ಉಚ್ಚಂಗಿ ದುರ್ಗ

ದೂರ ಎಷ್ಟು ?
ತಾಲ್ಲೂಕು : ಹರಪನಹಳ್ಳಿ
ಜಿಲ್ಲೆಯಿಂದ : ೨೬ ಕಿ.ಮೀ.
ತಾಲ್ಲೂಕಿನಿಂದ : ೨೬ ಕಿ.ಮೀ.

ಗಿರಿದುರ್ಗ ಕೋಟೆ, ಉಚ್ಚಂಗಿದುರ್ಗ

ಗಿರಿ ದುರ್ಗಗಳ ವಾಸ್ತುಶೈಲಿಯಲ್ಲಿಯೇ ಅದ್ಬುತವಾದ ಮಾದರಿ ಉಚ್ಚಂಗಿದುರ್ಗ. ೯ನೇ ಶತಮಾನದ ಪೂರ್ವದಲ್ಲಿಯೇ ನಿರ್ಮಿತವಾದ ಕೋಟೆ. ಇದು ಅನೇಕ ರಾಜರ, ಮಾಂಡಳೀಕರ ಪಾಳೆಯಗಾರರ ಹಾಗೂ ಬ್ರಿಟೀಷರ ಆಡಳಿತಕ್ಕೆ ಒಳಪಟ್ಟಿತ್ತು. ಎತ್ತರವಾದ ಹಾಗೂ ಸುತ್ತ ಆಳವಾದ ಕಂದಕಗಳು ಮತ್ತು ಕಡಿದಾದ ಬೆಟ್ಟವನ್ನು ಹೊಂದಿದೆ. ಉಚ್ಚಂಗಮ್ಮ ದೇವಾಲಯವು ಕೋಟೆಯ ಆವರಣದಲ್ಲಿದೆ. ದೇವಿಯ ಸಾನಿಧ್ಯದಲ್ಲಿ ನಡೆಯುವ ಹುಣ್ಣಿಮೆ ಹಾಗೂ ದಸರಾ ಉತ್ಸವಕ್ಕೆ ಇದರದೇ ಆದ ಸೊಬಗಿದೆ. ಕರ್ನಾಟಕವಲ್ಲದೇ ನೆರೆ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ. ಕವಿ ಮಹಾಲಿಂಗರಂಗನು ಉಚ್ಚಂಗಿದುರ್ಗದಲ್ಲಿ ಜನಿಸಿದನು ಹಿರಿಯಣ್ಣ ಕವಿಯೂ ಕೂಡ ಇದೇ ಪ್ರಾಂತ್ಯದವನು. ಈ ಕೋಟೆಯು ಸಾಂಸ್ಕೃತಿಕ, ಸಾಹಿತ್ಯಿಕ, ಧಾಮಿರ್ಕಕತೆಯನ್ನು ಒಳಗೊಂಡಿರುವುದಲ್ಲದೇ ಸೋಬಾನೆ ಪದದ ಹಾಡುಗಾರ್ತಿಯರಾದ ಬೊಮ್ಮಳ ಎಲಿಸವ್ವ, ದುರುಗಮ್ಮ, ರೇಣುಕಮ್ಮ ನೆಲೆಸಿರುವ ಉಚ್ಚಂಗಿದುರ್ಗವು ಪ್ರವಾಸಿಗರಿಗೆ ಆಕರ್ಶಣೀಯ ಕೇಂದ್ರವಾಗಿದೆ.

 

ಅರಸೀಕೆರೆ

ದೂರ ಎಷ್ಟು ?
ತಾಲ್ಲೂಕು : ಹರಪನಹಳ್ಳಿ
ಜಿಲ್ಲೆಯಿಂದ : ೩೮ ಕಿ.ಮೀ.
ತಾಲ್ಲೂಕಿನಿಂದ : ೧೫ ಕಿ.ಮೀ.

ಒಂಭತ್ತನೇ ಶತಮಾನದಲ್ಲಿ ನೊಳಂಬ ಪಲ್ಲವರ ಅರಸಿಯೊಬ್ಬಳು ನಿರ್ಮಿಸಿದ ಕೆರೆಯ ಪಕ್ಕದಲ್ಲಿ ಸ್ಥಾಪಿತವಾದ ಗ್ರಾಮ ಅರಸೀಕೆರೆ. ದಂಡಿ ದುರ್ಗಮ್ಮನ ದೇವಾಲಯ ಪ್ರಮುಖ ಆಕರ್ಷಣೆ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಇಲ್ಲಿನ ಇತರೆ ದೇವಾಲಯಗಳೆಂದರೆ ಕಲ್ಲೇಶ್ವರ, ಕೆರೆಯ ಗುಡಿ, ಹರಿಹರೇಶ್ವರ, ಊರಮ್ಮ ದೇವಿಯ ಹಾಗೂ ಕೋಲಶಾಂತೇಶ್ವರ ಮಠವು ಧಾರ್ಮಿಕ ಶೈಕ್ಷಣಿಕ ಕೇಂದ್ರವಾಗಿದೆ.

ಲೋಕದೊಂದಿಗೆ ಹೊಂದಿ ನಡೆಯುವುದನು ಕಲಿಯದವರು ಹಲವು ಕಲಿತರೂ ಅರಿವಿಲ್ಲದವರು . ಮುನಿಸ್ವಾಮಿ

 

ಚಿಗಟೇರಿ

ದೂರ ಎಷ್ಟು ?
ತಾಲ್ಲೂಕು : ಹರಪನಹಳ್ಳಿ
ಜಿಲ್ಲೆಯಿಂದ : ೬೦ ಕಿ.ಮೀ.
ತಾಲ್ಲೂಕಿನಿಂದ : ೧೨ ಕಿ.ಮೀ

ವಿಜಯನಗರದ ಅರಸರ ಕಾಲದಲ್ಲಿ ಇದೊಂದು ಅಗ್ರಹಾರ ವಾಗಿತ್ತು. ಇಲ್ಲಿ ಮೂರು ಕೆರೆಗಳು ಕಂಡು ಬರುತ್ತವೆ ನಾರದಮುನಿ ದೇವಾಲಯ ಇಲ್ಲಿಯ ಪ್ರಮುಖ ಆಕರ್ಷಣೆ. ಪ್ರತಿ ವರ್ಷ ಬೇಸಿಗೆಯಲ್ಲಿ ಜಾತ್ರೆ ನಡೆಯುತ್ತದೆ. ಚಿಗಟೇರಿ ಶಿವಪ್ಪ ನಾಯಕನ ಆಡಳಿತಕ್ಕೆ ಒಳಪಟ್ಟಿತ್ತು ಇಲ್ಲಿ ರಾಮಲಿಂಗೇಶ್ವರ, ಸೂರ್ಯನಾರಾಯಣ, ವೀರಭದ್ರ ದೇವಾಲಯಗಳನ್ನು ನೋಡಬಹುದು. ಜಾನಪದ ತಜ್ಞ ಮುದೇನೂರು ಸಂಗಣ್ಣನವರ ಜನ್ಮ ಸ್ಥಳ ಇದು. ’ಚಿಗಟೇರಿ ಫಿರ್ಕಾ’ ಎಂದೇ ಪ್ರಸಿದ್ದಿ ಪಡೆದ ಈ ಗ್ರಾಮ ರಾಜಕೀಯವಾಗಿಯೂ ಹೆಸರು ಪಡೆದಿದೆ.

 

ದೇವರ ತಿಮ್ಮಲಾಪುರ

ದೂರ ಎಷ್ಟು ?
ತಾಲ್ಲೂಕು : ಹರಪನಹಳ್ಳಿ
ಜಿಲ್ಲೆಯಿಂದ : ೫೦ ಕಿ.ಮೀ.
ತಾಲ್ಲೂಕಿನಿಂದ : ೧.೫ ಕಿ.ಮೀ.

ಶ್ರೀ ವೆಂಕಟೇಶ್ವರ ದೇವಾಲಯ, ದೇವರ ತಿಮ್ಮಲಾಪುರ

ಪಾಳೆಗಾರರಾದ ದಾದೇನಾಯಕ ಮತ್ತು ರಂಗನಾಯಕ ಇವರು ಶ್ರೀ ವೆಂಕಟೇಶ್ವರ ದೇವಾಲಯವನ್ನು ನಿರ್ಮಿಸಿದ್ದಾರೆ. ವೆಂಕಟೇಶನ ಹೆಸರು ತಮ್ಮ ಆಗಿರುವುದರಿಂದ ಈ ಗ್ರಾಮಕ್ಕೆ ದೇವರ ತಿಮ್ಮಲಾಪುರ ಎಂಬ ಹೆಸರು ಬಂದಿದೆ. ೧೮೪೧ ರ ಶಾಸನದಂತೆ ವೆಂಕಟಾಚಲ ಎಂಬುವನು ಇಲ್ಲಿನ ಪುಷ್ಕರಣಿಯನ್ನು ಜೀರ್ಣೋದ್ಧಾರ ಮಾಡಿದ್ದಾನೆ. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಇಲ್ಲಿ ಅತಿ ವಿಜೃಂಭಣೆಯಿಂದ ರಥೋತ್ಸವವು ನಡೆಯುತ್ತದೆ.

 

ಬಾಗಳಿ

ದೂರ ಎಷ್ಟು ?
ತಾಲ್ಲೂಕು : ಹರಪನಹಳ್ಳಿ
ಜಿಲ್ಲೆಯಿಂದ : ೬೦ ಕಿ.ಮೀ.
ತಾಲ್ಲೂಕಿನಿಂದ : ೦೮ ಕಿ.ಮೀ.

ಕಲ್ಲೇಶ್ವರ ದೇವಾಲಯ, ಬಾಗಳಿ

ಇದ  ಹೊಯ್ಸಳರ ಎರಡನೇ ವೀರಬಲ್ಲಾಳನ ರಾಜಧಾನಿಯಾಗಿತ್ತು. ಬಾಗಳಿ ಹರಪನಹಳ್ಳಿ ಪಾಳೆಯಗಾರರ ಮೂಲ ನೆಲೆಯಾಗಿತ್ತು. ಇಲ್ಲಿಯ ಕಲ್ಲೇಶ್ವರ ದೇವಾಲಯವು ಹತ್ತನೇ  ಶತಮಾನದಲ್ಲಿ ನಿರ್ಮಿಸಲ್ಪಟ್ಟಿದ್ದು ೫೯ ಕಂಬಗಳಿಂದ ಕೂಡಿ ವಿಭಿನ್ನವಾಗಿ ನಿರ್ಮಾಣಗೊಂಡ ಚಾಲುಕ್ಯರ ವಾಸ್ತು ಶೈಲಿಯ ದೇವಾಲಯ ಇಲ್ಲಿನ ೩೬ ಶಾಸನಗಳು ಇತಿಹಾಸ ಪ್ರಿಯರಿಗೆ ತೆರೆದಿಟ್ಟ ಪುಸ್ತಕಗಳು.

ವಸ್ತು ಸಂಗ್ರಹಾಲಯ:-

ಭಾರತೀಯ ಪುರಾತತ್ವ ಇಲಾಖೆಯಿಂದ ನಿರ್ಮಿಸಲಾದ ಮ್ಯೂಸಿಯಂ ಇದೆ. ಪ್ರಾಚೀನ ಅವಶೇಷಗಳು, ವೀರಗಲ್ಲುಗಲ್ಲು, ಮಾಸ್ತಿ ಕಲ್ಲುಗಳನ್ನು ಇಲ್ಲಿ ಕಾಣಬಹುದು. ಅಲ್ಲದೇ ಶ್ರೀ ಚನ್ನಬಸವೇಶ್ವರ, ಲಕ್ಷ್ಮಿನಾರಾಯಣ, ಶ್ರೀ ಕನಕೇಶ್ವರ, ಇಷ್ಟಲಿಂಗೇಶ್ವರ ದೇವಾಲಯಗಳನ್ನೂ ಹಾಗೂ ಜೈನಬಸದಿಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಸಾಹಿತ್ಯ ಕೊಡುಗೆ:-

ಕ್ರಿ.ಶ. ೧೫೮೨ ರಲಿ ಇದ್ದ ದೇವಕವಿ ಬಾಗಳಿಯವನು ಶ್ರೀ ಮರುಳುಸಿದ್ದೇಶ್ವರ ಕಾವ್ಯ ರಚಿಸಿರುತ್ತಾನೆ.

 

ಕೂಲಹಳ್ಳಿ

ದೂರ ಎಷ್ಟು ?
ತಾಲ್ಲೂಕು : ಹರಪನಹಳ್ಳಿ
ಜಿಲ್ಲೆಯಿಂದ : ೬೦ ಕಿ.ಮೀ.
ತಾಲ್ಲೂಕಿನಿಂದ : ೦೮ ಕಿ.ಮೀ.

ಮದ್ದಾನಸ್ವಾಮಿ ಮಠ, ಕೂಲಹಳ್ಳಿ

ಶ್ರೀ ಗೋಣೀಬಸವೇಶ್ವರ ದೇವಾಲಯ ಇಲ್ಲಿಯ ಆಕರ್ಷಣೆ. ಪಂಚ ಗಣಾಧೀಶ್ವರರಲ್ಲಿ ಒಬ್ಬರಾದ ಶ್ರೀ ಮದ್ದಾನ ಸ್ವಾಮಿ ನೆಲೆಸಿದ ಸ್ಥಳ ಇದರ ಹೆಸರಿನಲ್ಲಿ ಮಠವಿದೆ. ಪ್ರತಿ ವರ್ಷ ಗೋಣೀಬಸವೇಶ್ವರರ ರಥೋತ್ಸವ ಮತ್ತು ಜಾತ್ರೆ ನಡೆಯುತ್ತದೆ.

 

ತೆಲಿಗಿ

ದೂರ ಎಷ್ಟು ?
ತಾಲ್ಲೂಕು : ಹರಪನಹಳ್ಳಿ
ಜಿಲ್ಲೆಯಿಂದ : ೩೦ ಕಿ.ಮೀ.
ತಾಲ್ಲೂಕಿನಿಂದ : ೨೫ ಕಿ.ಮೀ.

ಇಲ್ಲಿ ರೈತ ಸ್ನೇಹಿಯಾದ ಅಗ್ರೋಬಯೋಕೆಮಿಕಲ್ ಹೆಸರಿನ ಕೈಗಾರಿಕೆ ಇದೆ. ಚಂಡು ಹೂವು, ಬಳಸಿ ವಿವಿಧ ಬಗೆಯ ಬಣ್ಣಗಳನ್ನು ತಯಾರಿಸಿ ಹೊರದೇಶಗಳಿಗೆ ರಪ್ತು ಮಾಡುತ್ತಾರೆ

 

ದುಗ್ಗಾವತಿ

ದೂರ ಎಷ್ಟು ?
ತಾಲ್ಲೂಕು : ಹರಪನಹಳ್ಳಿ
ಜಿಲ್ಲೆಯಿಂದ : ೩೩ ಕಿ.ಮೀ.
ತಾಲ್ಲೂಕಿನಿಂದ : ೨೮ ಕಿ.ಮೀ.

ಸುಂದರ ಪರಿಸರಸದ ಮಧ್ಯದಲ್ಲಿ ಶಾಮನೂರು ಷುಗರ‍್ಸ್ ಸಕ್ಕರೆ ಉತ್ಪಾದನಾ ಕೈಗಾರಿಕೆ ಇದೆ. ಕಬ್ಬಿನ ಸಿಪ್ಪೆ ಬಳಸಿ ವಿದ್ಯುತ್‌ನ್ನು ತಯಾರಿಸಲಾಗುತ್ತದೆ. ಡಿಸ್ಟಲರಿ ಹಾಗೂ ಸಾವಯವ ಗೊಬ್ಬರಗಳನ್ನು ತಯಾರಿಸಲಾಗುತ್ತದೆ.”

 

ನೀಲಗುಂದ

ದೂರ ಎಷ್ಟು ?
ತಾಲ್ಲೂಕು : ಹರಪನಹಳ್ಳಿ
ಜಿಲ್ಲೆಯಿಂದ : ೫೦ ಕಿ.ಮೀ.
ತಾಲ್ಲೂಕಿನಿಂದ : ೧೨ ಕಿ.ಮೀ

ಭೀಮೇಶ್ವರ ದೇವಸ್ಥಾನ, ನೀಲಗುಂದ

ಇಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ ಭೀಮೇಶ್ವರ ದೇವಾಲಯ ಕಲಾತ್ಮಕವಾಗಿದೆ. ಇದು ಹತ್ತನೇ ಶತಮಾನದಲ್ಲಿ ಪ್ರಾಚೀನ ವಿದ್ಯಾ ಕೇಂದ್ರವಾಗಿತ್ತು . ಭಗ್ನಗೊಂಡ ಅನೇಕ ಪ್ರಾಚೀನ ದೇವಾಲಯಗಳೂ ಇಲ್ಲಿ ಇವೆ.ಮುಕ್ತಿ ರಾಮೇಶ್ವರ, ಅನಂತಶಯನ, ಲಕ್ಷ್ಮಿನಾರಾಯಣ, ವೀರೇಶ್ವರ, ವೀರಭದ್ರ, ತಿಮ್ಮಪ್ಪ, ಬಸವೇಶ್ವರ ದೇವಾಲಯವನ್ನೂ ಕಾಣಬಹುದು. ಅಮೃತ ಸರೋವರ ಎಂದು ಕರೆಸಿಕೊಳ್ಳುವ ಕೆರೆ ಇಲ್ಲಿದೆ.

“ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ ಶಾಸ್ತ್ರಿತನದಿಂದಲ್ಲ – ಮಂಕುತಿಮ್ಮ –ಡಿವಿಜಿ

“ದೇಶ ನೋಡು ಕೋಶ ಓದು” ಎಂಬ ನಾಣ್ನುಡಿಯಂತೆ ಮನುಷ್ಯನ’ ಜೀವನ ಓದಿನಿಂದ ಮಾತ್ರ ಪರಿಪೂರ್ಣವಾಗದೆ ಅನೇಕ ವೈವಿದ್ಯಮಯ ಸ್ಥಳಗಳಿಗೆ ಭೇಟಿ ನೀಡಿ ಪಡೆದುಕೊಳ್ಳುವ ನೈಜ ಅನುಭವದಿಂದ ಮಾತ್ರ ಜೀವನ ಸಾರ್ಥಕವಾಗುತ್ತದೆ