ಈ ಕೋಶದ ಮಿತಿಯಲ್ಲಿ ದಕ್ಷಿಣ ಭಾರತೀಯ ಜಾನಪದದ ಎಲ್ಲಾ ವಿಷಯಗಳನ್ನೂ ಸೇರಿಸಲು ಸಾಧ್ಯವಿಲ್ಲ. ಆದರೂ ಹೋಲಿಸಬಹುದಾದ ಹಲವು ವಿಷಯಗಳು ಇದರಲ್ಲಿ ಸೇರಿವೆ. ಮುಖ್ಯ ಶೀರ್ಷಿಕೆಗಳಲ್ಲಿ ಅಥವಾ ಉಪಶೀರ್ಷಿಕೆಗಳಲ್ಲಿ ಬಂದಿರುವ ಅಂಥ ಹೋಲಿಸತಕ್ಕ ವಿಷಯಗಳ ಪಟ್ಟಿ ಇದು. ಒಂದು ಭಾಷೆಯ ಜಾನಪದಕ್ಕೆ ಸೇರಿದ ವಿಷಯವನ್ನು ತಿಳಿದುಕೊಳ್ಳುವಾಗ ಬೇರೆ ಭಾಷೆಯ ಸಮಾನಾಂಶಗಳನ್ನು ಗುರುತಿಸಲು ಈ ಪಟ್ಟಿ ನೆರವಾಗುತ್ತದೆ. ಈ ಪಟ್ಟಿಯಲ್ಲಿ ಇಲ್ಲದಿದ್ದರೂ ಬೇರೆ ಭಾಷೆಗಳಲ್ಲಿ ಸಮಾನಾಂಶಗಳು ಇರಬಹುದೆಂಬುದನ್ನು ಗಮನಿಸಬೇಕಾಗಿದೆ.

ಕನ್ನಡ ತಮಿಳು ತೆಲುಗು ಮಲಯಾಳಂ
ಅಡವಿ ಚೆಂಚರು ಚೆಂಚರು
ಇರುಳರು ಇರುಳರ್ ಇರುಳರ್
ಉರುಮೆ ದೇವರಾಟ್ಟಂ ಉರುಮುಲು
ಎಲ್ಲಮ್ಮ ಎಲ್ಲಮ್ಮ
ಏತದ ಹಾಡು ಏಟ್ರಪ್ಪಾಟ್ಟು
ಕಂಬಳ ಕಂಬಳ
ಕರಗ ಕರಗಾಟ್ಟಂ ಗರಗಲು
ಕಾಟಮರಾಯ ಕಾಟಮರಾಜು
ಕಾವಡಿಹಬ್ಬ ಕಾವಡಿಯಾಟ್ಟಂ
ಕೀಲುಕುದುರೆ ಪೊಯ್‌ಕಾಲ್‌ ಕುದಿರೈಯಾಟ್ಟಂ ಕೀಲುಗುರ್ರ‍ಂ
ಕೇಳಿಕೆ ಕೇಳಿಕ
ಕೊಂಡಮಾಮ ಎರುಕಲು
ಕೊಂಬುಕಹಳೆ ಕೊಮ್ಮುಲವಾರು
ಕೊರಚರು ಕುರವರ್ ಎರುಕಲು ಕುರಚ್ಯರ್
ಕೊರವಂಜಿ ಕುರವನ್- ಕುರತ್ತಿ ಆಟ್ಟಮ್ ಕೊರವಂಜಿ
ಕೋಲಾಟ ಕೋಲಾಟ್ಟಮ್ ಕೋಲಾಟಂ
ಗಾರುಡಿಗೊಂಬೆ ಬೊಮ್ಮೈನಡನಮ್ ಗಾರುಡಿಬೊಮ್ಮ
ಗಾಳಿಪಟ ಗಾಲಿಪಟಂ
ಗೊಂಡರು ಗೊಂಡರ್ ಗೋಂಡು
ಗೊಂದಲಿಗರು ಗೋಂಧೋಳಿ
ಚೌಡಿಕೆ ಜಮಿಡಿಕ
ಚೌಡಿಕೆಯವರು ಬೈಂಡ್ಲವಾರು
ಜಾತ್ರೆ ಜಾತರ
ಡೊಳ್ಳುಕುಣಿತ ಪೆರಿಯಮೇಳಂ
ತಮಟೆ ಡಪ್ಪು
ತೊಗಲುಗೊಂಬೆಯಾಟ ತೋಲ್‌ಪಾವೈಕೂತ್ತು ತೋಲುಬೊಮ್ಮಲಾಟ ತೋಲ್‌ಪಾವೈಕೂತ್ತು
ದಸರ ಕುಳಶೇಖರ ಪಟ್ಟಣದ ದಸರಾ ದಸರಾ
ದೀಪಾವಳಿ ದೀಪಾವಳಿ
ದೊಂಬರು ದೊಂಬರ್ ದೊಮ್ಮರಿ
ದೃಷ್ಟಿ ದೃಷ್ಟಿ ಕಣ್ಣೇರ್/ನೂಕುಕುತ್ತಿ
ನಾಗಾರಾಧನೆ ತಿರಿಯುಳಿಚ್ಚಿಲ್ ನಾಗಾರಾಧನ ತಿರಿಯುಳಿಚ್ಚಿಲ್
ಪುರಾಣ ಪುರಾಗಾಥ/ಪುರಾಣಂ ಪುರಾವೃತ್ತಂಗಳ್
ಪಂಬೈ ಪಂಬ
ಬಂಡಿಹಾಡು ವಂಡಿಕ್ಕಾರನ್ ಪಾಟ್ಟು
ಬಯಲಾಟ ಬಯಲಾಟ
ಬಾಲೆಸಾಂತು ಬಾಲಸಂತುಲು
ಬುಡುಬುಡಿಕೆ ಉಡುಕ್ಕು ಬುಡುಬುಡಕ
ಬುರ್ರ‍ ಕಥೆ ಬುರ್ರ‍ ಕಥ
ಮರಗಾಲು ಮರಪ್ಪಾವೈ ಕೊಯ್ಯಕಾಳ್ಳು
ಮಾಟ ಒಡಿ
ಮೋಡಿ ಮೋಡಿಯಾಟ್ಟಂ ಮೋಡಿ    
ಯಕ್ಷಗಾನ ತೆರುಕ್ಕೂತ್ತು ಯಕ್ಷಗಾನಂ  
ಯಾನಾದಿಗಳು ಯಾನಾದಿ
ಯುಗಾದಿ ಉಗಾದಿ
ರಂಗೋಲಿ ಕೋಲಮ್ ಮುಗ್ಗು ಕಳಂ
ಲಂಬಾಣಿ ಸುಗಾಲಿ
ಲಾಲಿ/ಜೋಗುಳ ತಾಲಾಟ್ಟು ಪಾಟ್ಟು ಲಾಲಿ- ಜೋಲ
ವೀರಭದ್ರ ಕುಣಿತ ವೀರನಾಟ್ಯಂ
ಸಾವಿನ ಹಾಡುಗಳು ಒಪ್ಪಾರಿ ಪಾಡಲ್
ಸುಡುಗಾಡು ಸಿದ್ಧರು ಕಾಟಿಪಾಪಲು
ಹಕ್ಕಿಪಿಕ್ಕಿ ಶಿಕಾರಿ/ನಕ್ಕಲವಾರು
ಹಗಲುವೇಷ ಪಗಲ್‌ವೇಡಂ ಪಗಟಿವೇಷಂ
ಹಚ್ಚೆ ಪಚ್ಚಪೊಡುಪು ಪಚ್ಚಕುತ್ತ್
ಹುತ್ತರಿ ಕೇರಳದ ಹುತ್ತರಿ
ಹುಲಿವೇಷ ಪುಲಿವೇಡಂ ಪುಲಿವೇಷಂ ಪುಲಿಕ್ಕಳಿ
ಹೆಳವರು ಪುಚ್ಚುಕುಂಟ್ಲು
ಹೋಳಿ ಮನ್ಮಥನ್ ಕೋಯಿಲ್ ವಳಿಪಾಡು ಕಾಮುನಿಪುನ್ನಮ