ಶ್ರೀಸುಜನಸ್ತುತರಖಿಳ ಕ
ಳಾಸದನರ್ ಸುಗುಣಭೂಷಣರ್ ಸುವಿಚಾರರ್
ಲೇಸೆಂದು ಸರರ ಕೇಳ್ವದು
ವೈಷ್ಯಮ್ಯಮನುಳಿದು ಹುಂಡಕಾಲಮಹಾತ್ಮ್ಯಂ

ಈ ಪ್ರಕಾರದಿಂ ಪ್ರವರ್ತಿಸುತ್ತಿಪ್ಪಾಗುಜ್ಜಯಿನಿಯೊಳ್ ವಿಕ್ರಮಾಂಕನ್ಯಪಾಲಂ ದುಷ್ಟನಿಗ್ರಹ ಶಿಷ್ಟಪಾಲನದಿಂ ರಾಜ್ಯಮನಾಳುತ್ತ ಶಕಪುರುಷನಾಗಿ ತನ್ನ ಶಕೆಯಂ ಪ್ರಾರಂಭಿಸಿ ದೈವಜ್ಷರಿಂ ಪಂಚಾಂಗದೊಳ್ ಬರೆಯಿಸಿ ಗಣಿತ ಸಿದ್ಧಾಂತ ಪ್ರಾರಂಭಮಾಗೆ ಪರಸಮಯಿಗಳ್ ಸಿದ್ಧಾಂತಗಣಿತಮಂ ಮಾಡಿ ಪಂಚಾಗಶ್ರವಣಮಂ ಮಾಡುತ್ತೆ ಬಂದರಾತನ ಕಾಲಂ ನೂರಮೂವತ್ತಾರು ವರ್ಷ ಸಲ್ವಿನಂ ಕ್ಷತ್ರಿಯಬೀಜಮಂ ಕುಲಾಲಸ್ತ್ರೀಯೊಳ್ ಪುಟ್ಟಿಯತ್ಯಂತ ಪ್ರಬಲನಾಗಿ ಶಾಲಿವಾಹನನೆಂಬಂ ರಾಜ್ಯದೊಳ್ ನಿಂದು ಬಹುಧಾನ್ಯಸಂವತ್ಸರ ಮೊದಲಾಗೆ ತನ್ನ ಶಕೆಯಂ ಬರೆಯಿಸಿದಂ.

ಅತ್ತಲ್ ಒಳಲಂಕೆ ಮೂಲಿಕೆ ಗೇರುಸೊಪ್ಪೆ ಮೊದಲಾಗಿ ಗಟ್ಟದ ಕೆಳಗಿನ ರಾಜ್ಯ ಮೊದಲಾದವಕ್ಕೆ ಕದಂಬರಾಯ ಮೊದಲಾಗೆ ನಮ್ಮ ತಮ್ಮ ತಮ್ಮ ಶಕೆಯಂ ಬರೆಯಿಸಿದರ್. ಮೊರಯೆಂಬವರ್ ಕೆಲಕೆಲವು ಕರ್ಣಾಟಕದೇಶ ಮೊದಲಾಗಿ ರಾಜ್ಯವಾಳಿದರ್. ಅವರ ಬಂಟರ್ ಕದಂಬರೆಂಬವರೊಳಗೆ ಭೀಮಕದಂಬನೆಂಬಂ ಒಳಲಂಕೆ ಮೊದಲಾದ ರಾಜ್ಯದೊಳ್ ನಿಂದಿ ತನ್ನ ಶಕೆಯಂ ಬರೆಯಿಸಿದಂ. ಮತ್ತಂ ಲಂಕಾದ್ವೀಪ ಸಿಂಗದ್ವೀಪ ಅನುರುಹದ್ವೀಪ ಮೊದಲಾಂತರದ್ವೀಪಗಳ ಉತ್ತರದ ಪೊರಗಣ ಭೂಪ್ರದೇಶದಲ್ಲಿ ವರ್ತಿಸುವ ವಿದ್ಯಾದರ ಸಾಮಾನ್ಯರ್ ಕಾಲದೋಷದಿಂ ಆಯುರುತ್ಸೇಧಾದಿಗಳ್ ಕುಂದುತ್ತಂ ಬರೆಯದರೊಳ್ ಕೆಲಂಬರ್ ಸರ್ವೇಶ್ವರಮತಮಂ ಪ್ರಕಟಿಸಿ ಶಾಸ್ತ್ರ ಪುರಾಣಾದಿಗಳಂ ನಿರ್ಮಾಪಣಂಗೆಯ್ದು ಪೂರ್ವಬೆತ್ತಲೆಯೆಂಬ ಪಟ್ಟಣಮಂ ದಾವಿದನೆಂಬರಸನಾಳುವಲ್ಲಿ ಜೇಸುದಾಥರ್ ನರಲೋಕಕ್ಕೆ ಪುಣ್ಯಪಾಪಮಂ ಕಾಣಿಸಿ ಸ್ವಾರ್ತಲೋಕಮಂ ಪಿಶಾಚಲೋಕಮನೆಯ್ದಿಸಲ್ ಇಪ್ಪರಿತು ಸಾಂತುವೆಂಬುದರಿಂ ಮಗನಾದ ಸರ್ವೇಶ್ವರನವತಾರದಿಂ ಬೆತ್ತಲೆಯೆಂಬ ಪುರದೊಳ್ ಕನ್ನೆ ಮರಿಯಮ್ಮನ ಗರ್ಭದೊಳ್ ವಿಕಾರವಿಲ್ಲದೆ ಬೆಳೆದು ಜೀವದವಿನ ಕೊಟ್ಟಗೆಯೊಳುದಿಸೆ ಸಂಮನಸ್ಸರು ಬಂದು ಕತ್ತಲೊಳು ಕೊಂಡು ಹೊಸ ನಕ್ಷತ್ರದ ಬೆಳಗಿನೊಳ್ ಪೋಗಿ ಬೆಳೆದರಳಪ್ಪನಿಂದುಪ್ರದೇಶಂಗೊಂಡೆಲ್ಲಾ ಪ್ರಪಂಚಮಂ ತಿಳಿದಾ ರಾಜನಿಂ ಶೀರ‍್ವೆಯೊಳೇರಿಸಿಕೊಂಡು ಪಾಡುಪಡುತ್ತ ಏಳು ದಿವಸದಲ್ಲಿ ಭೂಗತನಾಗಿ ಆದಿತ್ಯವಾರ ಭೂಮಿಯಿಂದೆದ್ದನೇಕವಾಗಿ ಅದ್ಭುತಂಗಳಂ ತೋರಿ ಈಪಾದಂ ಭಾವಿಸಿ ಸದ್ಗತಿಯಂ ಪಡೆವುದು. ಇಲ್ಲದೊಡಂ ಪಿಶಾಚಲೋಕಮಪ್ಪದೆಂದು ಆಮೆಂಜೆಸು ಎಂಬ ವಾಕ್ಯಸ್ಮರಣೆಯಿಂದೊಪ್ಪುವ ಪರಂಗಿಗಳಾ ಪರಾಶಿ ಇಂಗರೀಜರೆಂದರಡು ಮೂರು ನಾಲ್ಕು ಭೇದಂಗಳಾಗಿ ವರ್ತಿಸುತ್ತಿರ್ದವರೊಳ್ ಸಮ್ಮನ್ಭೂಮಿಶ್ವರಂ ಅನೇಕ ಭೂಮಿಯನಾಳ್ದು ತನ್ನ ಶಕೆಯನಾ ದೇಶದೊಳ್ ಪ್ರಟಿಸಿದನಂ. ಇಲ್ಲಿ ವಿಕ್ರಮಾರ್ಕ ಶಕೆಯಿಂ ಮೇಲೆ ೫೭ನೇ ದುರ್ಮತಿ ಸಂವತ್ಸರಾತಭ್ಯಮವರ್ಗೆ ಸಂದ ಶಕೆ ವರ್ತಿಸುವುದು. ಕೇರಳದೇಶ ಮೊದಲಾದವಕ್ಕೆ ಕೊಲ್ಲವೆ ಆದಿಯಾಗಿ ವರ್ತಿಸುವುದು. ಮಹಾರಾಷ್ಟ್ರ ತುರಷ್ಕ ಮೊದಲಾದ ದೇಶಂಗಳಿಗೆ ಪ್ರಸಿದ್ಧರಾದವರ ಶಕೆಯನೆಣಿಸುವುದರ್. ವಿಂದ್ಯಪರ್ವತದುತ್ತರದೇಶಕ್ಕೆ ಬಾರ್ಹಸ್ಪತ್ಯಮಾನಮದರ ದಕ್ಷಿಣದೇಶಕ್ಕೆ ಚಾಂದ್ರಮಾನ, ದ್ರಾವಿಣದೇಶಕ್ಕೆ ಸೌರಮಾನ, ಸರ್ವದೇಶಕ್ಕುಂ ಗುರೂದಯಾಬ್ದಂಗಳ್ ಕರ್ಣಾಟ ಮೊದಲಾದವಕ್ಕೆ ಚಾಂದ್ರಮಾನ ಸೌರಮಾನಮೆಂಬೆರಡುಂ ವರ್ತಿಸುವುವು.

ಈ ಪ್ರಕಾರ ವರ್ತಿಸುತ್ತಿರ್ಪಲ್ಲಿ ಇಂದ್ರಪುರದೊಳ್ ವಸುಪಾಲನೆಂಬರಸುಗೆ ಕುಟ್ಟಿಭಟ್ಟನೆಂಬ ವೇದಾಂತಿ ಬ್ರಾಹ್ಮಣಂ ಪ್ರತಿದಿವಸಂ ಪಂಚಾಂಗಮಂ ತತ್ಕ್ಷಣದೊಳೆ ವ್ಯರ್ಕೇಂದು ಗುಣಿಸಿ ಶ್ರವಣಮಂ ಮಾಡಿಸುತ್ತಾ ಬರುತ್ತಿರ್ದೊಂದು ದಿವಸಮಮಾವಾಸ್ಯೆಯೊಳ್ ಗ್ರಹಸ್ಫುಟದೊಳ್ ವಿಸ್ಮೃತಿಯಿಂ ವ್ಯರ್ಕೆಂದುಮಂ ಮರೆದು ಸಾರ್ಕೇಂದುವಂ ಲಿಪ್ತೀಕರಿಸಿ ಪ್ರಮಾದವಶದಿಂ ಈ ಹೊತ್ತು ಪೌರ್ಣಮಿ ಮೂವತ್ತು ಘಳಿಗೆಯೆಂದು ಪೇಳಿ ಬರೆ ಬ್ರಾಹ್ಮಣಂ ಬಂದು ಅಮವಾಸ್ಯೆ ಮೂವತ್ತು ಘಳಿಗೆಯೆಂಬುದುಂ ಸಿದ್ಧಾಂತಿ ವೇದಂತಿಗಳೆಲ್ಲರಂ ಬರಿಸಿ ವಿಚಾರಿಸಿ ಸಿದ್ದಾಂತಮಂ ಪುಸಿಯಂ ಮಾಡಿ ಪೇಳ್ದ ವೇದಾಂತೊಗಳಿಲ್ಲಿಂದಿತ್ತ ಸಿದ್ಧಾಂತಮಂ ನೋಡಲಾಗದು, ಇವರಿಂದಾ ಪಂಚಾಂಗ ಶ್ರವಣಮಂ ಕೇಳಲಾಗದೆಂದವರ ತಿರಸ್ಕರಿಸೆ ವಿಷಣ್ಣರಾಗಿ ಚಿಂತಿಸಿ ಸಿದ್ಧಾಂತಕ್ಕೆ ಆಯೋಗ್ಯರಾಗಿ ಬಿಟ್ಟರೆ ಬ್ರಾಹ್ಮಣತ್ವಂ ಪೋಕುಮೆಂದು ಅರ್ಹಂತ್ಯ ಬ್ರಾಹ್ಮರೊಳಾಳೋಚಿಸಿ ತಮ್ಮಲ್ಲಿಮಂತ್ರವಾದಿಗಳಪ್ಪರಂ ಬರಿಸಿ ಯಕ್ಷಿಣಿನಾರಾಶಿಸಿ ಉಪವಾಸಪೂರ್ವಕಂ ಪುರದ ಮುಂಗಡೆಯ ಜಲಾಶಯನದೊಳ್ ನಿಂದು ಜಪಿಸುತ್ತಿರೆ ದೇವಿ ಪ್ರತ್ಯಕ್ಷಮಾಗಿ ಕರ್ಣವಲಯಮನರಮನೆ ಬಾಗಿಲ ವ್ಯೋಮದೊಳ್ ತೋರುವುದುಮದರ ಪ್ರಕಾಶಂ ಚಂದ್ರಕಿರಣದಂತೆ ಅರಮನೆಯೊಳಂ ಪುರದೊಳಂ ಬೆಳಗೆ ವಸುಪಾಲನಿದೇನೆಂದು ಕೇಳ್ವುದುಂ ವೇದಾಂತಿ ಭೂಸುರರ್ ಅಮವಾಸ್ಯೆಯಂ ಪುಣ್ಣಮಿಯಂ ಮಾಡಿದರೆನೆ ಮರುದಿವಸಂ ಮಾನ್ಯಮಂ ಪಡೆಯಲೆಂದು ಬಂದರಸನಂ ಕಾಣ್ಬುದುಮರಸಂ ಪೇಳ್ದಂ ನೀಂ ಮೂಲೋಕ ಸ್ಥಿತಿಯಂ ಕಾಲ ನಿರ್ಣಯಮಂ ಜೀವಭೇದಮಂ ರಾಜ ರಾಷ್ಟ್ರ ದೇವತಾದಿ ಸಕಲ ಪ್ರಪಂಚುವನರಿಯದೆಯನೃತದಿಂ ಕೃತಕದೊಳಾಡಂಬರಮಂ ತೋರ್ದ ಅಸತ್ಯವಾದಿಗಳ್ ಸಿದ್ಧಾಂತ ವಚನ ಯೋಗ್ಯರೆಲ್ಲೆಂದು ನಿರಾಕರಿಸಿ ವೇದಾಂತರ ವಚನಪ್ರಕಾರ ಲೋಕ ಮೊದಲಾಗೆ ಸರ್ವಮಂ ರಚಿಸಿ ಅರಸಂಗೊಪ್ಪಿಸಿ ಸಿದ್ದಾಂತಮಂ ಪಡೆದು ಮಾನ್ಯರಾದರಾ ಶಾಸ್ತ್ರಪ್ರಮೇಯಮೆಂತೆಂದೊಡೆ

ವೃತ್ತ || ಬ್ರಹ್ಮಾ ವಿಷ್ಣುಶ್ಚ ರುದ್ರಸ್ತಪನಶಶಿಕುಜಾಃ ಸೌಮ್ಯದೇವೇಜ್ಯ ಶುಕ್ರಾಃ
ಕಾರೀ ರಾಹುಶ್ಚ ಕೇತುರ್ಮನುಮುನಿ ದಿವಿಜಾಃ ಲೋಕಪಾಲಾಶ್ಚ ಸಿದ್ದಾಃ
ದುರ್ಗಾ ವಿಘ್ನೇಶನಾಗಾ ವಸುನಗಖಚರಾ ಯೋಗಿನೀವಿಪ್ರವೃಂದಾಃ
ಕುರ್ವಂತ್ವೇತೆ ಶಮಸಾಸ್ತವಸುಖಮನಿಶಂ ಶ್ರೀಯಶೋ ವಾಂಛಿತಾರ್ಥಾಃ

ಎಂದಾರ್ಶಿವಾದಮಂ ಪೇಳಿ

ಶ್ಲೋಕ || ಯಥಾ ಶಿಖಾ ಮಯೂರಾಣಾಂ ನಾಗಾಣಾಂ ಮಣಯೊ ಯಥಾ
ತಥಾ ವೇದಾಂಗ ಶಾಸ್ತ್ರಾಣಾಂ ಜ್ಯೌತಿಷಂ ಮೂರ್ಧ್ಯ್ಮವಸ್ಥಿತಮ್ ||೧ ||
ಮುಖಮರ್ಧಶರೀಮಂ ವಾ ಸರ್ವಂ ಆ ಮುಖಮುಚ್ಯತೇ
ಶತ್ರಾಪಿ ನಾಸಿಕಾ ಶ್ರೇಷ್ಠಾ ನಾಸಿಕಾಯಾಶ್ಚ ಚಕ್ಷುಷೀ ||೨ ||
ಉಪಜಾತಿ || ಅನ್ಯಾನಿ ಶಾಸ್ತ್ರಾಣಿ ವಿನೋದಮಾತ್ರೇ
ಸಂದೃಷ್ಟಕಂ ತೇಷು ಫಲಂ ನ ಕಿಂಚತ್
ಚಿಕಿತ್ಸಿಕ ಜ್ಯೋತಿಷಕಂ ಮಂತ್ರವಾದಾಃ
ಪದೇ ಪದೇ ಕೌತುಕಮಾವಹಂತಿ ||೩ ||

ವೃತ್ತ || ಶಲ್ದಾಂಲಕೃತಿ ತರ್ಕ ನಾಟಕ ಕಲಾ ಶಾಸ್ತ್ರೇಷು ಸಂವಾದನಾತ್
ಸಂದೇಹಃ ಪ್ರತಿಭಾತಿ ಕರ್ಕಶ ವಚಃ ಶೀಲಂ ದೃಷ್ಟಂ ಫಲಂ
ತಸ್ಮಿನ್ ಜ್ಯೌತಿಷ ಮಂತ್ರವಾದಮಥನಾ ಚಾಶ್ಚರ್ಯ ಕಾಯಂ
ಮಹದ್ವಾಕ್ಯಂ ಸೂರ್ಯಶಶಾಂಕಸಾಕ್ಷಿಣಿ ಭವಾ ದೃಷ್ಟಾಂತಮಾಶಿಶ್ರಿಯೇ ||೪ ||

ಕ್ರತು ಕ್ರಿಯಾರ್ಥ ಕ್ರತವಃ ಪ್ರವೃತ್ತಾಃ ಕಾಲಾಶ್ರಯಾಸ್ತೇ ಕೃತವೋ ನಿವೃತ್ತಾಃ
ಶಾಸ್ತ್ರಾದ ಮುಷ್ಮಾತ್ಕಿಲ ಕಾಲಬೋಧೊ ದೇವಾಂಗತಾಮುಷ್ಯಕತಾ
ಪ್ರಸಿದ್ದಾಃ
||೫ ||

ದಂಡಃ ಪಾದೌ ಶಬ್ದ ಶಾಸ್ತ್ರಾಂ ಚ ವಕ್ತ್ರಕಲ್ಪಃ ಪಾಣಿ ಜ್ಯೌತಿಷ ಚಕ್ಷುಷೀ ದ್ವೇ
ಶಿಕ್ಷಾ ಘ್ರಾಣಂ ಶ್ರೋತ್ರಮೇ ತನ್ನಿರುಕ್ತಂ ವೇದಸ್ಯಾಂಗನ್ಯಾಹುರೇ
ತಾನಿ ಷಟ್ಟ
||೬ ||

ವೇದಸ್ಯ ಚಕ್ಷುಃ ಕಿಲ ಶಾಸ್ತ್ರಮೇತತ್ ಪ್ರಧಾನತಾಂಗೇಷು ತತೋSನ್ಯಜಾತಾ
ಅಂಗೈರ್ಯುತೋSನ್ನೈಃ ಪರಿಪೂರ್ಣಮೂತಿಘ ಚಕ್ಷಿರ್ವಿಹೀನಃ ಪುರಕಷೋ ನ
ಭಾತಿ ||೭ ||

ಎಂಬುದುರಿಂ ಸಿದ್ದಾತದ ಜ್ಯೋತಿಷವೆ ವೇದಕ್ಕೆ ಮುಖ್ಯಮೆಂಬುದಂ ಪೇಳ್ದು ಅನುಷ್ಠಾನಮಂ ಪೇಳ್ದರೆಂತೆನೆ.

ಜೈತಾದಾವುಪಸಿ ಸ್ಮರೇತ್ ಪಶುಪತಿಂ ಜೋತ್ಥಾಯ ಚಂದ್ರಸ್ವರಾ
ದ್ವೃದ್ದಾಶೀಃ ಪರಿಗೃಹ ನಿಂಬಕದಳಂ ಪ್ರಾಶ್ಯಾಜ್ಯಪಾತ್ರೇ ಸ್ಥಿತಮ್
ದತ್ವಾ ವಿಕ್ಷಿತ ದರ್ಪಣಶ್ಚ ಸುಖಂ ಚೃತತ್ಕ್ರವೋ ಭೂಪತೇ ||೮ ||

ಯಶ್ಯೃಣೋತಿ ಮಧುಶುಕ್ಲ ಪಕ್ಷಕೇ ವರ್ಷನಾಥ ಸಚಿವಾದಿಕಂ ಫಲಮ್
ಪ್ರಾಪ್ನುಯಾದ್ದುರಿತ ಮುಕ್ರವಿಗ್ರಹಶ್ವಾಯುತರ್ಥಮುತುಲಂಯಶಸ್ಸುಕಮ್ ||೯ ||

ಸರ್ವಜ್ಷವಾಣಿ ದೈವಜ್ಞಪೂಜಾಂ ಕೃತ್ವಾ ಗಣಾಧಿಪಮ್
ಸಂವತ್ಸರಫಲಂ ಸಮ್ಯಕ್ ಶ್ರುತ್ವಾ ವಿಪ್ರ ಪ್ರಪೂಜಯೇತ್ ||೧೦ ||

ದೈವಜ್ಞ ಲಕ್ಷಣ

ಅಧೀತಶಾಸ್ತ್ರಾಖಿಲಾಶಾಸ್ತ್ರಯುಕ್ತೋಸಿದ್ದಾಂತವೇತ್ತಾ ಬಹುಸಂಹಿತಜ್ಞಾಃ
ಅನಾತುಲಃ ಸತ್ಯಯುತಃ ಪುಮಾಂಶ್ಚ ಸದ್ಧರ್ಮಯುಕ್ತಸ್ಸ ಚ ದಥವವಂದ್ಯಃ ||೧೧ ||

ಅದ್ವೆಷೀ ನಿತ್ಯ ಸಂತೋಷೀ ಗಣಿತಾಗಮಪಾರಹಃ
ಮೂಹೂರ್ತಗುಣದೋಷಜ್ಞೋ ವಾಗ್ಮೀ ಕುಶಲಬುದ್ಧಿಮಾನ್ ||೧೨ ||

ಅಪ್ತದೀಪಾ ಯಥರಾತ್ರಿಃ ವಿನಾದಿತ್ಯಂ ಯಥಾ ನಭಃ
ತಥಾ ಜ್ಯಾತಿಷಹೀನೋSಪಿ ಬ್ರಹ್ಮತ್ಯಂ ದೋಹವಾಧ್ವನಿಃ? ||೧೩ ||

ಸ್ವಸ್ತಿ ಶ್ರೀಮನ್ಮಹಾಪುರಷಾದಿ ಪ್ರಮಾಣ ಸಂವತ್ಸರ ನವಾಧಿಕ ಷೋಡಶಾಧಿಕಾನಾಂ ಫಲಾನಿಗ್ರಹಾಣಾಂ ರಾಶಿಪ್ರದೇಶ ನಕ್ಷತ್ರಪ್ರದೇಶ ತಿಥಿ ವಾರರ್ಕ್ಷ ಯೋಗ ಕರಣಾದೀಷಾಮೃತನವಗ್ರಹಾಣಂ || ನಕ್ಷತ್ರಪಾದಾಚಾತ ಗೃಹ ವಕ್ರವಕ್ತ್ಯಾಗ ಉದಯಾಸ್ತ ಸಮಾಗಮ ಗ್ರಹ ಯುದ್ಧ ಸೂರ್ಯ ಚಂದ್ರಗ್ರಹಣ ಮನ್ವಾದಿ ಯುಗಾದಿ ಮಹೋದಯಾರ್ಧೋದಯ ಗಜಚ್ಛಾಯಾ ಅಂಶಾದಿ ಕಾಲನಿರ್ಣಯ ಮಹಾಪಾತ ಸ್ಫುಟ ಪಾಶದ್ವಿರ್ಭಾವ ಸಾಮಾನ್ಯ ಮಧ್ಯಮ ಖಂಡಪಾತಪಾತಾ ಭಾವ ಲಕ್ಷಣಾ ಲಕ್ಷಿತ ಅಲಭ್ಯಯೋಗ ಅವಯೋಗ ಸಿದ್ಧಾಮೃತಯೋಗ ತ್ರಿದ್ಯುಸ್ಸೃಗದಿ ಷಡಿತೀತಿದೋಷ ವರ್ಷಾದ್ಯಾರ್ದ್ರಾಪ್ರವೇಶ ಜ್ಯೇಷ್ಠ ಶುಕ್ಲ ಪ್ರತಿಪತ್ ಆಷಾಢ ಶುಕ್ಲ ಪಂಚಮೀ ತಚ್ಛ್ರಕ್ಲ ಪಂಚಮೀ ನವಮೀ ಸ್ವಾತೀಯುಕ್ತ ಕೃಷ್ಣರೋಹಿಣಿಯುತ ಫ ಗುರು ಶುಕ್ರ ಶನಿ ಚಾರಮೇಷಸಂಕ್ರಾಂತಿ ಮರಕಸಂಕ್ರಾಮತಿ ಪಲಃ ತತ್ಸಂಯೋಗ ವಾರಫಲ ಗುರೂ ದಯಾಬ್ದ ಮೇಘಫಲ ವೀಸಿಕಾಯವ್ಯಯ ಕಂದಾಯ ಫಲಾದಿಗಳುಂ ಪಂಚಾಂಗ ತಿಥಿ ಲಗ್ನ ಶುದ್ಧಿ ರ್ವಿಲಗ್ನಹೋರಾ ದ್ರೇಕ್ಕಾಣ ನವಾಂಶ ದ್ವಾದಶಾಂಶ ತ್ರೀಂಶಾಂಶ ಷಡ್ವರ್ಗ ಶುದ್ಧಿ ಗುಳಿಕಾರ್ಧಪ್ರಹಾರ ಯಮಕಂಟಕ ಕಾಲ ಹೋತಾ ಉಷ್ಣ ಶಿಖಿ ಮೊದಲಾದ ದೋವರ್ಜಿತ ಸುಲಗ್ನ ಪುಷ್ಕಳಾ ಮೂಹೂರ್ತ ವೇಳಾದಿರುದರ್ಕ ಫಲಾಗಮನಿಮಿತ್ತ ಪರೀಕ್ಷಾದಕ್ಷ ವಿಸಂವಾದಿ ಗಣಿತ ಜಾತಕ ಪ್ರಶ್ನಭೇದ ಅಧಾನಾದ್ಯಂತ ಕ್ರಿಯಾಪರ್ಯಂತ ಶುಭಾಶುಭ ನಷ್ಟಮುಷ್ಟಿ ವಿಚಾರ ಸಹಿತಮುಳ್ಳ ಜ್ಯೋತಿರ್ಜ್ಞಾನಶಾಸ್ತ್ರದೊಳ್ ಫಲಭಾಗ ಪ್ರಶ್ನಭಾಗ ಜಾತಕಭಾಗದೊಳ್ ಪೇಳ್ವ ಚತುರ್ಲಕ್ಷ ಗ್ರಂಥಪ್ರಮಾಣಮಪ್ಪ ಸಿದ್ಧಾಂತೋಕ್ಷದೊಳ್ ವೇದಾಂತರಚಿತ ಉತ್ಪತ್ತಿ ಸ್ಥಿತಿ ಲಯಹೇತುಭೂತ ಬ್ರಹ್ಮ ವಿಷ್ಣು ಮಹೇಶ್ವರಾದಿ ವರ್ತಮಾನ ಶ್ರೌತ ಸ್ಮಾರ್ತ ನಿತ್ಯ ನೈಮಿತ್ತಿಕ ಕರ್ಮ ಕಾಮ್ಯಾನುಷ್ಠಾನ ಕ್ರಿಯಾಜ್ಞಾನ ಸಾಧನ ಭೂತ ಭವಿಷ್ಯದ್ವರ್ತಮಾನಕಾಲ ಸೂರ್ಯ ಸಿದ್ದಾಂತಿನಾಮ ಶಾಸ್ತ್ರಿ ಬ್ರಹ್ಮಣೊ ಪರಮಾಯುಃ ಪ್ರಮಾಣಂ ತಸ್ಯಾಯಷೋ ಗತೇಷ್ಯಕಾಲ ಕಲ್ಪೇ ತತ್ಸಂದಿಷೃಷ್ಟಿ ಚಕ್ರಭ್ರಮಣಕಾಲ ಪೃಷ್ಟಾದೌ ಗ್ರಹ ನಕ್ಷತ್ರ ದೇವದೈತ್ಯ ಸ್ಥಾವರ ಜಂಗಮ ಮಾನುಷಾದಿ ಪಂಚಭೂತಾತ್ಮಕ ವಿಶ್ವಕರ್ಮ ನಿರ್ಮಾನ ವಿಲಂಬನ ಕಾಲಪ್ರಮಾಣಂ ಮುನ್ವಿಂದ್ರಾದಿ ಸಪ್ತ ಋಷಿ ಪ್ರಮಾಣ ಉಡುನಾಮ ಗತೈ ರೇಷಕಾಲ ಏಕೈಕಸ್ಯ ಮನೋಸ್ಸಂಧಿಜಕಾಲ ಸಪ್ತದ್ವೀಪ ನವಖಂಡಪ್ರಮಾಣ ಮಹಾ ಯುಗಾದಿ ಯುಗಕಾಲಪ್ರಮಾಂಂ ಬಲಿ ಬಂಧನಾದಿ ಪುಣ್ಯಪುರುಷಾ ಯಥಾಸಂಭವ ಭೂಗೋಲ ನವಖಂಡ ಪೃಥ್ವೀಭಾಗ ಸಹಿತಂ ಷಟ್ಟಕ್ರವರ್ತಿ ಷೋಡಕ ಮಹಾರಾಜ ಉಪರಾಜ ಶಕಪ್ರಮಾಣಾದಿಗಳಂ ಸಿದ್ದಾಂತ ಪ್ರಮೇಯಮಂ ಬಿಟ್ಟು ತದ್ವ್ಯತಿರಿಕ್ತಮಾಗಿ ಪೇಳ್ದರೆಂತೆಂದೊಡೆ

ಸೂರ್ಯಸಿದ್ಧಾಂತ ಪ್ರಕಾರಂಗಳ, ನವಬ್ರಹ್ಮರು

ಶ್ಲೋಕ || ಭೃಗು ಪೌಲಸ್ತೃ ಪುಲಹಕ್ರತುಶ್ಚೈ ವಾಂಗಿರಾಸ್ತಥಾ
ವಶಿಷ್ಠ ದಕ್ಷೌಅತ್ರೀ ಚ ಮರೀಚಿಶ್ಚ ತಥ್ಯೆವ ಚ ||
ನವ ಬ್ರಹ್ಮಾಣ ಇತ್ಯತೇ ಪುರಾಣೇಷೂದಿತಾ ಮುನೇ ||

ದಶಾವತಾರ :

ಮತ್ಸ್ಯಃಕೂರ್ಮೋ ವರಾಹಶ್ಚ ನಾರಸಿಂಹೋSಥ ವಾಮನಃ
ಪ್ರತ್ಯೂಸಶ್ಚ ಪ್ರವಾಸಶ್ಚ ವಸವೊಷ್ಟೌಪ್ರಕೀರ್ತಿತಾ ||

ಏಕಾದಶರುದ್ರತು:

ವೀರಭದ್ರಶ್ಚ ಶಂಭುಶ್ತ ಗಿರೀಶಶ್ಚಾಕ ಏಕಪಾತ್
ಅಹಿರ್ಬುಧ್ನಃ ಪಿನಾಕೀಚ [ಭೈರವಶ್ಚೇರಸ್ತಥಾ]
ವಿಶಾಂಪತಿಃಪಶುಪತಿಃ ಸ್ಥಾಣುಶ್ಚೈವಾಭವಸ್ತಾಥಾ
ಏತಾನಿ ರುದ್ರನಾಮಾನಿ ಸಂಖ್ಯಾ ಏಕಾ [ದಶೈವತಂ] ||

ಮತ್ತಮಿಶ್ವರ ಪಂಚವಿಂಶತಿ ಲೀಲಾಮೂರ್ತಿಗಳ್ ತತ್ತ್ರಿಂಶತ್ತತ್ವ್ತಂಗಳಂ ಪೇಳ್ಗುಂ

ದ್ವಾದಶಾದಿತ್ಯರು:

ಧಾತಾರ್ಯಮಾಶ್ಚ ಮಿಶ್ರಶ್ಚ ಅಂಶೂಮಾನರುಣೋ ಭಗಃ
ಇಂದ್ರೋ ವಿವಸ್ವಾನ್ ಪುಷಾ ಚ ಪರ್ಜನೈಶ್ಚೋಷ್ಣ ವಿಷ್ಣವಃ ||

ಅಷ್ಟ ಭೈರವರು:

ಅಸಿತಾಂಗೋ ರುರುಶ್ಚಂಡಃ ಕ್ರೋಧ ಉನ್ನತ್ತ ಭೈರವಃ
ಕಪಾಲೀ ಭೀಷಣಶ್ಚೈವ ಸಂಹಾರಶ್ಚಾಷ್ಟ ಭೈರವಾಃ
||

ನವನಾದಗಳು

ಬಿಂದ್ವಕಾಶೇತಿನಾಶ್ಚ ಆದ್ಯಾಕಾಶಾದ್ಯನಾದಿಕಂ
ಅನಾಮಯ ಚಿದಾಭಾಸಂ ಸಂಮನಾವ್ಯಾಪಕಾ ಮುನಿಃ
||
ಶಕ್ತ್ಯಾಕಾಶೇಶಿ ಧನ್ಯಾಶ್ಚ ನವನಾದಾಃ ಪ್ರಕೀರ್ತಿತಾಃ ||

ಅಷ್ಟ ವಸುಗಳು :

ಪಾರ್ಥಿವಃ ಕೂರ್ಮೋನಂ ತಶ್ಚ ಬ್ರಹ್ಮಶ್ವೇತ ವರಾಹಕಃ
ಬರಾಹಕಶ್ಚ ಸಾವಿತ್ರೀ ಪ್ರಳಯಶ್ಚಾಷ್ಟ ಸಂಖ್ಯಯಾ
||

ಚತುರ್ದಶ ಮನುಗಳು:

ಸ್ವಾಯಂಭುವಶ್ಚ ಸ್ವಾರೋಚಿರುತ್ತದಮಾಸ್ತಾನು ಸಸ್ತಥಾ
ರೈವತಶ್ಚಾಕ್ಷುಷಶ್ಚೈವ ತತೊ ವೈವಸ್ವತೋ ಮನುಃ
||
ಸೂರ್ಯಗ್ನಿ ಬ್ರಹ್ಮಾ ದಕ್ಷಶ್ಚ ರುದ್ರ ಸಾವಣೀಕಸ್ತಥಾ
ರೌಚ್ಯೋ ಭೌಚ್ಯೋ ಭವಶ್ಚೈವ ಮನವಸ್ತು ಚುತರ್ದಶ ||

ಸಪ್ತ ಋಷಿಗಳು:

ಕಶ್ಯಪೋsತ್ರಿರ್ಭರದ್ವಾಜೋ ವಿಶ್ವಾಮಿತ್ರಶ್ಚ ಗೌತಮಃ
ಜಮದಗ್ನಿರ್ವಶಿಷ್ಠಶ್ಚ ಸಪ್ತೈತೇ ಋಷಯಸ್ತಥಾ ||

ಅಷ್ಟಾದಶ ಸಂಹಿತಾಚರ್ಯರು :

ಬ್ರಹ್ಮಾಚಾರ್ಯೊ ವಶಿಷ್ಠ ಶ್ರೀಮನುಮೌಲಸ್ತೈ ರೋಮಶಾಃ
ಮರೀಚಂಗಿರೋ ವ್ಯಾಸೋ ನಾರದಃ ಶೌನಕೋ ಭೃಗುಃ
ಚ್ಯವನೋ ಯಮನೊ ಗಾರ್ಗ್ಯಃ ಕಶ್ಯಪಶ್ಚ ಪರಾಶಃ
ಅಷ್ಟಾದಶೈತೋ ಗಂಭೀರ ಜ್ಯೋತಿಶ್ಯಾಸ್ತ್ರ ಪ್ರವರ್ತಕಾಃ ||

ಸಪ್ತ ದ್ವೀಪಂಗಳು :

ಜಮಬೂಪ್ಲಕ್ಷಕುಶಾಶ್ಚೈವ ಶಾಕಶ್ಯಾಲ್ಮ ಲಿತಸ್ತಥಾ
ಕ್ರೌಂಚ ಪುಷ್ಕರ ಇತ್ಯೇತೇ ಸಪ್ತSದ್ವೀಪಾ ಪ್ರಕೀರ್ತಿತಾಃ ||

ಸಪ್ರ ಸಮುದ್ರಂಗಳುಃ

ಲವಣಿಕ್ಷು ಸುರಾಸರ್ಪಿ ದಧಿ ಕ್ಷೀರೋದಕಾಶ್ವ ತೇಃ

ಸಪ್ತ ಕಲ್ಪಂಗಳುಃ

ಪಾರ್ಥಿವೋ ಕೂರ್ಮಕಲ್ಪಶ್ಚ ಅನಂತೋ ಬ್ರಹ್ಮ ಕಲ್ಪಕಃ
ಶ್ವೇತೋ ವರಾಹ ಕಲ್ಪಶ್ಚ ಸಾವಿತ್ರೀಕಲ್ಪ ಏವ ಚ ||
ಪ್ರಲಯಶ್ಚ ತಥಾಃ ಸಪ್ತಕಲ್ಪಾಃ ಕೀರ್ತಿತಾಃ

ನವಖಂಡಂಗಳು:

ಇಂದ್ರಘ ಕಶೇರುಸ್ತಾಮ್ರಶ್ಚ ಗಭಸ್ತಿರ್ನಾಗ ಏವ ಚ
ಗಂಧರ್ವಶ್ವಾರುಣಶ್ಚೈವವಾರುಣೋ ಭರತಸ್ತಥಾ ||
ನವ ಖಂಡಾ ಇತಿಖ್ಯಾತಾಃ ಖಂಡನಾಮ ಯಥಾಕ್ರಮಮ್ ||

ಜಂತುಸ್ಥಾನಂಗಳು

ಜಲಜಾದ್ಯಾಃ ಮನುಷ್ಯಾದ್ಯಾ ಅಂಡಜಾಃ ಪನ್ನಗಾದಯಃ
ಸ್ವೇದಜಾಃ ಕ್ರಿಮಿಕೀಟಾಶ್ಚವಾಯುಜಾ ಬುದ್ಬುದಾದಯಃ ||

ಭೇದಂಗಳು:

ಜಲಜಂ ನಲಕ್ಷಂತು ಸ್ಥಾವರಂ ಲಕ್ಷವಿಂಶತಿಃ
ಕ್ರಿಮಿಕೀಟಾ ರುದ್ರ ಸಂಖ್ಯಾಃ ಪಕ್ಷಿಣಾಂ ದಶಲಕ್ಷಕಮ್ ||
ತ್ರಿಂಶಲ್ಲಕ್ಷಂ ಗಜಾಶ್ವಾದಿ ಚಾತುರ್ಲಕ್ಷಂ ಮಾನವಾಃ
ಚತ್ವಾರ್ಯಶೀತಿ ಲಕ್ಷಣಿ ಯೋನಿರ್ಜಾತಾಹಿಪ್ರಾಣಿನಾಮ್ ||

ಆಯುಃ ಪ್ರಮಾಣಂ:

ಶತಾಯುಃ ಪ್ರರುಷಾಣಾಂ ಶತವಿಂಶತಿ ರಾಕ್ಷಸಾಃ
ತಟಿದ್ವೃಕ್ಷ ಸಹಸ್ರಾಶ್ಚತದರ್ಧಗುಲ್ಯ ಜಾತಯಃ
||
ಪಟ್ತ್ರಂಶನ್ಮೃಗಪಕ್ಷೀಣಾಂ ಕಾಕಃ ಘಣಿಸಹಸ್ರಕಮ್
ಚೌಷಷ್ಟಿ ವ್ಯಾಘ್ರ ಮಾರ್ಜಾರಾಃಶತಂ ಕುಂಜರಕೇಸರೀ ||
ಛಲ್ಲೂಕಾ ವಾನರಾಣಾಂ ಚ ಮಂಡೂಕಾಣಾಂ ಶತತ್ರಯಮ್
ತಥಾ ಕ್ರೋಷ್ಟೃಮೃಂಗಾದೀನಾಂ ವರಾಹಾಣಾಂ ತ್ರಯೋದಶ ||
ಮತ್ಯ್ಸಾನಾಂ ತು ಸಹಸ್ರಾಬ್ದೌ ದ್ವಾತ್ರಿಂಶದ್ದಾಜಿನಾಂ ತಥಾ
ಹಂಸಸ್ಯ ಪಂಚಶತಂ ಕಪೋತಂ ಚ ತಥೈವ ಚ ||
ಟಿಟ್ಟಭಂ ಪಂಚಶರಕಂ ಊಲೂಕಂ ಚ ತಥೈವ ಚ
ಪಾರಾವತಂ ಪಂಚಶತಂ ಕುಕ್ಕುಟಶ್ವಾಷ್ಟ ವರ್ಷಕಮ್ ||
ಟಿಟ್ಟಿಭೋ ಬರ್ಹಿಣಶ್ಚೈವವತ್ಸರರಾ ವಿಂಶತಿಸ್ತಥಾ
ಪಂಚಾವಿಂಶದ್ಗೋಮಹಿಷಾ ವೃಷಾಣಾಂ ಚ ತಥೈವ ಚ ||
ವಿಂಶದರ್ಷಂ ವಿಹಂಗಾನಾಂ ವರ್ಷಂ ಜೀವೇತ್ಪಿಪೀಲಿಕಾಃ
ಭಾಗಾನಣ ಷೋಡಶಾಬ್ದಶ್ಚ ಚತುರ್ವಿಂಶತಿ ಗಾರ್ದಭಃ
ಪಿಕಾನಾಂ ನವ ವರ್ಷಾಣಿ ಕೂರ್ಮಾಣಾಂ ಚ ಸಹಸ್ರಕಮ್ ||
ಊಲೂಕ ಶ್ವೇತ ಗೃಧ್ರಾಣಾಂ ಪಂಚವಿಂಶತಿವತ್ಸರಾಃ
ದ್ವಾದಶಂ ಶುಕನಾದೀನಾಂ ಶಶಾಂಕಾನಾಂ ತಥೈವ ಚ ||
ಭಾದ್ವಾಜಸ್ತು ಷಡ್ವರ್ಷಂ ಕುಕ್ಕುಟೋ ನವಮಾಸಿಕಃ
ಗೋದ್ದನಾಂ ಸರಟಾನಾಂ ಚ ವರ್ಷತ್ರಯಮುದಾಹೃತಮ್ ||
ತಥೈವ ಗ್ರಹನೊದೀನಾಂ(?) ದ್ವಾದಶಾಬ್ದಸ್ತು ಕೋಕಿಲಃ
ಜಂಬೂಮುಷಿಕಭಛಲ್ಲೂಕಾ ಸಾರ್ಧವರ್ಷ ಚತುಷ್ಟಯಮ್ ||
ಪಂಚವಿಂಶತಿರವ್ದಾಯುರ್ಗೃದ್ಧೃ ಪಿಂಗಲ ಕಂಜರೀ
ಶುಕಾನಾಂ ಷೋಡಶಾಬ್ದಶ್ಚ ಸಾಲಾನಾಂ ದಶವರ್ಶಕಮ್ ||
ಮಕ್ಷಿಕಾಣಾಂ ಷಣ್ಮಾಸಂ ಮುತ್ಕುಣೋ ವತ್ಸರಸ್ತ ಚ ||
ಮೂಷಕಾನಾಂ ತ್ರಿಮಾಸಂ ಸ್ಯಾತ್ ಶಲಭಾನಾಂತು ವತ್ಸರಃ ||
ಸ್ವೇದಜಾನಾಂ ತ್ರಿಮಾಸಂ ಸ್ಯಾದ್ವೃಶ್ಚಿಕಾದ್ವಯವರ್ಷಿಕಾ(?)
ಅಂಡಜಾನಾಂ ಚ ಸರ್ವೇಷಾಂ ಮಾಸಮೇಕಂ ಪ್ರಕೀರ್ತಿತಮ್ ||
ಕ್ರಿಮಿಬದ್ವುದ ಜಾತೀನಾಮಷ್ಟರಾತ್ರಂ ಪ್ರಕೀರ್ತಿತಮ್
ಅಸ್ಥಿರಾಣಾಂ ಚ ಸರ್ವೆಷಾಂ ಜಂತು ನಾಮಯುರಿತ್ಯಪಿ ||

ಕಾಲನಿರ್ಣಯ ಶತಮಾನಂಗಳು:

ಬ್ರಹ್ಮದೇವಮನುಮ್ಮಾನಂ ಪಿತೃಸಾಋಂ ಚ ಸಾವನಮ್
ಚಾಂವ್ರನಕ್ಷತ್ರ ಸೌರಂ ಚ ನದಮಾನಃ ಪ್ರಕೀರ್ತಿತ(
?) ||

ಅದೆಂತೆಂದೊಡೆ –

ಚತರ್ಯುಗ ಸಹಸ್ರಾಣಿ ಬ್ರಹ್ಮಾಣೋ ದಿವಮುಚ್ಯತೇ
ಏಕಾತಿ ಗಣಸಂಖ್ಯಾನಿ ಬ್ರಹ್ಮಮಾನಂ ವಿಧೀಯತೇ
||
ಷಷ್ಟಿ ಷಸ್ಗುಣಿತಂ ದಿವ್ಯಂ ವರ್ಷೇ ದ್ವೇ ಸುಮೆಹನಿಂ(?)
ಮಾನಂ ಚ ಇತಿ ವಿಖ್ಯಾತಂ ದೇವಮಾನಂ ವಿಧೀಯತೆ ||
ಕಲ್ಪ ಬ್ರಹ್ಮಮಯಂ ಪ್ರೋಕ್ತಂ ಶಾರ್ವರೀತಶ್ಚರಾಷತಿ (?)
ಯುಗಾನಾಂ ಸಪ್ರತಿಶ್ಚೈಕಂ ಮನ್ವಂತರಮಿಹೋಚ್ಯತೆ ||

ಪಿತೃಮಾನ:

ಚಾಂದ್ರಾಮಾನ ತಥಾ ಸಂಖ್ಯಾ ಪಿತೃಮಾನಸ್ತದೈವ ಚ
ತತಃ ಪಂಚಮಾನಾನಿ ಉಚ್ಯಂತೆ
ಸೌರಸೂರೇಜ್ಯ ಸಾವನ ಶಶಿ ನಕ್ಷತ್ರಕಾಃ ಕ್ರಮಾತ್
ಪಂಚಮಾತುಲ ಪಾತಾಳ ಆತುಲಪ ವಿಮಲಸ್ತಥಾ ||
ವರಾಂಗ ಇತಿ ಸಂಖ್ಯಾತಾ ವತ್ಸರಾಶ್ಚೈವ ಪಂಚಭಿಃ ||

ವೃ ||     ಸಾರೊ ರಾಶಿಷು ಸೂರ್ಯಸಂಕ್ರಮಣಕಾಶ್ಚಾಂದ್ರಾಸ್ತು ದರ್ಶೌಂತಿಕಾಃ
ವಿಜ್ಞಾನೇ ಶಿತಪಕ್ಷಪಕ್ಷತಿ ಮುಖಾಸ್ತ್ರಿಂಶದ್ದಿನಂ ಸಾವನಮ್
ನಕ್ಷತ್ರಂ ಶಶಿಮಂಡಲಾದಿತಿಮತಂ ಮಾಸಾಶ್ಚತುರ್ಥಾಃಕ್ರಮಾತ್
ಸೌರೇಜ್ಯೇ ಸ್ಥಿರ ರಾಶಿ ರಾಶಿ ಗಮನಂ ಮಾನಾನಿ ಸಂಖ್ಯಾಕ್ರಮಾತ್ ||
ಚತುರ್ಭಿವ್ಯವಹರೋಕ್ರಂ ಸೌರಂ ಚಾಂದ್ರೇಕ್ಷುಸಾವನ್ಯೆಃ
ಶೇಷಾಂ ಪೃಥಕ್ ಪೃಥಕ್ಕಾರ್ಯಂಪಕ್ಞಾಸ್ತು ವ್ಯವಹಾರಿಕಾಃ ||

ಇನ್ನು ದಶವಿಧ ಕಾಲಂ

ತ್ರುಟಿಲವನಿಮೇಷಶ್ಚಗುರ್ವೀ ಪ್ರಾಣವಿನಾಡಿಕಾನ್
ನಾಡೀನಕ್ಷತ್ರನಾಸಾಶ್ಚ ಸಂವತ್ಸರಮುದಾಹೃತಂ
||

ಕಾಲನಿರ್ಣಯ

ತೀಕ್ಷ್ಣ ಸೂಚ್ಯಾಂಬ್ಜ ಪುಷ್ಯಸ್ಯ ದಳಭೇದ ಸೃಜಿರ್ಭವೇತ್
ತದ್ಚತಂ ಲವಮಿತ್ಯಕ್ರಂ ತತ್ರಿಂಶಸ್ತು ನಿಮೇಷಕಃ ||
ನಿಮಿಸ್ಯೇ ಸಪ್ತವಿಂಶಶ್ಯಾ ಕಾರ್ಲೊಗುರ್ವಕ್ಷರಸ್ಯ ತು
ದಶಗುರ್ವಲಕ್ಷರೋಚ್ಚಾರಃ ಕಾಲಃ ಪ್ರಾಣೋಭಿಧೀಯತೇ ||
ಪಡ್ಭಿಃ ಪ್ರಾಣೈರ್ವಿನಾಡೀ ಸ್ಯಾತ್ತತ್ಷಷ್ಟ್ಯ ನಾಡಿಕಾ ಸ್ಮೃತಾ
ನಾಡೀಷಷ್ಟ್ಯಾತು ನಾಕ್ಷತ್ರಂ ಆಹೋರಾತ್ರಂ ಪ್ರಕೀರ್ತಿತಮ್
ದಿನೈಃ ಪಂಚದಶೈಃ ಪಕ್ಷಃ ಪಕ್ಷೌ ದ್ವೌಮಾಸ ಉಚ್ಯತೇ
ಮಾದ್ವಯೌ ಋತುಶ್ಚೈವ ಋತುತ್ರಯ ಮಥಯನಮ್ ||
ಆಯನದ್ವೇ ಚ ವರ್ಷಂ ಸ್ಯಾತ್ಕಾಲಸಂಖ್ಯಾ ಪ್ರಕೀರ್ತಿತಾ

ಈ ನ್ಯಾಯದಿಂ ಬ್ರಹ್ಮಣಃ ತೃಟಕಾಲಪ್ರಮಾಣ || ತಿಂ=೫ ದಿ/೨೭ ಘ=೪೬ವಿ=೪೦, ಈ ಪ್ರಕಾರ ಪೆರ್ಚೆ ಲವಾದಿಗಳು ಗುಣಿಸುತ್ತಿರಲ್ ಬ್ರಹ್ಮಣ ವರುಷ ಪ್ರಮಾಣು ೩೧೧೦೪೦೦೦೦೦೦೦೦ ಬ್ರಹ್ಮಣ ಪರಮಾಯುಂ ಮೂರು ಪಲ್ಯವು ಒಂದು ಮಹಾಖರ್ವವು ಒಂದು ಖರ್ವದ ಮೇಲೆ ನಾಲ್ಕುರ್ಬುದಂಗಳು ಮತ್ತಂ

ಪಿತಾಮಹ ಸಹಸ್ರೇಷು ವಿಷ್ನೋಶ್ಚ ಘಟಿಕಾ ಭವೇತ್
ವಿಷ್ಣೋರ್ದ್ವಾದಶಲಕ್ಷಂ ತು ಈಶ್ವರಸ್ಯ ಕ್ಷಣಂ ಭವೇತ್
||
ಈಶಾನಾಂ ಶತಕೋಟಸಯಸ್ತು ಪರಮಾಣುಃ ಸದಾಶಿವಃ |

ಬ್ರಹ್ಮನ ಪರಮಾಯು ಕಾಲುಮೆಂಬುದಾಗಳು ಸೂರ್ಯ ಬ್ರಹ್ಮಮಾನದಿಂ ನೂರು ವರ್ಷಮಕ್ಕುಂ ಬ್ರಹ್ಮನ ಅಹೋರಾತ್ರಿ ಮನುಷ್ಯ ಸೃಷ್ಟಿ ಸಂಹಾರಕಲ್ಪಮಕ್ಕುಂ ದೇವರ್ಕಳ ೭೧ ಯಂಗಂಗಳ್ಗೆ ಮನ್ವಂತರಮೆಂಬ ಪೆಸರಪ್ಪುದಂ ಬ್ರಹ್ಮಾಯುರ್ದಿನಂ ಪ್ರಲಯಕಾಲಮೆಂಬುದು. ಅಗಳ್ ಸೂರ್ಯ ಚಂದ್ರಾದಿಗಳಿಲ್ಲದಾ ಕಾಲ ಸೌರಾಬ್ದಂಗಳು ಮುರು ಮಹಾಪದ್ಮ, ಒಂಬತ್ತು ಪದ್ಮ, ಒಂಬತ್ತು ಮಹಾಖರ್ವ, ಎರಡು ಖರ್ವ, ಒಂದು ನಿರ್ಬುದ, ನಾಲ್ಕರ್ಬುದ ಎಂಟುನೂರನಾಲ್ವತ್ತಾರುಕೋಟಿ ಎಂಬತ್ತಾರು ಲಕ್ಷ ತೊಂಬತ್ತೆಂಟು ಸಾವಿರದ ಮುನ್ನೂರರುವತ್ತೊಂದು ವರುಷಮಪ್ಪುದಾಗಳ್ ಸಪ್ತಸಾಗರ ದ್ವೀಪ ಪರ್ವತಂಗಳ್ ಜಲಪ್ರಳಯವಾಗಿ ತುಂಬಿ ಬ್ರಹ್ಮಾಂಡ ಮುಳುಗೆ ಪುರುಷೋತ್ತಮ ಮಹಾದೋಷಮಾನಂದಲೀಲೆಯಿಂ ನಿದ್ರೆಯೊಳಿರ್ಪ ವಿಷ್ಣು ಪ್ರಣವಸಾನಂತರಂ ಈಶ್ವರಪ್ರಯತ್ನದಿಂ ಪುನಃ ಸೃಷ್ಟ್ಯಾರ್ಥಮಾಗಿ ಬ್ರಹ್ಮ ಪುಟ್ಟುವಂ ಬ್ರಹ್ಮರಾಜಸದಿಂ ನಿತ್ಯವಿಭು ವಷ್ಣುವ ಕೂಡೆ ಸಂವಾದಮಾಗೆ ತದುದರಮಾಶ್ರಯಿಸಿದನಂತಕೋಟಿ ಬ್ರಹ್ಮಾಂಡಂಗಳಂ ಕಂಡುಮದಂ ಪೊರಮಡಿಸಲಶಕ್ಯದಿಂ ದೇವದೇವನ ನುತಿಸುತ್ತಂ ನಿನ್ನ ಪ್ರಸಾದದಿ ಪೊರಮಟ್ಟಿತೆಂದಂ.

ಶ್ಲೋಕ || ಮಧು‌ಕೈಟಭನಾಮಾನೌ ವಿಷ್ಣುಕರ್ಮಮಲೋದ್ಭವೌ
ತೌ ಚಕ್ರೀಣಾ ಹತೌ ದಿವ್ಯಸಹಸ್ರಾಬ್ದೇನ ಸಂಯುಗೇ ||

ಆ ಯುದ್ದಕಾಲ ೬೦೩೪೮ ವರುಷ ಧರ್ಮದಿಂ ನಿರ್ಮಿಸಿದ ಭೂಮಿಯದರರ್ಧದಿಂದೂರ್ಧ್ವಾಂಗ ಮಹಾಮೇರು ಒಂದು ಕೋಟಿ ವಿಸ್ತಾರ ಧ್ರುವಲೋಕೋಪರಿ ಶಿಖರಂ. ಅದರ ಮೂಲದೊಳ್ ಬ್ರಹ್ಮಲೋಕಂ ಮಧ್ಯದೊಳು ವಿಷ್ಣುಲೋಕಂ ಮೇಣ್ ರುದ್ರಲೋಕಮದರ ಭೂಮಂಡಲದೊಳ್ ದೀಪಸ್ತಂಭದಂತಿರ್ಪುದದರ ಭಾಜನದಂತಿಪ್ಪ ಲೋಕಂ ಪಂಚಾಶತ್ಕೋಟಿ ವಿಸ್ತಾರಮದರ ಕೆಳಗೆ ಆತಲ ವಿತಲ ಸುತಲ ಮಹಾತಲ ರಸಾತಲ ತಲಾತಲ ಪಾತಾಲಾದಿ ಪತ್ತನಾದಿಯದಸ್ಸಪ್ತಂಗಳು. ಮೇಲೆ ಕರ್ಕೊಟಕ ವಾಸುಕಿ ಕುಳಿಕ ಶಂಖಪಾಲ ಪದ್ಮ ತಕ್ಷಕ ಅನಂತಾದಿ ಸಪ್ತ ನಾಗರಾಜಾಧಿಷ್ಠಿತ ತಲ್ಲಲಾಟ ದೇವಾಂಗ ಕಿರೀಟಾಭರಣ ವಸ್ತ್ರದಿನಲಂಕೃತರು ಕಲ್ಪದ ನಡುವೆ ಅಮೃತಾನ್ನ ಹಾರ ಜೀವ ರತ್ನಲಲಾಟ ಪರಿವಾರ ಪ್ರಜಾಲ ಸಹಿತ ಕಾಮಧೇವ ಉಪಭೋಗಾರ್ಥಮಿಪ್ಪುದು ಅಧೋಲೋಕಂ. ಅದರ ಮೇಲೆ ಭೂಲೋಕದ ಮಹಾಮೇರುವಂದು ಹರಿದಾರಿಯಲ್ಲಿ ಅಷ್ಟದಳಾಕಾರದೊಳು ಇಂದ್ರಾದ್ರಿ ಪಾವಕಾದ್ರಿ ಕಾಲಾದ್ರಿ ರಾಕ್ಷಸಾದ್ರಿ ವರುಣಾದ್ರಿ ಅನಿಲಾದ್ರಿ ಅಲಕಾದ್ರಿ ರಜತಾದ್ರಿಗಳೆಂಬೆಂಟು ಪರ್ವತಂಗಳು, ಚತುರ್ದಶ ಲೋಕಂಗಳು, ಐರಾವತಾದಿ ಗಜಂಗಳು ಪೊತ್ತಿರ್ಪುವು. ಆ ಪರ್ವತಂಗಳಲ್ಲಿ ದಿವ್ಯ ಸ್ತ್ರೀಯರ್ವೆರಸು ಅಮೃತಪಾನಂಗಳಿಂ ಕ್ರೀಡಿಸುತ್ತ ಇಂದ್ರಾದಿ ಲೋಕಪಾಲರು ದೇವರ್ಕಳು ಕ್ರೀಡಿಸುತ್ತಿದ್ದಾರೆ. ಬಹಿರ್ಲವಣಾದಿ ಸಪ್ತಸಾಗರಂಗಳು ವೇಷ್ಟಿಸಿದ ದ್ವೀಪಂಗಳುಮಂತರದೊಳು ಗರುಡ ಗಂಧರ್ವ ಕಿನ್ನರ ಕಿಂಪುರುಷ ಸಿದ್ಧ ವಿದ್ಯಾಧರಾದಿಗಳಿಪ್ಪುರು. ಏಕ ಲಕ್ಷ ಯೋಜನ ಲವರ್ಣಾಣವದಂತರ ಭೂಮಂಡಲದೊಳು ನವ ಖಂಡಗಳಿಪ್ಪವು. ಇಳಾಮಧ್ಯವರ್ಷ ಮೇರುಪುರಸ್ಥ ಭದ್ರಾಶ್ವಾಖ್ಯಂ ತತ್ಪಶ್ಚಾತ್ಕೇತು ಮಾಲಾ ಉತ್ತರದಿ ತ್ರಯೋವರ್ಷ, ದಕ್ಷಿಣ ಹರಿವರ್ಷ,ಕಿಂಪುರುಷೋಪರಿ ಭಾರತ ವರ್ಷ, ಹಿಮಾದ್ರಿ ಲವಣಾರ್ಣವದ ಮಧ್ಯಮಿಪ್ಪದು. ಹಿಮಾದರಿವರುಷದ್ವಯದ ಸೀಮಾ ಪರ್ವತದ ದಕ್ಷಿಣದೊಳು ನೈಮಿಶಾರಣ್ಯವನಮಲ್ಲಿ ಸಿಂಹ ಶರಭ ಶಾರ್ದೂಲ ಗಂಡಭೇರುಂಡಾದಿಗಳಿಪ್ಪವು. ವಶಿಷ್ಟ ವಿಶ್ವಾಮಿತ್ರ ವಾಮದೇವ ಪರಾಶರ ಯಾಜ್ಷ ವಲ್ಕ್ಯ ಅತ್ರಿ ಭೃಗು ಭರದ್ವಾಜಾದಿಗಳವರ ಶಿಷ್ಯರ್ವೆರಸು ಯಜ್ಚಾದಿ ಪುಣ್ಯಕರ್ಮದಿಂದಿರ್ಪರಲ್ಲಿಂ ದಕ್ಷಿಣವಿಂಧ್ಯಾದ್ರಿ ಕ್ರೌಂಚಾರಣ್ಯಮಲ್ಲಿಂದ ದಕ್ಷಿಣ ದಂಡಕಾರಣ್ಯ ಮತ್ತಮ ಗಂಗಾ ಹಿಮವನ್ಮಧ್ಯೇ ಸೂರ್ಯನಂದನಂಗೆ, ವಿಂಧ್ಯಾದ್ರಿ ಗಂಗಾಮಧ್ಯೇ ಭೂಮಿ ಬುಧಂಗೆ, ವಿಂಧ್ಯ ಗೋದಾವರಿ ಮಧ್ಯಭೂಮಿ ಗುರುವಿಂಗೆ, ಗೋದಾವರಿ ಕೃಷ್ಣವೇಣಿ ಮಧ್ಯಭೂಮಿ ಶುಕ್ರಂಗೆ, ಕೃಷ್ಣವೇಣಿ ಲಂಕಾಮಧ್ಯಭೂಮಿ ಭೌಮಂಗೆ, ಸಮುದ್ರಕ್ಷೋಣಿ ಸೂರ್ಯಂಗೆ, ತದ್ವಲಯಂ ಚಂದ್ರಂಗೆಂಬುದು.

ಭೂಮಿಯಿಂ ಮೇಲಯುತ ಯೋಜನದಿಂದ್ರಲೋಕಂ. ಲಕ್ಷಾಂತರ ಸೂರ್ಯಂ, ದ್ವಿಲಕ್ಷಾಂತರಂ ಚಂದ್ರಮಷ್ಟಲಕ್ಷಾಂತರಂ ಕುಜಂ, ದ್ವಾದಶಂ ಬುಧಂ, ಷೋಡಶಂ ಗುರು, ದ್ವಾದಶಂ ಶುಕ್ರಂ, ಚತುರ್ವಿಂಶಲ್ಲಕ್ಷಾಂತರೇ ಶನಿ, ಪಂಚವಿಂಶಲ್ಲಕ್ಷಾಂತರೇ ಧ್ರುವದ ಮೇಲೆ ಆಕಾಶಮೊಂದೆ, ಇಂತು ಲೋಕ ಸಮುದ್ರ ದ್ವೀಪ ನಂದನ ಪರ್ವತ ಪುಣ್ಯಾರಣ್ಯ ಭರತ ಕಿಂಪುರುಷ ಹರಿ ಇಳಾವೃತ ಮಂದಹರಣ ಕಲ್ಕಿಹರಣ ಪಾರಿಚಜಾದ್ಯ ಇಂದ್ರಕಶೇರು ತಾಮ್ರ ಗಭಸ್ತಿ ನಾಗ ಗಂಧರ್ವ ಅರುಣ ಭರತಾದಿ ದೇಶಂಗಳ ರಾಜರುಗಳು, ನವಖಂಡ ಭೂಮಂಡಲಮೆಲ್ಲಂ ಬ್ರಹ್ಮಾಂಡಮಂದರೊಳೆಟಡಗಿಪ್ಪವೆಂದು ಮತ್ತೆ ಬ್ರಹ್ಮಜನ್ಮಾಧಿಗತ ಏಷ್ಯಸಾರಾಬ್ದಂಗಳು ಬ್ರಹ್ಮಸೃಷ್ಟಿಗತಾಬ್ಧ ಗ್ರಹ ನಕ್ಷತ್ರ ದೇವ ದೈತ್ಯ ಸ್ಥಾವರ ಜಂಗಮ ಮಾನುಷಾದಿ ಪಂಚಭೂತಾತ್ಮಕ ವಿಶ್ವಕರ್ಮ ವಿಲಂಬನ ಕಾಲ ಪ್ರಮಾಣಂ ೧೭೦೧೨೦೦೦ ಕಲ್ಪಪ್ರಮಾಣಂ ೮೮೧೮೩೭೨೦೦, ಮತ್ತಂ ಕಲ್ಪಸಂಧಿಯಲ್ಲಿ ಚತುರ್ದಶ ಮನುಗಳು ವರುಷ ೪೩೧೮೩೭೨೦೦, ಮನ್ವಿಂದ್ರಾದಿ ಸಪ್ತ ಋಷಿ ಪ್ರಮಾಣಂ೩೦೪೭೨೦೦೦೦ ವೈವಸ್ವತಮನು ಗತಕಾಲ ಮನುಸಂಧಿಕಲ್ಪಗತೋ ಉತ್ತರಮೈವತ್ತು ವರುಷ ಶ್ವೇತ ವರಾಹ ಕಲ್ಪಂ ವರ್ತಿಸುಗುಂ.

ವೃತ್ತ || ತ್ರೈಲೋಕ್ಯೆ ಮಧುಸೂದನಸ್ಯ ಜಗತೇ ಸಾರ್ಪೇಕಶೇಷಾಶ್ರಯಾ
ಸೋಪ್ಯೇವಂ ಹರಕಂಣಸ್ಯ ಚ ಹರೇ ಕೈಲಾಸ ಕೊಣೇ ಸ್ಥಿತೇ
ಕೈಲಾಸೋSಪಿನ ಲಕ್ಷೈತೇ ಕ್ಷಿತಿತಲೇ ಸಾಯಸ್ಯಮಬ್ಧಿಂ ದವಃ(?)
ದಂಷ್ಟ್ರಾಗ್ರೇ ವಸಂಚಣ ವತುಕಲ (?) ಕ್ರೋಧಾವತಾರೋ ಹರಿಃ ||

ಬ್ರಹ್ಮ ಪ್ರಥಮ ಪ್ರಾಗಣತಕಾಲ ಸಾರಾಬ್ಧ ೧೪೮೬೯೪ ಏಷ್ಯಾಬ್ದ ೨೫೧೩೦೬, ಅಲ್ಲಿ ಸ್ವಾಯಂಭುವವ ಸ್ವಾರೋಚಿಸಿ ಉತ್ತಮ, ತಾಮಸ, ರೈವತ, ಚಾಕ್ಷುಷಮೆಂಬ ಷಣ್ಮನುಗಳಾಗೆಮ ಏಳನೆಯ ವೈವಸ್ವತ ಮನ್ವಂತರದೊಳು ಸಪ್ತವಿಂಶನ್ಮಹಾಯುಗಂಗಳ್ಪೋಗೆ ಇಪ್ಪತ್ತೆಂಟನೆ ಯುಗದೊಳು ಕೃತ ತ್ರೇತಾ ದ್ವಾಪರೆಯುಗಂ ಸಲ್ವುದೀಗಳು ಕಲಿಯುಗಂ ಪ್ರವರ್ತಿಪುದು.

ಮುಂದೆ ಸೂರ್ಯಸಾವರ್ಣಿ, ಅಗ್ನಿಸಾವರ್ಣಿ, ಬ್ರಹ್ಮಸಾವರ್ಣಿ, ದಕ್ಷಸಾವರ್ಣಿ ರುದ್ರಸಾವರ್ಣಿ ರೌಚ್ಯ, ಭೌಚ್ಯರೆಂದೀ ಸಪ್ತ ಮನುಗಳು, ಬ್ರಹ್ಮಂತಧೂರ್ಧ್ವದ ಪ್ರಲಯದ ಮೇಲೆ ಸಾನುಮತಂ ಬ್ರಹ್ಮನಪ್ಪ ಬಲೀಂದ್ರ ದ್ರೋಣಂ ವ್ಯಾಸನಪ್ಪ ಪುನಸ್ಸಪ್ರದ್ವೀಪ ನವಖಂಡಂಗಳಪ್ಪವವರ ಪ್ರಮಾಣಂ ೮೬೪ ಕೋಟಿಯಕ್ಕುಂ. ||೧ || ಮಹಾಯುಗ ಪ್ರಮಾಣಂ ೪೩.೨೦೦೦೦. ಅಲ್ಲಿ ಕೃತಯುಗಾದಿಯನರಿವುದಕ್ಕೆ.

ನನ್ನನತಪ್ಪರದರ್ಕರ
ಮನ್ನಾಲ್ಕು ಪ್ರತಿಯುನಿಟ್ಟು ಜಿತವಾರದೊಳಿರಿ
ಯುನ್ನತ ಕೃತಯುಗ ಮೊದಲಾ
ದ ನಾಲ್ಕು ಯುಗಂಗಳಿಂತು ತಪ್ಪದೆ ಬಪ್ಪುವು (
?)

ಕೃತಯುಗ ಪ್ರಮಾಣಂ ೧೭,೨೮,೦೦೦.

ಶ್ಲೋಕ || ಪರಿತ್ರಾಣಾಯ ಸಾಧೂನಾಂ ವಿನಾಶಾಯಾತಿ ದುಷ್ಕೃತಾಂ
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||
ಅವತಾರ ||

ಮತ್ಸ್ಯಃ ಕೂರ್ಮೋ ವರಾಹಶ್ಚ ನಾರಸಿಂಹೋಥ ಭಾರ್ಗವಃ
ಶರಸಂಖ್ಯಾವತಾರಿಸ್ಯುರ್ಹರೆರ್ಜಾತಾ ಕೃತೆಯುಗೇ
||