ನು ನಡೆಸುವರು. ಶವ ಕೊಂಡೊಯ್ಯುವಂತೆ ಕೋಲಗಳನ್ನು ಹೊತ್ತೊಯ್ಯುವರು. ಸ್ವಲ್ಪ ಕ್ಷಣ ಕಳೆದ ಬಳಿಕ ‘ಭದ್ರೆ…….’ ಎಂದು ಬೊಬ್ಬಿಡುತ್ತಾ ‘ಉಚ್ಚೇಲಿತ್ಯೆಯ್ಯಂ’ ಪುನಃ ರಂಗಪ್ರವೇಶ ಮಾಡುತ್ತದೆ. ಇದು ಪಿಶಾಚಿಗಳ ಕರುಳನ್ನು ಹೊರಗೆ ತೆಗೆಯುವಂತೆ ಅಭಿನಯಿಸುವುದರೊಂದಿಗೆ ವಿಧಿಯಾಚರಣೆಗಳು ಮುಕ್ತಾಯಗೊಳ್ಳುತ್ತದೆ.

ಕಳಿಯಾಟದ ಅಂಗವಾಗಿರುವ ಉಚ್ಚಬಲಿ: ಬೆಳಿಗ್ಗೆ ಮಲಯಪುರುಷ ಹಾಗೂ ಮಹಿಳೆ ‘ತೋಟ್ಟಂ’ ಹಾಡುವುದರೊಂದಿಗೆ ಕ್ರಿಯೆಗಳು ಆರಂಭಗೊಳ್ಳುತ್ತವೆ. ನಡುಮಧ್ಯಾಹ್ನವಾಗುವಾಗ ‘ಉಚ್ಚಬಲಿಭದ್ರ’ ಎಂಬ ಎರಡು ಕೋಲಗಳು ರಂಗಪ್ರವೇಶಿಸುತ್ತದೆ. ಇವುಗಳಿಗೆ ಸರಿಗೆಯ ಬೆಂಡೋಲೆ, ಕೆಂಪು ಬಟ್ಟೆ ಹೊದಿಸಿದ ಬಟ್ಟೆ ಸಣ್ಣ ಕೂದಲು, ಮಡಲಿನ ತಿರಿಯಿಂದ ತಯಾರಿಸಿದ ಉಡುಪುಗಳಿರುತ್ತವೆ. ದೇಹಕ್ಕೆ ಭಸ್ಮ ಮುಖಕ್ಕೆ ಅರಸಿನವನ್ನು ಲೇಪಿಸುವರು. ಕುಣಿಯುತ್ತಿರುವ ‘ಕೋಲ’ದ ಬಳಿಗೆ ಚೆಂಡೆ, ಮೇಳದೊಂದಿಗೆ ನಾಲ್ಕು ‘ಕುಟ್ಟಿ ಕೋಲು’ ಗಳು (ಕರಾಡ ತೆಯ್ಯಂ) ಅಟ್ಟಹಾಸ ಹಾಕುತ್ತಾ ಬರುತ್ತವೆ. ಈ ವೇಳೆಗೆ ಉಚ್ಬಬಲಿಭದ್ರನ ಎಡಕೈಗೆ ಕರ್ಮಿಗಳು ‘ಪಾನ್ದಂ’ (ತೆಂಗಿನ ಮಡಲಿನಿಂದ ತೆಗೆಯುವ ನಾರು)ನ್ನು ಗಟ್ಟಿಯಾಗಿ ಕಟ್ಟಿ ರಕ್ತ ಸಂಚಾರವನ್ನು ತಡೆದು ನಿಲ್ಲಿಸುವರು. ಉಚ್ಚಬಲಿಭದ್ರ ಬಲಕೈಯಲ್ಲಿ ಕತ್ತಿಯಿಂದ ಕೈಗೆ ಇರಿದು ರಕ್ತವನ್ನು ಮುಖಕ್‌ಎ ಮತ್ತು ಪರಿಸರಕ್ಕೆ ಹರಿಯ ಬಿಡುತ್ತದೆ. ಅನಂತರ ನಂತರ ಕೋಲದ ‘ಉರಿಯಾಡಲ್’ (ನುಡಿಗಟ್ಟು) ನಡೆಯುತ್ತದೆ. ಕೊನೆಗೆ ಎರಡು ಕೋಲಗಳೂ ಬಲಿತರದ (ಬಲಿವೇದಿಕೆ) ಸಮೀಪ ಬಂದು ಕೋಳಿ ರಕ್ತವನ್ನು ಕುಡಿದು, ಪ್ರಜ್ಞೆ ತಪ್ಪಿ ಬೀಳುತ್ತದೆ. ಕರ್ಮಿಗಳು ಇವರ ಮೈಮೇಲೆ ಬಿಳಿ ಬಟ್ಟೆಯನ್ನು ಹೊದಿಸುವರು. ‘ಕಾರಾಡ ತೆಯ್ಯಂ’ಗಳು ತಲೆಯ ಹತ್ತಿರವೂ, ಪಾದದ ಹತ್ತಿರವೂ ನಿಲ್ಲುತ್ತವೆ. ಬಳಿಕ ಮರಣಾನಂತರ ಕ್ರಿಯೆಯನ್ನು ನಡೆಸುತ್ತದೆ. ನಂತರ ಕರ್ಮಿಗಳು ‘ಭದ್ರೇ’ ಎಂದು ಗಟ್ಟಿಯಾಗಿ ಕೂಗುವನು. ಇದನ್ನು ಕೇಳಿ ಬಿಳಿ ಬಟ್ಟೆಯೊಳಗಿನಿಂದ ಎರಡೂ ಕೋಲಗಳು ಎದ್ದು ನಿಲ್ಲುತ್ತವೆ. ಅವುಗಳು ‘ಕಾರಾಡತೆಯ್ಯಂ’ಗಳೊಂದಿಗೆ ಓಡಿಹೋಗಿ ನೀರಿನಲ್ಲಿ ಮುಳುಗುತ್ತವೆ. ‘ಬಾಧೆ’ಗಳನ್ನು ನೀರಿನಲ್ಲಿ ಬಿಡುವುದೇ ಇದರ ಉದ್ಧೇಶ. ಮುಂದೆ ಕೋಲಗಳು ವೇಷವನ್ನು ಕಳಚಿ ಸ್ನಾನ ಮಾಡುವುದರೊಂದಿಗೆ ‘ಉಚ್ಚೇಲಿಕೂತ್ತ್’ ಕೊನೆಗೊಳ್ಳುತ್ತದೆ.

ಮಂತ್ರವಾದಕ್ಕೆ ಸಂಬಂಧಿಸಿದ ಆಚರಣೆ ಎಂಬ ನೆಲೆಯಲ್ಲಿ ‘ಉಚ್ಚಬಲಿ’ ಇಂದು ಅಪರೂಪವಾಗಿ ಮಾತ್ರವೇ ನಡೆಯುತ್ತದೆ. ಸವರ್ಣರ ಮನೆಗಳಲ್ಲಿ ಕಳಿಯಾಟದ ಅಂಗವಾಗಿ ಇದು ವಿರಳವಾಗಿ ನಡೆಯುತ್ತದೆ. ಸಮಾಜದಲ್ಲುಂಟಾದ ಬದಲಾವಣೆಯು ಇದಕ್ಕೆ ಕಾರಣವಾಗಿದೆ. ಪರಂಪರೆ (ಸಂಪ್ರದಾಯ) ಯನ್ನು ಅನುಸರಿಸುತ್ತಾರೆ. ಬರುವ ಕೆಲವು ತರವಾಡು ಮನೆಗಳಲ್ಲಿ ಮಾತ್ರವೇ ಇವು ಅಳಿಯದೇ ಉಳಿದಿವೆ.

ಮಲಯ ಸಮುದಾಯದ ಅಧ್ಯಯನಕ್ಕೆ ಸಂಬಂಧಿಸಿ ‘ಉಚ್ಚಬಲಿ’ ಯನ್ನು ವಿಸ್ತಾರವಾಗಿ ಅಧ್ಯಯನ ನಡೆಸಲಾಗಿದೆ. ಗೀತ ಪಿ.ಕೋರಮಂಗಲ ಇವರ ‘ಮಲಯ ಸಮುದಾಯತ್ತಿಂಡೆ ನಾಡೋಡಿ ವಿಜ್ಞಾನಂ’ ಎಂಬ ಕೃತಿಯಲ್ಲಿ ಈ ವಿಷಯವು ಚರ್ಚಿಸಲ್ಪಟ್ಟಿದೆ. ‘ಫೋಕ್ಲೋರ್ ನಿಘಂಟು’ವಿನಲ್ಲೂ (ಎಂ.ವಿ.ವಿಷ್ಣ ನಂಬೂದರಿ) ಉಚ್ಚಬಲಿಯ ಬಗ್ಗೆ ಹೇಳಿದ್ದಾರೆ.

– ವಿ.ಎಂ.ಯು. ಅನುವಾದ ಎನ್.ಎಸ್.

ಉಟ್ಲ ಪಂಡುಗ ನೆಲವು ಒಡೆಯುವುದು ಎನ್ನುವ ತೆಲುಗುನಾಡಿನ ಹಬ್ಬ. ಜಾನಪದ ಹಬ್ಬಗಳಲ್ಲಿ ಒಂದು ಇದು ಕೇವಲ ದಕ್ಷಿಣ ಭಾರತದಲ್ಲೇ ಅಲ್ಲದೆ ಭಾರತಾದ್ಯಾಂತ ಇದ್ದಂತೆ ಕಂಡು ಬರುತ್ತದೆ. ಇದು ಕೃಷ್ಟಾಷ್ಟಮಿ ಹಬ್ಬವೇ. ಈ ದಿನ ನೆಲದು ಒಡೆಯುವುದು ಎನ್ನುವ ವಿನೋದವಿರುತ್ತದೆ. ಇದು ಒಳ್ಳೆಯ ಕ್ರೀಡೆ. ಎರಡೂ ಕಡೆ ಒಂದಕ್ಕೊಂದು ಅಭಿಮುಖವಾಗಿ ಸುಮಾಋಉ ೨೦ ಅಡಿಗಳಷ್ಟು ಎತ್ತರವಿರುವ ಕಂಬಗಳ ಮಧ್ಯೆ ಎರಡು ಕಂಬಗಳನ್ನು ನೆಟ್ಟು, ಮೇಲೆ ಅಡ್ಡವಾಗಿ ಮತ್ತೊಂದು ಮರದ ತುಂಡನ್ನು ಕಟ್ಟುತ್ತಾರೆ. ಇದರ ಮಧ್ಯೆ ಒಂದು ನೆಲವನ್ನು ಇಟ್ಟು ಚಿಕ್ಕ ಮಣ್ಣಿನ ಮಡಿಕೆಯನ್ನು ಕಟ್ಟುವರು. ಇದು ಇಲ್ಲಿ ಪವಿತ್ರವಾದ ವಸ್ತು. ಇದಕ್ಕೆ ಅರಿಸಿನ ಹಚ್ಚಿ ಅದರ ಮೇಲೆ ಕುಂಕುಮದ ಚುಕ್ಕೆಗಳನ್ನು ಇಟ್ಟು ಒಳಗೆ ಸ್ವಲ್ಪ ಅರಿಸಿನ ಕುಂಕುಮ ನೀರನ್ನು ಸುರದು ಹೂಗಳನ್ನು ಹಾಕುವರು. ಮಧ್ಯದಲ್ಲಿ ೧೦೧ ಅಥವಾ ೧೦೮ ರೂಪಾಯವನ್ನು ಹಾಕಿ, ಮೇಲಿರುವ ಅಡ್ಡ ಮರಕ್ಕೆ ಈ ನೆಲವನ್ನು ಒಂದು ಕೊಕ್ಕೆಯ ಸಹಾಯದಿಂದ ಕಟ್ಟುವರು. ಕೊಕ್ಕೆಯಿಂದ ಬಂದ ಹಗ್ಗವನ್ನು ಕೆಳಗಿರುವ ಯುವಕರು ಒಬ್ಬರಮೇಲೆ ಒಬ್ಬರು ನಿಂತು ಮೇಲಕ್ಕೆದ್ದ ನೆಲುವನ್ನು ಮುಟ್ಟಿಬರಬೇಕು ಇಲ್ಲವೆ ಒಡೆಯಬೇಕು. ಕೆಲವು ಯುವಕರು ಹೀಗೆ ಒಬ್ಬರ ಮೇಲೆ ಒಬ್ಬರು ಹತ್ತಿ ಹಿಡಿದುಕೊಳ್ಳಲು ಯತ್ನಿಸುತ್ತಾರೆ. ಅವರು ಹತ್ತದಂತೆ

ಮಾಡಲು ಮೂರು ಕಡೆಯಿಂದ ಅವರ ಮೇಲೆ ಕೆಲವು ಯುವಕರು ನೀರನ್ನು ಎರಚುವುದಿದೆ. ಇಂತಹ ಅಡ್ಡಿಗಳ ಮಧ್ಯೆ ಯಾರು ನೆಲವನ್ನು ಒಡೆದು ಹಣವನ್ನು ಪಡೆಯುತ್ತಾರೋ ಅವರು ವಿಜಯ ಪಡೆದಂತೆ. ಅವರಿಗೆ ಅಲ್ಲಿ ನೆರೆದಿರುವ ಹಿರಿಯರು ಹಾರ ಹಾಕಿ ಮತ್ತಷ್ಟು ಬಹುಮಾನಗಳನ್ನು ಕೊಡುವು ಉಂಟು. ಇದು ಕೃಷ್ಣ ಜನ್ಮಾಷ್ಟಮಿ ಉತ್ಸವದಲ್ಲಿ ಪ್ರಮುಖ ಕ್ರೀಡೆ. ನೆಲವನ್ನು ಒಡೆದವರಿಗಷ್ಟೇ ಅಲ್ಲ ನೋಡುಗರಿಗೂ ಒಳ್ಳೆಯ ಮನರಂಜನೆ. ನಮ್ಮ ಎಲ್ಲ ಹಬ್ಬಗಳಲ್ಲೂ ಆಧ್ಯಾತ್ಮಿಕತೆಯ ಜೊತೆಗೆ ಮನರಂಜನಾ ಸಂಕೇತವಾಗಿ ಇಂತಹ ಕ್ರೀಡೆಗಳಿರುತ್ತದೆ.

– ಪಿ.ಎಸ್.ಸಿ. ಅನುವಾದ ವಿ.ಆರ್.

ಉಟ್ಲಪರಿಷ ಅನಂತಪುರ ಜಿಲ್ಲೆಯಲ್ಲಿ ‘ಉಟ್ಲಪರಿಷೆ’ ಅನೇಕ ಪ್ರಾಂತ್ಯಗಳಲ್ಲಿ ನಡೆಯುತ್ತದೆ. ಇದು ಸ್ಥಾನಿಕ ಉತ್ಸವ ಅಥವಾ ಜಾತ್ರೆ. ಧಾರ್ಮಿಕ ಆಚರಣೆಗೆ ಸಂಬಂಧಿಸಿದ ಕಲಾಪ್ರಕಾರ.

ನುಣ್ಣನೆಯ ಮರದ ಕಂಬಕ್ಕೆ ಎಣ್ಣೆ ಸವರಿರುತ್ತಾರೆ. ಇದನ್ನು ಉಟ್ಲುಕಂಬ ಎಂದು ಕರೆಯುತ್ತಾರೆ. ನೋಡುಗರಿಗೆ ತಮಾಷೆಯಂತಿರುತ್ತದೆ. ಇದೊಂದು ದೇವರ ಸೇವೆಯೂ ಹೌದು, ಸ್ಪರ್ಧೆಯಂತೆಯೂ ನಡೆಯುವುದುಂಟು. ಅನಂತಪುರ ಜಿಲ್ಲೆಯಲ್ಲಿಯ ಅನೇಕ ಪ್ರಾಂತ್ಯಗಳಲ್ಲಿ ಈ ಪ್ರದರ್ಶನ ಜಾತ್ರೆ ಉತ್ಸವ, ಪರಿಷೆಗಳ ಸಂದರ್ಭದಲ್ಲಿ ನಡೆಯುತ್ತದೆ.

ಧರ್ಮವರದಲ್ಲಿ ದುರ್ಗಮ್ಮ ಜಾತ್ರೆಯ ಸಂದರ್ಭದಲ್ಲಿ ಉಟ್ಲಪರಿಷೆ ನಡೆಯುತ್ತದೆ. ಇದು ವೈಶಾಖ ಶುದ್ಧ ಚತುರ್ದಶಿಯ ದಿನ ಅಂದರೆ ಏಪ್ರಿಲ್, ಮೇ ತಿಂಗಳಲ್ಲಿ ನಡೆಯುತ್ತದೆ. ಅಂದಾಜು ೧೫ – ೨೦ ಗಜ ಉದ್ದವಾಗಿ ಇರುವ, ನುಣ್ಣಗೆ ಇರುವ ಕಂಬವನ್ನು, ಭೂಮಿಯಲ್ಲಿ ಹೂತಿಡಲಾಗುತ್ತದೆ. ಆ ಕಂಬಕ್ಕೆ ಎಣ್ಣೇ, ಗ್ರೀಸ್ ಮೊದಲಾದ ಜಿಡ್ಡು ಪದಾರ್ಥಗಳನ್ನು ಹಚ್ಚಿರುತ್ತಾರೆ. ಕೆಲವು ಯುವಕರು ಆ ಕಂಬದ ತುದಿಯವರೆಗೆ ಹತ್ತಲು ಪ್ರಯತ್ನಿಸಿ, ಕಂಬದ ಮೇಲ್ಭಾಗದಲ್ಲಿ ಕಟ್ಟಿರುವ ಬಹುಮಾನವನ್ನು ತೆಗೆದುಕೊಳ್ಳಲು ಉತ್ಸಾಹವನ್ನು ಪ್ರದರ್ಶಿಸುತ್ತಾರೆ. ಆದರೆ ಕಂಬದ ಮೇಲ್ಬಾಗದಿಂದ ಜಿಡ್ಡು ಪದಾರ್ಥಗಳನ್ನು ಸುರಿಯುತ್ತಿರುತ್ತಾರೆ. ಹತ್ತಲು ಪ್ರಯತ್ನಿಸುವವರು ಜಾರಿ ಬೀಳುವುದು, ಮತ್ತೆ ಮತ್ತೆ ಪ್ರಯತ್ನಿಸುವುದು, ಕೊನೆಗೆ ಯಾರಾದರೊಬ್ಬರು ಪ್ರಯತ್ನಿಸಿ ಮೇಲೆ ಹತ್ತುವುದು ನೋಡುಗರಿಗೆ ವಿನೋದವನ್ನುಂಟು ಮಾಡುತ್ತದೆ.

ಉಟ್ಲಪರಿಷೆ ಸಂದರ್ಭದಲ್ಲಿ ಸಣ್ಣ ಸಣ್ಣ ಅಂಗಡಿಗಳನ್ನು ಅಲ್ಲಿ ತೆರೆಯುತ್ತಾರೆ. ಅರಿಸಿನ – ಕುಂಕುಮ, ಬಳೆ, ಕನ್ನಡಿ, ಬಾಚಣಿಗೆ, ತೆಂಗಿನಕಾಯಿ ಹೂ, ಹಣ್ಣು ಸಿಗುತ್ತವೆ. ಹುಲಿವೇಷ ಮೊದಲಾದ ವಿನೋದ ಕಾರ್ಯಕ್ರಮಗಳು ಸಹಾ ನಡೆಯುತ್ತವೆ.

ಅನಂತಪುರ ಜಿಲ್ಲೆಯ ಪಾಮಿಡಿ ಎಂಬ ಗ್ರಾಮದಲ್ಲಿ ‘ಉಟ್ಲುಕಂಬ ಪರಿಷೆ’ ನಡೆಯುತ್ತದೆ. ಇದು ಆಷಾಢಶುದ್ಧ ಏಕಾದಶಿಯಂದು ಮೊದಲುಗೊಂಡು ಪೌರ್ಣಮಿಯವರೆಗೆ ಐದು ದಿನಗಳು (ಜೂನ್ – ಜುಲೈ) ನಡೆಯುತ್ತದೆ. ಪೌರ್ಣಮಿಯಂದು ಸ್ಥಳೀಯ ದೇವರಾದ ಲಕ್ಷಮೀ ನಾರಾಯಣಸ್ವಾಮೀ ಉತ್ಸವ ನಡೆಯುತ್ತದೆ.

– ಜಿ.ಎಸ್.ಎಂ. ಅನುವಾದ ಎಸ್.ಎಲ್.ಡಿ.