ದೇವೋ ಆದಿವರಾಹಃ ಪುಷ್ಕರಿಣಿ ತೀರ್ಥಂ, ಊರ್ಜಯತ ನಗರಂ, ಪುರುಷ ಪ್ರಮಾಣಮಷ್ಟಾವಿಂಶತಿ ಹಸ್ತೋನ್ನತಂ ಚತುಶ್ಯತಾಯಃ, ದೀರ್ಘ ದೇಹಃ ಬ್ರಾಹ್ಮಣ ವರ್ಣ ಬಲವಾನ್, ಧರ್ಮಸಂಪೂರ್ಣ, ಆಭಿಗಮ್ಯಕೃತೆ ದಾನಮ, ಮನುಷ್ಯಾಪಸೋಧ್ಯಾ ನಿಹಃ, ಪರ್ವತಾಗ್ರವಾಸಿನಃ, ತೇಷಾಮುಪಭೋಗಾರ್ಥಂ ಕಲ್ಪವೃಕ್ಷಾಃ, ಆರೋಗ್ಯವಂತಃ, ಯುಗಾಂತೇ ಮಾಸ ಮಾಸ ಗರ್ಭೋತ್ಪತ್ತಿಃತೆ ವಿಷಯಮುತ್ಪನ್ನಸ್ತತೊ ವೃಕ್ಷಾದಯೊ ನಷ್ಟಫಲದಾಃ ಸದಾ ಧರ್ಮವ್ಯವಸ್ಥಾಸ್ಮಿನ್ಯುಗೇ ರಾಜಾನಃ ||

ಶ್ಲೋಕ || ಹರಿಶ್ಚಂದ್ರೋನಳೋ ರಾಜಾ ಪುರುಕುತ್ಸಃ ಪರೂರವಃ
ಸಗರಃ ಕಾರ್ತವೀರ್ಯಶ್ಚ ಷಡೇತೇ ಚಕ್ರವತಿನಃ ||
ಬ್ರಹ್ಮಾಚ ವಾಲಖಿಲ್ಯಶ್ಚ ರಾಹುಕೇತುರ್ಜಯೇ ನೃಪಃ
ಹಿಮಗಂಧೋ ಮಹಾಗಂಧೋ ಹಿರಣ್ಯಾಕ್ಷೋ ಬಕಾಸುರಃ
ಕಾರ್ತವೀರ್ಯಸ್ತಾ ರಕಶ್ಚ ಮಹಿಷೋ ಮುಕುಟಾಸುರಃ
ನಳಸಿದ್ಧೋ ರಾವಣಶ್ಚ ಪಿಂಗಳೋ ಪದ್ಮಲೋಚನಃ
ಬ್ರಹ್ಮೋತ್ತಬಲೀ ಚಂದ್ರೋ ವ್ಯಾಘ್ರಜೋ ರಕ್ತ ಕೇಶಿನಃ ||
ಸಹಸ್ರಾಕ್ಷಃ ಪದ್ಮಕಶ್ಚ ರತಜಿಹ್ವೋ ವಿಭೀಣಃ
ಏಕೋನತ್ರಿಂಶತಿಶ್ಚೈಬ ಭೂಪಾಃ ಕೃತಯುಗೇಶ್ವರಾಃ ||

ಕೃತಯುಗ ಸಂಧಿ ೨೮,೮೦೦ ವರ್ಷ, ಮತ್ತಂ ತ್ರಾತಾಯುಗಪ್ರಮಾಣಂ ೧೨೯೬,೦೦೦.

ಯದಾ ಯದಾ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾ ನಮಧರ್ಮಸ್ಯ ತದಾತ್ಮಾನಂ ಜೃಜಾಮ್ಯಹಂ
||
ಅಸ್ಮಿನ್ಯುಗೆ ಅವತಾರಾಃ
ಬಲಿ ರಾವಣ ಶಿಕ್ಷಾಯಾಂ ದ್ವಿಧಾ ಜಾತೋ ಹರಿಃ ಸ್ವಯಮ್
ವಾನಮೋ ರಾಘವಶ್ಚೈವ ಲೋಕಾನುಗ್ರಹಕಾರಣಾತ್ ||

ವಾಮನೋ ರಘುನಾಯಕ, ಸರಯುನದೀತೀರ್ಥಂ ಅಯೋಧ್ಯಾನಗರಂ ಪುರುಷಪ್ರಮಾಣಂ ಚತುರ್ದಶ ಹಸ್ತಾಃ ತ್ರಿತಶತಾಯಹ ಕ್ಷತ್ರಿಯವರ್ಣೋ ಬಲವಾನ್ ತ್ರಿಪಾದದ ಧರ್ಮಃ ಮನುಷ್ಯಲೋಭಾಭಿಭೂತಾ ಇತರ ದೋಷರಹಿತಾ ಜ್ಞಾನಾನಾಜ್ಞಾದಿ ಶ್ರೀಹರಿಜ್ವಲಯತಿ ತೇಷಾಮುಪರ್ಭೋಗಾರ್ಥಂ ಕಲ್ಪವೃಕ್ಷ ಆಭರಣಾದಿ ಪ್ರಸೂಯಂತೆ. ಕಾಲಾಂತರವೇಣ ಮಧುಫಲವೃಕ್ಷಂ ಹರತಿ. ತತಃ ಶೀತೋಷ್ಣಾಭಿಭೂತಾಃ ಗ್ರಹನಿರ್ಮಾಣೋ ಚಕ್ರಃ ಕೃಷ್ಣಾದಿ ರಾಷ್ಟ್ರಾದಿ ರೋಷಾದಿರುತ್ಪನ್ನಂ ||

ಅಸ್ಮಿನ್ಯುಗೆ ರಾಜಾನಃ

ವೃತ್ತ || ಗಯೋಂಬರೀಶಃ ಶತಿಬಿಂದು ಶಂತನುಃ
ಪೃಥುರ್ಗುರುತ್ತೋ (?) ಭರತಃ ಸುಹೋತ್ರಃ
ರಾಮೋ ದಿಳೀಪೋ ರಘುದಂತಿ ದೇವೋ
ಯಯಾತಿ ಮಾಂಧಾತ ಭಗಿರಥೋ ಭೃಗುಃ ||

ಇತಿ ಷೋಡಶನೃಪಾಃ

ಅಗಸ್ತ್ಯ ಅಂಗೀರ ಮನುಃ ಕಶ್ಯಪಃ ಸೂರ್ಯನಂದನಃ
ಕಕುತ್ಸ್ಥಃ ಕುರುನೀಲಶ್ಚ ಶತಜಿಹ್ವಾ ವಿಭೀಷಣಃ
||
ವೈವಸ್ವತ ಮನುರ್ಬ್ರಹ್ಮಾ ಪೃಥುಶ್ಚಂದ್ರೋ ಮಹಾಜಯಃ
ಸ್ವಾಹಾ ಚ ಪುಷ್ಪದಂತಶ್ಚ ಸಮ್ಮೇದಶ್ಚ ಮಹಾತ್ಮನಃ ||
ಶಾಶಾಂಶುಃ ಫೃಧುಕೇತುಶ್ಚಶ್ರೀಪಾಲಶ್ಚಂಧಕಾಸುರಃ
ವಸುಮಾನಾದಿಯಾರಣ್ಯೊ, (?) ಹರಿಶ್ಚಂದ್ರೋ ತ್ರಿಶಂಕುಕಃ ||
ಲೋಹಿತಾಶ್ವ ದಿಲೀಪಶ್ಚ ಮಹಕಸ್ಯ (?) ಭಗೀರಥಃ
ಅಂಬರೀಷಃ ಸಿಂಧ್ವಧೀಶಯುಕ್ತಾಃ ಶೌರ್ಯಯುತಾಸ್ಸುತಾಃ ||
ಕುಬೇರಸೂನುಶ್ಚೈನಾಥಂ (?) ಶಾಲೀವಹನಸಹಸ್ರಕಮ್
ಚಂದ್ರಸೇನಃ ಕುಶಲವೌ ಗೋಪಾಲಸ್ತುಂವರದಃ(?) ||
ತ್ರೇತಾಯುಗದ್ವಯಸ್ತಾಳಾಂ (?) ಏತೇ ಭೂಪಾಃ ಪ್ರಕೀರ್ತಿತಾಃ ||

ತ್ರೇತಾಯುಗ ಸಂದಿ ೨೧,೬೦೦ ದ್ವಾಪರಯುಗ ಪ್ರಮಾಣಂ ೮,೬೪,೦೦೦

ಯೆ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್
ಮಮ ವೃತ್ತಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ
||

ಅಸ್ಮಿನ್ಯುಗೆ ಅವತಾರಾಃ

ಹರೇಧರ್ಮ ಪ್ರತಿಷ್ಠಾರ್ಥಂ ದ್ವಾಜಾತೋದವಾಪರೇ ಹರಿಃ
ತ್ರಿಪುರಂ ಹಂತಿ ಯತ್ನೇನ ಜಾತಾಃ ಸಾಕ್ಷಾತ್ ಸ್ವಯಂ ಹರಃ
||

ದೇವದೇವೋರಾಜಃ ವೇಗಾವತೀರ್ಥಂ ಹಸ್ತಿನಾಪುರೀನಗರಂ ಪುರುಷಪುರಾಂ ಸಪ್ತಹಸ್ತಾಃ ದ್ವಶತಾಯುಃ ದೈತ್ಯರ್ಣೋಬಲವಾನ್ ದ್ವಿಪಾದ ಧರ್ಮಃ ದ್ವಪರೆ ಯಾಚ್ಯಮಾನೇನ ಮನುಷ್ಯ ಲೋಭಾಭಿಬೂತಾಃ ವರ್ನಸಂಕಪೂರೇನ ರಾಗ ದ್ವೇಷಿಣೋಪಿಸಂ ವೃಷ್ಟಿಃ ವ್ಯಾಧಿರುತ್ಪನ್ನಃ

ಅಸ್ಮಿನ್ಯುಗೇ ರಜಾನಃ

ಪುಲಸ್ತಾ ಜಿತಧರ್ಮಶ್ಚ ಸೋಮಸೂರ್ಯ ಪುರೂರವಾS
ಶಂಭುಶ್ಚ ಗೃಹ ರಾಮಶ್ಚ ಸ್ವಾತಿಮಂದೋ ಮಹಾಜವಃ ||
ಗಜಕರ್ಣೋಭಿರಾಮಶ್ಚ ಭೌಮಶ್ಚ ಶ್ರೀಧರಸ್ಥಾ
ಕುಮಾರಬುದ್ಧೋ ಮೇರುಶ್ಚ ಪುಂಡರೀಕಶ್ಚ ನಂದನಃ ||
ಅಜಿತಃ ಪುಷ್ಪದಂತಶ್ಚನೈಮಿ ಕೃಷ್ಣಶ್ಚ ಶಂತನುಃ
ಬಲಭದ್ರಶ್ಚ ಭೀಷ್ಮಶ್ಚ ಧೃತರಾಷ್ಟ್ರಶ್ಚ ಪಾಂಡವಃ ||
ದುರ್ಯೋದನೋ ಧರ್ಮರಾಜಃ ಭೀಮಸೇನಸ್ತಥಾರ್ಜುನಃ
ಸಕುಲಃ ಸಹದೇವಶ್ಚ ದ್ವಾತ್ತಿಂಶದ್ದ್ವಾಪರೇಯುಗೇ ||
ದ್ವಾಪರ ಸಂಧಿ ೧೪,೪೦೦, ಕಲಿಯುಗ ಪ್ರಮಾಣಂ೪,೩೨,೦೦೦
ಕಾಂಕ್ಷತಃ ಕರ್ಮಣಾಂ ಸಿದ್ಧಿಂ ಜಯಂತೀಹ ದೇವತಾಃ
ಕ್ಷಿಪ್ರ ಹಿ ಮಾನುಷೇ ಲೋಕೇ ಸಿದ್ಧಿರ್ಭವತಿ ಕರ್ಮಜಾಃ ||

ಅಸ್ಮಿನ್ಯುಗೇ ಅವತಾರಾಃ

ಶಿಶುಪಾಲೋಹತಃ ಪ್ರೊಕ್ಷಃ ಹರೇಲೋಕಾಭಿರಕ್ಷಯಾ
ರಾಮಕೃಷ್ಣಾ ಕಲೌ ಚಾತಾಃ ಕಲ್ಕಿಶ್ವಾಗೇ ಭವಿಷ್ಯತಿ
||
ದೇವಃ ಪರ್ವರ ಮಲ್ಲಿಕಾಜುರ್ಜನಘ ಭಾಗೀರಥೀತೀರ್ಥಂ
ವಿದ್ಯಾನಗರಿ ಪುರಷಪ್ರಮಾಣ ಸಾರ್ಧಹಸ್ತತ್ರಯಂ ||

ಶತಾಯುಃ ಶೂದ್ರವರ್ಣ ಬಲವಾನ್ ಏಕಪಾದ ಧರ್ಮಸೇನೆಯಾದೀರ್ಯಕೆ ಅಲ್ಪವೃಷ್ಟಿಃ ಜಾತಿಸಂಕರೋ ಭವತಿ ಪರ್ಜನ್ಯೋ ನಷ್ಟ ಫಲದಾಃ ಕಲಿಯುಗೇ ಧರ್ಮಮಾರ್ಗಂ ವಿನಶ್ಯತಿ ||

ಶ್ಲೋಕ || ಷಾಷಂಡಾಚಾರ ವಿರತಾಃ ಪಾಪಲಯಸ್ಯ ಹೇತುಕಾಃ
ಅವಿಕಾಜಿನ ಕಾರ್ಪಾಸ ತೃಣಸ್ಯಾ (?) ಇವ ಏವ ಚ ||

ವಸ್ತ್ರಾಣಿ ಚಕಲೌ ಪ್ರಾಪ್ತೇನ ಕಾಂಕ್ಷೇ ಯೋಗಿನಃ ಕ್ವಚಿತ್
ಲಡ್ಡು ಮೋದಕ ಮಂಡಾನಾಂ ಪಿಷ್ಟಂ ಭಕ್ಷಂ ಭವಿಷ್ಯತಿ
||

ಭವೇತ್ವ್ರಯೋಷಿತಾಸ್ಸೂತಿರ್ನವಾಷ್ಟ್ರ ದಸಮಾಂತಿಕೇ
ಚತುವರ್ಣಾಸ್ತಥಾ ಪಶ್ಚಾದೇಕ ವರ್ಣಂ ಭವಿಷ್ಯತಿ
||

ಮ್ಲೇಂಛ ಪ್ರಭುಃ ಕ್ಷತ್ರಿಯಸ್ಯ ಮೇಚ್ಛರಜ್ಯಮನೇಕಶಃ
ಅಲ್ಪೋದಕಸ್ತದಾ ಮೇಘಃ ಅಲ್ಪಸಸ್ಯಾ ವಸುಂಧರಾ
||

ಅಲ್ಪಕ್ಷೀರಾಸ್ತಥಾ ಗಾವಃ ಅಲ್ಪವಿದ್ಯಾಸ್ತಥಾದ್ವಿಜಾಃ
ನ ಶ್ರುಣ್ವಂತಿ ಪಿತುರ್ವಾಕ್ಯಂ ಪುತ್ರಾಶ್ಚ ಭ್ರಾತರಸ್ತಥಾ
||

ನಿರ್ವಿರ್ಯಾ ಪೃಥಿವೀ ದಾತಾ ದರಿದ್ರೋSಸ್ಮಿನ್ಯುಗೆ ನೃಪಃ ||

ಚತುರ್ಮುಖೋ ಕಣ್ವಮನೂ ಜನಮೇಜಯ ರೋಹಿತೌ
ಗಂಗಾಧರೋ ವಾಮದೇವೋ ಭೌಮೇ ಚತ್ರಿಪುರಾಂತಕಃ ||

ಭಟ್ಟೀಛ ಸಗರೋ ಬಾಲೋ ನಿರ್ಮಲಶ್ಚ ಮಹಾಬಲಃ
ಶ್ರೀ ನಾಗೋಮಲ್ಲಿನಾಥಶ್ಚ ಆಭಿರಾಮಶ್ಚಸೂದ್ರಿಕಃ ||

ವಿಶ್ವೇಶರೋ ವಿಕ್ರಮಾರ್ಕೋ ವಿಮಲಾದಿತ್ಯ ಭೋಜರಾಟ್
ಹರಿತಃ ಶಾಲಿವಾಹಶ್ಚ ಶಾಂತಿಃ ಶೂದ್ರಶ್ಚ ಕಂಧರಃ
ವೀರಸೇನೋ ಜಯತ್ಸೇನೋ ವಿಕ್ರಮಾರ್ಕಶ್ಚ ಮಾಧಮಃ
ವೀರಬಾಹು ಪೀನಬಾಹುವೀರನಾರಾಯಣಸ್ತಥಾ ||

ಮಯ್ಯಾಳಿರ್ವಾಮನಶ್ಚೈವ ಯಯಸಿಂಹಶ್ಚ ಶಂಕರಃ
ಶ್ರೀಪತಿರ್ಗಂಧ ದೇವಶ್ಚ ಧವಲಶ್ಚಂದ್ರ ಲಕ್ಷಣಃ ||
ಕಾಲರುದ್ರಃ ಪ್ರತಾಪಶ್ಚ ದಿಳೀಶಃ ಕಟಕೇಶ್ವರಃ ||

ವ || ಎಂದಿಂತನೇಕ ತೆರದಿಂ ಕುಮತಿಜ್ಞಾನದಿಂ ಸಿದ್ಧಾಂತಮನಾಧಾರಂ ಮಾಡಿಯದಕ್ಕೆ ವೈಪರೀತ್ಯಮಾಗೆಯನೃತಂಗಳಂ ಮಿಥ್ಯಾತ್ವಕರ್ಮೋದಯದಿಂ ಸನ್ಮಾರ್ಗಮಾದ ಸತ್ಯಾಗಮಪುರಾಣಮಪ್ಪ ಪ್ರಥಮಾನುಯೋಗ ಕರುಣಾನುಯೋಗ ಚರಣಾನುಯೋಗ ದ್ರವ್ಯಾನುಯೋಗಮೆಂಬ ಸಿದ್ಧಾಂತ ಚತುರ್ವೇದ ವೇದಾಂಗ ಚತುರ್ದಶಪೂರ್ವೆಯಪ್ಪ ಶಾಸ್ತ್ರಸಮುದ್ರಮಂ ನೋಡಲುಂ ಪುಗಲುಂ ಭಾವಿಸಲುಂ ಭಯಮಾಗೆ ಮಿಥ್ಯಾ ಜ್ಞಾನದಿಂ ಮರೀಚಿ ಕಾಶ್ಯಪ ವಶಿಷ್ಠಾದಿಗಳು ಸ್ವಯಂಬುದ್ಧರಾಗಿ ರಚಿಸಿದುದಂ ಕ್ರಮದಿಂ ದನುಮಾನದಿನೊಬ್ಬೊಬ್ಬತೊಂದೊಂದು ತೆರನಾಗಿ ವಿಪರೀತಮಾಗೆ ರಚಿಸಿರ್ಪ ನವಯುಕ್ತಿಯಿಂ ಕಲ್ಪಸಿ ಪೇಳ್ವರಿದು ಪ್ರಮಾಣಮಲ್ಲೆಂದು ಜೈನಪಂಡಿತರೆಲ್ಲಂ ಪೇಳ್ವುದುಮಿ ನವಯುಕ್ತಿಯಿಂ ಕಲ್ಪಸಿ ಪೇಳ್ವರಿದು ಪ್ರಮಾಣಮಲ್ಲೆಂದು ಜೈನಪಂಡಿತರೆಲ್ಲಂ ಪೇಳ್ವುದುಮಿ ಶಾಸ್ತ್ರದಿಂದಿನ್ನು ದೊಡ್ಡಿತ್ತಾದ ಶಾಸ್ತ್ರಂ ಲೋಕದೊಳಾಗುವುದು ಸಕಲ ಪ್ರಪಂಚಮಿಲ್ಲಿಯಿರ್ಪದು. ಲೋಕಕಾಲಸ್ಥಿತಿ ರಾಜಾದಿಗಳ ಪ್ರಪಂಚಮೆಲ್ಲ ಮಿದರೊಳಿರ್ಪುದಿದು. ಸಿದ್ಧಾಂತಮಲ್ಲದೆ ಬೇರಾವುದಿದರೊಳಾವುದು ಪುಸಿ ಪೇಳಿಮೆಂದು ವೇದಾಂತಿಗಳು ಪೇಳೆ ಸಿದ್ಧಾಂತಿವಿಪ್ರರೆಂದರ್.

ಶ್ಲೋಕ || ಕೂಪಾವಾಸೇ ಚಿರಂ ಭೇಕಃ ಸಮುದ್ರಂ ನಾಸ್ತಿ ವಿದ್ಯತೇ

ಒಂದು ಕೂಪದೊಳೊಂದು ಕಪ್ಪೆಯು ಬಹಳ ದಿವಸಂ ವಾಸವಾಗಿ ಇಂಥಾ ಜಲಮಾವುದುಮಿಲ್ಲೆಂದು ಮೆಚ್ಚಿ ಗರ್ವದೊಳಿರಲೊಂದು ದಿನಂ ಸಿತಪಕ್ಷಿ ಬಂದಾ ಬಾವಿಯ ತಟಸ್ಥನಾಗಿರೆ ನೀನಾರೆಲ್ಲಿಂದ ಬಂದೆಯೆಂದು ಮಂಡೂಕಂ ಕೇಳಿದೊಡದು ಮಹಾಸಮುದ್ರದಿಂ ಬಂದೆನಾಂ ಸಿತಪಕ್ಷಿಯೆಂಬುದುಂ ಸಮುದ್ರಮೆನ್ನ ಕೂಪಸಮುಮಪ್ಪುದೆ ಪೇಳೆಂಬುದುಂ ಬಹು ವಿಶಾಲಮಪ್ಪುದೆಂಬುದುಂ ಆತ್ಯಾಶ್ಚರ್ಯಮಾಗೆ ಮೇಲಣ ತಡಿಗೆ ಬಂದೊಂದು ಕುಪ್ಪಂ ಕುಪ್ಪಿ ಕೇಳಲಿನ್ನುಂ ವಿಸ್ತಾರೆಮೆನೆ ಮತ್ತೊಂದು ಕುಪ್ಪಿ ಕೇಳೆಯೆದರಿಂ ದೊಡ್ಡಿತ್ತೆಂದೊಡೆ ಮೂರು ಕುಪ್ಪು ಕುಪ್ಪಿ ಕೇಳಿದೊಡೀ ಭೂಮಿ ಎಷ್ಟಿಪ್ಪುದಿದರ ದ್ವಿಗುನವೆಂದೊಡದಂ ಕೇಳ್ದು ಸಮುದ್ರವೆ ಪುಸಿಯೆಂದು ತಿರಸ್ಕರಿಸಿತೆಂಬಂತೆ ಸಮುದ್ರಕ್ಕತಿವಿಶಾಲಮಪ್ಪ ಪರಮಾಗಮಂ ಜ್ಞಾನಾವರಣೀಯ ಕರ್ಮೋದಯದಿ ಜ್ವಾನಶೂನ್ಯರಪ್ಪ ಮನುಷ್ಯರು. ಇರುವೆಗೆ ಮುತ್ರವೆ ಪ್ರಳಯಜಲಮಾಗಿ ಕಾಳ್ಬಂತೆ ಅಲ್ಪಶೃತಮೆ ಅವಹಾಹನಮಿಲ್ಲದೆ ಜಾತ್ಯಂಧಂ ಮದಗಜಮಂ ಸ್ಪರ್ಶನದಿದರಿವಂತೆ ಕತ್ತಲೆಯೊಳ ಕನ್ನಡಿಯು ಕಾಣದಂತೆ ಕಣ್ಣ ಬೇನೆಯುಳ್ಳಂಗೆ ದೀಪಾದಿ ಪ್ರಭೆಗಳು ವಿರುದ್ಧಮಪ್ಪಂತೆ ಹುಚ್ಚು ಹಿಡಿದಂಗೆ ಲೋಕ ಪ್ರಪಂಚೆಲ್ಲಾ ವಿಪರೀತಮಾಗಿ ಕಾಣ್ಬ ತೆರದೊಳು ಸದ್ಧರ್ಮದೊಳುಂ ಸಚ್ಛಾಸ್ತ್ರದೊಳುಂ ವಿಪರೀತ ಗ್ರಾಹಿಗಳಾಗಿ ಇಹಲೋಕ ಸುಖಾಪೇಕ್ಷೆಯಿಂ ಸತ್ಯಾಸತ್ಯಮಂ ಮಿಶ್ರಂ ಮಾಡಿ ದಧಿಗುಡ ಮಿಶ್ರಮಾದರುಬೆಯಂತೆ, ಸುವರ್ಣದೊಳು ಹಿತ್ತಾಳೆಯಂ ಬೆರಸಿದಂತೆ, ಸಿದ್ಧಾಂತಿದೊಳು ಮಿಥ್ಯಮಂ ಸಂಗಡಿಸಿ ಪೇಳ್ದಪರಿದು ಕೆಲಕೆಲವು ನಿಶ್ಚಯಮುಂಟಾಗಿಯು ಪ್ರಮಾಣಮಲ್ಲಿದು. ಇದರೊಳಾವುದು ತಪ್ಪು ಪೇಳಿಮೆಂಬರಿ ಪಾಲೊಳು ಪುಳಿಯಂ ಬೆರಸಿದೊಡೆ ಪುಳಿ ಯಾವುದು ಎಂಬಂತೆ ಬದ್ಧಾಬದ್ಧಮಂ ಪೇಳ್ವುದು, ಮಳಲ ಪಾಯಸದೊಳ್ ಕಲ್ಲಂ ತಡಕುವಂತೆ ಪುಸಿಯದೆಂದು ಪೇಳಲಸಾಧ್ಯಮೆಲ್ಲಾ ಪುಸಿಯಿಪ್ಪುದು. ಈ ಭರತಕ್ಷೇತ್ರದಾರ್ಯಾಖಂಡದ ಐವತ್ತಾರು ದೇಶಂಗಳ ಅಯೋಧ್ಯಾ ಸ್ವಾದನಾ ವಾರಣಾಸಿ ಶ್ರಾವಸ್ತಿ ಚಂದ್ರಪುರಿ ರತ್ನಪುರಿ ರೋರುಗಪುರಿ ಕೌಶಾಂಬಿ ಹರಿಪುರ ಕಾಪಿಲ್ಯ ಮಿಥಿಲಾ ರಾಜಗೃಹ ಶೌರಿಪುರ ಕಾಶಿಪುರ ಕುಂಡಿನಾಪುರಾದಿ ಮಹಾರಾಜಧಾನಿ ಪಟ್ಟಣಂಗಳಲ್ಲಿ ಪುಟ್ಟಿ ರಾಜ್ಯಮನಾಳ್ದು ಸಮ್ಯಕ್ತ್ವಸಂಪನ್ನರಾಗಿ ತಪೋನುಷ್ಠಾನದಿಂ ಜ್ಞಾನಸಾಮ್ರಾಜ್ಯವಾಂತು ಸ್ವರ್ಗಾಲವರ್ಗದ ಪಡೆದು ಚತುರ್ವಿಶತಿ ತೀರ್ಥಂಕರ ಪರಮದೇವರು ದ್ವಾದಶ ಮಹಾ ಚಕ್ರವರ್ತಿಗಳು, ನವಬಲದೇವರು, ನವ ಕೇಶವರು, ನವ ಪ್ರತಿಕೇಶವರು, ನವ ನಾರದರು, ಏಕಾದಶ ರುದ್ರರು, ಯುರಾಜಾಧಿರಾಜ, ಮಹಾರಾಜ, ಅರ್ಧಮಂಡಲಿಕ, ಮಂಡಲಿಕ, ಮಹಾಮಂಡಲಿಕ, ಅರ್ಧಚಕ್ರಿಗಳು ಮೊದಲಾದವರ ಪೆಸರಂ ತೆಗೆದುಕೊಳ್ಳದೆ ಸರ್ವಜ್ಞಪ್ರಣೀತ ಸಿದ್ಧಾಂತಮಂ ಲೋಕಾಕಲಸ್ಥಿತಿಯಂ ವಿಪರೀತಮಾಗೆ ರಚಿಸಿದ ವೇದಾಂತಶಾಸ್ತ್ರಕ್ರಮಮಿದು ಪ್ರಮಾಣಮಲ್ಲದು. ಅದ್ಯಾಪಿ ಸಮ್ಯಕ್ತ್ವ ಸಂಪನ್ನರಪ್ಪ ಜೈನಕ್ಷತ್ರಿಯರು ದೇಶಂ ಪ್ರತಿದೇಶಂಗಳೊಳು ರಾಜ್ಯಮಂ ಪಾಲಿಸುತ್ತಿಪ್ಪರು. ಪ್ರತ್ಯಕ್ಷಮಾಗಿಪ್ಪವರಂ ನೀವು ಪೇಳುವ ಶಾಸ್ತ್ರದೊಳೇಕದೇಶಮಾಗಿಯಾದರೂ ಪೇಳದಿಪ್ಪದರಿಂ ಮತದ್ವೇಷದಿಂ ಮಾಡಿದ ಪುರಾಣಮಿದುಂ ನಮಗೆ ಪ್ರಮಾಣಮಲ್ಲೆಂದು ಜೈನೋಪಾಧ್ಯಾಯರುಂ ಪಂಡಿರತುಂ ಪೇಳಿ ವೇದಾಂತಿಗಳಿ ಪ್ರಪಂಚುಗಳುಂ ಸುಶಾಸ್ತ್ರದೊಳಿಲ್ಲ. ನಾವಿದನೋದಿ ಕಂಡು ಕೇಳಿ ಇಲ್ಲಿ ನಮ್ಮ ಪೂರ್ವಜರು ಬಿಟ್ಟುದಂ ನಾವೆಂತು ಗ್ರಹಿಸಲಕ್ಕುಮೆನೆ ಅರ್ಹತ ವಿಪ್ರರೆಂದರು. ನೀಮು ಕಲಿವ ಶಾಸ್ತ್ರಪ್ರಾರಂಭದೊಳ್ ಓಂಕಾರಿಸಿದ್ಧ ನಮಸ್ಕಾರಪೂರ್ವಕಮಾಗಿ ಕಲಿವ ಶಾಸ್ತ್ರದೊಳ್ ರೂಪ೧,ಯುಗ೨,ಲೋಕರತ್ನ೩, ಬಂಧ ಗತಿಕಷಾಯ೪, ವ್ರತ ೫, ಜೀವ ಲೇಶ್ಯ ದ್ರವ್ಯ ೬, ಭಯವ್ಯಸನ ೭, ತನು, ಕರ್ಮ, ದುರಿತ ೮, ನಂದ ಪದಾರ್ಥ ಲಬ್ಧಕೆ ಶರ್ವ, ವಿಷ್ಣು ಪಾದಶುನ್ಯಮೆಂದೀ ಲೆಕ್ಕಸಂಜ್ಞೆಯೊಳ್ ಜಿನ ೨೪ ಎಂದಿವಾದಿಯಾದ ಭೂಸಂಜ್ಞೆಯನೆಂತು ಕಂಡು ಪೇಳ್ವರೀ ವೇದದೊಳ್ ಒಂ ಹಿಃ ಅರ್ಹನ್ ಎಮಬುದೆಂತು ಪುರಾಣಂಗಳೊಳ್

ಶ್ಲೋಕ || ಅಹಿಂಸಾ ಸತ್ಯಮಸ್ತೇಯುಂ ತ್ಯಾಗೋ ಮೈಥುನವರ್ಜನಮ್
ಏತತ್ಪ ಚ ನಿಯುಕ್ತೇಷು ಸರ್ವೇಧರ್ಮಾಃ ಪ್ರತಿಷ್ಟಾತಾಃ ||೧ ||

ಅಹಿಂಸಾಲಕ್ಷಣೋ ಧರ್ಮಃ ಪ್ರಾಣಿನಾ ವಧಃ
ತಸ್ಮದ್ಧಮಾರ್ಥಿನಾವಶ್ಯಂ ಕರ್ತವ್ಯಂ ಪ್ರಾಣಿನಾಂ ದಯಾ ||೨ ||

ಯಥಾ ಮಮ ಪ್ರಯಾಃ ಪ್ರಾಣಾಃ ತಥಾನ್ಯಾಸ್ಯಾಪಿ ದೇಹಿನಃ
ಇತು ಮತ್ವಾ ಕರ್ತವ್ಯೋ ಘೋರ ಪ್ರಾಣಿವಧೋ ಬುಧೈಃ ||೩ ||

ವೃತ್ತ || ನಾಹಂ ಸ್ವರ್ಗಫಲೋಪಭೋಗ ತೃಪಿತೋ ತಸ್ತ್ವಂ ಮಯಾ
ಸಂತುಷ್ಟಸ್ತೃಣ ಭಕ್ಷಣೇನ ಸತತಂ ಹಂತುಂ ನ ಯುಕ್ತಂ ತವ
ಸ್ವರ್ಗಂ ಯಾಂತಿ ಯದಿ ತ್ವಯಾ ವಿಶಸಿತಾ ಯಜ್ಷೇ ಧ್ರುವಂ ಪ್ರಾಣಿನೋ
ಯಜ್ಞಂ ಕಿಂ ನ ಕರೋಷಿ ಮಾತೃ ಪಿತೃಭಿಃ ಪುತ್ರೈ ಸ್ತಥಾ ಬಂಧವೈಃ ||೪ ||

ಏಕತಃ ಕಾಂಚನೋ ಮೇರುಃ ಬಹುರತ್ನಾ ವಸುಂಧರಾ
ಏಕಸ್ಯ ಜೀವಿತಘ ದದ್ಯಾನ್ನ ಚ ತುಲ್ಯೋ ಯಧಿಷ್ಠಿರ ||೫ ||

ಹೇಮದೇನು ಧರಾದೀನಾಂ ದಾತಾರಃ ಸುಲಭಾ ಭುವಿ
ದುರ್ಲಭ ಪುರುಷೋ ಲೋಕೇ ಯಹ ಪ್ರಾಣೇಷ್ಟಭಯಪ್ರದಃ ||೬ ||

ಏಕತಃ ಕ್ರತವಃ ಸರ್ವೇ ಸಮಗ್ರಾ ವರದಕ್ಷಿಣಾಃ
ಎಕತೋ ಭಯಭೀತಸ್ಯ ಪ್ರಾಣಿನಃ ಪ್ರಾಣರಕ್ಷಣಮ್ ||೭ ||

ಮಹಾಭಾರತೆ

ಯಾವಂತಿ ಪಶು ರೋಮಾಣಿ ಪಶು ಗಾತ್ರೇಷು ಭಾರತ
ತಾವದ್ವರ್ಷ ಸಹಸ್ರಾಣಿ ಪಚ್ಯತೇ ಪಶುಘಾತಕಾಃ ||೮ ||

ಪ್ರಭಾಸಂ ಪುಷ್ಕರಂ ಗಂಗಾ ಕುರುಕ್ಷೇತ್ರಂ ಸರಸ್ವತೀ
ಧೇನುಕಾ ಚಂದ್ರಭಾಗ ಚ ಸಿಂಧುಶ್ಚೈವ ಮಹಾನದೀ ||೯ ||

ಏಷಂ ತೀರ್ಥೇಷು ಯತ್ಪುಣ್ಯಂ ನೃಣಾಂ ಸ್ನಾನೇನ ಜಾಯತೇ
ತತ್ಸರ್ವಂ ನಿಷ್ಛಲಂ ಜ್ಞೇಯಂ ಯದಿ ಮಾಸಂ ನ ವರ್ಜಯೇತ್ ||೧೦ ||

ಅಸ್ಥೌ ನಿವಸತೇ ರುದ್ರೋ ಮಾಂಸೇ ವಸತಿ ಮಾಧವಃ
ವಜ್ಜಾಯಾಂ ವಸತಿ ಬ್ರಹ್ಮಾ ತಸ್ಮನ್ಮಾಂಸಂ ಭಕ್ಷಯೇತ್ ||೧೧ ||

ಋಷಯೋ ಬ್ರಾಹ್ಮಾಶ್ಚೈವ ಯೇ ಚಾನ್ಯೇ ಧರ್ಮಚಿಂತಕಾಃ
ಯದಿ ಮಧ್ಯೇನ ದೋಷೋಸ್ತಿ ಕಿಮರ್ಧಂ ನ ಪಿಬಂತಿ ತೇ ||೧೨ ||

ದೋಷಾಣಾಂ ಕಾರಣಂ ಮದ್ಯಂ ಮದ್ಯಂ ಕಾರಣಮಾಪಾದಮ್
ಅಜ್ಞಾನ ಕೃದಪಥ್ಯಂಚ ತಸ್ಮಾತ್ ಮದ್ಯಂ ವಿವರ್ಜಯೇತ್ ||೧೩ ||

ಯೋ ದದಾತಿ ಮಧುಂ ಶ್ರಾದ್ಧೇ ಮೋಹಿತೋ ಧರ್ಮಲಿಪ್ಸಯಾ
ಸ ಯಾತಿ ನರಕಂ ಘೋರಂ ಬಾಧಕೈಸ್ಸಹ ಲಂಪಟೈಃ ||೧೪ ||

ಸಪ್ತ ಗ್ರಾಮೇಷು ಯತ್ಪಾಷಂ ವಹಿನ್ನಾ ಭಸ್ಮ ಸಾತ್ಕೃತೇ
ಸತ್ಯಂ ತಜ್ಜಾಯತೇ ಪಾಪಂ ಮಧುಬಿಂದು ಪ್ರಬಕ್ಷಣಾತ್ ||೧೫ ||

ನ ಗ್ರಾಹ್ಯಾ ನಿನಗೇ ಯಾನಿ ಷಡ್ವಸ್ತೂನಿ ಚ ಪಂಡಿತೈಃ
ಅಗ್ನಿ ಮಧು ವಿಷಂ ಶಸ್ತ್ರಂ ಮಧ್ಯಂ ಮಾಂಸಂ ತಥೈವ ಚ ||೧೬ ||

ನೋದಕಂ ಚಪಿ ಪಾತವ್ಯಂ ರಾತ್ರೌ ಯತ್ರ ಯುಧಿಷ್ಟಿರ
ತಪಸ್ವಿನಾ ವಿಶೇಷೇಣ ಗೃಹಸ್ಥೇನ ವಿವೇಕಿನಾ ||೧೭ ||

ವಸ್ತ್ರಪೂತಂ ಭವತ್ತೋಯುಂ ಯೋಯು ಚಾತೃನ ವಸ್ತು ಚ
ದೃಷ್ಟಿ ಪೂತಾನಿ ಸರ್ವಾಣಿ ಸತ್ಯ ಪೂತಂ ಸಮಾಚರೇತ್ ||೧೮ ||

ಮೃತೇ ಸಜ್ಜನಮಾತ್ರೇಪಿ ಸೂತಕಂ ಜಾಯತೇ ಕಿಲ
ಅಸ್ತಂಗತೇ ದಿವಾನಾಥೇ ಭೋಜನಂ ಕ್ರಿಯತೇ ಕಥಂ ||೧೯ ||

ನೈವಾಹುತಿರ್ನ ಚ ಸ್ನಾನಂ ನ ಶ್ರಾದ್ಧಾಂ ದೇವತಾಚ್ನಮ್
ಅ ದಾನಂ ಗಮನಂ ರಾತ್ರೌ ಭೀಜನಮ ವಿಶೇಷತಃ ||೨೦ ||

ಉಲೀಕ ಕಾಕ ಮಾರ್ಜಾರ ಗೃಧ್ರ ಶಂಬರ ಸೂಕರಾಃ
ಅಹಿ ವೃಶ್ಚಿಕ ಗೊವಾಶ್ಚ (?) ಜಾಯತೆ ರಾತ್ರಿ ಭೋಜನಾತ್ ||೨೧ ||

ಯೆ ರಾತ್ರೌ ಸರ್ವಥಾಹಾರಂ ವರ್ಜಯಂತಿ ಸಮೇಧಸಃ
ತೇಷಾಂ ಪಕ್ಷೋಪವಾಸಸ್ಯ ಫಲಂ ಮಾಸೇನ ಜಾಯತೇ ||೨೨ ||

ಮಹಾಭಾರತೆ ಶಾಂತಿಪರ್ವಣಿ

ಮದ್ಯಮಾಂಸಾಶನಂ ಹಿಂದು ಪಲಾಮಡು ನಾಳಕಂ ತಥಾ
ಬಕ್ಷಕಶ್ಚ ಸ ಮೂಢಾತ್ಮಾ ಪ್ರಯಾತಿ ನರಕಂ ಧ್ರುವಮ್ ||೨೩ ||

ಮೂಲಕೇನ ಸ ಮಜ್ಜಾನ್ನಂ ದ್ವಿದಲಂ ಗೋರಸೇನ ತು
ಭುಂಜಾನಶ್ಚ ಮಹಾಪಾಪಸ್ಸ ಯಾತಿ ನರಕಮ ಧ್ರೂವಮ್ ||೨೪ ||

ಶಿವಪುರಾಣೇ

ಮಿಶತ್ಯಂಗುಳ ವಿಸ್ರೀರ್ಣಂ ತ್ರಿಂಶಂತ್ಯಂಗುಮಾಯತಮ್
ತದ್ವಸ್ತ್ರಂ ದ್ವಿಗುಣೇ ಕೃತ್ವಾ ಗಾಲಯಿತ್ಯೋದಕಂ ಪಿಬೇತ್
||೨೫ ||

ತತ್ರ ಸ್ಥಾನೇ ಸ್ಥಿ ತಾನ್ ಜಂತೂನ್ ಸ್ಥಾಪಯೇಜ್ಞ ವಮಧ್ಯತಃ
ಜೀವರಕ್ಷಣಹೇತೋಶ್ಚ ಇತ್ಯೇವಂ ಮನುರವ್ರವೀತ್
||೨೭ ||

ಮನುಸ್ಮೃತೌ –

ಮೃದೋ ಭಾರಾ ಸಹಸ್ರೇಣ ಜಲಕುಂಭೇನ ಕೋಟಿಭಿಃ
ನ ಶುದ್ಧ್ಯಂತೇ ದುರಾಚಾರಾಃ ಸ್ನಾತಾತೇಷ್ಟಪಿ ವ ತೈತಪಿ
||೨೮ ||

ವ್ರತಿನೋ ಬ್ರಾಹ್ಮಣಾ ಜ್ಞೇಯಾಃ ಕ್ಷತ್ರಿಯಾಶ್ಯಸ್ತ್ರಪಾಣಯಃ
ಕೃಷಿ ವಾಣಿಜ್ಯ ಕಾ ವೈಶ್ಯಾಃ ಶೂದ್ರಾಃ ಪ್ರೇಷಣ ಕಾರಕಾಃ
||೨೯ ||

ಅಷ್ಟಷಷ್ಟಿಷು ತೀರ್ಥೇಷು ಯಾತ್ರಯ ಯತ್ಛಲಂ ಭವೇತ್
ಆದಿನಾಥಸ್ಯ ತೀರ್ಥಸ್ಯ ಸ್ಮರಣೇನೈವ ತತ್ಪಲಮ್
||೩೦ ||

ಸ್ಕೃತಾ ಶತ್ರುಂ ಜಯೇತ್ ತೀರ್ಥಂ ಕೃತ್ವಾ ರೈವತಕಾಚಲಮ್
ಸ್ನಾತ್ವಾ ಜನಪದೇ ಕುಂಡೇ ಪುನರ್ಜಜ್ಮ ನ ವಿದ್ಯತೇ
||೩೧ ||

ಯುಗೇ ಯುಗೇ ಮಹಾಪುಣ್ಯಾ ದೃಶ್ಯಂತೇ ದ್ವಾರಿಕಾಪುರೀ
ಅವತೀರ್ಣೋ ಹರಿರ್ಯತ್ರ ಪ್ರಭಾಸಶಶಿಭೂಷಣಃ
||೩೨ ||

ಊರ್ಜಯಂತ ಗಿರೌ ನೇಮಿರ್ಯಾಗಾದಿರ್ವಿಪುಲಾಚಲೇ
ಏಷಣಾಮಾತ್ರಾಮಾದೇವಿ ಮೋಕ್ಷಮಾರ್ಗಸ್ಥ ಕಾರಣಮ್
||೩೩ ||

ಪ್ರಭಾಸ ಪುರಾಣೆ –

ಕುಹು ಪೂರ್ಣೇಧಿ ಸಂಕ್ರೌಂತೌ ಚತುರ್ದಶ್ಯಮಿಷು ಚ
ಯೋ ಭುಂಕ್ತೆ ತರ್ಪಣೆ ಹೀನೇ
Sಜನಿ ಚಾಂಡಾಲಜನ್ಮಸು ||೩೪ ||

ವೇಶ್ಯಾಯಾಃ ಸ್ಪರ್ಶನೇಸ್ನಾನಮುಪಾಸಶ್ಚ ಮೈಥುನೇ
ಸಪ್ತರಾತ್ರೇಣ ಶೂದ್ರತ್ವಂ ಮಾಸೇನ ಪತಿತೋ ಭವೇತ್ ||೩೫ ||

ಯೂಪಂ ಕೃತ್ವಾ ಪಶೂನ್ ಹತ್ವಾ ಕೃತ್ವಾ ರುಧಿರಕರ್ದಮಮ್
ಯದೇವ ಗಮ್ಯತೇ ಸ್ವರ್ಗಂ ನರಕಂ ಕೇನ ಗಮ್ಯತೇ ||೩೬ ||

ಇಂದ್ರಿಯಾಣಿ ಪಶೂನ್ ಕೃತ್ವಾ ವೇದಿಂ ಕೃತ್ವಾ ತಪೋಮಯಾಮ್
ಅಹಿಂಸಾಮಾಹುತಿಂ ಕೃತ್ವಾ ಆತ್ಮ ಯಜ್ಞಂ ಯಜಾಮ್ಯಹಮ್ ||೩೭ ||

ಮಹಾಭಾರತೇ –

ಧ್ಯಾನಾಗ್ನೌ ಜೀವಕುಂಸಸ್ಥೇ ದುಮಮಾತುರ ದೀಪಿತೇ
ಅಸತ್ಕರ್ಮಸಮೀಕ್ಷೇಪಿ ಆತ್ಮಯಜ್ಞಂ ಕುರೂತ್ತಮಃ ||೩೮ ||

ನಾಲಾ ಸ್ಥಾನನಿ ದತ್ತಾನಿ ಮಾಗಧಾನಾಂ ಸುರೈರಪಿ
ಜಿನ ಚೈತ್ಯನಿವೇಶಂ ಕಿಂ ತೇಷು ಸರ್ವತ್ರ ದೃಶ್ಯತೇ ||೩೯ ||

ನಗರೇ ತ್ರೀಣಿ ಚೈತ್ಯಾನಿ ದ್ವಿತಯುಂ ಬಾಡನಂ ತಥಾ
ಶದ್ಭುವೆ? ದ್ವಿತಯಂಚೈವ ಸತ್ಯ ಕ್ರಿತಯಮೇವ ಚ ||೪೦ ||

ವಿಕೋ ಗುಚ್ಚ ಮಹಾಸ್‌ಐಆನೇ ಪಂಚಾಜಾಲಂ ವಿಶೇಷತಃ
ದಶಸಂಖ್ಯೇ ಚ ಯುಗ್ಮೇ ಚ ತ್ರಿಮೂಲೇ ಪಂಚಕಂ ಪುನಃ ||೪೧ ||

ಮನಾಕ್ಥ್ ವಾಚಾ ಜೈನಾನಾಂ ಬುಧಾನಾಂ ಪುಣ್ಯಹೇತುವೆ
ಗಚ್ಛಾಸ್ತೇಷಾಂ ಚ ನಾಮಾದ್ಯಾ ಅಪಿ ಸರ್ವತ್ರ ವಿಶ್ರತಾಃ ||೪೨ ||

ಶಾಲಾ ಶಾಲಾ ನಿವೇಶೇಷು ತೇಷಾಂ ತತ್ರ ವ್ಯವಸ್ಥಿತೇ
ಕಿಂ ಕಥ್ಯಂತೇ ದ್ವಿಜೈರ್ಜಾನಾಃಪಾಶ್ಚಾತ್ಯಾ ಸಾಧವಸ್ತಯಾ ||೪೩ ||

ನಗರ ಪುರಾಣೆ ಪ್ರಭಾಸಪುರಾಣೇ ಚ
ಜಿನೇಂದ್ರೋ ವೀತರಾಗೋರ್ಹನ್ ಕೇವಲೀ ಚಕ್ರಕಾಲವಿತ್
ಏತಾನಿ ಕಸ್ತ ನಾಮಾನಿ ಷಠಂತೇ ಬಾಲಕ್ಕೆರಪಿ ||೪೪ ||

ತುಲಾದಿಬೂಜಂ ಸರ್ವೇಷಾಮಾದಿರ್ವಿಮಲವಾಹನಃ
ಚಕ್ಷುಷ್ಯಾಂಶ್ಚ ಯಶಸ್ವೀ ಅಭಿಚಂದ್ರಃ ಪ್ರಸೇನಜಿತ್ ||೪೫ ||

ಮರುದೇವಶ್ಚ ನಾಭಿಶ್ಚ ಭರತಃ ಕುಲಸತ್ತಮಃ
ಅಷ್ಟಮೋ ಮರುದೇವ್ಯಾಂ ಚ ನಾಭೆರ್ಜಾತ ಉರುಕ್ರಮಃ ||೪೬ ||

ನಗರಪುರಾಣೆ –

ಭರತಾರಕ ರಹಸ್ಯೇದಶಮೇ ರಾಹಸ್ತೆ ಚತುರ್ದಶತೇSಕ್ರಂಚ
ಸ್ಮೃತ್ವಾ ಶತ್ರುಂ ಜಯತೀರ್ಥಂ ||

ಆಕಾರಾದಿ ಹಕಾರಾಂತ ಊರ್ವಾಧೋ ರೇಫ ಸಂಯಂತಂ
ನಾದಬಿಂದು ಕಲಕ್ರಾಂತಂ ಚಂದ್ರಮಂಡಲವೇಷ್ಟಿತಮ್ ||

ಏಕ ಏವ ಪರಂ ತತ್ತ್ವಂಯೋ ಜಾನಾತಿ ಸ ತತ್ವವಿತ್
ಸಂಸಾರಬಂಧನಂ ಜಿತ್ವಾಸ ಗಛೇತ್ರರಮಾಂ ಗತಿಮ್ ||೪೯ ||
ಪಂಚಾಶದದೌ ಕಿಲ ಮೂಲಭೂತೇಸ್ತ ತೋಧ್ವ ಭೂಮೇ ರಪಿ ವಿಸ್ತಾರಸ್ತಾತೇ
ಉಚ್ಚತ್ವಮಷ್ಟೈವ ಚ ಯೋಜನಾನಿ ಮಾನಂ ವದಂತೀಹ ಜಿನೇಶ್ವರಾಗ್ರೇ ||೪೯ ||

ಪದ್ಮಾಸನ ಸಮಾಸೀನಃ ಶ್ಯಾಮಮೂರ್ತಿರ್ದಿಗಂಬರಃ
ನೇಮಿನಾಥ ಇವೆತ್ಯಾದಿ ನಾಮ ಚಕ್ರೆ ಸ ವಾಮನಃ ||೫೦ ||

ಕಲಿಕಾಲೆ ಮಹಾಘೋರೇ ಸರ್ವಪಾಪ ಪ್ರಣಾಶಕಃ
ದರ್ಶನಾತ್ ಸ್ಪರ್ಶನಾದೇವ ಜಿನತೀರ್ಥ ಮಹಾಸ್ಥಲಃ ||೫೧ ||

ಊರ್ಜಯಂತಗಿರೌ ನೇಮಿ ಮಾಘ ಕೃಷ್ಣ ಚತುರ್ದಶೀ
ತಸ್ಯ ಜಾಗರಣಂ ಕೃತ್ವಾ ಸಂಜಾತೋ ನಿರ್ಮಲೋ ಹರಿಃ ||೫೨ ||

ಸಂಕಲ್ಪ ಸುಖಸಂತೋಷಾದ್ವಿಮುಖೇ ಸ್ವಾತ್ಮಜಃ ಸುಖಾತ್
ಕುಜಾಗ್ನಿ ತಾಪಸಂತುಷ್ಟಃ ಶಾಖಾಮೃಗಸಮೌಜಸಃ ||೫೩ ||

ಈ ಪ್ರಕಾರದಾಳಿಂ ಚತುರ್ವೇದಂಗಳೊಳುವಷ್ಟಾದಶ ಪುರಾಣ ರಹಸ್ಯಂಗಳೊಳಂ ಕೆಲಕೆಲವು ಜಿಗ್ರಾಮಕ್ರಮಂಗಳಂ ಪೇಳಿರುವವುಮಾ ಪುರಾಣಂಗಳಾವಾವೆಂದರೆ.

ಶ್ಲೋಕ || ಶೈವ ಸ್ಕಾಂದಂ ಚ ಲೈಂಗ್ಯಂ ಚ ಕೂರ್ಮ ವಾಮನಮೇದ ಚ
ವರಹಂ ಚ ಭವಿಷ್ಯ ಚ ಮಾತ್ಸ್ಯಂ ಮಾರ್ಕಂಡ್ಯಮೇವ ಚ ||
ಬ್ರಹ್ಮಾಂಡಂ ನಾರದೀಯಂ ಚ ಗಾರುಡಂ ವೈಷ್ಣವಂ ತಥಾ
ಶೃಣು ಭಾಗವತಂ ವತ್ಸ ಬ್ರಾಹ್ಮಂ ಪಾದ್ಮಂ ತತಃ ಪರಮ್ ||
ಇತ್ಯಾದಯೋ ಪುರಾಣಾಸ್ಯುರ್ಭೇದಾಸ್ಸಂತಿ ತ್ವನೇ ಕಥಾ ||

ಇಂತು ವೇದ ಪುರಾಣಾದಿಗಳಂ ವಿಪರೀತ ಮಿಥ್ಯಾ ಕರ್ಮಿದಯದೊಳೀ ಹುಂಡಾವಸರ್ಪಿಣಿಕಾಲಶಕ್ರಯೊಳೆ ದ್ರವ್ಯಮಿಥ್ಯಾತ್ವಂ ಪುಟ್ಟೆ ಕುಮತಿ ಕುಶ್ರತಿ ಜ್ಞಾನಂ ಪುಟ್ಟಿ ಪೂರ್ವಾಪರ ವಿರುದ್ಧವಾಗಿ ದೃಷ್ಟೇಷ್ಟಕ್ಕೆ ಸತ್ಯಮಲ್ಲದ ಶಾಸ್ತ್ರಂಗಳಂ ರಚಿಸಿರ್ದವವರೊಳು ವಿಚಾರಿಸಿ ನೋಳ್ಪಾಗಲನೇಕ ಸಂಶಯಂ ಪುಟ್ಟುವುದರಿಂ ಬುದ್ಧಿಯೊಡೆಯರ್ ಗ್ರಹಿಸರೆಂದು ಪೇಳಿ

ಶ್ಲೋಕ || ಅವ್ರಣೇ ಮೃಗಶಾಬಸ್ಯ ಪ್ರತ್ಯಕ್ಷಂ ಮೃತದರ್ಶನೇ
ತಕ್ಷಣಂ ಖಾದಯೇತ್ಪುಣ್ಯಂ ತ್ಯಕ್ತಂ ಚೆನ್ನರಕಂ ವ್ರಜೇತ್ ||
ನದೀತೀರೇ ವಟೇವೃಕ್ಷೇ ಬಾಲರಂಡಾಂ ರಜಸ್ವಲಾಮ್
ಬಲಾತ್ಕಾರೇಣ ಗೃಹ್ಣೀಯಾತ್ಕೋಟಿ ಯಜ್ಞಫಲಂ ಭವೇತ್ ||

ಕಾಮಃ ಪುಣ್ಯವಶಾಜ್ಜಾತಃ ಕಾಮಿನೀ ಪುಣ್ಯಪ್ರೇರಿತಾ
ಸೇವ್ಯಾ ಸೇವ್ಯ ಚ ಕರ್ತವ್ಯಂ ಸ್ತ್ರೀರತ್ನಂ ದುಷ್ಕುಲಾದಪಿ
||

“ಸ್ತ್ರೀಯೊ ಮೇಧ್ಯಾಸ್ತು ಸರ್ವತ್ರ” ಎಂಬುದರಲ್ಲದೆ –

ವೇಶ್ಯಾಯಾಃ ದರ್ಶನಂ ಪುಣ್ಯಂ ಸ್ಪರ್ಶನಂ ಪಾಪನಾಶನಮ್
ಚುಂಬನಂ ಸರ್ವ ತೀರ್ಥಾಸ್ಯಾನ್ಮೈಥುನಂ ಮೋಕ್ಷಸಾದನಮ್
||

ಗಂಡಕೀನದಿಯಂ ದೇವತಾಸ್ವರೂಪಂ ಸೂಳೆಯೆಂಬೀ ಭಾವದಿಂ ಕೂಡಿದೊಡೆ ವೇಶ್ಯಾಗಮನ ಫಲಪ್ರಾಪ್ರಿಯಪ್ಪುದು.

ಶ್ಲೋಕ || ಯಾವದಸ್ಥಿ ಮನುಷ್ಯಾಣಾಂ ಗಂಗಾತೋಯೆನ ತಿಷ್ಠತಿ
ತಾವದ್ವರ್ಷ ಸಹಸ್ರಾಣಿ ಪಿತಾ ಸ್ವರ್ಗೇ ಮಹೀಯತೇ ||

ಇವು ಮೊದಲಾಗಿ ಸ್ವೇಚ್ಛೆಯಿಂ ನಾನಾ ಪ್ರಕಾರದಿಂದೆ ಕರ್ತೃಪ್ರಾಮಾಣವಿಲ್ಲದ ವೇದಶಾಸ್ತ್ರ ಪುರಾಣ ಮೊದಲಾದವು ಪ್ರಮಾಣಮಲ್ಲ. ಸರ್ವಜ್ಞಪ್ರಣೀತಪ್ಪಾರ್ಷೇಯ ಪರಮಾಗಮತತ್ವಂ ಪ್ರಮಾಣಮಪ್ಪುದು.

ಶ್ಲೋಕ || ಅಪ್ತೋಪಜ್ಞ ಮನುಲ್ಲಂಘ್ಯು ಮಧ್ಯಷ್ಟೇಷ್ಟ ವಿರೋಧಕಂ
ತತ್ಪೋಪದೇಶ ಕೃತ್ಸರ್ವಂ ಶಾಸ್ತ್ರಂ ಕಾಪಥಘಟ್ಟನಂ ||

ಅಂತಲ್ಪ ಶ್ರತಾರ್ಣಾವದೊಳ್ ಶಕಲಾಪುರುಷರ್ ಮೊದಲಾದನೇಕ ಸತ್ಪರುಷರ ಭವಾವಳಿ ಸಹಿತಮವರ ವೃತ್ತಾಂತಮೆಲ್ಲಮಂ ಪೇಳ್ವುದು ಪ್ರಥಮಾನುಯೋಗಮೆಂಬದು. ತ್ರಿಲೋಕಮಂ ಸವಿಸ್ತರಂ ಸಾಮಾನ್ಯ ವಿಶೇಷಂಗಳಂ ಪ್ರಮಾನದಿಂ ಗಣಿಯಿಸಿ ಪೇಳ್ವುದು ಕರುಣಾನುಯೋಗಮೆಂಬುದು, ಗೃಹಸ್ಥರ ಯತಿಗಳ ಚಾರಿತ್ರಾನುಷ್ಠಾನಂಗಳಂ ಪೇಳ್ವುದು ಚರಣಾನುಯೋಗಮೆಂಬುದು. ದ್ರವ್ಯಾಸ್ಥಿಕಾಯ ತತ್ವ ಪದಾರ್ಥಂಗಳಂ ನಿಸ್ಸಂದೇಹಮಾಗೆ ಯಥಾಸ್ಥಿತಿಯಿಂ ಪೇಳ್ವುದು ದ್ರವ್ಯಾನುಯೋಗಮೆಂಬುದದಿಂತು ಚತುರದಧಿ ಸಿದ್ಧಾಂತ ಮಹಾಶಾಸ್ತ್ರಸಾರದೊಳುಳ್ಳ ಪರಮಾಗಮಮಂ ಯಥಾಸ್ಥಿತಯಿಂ ಪೇಳ್ವುದು ಸಭೆಯುಂ ಸಭಾಪತಿಯ ಮೆಚ್ಚಿ ಜಿನಮತಶಾಸ್ತ್ರಮೆ ಶಾಸ್ತ್ರಂ ಜನೇಶ್ವರನೆ ಪ್ರಾನಿಗಳ್ಗೆ ಪರಮಾಪ್ತಂ ಜಿನತಪಸ್ವಿಗಳೆ ತಪಸ್ವಿಗಳೆಂದು ನಿಶ್ಚೈಸಿ ಜೈನೋಪಾಧ್ಯಾಯರ್ಗೆ ವಂದನಾಪೂರ್ವಕಂ ಪ್ರಶಂಸೆಹೆಯ್ದು ಜಯಪತ್ರಂಗುಡೆ ತತ್ವ ವಿಚಾರದಕ್ಷರೆಲ್ಲರ್ ಸನ್ಮಾರ್ಗಮಂ ಪಿಡಿದರ್, ಕೆಲಂಬರ್ ದೃಢಚಿತ್ತರಾದರ್.

ಶ್ಲೋಕ || ಬುದ್ಧೈಃಫಲಂ ತತ್ತ ವಿಚಾರಣಂ ಚ ದೇಹಸ್ಯಸಾರೋ ವ್ರತಧಾರಣಂ ಚ
ವಿತ್ತಸ್ಯಸಾರಂ ಖಲುಪಾತ್ರದಾನಂ ವಾ ಚ ಫಲಂ ಪ್ರೀತಿಕರಂ ನರಾಣಾಂ ||

ಎಂಬುದರಿಂದೀ ಚತುರ್ವಿಧದಿಂ ಕುಡಿಯುಂ ಸತ್ಪರುಷರ್ ಸಕಲ ದೇಶಂಗಳೊಳ್ ಜೈನಬ್ರಾಹ್ಮಣರ್ ಪೌರೋಹಿತ್ಯ ಮೊದಲಾದ ಕರ್ಮಾದಿಗಳಂ ಜೈನ ಬ್ರಾಹ್ಮಣ ರಿಂ ಮಾಡಿಸಿಕೊಂಬುದೆ ಯೋಗ್ಯಮೆಂದುವಸುಪಾಲಮಹಾರಜಂ ಜೈನ ಬ್ರಾಹ್ಮಣರ್ಗೆ ಗ್ರಾಮ ಕ್ಷೇತ್ರ ಗೃಹಾದಿ ದಾನಂಗೊಟ್ಟು ಮಂತ್ರಿಪದ ಪುರೋಜೊತ ವೈದ್ಯ ಜ್ಯೋತಿಷ ಮಂತ್ರವಾದಾದಿಗಳುಮಿವರ್ಗೆ ಸಲ್ಲವುದೆಂದು ಶಾಸನ ಚಪ್ಪೋಡು ಮಾಡಿಸಿಕೊಟ್ಟು ಬೀಳ್ಕೊಡುವುದುಂ ವೇದಾಂತಾದಿ ಬ್ರಾಹ್ಮಣರ್ ಸಿದ್ಧಾಂತಮಂ ಪಿಡಿದಿಪ್ಪುದರಿಂದವರ್ಗಂ ನಮ್ಮಂತೆ ಮರ್ಯಾದೆಯಿಂ ಮನ್ನಿಸಿ ಯೋಗ್ಯತ್ವಮಂ ಮಾಡಲಕ್ಕುಮೆಂದಾರ್ಹತವಿಪ್ರರ್ ಪೇಳಿ ಸರ್ವರು ಸಮ್ಮತದಿಂದವರಂ ಮನ್ನಿಸಿ ಜೈನೋಪಾಧ್ಯಾಯರಿಲ್ಲವಾದ ಸ್ಥಳಂಗಳಲ್ಲಿ ವೇದಾಂತಿ ಬ್ರಾಹ್ಮಣರ್ ತ್ರಿವರ್ಣಂಗಳಿಗೂ ಪೌರೋಹಿತ್ಯವನ್ನು ಮಾಡಿಸುವತೆಯುಂ ದಾನಂಗುಡುವಂತೆಯುಂ ಕಟ್ಟಳೆ ಮಾಡಿಸಿ ಉಭಯ ಬ್ರಾಹ್ಮಣರುಮನ್ಯೋನ್ಯದಿಂ ನಡೆದುಬರುವಂತೆ ನಿಯಮಿಸಿದರಂದಿಂದಿತ್ತ ಸೌರಾಷ್ಟ್ರ ಮಹಾರಾಷ್ಟ್ರ ಗುರ್ಜರ ಬಾಹ್ಲಿಕಾದಿ ದೇಶಂಗಳೊಳ್ ಬಿನ್ನವಿಲ್ಲದೆ ಏಕಗೃಹರಾಗಿರ್ದು ಕಾಲಾಂತರದೊಳೆಲ್ಲಾ ವಿಪ್ರರ್ ಜಿನಸಮಯಂ ಬಿಟ್ಟು ಮಿಥ್ಯವಂ ಹೊಂದಿದರ್. ಕೆಲರು ಕ್ಷತ್ರಿಯ ವೈಶ್ಯರೊಳೆ ಕೂಡಿದರ್. ದಕ್ಷಿಣದೇಶ ಮೊದಲಾದವರೊಳ್ ಭಿನ್ನಮಾಗಿರ್ದು ಕೆಂಬರ್ ಪ್ರತಿನಾಮಧಾರಿಗಳಾಗಿ ಜೈನಸಮಯಮಂ ಬಿಡೆದಿಪ್ಪರ್ ಮಿಥ್ಯಮಂ ಪೊರ್ದಿದರ್. ಕ್ಷತ್ರಿಯರ್ ಕೆಲ್ ಬೌದ್ಧ ಚಾರ್ವಾಕಮತಮಂ ಪೊರ್ದಿದರ್. ಕೆಲರ್ ಸಮ್ಯಕ್ತ್ವಮಂ ಬಿಟ್ಟು ವ್ಯಸನಿಗರಾಗಿ ವಿಜಾತಿಸ್ತ್ರೀಯರಂ ಕೂಡಿರ್ದರ್. ವೈಶ್ಯರ್ ನಾನಾ ಭೇದವಾಗಿ ಕೆಲರ್ ಮಿಥ್ಯಮಂ ಪೊರ್ದಿದರ್. ಶುದ್ರರೊಳುಮನೇಕ ಎಕಲ್ಪಮಾಯ್ತಿಂತು ಜಾತಿಭೇದ ಮತಭೇದಂಗಳೊಳ್ ಪ್ರತ್ತೇಕ ಪ್ರತ್ಯೇಕಮಾಯ್ತೆಂತೆಂದೊಡೆ.

ಶ್ಲೋಕ || ಬ್ರಹ್ಮ ಕ್ಷತ್ರಿ ವೈಶ್ಯ ಶೂದ್ರವಿಗಣಿರ್ಗೋಪಾಲತೈಲಕ್ರಿಮಾ
ಪಂಚಾಲೀ ಘಟ ಕೃದ್ವಿಚಿತ್ರಪಟ ಕೃದ್ವಸ್ತ್ರಾಛ್ಛದೋ ನಾಪಿತಾ(?)
ವಸ್ತ್ರಕ್ಷಾಲನ ಚರ್ಮಲಬ್ಧಕ ಕಥಾಚಾಂಡಾಲ ಮಾತಂಗಿನೋ
ಏತೇಷ್ಟಾದಶ ಜಾತಯೋ ಮುನಿವರಾಸ್ಸಂಗೀ ಕೃತಾಸ್ಸಂಕುರಃ ||

ಇಂತಷ್ಟಾದಸ ಜಾತಿಗಳೊಳ್ ನೂರೊಂದು ಕುಲಂಗಳೊಳನೇಕ ಭೇದಮಾಗಿ ಕಾಲದೋಷದಿಂಬಿಲ್ಲಾ ಯುವನಾಂತಮಾಗಿಯೊಳ್ ನೂರೆಪ್ಪತ್ತು ಭೇದಂಗಳಾಗಿಪ್ಪವಿವರೊಳ್ ಮುಂದೆ ನಾನಾ ಸ್ವರೂಪದಿಂ ಸಹಸ್ರ ಭೇದಂಗಳಪ್ಪವು. ಅವರೊಳೊರ್ವರ್ಗಂ ವಿರೋಧಮುಂ ಪುಟ್ಟಿ ಕ್ರೋಧಮಾನ ಮಾಯಾಗ್ರಹಸ್ತರಪ್ಪರ್.

ಇಂತೀ ಕಥೆಯಂ ಕೇಳ್ವರ
ಭ್ರಾಂತಿಯು ನೆರೆ ಕೆಟ್ಟು ಬಳಿಕಮಾಯುಂ ಶ್ರೀಯುಂ
ಸಂತಾನವೃದ್ಧಿಸಿದ್ಧಿಯ
ನಂತಸುಖಂ ತಪ್ಪದಿಹಪರಂಗಳೊಳಕ್ಕುಂ
ಪರಮಾರ್ಥಮಪ್ಪು ವಂ ಮ
ಚ್ಚರಿಸದೆ ಕೋಪಿಸದೆ ಮಾನಮಾಯಕ್ಕೆರಗದೆ
ದರಿಯ ಮಳಲಮತೆ ಜರಿಯದೆ
ನಿರುತಂ ಕೇಳ್ವಾರ ಧರ್ಮದೊಳಗಂ ತಿಳಿವಂ

ಇದು ಸತ್ಯಪ್ರವಚನ ಕಾಲಪ್ರವರ್ತನೋದ್ಧೃತ ದೇವಚಂದ್ರ ವಿರಚಿತ ರಾಜಾವಲಿ ಕಥಾಸಾರದೊಳ್ ಸಿದ್ಧಾಂತ ವೇದಾಂತ ಪ್ರಸಂಗ ಸಂಕ್ಷೇಪಂ

ಸಪ್ತಮಾಧಿಕಾರಂ