ದಾಸಸಾಹಿತ್ಯದಲ್ಲಿ ಕಂಡುಬರುವ ನಾಮ ಆಕೃತಿಮಾಗಳನ್ನು ಈ ಕೆಳಗಿನಂತೆ ಸೂಚಿಸಬಹುದು.

ನಾಮರೂಪ
ವಸ್ತುವಾಚಕ ಗುಣವಾಚಕ ಸಂಖ್ಯಾವಾಚಕ ಪರಿಮಾಣ ವಾಚಕ ಸರ್ವನಾಮ ಕೃದಂತ ತದ್ವಿತ ಸಮಾಸ

. ವಸ್ತುವಾಚಕ : ವಸ್ತುಗಳ ಹೆಸರುಗಳನ್ನು ಹೇಳುವ ಶಬ್ದಗಳೆಲ್ಲ ವಸ್ತುವಾಚಕ ನಾಮಪದಗಳು. ಇದರಲ್ಲಿ ಅ. ರೂಢನಾಮ ಆ. ಅಂಕಿತನಾಮ ಇ. ಅನ್ವರ್ಥಕ ನಾಮಪದಗಳೆಂದು ಮೂರು ಪ್ರಕಾರಗಳಿವೆ.

ರೂಢನಾಮ : ಬಹುಕಾಲದ ರೂಢಿಯಿಂದ ಬಂದ ಒಂದೇ ಜಾತಿಯ ಅಥವಾ ವರ್ಗದ ವಸ್ತು ಮತ್ತು ಪ್ರಾಣಿಗಳ ಹೆಸರುಗಳಿಗೆ ‘ರೂಢನಾಮ’ ಗಳೆನ್ನುವರು. ಉದಾ.ಪಶು, ಪಕ್ಷಿ, ಬಾವಿ, ತಲೆ, ಎಮ್ಮೆ, ನಕ್ಷತ್ರ ಮುಂತಾದವು

ಅಂಕಿತನಾಮ : ಒಂದೇ ಜಾತಿಯ ವರ್ಗದ ಹಲವು ವಸ್ತು, ಪ್ರಾಣಿ ಅಥವಾ ವ್ಯಕ್ತಿಗಳಲ್ಲಿ ಒಂದನ್ನೇ ಬೇರೆ ಮಾಡಿತೋರಿಸಲು ಇಟ್ಟ ಹೆಸರುಗಳಿಗೆ ‘ಅಂಕಿತನಾಮ’ ಗಳೆನ್ನುವರು. ಉದಾ. ವಾದಿರಾಜ, ಪುರಂದರದಾಸ, ಗೋಪಾಲದಾಸ ಮುಂತಾದವು.

ಅನ್ವರ್ಥಕನಾಮ : ಅರ್ಥಕ್ಕೆ ಅನುಗುಣವಾಗಿ ಉದ್ಯೂಗ, ಗುಣ ಮೊದಲಾದವುಗಳಿಂದ ವಸ್ತುವಿಗೆ ಇಲ್ಲವೆ ವ್ಯಕ್ತಿಗಳಿಗೆ ಬಂದ ಹೆಸರುಗಳು ‘ಅನ್ವರ್ಥಕನಾಮ’ ಗಳೆನಿಸುವುವು. ಉದಾ. ಕುರುಡು, ಹೆಳವ, ಗಾಣಿಗ, ಕುಂಟ, ರೋಗಿ ಮುಂತಾದವು.

) ಗುಣವಾಚಕ : ವಸ್ತು, ಪ್ರಾಣಿ, ವ್ಯಕ್ತಿಗಳ ಗುಣ ಸ್ವಭಾವ, ರೀತಿಗಳನ್ನು ವರ್ಣಿಸುವ ಅಥವಾ ವಿಶ್ಲೇಷಿಸುವ ಶಬ್ದಗಳನ್ನು ಗುಣವಾಚಕಗಳೆಂದು ಕರೆಯುವರು. ಇವು ವಸ್ತು ಅಥವಾ ಪ್ರಾಣಿಗಳ ಒಂದಿಲ್ಲೊಂದು ಗುಣ ಸ್ವಭಾವ ರೀತಿಗಳನ್ನು ತಿಳಿಸುತ್ತವೆ. ಉದಾ. ದೊಡ್ಡ, ಚಿಕ್ಕ, ಹಿರಿಯ, ಕಿರಿಯ, ಸುಂದರ, ಮೂಢ, ಮರುಳ, ಕೆಂಚ ಮುಂತಾದವು.

) ಸಂಖ್ಯಾವಾಚಕ : ಸಂಖ್ಯೆಗಳನ್ನು ಸೂಚಿಸುವ ಶಬ್ದಗಳನ್ನು ಸಂಖ್ಯಾವಾಚಕಗಳೆಂದು ಕರೆಯುವರು. ಉದಾ. ಒಂದು, ಎರಡು, ಮೂರು, ನಾಲ್ಕು, ನೂರು ಮುಂತಾದವು.

ಆರು ಹಿತವರು ನಿನಗೆ ಈ ಮೂವರೊಳಗೆ
ನಾರಿಯೊ ಧಾರುಣಿಯೊ ಬಲುಧನದ ಸಿರಿಯೊ

) ಪರಿಮಾಣಕ ವಾಚಕ : ವಸ್ತುಗಳ, ಪ್ರಾಣಿಗಳ ಅಳತೆ, ಗಾತ್ರ, ಪರಿಮಾಣಗಳನ್ನು ವರ್ಣಿಸುವ ಶಬ್ದಗಳು ಪರಿಮಾಣ ವಾಚಕಗಳಾಗಿವೆ. ಉದಾ. ಅಷ್ಟು, ಇಷ್ಟು, ಹಲವು, ಕೆಲವು, ಅಲ್ಪ, ಸಕಲ, ಎಲ್ಲ, ಅನಿತು, ಇನಿತು ಮುಂತಾದವು.

) ಸರ್ವನಾಮ : ನಾಮಪದಗಳ ಸ್ಥಳದಲ್ಲಿದ್ದು ಅದೇ ಅರ್ಥವನ್ನು ಸೂಚಿಸುವ ಅಥವಾ ಅದೇ ಅರ್ಥದಲ್ಲಿ ಉಪಯೋಗಿಸುವ ಶಬ್ದಗಳಿಗೆ ಸರ್ವನಾಮಗಳೆನ್ನುವರು. (ನಾಮಪದಗಳಿಗೆ ಪ್ರತಿಯಾಗಿ ಬರುವ ರೂಪಗಳು ). ಇದರಲ್ಲಿ ನಾಲ್ಕು ವಿಧಗಳಿವೆ.

ಪುರುಷಾರ್ಥಕ ಸರ್ವನಾಮ        ಏಕವಚನ                             ಬಹುವಚನ

ಅ. ಉತ್ತಮ ಪುರುಷ :                   ನಾನಾ-ನಾ-ಆನು                             ನಾವ್~ನಾವು
ಆ. ಮಧ್ಯಮ ಪುರುಷ:                   ನೀ- ನೀನು                                    ನೀವ್~ನೀವು

ಇ. ಪ್ರಥಮ ಪುರುಷ:                     ಪು-ಅವ~ಅವನು~ ಆತ                    ಅವರು
ಸ್ತ್ರೀ- ಅವಳು~ ಆಕೆ                         ಅವು

ಆತ್ಮರ್ಥಕ ಸರ್ವನಾಮ            ಏ. ವ ತಾ-~ ತಾನು
ಬ. ವ ತಾವ್~ತಾವು

ಪ್ರಶ್ನಾರ್ಥಕ ಸರ್ವನಾಮ          ಪು-ಅವ, ಆವನು, ಯಾವನ               ಆರು
ಸ್ತ್ರೀ- ಆವಳು, ಯಾವಳು

ದರ್ಶಕ ಸರ್ವನಾಮ
ಅ. ಸಮೀಪದರ್ಶಕ : ಇದು, ಇವು
ಆ. ದೂರದರ್ಶಕ : ಅದು, ಅವು

. ಕೃದಂತ : ಧಾತುಗಳಿಗೆ ಕೃತ್ ಪ್ರತ್ಯಯಗಳು ಸೇರಿದರೆ’ಕೃದಂತ ಪದ’ ಗಳಾಗುತ್ತವೆ. ಕೃದಂತ ಪದಗಳು ಕ್ರಿಯಾಪದಗಳಂತೆ ಕ್ರಿಯೆಯನ್ನು ಪೂರ್ಣಗೊಳಿಸುವುದಿಲ್ಲ. ಅವು ಅಪೂರ್ಣ ಕ್ರಿಯೆಯನ್ನು ತಿಳಿಸುತ್ತವೆ ಉದಾ. ಕೇಳಿದ, ಹಾಡಿದ, ನೋಡುವ, ನಡೆಯುವ, ಕೆತ್ತುಗ, ಅಳಿವು, ಗೆಲ್ಲತನ ಮುಂತಾದವು.

. ತದ್ಧಿತ : ನಾಮ ಪ್ರಕೃತಿಗಳಿಗೆ ತದ್ಧಿತ ಪ್ರತ್ಯಯಗಳು ಸೇರಿದರೆ’ ತದ್ಧಿಪದ’ಗಳು ಸೃಷ್ಟಿಯಾಗುತ್ತದೆ. ಉದಾ. ಸಿರಿವಂತ, ಸಾಲಗಾರ, ಗೌಡಿಕೆ, ಮೋಸಗಾರ, ಚಿನ್ನಿಗ, ದೊಡ್ಡತನ ಮುಂತಾದವು.

). ಸಮಾಸ : ಎರಡು ಅಥವಾ ಹೆಚ್ಚು ಪದಗಳು ಕೂಡಿಕೊಂಡು ಒಂದು ಅರ್ಥವನ್ನು ತಿಳಿಸುವ ಪದವು ‘ಸಮಾಸ’ ವಿನಿಸುವುದು. ಉದಾ. ಮಳೆಗಾಲ, ಇಬ್ಬಾಗ, ಪಾದಸಂಕಲೆ, ದಳಮುಖಧವಳ, ಭೂತಬಲಿ, ಸಿಖಂಬಡೆ, ಅರಕೆಗೊಳ್ಳು, ಮೊಗರಾಗ ಮುಂತಾದವು.

ವಿಭಕ್ತಿ ವ್ಯವಸ್ಥೆ : ನಾಮಪದಗಳಿಗೆ ಸೇರಿದ ಪ್ರತ್ಯಯಗಳಿಗೆ ‘ನಾಮವಿಭಕ್ತಿ ಪ್ರತ್ಯಯ’ ಗಳೆನ್ನುವರು. ಈ ಪ್ರತ್ಯಯಗಳಿಗೆ ಸ್ವತಂತ್ರ ಅರ್ಥ ಇರುವುದಿಲ್ಲ. ಆದರೆ ಇವು ವಾಕ್ಯದಲ್ಲಿಯ ನಾಮಪದ, ಕ್ರಿಯಾಪದ ಮತ್ತು ಇತರ ಎಲ್ಲ ಪದಗಳಿಗೂ ಇರುವ ಸಂಬಂಧಾರ್ಥವನ್ನು ತಿಳಿಸುತ್ತವೆ. ದಾಸ ಸಹಿತ್ಯದಲ್ಲಿ ನಾಮ ಪ್ರಕೃತಿಗಳಿಗೆ ಹತ್ತುತ್ತಿದ್ದ ವಿಭಕ್ತಿ ಪ್ರತ್ಯಯಗಳು ಈ ಕೆಳಗಿನಂತಿವೆ.

ಪ್ರಥಮೆ                –        ಉ / ನಾಮಪ್ರಕೃತಿ
ದ್ವಿತೀಯೆ            –        ಅನು, ಅನ್ನು
ತೃತೀಯೆ             –        ಇಂದ
ಚತುರ್ಥಿ              –        ಗೆ- ಇಗೆ -ಕ್ಕೆ
ಪಂಚಮಿ              –        ಇಂದ
ಷಷ್ಠೀ                 –        ಅಲ್ಲಿ
ಸಪ್ತಮಿ               –        ಅಲ್ಲಿ

ಪ್ರಥಮೆ : ಪ್ರಥಮಾ ವಿಭಕ್ತಿ ಪ್ರತ್ಯಯವಾಗಿ ‘ಉ’ ಬರುವುದು. ಸಾಮಾನ್ಯವಾಗಿದ್ದರೂ ನಾಮ ಪ್ರಕೃತಿಯೇ ಪ್ರಥಮಾ ವಿಭಕ್ತಿಯ ಅರ್ಥದಲ್ಲಿ ಬಳಕೆಯಾಗುತ್ತದೆ.

ಕಾಡು                ಉಕ್ಕು        ಕೂಳು           ಕಟ್ಟು
ಹರಳು               ಹೆಸರು        ಒಡ್ಡು          ಕಡಲು
ಕಣ್ಣು                ಕೊರಳು      ಗಂಟು           ಬೀಡು
ಮಾವು               ಮರ          ನಾರು           ಬೆನ್ನು

ದ್ವಿತೀಯೆ : ಅನು, ಅನ್ನು, ಗಳು ದ್ವಿತೀಯಾ ವಿಭಕ್ತಿ ಪ್ರತ್ಯಯಗಳಾಗಿವೆ. ‘ಅ’ ಕಾರಾದಿಯಾದ ಪದಗಳ ಪೂರ್ವದಲ್ಲಿ ಆ ಪ್ರತ್ಯಯಗಳು ಸೇರುತ್ತವೆ. ದ್ವಿತೀಯಾ ವಿಭಕ್ತಿಯಲ್ಲಿರುವ ನಾಮಪದವು ಯಾವಾಗಲೂ ಕರ್ಮ ಪದವಾಗಿದ್ದು ವಾಕ್ಯದ ಕ್ರಿಯಾಪದದಿಂದ ಸೂಚಿತವಾಗುವ ಕೆಲಸದ ಪರಿಣಾಮವು ಅದರ ಮೇಲಿರುತ್ತದೆ.

ಗೋಪಿಯರನು                     /       ಗೋಪಿಯರನ್ನು
ಕರುಳನು                             /       ಕರುಳನ್ನು
ಕೊರಳನು                            /       ಕೊರಳನ್ನು
ತರುವನು                            /       ತರುವನ್ನು
ಗಿರಿಯನು                            /       ಗಿರಿಯನ್ನು
ಹರಿಯನು                           /       ಹರಿಯನ್ನು
ಕಣಿಯನು                           /       ಕಣಿಯನ್ನು

ತೃತೀಯೆ : ಕ್ರಿಯೆ ಸಾಧ್ಯವಾಗಲು ಸಾಧನವಾಗಿ ಬಳಸುವ ವ್ಯಕ್ತಿ, ಪ್ರಾಣಿ, ವಸ್ತು ತೃತೀಯಾ ವಿಭಕ್ತಿಯಲ್ಲಿರುತ್ತದೆ.

ಮರದಿಂದ               –        ಗುರುಗಳಿಂದ
ಗೋಪಿಯರಿಂದ        –        ನಾರಾಯಣನಿಂದ
ಗೋಪಾಲನಿಂದ        –        ಅಚ್ಚುತನಿಂದ
ದಾಸಿಯರಿಂದ          –        ನರರಿಂದ

ಚತುರ್ಥಿ : ಕ್ರಿಯೆಗೆ ವಿಷಯವಾದುದನ್ನು ಕೊಡುವುದು ಅಥವಾ ಮಾಡುವುದು ಯಾರ ಅಥವಾ ಯಾವುದರ ಸಲುವಾಗಿಯೋ ಆ ವ್ಯಕ್ತಿ, ಪ್ರಾಣಿ, ವಸ್ತು ಚತುರ್ಥಿ ವಿಭಕ್ತಿಯಲ್ಲಿರುತ್ತದೆ. ‘ಅ’ ಕಾರಾಂತ ಪುಲ್ಲಿಂಗ ನಾಮಪದಗಳ ಪರದಲ್ಲಿ ಗೆ, ಇಗೆ, ಕೈ ಪ್ರಯತ್ನಗಳು ಸೇರುತ್ತವೆ.

ತನಯಗೆ                    ಜಲಧಿಗೆ
ರಾಮಗೆ                     ಜಲಜನಾಭವಿಗೆ
ಸೂತಗೆ                     ಗಗನಕ್ಕೆ
ಕುಮಾರಗೆ                 ಪರಿವಾರಕ್ಕೆ
ಗುರುವಿಗೆ                  ಸಿರಿತನಕ್ಕೆ
ತನುವಿಗೆ                    ಬಡತನಕ್ಕೆ
ಮಡುವಿಗೆ                  ಅದಕ್ಕೆ
ಪಿತೃವಿಗೆ

ಪಂಚಮಿ : ಒಂದು ವಾಕ್ಯದಲ್ಲಿರುವ ನಿರ್ದಿಷ್ಟ ಕ್ರಿಯಾಪದದಿಂದ ಸೂಚಿತವಾಗುವ ಕೆಲಸವು ಅದೇ ವಾಕ್ಯದಲ್ಲಿರುವ ಪಂಚಮಿ ವಿಭಕ್ತಿ ಪ್ರತ್ಯಯವು ಸೇರಿದ ನಾಮಪದದಿಂದ ಸೂಚಿತವಾಗುವ ವಸ್ತುವಿನಿಂದ ನಡೆಯುತ್ತದೆ ಎಂಬುದನ್ನು ಪಂಚಮಿ ವಿಭಕ್ತಿ ಪ್ರಯತ್ನವು ಸೇರಿದ ನಾಮಪದದಿಂದ ಸೂಚಿತವಾಗುವ ವಸ್ತುವಿನಿಂದ ನಡೆಯುತ್ತದೆ ಎಂಬುದನ್ನು ಪಂಚಮಿ ವಿಭಕ್ತಿ ಪ್ರಯತ್ನವು ಸೂಚಿಸುತ್ತದೆ.

ಕೈಯಿಂದ           ಶ್ರೀಹರಿಯಿಂದ
ಮನದಿಂದ          ಶ್ರೀರಂಗನಿಂದ
ಬವರದಿಂದ         ತನುವಿನಿಂದ
ಅಂಬುವಿನಿಂದ      ಪುಂಡರೀಕಾಕ್ಷನಿಂದ
ಕರದಿಂದ

ಪಂಚಮಿ ವಿಭಕ್ತಿ ಪ್ರತ್ಯಯಗಳು ದೆಸೆಯಿಂದ ಮತ್ತು ಇಂದಗಳ ಅರ್ಥವನ್ನು ಮತ್ತು ಹೋಲಿಕೆಯ ಅರ್ಥವನ್ನೂ ಕೊಡುತ್ತದೆ.

ಷಷ್ಠೀ : ಷಷ್ಠೀ ವಿಭಕ್ತಿ ಪ್ರತ್ಯಯವು ಇತರ ವಿಭಕ್ತಿಗಳಿಗಿಂತ ಭಿನ್ನವಾಗಿದೆ. ಇತರ ವಿಭಕ್ತಿ ಪ್ರತ್ಯಯಗಳು ಅವು ಹತ್ತಿದ ನಾಮಪದಕ್ಕೂ ಮತ್ತು ತತ್ಸಂಬಂಧಿಯಾದ ಕ್ರಿಯಾಪದಕ್ಕೂ ಇರುವ ಸಂಬಂಧವನ್ನು ಸೂಚಿಸಿದರೆ ಷಷ್ಠೀ ವಿಭಕ್ತಿ ಪ್ರತ್ಯಯವು ಒಂದು ನಾಮಪದಕ್ಕೂ ಮತ್ತು ಅದನ್ನು ಅನುಸರಿಸುವ ಮತ್ತೊಂದು ನಾಮಪದಕ್ಕೂ ಇರುವ ಸಂಬಂಧವನ್ನು ಸೂಚಿಸುತ್ತದೆ. ‘ಅ’ ಷಷ್ಠೀ ವಿಭಕ್ತಿ ಪ್ರತ್ಯಯವಾಗಿದೆ.

ಮುನಿಯ         ತಂದೆಯ
ಅರಸನ            ತಲೆಯ
ಮುಂದನ         ಅತ್ತಣ
ಗುರುವಿನ         ಮಗುವಿನ
ಕಾಡಿನ             ತೇರಿನ

ಸಪ್ತಮಿ : ಒಂದು ನಾಮಪದಕ್ಕೆ ಹತ್ತುವ ಸಪ್ತಮಿ ವಿಭಕ್ತಿ ಪ್ರತ್ಯಯವು ಅದಕ್ಕೆ ಸಂಬಂಧಿಸಿದ ವಾಕ್ಯದ ಕ್ರಿಯಾಪದದಿಂದ ಸೂಚಿತವಾಗುವ ಕ್ರಿಯೆಯು ಆ ನಾಮಪದದಿಂದ ಸೂಚಿತವಾಗುವ ವಸ್ತುವಿನಲ್ಲಿ ನಡೆಯುತ್ತದೆಂದು ತಿಳಿಸುತ್ತದೆ. ‘ಅಲ್ಲಿ’ ಎಂಬುದು ಸಪ್ತಮಿ ವಿಭಕ್ತಿ ಪ್ರತ್ಯಯವಾಗಿದೆ.

ಗುರುವಿನಲ್ಲಿ      ಅಸುರರಲ್ಲಿ
ಬಲೆಯಲ್ಲಿ         ಇದರಲ್ಲಿ
ಕಳದಲ್ಲಿ            ಹತ್ತಿರದಲ್ಲಿ
ಕರದಲ್ಲಿ            ಧನುವಿನಲ್ಲಿ

ಕ್ರಿಯೆಗೆ ವಿಷಯವಾದುದರ ಆಧಾರವನ್ನು ಅಥವಾ ಸ್ಥಾನವನ್ನು ಹೇಳುವ ವ್ಯಕ್ತಿ ಪ್ರಾಣಿ ಅಥವಾ ವಸ್ತುವನ್ನು ಸಪ್ತಮಿ ವಿಭಕ್ತಿ ಸೂಚಿಸುತ್ತದೆ.

ಮೇಲೆ ಹೇಳಿದ ವಿಭಕ್ತಿ ಪ್ರತ್ಯಯಗಳನ್ನು ಪಡೆಯುವಾಗ ನಾಮ ಪ್ರಕೃತಿಗಳು ಬೇರೆ ಬೇರೆ ವರ್ಣಗಳನ್ನು ಆಗಮವಾಗಿ ಪಡೆಯುತ್ತವೆ. ಹೀಗೆ ನಾಮವಾಚಕಗಳಿಗೆ ಲಿಂಗ, ವಚನ ಪ್ರತ್ಯಯಗಳ ಮೇಲೆ ಬೇರೆ ಬೇರೆ ಅರ್ಥಗಳನ್ನು ಕೊಡುವ ವಿಭಕ್ತಿ ಪ್ರತ್ಯಯಗಳು ಹತ್ತಿ ನಾಮಪದಗಳಾಗುತ್ತವೆ.

ತದ್ದಿತರೂಪಗಳು : ನಾಮಪ್ರಕೃತಿಗಳಿಗೆ ತದ್ದಿತ ಪ್ರತ್ಯಯಗಳು ಸೇರಿ ತದ್ದಿತ ರೂಪಗಳು ರಚನೆಯಾಗುತ್ತವೆ. ಗಾರ, ಕಾರ, ವಂತ, ಇಗ, ವಳ, ಇಕೆ ಮುಂತಾದುವು ತದ್ಧತ ಪ್ರತ್ಯಯಗಳಾಗಿವೆ. ದಾಸ ಸಾಹಿತ್ಯದಲ್ಲಿ ಕಂಡುಬರುವ ಕೆಲವು ತದ್ದಿತ ರೂಪಗಳನ್ನು ಹೀಗೆ ಕಲೆಹಾಕಬಹುದು.

ಸಾಲಗಾರ             ಹೂವಾಡಿಗ       ಮೊಚ್ಚೆಗಾರ
ಬೇಟೆಗಾರ             ಸಾಲಗುಳಿ
ಸಿರಿವಂತ               ಮಡಿವಂತಿಕೆ       ಸೊಸಿಗಾರ
ಹಣವಂತ             ಹಿರಿತನ            ಅಗಸಗಿತ್ತಿ
ಓಲೆಕಾರ               ಜಾಣ್ಮೆ                         ಗೊಲ್ಲತಿ
ಶಿಲ್ಪಗ                 ಪೆರ್ಮೆ              ಕಳಸಗಿತ್ತಿ
ಗಂದಿಗ                 ನಿಲುವಳಿ
ಚೆನ್ನಿಗ
ಗೋವಳ               ತಿರುಕುಳಿ
ಜೂದಾಳಿ              ಪವಿತ್ರತೆ
ಮಾಟಗಾತಿ           ಒಗತನ
ಇತ್ಯಾದಿ

ಹೀಗೆ ನಾಮ ಪ್ರಕೃತಿಗಳಿಗೆ ಹಲವು ವಿಧದ ತದ್ದಿತ ಪ್ರತ್ಯಯಗಳು ಸೆರಿ ತದ್ದಿತನಾಮ, ತದ್ದಿತಭಾವನಾಮ, ತದ್ದಿತವಿಶೇಷಣ ರೂಪಗಳು ಸೃಷ್ಟಿಯಾಗುತ್ತವೆ. ತದ್ದಿತ ಪ್ರತ್ಯಯಗಳು ಹೊಸಪದ ರಚನೆಗಳೂ ಕಾರಣವಾಗುತ್ತವೆ. (ಉದಾ. ಆಧಾರಕ).

ಕ್ರಿಯಾಪದ ರಚನೆ : ಕ್ರಿಯಾರ್ಥವನು ಕೊಡುವ ಮತ್ತು ಪ್ರತ್ಯಯವನ್ನು ಹೊಂದದಿರುವ ಶಬ್ದವನ್ನು ‘ಕ್ರಿಯಾಪ್ರಕೃತಿ’ ಅಥವಾ ‘ದಾತು’ ಎನ್ನುವರು. ಈ ಕ್ರಿಯಾಪ್ರಕೃತಿ ಅಥವಾ ಧಾತು ಕ್ರಿಯಾಪದದ ಮೂಲರೂಪವಾಗಿದೆ. ಧಾತುಗಳಲ್ಲಿ ಎರಡು ವಿಧ ೧. ಮೂಲಧಾತು : ಇವುಗಳಿಗೆ ಪ್ರತ್ಯಯ ಸೇರಿರುವುದಿಲ್ಲ. ಉದಾ. ಮಾಡು, ತಿನ್ನು, ಹೋಗು, ಬರು ಮುಂತಾದುವು. ೨. ಸಾಧಿತ ಧಾತು : ಇವುಗಳಿಗೆ ಪ್ರತ್ಯಯಗಳು ಸೇರುತ್ತವೆ. ಉದಾ. ಅಬ್ಬರಿಸು, ಓಲಗಿಸು, ತಿಂದಿತು, ಬಲ್ಲದು ಮುಂತಾದುವು. ದಾಸಸಾಹಿತ್ಯದಲ್ಲಿ ಕಂಡುಬರುವ ಧಾತುಗಳನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.

. ಏಕಾಕ್ಷರ ಧಾತುಗಳು

ಈ, ಓ, ಕಾ, ತೋ, ತೇ, ಹೂ, ನೋ
ಬಾ, ಬೀ, ಬೇ, ಮೀ-ಮೇ, ಸೀ, ಕೋ ಇತ್ಯಾದಿ

. ‘ಯ್’ ಕಾರಾಂತ ಧಾತುಗಳು

ಉಯ್, ಕೊಯ್, ನೆಯ್, ಹೊಯ್, ಬಯ್
ಸುಯ್, ಹಾಯ್, ಕಾಯ್, ಸಾಯ್ ಇತ್ಯಾದಿ

. ‘ಇ’ ಕಾರಾಂತ ಧಾತುಗಳು

ಕುಡಿ, ತರಿ, ಸುಳಿ, ತಿಳಿ, ಬಳಿ, ಇಳಿ
ಹರಿ, ಜರಿ, ಹಿರಿ, ಸರಿ, ಮುರಿ, ಬಿರಿ ಇತ್ಯಾದಿ

. ‘ಉ’ ಕಾರಾಂತ ಧಾತುಗಳು
 ಕೊಡು, ಸಿಗು, ಬೆಸು, ಎಸು, ಗೆಲು, ನಿಲು
ಅಳು, ಬೀಳು, ಹೂಳು, ಕಾಡು, ಓಡು, ಕಾರು
ಜಾರು, ಹೋರು, ಏಳು, ಸೀಳು, ಕೇಳು, ಊಳುಇತ್ಯಾದಿ

. ‘ಎ’ ಕಾರಾಂತ ಧಾತುಗಳು
 ಕರೆ, ಮರೆ, ತೊರೆ, ಎಳೆ, ಒರೆ
ಹೊಳೆ, ಮೊರೆ, ಒಲೆ ಇತ್ಯಾದಿ

. ‘ಉ’ ಕಾರಾಂತ ದ್ವತ್ವಧಾತುಗಳು
 ಕಚ್ಚು, ಮೆಚ್ಚು, ನೆಚ್ಚು, ಕೊಚ್ಚು, ನೆಕ್ಕು, ತಿಕ್ಕು
ಒಪ್ಪು, ಹಬ್ಬು, ಕಟ್ಟು, ಸುತ್ತು, ಮುತ್ತು, ನುಗ್ಗು
ಹತ್ತು, ಬಗ್ಗುಇತ್ಯಾದಿ

. ತ್ರ್ಯಯಕ್ಷರ ಧಾತುಗಳು
 ತಿರುಗು, ತೊಲಗು, ತೆರಳು, ಕನಲು, ಬಳಲು
ನೆರಳು, ಒದಗ, ಒದರು, ಅರಳುಇತ್ಯಾದಿ

ಕ್ರಿಯಾಪದ : ವಾಕ್ಯದಲ್ಲಿಯ ಕ್ರಿಯೆಯ ಅರ್ಥವನ್ನು ಪೂರ್ಣಗೊಳಿಸುವ ಶಬ್ದಗಳು ‘ಕ್ರಿಯಾಪದಗಳು’, ಉದಾ, ಬಂದನು, ಹೋದನು, ಕೇಳುವವು ಮುಂತಾದುವು. ಧಾತುಗಳಿಗೆ ಆಖ್ಯಾತ ಪ್ರತ್ಯಯಗಳು ಸೇರಿ ಕಾಲಾರ್ಥಕ, ವಿಧ್ಯರ್ಥಕ ಮತ್ತು ನಿಷೇಧಾರ್ಥಕ ಕ್ರಿಯಾಪದಗಳಾಗುವವು.

ಕಾಲಾರ್ಥಕ ಕ್ರಿಯಾಪದಗಳನ್ನು ೧. ವರ್ತಮಾನ ಕಾಲ ೨. ಭೂತಕಾಲ ೩. ಭವಿಷ್ಯತ್ ಕಾಲಗಳೆಂದು ಮೂರು ರೀತಿಯಾಗಿ ವಿಂಗಡಿಸಬಹುದು.

. ವರ್ತಮಾನ ಕಾಲ : ಕ್ರಿಯೆಯ ಸದ್ಯ ನಡೆಯುತ್ತಿದ್ದ ಕಾಲ ಸೂಚಿಸುತ್ತದೆ. ಇದರ ಪ್ರತ್ಯಯಗಳು ಉತ್, ತ್ತ್
ಹೇರುತ್ತಾನೆ, ಹಾಡುತ್ತಾನೆ, ಎಳೆಯುತ್ತಾನೆ
ಕಲಿಸುತ್ತಾನೆ, ತೆಗೆಯುತ್ತಾನೆ, ಮಿಡಿಯುತ್ತಾನೆ
ಇತ್ಯಾದಿ

. ಭೂತಕಾಲ : ಕ್ರಿಯೆಯ ನಡೆದು ಹೋದ ಕಾಲವನ್ನು ಸೂಚಿಸುತ್ತದೆ.
ಇದರ ಪ್ರತ್ಯಯಗಳು -ಇದ್/ದ್, ಕ್
ಮಾಡಿದ                   /      ಅಲುಗಿದ
ಕೇಳಿದ                      /      ಕಟ್ಟಿದ
ಬೀಸಿದ                     /      ನೂಕಿದ
ಸಿಕ್ಕ                        /      ನಕ್ಕ
ಹೊಕ್ಕ                     /      ತಕ್ಕ
ಇತ್ಯಾದಿ

. ಭವಿಷ್ಯತ್ ಕಾಲ : ಕ್ರಿಯೆಯು ಮುಂದೆ ನಡೆಯುವ ಕಾಲವನ್ನು ಸೂಚಿಸುತ್ತದೆ. ಇದ್ರ ಪ್ರತ್ಯಯಗಳು- ಉವ್, ವ್

ಹಾಡುವನು           –      ಕೇಳುವನು
ಮಾಡುವನು         –      ತೋರುವನು
ಹೋಗುವ           –      ಉರಿಸುವ
ಕುಣಿಯುವ          –      ಎನಿಸುವ
ಹೇಳುವ              –      ಗೆಲ್ಲುವ
ಸುಡುವ              –      ನಿಲ್ಲುವ
ಇತ್ಯಾದಿ

ಪುರುಷವಾಚಕ ಪ್ರತ್ಯಯಗಳು

ಏಕವಚನ                ಬಹುವಚನ
-ನು, -ಎ                     ಎವು
-ಎ                            ಇರಿ
ಪು ಲಿಂ ಅನು-ಅ
ಸ್ತ್ರೀ ಲೊಂ-ಅಳು            ಅರು
ನ ಲಿಂ-ಇತು, ಇತ್ತು         ಉವು, ಅವು
ದು, ಅದು

– ಎನು-ಎ :
ಕೊಲ್ಲುವೆನು                ತೋರುವೆನು
ಬರುವೆನು                    ಹೋಗುವೆನು
ಕೊಲ್ಲುವೆ                   ತೋರುವೆ
ಕೇಳುವೆ                       ಹಾಡುವೆ
ಇತ್ಯಾದಿ

– ಎವು :
ಬದುಕುವೆವು                 ಬರುವೆವು
ಕೊಳ್ಳುವೆವು                 ಚರಿಸುವೆವು
ಆಗುವೆವು                     ಬಳಸುವೆವು

ಇತ್ಯಾದಿ

– ಇರಿ :

ಬರುವಿರಿ                      ನೂಕುವಿರಿ
ಕಾಣುವಿರಿ                    ಕೇಳುವಿರಿ
ಮುಂಚುವಿರಿ                 ಬಳಲುವಿರಿ
ಇತ್ಯಾದಿ

-ಅನು -ಅ :
ಎಂದನು                      ಎಂದ
ನೋಡಿದನು                 ನೋಡಿದ
ಸಾರಿದನು                    ಸಾರಿದ
ತಿವಿದನು                      ತಿವಿದ

– ಅಳು :
ಎಂದಳು                      ಬಂದಳು
ಹಿಡಿದಳು                     ಕೆಡೆದಳು
ನಡೆದಳು                      ನೋಡಿದಳು
ಸಂತೈಸಿದಳು                ಎತ್ತಿದಳು

– ಅರು :
ಎನ್ನುವರು                   ಕರೆದರು
ಕೊಡುವರು                  ನುಡಿವರು
ಕಡಿದರು                      ತಡೆದರು
ಕಾಣುವರು                   ಕೊಲ್ಲುವರು

– ಇತು-ಇತ್ತು -ದು-ಅದು :
ಎಸೆಯಿತು                    ಎಸೆದಿತ್ತು
ತಲ್ಲಣಿಸಿತು                 ತಲ್ಲಣಿಸಿತ್ತು
ತೆಗೆಯಿತು                    ತೆಗೆಯಿತ್ತು
ಆಯಿತು                      ಆಗಿತ್ತು
ಹೋಯಿತು                  ಹೋಗಿತ್ತು
ಕದಡಿತು                      ಕದಡಿತ್ತು
ಒಡಿದು                       ತೆಗೆದಿದು
ಕಾದುವದು                  ಹಳಿವದು
ಇತ್ಯಾದಿ

– ಉವು-ಅವು :
ಏಳುವುವು                    ನಿಂತವವು
ಆಗುವುವು                    ನಿಂತುವುವು
ನುಸುಳವವು                 ಇರುವವು
ಕೆಡೆದವು                       ಇರುವುವು
ಕೆಡೆದವವು                    ಕೊಡುವುವು
ಮಿಕ್ಕವವು                    ಕೊಡುವವು
ಮಿಕ್ಕುವು
ಇತ್ಯಾದಿ

ವಿಧ್ಯರ್ಥ : ಆಜ್ಞೆ, ಅಪ್ಪಣೆ, ಬಿನ್ನಹ, ಆಶೀರ್ವಾದ ಇಂತಹ ಅರ್ಥಗಳನ್ನು ಹೇಳುವ ಕ್ರಿಯಾಪದಗಳು ವಿಧ್ಯರ್ಥ ಕ್ರಿಯಾಪದಗಳು -ಇ -ಇರಿ -ಅಲಿ ಇವು ವಿಧ್ಯರ್ಥಕ ಪ್ರತ್ಯಯಗಳಾಗಿ ಬಳಕೆಯಾಗಿವೆ.
ಸಾರಿರಿ                         ಹೇಳಿರಿ
ತೆಗೆಯಿರಿ                      ಮಾಡಿರಿ
ತೊಲಗಿರಿ                     ತಿವಿಯಿರಿ
ನೋಡಿರಿ                      ಕುಣಿಯಿರಿ / ಕುಣಿರಿ
ಬರಲಿ                         ಹಾಡಲಿ
ಮಾಡಲಿ                      ಬಾರಿಸಲಿ
ಸುಡಲಿ                        ತಿರುಗಲಿ
ಕಳೆಯಲಿ                      ಇರಲಿ
ಇತ್ಯಾದಿ

ನಿಷೇಧಾರ್ಥ : ನಿಷೇಧ ಎಂದರೆ ಕ್ರಿಯೆಯೂ ನಡೆದಿಲ್ಲ ಅಥವಾ ನಡೆಯುವುದಿಲ್ಲ ಎಂದರ್ಥ, ಈ ಅರ್ಥ ಕೊಡುವಂತಹವು ನಿಷೇಧಾರ್ಥ ಕ್ರಿಯಾಪದಗಳು. -ಎನು -ಎ -ಎವು-ಅನು -ಅಳು-ಅರು -ಅದು -ಅವು ಇವು ನಿಷೇಧಾರ್ಥಕ ಪ್ರತ್ಯಯಗಳಾಗಿವೆ.

ಹಿಡಿಯೆನು                   ಕಾಣೆ
ಬಿಡುವೆನು                    ಕೊಡೆ
ಕೇಳೆನು                        ತಿಳಿಯೆವು
ಕಾಣೆವು                       ಹೆದರೆವು
ಈಯೆವು                      ಸುಳಿಯೆವು
ಬಗೆಯೆವು                    ನೆನೆಯೆವು
ಕೊಲ್ಲನು                    ಹೆರಳು
ಸಿಕ್ಕನು                        ಇರುವಳು
ಕಾಣನು                       ನುಡಿಸಲು
ಮಾಡನು                     ಕುಣಿಯಳು
ಕೊಡುವನು                  ಹಾಡುಳು
ಬಗೆವನು
ಬಾಗರು                       ಬಿಡರು
ನಂಬರು                       ತಿಳಿಯರು              ನೆನೆಯವು

ಹೇಳರು                       ಮಿಡುಕದು             ಕೊಡವು
ಕೇಳರು                        ಸಲ್ಲದು                ತುಂಬಿವು
ಸಲ್ಲರು                      ಬಿಡುವದು             ಆಗುವಿವು
ನುಡಿಯರು                  ಮಾಣದು
ಕೊಳ್ಳದು                    ತೀರದು                  ಇತ್ಯಾದಿ