ತುಗ್ಗಲಹಳ್ಳಿ

ದೂರ ಎಷ್ಟು ?
ತಾಲ್ಲೂಕು : ಹೊನ್ನಾಳಿ
ಜಿಲ್ಲೆಯಿಂದ : ೬೨ ಕಿ.ಮೀ.
ತಾಲ್ಲೂಕಿನಿಂದ : ೦೭ ಕಿ.ಮೀ.

ಗವಿಸಿದ್ದೇಶ್ವರ ತಾಣ-ನೂರಾಒಂದು ಲಿಂಗ


ತುಗ್ಗಲ ಹಳ್ಳಿಯಿಂದ ೦೧ ಕಿ.ಮೀ. ಊರ ಹೊರ ಭಾಗದ ಪಶ್ಚಿಮದಲ್ಲಿ ಕರಡಿ ಕಲ್ಲು, ಗವಿಸಿದ್ದೇಶ್ವರ ತಾಣವಿದೆ. ಇಲ್ಲಿ ೧೦೧ ಶಿವಲಿಂಗಗಳಿವೆ. ಮೇಗಳಮನಿ ಸಿದ್ದಪ್ಪನವರು ಇದನ್ನು ನವೀಕರಿಸಿದ್ದಾರೆ.


ಬಳ್ಳೇಶ್ವರ

ದೂರ ಎಷ್ಟು ?
ತಾಲ್ಲೂಕು : ಹೊನ್ನಾಳಿ
ಜಿಲ್ಲೆಯಿಂದ : ೬೩ ಕಿ.ಮೀ.
ತಾಲ್ಲೂಕಿನಿಂದ : ೦೮ ಕಿ.ಮೀ.

ಶಂಭುಲಿಂಗನ ದೇವಾಲಯ

ಇಲ್ಲಿರುವ ಬಳ್ಳೇಶ್ವರ ದೇವಾಲಯವನ್ನು ವೀರಶಿಲ್ಪಿ ಜಕಣಾಚಾರಿ ಕಟ್ಟಿಸಿದನೆಂದು ಹೇಳಲಾಗುತ್ತದೆ. ಇಲ್ಲಿರುವ ಶಂಭುಲಿಂಗನ ದೇವಾಲಯವನ್ನು ಹೊಯ್ಸಳ ಕಾರಬಲ್ಲಾಳ ಸ್ಥಾಪಿಸಿದನೆಂದು ತಿಳಿದು ಬಂದಿದೆ. ಈ ದೇವಾಲಯ ಬೇಲೂರು , ಹಳೇಬೀಡನ್ನು ನೆನಪಿಸುತ್ತದೆ. ವಿಶೇಷವಾಗಿ ಸಂಕ್ರಾಂತಿ, ಶಿವರಾತ್ರಿ ದಿನದಂದು ಭಕ್ತರ ಸಮೂಹ ಆಗಮಿಸುತ್ತದೆ.

ಪಾರ್ಶ್ವನಾಥ, ದಿಗಂಬರ, ಜಿನ ಮಂದಿರ ಎಂಬ ನಾಮಫಲಕವೂ ಕಾಣುತ್ತದೆ. ಇಲ್ಲಿಯ ಶಾಸನ ಗ್ರಾಮದ ಪ್ರಾಚೀನತೆಯನ್ನು ಸಾರುತ್ತದೆ, ಇದೊಂದು ಪವಿತ್ರ ಧಾರ್ಮಿಕ ಸ್ಥಳವಾಗಿದೆ.

 

ಹೊನ್ನಾಳಿ

ದೂರ ಎಷ್ಟು ?
ತಾಲ್ಲೂಕು : ಹೊನ್ನಾಳಿ
ಜಿಲ್ಲೆಯಿಂದ : ೫೫ ಕಿ.ಮೀ.
ತಾಲ್ಲೂಕಿನಿಂದ : ೦೦ ಕಿ.ಮೀ.

ಬೃಹಶ್ಚಿಲಾಮಠ, ಹೊನ್ನಾಳಿ

ಹೊನ್ನು ಬೆಳೆದ ಹೊನ್ನಾವಳ್ಳಿ ಅಥವಾ ಹೊನ್ನಾಳಿ ತಾಲ್ಲೂಕು ಕೇಂದ್ರ. ಮಲೆನಾಡು ಬಯಲುಸೀಮೆಯ ನಡುವಣ ಬೆಸುಗೆಯಾಗಿದೆ. ಕ್ರಿ.ಶ.೯೪೦ರ ಬೃಹಶ್ಚಿಲಾಮಠ ಇಲ್ಲಿದೆ. ಅನೇಕ ಪವಾಡಗಳನ್ನು ಮರೆದ ಶಂಕರ ಶಿವಾಚಾರ್ಯರ ನಂತರ ಶ್ರೀ. ಚನ್ನಮಲ್ಲಿಕಾರ್ಜುನರವರು ಶ್ರೀ ಮಠವನ್ನು ಕರಿಕಲ್ಲಿನಿಂದ ಕಟ್ಟಿಸಿದ್ದರಿಂದ ಬೃಹಶ್ಚಿಲಾಮಠವೆಂದು ಕರೆಯಲಾಗಿದೆ. ಶೈಕ್ಷಣಿಕವಾಗಿ ಶಾಲಾ ಕಾಲೇಜು ತೆರೆದು ಜ್ಞಾನ ದಾಸೋಹ, ಅನ್ನ ದಾಸೋಹವನ್ನು ಇದು ಒದಗಿಸುತ್ತಿದೆ. ಚೆನ್ನಪ್ಪ ಸ್ವಾಮಿ ರಥೋತ್ಸವ ಪ್ರತೀ ವರ್ಷ ಶ್ರಾವಣ ಮಾಸದಲ್ಲಿ ನಡೆಯುತ್ತದೆ. ಇಲ್ಲಿಯ ರಾಘವೇಂದ್ರ ಮಠವು ದ್ವಿತೀಯ ಮಂತ್ರಾಲಯವೆನಿಸಿದೆ. ೭೦೦ ಕಡೆಗಳಲ್ಲಿ ಇವೆ ಎನ್ನಲಾಗುವ ಬೃಂದಾವನಗಳಲ್ಲಿ ಇದು ಪ್ರಸಿದ್ಧಿ ಪಡೆದಿದೆ. ಐತಿಹಾಸಿಕ ಕೋಟೆ ಹಾಗೂ ನವಾಬರ ಮನೆತನಗಳು ಹೊನ್ನಾಳಿಯಲ್ಲಿ ಇವೆ. ರಾಷ್ಟ್ರಕವಿ ಜಿ.ಎಚ್.ಶಿವರುದ್ರಪ್ಪನವರು ಓದಿದ ಊರು ಇದು. ಇಲ್ಲಿ ಬಿದರಹಳ್ಳಿ ನರಸಿಂಹಮೂರ್ತಿ, ಡಾ||ಹೆಚ್.ತಿಪ್ಪೇರುದ್ರಸ್ವಾಮಿ, ಡಿ.ಶಿವರುದ್ರಪ್ಪ ಮುಂತಾದ ಪ್ರಸಿದ್ಧಿ ಪಡೆದ ವ್ಯಕ್ತಿಗಳಿದ್ದಾರೆ.

 

ರಾಂಪುರ

ದೂರ ಎಷ್ಟು ?
ತಾಲ್ಲೂಕು : ಹೊನ್ನಾಳಿ
ಜಿಲ್ಲೆಯಿಂದ : ೭೭ ಕಿ.ಮೀ.
ತಾಲ್ಲೂಕಿನಿಂದ : ೨೨ ಕಿ.ಮೀ.

ಇದು ಶ್ರೀ.ಹಾಲ್ವಾಮಿಗಳ ಪವಿತ್ರ ಕ್ಷೇತ್ರ. ಇವರು ಸ್ಥಾಪಿಸಿದ ಶ್ರೀ.ಸಂಗಮೇಶ್ವರಲಿಂಗವಿದ್ದು, ನದಿಯಲ್ಲಿ ಎμಇಔಂ ಪ್ರವಾಹ ಉಕ್ಕಿ ಬಂದರೂ ಇದು ಮರಳಿನಿಂದ ಮುಚ್ಚುವುದಿಲ್ಲ. ಇಲ್ಲಿ ಪ್ರತಿ ವರ್ಷ ಜಾತ್ರೆ, ಮುಳ್ಳು ಗದ್ದುಗೆ ಪವಾಡ ನಡೆಯುತ್ತಿದ್ದು ಧಾರ್ಮಿಕ ಕ್ಷೇತ್ರ ಎನಿಸಿದೆ.

 

ಕುಂದೂರು

ದೂರ ಎಷ್ಟು ?
ತಾಲ್ಲೂಕು : ಹೊನ್ನಾಳಿ
ಜಿಲ್ಲೆಯಿಂದ : ೭೧ ಕಿ.ಮೀ.
ತಾಲ್ಲೂಕಿನಿಂದ : ೧೭ ಕಿ.ಮೀ.

ಕುಂದೂರಿನ ಆಂಜನೇಯ ದೇವಾಲಯದ ಬಳಿ ಗತಕಾಲದ ಮಹಾಸತಿ ವೀರಗಲ್ಲು ಶಾಸನಗಳನ್ನು ಕಾಣಬಹುದು. ಪ್ರತೀ ವರ್ಷ ಆಂಜನೇಯ ರಥೋತ್ಸವ ನಡೆಯುತ್ತದೆ. ಸ್ವಾತಂತ್ರ್ಯ್ರ ಹೋರಾಟಗಾರರು ನೆಲೆಸಿದ್ದ ಊರು. ಕುಂದೂರು ಮತ್ತು ಹನುಮನಹಳ್ಳಿ ಮಧ್ಯ ಇರುವ ಗುಡ್ಡದಲ್ಲಿ ಪವನಯಂತ್ರ ನೋಡಬಹುದು.

 

ಕೂಲಂಬಿ

ದೂರ ಎಷ್ಟು ?
ತಾಲ್ಲೂಕು : ಹೊನ್ನಾಳಿ
ಜಿಲ್ಲೆಯಿಂದ : ೭೩ ಕಿ.ಮೀ.
ತಾಲ್ಲೂಕಿನಿಂದ : ೨೦ ಕಿ.ಮೀ.

ಈ ಗ್ರಾಮ ಶ್ರೀಮುರುಗೇಶ್ವರರು ತಂಗಿದ ಸ್ಥಳ. ಇಲ್ಲಿ ಅಂದಿನ ಕೂಲಂಬಿ ಜನ ಬಂದ  ನೆಲೆಸಿದೆ. ಇಲ್ಲಿ ಶ್ರಿ  ಮುರುಗೇಶ್ವರರ ಜೀವಂತ ಸಮಾಧಿ ಇದ್ದು ಗದ್ದುಗೇಶ್ವರ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ. ಪ್ರತೀ ಂμಂಜ ರಥೋತ್ಸವ ನಡೆಯುತ್ತದೆ.

 

ಪುಣ್ಯಸ್ಥಳ

ದೂರ ಎಷ್ಟು ?
ತಾಲ್ಲೂಕು : ಚನ್ನಗಿರಿ
ಜಿಲ್ಲೆಯಿಂದ : ೩೯ ಕಿ.ಮೀ.
ತಾಲ್ಲೂಕಿನಿಂದ : ೨೯ ಕಿ.ಮೀ.

ಪಂಚಧರ್ಮಗಳ ಪುಣ್ಯಸ್ಥಳ

ಬಸವಾಪಟ್ಟಣದ ಸಮೀಪದಲ್ಲಿ ಇರುವ ಮತ್ತೊಂದು ಪ್ರಮುಖ ಧಾರ್ಮಿಕ ಕ್ಷೇತ್ರ. ಪುಣ್ಯಸ್ಥಳ. ಇದರ ಹಳೆಯ ಹೆಸರು ’ಶೃಂಗಾರ ಬಾಗು’.

ಇಲ್ಲಿನ ರಾಘವೇಂದ್ರ ಮಠದಿಂದಾಗಿ ಇದಕ್ಕೆ ನಾಲ್ಕನೇ ಮಂತ್ರಾಲಯ ಎಂಬ ಹೆಸರಿದೆ.

೧೯೭೭ ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗಡೆಯವರ ನೇತೃತ್ವದಲ್ಲಿ ಮಹಾಯಾಗವೊಂದು ಇಲ್ಲಿ ನಡೆಯಿತು. ಆ ನೆನಪಿಗೆ ಅವರೇ ಈ ರಾಘವೇಂದ್ರ ಕ್ಷೇತ್ರಕ್ಕೆ ’ಪುಣ್ಯಸ್ಥಳ’ ಎಂದು ನಾಮಕರಣ ಮಾಡಿದರು. ಪಂಚಧರ್ಮಗಳ ಪವಿತ್ರ ಗ್ರಂಥಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ.

 

ಶಾಂತಿಸಾಗರ (ಸೂಳೆಕೆರೆ)

ದೂರ ಎಷ್ಟು ?
ತಾಲ್ಲೂಕು : ಚನ್ನಗಿರಿ
ಜಿಲ್ಲೆಯಿಂದ : ೩೦ ಕಿ.ಮೀ.
ತಾಲ್ಲೂಕಿನಿಂದ : ೨೦ ಕಿ.ಮೀ.

ಶಾಂತಿಸಾಗರ ಕೆರೆ

ಇದೊಂದು ಭಾರತದ ಸುಂದರ ಜಲಾಶಯವಾಗಿದೆ. ಏಷ್ಯಾ ಖಂಡದ ೨ನೇ ಅತೀ ದೊಡ್ಡ ಕೆರೆ ಎನಿಸಿದೆ. ಇದು ೬೪ ಕಿ.ಮೀ. ವಿಸ್ತಾರ ೪೦ ಮೈಲಿ ಸುತ್ತಳತೆ ಹೊಂದಿದೆ. ಸೂಳೆ ಶಾಂತವ್ವೆ ಕಟ್ಟಿಸಿದ್ದ ಈ ಕೆರೆಯಲ್ಲಿ ಮೊದಲು ಸ್ವರ್ಗಾವತಿ ಪಟ್ಟಣ ಎಂಬ ಊರಿತ್ತು. ಈ ಕೆರೆ ನಿರ್ಮಾಣವಾದ ನಂತರ ಅದು ಮುಳುಗಡೆಯಾಯಿತೆಂಬ ದಂತಕಥೆಯಿದೆ. ಸಮೀಪದಲ್ಲಿ ಪೂರ್ವಕ್ಕೆ ಹೊಯ್ಸಳ ಕೆಳದಿ ವಾಸ್ತುಶಿಲ್ಪದ ಶ್ರೀ.ಸಿದ್ದೇಶ್ವರ ದೇವಾಲಯವಿದೆ. ಕ್ರಿ.ಶ. ೧೫೪೬ರ ಶಾಸನವೊಂದು ಇಲ್ಲಿದೆ. ’ಶಾಂತಿಸಾಗರ’ ಎಂದು ಕರೆಯಲ್ಪಡುವ ಈ ಕೆರೆ ಸೂಳೆಕೆರೆ ಎಂದೇ ಖ್ಯಾತಿ.

ಸೂಳೆಕೆರೆ ಸೂಳೆ ಶಾಂತವ್ವೆಯು ತನ್ನ ದುಡಿಮೆಯಲ್ಲಿ ಕಟ್ಟಿಸಿದ ಸಾಮಾಜಿಕ ಜವಾಬ್ದಾರಿ ಪ್ರತೀಕ. ಈ ಕೆರೆ ಮೀನುಗಾರಿಕೆಗೆ ಸಹಕಾರಿ. ಸುತ್ತಮುತ್ತಲಿನ ಅನೇಕ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ.

 

ಚನ್ನಗಿರಿ

 

ದೂರ ಎಷ್ಟು ?
ತಾಲ್ಲೂಕು : ಚನ್ನಗಿರಿ
ಜಿಲ್ಲೆಯಿಂದ : ೪೦ ಕಿ.ಮೀ.
ತಾಲ್ಲೂಕಿನಿಂದ : ೦೦ ಕಿ.ಮೀ.

ದಾವಣಗೆರೆ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರ ’ಹುಲಿಕೆರೆ’ ಎಂಬ ಹಳೆ ಹೆಸರಿದ್ದು, ಕೆಳದಿ ಚೆನ್ನಮ್ಮಳು ಬೆಟ್ಟದ ಮೇಲೊಂದು ಕೋಟೆ ಕಟ್ಟಿಸಿ ಚನ್ನಗಿರಿ ಎಂದು ಕರೆದು ತನ್ನ ಸಹೋದರಿಗೆ ಜಹಗೀರಾಗಿ ನೀಡಿದಳು.

ಊರಿಗೆ ಕಿರೀಟದಂತಿರುವ ಇಲ್ಲಿನ ಕೋಟೆ ಎತ್ತರವಾಗಿದೆ. ಇಲ್ಲಿನ ೬೧ ಮೀ. ಎತ್ತರ, ೧೨೬.೫೦ ಮೀ ಸುತ್ತಳತೆ ಹೊಂದಿದೆ. ಇಲ್ಲಿಯೇ ರಂಗನಾಥ ಸ್ವಾಮಿ ದೇವಾಲಯವು ಇದೆ. ೦೫ ತಲೆ, ೦೮ ಕೈಗಳ ಆಂಜನೇಯ ಸ್ವಾಮಿ ಇಲ್ಲಿ ನೆಲೆಸಿದ್ದು ಭೂತಪ್ಪನ ಚಿಕ್ಕಗುಡಿ ಇದೆ. ಪಟ್ಟಣದ ದಕ್ಷಿಣ ಭಾಗದಲ್ಲಿ ಕಲ್ಲಿನಿಂದ ನಿರ್ಮಿಸಿದ ಕಲ್ಲುಮಠ ದೇವಾಲಯವಿದೆ.

ಐತಿಹಾಸಿಕ ದೋಂಢಿಯಾ ವಾಘ್ ದಂಗೆಯು ಇಲ್ಲಿ ನಡೆದಿದ್ದು ಸ್ಮರಣೀಯವಾಗಿದೆ.

 

ಮಾವಿನಹೊಳೆ

ದೂರ ಎಷ್ಟು ?
ತಾಲ್ಲೂಕು : ಚನ್ನಗಿರಿ
ಜಿಲ್ಲೆಯಿಂದ : ೫೦ ಕಿ.ಮೀ.
ತಾಲ್ಲೂಕಿನಿಂದ : ೦೫ ಕಿ.ಮೀ.

ಶ್ರೀ. ಮಹಾರುದ್ರಸ್ವಾಮಿ ಸುಕ್ಷೇತ್ರವಾದ ಮಾವಿನಹೊಳೆಗೆ ಮಾನಳ್ಳಿ ಎಂದು ಕರೆಯುತ್ತಾರೆ. ಪ್ರತೀ ಶಿವರಾತ್ರಿಗೆ ವಿಜೃಂಭಣೆ ಜಾತ್ರೆ ನಡೆಯುತ್ತದೆ. ಇಲ್ಲಿನ ಗದ್ದುಗೆಗೆ ಬಂದು ಹೂವೂ, ಪ್ರಸಾದ ಕೇಳಿ ಅಪ್ಪಣೆ ಕೊಟ್ಟರೆ ಕೆಲಸವಾಗುತ್ತದೆ. ಎಂಬ ನಂಬಿಕೆಯಿದೆ. ಇಲ್ಲಿ ವಿಶಾಲವಾದ ಕೆರೆ ಇದೆ.

 

ಹೊದಿಗೆರೆ

ದೂರ ಎಷ್ಟು ?
ತಾಲ್ಲೂಕು : ಚನ್ನಗಿರಿ
ಜಿಲ್ಲೆಯಿಂದ : ೪೦ ಕಿ.ಮೀ.
ತಾಲ್ಲೂಕಿನಿಂದ : ೧೨ ಕಿ.ಮೀ.

ಷಹಾಜಿ ಬೋನ್ಸ್ಲೆ ಸಮಾಧಿ

ಪಾಳೆಗಾರರ ವಂಶಸ್ಥ ಕೆಂಗಪ್ಪ ನಾಯಕ ಕ್ರಿ.ಶ.೧೫೬೫ ರಲ್ಲಿ ಇಲ್ಲಿ ಒಂದು ಕೋಟೆ ಕಟ್ಟಿಸಿದ್ದಾನೆ. ಚನ್ನಗಿರಿ ಪೂರ್ವದಲ್ಲಿ ೧೨ ಕಿ.ಮೀ. ದೂರದ ಈ ಊರಲ್ಲಿ ಛತ್ರಪತಿ ಶಿವಾಜಿಯ ತಂದೆ ಷಹಾಜಿ ಬೋಂಸ್ಲೇ ಭೇಟೆಯಾಡುವಾಗ ಕುದುರೆಯ ಮೇಲಿಂದ ಬಿದ್ದು ೨೩-೦೧-೧೬೬೪ ರಲ್ಲಿ ಮರಣ ಹೊಂದಿದನು. ಇದನ್ನು ’ಶ್ರೀ ಷಹಾಜಿ ರಾಜನ ಸಮಾಧಿ’ ಎಂದು ಕನ್ನಡದಲ್ಲಿ ಬರೆದ ಶಾಸನವಿದೆ. ಇಲ್ಲಿ ಷಹಾಜಿ ಕಟ್ಟಿಸಿದ ಅಂಬಾ ಭವಾನಿ ದೇವಾಲಯ ಅತ್ಯಂತ ಸುಂದರವಾಗಿದೆ.

ಕನ್ನಡ ಹಿರಿಯ ಕವಿ ಶ್ರೀ.ಎಚ್.ಎಸ್.ವೆಂಕಟೇಶ್ ಮೂರ್ತಿಯವರು ಹಾಗೂ ಶ್ರೀಈಶ್ವರ ಚಂದ್ರರ ಹುಟ್ಟೂರು ಹೊದಿಗೆರೆ.

 

ಅಮ್ಮನಗುಡ್ಡ

ದೂರ ಎಷ್ಟು ?
ತಾಲ್ಲೂಕು : ಚನ್ನಗಿರಿ
ಜಿಲ್ಲೆಯಿಂದ : ೫೦ ಕಿ.ಮೀ.
ತಾಲ್ಲೂಕಿನಿಂದ : ೧೮ ಕಿ.ಮೀ.

ಕುಕ್ಕುವಾಡೇಶ್ವರಿ ಕ್ಷೇತ್ರವೆಂದು ಹೆಸರಾದ ಈ ಭಾಗ ಸಂಪೂರ್ಣ ಅರಣ್ಯಮಯವಾಗಿದ್ದು, ಭಕ್ತಾದಿಗಳ ಇಷ್ಟಾರ್ಥ ನೆರವೇರಿಸುವ ತಾಯಿ ಕುಕ್ಕುವಾಡಮ್ಮನ ನೆಲೆವೀಡಾದ ಈ ಜಾಗ ಭದ್ರಾ ಅರಣ್ಯದ ಮಧ್ಯ ಭಾಗದಲ್ಲಿದೆ. ಪ್ರತೀ ಶುಕ್ರವಾರ, ಮಂಗಳವಾರ ವಿಶೇಷ ಪೂಜಾ ಕಾರ್ಯ ನಡೆಯುತ್ತದೆ. ಕಾಡಿನ ಸುಂದರ ದೃಶ್ಯಾವಳಿ ಅಪರೂಪದ ಪ್ರಾಣಿ ಪಕ್ಷಿಗಳ ತಾಣ ಇದಾಗಿದೆ. ಪ್ರೇಕ್ಷಣೀಯ ಸ್ಥಳವೂ ಆದ ಈ ಜಾಗ ನೋಡುಗರಿಗೆ ಹಬ್ಬ.

 

ದೇವರಹಳ್ಳಿ

ದೂರ ಎಷ್ಟು ?
ತಾಲ್ಲೂಕು : ಚನ್ನಗಿರಿ
ಜಿಲ್ಲೆಯಿಂದ : ೪೦ ಕಿ.ಮೀ.
ತಾಲ್ಲೂಕಿನಿಂದ : ೧೩ ಕಿ.ಮೀ.

ದೇವರು ನೆಲೆಸಿದ ಸ್ಥಳವೇ ದೇವರಹಳ್ಳಿ. ಪೌರಾಣಿಕ ನಂಬಿಕೆ ಯಂತೆ ಉಲ್ಕಾ ಮುಖನೆಂಬ ರಾಕ್ಷಸನು ಇಲ್ಲಿ ವಾಸವಾಗಿದ್ದು, ಭಕ್ತರಿಗೆ ಕಾಟ ಹೆಚ್ಚಾಗಿದ್ದರಿಂದ ದೇವರು ’ಹರಿಹರ’ ರೂಪದಲ್ಲಿ ಅವತರಿಸಿ ಈ ರಾಕ್ಷಸನ್ನು ಕೊಂದನಂತೆ. ಇಲ್ಲಿಯ ಬೆಟ್ಟಕ್ಕೆ ’ಉಡಮರಡಿ’ ಬೆಟ್ಟ ಎಂಬ ಹೆಸರು ಉಂಟು. ಸುಮಾರು ೧೫೦ ಅಡಿ ಎತ್ತರವಿರುವ ಬೆಟ್ಟದ ಮೇಲೆ ಶ್ರೀ ರಂಗನಾಥ ಸ್ವಾಮಿ ನೆಲೆಸಿದ್ದಾನೆ. ಈ ಮೂರ್ತಿಗೆ ಬಲ ಭಾಗದಲ್ಲಿ ಶಂಖ ಚಕ್ರಗಳಿರುವುದರಿಂದ ಶ್ರೀಹರಿ ಎಂದು ಎಡಭಾಗದಲ್ಲಿ ಜಟೆ ಗಂಗೆ ಬಾಣ ಇರುವುದರಿಂದ ಹರನೆಂದು ಹೇಳುತ್ತಾರೆ.

ಶ್ರೀ ರಂಗನಾಥಸ್ವಾಮಿ ಪವಾಡ ಪುರುಷನೆಂದು ಪ್ರತೀತಿ ಇದೆ. ವಿಜಯನಗರದ ಅರಸ ಹರಿಹರ ಮಹಾದೇವ ಬೇಟೆಗಾಗಿ ಬಂದಾಗ ಒಂದು ದೊಡ್ಡ ಉಡ ಕಾಣಿಸಿತಂತೆ. ಅದು ಒಂದೊಂದು ಕಡೆ ಒಂದೊಂದು ರೂಪ ತಾಳಿ ಈಗಿನ ದೇವರಹಳ್ಳಿ ಗುಡ್ಡದ ಮೇಲೆ ಹೋಗಿ ಹುತ್ತದಲ್ಲಿ ಸೇರಿತಂತೆ. ಸೈನಿಕರು ಹುತ್ತ ಅಗೆದಾಗ ಲಿಂಗ ರೂಪಿಯಾಗಿ ಕಾಣಿಸಿತಂತೆ ಅಂದಿನಿಂದ ಈ ದೇವರಿಗೆ ಉಡುಗಿರಿ ರಂಗನಾಥನೆಂದು ಈ ಕ್ಷೇತ್ರವು ಉಡುಗಿರಿ ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿದೆ. ಇಲ್ಲಿ ಸುತ್ತಮುತ್ತ ಉಡಗಳನ್ನು ಹಿಂಸಿಸದೇ ಪೂಜ್ಯ ಭಾವನೆಯಿಂದ ಕಾಣುತ್ತಾರೆ.


ಸಂತೆಬೆನ್ನೂರು

ದೂರ ಎಷ್ಟು ?
ತಾಲ್ಲೂಕು : ಚನ್ನಗಿರಿ
ಜಿಲ್ಲೆಯಿಂದ : ೩೬ ಕಿ.ಮೀ.
ತಾಲ್ಲೂಕಿನಿಂದ : ೨೦ ಕಿ.ಮೀ.

ಸಂತೇಬೆನ್ನೂರು ಪುಷ್ಕರಣಿ

ತಾಲ್ಲೂಕಿನ ಅತೀ ದೊಡ್ಡ ಹೋಬಳಿ ಕೇಂದ್ರ ರಂಗಾಪುರ ಎಂಬ ಹಳೆಯ ಹೆಸರು ಇತ್ತು. ತಾಲ್ಲೂಕಿಗೆ ದೊಡ್ಡ ಸಂತೆ ನಡೆಯುತ್ತಿರುವುದರಿಂದ ಸಂತೇಬೆನ್ನೂರಾಗಿದೆ. ವಿಜಯ ನಗರದ ಅರಸರ ಅಧೀನ ಪಾಳೆಯಗಾರರು ಕಟ್ಟಿದ ಸುಂದರ ಪುಷ್ಕರಣಿ ಇಲ್ಲಿದೆ. ೨೩೫ ಅಡಿ ಉದ್ದ, ೨೪೫ ಅಡಿ ಅಗಲ, ೩೦ ಅಡಿ ಆಳ ಹೊಂದಿದ್ದು, ಸ್ಥಳೀಯರು ಇದನ್ನು ಹೊಂಡ ಎನ್ನುವರು.

ಪಾಳೆಗಾರರ ಕೆಂಗ ಹನುಮಪ್ಪ ನಾಯಕ ಅರಮನೆಯನ್ನು, ಶ್ರೀರಾಮಚಂದ್ರ ದೇವಾಲಯವನ್ನು ರೂಪಿಸಿ ಅದರ ಎದುರು ಈ ಐತಿಹಾಸಿಕ ಪುಷ್ಕರಣಿ ಕಟ್ಟಿಸಿದ ದಿಕ್ಕಿಗೆ ಒಂದರಂತೆ ಎಂಟು ಮಂಟಪ, ನೀರಿನ ಮದ್ಯೆ ನಿರ್ಮಿಸಿದ ವಸಂತಮಂಟಪ ಸೊಗಸಾಗಿದೆ. ಇದರ ಎದುರು ಬಿಜಾಪುರ ಆದಿಲ್ ಷಹಾನ ಸೇನಾಧಿಕಾರಿ ರಣದುಲ್ಲಾಖಾನ್ ಕಟ್ಟಿಸಿದ ಮುಸಾಫಿರ್ ಖಾನೆ ಮನಮೋಹಕವಾಗಿದೆ.

 

ಮೆದಿಕೆರೆ

ದೂರ ಎಷ್ಟು ?
ತಾಲ್ಲೂಕು : ಚನ್ನಗಿರಿ
ಜಿಲ್ಲೆಯಿಂದ : ೩೦ ಕಿ.ಮೀ.
ತಾಲ್ಲೂಕಿನಿಂದ : ೨೫ ಕಿ.ಮೀ.

ಚನ್ನಗಿರಿ ತಾಲ್ಲೂಕಿನ ಬಾಡ ಸಂತೆಬೆನ್ನೂರು ಮಾರ್ಗದಲ್ಲಿನ ಈ ಊರಲ್ಲಿ ಚಾಲುಕ್ಯರ ಕಾಲದ ದೇವಾಲಯವಿದೆ. ಸೂರ್ಯ ನಾರಾಯಣ, ಕೇಶವ, ಸಪ್ತ ಮಾತೃಕೆಯರ ಕಲಾತ್ಮಕ ವಿಗ್ರಹಗಳಿವೆ. ಮಾಸ್ತಿ ಕಲ್ಲು, ವೀರಗಲ್ಲುಗಳನ್ನು ಈ ದೇವಾಲಯಕ್ಕೆ ಹೊಂದಿಸಿ ಇಡಲಾಗಿದೆ. ಬನಶಂಕರಿ ಹಾಗೂ ಮಧುಕೇಶ್ವರ ದೇವಾಲಯಗಳಿವೆ. ಈ ಊರಿಗೆ ಮೆದಕೆರೆ, ಮುದುಕಕೆರೆ ಎಂಬ ಹೆಸರಿದ್ದವು. ಇಲ್ಲಿರುವ ಕೆರೆಯನ್ನು ಸಂತೆಬೆನ್ನೂರಿನ ಕೆಂಗ ಹನುಮಪ್ಪ ನಾಯಕ ಕಟ್ಟಿಸಿದ್ದಾನೆ.

 

ಮೊರಡಿ

ದೂರ ಎಷ್ಟು ?
ತಾಲ್ಲೂಕು : ಚನ್ನಗಿರಿ
ಜಿಲ್ಲೆಯಿಂದ : ೨೫ ಕಿ.ಮೀ.
ತಾಲ್ಲೂಕಿನಿಂದ : ೨೮ ಕಿ.ಮೀ.

ದಾವಣಗೆರೆ, ಚನ್ನಗಿರಿ ತಾಲ್ಲೂಕಿನ ಗಡಿಗ್ರಾಮ ಇದನ್ನು ’ಮರಡಿ’ ಎಂತಲೂ ಕರೆಯುತ್ತಾರೆ. ಇಲ್ಲಿ ಆಕರ್ಷಕವಾದ ಮಲ್ಲೇಶ್ವರ ದೇವಾಲಯವಿದೆ. ಪಾಳೆಯ ಗಾರರ ಕಾಲದಲ್ಲಿ ಈ ಗ್ರಾಮ ಅಗ್ರಹಾರವಾಗಿತ್ತೆಂದು ಕ್ರಿ.ಶ.೧೭೧೫ ರಲ್ಲಿ ಶಾಸನವೊಂದು ತಿಳಿಸುತ್ತದೆ.

ಪುಸ್ತಕದಲ್ಲಿ ಏನು ಬರೆದಿದೆಯೋ ಅದನ್ನು ನೋಡಲು ನನಗೆ ಸಮಯವಿಲ್ಲ. ನಾನು ಸ್ವಂತ ಅನುಭವದಿಂದಲೇ ಎಲ್ಲವನ್ನೂ ತಿಳಿಬೇಕಾಗಿದೆ – ಇಬ್ಸನ್

 

 

ಬಸವಾಪಟ್ಟಣ

ದೂರ ಎಷ್ಟು ?
ತಾಲ್ಲೂಕು : ಚನ್ನಗಿರಿ
ಜಿಲ್ಲೆಯಿಂದ : ೪೦ ಕಿ.ಮೀ.
ತಾಲ್ಲೂಕಿನಿಂದ : ೩೦ ಕಿ.ಮೀ.

ಇದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಇಲ್ಲಿನ ಮಠ ಮಾನ್ಯಗಳು ಜನ ಸೇವೆಯಿಂದ ಖ್ಯಾತಿ ಹೊಂದಿದೆ. ಇಲ್ಲಿನ ವಿಇಂμಂ ಶ್ರೀ.ಹಾಲಸ್ವಾಮಿಗಳ ಪ್ರಾಚೀನ ದೇವಾಲಯ. ಪ್ರತಿ ವರ್ಷ ಜಾತ್ರೆಯ ಆಕರ್ಷಕ ಎಂದರೆ ಮುಳ್ಳುಗದ್ದುಗೆ ಪವಾಡ.

ಶ್ರೀ.ಹಾಲಶಂಕರ ಸ್ವಾಮಿಗಳ ಗುಹೆ, ಗವಿಮಠ, ಮಹಂತಿನ ಮಠ, ಪಂಚವಟಿಗೆ ಮಠಗಳಿದ್ದು, ಇದರ ಬಳಿ ಹಳೆಯ ಕಾಳಿಕಾದೇವಿಯ ಗುಡಿಯೂ ಇದೆ. ಸಮೀಪದಲ್ಲಿಯೇ ಬಾಬಾ ಬುಡೇನ್ ಸಂತರ ಸಮಾಧಿ ಸ್ಥಳವಿದ್ದು ಪ್ರತಿ ವರ್ಷ ಉರುಸು ನಡೆಯುತ್ತಿದೆ. ಗವಿಮಠ, ಬಸವಾಪಟ್ಟಣ ಭಕ್ತರ ಪವಿತ್ರ ತಾಣ. ಬಾವಾಜಿ ಮಠ, ರಾಮದಾಸ್ ಸಮಾಧಿಯೂ ಇಲ್ಲಿದೆ.

 

ಮುಸ್ಟೂರು

ದೂರ ಎಷ್ಟು ?
ತಾಲ್ಲೂಕು : ಜಗಳೂರು
ಜಿಲ್ಲೆಯಿಂದ : ೬೫ ಕಿ.ಮೀ.
ತಾಲ್ಲೂಕಿನಿಂದ : ೧೫ ಕಿ.ಮೀ.

ಇಲ್ಲಿ ಕಲ್ಲೇಶ್ವರ ದೇವಸ್ಥಾನವಿದ್ದು ಕ್ರಿ.ಶ.೯೨೦ ರಲ್ಲಿ ನೊಳಂಬ ವಾಡಿ ರಾಜ ಅಯ್ಯಪ್ಪ ದೇವರು ಆಳುತ್ತಿದ್ದನೆಂದು ಕಲ್ಲೇಶ್ವರ ಶಾಸನದಿಂದ ತಿಳಿದು ಬರುತ್ತದೆ. ಇಲ್ಲಿ ಪುರಾತನವಾದ ಹುಚ್ಚಲಿಂಗೇಶ್ವರ ಸ್ವಾಮಿಯ ಮಠವಿದೆ ಇವರು ಪವಾಡ ಪುರುಷರಾಗಿದ್ದರು.


ಕೊಡದಗುಡ್ಡ

ದೂರ ಎಷ್ಟು ?
ತಾಲ್ಲೂಕು : ಜಗಳೂರು
ಜಿಲ್ಲೆಯಿಂದ : ೪೨ ಕಿ.ಮೀ.
ತಾಲ್ಲೂಕಿನಿಂದ : ೧೯ ಕಿ.ಮೀ.

ಕೊಡದಗುಡ್ಡ ವೀರಭದ್ರಸ್ವಾಮಿ ದೇವಾಲಯ

ಇದು ವೀರಭದ್ರ ಸ್ವಾಮಿಯ ಪ್ರಸಿದ್ಧವಾದ ಕ್ಷೇತ್ರ. ಎತ್ತರವಾದ ಬೆಟ್ಟ ಸುಂದರವಾದ ದೇವಾಲಯವಿದೆ. ವೀರಭದ್ರ ಸ್ವಾಮಿ ದೇವಾಲಯವು ಹೊಯ್ಸಳ, ಚಾಲುಕ್ಯ ಶೈಲಿಯ ಕೆತ್ತನೆಯಿಂದ ಭವ್ಯವಾಗಿದೆ. ನವರಂಗದಲ್ಲಿ ಸುಂದರವಾದ ಕಂಬಗಳಿವೆ. ಸಿಂಹಲಾಂಛನ ದ್ವಾರಪಾಲಕರುಳ್ಳ ಗರ್ಭಗುಡಿ ಬಾಗಿಲನ್ನು ಚಿತ್ತಾರದ ಹಿತ್ತಾಳೆಯ ತಗಡಿನಿಂದ ಅಲಂಕರಿಸಿದ್ದಾರೆ ಇತ್ತೀಚೆಗೆ ಭಕ್ತರು ದೇವಾಲಯವನ್ನು ನವೀಕರಣಗೊಳಿಸಿದ್ದಾರೆ. ಪ್ರತಿ ವರ್ಷ ಹೋಳಿ ಹುಣ್ಣಿಮೆಯ ದಿನ ಜಾತ್ರೆ ನಡೆಯುತ್ತದೆ ವಿವಿದೆಡೆಯಿಂದ ಸಹಸ್ರಾರು ಭಕ್ತರು ಪಾಲ್ಗೊಳ್ಳುತ್ತಾರೆ.


ಕಣಕುಪ್ಪೆ

ದೂರ ಎಷ್ಟು ?

ತಾಲ್ಲೂಕು : ಜಗಳೂರು
ಜಿಲ್ಲೆಯಿಂದ : ೫೬ ಕಿ.ಮೀ.
ತಾಲ್ಲೂಕಿನಿಂದ : ೦೬ ಕಿ.ಮೀ.

ಗವಿಮಠ, ಕಣುಕುಪ್ಪೆ

ಐತಿಹಾಸಿಕ ಮಹತ್ವ ಸ್ಥಳ. ಚಿತ್ರದುರ್ಗದ ಪಾಳೆಗಾರರ ಆಳ್ವಿಕೆಗೆ ಒಳಪಟ್ಟಿದ್ದು, ಚಿತ್ರದುರ್ಗದ ಕೋಟೆಯ ಮಾದರಿಯಂತೆ ಬಲಿಷ್ಠವಾದ ಕೋಟೆಯನ್ನು ಕಾಣಬಹುದು. ೧೮೮೨ರ ವರೆಗೆ ಇದು ತಾಲ್ಲೂಕು ಕೇಂದ್ರ ವಾಗಿದ್ದು, ನಂತರ ಜಗಳೂರು ಕೇಂದ್ರವಾಯಿತು. ಇಲ್ಲಿ ಕೋಟೆ ಕೊತ್ತಳಗಳು ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ. ಕಣ್ವ ಮಹರ್ಷಿಗಳು ತಪಸ್ಸು ಮಾಡಿದ ಸ್ಥಳವೆಂದು ಪ್ರತೀತಿ ಇದೆ. ಇಲ್ಲೊಂದು ಗುಹೆಯು ಇದೆ ಇದನ್ನು ಗವಿಮಠ ಎಂದು ಕರೆಯುತ್ತಾರೆ. ಪ್ರವಾಸಿಗರಿಗೆ ತಂಗುವ ವ್ಯವಸ್ಥೆಯು ಇದೆ.

 

ಬಿಳಿಚೋಡು

ದೂರ ಎಷ್ಟು ?
ತಾಲ್ಲೂಕು : ಜಗಳೂರು
ಜಿಲ್ಲೆಯಿಂದ : ೩೦ ಕಿ.ಮೀ.
ತಾಲ್ಲೂಕಿನಿಂದ : ೨೦ ಕಿ.ಮೀ.

ಇದೊಂದು ಐತಿಹಾಸಿಕ ಸ್ಥಳವಾಗಿದ್ದು ಅಶೋಕ ಚಕ್ರವರ್ತಿ ಕೆಲವು ಕಾಲ ಬೀಡು ಬಿಟ್ಟಿದ್ದನೆಂದು ಪ್ರತೀತಿ. ಅನೇಕ ಶಾಸನಗಳು, ವೀರಗಲ್ಲುಗಳು, ಬುರುಜು, ಬತೇರಿಗಳು ಹಾಗೂ ಗ್ರಾಮದಲ್ಲಿರುವ ಜೈನ ಮಂದಿರ, ಕಲ್ಲೇಶ್ವರ ದೇವಾಲಯ ಮತ್ತು ಬೀರಲಿಂಗೇಶ್ವರ ದೇವಾಲಯ ವೀಕ್ಷಿಸಬಹುದು.


ಕಲ್ಲೇದೇವರ ಪುರ

ದೂರ ಎಷ್ಟು ?
ತಾಲ್ಲೂಕು : ಜಗಳೂರು
ಜಿಲ್ಲೆಯಿಂದ : ೬೫ ಕಿ.ಮೀ.
ತಾಲ್ಲೂಕಿನಿಂದ : ೧೫ ಕಿ.ಮೀ.

ಜಿಲ್ಲೆಯ ಮಹತ್ವದ ಪುಣ್ಯ ಕ್ಷೇತ್ರ ಇಲ್ಲಿಯ ಕಲ್ಲೇಶ್ವರ ದೇವಾಲಯ ಪ್ರಸಿದ್ಧವಾದುದು, ಕಲ್ಲೇಶ್ವರ ಸ್ವಾಮಿ ಸ್ವಯಂಭು ಕಲ್ಲಿನಾಥನೆಂದು ಉದ್ಭವನಾಗಿದ್ದಾನೆ. ದೇವಾಲಯದ ಸುತ್ತಲೂ ಕಲಾಕೃತಿಗಳಿವೆ. ಚೋಳರ ಕಾಲದ ಲಿಪಿಯ ಶಾಸನಗಳು ಇಲ್ಲಿವೆ. ಮಾರ್ಚಿ ತಿಂಗಳಲ್ಲಿ ವಿಜೃಂಬಣೆಯಿಂದ ಜಾತ್ರೆ ನಡೆಯುತ್ತದೆ ಇದೇ ಸಂಧರ್ಭದಲ್ಲಿ ದನಗಳ ಜಾತ್ರೆ ಸಹ ನಡೆಯುತ್ತದೆ.

 

ಕೊಣಚಗಲ್ ರಂಗನಾಥ ಸ್ವಾಮಿ ಬೆಟ್ಟ.

ದೂರ ಎಷ್ಟು ?
ತಾಲ್ಲೂಕು : ಜಗಳೂರು
ಜಿಲ್ಲೆಯಿಂದ : ೬೩ ಕಿ.ಮೀ.
ತಾಲ್ಲೂಕಿನಿಂದ : ೧೩ ಕಿ.ಮೀ.

ದಳವಯಿ ಮುದ್ದಣ್ಣನ ಹೊಂಡ

ಬೆಟ್ದದ ತಪ್ಪಲಿನಲ್ಲಿ ಮಂಟಪಗಳು, ಹೊಂಡಗಳು ಇವೆ. ಮುಖ ಮಂಟಪ ಗರ್ಭಗುಡಿ ಅಲ್ಲದೇ ದ್ವಾರದ ಮೇಲೆ ದ್ವಾರಪಾಲಕರ ವಿಗ್ರಹ ಇದೆ.

ದಳವಾಯಿ ಮುದ್ದಣ್ಣನ ಹೊಂಡ, ೧೨ ಕೋನಗಳ ಬೃಹತ್ ಹೊಂಡ ಕಲ್ಲಿನ ಹಾಸು ಬಂಡೆಗಳಿಂದ ಕಟ್ಟಲಾಗಿದೆ. ತಳ ಮಟ್ಟದಿಂದ ೩೨ ಮೆಟ್ಟಿಲುಗಳೆವೆ ಅಲ್ಲಲ್ಲಿ ಚಿತ್ರಗಳ ಕೆತ್ತನೆಯಿದೆ ಇದನ್ನು ದಳವಾಯಿ ಮುದ್ದಣ್ಣ ಕಟ್ಟಿದನೆಂದು ಆ ಹೊಂಡಕ್ಕೆ  ಅವನ ಹೆಸರನ್ನು ಇಡಲಾಗಿದೆ. ಕನ್ನಡ ಭಾಷೆಯ ಹಿರಿಮೆಯನ್ನು ಸಾರಿದ ಮಹಾಲಿಂಗ ರಂಗ ಇಲ್ಲಿಯೆ ಕೃತಿ ರಚಿಸಿದ್ದರೆಂಬ ಐತಿಹ್ಯವಿದೆ.

 

ರಂಗಯ್ಯನ ದುರ್ಗ ಅರಣ್ಯ ಪ್ರದೇಶ

ದೂರ ಎಷ್ಟು ?
ತಾಲ್ಲೂಕು : ಜಗಳೂರು
ಜಿಲ್ಲೆಯಿಂದ : ೪೦ ಕಿ.ಮೀ.
ತಾಲ್ಲೂಕಿನಿಂದ : ೩೦ ಕಿ.ಮೀ.

 

ರಂಗಯ್ಯನದುರ್ಗದ ಅರಣ್ಯಪ್ರದೇಶ

ಈ ಅರಣ್ಯ ಪ್ರದೇಶದಲ್ಲಿ ಜಾಲಿ, ಬಿಕ್ಕೆ, ಹೊಂಗೆ ಮುಂತಾದ ಕುರುಚಲು ಗಿಡಗಳಿವೆ. ನವಿಲು, ಮೊಲ, ಕಾಡು ಹಂದಿ, ಕರಡಿ ಜಿಂಕೆಗಳಿವೆ ಏಷ್ಯಾದಲ್ಲಿಯೇ ಅಪರೂಪವೆನಿಸಿದ ’ಕೊಂಡು ಕುರಿಗಳು’ ಇಲ್ಲಿ ವಾಸಿಸುತ್ತಿವೆ. ಈ ಸಂತತಿಯ ಅಭಿವೃದ್ಧಿಗಾಗಿ ಕೊಂಡು ಕುರಿಧಾಮ ಮಾಡಬೇಕೆಂಬ ಯೋಜನೆ ಇದೆ.

 

ಗುಹೇಶ್ವರ ಬೆಟ್ಟ

ದೂರ ಎಷ್ಟು ?
ತಾಲ್ಲೂಕು : ಜಗಳೂರು
ಜಿಲ್ಲೆಯಿಂದ : ೫೮ ಕಿ.ಮೀ.
ತಾಲ್ಲೂಕಿನಿಂದ : ೦೮ ಕಿ.ಮೀ.

ತೋರಣಘಟ್ಟ ಗ್ರಾಮಕ್ಕೆ ಸಮೀಪದ ಈ ಬೆಟ್ಟಕ್ಕೆ ಗುಹೇಶ್ವರ ಬೆಟ್ಟವೆಂದು ಕರೆಯುತ್ತಾರೆ. ಈ ಬೆಟ್ಟದ ಸಾಲಿನಲ್ಲಿ ಪವನ ವಿದ್ಯುತ್ ಉತ್ಪಾದಿಸುತ್ತಾರೆ.