• ಆದರ್ಶ ದಾಂಪತ್ಯ ಜೀವನ ಎಂದರೇನು?

ಪತಿ-ಪತ್ನಿ, ಇಬ್ಬರು ಶಾರೀರಕವಾಗಿ, ಮಾನಸಿಕವಾಗಿ ಸಂತೋಷ, ತೃಪ್ತಿಯನ್ನು ಹೊಂದಿರುವುದು. ಪರಸ್ಪರ ದಂಪತಿಗಳು ನೀಡಲು, ಸ್ವೀಕರಿಸಲು ಇಷ್ಟವಿರುವುದು. ಹಾಗೂ ಮಾನಸಿಕ ಸಮತೋಲನತೆಯನ್ನು ಪಡೆದಿರುವುದು. ಯೋಜಿತ ರೀತಿಯಲ್ಲಿ ಜೀವನವನ್ನು ರ್ನಿಹಿಸುವುದು.

  • ದಾಂಪತ್ಯ ಬದುಕನ್ನು ಸಜೀವವಾಗಿ ಇಟ್ಟುಕೊಳ್ಳುವುದು ಹೇಗೆ?

ದಂಪತಿಗಳಿಬ್ಬರು, ಪರಸ್ಪರ ದೂಷಿಸಿಕೊಳ್ಳುವುದರಿಂದ ತಪ್ಪುಗಳನ್ನು ಹುಡುಕುವುದರಿಂದ ಸಮಸ್ಯೆಗಳು ಉಂಟಾಗುತ್ತದೆ. ದಾಂಪತ್ಯದಲ್ಲಿ ಗಂಡ-ಹೆಂಡತಿ ಏಕಾಂತದಲ್ಲಿ ಮುಕ್ತವಾಗಿ ಮಾತನಾಡಿಕೊಳ್ಳಬೇಕು. ಏಕಾಂತದಲ್ಲಿ, ವೈವಿಧ್ಯಮಯವಾದ ಅನುಭವಗಳನ್ನು ಗಳಿಸದಿದ್ದರೆ, ದಾಂಪತ್ಯದಲ್ಲಿ ಸ್ಥಿರತೆಗೆ ಹಾನಿ ಉಂಟಾಗುತ್ತದೆ. ದಾಂಪತ್ಯದ ಬದುಕು ಸಜೀವವಾಗಿರಬೇಕಾದರೆ, ಪತಿ-ಪತ್ನಿಯರಿಬ್ಬರು ವೈಯಕ್ತಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ದಂಪತಿಗಳಲ್ಲಿ ಪ್ರೀತಿ-ಪ್ರೇಮ, ಆತ್ಮೀಯತೆ, ನಂಬಿಕೆ, ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತುಲೈಂಗಿಕ ತೃಪ್ತಿ ಇರುವುದು ಅಗತ್ಯ.

  • ದಾಂಪತ್ಯದಲ್ಲಿ ಸಾಮರಸ್ಯವಿಲ್ಲದಿರಲು ಸಾಮಾನ್ಯ ಕಾರಣಗಳಾವುವು?

ಸಾಮಾನ್ಯವಾದ ಕಾರಣ, ಗಂಡ-ಹೆಂಡತಿಯ ನಡುವೆ ಉಂಟಾಗುವ ತಿಕ್ಕಾಟ ಅಥವಾ ಘರ್ಷಣೆ.

೧. ಭಾವೋದ್ವೇಗ ಅಥವಾ ಕೋಪೋದ್ರೇಕ

೨. ಮಾನಸಿಕ ಅಥವಾ ಶಾರೀರಕ ತೊಂದರೆಗಳು

೩. ಬಾಹ್ಯ ಸಂಗತಿಗಳಾದ ಹಣಕಾಸಿನ ಸಮಸ್ಯೆಗಳು. ಮತ-ವ್ಯತ್ಯಾಸಗಳು. ಭಾವಂದಿರ, ಮಾವಂದಿರ, ನಾದಿನಿಯರ ಅಥವ ಅತ್ತೆ-ಮಾವನವರಿಂದ ಉಪದ್ರವ ಹಾಗೂ ಸಾಮಾಜಿಕ ವ್ಯತ್ಯಾಸಗಳು ಅಲ್ಲದೆ, ಏಕಾಂತದ ಕೊರತೆ (ಪ್ರೈವೆಸಿ).

  • ಆರ್ಗ್ಯಾಸಮ್ ಎಂದರೇನು?

ಲೈಂಗಿಕ ಕ್ರಿಯೆಯ ಕೊನೆಯಲ್ಲಿ ಉಂಟಾಗುವ ಲೈಂಗಿಕ ಪರಾಕಾಷ್ಠತೆಯನ್ನು ಆರ್ಗ್ಯಾಸಮ್ ಅಥವಾ ಸೆಕ್ಸ್ ಕ್ಲೈಮಾಕ್ಸ್ ಎನ್ನುತ್ತಾರೆ. ಇದಕ್ಕೆ ಕನ್ನಡದಲ್ಲಿ ಕಾಮಾವೇಶ, ಸುಖಶಿಖರ ಎಂತಲೂ ಕರೆಯುತ್ತಾರೆ, ಲೈಂಗಿಕ ಪರಾಕಾಷ್ಠತೆಯನ್ನು ಮುದ್ದಾಟ ಅಥವಾ ಹಸ್ತಮೈಥುನ ಅಥವಾ ಲೈಂಗಿಕ ಸಂಭೋಗದ ಮೂಲಕ ಅಥವಾ ಇತರೆ ವಿಧಾನದ ಲೈಂಗಿಕ ಉತ್ತೇಜನದಿಂದ ಪಡೆಯಬಹುದು. ಸಾಕಷ್ಟು ಉತ್ತೇಜನದ ನಂತರ ಜನನೇಂದ್ರಿಯ ಭಾಗದಲ್ಲಿ ಸೆಡೆತ ಅಥವಾ ಆನಂದ ಉಂಟಾಗುತ್ತದೆ. ಸೆಕ್ಸ್‌ಕ್ಲೈಮಾಕ್ಸ್ ಬಲವಾದ ಸಂತೋಷದ ಸಂವೇದನೆಯಾಗಿರುತ್ತದೆ. ಅಲ್ಲದೆ, ಇದರಿಂದ ಭಾವನಾತ್ಮಕ ಮತ್ತು ಶಾರೀರಕ ವಿಶ್ರಾಂತಿ ಲಭಿಸುತ್ತದೆ.

ಆರ್ಗ್ಯಾಸಮ್, ಸ್ವಲ್ಪ ಹೆಚ್ಚು ಕಡಿಮೆ ಸೀನು ಇದ್ದಂತೆ ಎಂದು ಡಾ|| ಕಿನ್ಸೆ ತಿಳಿಸಿದ್ದಾರೆ. ಲೈಂಗಿಕ ಚೇತರಿಕೆಯಿಂದ, ಲೈಂಗಿಕ ಪರಾಕಾಷ್ಠತೆ ಉಂಟಾಗುತ್ತದೆ ಇದರಲ್ಲಿ. ಇದರಲ್ಲಿ ನಾಡಿಯ ಬಡಿತ ಮತ್ತು ರಕ್ತದ ಒತ್ತಡ ಹೆಚ್ಚಿರುತ್ತದೆ. ಜನನೇಂದ್ರಿಯ ಭಾಗಗಳ ಟಿಶ್ಯೂ(ಊತಕ)ಗಳಲ್ಲಿ ರಕ್ತದಿಂದಾಗಿ ತಾತ್ಕಾಲಿಕ ಉಬ್ಬರ (ಸ್ಟೆಲಿಂಗ್)ವಿರುತ್ತದೆ. ಉಸಿರಾಟದ ವೇಗ ವೇಗವಾಗಿರುತ್ತದೆ. ಅಲ್ಲದೆ, ನರಗಳ ವ್ಯೂಹದಲ್ಲಿ ಆನಂದದ ಸೆಡೆತ ಉಂಟಾಗಿ ಇಡೀ ಶರೀರದಲ್ಲಿ ಸಂವೇದನೆ ಆವರಿಸುತ್ತದೆ.

  • ಹೆಣ್ಣು ಮತ್ತು ಗಂಡಿನಲ್ಲಿ ಉಂಟಾಗುವ ಆರ್ಗ್ಯಾಸಮ್ನಲ್ಲಿ ವ್ಯತ್ಯಾಸವೇನು?

ಮೂಲಭೂತವಾಗಿ ಅಂತಹ ವ್ಯತ್ಯಾಸವೇನಿಲ್ಲ. ಆದರೆ, ಪುರುಷನಲ್ಲಿ ಲೈಂಗಿಕಪರಾಕಾಷ್ಠತೆಯ ಜೊತೆಯಲ್ಲಿ ಶಿಶ್ನದಿಂದ ವೀರ್ಯ ವಿಸರ್ಜಿತಗೊಳ್ಳುತ್ತದೆ. ಅಂತಹ ವಿಸರ್ಜನೆ ಹೆಣ್ಣಿನಲ್ಲಿ ಉಂಟಾಗುವುದಿಲ್ಲ. ಯೋನಿಯಲ್ಲಿ ಉಂಟಾಗುವರ ಸ್ರಾವ ಅಥವಾ ತೇವ ವಿಸರ್ಜನೆಯಿಂದ ಆದುದಲ್ಲ.

ಪುರುಷನಲ್ಲಿ ಆರ್ಗ್ಯಾಸಮ್ ನಂತರ ಉದ್ರೇಕ ತಾನೇ ತಾನಾಗಿ ಕಡಿಮೆಯಾಗುತ್ತದೆ. ಇತ್ತೀಚಿನ ಸಂಶೋಧಕರಾದ ಡಾ|| ವಿಲ್ಲಿಯಂ ಹೆಚ್.ಮಾಸ್ಟರ್ಸ್ ರವರು ‘ಆರ್ಗ್ಯಾಸಮ್’ನ್ನು ಲೈಂಗಿಕ ಪ್ರತಿಕ್ರಿಯೆಯ ಮೂರನೇ ಹಂತವೆಂದು ತಿಳಿಸಿದ್ದಾರೆ.

  • ಎಲ್ಲಾ ಪುರುಷರು ಯಾವಾಗಲೂ ಆರ್ಗ್ಯಾಸಮ್ನ್ನು ಹೊಂದುತ್ತಾರೆಯೇ?

ಸಾಮಾನ್ಯವಾಗಿ ಎಲ್ಲಾ ಆರೋಗ್ಯವಂತ ಪುರುಷರು. ಒಂದು ನಿಶ್ಚಿತ ಪಾಯಿಂಟ್‌ನಲ್ಲಿ ಪ್ರಗತಿಯಲ್ಲಿದ್ದಾಗ ಯಾವಾಗಲೂ ಆರ್ಗ್ಯಾಸಮ್‌ನ್ನು ಹೊಂದುತ್ತಾರೆ. ಆದರೆ, ಕೆಲವು ನಿಶ್ಯಕ್ತ ಪುರುಷರಲ್ಲಿ (ವೈದ್ಯರು ಇದನ್ನು ಎಜಾಕ್ಯುಲೇಟರಿ ಇಂಪೊಟೆನ್ಸ್ ಎನ್ನುತ್ತಾರೆ) ಆರ್ಗ್ಯಾಸಮ್‌ನ್ನು ಹೊಂದಲಾಗುವುದಿಲ್ಲ. ಅಲ್ಲದೆ, ಕೆಲವು ಶಾರೀರಕ ಕಾಯಿಲೆಗಳಿಂದ ನರಳುತ್ತಿರುವ ಪುರುಷರು ಕೂಡ ಆರ್ಗ್ಯಾಸಮ್‌ನ್ನು ಹೊಂದಲು ತೊಡಕಾಗುತ್ತದೆ.

ಉದಾಹರಣೆಗೆ: ಡಯಾಬಿಟೀಸ್, ಪ್ರಾಸ್ಟೇಟ್ ಗ್ರಂಥಿಯ ಉರಿಯೂತ ಅಥವಾ ಸೋಂಕು ಅಥವಾ ಮೂತ್ರಾಂಗ ವ್ಯೂಹದ ಸೋಂಕು ಇದ್ದಾಗ ಲೈಂಗಿಕ ಪರಾಕಾಷ್ಠತೆಯನ್ನು ಹೊಂದಲು ಅಡಚಣೆಯಾಗುತ್ತದೆ.

  • ಸ್ತ್ರೀ ಒಂದು ಸಾರಿಯ ಲೈಂಗಿಕ ಕ್ರಿಯೆಯಲ್ಲಿಯೇ, ಒಂದಕ್ಕಿಂತಲೂ ಹೆಚ್ಚು ಸಾರಿ ಲೈಂಗಿಕ ಪಾರಾಕಾಷ್ಠತೆಯನ್ನು ಹೊಂದುತ್ತಾಳೆಯೇ?

ಹೌದು. ಅನೇಕ ವಿವಾಹಿತ ಮಹಿಳೆಯರು ಮಲ್ಟಿಪಲ್ ಆರ್ಗ್ಯಾಸಮ್‌ನ್ನು ಒಂದೇ ಸಾರಿ ಲೈಂಗಿಕ ಕ್ರಿಯೆಯಲ್ಲಿ ಗಳಿಸಬಲ್ಲರು. ಲೈಂಗಿಕ ಶಾಸ್ತ್ರಜ್ಞ, ಡಾ|| ಕಿನ್ಸೆಯ ಸಂಶೋಧನೆಗಳ ಪ್ರಕಾರ, ಅವರು ಅಧ್ಯಯನ ಮಾಡಿದ ಮಹಿಳೆಯರಲ್ಲಿ ಶೇಕಡ ೧೪ ಮಂದಿ ಕ್ರಮವಾಗಿ ಮಲ್ಟಿಪ್ಲ ಆರ್ಗ್ಯಾಸಮ್‌ನ್ನು ಹೊಂದಿರುತ್ತಾರೆ.

ಪುರುಷರಲ್ಲಿ. ಮಲ್ಟಿಪಲ್ ಆರ್ಗ್ಯಾಸಮ್ ಉಂಟಾಗುವುದು ವಿರಳ.

ಆದರೆ, ಕೆಲವು ಯುವಕರಲ್ಲಿ ಮಾತ್ರ ಇದನ್ನು ಕಾಣಬಹುದು ಎಂದು ಡಾ|| ಕಿನ್ಸೆ ತಿಳಿಸಿದ್ದಾರೆ.