ಈ ಜಗತ್ತೆಲ್ಲವೂ
ಪ್ರೀತಿಯ ಒಂದು ಮಹಾ ಶ್ಮಶಾನ.
ಈ ರುದ್ರಭೂಮಿಯ ಗೋಡೆಯುದ್ದಕ್ಕೂ
ಹಸಿರು ಮರಗಳು ನಿಂತು
ಎಂದೆಂದೂ ಮೇಲೇಳದಂತೆ
ಮಲಗಿ ನಿದ್ರಿಸುತ್ತಿರುವ
ಗಾಳಿಯ ಕನಸು ಕಾಣುತ್ತಿವೆ.

ಕತ್ತಲು ಹರಿದು ಬೆಳಗಾದಾಗ
ಒಂದೇ ಒಂದು ನೇಸರ ಕಿರಣ
ತೂರಿಬರುತ್ತದೆ ಇಲ್ಲಿಗೆ,
ಮತ್ತೆ ಸಾಯಂಕಾಲ, ಕೊನೆಯ ಸೂರ‍್ಯನ ಕಿರಣ
ಗೋರಿಯ ಮೇಲೆ ಕೆತ್ತಿರುವ ನನ್ನ ಹೆಸರನ್ನು
ಕ್ಷಣ ಕಾಲ ದೀಪ್ತಗೊಳಿಸುತ್ತದೆ ಮೆಲ್ಲಗೆ.

– ಆಂಟೋನಿನ್ ಬಾರ್ಜೊಸಿಕ್ (ಜೆಕ್ ಭಾಷೆಯ ಕವಿ)