ತಾತಯ್ಯನವರ ಜೀವಮಾನದ ಮುಖ್ಯ ಘಟನೆಗಳು

೧೮೪೪ ಮಗ್ಗೆಯಲ್ಲಿ ಜನನ.
೧೮೫೪  ತಂದೆಯವರ ಮರಣ.
೧೮೫೪-೬೭ ಮೈಸೂರು ನಗರಕ್ಕೆ ಬಂದುದು. ಮೈಸೂರಿನಲ್ಲಿ ವಿದ್ಯಾಭ್ಯಾಸ. ಮೆಟ್ರಿಕ್ಯುಲೇಶನ್‌ ಪರೀಕ್ಷೆ ತೇರ್ಗಡೆ.
೧೮೬೮ ಮುಮ್ಮಡಿ ಕೃಷ್ಣರಾಜ ಒಡೆಯರ ನಿಧನ. ಸಿ. ರಂಗಾಚಾರ್ಲು ಅರಮನೆ ಕಂಟ್ರೋಲರಾಗಿ ನೇಮಕವಾದುದು.
೧೮೭೫ ರಂಗಾಚಾರ್ಲುರೊಡನೆ ವೆಂಕಟಕೃಷ್ಣಯ್ಯನವರ ಪ್ರಥಮ ಭೇಟಿ.
೧೮೭೬ ಮರಿಮಲ್ಲಪ್ಪ ಸ್ಕೂಲಿನಲ್ಲಿ ದ್ವಿತೀಯ ಉಪಾಧ್ಯಾಯರಾಗಿ ಸೇರಿದ್ದು.
೧೮೭೮ ಇದೇ ಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ನೇಮಕವಾದುದು.
೧೮೮೧ ಮೈಸೂರು ರೆಂಡಿಷನ್‌ (ಬ್ರಿಟಿಷ್‌ ಸರ್ಕಾರ ಶ್ರೀ ಚಾಮರಾಜ ಒಡೆಯರಿಗೆ ಅಧಿಕಾರ ಹಿಂತಿರುಗಿ ಕೊಟ್ಟುದು).
ರಂಗಾಚಾರ್ಲು ಪ್ರಥಮ ದಿವಾನರಾಗಿ ನೇಮಕವಾದುದು. ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸ್ಥಾಪನೆ.
೧೮೮೩ ರಂಗಾಚಾರ್ಲುರ ಮರಣ. ಕೆ. ಶೇಷಾದ್ರಿ ಅಯ್ಯರ್ ದಿವಾನರಾಗಿ ನೇಮಕವಾದುದು.
ಎಂ.ಎಸ್‌. ಪುಟ್ಟಣ್ಣನವರು “ಹಿತಬೋಧಿನಿ” ಎಂಬ ಪತ್ರಿಕೆಯನ್ನು ಸ್ಥಾಪಿಸಿದುದು.
೧೮೮೪ ವೆಂಕಟಕೃಷ್ಣಯ್ಯನವರು “ಹಿತಬೋಧಿನಿ”ಯನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡು, ಸಂಪಾದಕರಾದುದು.
೧೮೮೫ ಸ್ಟ್ಯಾಂಡಿಂಗ್‌ ಕಮಿಟಿ ಸ್ಥಾಪಿಸಬೇಕೆಂದು ವೆಂಕಟಕೃಷ್ಣಯ್ಯನವರು ಮತ್ತು ಇತರರು ದಿವಾನ್‌ ಶೇಷಾದ್ರಿ ಅಯ್ಯರ್ ರನ್ನು ಪ್ರಾರ್ಥಿಸಿದುದು.
೧೮೯೦ ಸ್ಟ್ಯಾಂಡಿಂಗ್‌ ಕಮಿಟಿ ಆರಂಭವಾದುದು. “ವಿದ್ಯಾದಾಯಿನಿ” ಬಂದ ಮೇಲೆ, “ಹಿತಬೋಧಿನಿ” ನಿಲ್ಲಿಸಿದುದು. ವೆಂಕಟಕೃಷ್ಣಯ್ಯನವರು “ವೃತ್ತಾಂತ ಚಿಂತಾಮಣಿ” ಎಂಬ ಕನ್ನಡ ವಾರಪತ್ರಿಕೆಯನ್ನೂ, “ಮೈಸೂರು ಹೆರಾಲ್ಡ್‌” ಎಂಬ ಇಂಗ್ಲಿಷ್‌ ವಾರಪತ್ರಿಕೆಯನ್ನೂ ಸ್ಥಾಪಿಸಿದುದು.
೧೮೯೧ “ಮೈಸೂರು ಮೈಸೂರಿನವರಿಗೆ” (ಮೈಸೂರ್ ಫಾರ್ ಮೈಸೂರಿಯನ್ಸ್‌) ಎಂಬ ಹೋರಾಟದ ಆರಂಭ.
೧೮೯೨ ಸ್ಟ್ಯಾಂಡಿಂಗ್‌ ಕಮಿಟಿಯ ಕಾರ್ಯದರ್ಶಿಯಾಗಿ ವೆಂಕಟಕೃಷ್ಣಯ್ಯನವರು ಚುನಾಯಿತರಾದುದು.
೧೮೯೨-೯೫ ಸ್ಟ್ಯಾಂಡಿಂಗ್‌ ಕಮಿಟಿಗಾಗಿ ಹೋರಾಟ.
೧೮೯೪ ಶ್ರೀ ಚಾಮರಾಜ ಒಡೆಯರ ಮರಣ.
೧೮೯೪-೯೫ ರೀಜೆಂಠ್‌ ಪದವಿಗಾಗಿ ಹೋರಾಟ
೧೮೯೫ ಶ್ರೀಮನ್‌ ಮಹಾರಾಣಿ ವಾಣಿವಿಲಾಸ ಸನ್ನಿಧಾನದವರು ರೀಜೆಂಟರಾಗಿ ನೇಮಕವಾದುದು.
೧೮೯೭ ಶ್ರೀ ಜಯಲಕ್ಷಮ್ಮಣ್ಣಿಯವರ ವಿವಾಹ. ಈ ವಿವಾಹ ಸಮಯದಲ್ಲಿ ಹಳೇ ಅರಮನೆಗೆ ಬೆಂಕಿ ಬಿತ್ತು.
೧೮೯೭-೯೮ ದಿವಾನ್‌ ಶೇಷಾದ್ರಿ ಅಯ್ಯರ್ರಿಗೆ ಅನಾರೋಗ್ಯ.
೧೮೯೮ ಟಿ.ಆರ್.ಎ. ತಂಬೂಚೆಟ್ಟ ಆಕ್ಟಿಂಗ್‌ ದಿವಾನರಾದುದು. ಸಂಸ್ಥಾನಕ್ಕೆ ಮೊದಲನೇ ಪ್ಲೇಗ್‌ ಪ್ರವೇಶ.
೧೮೯೯ ವೆಂಕಟಕೃಷ್ಣಯ್ಯನವರು ‘ಸಾಧ್ವಿ” ಕನ್ನಡ ವಾರಪತ್ರಿಕೆ ಸ್ಥಾಪಿಸಿದುದು. ದಿವಾನ್‌ ಶೇಷಾದ್ರಿ ಅಯ್ಯರ್ ರಿಗೆ ಪುನಃ ಅಸ್ವಸ್ಥತೆ.
೧೯೦೦ ದಿವಾನ್‌ ಶೇಷಾದ್ರಿ ಅಯ್ಯರ್ ರಜ ಪಡೆದುದು. ಶೇಷಾದ್ರಿ ಅಯ್ಯರ್ ದಿವಾಣ್‌ ಪದವಿಯಿಂದ ನಿವೃತ್ತರಾದುದು.
೧೯೦೧ ಶೇಷಾದ್ರಿ ಅಯ್ಯರ್ ರ ಮರಣ. ಪಿ.ಎನ್‌. ಕೃಷ್ಣಮೂರ್ತಿ ದಿವಾನರಾದುದು.
೧೯೦೨ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರಿಗೆ ರಾಜ್ಯಾಧಿಕಾರ ಬಂದುದು.
೧೯೦೪ ದಿವಾನ್‌ ಕೃಷ್ಣಮೂರ್ತಿಗಳು ಶ್ರೀ ಶ್ರೀನಿವಾಸ ಅಯ್ಯಂಗಾರ್ಯರನ್ನು ಪ್ರಜಾಪ್ರತಿ ನಿಧಿ ಸಭೆಯಿಂದ ಹೊರಗೆ ಹಾಕಿದುದು.
೧೯೦೫ ಬಂಗಾಳವನ್ನು ಬ್ರಿಟಿಷ್‌ ಸರ್ಕಾರ ಎರಡು ಭಾಗ ಮಾಡಿದುದು.
೧೯೦೫-೦೮ ಬಿರುಗಾಳಿಯಂತಹ ರಾಜಕೀಯ ಚಳುವಳಿ, ವಂದೇ ಮಾತರಂ ಎಂಬ ಹೆಸರಿನದು.
೧೯೦೬ ದಿವಾನ್‌ ಕೃಷ್ಣಮೂರ್ತಿಯವರು ನಿವೃತ್ತರಾದುದು. ವಿ.ಪಿ. ಮಾಧವರಾಯರು ದಿವಾನರಾದುದು.
೧೯೦೮ ಮೈಸೂರಲ್ಲಿ ಪತ್ರಿಕಾ ಕಾನೂನು ಜಾರಿಗೆ ಬಂದುದು. ವೆಂಕಟಕೃಷ್ಣಯ್ಯನವರು ಪತ್ರಿಕಾ ಕಾನೂನಿನ ಪ್ರತಿಭಟನೆಗಾಗಿ ತಮ್ಮ ಪತ್ರಿಕೆಗಳನ್ನು ನಿಲ್ಲಿಸಿದುದು. ಬೆಂಗಳೂರಿನಲ್ಲಿಯೂ ‘ಮೈಸೂರು ಸ್ಟಾಂಡರ್ಡ್’ ಮತ್ತು ‘ನಡೆಗನ್ನಡಿ’ ಪತ್ರಿಕೆಗಳನ್ನು ನಿಲ್ಲಿಸಿದುದು. ಮೈಸೂರು ನ್ಯಾಯವಿಧಾಯಕ ಸಭೆಯ ಸ್ಥಾಪನೆ. ವೆಮಕಟಕೃಷ್ಣಯ್ಯನವರು ನ್ಯಾಯವಿಧಾಯಕ ಸಭೆಗೆ ಪ್ರಜಾಪ್ರತಿನಿಧಿ ಸಭೆಯಿಂದ ಸರ್ವಾನುಮತವಾಗಿ ಚುನಾಯಿತರಾದದ್ದನ್ನು ದಿವಾನ್‌ ಮಾಧವರಾಯರು ರದ್ದುಪಡಿಸಿದುದು. ತಿಲಕರನ್ನು ಮಾಂಡಲೆಗೆ ೬ ವರ್ಷಕಾಲ ಗಡೀಪಾರು ಮಾಡಿದುದು.
೧೯೦೯ ದಿವಾನ್‌ ಮಾಧವರಾಯರು ದಿವಾನ್‌ ಪದವಿಯಿಂದ ನಿವೃತ್ತರಾದುದು.ಟಿ. ಆನಂದರಾಯರು ದಿವಾನರಾದುದು. ವೆಂಕಟಕೃಷ್ಣಯ್ಯನವರು ತಮ್ಮ ಪತ್ರಿಕೆಗಳಾದ ‘ಸಾಧ್ವಿ’ ಕನ್ನಡ ವಾರಪತ್ರಿಕೆ ಹಾಗೂ “ಮೈಸೂರು ಪೇಟ್ರಿಯಟ್‌” ಇಂಗ್ಲಿಷ್‌ ವಾರಪತ್ರಿಕೆಗಳನ್ನು ಪುನಃ ಆರಂಭಿಸಿದುದು.
೧೯೧೧ ದಿವಾನ್‌ ಆನಂದರಾಯರು ಬೆಂಗಳೂರು ಶಂಕರ ಮಠದಲ್ಲಿ ವಿ.ಪಿ. ಮಾಧವರಾಯರ ಅಧ್ಯಕ್ಷತೆಯಲ್ಲಿ ನಡೆಯಬೇಕಾಗಿದ್ದ ರೈಟ್‌ ಆನರಬಲ್‌ ವಿ.ಎಸ್‌. ಶ್ರೀನಿವಾಸ ಶಾಸ್ತ್ರಿಗಳವರ ಭಾಷಣವನ್ನು ಪ್ರತಿಬಂಧಿಸಿದ್ದು.ವಿಶ್ವೇಶ್ವರಯ್ಯನವರು ಮೈಸೂರಿಗೆ ಚೀಫ್‌ ಇಂಜನೀಯರಾಗಿ ಬಂದುದು. ಮೈಸೂರು ಸಿವಿಲ್‌ ಸರ್ವಿಸ್‌ ಪರೀಕ್ಷೆಯನ್ನು ಮೈಸೂರಿನವರಿಗೆ ಮಾತ್ರ ನಿಯಮಿತ ಮಾಡಿದುದು.
೧೯೧೨ ಆನಂದರಾಯರು ದಿವಾನ್‌ ಪದವಿಯಿಂದ ನಿವೃತ್ತರಾದುದು. ವಿಶ್ವೇಶ್ವರಯ್ಯನವರು  ದಿವಾನರಾದುದು.ವೆಂಕಟಕೃಷ್ಣಯ್ಯನವರು “ವೆಲ್ತ್ ಆಫ್‌ ಮೈಸೂರ್” ಎಂಬ ಇಂಗ್ಲಿಷ್‌ ದಿನಪತ್ರಿಕೆಯನ್ನು ಮತ್ತು “ಸಂಪದಭ್ಯುದಯ” ಎಂಬ ಕನ್ನಡ ದಿನಪತ್ರಿಕೆಯನ್ನು ಸ್ಥಾಪಿಸಿದುದು. ‘ವಿದ್ಯಾರ್ಥಿಕರಭೂಷಣ’ ಮುಂತಾದ ಗ್ರಂಥಗಳನ್ನು ಬರೆಯಲು ಆರಂಭಿಸಿದುದು.
೧೯೧೬ ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆ.
೧೯೧೮ ಬ್ರಾಹ್ಮಣೇತರ ಚಳುವಳಿ ಆರಂಭ. ವೆಂಕಟಕೃಷ್ಣಯ್ಯನವರು ಮರಿಮಲ್ಲಪ್ಪ ಹೈಸ್ಕೂಲ್‌ ಮುಖ್ಯೋಪಾಧ್ಯಾಯ ಪದವಿಯಿಂದ ನಿವೃತ್ತರಾದುದು.
೧೯೧೯ ಜನವರಿ ತಿಂಗಳಿಂದ ವಿಶ್ವೇಶ್ವರಯ್ಯನವರು ನಿವೃತ್ತರಾದುದು. ಎಂ. ಕಾಂತರಾಜೇ ಅರಸ್‌ ದಿವಾನರಾದುದು. ಪಂಜಾಬಿನ ದುರಂತ, ಜಲಿಯನ್‌ ವಾಲಾಬಾಗ್‌ ಕೊಲೆ.
೧೯೨೦ ಗಾಂಧೀಜಿ ಅಸಹಕಾರ ಸಂಗ್ರಾಮ ಆರಂಭಿಸಿದುದು.
೧೯೨೧ ಮೈಸೂರಿನಲ್ಲಿ ಮಿಲ್ಲರ್ ಕಮಿಟಿ ಆರ್ಡರ್ ಜಾರಿಗೆ ಬಂದುದು.
೧೯೨೨ ಬೆಂಗಳೂರಿನಲ್ಲಿ ನ್ಯಾಷನಲ್‌ ಕಾಂಗ್ರೆಸ್‌ ಕಮಿಟಿ ಸ್ಥಾಪನೆ. ದಾವಣಗೆರೆಯಲ್ಲಿ ವೆಂಕಟಕೃಷ್ಣಯ್ಯನವರ ಅಧ್ಯಕ್ಷತೆಯಲ್ಲಿ ಕರ್ಣಾಟಕ ಸಾಹಿತ್ಯ ಸಮ್ಮೇಳನ ನಡೆದುದು.
೧೯೨೩ ಕಾಂತರಾಜ್‌ ಅರಸರು ದಿವಾನ್‌ ಪದವಿಯಿಂದ ನಿವೃತ್ತರಾದುದು. ಎ.ಆರ್. ಬ್ಯಾನರ್ಜಿ ದಿವಾನರಾದುದು.ಡಾ. ಬ್ರಜೇಂದ್ರನಾಥ್‌ ಸೀಲ್‌ರವರು ಸೂಚಿಸಿದ ರಾಜಕೀಯ ಸುಧಾರಣೆಗಳನ್ನು ಮೈಸೂರಿನಲ್ಲಿ ಜಾರಿಗೆ ತಂದುದು.
೧೯೨೬ ಬ್ಯಾನರ್ಜಿ ದಿವಾನ್‌ ಪದವಿಯಿಂದ ನಿವೃತ್ತರಾದುದು. ಮಿರ್ಜಾ ಇಸ್ಮಾಯಿಲರು ದಿವಾನರಾದುದು.
೧೯೨೭ ನಾಲ್ವಡಿ ಶ್ರೀ ಕೃಷ್ನರಾಜ ಒಡೆಯರ ಆಳ್ವಿಕೆಯ ರಜತೋತ್ಸವ. ಗಾಂಧೀಜಿ ವಿಶ್ರಾಂತಿಗಾಗಿ ನಂದಿಬೆಟ್ಟದಲ್ಲಿ ವಾಸಮಾಡಿದುದು. ಗಾಂಧೀಜಿ ಮೈಸೂರಿಗೆ ಆಗಮಿಸಿದುದು. ಇದೇ ಕಾಲದಲ್ಲಿ ವೆಂಕಟಕೃಷ್ಣಯ್ಯನವರು ಗಾಂಧೀಜಿಯನ್ನು ಭೇಟಿ ಮಾಡಿ, ಸಂಭಾಷಣೆ ನಡೆಸಿದುದು.
೧೯೨೮ ಬೆಂಗಳೂರಿನಲ್ಲಿ ಸುಲ್ತಾನ್‌ಪೇಟೆ ಗಣೇಶನ ಸಂಬಂಧವಾಗಿ ಗಲಾಟೆ. ಮೈಸೂರು ನಗರದಲ್ಲಿ ವೆಂಕಟಕೃಷ್ಣಯ್ಯನವರ ಸ್ವಾಗತಸಮಿತಿಯ ಅಧ್ಯಕ್ಷತೆಯಲ್ಲಿ ಸಂಸ್ಥಾನದ ಮೊದಲನೇ ಕಾಂಗ್ರೆಸ್‌ ಅಧಿವೇಶನ. ನಿವೃತ್ತ ದಿವಾನ್‌ ಎಂ. ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯಲ್ಲಿ ಗಣೇಶನ ಗಲಾಟೆ ಸಂಬಂಧವಾಗಿ ವಿಚಾರಣೆ ನಡೆಸಲು ಸಮಿತಿ ನೇಮಕ ಮತ್ತು ಸಮಿತಿಯ ವರದಿ.
೧೯೨೯ ವೆಂಕಟಕೃಷ್ಣಯ್ಯನವರ ಪತ್ರಿಕೆಗಳನ್ನೆಲ್ಲಾ ಸರ್ಕಾರ ನಿಲ್ಲಿಸಿದುದು. ವೆಂಕಟಕೃಷ್ಣಯ್ಯನವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಮೈಸೂರು ಕಾಂಗ್ರೆಸ್‌ ದ್ವಿತೀಯ ಅಧಿವೇಶನ.
೧೯೩೨ ಬೆಂಗಳೂರಿನಲ್ಲಿ ಡಿ.ವಿ. ಗುಂಡಪ್ಪನವರ ಅಧ್ಯಕ್ಷತೆಯಲ್ಲಿ ಪತ್ರಿಕೋದ್ಯೋಗಿಗಳ ಸಂಘದ ಸ್ಥಾಪನೆ. ವೆಂಕಟಕೃಷ್ಣಯ್ಯನವರನ್ನು ಈ ಸಂಸ್ಥೆ ಗೌರವಿಸಿದ್ದು. ನಿವೃತ್ತ ದಿವಾನ್‌ ವಿ.ಪಿ. ಮಾಧವರಾಯರ ಅಧ್ಯಕ್ಷತೆಯಲ್ಲಿ, ಬೆಂಗಳೂರು ಸಾರ್ವಜನಿಕ ಸಮಾರಂಭದಲ್ಲಿ, ವೆಂಕಟಕೃಷ್ಣಯ್ಯನವರ ಭಾವಚಿತ್ರದ ಅನಾವರಣ.
೧೯೩೩ ಮೈಸೂರಿನಲ್ಲಿ ವೆಂಕಟಕೃಷ್ಣಯ್ಯನವರಿಗೆ ಮಹಾಜನರ ಗೌರವ. ವೆಂಕಟಕೃಷ್ಣಯ್ಯನವರ ಅಸ್ವಸ್ಥತೆ; ನವೆಂಬರ್ ೮ ರಲ್ಲಿ ಅವರು ದಿವಂಗತರಾದುದು.

 

ವೆಂಕಟಕೃಷ್ಣಯ್ಯನವರ ಕುಟುಂಬದ ಮುಖ್ಯ ಘಟನೆಗಳು

೧೮೮೨ ಮೊದಲನೇ ಹೆಂಡತಿ ಸಾವಿತ್ರಮ್ಮನವರ ನಿಧನ. ಪುಟ್ಟಲಕ್ಷಮ್ಮನವರೊಡನೆ ವಿವಾಹ.
೧೮೯೬ ಅಳಿಯ ದಕ್ಷಿಣಾಮೂರ್ತಿಯವರ ಅಕಾಲ ಮರಣ.
೧೮೯೮ ಪುಟ್ಟಲಕ್ಷಮ್ಮ ಮೃತರಾದುದು.
೧೯೦೨ ಮಗಳು ಭಾಗೀರಥಮ್ಮ ವಿಧಿವಶಳಾದುದು.
೧೯೦೭ ಮಗಳ ಮಕ್ಕಳು, ರಾಮ ಮತ್ತು ಲಕ್ಷ್ಮಣ, ಮೃತರಾದುದು. ಕಿರಿಯ ಮಗ ವೆಂಕಟರಾಮು ಮೃತರಾದುದು.
೧೯೧೮ ಇವರ ಮಗ ಅಮಲ್ದಾರ್ ನಾರಾಯಣರಾವ್‌ ಆಕಸ್ಮಿಕದಿಂದ ಮೃತರಾದುದು.