ಏನಾದರೂ ಸರಿ ತೊರೆಯದಿರೆನ್ನಾ | ಧೀನರಕ್ಷಕ ಗುರುಸಂಜೀವರೆ
ಎನ್ನ || ಪ || ಕಾಣೆನು ಯಾರನು || ಗುರು ಮಂತ್ರವರೆದರಾ |
ಜಾಣನೀ ನಿಲ್ಲದ ಧಾಣವೆ ಇಲ್ಲ || || ೧ ||

ವೇದ ಮಂತ್ರಾರ್ಥವ ಗಾದೆಯೆಂದೆನಿಸೇ ಮೇದಿನಿ ಪತಿ
ನಿನ್ನಾ ಹೋಲುವರಿಲ್ಲಾ | ನಾದಬಿಂದು ಕಳೆಮೂರ್ತಿ |
ಎಂದೆನಿಸಿದೇ || ಭೊದಸ್ವರ‍್ದಪನು | ಆದೇ ನೀ ಎಲ್ಲಾ || ೨ ||

ಶೃತಿ ಮೊತ್ತಗಳಿಗೆ ಗತಿಯನು ತೋರಿಸಿ | ಹಿತದಿಂ ಭಕ್ತರ
ಪೊರೆಯುವೆಯೆಲ್ಲಾ ಮತಿಯ ಶೃತಿಸುವ ಶರಣರ
ಜಗದೀಗತಿ ಮೋಕ್ಷ ರಾಜ್ಯಕ್ಕೆ ಹೊಯ್ಸುವೆಯೆಲಾ || ೩ ||

ವರರಂಭಾ | ಪೀಠಕೆ ಗುರುಮುನಿ ರುದ್ರಗೇ ಸ್ಥಿರಪಟ್ಟವಿತ್ತು
ನೀನರುಹಿದೆಯೆಲ್ಲಾ || ಪರಿಪೂರ್ಣಭಕ್ತರ ಕರೆದು
ಜ್ಞಾನವ ಪೇಳಿ ಪುರ ಮಂಡ್ಯ ಕ್ಷೇತ್ರದಿ ಬೆಳಗುವೆಯೆಲ್ಲಾ ||