ದೀಪವಿಲ್ಲದ ದಾರಿಯಲ್ಲಿ ನಡೆದೂ ನಡೆದೂ
ಅಭ್ಯಾಸವಾಗಿ ಹೋಗಿದೆ ನಮಗೆ.
ಹೇಳುತ್ತಾರೆ ಜನ, ಮೊದಲಲ್ಲಿ ಝಗ ಝಗಿಸುವಂಥಾ
ದೀಪವಿತ್ತೆಂದು ; ದೀಪವಿದ್ದಂತೆ ನಮಗೂ ನೆನಪು.
ಈಗ ಇವೆ ನಾಲ್ಕಾರು ದೀಪವಿಲ್ಲದ ಕಂಬ ದಾಖಲೆಯಾಗಿ.
ನಮಗೊ ಕತ್ತಲೆಯೆ ಕಣ್ಬಳಕೆಯಾಗಿ, ಹಳೆಯ
ನೆನಪೂ ಮಾಸಿ ಅನ್ನಿಸುತ್ತದೆ : ಈಗಿವರು ಕೇಳಿದರೆ
ಕೊಡುವ ಕುರುಡುದೀಪಕ್ಕಿಂತ ಕತ್ತಲೆಯೆ ವಾಸಿ.