ನಾಲಗೆಗಳ ರಕ್ತ, ಹದವಾದ ಕೆಂಪು ಬಣ್ಣವನ್ನು ತಾಳಿದ ಜಾತಿಕುದುರೆಗಳ ಜೊಲ್ಲು ರಸ, ಇವುಗಳಿಂದ ನೆಲದಿಂದ ಹೊರಟ ಧೂಳಿನ ಮೂಲವು ನಾಶವಾಯಿತು. (ನೆಲವು ಒದ್ದೆಯಾದುದರಿಂದ ಧೂಳೇಳುವುದೂ ನಿಂತುದರಿಂದ) ಕತ್ತರಿಸಿ ಹಾಕಿದ ತಲೆಗಳು ಹರಿದು ಹಾರಲು ದೊಡ್ಡ ಮರಗಳ ಹೋಳುಗಳ ಒಳಭಾಗದಿಂದ ಹುಟ್ಟಿದ ಕೆಂಪುಜ್ವಾಲೆಯ ಸಮೂಹದಂತೆ ಮುಂಡಗಳಿಂದ ಆಕಾಶದವರೆಗೆ ಚಿಮ್ಮಿ ಹಾರುವ ರಕ್ತದಿಂದ ಕೂಡಿದ ಸುಂಟರುಗಾಳಿಯಿಂದ ಮೇಲೆ ಎದ್ದಿದ್ದ ಧೂಳೂ ಮಾಯವಾಯಿತು. ಧೂಳು ಅಡಗಲಾಗಿ ದಿಕ್ಕುಗಳನ್ನು ತಿಳಿದು ತಮ್ಮ ಸೈನ್ಯವನ್ನೂ ಪರಸೈನ್ಯವನ್ನೂ ತಿಳಿದು ಹೊಸದಾದ ರಕ್ತವನ್ನು ಚಿಮಿಕಿಸುವುದರಿಂದ ದಮ್ಮಸ್ಸು ಮಾಡಿ ಕೆಂಪು ಕಾವಿಕಲ್ಲನ್ನು ನೆಲಕ್ಕೆ ಹಾಸಿದಂತಿದ್ದ ಯುದ್ಧಭೂಮಿಯಲ್ಲಿ ಎರಡು ಸೈನ್ಯದ ನಾಯಕರು ಬಿಲ್ಲಿನ ಕಾಳಗವನ್ನು ಕಾದಿದರು.

೭೧. ಕೈತುಂಬ ತುಂಬಿದ ಹರಿತವಾದ ಬಾಣ, ಮೊಳಕಾಲುವರೆಗೆ ಜೋಲಾಡುವ ವೀರಗಚ್ಚೆ, ದೀರ್ಘವಾದ ಕತ್ತಿಯ ಒರೆ, ಕಪ್ಪಾದ ಹಣೆಗಟ್ಟು, ಕೈಚೀಲ ಇವು ಬೆಡಗನ್ನು ಹುಟ್ಟಿಸುತ್ತಿರಲು ಬಿಲ್ಗಾರರು ಪರಸ್ಪರ ಹೆಣೆದುಕೊಂಡು ಹೊಡೆದಾಡಿದರು. ೭೨. ಬಾಣವನ್ನು ಹೂಡುವುದನ್ನು ನೋಡಲಸಾಧ್ಯವೆನ್ನುವ ಹಾಗೆ ಎರಡು ಸೈನ್ಯದ ಗಟ್ಟಿಗರಾದ ಬಿಲ್ಗಾರರು ಶಬ್ದಮಾಡಿ ಹೊಡೆಯಲಾಗಿ ಆಕಾಶಮಂಡಳವೆಲ್ಲ ಚಪ್ಪರ ಹಾಕಿದಂತಾಯಿತು. ೭೩. ಹರಿತವಾದ ಬಾಣಗಳಿಂದ ಗರಿಸನ್ನೆ ಮಾಡಿ ದೀರ್ಘವಾಗಿ ಸೆಳೆದು ವಿಸ್ತಾರವಾಗಿ ಹರಡಿ ಹಬ್ಬಿ ಆರ್ಭಟಮಾಡಿ ಬಾಣಪ್ರಯೋಗ ಮಾಡಲು ಕೆಂಪಾದ ಗರಿಯನ್ನುಳ್ಳ ಬಾಣಗಳು ಯುದ್ಧ ಮಾಡುತ್ತಿರುವ ಶೂರರಾದ ಬಿಲ್ಗಾರರನ್ನು ಕಣ್ಣು ತೆರೆಯುವ ಹಾಗೆ ಮಾಡಿದುವು. ೭೪. ಕತ್ತರಿಸುವ, ನಾಟುವ, ಒಡೆದು ಹಾಕುವ, ನೇರವಾದ ಬಾಣಗಳು ಹಾರಿ ಸೀಳುವ, ನಾಟಿ ತೂಗುವ ಬಾಣಗಳಿಗೆ ಮುಖವನ್ನು ತಿರುಗಿಸಿಕೊಳ್ಳದೆ ಪ್ರತಿಭಟಿಸುವುದಕ್ಕೆ ಹೆದರದೆ ಕತ್ತಿಯಿಂದ ಹೊಡೆದ ಹಾಗೆ ಬಾಣವನ್ನು ಬಾಣವು ಹಿಂಬಾಲಿಸುವ ಹಾಗೆ ಹೊಡೆದರು. ೭೫. ಕಯ್ಯಲ್ಲಿ ಹಿಡಿದಿರುವ ಬತ್ತಳಿಕೆಯ ಹೊದೆಯಂಬುಗಳು ಸಂಪೂರ್ಣವಾಗಿ

ವ|| ಅಂತುಭಯಬಲ ಧನುರ್ಧರಬಲಂಗಳುಮೞ ಮೞದಾಗಳ್-

ಚಂ|| ತೊಳಗುವ ಬಾಳ್ ತೞತ್ತೞಪ ಕಕ್ಕಡೆ ಬುಂಭುಕದೊಳ್ ತಗುಳ್ದು ಪ
ಜ್ಜಳಿಸುವ ಪಂಚರಾಯುಧಮಗುರ್ವಿಸುವಾವುತಿ ಪೂಸಿದಂತಿರಿ|
ಟ್ಟಳಮಮರ್ದಿರ್ದ ಮಾಳಜಿಗೆ ಪಕ್ಕರೆಯಿಕ್ಕಿದ ಜಾಯಿಲಂ ಭಯಂ
ಗೊಳಿಸೆ ಕಡಂಗಿ ತಾಗಿದುದಸುಂಗೊಳೆ ತುಂಗ ತುರಂಗ ಸಾಧನಂ|| ೭೬

ವ| ಅಂತು ವಿಳಯಕಾಳದ ಕಾೞರ್ಚಿನ ಬೇಗ ಸಾರ್ವಂತಿರ್ವಲದಳವುಂ ಕಿರ್ಚುಂ ಕಿಡಿಯುಮಾಗೆ ತಾಗಿದಾಗಳ್-

ಚಂ|| ಪಸುಗೆ ನೆಲಂ ಜಲಂ ಹಯದೊಡಂಬಡು ವಂಚನೆ ಕೇಣಮಾಸನಂ
ಕೊಸೆ ದೆಸೆ ದಿಟ್ಟಿ ಮುಟ್ಟಿ ಕೆಲಜಂಕೆ ನಿವರ್ತನೆ ಕಾಣ್ಕೆ ಪರ್ವಿದೇ|
ರ್ವೆಸನದೊಳಾದ ಬಲ್ಮೆಯೊಳೊಡಂಬಡೆ ತಳ್ತಿಱವಲ್ಲಿ ಮಿಂಚಿನೊಳ್
ಮುಸುಕಿದ ಮಾಯಾಯ್ತು ಸಮರಾಂಗಣಮುಳ್ಕುವ ಬಾಳ್ಗಳುಳ್ಕದಿಂ|| ೭೭

ಕರ ಕರವಾಳಘಾತದೊಳರಾತಿಯ ಪಂದಲೆ ಪಂಚರಾಯುಧಂ
ಬೆರಸೆಸೆವಟ್ಟೆ ತೊಟ್ಟ ಕವಚಂಬೆರಸೇಱದ ವಾಜಿ ಲೋಹವ|
ಕ್ಕರೆವೆರಸೊಂದೆ ಸೂೞೊಳೆ ಪಡಲ್ವಡೆ ದೋರ್ವಲದುರ್ವು ಬೀರದೊಳ್
ಪೊರೆದಿರೆ ಬಿನ್ನಣಂ ನೆಗೞೆ ತಳ್ತಿಱದರ್ ಕೆಲರಾಜಿರಂಗದೊಳ್|| ೭೮

ಕಂ|| ಪಿಡಿದುದಿರ್ವ ಬಾಳ ಕಿಡಿಗಳ
ನೊಡನೊಡನರೆವೊತ್ತಿ ತೊಟ್ಟ ಸನ್ನಣವುರಿಯ|
ಲ್ಕೊಡರಿಸಿದೊಡವಱ ಪರ್ವಂ
ಬಿಡೆಯರಿದರಿಸಮಿತಿಯೊಡನೆ ಕಾದಿದರರೆಬರ್|| ೭೯

ಚಂ|| ಭುಗಭುಗನುರ್ಚಿ ಪಾಯ್ವ ಬಿಸುನೆತ್ತರ ಸುಟ್ಟುರೆಯಂ ನೆಲಕ್ಕೆ ಪ
ರ್ದುಗಳುಗಲೀಯದವ್ವಳಿಸಿ ಪೀರ್ವಿನಮೊರ್ಮೆಯೆ ಪೊಯ್ವ ಪೊಯ್ಗಳಿಂ|
ನೆಗೆದು ಮುಗಿಲ್ಗಳಿಟ್ಟೆಡೆಗಳೊಳ್ ತಲೆಗಳ್ ತೊಡರ್ದಿರ್ದ ಜೇನಪು
ಟ್ಟಿಗಳನೆ ಪೋಲ್ತುವೇಂ ಕಲಹಮಚ್ಚರಿಯಾಯ್ತೊ ತುರಂಗಸೈನ್ಯದೊಳ್|| ೮೦

ಮುಗಿಯುವವರೆಗೂ ಪ್ರಯೋಗಮಾಡಿ ಅದು ಮುಗಿಯಲು ಕತ್ತಿಯನ್ನು ಸೆಳೆದು ಎದುರೆದುರಿಗೆ ಬಂದು ಸೈನ್ಯದಲ್ಲಿ ಹೆಣೆದುಕೊಂಡು ಬಿಲ್ಗಾರರು ಆರ್ಭಟಮಾಡಿ ರಕ್ತ ಸಮುದ್ರವನ್ನು ಹರಿಯಿಸಿದರು. ವ|| ಹಾಗೆ ಎರಡು ಸೈನ್ಯದ ಬಿಲ್ಗಾರ ಸೈನ್ಯವೂ ಸತ್ತು ನಾಶವಾಗಲು ೭೬. ಹೊಳೆಯುತ್ತಿರುವ ಕತ್ತಿ, ತಳತಳಿಸುತ್ತಿರುವ ಮುಳ್ಳುಗೋಲು, ಕುಚ್ಚಿಲಿನಲ್ಲಿ ಸೇರಿ ಪ್ರಜ್ವಲಿಸುವ ಪಂಚರಾಯುಧ, ಹೆದರಿಸುವ ಆವುತಿ, ಲೇಪಮಾಡಿದಂತೆ ಒತ್ತಾಗಿ ಸೇರಿರುವ ಮಾಳಜಿಗೆ, ಜೀನುಹಾಕಿದ ಜಾತಿಯ ಕುದುರೆಗಳು -ಇವು ಭಯವನ್ನುಂಟುಮಾಡಲು ಕುದುರೆಯ ಸೈನ್ಯವು ಪ್ರಾಣವನ್ನಪಹರಿಸುವ ಹಾಗೆ ತಾಗಿದು. (ಟಿ|| ಇಲ್ಲಿ ಬರುವ ಪಂಚರಾಯುಧ, ಆವುತಿ, ಮಾಳಜಿಗೆ ಮೊದಲಾದುವುಗಳ ಅರ್ಥ ಅನಿರ್ದಿಷ್ಟ) ವ|| ಹಾಗೆ ಪ್ರಳಯಕಾಲದ ಕಾಡುಗಿಚ್ಚಿನ ಬೆಂಕಿಯು ಬರುವ ಹಾಗೆ ಎರಡು ಸೈನ್ಯದ ಸಾಮರ್ಥ್ಯವೂ ಕಿಚ್ಚು ಕಿಡಿಯಾಗಿ ದಳ್ಳಿಸಿ ತಾಗಿತು. ೭೭. ವಿಭಾಗ, ನೆಲ, ಜಲ, ಕುದುರೆಗಳ ಹೊಂದಾಣಿಕೆ, ಮೋಸ, ಮಾತ್ಸರ್ಯ, ಔದಾಸೀನ್ಯ, ವಾಹನದ ಆರೋಹಣ, ದಿಕ್ಕು ದೃಷ್ಟಿ ಮುಷ್ಟಿ, ಮುನ್ನುಗ್ಗುವಿಕೆ, ಹೆದರಿಸುವಿಕೆ, ಹಿಂದಿರುಗುವಿಕೆ, ಪುನ ಕಾಣಿಸಿಕೊಳ್ಳುವಿಕೆ ಇವು ವ್ಯಾಪ್ತವಾದ ಯುದ್ಧಕಾರ್ಯದ ಬಲ್ಮೆಯಲ್ಲಿ ಸಮನ್ವಯವಾಗಿರುವಂತೆ ಸೇರಿಕೊಂಡಿರಲು ತಾಗಿ ಯುದ್ಧಮಾಡುವಾಗ ಆ ಯುದ್ಧರಂಗವು ಪ್ರಕಾಶಮಾನವಾದ ಕಾಂತಿಯಿಂದ ಮಿಂಚಿನಲ್ಲಿ ಮುಸುಕಿದಂತಾಯಿತು. ೭೮. ಕೈಗತ್ತಿಯ ಪೆಟ್ಟಿನಿಂದ ಕೂಡಿದ ಶತ್ರುವಿನ ಹಸಿಯ ತಲೆ ಪಂಚರಾಯುಧದಿಂದ ಕೂಡಿದ ಪ್ರಕಾಶಮಾನವಾದ ಮುಂಡ, ಧರಿಸಿದ ಕವಚದೊಡನೆ ಕೂಡಿ ಹತ್ತಿರುವ ಕುದುರೆ, ಕಬ್ಬಿಣದ ಗಾಳ ಸಮೇತವಾಗಿ ಒಂದೇ ಬಾರಿಗೆ ಕೆಳಗೆ ಬೀಳಲು ಬಾಹುಬಲದ ಆಕ್ಯವು ಪರಾಕ್ರಮದಲ್ಲಿ ತೋರಿ ಬರುತ್ತಿರಲು ಪ್ರೌಢಿಮೆಯು ಉಂಟಾಗುವ ಹಾಗೆ ಕೆಲವರು ಯುದ್ಧರಂಗದಲ್ಲಿ ಬೆರಸಿ ಹೊಯ್ದಾಡಿದರು. ೭೯. ಎಡಬಿಡದೆ ಸುರಿಯುತ್ತಿರುವ ಕತ್ತಿಯ ಕಿಡಿಗಳಿಂದ ತಕ್ಷಣವೇ ಅರ್ಧ ಹತ್ತಿಕೊಂಡ ತೊಟ್ಟ ಕವಚವು ಉರಿಯುವುದಕ್ಕೆ ಮೊದಲಾಗಲು ಆ ಕವಚಗಳ ಜೋಡಣೆಯನ್ನು ಬಿರಿಯುವಂತೆ ಕತ್ತರಿಸಿ ಅನೇಕರು ಶತ್ರುಸಮೂಹದೊಡನೆ ಕಾದಿದರು. ೮೦. ಭುಗಭುಗನೆ ಸೀಳಿಕೊಂಡು ಹಾಯುವ ಬಿಸಿರಕ್ತದ ಪ್ರವಾಹವನ್ನು ನೆಲಕ್ಕೆ ಬೀಳಲು ಬಿಡದಂತೆ ಹದ್ದುಗಳು ಮೇಲಕ್ಕೆ ಹಾರಿ ಕುಡಿಯುತ್ತಿದ್ದುವು. ಒಂದೇ ಸಲ ಹೊಡೆದ ಹೊಡತದಿಂದ ಮೋಡಗಳ ಸಂದುಗಳೊಳಕ್ಕೆ

ವ|| ಅಂತೆರಡುಂ ಬಲದ ದೞಂಗಳ್ ಕೋಲಾಟಮಾಡುವಂತೆ ಕಿಱದಾನುಂ ಬೇಗಂ ತಟ್ಟುಪೊಟ್ಟೆಂದು ಕೋಲ್ಕುಟ್ಟಿ ಪತ್ತೆಂಟು ಸಾಸಿರ ಕುದುರೆಯಟ್ಟೆಯುಮೇೞೆಂಟು ನೆತ್ತರ ಕಡಲ್ ಕಡಲನಟ್ಟೆಯುಂ ಕಾದಿ ಬಸಮೞದು ಪೆಱಪಿಂಗಿ ನಿಂದಾಗಳ್ ಪ್ರಳಯದುರಿಯನುರುಳಿ ಮಾಡಿದಂತಾನುಂ ಬಡವಾಗ್ನಿಯನನುವಿಸಿದಂತಾನುಂ ಬಱಸಿಡಿಲ ಕಿಡಿಗಳ ಬಳಗಮನೊಳಗು ಮಾಡಿದಂತಾನುಂ ಗೊಂದಣಿಸಿ ಸಂದಣಿಸಿ ನಿಂದಣಿಯನೆರಡುಂ ಬಲದ ಕಡಿತಲೆಯ ನಾಯಕರ್ ಕೆಯ್ಕೊಂಡು ಬಳ್ಳುಗೆಡೆದೆಕ್ಕೆವಾಱುವಾಱ ಪಲಗೆವಾಡಿ ಗೂಳಿಸೊರ್ಕಿ ಮಾರ್ಕೊಂಡು ಕಾದೆ-

ಕಂ|| ಪುಸಿ ನಸುವಂಚನೆ ನೋರ್ಪನು
ವಸಿದಗಲಿತು ತಕ್ಕುದಕ್ಕು ಪಗೆ ಕೆಯ್ಬಗೆ ಕೆ|
ಯ್ಕುಸುರಿ ನುಸುಳೆಂಬ ಕೇಣದ
ಕುಸುರಿಯನಱದಱದು ಮೆದು ನೆದುಱದರೆಬರ್||  ೮೧

ಬಱಸಿಡಿಲೆಱಪಂತಿರೆ ಬಂ
ದೆಱಗಿದರಂ ತಳ್ತು ಬಾಳ ಕೀೞ್ಮೊನೆಯಿಂ ತ
ಳ್ತಱದಱದುಬ್ಬರಮೆಂಬಿವ
ನಱದಿಱದಿರ್ ಪೆಣಬಣಂಬೆಗಳ್ ನೆಗೆವಿನೆಗಂ|| ೮೨

ಚಾರಿಸಿ ಬಾಳಾಗಮಮವ
ತಾರಂ ಗೆಯ್ದಂತೆ ಕಾಲದಂತಕನನೆ ಪೋ|
ಲ್ತಾರುತ್ತುಂ ಕವಿವದಟರ
ನೋರೊಂದೋರೊಂದೆವೊಯ್ದು ಕೊಂದರ್ ಪಲರಂ|| ೮೩

ಬಾಳ್ವಾಳ್ಗಳ ಘಟ್ಟಣೆಯೊಳ್
ಬಳ್ವಳ ಬಳೆದೊಗೆದು ನೆಗೆದ ಕಿಡಿಗಳ ಬಂಬ|
ಲ್ಗಳ್ವೆರಸು ಪೊಳೆದು ನೆಗೆದುದು
ಬಾಳ್ವೊಗೆ ಕಾಱಮುಗಿಲ್ ಬಳ್ಳಿಮಿಂಚಿನಿಂದುಳ್ಕುವವೋಲ್|| ೮೪

ತಲೆ ನೆಲದೊಳುರುಳ್ದೊಡಂ ಮೆ
ಯ್ಗಲಿಯೊರ್ವಂ ಪಿಡಿದು ತಲೆಯನಿಟ್ಟಟ್ಟೆಯೊಳ|
ಗ್ಗಲಿಸಿದ ಮುಳಿಸಿಂ ಮಾಟದ
ತಲೆಯಿಟ್ಟಾಡುವನನಿನಿಸು ಪೋಲ್ತನುಗೆಯ್ದಂ|| ೮೫

ಹಾರಿ ಸಿಕ್ಕಿಕೊಂಡಿರುವ ತಲೆಗಳು ಜೇನಿನ ಗೂಡುಗಳನ್ನೇ ಹೋಲಿದುವು. ಕುದುರೆಯ ಸೈನ್ಯದಲ್ಲಿ ಕಾಳಗವು ಎಷ್ಟು ಆಶ್ಚರ್ಯಕರವಾಯಿತೋ? ವ|| ಹಾಗೆ ಎರಡು ಸೈನ್ಯದ ಸಾಮಾನ್ಯದಳಗಳೂ ಕೋಲಾಟವಾಡುವ ಹಾಗೆ ಸ್ವಲ್ಪ ಹೊತ್ತುಥಾಟ್ ಪೆಟ್ ಎಂದು ಬಾಣಗಳಿಂದ ಹೊಡೆದಾಡಲು ಹತ್ತೆಂಟುಸಾವಿರ ಕುದುರೆಯ ಶರೀರಗಳು ನಾಶವಾದವು. ಏಳೆಂಟು ಸಮುದ್ರಗಳು ಸಮುದ್ರವನ್ನೂ ಮುಂದಕ್ಕೆ ನೂಕುವಂತೆ ಹರಿದುವು. ಅಶ್ವಾರೋಹಿಗಳು ಕಾದಿ ಶಕ್ತಿಗುಂದಿ ಹಿಂಜರಿದು ನಿಂದಾಗ ಎರಡು ಪಕ್ಷದ ಕತ್ತಿಯ ನಾಯಕರು ಪ್ರಳಯಕಾಲದ ಉರಿಯನ್ನು ಉಂಡೆಮಾಡಿದ ಹಾಗೂ ಬಡಬಾಗ್ನಿಯನ್ನು ಒಟ್ಟುಗೂಡಿಸಿದ ಹಾಗೂ ಬರಸಿಡಿಲಿನ ಕಿಡಿಗಳ ಸಮೂಹವನ್ನು ತನ್ನಲ್ಲಿ ಸೇರಿಕೊಂಡ ಹಾಗೂ ಗುಂಪಾಗಿ ಒಂದುಕೂಡಿ ನಿಂತ ಸೇನೆಯ ಸಾಲನ್ನು ವಹಿಸಿಕೊಂಡು ನರಿಯಂತೆ ಕೂಗಿ ಒಂದೇ ನೆಗೆತವನ್ನು ಹಾರಿ ಕತ್ತಿಗಳನ್ನು ಝಳಪಿಸಿ ಸೊಕ್ಕಿನಿಂದ ಪ್ರತಿಭಟಿಸಿ ಕಾದಿದರು. ೮೧. ಪುಸಿ, ನಸುವಂಚನೆ, ನೋರ್ಪನುವಿಸಿದಗಲಿತು, ತಕ್ಕುದಕ್ಕು, ಪಗೆ, ಕಯ್ಬಗೆ, ಕಯ್ಕುಸುರಿ, ನುಸುಳು, ಎನ್ನುವ ಮಾತ್ಸರ್ಯದ ಸೂಕ್ಷ್ಮ ವಿವರವನ್ನು ತಿಳಿದು ದಕ್ಷತೆಯಿಂದ ಹೊಡೆದು ಕೆಲವರು ಉತ್ಸಾಹಶೂನ್ಯರಾಗದೆ ಹೊಯ್ದಾಡಿದರು. ೮೨. ಬರಸಿಡಿಲು ಮೇಲೆ ಬೀಳುವಂತೆ ಮೇಲೆ ಬಿದ್ದವರನ್ನು ಸಂಸಿ ಕತ್ತಿಯ ಕೆಳತುದಿಯಿಂದ ಚೂರುಚೂರಾಗಿ ತರಿದು ಉಬ್ಬರ (?) ವೆಂಬುದನ್ನು ತಿಳಿದು ಹೆಣದ ರಾಶಿಗಳು ಬೀಳುವವರೆಗೆ ಹೊಡೆದಾಡಿದರು. ೮೩. ಶಸ್ತ್ರಶಾಸ್ತ್ರವೇ ಅವತಾರಮಾಡಿದ ಹಾಗೆ ಕತ್ತಿಯನ್ನು ಝಳಪಿಸಿ ಪ್ರಳಯಕಾಲದ ಯಮನ ಹಾಗೆ ಆರ್ಭಟ ಮಾಡುತ್ತ ಮೇಲೆ ಬೀಳುವ ಪರಾಕ್ರಮಶಾಲಿಗಳನೇಕರನ್ನು ಒಂದೊಂದೇ ಸಲ ಹೊಡೆದು ಕೊಂದರು. ೮೪. ಕತ್ತಿಕತ್ತಿಗಳ ತಗಲುವಿಕೆಯಿಂದ ಹುಟ್ಟಿ ಹೆಚ್ಚಿ ಮೇಲಕ್ಕೆ ಹಾರಿದ ಕಿಡಿಗಳ ಸಮೂಹದಿಂದ ಕೂಡಿದ ಕತ್ತಿಯ ಹೊಗೆಯು ಮಳೆಗಾಲದ ಮೋಡವು ಬಳ್ಳಿಮಿಂಚಿನಿಂದ ಪ್ರಕಾಶಿಸುವ ಹಾಗೆ ಹೊಳೆದು ಮೇಲಕ್ಕೆ ಹಬ್ಬಿತು. ೮೫. ತಲೆಯು ನೆಲದಲ್ಲಿ ಉರುಳಿದರೂ ಶೂರನೊಬ್ಬನು ಆ

ಈ ಪದ್ಯದಲ್ಲಿ ಸುರಗಿಕಾಳಗದ ಹಲವು ಪರಿಭಾಷಾ ಶಬ್ದಗಳಿವೆ. ಅವುಗಳ ಅರ್ಥ ಸ್ಪಷ್ಟವಲ್ಲದುದರಿಂದ ಪದ್ಯದ ಅರ್ಥವೂ ಅಸ್ಪಷ್ಟ.

ವ|| ಅಂತಣಿ ಮಣಿಯದೆ ಸೆಣಸಿ ಪೊಣರ್ದು ಕಿಱದುಪೊೞ್ತು ಕಾದಿ ನಿಂದಾಗಳ್-

ಉ|| ಮಾರುತ ಘಾತ ಸಂಚಳಿತ ಕೇತು ಸಮೂಹಮುದಗ್ರ ಚಕ್ರ ಚೀ
ತ್ಕಾರಮುದಾರ ವೀರಭಟ ಸಿಂಹನಿನಾದ ವಿಮಿಶ್ರಿತೋತ್ಕಟ|
ಜ್ಯಾರಾವಮಂಬರತರಮನಳ್ಳಿಱದವ್ವಳಿಪನ್ನೆಗಂ ಶಾರಾ
ಸಾರದಗುರ್ವು ಪರ್ವಿನಿಲೆ ತಾಗಿದುವುಗ್ರರಥಂ ರಥಾಳಿಯೊಳ್|| ೮೬

ವ|| ಅಂತು ತಾಗಿದಾಗಳ್

ಚಂ|| ಕುದುರೆಯ ಬಣ್ಣದಿಂ ರಥದ ತೋರ್ಕೆಯಿನೆತ್ತಿದ ಚಿತ್ರಕೇತು ವೃಂ
ದದ ಕುಱುಪಿಂದುದಗ್ರ ರಥಚೋದಕ ಚಿಹ್ನದಿನಾತನೀತನೆಂ|
ಬುದನಱದೊರ್ವರೊರ್ವರನೆ ಮಚ್ಚರದಿಂ ಗಱಸನ್ನೆಗೆಯ್ದಿದಿ
ರ್ಚಿದ ಪದದೊಳ್ ಪತತ್ರಿಮಯಮೆಂಬಿನಿತಾಯ್ತು ಸಮಸ್ತ ದಿಕ್ತಟಂ|| ೮೭

ಕಂ|| ಪರಶು ಶರ ನಿಕರದಿಂ ಕು
ಮ್ಮರಿಗಡಿದವೊಲೊಡನೆ ಕಡಿಯೆ ರಥಿಗಳ್ ರಥದಿಂ|
ಧರೆಗಿೞದು ವಿರಥರತಿರಥ
ರರೆಬರ್ ಮೇಲ್ವಾಯ್ದು ರಥಿಗಳಂ ಸುರಿಗಿಱದರ್|| ೮೮

ತೇರಂ ಪಾಯಿಸಿ ನೋಯಿಸಿ
ಪಾರುವ ಕುದುರೆಗಳನರೆಬರೆರ್ದೆಯುರಿಯೆಚ್ಚರ್|
ಸಾರಥಿಯ ರಥಿಯ ತಲೆಗಳ
ನೋರೊಂದಸ್ತ್ರದೊಳೆ ಪಾಱ ಜೀೞನೆಗಂ|| ೮೯

ನೆತ್ತರ ಕೆಸಳ್ ಗಾಲಿಗ
ಳೆತ್ತಂ ತಳರದೆ ಜಿಗಿಲ್ತು ನಿಲೆ ಧರೆಗಿೞದಾ|
ರ್ದೆತ್ತಿ ಪರಿಯಿಸಿದರೇಂ ಮೆ
ಯ್ವೆತ್ತುದೊ ರಥಕಲ್ಪಮಲ್ಲಿ ಸೂತರ್ ಕೆಲಬರ್|| ೯೦

ವ|| ಅಂತುಭಯ ವರೂಥಿನಿಯ ವರೂಥಂಗಳ್ ಮಲ್ಲಾಮಲ್ಲಿಯಾಗೆ ಕಾದುವಾಗಳ್-

ತಲೆಯನ್ನು ಹಿಡಿದು ಮುಂಡದಲ್ಲಿಟ್ಟುಕೊಂಡು ಅಕವಾದ ಕೋಪದಿಂದ ಕೃತಕವಾದ ತಲೆಯನ್ನು ಧರಿಸಿ ಆಟವಾಡುವವನನ್ನು ಸ್ವಲ್ಪಮಟ್ಟಿಗೆ ಅನುಕರಿಸಿ ಕಾದಿದನು. ವ|| ಹಾಗೆ ಸೇನಾಸಮೂಹವು ಭಯಪಡದೆ ಮತ್ಸರಿಸಿ ಜಗಳವಾಡಿ ಸ್ವಲ್ಪ ಕಾಲ ಕಾದಿ ನಿಂತರು. ೮೬. ಗಾಳಿಯ ಹೊಡೆತದಿಂದ ಚಲಿಸುತ್ತಿರುವ ಬಾವುಟಗಳ ಸಮೂಹವೂ ಎತ್ತರವಾದ ಚಕ್ರಗಳ ಚೀತ್ಕಾರ ಶಬ್ದವೂ ಶ್ರೇಷ್ಠರಾದ ವೀರಭಟರ ಸಿಂಹನಾದದಿಂದ ಕೂಡಿದ ಅತ್ಯಕವಾದ ಬಿಲ್ಲಿನ ಹೆದೆಯ ಟಂಕಾರಧ್ವನಿಯೂ ಆಕಾಶಪ್ರದೇಶದ ಒಳಭಾಗವನ್ನು ನಡುಗುವಂತೆ ಮಾಡಿ ಪ್ರವೇಶಿಸಿದುವು. ಬಾಣದ ಮಳೆಯು ವಿಶೇಷವಾಗಿ ಹಬ್ಬು ಹರಿಯಿತು. ಭಯಂಕರವಾದ ರಥಗಳು ರಥಸಮೂಹದೊಡನೆ ತಾಗಿದುವು. ವ|| ಹಾಗೆ ತಾಗಿದಾಗ- ೮೭. ಕುದುರೆಯ ಬಣ್ಣದಿಂದಲೂ ರಥಗಳ ತೋರಿಕೆಯಿಂದಲೂ ಎತ್ತಿ ಕಟ್ಟಿರುವ ಚಿತ್ರಖಚಿತವಾದ ಧ್ವಜಗಳ ಗುರುತಿನಿಂದಲೂ ಶ್ರೇಷ್ಠರಾದ ಸಾರಥಿಗಳ ಚಿಹ್ನೆಗಳಿಂದಲೂ ಪರಸ್ಪರ ಪರಿಚಯ ಮಾಡಿಕೊಂಡು (ಗುರುತು ಹಿಡಿದು) ಒಬ್ಬರನೊಬ್ಬರು ಮತ್ಸರದಿಂದ ಬಾಣದ ಗರಿಯ ಮೂಲಕ ಸನ್ನೆಮಾಡಿ ಎದುರಿಸಿದ ಸಂದರ್ಭದಲ್ಲಿ ಸಮಸ್ತವಾದ ದಿಕ್ತಟವೂ ಬಾಣಮಯವೆನ್ನುವ ಹಾಗಾಯಿತು. ೮೮. ಕೊಡಲಿಯಾಕಾರದ ಬಾಣಗಳ ಸಮೂಹದಿಂದ ಕಾಡಿನ ಮರಗಳನ್ನು ತರಿಯುವಂತೆ ತಕ್ಷಣವೇ ತರಿದುಹಾಕಲು ರಥದಲ್ಲಿದ್ದವರು ಭೂಮಿಗಿಳಿದು ರಥವಿಲ್ಲದ ಅನೇಕ ಅತಿರಥರ ಮೇಲೆ ಬಿದ್ದು ರಥದಲ್ಲಿದ್ದವರನ್ನು ಕತ್ತಿಯಿಂದ ಕತ್ತರಿಸಿದರು. ೮೯. ಕೆಲವರು ತೇರನ್ನು ಹರಿಯಿಸಿ ಹಾರುತ್ತಿರುವ ಕುದುರೆಗಳನ್ನು ನೋಯಿಸಿ ಸಾರಥಿಯ ಮತ್ತು ರಥದೊಳಗಿರುವವನ ತಲೆಗಳನ್ನು ಒಂದೇ ಬಾಣದಿಂದ ಹಾರಿ ಜೀರೆಂದು ಶಬ್ದ ಮಾಡುವ ಹಾಗೆ ಹೊಡೆದರು. ೯೦. ರಕ್ತದ ಕೆಸರಿನಲ್ಲಿ ಚಕ್ರಗಳು ಹೂತುಹೋಗಿ ಯಾವ ಕಡೆಯೂ ಚಲಿಸದೆ ಅಂಟಿಕೊಂಡು ನಿಲ್ಲಲು ಭೂಮಿಗಿಳಿದು ಆರ್ಭಟಮಾಡಿ ಕೆಲವರು ಸೂತರು ಎತ್ತಿ ಹರಿಯುವ ಹಾಗೆ ಮಾಡಿದರು. ಆ ಸಮಯದಲ್ಲಿ ಅಲ್ಲಿ ಅವರ ರಥಕಲ್ಪಕೌಶಲವು ಅದ್ಭುತವಾಗಿದ್ದಿತು. ವ|| ಹಾಗೆ ಎರಡುಸೈನ್ಯದ ತೇರುಗಳು ಪರಸ್ಪರ

ಮ|| ಉಡಿದಿರ್ದಚ್ಚೞದೀಸು ತೞದ ನೊಗಂ ಜೀೞ್ದ ಚಕ್ರಂ ಸಿಡಿಲ್
ಪೊಡೆದಂತೊರ್ಮೆಯೆ ಸೂಸಿ ಪಾಱದ ಮಡಂ ನುರ್ಗಾದ ಕೀಲ್ ಸಾಯಕಂ|
ನಡೆ ನೊಂದೆಯ್ದೆ ಸುರುಳ್ದುರುಳ್ದ ತುರಗಂ ಸುರ್ಕಿರ್ದ ಸೂತಂ ಕಡಲ್
ಕಡಲಂ ಮುಟ್ಟಿ ತೆರಳ್ವ ನೆತ್ತರ ಪೊನಲ್ ಕಣ್ಗೊಂಡುದುಗ್ರಾಜಿಯೊಳ್|| ೯೧

ವ|| ಅಂತು ಪತ್ತೆಂಟು ನೆತ್ತರ ಕಡಲ್ ಕಡಲನಟ್ಟೆಯುಂ ವರೂಥಯೂಥಂಗಳಳ್ಕಿ ಮೆಳ್ಕಿದಂತಾದಾಗಳ್-

ಉ|| ಇಕ್ಕಿದ ಲೋಹವಕ್ಕರೆಯ ಕರ್ಪುಗಳಿಂ ಕವಿತರ್ಪ ವಿಂಧ್ಯ ಶೈ
ಲಕ್ಕೆಣೆಯಾಗೆ ಜೋದರಿಸುವಂಬಿನ ಬಲ್ಸರಿ ತಿಣ್ಣಮಾಗಿ ಕೆ|
ಯ್ಮಿಕ್ಕು ವಿರೋ ಸಾಧನ ಘಟಾಳಿಯನೋಡಿಸಲಾಗಳಾರ್ದು ಬಿ
ಟ್ಟಕ್ಕಿದರುಗ್ರ ಸಿಂಧುರ ಘಟಾವಳಿಯಂ ಮುಳಿಸಿಂ ನಿಷಾದಿಗಳ್|| ೯೨

ಶಾ|| ಆದಿತ್ಯಂ ಮಸುಳ್ವನ್ನೆಗಂ ಧ್ವಜ ಘಟಾಟೋಪಂಗಳಿಂದಂ ಲಯಾಂ
ಭೋದಂಗಳ್ ಕವಿವಂತೆವೋಲ್ ಕವಿವುದುಂ ಕಾಲ್ಗಾಪು ಕಾಲ್ಗಾಪಿನೊಳ್|
ಜೋದರ್ ಜೋದರೊಳಾನೆಯಾನೆಯೊಳಗುರ್ವಪ್ಪನ್ನೆಗಂ ಕಾದೆ ಕ
ಣ್ಗಾದಂ ಚೆಲ್ವೆಸೆದತ್ತು ಮೂಱು ನೆಲೆಯಿಂ ಮಾದ್ಯದ್ಗಜೇಂದ್ರಾಹವಂ|| ೯೩

ವ|| ಅಂತಾ ದಂತಿಘಟೆಗಳನಾರೋಹಕರ್ ತೋಱಕೊಟ್ಟೊಂದೊಂದರ್ಕೆ ಮೊಗಂಬುಗಿಸಿದಾಗಳುಭಯವ್ಯಾಳದಂತಿ ವಧ್ಯಕ್ರಮಂಗಳೊಳ್ ಭಾರ್ಗವರ್ ಸುರಿಗಿಱವಂತಿಱಯೆ ಸೂಸುವ ಕೆನ್ನೆತ್ತರ್ ಕೞಲ್ದುದಿರ್ವ ಸಕ್ಕದ ಸಿಪ್ಪುಗಳುಂ ಸಿಡಿಲ್ದು ಜೀೞ್ವ ಕೋೞ್ಕಳುಮಗುರ್ವಂ ಪಡೆಯೆ-

ಚಂ|| ನಡುವ ಸರಲ್ಗೆ ಮೆಯ್ಯೊಳಗಡಂಗುವ ಸಂಕುಗೆ ದಿಂಕುಗೊಳ್ವ ಕ
ಕ್ಕಡೆಗಿದಿರುರ್ಚುವಿಟ್ಟಿಗಿದಿರಾನೆಯ ಕೋೞ್ಕಳ ಕೋಳ್ಗೆ ನೊಂದು ಬಾ|
ಯ್ವಿಡದಿನಿಸಪ್ಪೊಡಂ ಪೆಳಱದಳ್ಕದೆ ಪಾವಿನಲಿಟ್ಟವೋಲ್ ಪೊಡ
ರ್ಪುಡುಗದೆ ಬಿೞ್ದುವಿರ್ದ ನೆಲೆಯಿಂ ಕೆಳವುನ್ಮದ ಗಂಧಸಿಂಧುರಂ|| ೯೪

ಎದುರೆದುರಿಗೆ ಯುದ್ಧ ಮಾಡುತ್ತಿರಲು ೯೧. ಒಡೆದುಹೋದ ಅಚ್ಚಿನ ಮರವೂ ನಾಶವಾದ ಇರಚಿನ ಮರವೂ ತಗ್ಗಿಹೋದ ನೊಗವೂ ಜೀರೆಂದು ಶಬ್ದಮಾಡುತ್ತಿರುವ ಚಕ್ರಗಳೂ ಸಿಡಿಲು ಹೊಡೆದ ಹಾಗೆ ಒಂದೇ ಸಲ ಹಾರಿದ ಪಾರೆಯ ಮರವೂ ಜಜ್ಜಿಹೋದ ಕೀಲೂ, ಬಾಣವು ನಾಟಲಾಗಿ ನೊಂದು ಸಂಪೂರ್ಣವಾಗಿ ಸೊರಗಿಕೊಂಡು ಬಿದ್ದ ಕುದುರೆಯೂ ಸಮುದ್ರವು ಸಮುದ್ರವನ್ನು ಮುಟ್ಟುವಂತೆ ಹರಿದ ರಕ್ತಪ್ರವಾಹವೂ ಯುದ್ಧಭೂಮಿಯಲ್ಲಿ ಭಯಂಕರವಾಗಿ ಕಂಡವು. ವ|| ಹಾಗೆ ಹತ್ತೆಂಟು ಸಮುದ್ರವನ್ನು ಹಿಮ್ಮೆಟ್ಟಿಸಲು ರಥಸಮೂಹಗಳು ಸಂಪೂರ್ಣವಾಗಿ ನಾಶವಾದವು. ೯೨. ತೊಡಿಸಿದ ಗುಳದಿಂದ ಕೂಡಿದ ಕಪ್ಪುಬಣ್ಣದ ಆನೆಗಳು ಮೇಲೆ ಕವಿದುಬೀಳುವ ವಿಂಧ್ಯಪರ್ವತಕ್ಕೆ ಸಮಾನವಾಗಿರಲು ಮಾವಟಗರು ಪ್ರಯೋಗಿಸುವ ಬಾಣದ ಬಲವಾದ ಮಳೆಯು ಅಕವಾಗಿ ಕೈಮೀರಿ ಶತ್ರುಪಕ್ಷದ ಆನೆಯ ಸಮೂಹವನ್ನು ಓಡಿಸಲು ಆಗ ಘಟ್ಟಿಯಾಗಿ ಕೂಗಿಕೊಂಡು ಮಾವಟಿಗರು ಭಯಂಕರವಾದ ಆನೆಯ ಸಮೂಹವನ್ನು ಛೂಬಿಟ್ಟರು. ೯೩. ಸೂರ್ಯನು ಕಾಂತಿಹೀನನಾಗುವ ಹಾಗೆ ಧ್ವಜದಿಂದ ಕೂಡಿದ ಆನೆಗಳು ವಿಜೃಂಭಣೆಯಿಂದ ಪ್ರಳಯಕಾಲದ ಮೋಡಗಳು ಮುತ್ತುವ ಹಾಗೆ ಮುತ್ತಲು ಪದಾತಿ ಸೈನ್ಯವು ಪದಾತಿಗಳೊಡನೆಯೂ ಮಾವಟಿಗರು ಮಾವಟಿಗರೊಡನೆಯೂ ಭಯವುಂಟಾಗುವ ಹಾಗೆ ಕಾದುತ್ತಿರಲು ಆ ಮದ್ದಾನೆಗಳ ಕಾಳಗವು ಮೂರು ಅವಸ್ಥೆಗಳಲ್ಲಿಯೂ ಕಣ್ಣಿಗೆ ಸುಂದರವಾಗಿದ್ದಿತು. ವ|| ಹಾಗೆ ಆ ಮಂದೆಯ ಸಮೂಹಗಳನ್ನು ಮೇಲಿದ್ದ ಮಾವಟಿಗರು ಛೂಬಿಟ್ಟು ಒಂದಕ್ಕೊಂದಕ್ಕೆ ವಿದಾಯಮಾಡಿಸಿದಾಗ ಎರಡು ಕಡೆಯ ತುಂಟಾನೆಗಳೂ ಕೊಲ್ಲುವ ವಿಧಾನಗಳಲ್ಲಿ ಧನುರ್ಧರರು ಕತ್ತಿಯಿಂದ ಇರಿಯುವಂತೆ ಇರಿಯಲು ಚೆಲ್ಲುವ ರಕ್ತವೂ ಸಡಿಲವಾಗಿ ಕೆಳಗೆ ಬೀಳುವ ಕಟವಾಯಿಚಪ್ಪುಗಳೂ ಜೀರೆಂದು ಸಿಡಿಯುವ ಕೊಂಬುಗಳೂ ಭಯವನ್ನುಂಟುಮಾಡಿದುವು. ೯೪. ಶರೀರದೊಳಕ್ಕೆ ನಾಟಿಕೊಳ್ಳುವ ಬಾಣಗಳಿಗೂ ಮೆಯ್ಯೊಳಕ್ಕೆ ಹೋಗಿ ಅಡಗಿಕೊಳ್ಳುವ ಕಠಾರಿಗಳಿಗೂ ಹಾರಿ ಬರುವ ಮುಳ್ಳು ಕೋಲುಗಳಿಗೂ ಎದುರಾಗಿ ಚುಚ್ಚಿ ಬರುತ್ತಿರುವ ಈಟಿಗಳಿಗೂ ಆನೆಯ ಕೊಂಬುಗಳ ತಿವಿತಕ್ಕೂ ನೊಂದು ಕೂಗಿಕೊಳ್ಳದೆ ಸ್ವಲ್ಪವೂ ಹೆದರದೆ ಶಕ್ತಿಗುಂದದೆ ಹಾವಿನಿಂದ

ಕಂ|| ಪಾಱುವ ಪಾಱುಂಬಳೆ ಕೊಳೆ
ಜೀೞ್ದಂಬರಕೆ ತಲೆ ಸಿಡಿಲ್ದೊಡಮಾ ಕಾ|
ಯ್ಪಾಱದೆ ಹರಣಂಗೆಯ್ದುವು
ಜಾಱಲ್ಲದೆ ಜೋದರಟ್ಟೆಗಳ್ ಕೆಲವಾಗಳ್|| ೯೫

ಚಂ|| ಕಣಕೆನೆ ಚಕ್ರತೀವ್ರ ತಲೆ ಪೋದೊಡೆ ಜೋದರಟ್ಟೆ ಸಂ
ದಣಿಸಿದ ಬಂಧದಿಂ ಬಿಸುಗೆಯೊಳ್ ನೆಲಸಿರ್ದೆಸೆದಾಡೆ ನಟ್ಟ ಕೂ|
ರ್ಗಣೆವೆರಸಿರ್ದ ಕೂರ್ಗಣೆಗಳುಚ್ಚಳಿಸುತ್ತಿರೆ ಸುಯ್ದು ಪುಣ್ಣತಿಂ
ಥಿಣಿಗಳಿನಂದಗುರ್ವುವೆರಸಾಡಿದುವೊಂದೆರಡಾನೆಯಟ್ಟೆಗಳ್|| ೯೬

ಕಂ|| ಆನಿರೆಯೇನಿಱವುದು ಗಡ
ಮೀ ನಾಲ್ಕುಂ ಬಲಮಿದಲ್ತೆ ಪರಿಭವಮೆನಗಂ|
ದೇನುಂ ಮಾಣದೆ ಭೀಮನ
ನೂನಬಲಂ ಬಂದು ತಾಗಿದಂ ಕುರುಬಲದೊಳ್|| ೯೭

ವ|| ಅಂತು ಕುರುಬಲದ ಕರಿಘಟೆಗಳಂ ನುಂಗುವಂತೆ ದೆಸೆದೆಸೆಗೆ ಮಿಳಿರ್ದು ಮಿಳ್ಳಿಸಿದ ಸಿಂಗದ ಪೞವಿಗೆಯುಂ ಕುರುಬಲಕ್ಕೆ ಮಿೞ್ತು ಪಲ್ಮೊರೆವಂತೆ ಮೊರೆದು ಪರಿವ ತನ್ನ ಕಿಸುವೊನ್ನ ರಥಮುಂ ಭಯಂಕರಾಕಾರಮಾಗೆ ಪಗೆವರ ಗಂಟಲನೊತ್ತುವಂತೆ ಪೌಂಡ್ರಮೆಂಬ ಶಂಖಮನೊತ್ತಿ ಮುಂದೊಡ್ಡಿದೊಡ್ಡೆಲ್ಲಮನಂಬಿನ ಬಂಬಲೊಳೆ ಪಡಲ್ವಡಿಸುತ್ತುಂ ಬರ್ಪ ಭೀಮಸೇನಂಗೆ ದುರ್ಯೋಧನನ ದಿರದಿದಿರಾಂತಾಗಳ್-

ಉ|| ಎಂತಿದಿರಾಂತೆಯಂತೆ ಕಲಿಯಾಗೊಳಸೋರದಿರೆಂದು ಭೀಮನೋ
ರಂತೆ ಕನಲ್ದು ತಿಣ್ಣಮಿಸೆ ಪಾಯ್ವ ಸರಲ್ಗಳನೆಯ್ದಲೀಯದಾಂ|
ತಾಂತು ನಿರಂತರಂ ತಱದು ಸೂತನನಾತನ ವಾಜಿಯಂ ಮಹೀ
ಶಂ ತೆಗೆದೆಚ್ಚನಚ್ಚ ಬಿಸುನೆತ್ತರ ಸುಟ್ಟುರೆ ಸೂಸುವನ್ನೆಗಂ|| ೯೮

ಕಂ|| ಇಸೆ ಮಸಗಿ ಭೀಮನೀರ
ಯ್ದು ಶಿತಾಸ್ತ್ರದಿನುರುಳೆ ಸೂತನುಡಿಯೆ ರಥಂ ಕೀ|
ಲಿಸೆ ಕುದುರೆ ಮುಱಯೆ ಪೞವಿಗೆ
ಮಸಕದಿನೆಚ್ಚೆಚ್ಚನೊಂದೆ ಸರಲೊಳ್ ನೊಸಲಂ|| ೯೯

ಹೊಡೆದ ಹಾಗೆ ಸಾಮರ್ಥ್ಯವನ್ನು ಕಡಿಮೆಮಾಡಿಕೊಳ್ಳದೆ ಕೆಲವು ಮದ್ದಾನೆಗಳು ತಾವಿದ್ದ ಸ್ಥಳದಿಂದಲೇ ಉರುಳಿದುವು. ೯೫. ಹಾರಿ ಬರುವ ಚಕ್ರಾಯುಧವು ತಲೆಗಳನ್ನು ಕತ್ತರಿಸಿ ಜೀರೆಂದು ಶಬ್ದಮಾಡುತ್ತ ಆಕಾಶಕ್ಕೆ ಸಿಡಿದರೂ ಮಾವಟಿಗರ ಕೆಲವು ಮುಂಡಗಳು ಆಗ ಉತ್ಸಾಹಗುಂದದೆ ಹಿಂಜರಿಯದೆ ಶತ್ರುಗಳ ಪ್ರಾಣಾಪಹಾರ ಮಾಡಿದುವು. ೯೬. ಹರಿತವಾದ ಚಕ್ರಾಯುಧದ ಪೆಟ್ಟಿನಿಂದ ತಲೆಗಳು ಕಣಕ್ಕೆಂದು ಕತ್ತರಿಸಿ ಹೋದರೂ ಮಾವಟಿಗರ ಮುಂಡಗಳು ಗುಂಪಾಗಿ ಸೇರಿ ಅಂಬಾರಿಯಲ್ಲಿಯೇ ಇದ್ದು ಸೊಗಸಾಗಿ ನೆಗೆದು ಕುಣಿದುವು. ಹರಿತವಾದ ಬಾಣಗಳು ನಾಟಿಕೊಂಡಿದ್ದರೂ ತೀವ್ರ ಬಾಣಗಳು ಮೇಲಕ್ಕೆದ್ದು ಹಾರುತ್ತಿದ್ದರೂ ಆರುತ್ತಿದ್ದ ಹುಣ್ಣಿನ ಸಮೂಹಗಳು ಭಯಂಕರವಾಗಿ ಕಾಣುತ್ತಿದ್ದರೂ ಒಂದೆರಡು ಆನೆಯ ಮುಂಡಗಳು ಅದ್ಭುತವಾಗಿ ಕುಣಿದಾಡಿದುವು. ವ|| ಹಾಗೆ ಎರಡು ಸೈನ್ಯದ ಆನೆಯ ಸಮೂಹಗಳು ತಗುಲಿ ಅಪ್ಪಳಿಸಿ ಹೊಡೆಯಲು ಬಿಸಿರಕ್ತದ ಜರಿಗಳು ಉಬ್ಬಿ ಹರಿದುವು. ದೊಡ್ಡ ಝರಿಗಳಿಂದ ಕೂಡಿದ ಕೆಂಪುಕಲ್ಲಿನ ಬೆಟ್ಟಗಳಂತೆ ಆನೆಗಳು ಕೆಳಗೆ ಬಿದ್ದು ನಾಶವಾಗಿ ರಾಶಿಯಾದುವು. ೯೭. ‘ಈ ಚತುರಂಗಬಲವು ನಾನಿದ್ದರೂ ಯುದ್ಧ ಮಾಡುತ್ತದೆಯಲ್ಲವೇ? ಇದಲ್ಲವೇ ನನಗೆ ಅವಮಾನಕರ’ ಎಂದು ಯಾವುದನ್ನೂ ಲಕ್ಷಿಸದೆ ಸ್ವಲ್ಪವೂ ಕಡಿಮೆಯಿಲ್ಲದ ಶಕ್ತಿಯುಳ್ಳ ಭೀಮನು ಕೌರವಸೈನ್ಯವನ್ನು ಬಂದು ತಾಗಿದನು. ವ|| ಕೌರವಸೈನ್ಯದ ಆನೆಗಳ ಸಮೂಹವನ್ನು ನುಂಗುವ ಹಾಗೆ ದಿಕ್ಕುದಿಕ್ಕಿಗೂ ಕಂಪಿಸಿ ಚಲಿಸುತ್ತಿದ್ದ ಸಿಂಹಧ್ವಜವೂ ಕೌರವಸೈನ್ಯಕ್ಕೆ ಮೃತ್ಯುದೇವತೆಯೇ ಹಲ್ಲುಕಡಿಯುವಂತೆ ಶಬ್ದಮಾಡಿಕೊಂಡು ಬರುತ್ತಿದೆಯೋ ಎಂಬಂತೆ ಹರಿದು ಬರುತ್ತಿದ್ದ ತಾಮ್ರದ ತೇರೂ ಭಯಂಕರವಾಗಿರಲು ಶತ್ರುಗಳ ಗಂಟಲನ್ನು ಒತ್ತುವ ಹಾಗೆ ಪೌಂಡ್ರವೆಂಬ ಶಂಖವನ್ನು ಊದುತ್ತ, ಮುಂದೆ ಒಡ್ಡಿದ್ದ ಸೈನ್ಯವೆಲ್ಲವನ್ನೂ ಬಾಣಗಳ ಸಮೂಹದಿಂದ ಕೆಳಗೆ ಉರುಳಿಸುತ್ತ ಬರುತ್ತಿದ್ದ ಭೀಮಸೇನನಿಗೆ ಹೆದರದೆ ದುರ್ಯೋಧನನು ಪ್ರತಿಭಟಿಸಿದನು- ೯೮. ಹೇಗೆ ಎದುರಿಸಿದೆಯೋ ಹಾಗೆಯೇ ಶೂರನೂ ಆಗು; ಹಿಂಜರಿಯಬೇಡ ಎಂದು ಭೀಮನು ಒಂದೇ ಸಮನಾಗಿ ಕೋಪಿಸಿಕೊಂಡು ಬಲವಾಗಿ ಬಾಣಪ್ರಯೋಗ ಮಾಡಲು (ಹಾಗೆ) ಹಾರಿಬರುತ್ತಿದ್ದ ಬಾಣಗಳು ತನ್ನಲ್ಲಿಗೆ ಬರಲು ಅವಕಾಶಮಾಡದೆ ದುರ್ಯೋಧನನು ಅದನ್ನು ಪ್ರತಿಭಟಿಸಿ ಒಂದೇ ಸಮನಾಗಿ ಕತ್ತರಿಸಿ (ಭೀಮನ) ಸಾರಥಿಯನ್ನೂ ಆತನ ಕುದುರೆಯನ್ನೂ ಬಾಣದಿಂದ ಹೊಡೆದು ಸ್ವಚ್ಛವಾದ ಬಿಸಿರಕ್ತದ ಪ್ರವಾಹವನ್ನು ಹರಿಯಿಸಿದನು. ೯೯. ಹಾಗೆ ಹೊಡೆಯಲಾಗಿ ಭೀಮನು ರೇಗಿ ಹರಿತವಾದ ಹತ್ತು ಬಾಣಗಳಿಂದ ಸೂತನು ಉರುಳುವ ಹಾಗೆಯೂ ರಥವೂ ಒಡೆದುಹೋಗುವ ಹಾಗೆಯೂ ಕುದುರೆಯು ಮೊಳೆಯಿಂದ

ಪಟ್ಟಂಗಟ್ಟಿದ ನೊಸಲಂ
ನಟ್ಟ ಸರಲ್ವಿಡಿದು ನೆತ್ತರಂಬಿವಿವಿಡೆ ಕ|
ಣ್ಗೆಟ್ಟಿರ್ದ ನೃಪನನಂಕದ
ಕಟ್ಟಾಳ್ಗಳ್ ಕಾದು ಕಳಿಪೆ ದುರ್ಯೋಧನನಂ|| ೧೦೦

ವ|| ಆಗಳವನನುಜರ್ ನೂರ್ವರುಂ ಬಂದು ತನ್ನನೊರ್ವನಂ ತಾಗಿದೊಡನಿಬರುಮಂ ವಿರಥರ್ಮಾಡಿ ಭಾರತಮನಿಂದೆ ಸಮೆಯಿಸುವೆನೆಂದು ಕೋದಂಡಮಂ ಬಿಸುಟು ಗದಾದಂಡಮಂ ಭುಜಾದಂಡದೊಳಳವಡಿಸಿಕೊಂಡು-

ಚಂ|| ಕುರುಬಲಮಂ ಪಡಲ್ವಡಿಪ ತಕ್ಕಿನೊಳೆಯ್ತರೆ ಬರ್ಪ ಭೀಮನಂ
ಬರೆ ಬರಲೀಯದಿರ್ದವರನಾ ಪದದೊಳ್ ಪೆಱಗಿಕ್ಕಿ ಗಂಧಸಿಂ|
ಧುರ ಘಟೆ ನಾಲ್ಕು ಕೋಟಿವೆರಸಾಗಡೆ ಬಂದು ಕಳಿಂಗರಾಜನಾಂ
ತಿರೆ ಪಗೆ ಕೆಯ್ಗೆವಂದು ಬರ್ದುಕಾಡಿದ ಬಲ್ಮುಳಿಸಿಂ ವೃಕೋದರಂ|| ೧೦೧

ವ|| ಅಂತು ಕಳಿಂಗರಾಜ ಮತ್ತಮಾತಂಗಘಟೆಗಳ ಮೇಲೆ ಮುಳಿಸಂ ಕಳೆವೆನೆಂದು ಸಿಂಹನಾದದಿನಾರ್ದು-

ಮ|| ಗಜೆಯಂ ಭೋರೆನೆ ಪರ್ವಿ ಬೀಸಿ ಕಡುಪಿಂದೆಯ್ತಂದು ಮಾಱುಂತ ಸಾ
ಮಜಸಂಘಾತಮನೊಂದುಗೊಳ್ಳೆರಡುಗೊಳ್ಳೆಂದುರ್ವಿ ಪೊಯ್ವೊಂದು ಪೊ|
ಯ್ಗೆ ಜವಂಗುಂದಿ ಸಿಡಿಲ್ದು ಮುನ್ನಡಿಗುರುಳ್ತರ್ಪನ್ನೆಗಂ ಬೀೞೆ ದಿ
ಗ್ಗಜಮಂ ಪೋಲ್ವ ಗಜಂಗಳಂ ಪಲವುಮಂ ಕೊಂದು ಮರುನ್ನಂದನಂ|| ೧೦೨

ಕಂ|| ಬಡಿಗೊಳೆ ಬಿದು ಬಿಬ್ಬರ ಬಿರಿ
ದೊಡನುಗೆ ಪೊಸಮುತ್ತು ಕೋಡನೂಱ ಮದೇಭಂ|
ಕೆಡೆದುವು ಕೊಲ್ಲದಿರೆಂದಿರ
ದಡಿಗೆಱಗುವ ತೆಱನನಿನಿಸನನುಕರಿಸುವಿನಂ|| ೧೦೩

ವ|| ಅಂತು ಪತ್ತೆಂಟುಸಾಸಿರಮಾನೆಯಂ ಪಡಲ್ವಡಿಸಿಯುಂ ಸೈರಿಸಲಾಱದೆ-

ಮ|| ಪಿಡಿದೊಂದೊಂದಱ ಗಾತ್ರಮಂ ತಿರಿಪಿಕೊಂಡೊಂದೊಂದಳ್ ಪೊಯ್ದುಮೆ
ಲ್ವಡಗಪ್ಪನ್ನೆಗಮೆತ್ತಿಕೊಂಡಸಗವೊಯ್ವೊಯ್ಲೊಳ್ ತಡಂಬೊಯ್ದುಮು|
ಳ್ಳಡುಗುಂ ನೆತ್ತರುಮೆಲ್ವುಮೆಲ್ಲ ದೆಸೆಗಂ ಜೀೞ್ದು ಪಾ ಬ
ಲ್ದಡಿಗಂ ಬೀಸಿಯುಮೊಂದು ಕೋಟಿವರೆಗಂ ಕೊಂದಂ ಮದೇಭಂಗಳಂ|| ೧೦೪

ನಾಟಿಕೊಂಡಹಾಗೆಯೂ ಧ್ವಜವು ಮುರಿದು ಹೋಗುವ ಹಾಗೆಯೂ ಹೊಡೆದು ಕೋಪದಿಂದ ಒಂದೇ ಬಾಣದಿಂದ ದುರ್ಯೋಧನನ ಹಣೆಗೆ ಹೊಡೆದನು. ೧೦೦. ಪಟ್ಟಕಟ್ಟಿದ ಹಣೆಯನ್ನನುಸರಿಸಿ ನಾಟಿದ ಬಾಣವನ್ನು ಅನುಸರಿಸಿ ರಕ್ತವು ಧಾರಾಕಾರವಾಗಿ ಹರಿಯಲು ಕಣ್ಣು ಕಾಣದೆ ಇದ್ದ ರಾಜನನ್ನು ಪ್ರಸಿದ್ಧರಾದ ಶೂರರು ರಕ್ಷಿಸಿ ಶಿಬಿರಕ್ಕೆ ಕಳುಹಿಸಿದರು. ವ|| ಆಗ ಅವನ ನೂರು ತಮ್ಮಂದಿರೂ ಬಂದು ತನ್ನೊಬ್ಬನನ್ನು ತಾಗಲು ಅಷ್ಟು ಜನವನ್ನೂ ರಥದಿಂದ ಉರುಳಿಸಿ ಭಾರತಯುದ್ಧವನ್ನು ಈ ದಿನವೇ ಮುಗಿಸಿಬಿಡುತ್ತೇನೆ ಎಂದು ಬಿಲ್ಲನ್ನು ಬಿಸಾಡಿ ಗದಾದಂಡವನ್ನು ದಂಡದಂತಿರುವ ತನ್ನ ತೋಳಿನಲ್ಲಿ ಅಳವಡಿಸಿಕೊಂಡನು. ೧೦೧. ಕೌರವಸೈನ್ಯವನ್ನು ಉರುಳಿಸುವ ಸಾಮರ್ಥ್ಯದಿಂದ ಬರುತ್ತಿದ್ದ ಭೀಮಸೇನನನ್ನು ಬರುವುದಕ್ಕೆ ಅವಕಾಶಮಾಡದೆ ಅಲ್ಲಿದ್ದವರನ್ನು (ಅಲ್ಲಿಂದ) ಹೊರಕ್ಕೆ ತಳ್ಳಿ ಶ್ರೇಷ್ಠವಾದ ನಾಲ್ಕುಕೋಟಿ ಮದ್ದಾನೆಗಳೊಡಗೂಡಿ ಕಳಿಂಗರಾಜನು ಬಂದು ಎದುರಿಸಿದನು. ಶತ್ರುವು ಕೈಗೆ ಸಿಕ್ಕಿಯೂ ನುಣುಚಿಕೊಂಡು ವಿಶೇಷ ಕೋಪವನ್ನು ಭೀಮನು- ವ|| ಕಳಿಂಗರಾಜನ ಮದ್ದಾನೆಗಳ ಸಮೂಹದ ಮೇಲೆ ತೀರಿಸಿಕೊಳ್ಳುತ್ತೇನೆ ಎಂದು ಸಿಂಹಗರ್ಜನೆಯಿಂದ ಆರ್ಭಟಿಸಿದನು. ೧೦೨. ಭೀಮನು ಗದೆಯನ್ನು ಭೋರೆಂದು ವಿಸ್ತಾರವಾಗಿ ಬೀಸಿ ಕ್ರೌರ್ಯದಿಂದ ಬಂದು ಪ್ರತಿಭಟಿಸಿದ ಆನೆಗಳ ಸಮೂಹವನ್ನು ಒಂದು ತಕ್ಕೊ, ಎರಡು ತಕ್ಕೋ ಎಂದು ಉಬ್ಬಿ ಹೊಡೆಯುವ ಹೊಡೆತಕ್ಕೆ ಆನೆಗಳು ತಮ್ಮ ವೇಗವನ್ನು ಕಳೆದುಕೊಂಡು ಸಿಡಿದು ಮೊದಲೇ ಅಡಿಗುರುಳುವ ಹಾಗೆ ಉರುಳಲು ದಿಗ್ಗಜಗಳಂತಿದ್ದ ಅನೇಕ ಆನೆಗಳನ್ನು ಕೊಂದನು. ೧೦೩. ಭೀಮನ ಗದೆಯ ಪೆಟ್ಟಿನಿಂದ ಕುಂಭಸ್ಥಳವು ಸಂಪೂರ್ಣವಾಗಿ ಬಿರಿದುಹೋಯಿತು. ಜೊತೆಯಲ್ಲಿಯೇ (ಕುಂಭಸ್ಥಳದಲ್ಲಿದ್ದ) ಹೊಸಮುತ್ತುಗಳು ಚೆಲ್ಲಾಡಿದುವು. ಮದ್ದಾನೆಗಳು ಕೊಂಬನ್ನು ಕೆಳಕ್ಕೆ ಊರಿ ‘ನಮ್ಮನ್ನು ಕೊಲ್ಲಬೇಡ’ ಎಂದು ಭೀಮನ ಕಾಲಿಗೆ ಬೀಳುವ ರೀತಿಯನ್ನು ಸ್ವಲ್ಪ ಮಟ್ಟಿಗೆ ಅನುಕರಿಸುತ್ತ ಬಿದ್ದುವು. ವ|| ಹಾಗೆ ಹತ್ತೆಂಟು ಸಾವಿರ ಆನೆಗಳನ್ನೂ ನಾಶಪಡಿಸಿದರೂ ತೃಪ್ತಿಹೊಂದದೆ ೧೦೪. ಒಂದು ಆನೆಯ

ಮ|| ಸಿಡಿಲಂತೊರ್ಮೆಯೆ ಪೊಯ್ಯೆ ಪೊಯ್ದ ಭರದಿಂದೊಂದಾನೆ ತೋಲ್ ನೆತ್ತರೆ
ಲ್ವಡಗೊಂದೊಂದಳೊಂದುಮೊಂದದೆ ಗದಾನಿರ್ಘಾತದಿಂ ಮಾಯಮಾ|
ದೊಡೆ ಪೋ ತಪ್ಪಿದೆನೆಂದು ಪಲ್ಮೊರೆದಗುರ್ವಪ್ಪನ್ನೆಗಂ ಮೀಸೆಯಂ
ಕಡಿದಂ ತೋಳ್ವಲದೇೞ್ಗೆ ಮೆಚ್ಚುವನಿತರ್ಕುಗ್ರಾಜಿಯೊಳ್ ಭೀಮನಾ|| ೧೦೫

ಕಂ|| ಧ್ವಜಮುಂ ಬಿಸುಗೆಯುಮೇಱ
ರ್ದ ಜೋದರುಂ ಬೆರಸು ಗಜೆಯನರಿಗಜಘಟೆಯಂ|
ಗಿಜಿಗಿಜಿಯಾಗಿರೆ ಪೊಯ್ದೊಡೆ
ಗುಜುಗುಜುಗೊಂಡಾರ್ದರಮರರಂಬರತಳದೊಳ್|| ೧೦೬

ವ|| ಅಂತು ಗಾಳಿಗೊಡ್ಡಿದ ಘನಘಟೆಯಂತೆ ತನಗೊಡ್ಡಿದ ಕಳಿಂಗರಾಜ ಮತ್ತಮಾತಂಗ ಘಟೆಗಳಂ ಕೞಕುೞಂ ಮಾಡಿದನನ್ನೆಗಮಿತ್ತ ಶಲ್ಯನ ಮೊನೆಯೊಳ್ ಧರ್ಮಪುತ್ರಂ ಕಾದಿ ನಾಲ್ಕು ಕಲ್ಲಂಬುಗಳಿಂದಾತನ ವರೂಥ ಸೂತಕೇತನಂಗಳಂ ಕಡಿದು-

ಕಂ|| ಉರಮಂ ಬಿರಿವಿನಮಿಸೆ ಮ
ದ್ರರಾಜನಳಿಯನ ಪರಾಕ್ರಮಕ್ಕೊಸೆದು ಮೊಗಂ|
ಮುರಿಯದೆ ಪೆಱತುಂ ರಥಮಂ
ತರಿಸಿ ಕನಲ್ದಡರ್ದು ಕದನಕಾಗಳೆ ನೆದಂ|| ೧೦೭

ಮುಱದು ರಥಮಂ ರಥಾಶ್ವಮ
ನುಱದೆರಡುಂ ಶರದೆ ನಾಲ್ಕಱಂ ಸೂತನನೊಂ|
ದಱಕೆಯ ಸರಲೊಳ್ ಮಾಣದೆ
ತಱದಂ ಪೞವಿಗೆಯನೇಂ ಕೃತಾಸ್ತ್ರನೊ ಶಲ್ಯಂ|| ೧೦೮

ವ|| ಅಂತು ವಿರಥನಂ ಮಾಡಿ ಧರ್ಮಪುತ್ರನಂ ಪಿಡಿಯಲೆಯ್ತರ್ಪ ಮದ್ರರಾಜನಂ ಪನ್ನಿರ್ಛಾಸಿರಮಾನೆವೆರಸು ನೃಪನ ಚಕ್ರರಕ್ಷಕಂ ನೀಳನೆಡೆಗೊಂಡು ತಾಗಿದಾಗಳ್-

ಶರೀರವನ್ನು ಹಿಡಿದುಕೊಂಡು ವೇಗವಾಗಿ ತಿರುಗಿಸಿ ಒಂದರೊಡನೆ ಒಂದನ್ನು ಎಲುಬೂ ಮಾಂಸವೂ ಆಗುವ ಹಾಗೆ ಹೊಡೆದು ಮೇಲಕ್ಕೆತ್ತಿಕೊಂಡು ಅಗಸನು ಒಗೆಯುವ ರೀತಿಯಲ್ಲಿ ಬಿರುಸಾಗಿ ಮೇಲಕ್ಕೆತ್ತಿ ಒಗೆದು ಒಳಗಿದ್ದ ಮಾಂಸವೂ ರಕ್ತವೂ ಎಲುಬುಗಳೂ ಜೀರೆಂದು ಶಬ್ದಮಾಡುತ್ತ ಎದ್ದು ಎಲ್ಲ ದಿಕ್ಕುಗಳಿಗೂ ಹಾರಿ ನೆಗೆಯುವ ಹಾಗೆ ಬೀಸಿ ಪರಾಕ್ರಮಶಾಲಿಯಾದ ಭೀಮನು ಒಂದುಕೋಟಿ ಲೆಕ್ಕದವರೆಗಿನ ಮದ್ದಾನೆಗಳನ್ನು ಕೊಂದನು.- ೧೦೫. ಸಿಡಿಲಿನ ಹಾಗೆ ಒಂದೇ ಸಲ ಹೊಡೆಯಲು ಹೊಡೆದ ವೇಗಕ್ಕೆ ಆನೆಯ ಚರ್ಮ ರಕ್ತ ಎಲುಬು ಮಾಂಸಗಳು ಒಂದರಲ್ಲಿ ಒಂದು ಸೇರಿರದೆ ಗದೆಯ ಪೆಟ್ಟಿನಿಂದ ಮಾಯವಾಗಲು ಭೀಮನು ‘ಛೀ ತಪ್ಪುಮಾಡಿದೆ’ ಎಂದು ಹಲ್ಲುಕಡಿದು ಭಯಂಕರವಾದ ಆ ಯುದ್ಧರಂಗದಲ್ಲಿ ತನ್ನ ಬಾಹುಶಕ್ತಿಯ ಏಳಿಗೆಯನ್ನು ಮೆಚ್ಚುವಷ್ಟು ಭಯಂಕರವಾದ ರೀತಿಯಲ್ಲಿ ಮೀಸೆಯನ್ನು ಕಡಿದನು. ೧೦೬. ಧ್ವಜದಿಂದಲೂ ಅಂಬಾರಿಯನ್ನು ಹತ್ತಿದ್ದ ಯೋಧರಿಂದಲೂ ಕೂಡಿದ ಸಮೂಹವನ್ನು ಗದೆಯಿಂದ ಅಜ್ಜಿಗುಜ್ಜಾಗುವ ಹಾಗೆ ಹೊಡೆಯಲು ಆಕಾಶಪ್ರದೇಶದಲ್ಲಿ ದೇವತೆಗಳು (ಗುಂಪುಕೂಡಿ) ಪಿಸುಗುಟ್ಟುತ್ತ ಆರ್ಭಟ ಮಾಡಿದರು. ವ|| ಹಾಗೆ ಗಾಳಿಗೆ ಎದುರಾದ ಮೋಡಗಳ ಸಮೂಹದ ಹಾಗೆ ತನಗೆ ಎದುರಾದ ಕಳಿಂಗರಾಜನ ಮದ್ದಾನೆಗಳ ಸಮೂಹವನ್ನು ಚೆಲ್ಲಾಪಿಲ್ಲಿಮಾಡಿದನು. ಅಷ್ಟರಲ್ಲಿ ಈಕಡೆ ಶಲ್ಯನ ಯುದ್ಧದಲ್ಲಿ ಧರ್ಮರಾಜನು ಕಾದಿ ನಾಲ್ಕು ಮೊನಚಾದ ಬಾಣಗಳಿಂದ ಅವನ ತೇರು ಸಾರಥಿ ಧ್ವಜಗಳನ್ನು ಕತ್ತರಿಸಿದನು. ೧೦೭. ಎದೆಯು ಬಿರಿದು ಹೋಗುವ ಹಾಗೆ ಹೊಡೆಯಲು ಶಲ್ಯನು ಅಳಿಯನಾದ ಧರ್ಮರಾಜನ ಪರಾಕ್ರಮಕ್ಕೆ ಸಂತೋಷಪಟ್ಟು ಮುಖ ತಿರುಗಿಸದೆ ಬೇರೊಂದು ರಥವನ್ನುತರಿಸಿ ಕೋಪದಿಂದ ಹತ್ತಿ ಆಗಲೇ ಯುದ್ಧಕ್ಕೆ ಸಿದ್ಧವಾದನು. ೧೦೮. ಶಲ್ಯನು ಅವನ ತೇರನ್ನು ಮುರಿದು ವೇಗವಾಗಿ ಎರಡು ಬಾಣಗಳಿಂದ ರಥದ ಕುದುರೆಯನ್ನೂ ನಾಲ್ಕರಿಂದ ಸಾರಥಿಯನ್ನೂ ಒಂದು ಪ್ರಸಿದ್ಧವಾದ ಬಾಣದಿಂದ ಧ್ವಜವನ್ನೂ ಬಿಡದೆ ತರಿದು ಹಾಕಿದನು. ಶಲ್ಯನು ಶಸ್ತ್ರವಿದ್ಯೆಯಲ್ಲಿ ಮಹಾಪಂಡಿತನಷ್ಟೆ ! ವ|| ಹಾಗೆ ತೇರಿರದವನನ್ನಾಗಿ ಮಾಡಿ ಧರ್ಮರಾಜನನ್ನು ಹಿಡಿಯಲು ಬರುತ್ತಿದ್ದ ಶಲ್ಯನನ್ನು ರಾಜನ ಸೇನಾಪತಿ