ಶ್ರೀಜನಸ್ತುತರಖಳಕ
ಳಾಸದನರ್ ಸುಗುಣಭೂಷಣರ್ ಸುವಿವೇಕಿಗ
ಳೀ ಸತ್ಯಕಥೆಯಂ ಕೇಳ್ವುದು
ವೈಷಮ್ಯವನುಳಿದು ಚಿತ್ತ ಶುದ್ಧಿಯೊಳಿಂತುಂ

ವ || ಮತ್ತಂ ಉತ್ತರ ಮಧುರಾಪಟ್ಟಣದೊಳ್ ಸಾಕರಾರರಾಯನೆಂಬತನ ಹೆಂಡತಿ ಶ್ರೀಯಲದೇವಿ ಮೂವರ್ ಪೆಣ್ಗಳಂ ಪಡೆದು ಪುತ್ರಸಂತಾನಮಿಲ್ಲದೆ ದಂಪತಿಗಳ್ ಚಿಂತಿಸುತ್ತರ್ದು ತತ್ಸುರದ ಚೈತ್ಯಾಲಕ್ಕೈದಿ ಜಿನಪ್ರತಿಮೆಯಂ ಪೂಜಿಸಿ ಪೊಡೆವಟ್ಟು ತದುಪಾಂತಸ್ಥಿತಿ ಮುನಿವಾಸದೊಳಿರ್ದ ಸಿದ್ಧಾಂತಕೀರ್ತಿ ಯೋಗಿಂದ್ರರಂ ಬಂದಿಸಿ ಬೆಸಗೊಳ್ವುದುಂ ಪದ್ಮಾವತಿದೇವೀವರದಿಂದೊರ್ವ ಕುಮಾರನಕ್ಕುಮೆಂದು ಬೆಸಸುವುದುಂ ನಾಗೇಂದ್ರನಂಗನೆಯಂ ಪ್ರಾರ್ಥಿಸಿ ಮನೆಗೆ ಬಂದಿಪ್ಪದುಂ ಗರ್ಭಮಾಗೆ ನವಮಾಸಂ ನೆರೆದು ಶುಭಲಗ್ನ ಮುಹೂರ್ತದೊಳ್ ಗಂಡುಗೂಸಂ ಪಡೆದು ಜಿನದತ್ತ ರಾಯನೆಂದು ಪೆಸರಿಟ್ಟು ಸಲಹುತ್ತಿರೆ ಅಕ್ಷರ ಲೇಖ್ಯ ಗಣಿತಾದಿ ಶಸ್ತ್ರಶಾಸ್ತ್ರವಹನಾರೋಹಣಾದಿ ಪರಾಕ್ರಮಸಂಪನ್ನಾಗಿ ಬೆಳೆದು ಜವ್ವನಂ ನೆರೆಯಲೊಂದು ದಿನಂ ಸಾಕಾರರಾಯಂ ಪರಾರಾಯರಂ ಸಾಧಿಸಲೆಂದು ಪೋಗಿವಪ್ಪಲ್ಲಿ ಬಂದರಣ್ಯದ ಬೇಡವಳ್ಳಿಯ ಬೇಡರಾಜನ ಮಗಳ್ ಪದ್ಮಿನಿಜಾತಿಯೆಂದವಳಂ ಬರಿಸಿ ಆಕೆಯ ತಂದೆಯಂ ಬೇಡಿ ಕೂಗಿ ಮಾರಿಯಂ ಕರೆತಂದನೆಂಬಂತೆ ಪಟ್ಟಣ್ಣಕ್ಕೆ ತಂದು ಕಂಜೀರದ ಪಲ್ಲಣಿ ನಂದಮಂ ನೋಡಿ ಸೇವಿಸದಂತೆಯವಳಂ ಕೂಡಿರ್ದು ಪಾಲಿಂಗ ಪುಳಿ ಸೋಂಕಿ ಕೆಟ್ಟಂತೆ ತನ್ನ ಚಾರಿತ್ರಾನುಷ್ಠಾನಮಂ ಬಿಟ್ಟು ಪಂದಿಯೊಡನಾಡಿದ ಕೆಂದಗರು ಪೇಲ ತಿಂದುದೆಂಬಂತೆ ಮಾಂಸಲೋಲುಪನಾಗಿರಲು ಬೇಡಿತಿಗೊರ್ವ ಮಾರಿದತ್ತನೆಂಬ ಮಗನಾಗೆ ದುಃಚಾತಿತ್ರದಿಂ ನೆಗಳುತ್ತಿರ್ದೊಂದು ದಿನಂ ನರಮಾಂಸಮನಟ್ಟು ಬಡಿಸಲದರೊಳೆ ಅತಿ ಪ್ರೀತನಾಗಿ ದನಂಪ್ರತಿಯಲ್ಲು ಪೊಸಬರಂ ಕೊಂಡು ಆಡಿಸುತ್ತಿರೆ ಜನರ್ ತಿಳಿಯೆ ಪಳಿಗಂಜಿ ಆಸ್ಥಾನದೊಳಿರ್ದು ಪಾಕಶಾಲೆಗೆ ಜಂಬೀರಫಲಮಂ ಕೊಂಡೆಂದಟ್ಟುವುದುಮಾತನಂ ಬಾಣಸಿಗಂ ಕೊಂದಡಿಗೆಯಂ ಮಾಡುತ್ತ ಮಿಪ್ಪಿನಂ.

ಮತ್ತೊಂದು ದಿನಸಂ ಶಬರಿಯು ವೈಹಾಳಿಯಂ ಮಾಳ್ವ ಜಿನದತ್ತಕುಮಾರನಂ ಕಂಡು ಕೊಲಲ್ ಬಗೆದು ಪತಿಯೊಳೆ ಸಂಬಂಧಿಸಿಕೊಂಡು ಆಸ್ಥಾನಕ್ಕೆ ಬಂದಿರ್ದು ಜಿನದತ್ತಕುಮಾರನಂ ಕರೆದು ಕೈಯೊಳೆ ನಿಂಬೆಯಪಣ್ಣುನಿತ್ತು ಪಾಕಿಗಿನ ಕೈಯೊಳ್ ಕೊಟ್‌ಉ ಬಾಯೆಂದಟ್ಟುವುದುಂ ಮಧ್ಯಮಾರ್ಗದೊಳೆ ಮಾರಿದತ್ತಂ ಕಂಡು ಪಾದಮಿರ್ದಲ್ಲಿ ಪಾತಾಳಮೆಂಬಂತೆ ತಾನೆ ಕೊಡುವೆನೆಂದು ನಾನಾ ಬಗೆಯೊಳೆ ಬೇಡಿಕೊಂಡೋಡಂಬಡಿಸಿ ಜಿನದತ್ತನ ಕೈಯೊಳಿರ್ದ ಜಂಬೀರಫಲಮಂ ಮಾರಿದತ್ತಂ ಪಾಕ ಶಾಲೆಗೆ ತಪ್ಪುದುಮಾತನನಾಕ್ಷಣವೆ ಕೊಯಿದಡಿಗೆಯಂ ಮಾಡಿದನಿತ್ತ ಜಿನದತ್ತ ವಿಷಣ್ನ ಚಿತ್ತನಾಗಿ ತದ್ವೃತ್ತಾಂತಮಂ ನಿಜ ಜನನಿಯಲ್ಲಿಗೆ ಬಂದು ಪೇಳ್ವುದುಂ ಭೀತಿಯಿಂ ಮಗಂವೆರಸು ಚೈತ್ಯಾಲಯಮನೆಯ್ದಿ ಬಂದಿಸಿ ಸಿದ್ಧಾಂತಕೀರ್ತಿಮುನಿಗಳಂ ಬೆಸಗೊಳ್ವುದುಂ ಇಂದಿನ ದಿನಂ ನಿನ್ನಮಂಗಂಗಪಾಯಂ ಬಪ್ಪುದರಿಂ ಪದ್ಮಾವತಿ ದೇವಿಯ ಸುವರ್ಣಪ್ರತಿಮೆಯಂ ತೆಗೆದುಕೊಂಡು ಜಾತ್ಯಶ್ವಮನೇರಿ ದಕ್ಷಿಣಾಭಿಮುಖಮಾಗತಿದೂರಕ್ಕೆ ಪೋಪುದೆಂಬ ಗುರುನಿರೂಪಮಂ ಕೇಳಿಯಾಕ್ಷಣದೊಳೆ ಸ್ನಾನಂಗೆಯ್ದು ಧೌತವಸ್ತ್ರಮನುಟ್ಟು ಚೈತ್ಯಾಲಯಕ್ಕೆಯ್ದಿ ತ್ರಿಲೋಕಸ್ವಾಮಿಗಭಿವಂದಿಸಿ ಕಕ್ಷದೊಳ್ ನಾಗೇಂದ್ರನರಸಿಯ ಬಿಂಬಮನಳವಡಿಸಿ ಕುದುರೆಯ ಸಾಲೆಗೆ ಬಂದು ನೋಡಲಾ ಕ್ಷಣಮೆ ಹೇಳುವರ್ಣದಶ್ವಂ ಕಾಲ್ಕರೆಯುತ್ತೆ ಬರಲದನೇರಿ ಕಡಿವಾಣ ಮಾತ್ರಮಿರ್ದಾ ತುರಂಗಮಂ ದಕ್ಷಿಣಮುಖಂ ಮಾಳ್ವುದುಂ ವಾಯುವೇಗದಿಂ ಪೋಗಲ್.

ಇತ್ತಲ್ ದುರಾಚಾರಿಯಪ್ಪ ಸಾಕಾರನಾರೋಗಣೆಗೆ ಬಂದು ಆರೋಗಿಸುವಲ್ಲಿ ಮಾರಿದತ್ತನಂ ಕೊಂದಟ್ಟಿರ್ದುದಂ ತಿಳಿದಾಕ್ಷಣಂ ಚತುರಂಗಂಬೆರಸು ಜಿನದತ್ತನಣ ಕೊಲಲಟ್ಟಿ ಬಂದು ಸಮಿಪವರ್ತಿಯಪ್ಪುದುಂ ದೇವಿಯ ಪ್ರತಿಮೆಯಂ ತೋರ್ವುದುಂ ಬಲಂ ಪಿಂದಾಗೆ ಮುಂದೆ ಮುಂದಕ್ಕೆ ಪೋಗಿ ಮೂರು ದಿವಸಂ ಪೋಗಲೊಂದು ಮಹಾರಣ್ಯದೊಳತ್ಯಂತ ಪಥಶ್ರಮದಿಂ ಕುದುರೆಯಂ ಕಟ್ಟಿ ದೇವಿಯ ಪ್ರತಿಕೃತಿಯಮ ಅಕ್ಕಿಯ ಬನದಡಿಯೊಳಿರಿಸಿ ತಾನು ಧೂಪಿಸಿ ತಚ್ಚಾಯೆಯೊಳೊರಗಿರ್ದು ವಿಶ್ರಮಾನಂತರಂ ಮುಂದಣ್ಗೆ ಪೋಗಲೆಂದು ದೇವಿಯಂ ಬಿಂಬಮಂ ತೆಗೆಯಲದು ವಜ್ರಲೇಪಮಾದಂತೆ ಭೂಮಿಯಿಂ ಮೇಗಣ್ಣೆ ವಾರದಿರಲತಿಚಿಂತಾಕ್ರಾಂತನಾಯಲ್ಲೆ ಮರದೊರಗಿರ್ದಂಗಾ ಮಹಾದೇವಿ ಸ್ವಪ್ನದೊಳಿಂತೆಂದಳಾನಿಲ್ಲಿಯೆ ನೆಲೆಗೊಳ್ವುನೀ ಪಳುವಂ ಪಟ್ಟಣಮಂ ಮಾಳ್ವೆನೀ ದೇಶಮಂ ನೀನಾಳ್ವೆ ಇವಕ್ಕೆ ಕಾರಣಮೆನ್ನ ಪ್ರತಿಮೆ ಪುರುಷಮಾದುದರಿಂ ಲೋಹಮಂ ಸೋಂಕಲ್ ಪೊನ್ನಪ್ಪುದದರಿಂದನ್ಯನಪ್ಪೆ ಎಂಬುದು ಮೆಚ್ಚುತ್ತೆ ಕನಸಂ ನೆನೆದು ಕಡಿವಾಣಮಂ ಪ್ರತಿಬಿಂಬಕ್ಕೆ ಮುಟ್ಟಿಸುವುದು ಕಡೆಯಾಣೆಯಾಗಲಾ ಬನದೊಳನತಿದೂರಳೊಂದು ಶಬರವಳ್ಳಿಯಿರ್ದುದಲ್ಲಿಯ ಶಬರರ್ ಬಂದು ಕಂಡು ಬೆಸಗೆಯ್ಯುತ್ತಿರಲ್ ಕ್ರಮದಿಂದಾ ಅರಣ್ಯಮಂ ಪಟ್ಟಣಮಂ ಮಾಡಿಸಿ ಪೂರ್ವಕೃತಪುಣ್ಯದಿಂದ ಚತುರಂಗವಲಂಬೆರಸು ರಾಜ್ಯಮನಾಳ್ದು ಪರನೃಪರೊಳ್ ಕಪ್ಪಂಗೆಳ್ವುತ್ತುಂ ಪೊಂಬುಚ್ಚಪುರಮೆಂಬ ಪೆಸರಿಟ್ಟು ಆ ಪುರಕ್ಕುತ್ತರ ಮಧುರೆಯಿಂ ನಿಜಗುರುವುಂ ಜನನಿಯುಮ ಮಂತ್ರಿ ಸಾಮಂತಾದಿ ಚತುರಂಗಮುಮತ್ಯಂತ ರೋಗೋಪಸರ್ಗಮುಳ್ಳನ ಧಾತು ಬಿಡುವಂತೆ ದುಷ್ಟ ಸಾಕಾರನಂ ಬಿಟ್ಟು ಪೊಂಬುಜಪುರಕ್ಕೆ ಬಂದು ಜಿನದತ್ತರಯನೊಳ್ ಕೂಡಿ ಸುಖಮಿರೆ.

ದಕ್ಷಿಣ ಮಧುರೆಯನಾಳ್ವ ಹರಿವಂಶದ ವೀರಪಾಂಡ್ಯನ ಸುರೆಯರಂ ಮದುವೆಯಾಗೆ ಜಿನದತ್ತರಾಯಮ ಪರಸುಪದ್ಮಾಂಬೆಯ ಪ್ರಸಾದದಿಂ ಕುಬೇರನಂತೆ ಧನಾಧಿಪನುಂ ಈಶಾನನಂತೆಯನೇಕ ದೇಶಾಧೀಶ್ವರನುಂ ಯಮನಂತೆ ಶತ್ರುಮರ್ದನನುಂ ಇಂದ್ರನಂತೈಶ್ವರ್ಯಯುತನುಂ ದಾನದೊಳ್ ಶ್ರೇಯಾಂಸನುಂ ಪೂಜೆಯೊಳ್ ಭರತೇಶನುಂ ಶೀಲದೊಳ್ ಪ್ರಯಮಿತ್ರನುಂ ಉಪವಾದೊಳ್ ನಾಗದತ್ತನುಂ ಪೋಲೆ ಜಲ ಕೇಳಿ ವನಕೇಳಿ ಮುಂತಾದುದರಿಂ ಮನೋಔಈಷ್ಟಮಂ ಸಲಿಸುತ್ತಮಿರ್ದೊಂದು ದಿವಸಂ ತಕಾಡಮಂ ನೋಡುತ್ತೆ ಬರುವಲ್ಲಿ ಕೆರೆಯೊಳೆರಡು ಮುತ್ತುಗಳಂ ಕಂಡುನು ನಾಸಿಕಾಭರಣಮಂ ಮಾಡಿಸಿ ನೋಡಲೊಂದು ಕರಿದು ಮಣಿಯಾಗೆ ತೋರ್ಪುದುಮದಂ ತಾಂ ಲಕ್ಕಿಯ ವನದೊಳೆ ಪ್ರತಿಷ್ಠೆಯಂ ಮಾಡಿಸಿರ್ದ ಶಿಲಾಮೂರ್ತಿಯಪ್ಪ ಪದ್ಮಾಂಬೆಗೊಪ್ಪಿಸಿ ಒಳ್ಳಿಹ ನಾಸಾಭರಣಮಂ ನಿಜಸತಿಗೆ ಕುಡೆ ಮರುದಿವಸಂ ನೋಳ್ವಗಳ್ ಪಲ್ಲಟಮಾಗಿದರೆ ಆ ರಾತ್ರಿ ಸ್ವಪ್ನದೊಳ್ ಮೂದಲಿಸಿ ದುಷ್ಟಮಕಾಲ ಪ್ರಾಬಲ್ಯದೊಳ್ ಪುರುಮಿರಲಾಗದದರಿಂ ಪಾತಾಳಕ್ಕೆ ಪೋಪೆದಂದು ಪೇಳಿ ಪಾತಾಳಕ್ಕೆ ಪುರುಷಮಿಳೆಯೆ ದುಃಖಿತನಾಗಿರ್ದನು.

ಇತ್ತಲುತ್ತರ ಮಧುರೆಯೊಳ್ ಸಾಕಾರರಾಯಮ ದುಶ್ಚಾರಿತ್ರದೊಳುದುಂಬರ ಕುಷ್ಠಂ ಶರೀರದೊಳೆ ಪುಟ್ಟಿ ಪುಳಿತು ಮೋಟನಾಗಿ ಸತ್ತು ದುರ್ಗತಿಗೆ ಸಲ್ವುದುಮಲ್ಲಿಗೊರ್ವ ಮಗನಂ ಕಳುಹಿಸಿರ್ದುದರಂ ಕಿರಯ ಮನಂಗೆ ಪೊಂಬಚ್ಚುಪುರಮಂ ರಾಜ್ಯಮುಮಂ ಕೊಟ್ಟು ಜಿನದತ್ತರಾಯಂ ತಪದಿಂ ಸದ್ಗತಿಪ್ರಾಪನಾದಲ್ಲಿಂದಿತ್ತ ಕೇರಳ ಕಾಶ್ಮೀರ ಕಾಂಭೋಜ ಅಂಗ ವಂಗ ಪಾಂಡ್ಯ ಮೊದಲಾದ ದೇಶಾಧೀಶ್ವರರೆಲ್ಲಂ ಜಿನಧರ್ಮಮಂ ಪ್ರತಿಪಾಲಿಸುತ್ತರ್ದ ಕಾಲರೋಷದಿಂ ಮಿಥ್ಯಮಂ ಪೊರ್ದಿ ಜಿನಧರ್ಮಂ ಕ್ರಮದಿಂ ಕುಂದುತ್ತುಂಬರೆ ಚುತುರ್ಥಕಾಲದಿಂದತ್ತಲೀ ಭರತಕ್ಷೇತ್ರದೊಳ್ ಪರ್ವತಂಗಳಲ್ಲಿ ನದಿಗಳ ಸಮೀಪಂಗಳೊಳರಣ್ಯಂಗಳ್ ಮೊದಲಾ ಮಹಾಸ್ಥಾನಂಗಳೊಳ್ ಅನಾದಿ ಸಂಸಿದ್ಧದಿಂದಕೃತ್ರಿಮ ಚಥಯ್ಯಾಲಯಂಗಳ್ ರಜತ ಸುವರ್ಣ ರತ್ನಮಯಂಗಳಿರ್ದು ಕಾಳದೊಷದಿಂ ವೀರಸ್ವಾಮಿಗಳಿಂದಿತ್ತ ಮನುಷ್ಯರ್ಗೆ ಕಾಣದಂತೆ ವಾನವ್ಯಂತರದಿಂ ಪೂಜೆಯಂ ಕೊಳ್ಳುತ್ತುಂ ಮರೆಗರೆವುದುಂ ಧಾರ್ಮಿಕರಾದ ಕ್ಷತ್ರಿಯ ವೈಶ್ಯಾದಿಗಳ್ ತಂತಮ್ಮ ಶಕ್ತಿಗೆ ತಕ್ಕಂತು ಗ್ರಾಮ ಪುರ ಖೇಡ ಮಂಡಂಬ ಪತ್ತನ ದ್ರೋಣಾಮುಖಾದಿಗಳೊಳ್ ವನಂಗಳೊಳ್ ಪರ್ವತಾದಿಗಳೊಳ್ ಮಹಾಕೂಟ ತ್ರಿಕೂಟ ಪಂಚಕೂಟಾದಿ ಮಹಾಪೂತ ಸಿದ್ಧಕೂಟಾದಿ ಜಿನಾಲಯಂಗಳಂ ಮಾಡಿಸಿ ಗ್ರಮ ಕ್ಷತ್ರಾದಿಗಳಂ ಶಾಸನ ದತ್ತಮಾಗಿ ಕೊಟ್ಟಿರ್ಪರವರೊಳ್ ಸಮ್ಯಗ್ದೃಷ್ಟಿಯಪ್ಪ ಚಾತುರ್ವರ್ಣಂಗಳ್ ದಾನ ಪೂಜೆ ಶೀಲೋಪವಾಸಂಗಳಿಂ ಪುಣ್ಯೋಪಾರ್ಜನೆಯಂ ಮಾಡುತ್ತಮಿರ್ದರ್.

ಇತ್ತಲ್ ನಗರಪುರದೊಳ್ ಚಂಡವಿಕ್ರಮನೆಂಬರಸು ಸಾಮಂತಮ ನಿಂಬದೇವನೆಂಬಂ ಸಮ್ಯಗ್ದೃಷ್ಟಿಯಾಗಿ ಅಣುವ್ರತಧಾರಿಯಪ್ಪದರಿಂ ಕಾಷ್ಠಕಥಪಾಣಮಮ ಪೊರೆಯಿಳಿಟ್ಟು [ವೋಲಯ] ಸುತ್ತಿರೆ ದುರ್ಜನರೀತನಂ ಪರಭವಿಸಲೆಂದು ಮಿಥ್ಯಾದೃಷ್ಟಿಯಪ್ಪರಸಂಗಂ ಪೇಳ್ವುದುಂ ಪರೀಕ್ಷಸಲ್ ತಮ್ಮ ತಮ್ಮ ಕೃಪಾಣಂಗಳಂ ಸಭೆಯೊಳ್ ಕಾಣಿಸುತ್ತಂ ನಿಂಬದೇವಸಾಮಂತನಂ ನಿನ್ನ ಕತ್ತಿಯಮ ತೋರುವುದೆಂಬುದುಂ ಭಯಸ್ಥನಾಗಿ ಪಮಚನಮಸ್ಕಾರಮಂ ನೆನೆಯುತ್ತೆ ದೃಢವ್ರತನಪ್ಪುದರಿಂದೀ ಉಪಸರ್ಗಂ ಪಿಂಗುವನ್ನ ಮಹಾರಶರೀರನಿವೃತ್ತಿಯಗೆಯ್ದಿ ಪ್ಪಿನಮರಸನಾಗ್ರಹದಿಂ ತೆಗೆಯಿಸುವಲ್ಲಿ ಜಿನಶಾಸನದೇವಿ ಪದ್ಮಾವತಿಯಾ ಕಾಷ್ಠಮಾಂ ನಿಶಿತಮಾದ ಜಾಜ್ವಲ್ಯಮಪ್ಪ ಖಡ್ಗರತ್ನಮಾಗೆ ನಿರ್ಮಿಸಿ ತೋರೆಯರಸಂ ಭಯಗೊಂಡು ಪೊರೆಯೊಳಿಕ್ಕಿಸಿ ತನಗೆ ಪೇಳ್ದರ್ಗೆ ಶಿಕ್ಷಯಂ ಮಾಡಲ್ ಬಗೆವುದುಂ ಸಾಮಂತಂ ತನ್ನ ವ್ರತಮಹಾತ್ಮೆಯಂ ಪೇಳ್ದು ಶ್ರಾವಕವ್ರತನಿರತನಾದಂ.

ಮತ್ತಂ ಶಕವರುಷಣ ೩೦೦ ಸಂದಂದು ಕರ್ಣಾಟಕದೊಳ್ ಕೊಳ್ಳಾಗಾಲಮೆಂಬ ಪುರದೊಳ್ ಮಾಧವಭಟ್ಟನೆಂಬ ಬ್ರಾಹ್ಮಣನ ಹೆಂಡತಿ ಶ್ರೀದೇವಿಯೊಂಬೊಳ್ಗೆ ಗರ್ಭಮಪ್ಪುದುಂ ಜಿನಸಮುದಾಯದೊಳ್ ಶ್ರದ್ಧೆ ಪುಟ್ಟಿ ವ್ರತ ನೊಂಪಿ ದಾನ ಪೂಜಾ ಶೀಲೋಪವಾಸಾದಿಗಳಂ ಮಾಡಲರ್ತಿ ಪುಟ್ಟಿಯಲ್ಲಿ ಚೈತ್ಯಾಲಯಕ್ಕೆಯ್ದಿ ಧರ್ಮಾಚಾರರೊಳ್ ಪರಮಾಗಮಮಂ ಕೇಳ್ದು ಸಮ್ಯಕ್ತ್ವಂ ದೊರೆಕೊಳೆ ಮಾಧವಭಟ್ಟಂ ತನ್ನ ಮೈದುನಂಬೆರಸೈದು ಸಂತಾನದವರ್ ದೀಕ್ಷಾನ್ವಯಕ್ರಿಯೆವಿಡಿದು ಜಿನಮತಮನಾಚರಿಲಾ ಶ್ರೀದೇವಿಯಂ ಗರ್ಭಂ ಬೆಳೆದು ನವಮಾಸಂ ನೆರೆಯೆ ಶ್ರವಣ ನಕ್ಷತ್ರದೊಳ್ ಪೆಸರಿಟ್ಟು ಸಲಹಿದೊಡೆ ಜೈನಶಾಸ್ತ್ರಂಗಳೊಳ್ ಬಲ್ಲಿದನಾಗಿ ಬಾಲಕಾಲ ದೊಳೆ ಜಿನದೀಕ್ಷೆಯಂ ತಾಳಿ ದಕ್ಷಿಣ ದಿಗ್ಭಾಗದ ಶಿಲೋದ್ಚಯದೊಳ್ ತಪಂಗೆಯ್ಯುತ್ತಿರ್ದಲ್ಲಿ ಚೈತ್ಯಾಲಯದೊಳಿಪ್ಪ ಶ್ರೀಪಾರ್ಶ್ವಜಿನಪ್ರತಿಮೆಯಂ ವಂದಿಸುತ್ತಮಿಪ್ಪುದುಮಾ ಸಮೀಪದ ಮುಡಿಗುಂಡಮೆಂಬ ಗ್ರಾಮದೊಳ್ ಪಾಣಿನ್ಯಾಚಾರ್ಯನೆಂಬ ಬ್ರಾಹ್ಮಣಂ ವ್ಯಾಕರಣಶಾಸ್ತ್ರಮಂ ಮಾಡಲೆಂದು ಪ್ರಾರಂವಿಸಲಾ ಸೂತ್ರ ಪೂರ್ಣವಾಗುವುದರೊಳಗೆ ಆತಂಗವಸಾನಕಾಲಂ ಬರೆ ಪೂಜ್ಯಪಾದಂಗೀ ವ್ಯಾಕರಣಂ ನಿನ್ನಿಂದಂ ಸಂಪೂರ್ಣಮಪ್ಪುದಿದಂ ನಿರ್ವಹಿಸುವದೆಂದು ಕೇಳ್ವುದುಂ ಪೂಜ್ಯಪಾದಂ ತಮ್ಮ ಸೋದರ ಮಾವನಪ್ಪ ಪಾಣಿನ್ಯಾಚಾರ್ಯಗಂತೆ ಮಾಳ್ವನೆಂದು ಬೋಧಿಸಿ ಬದು ಒಂದು ನಿಲ್ವುದುಂ ಪಾಣಿನ್ಯನೆಂದರಿದು ತಿರುಗಿ ಯೋಗಸ್ಥಾನಮಪ್ಪ ಪರ್ವತಕ್ಕೆ ಬಂದು ಜೈನೇಂದ್ರವ್ಯಾಕರಣಸೂತ್ರಮಂ ರಚಿಸಿ ತದನಂತರಂ ಪಾಣನಿ ಸೂತ್ರವೃತ್ತಿಯಂ ರಚಿಸಿದಂ, ಧರಣೀಂದ್ರ ಪದ್ಮಾವತಿಗಳಾ ಮುನಿಪನ ತಪೋಬಲಕ್ಕಂ ಮೆಚ್ಚಿ ಬೆಸಗೆಯ್ಯತ್ತಮಿರೆ ಬಳಿಕೊಂದು ದಿವಸದೊಳ್ ಕೊಳ್ಳಾಗಾಲಕ್ಕಂ ಬಾವಲಿಗೆವರೆ ಆ ಮುನೀಂದ್ರನ ಮುನ್ನಿನ ತಂಗಿ ಪತಿವಿಯೋಗದೊಳೆ ಅತ್ಯಂತ ದಾರಿ – – – – ಬಂದು ತನಗುಳ್ಳ ನಾಗಾರ್ಜುನನೆಂಬೋರ್ವ ಮಗನಂ ದ್ವಜಕರಾಳ ಕರುಗಳಂ ಕಾಯಿಸಿ ಉದರಮಂ ಪೊರೆಯುತ್ತಿಪ್ಪಳ್ ಚರಿಗೆವರ್ಪ ಮುನೀಂದ್ರನಮ ಕಂಡು ಶ್ರದ್ಧಾದಿ ಗುಣದಿಂ ವಿಧಿಪೂರ್ವಕಮಾಗೆ ಶುಷ್ಕಾಹಾರಂಗೊಟ್ಟು ನಿರಂತರಾಯಮಾಗೆ ಪರಸಿಪೋಪ ಋಷಿಯರಂ ಬಂದಿಸಿ ತನ್ನ ಬಡತನ ಬಲ್ಲನೆಲ್ಲಂ ಪೇಳಿಯರುದಿಂಗಳಿಂದುಪ್ಪಿಗೆ ಬಗೆಗಾಣದೆ ಸಪ್ಪೆಯಂ ಕೊಳ್ವನೆನ್ನ ಬಡತನಂ ಪಿಂಗುವಂತೆ ಕಟ್ಟುಮಾಡೆಂದೊಡೆ ಪೂವ್ದೊಳುಪಾರ್ಜಿಸಿದ ಪಾಪೋದಯಮದರಿಂದೀಗಲ್ ಬಯಸಲೆಂತಪ್ಪುದಿನ್ನಾದೊಡಂ ದಾನ ಪೂಜೆ ಶೀಲೋಪವಾಸಮಂ ನಿರ್ವ್ಯಾಜದಿಂ ಮಾಡಿದೊಡೈಶ್ಚರ್ಯಂ ದೊರಕೊಳ್ಗುಮೆನೆ ನಾನೀಗಳತ್ಯಂತ ದರಿದ್ರೆಯ ದಾನ ಪೂಜಾದಿಗಳಂ ಮಾಳ್ವೆನೆಂಬುದು ಬಂಜೆಯ ಮಗಂಗೆ ಮದುವೆಯಂ ಮಾಳ್ವೆನೆಂಬೆಗ್ಗನಂ ಪೋಲ್ಕುಮೆಂದು ದುಃಖಬಡೆ ಮುನಿಪಂ ಕರುಣಿಸಿ ಲೋಕಮಾವುದೊಂದಿರ್ದೊಡೆ ತಪ್ಪುದೆನೆ ತಳಿಗೆ ಚಂಬು ಕೊಡಲಿ ಕಬ್ಬುನಾದಿಗಳೊಂದಿಮಿಲ್ಲದಿರೆ ನಾಗಾರ್ಜುನನೆಂಬ ಹುಡುಗನುಣ್ಣುದೊಂದು ಕಬ್ಬಿನದ ಬಟ್ಟಲನೀಯಲದಂ ತಮ್ಮ ಕಥಯಿಂ ಪೊಸಿ ಒಲೆಯೊಳೆರಡು ಜಾವಮಿಟ್ಟಿರ್ದು ತೆಗೆಯಲಾಣಿಯಪ್ಪುದೆಂದು ಮುನಿಪಂ ಯೋಗಸ್ಥಾನಕ್ಕೆ ಪೋಗಲಿತ್ತ ಕರುಗಾಯಲ್ ಪೋಗಿರ್ದ ನಾಗಾರ್ಜುನನುಣಲ್ ಬಂದು ಬಟ್ಟಲಂ ಕಾಣದೆ ಚಂಡಿಯಂ ಮಾಡಿದೊಡೆ ನಿಜಮಾತೆಯಿಂತೆದಳ್ ; “ನಿಮ್ಮ ಸೋದರಮಾವನಪ್ಪ ಯತೀಂದ್ರನೆನ್ನ ಬಡತನಮಂ ಕೇಳಿ ಬಲೆಯೊಳಿಡಿಸಿ ಪದಿನಾರು ಘಳಿಗೆಗೆ ಸುವರ್ಣಮಪ್ಪುದೆಂದು ಪೋದರೆನೆ ನೋಡಲೆಂದು ನಾಗಾರ್ಜುನನೊಂದು ಜಾವದೊಳೆ ತೆಗೆಯಲೆಂಟು ಬಣ್ಣ ಬಂದಿರಲಾ ವಿದ್ಯಮಂ ಕಲಿಯಲೆಂದು ಮುನಿಪನಲ್ಲಿಗೆಯ್ದಿ ಪದ್ಮಾವತಿಯ ಮಂತ್ರಾಕ್ಷರಮಂ ಜಪಿಸೆಂದುಪದೇಶಂ ಮಾಡೆ ಚರಿಸುತ್ತ ನೀಲಾಚಲದುತ್ತರಕರ್ಣಾಟ ಮಧ್ಯದೊಳಿರ್ದ ಪರ್ವತ, ದಕ್ಷಿಣಭಾಗದೊಳಿರ್ದ ಗುಹೆಯ ಬಾಗಿಲೊಳ್ ಶ್ರಮದಿಂದೊರಗಿರ್ದನಲ್ಲಿರ್ದ ಪದ್ಮಾವತಿಯು ಪ್ರತ್ಯಕ್ಷಮಾಗಿ ಸಿದ್ಧರಸಪ್ರಯೋಗಮಂ ತೋರೆ ಕಲ್ತು ತದ್ಗಿರಿಯಂ ಕನಕಗಿರಿಯಂ ಮಾಡಲೆಂದುದ್ಯೋಗಿಸೆ ಬ್ರಹ್ಮದೇವಂ ಬಂದು ಮಾಣಿಸೆಯಾ ಪರ್ವತಕ್ಕೆ ಹೇಮಗರಿಯೆಂಬನ್ವರ್ಥಮಂ ಮಾಡಿಯದರದೊಳೆ ಪಾರ್ಶ್ವಜಿನ ಚೈತ್ಯಾಲಯಮಂ ನಿರ್ಮಿಸಿ ಬ್ರಹ್ಮ ಪದ್ಮಾವತಿ ಪ್ರತಿಷ್ಠೆಯಂ ಮಾಡಿ ಎಂಟು ಗ್ರಾಮಮಂ ದೇವತಾವಿನಿಯೋಗಕ್ಕಂ ಶಾಸನದತ್ತಮಾಗೆ ಕೊಟ್ಟು ಬಾವಿ ಕೊಳ ಪೂದೋಟಾದಿಗಳಂ ನಿರ್ಮಿಸಿ ಕೆಲವು ದೇಶಕ್ಕೆ ತಾನೇ ಪ್ರಭುವಾಗಿ ಯಂತ್ರ ಮಂತ್ರ ತಂತ್ರಾದಿಗಳಂ ಕಲ್ಪಸೆ ಸೈರಿಸದೆ ಕೊಲಲ್ ಬಗೆದು ಸಕಲ ವಿದ್ಯಾಪರಿಣತೆಯಪ್ಪ ಈರ್ವರ್ ಸ್ತ್ರೀಯರಂ ಕಳುಹಿಸಿದೊಡವರ್ ಬಂದು ತಮ್ಮ ವಿದ್ಯಮಂ ತೋರ್ಪುದುಮವರಂ ಪರಿಗ್ರಹಿಸಲವರ್ ಮತಿಭ್ರಂಶಮಪ್ಪ ಮದ್ದನಿಕ್ಕುವುದುಮಿವರಿಂ ತನಗಪಾಯಮಕ್ಕುಮೆಂದರಿದು ಘಂಟಿಕೆಯಂ ಬಾಯೊಳಿಟ್ಟು ಬಿಡದುರ್ಪುದುಮೊಂದು ದಿನಂ ಕೆಲಂವರ್ ರಾಜರ್ ಬಂದೀತನ ಮತಿಭ್ರಂಶಮಂ ತಿಳಿದು ಸಮರಮನೊಡರ್ಚೆ ಹಿಮಗಿರಿಯೆಂಬ ಬೆಟ್ಟಮನೇರಿಯಲ್ಲಿ ಪುರಮಂ ಮಾಡಿಸಿ ಗೋಪಾಲದೇವರಂ ಗುಡಿಯಿಂ ನಿರ್ಮಿಸಿ ಕೆಲದಿನಮಿರ್ದಲ್ಲಿ ಸ್ತ್ರೀಯರ್ ಒಡವರೆ ಶ್ರೀಶೈಲಮನೆಯ್ದಿದನಲ್ಲಿ ಪೂರ್ವ ಮಹಾತ್ಮೈಮೆಂತೆಂದೊಡೆ.

ಪೂರ್ವದೊಳನೇಕ ಋಷಿಗಳಾವಾಸಮಾಗಿರ್ದುದರಿಂ ಋಷಿನಿವಾಸಗಿರಿ ಯೆಂಬನ್ವರ್ಥನಾಮಂ ಬಹುಕಾಲಂ ವರ್ತಿಸುವಲ್ಲಿ ಸಮಪೂಜ್ಯತೀರ್ಥದೊಳ್ ಚಂಪಾಪುರದ ಯಶೋಧರಮಹಾರಾಜನನೇಕ ದೇಶಮಂ ಸಾಧಿಸಿ ಬಂದು ಪ್ರತಿಪಾಲಮೆಂದೊಂದು ಪಟ್ಟಣಮಂ ಮಾಡಿಸಿ ರಾಜ್ಯಂಗೆಯ್ದು ಶ್ರೀಧರನೆಂಬ ಮಗಂಗೆ ರಾಜ್ಯಮಂ ಕೊಟ್ಟು ತಪಮಂ ಕೈಕೊಳ್ಳದುಂ ಶ್ರೀಧರಂ ರಾಜ್ಯಮನೊಲ್ಲದೆ ಆ ಗಿರಿಯೊಳ್ ದ್ವಾದಶ ವಿಧ ತಪಂಗೆಯ್ದುಮಾ ಋಷಿವಾಸ ಪರ್ವತದೊಳೆ ಮುಕ್ತಿಯಂ ಪಡೆವುದುಮಾ ಶ್ರೀಧರಮುನೀಂದ್ರರ ನಿರ್ವಾಣಪೂಜೆಗೆಯಾ ಗಿರಿಗೆ ಶ್ರೀಪರ್ವತಮೆಂದು ಪೇಳ್ವುದುಮಲ್ಲಿಂದಿತ್ತಲಾ ಗಿರಿಗೆ ಶ್ರೀಶೈಲಮೆಂಬ ಪೆಸರಾಯ್ತು. ತದ್ಗಿರಿಯ ದಕ್ಷಿಣ ಭಾಗದೊಳ್ ವಟವೃಕ್ಷದಡಿಯೊಳ್ ಕೇವಲಜ್ಞಾನಮ ಪುಟ್ಟಿ ಮುಕ್ತರಾದುದರಿಂ ಸಿದ್ಧವಟವೆಂಬ ಪೆಸರಾಯ್ತು.

ತದ್ಗಿರಿಯೊಳಿರ್ದ ಮಲ್ಲಿಕಾಲತಾವೇಷ್ಟಿತಮಪ್ಪರ್ಜುನವೃಕ್ಷದಡಿಯೊಳ್ ಶ್ರೀಧರ ಮುನಿ ತಪದಿಂ ಸಪ್ರರ್ಧಿ ಪುಟ್ಟಲಂದು ಖೇಚರರ್ ಮಲ್ಲಿಗೆ ಮಾಲತಿ ಚಂಪಕಾದಿ ಕುಸುಮಂಗಳಿಂ ಮಾಲೆಗಳಿಂ ಪೂಜಿಸಿದುರದರಿಂದಾ ಸ್ಥಾನಕ್ಕೆ ಮಲ್ಲಿಕಾರ್ಜುನೆಮಂಬ ಪೆಸರಾಯ್ತು. ಇಂದ್ರಪ್ರಭನಾ ಮುನಿಯಂ ಛದ್ಮಿಸಲೆಂದು ವೃದ್ಧರ್ ಬಂದಿರ್ದು ತಮ್ಮಂ ಪ್ರಶಂಸೆಗೆಯ್ಯಲ್ ವೃದ್ಧಗಿರಿಯೆಂದಾಯ್ತು. ಆ ಋಷಿಪುತ್ರನಪ್ಪ ಯಶೋಧರನ ಮೈದುನರ್ ವಿನೋದದಿಂ ಮುಂಡಿವಂಶಜನೆಂದು ಯಶೋಧರನಂ ಕರೆಯಲಾ ವಂಶಂ ಮುಂಡಿವಂಶಮೆಮದಾಯ್ತು, ಮುಂಡಿವಂಶಜನೆಂದಾ ಯಶೋಧರನಂ ಕರೆದರ್.

ಇಂತು ವರ್ಧಮಾನ ತೀರ್ಥಾವತಾರದೊಳೆ ಆಸ್ಥಾನಂ ಪ್ರಸಿದ್ಧಯಂ ಪಡೆದಲ್ಲಿ ತ್ರಿಕೂಟ ಸಿದ್ಧಕೂಟಮೆಂಬ ಜಿನಾಲಯಮಿರ್ದವು ಅಂತಿರ್ಪಿನಮ ಹೇಮಾಂಗಮಹಾರಾಜನ ಮಂತ್ರಿ ಬೌದ್ಧಮತಾನುಸಾರಿಯಾದುದರಿಂದಾತನ ಗುರವಪ್ಪ ಸಂಘಶ್ರೀಯ ಶಿಷ್ಯಮ ಬಂಧುಶ್ರೀಯಂ ವಶೀಕೃತಂ ಮಾಡಿ ಬೌದ್ಧರನಾ ದೇಶದೊಳೆ ಪ್ರಬಲನಾಗಿರ್ದರವರೆಲ್ಲರ್ ಹೇಮಶೀತಲಮಹಾರಾಜನ ದಿವಸದೊಳೆ ಸಿಂಗಳದ್ವೀಪಕ್ಕೆ ಪೋದಿಂ ಬಳಿಕ್ಕಮಾ ಗಿರಿದೊಳಿರ್ದ ಚೈತ್ಯಾಲಯಂಗಳ್ ಪೋರ್ಗಿಪಿನಂ ಕೆಲವು ದಿನಸದಿಂ ನಾಗಾರ್ಜುನಂ ಸ್ತ್ರೀಯರ ಪ್ರೇರಣೆಯಿಂ ಮೆತಿಗೆಟ್ಟು ತಿರುಗುವಲ್ಲಿ ಶ್ರೀಶೈಲಕ್ಕೆ ಪೋಗೆ ಈ ಸ್ಥಾನದ ಪೆಸರೊಳೊಂದು ದೇವರಿರಬೇಕೆಂದೊಂದು ಶಿಲಾಪ್ರತಿಷ್ಠೆಗೆಯ್ದು ಮಲ್ಲಿಕಾರ್ಜುನಲಿಂಗಮೆಂದು ಪೂಜಿಸಿದರ್. ಆ ನಾಗಾರ್ಜುನಂ ಮೊದಲ್ ಈ ಗುಡಿ ಬಾಗಿಲಿಗೆ ಸಿದ್ಧರಸಪ್ರಯೋಗದಿಂ ಗಂದೊಟ್ಟಿಗೆಯಂ ಮಾಡಿಸಿರ್ದು ತಾನುತ್ತದೇಶಮನೆಯ್ದಿ ಅಲ್ಲಿ ಒಂದೆರಡು ಬೆಟ್ಟಮಂ ಚಿನ್ನಮಂ ಮಾಳ್ವೆನೆಂದು ಸಿದ್ಧರಸದಿಂ ಪುಟವಿಕ್ಕಿದೊಡೆ ಹರಿತಾಳಂ ಮೊದಲಾದ ಗೈರಿಕಾದಿ ಧಾತು ಮುರದಾನ ಶೃಂಗಿಯೆಂದಾಯ್ತು.

ಮತ್ತಮೀ ಪ್ರಕಾರದೊಳೆ ದೇಶಾಟನಂ ಮಾಳ್ವಲ್ಲಿ ಒಂದೆಡೆಯಲ್ಲಿ ಘಂಟಿಕೆಯ ನುಗುಳಿಯುಶುಚಿಗೆ ಪೋಗಲಾ ಸಮುದಾಯದೊಳಾ ಸ್ತ್ರೀಯರ್ ಕಾಯ್ದಿರ್ದು ಪೊಯ್ದುದುಂ ಸಿದ್ಧರಸಪ್ರಯೋಗಮಮಾಗುತ್ತೆ ತಲೆ ಪರಿದು ಬಿದ್ದುದಾ ಶ್ತ್ರೀಯರ್ ತಮ್ಮ ದೇಸಕ್ಕೆ ಪೋದರಿತ್ತ ಪೂಜ್ಯಪಾದಯಂತೀಂದ್ರಂ ಪದಿನಾಡಿನೊಳ್ ತಪಂಗೆಯ್ವುತ್ತ ತೀರ್ಥವಂದನೆಯಮ ಮಾಡಲೆಂದು ಆಂಧ್ರ ಕರ್ಣಾಟ ಚೋಳ ಪಾಂಡ್ಯ ಮೊದಲಾದೆಲ್ಲಾ ದೇಶಂಗಳಂ ವಿಹಾರಿಸಿ ಕಾಂಗೆರೆಯಾ ಶೈಲಕ್ಕಂ ಬಂದು ಜಿನಾಗಮಮಂ ಕೆಲವಂ ನೋಡಿ ತಿಳಿದುಪದೇಶಮಂ ಮಾಳ್ವರಿಲ್ಲದೆ ಕೆಲವು ಸಿದ್ಧಾಂತಂ ಮರೆಗರೆದಿದ್ದುದರಿಂ ಸಂದೇಹಗ್ರಹಸ್ತಮಾಗೆ ಪೂರ್ವವಿದೇಹಕ್ಕೆ ಪಾದಲೇಪೌಷಧಿ ಸಾಮರ್ಥ್ಯದಿಂ ಪೋಗಿ ಸಮವಸರಣದೊಳಿರ್ದ ಶ್ರೀ ಜಿನಪತಿಗಳಂ ಬಂದಿಸಿ ತತ್ವಮಂ ನಿಸ್ಸಂದೇಹಮಾಗರಿದಲ್ಲಿಯೆ ಪುಸ್ತಕದೊಳ್ ಬರೆದುಕೊಂಡು ದೈವಾಯುತ್ತದಿಂ ಭರತಕ್ಷೇತ್ರಮನೆಯ್ದುವಲ್ಲಿ ಸೂರ್ಯ ಕಿರಣೋಷ್ಣದಿಂ ದೃಷ್ಟಿಪೋಗೆ ಬಂಕಾಪುರಮೆಂಬುದರೊಳ್ ಶಾಂತೀಶ್ವರರಂ ಬಂದಿಸಿ ಶಾಂತ್ಯಷ್ಟಕಮಂ ಪೇಳಿ ದೃಷ್ಟಿಯಮ ಪಡೆದು ಬಂದು ಸಿದ್ಧಾಂತಮಂ ಶಿಷ್ಯರ್ಗಮುಪದೇಶಂಗೆಯ್ದು ಲೌಕಿಕ ಪಾರಮಾರ್ಥಗಳಂ ರಚಿಸಿ ಸುಗತಿಪ್ರಾಪ್ತರಾದರ್.

||ಸ್ರ || ಭರದಿಂ ಜೈನೇಂದ್ರಮಂ ಭಾಸುರಮೆನಲೊರೆದಂ ಪಾಣನೀಯಕ್ಕೆ ಟೀಕಂ
ಬರೆದು ತತ್ವಾರ್ಥಮಂ ಟಿಪ್ಪಣದಿನರುಪಿದಮ ಯಂತ್ರ ಸನ್ಮಂತ್ರ ವಿದ್ಯೋ
ತ್ಕರಮಂ ಭೂರಕ್ಷಣಾರ್ಥಂ ವಿರಚಿಸಿ ಜಸಮಂ ತಾಳ್ದಿದಂ ವಿಶ್ವವಿದ್ಯಾ
ಭರಣಂ ದೇವ್ಯಾಳಿಯಾರಾಧಿತ ಪದಕಮಲಂ ಪೂಜ್ಯಪಾದವ್ರತೀಂದ್ರಂ ||

ಶ್ರೀ ಪೂಜ್ಯ ಪಾದಮುನಿರಪ್ರಮೌಷಧಿರ್ದಿ
ರ್ಜೀಮಾದ್ವೀದೇಹ ಜಿನದರ್ಶನಪೂತಗಾತ್ರಃ
ಯತ್ಪಾದಧೌತ ಜಲಸಂಸ್ಪರ್ಶ……. ಪ್ರಭಾವಃ
ಕಾಲಾಯ ಸಂಕಲತ….. ದಾತನಕೀಚಕಾರ
||

ಪಿಂದೆ ಆಚಾರಾಂಗಧರ ಕಲ ೨೧೮ ವರುಷದಂದು ಮಂಗ ಪೂರ್ವದೇಶಧರರಾದ ವಿನಯಂಧರ ಶ್ರೀದತ್ತ ಶಿವದತ್ತ ಅರ್ಹದ್ದತ್ತರೆಮಬಾರಾತಿಯಾಚಾರ್ಯರ್ ಸುಭದ್ರ ಯಶೋಭದ್ರ ಯಶೋಬಾಹುಮೆಮಬಿವರ್ ಪೂರ್ವಾಂಗಧಾರಿಗಳ್ ಮಾಘನಂದಿಗಳ್ ಪುರ್ವಂಶಮಂ ಬಲ್ಲಂಥಾವರ್ ಸಿದ್ಧಾಂತಿಗಳಾಗಿ ತಫೋಭರಮನಾಂತಿರ್ದು ಚಾರಿತ್ರಂ ಗೆಟ್ಟಿರ್ದು ಪುನರ್ದಿಕ್ಷೇಯಿಂ ಸಿದ್ದಾಂತಿಗಳಾಗಿರ್ದರ್.

ಮತ್ತಂ ಶ್ರೀಪುಂಡ್ರವರ್ಧನಪುರದೊಳ್ ಪುಟ್ಟಿದ ಧರಸೇನರೆಂಬ ಯತೀಶ್ವರರ್ ಸರ್ವಾಂಗ ಪೂರ್ವದೇಶೈಕ ದೇಶವಿಜ್ಞಾನಿಗಳ ತತ್ಪ್ರಸ್ಥಾರಣ ಧಾರಣಾ ವಿಶುದ್ಧಾತಿ ಸತ್ಕ್ರಿಯಾದ್ಯುಕ್ತರುಂ ಅಷ್ಟಾಂಗ ನಿಮಿತ್ತಜ್ಞರುಂ ಸಂಘಾನಿಗ್ರನಿಗ್ರಹ ಸಮರ್ಥರುಂ ಸಂವತ್ಸರ ಪಂಚಕಾವಸಾನೆ ಯುಗಪ್ರತಿಕ್ರಮಣಮಂ ಮಾಡಿ ನೂರು ಯೋಜನ ಮಾತ್ರವರ್ತಿ ಮುನಿಜನ ಸಮಾಜಪತಿಗಳಾಗಿರ್ದು ತಾಮುಂ ಯುಗಪ್ರತಿಕ್ರಮಣದೊಳೆ ಮುನಿಸಮೂಹಂಗಳೆಲ್ಲ ಬಂದು ವಂದಿಸಿ ನಿಲ್ವನಮೆಲ್ಲಮಂ ಯೋಗಾದಿಗಳಿಂ ಕ್ಷೇಮಮೆಯೆಂದು ಬೆಸಗೊಳೆ ತಾವುಂ ತಮ್ಮ ತಮ್ಮ ಸ್ವಕೀಯ ಶಿಷ್ಯರ್ವೆರಸು ಪರಿಣಾಮಮೆಂಬುದುಂ ದುಷ್ಟಮ ಕಲಿಯುಗದಿಂದಿಲ್ಲಿಂದಿತ್ತಲ್ ಜಿನಧರ್ಮಂ ಪಕ್ಷಪಾತದಿಂ ವರ್ತಿಪುದೆಂದರಿದು ಕೆಲಂಬರಂ ನಂದಿಸಂಘಮೆಂದು ವೀರಾಕ್ಯಮೆಂದುಮಶೋಕವಾಟದಿಂ ಬಂದಿರ್ದರುಮಂ ಕೆಲಂಬರನಪರಾಜಿತರೆಂದು ದೇವಾಹ್ವಯರೆಂದುಂ ಪಂಚಸ್ತೂಯೆಯಿಂ ಬಂದಿರ್ದರಮ ಕೆಲಂ ಸೇನಾಭಿದನರುಂ ಭದ್ರಾಖ್ಯರೆಂದುಂ ಶಾಲ್ಮಲಿ ಮಹಾದ್ರುಮಗಳತ್ತಣಿಂ ಬಂದರಂ ಕೆಲಂ ಗುಣಧರಾಭಿಧಾನರೆಂದು ಗುಪ್ರಾಹ್ವಯರೆಂದು ಕೇಸರದ್ರುಮದತ್ತಣಿಂ ಬಂದಿರ್ದರಂ ಕೆಲಂಬರಂ ಸಿಂಹ್ವಾಭುಖ್ಯರೆಣದುಂ ಚಂದ್ರಾಜ್ವಯರೆಂದುಂ ನೇಮಿಸಿದರ್.

ವೃತ್ತ || ಅಯಾತಾನಂದಿವೀತಾ ಪ್ರಕಟಗಿರಗುಹಾವಾಸತೋಶೋಕವಾಟಾ
ದ್ವೇವಶ್ಚಾನ್ಯೋಪಾರಿರ್ಜಿತ ಯತಿಯತಿಪೋ ಸೇನಭದ್ರಾಹ್ವಯೌ ಚ
ನ್ನಿರ್ಯಾತೌಸಿಂಹಚಂದ್ರೌ ಪ್ರಥಿತ ಗುಗಣೌ ಕೇಸರಾತ್ ಖಂಡಪೂರ್ವಾತ್ ||

ಅನ್ನೇಜಗುರ್ಗಹಾಯಾನಿರ್ಗತಾನಂದಿನೋ ಮಹಾತ್ಮಾನಃ
ದೇವಾಶ್ವಾಶೋಕವನಾಪೀ (
?) ಪಂಚಸ್ತೂಪ್ಯಾಸ್ತಧಾಸೇನಾಃ
ವಿಪುಲತರ ಶಾಲ್ಮ ಲೀದ್ರುಮ ಮೂಲಗತಾವಾಸಿಶಿನೋಧೀರಾಃ
ಭದ್ರಾಶ್ಚಿಖಂಡಕೇಸರತರು ಮೂಲನಿವಾಸಿನೋ ಜಾತಾಃ ||

ಗುಹಾಯಾಂ ವಾಸಿತೋ ಜೈಷ್ಠೋದ್ವಿತಿಯೋSಕವಾಟಕಾತ್
ನಿರ್ಯಾತೋ ನಂದಿದೇವಾಭಿಧಾನವಾದ್ಯಾವನುಕ್ರಮಾತ್
ಖಂಡಕೇಸರನಾಮಾ ಚ ಭದ್ರಸಂಘಸ್ಯ ಸಮ್ಮತಃ ||

ಈ ಪ್ರಕಾರದೊಳ್ ಅರ್ಹದ್ಬಲ್ಯಾಚಾರ್ಯರ್ ಸಂಘಪ್ರರ್ತಕರಾಗೆಯನಂತರ ಮನಗಾರಪುಂಗವ ಮಾಘನಂದಿಗಳಂಗಪೂರ್ವದೇಶಪ್ರಕಾರವಾಗಿ ದಿವಕ್ಕೆ ಸಲೆ.

ಸುರಾಷ್ಟ್ದೇಶದ ಗಿನಗರಾಂತದೂರ್ಜಯಂತಗಿರಿ ಚಂದ್ರಗುಹವಾಸಿ ಅಗ್ರಹಾಯಣಿಯ ಪೂರ್ವಸ್ಥಿತ ಪಂಚವಸ್ತುಗಳಂ ಚತುರ್ಥಕರ್ಮ ಮಹಾಪ್ರಾಭೃತಜ್ಞರಾದ ಧರಸೇನರೆಂಬ ಯತೀಶ್ವರರ್ ತಮ್ಮ ವಸಾನಕಾಲಮನರಿದು ಶಾಸ್ತ್ರಂ ವಿಚ್ಛನ್ನಮಪ್ಪುದೆಂದು ಇಂದ್ರದೇಶದ ವೇಣಾತಟಪುರ ಸಮುದಿತ ಮುನಿಗೊಳ್ ಗ್ರಹಣ ಧಾರಣಸಮರ್ಥರಪ್ಪ ಪಟುಬದ್ಧಿಗಳಿರ್ವರ್ಗಂ ಲೇಖಮನಟ್ಟಿ ಕರೆಸಿ ನೇಮೀಶ್ವರ ಸಿದ್ಧಶಿಲೆಯೊಳ್ ವಿದ್ಯಾಸಾಧನೆಯಮ ಮಾಡಿಸಲ್ ದೇವಿ ಪ್ರತ್ಯಕ್ಷಮಾಗೆ ಸಿದ್ಧವಿದ್ಯರಾಗಿ ಗುರುಪಾರ್ಶ್ವದೊಳೆ ಶುಭದಿವಸದೊಳ್ ವ್ಯಾಖ್ಯಾನ ಪ್ರಾರಂಭಮಾಗೆ ಗ್ರಂತಮಾಪ್ತಿಯೊಳ್ ಗುರುವಿನಪೂರ್ವಕಂ ಆಷಾಢ ಶುದ್ಧ ಏಕಾದಶಿಯೊಳ್ ಪೂರ್ಣಮಾಗಿ ದ್ವಜಪಂಕ್ರಿಯಂ ದೇವತೆಗಳೀಂದಾದ ಕುಂದಪುಷ್ಪಸಮಾದಂತ ಸುರಾರ್ಚಿತರಾದುದರಿಂ ಭೂತಬಲಿಯುಂ ಪುಷ್ಪದಂತರೆಂಬೀರ್ವರ್ಗಂ ಪೆಸರಾಗೆ ನಿಜಗುರುವಿನನುಜ್ಞೆಯಾಂತು ತತ್ಪುರಮನೆಯ್ದಿ ಯೋಗಂಗೊಂಡು ವರ್ಷಾಕಾಲಾನಂತರಂ ದಕ್ಷಿಣಮುಖದೆ ಬಂದು ಕರಹಾಟದೇಶಮನೆಯ್ದಿ ಪುಷ್ಪದಂತಮುನಿಯಾ ಭಾಗಿನೇಗಿಯನಾದ ಜಿನಪಾಂಲಿತಂಗೆ ದೀಕ್ಷೆಗೊಟ್ಟು ನಿಲೆ ಭೂತಬಲಿಗಳ್ ದ್ರಾವಿಡದೇಶದ ಮಧುರೆಯಿಂ ಪೊಕ್ಕಿರ್ದರಿತ್ತ ಪುಷ್ಪದಂತರ್ ಭಾಗಿನೇಯಜಿನಪಾಲಿತರಂ ಪಟ್ಕರ್ಮ ಪ್ರಾಭೃತಕ ವಿಂಶತಿ ಭೇದ ಶತಸೂತ್ರಮನೋದಿಸೆ ಭೂತಬಲಿಗಳಲ್ಲಿಗೆ ಬಂದು ಪೇಳ್ವುದುಮವರೆಯ್ದೆವಂದು ಪುಷ್ಪದಂತರವಸಾನಮನರಿದು ದ್ರವ್ಯರೂಪಣಾದ್ಯಧಿಕಾರ ಪಂಚಕ ಪಟ್ಸಹಸ್ರಾಗ್ರ ಸೂತ್ರಗ್ರಂಥಂಗಳ ಪಟ್ಟಂಡಂ ಜೀವಸ್ಥಾನಾದಿ ಪರಮಾಗಮಮಂ ಪುಸ್ತಕದೊಳ್ ವರೆದು ಶ್ರುತಪ್ರತಿಷ್ಠಾವಿಧಿಯಿಂದಿರ್ಚಿಸಿ ಜ್ಯೇಷ್ಠ ಶುದ್ಧ ಪಂಚಮಿಯಲ್ಲಿ ಶ್ರುತಪ್ರಭಾನೆಯಂ ಮಾಡಿದುದರಂ ಶ್ರುತಪಂಚಮಿಯೆಂದಾದುದು.ಭೂತವಲಿ ಪುಷ್ಪದಂತರ ಪಾರ್ಶ್ವದೊಳ್ ಜಿನಪಾಲಿತರಭ್ಯಾಸಿಸಿರ್ದು ಷಟ್ ಖಂಡಂಗಳೊಳ್ ಕಷಾಯಪ್ರಾಭೃತ ಸೂತ್ರಜ್ಞಾನ ಪ್ರವಾದಸಂಜ್ಞಕ ಪಂಚಕಮಹಾಪೂರ್ವಸ್ಥ ದಶಮ ವಸ್ತು ತೃತೀಯ ಪ್ರಾಯೋದೋಷ ಪ್ರಾಭೃತಕಜ್ಞ ಗುಣಧರರೆಂಬವರಲ್ಲಿ ತದಾಗಮಂಗಳನೋದಲುಂ ತಿಳಿಯಲುಮಾರುಮಿಲ್ಲದೆ ಕೆಲದಿವಸಂ ಸಲೆ ಯುತಿವೃಷರೆಮಬಾಚಾರ್ಯರ್ ಪುಟ್ಟಿಯನೇಕ ಸೂತ್ರಗ್ರಂಥ ರಚನಕರ್ತರೆನಿಸಿದರಿಂತು ದ್ರವ್ಯಭಾವ ದ್ವಿವಿಧ ಪುಸ್ತಕಗಚ್ಛರೆಂದು ಗುರುಪರಿಪಾಟಿಯಿಂ ತಿಳಿದು ಕುಂದಕಪುರದೊಳ್ ಶ್ರೀಪದ್ಮನಂದಿಮುನೀಂದ್ರರ್ ಷಟ್ಖಂಡಾದಿ ತ್ರಿಖಂಡ ಪರಿಕರ್ಮ ಕರ್ತ ಗ್ರಂಥ ದ್ವಾದಶ ಸಹಸ್ರಗಳಂ ಪೇಳ್ದರ್.

ತದನಂದರಂ ಶಾಮಕುಂಡಯತಿಗಳ್ ಪ್ರಾಕೃತ ಸಂಸ್ಕೃತಾದ್ಯನೇಕ ಗ್ರಂಥಕರ್ತೃಗಳಾದರ್ ಮತ್ತಂ ತಂಬೂರಿನಲ್ಲಿ ಪುಟ್ಟಿದ ತಂಬಲೂರುನಾಮಾಚಾರ್ಯರ್ ಪ್ರಾಕೃತ ಸಂಸ್ಕೃತ ಕರ್ಣಾಟಕಾದಿ ಭಾಷಾದಿಗಳಂ ಸಿದ್ಧಾಂತ ಪ್ರಬಂಧಕರ್ತೃಗಳ್ ಚೂಡಾಮಣಿವ್ಯಾಖ್ಯಾನ ಚತುರಶೀತಿ ಸಹಸ್ರ ಗಂಥರಚನೆಯಂ ಮಾಡಿದರ್. ಮತ್ತಂ ಸಮಂತಭದ್ರಸ್ವಾಮಿ ತತ್ವಾರ್ಥಸೂತ್ರ ಕರ್ತಾರಃ ಸ್ವಾಮೀತಿ ಪರಿಪಠ್ಯತೇ ಸಿದ್ಧಾಂತ ಷಟ್ಟಂಡಾಗಮ ಮೃದು ಸಂಸ್ಕೃತಭಾಷಾಪ್ರರೂಪಣ ದ್ವೀತೀಯ ಸಿದ್ಧಾಂತ ವ್ಯಾಖ್ಯಾನದಿ ಶುಭರವಿ ನಂದಿಮುನಿಗಳೆಂಬರೀರ್ವರಿಂ ಭೀಮರಥಿ ಕೃಷ್ಣವೇಣಿ ತೊರೆಗಳ ಮಧ್ಯವಿಷಯದ ಪುತ್ಕಲಿಗ್ರಾಮ ಸಮೀಪದ ಮಣುಕವಲ್ಲಿಯೆಂಬೂರ ಬಷ್ಟದೇವನೆಂಬ ಯತಿಪಂ ವ್ಯಾಖ್ಯಾಪ್ರಜ್ಞಪ್ತಿ ಮೊದಲಾಗೆ ಅವರತ್ತು ಸಾಸಿರ ಗ್ರಂಥರಚನಾಕರ್ತರಾದರ್. ಇಂತು ಮುನಿಪರಂಪರೆಯಿಂ ಪರಮಾಗಮಂ ನಡೆವಲ್ಲಿ ಮಧ್ಯೆ ಜಿನಧರ್ಮಂ ಕುಂದುತ್ತೆ ಬರ್ಪಿನಂ.

ಅತ್ತಲ್ ಉಳಿಪ್ರತ್ರನಗರದೆ ಶಿಶುಪಾಲನೆಂಬ ರಾಜಂಗಂ ಇಂದ್ರಪುರದ ಪೃಥ್ವೀಸುಂದರಿ ಪೆಂಡತಿಯಾಗೆಯವರ್ಗೆ ಚತುಮುರ್ಖನೆಂಬ ಕಲ್ಕಿರಾಜಂ ಪುಟ್ಟಿ ಎಪ್ಪತ್ತು ಸಂವತ್ಸರಾಯುಷ್ಯನೈದು ಮೊಳ ನಿಡಿಯುಂ ರೂಕ್ಷವರ್ಣದೇಹನಾಗಿ ಬೆಳೆಯಲ್ ವಿಕ್ರಮಾರ್ಕ ಶಕರಾಜನ ಕಾಲ ನೂರತ್ತೊಂಬತ್ತನಾಲ್ಕು ವರುಷಂ ನಲ್ವಿನಂ ಚತುಮುರ್ಖಂಗೆ ಕಲ್ಕಿ ಪುಟ್ಟಿ ಕುಮಾರಕಾಲಮಿಪ್ಪತ್ತೆಂಟು ಸಂವತ್ಸರಂ ಸಲೆ ಇಂದ್ಪುರದೊಳ್ ಪಟ್ಟಿಂಗಟ್ಟಿದೊಡೆ ಪ್ರತಾಪದಿಂ ಕುಮಾರಕಾಲಮಿಪ್ಪತ್ತೆಂಟು ಸಂವತ್ಸರಂ ಸಲೆ ಇಂದ್ರಪುರದೊಳ್ ಪಟ್ಟಂಗಟ್ಟಿದೊಡೆ ಪ್ರತಾಪದಿಂ ಕೆಲವು ರಾಜ್ಯಮೆಲ್ಲಮಂ ಸಾಧಿಸಿ ವಶಂ ಮಾಡಿ ದೇವಸ್ಸು ಮುಂತಾದ ಧರ್ಮಗಳಂ ಕೆಡಿಸಿ ಅನೇಕ ಬಾಧೆಗಳಂ ಪ್ರಜೆಗಳ್ಗಂ ತೋರಿ ತನಗಿನ್ನಸಾಧ್ಯರಾರುಮಿಲ್ಲೆಂದು ಮಂತ್ರಿಯಂ ಬೆಸಗೊಂಡೊರ್ವ ಜಿನಮುನಿ ನಿನ್ನ ಅಡಿಯಿಲ್ಲದೆ ಪಭಯಪರಿಗ್ರಹದೂರನುಂ ದ್ವಾದಶವಿಧ ತಪೋನಿರತಮಂ ಧ್ಯಾನಮೌನಾಷ್ಠಾನಮಾಗಿರ್ಪನಾತಂ ನಿಯಮದಿಂ ನಾಲ್ವತ್ತಾರು ದೋಷಂ ಪೊರಗಾದ ನಿರವದ್ಯಮಪ್ಪಾಹಾರಮಂ ಶ್ರಾವಕರ ಮನೆಯೊಳೆ ಮಧ್ಯಾಹ್ನಕಾಲದೊಳ್ ಧರ್ಮದಿಂ ಕೊಟ್ಟನ್ನಮಂ ಕಾಯಸ್ಥಿತ್ಯರ್ಥ ಕೊಂಡು ಯೋಗನಿದಯೋಗದೊಳಿಪ್ಪನಾತಂ ನಿನ್ನಧೀನನಲ್ಲೆಂದು ಮಂತ್ರಿ ಪೇಳೆ ಪ್ರಜೆಗಳೆಲ್ಲರುಂ ಸಿದ್ಧಾಯ ಗೃಹಾಯಮೆಂದನಗೆ ಕೊಟ್ಟು ಜೀವಿಸುತರೀ ತಪೋಧನಂಗೆ ಯಾವ ಬಗೆಯಂ ಮಾಡಲೆಂದು ಕಾಣದೆ ಶ್ರಾವಕರ ಕೈಯೊಳಿಕ್ಕುವ ಅನ್ನಕಂ ಸುಂಕಮೆಮದು ಮೊದಲ ತುತ್ತಂ ತರವೇಳಿ ದೂತರನಟ್ಟಲವರ್ ಪೋಗಿ ಬೇಡಿದೊಡವರ್ ಪ್ರಥಮ ಪಾನೀಯಮಂ ಕೊಟ್ಟಂತರಾಯಮಾಗೆ ಅವಶನಮಂ ಕೈಗೊಂಡು ಯೋಗಸ್ಥಾನದೊಳ್ ನಿಲ್ವನಮವಧಿಜ್ಞಾನಂ ಪುಟ್ಟಿ ಹುಂಡಾವಸರ್ಪಿಣಿಯ ದುಷ್ಟಮಕಾಲಸ್ವಭಾವದಿಂ ಸನ್ಮಾರ್ಗಗೆಟ್ಟು ನಾನಾ ವಿಧ ದುರ್ಮಾರ್ಗಗಳ್ ಪುಟ್ಟಿ ಪ್ರಬಲವಾಗಿ ಸಾವಿರ ವರ್ಷಕ್ಕೊಮ್ಮೆ ಕಲ್ಕಿಯಮೈನೂರು ವರ್ಷಕ್ಕೊರ್ವನುಪಕಲ್ಕಿಯ ಪ್ರವರ್ತಿಸಿ ಸದ್ಧರ್ಮದ್ವೇಷಿಗಳಾಗಿಯಸುರದೇವನಿಂ ಸತ್ತು ಪ್ರಥಮ ನರಕಪ್ರಾಪ್ತರಪ್ಪರಿಂತೈನೂರುವರುಷಕ್ಕೊಮ್ಮೆ ಜಿನಧರ್ಮಂ ಸುಳಿವುಮಿಲ್ಲದೆ ಉತ್ಸೇದಾಯುರ್ಬಳಾದಿಗಳತ್ಯಂತ ಹೀನಮಾಗೆ ಮೃಗಪಕ್ಷಿಗಳಂತೆ ಜೀವಿಸುವರಾ ಕಾಲದ ಕರೆಯೊಳ್ ಪ್ರಳಯಕಾಲಮಪ್ಪುದೆಂದು ಪೇಳೆ ಅಜ್ಜಿಕೆ ಶ್ರಾವಕ ಶ್ರಾವರ್ಕಿಯರ್ಗಂ ಸನ್ಯಾಸನಂಗೊಟ್ಟು ತಾವು ಶುಭಧ್ಯಾನದಿ ಸಮಾಧಿವಡೆದು ಪ್ರಥಮ ಸ್ವರ್ಗದೊಳ್ ದೇವರಾಗಿ ಪುಟ್ಟಲಿತ್ತಂ ಧರ್ಮಕಂಟಕನಾದ ಕಲ್ಕಿರಾಜನನುಸರ ದೇವನರಿದು ಕೋಪದಿಂ ಬಂದು ವಜ್ರಾಯುಧದನಿರಿದುಕೊಲ್ವುದುಂ ಸತ್ತು ನರಕಪ್ರಾಪ್ರನಾಗಲಿತ್ತಲಾ ಚತುರ್ಮುಖ ಕಲ್ಕಿರಾಜನ ಮಗನಪ್ಪಜಿತಂಜಯಂ ತನ್ನರಸಿಯಪ್ಪ ಚೇಳಿನಿವೆರಸು ಅರಸುದೇವನಂ ಶರಣ್ಬುಗೆ ಸದ್ಧರ್ಮಮಂ ಪ್ರತಿಪಾಲಿಸೆಂದು ನಿಯಮಿಸಿ ಪೋಗಲತ್ತರಸಂ ಜಿನಧರ್ಮಮಂ ಪ್ರಕಟಿಸಿ ಚೈತ್ಯಾಲಯಂಗಳಂ ಮಾಡಿಸಿ ದಾನ ಪೂಜೆ ಶೀಲೋಪವಾಸಂಗಳಂ ಮಾಡುತ್ತಮಿರೆಯದಂ ಕಂಡು ಕೇಳಿದರೆಲ್ಲಂ ಸದ್ಧರ್ಮರುಚಿಗಳಾದರ್. ಆಗಳ್ ಮಾಳವ ಮಗಧ ಕರ್ಣಾಟ ಗೊಲ್ಲ ಕರಹಾಟ ಗೌಳ ಲಾಳ ಚೋಳ ಕೇರಳ ಪಾಂಡ್ಯ ಕಳಿಂಗಾದಿ ನಾನಾ ದೇಶಂಗಳನಾಳ್ವ ಇಕ್ಷ್ವಾಂಕು ಕುರು ಸೋಮ ಹರಿ ನಾಥ ಉಗ್ರವಂಶದರಸುಗಳನ್ವಯದವರೆಲ್ಲಂ ಏಕಾತ ವಿನಯ ವಿಪರೀತ ಸಂದೇಹ [ಅಜ್ಞಾನ]ಮೆಂಬ ಪಂಚ ಮಿಥ್ಯಾವಲಂಬಿಗಳಾಗಿ ಸದ್ಧರ್ಮಮಂ ಬಿಟ್ಟು ಒಂದೊಂದು ಮತಮಂ ಪಿಡಿದು ಸಂಕರಾಗಿರ್ದು ಇಂದ್ರಪುರದೊಳ್ ಅಸುರದೇವಂ ಕಲ್ಕಿರಾಜನಂ ಕೊಂದು ತತ್ಪ್ರುತ್ರನಪ್ಪ ಅಜಿತಂಜಯಂಗೆ ಸದ್ಧರ್ಮಮಮ ಪೇಳಿ ರಾಜ್ಯದೊಳ್ ನಿಲಿಸಿದ ಪ್ರಪಂಚೆಲ್ಲಮಂ ಕೇಳ್ದು ದೃಢಚಿತ್ತರಾಗಿ ಧರ್ಮದಿಂದ ಪ್ರಜಾಪಲನಂ ಮಾಡಿ ತಮ್ಮ ತಮ್ಮ ವಿಷಯಗೊಳಿರ್ದು ಪೋಗಿರ್ದ ಚೈತ್ಯಾಲಯಂಗಳನುದ್ಧರಿಸಿ ದಾನ ಪೂಜಾದಿಗಳಂ ಮಾಡುತ್ತಮಿರ್ದ ಕೆಲವಾನುಂ ದಿಸನದಿಂ ಕೆಲಕೆಲವರ್ ಮಿಥ್ಯಮಂ ಪೊರ್ದುತ್ತುಮಿರೆ ಉತ್ತರದೇಶದೊಳ್ ವೇದಾಂತಿಬ್ರಾಹ್ಮಣರೊಳ್ ಬಲಹೀನರಾದನರಸುಗಳಂ ಜಯಿಸಿ ರಾಜ್ಯವಾರ ಮಾಡುತ್ತಿಪ್ಪುದುಂ ಕೆಲಂಬರಸುಗಳ್ ವಿಪ್ರತ್ ಮತಾಂತರಮಂ ಕಲ್ಪಿಸಿ ರಜಪುತ್ರ ಅರೆ ಮರಾಟ ಮೊದಲಾದ ಜಾತಿಗಳಂ ಮಾಡಿ ವೀರನಾಗಿ ಕೆಲವು ರಾಜ್ಯಮಂ ಪಾಲಿಸುತ್ತುಮಿರ್ದರ್.

ತರುಷ್ಕರು ಖಾನ ಕಾದಿ ಭೇದಂಗಳಾಗಿ ಭೂಪಾಲನಾಸೀನರಾದರ್ ಕಿರಾತರೊಳ್ ನಾಯಕರಾಗಿ ಈ ಕ್ರಮದಿಂ ರಾಜ್ಯಮನಾಳುತ್ತುಂ ಕಾಲಶಕ್ತಿಯಿಂ ನಾನಾವಿಧವಾಗಿ ನಡೆದುಬರುವಲ್ಲಿ ಮಧ್ಯದೇಶದೊಳ್ ಕಲ್ಯಾಣಪಟ್ಟಣದಲ್ಲಿ ಸಮ್ಯಕ್ತ್ವ ಚೂಡಾಮಣಿ ಚಾಣಾಂಕರಾಯನ ಮಗನಪ್ಪ ಬಿಜ್ವಲರಾಜನೆಂಬರಸನಾತನ ಪೆಂಡತಿ ಗುಣಭದ್ರೆಯೆಂಬಳ್ ಮಂತ್ರಿ ಸುಬುದ್ಧಿ ಸಹಿತಂ ಧರ್ಮದಿಂ ರಾಜ್ಯಂಗೆಯುಯತ್ತಿಪ್ಪಿನಮಿತ್ತಲಿಂಗಳೇಶ್ವರದ ಮುಂಡಗೆಯೆಂಬ ಪುರದೊಳ್ ಜೈವಿಪ್ರನೋರ್ವಂ ವೇದಾಂತಿ ದ್ವಜರೋಡನಾಡುತ್ತುಂ ವಿಷಯಾಸಕ್ತಿನಾಗಿ ಜಿನಧರ್ಮಂಮಂ ಪತ್ತು ಬಿಟ್ಟು ವೇದಾದ್ಯಂತಮನೋದಿ ಶೈವಬ್ರಾಹ್ಮಣನಾಗಿ ನೆಗಳುತ್ತಿರಲಾತನ ರೂಪು ಲಾವಣ್ಯ ವಿಲಾಸಾನ್ವಿತೆ ನಾಗಲೆಯೆಂಬಳ್ ಪುಟ್ಟಿ ಬಳಿಕ ಬಸವರಾಜನೆಂಬ ಕುಮಾರಂ ಪುಟ್ಟಿ ಬಾಲಸ್ವದೊಳೆ ಮಂತ್ರವಾದ ಶಾಸ್ತ್ರಮಂ ಕಲ್ತು ಕಾಳಿಕಾದೇವಿಯನಾಧಸಿ ವಶ್ಯ ಆಕರ್ಷಣ ವಿದ್ವೇಷಣ ಸ್ತಂಭನ, ಮೋಹನ ವ್ಯಭಿಚಾರಕರ್ಮವೆಂಬೀ ಷಟ್ಕರ್ಮಸಾಧನೆಗಳೊತಿನಿಪುಣನಾಗಿ ಸ್ವಮತದ್ವೇಷಿಯಾಹಗಿ ತನ್ನ ಪ್ರಸಿದ್ಧಿಯನುಂಟುಮಾಡುತ್ತಿಪ್ಪಿನಮಾತನ ಮಾತಾಪಿತೃಗಳ್ ಲೋಕಾಂತ ರಿತರಾಗೆ ತಾನು ವಿದ್ಯದೊಳಪ್ರಸಿದ್ಧಿವಡೆದು ಬ್ರಾಹ್ಮಣರೊಳ ಪೊರಗಾಗಿ ನಾಗಮ್ಮಂಗೆ ವಿವಾಹಂ ಮಾಡದೆ ಆಕೆಯನೊಡಗೊಂಡು ಕಲ್ಯಾಣಪಟ್ಟಣಕ್ಕೆ ಬಂದಿರ್ದಂ.

ಒಂದು ದಿನಂ ಬಿಜ್ಜಳರಾಯಂ ವೈಹಾಳಿಗೆ ಪೋಗುತ್ತಿರ್ಪಾಗಳ್ ನಾಗಲಾದೇವಿಯು ಮಿಂದು ಮಂಡೆಯನಾರಿಸುತ್ತಿರ್ದು ನೋಡುತ್ತಿರ್ಪ ರೂಪವತಿಯಂ ಬಿಜ್ಜಲಂ ನೋಡಿ ಮೋಹವಶಗತನಾಗಿ ಅವರ ಮನೆಗೆ ಬಂದು ಬಸವಣ್ಣನಮ ಬರಿಸಿಯಾರನ ವಿದ್ಯಂಗಳಿಗೆ ಮೆಚ್ಚಿ ತದಗ್ರಜೆಯಂ ಸ್ವೀಕರಿಸಿ ಆಕೆಯ ಗುಣವತಿ ನಾಮವನಿಟ್ಟುಬಸವಂಗೆ ಕೋಶಾಧ್ಯಕ್ಷ ಪದವಿಯಂ ಕೊಟ್ಟು ಸುಖಮಿರೆ ನಿಧಾನಾಂಜದಿಂ ನಿಕ್ಷೇಪದ್ರವ್ಯಮಂ ಬಸವಂ ತೋರ್ಪುದುಮಾತನೊಳತಿ ಮಮಕಾರಂ ಪುಟ್ಟಿ ಮಂತ್ರಪದವಿಯನಿತ್ತು ರಾಜ್ಯಮನೊಪ್ಪಿಸಿ ತಾನು ಸ್ತ್ರೀಲೋಲತ್ವದಿಂದಮನೆಯೊಳಿರೆ ವಸವಂ ನಿರಂಕುಶನಾಗಿ ಷಣ್ಮತಂಗಳಂ ದೂಷಣಂಗೆಯ್ದು ಸಂದೇಹಂ ಪುಟ್ಟಿ ತಾನೊಂದು ಮತಮಂ ಮಾಳ್ವೆನೆಂದು ವಿಪರೀತ ಕರ್ಮಜನಿತ ಶೈವಾಚಾರದೊಳೆ ನಂಬುಗೆ ಪುಟ್ಟೆ ಜನರೆಲ್ಲರಂ ವಶಗತರ್ಮಾಡಿ ತನ್ನ ವಿದ್ಯದಿಂದನೇಕಾರ್ಶ್ವರ್ಯಗಳಂ ತೋರಿಸುತ್ತುಂ ತದಿತರ ಜನಂಗಳಂ ಮಾರಣಾದಿಗಳಿಂ ಭಯಂಗೊಳಿಸಿ ವೀರಶೈವಮೆಂಬ ಪ್ರಕಟಿಸಲ್ ಸ್ವಾಮಿದ್ರೋಹಿಯಾಗಿ ಭಂಡಾರದ ದ್ರವ್ಯಮಂ ಚಾಗಂಗೆಯ್ದು ಪದಿನೆಂಟು ಜಾತಿಯಂ ಲಿಂಗಮಂ ಪೂಜಿಸುವುದೆಂದು ಭಂಡಾರದ ಪೊನ್ನನ್ನೆಲ್ಲಮನನೇಕವಾಗಿ ಕೊಟ್ಟು ಭಂಡಾರವಮೆಲ್ಲಂ ಬರಿದಾಗಲುಳಿದ ಮಂತ್ರಿಗಳ್ ಬಂದು ಬಸವನೆಸಗುವ ಕೃತ್ಯಮಂ ದ್ರವ್ಯಂಗಳ ವೆಚ್ಚಮನರಸಂಗರಿಪುರವುದುಂ ಬಸವೆರಾಜನಂ ಬರಿಸಿ ಕೋಡಗಗಟ್ಟಂ ಕಟ್ಟಿಸಿ ಭಂಗಿಸುತ್ತಿರೆ ನಾಗಲಾದೇವಿಯಡ್ಡ ಬಂದು ನಾನಾ ಪ್ರಕಾರದೊಳ್ ಬಾರಿಸಿ ಬುದ್ಧಯಂ ಪೇಳಿ ಬಿಟ್ಟೊಡೆ ಗ್ರಾಮ ಶಾರ್ದೂಲ ಪುಚ್ಚದಂತೆ ಜನಂಗಳಲ್ಲರಂ ವಶಂ ಮಾಡಿಕೊಂಡು ಎರಡು ಲಕ್ಷ ಮಾನವರ್ಗೆ ಬೇಕಾದನಿತು ಭೋಜನ ವಸ್ತ್ರ ತಾಂಬೂಲಾದಿ ಭೋಗೋವಭೋಗಂಗಳಂ ಮಾಡಿಸಲ್ ಒಳ ಬೊಕ್ಕಸದ ಪೊನ್ನೆಲ್ಲಮಂ ಬೊಮ್ಮಯ್ಯನೆಂಬ ಚೋರನಿಂ ಕನ್ನವಿಕ್ಕಿ ತರಿಸುತ್ತುಂ ಬಸವನಲ್ಲಿ ಪಂಚಪುರುಷಮಿಪ್ಪುದುದೆಂದು ಪ್ರಸಿದ್ಧಿಯಂ ಮಾಡಿ ಹೊಲೆದು ಮಾದಿಗ ಮುಂತಾದೆಲ್ಲರ್ಗಂ ಲಿಂಗಧಾರಣೆಯಂ ಮಾಡಿಸುತ್ತುಂ ತನ್ನಾಜ್ಞೆಯಂ ಮೀರಿದವರಂ ಕೊಲ್ಲಿಸುತ್ತಿಪ್ಪ ಸಮಾಚಾರಮೆಲ್ಲ ಮನಾತನ ಬಲಮಮಂ ಕೇಳಿ ಕೋಪಾರೂಢನಾಗಿ ವೀರಭಟರಂ ಬಸವನಂ ಪಿಡಿದುತರಲ್ ಬಲಸಹಿತಂ ಕಳುಹಿಸಲಾ ಸಮಾಚಾರಮಂ ಕೇಳಿ ತನ್ನ ದ್ವಿಲಕ್ಷ ಜನರಂ ಬಲಂಬೆರಸು ಇದಿರಾಗಿ ನಿಲಲಾರದೆ ಚತುರಂಗಸಹಿತನಾಗಿ ಬೆನ್ನಟ್ಟಿಬಪ್ಪುದಂ ತನ್ನ ಬಲಮೆಲ್ಲಣ ಪಲಾಯಮಾಗೆ ಸಂದಿ ಗೊಂದಿ ಗಿಡುವಿನೊಳ್ ಬಸವನೋಡಿಪೋಗುತ್ತಿರ್ದು ಬಿಜ್ಜಲನ ಬರವಂ ಕಂಡಂದೆ ಸಾವೆನೆಂದು ಪರಿಚ್ಚೇದಿಸಿ ಮಹಾಮಡುವಿನ ಗುಂಡಿಯೊಳ್ ಬೀಳ್ವುದುಂ ಬಿಜ್ಜಲನಾಗಲೆ ಜಾಲಗಾರರಿಂ ತೆಗೆಯಿಸಿ ಕರುಣಹೃದಯನಾಗಿ ಇಂತೆಂದನೆಲವೊ ಬಸವಣ್ಣನೆ ನೀನೆನುತ್ಯಾಪ್ತನೆಂದು ಭಂಡಾರಮೆಲ್ಲಮನೊಪ್ಪಿಸಿದೊಡೆನ್ನ ಬೊಕ್ಕಸ ಭಂಡಾರಮಂ ಬಂದು ಮಾಡಿ ಸ್ವಾಮಿದ್ರೋಹಿಯಾದೆ ನಿನ್ನೆನೇನಂ ಮಾಡಿದೊಡೆ ತೀರದೆಂದು ನುಡಿಯೆ ಬಸವನೆಂದನೆನ್ನ ಗೈದಪಾರಾಧಮಂ ಲಕ್ಷಮಿಸುವದೆಂದಿನಂತೆ ಭಂಡಾರಮಂ ತುಂಬುವೆನೆಂದು ಪೊಡೆವಿಡೆ ಎನ್ನ ಋಣಂ ತೀರುವನ್ನೆಗಂ ಕಲ್ಲುಂ ಪೊರಿಸಿಮೆಂದೆಂದಿನಂತೆ ಶಿಲೆಯುಂ ಪೊರಿಸಲನಿತಕ್ಕಾತನ ಸೇರಿದೆರಡು ಲಕ್ಷ ಪರಷೆಯು ಬಂದೆಲ್ಲರಂ ಪೊಡೆವಟ್ಟು ನಿಮ್ಮ ಸಾಲಂ ತೀರುವನ್ನೆಗಮೀ ಶಿಲೆಯಂ ಪಂಚುಗೊಂಡಾವೆಲ್ಲರುಂ ಪೊತ್ತಿರ್ಪೆವೆಂದು ನೇಣೊಳ್ ಕಟ್ಟಿಕೊಂಡಿಪ್ಪೆವೆಂದು ತಂತಮ್ಮ ಲಿಂಗಮಂ ತೋರಿಬಂದು ರಸವಾದಿಗಳಿಂ ಸುವರ್ಣಮಂ ಮಾಡಿಕೊಡುವೆನೆಂದನೇಕ ತೆರನಪ್ಪ ವಾದಂಗಳಿಂ ಪಡೆಯದೆ ಲಿಂಗಧಾರಣಪೂಜೆಯಿಂ ಸಕಲವು ದೊರೆಕೊಳ್ಗುಮೆಂದು ಸರ್ವರ್ಗಂ ಲಿಂಗಮಂ ನಾಯಿಕುನ್ನಿಯು ಮೊದಲಾದುಪಕರಣಂಗಳಿಗೆಲ್ಲಂ ಲಿಂಗಸ್ಥಾನೆಂಗೆಯ್ದಿರಿಪ್ಪಿನ ಮತ್ತೊಂದು ದಿವಸಮರಮಮನೆಯೊಳಿರ್ದ ನಿಕ್ಷೇಪಮಂ ತೆಗೆದು ಪಂಚ ಪುರುಷ ಸಾಮರ್ಥ್ಯದಿಂ ಮೊದಲಿಂಗೆ ನಾಲ್ಮಡಿ ದ್ರವ್ಯಮಂ ತುಂಬಿಸುವೆನೆಂದು ಪೊನ್ನೆಲ್ಲಮಂ ವೆಚ್ಚಿಸಿ ಗಣಾರಾಧನೆಯೆಂದೆಲ್ಲರುಮುಂಡು ತೇಕುತ್ತೆ ಸಾಲಮಂ ಸಲಿಸಿದೆವೆಂದುಮಪಹಾಸ್ಯಂಗೆಯುತ್ತಿರೆ ಮಂಚಣ್ಣನೆಂದವನೊಳ್ ಮುನಿಯುತ್ತಿರ್ದಂರಂತಿಪ್ಪುದುಮತ್ತಮರಮನೆಯೊಳ್ ನಾಗಮಗಮಂ ಗರ್ಭಿಣಿಯಾಗಿ ನವಮಾಸಂ ನೆರೆದು ಗಂಡುಗೂಸಂ ಪೆತ್ತಿಪ್ಪುದುಂ ಬಸವಂ ಬಂದು ಶಿಶುವಿಂಗಂ ಲಿಂಗಮಂ ಕಟ್ಟಿ ಚನ್ನಬಸವನೆಂದು ಪೆಸರಿಟ್ಟು ಪೋದಂ ಗುಣವತಿಮಹಾದೇವಿಗೆ ಮಾಘ ಶು ೧೫ ಮೂಹೂರ್ತದೊಳ್ ಪಿತ್ರೋತ್ಪತ್ತಿಯಾಗೆ ಮರುಬಿಜ್ಜನೆಂದು ಪೆಸರಿಟ್ಟು ಸಲಹುತ್ತಿರ್ದ ಬಲದೇಮಂತ್ರಿಯ ಮಗಳ್ ನೀಲಮ್ಮನೆಂಬಳಂ ಬಸವರಾಜಂ ಮದುವೆಯಾಗಿ ತನ್ನ ಪರಿವಾರವೆಲ್ಲರ್ಗಂ ಮೆಚ್ಚುಗೂಡಿತ್ತ ಇಂದ್ರಜಾಲ ಮಹೇಂದ್ರಜಾಲಮಂ ತೋರಿಸುತ್ತುಂ ಬಲಾತ್ಕಾರದಿಂ ಜೈನಬ್ರಾಹ್ಮಣ ಕ್ಷತ್ತಿಯ ವೈಶ್ಯ ಶೂದ್ರಾದಿಗಳಂ ಲಿಂಗಧಾರಿಗಳ್ ಮಾಡಿ ಪರಸಮಯಗಳಂ ಪದಿನೆಂಟು ಜಾತಿಗಳಂ ಬಯಸಿದುದುಂ ಕೊಟ್ಟು ಲಿಂಗಮಂ ಧರಿಸಿ ನೀಚ ಜಾತಿಗಳನ್ನೂ ಕೂಡಾ ನುತಿಸುತ್ತಿಯೆಲ್ಲರ್ಗೆ ಶರಣೆಂಸಡೆಗುತ್ತುಮಮೆ ಪಾದಸ್ಪರ್ಶನಗೆಯ್ದು ತನ್ನುರದ ಲಿಂಕ್ಕಂ ತನ್ನ ಮಸ್ತಕಕ್ಕಂ ಮುಟ್ಟಿಸುತ್ತುಂ ಭಕ್ರಿಯ ಮಾಡುತ್ತುಂ ಜಂಗಮರೆಂದಲ್ಲರಂ ಪೂಜಿಸುವಂ, ಲಿಂಗಕ್ಕೆ ಪೂಲೆಯಿಲ್ಲ ಜಂಗಮಕ್ಕೆ ಪಾಪಮಿಲ್ಲೆಂದು ಜಾತ ಮೃತ ರಜಸ್ವಲಾದಿ ಪಂಚವಿಧ ಸೂತಕಮಿಲ್ಲಮೆಂದು ಎಂಜಲು ಮೊದಲಾದವಂ ದೇಹಕ್ಕೆ ಲೇಪಿಸುತದ್ತ ಖಂಡಿತಮಾಯಾದಿಗಳಂ ಕಲ್ಪಿಸಿ ಗಣಂಗಳ ಪಾದೋದಕಂ ಪರಮ ಪವಿತ್ರಮೆಂದು ಲಿಂಗಕ್ಕಂ ಮಜ್ಜನಂಗೈದು ದೇಹಕ್ಕಂ ಸೇವಿಸುತ್ತುಂ ಗುರುದೇವರೆಂಬುದರಿಮ ಗುರುವೆ ಉತ್ಕೃಷ್ಟನೆಂದವರವ ಇಚ್ಛೆಯಂ ಸಲಿಸುತ್ತುಂ ಲಿಂಗಿಗ ವಿಭೂತಿ ರುದ್ರಾಕ್ಷಿ ಸಹಿತಮ್ಮಿಪ್ಪರ್ಗೆ ಸಕಲ ಕರ್ಮಂ ಪೋಗಿ ಕೈಲಾಸಕ್ಕೆಯ್ದುವರ್, ಸಪ್ತವ್ಯಸನದಿಂದಂ ಪಾಪಮಿಲ್ಲೆಂದು ಶಾಸ್ತ್ರಮಂ ಮಾಡಿ ಕಲಿಸಿ ಪಾದರ ಸೂಳೆ ಸುರಾಮಾಂಸ ಮಧು ಮೊದಲಾದವರಿಂ ಪಾಪಮಿಲ್ಲೆಂದು ಶಾಸ್ತ್ರಮಂ ಮಾಡಿ ಕಲಿಸಿ ಹಾರರಿಗರ್ಗಮ ಮಿಂಡ ಜಂಗಮರ್ಗಮವರ ವ್ಯಸನಕ್ಕನುಕೂಲಂ ಮಾಡಿಸಿಕೊಳ್ಳುತ್ತಂ ಬೇವಿನ ಬೀಜದನಿತು ಲಿಂಗಮುಳ್ಳಂಗಾವ ದೋಷಂಗಳ್ ಪೊರ್ದುವಾತಂ ಕೈಲಾಸಕ್ಕೆ ಸಲ್ಗುಂಮೆಂದನೇಕ ದ್ರವ್ಯಮಂ ಕೊಡತಿರ್ಪುದು ಕೆಲರಾಸೆವಟ್ಟು ಕಲ್ಲು ಅಡಕೆ ಬದನೆಯ ಕಾಯಿ ಮೊದಲಾದುವಂ ಕಟ್ಟಿಕೊಂಡು ಕೂಲಿಸುವನೆಂದು ಬರಿಯ ಸೆಜ್ಜೆ ವಸ್ತ್ರಾದಿಗಳಂ ಕೊರಳೊಳ್ ಕಟ್ಟಿ ಬಂದು ಮನ್ನಣೆವಡೆವರ್.