ಪಲ್ಲವಿ : ದೃಷ್ಟಿ ತೆಗಿಯಿರಮ್ಮಾ
ಜಗದ
ಸೃಷ್ಟಿ ಪಿತನು ಇವನೇ

ಚರಣ :  ಚಿಕ್ಕ ವಯಸಿನಲ್ಲೇ ಅಸುರರ ಕೆಡವಿ ಕೊಂದನಮ್ಮಾ
ಬೆಕ್ಕಸಿ ಬೆರಗಿ ಹೋದರು ಎಲ್ಲರು ಸುತ್ತಮುತ್ತ ಜನರು 

ಭೂತ ಚೇಷ್ಟೆ ಎಂದು ಯಶೋದೆ ಮಾಯ ಮಂತ್ರ ಮಾಡಿ
ದುಃಖ ಪಟ್ಟಳಮ್ಮ ದೃಷ್ಟಿ ತೆಗಿಯಿರಮ್ಮಾ

ಬಾಲ ಕೃಷ್ಣನಮ್ಮಾ ಕಾಲಲಿ ಸರ್ಪ ತುಳಿದನಂತೆ
ಬೆಟ್ಟ ಹಿಡಿದು ಎತ್ತಿ ಬೆರಳಲಿ ರಕ್ಷಣೆ ಕೊಟ್ಟನಮ್ಮಾ

ಜಯವು ಜಯವು ಹರಿಯೇ ನಿನಗೆ ಜಯವು ಜಯವು ಹರಿಯೇ
ಜಯವು ಜಯವು ಕೃಷ್ಣಾ ! ನಿನಗೆ ಜಯವು ಜಯವು ಕೃಷ್ಣಾ !