• ಮುಟ್ಟಿಗೆ ಮುನ್ನ ಉಂಟಾಗುವ ಉದ್ವೇಗ ಅಥವಾ ಟೆನ್ಷನ್ ಲೈಂಗಿಕತೆಯ ಮೇಲೆ ಪರಿಣಾಮ ಬೀರುತ್ತದೆಯೇ?

ಹೌದು. ಸ್ತ್ರಿಯರು ಕೆರಳಿಕೆಯಿಂದ ಕೂಡಿರುವುದಲ್ಲದೆ, ಓಕರಿಕೆ ಬೆನ್ನು ನೋವು, ಮೊಲೆಗಳಲ್ಲಿ ಒತ್ತು ನೋವು ಲಕ್ಷಣಗಳನ್ನು ಹೊಂದಿರುತ್ತಾರೆ. ಅಲ್ಲದೆ ಪೆಲ್ವಿಕ್ (ಕಿಳ್ಗುಳಿ) ಭಾಗದಲ್ಲಿ ಅನಾನುಕೂಲತೆಯ ಭಾವನೆಯಿರುತ್ತದೆ. ಕೆಲವೊಮ್ಮೆ, ಭಾವೋದ್ವೇಗದ ತೊಡಕುಗಳು ಮತ್ತು ಖಿನ್ನತೆ (ಡಿಪ್ರೆಷನ್) ಸ್ತ್ರೀಯಿಂದ, ಸ್ತ್ರೀಗೆ ಭಿನ್ನವಾಗಿರುತ್ತದೆ. ಕೆಲವರಲ್ಲಿ, ಲೈಂಗಿಕ ಆಸಕ್ತಿ ಹೆಚ್ಚಿರುತ್ತದೆಂದು ಕಂಡುಬಂದಿದೆ. ಒಟ್ಟಾರೆ, ಮುಟ್ಟಿಗೆ ಮುನ್ನಿನ ಉದ್ವೇಗ ಮಹಿಳೆಯಿಂದ ಮಹಿಳೆಗೆ ವ್ಯತ್ಯಾಸಗೊಳ್ಳುತ್ತದೆ. ಇದನ್ನು ಪುರುಷರು, ತಮ್ಮ ಪತ್ನಿಯ ವರ್ತನೆಯಿಂದ ತಿಳಿದು, ಅವರೊಂದಿಗೆ ಸಮಾಧಾನದಿಂದ ವರ್ತಿಸಬೇಕು.

 • ಸ್ತ್ರೀಯರು ಸ್ತನಗಳ ಉತ್ತೇಜನವನ್ನು ಇಷ್ಟಪಡುತ್ತಾರೆಯೇ?

ಅನೇಕ ಸ್ತ್ರೀಯರು, ಸ್ತನಗಳ (ಬ್ರೆಸ್ಟ್ಸ್) ಉತ್ತೇಜನವನ್ನು ಸಂತೋಷಿಸುತ್ತಾರೆ. ಆದರೆ, ಸ್ತನಗಳನ್ನು ಪುರುಷ ಯಾವ ರೀತಿ ಉತ್ತೇಜಿಸುತ್ತಾನೆ ಎಂಬುದನ್ನು ಅವಲಂಬಿಸಿ ಸಂತೊಷ ಉಂಟಾಗುತ್ತದೆ. ಮೊಲೆಗಳಲ್ಲಿ ಒತ್ತು ನೋವು ಇದ್ದಾಗ ನೋವು ಉಂಟಾಗುತ್ತದೆ. ಈ ಒತ್ತು ನೋವು, ಮುಟ್ಟಿಗೆ ಮುನ್ನಿನ ಉದ್ವೇಗದಲ್ಲಿ ಮತ್ತು ಗರ್ಭಿಣಿಯ ಅವಧಿಯಲ್ಲಿ ಮತ್ತು ಗರ್ಭನಿರೋಧಕ ಮಾತ್ರೆಗಳನ್ನು (ಓರೆಲ್‌ಪಿಲ್ಸ್) ಸೇವಿಸುವ ಮಹಿಳೆಯರಲ್ಲಿರುತ್ತದೆ. ಆದುದರಿಂದ ಪತ್ನಿಯನ್ನು ಸ್ತನಗಳನ್ನು ಉತ್ತೇಜಿಸಬಹುದೇ? ಬೇಡವೇ? ಎಂಬುದನ್ನು ಪತಿರಾಯರು ಕೇಳುವುದು ಅಗತ್ಯ.

 • ಸ್ತನಗಳನ್ನು ದೊಡ್ಡದಾಗಿ ಮಾಡುವ ಔಷಧಿಗಳ ಕ್ರೀಮುಗಳಿವೆಯೇ?

ಇಲ್ಲ

 • ಜೋಲುಬಿದ್ದ ಸ್ತನಗಳಿಗೆ ಯಾವುದಾದರು ವ್ಯಾಯಾಮವಿದೇಯೇ?

ಅಂತಹ ವ್ಯಾಯಾಮ ಯಾವುದು ಇಲ್ಲ. ಸರಿಯಾದ ಬ್ರೇಸಿಯರ್ಸ್‌ನ್ನು ಧರಿಸುವುದರಿಂದ ಸ್ತನಗಳ ಜೋಲುತನವನ್ನು ಮಿತಗೊಳಿಸಬಹುದು.

 • ಸ್ತನಗಳ ಮೇಲೆ ಕೂದಲು ಇದ್ದರೆ, ಅದು ಯಾವುದಾದರೂ ಕಾಯಿಲೆಯೇ?

ಅಲ್ಲ. ಸ್ತನಗಳ ಸುತ್ತ ಕೆಲವು ಕೂದಲು ಇದ್ದೇ ಇರುತ್ತವೆ. ಇದಕ್ಕೆ ಯಾವುದೇ ಚಿಕಿಸೆಯ ಅಗತ್ಯವಿಲ್ಲ.

 • ಸ್ತ್ರೀಯರಲ್ಲಿ ಸಾಮಾನ್ಯವಾದ ಲೈಂಗಿಕ ಸಮಸ್ಯೆ ಯಾವುದು?

ಲೈಂಗಿಕ ಚಿಕಿತ್ಸಾ ತಜ್ಞರ ವೀಕ್ಷಣೆಯ ಪ್ರಕಾರ. ನೋವಿನಿಂದ ಕೂಡಿದ ಲೈಂಗಿಕ ಸಂಭಗ. ವೆಜೈನ್ಮಿಸಸ್ ಅಥವಾ ಯೋನಿಯ ಸೆಡೆತ ಬಹಳ ಸಾಮಾನ್ಯವಾದ ಲೈಂಗಿಕ ಸಮಸ್ಯೆಯಾಗಿರುತ್ತದೆ. ಯೋನಿಯ ಸುತ್ತಲೂ ಆವರಿಸಿರುವ ಸ್ನಾಯುಗಳು ಸಾಮಾನ್ಯವಾಗಿ ಸಂಭೋಗದ ಸಮಯದಲ್ಲಿ, ಶಿಶ್ನ ಪ್ರವೇಶಿಸಿದಾಗ ಸಡಿಲವಾಗಿರುತ್ತವೆ. ಆದರೆ, ಕೆಲವು ಹೆಂಸರಲ್ಲಿ ಸ್ನಾಯುಗಳ ಸೆಡೆತದಿಂದಾಗಿ ಯೊನಿ ಮತ್ತು ಅದರ ಪ್ರವೇಶದ್ವಾರ ಸಂಕುಚಿತಗೊಳ್ಳುತ್ತದೆ; ಇದನ್ನು ಯೋನಿಯ ಸೆಡೆತ ಎನ್ನುತ್ತಾರೆ.

 • ಯೋನಿಯಲ್ಲಿ ಅತಿಯಾಗಿ ಸ್ರಾವ (ಲೂಬ್ರಿಕೇಷನ್) ಉತ್ಪತ್ತಿಯಾಗಲು ಕಾರಣವೇನು?

ಲೈಂಗಿಕ ಉತ್ತೇಜನದ ಅವಧಿಯಲ್ಲಿ ಯೋನಿಯಲ್ಲಿ ಸ್ರಾವ ಉಂಟಾಗುತ್ತದೆ. ಅಲ್ಲದೆ, ಅತಿಯಾದ ಲೈಂಗಿಕ ಉದ್ರೇಕದಿಂದಲೂ ಉಂಟಾಗುತ್ತದೆ; ಇದು ಸಾಮಾನ್ಯ.

ಕೆಲವು ನಿಶ್ಚಿತ ಸ್ಥಿತಿಗಳಲ್ಲಲಿ ಯೋನಿಯ ಸೋಂಕು. ಅಲರ್ಜಿಯಿಂದ ಉಂಟಾಗುತ್ತದೆ. ಸರಿಯಾದ ಕಾರಣವನ್ನು ತಿಳಿದುಕೊಂಡು, ಸ್ತ್ರೀ ಆರೋಗ್ಯ ತಜ್ಞರಿಂದ (ಗೈನಿಕಾಲಜಿಸ್ಟ್) ಚಿಕಿತ್ಸೆಯನ್ನು ಪಡೆಯಬೇಕು.

 • ಫ್ರಿಜಿಡಿಟಿ ಎಂದರೇನು?

ಫ್ರಿಜಿಡಿಟಿ ಎಂಬ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಬೇಕಾಮನೆ, ನಿರುತ್ಸಾಹ, ನಿರಾಸಕ್ತಿ, ಸಾಮಾನ್ಯವಾದ ಲೈಂಗಿಕಾಸೆಯ ಕೊರತೆ, ಜಡತ್ವ ಎನ್ನುತ್ತಾರೆ. ಇದನ್ನು ಮುಖ್ಯವಾಗಿ ಹೆಣ್ಣಿಗೆ ಸಂಬಂಧಿಸಿದಂತೆ ಉಪಯೋಗಿಸಲಾಗುತ್ತದೆ.

ಸಾಮಾನ್ಯವಾಗಿ ಸ್ತ್ರೀಯರಲ್ಲಿ ಲೈಂಗಿಕ ಪ್ರತಿಕ್ರಿಯೆಯು ಕೊರತೆಯನ್ನು ‘ಫ್ರಿಜಿಡಿಟಿ’ ಎಂದು ಕರೆಯುತ್ತಾರೆ. ಯಾವ ಪ್ರಮಾಣದಲ್ಲಿ ಹೆಣ್ಣಿನಲ್ಲಿ ಫ್ರಿಜಿಡಿಟಿ ಇರುತ್ತದೆಂಬುದನ್ನು ಹೇಳುವುದು ವಿರೋಧಾಭಾಸದ ಉತ್ತರವಾಗುತ್ತದೆ. ಈ ಹಿಂದೆ ನಡೆದ ಸಂಶೋಧನೆಗಳಂತೆ, ಸ್ತ್ರೀಯಲ್ಲಿ ಲೈಂಗಿಕ ಪ್ರತಿಕ್ರಿಯೆಯ ಕೊರತೆಗೆ ಪ್ರಾಥಮಿಕವಾಗಿ ಮಾನಸಿಕ ಮೂಲವೇ ಕಾರಣವಾಗಿರುತ್ತದೆ.

 • ಭಗಾಂಕುರ ಅಥವಾ ಕ್ಲೈಟೋರಿಸ್ ಎಂದರೇನು?

ಭಗಾಂಕುರ ಬಹಳ ಸಣ್ಣದಾದ ಅಂಗ. ಇದು ಯೋನಿಯ ತುಟಿಗಳ ಮೇಲ್ಭಾಗದಲ್ಲಿದೆ. ಭಗಾಂಕುರ. ಲೈಂಗಿಕ ಉತ್ತೇಜನದಿಂದ ಉದ್ರೇಕಗೊಳ್ಳುತ್ತದೆ ಭಗಾಂಕುರ ಅಥವಾ ಕ್ಲೈಟೋರಲ್ ಆರ್ಗ್ಯಾಸಮ್ (ಸೆಕ್ಸ್‌ಕ್ಲೈಮಾಕ್ಸ್) ಉಂಟಾಗುತ್ತದೆ.

 • ಡಿಸ್ಮೆನೋರಿಯಾ ಎಂದರೇನು?

ಡಿಸ್‌ಮೆನೋರಿಯಾ ಎಂದರೆ ನೋವಿನ ಮುಟ್ಟು ಎಂದರ್ಥ. ಸಾಮಾನ್ಯವಾಗಿ ನೋವಿನ ಮುಟ್ಟು, ಮುಟ್ಟಿಗೆ ಮೊದಲು, ಮುಟ್ಟಿನ ಅವಧಿಯಲ್ಲಿ ಅಥವಾ ಮುಟ್ಟು ಆದನಂತರ ಉಂಟಾಗುತ್ತದೆ.

 • ಪ್ರೈವೇಟ್ ಪಾರ್ಟ್ಸ್ ಎಂದರೇನು?

ಹೆಣ್ಣು ಮತ್ತು ಗಂಡಿನ ಜನನೇಂದ್ರಿಯಗಳಿಗೆ ಪ್ರೈವೇಟ್ ಪಾರ್ಟ್ಸ್ ಎಂದು ಕರೆಯುತ್ತಾರೆ.

 • ಪೀರಿಯಡ್ ಎಂದರೇನು?

ಮುಟ್ಟಿಗೆ ಮತ್ತೊಂದು ಹೆಸರೇ ಪೀರಿಯಡ್.