ಬೆಳಗಾವಿ ಜಿಲ್ಲೆಯ ಭಾಷಾ ಪರಿಸರವನ್ನು ಭೌಗೋಳಿಕವಾಗಿ ಹಾಗೂ ಸಾಮಾಜಿಕವಾಗಿ ಗಮನಿಸಿದಾಗ ಇದೊಂದು ಬಹುಭಾಷಾ ಪರಿಸರ ಎಂಬುದು ಸ್ಪಷ್ಟವಾಗಿದೆ ಇರದು. ಬೆಳಗಾವಿ ಜಿಲ್ಲೆಯ ಮೇರೆಗಳನ್ನು ಗಮನಿಸಿದಾಗ ಪೂರ್ವ, ಪಶ್ಚಿಮ ಗಡಿಯುದ್ದಕ್ಕೂ ಕೊಂಕಣಿ ಹಾಗೂ ಮರಾಠಿ ಭಾಷೆಗಳ ಪ್ರಭಾವ ತೀರಾ ಹೆಚ್ಚಾಗಿದ್ದು, ಈ ಪ್ರದೇಶಗಳಲ್ಲಿ ದ್ವಿಭಾಷಿಕತೆ ಅನಿವಾರ್ಯವಾಗಿ ಪರಿಣಮಿಸಿದೆ. ಅಲ್ಲದೆ ಜಿಲ್ಲೆಯ ವ್ಯಾಪ್ತಿಯಲ್ಲಿ ಉರ್ದು ಭಾಷಿಕರು ಹೆಚ್ಚಾಗಿದ್ದುಲ ಎಲ್ಲೆಲ್ಲು ಬಹುಭಾಷಾ ಪರಿಸರ ಗೋಚರಿಸುವುದು ಸಾಮಾನ್ಯವಾಗಿದೆ. ನಗರ ಪ್ರದೇಶಗಳಲ್ಲಿ ಬಹುಭಾಷಾ ಪರಿಸರ ಕಂಡು ಬಂದರೆ ಗ್ರಾಮೀಣ ಪ್ರದೇಶಗಳಲ್ಲಿ ದ್ವಿಭಾಷಾ ಪರಿಸರ ಎದ್ದು ಕಾಣುತ್ತದೆ. ಜಿಲ್ಲೆಯ ಪೂರ್ವ ದಕ್ಷಿಣ ಪ್ರದೇಶಗಳಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಏಕಭಾಷಿಕತೆಯನ್ನು ಕಾಣಬಹುದು. ದಲಿತರಲ್ಲಿಯೂ ಈ ಎಲ್ಲ ಭಾಷಿಕ ಪರಿಸರಗಳೂ ಉಂಟು.

ಸಾಮಾಜಿಕವಾಗಿ ಭಾಷಾ ಪರಿಸರನ್ನು ಗಮನಿಸಿದಾಗ ಆಯಾ ಪ್ರದೇಶಗಳಲ್ಲಿ ಇತರ ಭಾಷೆಗಳ ಪ್ರಭಾವ ಎಲ್ಲ ಸಾಮಾಜಿಕ ವರ್ಗಗಳಲ್ಲೂ ಕಂಡುಬರುತ್ತದೆ. ಅದು ದಲಿತ ವರ್ಗದಲ್ಲೂ ಸಹಜವಾಗಿದೆ. ಈ ಪರಿಸರದ ಭಾಷಾಬಳಕೆಯಲ್ಲಿ ಇತರ ಭಾಷೆಗಳ ಪ್ರಭಾವಿರುವುದರಿಂದ ಎಲ್ಲ ಕಡೆಗಳಲ್ಲೂ, ಎಲ್ಲ ವರ್ಗ ಜಾತಿಗಳಲ್ಲೂ ಭಾಷಾ ಎರವಲು, ಭಾಷಾ ಮಿಶ್ರಣ, ಭಾಷಾ ಅನುಕರಣ, ಭಾಷಾ ಪಲ್ಲಟಗಳು ಸಾಮಾನ್ಯವಾಗಿ ಗೋಚರವಾಗುತ್ತವೆ.

ಭಾಷಾ ವಿದ್ವಾಂಸರ ಅಭಿಪ್ರಾಯದಂತೆ, ಪ್ರಾದೇಶಿಕವಾಗಿ ಈ ಜಿಲ್ಲೆಯ ಭಾಷಾ ಪರಿಸರವನ್ನು ಉತ್ತರ ಕರ್ನಾಟಕದ ಭಾಷೆ ಅಂದರೆ ಧಾರವಾಡ ಭಾಷೆ. ಎಂದು ಗುರುತಿಸಲಾಗಿದೆ. ಸಾಮಾಜಿಕವಾಗಿ ಬ್ರಾಹ್ಮಣ, ಬ್ರಾಹ್ಮಣೇತರ ಹಾಗೂ ದಲಿತ ಅಥವಾ ಹರಿಜನ ಉಪಭಾಷೆಗಳಾಗಿ ವಿಂಗಡಿಸಬಹುದು. ಹೊರನೋಟಕ್ಕೆ ಅಥವಾ ಮೇಲ್ನೋಟಕ್ಕೆ ಈ ಜಿಲ್ಲೆಯ ಪರಿಸರದಲ್ಲಿ ಎಲ್ಲ ಸಮಾಜ ವರ್ಗದವರೂ ಬಳಸುವ ಕನ್ನಡ ಭಾಷೆ ಒಂದೇ ತೆರನಾಗಿದ್ದರೂ/ಒಂದೇ ಬಗೆಯಾಗಿದ್ದರೂ ಸೂಕ್ಷ್ಮವಾಗಿ ಗಮನಿಸಿದಾಗ ದಲಿತ ವರ್ಗದ ಜನರು ಆಡುವ ಕನ್ನಡ ನುಡಿ ಹಾಗೂ ಉನ್ನತ ವರ್ಗದವರು ಆಡುವ ನುಡಿಯಲ್ಲಿ ಹಲ ಕೆಲವು ಭಾಷಾ ವ್ಯತ್ಯಾಸ, ವೈಶಿಷ್ಟ್ಯಗಳನ್ನು ವಿವಿಧ ಭಾಷಾ ಆಯಾಮಗಳಲ್ಲಿ ಹಾಗೂ ಭಾಷಿಕ ರಚನೆಗಳಲ್ಲಿ ಗುರುತಿಸಬಹುದಾಗಿದೆ. ಇದು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸೀಮಿತವಾಗಿ ಕಂಡುಬರುವುದಿಲ್ಲ. ದಲಿತ ಹಾಗೂ ಉನ್ನತ ವರ್ಗದ ಜನರು ಆಡುವ ನುಡಿಯಲ್ಲಿ ಅಷ್ಟೊಂದು ಭಿನ್ನತೆಗಳು ಗಣನೀಯವಾಗಿ ಕಂಡುಬರದಿದ್ದರೂ ಕೆಲವು ಭಾಷಿಕ ವೈಶಿಷ್ಟ್ಯಗಳನ್ನು ಗುರುತಿಸಬಹುದಾಗಿದೆ.

ಮುಖ್ಯವಾಗಿ, ಧ್ವನಿ ಹಾಗೂ ಪದ ಪ್ರಯೋಗಗಳ ಉಚ್ಚಾರಣೆಗಳನ್ನು ಆದಷ್ಟು ಕ್ಲಿಷ್ಟತೆಯಿಂದ ಸರಳ ರೂಪದಲ್ಲಿ ಅನಾಯಾಸವಾಗಿ ಧ್ವನಿ ಉತ್ಪಾದನಾ ಅಂಗಗಳಿಗೆ ಸುಲಭವಾಗಿ, ಸುಸೂತ್ರವಾಗಿ ಎಟಕುವಂತೆ ಸರಳೀಕರಿಸಿ ಮಾತನಾಡುತ್ತಾರೆ. ಇವುಗಳ ಭಿನ್ನತೆಯನ್ನು ಅಕ್ಷರಸ್ಥ ಹಾಗೂ ಅನಕ್ಷರಸ್ಥರಲ್ಲಿ ಕಾಣಬಹುದು. ಅಲ್ಲದೆ ಧ್ವನಿ ಅಥವಾ ಪದಗಳನ್ನು ಉಚ್ಚರಿಸುವಲ್ಲಿ ಸ್ವರ ವ್ಯಂಜನಗಳ ಏರಿಳಿತಗಳು ಅನೇಕಲ ಧ್ವನಿ ಅಥವಾ ಪ್ರತ್ಯಯ ರೂಪಗಳಲ್ಲಿ ಸಾಮಾನ್ಯವಾಗಿ ಗೋಚರಿಸುತ್ತವೆ. ಇಂತಹುಗಳನ್ನು ಹೆಚ್ಚಾಗಿ ಮಹಾಪ್ರಾಣ, ಒತ್ತಕ್ಷರಗಳು, ಘೋಷ ಧ್ವನಿಗಳು, ಕಂಠಸ್ಥ್ಯಧ್ವನಿಗಳು, ಅನುನಾಸಿಕ ಧ್ವನಿಗಳು, ಸಂಘರ್ಷ ಧ್ವನಿಗಳು, ಊಷ್ಮಧ್ವನಿಗಳು, ಸಂಸ್ಕೃತ ಪದಗಳು ಹಾಗೂ ಎರವಲು ಪದಗಳ ಉಚ್ಛಾರಣೆಗಳಲ್ಲಿ ಗುರುತಿಸಬಹುದು.

ಯಾವುದೇ ಆಡುನುಡಿ ಆಯಾ ಜನರ ಸಮಾಜ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಅನಾಮತ್ತಾಗಿ ಅಭಿವ್ಯಕ್ತಿಸುತ್ತದೆ. ಈ ಪರಿಸರದ ಭಾಷೆಯಲ್ಲಿಯೂ ಕೂಡಾ ಇಂಥ ಸಾಂಸ್ಕೃತಿಕ ಬೇರು ಸುಭದ್ರವಾಗಿದೆ. ನೋಡುವಾಗ, ಮಾತಾಡುವಾಗ ಒರಟುತನ ಕಂಡುಬಂದರೂ ಈ ಜನರ ಸಾಂಸ್ಕೃತಿಕ ಸಂಪನ್ನತೆ, ಮಾನವೀಯ ಅನುಕಂಪ, ಹೃದಯ ಶ್ರೀಮಂತಿಕೆ ಆಡು ಮಾತಿನಲ್ಲಿ ಮಡುಗಟ್ಟಿರುವುದನ್ನು ಕಾಣಬಹುದು.

೧. ಧ್ವನಿಯಾ ಹಂತಗಳಲ್ಲಿ ಗಮನಿಸಿದಾಗ :

ಶಿಷ್ಟ/ಪ್ರಮಾಣ ಕನ್ನಡದಲ್ಲಿರುವ ಎಲ್ಲ ಸ್ವರ ಧ್ವನಿಮಾಗಳು ಕಂಡುಬಂದರೂ,

೧. /a/ ಧ್ವನಿಮಾ /a/ ಅಂತ ಉಪಯೋಗಿಸುವುದು ಸರ್ವೇಸಾಮಾನ್ಯ.

ಉದಾಹರಣೆಗೆ:

atte      –           ೧tti
atta      –           ೧tta
male   –           mali
mattu  –           matta
bare    –           bari,    ಹೀಗೆ ಹಲವಾರು.

೨. ಹಲವು ಕಡೆ a, a, e, e, u, o ಧ್ವನಿಗಳು ಅನುನಾಸಿಕ ಧ್ವನಿಗಳಾಗಿ ಹೆಚ್ಚಾಗಿ ಬಳಸುವುದುಂಟು.

ಉದಾಹರಣೆ :

havu   :-          /ha : ua/
avanu :-          ava or ava
u : ta    :-          /u:ta/
bavi     :-          ba :vi- ಇಲ್ಲಿ /i/ ಪೂರ್ಣ ಉಚ್ಚರ ಆಗಲ್ಲ ಅರ್ಧ/ಒರೆ ಉಚ್ಚಾರಿಸಿ /ಯ/ ಎಂದು ಉಚ್ಚಾರಣೆ ಮಾಡುತ್ತಾರೆ.
nivu     :-          ni : va
kavu    :-          ka : va
mava  :-          ma :va
reve    :-          r೫vi

ಇಲ್ಲಿ ಇಡೀ ಪದ ನಾಸಿಕ ರೂಪ ತಾಳುತ್ತೆ.

೩. ಹಾಗೇನೆ, e/e:/o/o: ಧ್ವನಿಗಳನ್ನು ಬಳಸುವಾಗ /y/ /v/ ಧ್ವನಿಗಳನ್ನು ಹಚ್ಚಿ ಮಾತಾಡೋದು.

ಉದಾಹರಣೆ:

elli       –           yalli
enu     –           ye : na
ondu   –           vanda
ole       –           vali
ede     –           yadi
ellu      –           yolla ಹೀಗೆ ಇತ್ಯಾದಿ.

ಹಾಗೇನೆ,

೪. ಸಾಮಾನ್ಯವಾಗಿ, ಆದಿಯಲ್ಲಿ ವ ಲೋಪವಾಗುವುದುಂಟು.

ಉದಾ :

vimana           –           imana
Vidhi   –           idi
vighna            –           igna
vicara –           icara – ಇಲ್ಲಿ ವ್ಯಂಜನಾಂತ್ಯ ಗಮನಿಸಬಹುದು.

೫. ಹಲವು ಕಡೆ /a/ ಬದಲಾಗಿ /a:/ ಬಳಸುತ್ತಾರೆ.

ಉದಾ :

gida    :-          gida
maga  :-          maga
hola    :-          hvala
koda   :-          koda – ಇಲ್ಲಿ ವಿಶೇಷತೆ ಏನೆಂದರೆ /ha/ & /a/ ವನ್ನು ಸ್ಪಷ್ಟವಾಗಿ ಬಳಸುತ್ತಾರೆ. ಇದಕ್ಕೆ ಮರಾಠಿ ಭಾಷೆಯ ಪ್ರಭಾವವೂ ಇರಬಹುದು.

೬. ಹಾಗೇನೆ ಎಲ್ಲಾ ಕಡೆ |e 😐 ಸ್ವರ (ಯ್ಯಾ) ಎಂದಾಗುತ್ತದೆ.

ಉದಾ :

be : da            b೫da
Mela   m೫l
be :te  b೫ti
be:ne  b೫ni

೭. ಹಲವು ಕಡೆ /a/ ಬದಲಾಗಿ + ಬಳಸುವುದು ಈ ಜನಾಂಗದ ವೈಶಿಷ್ಠ್ಯ. ಅಲ್ಲದೆ ಈ ಧ್ವನಿ ಧ್ವನಿಮಾವಾಗಿ ಕಂಡುಬರುತ್ತದೆ.

dugada           :-          dag +da
agal    :-          ag+a
inaci    :-          in+ci
ade/adu          :-          ada – ಕೊನೆಯಲ್ಲಿ emphasis ಧ್ವನಿಗೆ ಒತ್ತುಕೊಟ್ಟು ಹೇಳುವುದು.
bande:            :-          banda: –          bartan (ಬಂದೇ ಬರುತ್ತಾನೆ.)
avale :            :-          avala:

೮. ಹಾಗೇನೆ, /au/ ಬದಲಾಗಿ /ava/ ಹಾಗೂ /ai/ ಬದಲಾಗಿ /ಅಯ್ ಬಳಸುವುದುಂಟು.

೯. ಷ / ಶ / ಬದಲಾಗಿ /ಸ/ ಉಪಯೋಗಿಸುವುದುಂಟು.

೧೦. ಎಲ್ಲಾ ಕಡೆಗಳಲ್ಲಿ – ಅಂತ್ಯಾಕ್ಷರ /u/ ಲೋಪವಾಗಿ ೦ ಅಥವಾ ವ್ಯಂಜನಾಂತ್ಯ ಆಗುವುದುಂಟು.

ಉದಾ : ನೀರು-ನೀರ್, ಹಾಲು-ಆಲ್

badaku – badak,        hogu – hog.    aidu – aiyida

ಮೇಲ್ಕಂಡ ಹಾಗೆ ಹಲವಾರು ಭಿನ್ನತೆಯನ್ನು ಧ್ವನಿ ವ್ಯವಸ್ಥೆಯಲ್ಲಿ ಗುರುತಿಸಬಹುದು.

೨.ಇನ್ನು ಸಂಧಿ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ನೋಡಬಹುದು.

hoga+a:ka     :-          hogaka
beli+da           :-          be!da
mani+a:ga     :-          manyaga
mara + go!a   :-          margo :la
mala+a                       :-          malda
masi + kalla   :-          masilgalla – grind stone
u:da + ko!vi    :-          udgo!vi – blow pipe
kali + li            :-          kaliili – lct (some one/something)learn(i:-i:)
holya+ti          :-          volti -women belongs to holeya community.
moy + d+a      :-          meda – having graze
oxy      :-          o : da

ಹೀಗೆ ಸಂಧಿನಿಯಮಗಳಲ್ಲಿ ವ್ಯತ್ಯಾಸಗಳನ್ನು ಕಾಣಬಹುದು.

೩. ಇನ್ನು ವ್ಯಾಕರಣ ಹಂತ/ಆಕೃತಿಮಾ ವಿಜ್ಞಾನದಲ್ಲಿ, ಹಲವು ವಿಭಿನ್ನತೆಗಳನ್ನು ಪ್ರತ್ಯಯ ಹಾಗೂ ರೂಪಕಗಳಲ್ಲಿ ಕಾಣಬಹುದು.

ಉದಾ :

ಸರ್ವನಾಮ
೧. ನಾನು / ನೀನು ಅನ್ನೋಕೆ ನಾ/ನೀ
೨. ಯಾವುದು ಅನ್ನೋಕೆ – ya/yad
೩. ಅವನು/ಇವನು -a:va/i:va
೪. ಯಾರಿಗೆ -yarga
೫. ಯಾವುದಕ್ಕೆ –  yadka
೬. ಯಾವುದರಲ್ಲಿ -yatraga

ಹಾಗೇನೆ :

ಹಾಗೇ – hanga
ಹೀಗೆ -inga
ಅಷ್ಟು -atta
ಇಷ್ಟು -itta
ಎಷ್ಟು -yatta/esa

ಇತ್ಯಾದಿ ರೂಪಕಗಳನ್ನು ಕಾಣಬಹುದು.

ಇನ್ನು ಸಂಖ್ಯಾವಾಚಕಗಳಲ್ಲಿ :

Vanda, yanda, mtr, nak, aida, ar, yo!!a, entc, vambort, hatta,

ಕಾಲವನ್ನು ಸೂಚಿಸುವಾಗ, ಪೋನೆ, ಬಾರಾ, (ಮರಾಠಿ ಸಂಖ್ಯೆಗಳನ್ನು ಬಳಸುವುದು ಜಾಸ್ತಿ ಕಾಣಬಹುದು.)

ಸವ್ವಾ, ಸಾಡೆ / ವರಿ.

ಇನ್ನು ಲಿಂಗ, ವಚನ, ವಿಭಕ್ತಿ ಕಾರಣ ಕಾಲಸೂಚಕ ಪ್ರತ್ಯಯಗಳಲ್ಲಿ ಈ ಜಿಲ್ಲೆಯ ಕನ್ನಡ ಶಿಷ್ಟ ಕನ್ನಡಕ್ಕಿಂತ ಬಹಳಷ್ಟು ಭಿನ್ನವಾಗಿರುವುದು ಕಂಡುಬರುತ್ತದೆ.

ಉದಾ:

‘ಬರು’, ಕ್ರಿಯಾಧಾತು, ಭೂತಕಾಲ, ಭವಿಷತ್‌ಕಾಲಗಳಲ್ಲಿ ಬಳಕೆಯಾಗುವ ಪರಿ ಗಮನಿಸಿ.

ವರ್ತಮಾನ                       ಭೂತ                                     ಭವಿಷತ್
ಉತ್ತಮ ಪುರುಷ                –                                            battini (banni) battini (bandyu)
ಮಧ್ಯಮ                          –                                            barti (bandi)    battiri (bandri)
ಪ್ರ.ಪು.ಪುಲ್ಲಿಂಗ                 –                                            bata : n/ಬತ್ತಾನ ಬತ್ತಾರ
ಸ್ತ್ರೀಲಿಂಗ                          –                                            ಬತ್ತಾಳೆ
–                                     ಬರತೈತಿ ಬಂದೈತೆ/                     ಬತ್ತಾವ
–                                     ಇದೆ                                        e:tiuai:ti (banta) (bandu) ಬಂದವು
–                                     ಇವೆ                                        -idava
-ಮಾಡಿದೆ                                 -madnyi (ಮಾಡ್ನಿ)
–                                     ಮಾಡ್ತಾ ಇದ್ದೀರಿ – ಮಾಡಾತೇರಿ
– ಹೋಗ್ತಾ ಇದ್ದಾನೆ – ಹೋಗಾತಾನ

ಇದೇ ರೀತಿಯಲ್ಲಿ : ಅಭೂತ ಭಾವ ಕ್ರಿಯಾರೂಪವು ಈ ಪರಿಸರದಲ್ಲಿ -a:va/ a:k/a:r ಅಖ್ಯಾತ ಪ್ರತ್ಯಯವನ್ನು ತೆಗೆದುಕೊಳ್ಳುತ್ತವೆ.

ಉದಾಹರಣೆಗೆ :

ನೋಡುವವನು    –           nodav

ನೋಡುವವರು    –           nodaki

ನೋಡುವವಳು    –           nodar

ಇದರ ನಿಷೇದ:     ನೋಡವವನು      –           noddav

ನೋಡದವಳು      –           noddaki

ನೋಡದವರು      –           nodda:r

ಹಾಗೇನೇ ಸಂಬೋಧಕ ಪದಗಳು/ಪ್ರತ್ಯಯಗಳು

೧.         a:o:      ೨. yaklo

yako:/yako     yakle

bara:   ಬಾರೇ-bara

೩. yakbe – ನಿಷ್ಠುರದ ಮಾತು ಆದರೆ ಬಿಜಾಪುರ ಗಡಿಗಳಲ್ಲಿ ಇದು ಗೌರವ ಸೂಚಕ ಪ್ರತ್ಯಯ ಪದ.

yakba :-

ಹಾಗೇನೆ, ಪೂರ್ವಕಾಲಿಕ ಕ್ರಿಯಾಸೂಚಕ ಪ್ರತ್ಯಯ : (finitire)

ಮಾಡಲು/ಮಾಡುವುದಕ್ಕೆ   –           madak
ಬರೆಯಲು          –           baryak
ಕುಡಿಯಲು         –           kud೫k

ಹಾಗೇನೆ, ಕ್ರಿಯಾಪದ ಗೌರವ ಸೂಚಕ/ಸೂಚಕವಲ್ಲದ ಪ್ರತ್ಯಯಗಳಲ್ಲಿ:

ಮಾಡು – mad   ಬಾ-ಬಾ  impolite
ಮಾಡಿ (ಬಳಸಲ್ಲ) ಬದಲಾಗಿ madri ಬನ್ನಿ – ಬರ್ರಿ‍ impolite
ಮಾಡಿರಿ – madri            ಬನ್ನಿರಿ – super polite

ಹಾಗೇನೆ, ವಿಶೇಷವಾಗಿ ವಿಭಕ್ತಿ ಪ್ರಶ್ನೆಗಳನ್ನು ಗಮನಿಸಿದಾಗ

ತೃತೀಯ ವಿಭಕ್ತಿ – ಇಂದ ಬದಲಾಗಿ – ಇಲ್ಲಿ {le} ಬಳಸಲಾಗುತ್ತೆ.

ಪೆನ್ನಿನಿಂದ ಪೆನ್ನಲೆ

ಬಡಗಿಯಿಂದ ಬಡೀಗಿಲೆ

ಸಪ್ತಮಿ – ಅಲ್ಲಿ ಬದಲಾಗಿ – a:ga (ಆಗ) ಮನ್ಯಾಗ, ಊರಾಗ, ಗಿಡದಾಗ, ಸಾಲ್ಯಾಗ, ಜ್ವಾಳದಾಗ

ಹಾಗೇನೆ, ತುಲನಾತ್ಮಕಗಿಂತ ಕ್ಕಿಂತಗಳ ಸ್ವಂತ ಬದಲಾಗಿ ಇಲ್ಲಿ ವಿಶಿಷ್ಟವಾಗಿ – +ka, – inka, -kanu, avanka, akitinaka, akikanu

ಅವನಿಗಿಂತ, ಆಕೆಯಗಿಂತ, ಆಕೆಗಿಂತ

ಅದಕ್ಕಿಂತ – ಅದಕನು

ಹತ್ತರಕ್ಕಿಂತ – ಹತ್ತಕನು

ಹಾಗೇನೆ

ಬರಬಹುದು        -bandota

ಹೇಳಬಹುದು      -he!yolta

ಅವನು ಹೇಳಬಹುದು        –           he:!yana

ಅವನು ಹೇಳಬಹುದು        –           he : !ya!a

ಹಾಗೇನೆ,

ನಿಷೇಧಾತ್ಮಕ ರೂಪಗಳಲ್ಲಿ ವಿಶಿಷ್ಠವಾಗಿ ಗೋಚರಿಸುವುವು.

Yambla          – ನನಗೆ ಗೊತ್ತಿಲ್ಲ (ಯಾವನು ಬಲ್ಲ)

Kale    –           ಮಾಡಲಾರೆ ಇಲ್ಲ, ನಾನು ಮಾಡಲ್ಲ ರೂಪಗಳಲ್ಲಿ ಬಳಸುತ್ತಾರೆ.

ಇವುಗಳಲ್ಲದೆ, ವಿಶೇಷಣಗಳಲ್ಲಿ, ಕಾಲಸೂಚಕ ಪ್ರತ್ಯೇಯಗಳಲ್ಲಿ, ಬಹುವಚನಗಳಲ್ಲಿ, ಕ್ರಿಯಾರೂಪಗಳಲ್ಲಿ ಇನ್ನು ಅನೇಕ ರಾಚನಿಕ ವ್ಯವಸ್ಥೆಯಲ್ಲಿ ಹಲವು ಭಿನ್ನತೆಗಳನ್ನು ಕಾಣಬಹುದು. ಆದರೆ ಪದಗಳ ಮೂಲಧಾತುಗಳ ಬದಲಾವಣೆ, ರೂಪಾಂತರ ಆಗದಿರುವುದು ಗಮನಾರ್ಹ.

ಪದ ರೂಪ ಹಾಗೂ ವಾಕ್ಯರೂಪಗಳನ್ನು ಗಮನಿಸಿದಾಗ, ಸ್ವಂತಿಕೆ ಮತ್ತು ಅರ್ಥವೈಶಿಷ್ಟ್ಯವನ್ನು ಮೆರೆಯುವಂತಹ ಅಪಾರ, ಪದಕೋಶ ಈ ಪರಿಸರದ ಕನ್ನಡದಲ್ಲಿದೆ, ಅಲ್ಲದೆ ಜನಪದ ವಿವಿಧ ಸೊಗಡುಗಳು,

ಈ ಜಿಲ್ಲೆಯ ದಲಿತ ವರ್ಗಗಳ ಪರಿಸರದಲ್ಲಿ ಹುಲುಸಾಗಿ ಬೆಳೆದಿದೆ. ಇವುಗಳ ದತ್ತ ಸಂಗ್ರಹ ಹಾಗೂ ಅಧ್ಯಯನ ಇನ್ನು ಸಾಕಷ್ಟು ರೀತಿಯಲ್ಲಿ ನಡೆದಿಲ್ಲವೆನ್ನಬಹುದು. ದಲಿತ ಸಾಹಿತಿಗಳು ಈ ಪರಿಸರದಲ್ಲಿ ಹುಲುಸಾಗಿ ಬೆಳೆದಿದೆ. ಇವುಗಳ ದತ್ತ ಸಂಗ್ರಹ ಹಾಗೂ ಅಧ್ಯಯನ ಇನ್ನು ಸಾಕಷ್ಟು ರೀತಿಯಲ್ಲಿ ನಡೆದಿಲ್ಲವೆನ್ನಬಹುದು. ದಲಿತ ಸಾಹಿತಿಗಳು ಈ ಪರಿಸರದಲ್ಲಿದ್ದರೂ ಭಾಷೆಯ ಅಧ್ಯಯನದ ಬಗ್ಗೆ ಹೆಚ್ಚು ಒತ್ತು ನೀಡಿಲ್ಲವೆನ್ನಬಹುದು.

ಒಟ್ಟಾರೆ ಈ ಅಂಶಗಳು/ಪ್ರಕಾರಗಳು ಪ್ರತ್ಯೇಕ ಗುಣಲಕ್ಷಣ, ಬಂಧಶಿಲ್ಪ, ಸಂಭಾಷಣೆ ಶೈಲಿ ಮತ್ತು ತತ್ವಗಳು ಕನ್ನಡ ದಲಿತ ಸಾಹಿತ್ಯಕ್ಕೆ ಒಂದು ಅನನ್ಯತೆಯನ್ನು ತಂದುಕೊಟ್ಟಿದೆ. ಈ ಅನನ್ಯತೆಯ ಗುರುತು ಅವರ ಪರಿಭಾಷೆ. ದಲಿತ ಭಾಷೆಯೇ ಒಂದು ಬಂಡಾಯ ಭಾಷೆ ಎನ್ನಬಹುದು.