ಕೊಯ್ಲು ಮತ್ತು ಇಳುವರಿ

ದಾಳಿಂಬೆ ನಾಟಿ ಮಾಡಿದ ೧೮ನೇ ತಿಂಗಳಿನಿಂದ ಹಣ್ಣು ಬಿಡಲು ಪ್ರಾರಂಭಿಸುತ್ತವಾದರೂ ೩ನೇ ವರ್ಷದ ನಂತರ ಹಣ್ಣು ಪಡೆಯುವುದು ಒಳ್ಳೆಯದು. ಮೊದಲು ಪ್ರತಿ ಗಿಡಕ್ಕೆ ೨೦-೨೫ ಹಣ್ಣುಗಳನ್ನು ಮಾತ್ರ ತೆಗೆದುಕೊಳ್ಳುತ್ತಾ ನಿಧಾನವಾಗಿ ಈ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಿ ೧೦ ವರ್ಷದ ಗಿಡದಿಂದ ಹೆಚ್ಚೆಂದರೆ ೧೦೦-೧೫೦ ಹಣ್ಣುಗಳನ್ನು ತೆಗೆದುಕೊಳ್ಳಬೇಕು. ಸೂಕ್ತ ನಿರ್ವಹಣೆ ಮಾಡಿದರೆ ಪ್ರತಿ ಗಿಡದಿಂದ ೨೦೦-೨೫೦ ಹಣ್ಣುಗಳನ್ನು ಪಡೆಯಬಹುದಾಗಿದೆ (೧೦ ರಿಂದ ೧೩ ಟನ್ ಪ್ರತಿ ಹೆಕ್ಟೇರಿಗೆ). ಆರ್ಥಿಕ ಇಳುವರಿ ೨೫ ರಿಮದ ೩೦ ವರ್ಷಗಳವರೆಗೆ ಪಡೆದುಕೊಳ್ಳಬಹುದು.

ದಾಳಿಂಬೆ ಬೆಳೆಯ ಅಂತರ್ರಾಷ್ಟ್ರೀಯ ರಫ್ತು ಗುಣಮಟ್ಟಗಳು

ತಳಿಗಳು ದೇಶಗಳು
ಮಧ್ಯಪೂರ್ವ ನೆದರ್ಲ್ಯಾಂಡ್ / ದೇಶಗಳು ಯು.ಕೆ ಜರ್ಮನಿ
ಗಣೇಶ ತೂಕ ೩೦೦-೪೫೦ ಬಣ್ಣ : ಕೆಂಪು ಗ್ರಾಂ ೨೫೦-೩೦೦ ಗ್ರಾಂ ಬಣ್ಣ : ಕಡುಕೆಂಪು ೨೫೦-೩೦೦ ಗ್ರಾಂ ಬಣ್ಣ : ಕೆಂಪು
ಭಗವಾ / ಆರಕ್ತ / ಮೃದುಲಾ ತೂಕ ೨೦೦-೨೫೦ ಬಣ್ಣ : ಕಡುಕೆಂಪು ಗ್ರಾಂ ೨೦೦-೨೫೦ ಗ್ರಾಂ ಬಣ್ಣ : ಕಡುಕೆಂಪು ೨೦೦-೨೫೦ ಗ್ರಾಂ ಬಣ್ಣ : ಕಡುಕೆಂಪು
ಪ್ಯಾಕಿಂಗ್ ೫ ಕೆ.ಜಿ. ೫ ಕೆ.ಜಿ. ೫ ಕೆ.ಜಿ.
ಸಂಗ್ರಹಣಾ ಉಷ್ಣಾಂಶ 0 C 50 C 50 C
ಸಾಗಾಣಿಕೆ ಸಮುದ್ರಮಾರ್ಗ ಸಮುದ್ರಮಾರ್ಗ ಸಮುದ್ರಮಾರ್ಗ

ಹಣ್ಣುಗಳ ಕೊಯ್ಲೋತ್ತರ ನಿರ್ವಹಣೆ ಮತ್ತು ಶೇಖರಣೆ: (೮-೧೦ ವಾರಗಳು)

 • ಶೀತಲ ಕೊಠಡಿ: ೯ +/- ೫0 C
 • ಸುಧಾರಿತ ಹವಾನಿಯಂತ್ರಿತ ಪ್ಯಾಕೇಜಿಂಗ್
 • ರಂಧ್ರವಿರುವ ಪಾಲಿಎಥಿಲಿನ್ ಚೀಲಗಳು ಅಥವಾ
 • ತೆಳುವಾದ ಪಾಲಿಎಥಿನ್ ಹಾಳೆಯಿಂದ ಹಣ್ಣುಗಳನ್ನು ಸುತ್ತುವುದು.

ದಾಳಿಂಬೆ ಹಣ್ಣಿನ ಇತರೆ ಉಪಯೋಗಗಳು

೧. ಗುಣಮಟ್ಟದ ಹಾಗೂ ದೊಡ್ಡ ಗಾತ್ರದ ತಾಜಾ ದಾಳಿಂಬೆ ಹಣ್ಣಿಗೆ ಮಾರಿಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಮಧ್ಯಮ ಗಾತ್ರದ ಹಾಗೂ ಸಣ್ಣ ಗಾತ್ರದ ಹಣ್ಣುಗಳನ್ನು ಮೌಲ್ಯವರ್ಧಿತ ಪದಾರ್ಥಗಳ ತಯಾರಿಕೆಯಲ್ಲಿ ಉಪಯೋಗಿಸಬಹುದು.

೨. ಕೆಲವು ದಾಳಿಂಬೆ ಹಣ್ಣುಗಳನ್ನು ಸೀಳು ಬಿಟ್ಟಿದ್ದು ಅವುಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುವುದಿಲ್ಲ.

೩. ಅಂತಹ ಹಣ್ಣುಗಳನ್ನು ಕೂಡ ವಿವಿಧ ಮೌಲ್ಯವರ್ಧತ ಪದಾರ್ಥಗಳ ತಯಾರಿಕೆಗೆ ಉಪಯೋಗಿಸಬಹುದು.

೪. ವಿವಿಧ ಪದಾರ್ಥಗಳ ತಯಾರಿಕೆ ಮತ್ತು ಸಂಸ್ಕರಣೆಗೆ ರಸಭರಿತ ದಾಳಿಂಬೆ ಹಣ್ಣನ್ನು ಉಪಯೋಗಿಸಿದರೆ, ಆಕರ್ಷಕ ಬಣ್ಣದ (ನೇರಳೆ ಮತ್ತು ಕೆಂಪು ಮಿಶ್ರಿತ), ಕಡಿಮೆ ಹುಳಿ ಹೆಚ್ಚು ರುಚಿ ಮತ್ತು ಕಡಿಮೆ ಒಗರಿನ ರಸವು ದೊರೆಯುತ್ತದೆ. ಇದು ವಿವಿಧ ಪದಾರ್ಥಗಳಖ ತಯಾರಿಕೆಗೆ ಸೂಕ್ತವಾದುದು.

೫. ಪದಾರ್ಥಗಳ ತಯಾರು ಮಾಡಲು ಆರಕ್ತ, ಸಿಂಧೂರ ಮತ್ತು ಕೇಸರಿ ತಳಿ ಹಣ್ಣು ಸೂಕ್ತವಾದವು.

೬. ದಾಳಿಂಬೆ ಹಣ್ಣಿನ ರಸದಿಂದ ತಾಜಾ ಹಣ್ಣಿನ ರಸ, ತಂಪು ಪಾನೀಯ, ಶರಬತ್ತು, ಜೆಲ್ಲಿ ಮುಂತಾದ ಪದಾರ್ಥಗಳನ್ನು ತಯಾರಿಸಿ ಸಂಸ್ಕರಿಸಬಹುದು.

೭. ಹೆಚ್ಚು ಹುಳಿ ಇರುವ ದಾಳಿಂಬೆ ಬೀಜಗಳನ್ನು ವಿದ್ಯುತ್ ಯಂತ್ರಗಳಲ್ಲಿ ಅಥವಾ ಸೌರಶಕ್ತಿ ಯಂತ್ರಗಳಲ್ಲಿ ಒಣಗಿಸಿ ‘ಅನಾರ್ಧನ’ವೆಂಬ ಪದಾರ್ಥವನ್ನು ತಯಾರಿಸಬಹುದು.

೮. ದಾಳಿಂಬೆ ಹಣ್ಣಿನ ರಸದಿಂದ ಗುಣಮಟ್ಟದ ಸಾಧಾರಣ ವೈನ್ ಅಥವಾ ಮೆಡಿಕೇಟೆಡ್ ವೈನ್ ತಯಾರಿಸಬಹುದು.

೯. ಮೇಲ್ಕಂಡ ಮೈಲ್ಯವರ್ಧಿತ ಪದಾರ್ಥಗಳನ್ನು ಕೈಗಾರಿಕಾ ಪ್ರಮಾಣದಲ್ಲಿ ತಯಾರಿಸಿ ಸಂಸ್ಕರಿಸಿ ಸ್ವದೇಶಿ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ವಿತರಿಸಬಹುದು.

೧೦. ದಾಳಿಂಬೆ ಹಣ್ಣನ್ನು ಉತ್ಪಾದಿಸುವ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಅಭಿವೃದ್ಧಿಪಡಿಸಿದರೆ ರೈತರಿಗೆ ಒಳ್ಳೆ ಬೆಲೆ ಸಿಗುವುದಲ್ಲದಎ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವಿರುತ್ತದೆ. ಇದರಿಂದ ಉಪಕೈಗಾರಿಕೆ ಬೆಳವಣಿಗೆಗೆ ನೇರವಾಗಿ ಮತ್ತು ಗ್ರಾಮಾಂತರ ಪ್ರದೇಶಗಳ ಬೆಳವಣಿಗೆಗೆ ವರದಾನವಾಗಿದೆ.

೧೧. ವಿವಿಧ ಮೈಲ್ಯವರ್ಧಿತ ಪದಾರ್ಥಗಳ ತಯಾರಿಕೆಯ ವಿಧಾನಗಳನ್ನು ಕೆಳಗೆ ಕೊಡಲಾಗಿದೆ.

ಹಣ್ಣುಗಳನ್ನು ಶೇಖರಿಸುವ ವಿಧಾನ:

ವಿವಿಧ ಶ್ರೇಣಿಯ ಹಣ್ಣುಗಳಿಗೆ ಅನುಸಾರವಾಗಿ ವಿವಿಧ ಗಾತ್ರದ ರಟ್ಟಿನ ಪೆಟ್ಟಿಗೆಗಳನ್ನು ಬಳಸಬಹುದಾಗಿದೆ.

ದೊಡ್ಡ ಶ್ರೇಣಿಯ ಹಣ್ಣು ೫”XX೧೧”X೪”
ಮಧ್ಯಮ ಶ್ರೇಣಿಯ ಹಣ್ಣು ೧೪”X೧೦”X೪”
ಸಣ್ಣ ಶ್ರೇಣಿಯ ಹಣ್ಣು ೨೪ ಹಣ್ಣು ಹಿಡಿಯುವಂತೆ ಸೂಕ್ ಗಾತ್ರ

ಹಣ್ಣಿನ ಕೊಯ್ಲು

ಹಣ್ಣಿನ ಸರಿಯಾದ ಬೆಳವಣಿಗೆಯನ್ನು ನೋಡಿಕೊಂಡು ಕೊಯ್ಲು ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಹಣ್ಣು ಕೆಂಪು ಮಿಶ್ರಿತ ಹಳದಿ ಅಥವಾ ಕೆಂಪು ಬಣ್ಣ ಬಂದಾಗ ಕೊಯ್ಲು ಮಾಡುವುದು ಸೂಕ್ತ. ಬೆಳವಣಿಗೆಗೆ ಮೊದಲೇ ಕೊಯ್ಲು ಮಾಡುವುದರಿಂದ ಅಥವಾ ಹೆಚ್ಚಾಗಿ ಬೆಳವಣಿಗೆ ಹೊಂದಿದ ಹಣ್ಣನ್ನು ಕೊಯ್ಲು ಮಾಡುವುದರಿಂದ ಹಣ್ಣಿನ ಗುಣಮಟ್ಟ ಕೆಡುತ್ತದೆ. ಸಾಮಾನ್ಯವಾಗಿ ಹೂ ಬಿಟ್ಟ ೫-೭ ತಿಂಗಳುಗಳ ನಂತರ ಹಣ್ಣು ಕೊಯ್ಲಿಗೆ ಬರುತ್ತದೆ. ಹಣ್ಣಿನ ಬೆಳವಣಿಗೆಯನ್ನು ಹಣ್ಣಿನ ಸಿಪ್ಪೆಯು ಕೆಂಪು ಅಥವಾ ಹಳದಿ ಬಣ್ಣದ್ದಾಗಿರುವುದು, ಹಣ್ಣಿನ ರಸವು ಕೆಂಪು ಬಣ್ಣದ್ದಾಗಿರುವುದರ ಮೂಲಕ ಹಾಗೂ TSS 15-16% ಇರುವುದನ್ನು ನೋಡಿ ನಿರ್ಧರಿಸಬೇಕು.

ಕೊಯ್ಲು ಪದ್ಧತಿ

ಹಣ್ಣುಗಳನ್ನು ಕೈಯಿಂದ ಕೀಳಬೇಕು ಅಥವಾ ಹಣ್ಣು ಕೊಯ್ಯುವ ಸಲಕರಣೆ ಉಪಯೋಗಿಸಿ ಕೀಳಬೇಕು. ಯಾವುದೇ ರೀತಿಯ ಗಾಯಗಳಾಗದಂತೆ ಎಚ್ಚರ ವಹಿಸಬೇಕು. ಹಣ್ಣನ್ನು ಕಿತ್ತಾದ ಮೇಲೆ ಅದರಲ್ಲಿ ತೊಟ್ಟು ಇರದಂತೆ ಕೊಯ್ಲು ಮಾಡಬೇಕು. ಹೀಗೆ ಮಾಡದಿದ್ದರೆ ಸಾಗಾಣಿಕೆ ಮಾಡುವಾಗ ಹಣ್ಣಿಗೆ ಗಾಯಗಳಾಗುವ ಸಂಭವವಿರುತ್ತದೆ. ತಂಪು ಹೊತ್ತಿನಲ್ಲಿ ಕೊಯ್ಲು ಮಾಡುವುದು ಸೂಕ್ತ. ಹಣ್ಣುಗಳನ್ನು ಕಿತ್ತ ನಂತರ ಪ್ಲಾಸ್ಟಿಕ್ ಕ್ರೇಟ್ಗಳಲ್ಲಿ ಹಾಕಿ ನೆರಳಿನಲ್ಲಿ ಇಡಬೇಕು. ಹಣ್ಣಿನ ಮೇಲೆ ಸೂರ್ಯನ ಕಿರಣ ಬಿದ್ದರೆ ಹಣ್ಣಿನ ಆ ಭಾಗವು ಗಟ್ಟಿಯಾಗುತಯ್ತದೆ ಮತ್ತು ಈ ಸಂಪೂರ್ಣ ಹಣ್ಣಿಗೂ ಹರಡಬಹುದು.

ದಾಳಿಂಬೆ ಹಣ್ಣಿನ ಶೇಖರಣೆ

ದಾಳಿಂಬೆ ಹಣ್ಣಿನ ಶೇಖರಣೆಯಲ್ಲಿ ಮುಖ್ಯವಾದ ತೊಂದರೆಯಂದರೆ ಹಣ್ಣು ಬಾಡುವುದು, ಸಿಪ್ಪೆ ಕಂದು ಬಣ್ಣಕ್ಕೆ ತಿರುಗುವುದು ಮತ್ತು ಬೀಜ (ತಿರುಳು) ಕಪ್ಪಾಗುವುದು.

ಸೂಕ್ತವಾದ ತಾಪಮಾನ

ದಾಳಿಂಬೆ ಹಣ್ಣುಗಳನ್ನು ಶೇಖರಿಸಿಡಲು ೬-೮೦ ಅ ಸೂಕ್ತವಾದ ತಾಪಮಾನ. ೫೦ ಗಿಂತ ಕಡಿಮೆ ತಾಪಮಾನದಲ್ಲಿ ಶೇಖರಿಸಿಟ್ಟರೆ ಹಣ್ಣು ಅತಿಯಾದ ಶೇತದಿಂದ ಹಾಳಾಗುವ ಸಾಧ್ಯತೆಯಿದೆ.

ಆರ್ದ್ರತೆ

ದಾಳಿಂಬೆ ಹಣ್ಣುಗಳು ಕೊಯಲ್‌ಇನ ನಂತರ ನೀರಿನ ನಷ್ಟದಿಂದ ಅತಿಬೇಗ ಬಾಡುತ್ತವೆ. ಇದನ್ನು ತಡೆಯಲು ವಾತಾವರಣ ಶುಷ್ಕತೆಯನ್ನು ೯೦-೯೫%ವರೆಗೆ ಕಾಪಾಡಿಕೊಳ್ಳಬೇಕಾಗುತ್ತದೆ. ಹಣ್ಣುಗಳನ್ನು ಪ್ಲಾಸ್ಟಿಕ್ ಲೈನರ್ ಉಪಯೋಗಿಸಿ ಮೇಣ ಹಚ್ಚುವುದರಿಂದ ನೀರಿನ ನಷ್ಟವನ್ನು ಕಡಿಮೆ ಮಾಡಬಹುದು. ಕೊಯ್ಲಿನ ನಂತರ ೧೨% ಮೇಣವನ್ನು ಕಾರ್ಬೆಂಡೇಜಿಯಂ (೦.೧%) ಜೊತೆಗೆ ಹಣ್ಣಿಗೆ ಹಚ್ಚುವುದರಿಂದ ಹಣ್ಣಿನ ಜೀವನಾವಧಿಯನ್ನು ಹೆಚ್ಚಿಸಬಹುದು.

ವಾತಾವರಣ ಬದಲಿಸಿ ಪ್ಯಾಕ್ ಮಾಡುವುದು

ದಾಳಿಂಬೆ ಹಣ್ಣುಗಳನ್ನು ಪಾಲಿ ಇಥಿಲೀನ್ ಅಥವಾ ಪಾಲಿ ಪ್ರೊಪಿಲೀನ್ ಚೀಲಗಳಲ್ಲಿ (೧೦೦ ಗೇಜ್) ಕಡಿಮೆ ವಾತಾವರಣದಲ್ಲಿ ಶೇಖರಿಸುವುದರಿಂದ ಸುಮಾರು ೨ ತಿಂಗಳವರೆಗೆ ಕೆಡದಂತೆ ಮತ್ತು ಹಸನಾಗಿ ಇಡಬಹುದು.

ಪ್ಲಾಸ್ಟಿಕ್ ಹೊದಿಕೆಯಿಂದ ಪ್ರತಿ ಹಣ್ಣನ್ನು ಮುಚ್ಚುವುದು

ಪ್ರತಿ ಹಣ್ಣನ್ನು ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚುವುದರಿಂದ, ಸಿಪ್ಪೆಯ ಮೇಲೆ ಇನ್ನೊಂದಉ ತಡೆಯನ್ನು ಸೃಷ್ಟಿಸಿದಂತೆ ಆಗುತ್ತದೆ. ಮೊದಲಿಗೆ ಪ್ರತಿ ಹಣ್ಣನ್ನು ಐ-ಸೀಲರ್ ಉಪಯೋಗಿಸಿ ಸಾಮಾನ್ಯವಾಗಿ ಸೀಲ್ ಮಾಡಲಾಗುತ್ತದೆ. ನಂತರ ಈ ಪ್ಯಾಕ್‌ನ್ನು ಉಷ್ಣತಾ ಸುರಂಗದ ಮೂಲಕ ಕಳುಹಿಸಬೇಕು. ಇಲ್ಲಿ ಕೆಲವೇ ಸೆಕಂಡುಗಳಲ್ಲಿ ಅತಿ ಉಷ್ಣ ಹವೆಯಲ್ಲಿ ಹಣ್ಣುಗಳನ್ನು ಕಳುಹಿಸಲಾಗುತ್ತದೆ. ಇದಾದ ನಂತರ ಹಣ್ಣುಗಳು ಒಳ್ಳೆಯ ರೀತಿಯ ಹೊದಿಕೆಯನ್ನು ಹೊಂದಿರುತ್ತದೆ. ಈ ರೀತಿ ಮಾಡುವುದರಿಂದ ಹಣ್ಣಿನಿಂದ ನೀರಿನ ನಷ್ಟವನ್ನು ಕಡಿಮೆಗೊಳಿಸಬಹುದು. ಈ ರೀತಿ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿದ ಹಣ್ಣುಗಳನ್ನು ಸುಮಾರು ಮೂರು ತಿಂಗಳವರೆಗೆ ೮೦ಅ ಗುಣ ಮಟ್ಟದಲ್ಲಿ ಯಾವುದೇ ರೀತಿಯ ಬದಲಾವಣೆಯಾಗದೆ, ಅತಿ ಕಡಿಮೆ ತೂಕ (೧.೫%)ದೊಂದಿಗೆ ಕೆಡದಂತೆ ಇಡಬಹುದು. ಈ ರೀತ ಮಾಡದೇ ಇರುವ ಹಣ್ಣುಗಳು ಸುಮಾರು ೨೦% ತೂಕ ನಷ್ಟವನ್ನು ಹೊಂದುತ್ತವೆ.ಸಾಮಾನ್ಯ ತಾಪಮಾನದಲ್ಲಿ ಪ್ಲಾಸ್ಟಿಕ್ ಹಣ್ಣುಗಳು ಒಂದು ವಾರದೊಳಗೆ ಬಾಡುತ್ತವೆ ಮತ್ತು ಬಣ್ಣ ಕಳೆದುಕೊಳ್ಳುತ್ತವೆ. ಈ ಹಣ್ಣುಗಳು ನೋಡಲು ಚೆನ್ನಾಗಿರುವುದಿಲ್ಲ. ಆದರೆ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಲ್ಪಟ್ಟ್ ಹಣ್ಣುಗಳು ಮೂರು ವಾರದವರೆಗೆ ಕೊಯ್ಲಿನ ನಂತರದ ಹಣ್ಣಿನಂತೆ ಕಾಣೂವುದಲ್ಲದೇ ಬಾಡದೆ ಒಳ್ಳೆಯ ಬಣ್ಣವನ್ನು ಕಾಪಾಡಿಕೊಳ್ಳುತ್ತವೆ.

ಪ್ರತಿ ಹಣ್ಣನ್ನು ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚುವಾಗ ಅನುಸರಿಸಬೇಕಾದ ಕ್ರಮಗಳು

ಈಗಷ್ಟೆ ಕೊಯ್ಲು ಮಾಡಿದ ಹಣ್ಣು
|
ವಿಂಗದಣೆ ಮತ್ತು ವರ್ಗೀಕರಣ
|
ತೊಟ್ಟುಗಳನ್ನು ತೆಗೆಯುವುದು
|
ಒಣ ಬಟ್ಟೆಯಿಂದ ಹಣ್ಣುಗಳನ್ನು ಸ್ವಚ್ಛಗೊಳಿಸುವುದು
|
ಪ್ರತಿ ಹಣ್ಣನ್ನು ಸಾಮಾನ್ಯ ಹೊದಿಕೆ ಮಾಡಿ ಸೀಲ್ ಮಾಡುವುದು
|
ಮಡಚುವ ಸುರಂಗದಲ್ಲಿ ಹಣ್ಣುಗಳನ್ನು ಕಳಿಸುವುದು
|
ಆರಿಸಿ ದೊಡ್ಡ CFB ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡುವುದು
|
ಕಡಿಮೆ ತಾಪಮಾನ (೭ C) ಅಥವಾ ವಾತಾವರಣದ ತಾಪಮಾನದಲ್ಲಿ ಶೇಖರಣೆ ಮಾಡುವುದು

ಪ್ಲಾಸ್ಟಿಕ್ ಹೊದಿಕೆಯಿಂದ ಪ್ರತಿ ಹಣ್ಣನ್ನು ಮುಚ್ಚುವುದರಿಂದ ಆಗುವ ಉಪಯೋಗಗಳು:

 • ತೂಕದಲ್ಲಿ ನಷ್ಟವಾಗುವುದನ್ನು ತಡೆಯುವುದು.
 • ಹಣ್ಣಿನ ಆಕಾರ ಕೆಡದಂತೆ ಸಂರಕ್ಷಿಸುವುದು.
 • ಶೀತಲಿಕರಣದಿಂದ ಆಗಬಹುದಾದ ಗಾಯಗಳನ್ನು ತಡೆಗಟ್ಟಬಹುದು.
 • ಹಣ್ಣುಗಳು ಕೆಡದೆ ಇರುವಂತೆ ಇಡಬಹುದು.
 • ಕೊಯ್ಲಿನಿಂದ ಹಿಡಿದು ಬಳಕೆ ಮಾಡುವವರಿಗೆ ಯಾವುದೇ ರೀತಿಯ ಸೋಂಕು ತಗಲದಂತೆ ಕಾಪಾಡುವುದು.
 • ಹಣ್ಣಿನ ಸುತ್ತ ಹೊಸ ವಾತಾವರಣ ಸೃಷ್ಟಿಸಿ ಹೆಚ್ಚು ದಿನ ಬಾಳಿಕೆ ಬರುವಂತೆ ಮ,ಆಡುವುದು.
 • ಹಣ್ಣಿನ ಶೇಖರಣೆ ಮತ್ತು ಸಾಗಾಣೀಕೆಯಲ್ಲಿ ವಾತಾವರಣದ ಶುಚ್ಕತೆ ಕಾಪಾಡಿಕೊಳ್ಳುವ ಅವಶ್ಯಕತೆ ಇಲ್ಲದಂತೆ ಮಾಡುವುದು.
 • ಮಾರುಕಟ್ಟೆಯಲ್ಲಿ ಹೆಚ್ಚು ದಿವಸ ಚಾಲನೆಯಲ್ಲಿರುವಂತೆ ಮಾಡುವುದು.
 • ಬಳಕೆದಾರರು ಹಣ್ಣನ್ನು ಪರಿಶೀಲಿಸಿಕೊಳ್ಳುವ ಅವಕಾಸವಿರುವುದು.
 • ತಳಿ ಮತ್ತು ಬ್ರ್ಯಾಂಡ್ ಗರುತಿನಂತೆ ಮಾರಾಟ ಮಾಡುವುದು.

ಅನುಪಯೋಗಗಳು

 • ಪ್ಯಾಕಿಂಗ್ ಮಾಡುವ ಮೊದಲು ಹಣ್ಣು ಹಾಳಾಗುವುದಿದ್ದರೆ ಬಹಳ ಬೇಗ ಕೆಡುತ್ತದೆ.
 • ಒಳ್ಳೆಯ ಪ್ಲಾಸ್ಟಿಕ್ ಹೊದಿಕೆ ಉಪಯೋಗಿಸದಿದ್ದರೆ ಕೆಟ್ಟ ವಾಸನೆ ಬರುವ ಸಾಧ್ಯತೆಯಿದೆ.
 • ಪ್ಲಾಸ್ಟಿಕ್ ಹೊದಿಕೆಯ ಖರ್ಚು ಮತ್ತು ಅದನ್ನು ಉಪಯೋಗಿಸುವ ವಿಧಾನ ತಿಳಿದಿರಬೇಕು.
 • ಹೆಚ್ಚು ಬೆಲೆಬಾಳುವ ಹಣ್ಣುಗಳಿಗೆ ಮಾತ್ರ ಸೂಕ್ತವಾಗಿದೆ.

ದಾಳಿಂಬೆಯ ಶೇಖರಣಾ ಅಂಶಗಳು

ದಾಳಿಂಬೆಯನ್ನು ಸೇಬಿನಂತೆ ಬಹಳ ದಿವಸಗಳವರೆಗೆ ಶೇಖರಣೆ ಮಾಡಬಹುದು. ಸಾಮಾನ್ಯವಾಗಿ ಉಷ್ಣತೆ ಶೂನ್ಯದಿಂದ ೫ ಡಿಗ್ರಿ C ನಲ್ಲಿ ಮತ್ತು ವಾತಾವರಣದ ಆರ್ದ್ರತೆ ೮೦ ರಿಂದ ೮೫% ಇದ್ದಾಗ ದಾಳಿಂಬೆಯನ್ನು ಸುಮಾರು ೭ ತಿಂಗಳುಗಳವರೆಗೆ ಶೇಖರಣೇ ಮಾಡಬಹುದು. ಆರ್ದ್ರತೆ ಶೇ.೭೫ ರಷ್ಟು ಇದ್ದಾಗ ಉಷ್ಣತಾಮಾನ ೭ ಡಿಗ್ರಿ C ಇದ್ದಾಗ ಸುಮಾರು ೨ ತಿಂಗಳವರೆಗೆ ಶೇಖರಣೇ ಮಾಡಬಹುದು. ಇಸ್ರೇಲ್ ದೇಶದಲ್ಲಿ ಶೇ.೨ ರಷ್ಟು ಆಮ್ಲಜನಕವನ್ನು ೨ ಡಿಗ್ರಿ C ಉಷ್ಣತಾಮಾನದಲ್ಲಿ ಬಹಳ ದಿವಸಗಳವರೆಗೆ ದಾಳಿಂಬೆ ಹಣ್ಣುಗಳನ್ನು ಶೇಖರಣೆ ಮಾಡಲಾಗುತ್ತದೆ.

ನಮ್ಮ ದೇಶದಲ್ಲಿ ಹೆಸರಘಟ್ಟಸ ರಾಷ್ಟ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಂಶೋಧನಾ ಫಲಿತಾಂಶದ ಪ್ರಕಾರ ಉಷ್ಣತಾಮಾನ ೮ ಡಿಗ್ರಿ C ನಲ್ಲಿ, ಸುಮಾರು ಶೇ.೧.೦ ರಷ್ಟು ತೂಕದಲ್ಲಿ ಕಡಿಮೆಯಾಗುವುದುರ ಜೊತೆಗೆ ದಾಳಿಂಬೆಯನ್ನು ಸುಮಾರು ೩ ತಿಂಗಳವರೆಗೆ ೪ ಕಿ.ಗ್ರಾಂ ಸಿ.ಎಫ್.ಬಿ. ಬಾಕ್ಸಗಳಲ್ಲಿ ಶೇಖರಣೆ ಮಾಡಬಹುದಾಗಿದೆ.

ದಾಳಿಂಬೆ ಹಣ್ಣಿನ ವಿವಿಧ ವರ್ಗಗಳು

ಹಣ್ಣುಗಳನ್ನು ಗಿಡದಿಂದ ಬೇರ್ಪಡಿಸಿದಾಗ ಅವುಗಳ ಬಣ್ಣ, ಗಾತ್ರ ಮತ್ತು ತೂಕದ ಮೇಲೆ ವಿವಿಧ ವರ್ಗಗಳಾಗಿ ವಿಭಾಗಿಸಲಾಗಿದೆ.

ವರ್ಗಗಳು ಗುಣಧರ್ಮಗಳು
ಶ್ರೇಷ್ಠವಾದ ಗಾತ್ರ (ಸುಪರ್ ಸೈಜ್) ಹಣ್ಣಗಳು ಆಕರ್ಷಕವಾಗಿದ್ದು, ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಕಪ್ಪು, ಕೆಂಪು ಬಣ್ಣದಿಂದ ಸುಮಾರು ೭೫೦ ಗ್ರಾಂ ಮತ್ತು ಅದಕ್ಕಿಂತ ಸುಮಾರು ಹೆಚ್‌ಇನ ತೂಕದ್ದಾಗಿರುತ್ತದೆ.
ರಾಜ ಗಾತ್ರ (ಕಿಂಗ್ ಸೈಜ್) ಹಣ್ಣುಗಳು ಆಕರ್ಷಕವಾಗಿದ್ದು, ದೊಡ್ಡದಾಗಿದ್ದು ಸುಮಾರು ೫೦೦-೭೦೦ ಗ್ರಾಂ ತೂಕದ್ದಾಗಿರುತ್ತವೆ.
ರಾಣಿ ಗಾತ್ರ (ಕ್ವೀನ್ ಸೈಜ್) ಹಣ್ಣುಗಳು ದೊಡ್ಡದಾಗಿದ್ದು, ಸುಮಾರು ೪೦೦-೫೦೦ ಗ್ರಾಂ ತೂಕದ್ದಾಗಿರುತ್ತವೆ.
ರಾಜಕುಮಾರ ಗಾತ್ರ (ಪ್ರಿನ್ಸ್ ಸೈಜ್) ಹಣ್ಣುಗಳು ಆಕರ್ಷಕವಾಗಿದ್ದು, ಸುಮಾರು ೩೦೦-೪೦೦ ಗ್ರಾಂ ತೂಕದ್ದಾಗಿರುತ್ತವೆ.
ಹಣ್ಣುಗಳ ಮೇಲೆ ೧-೧೨ ಚುಕ್ಕೆಗಳಿದ್ದು, ೨೫೦-೩೦೦ ಗ್ರಾಂ ತೂ.ಕದ್ದಾಗಿರುತ್ತವೆ.
ಹಣ್ಣುಗಳು ೨೫೦ ಗ್ರಾಂ ಕ್ಕಿಂತಲೂ ಕಡಿಮೆ ತೂಕದ್ದಾಗಿರುತ್ತವೆ.

ಭಾರತದಲ್ಲಿ ದಾಳಿಂಬೆ ಹಣ್ಣು ಎಲ್ಲಾ ಕಾಲದಲ್ಲಿಯೂ ದೊರೆಯುವುದರಿಂದ ಅಂತರ್ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಒಳ್ಳೆಯ ಅವಕಾಶವಿದೆ. ಗಣೇಶ, ಅರಕ್ತ, ಮೃದುಲಾ, ರೂಬಿ ಮತ್ತು ಭಗವಾ ತಳಿಗಳ ಹಣ್ಣುಗಳು ಹುಣಮಟ್ಟದಲ್ಲಿ ಉತ್ತಮವಾಗಿರುವುದರಿಂದ ಅಂತರ್ದೇಶಿಯ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆಯಿದೆ. ಅರಬ್ ದೇಶಗಳ ಒಕ್ಕೂಟ (ಯು.ಎ.ಸ), ಸೌದಿ ಅರೇಬಿಯ, ಬಾಂಗ್ಲಾದೇಶ, ಬಹ್ರೇನ್, ಕಥಾರ್ ಮತ್ತು ಕುವೈತ್ ದೇಶಗಳು ಈಗಾಗಲೇ ಭಾರತದ ದಾಳಿಂಬೆಯನ್ನು ಆಮದು ಮಾಡಿಕೊಳ್ಳುತ್ತವೆ.

ದಾಳಿಂಬೆ ಹಣ್ಣಿಗೆ ರಫ್ತಿಗೆ ಇರುವ ಮಾನದಂಡಗಳು

ದಾಳಿಂಬೆ ಹಣ್ಣನ್ನು ಮಾರಾಟ ಮಾಡುವಾಗ ಬೇರೆ-ಬೇರೆ ಆಮದುದಾರರಿಗನುಗುಣವಾಗಿ ಗಾತ್ರ, ಬಣ್ಣ, ಪ್ಯಾಕಿಂಗ್‌ಗಳನ್ನು ಅನುಸರಿಸಬೇಕಾಗುತ್ತದೆ. ಉದಾ: ಮಧ್ಯಪ್ರಾಚ್ಯ ದೇಶಗಳಿಗೆ ಹಣ್ಣಿನ ಗಾತ್ರ ೩೦೦-೪೫೦ ಗ್ರಾಂ ಇದ್ದು, ಕೆಂಪು ಬಣ್ಣದ್ದಾಗಿರಬೇಕು. ಹಾಲೆಂಡ್ ಮತ್ತು ಇಂಗ್ಲೆಂಡ್ ದೇಶಗಳಿಗೆ ಕಳುಹಿಸಬೇಕಾದರೆ ಹಣ್ಣಿನ ಗಾತ್ರ ೨೫೦-೩೦೦ ಗ್ರಾಂ ಇದ್ದು ಕೆಂಪು ಬಣ್ಣದ್ದಾಗಿರಬೇಕು. ೫ ಕಿಲೋ ಪ್ಯಾಕ್‌ನಲ್ಲಿ ೫೦ Cನಲ್ಲಿ ಶೀತಲೀಕರಿಸಿ ಕಾಪಾಡಿಕೊಂಡು ಹಣ್ಣನ್ನು ರಫ್ತು ಮಾಡಬೇಕಾಗುತ್ತದೆ.

ದಾಳಿಂಬೆ ಹಣ್ಣು ರಫ್ತುಮಾಡುವಾಗ ಇರುವ ತೊಡಕುಗಳು

ಗುಣಮಟ್ಟದಲ್ಲಿ ಅಸ್ಥರತೆ, ಸಣ್ಣ ಹಿಡುವಳಿದಾರರು, SPS ಪ್ರಮಾಣಪತ್ರ ಪಡೆಯವಲ್ಲಿ ಅಡಚಣೆಗಳೂ, ಶೀತಲೀಕರಣದಲ್ಲಿ ವಿಳಂಬ ಮತ್ತು ಹೆಚ್ಚು ಖರ್ಚು, ಅಈಃ ಮಾದರಿಯ ಪೆಟ್ಟಿಗೆಗಳು ಸಮಯಕ್ಕೆ ಸರಿಯಾಗಿ ಸಿಗದೇ ಇರುವುದು, ಹಾಳಾದ ರಸ್ತೆ ಮತ್ತು ಇದರಿಂದ ಕಂಟೇನರ್ ಸಾಗಾಣಿಕೆಗೆ ತೊಡಕು, ಹೀಗೆ ದಾಳಿಂಬೆ ರಫ್ತು ಮಾಡುವಾಗ ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಇವೆಲ್ಲದರ ಜೊತೆಗೆ ದಾಳಿಂಬೆ ತೋಟದಲ್ಲಿ ಶೇ. ೨೦ರಷ್ಟು ಮಾತ್ರ ರಫ್ತಿಗೆ ಸೂಕ್ತವಾಗಿರುವುದು ಮತ್ತೊಂದು ತೊಂದರೆಯಾಗಿದೆ. ಕೆಲವು ರಫ್ತುದಾರರು ಈ ಹಿಂದೆ ದಾಳಿಂಬೆ ಹಣ್ಣಿಗೆ ಮೇಣವನ್ನು ಹಚ್ಚಿ ಬೇರೆ ದೇಶಗಳಿಗೆ ಕಳಿಸಿದಾಗ ಈ ಮೇಣವು ಕರಗಿ ಕೆಟ್ಟವಾಸನೆ ಬಂದಿದ್ದರಿಂದ ದಾಳಿಂಬೆ ಹಣ್ಣನ್ನು ವಾಪಸ್ಸು ಕಳಿಸಲಾಯಿತು. ಸರಿಯಾದ ಪ್ರಮಾಣ ಮತ್ತು ವಿಧಾನಗಳನ್ನು ಉಪಯೋಗಿಸಿ ಈ ತೊಂದರೆಯನ್ನು ಹೋಗಲಾಡಿಸಲು ಪರೀಕ್ಷೆ ನಡೆಸಬೇಕಾಗಿದೆ.

ರಫ್ತು ಮಾಡಬಹುದಾದ ಹಣ್ಣುಗಳ ಪ್ರಮಾಣವನ್ನು ಹೆಚ್ಚಿಸಲು ಕೊಯ್ಲಿನ ಮೊದಲಿನ ಮತ್ತು ನಂತರದ ಕ್ರಮಗಳನ್ನು ಉತ್ತಮಗೊಳಿಸಬೇಕಾಗಿದೆ. ದೂರ ಪ್ರದೇಶದ ಸಾಗಾಣಿಕೆಗೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಗೊಳಿಸಿದ ದಾಳಿಂಬೆ ಹಣ್ರಣುಗಳನ್ನು ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚುವ ವಿಧಾನ (Shrink Dropping)ವನ್ನು ಬಳಸಬಹುದಾಗಿದೆ. ಹೀಗೆ ಮಾಡುವುದರಿಂದ ಹಣ್ಣು ೩-೪ ವಾರ ಕೆಡದಂತೆ ಎಡಬಹುದು.

ಗ್ರಂಥ ಋಣ

೧. ತೋಟಗಾರಿಕೆ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳು. ೨೦೦೭, ಕೃಷಿ ವಿಶ್ವವಿದ್ಯಾಲಯ, ಧಾರವಾಡ.