ಕುಕ್ಕುವಾಡ : ದಾವಣಗೆರೆ ಸಕ್ಕರೆ ಕಾರ್ಖಾನೆ

ದೂರ ಎಷ್ಟು ? 

ತಾಲ್ಲೂಕು : ದಾವಣಗೆರೆ
ಜಿಲ್ಲೆಯಿಂದ : ೧೮ ಕಿ.ಮೀ.
ತಾಲ್ಲೂಕಿನಿಂದ : ೧೮ ಕಿ.ಮೀ.

ಕುಕ್ಕುವಾಡ ಸಕ್ಕರೆ ಕಾರ್ಖಾನೆ

ಇದು ಜಿಲ್ಲಾ ಕೇಂದ್ರದಿಂದ ೧೮ ಕಿ.ಮಿ. ದೂರದಲ್ಲಿದೆ. ಹದಡಿ ಕೆರೆಯ ದಂಡೆಯ ಮೇಲೆ ಸಾಗಿದರೆ ಸಿಗುವ ಗ್ರಾಮವೆ ಕುಕ್ಕವಾಡ. ಇಲ್ಲಿ ೧೯೭೯-೮೦ ರಲ್ಲಿ ಸಕ್ಕರೆ ಉತ್ಪಾದನೆ ಪ್ರಾರಂಭವಾಯಿತು ಇದು ಅರೆ ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ದಿನ ೩೫೦೦ ಟನ್ ಕಬ್ಬು ಅರೆಯುವ ಸಾಮರ್ಥ್ಯವನ್ನು ಈ ಕಾರ್ಖಾನೆ ಹೊಂದಿದೆ. ಸುಮಾರು ೭೦೦ ಜನ ಕಾರ್ಯ ನಿರ್ವಹಿಸುತ್ತಿದ್ದು, ೨೪ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ.


ದೊಡ್ಡ ಬಾತಿ ಪವಿತ್ರ ವನ ಹೆಬ್ಬಾಳು

ದೂರ ಎಷ್ಟು ?

ತಾಲ್ಲೂಕು : ದಾವಣಗೆರೆ
ಜಿಲ್ಲೆಯಿಂದ : ೦೭ ಕಿ.ಮೀ.
ತಾಲ್ಲೂಕಿನಿಂದ : ೦೭ ಕಿ.ಮೀ.

ಪವಿತ್ರ ವನ ಬಾತಿ

ಇದು ದಾವಣಗೆರೆ ಹರಿಹರದ ಮದ್ಯೆ ಗುಡ್ಡದ ತಪ್ಪಲಿನಲ್ಲಿರುವ ಗ್ರಾಮ. ಕೈಗಾರಿಕಾ ಕೇಂದ್ರವಾಗಿ ಹೆಜ್ಜೆ ಇಡುತ್ತಿರುವ ಈ ಊರು ಹಾಲು ಉತ್ಪಾದನೆ ಸಕ್ಕರೆ ಉತ್ಪಾದನೆಗೆ ಖ್ಯಾತಿ ಹೊಂದಿದೆ. ಈ ಬೆಟ್ಟದ ಪಕ್ಕದಲ್ಲೇ ವಿಶಾಲ ಬಾತಿ ಕೆರೆ ಇದೆ. ದಾವಣಗೆರೆ ನಗರಕ್ಕೆ ಇಲ್ಲಿಂದ ಕುಡಿಯುವ ನೀರಿನ ಸರಬರಾಜಾಗುತ್ತಿದೆ. ಗುಡ್ಡದ ಮೇಲೆ ಶ್ರೀ ರೇವಣಸಿದ್ದಪ್ಪನ ದೇವಾಲಯವಿದ್ದು, ಪ್ರತಿ ವರ್ಷ ತೇರು ಕಾರ್ತೀಕ ವಿಜೃಂಭಣೆಯಿಂದ ನಡೆಯುತ್ತದೆ.

ಭಾವೈಕ್ಯತೆಯ ಸಂಗಮದಂತೆ ಮುಸ್ಲಿಮರ ಚಮನ್ ಷಾವಾಲಿ ದರ್ಗಾವಿದೆ. ಪ್ರತಿ ವರ್ಷ ಉರುಸ್ ನಡೆಯುತ್ತದೆ. ಇಲ್ಲಿ ಅಕರ್ಷಕ ಪವಿತ್ರ ವನ ನಿರ್ಮಾಣವಾಗಿದೆ. ಪ್ರಾಣಿ ಪಕ್ಷಿಗಳ ಕೆತ್ತನೆ ಮಾಡಿದ್ದು ಮಕ್ಕಳಿಗೆ ಮನೋರಂಜನೆಯ ಕೇಂದ್ರವೂ ಆಗಿದೆ.

 

ಹೆಬ್ಬಾಳು

ದೂರ ಎಷ್ಟು?
ತಾಲ್ಲೂಕು : ದಾವಣಗೆರೆ
ಜಿಲ್ಲೆಯಿಂದ : ೨೨ ಕಿ.ಮೀ.
ತಾಲ್ಲೂಕಿನಿಂದ : ೨೨ ಕಿ.ಮೀ

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಶ್ರೀ ರುದ್ರಸ್ವಾಮಿಗಳ ಮಠವಿದೆ. ಸುಮಾರು ೩೧೦ ವರ್ಷಗಳ ಹಿಂದೆ ಶ್ರೀ ರುದ್ರೇಶ್ವರ ಸ್ವಾಮಿಗಳು ಹಿರೇಗುಡ್ಡದಲ್ಲಿ ತಪಸ್ಸು ಮಾಡಿದ್ದರಂತೆ. ಶ್ರೀ ಈಶ್ವರ ರುದ್ರಸ್ವಾಮಿಗಳು ಸುಂದರವಾದ ಕಲ್ಲಿನಮಠ ಕಟ್ಟಿಸಿದ್ದಾರೆ. ಇದರ ಹೆಸರಿನಲ್ಲಿ ಪ್ರೌಢಶಾಲೆಯಿದೆ. ಪ್ರಸಾದ ನಿಲಯವೂ ಇದೆ. ಪ್ರತೀ ವರ್ಷ ರುದ್ರೇಶ್ವರ ಕಾರ್ತಿಕ ಉತ್ಸವ, ಅಡ್ಡ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ.

 

ಆನೆಕೊಂಡ

ಶ್ರೀ ಬಸವಣ್ಣ ಮತ್ತು ಈಶ್ವರ ದೇವಸ್ಥಾನ ಆನೆಕೊಂಡ, ದಾವಣಗೆರೆ

ದಾವಣಗೆರೆಯ ಈಶಾನ್ಯ ಭಾಗದಲ್ಲಿರುವ ಆನೆಕೊಂಡ ಗ್ರಾಮ ಗ್ರಾಮೀಣ ಸಂಸ್ಕೃತಿಯನ್ನು ಇಂದಿಗೂ ಹೊಂದಿದೆ. ಇದು ೧೧-೧೨ ನೇ ಶತಮಾನದ ಉಚ್ಚಂಗಿ ಪಾಂಡ್ಯರ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿ ಪಾಂಡ್ಯರ, ಚಾಲುಕ್ಯರ, ಹೊಯ್ಸಳರ ಶಾಸನವು ಇದೆ. ಕ್ರಿ.ಶ.೧೧೨೦ ರಲ್ಲಿ ತ್ರಿಭುವನ ಮಲ್ಲ ಪಾಂಡೇಶ್ವರನು ಕಲಾತ್ಮಕ ಕೆತ್ತನೆಯಿಂದ ಕೂಡಿದ ಈಶ್ವರ ದೇವಾಲಯ ನಿರ್ಮಿಸಿದನು. ಆನೆಗಳನ್ನು ಇಲ್ಲಿಯ ಹೊಂಡದಲ್ಲಿ ಸ್ನಾನ ಮಾಡಿಸುತ್ತಿದ್ದುದರಿಂದ ಆನೆ ಹೊಂಡ ಎಂದಿದ್ದು, ಕ್ರಮೇಣ ಆನೆಕೊಂಡ ಆಯಿತು. ಆನೆಕೊಂಡದ ಪ್ರಮುಖ ಆಕರ್ಷಣೆ ಪ್ರತಿವರ್ಷ ಇಲ್ಲಿ ನಡೆಯುವ ಶ್ರಾವಣಮಾಸದ ಕಾರ್ಣಿಕೋತ್ಸವ.

 

ಮಾಯಕೊಂಡ ಹಿರೇಮದಕರಿ ನಾಯಕನ ಸಮಾಧಿ

ದೂರ ಎಷ್ಟು ?
ತಾಲ್ಲೂಕು : ದಾವಣಗೆರೆ
ಜಿಲ್ಲೆಯಿಂದ : ೩೦ ಕಿ.ಮೀ.
ತಾಲ್ಲೂಕಿನಿಂದ : ೩೦ ಕಿ.ಮೀ.

ಇತಿಹಾದಲ್ಲಿ ಪ್ರಮುಖ ಸ್ಥಾನ ಪಡೆದ ಮಾಯಕೊಂಡ ದಲ್ಲಿ ಕ್ರಿ.ಶ. ೧೭೨೧ ರಲ್ಲಿ ಪಟ್ಟಕ್ಕೆ ಬಂದಿದ್ದ ಚಿತ್ರದುರ್ಗದ ಪಾಳೆಯಗಾರ ಹಿರೇಮದಕರಿ ನಾಯಕ ಶೂರನಾಗಿದ್ದನು. ಹರಪನಹಳ್ಳಿ ಪಾಳೆಗಾರರೊಂದಿಗೆ ಮಾಯಕೊಂಡದ ಮೈದಾನದಲ್ಲಿ ಯುದ್ಧ ನಡೆದು ಹಿರೇ ಮದಕರಿ ನಾಯಕ ಮರಣ ಹೊಂದಿದನು. ಇವನ ಸಮಾಧಿಯನ್ನು ಜೀರ್ಣೋದ್ಧಾರ ಮಾಡಲಾಗಿದೆ.


ಇಂದಿರಾ ಪ್ರಿಯದರ್ಶಿನಿ ಉದ್ಯಾನವನ:

ದೂರ ಎಷ್ಟು ?
ತಾಲ್ಲೂಕು : ದಾವಣಗೆರೆ
ಜಿಲ್ಲೆಯಿಂದ : ೧೫ ಕಿ.ಮೀ.
ತಾಲ್ಲೂಕಿನಿಂದ : ೧೫ ಕಿ.ಮೀ

ಇಂದಿರಾ ಪ್ರಿಯದರ್ಶಿನಿ ಉದ್ಯಾನವನ

ಆನಗೋಡಿನಿಂದ ೧ ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ೪ ರ ಪಕ್ಕದಲ್ಲಿ ಸುಮಾರು ೧೫ ಎಕರೆ ಪ್ರದೇಶದಲ್ಲಿ ದಿನಾಂಕ ೧೯.೧೧.೧೯೯೩ ರಲ್ಲಿ ಉದ್ಯಾನವನವು ಪ್ರಾರಂಭವಾಯಿತು. ಈ ವನದಲ್ಲಿ ನೂರಾರು ಜಾತಿಯ ಗಿಡಮರಗಳು ಹೂಬಳ್ಳಿಗಳನ್ನು ಅರಣ್ಯ ಇಲಾಖೆಯವರು ಬೆಳೆಸಿ ವನವು ಕಂಗೊಳಿಸುವಂತೆ ಮಾಡಿದ್ದಾರೆ. ಈ ಉದ್ಯಾನವನದಲ್ಲಿ ಹಲವಾರು ಪ್ರಾಣಿ ಪಕ್ಷಿಗಳನ್ನು ಸಾಕಿದ್ದಾರೆ. ಅವುಗಳಲ್ಲಿ ೮೦ ಜಿಂಕೆಗಳು, ೪೦ ಪಾರಿವಾಳಗಳು, ೮ ನವಿಲುಗಳು, ೧ ಕರಡಿ, ೪ ಗಿಣಿಗಳನ್ನು ಸಂರಕ್ಷಿಸಿಟ್ಟಿದ್ದಾರೆ. ಇವುಗಳ ಜೊತೆಗೆ ಮಕ್ಕಳಿಗೆ ಆಟದ ೨೫ ಬಗೆಯ ಸಾಮಾನುಗಳನ್ನು ನಿರ್ಮಿಸಿದ್ದಾರೆ. ಅವುಗಳನ್ನೂ ಮಕ್ಕಳು ಬಳಸಿ ಆಟವಾಡಿ ಸಂತೋಷಪಡುತ್ತಾರೆ.

ಶ್ರೀ ಮರುಳಸಿದ್ದರು ಪವಾಡ ನಡೆಸಿದ ಕ್ಷೇತ್ರವಿದು. ಶ್ರೀ ಸಿದ್ದೇಶ್ವರ ದೇವಾಲಯ ತ್ರಿಕೂಟಾಚಲ ಶೈಲಿಯಲ್ಲಿ ಕಟ್ಟಲಾಗಿದ್ದು ಇದರ ಗೋಪುರ ೧೭ನೇ ಶತಮಾನದ್ದು. ಆನೆಕೊಂಡದ ಕವಿ ಶ್ರೀ.ರೇವಣ ಸಿದ್ದರು ಮರುಳುಸಿದ್ದರ ಕಾವ್ಯ ರಚಿಸಿದ್ದಾರೆ. ಇಲ್ಲಿ ಮರುಳುಸಿದ್ದ ಪ್ರೌಢಶಾಲೆ ಇದೆ. ಸುಂದರ ಅರಣ್ಯ ಸಂಪತ್ತಿನ ನಡುವೆ ಶ್ರೀ ಇಂದಿರಾ ಪ್ರಿಯದರ್ಶಿನಿ ಉದ್ಯಾನ ವನವಿದೆ. ಇಲ್ಲಿ ಅನೇಕ ಜಾತಿಯ ಮರಗಳು, ಸಸ್ಯ ಸಂಪತ್ತು ಹಾಗೂ ಅನೇಕ ಪ್ರಾಣಿ ಪಕ್ಷಿಗಳನ್ನು ಕಾಣಬಹುದಾಗಿದೆ.