ಗಟ್ಟಿಮುಟ್ಟಾದ ದೇಹದಾರ್ಢ್ಯ ಹೊಂದಿದ ಗದ್ದಗಿಮಠ ಅವರಿಗೆ ವ್ಯಾಯಾಮ ಮಾಡುವುದು ನಿತ್ಯದ ದಿನಚರಿಯಾಗಿತ್ತು. ಪ್ರತಿದಿನ ನಸುಕಿನಲ್ಲೆದ್ದು ಹವೆ ಸೇವಿಸುವುದು, ದಿನನಿತ್ಯ ಒಂದು ಗಂಟೆ ತೋಟದ ಕಾಯಕದಲ್ಲಿ ನಿರತವಾಗುವದು, ಕುಸ್ತಿ ಆಡುವದು ಎಂದರೆ ಎಲ್ಲಿಲ್ಲದ ಹುರುಪು ಹುಮ್ಮಸ್ಸು ತುಂಬಿದಂತಾಗುತ್ತಿತ್ತು. ಈ ಮೊದಲಾದವುಗಳು ಅವರ ನಿತ್ಯ ದಿನಚರಿಯಾಗಿದ್ದವು.