ಹಂಪೆ – ಬಳ್ಳಾರಿ ಜಿಲ್ಲೆ


ವಿಜಯನಗರ ಸಾಮ್ರಾಜ್ಯವನ್ನು ೧೩೩೬ರಲ್ಲಿ ಹರಿಹರ ಮತ್ತು ಬುಕ್ಕ ರಾಜರುಗಳು ಸ್ಥಾಪಿಸಿದರು. ಹಂಪೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಹಂಪೆಯಲ್ಲಿ ವಿರುಪಾಕ್ಷದೇವಾಲಯ, ಹಜಾರ ರಾಮಸ್ವಾಮಿ ದೇವಾಲಯ, ವಿಜಯವಿಠ್ಠಲ ದೇವಾಲಯ, ಸಾಸಿವೆಕಾಳು ಗಣಪತಿ, ಕಡ್ಲೇಕಾಳು ಗಣಪತಿ ಮತ್ತು ಉಗ್ರನರಸಿಂಹ ಹಾಗೂ ಇನ್ನೂ ಮೊದಲಾದ ಐತಿಹಾಸಿಕ ದೇವಾಸ್ಥಾನಗಳಿವೆ.

ತುಂಗಭದ್ರ ಅಣೆಕಟ್ಟು


ತುಂಗಭದ್ರ ನದಿಗೆ ಹೊಸಪೇಟೆ ಹತ್ತಿರ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಕೃಷಿ, ವಿದ್ಯುತ್, ಮೀನುಗಾರಿಕೆಗೆ ಇದನ್ನು ಉಪಯೋಗಿಸಲಾಗುತ್ತದೆ.

 

ಚಿತ್ರದುರ್ಗ ಕೋಟೆ

ಪಾಳೇಗಾರರ ಕಾಲದಲ್ಲಿ ಚಿತ್ರದುರ್ಗ ಏಳುಸುತ್ತಿನ ಕಲ್ಲಿನ ಕೋಟೆಯಿಂದ ಆವೃತವಾಗಿದ್ದು, ಇದರಲ್ಲಿ ಮದ್ದುಬೀಸುವ ಕಲ್ಲುಗಳು, ಗಾಳಿಮಂಟಪ, ಶ್ರೀ ಏಕನಾಥೇಶ್ವರಿ ದೇವಾಲಯ, ಉಯ್ಯಾಲೆ ಕಂಬ, ಆನೆ-ಕುದುರೆ ಹೆಜ್ಜೆಗಳು, ಒಂಟಿ ಕಲ್ಲಿನ ಬಸವ, ಇನ್ನೂ ಮುಂತಾದ ಸ್ಥಳಗಳನ್ನು ನೋಡಬಹುದು.

 

ಶ್ರೀ ಮುರುಘರಾಜೇಂದ್ರ ಪ್ರಾಚೀನ ಮಠ

ಸಂಪಿಗೆ ಸಿದ್ದೇಶ್ವರ ದೇವಾಲಯದ ಮುಂಭಾಗದಲ್ಲಿರುವ ಚಿತ್ರದುರ್ಗ ಪಾಳೇಯಗಾರರ ರಾಜಗುರುಗಳ ಈ ಮಠವು ಹಿಂದೆ ಶ್ರದ್ಧಾಭಕ್ತಿಗಳ ಕೇಂದ್ರವೇ ಅಲ್ಲದೆ ರಾಜತಾಂತ್ರಿಕತೆಯ ಶಿಕ್ಷಣಕೇಂದ್ರವೂ ಆಗಿತ್ತು.

 

ಒನಕೆ ಓಬವ್ವನ ಕಿಂಡಿಚಿತ್ರದುರ್ಗ ಜಿಲ್ಲೆ

ಚಿತ್ರದುರ್ಗದ ಕೋಟೆಯ ವಾಯುವ್ಯ ದಿಕ್ಕಿನಲ್ಲಿ ಕಾಣುವ ಈ ಸ್ಥಳ ಬಹಳ ವಿಶಿಷ್ಟವಾದದ್ದು, ಹೈದರಾಲಿಯು ಚಿತ್ರದುರ್ಗದ ಕೋಟೆಯನ್ನು  ಮುತ್ತಿದಾಗ ಗತ್ಯಂತರವಿಲ್ಲದೆ ಈ ಗುಪ್ತದ್ವಾರದ ಮುಖಾಂತರ ಸೈನಿಕರು ಕೋಟೆಯನ್ನು ಪ್ರವೇಶಿಸಲು ಪ್ರಯತ್ನ ಪಡುತ್ತಾರೆ. ಕಾವಲುಗಾರನ ಹೆಂಡತಿ ಓಬವ್ವ ಕಿಂಡಿಯಿಂದ ನುಸುಳುತ್ತಿದ್ದ ಸೈನಿಕರನ್ನು ಕೊಂದು ಕೋಟೆಯನ್ನು ರಕ್ಷಿಸಿದ ಕಥೆ ಜನಜನಿತವಾಗಿದೆ.

 

 ಚಂದ್ರವಳ್ಳಿ ಕೆರೆ

 

ಜೋಗ ಜಲಪಾತಶಿವಮೊಗ್ಗ ಜಿಲ್ಲೆ

ವಿಶ್ವವಿಖ್ಯಾತ ಜೋಗಜಲಪಾತ ಸುಮಾರು ೨೭೪ಮೀಟರ್ ಎತ್ತರದಿಂದ ಧುಮುಕುವ ರಾಜ, ರೋರೋರ್, ರಾಕೇಟ್ ಮತ್ತು ಲೇಡಿ ಎನ್ನುವ ನಾಲ್ಕು ಧಾರೆಗಳಾಗಿ ಧುಮುಕಿ ಜನರನ್ನು ಆಕರ್ಷಿಸುತ್ತಿದೆ.

 

ಲಕ್ಕವಳ್ಳಿ (ಬಿ.ಆರ್ಪ್ರಾಜೆಕ್ಟ್)

ಭದ್ರಾನದಿಗೆ ಅಡ್ಡವಾಗಿ ಅಣೆಕಟ್ಟನ್ನು ಕಟ್ಟಲಾಗಿರುವ ಲಕ್ಕವಳ್ಳಿ ಶಿವಮೊಗ್ಗದಿಂದ ಸುಮಾರು ೧೫ ಕಿ.ಮಿ. ದೂರದಲ್ಲಿದೆ. ಆ ಜಲ ಸಾಗರದಲ್ಲಿ ವಿದ್ಯುತ್ ಘಟಕಗಳು ಇವೆ.

 

ಲಿಂಗನಮಕ್ಕಿ ಅಣೆಕಟ್ಟು

ಜೋಗಕ್ಕೆ ೬ ಕಿ.ಮೀ. ದೂರದಲ್ಲಿ ಲಿಂಗನಮಕ್ಕಿ ಇದೆ. ಇದು ಶರಾವತಿಗೆ ಅಡ್ಡಲಾಗಿ ಅಣೆಕಟ್ಟನ್ನು ಕಟ್ಟಲಾಗಿರುವ ಸ್ಥಳ. ಇದರಲ್ಲಿ ಸುಮಾರು ೧೮೧೯ ಅಡಿ ನೀರು ಶೇಖರಣೆ ಮಾಡಲು ಅವಕಾಶವಿದೆ. ಸಾಗರದಂತೆ ಕಾಣುವ ನೀರಿನ ಆಗರ ಆಕರ್ಷಣೆ ಶರಾವತಿ ಮುಳುಗಡೆ ಪ್ರದೇಶದಲ್ಲಿದ್ದ ಪುರಾತನವಾದ ಗಣಪತಿ ವಿಗ್ರಹ, ಚೌಡೇಶ್ವರಿ ವಿಗ್ರಹ, ಮಾಸ್ತಿಕಲ್ಲು, ಜೈನ ಬಸದಿಯಲ್ಲಿನ ಅನೇಕ ಮೂರ್ತಿಗಳನ್ನು ಸಂಗ್ರಹಿಸಿ ಇಲ್ಲಿನ ವಸ್ತುಸಂಗ್ರಹಾಲಯದಲ್ಲಿ ಪ್ರವಾಸಿಗರಿಗೆ ಪ್ರದರ್ಶನಕ್ಕಿಡಲಾಗಿದೆ

 

ತ್ಯಾವರೆಕೊಪ್ಪ         

ಶಿವಮೊಗ್ಗ ಸಾಗರ ರಸ್ತೆಯಲ್ಲಿರುವ ತ್ಯಾವರೆಕೊಪ್ಪ ಶಿವಮೊಗ್ಗದಿಂದ ಸುಮಾರು ೮ ಕಿ.ಮೀ. ದೂರದಲ್ಲಿದೆ. ಶಿವಮೊಗ್ಗ ಪ್ರವಾಸೋದ್ಯಮ ನಕ್ಷೆಯಲ್ಲಿ ತ್ಯಾವರೆಕೊಪ್ಪ ಹುಲಿ ಧಾಮಕ್ಕೆ ಉತ್ತಮ ಸೇರ್ಪಡೆಯಾಗಿದೆ. ಹುಲಿ, ಸಿಂಹಗಳ ಅಭಯಾರಣ್ಯ, ವನ್ಯಧಾಮ, ಕಾಡಿನ ರಾಜನ ಗತ್ತು, ಗಾಂಭೀರ್ಯ, ಹುಲಿಯ ಗಂಭೀರ ನಡಿಗೆಯನ್ನು ಇಲ್ಲಿ ಅನುಭವಿಸಬಹುದು. ಪ್ರವಾಸಿಗರು ನೋಡಲೇ ಬೇಕಾದ ವನ್ಯ ಪ್ರಾಣಿ ಧಾಮ ಇದು. ಇಲ್ಲಿ ೧೫ ಹುಲಿಗಳಿವೆ, ೩ ಸಿಂಹ ಇದೆ. ೮ ಚಿರತೆ, ೧ ಕತ್ತೆ ಕಿರುಬ, ೬ ನರಿ, ೩೩ ಜಿಂಕೆ, ೩೩ ಕಡವೆ, ೩೧ ಕೃಷ್ಣಮೃಗ, ೩ ಮೊಸಳೆ, ೨ ಮುಳ್ಳಂದಿ, ೨ ಹೆಬ್ಬಾವು ೪ ನವಿಲುಗಳಿವೆ. ಇದು ೨೦೦ ಹೆಕ್ಟರ್ ವಿಸ್ತೀರ್ಣವನ್ನು ಹೊಂದಿದೆ. ಅಲ್ಲದೆ ಹಲವು ಕಾಡು ಪ್ರಾಣಿಗಳಿವೆ.