ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ತಮ್ಮ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಡೆಗೆ ಹತ್ತು ಹಲವು ಕಾರಣಗಳನ್ನು ಕಳೆದ ಶತಮಾನದಿಂದಲೂ ಚರ್ಚಿಸುತ್ತಿವೆ. ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸಬಲ್ಲ ಕಾರಣಗಳನ್ನು ನಮ್ಮ ಅರ್ಥಶಾಸ್ತ್ರಜ್ಞರು ಆಯಾಮ ಕಾಲಕ್ಕೆ ತಕ್ಕಂತೆ ಚಿಂತಿಸಿ ಬದಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಮಾನತೆ ಸಾಧಿಸಲು ಭಾಷೆ ಒಂದು ಪ್ರಮುಖ ಸಾಧನವಾಗಿದೆ. ಅದರಲ್ಲೂ ಇಂಗ್ಲಿಶ್, ಜರ್ಮನ್, ಲ್ಯಾಟಿನ್, ಫ್ರೆಂಚ್ ಭಾಷೆಗಳು ಔದ್ಯೋಗಿಕ ಜಗತ್ತಿನ ಮಾರುಕಟ್ಟೆಯನ್ನು ಬದಲಾಯಸಿವೆ. ನಮ್ಮ ಮಣ್ಣಿಗೆ ಹತ್ತಿರವಾಗಿರುವ ಇಂಗ್ಲಿಶ್ ಅಸಂಖ್ಯಾತ ಭೂಹೀನರಿಗೆ ಒಂದು ಆಸ್ತಿಯಾಗಬಲ್ಲದು. ಈ ಭಾಷೆಗೆ ಗಡಿಗಳನ್ನು ಮೀರುವ ಶಕ್ತಿಯಿದೆ. ಹಾಗೆಯೇ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಗೆ ಇಂಗ್ಲಿಶ್ ಅತ್ಯಂತ ಪ್ರಮುಖ ಅಂಶವಾಗಬಹುದು. ಇಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸಲು ಇಷ್ಟಪಡುತ್ತೇನೆ. ಅವರ ಪ್ರಕಾರ ‘ದಲಿತರ ಬಡತನ ಮತ್ತು ಅದಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ದಲಿತರ ಸಾಮಾಜಿಕ ಚಲನೆಯನ್ನು ಸ್ಥಗಿತಗೊಳಿಸಿರುವುದೇ ಕಾರಣ’. ಹೀಗಾಗಿ ಸಾಮಾಜಿಕ ಮತ್ತು ಆರ್ಥಿಕ ಚಲನಶೀಲತೆಗೆ ಇಂಗ್ಲಿಶ್ ಭಾಷೆ ಒಂದು ದಾರಿಯಾಗಬಹುದು ಎಂದು ನನ್ನ ನಂಬಿಕೆ.
ದಲಿತರು-ಭಾಷೆ ಮತ್ತು ಸಮಾಜ: ಭಾಗ ೧ – ದಲಿತರು ಮತ್ತು ಭಾಷೆ: ೨. ಇಂಗ್ಲಿಶ್ ಒಂದು ಆಸ್ತಿ
By kanaja|2015-06-16T21:06:35+05:30June 16, 2015|ಬುಡಕಟ್ಟುಗಳು, ಸಂಸ್ಕೃತಿ-ಪರಂಪರೆ, ಸಮಾಜ ಮತ್ತು ಅಭಿವೃದ್ಧಿ, ಸಮುದಾಯ ಸಾಹಿತ್ಯ, ಸಾಮಾಜಿಕ ಚಳುವಳಿಗಳು, ಸಾಹಿತ್ಯ|0 Comments
Leave A Comment