ಶ್ರೀಸುಜನಸ್ತು ತರಖಿಳ ಕ
ಳಾಸದನರ್ ಮೋಹತಿಮಿರಮಂ ಕಳೆದು ಕರಂ
ಭಾಸುರ ವಿಚಾರದಕ್ಷರ್
ವೈಷಮ್ಯಮನುಳಿದು ಕೇಳ್ವುದೀ ಸತ್ಕೃತಿಯಂ

ಇಂತನೇಕ ರಾಜರ್ ರಾಜ್ಯಮಂ ಪ್ರತಿಪಾಲಿಸುತ್ತಿರೆ ಹಸ್ತಿನಾಗಪುರದೊಳ್ ಜನಮೇಜಯಂ ತಮ್ಮ ಪಿತೃವಪ್ಪ ಪರೀಕ್ಷಿದ್ರಾಜಂ ಸರ್ಪದಷ್ಟನಾಗಿ ಪೋದುದಕ್ಕೆ ಸರ್ಪಯಾಗಮಂ ಮಾಡಿಸಲ್ ಭೌತಿಕರಂ ಬರಿಸಿ ಸರ್ಪಗಳೆಲ್ಲಮಂ ರೋಮಹರ್ಷನೆಂಬವಂ ಬಂದು ವಿವಿಧ ಪುರಾಣಮಂ ಪೇಳಿದನದೆಂತೆದೊಡೆ

ಪರಾಶರನಾತ್ಮಜಂ ವ್ಯಾಸನೆಂಬ ವೇದಕರ್ತನಾಗಿ [ಋಕ್] ಯಜುರ್ ಸಾಮಾಥರ್ವಣಭೇದದಿಂದ ನಾಲ್ಕಾಗಿ ನಿರ್ಮಿಸಿಯವಕ್ಕಂ ಸಾಂಗೋಪಾಂಗದಿಂ ದೊಂದೊಂದಂಗಕ್ಕಮರುವತ್ತು ಸಾಸಿರ ಗ್ರಂಥಮಂ ಮಾಡಿ ಆಶ್ವಲಾಯನ ಬೋಧಾಯನ ಆಪ್ತಸ್ತಂಭ ಜೈಮಿನಿಯೆಂಬ ಸೂತ್ರಷತುಷ್ಟಯಂಗಳಂ ಇತಿಹಾಸಂಗಳುಮಂ ಪೇಳಿ ಸೂತಂಗರಿಪಿದೊಡಾತಂ ಶೌನಕಾದಿ ಋಷಿಗಳ್ಳಂ ಪೇಳಿ ಪೂರ್ವಾಪರಕ್ಕಂ ದೃಷ್ಟೇಷ್ಟಕ್ಕಂ ವಿರೋಧಮಾಗಿಯಂ ಸರ್ವರುಂ ನಂಬುವಂತೆ ವಿವಿಧ ಪುರಾಣಮಂ ರಚಿಸಿರ್ದು ಅವರೊಳ್ ಶ್ರೀಮದ್ಭಾಗವತಮಂ ಜನಮೇಜಯಂಗೆ ಪೇಳಿದಂ ಮತ್ತಂ ಕೆಲವು ದಿನಂ ಸಲ್ವಿನಂ ಬಲಭದ್ರನೆಂಬ ದೇವಂ ಬಂದು ವಿಷ್ಣುದೇವರಂ ಸ್ಥಾಪಿಸುವ ಕ್ರಮಮಂ ಪೇಳೆ ತದಾಲಯಮಂ ಮಾಡಿ ವಿಷ್ಣುದೇವರ ಪ್ರತಿಕೃತಿಯಂ ಮಾಡಿ ಪೂಜೆಯಂ ಮಾಡಿದರ್ ತದನಂತರಂ ಚಂದ್ರವರ್ಧನ ಮಹಾರಾಜನ ಸಭೆಗೆ ವೇದಾಂತಿಗಳ್ ಪೌರಾಣೀಕರ್ ಸಹಿತಂ ಬಂದು ತಮ್ಮೊಳೆ ವಾದ್ವಾದಂ ಪುಟ್ಟೆ ಹಿಂಸಾಯಜ್ಞ ಮಾಗದೆಂದನೇಕ ತೆರದಿಂ ದೂಷಣಂ ಮಾಡಿ ಬ್ರಹ್ಮಾಂಡ ಪುರಾಣೋಕ್ತಮಂ “ನ ಹಿಂಸಾ ಲಕ್ಷಣಂ ಧರ್ಮಂ” ಹಿಂಸಾಯುಕ್ತಮಾದುದು ಧರ್ಮಮಲ್ಲಂ ಪಾಪಕ್ಕೆ ಕಾರಣಂ ಆತ್ಮಯಜ್ಞಂ ಧಾನಲಕ್ಷಣಂ ಮುಕ್ತಸಾಧನಮೆಂದು ಪೇಳಿ ಶಾಸ್ತ್ರೋಕ್ತಮಂ ಪ್ರಕಟಿಸೆ ಕೆಲಂಬರ್ ಪಿಷ್ಟಪಶುವಂ ಮಾಳ್ಪುದೆಂತೆಂದರೆ ಕೆಲರೆಂದರ್ ನಾಮಸ್ಥಾಪನಾದ್ರವ್ಯ ಭಾವವೆಂಬ ಚತುರ್ವಿಧಂಗಳೊಳ್ ಪುಣ್ಯ ಪಾಪಂಗಳ್ ಸಮಾನಮಪ್ಪುದೆಂದು ಪೇಳ್ದರಲ್ಲಿ ಮತ್ತಂ ಕೆಲರಿಂತೆಂದರ್ ಯಜ್ಞಾರ್ಥಂ ಪಶುವಧೆಯಂ ಪುತ್ರಾರ್ಥಂ ಪರಸ್ತ್ರೀಸಂಗಮುಂ ತ್ರಿದಿನ ಗ್ರಾಸಮಾತ್ರಂ ಚೌರ್ಯಮುಂ ದೋಷಮಿಲ್ಲೆಂದು ಆಪತ್ಕಾಲೇನಾಸ್ತಿಮರ್ಯಾದಾ ಇತ್ಯಾದಿ ಐಹಿಕಸುಖಾಭಿಲಷಿತ ಗ್ರಂಥಮಂ ಪೇಳಿ ಕಾರಣ ನಿಮಿತ್ತಂ ಪಿಶಿತಾಶನಮುಂ ಸುರಾಪಾನಮಂ ಬೇಂಟೆಯುಂ ವೇಶ್ಯಾಗಮನಮುಂ ರಾತ್ರಿಚರ್ಯಮುಂ ಪುಸಿಯುಂ ಕೊಲೆಯುಂ ವಂಚನೆಯುಮೆಂಬಿವರಿಂ ಪಾಪಮಿಲ್ಲೆಂದು ಶಾಸ್ತ್ರಮಂ ಕೆಲಂಬರುಸಿರಲಲ್ಲಿ ಆರ್ಹತ ಸಿದ್ಧಾಂತಿಗಳ್ ಮೂರ್ಖರುಂ ವ್ಯಸನಿಗರುಂ ಅಸತ್ಯಮುಖ್ಖರುಂ ವ್‌ಉಸನಮಂ ಬಿಟ್ಟರುಂ ಪಾಪಸಂಪಾದನೆಯಿಂದ ನರಕಂಬುಗುವರೆಂಬೀ ಶಾಸ್ತ್ರಮಂ ಪೇಳ್ವರದರಿಂ ನಿಮ್ಮಂತಪ್ಪ ಪಾಪಸೂತ್ರಧಾರಿಗಳಿಲ್ಲೆಂದಿಂತೆಂದರ್

ದ್ಯೂತಂ ಮಾಂಸಂ ಸುರಾ ವೇಶ್ಯಾ ಪಾಪರ್ಧಿಃ ಪರದಾರತಾ
ಸ್ತೇಯೇನ ಸಹ ಸಪ್ತೈತೇ ವ್ಯಸನಾನಿ ವಿವರ್ಜಯೇತ್

ಎಂಬೀ ಸತ್ಯವಚನಮಂ ಬಿಟ್ಟು ನುಡಿವಿರಿ. ಇಲ್ಲಿ ಯುಧಿಷ್ಠಿರಾದಿಗಳುಂ ಜೂದುಗಳಿಂ ವನವಾಸಂ ಮೊದಲಾದ ಪರಿಭವಂಬಟ್ಟರ್, ಬಕನೆಂಬರಸಂ ಮಾಂಸಾಹಾರಿಯಾಗಿ ರಾಕ್ಷಸರೂಪದಿಂ ಮನುಷ್ಯರಂ ಭಕ್ಷಿಸಿ ಅತ್ಯಂತ ದುಃಖದಿಂ ನರಕಮನೆಯ್ದಿದಂ ಪ್ರಮಾದದಿಂ ಯಾದವರಲ್ಲಿ ಕೆಲಂಬರರಿಯದೆ ಮದ್ಯಮಂ ಸೇವಿಸಿದುದರಿಂ ದ್ವಾರಾವತಿ ನೀರೊಳ್ ನೆರೆಯೆ ಪರಿಭವಮಂ ಪಡೆದರ್. ಚಾರುದತ್ತನೆಂಬ ವೈಶ್ಯಜಂ ವೇಶ್ಯಾಗಮನದಿಂ ಮೂವತ್ತೆರಡು ಕೋಟಿ ದ್ರವ್ಯಮಂ ಪೋಗಾಡಿ ಚೀಲದೊಳ್ ಕಟ್ಟಿಸಿಕೊಂಡು ತಿಪ್ಪೆಯೊಳ್ ಕೆಡೆದಂ. ಬ್ರಹ್ಮದತ್ತನೆಂಬರಸಂ ಬೇಂಟೆಯಿಂ ಕೆಟ್ಟು ದುರ್ಗತಿಗೆ ಸಂದಂ. ಶಿವಭೂತಿಯೆಂಬರಸಂ ಚೋರತ್ವದಿಂದಿಹಪರ ದುಃಖಮನುಂಡಂ. ರಾವಣನುಂ ಪರವಧುವಿಗಾಟಿಸಿದುದರಿಂದಪಕೀರ್ತಿಯಿಂ ದುರ್ಗತಿಗೆ ಸಂದಂ. ಇಂತಪ್ಪ ಮಹಾಪುರುಷರೊಂದೊಂದರಿಂ ಕೆಟ್ಟರೆಂದೊಡೋರ್ವಂಗೇಳು ವ್ಯಸನಂ ಕೂಡಿದೊಡಾತಂಗಿಹಪರ ದುಃಖಮನೆಷ್ಟೆಂದು ಪೇಳ್ವುದದರಿಂ ನೀವು ಪೇಳುವುದೆಲ್ಲಮಸತ್ಯಮೆಂದು ನಿರಾಕರಿಸೆ ಅತ್ಯಂತ ಕ್ರೋಧಂ ಪುಟ್ಟಿ ಅನೇಕ ವಾಗ್ವಾದದಿಂ ಕೆಲರು ಸತ್ಯಮಂ ಪಿಡಿದುಂ ಕೆಲಬರಸತ್ಯಮಂ ಪಿಡಿದುಂ ಚರ್ಚಿಸುತ್ತಿರಲೆರಡು ಭಾಗಮಾಗೆ ವಾದಿಸಿ ತೀರದೆ ಕಾಶಿಗೆ ಬಂದು ವಿಶ್ವಸೇನ ಮಹಾರಾಜನ ಸಭೆಯೊಳೇಳುದಿವಸಂಬರಂ ವಿವಾದಮಾಗಲಲ್ಲಿರ್ದ ಭೂಸುರರ ಭೋಜನಕ್ಕೆ ಬರಿಸಿ ಮತ್ಸ್ಯ ಮಾಂಸಮಂ ವಿಪರೀತ ಬ್ರಾಹ್ಮಣರ ಪ್ರೇರಣೆಯಿಂದಿಕ್ಕಿಸಲ್ ಕೊಕ್ಕರಿಸಿ ಸಪ್ತದಿವಸಮುಪವಾಮಿರ್ದು ನಿಮ್ಮ ವರ್ತನೆಯಿಂದೆ ನೀವು ಕರ್ಮಚಾಂಡಾಲರೆಂದು ನಿರಾಕರಿಸೆ ರಾತ್ರಿವೇಳೆಯೊಳ್ ರುದ್ರಭೂತಿಯೆಂಬವಂ ತನ್ನಂತೆ ವಾಸಿಗಳ್ವೆರಸು ಜಿನದಾಸನಂ ಕೊಲ್ವುದುಂ ವಿಶ್ವಸೇನಮಹಾರಾಜನವನಂ ಪರಿಭವಿಸಿ ಕಳೆಯೆ ರೋಷಾವೇಶಂ ಪುಟ್ಟಿದವರೆಲ್ಲ ನಿತ್ಯ ನೈಮಿತ್ತಕ ಕರ್ಮಂಗಳ್ಗೆ ಮಂತ್ರಂಗಳಂ ಮಾಡಿಕೊಂಡಲ್ಲಿ ಕಾಲತ್ರಯದೊಳ್ ತರ್ಪಣಮಂ ಕುಡುವಲ್ಲಿ ಜಿನಮತ ಕ್ಷಯವಾಗಲೆಂದು ಮಂತ್ರಮಂ ಮಾಡಿದರಂದಿಂ ಬಳಿಯ ಬ್ರಾಹ್ಮರೊಳೆರಡು ಭಾಗಮಾಯ್ತು. ಅಲ್ಲಿ ವಿಂಗಡಿಸಿಕೊಂಡವರ್ ವಿರುದ್ಧಾಃ ಕಿಂ ನ ಜಲ್ವಂತಿ ಎಂಬುದರಿಂ ನಾನಾ ಪ್ರಕಾರದಿಂದಿತರ ಮತಮಂ ದೂಷಿಸಿ ಮೂಲಶಾಸ್ತ್ರಮಂ ನೋಡಲುಂ ಪೇಳಲುಂ ಕೇಳಲುಮಾಗದು. ಆನೆಯಟ್ಟಿದೊಡಂ ಜಿನಾಲಯಮಂ ಪುಗಲಾಗದು, ಜೈನರೊಳ್ ಸಂಭಾಷಣಮಂ ಮಾಡಲಾಗದೆಂದು ಪ್ರತಿಜ್ಞೆಯಂ ಮಾಡಿ ವಿಂಗಡಿಸಿಕೊಂಡರ್.

ಇಂತು ಪ್ರವರ್ತಿಸೆ ಮಗಧವಿಷಯದ ರಾಜಗೃಹಮೆಂಬ ಪಟ್ಟಣದೊಳುಪರಿ ಶ್ರೇಣಿಕ ಮಹಾರಾಜಂಗೆ ಇಂಗ್ರಾಣಿಯೆಂಬ ಪಟ್ಟದರಸಿ ಮೊದಲಾಗೆ ಮೂವತ್ತಿರ್ವರ ರಸಿಯರಾಗಲವರಿಗೆ ನೂರ್ವರ್ ಕುಮಾರರಾಗಿರಲೊಂದು ದಿನಂ ಯಮದಂಡನೆಂಬ ಸಾಮಾನ್ಯ ಕ್ಷತ್ರಿಯನ ಪುತ್ರಿ ತಿಲಕಾವತಿಯೆಂಬ ಅತಿರೂಪವತಿಯಂ ಕಂಡು ಸೋಲ್ತು ಬೇಡಿದೊಡೆ ಯಮದಂಡಂ ಎನ್ನ ಮಗಳ್ ಪೆತ್ತ ಮಗಂಗೆ ರಾಜ್ಯಮಂ ಕೊಡುವೊಡೆ ಕೊಂಬುದೆನೆ ಅಂತೆಗೆಯ್ವೆನೆಂದು ಭಾಷೆಯಂ ಮಾಡಿ ತರಲವಳ್ಗೆ ಪುಟ್ಟಿದ ಶ್ರೇಣಿಕನೆಂಬ ಕುಮಾರನತಿ ರೂಪನತಿಜಾಣನುಮಾಗಿರೆ ಒಂದು ದಿವಸಂ ನೈಮಿತ್ತಿಕನಂ ಕರೆದೆನ್ನ ಮಕ್ಕಳ್ ನೂರಿರ್ವರೊಳೀ ರಾಜ್ಯಮನಾವನಾಳ್ವನೆಂದು ಬೆಸಗೊಳೆಯದಂ ಪರೀಕ್ಷಿಸಲೋರೋರ್ವರ ಕೈಯೊಳೊಂದೊಂದು ಸಕ್ಕರೆಕೊಡಮಂ ಕೊಟ್ಟು ಸತ್ರಕ್ಕೆ ಕಳುಹಿಸಲೆಲ್ಲರುಂ ಕೊಂಡು ಪೋದರ್. ಶ್ರೇಣಿಕಂ ತನ್ನ ಕೊಡುಮಂ ಕೆಲದೊಳಿರ್ದ ಮನುಷ್ಯನ ಕೈಯೊಳ್ ತೆಗೆಯಿಸಿಕೊಂಡು ಪೋದಂ. ಮತ್ತೊಂದು ದಿನಂ ಪೊಸಮಡಕೆಯೊಳ್ ಪುಲ್ಲನೀರಂ ತರವೇಳಲೆಲ್ಲರುಂ ತರಲಾರದಿರೆ ಶ್ರೇಣಿಕಂ ಸಣ್ಣ ಬಟ್ಟೆಯನೆಳೆದು ಪಿಂಡಿ ಕೊಡಮಂ ತುಂಬಿ ತಂದಂ. ಮತ್ತೊಂದು ದಿವಸಂ ಮನೆಯೊಳ್ ಪಾಯಸಮನುಣಲಿಕ್ಕೆ ನಾಯಕುನ್ನಿಗಳಂ ಬಿಡಲೆಲ್ಲರುಂ ಎಡೆಯಂ ಬಿಟ್ಟು ಪೋಗೆ ಶ್ರೇಣಿಕಂ ತನ್ನೆಡಗೈಯಿಂದೊಂದೊಂದು ತುತ್ತಂ ನಾಯಿಗುಡಯತ್ತುಂ ಪರಿಯಾಣಮಂ ಮುಟ್ಟಲೀಸದಾರೊಗಿಸಿದಂ. ಮತ್ತೊಂದು ದಿನಂ ಅರಮನೆಗೆ ಅಗ್ನಿಪ್ರವೇಶಮಾಗೆ ಕುಮಾರರೆಲ್ಲರಂಜಿ ಓಡುತ್ತಿರೆ ಶ್ರೇಣಿಕಂ ತಮ್ಮ ತಂದೆಯೇರುವ ಸಿಂಹಾಸನಮಂ ಕನಕಛತ್ರಮಂ ಧ್ವಜಮುಮಂ ಕೊಂಡು ಪೊರಮಡಲೀತಂ ರಾಜ್ಯಾರ್ಹನಪ್ಪನೆಂದರಿದು ತಿಲಕಾವತಿಯ ಪುತ್ರಂಗೆಂದಿತ್ತ ಭಾಷೆ ತಪ್ಪುವುದೆಂದಾಳೋಚಿಸಿ ಶ್ರೇಣಿಕನ ಮೇಲೆ ಅವಗುಣಂಗಳನಾರೋಪಿಸಿ ಪಟ್ಟಣದಿಂ ಶ್ರೇಣಿಕನಂ ಪೊರಮಡಿಸಲೊರ್ವನೆ ನಂದಿಗ್ರಾಮಮನೆಯ್ದಿ ಪಾರ್ವರ ಮಠದ ಮುಂದೆ ಕುಳ್ಳಿರ್ಪುದುಮೇಳಾತಟಾಕಮೆಂಬ ಪುರದ ಇಂದ್ರದತ್ತನೆಂಬನಾತ ತನ್ನ ಮಗಳತಿನಿಪುಣೆಯಾನಂದಶ್ರೀಯೆಂಬಳ್ಗೆ ವರಮಂ ನೋಡುತ್ತುಂ ಬಪ್ಪನೀ ರಾಜಕುಮಾರನಂ ಕಂಡು ಸಮೀಪಕ್ಕೆ ವರೆ ಮಾವಾ ಬನ್ನಿಮೆಂದು ಕರೆದು ನಿಮ್ಮ ಕೂಡೆ ನಾಂ ಬಪ್ಪೆನೆನಲಾತನ ಭದ್ರಾಕಾರಮಂ ನೋಡಿ ಸಂತಸಂಬಡೆ ಶ್ರೇಣಿಕನಾತನನೊಡಗೊಂಡಲ್ಲಿ ನೆರೆದಿರ್ದ ಬ್ರಾಹ್ಮಣರಲ್ಲಿಗೆಯ್ದಿ ಅರಮನೆಯ ಮನುಷ್ಯರಾವು ರಾಜಕಾರ್ಯಕ್ಕೆ ಪೋದಪೆವೆಮಗೆ ಭೋಜನಮುನಿಕ್ಕುವುದೆನೆ ಅವರೆಲ್ಲಂ ನಕ್ಕು ಇದು ಸರ್ವಮಾನ್ಯದಗ್ರಹಾರಂ ಎಂತಪ್ಪ ಬಲ್ಲಿದಂ ಬಂದೊಡಂ ನೀರ್ಗುಡಿಯಲೆರೆವವರಲ್ಲವೆಂದು ನಿರಾಕರಿಸೆ ಪಸಿವಿಂ ಮರುಗುತ್ತುಂ ಬಂದು ಜಠರಾಗ್ನಿಯೆಂಬ ಬ್ರಾಹ್ಮಣನ ಗೃಹಕ್ಕೆಯ್ತಂದೆಮಗೆ ಅನ್ನಮನಿತ್ತೊಡೆ ರೊಕ್ಕಮನೀವೆವೆಂದು ಬೇಡಿದೊಡಾತನಿವರಾಕಾರಮಂ ನೋಡಿ ಪ್ರೀತಿಯಿಂದುಣಲಿತ್ತು ಮನ್ನಿಸಿ ಶ್ರೇಣಿಕನಂ ತನ್ನ ವೈಷ್ಣವಧರ್ಮಮಂ ಕೈಕೊಳಿಸಲಾ ಭಾಗವತನಂ ಬೀಳ್ಕೊಂಡು ಮರುದಿವಸಂ ಇಂದ್ರದತ್ತನ ಪೊಳಲ್ಗೆ ಪೋಗಲ್ ಬಟ್ಟೆಯಂ ಪತ್ತಿ ಪೋಗುತ್ತುಂ ಎಲೆ ಮಾವಾ ನಾಲಗೆಯಂ ಭಂಡಿಯಂ ಮಾಡಿ ಏರಿ ಪೋಪಮೆನಲ್ ಮುಂದೆ ನದಿಯೊಳ್ ಪೋಪಾಗಳ್ ಕಾಲಮರೆಯಂ ಮೆಟ್ಟಿ ಪೋಗೆ ಮರದೆಡೆಯೊಳ್ ಕೊಡೆಯಂ ಪಿಡಿದು ನಡೆಯೆ ಮುಂದೊಂದೂರಂ ಕಂಡಿದು ಊರೊ ಪಾಳೊ ಎನೆ ಮತ್ತೋರ್ವಂ ತನ್ನ ಪೆಂಡತಿಯಂ ಬಡಿಯುತ್ತಿರೆ ಕಟ್ಟಿ ಬಡಿದಪನೊ ಕಟ್ಟಿಲ್ಲದೆ ಬಡಿದಪನೊ ಎಂದಂ. ಮುಂದೆ ಪೆಣನ ಕಂಡಿಂದು ಸತ್ತವನೊ ಅಂದೆ ಸತ್ತವನೊ ಎಂದಂ. ಒಬ್ಬನುಳುತ್ತಿರ್ದನಂ ಕಂಡೀ ನೇಗಿಲ್ಗೆಷ್ಟು ಪೆಂಟೆಯೆಂದಂ. ಬೆಳೆದಿರ್ದ ಪೊಲನಂ ಕಂಡಿವಂ ಪಿಂದುಂಡವನೊ ಮುಂದುಂಬನೊ ಎಂದಂ. ಏರದ ಮರಕ್ಕೆ ಮುಳ್ಗೆಷ್ಟೆಂದು ಪ್ರಶ್ನೆಗಳವನೇ ಕಂಗಳ ಮಾಡುತ್ತಂ ಬರೆ ಈತಂ ನಿರ್ಬುದ್ಧಿಗನೊ ಮರುಳನೊಯೆಂದರಿದು ಇಂದ್ರದತ್ತಂ ತನ್ನ ಪುರಮಂ ಪೊಗುವಾಗಳವನಂ ಪುರದ ಮುಂದಣ ಕೆರೆ ಬಳಿಯೊಳಿರಿಸಿ ತನ್ನ ಮನೆಗೆ ಬಂದು ಆನಂದಶ್ರೀಯುಂ ಕಂಡು ಎಲೆ ಮಗಳೆ ನಿನಗೆ ವರಮಂ ನೋಡನೆಂದು ಪೋದೊಡಗ್ರಹಾರದ ಬಳಿಯೊಳೋರ್ವನತಿರೂಪನಾದ ರಾಜಕುಮಾರಂ ಎನ್ನಂ ಮಾವಾ ಎಂದೆನ್ನೊಡನೆ ಬಂದಂ.ಆತಂ ಮರುಳುಪ್ಪುದರಿಂದೂರ ಪೊರಗೆ ಬಿಟ್ಟು ಬಂದೆನೆನೆ ಎಂತಪ್ಪ ಮರುಳನೆಂಬುದುಮಾತಂ ಕೇಳಿದ ಪ್ರಶ್ನೆಗಳೆಲ್ಲಮಂ ಪೇಳ್ದೊಡಾತಂ ಮರುಳನಲ್ಲಂ ನಿಮ್ಮಂ ಮರುಳ್ಮಾಡಿದನೆಂದು ಬೇಗದಿಂ ತನ್ನ ಸಖಿಯಂ ಕರೆದು ಸೆಳ್ವುಗುರೊಳ್ ಗಂಧದೆಣ್ಣೆಯಂ ತುಂಬಿಕೊಟ್ಟು ಮಿಂದು ಬಲವೇಳೆಂದು ಕಳುಹಿಸಲಾಕೆ ಪೋಗಿ ಶ್ರೇಣಿಕನಂ ಕಂಡು ಇಂದ್ರದತ್ತರೊಡನೆ ಬಂದವರ್ ನೀವೇ ಎಂಬುದುಮಾತಂ ಮಾರ್ಗದೊಡನೆ ಬಂದನೆನೆ ಆದೊಡಾತನ ಮಗಳ್ ಆನಂದಶ್ರೀಯಂ ಕೆರೆಯೊಳ್ ಮಿಂದು ಬರಲೆಂದು ಗಂಧತೈಲಮಂ ಕಳುಹಿಸಿದಳೆಂಬುದುಮಾ ಎಣ್ಣೆಯಂ ಎರೆಯೆಂದು ಮಣ್ಣಿಂಗುಳಿಯಂ ಮಾಡಿ ನೀರಂ ತುಂಬಿ ಆ ಎಣ್ಣೆಯನೆರಡು ಪೋಗೆನಲಂತೆ ಮಾಡಿ ಪೋಗುತ್ತಿರೆ ನಿನ್ನೊಡತಿಯ ಮನೆಯಲ್ಲಿರ್ಪುದೆಂದೊಡಾಕೆ ಕಿವಿಯಂ ಮುಟ್ಟಿಕೊಳ್ಳುತ್ತಂ ಪೋಗೆತಾನುಂ ಕೆರೆಯೊಳ್ ಸ್ನಾನಂಗೆಯ್ದು ಕುಳಿಯೊಳಿರ್ದೆಣ್ಣೆಯಂ ತಲೆಯ ನವಿರಿಂಗಿಕ್ಕಿಕೊಂಡು ತಾಳಮರದ ಮನೆಯನವಳೋಕಿಸುತ್ತುಂ ಬಪ್ಪಿನಂ ಮರನಂ ಕಡಿಯಿಸಿ ಪೊರಗೆ ಹಾಕಿ ತನ್ನ ಮಂದಿರದ ಮುಂದೆ ನೆಲನೆಲ್ಲಮಂ ಕೆಸರಂ ಮಾಡಿ ನಡುವೆ ಬಪ್ಪದಾರಿಯೊಳ್ ಜಾರಗಲ್ಲನಿಕ್ಕಿರೆ ಶ್ರೇಣಿಕಂ ಬಂದು ಗೃಹಮಂ ಕಾಣದಿರ್ದು ತುಂಬಿಗಳಾಡುತ್ತಿರ್ದುದಂ ಕಂಡು ಬಪ್ಪಿನಮಾರ್ಗದೊಳಿರ್ದ ಜಾರಗಲ್ಲಂ ಮೆಟ್ಟದೆ ಕೆಸರೊಳೆ ಬಂದು ಗೃಹಾಂಗಣದ ವೇದಿಕಾಗ್ರದೊಳ್ ಕುಳ್ಳಿರೆ ಆನಂದಶ್ರೀ ಕಂಡು ಸಣ್ಣ ಚೆಂಬಿನೊಳ್ ಕಿರಿದುದಕಮಂ ಕಳಿಪಿ ಕಾಲಂ ಕರ್ಚಿ ಬರಲೆಂದೊಡೆ ಶ್ರೇಣಿಕಂಬಿದಿರ ಸೀಳಿನೊಳ್ ಕಾಲಂ ಪತ್ತಿದ ಕೆಸರೆಲ್ಲಮಂ ಕಳೆದು ಒದ್ದೆಯಿಂ ಒರಸಿ ಮಿಕ್ಕಂ ಜಲಮಂ ತಿರುಗಿ ಕಳುಪುವುದುಂ ಮೆಚ್ಚಿ ಇಂದೆಮ್ಮ ಗೃಹದೊಳ್ ಭೋಜನಂ ಮಾಳ್ಪದೆನೆ ಎಮಗಿಂದು ಪರಾನ್ನಂ ಸಲ್ಲದೆನ್ನಲ್ಲಿ ಎರಡು ಸೊಲ್ಲಗೆ ಅಕ್ಕಿಯಿರ್ದಪುದದರಿಂದಂ ಪದಿನೆಂಟು ತೆರದ – – ಪಕ್ವಾನ್ನಮಂ ಮಾಡಿ ಯಥೇಷ್ಟ ಭೋಜಮಮನಿಕ್ಕಲುಂಬೆನೆಂದೊಂಡಾ ಅಕ್ಕಿಯಂ ತರಿಸಿ ಪಿಟ್ಟುಗುಟ್ಟಿ ಅಬಗನಟ್ಟು ನಿಪುಣಮತಿಯ ಕೈಯೊಳ್ಕೊಟ್ಟು ಜೂಜುಗಾರರಾಡುವಲ್ಲಿಗೆ ಪೋಗಿಯಲ್ಲಿ ಭಾಷೆಯಿಂದೇಳದೆ ಕ್ಷುಂಧಾ ತೃಷೆಯಿಂ ಬಳಲುತ್ತಿರ್ದವರ್ಗೆ ಖಾದ್ಯಪಾನಂಗಳ ‌ಕೊಡಲವರ ಕೇಳಿದ ರೊಕ್ಕಮಂ ಕುಡೆ ಅದರಿಂ ಸಮಸ್ತ ವಸ್ತುಗಳಂ ತರಿಸಿ ಪದಿನೆಂಟು ತೆರೆದ ಪಕ್ವಾನ್ನಮಂ ಮಾಡಿ ಭೋಜನಮಂ ಮಾಡಿಸಿ ಒಂದು ಪಿಡಿಯಡಕೆಯಮನೆರಡೆಲೆಯುಮಂ ಗಜ್ಜುಗದಷ್ಟು ಸುಣ್ಣಮಂ ಕುಡೆ ತಾಂಬೂಲಮಂ ಮಾಡೆ ಅಷ್ಟಡೊಂಕಿನ ಹವಳಕ್ಕೆ ಸೂತ್ರಮನೇರಿಸುವುದೆಂದು ಕೊಟ್ಟೊಡೆ ಆಸೂತ್ರಕ್ಕೆ ಬೆಲ್ಲದ ರಸಮನೂಡಿ ಇರುಪೆಯಿಂ ನೆತ್ತಿಉಮೊದಲ ಛಿದ್ರದೊಳ್ ಪೊರಮಡಲದಂ ನಂದಶ್ರೀಗೆ ಕುಡೆ ಸಂತೋಷದಿಂ ಪಿತೃಗಳನುಮತಿಯಿಂ ಶುಭಮುಹೂರ್ತದೊಳ್ ಮದುವೆನಿಂದು ಶ್ರೇಣಿಕಂ ಇಷ್ಟಭೋಗ ಕಾಮಸುಖಮನನುಭವಿಸುತ್ತಿರೆ ಕೆಲವು ದಿವಸಕ್ಕೆ ನಂದಶ್ರೀ ಗರ್ಭಮಾಗಿ ನವಮಾಸಂ ಕಳೆವನ್ನಮಭಯಘೋಷಣೆಯಂ ಮಾಳ್ವ ಬಯಕೆಯಾಗೆ ಚಿಂತಿಸುತ್ತಿಪ್ಪಾಗಳಾ ಪುರದರಸಂ ವಸುಪಾಳನ ಪಟ್ಟದಾನೆ ಮದಂ ಪುಟ್ಟಿ ಕಂಭಮಂ ಕಿತ್ತು ಜನಂಗಳೆಲ್ಲಮಂ ಕೊಲ್ಲುತ್ತುಂ ಪುರದೊಳ್ ಚರಿಸುತ್ತಿರಲದಂ ಪಿಡಿಯಲಾರಿಗುಂ ಸೆಲವಿಲ್ಲದಿರೆ ಶ್ರೇಣಿಕನದಂ ಕಂಡುದ್ದಾಮದ ಗಜಮನೊಳಗುಮಾಡಿ ಅದರ ಮೇಲೇರಿ ಎಲ್ಲರಾಶ್ಚರ್ಯಬಂಡೆ ಕಂಭಕ್ಕೆ ತಂದು ಕಟ್ಟುವುದುಂ ವಸುಪಾಳಂ ಕರೆದು ಮನ್ನಿಸಿ ನಿನ್ನ ಮನೋಭಿಷ್ಟಮಾವುದದಂ ತೀರ್ಚುವೆನೆನೆ ಮಾನದಿಂ ಮೌನದೊಳ್ ಇಂದ್ರದತ್ತನೆಂದನೇಳು ದಿವಸಮಭಯಘೋಷಣೆಯಂ ಮಾಡಿಸಲಭೀಷ್ಟಮಿಪ್ಪುದೆನಲೇಳು ದಿವಸಮಭಯ ಘೋಷಣೆಯಂಮಾಡಿಸಿ ನಂದಿಶ್ರೀ ಬಯಕೆ ತೀರೆ ಗಂಡುಮಗನಂ ಪಡೆಯೆ ಅಭಯಕುಮಾರನೆಂದು ಪೆಸರಿಡಲನುಕ್ರಮದಿಂ ಬಳೆದು ಸಕಳಕಳಾಕುಶಲನಾಗಿ ಸುಖಮಿರಲತ್ತ ರಾಜಗೃಜಪಟ್ಟಣದೊಳುಪಶ್ರೇಣಿಕನೆಂಬ ವ್ಯಾಧಿತನಾಗಿ ತಾಂ ಮುನ್ನಂ ಭಾಷೆಯನಿತ್ತುದರಿಂ [ಚಿಳಾತಿ] ಪುತ್ರಂಗೆ ಪಟ್ಟಿಂಗಟ್ಟಿ ತಾಂ ಪರೊಲೋಕಮನೆಯ್ದಿ ಆತಂ ಸಕಲ ಜನಂಗಳ್ಗಂ ಕಷ್ಟಮನೊಡರ್ಚಿ ರಾಜ್ಯಮಂ ಅನ್ಯಾಯದಿಂ ಕ್ಷೋಭಿಸೆ ಮಂತ್ರಿನಿಯೋಗಿಗಳ್ ಬಂದು ಶ್ರೇಣಿಕಂಗರಿಸಿ ಸಹಸ್ರ ಭಟರನೊಳಗುಮಾಡಿಕೊಂಡೆತ್ತಿ ಬಪ್ಪುದುಂ ಚಳಾತಿಪುತ್ರಂ ಕೇಳ್ದೊಡೆ ಪೋಗೆ ಒಂದು ದುರ್ಗಮನಡರಿಪ್ಪುದುಂ ರಾಜ್ಯಗೃಹದೊಳೆ ಶ್ರೇಣಿಕಂಗೆ ಪಟ್ಟಂಗಟ್ಟಿ ನಂದಶ್ರೀಯಂ ಮಗನಭಯಕುಮಾರನುಮನ್ ವೇಳಾತಟಪುರದೊಳೆ ಬಿಟ್ಟು ತಾನುಂ ರಾಜಗೃಹದೊಳ್ ಸುಖಮಿರ್ದ ನಂದಿಗ್ರಾಮದ ಬ್ರಾಹ್ಮಣರ್ ಪಿಂದೆ ತನ್ನ ನಿರಾಕರಿಸುದಂ ನೆನೆದಾ ಗ್ರಾಮಮಂ ಕೆಡಿಸಲ್ ಬೆಸಸೆ ಪ್ರಧಾನನೆಂದರ್ ತಪ್ಪಿಲ್ಲದಾಜ್ಞೆಯಂ ಮಾಳ್ಪದು ಕ್ಷತ್ರಿಯಧರ್ಮಮಲ್ಲದರಿನೇನಾದೊಡಮಾಜ್ಞೆಗೊಟ್ಟು ಅದಂ ಮೀರಿದೊಡಾಜ್ಞೆಯಂ ಮಾಳ್ಪುದೆನೆ ತಪ್ಪಂ ಪೊರಿಸಲೊಂದೆಳಗನಂ ಕಳಿಪ ಅದಕ್ಕಂ ಗ್ರಾಸಮನಿಕ್ಕೆ ವರುಷಂಬರಂ ಇದ್ದ ಪ್ರಮಾಣದೊಳೆ ಇರದೆ ಬಡವಾದೊಡಂ ದೊಡ್ಡಿತ್ತಾದೊಡಂ ನಿಮ್ಮ ಗ್ರಾಮಮಂ ಕೆಡಿಸಿ ನಿಮಗಾಜ್ಞೆಯಂ ಮಾಳ್ಪೆನೆಂದು ಕಾಪಿಟ್ಟು ಕಳುಹಿಸಲಾ ವೇಳೆಯೊಳಭಯಕುಮಾರಂ ಬಂದಿರಲಾ ಬ್ರಾಹ್ನಣರೆಲ್ಲಂ ಚಿಂತಿಸಿ ಅಭಯಕುಮಾರಂಗರಿಸಿ ದೈನ್ಯಂಬಟ್ಟು ಬೇಡಿಕೊಳಲಂಜಬೇಡೆಂದೆರಡು ಪುಲಿಯಂ ತರಿಸಿಅವರ ನಡುವೆ ಎಳಗನಂ ಕಟ್ಟಿಸಿ ಬಡವಾದೊಡೆ ಪುಗಳಂ ದೂರದೊಳ್ ಕಟ್ಟುವುದು ದೊಡ್ಡಿತ್ತಾದೊಡೆಸಮೀಪದೊಳ್ ಕಟ್ಟುವುದೆಂದು ಪೇಳ್ದೊಡಂತೆ ಮಾಡಿ ಕೆಲವು ದಿವಸಕ್ಕೆ ಎಳಗನಂ ಕೊಂಡುಪೋಗಿ ಶ್ರೇಣಿಕಂಗೆ ತೋರಿಬಂದು ನಿನ್ನ ಪ್ರಸಾದಿಮ ಬದುಕಿದೆವೆಂದುಮಿನ್ನು ಅರಸಿಂಗೆಮ್ಮ ಮೇಲಣ ಕ್ರೋಧಂ ಪೋಪನ್ನೆಗಂ ನೀವೆಮ್ಮೊಳಿಪ್ಪುದೆಂದತ್ಯಾದರದಿಂದಭಯಕುಮಾರನಂ ಬ್ರಾಹ್ಮಣರೆಲ್ಲಂ ನಂದಿಗ್ರಾಮದೊಳಿರಿಕೊಂಡಿಪ್ಪುದುಂ ಮತ್ತೊಂದು ದಿನಂಕಪ್ಪುರದ ಬವಿಯಂ ಕಳುಹಿಸುವುದೆಂದು ಲೇಖನಮನಟ್ಟಿದೊಡಭಯಕುಮಾರೋಪದೇಶದಿಂದ ರಸನ ಸಮೀಪದವರ್ಗೆಲ್ಲಂ ಲಂಚಂಗೊಟ್ಟು ಶ್ರೇಣಿಕನ ನಿದ್ರಾವಸರದೊಳ್ ಪ್ರಧಾನರ್ ಬ್ರಾಹ್ಮಣರಂ ಬರಿಸಿಬಾವಿ ಬಂದಿದೆಯೆಂದು ಎಬ್ಬಿಸೆ ತಾನು ಬಾವಿಯಂ ತರವೇಳಿರ್ದುದರಿಂ ನಿದ್ರೆಗಣ್ಣಿನೊಳಿರ್ದಲ್ಲಿಯೆ ಇರಲಿಯೆಂಬುದುಂ ಇರಲಿಯೆಂದಪ್ಪಣೆಯಾದುದರಿಂ ಬ್ರಾಹ್ಮಣರ್ ಬಾವಿಯು ಬಂದಿಪ್ಪುದಮೆಂದೊಡದ್ದಲ್ಲಿಯೆ ಇರಲಿಯೆಂದಪ್ಪಣೆಯಾದುದರಿಂ ಬ್ರಾಹ್ಮಣರ್ ಅಗ್ರಹಾರಕ್ಕೆ ಪೋದರೆನೆ ವಿಷಣ್ಣಚಿತ್ತನಾಗಿ ಒಂದು ಮದಕರಿಯಂ ನಂದಿಗ್ರಾಮಕ್ಕೊಯ್ದು ಅದರ ತೂಕವೆಷ್ಟು ಮಣವಿಪ್ಪುದದಂ ಬ್ರಾಹ್ಮಣರಿಂದಳೆಯಿಸಿ ತಪ್ಪುದೆಂದು ಕಳುಹಿಸಲತ್ಯಂತ ವ್ಯಾಕುಲರಾಗಿ ಕುಮಾರೋಪದೇಶದಿಂದೊಂದು ಭೈತ್ರದೊಳಾನೆಯನೇರಿಸಿ ನೀರೊಳಿಳಿಸಿ ಚೈತ್ರಂ ಮುಳುಗಿರ್ದ ಪ್ರಮಾಣಂ ತೆಗೆದಾ ಗುಂಡುಗಳಂ ತೂಗಿ ಮಣಗಟ್ಟಲೆಯಿಂ ಆನೆಯ ತೂಕಮಮ ಬರೆದು ಕಳುಹಿಸೆ ಮತ್ತೊಮ್ಮೆ ಒಂದು ಮೊಳದುದ್ದ ತರಿಯ ಕೊರಡಂ ಕೆತ್ತಿಸಿ ಅದರತುದಿಮೊದಲಂ ಪೇಳ್ದುದೆಂದಟ್ಟಲದಂ ನೀರೊಳದ್ದಿ ಆರಿದ ದೆಸೆಯಂ ನೋಡಿ ಮೊದಲಿದು ತುದಿಯೆದೆಂದಟ್ಟೆ ಮತ್ತಂ ಪೆಡಗೆಯೊಳೆಳ್ಳಂ ಕಳುಹಿಸಿ ಎಳ್ಳನಳೆದ ಮಾನದೊಳೆಣ್ಣೆಯನಳೆದುಕೊಡುವುದೆಂಬುದುಂ ಕನ್ನಡಿಯೊಳೆಳ್ಳನಳೆದದರೊಳೆ ಎಣ್ಣೆಯ ನಳೆದು ಕೊಡುವುದುಂ.ಮತ್ತಂ ದ್ವಿಚತುಷ್ಟಾದಿಗಳದಲ್ಲದೆ ನಾರಿಕೇಳಾದಿ ವೃಕ್ಷಂಗಳ ಪಾಲಲ್ಲದೆ ರಾಜಭೋಜ್ಯಯೋಗ್ಯಮಪ್ಪ ಪಾಲಂ ಕಳಿಪುದೆನೆ ಕುಮಾರೋಪದೇಶದಿಂ ಪಾಲೇರುವ ಕಳವೆಯ ತೆನೆಗಳಂ ಪಿಂಡಿ ವಸ್ತ್ರಗಾಲಿತಂ ಮಾಡಿ ಕಳಿಪುವುದಂ ವಿಸ್ಮಯಂಬಟ್ಟು ಒಂದೇ ಕೋಳಿಯಂ ತಂದೆನ್ನ ಮುಂದೆ ಕಾದಿಸುವುದೆಂಬುದುಮೊಂದು ತೊಂಡೇರಿದ ಹುಂಜನಂ ಕೊಂಡುಪೋಗಿ ಶ್ರೇಣಿಕನಮುಂದಿಟ್ಟು ದೊಡ್ಡ ಕನ್ನಡಿಯಂ ತೋರೆ ಪ್ರತಿರೂಪಂ ಕಂಡು ಕೇಸಂಗೆರದರಿ ಕಂಠಮನೆತ್ತಿ ನಿಮಿರ್ದ ಚಂಚುವಿಂದಿರಿದು ಮಲ್ಲನಂತೆ ಕಾದುತ್ತಿಪ್ಪುದಂ ತೋರಿಸಿ ಬರೆ, ಮತ್ತಂ ಮಳಲ ಹಗ್ಗಮಂ ಮಾಡಿ ಕಳುಹಿಸೆರೆಂಬುದುಂಸಣ್ಣ ಮಳಲಂ ನೂಲ ಹಗ್ಗದೊಳ್ ಮೇಣದ ಸರಿಯಿಂ ಪತ್ತಿಸಿಯುಂ ಬರಿಯ ಮಳಲುಕೊಂಡುಪೋಗಿ ದೇವಾ ನಿಮ್ಮ ಭಾಂಡಾರದೊಳಿರ್ದ ವೇಷ್ಟನಮಂ ತೋರಿದೊಡಾ ಪ್ರಮಾಣದಿಂ ಮಾಡಿಕುಡವೆವೆನೆ ಯಷ್ಟಿಯಂತೋರೆಮಾತಿನ ಗೆಲ್ಲಂಗೊಂಡು ಪೋಗೆ.

ಮತ್ತಂ ಪವಿರಯೊಳು ಕೂಷ್ಮಾಂಡಂ ತರವೇಳೆ ಕಾಯಂಬಳ್ಳಿವೆರಸಿ ಪರವಿಯೊಳಿಕ್ಕಿ ಬೆಳೆದಾಗ ಬಳ್ಳಿಯಂ ಕೊಯ್ದುಟ್ಟುವುದುಂ ಶ್ರೇಣಿಕಂ ಕಂಡಿನಿತುಪಾಯಮಂ ಬ್ರಾಹ್ಮಣರಿಗೆ ಪೇಳ್ವರಾರವನ ತಿಳಿಯಲು ಚತುರತೆಯುಳ್ಳ ನಿಯೋಗಿಗಳಂ ಕಳಿಪೆಅವರ್ ಬರ್ಪಿನಮಾ ನಂದಿಗ್ರಾಮದುದ್ಯಾನವನದೊಳ್ ಪಾರ್ವರ ಮಕ್ಕಳ್ ಕೂಡಿ ಜಂಬೂವೃಕ್ಷದ ಮೇಲಭಯಕುಮಾರನಿರೆ ಅಲ್ಲಿಗೆ ಬಂದ ರಾಜಪುರುಷರ್ ನೇರಲಪಣ್ಣಂಬೇಡಿದೊಡಭಯಕುಮಾರಂ ಹಸಿಯ ಪಣ್ಣೋ ಬಿಸಿಯ ಪಣ್ಣೋ ಎನೆ ಪಸಿಯ ಪಣ್ಣಂ ಒಲ್ಲೆವು ಬಿಸಿಯ ಪಣ್ಣನೀವುದೆನೆ ಒಂದು ಪಕ್ಕಫಲಮಂ ಈಶತ್ಕರಪಲ್ಲವದೊಳೊರಿಸಿ ಕಾದ ಮರಳಿನೊಳಿಕ್ಕಿ ಕೊಡಲವರ್ ಮರಳನೂರುವುದುಂ ಮುದಿಮೀಸೆ ಕಪ್ಪಾಗುವುದೆಂದಣಕಮನಾಡಲವರ್ ಲಜ್ಜಿಸಿ ನಂದಿಗ್ರಾಮಮಂ ಪುಗದೆ ರಾಜಗೃಹಕ್ಕೆಬರೆ.

ಮತ್ತೊಂದು ದಿವಸಂ ದ್ವಿಪಾದಚತುಷ್ಟಾದಿಗಳುಂ ನರಮೃಗಾದಿಗಳುಮಲ್ಲದ ವಾಹನದೊಳು ನಿಮ್ಮ ಮಕ್ಕಳಂ ಕಳುಹಿಸುವುದೆಂದು ಬ್ರಾಹ್ಮಣರಲ್ಲಿಗೆ ಕಳುಹಿಸೆಅಭಯಕುಮಾರೀಪದೇಶದಿಂ ಭಂಡಿಯಾ ತಳದಚ್ಚುಗಳೊಳ್ ನೆಲಹಂ ಕಟ್ಟಿಸಿ ಅವರೊಳ್ ತಾನುಂ ಬ್ರಾಹ್ಮಣರ ಮಕ್ಕಳ್ ಸಹ ಏರಿಕೊಂಡು ಸಂಜೆಯೊಳ್ ಬಂದು ತಂದೆಗೆ ಏನಿಮಿತನಾಗಿ ಬ್ರಾಹ್ಮಣರಿಗಭಯದಾನಮಂ ಕೊಡಿಸಿ ಕಳಿಪುವುದುಂ ಶ್ರೇಣಿಕಭಯಕುಮಾರಂಗೆ ಯುವರಾಹಪದವಿಯುಂ ಕೊಟ್ಟು ಸುಖದಿನಿರ್ದ ನಂದಿಗ್ರಾಮದ ಮಠಪತಿಯಪ್ಪ ಭಾಗವತ ಜಠರಾಗ್ನಿಯಂ ಬರಿಸಿ ರಾಜಗುರುವಾಗೆ ವೈಷ್ಣವಧರ‍್ಮಮಂ ಪ್ರಕಾಶಿಸಿ ಮತ್ಯ್ಸ ಕೂರ‍್ಮವರಾಹ ನಾರಹಂಸಿ ವಾಮನ ಪರಶುರಾಮ ರಾಮಕೃಷ್ಣ ಬೌದ್ಧ ಕಲ್ಕಿ ಎಂಬೀ ದಶಾವತಾರ ಪ್ರತಿಮೆಗಳಂ ರಚಿಸಿ, ಪೂಜಿಸುತ್ತುಂ ಭಕ್ತರಂ ಪರಿಪಾಲಿಸುತ್ತಿರ್ದಂ

ಆ ಕಾಲದೊಳೆ ಬ್ರಾಹ್ಮೀ ಮೊದಲಾದಸಪ್ರಮಾತೃಕೆಯರಿಗೆ ಗುಡಿಗಳಿಂ ನಿರ್ಮಿಸಿ ಪೂಜಿಸಿ ಜನಗಳ್ ನಿರೋಗಿಗಳಾದರ್,ಮತ್ತಂ ಕೆಲಕೆಲವೆಡೆಯೊಳ್ ದುರ್ಗಾದೇವಿಯರೆಂದು ಪೂಜಿಸಿ ವರಮಂ ಪಡೆದರ್.ಮತ್ತಮಾ ರಾಜಗೃಹದ ವಸುಮಿತ್ರನೆಂಬ ಶೆಟ್ಟಿಗೆ ವಸುಮಿತ್ರೆ ಸುಮಿತ್ರೆಯೆಂಬೀರ್ವರ್ ಪೆಂಡಿರಾಗಲಾ ಕಿರಯ ಸುಮಿತ್ರೆಗೆ ಒಂದು ಗಂಡುಮಗನಪ್ಪದುಮಿರ್ವರುಮಾ ಮಗುವನಾದರದಿಂ ಸಾಕಲಾ ವಸುಮಿತ್ರಂ ಸಾಯೆ ಮಗನಂ ತನ್ನ ಮಗಂ ಎನ್ನ ಮಗನೆಂದು ವಾದಿಸಿ ಅತ್ಯಂತ ಕಲಹಮಾಗಿಬರೆ ಅದಂ ತೀರಲಶಕ್ಯಮಾಗೆ ರಾಜಸಭೆಯೊಳ್ ಅಭಯಕುಮಾಂ ಈ ಮಗನಂ ಪಂಚಿಕೊಟ್ಟಪೆನೆಂದಾ ಮಗುವಿನ ಮಸ್ತಕದೊಳ್ ಜಾಜ್ಜಲ್ಯಮಾನಮಪ್ಪ ಶಸ್ತ್ರಮನಿರಿಸೆ ಪೆತ್ತ ತಾಯಿ ಕಂಡು ಕಣ್ಣಂ ಮುಚ್ಚಿ ಆಕೆಯ ದಯಂಗೆಯ್ವುದೆಂದಟ್ಟಗೆಡಲಯವಳ್ ಪೆತ್ತವಳೆಂದು ಕೊಟ್ಟು ಪರಿಯವಳಂ ಬಗ್ಗಿಸಿ ಪೊರಮಡಿಸಿದರ್.

ಮತ್ತಮಯೋಧ್ಯಾಪುರದೊಕ್ಕಲಿಗಂ ಭದ್ರನೆಂಬಾರನ ಪೆಂಡತಿ ಭದ್ರಿಯೆಂಬತಿ ರೂಪಯುತೆಯಂ ರಾಕ್ಷಸಂ ಕಂಡವಳ ಗಂಡನ ರೂಪಚ್ಚೊತ್ತಿದಂತೆ ಕೈಕೊಂಡವಳ ಮನೆಯೊಳಿರೆ ಗಂಡಂ ಬಂದೊಡಾಕೆ ಸಂದೇಹಂಬಡಲವರೀರ್ವರುಂಪೋರಾಟಗೊಳುತ್ತುಂ ಬರಲ್ ಅಭಯಕುಮಾರನಾಶ್ಚರ್ಯಂಬಟ್ಟು ಈರ್ವರುಮಂ ದೇವಾಲಯಮಂ ಪುಗಿಸಿ ಕದಮಂ ಪೊಚ್ಚಿ ಈ ಕೂದಗಂಡಿಯೊಳ್ ಅವಂ ಬಪ್ಪನವಂ ಗಂಡನೆಂಬುದುಂ ರಾಕ್ಷಸಂ ಪೊರಮಡಲಾಗಲವನಂ ನಿಗ್ರಹಿಸಿ ಕಳೆದಾ ಮನೆಯೊಡೆಯನಂ ಮನೆಗೆ ಕಳುಹಿಸಿದಂ.

ಶ್ರೇಣಿಕನಮಂತ್ರಿಳೊರ್ಳೋರ್ವಂ ಸತ್ಯಶರ್ಮನೆಂಬಂ ತಾನುಂ ಪುಸಿಯಂ ನುಡಿದೊಡಾಗಲೆ ನಾಲಗೆಯ ಕತ್ತರಿಸುವೆನೆಂದು ಜನ್ನವಾರದೊಳ್ ಕತ್ತರಿಯಂ ಕಟ್ಟಿಕೊಂಡು ಇರುತ್ತಿರೆ ಸಮುದ್ರದತ್ತನೆಂಬ ಪರದಂ ಪರದುಪೋಗಲ್ ತನ್ನಲ್ಲಿರ್ದ ರತ್ನಂಗಳಂ ಸತ್ಯಶರ್ಮಂಗೆ ಕೊಟ್ಟು ನಾಂ ಬಂದಲ್ಲಿ ಎನಗೀವುದೆಂದು ತಾನು ಪೆರದುಗೆಯ್ದು ಬಂದೆನ್ನ ರತ್ನಮನೀವುದೆನೆ ಆತನಂ ಮರುಳತಮಾಡಿ ಕಳೆಯೆ ಅರಸಿಂಗೆ ಮೊರೆಯಿಡಲವನಂ ಕೇಳಿ ಸತ್ಯವೆಂತನೆಂಬ ಪ್ರಸಿದ್ಧಿಯಿಂದೀತಂ ಮರುಳನೆಂದು ಕರೆದು ಲೆತ್ತಮ ನಾಡುವಮೆಂದೊಂದೆರಡಾಟಮನಾಡಿ ಬಳಿಕ ವಿನೋದದಿಂ ತನ್ಮಾಭರಣಮಂ ಜೂಜೆಂದು ಸೋಲ್ತು ಕೊಟ್ಟಾ ಬಳಿಕ ಈ ಆಟದೊಳ್ ನೀಂ ಸೋಲೆ ನಿನ್ನ ಮುದ್ರಿಕೆಯಂ ಯಜ್ಞೋಪವೀತಮಂ ಕೊಡುವುದೆಂದು ಸೋಲಿಸಿ ಅದಂ ಕಳೆದುಕೊಂಡಾರುಮುರಿಯದಂತೆ ಓರ್ವ ಸಖಿಯೊಳ್ ಕೊಟ್ಟು ಸತ್ಯಶರ‍್ಮನಗೃಹಕ್ಕೆ ಕಳುಪಿ ಆತನಸತಿ ಸತ್ಯವತಿಗೆ ಕೊಟ್ಟು ವೈಶ್ಯನಿತ್ತ ರತ್ನದ ಕರಂಡಕಮಂ ತರವೇಳ್ದರೆಂದು ಬೇಡಿಸಲಾಕೆ ತನ್ಮಯ ಪತಿಯ ಚಿಹ್ನಮಂ ಕಂಡು ಕರಂಡಕಮಂ ತರವೇಳ್ದರೆಂದು ಬೇಡಿಸಲಾಕೆ ತನ್ನಯ ಪತಿಯ ಚಿಹ್ನಮಂ ಕಂಡು ಕರಂಡಕಮಂ ಕುಡೆ ತಂದಭಯಕುಮಾರಂಗೀಯಲವರೊಳ್ ಕೆಲವು ರತ್ನಂಗಳಂ ಬೆರಸಿ ಶೆಟ್ಟಿಯ ಮುಂದಿಟ್ಟು ತೋರಲಾತಂ ತನ್ನ ರತ್ನಂಗಳಾನಾಯ್ದು ಕೊಂಡನೆಂದು ಕಂಡು ಮಂತ್ರಿಯಂ ಪರಿಭವಿಸಿ ಕಳೆದಂ.

ಮತ್ತಮಾ ಪುರದ ಧನವತ್ತ ವಸುಮಿತ್ರರೆಂಬೀರ್ವರ್ ವೈಶ್ಯರೊಳ್ ಧನಮತ್ತಂ ಪ್ರಯತ್ನಮೇ ದೊಡ್ಡದೆಂದು ವಸುಮಿತ್ರಂ ಪುಣ್ಯವೇ ದೊಡ್ಡದೆಂದನವರ್ಗದುವೆ ಸಂವಾದಮಾಗಲ್ ಪನ್ನೆರಡಬ್ದಂಬರಂ ಧರ್ಮಾಧಿಕರಣ್ ನಿಶ್ಚಿಯಿಸಲಾರದಿರಲಾ ಈರ್ವರುಂ ಅಭಯಕುಮಾರನಲ್ಲಿಗೆಬಂದು ಬೆಸಗೊಳ್ವುದುಂ ಮೂರುದಿನವಸಂಬರಂ ವಿಚಾರಿಸಿದೊಡಂ ನಿಜಾಭಿಪ್ರೇತರ್ಥಾಮಂ ನುಡಿಯೆ ಬಂದತ್ಯಂಧಕಾರಮಪ್ಪ ಮಹಾ ಗೃಹಂಗೊಳೊಳ್ ಸಕಲಸ್ಕೋಪರಮಂ ತುಂಬಿಸಿ ನಾಲ್ಕಾರು ಬಗೆಯ ಬುತ್ತಿಯಂ ಕಟ್ಟಿ ಒಂದರೊಳನರ್ಘ್ಯ ರತ್ನಂಗಳನಿಕ್ಕಿ ಅಮೃತಾನ್ನವಂ ಕಟ್ಟಿರಿಸಿ ಪರೀಕ್ಷಿಸಲೆಂದಾ ಈರ್ವರಮ ಕೋಪದಿಂದಾ ಮನೆಯಂ ಕೂಡಿ ಬಾಗಿಲಂ ಮುದ್ರಿಸಿದೊಡಾ ವಸುಮಿತ್ರಂತನಗೆ ಪುಣ್ಯಮೆ ಶರಣೆಂದೊಂದು ಪ್ರದೇಶಮಂ ಕೈಯೆಂದಳವಿ ನೋಡಿ ಆ ಪ್ರದೇಶದೊಳ್ ಪಟ್ಟಿರ್ದಂ. ಧನದತ್ತಂಪ್ರಯತ್ನಮೆ ಕಾರ್ಯಮೆಂದಲ್ಲಲ್ಲಿ ಕೈಯಿಂದೆಳೆದು ನೋಡುತ್ತಂ ಸಕಲ ವಸ್ತುಗಳಂ ಸ್ಪರ್ಶನ ಮಾತ್ರದಿಂದತರಿದು ಪೋಗುತ್ತಿರಲಲ್ಲಿ ಚಕ್ಕಮುಕ್ಕಿಯಿರ್ದೊಡದರಿಂ ಬೆಂಕಿಯಂ ಮಾಡಿ ದೀಪಮಂ ಪೊತ್ತಿಸಿ ನೋಡಿ ಸಕಲ ಸಾಮಾಗ್ರಿಯುಮಿರ್ದ ಬುತ್ತಿಯನುಂಬೆನಲ್ಲೆಂದು ಬೇಕಾದ ಪದಾರ್ಥಂಗಳಂ ಪಾಕಶುದ್ಧಿಯಿಂ ಜಿಹ್ವೆಗೆ ಹಿತಮಪ್ಪ ಭೋಜನಮಂ ನೋಡಿ ಪರಡಿಸಿರ್ದು ಕಡೆಯೊಳ್ ವಸಮಿತ್ರವಂ ಮೂದಲಿಸಿ ಒಂದು ಬುತ್ತಿಯನಿಟ್ಟು ಬೆಳಕಂ ಮಾಡಿ ಉದಕನೀಯಲೆನ್ನ ಪುಣ್ಯಮೆಂದಾ ಬುತ್ತಿಯಂ ಬಿಚ್ಚಿ ಅನ್ನಮನುಂಡಲ್ಲಿರ್ದ ರತ್ನಂಗಳಂ ಕಟ್ಟಿಕೊಂಡರೆ ಮಾರನೆ ದಿನಸಕ್ಕೀರ್ವರಂ ಸಭೆಗೆ ಕರೆದುಕೇಳ್ವುದುಂಧನದತ್ತಂ ತನ್ನ ಪ್ರಯತ್ನದ ಕಾರ್ಯಮೆಲ್ಲಮಂ ಪೇಳೆ ವಸುಮಿತ್ರಂ ತನ್ನ ಪುಣ್ಯಪ್ರಭಾವಮಂ ಪೇಳ್ದು ರತ್ನಂಗಳಂ ಮುಂದಿಕ್ಕುವುದುಂ ಎಲ್ಲರುಂ ಪುಣ್ಯಮನುತ್ಕೃಷ್ಟಮೆಂದುಂ ಪುಣ್ಯಾನುಸಾರಂ ಪ್ರಯತ್ನಮೆಂದು ರ್ಕಾನುರೂಪಂ ಕಾರಣಮೆಂಬುದೆಲ್ಲಾ ಕಾರ್ಯಸಿದ್ಧಿಗೆ ಕಾರಣಂಗಳಪ್ಪುವೆಂದವಂಗೆ ರತ್ನಂಗಳಂ ಕೊಟ್ಟು ಇರ್ವರ ಸಂವಾದಮಂ ಬಿಡಿಸಿ ಕಳುಹಿಸಿದಂ. ಇಂತನೇಕ ವ್ಯವಹಾರಗಳಂ ತೀರಿಸುತ್ತಂಶ್ರೇಣಿಕ ಮಹಾಮಂಡಳೇಶ್ವರಂ ಸುಖಸಂಕಥಾವಿನೋದದಿಂ ರಾಜ್ಯಮನಾಳುತ್ತಿರಲ್.

ಅತ್ತಲ್ ಕುಂಡಿನಾಪುರದ ನಾಥವಂಶದ ಕಾಶ್ಯಪಗೋತ್ರದ ಸಿದ್ಧಾರ್ಥಮಹಾರಾಜಂಗಂ ವೈತಾಳಿಪುರದ ಚೀಟಕಮಹಾರಾಜನ ಜ್ಯೇಷ್ಠಪುತ್ರಿ ಪ್ರಿಯಕಾರಿಣಿಮಹಾದೇವಿಗಂ ವಿವಾಹಮಾಗೆ ಪೂರ್ವಕೃತ ಪುಣ್ಯದಿಂ ನಿರ್ಮಲದೇಹಿಗಳಾಗೆ ನೀಹಾರಾದಿಗಳಿಲ್ಲದೆ ಶುಚಿದೇವನಾಂತಿರ್ಪಿನಂ ಆ ವಿಶ್ವೇಶ್ವರಿಗೆ ಅಷ್ಟಮಹಾದೇವಿಯರೆಯ್ದಿ ಬಂದಾ ಜಗತ್ಪವಿತ್ರೀಗರ್ಭದೊಳ್ ತ್ರಿಲೋಕಸ್ವಾಮಿ ಪಪುಟ್ಟವನೆಂದು ಗರ್ಭಶೋಧನೆಯಂ ಮಾಡಲರುದಿಂಗಳ್ ಇಂದ್ರನಾಜ್ಞೆಯಿಂ ಕುಬೇರಂ ಸಾರ್ದು ತ್ರಿಕೋಟಿ ರತ್ನವೃಷ್ಟಿ ಮೊದಲಾದ ಪಂಚಾಶ್ಚರ್ಯಂಗಳಂ ದಿನಂಪ್ರತಿ ಮಾಡುತ್ತುಮಿರೆ ಗರ್ಭಮಂ ಶೋಧಿಸಲ್ ಪದಿನಾರು ಶುಭಸ್ವಪ್ನಾನಂತರಂ ಶ್ವೇತವಾರಣಂ ನಿಜವದನಮಂ ಪೊಗುವುದಂ ಕಂಡೆಚ್ಚರುವನ್ನೆಗಂ ಪೂರ್ವಭವನದೊಳಾನದನೆಂಬರಸಂ ಸರ್ವಸಂಗ ಪರಿತ್ಯಾಗಂಗೆಯ್ದು ದ್ವಾದಶವಿಧ ತಪದೊಳ್ನೆಗಳ್ದು ಏಕಾದಶಾಂಗಧಾರಿ ದ್ವಾದಶಾನುಪ್ರೇಕ್ಷೆಯಂ ಷೋಡಶಮಹಾಭಾವನೆಗಳಂ ಭಾವಿಸಿ ತೀರ್ಥಂಕರ ಪುಣ್ಯಮಂ ಕಟ್ಟಿ ಆರಾಧನಾವಿಧಿಯಿಂ ದೇಹಮನುಳಿದು ಅಚ್ಯುತಕಲ್ಪದ ಪುಷ್ಟೋತ್ತರ ವಿಮಾನದೊಳ್ ಮಹಾರ್ಧಿಕದೇವನಾಗಿಪ್ಪತ್ತೆತಡು ಸಾಗರೋಪಮ ಕಾಲಂ ದಿವ್ಯಸುಖಮನನುಭವಿಸಿ ಬಂದಾ ದೇವಿಯ ಗರ್ಭಕ್ಕಂ ವಿಶ್ವಾವಸು ಸಂತ್ಸರದಾಷಾಢ ಶುದ್ಧ ಷಷ್ಠಿ ಬೆಳಗಿನೊಳ ಹಸ್ತೋತ್ತರಾಮಧ್ಯದೊಳವತರಿಸೆ ಕಣ್ಣಂ ತೆರೆದು ದೇವಿರೆಸಗುವ ಉಪಚಾರದಿಂ ವಿಕಾರಂಗಳೊಂದಾದರುಂಆ ಲೋಕಮಾತೆಯ ದೇಹದೊಳ್ ಕಾಣಿಸದಿರೆ ನಮವಾಸಂ ಗರ್ಭದೊಳ್ ಬೆಳೆದು ಪರಾಭವಸಂವತ್ಸರದ ಚೈತ್ರ ಶುದ್ಧ ತ್ರಯೋದಶಿ ಫಲ್ಗುಣಿ ತಾರಾಂತ್ಯದೊಳ್ ಪಂಚಗ್ರಹೋಚ್ಛಮಾದಾಗಳ್ ತ್ರಿಜ್ಞಾನಧರಂ ಪುಟ್ಟುವ ಕ್ಷಣದೊಳ್ ಕಲ್ಪಲೋಕದೊಳ್ ಘಂಟಾನಾದಮುಂ ಭವನ ಲೋಕದೊಳ್ ಶಂಖನಾದಮುಂ ಜ್ಯೋತಿರ್ವಿಮಾನಂಗಳೊಳ್ ಸಿಂಹನಾದಮುಂ ವ್ಯಂತರ ಲೋಕದೊಳ್ ಭೇರಿಧ್ವನಿಯುಮಾಗೆ ದೇವೇಂದ್ರಂಗಾಸನಕಮಪಮಾಗೆ ಚತುರ್ವಿಕಾಯಾಮರರ್ ತಂತಮ್ಮಾಯುಧ ವಾಹನ ವಧೂಚಿಹ್ನಂವೆರಿಸಿ ಬಂದಾ ತ್ರಿಲೋಕೇಶ್ವರನಂ ಶಚಿಮಹಾದೇವಿಯಿಂ ತರಿಸಿ ತನ್ನೈರಾವಣವನೇರಿ ನಿಜಾಂಕದೊಳಿರಿಸಿ ಈಶಾನೇಂದ್ರಂ ಶ್ವೇತಚ್ಛತ್ರಮಂ ಪಿಡಿಯೆ ಜಂಬೂದ್ವೀಪಮಧ್ಯದೊಳಿಪ್ಪ ಲಕ್ಷಯೋಜನಮುಳ್ಳ ಸುರ್ದನಮೆಂಬ ಮಹಾಮೇರುಗಿರಿಯ ಶಿಖರದೊಳೊಪ್ಪುವ ಪಾಂಡುಕವನದೀಶಾನ ದಿಕ್ಕಿನೊಳೊಪ್ಪುವ ಪಾಂಡುಕಶಿಲೆಯ ಸಿಂಹಪೀಠದೊಳಿರಿಸಿ ವಿಧಿಪೂರ್ವಕಮಸಂಖ್ಯಾತ ದೇವತೆಗಳ್ ಐದನೆಯ ಕ್ಷೀರಸಮುದ್ರಕ್ಯಂ ಮೇರುವಿಂಗಂ ಸಾಲಾಗಿನಿಂದು ನಾಲ್ಕು ಯೋಜನದಗಲಮುಮೆಂಟು ಯೋಜನಾದುದ್ಧಮುಮುಳ್ಳ ಸುವರ್ಣರತ್ನಘಟಂಗಳೊಳ್ ಕ್ಷೀರಾಬ್ಧಿಯೊಳ್ ತೀವಿ ತಂದೋಂಕಾರಪೂರ್ವಕಮೋರೋರ್ವರ್ ಸಾಸಿರ ಸಾಸಿರ ಬಾಹುಗಳಿಂ ಮಜ್ಜನಂಬುಗಿಸುವಲ್ಲಿಂದ್ರಂ ಸ್ವಾಮಿಗುಬ್ಬಸಮುಪ್ಪುದೆಂಬ ಶಂಕೆಯಾಗಯದನರಿದು ನಾಸಿಕದೊಳ್ ತೀವಿದ ಪಾಲಂ ನಿಸ್ವಾಸಿಸೆ ಐದುಕೋಟಿಯುಂ ಪನ್ನೊಂದುಲಕ್ಷ ಯೋಜನ ಪರಿಯಂತರಮಿರ್ದ ದಿವೌಕಸರೆಲ್ಲಂ ತರಗಲೆಯಂತೆ ತೂರಾಡುವುದುಮಪ್ರಮಿತ ವೀರ್ಯಮಂ ತಿಳಿದು ಜನ್ಮಾಭಿಷೇಕನಂತರಂ ದಿವ್ಯಗಂಧಮಾಲ್ಯ ವಸ್ತ್ರಾಭರಣಗಳಿಂ ಪೂಜಿಸಿ ನಾಗೇಂದ್ರಂ ಸಹಸ್ರಜಿಹ್ವೆಯಿಂ ನುತಿಸುತ್ತಂ ಪಟ್ಟಣದೊಳಿರಿಸಿ ದೇವರ್ಕಳಂ ಭೋಗೋಪಭೋಗಮಂ ಕೊಡುತುಂ ಬೆಸಕೆಯ್ಯಲಿರಿಸಿ ಇಂದ್ರಂ ತನ್ನ ಲೋಕಮನೆಯ್ದೆ ತ್ರಿಜ್ಞಾನಧರಂ ಮೂವತ್ತುವರುಷಂ ಸಲೆಸಂಸಾರ ಶರೀರ ಭೋಗದೊಳ್ ಹೇಯಮಾಗೆ ನಿರ್ವೇಗದಿಂದಿರ್ಪುದಂ ಲವಕಾಂತಿಕದೇವರ್ ಬಂದು ಪೂಜಿಸಿ ಪ್ರತಿಬೋಧಿಸೆ ದೇವೇಂದ್ರಂ ಬಂದು ಪರಿನಿಷ್ಕ್ರಮಣಕಲ್ಯಾಣಂ ಮಾಡಿ ಚಂದ್ರಪ್ರಭಮೆಂಬ ಸಿವಿಗೆಯನೇರಿಸಿ ಮನುಷ್ಯಪರಿಗಳುಂ ನಾಗೇಂದ್ರರುಂ ವ್ಯಂತರ ಜ್ಯೋತಿಸ್ಯರುಂ ಪ್ರತ್ಯೇಕಮೇಳೇಳಡಿ ಪೊತ್ತುನಡೆಯೆ ಕಲ್ಪಾಮರರ್ ದೇವತೂರ್ಯತ್ರಯದಿಂ ಕೊಂಡುಪೋಗಿ ವನದೊಳಿಳಿಪೆ ನಿರ್ಮಲ ಶಿಲಾತಲದೊಳ್ ಪೂರ್ವಾಭಿಮುಖವಾಗಿ ಪಲ್ಯಂಕಾಸನದಿಂ ಸಿದ್ಧನಮಸ್ಕಾರದಿಂ ಪಂಚಮುಷ್ಟಿಯಿಂ ಕರುಳಂಕಿತ್ತು ದಿವ್ಯ ವಸ್ತ್ರಾಭರಣಮಂ ತೊಲಗಿಸಲಕ್ಷಣದೊಳ್ ಮನಹ ಪರ್ಯಾಯಮೆಂಬ ಚತುರ್ಥಜ್ಞಾನಂ ಪುಟ್ಟಿ ಧ್ಯಾನಮೌನಾನುಷ್ಠಾನ ತಪಸ್ಸಿಂ ಛದ್ಮಸ್ಥಕಾಲಂ ದ್ವಾದಶ ವರುಷಂ ಋಜುಕುಲಾತೀರ ರಸಾಲದ್ರುಮದ ಶಿಲಾಪಟ್ಟದೊಳ್ ನಿಂದು ಧ್ಯಾನಾನಲನಿಂ ಕರ್ಮೇಂಧನಂಗಳಂ ನಿರ್ದಗ್ಧಂಗಳಾಗೆ ಕ್ಷಪಕಶ್ರೇಣ್ಯಾರೋಹಣವಾಗಿ ನಾಲ್ಕು ಘಾತಿಕರ್ಮಂ ಪಿಂಗೆ ಪದಿನೆಂಟು ದೋಷಮಂ ಕೆಸಿದನವಾವುವೆಂದರೆ ಕ್ಷುಧೆ ತೃಷೆ ಜರೆ ರುಜೆ ಜನನ ಮರಣ ಭಯ ಮದ ರಾಗ ದ್ವೇಷ ಚಿಂತೆ ರತಿ ನಿದ್ರೆ ವಿಸ್ಮಯಂ ವಿಷಾದಂ ಸ್ವೇದಂ ಖೇದ ಮೋಹ ಎಂಬಿದು ಕಿಡುವುದುಮತೀಂದ್ರಿಯಮಪಪ್ನಂತಜ್ಞಾನ ದರ್ಶನ ವೀರ್ಯ ಸುಖಂಗಳ್ ಪುಟ್ಟಿ ಶರೀರದನಂತ ಪರಮಾಣು ಪುದ್ಗಲಂಗಮಾಗಲಾತ್ನ ಶಕ್ತಿಯೆ ಪುರುಷಪ್ರಮಾಣಮಾಗಿ ಜಾಜ್ವಲ್ಯಮಾಗೆ ದೇಹಭಾರಮುಳಿವುದುಂ ನೀರೊಳಿರ್ದ ಕೆಸರಂ ಕಳೆದಾಲಾಬು ಮೇಲಕ್ಕೆ ನೆಗೆವಂತೆ ಎರಡೂವರೆ ಕ್ರೋಶವೆಂದೊಡೈದು ಸಾವಿರ ಮಾರು ಪೋಗಿ ಆಕಾಶದೊಳಾ ಕೇವಲಜ್ಞಾನಿ ನಿಲ್ವುದುಂ ಸುರೇಂದ್ರನಾಸನಕಂಪಮಾಗಿ ಸುರರೊಡನೆ ಬಂದು ಪ್ರದಕ್ಷಿಣ ನಮಸ್ಕಾರಮಂ ಮಾಡಿ ರಾಜರಾಜಂಗೆ ನಿಯಮಿಸೆ ಸುವರ್ಣ ರೂಪ್ಯ ನವರತ್ಮಪ್ರಭಾಕರಂಗಳಿಂ ಸಮರಸವರಣಂ ನಿರ್ಮಿಸಿದನದಕ್ಕೆ ಹಸ್ತಪ್ರಮಾಣದ ಸೋಪಾನಂಗಳ್ ಚತುರ್ದಿಕ್ಕಿನೊಳ್ ಭೂಮಿಯಿಂ ತೊಟ್ಟು ಪ್ರತ್ಯೇಕಮಿಪ್ಪತ್ತುಸಾಸಿರಂಗಳಾಗೆ ಮೇಲೊಂಬತ್ತು ಸುತ್ತಿನಾ ಕೋಂಟೆಯೊಳ್ ಮೊದಲು ಚತುರ್ಥಿಕ್ಕಿನೊಳ್ ಸರೋವರ ಚತುಷ್ಟನಯಂಗಳಂ ಮಾಸ್ತಂಭದೊಳೀರ್ಸಾಲ ಚೈತ್ಯಗೇಹಮುಂಮತ್ತೆ ಜಲಖಾತಿಕೆಯುಂ ಪುಷ್ಟವಾಟಿಯುಂ ಪ್ರಾಕಾರನಾಟ್ಯ ಶಾಲಾ ಉಪವನ ವೇದಿಕಾಧ್ವಜ ಭೂಮಿ ವೃಕ್ಷ ಸ್ತೂಪ ಪರ್ವ್ಯಂ ಮೊದಲಾದುವುಮಿರ್ಪ ಒಂಬತ್ತು ಸುತ್ತಿನ ಚತುರ್ದ್ವಾರ ಗೋಪುರಯುಕ್ತವಾಗಿರ್ಪುದದರಮಧ್ಯದೊಳ್ ಗಂಧಕುಟಿಯನಡುವೆ ಪೀಠತ್ರಯ ಮೇಗೇಂದ್ರಾಸನದ ಮೇಲೆ ಛತ್ರತ್ರಯಂಗಳಂ ಪಿಡಿದಿರ್ಪುದುಂ ಮೇಲೆ ನಮೇರು ಮಂದಾರಪುಷ್ಪವೃಷ್ಟಿಯಂ ಕರೆಯುತ್ತಿರ್ಪುದುಂ ಯಕ್ಷರ ವಿಭೂಯಮಾನ ಚತುಃಷಷ್ಟಿಯ ಚಾಮರಂಗಳನಿಕ್ಕುವುದುಂ ಪರಮಾತ್ಮ ಕಾಂತಿಪ್ರಸರ ಪರಿವೇಷ ಭಾಮಂಡಲಮುಂ ಪರಮಾಪ್ತಸಮಿಪವರ್ತಿತಾಂತ್ಯತಿಯಮಾದಶೋಕವೃಕ್ಷಮುಂ ಶಂಖ ಭೇರೀಘಂಟಾ ಕಹಳಾದಿ ದೇವರ್ಕಳ್ ಬಾಜಿಸುವ ಪನ್ನೆರಡು ಕೋಟಿ ದೇವದುಂದುಭಿಯುಂ ಕಂಠೋಷ್ಠಾದಿ ವಚೋನಿಮಿತ್ತಂಗಳಿಲ್ಲದೆ ಓಂಕಾರಪೂರ್ವಕಂಮೃದುಮಧುರ ಶ್ರವ್ಯನವ್ಯದಿವ್ಯ ಭಾಷೆಯಿಂ ಸರ್ವಜ್ಞಮುಖದೊಳ್ ಜನಿಯಿಸುವ ದಿವ್ಯಧ್ವನಿಯುಮೆಂದೀ ಅಷ್ಟಮಹಾಪ್ರಾತಿಹಾರ್ಯಮುಂ ಸಹಜ ಘಾತಿಕ್ಷಯ ದೇವೋಪನಿಕಾತಿಶಯ ಭೇದದಿಂ ಮೂವತ್ತು ನಾಲ್ಕು ಅತಿಶಯಂಗಳಂ ತ್ರಿಲೋಕಂ ಸಂದಣಿಸಿದ ಸಮವಸರಣದೊಳ್ ಶತೇಂದ್ರವಂದಿತ ಪಾದಾರವಿಂದದ್ವಂದ್ವನರ್ಹತ್ ಪರಮೇಶ್ವರನೊಪ್ಪುತ್ತಿರೆ ದಿವ್ಯಧ್ವನಿಗೆ ಪ್ರತಿರಚನೆಯಿಂದರ್ಥಮಂ ಪ್ರಕಟಿಸುವ ಗಣಧರಪದಕ್ಕಾರುಮಾಗದಿರೆ ದೇವೇಂದ್ರನೊಂದು ಶ್ಲೋಕಮಂಬರೆದುಕೊಂಡು ಗೌಡಮಗ್ರಾಮಮನೆಯ್ದಿ ಅಲ್ಲಿ ಗೌತಮಗೋತ್ರದ ಗೌತಮೆನೆಂಬ ಬ್ರಾಹ್ಮಣಂಗಂ ಕೊಟ್ಟದರರ್ಥಮಂ ಪೇಳ್ವುದೆಂದವರಂ ಪ್ರಾರ್ಥಿಸುವುದುಂ ಮೊದಲಹಂಕಾರದಿಂ ಸಿದ್ಧಾರ್ಥಪುತ್ರನಿಂದ್ರಜಾಲಿಗಶಿಷ್ಯನೆಯೆಂದು ಗ್ರಂಥಾರ್ಥಂ ತಿಳಿಯದಿರಲ್ ಭವ್ಯನಪ್ಪುದರಿಂ ನಮ್ಮವರ್ ಮೂಲಮತದ್ವೇಷಿಗಳಾಗಿಪ್ಪರದರಿಂ ಪಾಪಬದ್ಧಮಪ್ಪುದಲ್ಲದೆ ಪುಣ್ಯಬದ್ಧಮಲ್ಲದರಿಂ ನಾಮುಂಬಂದು ವರ್ಧಮಾನರಂ ಕಂಡುಬಪ್ಪೆವೆಂದು ನಿಜಾಗ್ರಜರಪ್ಪ ಗಾರ್ಗ್ಯ ಭಾರ್ಗವರುಂಬೆರಸೆ ಇಂದ್ರಭೂತಿ ವಾಯುಭೂತಗ್ನಿಭೂತಿಗಳೆಂಬೀ ಪ್ರತಿನಾಮಮುಳ್ಳ ಮೂವರುಂ ಐನೂರ್ವರ್ ದಿವಿಜ ಕುಮಾರರ್ವೆರಸಿ ಕೂಡಿಬಪ್ಪುದುಂ ಇಂದ್ರಂ ಕರೆತಂದೊಡೆ ವೈಭಾರರ್ಪತೋಪರಿ ವಿರಾಜಿಸುತ್ತಿರ್ಪ ಸಮವಸರಣಮಂ ಕಂಡು ಮುಂದಿರ್ಪ ಮಾನಸ್ತಂಭಮಂ ನೋಡಿ ಮಾನಗರ್ವಂ ಪೋಗೆ ಸಾಷ್ಟಾಂಗಪ್ರಣತರಾಗಿ ಪರ್ವತಮನೇರಿ ಸೋಪಾನದ ಮೇಲೆ ಪಾದಮನಿಡೆ ಪಾದಲೇಸೌಷಧಿ ಸಾಮರ್ಥ್ಯದಿಂದಾಕ್ಷಣದೊಳೆ ಧೂಳೀಸಾಲೆಯನೆಯ್ದಿ ಗೋಪುರದ್ವಾರದೊಳ್ ಪಾದಪ್ರಕ್ಷಾಲಂಗೆಯ್ದು ದ್ವಾರಪಾಲಾಮರರನುಜ್ಞೆಯಿಂದಲ್ಲಲ್ಲಿಯ ಸೊಬಗನೀಕ್ಷಿಸುತ್ತೆ ನವಪ್ರಾಕಾರದೊಳಗಣಾಕಾರಸ್ಫಟಿಕ ಭಿತ್ತಿಯಿಂದೊಳಗಣ ಗಂಧಕುಟಿಯನೀಕ್ಷಿಸಿ ಮುಕುಳಿತಕರಸರೋಜಲಲಾಟಪಟ್ಟರಾಗಿ ತ್ರಿಲೋಕೇಶ್ವರ ಶ್ರೀಮುಖದರ್ಶನಮಾತ್ರದೊಳೆ ಗೌಡಮರ್ಗವಧಿಜ್ಞಾನಂ ಪುಟ್ಟೆ ತ್ರಿಪ್ರದಕ್ಷಿಣಂಗೆಯ್ದನೇಕಸ್ತುತಿಶರಸಜಸ್ರಂಗಳಿಂ ನಮಸ್ಕರಿಸಿ ನಿಂದು ಸಂಸಾರಶರೀರಭೋಗನಿರ್ವಣ್ಣನಾಗಿ ತಲೆಯಂ ಪರಿದು ವಸ್ತ್ರಾಭರಣಮನೀಡಾಡಿ ಮೂಲೋತ್ತರ ಗುಣಂಗಳ್ ಮೊದಲಾದೆಂಭತ್ತುನಾಲ್ಕುಲಕ್ಷ ಗುಣಮುಂ ಅಷ್ಟಾದಶಸಹಸ್ರ ಶೀಲಂಗಳುಮಳವಡೆ ಸಪ್ತರ್ಧಿಸಂಪನ್ನಾಗಿ ಚತುರ್ಥಜ್ಞಾನಂ ಪುಟ್ಟಿ ಗಣಧರಸಿಂಹಾಸನಮನೇರಿ ಸರ್ವಜ್ಷಂಗಭಿಮುಖನಾಗಿ ಜೀವಾದಿ ಪದಾರ್ಥಂಗಳಂ ಆಸ್ತಿನಾಸ್ತಿಕಿಮಿತ್ಯಾದಿಯಾದರು ವತ್ತುಮೂರು ಪ್ರಶ್ನೆಯಂ ಕೇಳೆ ಸರ್ವಭಾಷಾಸ್ವಭಾವಮಪ್ಪ ದಿವ್ಯಧ್ವನಿಯು ಶ್ರಾವಣ ಬಹುಳ ಪಾಡ್ಯದ ಸೂರ್ಯೋದಯ ರೌದ್ರಮುಹೂರ್ತದೊಳ್ ತ್ರಿಭುವನ ಪರಮೇಶ್ವರನಶ್ರಿಮುಖಕಮಲದಿಂದುದ್ಪವಿಸೆ ಇಂದ್ರಭೂತಿಗಳ್ ತತ್ರ್ವಬುದ್ದಿಯಂದರಿದು ಗ್ರಂಥಾಂಗಪೂರ್ವಮನಪರಾಹ್ನದೊಳ್ ಪ್ರತಿರಚನೆಗೆಯ್ದು ಆ ಶತ್ರುಮಂ ಸುಧರ್ಮ ಜಂಬೂನಾಮಧೇಯರ್ಗಂ ನಿಜಾನುಬರ್ ದೀಕ್ಷಿತರಾದ ವಾಯುಭೂತ್ಯಗ್ನಿಭೂತಿಗಳ್ಗಂ ಪೇಳಿ ಉಳಿದ ಗಣಧರಾದಿಗಳುಮಂ ಧರ್ಮಾಮೃತವರ್ಸದಿಂ ಪರಮಾನಂದದಿಂ ಹರ್ಷಿತರಂ ಮಾಡುತಿರ್ದರ್.

ಇತ್ತ ಗೌತಮಗ್ರಾಮದ ಇಂದ್ರಭೀತಿಯ ಬಂಧುಗಳ್ ವಿಷಣ್ಣರಾಗಿ ಸಿದ್ಧಾಋðನೃಪಕುಮಾರನಿಂದ್ರಜಾಲಿಗನಲ್ಲಿಗೆಮ್ಮ ಮೂವರುಂ ಪೋಗೆ ಬರಲೀಸದೆ ಮುನಿಗಳಂ ಮಾಡಲ್ಲಿ ನಿಲಿಸಿದನೆಂದು ಕೋಪದಿಂ ಆರುಂ ಪೋಗಲಾದೆಂದೆಲ್ಲವರ್ಗಂ ಪೇಳಿ ವೈಮನಸ್ವಿಗಳಾದರ್.

ಇತ್ತಲಯೋಧ್ಯಾಪುರದ ಭರತನೆಂಬ ಚಿತ್ರಗಾರಂ ಪದ್ಮಾವತಿಯನಾಧರಿಸಿ ವರಮಂ ಪಡೆದು ಲೇಖಮನಿಟ್ಟಾಗಳೆ ಆಭಾವಂಗಳಾಗುತ್ತಿರೆ ಪರಸಿದ್ಧಿವಡೆದುಂ ಅನೇಕ ದೇಶಂಗಳೊಳ್ ತನ್ನ ವಿದ್ಯಮಂ ಪ್ರಕಟಿಸುತ್ತುಂ ವೈತಾಳಿಪುರಕ್ಕೆ ಬರೆ ಚೀಟಕ ಮಹಾರಾಜಂ ಕಂಡು ತನ್ನ ಪುತ್ರಿಯರೆಣ್ಣರೊಳ್ ಪ್ರಿಯಕಾರಿಣಿಯುಂ ಮೃಗಯಾವರಿಯುಂ ಸುಪ್ರತಿಭೆಯುಂ ಜ್ಯೇಷ್ಠೆಯಮೆಂಬ ನಾಲ್ವರ್ ಮದುವೆಯಾಗೆ ಉಳಿದ ಚೇಳಿನಿಯುಂ ಚಂದನೆಯುಂ ಚೇಷ್ಠೆಯುಮೆಂಬ ಮೂವರಿದೆ ಚಿತ್ರಕನ ಸಾಮರ್ಥ್ಯಮನರಿದು ತನ್ನ ಪುತ್ರಿಯರ ರೂಪಂ ಬರೆಯಿಸೆ ಅದರೊಳ್ ಚೇಳಿನೀರೂಪಂಬರೆವಲ್ಲಿ ಒಳದೊಡೆಯೊಳ್ ಕಲೆನಿಲೆ ಅರಸಂ ಕಂಡು ಕೋಪಿಸಿ ಆ ಪಟಮಂ ರಾಜಗೃಹ ಪಟ್ಟಣಕ್ಕೆ ತಂದು ಶ್ರೇಣಿಕಂಗೆ ತೋರೆ ಆ ರೂಪಂ ಕಂಡತ್ಯಾಸಕ್ರನಾಗಿ ಬೇಡಿದೊಡಾತಂ ಸಮ್ಯಗ್ ದೃಷ್ಟಿಗಲ್ಲದೆ ಕೊಡೆನೆನೆ ಚಿಂತಾಕ್ರಾಂತನಾಗಿರ್ದ ತಂದೆಯನಭಯಕುಮಾರಂ ತಾಂ ತಪ್ಪೆನೆಂದು ಅನರ್ಘ್ಯಮಪ್ಪ ವಸ್ತ್ರಾಭರಣ ರತ್ನಾದಿಗಳಂ ಕೊಂಡು ವ್ಯಾಪಾರಿಗನಾಗಿ ಪೋಗಿ ಚೇಟಕರಾಜಂಗಮೂಲ್ಯರತ್ನಹಾರಾದಿಗಳಂ ಕಾಣಿಕೆಗೊಟ್ಟು ಅರಮನೆಯ ಸಮೀಪದಲ್ಲಿಯೇ ಬೀಡಂ ಬಿಟ್ಟಾಮೂವರ್ ಕುಮಾರಿಯರ್ಗಂ ಶ್ರೇಣಿಕನ ರೂಪು ಶೌರ್ಯಾದಿಗಳನುಸಾಧರಂ ಮಾಡಿಪೊಗಳಿಸಿದೊಡಾಕೆಗಳ್ ಮೆಚ್ಚಿ ಅಲ್ಲಿ ಗೊಯ್ದುದೆನೆ ತನ್ನ ಬೀಡಿಗಂಅವರ ಅರಮನೆಗಂ ಸುರಂಗಮಂ ಸಮೆದಾ ಮಾರ್ಗದೊಳೆ ಚೇಳನಿಯಂ ಬರಿಸಿ ರಾಜಗೃಹಕ್ಕೆ ತಪ್ಪುದುಂ ಶ್ರೇಣಿಕಂ ಚೀಟಕಮಹಾರಾಜನಂ ಬರಿಸಿ ವಿವಾಹಮಾಗಿ ಚೇಳನಿಂ ತನ್ನ ಗುರುವಪ್ಪ ಜನರಾಗ್ನಿ ಭಾಗವತರ್ಗಂ ಭಕ್ತಿ ಮಾಡೆಂದು ಪೇಳೆ ಕೇಳದಿರೆ ಒಂದು ದಿವಸಂ ಚೇಳನೀಗೃಹಕ್ಕಂ ಜನರಾಗ್ನಿ ಬರೆ ಎರಗದಿಪ್ಪುದುಂ ನಿಮ್ಮಾ ಸವಣರೆಲ್ಲ ಸ್ವರ್ಗದೊಳ್ ಬೆತ್ತಲೆಯುಣ್ಣಲುಡಲು ತೊಡಲುಮಿಲ್ಲದಿಪ್ಪರೆನೆ ಚೇಳನಿಯು ನಿವಿದನೆಂತರಿದಿರೆನಲ್ ಎಮಗೆ ವೈಕುಂಠಪತಿ ಮತಿಯಂ ಕೊಟ್ಟಿರ್ದಪನೆಂಬುದುಂ, ಮತ್ತೊಂದು ದಿನಂ ಬರಲವರ ಮೆಟ್ಟಂ ಸಖಿಯರಿಂ ಪ್ರಚ್ಛನ್ನಮಾಗಿರಿಸಿ ಅವರರಸುತ್ತೆ ಕೇಳ್ವುದುಂ ನಿಮ್ಮ ಮತಿಯಂ ನೋಡುವುದೆನಲಂತಪ್ಪ ಜ್ಞಾನಂ ನಮಗಿಲ್ಲೆಂಬುದುಮವರ ಮೊಟ್ಟೆಯೊಳೆ ತೋರಿಸಲ್ ಉಬ್ಬೆಗಮಾಗಿ ಪೋಗ್ಗೆ ಮತ್ತೊಂದು ದಿನಂ ಪೊರಗಣ ವನದೊಳ್ ಪರ್ಣಶಾಲೆಯಂ ಮಾಡಿಸಿ ಅದರೊಳ್ ಜಠರಾಗ್ನಿ ಮೊದಲಾದ ಭಾಗವತರ್ ದ್ವಾದಶನಾಮಮನಿಟ್ಟು ವೀರಾಸನಂ ಕುಕ್ಕುಟಾಸನಂ ಮೊದಲಾಗೆ ಕುಳ್ಳಿರ್ದು ದಶವಾಯುಗಳಂ ನಿರೋಧಿಸಿ ಧ್ಯಾನಾರೂಢರಾಗಿರೆ ಶ್ರೇಣಿಕಂ ಚೇಳನಿ ಕೇಳೆ ಮೂರು ದಿನವು ಈ ಅಂದದೊಳಿಪ್ಪರೆಂಬುದುಂ ಅಗಳೆರಗುವೆನೆಂದು ಬಂದು ಆರುಮರಿಯದಂತೆ ತನ್ನಾಳಿಯರ ನಾಲ್ಕಾರು ಜನಮಂ ಕರೆದೊಂದೊಂದು ಪೊದೆಯಂ ಕೊಂಡೊಯ್ದಾರುಂ ಕಾಣದಂತೆ ಪೊತ್ತಿಸಿ ಮರೆಗೊಂಡಾ ಶಾಲೆಗೆ ಕಿಚ್ಚನಿಡುವುದುಂ ಪೊದೆಯಂ ಕೊಂಡೊಯ್ದಾರುಂ ಕಾಣದಂತೆ ಪೊತ್ತಿಸಿ ಮರೆಗೊಂಡಾ ಶಾಲೆಗೆಕಿಚ್ಚನಿಡುವುದುಂ ಅವರೋಡಿಪೋಗದೆ ಅಲ್ಲೇ ನಿಶ್ಚಲರಾಗಿರ್ದೊಡಾ ಕಿಚ್ಚಂ ನಂದಿಸೆ ಬರ್ಪುದೆನಲ್ ಅವರ್ ಪೋಗಿ ಪೊದೆಯ ಪತ್ತಿಸಿ ತೋರಿಸಲಾಕ್ಷಣವೇ ಭಯಂಗೊಂಡು ಬಿರಿತೋಡಿ ಪೋಗಲಾವಾರ್ತೆಯಂ ಚೇಳನಿಗೆ ಪೇಳ್ದರ್.

ಮತ್ತೊಂದು ದಿವಸಂ ಶ್ರೇಣಿಕಂ ಬೇಂಟೆಯೋಗಿ ಬರುತ್ತಂಅರಣ್ಯದೊಳೊಂದು ಕಲ್ಲನೆಲೆಯೊಳ್ ತಪಂಗೆಯ್ದು ಯೋಗೀಶ್ವರರಂ ಕಂಡೀತನಂ ಕಂಡುದರಿಂ ಬೇಂಟೆಯಾಯ್ತಿಲ್ಲವೆಂದೊಂದು ಸತ್ತಿರ್ದ ಮಹೋರಗನಂ ತನ್ನ ಬಿಲ್ಲಿನ ಕೊನೆಯೊಳ್ ತೆಗೆದಾ ಮುನಿಯ ಕೊರಳೊಳಿಕ್ಕಿ ಪುರಕ್ಕೆಯ್ದಿ, ಮತ್ತೊಂದು ದಿವಸಂ ತನ್ನ ಪಟ್ಟಮಹಾದೇವಿವೆರಸು ಶಯ್ಯಾತಲದೊಳಿರ್ಪಾಗಲಾಂ ಬೇಂಟೆಯೋಗಿರಲಲ್ಲಿ ಓರ್ವ ಯತಿಯ ಕಂಠದೊಳ್ ಸತ್ತ ಪಾವನಿಕ್ಕಿ ಬಂದೆನೆಂಬುದುಂ ಚೇಳಿನಿ ಕೇಳ್ದು ಹಮ್ಮನೆ ಹಾರಿ ಭಯಂಗೊಂಡು ವಿಷಣ್ಣಚಿತ್ತಯಾಗಿ ದೇವಾ ನೀಂ ಪೊಲ್ಲದುಕಾರ್ಯಮಂ ಮಾಡಿದೆಯಾ ಪಾಪದಿಂದೇಳನೆಯ ನರಕಕ್ಕೆ ಭಾಜನನಾದೆಎನಲ್ ಆ ಮುನಿಯಾಗಳೆ ಬಿಸುಡದಿಪ್ಪನೆ ಅದರಿಂದೆನಗೆ ಪಾಪಮೆಲ್ಲಿಬಪ್ಪುದೆಂಬುದುಂ ಅವರಂತೆಗೆಯ್ವುರಲ್ಲೆನಲ್ ಆದರೆ ನೋಳ್ಪಂ ಬನ್ನಿಂ ಎಂದಾ ರಾತ್ರಿಯೊಳ್ ಪರಿಜನಂಗೂಡಿಚೇಳಿನಿಯುಂ ಶ್ರೇಣಿಕನುಂ ಪೋಗಿ ನೋಳ್ವಾಗಳಾ ಕೊಳೆಸರ್ಪಂಗಾಗಿ ಅನೇಕ ಇರುವೆ ಸಾಲ್ಗಳ್ಕೆದಿ ಸರ್ವಾಂಗಮಂಮುತ್ತಿ ದೇಹಮನುಚ್ಚಿಸಿ ಕಡಿದು ತಿನ್ನುತ್ತಿರೆ ಕಣ್ಮುಚ್ಚಿ ಮಹೋಪಸರ್ಗಮಂ ಸೈರಿಸುತ್ತೆ ಧ್ಯಾನಾರೂಢನಾಗಿರ್ದ ಸಂಯಮಿಯಂ ಕಂಡು ಶ್ರೇಣಿಕಂ ತೆಗೆಯಲುದ್ಯೋಗಿಸಲ್ ನಿಲಿಸೆ ಚೇಳನಿಯು ಸಕ್ಕರೆಯಂ ತರಿಸಿ ಕೆಳಗೆಲ್ಲ ಹರಡಿಸಿ ಇರುವೆಗಳೆಲ್ಲ ಮಿಳಿದು ಮುತ್ತಿದೊಡೆ ಮಯೂರಪಿಂಛದಿಂದೆಲ್ಲಮಂ ನಿವಾರಿಸಿ ಪಾವಂ ಕಳೆದು ಒದ್ದೆಯೊಳೊರಸುತ್ತುಂ ಆ ಇರುಳ ಕಾಯ್ದಿರ್ದು ಸೂರ್ಯೋದಯಮಾಗಲ್ ಮಹೋಪಸರ್ಗಂ ಪಿಂಗಿತು ಕೈಯನೆತ್ತುವುದೆಂದು ಪ್ರಾರ್ಥಿಸಲಾ ಸಾಧುಗಳ್ ಕಣ್ಣಂ ತೆರೆದೊಡರ್ವರುಂ ಪೊಡಮಡುವುದುಂ ಗಂಭೀರನಿನಾದದಿಂದೆಲೆ ಭವ್ಯೋತ್ತಮ ನೀಂ ಸುಜ್ಞಾನ ಸಂಪ್ತಾಪ್ತಿಯಿಂ ಮೂರು ಜನ್ಮದೊಳೆ ಪರಿದವರ ಸಮತಾಭಾವಕ್ಕೆ ಮೆಚ್ಚಿ ಮನದೊಳೆ ಎನ್ನ ಶಿರಮನರಿದರ್ಚಿಸಿದೊಡಂ ಭಕ್ತಿ ತೀರದೆಂದು ಯೋಚಿಸುತ್ತಿಪುದುಮಾ ಮುನಿಗಳೆಂದರೆಲೆ ಮಹಾರಾಜಾ ನೀಂ ಪೊಲ್ಲದಂತಪ್ಪ ಯೋಚನೆಯನೇಕ ಮಾಳ್ವೆಯದಂ ಬಿಡುವುದೆನೆ ನಾನೇನಂ ಬಗೆದೆನೆಂಬುದುಮವರ್ ತನ್ನ ಮನದೊಳಿರ್ದುದಂ ಪೇಳ್ವುದುಂ ಸಂತುಷ್ಟನಾಗಿ ಚೇಳನಿಗೆಂದನಿವರೆನ್ನ ಮನಮನೆಂತರಿದರಿವರ ಜ್ಞಾನಮೆಂತಿಪ್ಪುದೆಂದಾಶ್ಚರ್ಯಂಬಡೆ ಎಲೆ ದೇವಾ ಇವರವಧಿಜ್ಞಾನಸಂಪನ್ನರ್ ನಿನ್ನ ಪೂರ್ವಭವಮಂ ಕೇಳ್ದೊಡೆ ಪೇಳ್ವರನೆ ಮತ್ತಂ ಪೊಡಮಟ್ಟಲೆ ಮುನೀಂದ್ರೋತ್ತಮ ನಾನು ಪೂರ್ವಭನದೊಳಾರೆಂದು ಬೆಸಗೊಳೆ ಸುರಕಾಂತದೇಶದ ಪ್ರತ್ಯಂತಮೆಂಬ ಪಟ್ಟಣದೊಳ್ ಸಮಿತ್ರನಾಗಿರ್ದ ಸಪ್ರಪಂಚಮಂ ಪೇಳೆ ಕೇಳ್ದು ಜಾತಿಸ್ಮರನಾಗಿ ಉಪಶಮ ಸಮ್ಯಕ್ತ್ವಂ ದೊರೆಕೊಳೆ ಮುನೀಶ್ವರಂಗೆರಗಿ ಪಟ್ಟಣಕ್ಕೆ ಬಂದು ಸುಖದಿಂ ರಾಜ್ಯಮಂ ಪಾಲಿಸುತ್ತಿರ್ದಂ.

ಇಂತೀ ಕಥೇಯಂ ಕೇಳ್ವರ
ಭ್ರಾಂತಿಯು ನೆರೆಕಟ್ಟು ಬಳಿಕಮಾಯುಂ ಶ್ರೀಯುಂ
ಸಂತಾನವೃದ್ಧಿ ಸಿದ್ಧಿಯು
ಸಂತತ ಸೌಖ್ಯಂಗಳಿಹಪರಂಳೊಳಕ್ಕುಂ

ಇದು ಸತ್ಯಪ್ರವನದ ಪಾರಾವಾರ ಸಮುತ್ಪನ್ನ ಕಾಲಪ್ರವರ್ತನ ಕಿಂಚಿನ್ಮಾತ್ರದಿಂ ವಿಬುಂದೇದಂ ವಿರಚಿತ ರಾಜಾವಲಿ ಕಥಾಸಾಗರದೊಳ್ ಶ್ರೇಣಿಕಮಹಾರಾಜ ಪ್ರವೃತ್ತಿ ವರ್ಣನಂ

ಚತುರ್ಥಾಧಿಕಾರಂ.