ಒಬ್ಬ ಬಳ್ಳಮಂ ಕವಚಿಕ್ಕಿ ಲಿಂಗಮೆದರ್ಚಿಸಿ ಧನಮಂ ಪಡೆದಂ. ಕಾರಗೊಟ್ಟಗನೆಂಬ ಗೊಲ್ಲನಡಿನ ಪಿಕ್ಕೆಯಂ ಲಿಂಗಮೆಂರ್ಚಿಸಿ ಬಸವನಿಂ ಸಿರಿಯಂ ಪಡೆದಂ ಬಾಗೂರ ವೊಮ್ಮಂ ಜೋಳದ ರಾಶಿಯನರ್ಚಿಸಿ ಭಾಗವ್ಯವಂತನಾದಂ ಲಿಗಮಜ್ಜನಕ್ಕೆ ಪಾಲಂ ತುಪ್ಪ ಸ್ತ್ರೀಯು ನಾಯನೆಡಹಿ ಬೀಲವಳಂ ಬಸವನೆತ್ತಿಕೊಂಡು ಬಂದು ಸಾಲ್ವನಿತು ಪೊನ್ನಂ ಕೊಟ್ಟಂ. ಮಿಂಡ ಜಂಗಮನ ಸೂಳೆ ಬಸವರಾಜನರಸಿ ನೀಲಮ್ಮನುಡುವ ಪೀತಾಂಬರಮಂ ಬೇಡಿ ಕೊಡದೆ ಪೋದಳೆಂದು ಲಿಂಗಮೆಂದರ್ಚಿಸಿ ಪೊಡೆವಟ್ಟು ತಕ್ಕೈಸಿದನೆಂದೊಡಾತಂಗೆ ಕೈಲಾಸಮಾಯ್ತೆಂದು ನಂಬುವಂ. ಮಿಂಡ ಜಂಗಮಂ ಸೂಳೆಯೊಳುಪವಿಷ್ಠನಾಗಿ ಕೂಡಿಕೊಂಡು ಶಿವಲಿಂಗಮಂ ಪಾಣಿಪಟ್ಟದೊಳ್ ಪ್ರತಿಷ್ಠೆಯಮ ಮಾಡಿದನೆಂದೀರ್ವರಂ ಪೂಜಿಸಿ ಪೊಡೆವಡುವಂ. ಇಂತನೇಕ ತೆರದ ಲಿಂಗಾರ್ಚನೆಯಂ ನಂಬಿ ಭಕ್ರನಾಗಿ ಬಸವಂ ಅಗ್ಗಣಿ ಹೊನ್ನ, ಕೈಕೂಲಿ ಚಾಮ, ಹಾದರದ ಬೊಮ್ಮ, ಕನ್ನದ ಮಾರ, ನುತಿಗೆ ಚಾದ, ಒಕ್ಕಲಿಗ ಮುದ್ದ, ಮಾದಿರಜ ಕುಂಬಾರ ಗುಂಡ, ಮಡಿವಾಳ ಮಾಚ, ಪೊಲೆಯರ ಹೊನ್ನ, ಮಾದಾರಿ ಚನ್ನಂ ಮೊದಲಾದ ತ್ರಿಷಷ್ಟಿ ಪುರಾತರಂ ಗೊತ್ತುಮಾಡಿ ಕಾಯಿಕಮಂ ನಿರ್ಮಿಸಿ ಜೀವನಕ್ಕಾಧಾರಂ ಮಾಡಿಪ್ಪುದುವೊಂದು ದಿವಸಂ ಮಡಿವಾಳ ಮಾಚಂ ಬಸವಣ್ಣನ ಮನೆ ಮಾಡಿಗಳಂ ಕತ್ತೆಗಳ ಮೇಲೊಟ್ಟಿಕೊಂಡು ರಾಜವೀದಿಯೊಳ್ ಬರುತ್ತಮರಸನ ಪೆರ್ಗೆಡೆಗಳಂ ಕಂಡು ಭವಿಗಳ ಛಾಯಾಸ್ಪರ್ಶಮಪ್ಪುದು ತೊಲಗು ತೊಲಗೆಂದಾರ್ಭಟಿಸಲವರ್ ಶಂಕಿಸದೆ ಸಮೀಪಕ್ಕೆಪ್ಪುದುಂ ಕೈದುವಿಂದೀರ್ವರಂ ಕೊಂದು ಪೋಗಲವರ್ ಗತಜೀವಿಗಳಾಗೆ ಅವಸಂ ಕೇಳ್ದು ಕೋಪಿಸಿರೆ ಮಂಚಣ್ಣಂ ಬಂದು ಪುರದೊಳ್ ಶರಣರಿಂ ಲಿಂಗವಿಲ್ಲದ ಜನಕ್ಕೆ ಮಾಳ್ಪ ಬಾಧೆಯೆಲ್ಲಮಂ ಸವಿಸ್ತರಂ ಪೇಳೆ ಆ ಕ್ಷಣದೊಳೆ ಮಡಿವಾಳ ಮಾಚಮಂ ಪೆಡಗಟ್ಟು ಕಟ್ಟಿ ತರಿಸಿ ಎರಡು ಕಣ್ಣಂ ಕೀಳಿಸಿ ಬಸವನ ಕಡೆ ದುಷ್ಟನೆನೆ ಆಜ್ಞೆಗೆಯ್ಸಿ ಬಿಡಲಾತಂ ಬಸವಂಗೆ ಮೊರೆಯಿಡೆ ರಾಯನಂ ಕೊಲಲ್ ಯೋಚಿಸಿ ಕ್ರಮದಿಂದೀರ್ವರ್ ತೀಕ್ಷ್ಣಪುರುಷರಂ ಮಾವಿನಪಣ್ಣಂ ಕಾಣಿಕೆಗೊಡುವ ವ್ಯಾಜದೊಂದೊಡ್ಡೋಲಗಂಗೊಟ್ಟಿರ್ದ ಬಿಜ್ಜಲರಾಯನಲ್ಲಿ ಗಟ್ಟಲವರ್ ಪೋಗಿಯರಸನಂ ನಿಶಿತಮಪ್ಪಾಯಧದಿಂ ತರಿದು ತಾವು ತಪ್ಪಸಿಕೊಂಡರ್. ಆಗಳೆ ಬಸವಂ ತನ್ನ ಜನಂಗೂಡಿ ಬಂದು ಸತ್ತಿರ್ದರಸನಂ ನೋಡಿ ತಚ್ಚರೀರಮಂ ನಿಕ್ಷೇಪಂ ಮರಿ ಬಿಜ್ಜಲಂಗೆ ಲಿಂಗಧಾರಣೆಯಂ ಮಾಡಿ ಪಟ್ಟಂಗಟ್ಟಿ ಚನ್ನಬಸವಂಗೆ ಸರ್ವಾಧಿಕಾರಮಂ ಕೊಟ್ಟು ಬಸವಂ ನಿಶ್ಚಿಂತನಾಗಿ ವೀರಶೈವಮ ಪೆರ್ಚಿಸಿ ದಿನವೊಂದಕ್ಕೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಂಗಳ್ಗೆ ಅನ್ನ ಮೊದಲಾಗೆ ನೀಡಿಯವರಿಚ್ಛೆಯಂ ಸಲಿಸುತ್ತೆ ವೀರಶೈವಕಥಾಲಾಪಂಗಳನನೇಕಮಾಗೆ ಕಲ್ಪಿಸಿ ಅಳಿಯನಪ್ಪ ಚನ್ನಬಸವಣ್ಣಂಗೆ ಪೇಳಿ ಕಲಿಸಿದವನರೊಳೆ ಕಿಂಚಿತ್ತಾಗಿ ಒಂದೆರಡು ಪುರಾಣಮಂ ಪೇಳ್ವೆನೆಂತೆನೆ.

ಬೇಡರಕಣ್ಣಂ ಎಂಜಲ ಮಾಂಸಮನೆಡಗಯ್ಯೊಳಾಮತು ಬಂದು ಲಿಂಗಸ್ಥಾನಪನೆಯ್ದಿ ಮುನ್ನೆ ಮಾಡಿರ್ದಲಂಕಾರಮನೆಡಗಾಲ ಕೆರದಿಂದೋಸರಿಸಿ ಬಾಯೊಳಿರ್ದ ಗಂಡೂಷೋದಕಮನುಗುಳಿ ಎಡಗಯ್ಯ ಮಾಂಸಮಂ ತೋರಿ ಕೈಲಾಸಕ್ಕೆ ಸಂದನೆಂದುಂ.

ವೃತ್ತ || ಮಾರ್ಗೆ ಪಾದುಕಾ ಪಶುಪತೇ ರಂಗಸ್ಯ ಕೂರ್ಚಾಯತೇ
ಗಂಡೂಚಾಂಬುನಿಷೇಚನಂ ಪುರರಿಪೋರ್ದಿವ್ಯಾಭಿಷೇಕಾಯತೇ
ಕಿಂಚಿದ್ಭಕ್ಷಿತ ಮಾಂಸ ಶೇಷ ಶಕಲಂ ನವ್ಯೋಪಹಾತಾಯತೇ
ಬಕ್ತಿಃ ಕಿಂ ನಕರೋತ್ಯಹೋ ವನಚರೋ ಭಕ್ತಾವತಂಸಾಯತೇ ||

ಮತ್ತಂ ಸಿರಿಯಾಳನ ಪೆಂಡತಿ ತನ್ನ ಮಗನಂ ಕೊಂದಿಟ್ಟು ಜಂಗಮರೂಪಾದ ಶಿವಂಗಿಕ್ಕೊದೊಡೆ ಕೈಲಾಸಮಂ ಪಡೆದುದಂ, ಮತ್ತಂ ಎಳು ಕೇರಿ ಸಹಾ ಕಾಂಚೀಪುರಿಯೊಳ್ ಕೈಲಾಸಕ್ಕೆ ಪೋದುದಂ, ಚೀಲಾಳಂ ತನ್ನರಸಿಯಂ ಜಂಗಮಗಿತ್ತು ಶಿವಪುರಿಗೆ ಸಂದುದಂ, ಪಿಟ್ಟೆವ್ವೆಗಾಳಾಗಿ ಸತಂಕ[ಟ್ಟೆ]ಗೆ ಮಣ್ಣಡಕಿ ಕೈಲಾಸಕ್ಕೆ ಸಂದುದಂ ಅಜಮಿಳಂ ಮಾತಂಗಿಯೊಡಗೂಡಿ ಮರನೇರಿರ್ದು ಮಗಳ್ ಪ್ರಾಯಕ್ಕೆವರೆ ವೃದ್ಧೆಯಪ್ಪಳಂ ಮರದಿಂ ತಳ್ಳಿಬಿಟ್ಟು ಸುತೆಯೊಡಗೂಡಿ ನಾರಂದನಂ (?) ಪಡೆದು ಕೈಲಾಸಕ್ಕೆ ಪೋದರೆಂಬುದಮ, ಶಿವಭಕ್ತೆಯ ಪಾಕರುಚಿಯಮ ನೋಡಲು ಜಂಗಮನಾಗಿ ಬರೆ ತನ್ನ ಪುರೀಷಮಂ ನೆಲವಿನೊಳಡಲದ ತರಿಸಿಯುಂಡು ಕೈಲಾಸಕ್ಕೊಯ್ದುನೆಂಬುದು

ಮತ್ತಂ ಬಾಗೂರು ಕಥೆ ಸಾನಂದ ಗಣೇಶನ ಚರಿತೆ ಹಾದರದ ಬೊಮ್ಮನಾದಿ ಯಾಗರುವತ್ತುಮೂವರ ಕಾಯಕರ ಪ್ರಸಂಗಂ ಅಮ್ಮವ್ವೆ ಸುಗ್ಗವ್ವೆ ಬಾಚವ್ವೆ ಹೇರೂರ ಹೆಣ್ಣಾದಿಯಾದನೇಕ ಶರಣರ ಕಥೆಗಳಂ ಪೇಳುತ್ತಂ ತನ್ನ ಕಾಲ್ದೊಳೆದುದಕಮಂ ತಾನುಂ ಕುಡಿದು ತನ್ನ ದೇವರೆಗೆರೆದು ಗಣಂಗಳ್ಗಂ ಕುಡಿಸಿ ಎಂಜಲು ಮಯಲಿಗೆ ಸೂತಕಾದಿಗಳಂ ಜಾತಿಭೇದಂಗಳಂ ಯೋಚಿಸದೆ ವೀರಶೈವಮೆಂದುದ್ದಂಡವೃತ್ತಯೊಳ್ ನಡೆಯುತ್ತುಂ ಸ್ವಯಂಬುದ್ಧರಾಗಿ ತಾ ಪಿಡಿದುದೆ ಧರ್ಮಮೆಂದು ಕುಬುದ್ಧಿಯಿಂ ಮತ ಮಂತಗಳೊಳ್ ವಾದಿಸುತ್ತೆ ಸಾವಿರದೇಳುನೂರು ಬಸ್ತಿಯಮ ಕಿತ್ತು ತಪಸ್ವಿಗಳನೇಕರಂ ಮಧಿಯಿಸಿ ಕಾಲದೋಷದಿಂ ಸದ್ಧರ್ಮಮನಳಿಯುತ್ತಿರಲಿತ್ತ ಮರಿಬಿಜ್ಜಲನ ತಾಯಿ ನೆಲಮಾಳಿಗೆಯೊಳ್ ಚೈತ್ಯಂಗಳನಿರಿಸಿ ತ್ರಿಕಾಲದಲ್ಲು ಪೂಜಿಸುತ್ತೆ ಜಪ ಸ್ತ್ರೋತ್ರಾದಿಗಳಿಂದಿರುತ್ತಿರಲೊಂದು ದಿವಸಂ ತಾಯಿಯೊಡನೆ ನೆಲಮಾಳಿಗೆಯನೆಯ್ದ ತತ್ಪ್ರಪಂಚೆಲ್ಲಮಂ ತಾಯಂ ಬೆಸಗೊಂಡು ಬಸವನ ಪ್ರಪಂಚಮೆಲ್ಲಮಂ ಸವಿಸ್ತರಂ ಕೇಳಿ ಬುದ್ಧಿಸಾಗರಮಂತ್ರಿಯೊಳಾಳೋಚಿಸಿ ಬಸವನಂ ಗೆಲ್ವ ಪ್ರಯತ್ನದೊಳಿರ್ದ ನಿತ್ತಲರಸಿಕೆರೆ ಹಾನೆಕೆರೆ ಕೊಪಣ ಕೊಲ್ಲಾಪುರ ಲಕ್ಷ್ಮೇಶ್ವರ ಹಂಪೆ ಮುಂತಾದನೇಕ ಸ್ಥಳಂಗಳೊಳಿರ್ದ ಜಿನಾಲಯಂಗಳಂ ಮುರಿದಲ್ಲಲ್ಲಿ ಲಿಂಗದ ಗುಡಿಯೆಂದು ಲಿಂಗ ಪ್ರತಿಷ್ಠಯಂ ಮಾಡಿ ಅವಕ್ಕೆಲ್ಲಾ ಲಿಂಗದ ವೀರರೆಂದು ತಾನು ಮಾಡಿದವರಂ ಲಿಂಗಾರ್ಚನೆಗಿಟ್ಟು ತಮ್ಮಡಿಗಳೆಂದನ್ವರ್ಥಮಂ ಮಾಡಿದನೆಂತೆಂದೊಡೆಪೂರ್ವದೊಳ್ ದಕ್ಷಬ್ರಹ್ಮನು ಈಶ್ವರನ ಮೃತಿ ನಿಮಿತ್ತಂ ಯಜ್ಷಮಂ ಮಾಡೆ ಈಶಂಗೆ ಕಷ್ಟಮಾದೊಡೆ ಯಜ್ಞಮಂ ಮಾಣಿಸಲಾರ್ಗಂ ಸಾಮರ್ಥ್ಯಮಿಲ್ಲ ದುದರಿಂದತಿ ಚಿಂತೆಯೊಳಿರೆ ದಾಕ್ಷಾಯಿಣಿ ದುಃಖಿಸುತ್ತೆ ವಿನಾಯಕನ ಕಳುಹಿಸಲಾತಂ ಪೋಗಿ ಮೋದಕಾದಿಗಳಂ ತಿನ್ನುತ್ತೆ ಮರೆದಿರೆ ಈಶ್ವರಂಗೆ ಪ್ರಾಣಾವಸ್ಥೆಯೊಳತಿರೌದ್ರದಿದುರಿಗಣ್ಣಂ ತಪ್ತ ಬೆ[ಮ] ರ್ವನಿಯಂ ತೆಗೆದಿದಿರೊಳಿರ್ದ ಕುಂಭದ ಮೇಲೊಗೆದಾಕ್ಷಣದೊಳೆ ಅತ್ಯಂತ ರೌದ್ರಮೂರ್ತಿ ಸಹಸ್ತಾಯುಧಂ ಶರಭಾಕಾರದಿಂದತಿಭಯಂಕರವಾದ ವೀರಭದ್ರಂ ಕಾಸೆವೆರಸಿ ಕಂಬದಿಂ ಪೊರಮಟ್ಟು ಸಿಂಹಾವತಾರಮಾಗಿರ್ದು ಸಕ್ಷಂ ಮಾಳ್ಪ ಯಜ್ಞಶಾಲೆಯಂ ಪೊಕ್ಕಲ್ಲಿ ಮೋದಕಾದಿಗಳಂ ತಿಂದು ಬೃಹತ್ಕುಕ್ಷಿಯಾಗಿರ್ದ ಜಡಮತಿಯಪ್ಪ ಗಜವದನನಂ ಕಂಡಾತನ ಪೊಟ್ಟೆಯಂ ತನ್ನೆಡಗಾಲಿಂದೊದೆದೊಡಾತನ ಪೊಟ್ಟೊಯೊಡೆದು ತಾನು ಮುಂದುಕ್ಕೆಯ್ದಿ ದಕ್ಷಬ್ರಹ್ಮನ ಶಿರಚ್ಛೇದನಮಂ ಮಾಡಿದನನಿತರೊಳೆ ಮೃಡಾನಿ ಬಂದು ದುಃಖಿಸುತ್ತುಂ ತಂದೆಯಿಂ ತನ್ನ ಮಗನುಮಂ ಎತ್ತುವುದೆದು ಬೇಡಿಕೊಳ್ವುದುಂ ದಕ್ಷಬ್ರಹ್ಮನ ಮುಂಡದೊಳ್ ಪೋತನ ತಲೆಯಂ ಪತ್ತಿಸಿ ವಿನಾಯಕನ ಪೊಟ್ಟೆಗೆ ಸರ್ಪನಂ ಕಟ್ಟಿ ಜೀವಮಂ ಪಡೆದೆಬ್ಬೆಸಿ ಯಜ್ಷಮಂ ಮಾಡಿಸಿ ಈಶ್ವರನಂ ಬದುಕಿಸಿದನಾ ವೀರಭದ್ರನ ಪ್ರತಿರೂಪುದರರೀ ಲಿಂಗದ ವೀರರೆಂದವರ್ಗೆ ಪಟ್ಟಕ್ರ ಪುರಾಣಮಂ ಕಲಿಸಿ ಯಂತ್ರ ಮಂತ್ರ ತಂತ್ರಾದಿಗಳಂ ಪೇಳಿ ತಮ್ಮಡಿಗಳೆಂದು ಕೊಂಡಾಡುತ್ತುಂ ನೀರಂ ತರುವವರ್ಗೆ ಕಂಬಿ ಒಡೆಯರೆಂದು ತಾಳ ಮೇಳದವರ್ಗೆ ಮೇಳದೊಡೆಯರೆಂದು ಕೆರೆ ಪದ್ಮರಸನ ಸಂತತಿ, ಕೇಶಿರಾಜನ ಸಂತರಿ, ಮಲುಹಣ ಸಂತತಿ, ಮೂಯೂರ ಸಂತತಿಯವರಂ ಪಂಡತಾರಾಧ್ಯ ರೇವಣಾರಾಧ್ಯ ಏಕೋರಾಮಾರಾಧ್ಯ ಮರುಳಾರಾಧ್ಯ ಚರುಃಸಿಂಹಸನಾಪತಿಗಳಂ ಮಾಡಿ, ಆ ಮರುಳಾರಾಧ್ಯನಮನ ಮಾನ್ಯರೆಂದಿರಿಸಿ ಲಿಂಗರಾಜು ವಸವರಾಜ ಚೆನ್ನರಾಜಾದಿಗಳಂ ರಾಜ್ಯಮನಾಳುವ ರಾಜರೆಂದು ನಿಯಮಿಸಿ, ಚೆನ್ನಬಸವ ಮುದ್ದುಬಸವ ವೀರಬಸವಾದಿಗಳಂ ಕೃಷೀವಲರಂ ಮಾಡಿ, ವೈಶ್ಯ ಶೂದ್ರಾದಿಗಳೊಳ್ ರತ್ನಬಣ್ನರಂಗುಬಣ್ಣ ಸಾರಬಣ್ನ ಚೋರಿಬಣ್ಣ ಮೊದಲಾದ ಪದಿನೆಂಟು ಜಾತಿಗಳ್ಗಂ ಪದಿನೆಂಟು ಬಣ್ಣಕ್ಕೆ ಅಧ್ಯಕ್ಷನಂ ಮಾಡೆಯಾತಂ ತನ್ನಾಜ್ಞೆಯೊಳೆ ಬಣ್ಣಂಗಳಂ ನಿಯಮಿಸಲ್ ಸಾಲು ಮೂಲೆಯೆಂದವರವರ್ಗೆ ಸಂಕಲ್ಪ ಮಾಳ್ಪಲ್ಲಿ ಪಂಚಾಳನುಂ ಬೆಸ್ತನುಂ ಮಾದಿಗರಾದಿ ಕೆಲಂಬರುಂ ಒದಗಡೆ ನಿಮಮಂ ಬಿಟ್ಟು ಪೋಗಲವರುಂ ಶಿಕ್ಷಿಸಲ್ ಪೊಲೆಯಂ ಪಂಥಮನಾಡಿಲಾತರಿಗೆ ಮೆಚ್ಚಿ ಬರಿದಿನ ಮುದ್ರೆಯ ಸುಟ್ಟಗಮಂ ಕೊಟ್ಟು ಪಂಚಾಳ ಮೊದಲಾದವರ ಬಣ್ಣ ಕೀಳೆಂದು ಗದ್ದುಗೆಯಂ ಕಳೆವರ್ ಬ್ರಾಹ್ಮಣರೊಳ್ ವಾದಿಸಿ ವೇದಮಂ ನಾಯಕುನ್ನಿಗಿತ್ತೊಡದು ಕೂಗಿದೊಡೆ ಓದಿಸಿದೆವೆಂದು ವ್ಯಾಸನ ಬಾಹುವಂ ತರಿದೆವೆಂದು ನಂದಿಧ್ವಜರೊಳ್ ಕಟ್ಟಿದರ್.

ಈ ಪ್ರಕಾರ ನೆಡೆವಲ್ಲಿ ಮರುವಿಜ್ಜಲಂ ಚತುರಂಗವಲಸನ್ನದ್ಧನಾಗಿ ಬಸವನಂ ಮುಕ್ತಿ ಪಿಡಿಯಲ್ ಬಪ್ಪುದುಂ ಸಿದ್ಧಲಿಂಗ ಬಾಚಿರಾಜ ಮಾದಿರಾಜ ಮೊದಲಾಗೆ ಪದಿನಾರು ಸಾವಿರ ಮುಖ್ಯ ಗಣಂಗಳ್ವೆರಸು ನಿತ್ತರಿಸಲಾರೆದೆ ಜಗುನೆಯಂ ಪಾಯ್ದು ಪರ್ವತದೊಳಗಣ ಮಹಾಮಡುವಪ್ಪ ಉಳುಮೆಯೆಂಬ ಖಾರದೊಳ್ ಮುಳುಗಿದರ್. ಚೆನ್ನಬಸವ ರುದ್ರದೇವತಾಗಿಯಾಗೆ ನಾಲ್ಸಸಿರ್ವರರಸುತ್ತುಂ ಪೋಗಿ ಆ ಮಡುವಿನೊಳೆ ಐಕ್ಕವಾದರ್. ಮರುಬಿಜ್ಜಲಂ ಲಿಂಗಮನೀಡಾಡಿ ತಾಯಿ ಪೇಳ್ದಂತೆ ಪ್ರಾಯಶ್ಚಿತ್ತಂಗೊಂಡಂ. ಆತನ ಬಂಧುಗಳ್ ಕೆಲಂಬರ್ ವೀರಶೈವದೊಳೆ ನೆಗಳುತ್ತಿರ್ದರ್. ಬಸವರಾಜ ಸೃಷ್ಟಿ ವೀರಧೈವದೊಳ್ ಅತೀತರ್ ಆರು ಸಾವರಿದ (೬೦೦೦) ವಿರಕ್ತರಯ,ಮೂರು ಸಾವಿರದ (೩೦೦೦) ಹಂಚಿಕಂತೆ ಹನ್ನೆರಡು ಸಾವಿರ (೧೨,೦೦೦) ಗೂಡಿ ಇಪ್ಪತ್ತೊಂದು ಸಾವಿರ (೨೧,೦೦೦) ಗಣಂಗಳುಂ ಮತ್ತಮವರೊಳೆ ಮುರಿಗೆ ಸಂಪಾದನೆ, ಚೀಲಾಳ, ಗದ್ದೆಗಟ್ಟುಗೂಳಿಕೊಂದ, ನಾಗಭಕ್ಷಣ, ಕೆಂಪಿನಗ್ಘಣಿ, ಅರೆಯಕಟ್ಟು ನೀಲಿ ಸಂತತಿ ಮೊದಲಾದ ಸಂತಾನಮುಂ, ಭಂಕ, ಹೆಂಡದಮಾರ, ಕನ್ನಡ ಹಾದರದ ಬ್ರಹ್ಮ, ಕಟ್ಟಿಗೆ ಸಂಗ, ಮೋಳಗೆಮಾರ, ಮುಸುಡಿ ಚೌಡ, ಕೂಗಮಾರ, ಮಾದಿಗ ಹರಳ, ಹಡಪದಪ್ಪಣ್ಣ ಬಿಬ್ಬಿಬಾಚಿ, ಅಮ್ಮಿ, ಸುಗ್ಗಿ ಸೂಳೆ ಮೊದಲಾಗೆ ಆರುವತ್ತು ಮೂರು ಕಾಯಿಕ ಭಕ್ರೆಯರ್ ತಂತಮ್ಮ ನಡೆಯೊಳವರ್ತಿಸುತ್ತಿರ್ದರ್, ಸಂಗನ ಬಸವನುಂ ರಾಜನುಂ ಸಿದ್ಧರಾಮನು ಸಂಗಮದೊಳೆ ಕಪ್ಪಡಿಯೊಳೊರಗಿ ಭೂಮಿಯೊಳೈಕ್ಯವಾದರಿವೆಲ್ಲ ಬಸವನ ವೃತ್ತಕಂ. ಅವರೊಳೆ ವಿದ್ವಾಂಸರಾದಾಯಯಾ ಅಧಿಪತಿಗಳ್ ಇತಿಹಾಸ ಪುರಾಣಂಗಳೆಂದು ಕಲ್ಪಿಸಿ ಮುಂದೆ ಚೆನನಬಸವಂ ಪುಟ್ಟುವನೆಂಬುದು ಮೊದಲಾದ ಕಾಲಜ್ಞಾನಮಂ ಪೇಳ್ದರ್.

ಈ ಪ್ರಕಾರ ಮರಿಬಿಜ್ಜಲನಿಂದಿತ್ತಲೂ ದೇಶದೊಳ್ ವೀರಶೈವಂ ಪ್ರಬಲಮಾಗಿರಲಿತ್ತ ಕಾಂಚೀಪುರಯೊಳ್ ಶಿವಕೋಟಿ ಮಹಾರಾಜನೆಂಬಾತನನುಜಂ ಶಿವಾಯನಂಬೆರಸು ರಾಜ್ಯಂಗೆಯ್ಯುತ್ತೆ ಕೋಟಿಲಿಂಗ ಸ್ಥಾಪನೆಗೆಯ್ದುವರೊಳ್ ಭೀಮಲಿಂಗದ ಗುಡಿಯೊಳ್ ದಿನವೊಂದಕ್ಕೆ ದ್ವಾದಶ ಖಂಡಂಗ ತಂಡುಲದನ್ನಮಂ ವಿನಿಯೋಗಂ ಮಾಡಿಸುತ್ತಿರ್ಪಿನಮಿತ್ತಲ್ ಉತ್ಕಲಿಕಾಗ್ರಾಮದೊಳುದ್ಭವಿಸಿದ ಸಮಂತಭದ್ರಾಚಾರ್ಯರೆಂಬ ಯತಿಪತಿಗಳ್ ಮಣುವಕಹಳ್ಳಿಯೊಳನಾಶನಾದಿ ತಪದಿಂ ಕ್ರಿಯಾಯುಕ್ತರಾಗಿರಲೊಂದು ಕಾರಣಮಾಗೆ ಭಸ್ಮಕವ್ಯಾಧಿ ಪುಟ್ಟೆಯದಕ್ಕೆ ಪ್ರತೀಕಾರಮಿಲ್ಲದುದರಿಂ ಸ್ವಗುರುವ ಸಮೀಪಮನೆಯ್ದಿ

ಆರ್ಯಾ || ಉಪಸರ್ಗೆ ದುರ್ಭೀಕ್ಷೇ ಜರಸಿರುಜಾಯಾಂಚ ನಿಷ್ಪ್ರತೀಕಾರೇ
ಧರ್ಮಾಯ ತನುವಿಮೋಚನೆಮಾಹುಸ್ಸಲ್ಲೇಖನಾಮಾರ್ಯಃ

ಎಂದು ಸಲ್ಲೇಖನಮಂ ಬೇಡುವುದುಂ ಗುರುಗಳೆಂದರ್ ನಿಜ್ಮಂದಂ ಮುಂದೆ ಧರ್ಮೋದ್ಧಾರಮಪ್ಪುದರಿಂದೆಲ್ಲಿಯಾನುಂ ತೃಪ್ತಿಯಪ್ಪಂತು ಭುಂಜಿಸಿ ರೋಗೋಪಶಮಮಾಗೆ ಪುನರ್ದಿಕ್ಷೇಗೊಳ್ವುದೆಂಬುದಂ ಕಾಂಚೀಪುರಮನೆಯ್ದಿ ಶಿವಕೋಟುಮಹಾರಾಜನಂ ಕಂಡಾಶೀರ್ವಾದಂಗುಡಕವರ ಶರೀರದ ಭದ್ರಾಕಾರಮಂ ವಾಗ್ಜಾಲಮಂ ನೋಡಿ ಆಶ್ಚರ್ಯಮಾಗೆ ಶಿವನೆಂದೆ ಬಗೆದು ನಮಸ್ಕರಿಸಿ ನೀಂ ಮಾಳ್ಪ ಧರ್ಮಮೇನೆಂಬುದುಂ ತನ್ನ ಶಿವಭಕ್ತಿ ಶಿವಾಚಾರಮಂ ಕೋಟಿಲಿಂಗಾಧಾರನೆಯಂ ಭೀಮಲಿಂಗಕ್ಕೆ ಬಿಟ್ಟಿಹ ಪಡಿತರಮಂ ಪೇಳೆ ನಿನ್ನ ಧರ್ಮಮನಾ ಕೂಳುಮಂ ಶಿವಾರ್ಪಣಂ ಮಾಳ್ವೆನೆಂದು ಪನ್ನೆರಡು ಖಂಡುಗದಕ್ಕಿಯನ್ನಕ್ಕೆ ತಕ್ಕ ವ್ಯಂಜನಪದಾರ್ಥಮನಿಕ್ಕಿಸಿ ಕವಾಟಬಂಧಮಂ ಮಾಡಿ ಪೋಗವೇಳ್ದು ತಾನುಮಾ ಭತ್ತಮೆಲ್ಲಮನೊಂದಗಳುಳಿಯದಂತೆ ತನ್ನುದರಾಗ್ನಿಗಾಹುತಿಗೊಟ್ಟು ತಣಿಪಿ ಕದಮಂ ತೆರೆಯಲಾತ್ಯಾಶ್ಚರ್ಯಬಟ್ಟು ಮರುದಿವಸಂ ರಾಶಿಯೊಳರ್ಧಾಶದೊಳೊಂದಂಶಂಮುಳಿದೊಡಿದೇಕುಳಿದದೆಂದು ಬೆಸಗೊಳೆ ದೇವರು ಪ್ರಸಾದ ಶೇಷಾನ್ನಮನಿರಿರೆಂದೊಡಂ ಬೆಳಗಿನೊಳ್ ನಾಲ್ಕರೊಳೊಂದಂಶಮುಳಿಯೆ ಪರೀಕ್ಷಿಸಲಾರೈದು ನೋಡಿ ತಿಳಿದೈದನೆ ದಿವಸಂ ಚತುರಂಗಬಲಂಬೆರಸರಸಂ ಮೂವಳಸು ಸುತ್ತಿ ಬಾಗಿಲಂ ತೆರೆವುದೆಂದು ಕೆಲಕಲರವಂ ಪೊಣ್ಮೆ ತದುಪಸರ್ಗಂ ಪಿಂಗುವನ್ನಮಾಹಾರ ಶರೀರನಿವೃತ್ತಿಗೆಯ್ದು ಸರ್ವಜ್ಞ ವಸ್ತುಸ್ರವಾಗಿ ತ್ರಿವಿಧ ಸ್ತ್ರೋತ್ರಮನೇಕ ಚಿತ್ತದಿ ವೃಷಭಾದಿ ಇಪ್ಪುತ್ತುನಾಲ್ಕರ್ಗಮುಪಜಾತಿವಂಶಸ್ಥ ಸ್ಕಂಧ ರಥೋದ್ಧತೆ ಮೊದಲಾದ ನಾನಾ ಜಾತಿ ವೃತ್ತಪಂದ್ಯಂಗಳಿಂ ಪೇಳಲ್ ತೊಡಗಿಯಷ್ಟಮತೀರ್ಥಕರ ಚಂದ್ರಪ್ರಭಸ್ವಾಮಿಗೈದು ಸ್ತುತಿಯಂ ಪೇಳಿ ಭೀಮಲಿಂಗಮನೀಕ್ಷಿಸುವುದುಂ ಜಿನ ಶಾಸನದೇವಿಯಿಂದಾ ಲಿಂಗದೊಳೆ ಮೂರು ಪುರುಷ ಪ್ರಮಾಣದ ಸುವರ್ಣಮಯ ಚಂದ್ರಲಾಂಛನಮಪ್ಪರ್ಹದ್ಭಟ್ಟಾರಕಪ್ರತಿಮೆಯು ಯಕ್ಷ ಯಕ್ಷೀ ಪ್ರತಿಮೆಯಿಂದಷ್ಟು ಮಹಾಪ್ರಾತಿಹಾರ್ಯದೊಡನೆ ಜಾಜ್ವಮಾನಮಾಗೆ ಸೂರ್ಯೋದಯಮಾದಂತುದ್ಭವಿಸಿ ತೋರುವುದುಂ ಮುನೀಶ್ವರಂ ಬಾಗಿಲು ತೆರೆದುಳಿದು ವೀತರಾಗನ ನುತಿಗೆಯ್ಯುತ್ತೆ ನಿಂದಿರ್ಪುದುಂ ಆ ಮಾಹಾತ್ಮ್ಯಕ್ಕತ್ಯಾಶ್ಚರ್ಯಮಾಗೆ ಶಿವಕೋಟಿಮಹಾರಾಜಂ ಭವ್ಯನಪ್ಪುದರಿಂ ನಿಜಾರಾಜಂವೆರಸಾ ಮುನಿಮುಖ್ಯರ ಶ್ರೀಪಾದಕ್ಕಂ ಪೊಡೆವಟ್ಟಿಪುದುಂ ಮಹಾವೀರ ವರ್ಧಮಾನಪರ್ಯಂತರ ನುತಿಗೆಯ್ದು ಕೈಯೆತ್ತಿಕೊಂಡು ಪರಸೆ ಅರಸಂ ಸದ್ಧರ್ಮಸ್ವರೂಪಮಂ ಸವಿಸ್ತರಂ ಕೇಳ್ದು ಸಂಸಾರ ಶರೀರಭೋಗನಿರ್ವೇಗದಿಂ ಶ್ರೀಕಂಠೆನೆಂಬ ಸುತಂಗೆ ರಾಜ್ಯಮನಿತ್ತು ಶಿವಾಯನಂಗೂಡಾಯಾ ಮುನಿಪರಲ್ಲಿಯೇ ಜಿನದೀಕ್ಷೆಯನಾಂತು ಶಿವಕೋಟ್ಯಾಚಾರ್ಯರಾಗಿ ರತ್ನಮಾಳಾದ್ಯನೇಕ ಶಾಸ್ತ್ರ ಪ್ರವರ್ಧಕರಾದರಾ ಮಹಾತ್ಮ್ಯದಿಂ ಕೆಲಂಬರಣುವ್ರತದಾರಿಗಳಾದರ್, ಕೆಲರ್ ಸಮ್ಯಕ್ತ್ವಮಂ ಕೈಕೊಂಡರಾ ಭಾವಿತೀರ್ಥಕರರಪ್ಪ ಸಮಂತಭದ್ರಸ್ವಾಮಿಗಳ್ ಪುನರ್ದಿಕ್ಷೆಗೊಂಡು ತಪಸ್ಸಾಮರ್ಥ್ಯದಿಂ ಚತುರಂಗುಲ ಸಮಂತಭದ್ರಸ್ವಾಮಿಗಳ್ ಪುರರ್ದಿಕ್ಷೇಗೊಂಡು ತಪಸ್ಸಾಮರ್ಥ್ಯದಿಂ ಚತುರಂಗುಲ ಚಾರಣತ್ವಮಂ ಪಡೆದು ರತ್ನಕರಂಡಕಾದಿ ಜಿನಾಗಮ ಪುರಾಣಮಂ ಪೇಳಿ ಸ್ಯಾದ್ವದವಾದಗಳಾಗಿ ಸಮಾಧಿವಡೆದರ್.

ವೃತ್ತ || ಪೂರ್ವಂ ಪಾಟಳಿಪುತ್ರಮಧ್ಯನಗರೇ ಭೇರೀ ಮಯಾ ತಾಡಿತಾ
ಪಶ್ಚಾನ್ಮಾಳಂವಸಿಧುಢಕ್ಕ ವಿಷಯೇ ಕಾಂಚೀಪುರೇ ವೈದುಷೇ
ಕರ್ನಾಟೇ ಕರಹಾಟಕೇ ಬಹುಭಟೇ ವಿದ್ವತ್ಕಟೇ ಸಂಕಟೇ
ವಾದಾರ್ಥಂ ವಿಜಹಾರ ಸಂಪ್ರತಿ ದಿನಂ ಶಾರ್ದೂಲವಕ್ರೀಡಿತಮ್ ||
ಅವಟತಟಿಮಟತಿ ಝಡಿತಿ ಸ್ಫುಟ ಚಟುವಾಚಾಟ ಧೂರ್ಹಟೇರಪಿ ಜಿಹ್ವಾ
ವಾದೀಭೇ ಸಮುಂತಭದ್ರೇ ಸ್ಥಿತವತಿ ಸತಿ ಕಾ ಕಥಾSನ್ಯೇಷಮ್ ||

ಟೀ || ಕಾಂಚ್ಯಾನ್ನಗ್ನಾಟಕೋsಹಂ ಮಲಮಲಿನ ತನುರ್ಲ್ಲಾಂಬುಸೇ ಪಾಂಡು ಸಿಂಧುಃ
ಪುಂಡ್ರೇ ದುಶ್ಯಾಕ ಭಿಕ್ಷರ್ದಶಪುರನಗರೇ ಮೃಷ್ಟಭೋಜೀ ಪರಿವ್ರಾಟ್
ವಾರಾಣಸ್ಯಾಮ ಭೂವಂ ಶಶಿಧರ ಧವಲಃ ಪಾಂಡುರಾಗಸ್ತಪಸ್ವೀ
ರಾಜನ್ಯೋಸ್ಯೋಸ್ತಿ ಶಕ್ತಿಃ ಪ್ರವದತು ಪುರತೋ ಜೈನ ನಿರ್ಗ್ರಂಥವಾದೀ

ಅವರ ಶಿಷ್ಯರ್ ಪ್ರಭಾಚಂದ್ರಸ್ವಾಮಿಗಳ್ ತರ್ಕಕರ್ಕಶರಾಗಿ ಸಾಂಖ್ಯ ಸೌಗತಾದಿ ಪ್ರತಿವಾದಿಗಳೆಂಬ ಮದೋನ್ಮತ್ತ ಗಜಸಮೂಹಕ್ಕೆ ಸ್ಯಾದ್ವಾದ ವನಕೇಸರಿಯಂತಿಪ್ಪುದುಂ ವೇದಾಂತಿಗಳೊಳ್ ಸಂವಾದಮಾಗೆ ಅಮವಾಸ್ಯೆಯೊಳೆ ರಾಕೇಂದುವಂ ಕಾಣಿಸಲೆಂದು ನುಡುವುದುಂ ಜ್ವಾಲಾಮಾಲಿನಿಯನಾರಾಧಿಸಿ ಹನ್ನೆರಡು ಗಾವುದ ಪರ್ಯಂತಂ ಚಂದ್ರಪ್ರಭೆ ಕಾಣ್ಬಂತೆ ಬೆಳ್ಳಿಯ ಹರಿವಾಣಮಂ ಮಂತ್ರಿಸಿ ಅಂತರಿಕ್ಷಕ್ಕೆ ಬಿಡೆ ನಾಲ್ಕು ಜಾವ ಪರ್ಯಂತರಂ ಚಂದ್ರೊದಯಂ ತೋರಿ ಮಿಥ್ಯಮಂ ಪತ್ತುವಿಡಿಸಿದರ್. ಅಲ್ಲಿಂದಿತ್ತಿಲ್ ಆಗಮಪುರಾಣ ಶಾಸ್ತ್ರಂಗಳ ಪೇಳ್ವರುಂ ಕೇಳ್ವರುಮಿಲ್ಲದೆ ವ್ಯಾಕರಣಾದಿ ಶಬ್ದ ಶಾಸ್ತ್ರ ಜ್ಞಾನಹೀನರಾಗಿಪ್ಪುದುಂ ಅರ್ಹದ್ವಜಕುಮಾರರ್ ಅಕಲಂಕ ನಿಷ್ಕಳಂಕರೆಂಬ ಸಹೋದರರ್ ಬೌದ್ಧರ ಗುರುವಪ್ಪ ಭಗವದ್ದಾಸನೆಂಬೈನೂರ್ವರ್ ವಟುಗಳ್ಗೆ ಶಬ್ದಶಾಸ್ತ್ರಮಂ ಪೇಳುತ್ತಿರಲಾ ಮಠದೊಳೆ ತಾಮಿರ್ವರುಮರಿಯದಂತು ಪೊಗಿ ವಿದ್ಯಾಭ್ಯಾಸಂಗೆಯ್ವುತ್ತಿರ್ದು ಬಿಟ್ಟುಪೋಗಲವಂ ನೋಡಿ ಸಮ್ಯಗ್ಧರ್ಶನ ಜ್ಞಾನ ಚಾರಿತ್ರಂಗಳ್ ಮೋಕ್ಷಮಾರ್ಗಮೆಂದಾ ಪತ್ರದೊಳ್ ಬರೆದಿರಿಸಲಾಚಾರ್ಯಂ ಬಂದದನೀಕ್ಷಿಸಿ ಜೈನ ಲಿಖಿತಮೆಂದರಿದೀ ಪಟುಗಳೊಳ್ ಜೈನರಿಪ್ಪರೆಂದರಿದವರಂ ಬಂದದನೀಕ್ಷಿಸಿ ಜೈನ ಲಿಖಿತಮೆಂದರಿದೀ ವಟುಗಳೊಳ್ ಜೈನರಿಪ್ಪರೆಂದರಿದವರಂ ಪರೀಕ್ಷಿಸಿ ತಿಳಿದು ಆಕಲಂಕ ನಿಷ್ಕಲಂಕರೀರ್ವರಂ ಪಿಡಿದು ಕಟ್ಟಿ ಕಾರಾಗರದೊಳಿಕ್ಕಿ ಅವರಂ ಕೊಲಲೆಂದಿಪ್ಪಿನಂ ಬೆನ್ನಟ್ಟಿಬರಲೊಂದು ಗಾವುದಾಂತದೊಳೆ ನಿಷ್ಕಲಂಕನಮ ಕೊಲ್ವುದುಂ ಅಲಕಂಕಂ ತಪ್ಪಿಸಿಕೊಂಡು ಬಂದಿ ದೀಕ್ಷೆಗೊಂಡು ದೇಸಿಗಣದ ಸಿಂಹಾಸನಕ್ಕಧೀಶನಾಗಿ ಸುಧಾಪುರದೊಳಿರ್ದಂ.

ಅತ್ತಲ್ ಬೌದ್ಧರ್ ರಾಜ್ಯದೊಳೆಲ್ಲಾ ವಿದ್ಯಂಗಳಿಂದತ್ಯಂತ ಪ್ರಾವಳ್ಯದಿಂ ಸಾಂಖ್ಯಾದಿ ಮತಂಗಳಂ ವಾದದಿಂ ಗೆಲ್ದು ವೀರಶೈವರ ಪ್ರಕಟಣಮಂ ಪಿಡಿದು ನೀವು ಕಟ್ಟಿಪ್ಪ ಲಿಂಗಮೇನಿದನೇಕ ಕಟ್ಟಿದಿರಾವ ಕಾರ್ಯವಿದರಂದಮನಾಮೂಲಂ ತಿಳಿವಂತು ಪೇಳಿಮಿಲ್ಲದೊಡೀ ಲಿಂಗಮಂ ಕಳೆವುದೆಂದು ಅಧ್ಯಾಹಾರದಿಂ ಚರ್ಚಿಸಿ ಕೆಲಂಬರೆಂದರ್ ಕೈಲಾಸದೊಳೆ ಪೋಪರೆಂದು ಬಸವಚರಿತ್ರಮಂ ಪೇಳಿದುದಕ್ಕೆ ನಿಮ್ಮ ಶಾಸ್ತ್ರಮೆಲ್ಲಂ ಗಂಧರ್ವನಗರ ವಿಳಾಸದಂತೆ ಅಸಂಖ್ಯಾಮಪ್ಪುದೆಂದವರ ವಾಂಛಿಕೆಯ ತಮ್ಮ ಧ್ಯಾಹಾರವಜ್ತದಿಂ ಚೂಣೀಕೃತಂ ಮಾಡಿ ಲೋಕದೊಳ್ ಗಂಡೆಲ್ಲ ಪುಲ್ಲಿಂಗಂ ಪೆಣ್ಣಾದವೆಲ್ಲಾ ಸ್ತ್ರೀಲಿಂಗಂಗಳ್ , ಅಲ್ಲವೆ ಶಿಶ್ನಕ್ಕಂ ವ್ಯಂಜನಕ್ಕಂ ಲಕ್ಕಣಕ್ಯಂ ಲಿಂಗಶಬ್ದಮಪ್ಪುದರಿಂದಿದಾವ ಲಿಂಗಮೆಂದು ಬೆಸಗೊಳೆ ಶೈವಪುರಾಣಮಂ ಬಲ್ಲರ್ ಕೆಲರಿಂತೆಂದರ್.

ಪೂರ್ವದೊಳ್ ಈ ಭುವನಕ್ಕಾದಿಯೊಳೊಂದು ಸಚರಾಚಮಿಲ್ಲದನಂತಕಾಲಂ ಪೋಪಿನಮಾಶ್ರಯದೊಳ್ ಬದ್ಬುದಮೆಂದಾಗಲನುಕ್ರಮದಿಂದೆಳೆದೆರಡು ಹೋಳಾಗಿ ಮೇಲೊಂದು ಕೆಳಗೊಂದು ಭಾಗಮಾಗಿ ಸ್ವರ್ಗ ಮರ್ತ್ಯಗಳೆರಡಾಗಲಂತದರ ನಡುವೆ ತನ್ನಿಂತಾನೆ ಸದಾಶಿವಂ ಪುಟ್ಟಿ ಬೆಳೆದಣ್ದೆಸೆಯಂ ನೋಡಿದೊಡಾರುಮಿಲ್ಲದಿರೆ ಶಂಕಿಸಿ ಆ ಶಂಕರಂ ಬಲದ ಬಾಹುವನೀಕ್ಷಿಸೆ ಬ್ರಹ್ಮನುಂ ಎಡದ ಭಾಗಮಿನೀಕ್ಷಿಸಲ್ ವಿಷ್ಣುವುಂ ಪುಟ್ಟೆ ಕಾಂತೆಯರಿಲ್ಲದನೇಕ ಕಾಲಂ ಕಾಮತಾಪದಿಂ ಬೆಂದು ಬಿಸುಸುಯ್ದು ಮೂವರುಂ ಮರುಗುತ್ತುಂ ಹನಿಭೂಮಿಯೊಳ್ ಬಳಹದಿಂದೊಂದು ಸ್ತ್ರೀರೂಪ ಬರೆಯಲದಕ್ಕೆ ಬ್ರಹ್ಮಂ ಜೀವಮಂ ಪಡೆಯಲೀಶ್ವರಂ ಬತ್ತಲೆಯಿರ್ದ ಸ್ತ್ರೀಗಂ ವಸ್ತ್ರಮನುಡಿಸಳವಳಂ ಮೂವರುಂ ನನಗೆ ತನಗೆಂದೋರೋರ್ವರುಂ ಕೇಶಾಕೇಶಿ ಮುಷ್ಟಾಮುಷ್ಟಿ ಸಖಾನಖಿ ದಂತಾದಂತಿ ದಂಡಾದಂಡಿಗಳಿಂ ಮಹಾಯುದ್ಧಂಗೆಯ್ಯುತ್ತಿರೆ ಸಕಳ ದೇವತೆಗಳುಂ ಬಂದು ಬಾರಿಸಿಯನುಚಿತಮಂ ನೆಗಳಲಾಗದೆಂದಾಳೋಚಿಸಿ ತಿಳಿದಿಂತೆಂದರ್, ಬರೆದವಂ ತಂದೆ ಚೈತ್ಯನ್ನಗೊಟ್ಟಂ ತಾಯಿ ವಸ್ತ್ರಂಗೊಟ್ಟು ಗಂಡನೆಂದಾ ಕನ್ನೆಯಂ ಶಿವಂಗೆ ಕುಡೆ ಸುಖದಿನಿಷ್ಟ ಭೋಗ ಕಾಮಮನನುಭವಿಸುತ್ತಿಪ್ಪುದುಂ ಹರಿಬ್ರಹ್ಮರ್ ಸೈರಿಸದೆ ಬಂದಾ ಕನ್ನೆಯಂ ಝಂಪಿಸೆಯಾಕೆ ಲಜ್ಜೆಯಿಂ ನೀರಾಗೆ ಪರಿದು ಗಂಗೆಯೆಂಬ ನದಿಯಾಗಿ ಪೋಗೆ ಮೂವರುಮೇಕಾಕಾರಿಗಳಾಗೆ ಮುನ್ನಿನಂತೆ ಹರಿಯು ಸ್ತ್ರೀರೂಪಂ ಬರೆದು ಬ್ರಹ್ಮಂ ಜೀವಂಬಡೆಯೆ ಮಹಾದೇವನುಡಕೊಟ್ಟು ಸುಖಮಿರೆ.

ಶ್ಲೋಕ || ಕಾರ್ಯಂ ವಿಷ್ಣುಃಕ್ರಿಯಾ ಬ್ರಹ್ಮಾ ಕಾರಣಂ ತು ಮಹೇಶ್ವರಃ
ಏಕಮೂರ್ತೇಸ್ತ್ರಯೋ ಭಾಗಾಃ ಬ್ರಹ್ಮ ವಿಷ್ಣು ಮಹೇಶ್ವರಾಃ

ಎಂಬುದರಿಂದಾ ಮೂವರಿಂ ಸಚರಾಚರ ಜೀವರಾಶಿಗಳಾಗೆ ಅನಂತಯುಗಂ ಪೋಪಿನಂ ಬ್ರಹ್ಮ ವಿಷ್ಣುಗಳಿರ್ವರುಂ ನಾನಧಿಕಮ ತಾನಧಿಕನೆಂದು ವಿವಾದಿಸಿ ಓರೊರ್ವರುಂ ಗರ್ವದಿಂ ಸೆಣಸುತ್ತಿರೆ ಪರಮೇಶ್ವರಂ ಪರೀಕ್ಷಿಸಲೆಂದು ತಾಂ ಬೆಳೆದುನಿಂದು ಕಂಜ್ಞಾಕ್ಷನಂ ಕರೆದೆನ್ನ ಪಾದಮನೀಕ್ಷಿಸಬಪ್ಪುದೆಂದುಂ ವಿರಿಂಚಿಯೆನೆನ್ನ ಜಟಾಮಕುಡಮನೀಕ್ಷಿಸಬಪ್ಪುದೆಂದುಂ ಈರ್ವರೊಳಾರ್ ಮುನ್ನಂ ಮುಟ್ಟಿಬಂದರವರ್ ಲೋಕಪಂದ್ಯರತ್ನಧಿಕರಪ್ಪರೆಂಬುದುಂ ಆ ಬೆಸನಂ ಕೈಕೊಂಡು ಬ್ರಹ್ಮಂ ಈಶನ ಲಿಂಗಪ್ರದೇಶದಿಂ ಪೊರಮಟ್ಟು ಅಣುವಾಕಾರದಿಂ ಪೋಗುತ್ತಮನೇಕ ಕ್ಲೇಶಾಯಾಸದಿಂದೆತ್ತಾನುಂ ನಾಭಿಪ್ರದೇಶಂ ಬಪ್ಪಿನಂ ಮೇಗಣಿಂ ಬಪ್ಪ ಕೇತಕಿಕುಸುಮಮಂ ಕಂಡು ಎಲ್ಲಿದಂ ಬಂದೆಯೆಂದರಂ ಬೆಸಗೊಳಲಾನೀಶ್ವರನ ಪಿಂಗಲ ಜಟಾಜೂಟಮುಕುಟದಿಂ ಬಂದೆನೆಂದೊಡಲ್ಲಿಂ ಬಂದೆನಿತು ದಿನಮೆನೆ ದಿವ್ಯಷಣ್ಮಾಸಮಾಯ್ತೆಂಬುದುಂ ಮನಂಗುಂದಿ ಪೋಗಲೆನ್ನಳವಲ್ಲೆಂದು ಕೇದಗೆಯಂ ನಾನಾಪ್ರಕಾರದಿಂ ಪ್ರಾರ್ಥಿಸಿ ನೀನೀಶ್ವರನ ಮುಂದೆ ಪಿಂಗಳ ಜಟಾಜೂಟದ ಸಮೀಪದೊಳೀತನಂ ಕಂಡೆನೆಂದು ಪೇಳೆಂದೊಡಂಬಡಿಸಿ ಬಂದು ಶಶಿಧರನ ಮುಂದೆ ನಿಂದು ದೇವಾ ನಾ ನಿನ್ನ ಪಿಂಗಳ ಜಟಾಜೂಟಮಂ ನೋಟಿಬಂದೆನಲ್ಲಿರ್ದ ಕೇದಗೆಯಂ ಕೇಳಿಮೆಂದು ಬಿನ್ನವಿಸಲಾ ಕೇದಗೆಯನೀಶ್ವರಂ ಬೆಸಗೊಳಲೀತಂ ಜಟಾಮಕುಟಕ್ಕೆ ಬಂದಿರ್ದನೆಂದು ಪುಸಿಯಂ ನುಡಿಯೆ ಹರನರಿದುಸಿದಿಪ್ಪುದುಂ.

ಅತ್ತಲ್ ಕಮಲಾಕ್ಷರನೀಶ್ವರನ ಲಿಂಗದ ಸಮೀಪದಿಂ ಪೋಗಿಯನೇಕ ದಿವಸಂ ನಡೆದು ಜಂಘೆಯಂ ಮುಟ್ಟಿ ಬಳಲ್ದು ಮುಂದೆ ನಿಂದು ದೇವಾ ನಾ ನಿನ್ನ ಪಿಂಗಳ ಜಟಾಜೂಟಮಂ ನೋಡಿಬಂದೆನಲ್ಲಿರ್ದ ಕೇದಗೆಯಂ ಕೇಳಿಮೆಂದು ಬಿನ್ನವಿಸಲಾ ಕೇದಗೆಯನೀಶ್ವರಂ ಬೆಸಗೊಳಲೀತಂ ಜಟಾಮಕುಟಕ್ಕೆ ಬಂದಿರ್ದನೆಂದು ಪುಸಿಯಂ ನುಡಿಯೆ ಹರನರಿದುಸಿರದಿಪ್ಪುದುಂ.

ಅತ್ತಲ್ ಕಮಲಾಕ್ಷನೀಶ್ವರನ ಲಿಂಗದ ಸಮೀಪದಿಂ ಪೋಗಿಯನೇಕ ದಿವಸಂ ನಡೆದು ಜಂಘೆಯಂ ಮುಟ್ಟಿ ಬಳಲ್ದು ಮುಂದೆ ನನಗಸಾಧ್ಯಮೆಂದು ಅಹಂಕಾರಂಗುಂದಿ ಮುಗುಳ್ದು ಬಂದು ಕೈಗಳಂ ಮುಗಿದೆಲೆ ವಿಭುವೆ ನಿನ್ನಂಘ್ರಿಯಂ ಕಾಣಲೆನಗಸಾಧ್ಯಮಾಗಿ ಜಂಘೆಯಂ ಕಂಡುವಂದೆನೆಂಬುದುಂ ಪುಸಿಯಲ್ಲೆಂದಾ ಪ್ರದೇಶಕ್ಕೆ ಜಂಗುಮೆಂಬ ಕಿಂಕಿಣಿಯನಲಿಗಿಸಿ ಮೆಚ್ಚಿ ರಾಜಪೂಜ್ಯತೆಯಿಂ ಬಾಳೆಂದ ಹರಿಗೆ ವರವಿತ್ತು ವಿರಿಂಚಿಗೆ ಮುಳಿದು ನೋಡಿ ಸತ್ಯಾದುತ್ಪದ್ಯತೇ ಧರ್ಮಮೆಂಬುದರಿಂ ನೀಂ ಪುಸಿಕಂ ಭಿಕ್ಷಾ ವೃತ್ತಿಯಿಂ ಬಾಳೆಂದುಮಾರಿಂದಂ ಪೂಜೆಗೊಳ್ಳದಿರೆಂದುಮಾ ವಿಧಿಯಂ ನುಡಿದು ಪಕ್ಷದಿಂದನೃತಮಂ ನುಡಿದು ಕೇದಗೆಯಂ ಕಂಟಕಿಯಾಗಿ ಜಟಾಮಕುಟಕ್ಕಯೋಗ್ಯನಾಗೆಂದು ಶಪಿಸಿದರಿಂ ಕೇಗೆಮುಳ್ಳು ಪುಟ್ಟಿ ಈಶಂಗಯೋಗ್ಯಮಾಯ್ತೆಂದು ಪೇಳೆ ಈಶ್ವರನ ಪಾದಮಂ ಪಾತಾಳಲೋಕದವರುಂ ಲಿಂಗಮಂ ಮಧ್ಯಮಂ ಲೋಕದವರುಂ ಶಿರಮನೂರ್ಧ್ವಲೋಕದವರುಂ ಪೂಜಿಸಿದವರೆಂದು ವೀರಶೈವರ್ ನುಡಿಯೆ ಬೌಧ್ಧರೆಂದರ್ ಕೇತಕಿ ಈಶ್ವರನೊಳ್ ಅಪಸಾಕ್ಷಿಯಿಂ ಕಂಟಕಿಯಾಯಿತು. ಬೊಬ್ಬುಳಿ ಬೇಲತರಿ…………. ಗದುಗು ಪಲಸು ಮುಂತಾಗಿಯನೇಕವಾದ ಮುಳ್ಳುಗಿಡಂಗಳ್ಗಾರು ಶಾಪವಿತ್ತರ್ ಮಧ್ಯಲೋಕದೊಳೆಲ್ಲರ್ ಲಿಂಗಪೂಜೆಗೆಯ್ಯದೆ ಕೆಲಂಬರೆ ಪೂಜೆಗೆಯ್ದುದೇಕಿದೆಲ್ಲ ಮಸಂಭಾವ್ಯಮೆನೆ ಮತ್ತೆ ಕೆಲಂಬರ್ ಶೈವಪುರಾಣೀಕರೆಂದರ್ ಪರಮೇಶ್ವರಂ ಪಾರ್ವತಿಯೊಳಹರ್ನಿಶಂ ಕಾಮಸೇವೆಗೆಯ್ಯುತ್ತಿರ್ದೊದು ದಿನಂ ದಾರುಕಮೆಂಬ ವನಕ್ಕೆ ಪೋಗಲಲ್ಲಿ ತಾಪಸನ ವಧೂಟಿಯಿರಲವಳನೀಕ್ಷಿಸಿ ಮೋಹದಿನಾಕೆಯೆನೊಳಿಸಿ ಆಕೆಯೊಳ್ ನಿಚ್ಚ ನಿಚ್ಚ ಕೂಡಿ ಸುರತಕ್ರೀಡೆಯೊಳಿರಲಾಕೆ ಗಂಡನೊಳ್ ಉದಾಸೀನೆ ಮಾಡಲದನಾರಯ್ಯಲೆಂದಾ ತಾಪಸಂ ಸ್ನಾನಕ್ಕೆ ಪೋಪೆನೆಂದು ಸತಿಯೊಳ್ ನುಡಿದು ಪೋಗಿ ಅರಿಯದಂತು ಮುಗುಳ್ದಾ ಮನೆಯೊಳಡಗಿರಲ್ ಹರಂ ಬಂದಾ ವಧೂಟಿಯೊಡನೆ ಕ್ರೀಡಿಸುತ್ತಿರೆ ಅದನಾ ಋಷಿ ಕಂಡು ಕೋಪದಿಂದೀತನ ನಿಡುಲಿಂಗಂ ಸಂದಿಗೆ ಹರಿದು ಬೀಳಲೆಂದು ಶಾಪಂಗುಡೆ ತಕ್ಷಣದೊಳೆ ಲಿಂಗಂ ಹರಿದುಬೀಳುವುದುಂ ಈಶ್ವರಂ ಕೋಪದಿಂ ಹರಿದು ಬಿದ್ದ ಲಿಂಗಮೀ ತಾಪಸನ ಹಣೆಯಂ ಪತ್ತುಗೆಂದು ನಿಯಮಂಗುಡಲಾ ಲಿಂಗಂ ತಾಪಸನ ಪಣೆಯಂ ಪತ್ತಿ ಬೆಳೆಯುತ್ತಮಿರಲೀತನೀಶ್ವರನೆಂದರಿದು ಪಾದಾನತನಾಗಿ ನಾಂ ಮಾಡಿದಪರಾಧಮಂ ಕ್ಷಮಿಸಿ ಪಣೆಯ ಲಿಂಗಮಂ ಕಳೆದು ಕರುಣಿಪುದೆಂದು ದೈನ್ಯದಿಂ ಬೇಡಿಕೊಳೆ ಕೈಲಾಸಕ್ಕೆ ಪೊತ್ತುಬನ್ನಿಮೆಂದೀಶಂ ಪೋಪುದುಂ ತಾಪಸಂಗೆ ಪರಲಾರದತಿಭಾರದಿಂ ಕೈಲಾಸಮನೇರಿಬಪ್ಪುದುಂ ಪಾರ್ವತಿ ಕಂಡಟ್ಟಹಾಸಂಗೆಯ್ದು ನಗುತ್ತಿರಲೀಶ್ವರಂ ಕಂಡು ಸಂತುಷ್ಟನಾಗಿರಲಾ ಲಿಂಗಮನಿಳುಹಿಸೊಡದು ಪರ್ವತದಾಕಾರದಿಂ ಕೈಲಾಸದಿದುರುಳುತ್ತೆ ಪರ್ವತಮಂ ನದಿಯಂ ಪುರ ಮೊದಲಾಗೆ ಚರಾಚರ ಪ್ರಾಣಿಗಳೆಲ್ಲ ಮನರೆಯುತ್ತಮುರುಳ್ವುದಂ ಕಂಡೆಲ್ಲರುಂ ಮೊರೆಯಿಡೆ ಶರ್ವಾಣಿ ಕಾರುಣ್ಯದಿಂ ಯೋನಿಯೊಳ್ ಸ್ಥಾಪನೆಗೆಯ್ದು ಪೂಜಿಸುವುದೆಂದು ಪೇಳಲಾ ಕ್ರಮದೊಳೆ ಪೂಜಿಸುವರೆಂದು ಪೇಳೆ ಮತ್ತೆ ಕೆಲಂಬರೆಂದರ್ ಶುಕಸಪ್ತತಿ ಕಥೆಯೊಳೊರ್ವ ಮಹಾ ಋಷಿಪತ್ನಿಯ ಪ್ರತಿವ್ರತಾಮಾಹಾತ್ಯ್ಮಂ ಲೋಕಕತ್ರಯ ಪ್ರಸಿದ್ಧಿಯಾಗೆ ಕೈಲಾಸದೊಳೀಶನ ಮುಂದೆ ಆ ಮಹಾಸತಿಯಮ ಪೊಗಳೆ ಈಶಂ ನೋಡಲೆಂದು ತಾನೆ ಬಂತ್ಯಂತ ಸ್ಥೂಲಕಾಯಮಪ್ಪ ಗಡವಗತ್ತೆಯಾಗಿ ಆಕೆಯ ಇದಿರೊಳ್ ಸುಳಿಯುತ್ತುಂ ಲಿಂಗೋತ್ಥಾಪನೆಯಿಂ ಸರತ್ನಿಪ್ರಮಾಣದ ಲಾಂಗಲೋನ್ನತಮಾಗೆ ಆಂ ಆಂ ಎಂಬ ಗಾರ್ದಭೋಚ್ಚಸ್ವರದಿಂ ಮೇಲ್ವಾಯುತ್ತುಂ ಬಪ್ಪುದುಂ ಕಂಡಾಕೆ ಈ ಮೇಡ್ರಂ ಷಡ್ಭಾಗಮಾಗಲಿ ಎಂದು ಶಾಪವಿಕ್ಕೆ ಚತುರಂಗುಲಮುಳಿಯಲುಳಿದೈದು ಖಂಡಂಗಳ್‌ಪರಮೇಶನ ಲಿಂಗಂಗಳಾದುದರಿಂ ಲೋಕಸಂಹಾರಂ ಮಾಡುತ್ತಿರಲಾ ಪೂಜಾಯೋಗ್ಯಂಗಳೆಂದು ಐದು ಸ್ಥಾನಂಗಳೊಳ್‌ಶಂಕರಲಿಂಗಂ ರಾಮಲಿಂಗಂ ಮೊದಲಾಗೈದುಮಂ ಸ್ಥಾಪಿಸಿ ಪೂಜಿಸಿ ವರಮಂ ಪಡೆದರ್. ನಾಲ್ಕಂಗುಲ ಪ್ರಮಾಣ ಪ್ರಜೋತ್ಪತ್ತಿ ಕಾರಣಮಾಗೆ ಮನುಷ್ಯರ್ಗೆ ನಿಂತು ಪ್ರಜಾಪತಿಯೆಂಬ ಪೆಸರಾಯ್ತೆಂಧು ಲಿಂಗಪ್ರಪಂಚಮಂ ಪೇಳೆ ಸೌಗತರೆಲ್ಲಂ ಗಹಗಹಿಸಿ ನಕ್ಕದೆಲ್ಲಮಂ ಪೂರ್ವಪಕ್ಷಂಗೆಯ್ದಸಂಭಾವ್ಯಮಾಗೆ ತಿರಸ್ಕಾರಂ ಮಾಡೆ ಲಿಂಗೋತ್ಸರ್ಜನಂ ಮಾಳ್ಪುದೆನೆ ವೀರಶೈವರೆಲ್ಲಂ ಪರಾಜಿತರಾಗಿ ನಾಳೆ ಬಿಟ್ಟುಕಳೆವೆನೆಂದು ಬಂದು ಸುಧಾಪುರದ ಸಿಂಹಾಸನಾಧೀಶ್ವರರಾದ ಭಟ್ಟಾಕಲಂಕರ ಸಮಿಪಮನೆಯ್ದಿ ನಿಜವೃತ್ತಾಂತಮೆಲ್ಲಮಂ ಪೇಳೆ ಕೇಳ್ದು ಜೀವಸ್ಥಾಪನೆಯಂ ಮಾಡಲೆಂದವರ್ ಪ್ರಾರ್ಥಿಸುವುದನೊಡಂಬಟ್ಟು ಭಟ್ಟಾರಕರ್ ತಾವೆ ಮರುದಿನಂ ಬಂದು ಪಿಂಛಮಂ ಕಾಣಲೀಸದೆ ಬೌದ್ಧಸಭೆಯಂ ಪೊಕ್ಕು ಸಿಂಹಾಸನಾರೂಢರಾಗಿ ಸುಗತಶಾಸ್ತ್ರಂ ಪೂರ್ವಪಕ್ಷಕಕ್ಕೆ ತಂದು ಲಿಂಗಮೆಂದೊಡೆ ಅಂಕಮದು ಭಗವತ್ಸ್ವರೂಪನ ಮೂರ್ತ ನಾದ ಬಿಂದು ಕಳಾಯುಕ್ತಮೋಂಕಾರಪ್ರಣವಮದು ಪದಸ್ಥ ಪಿಂಡಸ್ವರೂಪಸ್ಥ ರೂಪಾತೀತದಿಂ ನಾಲ್ಕು ತೆರದ ಧ್ಯಾನಮಿದು ಸರ್ವಜ್ಞ ಪರಮಾತ್ಮಂ ಕ್ರಮದಿಂ ಪದಸ್ಥಾದಿ ಧ್ಯಾನಗೋಚರನಪ್ಪುದರಿಂದಾ ನಿತ್ಯ ನಿರಂಜನ ನಿರ್ವಿಕಲ್ಪ ನಿರುಪಮ ನಿರುಪಾಧಿ ಜ್ಞಾನತೆಮೂರ್ತಿಯಪ್ಪುದರಿಂದ ಮೂರ್ತನಾದ ಚಿದಾತ್ಮಧ್ಯಾನಮುಂ ಬೆಂದು ಬಾಹ್ಯಚಿಹ್ನೆ ಕಾಣ್ಬುದಕ್ಕೋಸ್ಕರ ವ್ಯವಹಾರವಿಲ್ಲದೆ ನಿಶ್ಚಯಮಾದುದರಿಂ ಜ್ಞಾನಲಿಂಗದೊಳೆ ಪರಮಾತ್ಮನೈಕ್ಯೆಮೆಂದು ಪೊರಗೆ ಶರೀರದೊಳೆ ಲಿಂಗಮಂ ಧರಿಸಿ ಭಕ್ತಿಗೆಯ್ಯಲ್ವೇಳ್ವುದದುಮಿಲ್ಲದೊಡೆ ಬಾಹ್ಯಜರುಮಿಲ್ಲಮದರಿಂ ಪ್ರಾಣಲಿಂಗಮುಳ್ಳ ಪರಮಾತ್ಮ ಲಿಂಗವರಿಯಲ್‌ಬಾಹ್ಯಶರೀರದೊಳ್‌ಲಿಂಗಮಿರಲ್ವೇಳ್ಕುಮೆಂದದರ ಪ್ರಮಾಣ ಷೋಡಶೋಪಚಾರ ಶಕ್ತಿಗಳಂ ಸಲಕ್ಷಣಂ ಪೇಳೆ ಸಮ್ಮತಿಯಾಗಿ ನಿರುತ್ತರಮಾಗೆ ಅಕಲಂಕಾಷ್ಟಕಕಮೆಂಬ ವೃತ್ತಮಂ ಪೇಳ್ದೊಡೆ ಸತ್ತಂ ಪುಟ್ಟಂ ಕೊಟ್ಟಂ ಕೆಟ್ಟಂ

ಶ್ಲೋಕ| ಭಸ್ಮೀ ಭೂತಸ್ಯ ದೇಹಸ್ಯ ಪುನರಾಗಮನಂ ಕುತಃ
ತಸ್ಮಾತ್
ಸುಖೈಷೀ ಜೀವೋsಯಂ ಋಣಂ ಕೃತ್ವಾ ಘೃತಂ ಪಿಬೇತ್‌||
ಪೂರ್ವಜನ್ಮಕೃತಂ ಪಾಪಂ ಬಾಧತೇ ಸರ್ವಜಂತುನಿಷು
ದೃಷ್ಟ್ವಾ ಸುಖಂ ಮಹಾದುಃಖಂ ಕಥಂ ನಾಸ್ತಿ ಭವಂ ತವ ||
ಮದ್ಯ ಮಾಂಸಮಧೋರ್ಭೋಕ್ತ ಚೌರ್ಯೋ ದ್ಯೂತಾಕೃತ್ಸದಾ
ಸ ಯಾತಿ ನರಕಂ ಘೋರಂ ಯೋ ಮರ್ತ್ಸೋ ಜ್ಞಾನಶೂನ್ಯತಃ ||
ಬೌದ್ಧರೆಂದರ್:

ಮಾಂಸಸ್ಯ ಮರಣಂ ನಾಸ್ತಿ ಮಾಂಸಸ್ಯ ವೇದನಾ
ವೇದನಾಮರಣಾಭಾವೇ ಕೋ ದೋಷೋ ಮಾಂಸಭಕ್ಷಣಾತ್
‌||

ಎಂಬುದುಂ

ಗೂಥಸ್ಯ ಮರಣಂ ನಾಸ್ತಿ ನಾಸ್ತಿ ಗೂಥಸ್ಯ ವೇದನಾ
ವೇದನಾಮರಣಾಭಾವೇ ಕೋ ದೋಷೋ ಗೂಥಭಕ್ಷಣಾತ್
‌||

ಎಂಬುದರಿಂ ಪೇಯಾಪೇಯ ಭಕ್ಷಾಭಕ್ಷ್ಯ ವಿಚಾರವಿಲ್ಲದರ್ಗಪ್ಪುದೆಂದು ಪೇಳಿ ಜಯಪತ್ರಂಗೊಂಡು ಬಪ್ಪಲ್ಲಿ ಪಿಂಛಮಂ ಕಂಡು ಶ್ರವಣರೆಂದರಿದು ಅತ್ಯಂತ ದ್ವೇಷಿಗಳಾಗಿ ಜೈನರ ಪೆಸರಿಲ್ಲದಂತೆ ಮಾಡಲೆಂದು ಹೇಮಶೀತಳಮಹಾರಾಜಂ ಬುದ್ಧ ಭಕ್ತನಪ್ಪುದರಿಂದಾತನಲ್ಲಿಗೆಯ್ದಿ ಜೈನರ್ಗಂ ನಮಗಂ ವಾದಂ ಬಂದಿಪ್ಪುದರಿಂದಕಲಂಕರಂ ಕರೆಸಿಮೆಂದು ಬರಿಸಿ ಜೈನರ್ ಸೋತು ಬಂದಡವರಂ ಕಲ್ಲುಗಾಣಕಿಕ್ಕಿ ಉಳಿದೆಲ್ಲರ ಸರ್ವಸ್ವಮಂ ಕವರ್ತೆಗೆಯ್ದವರಂ ನಿಶ್ಶೇಷಮಾಗೆ ಕರ್ಣಾಟಾಂಧ್ರ ತುಳುವ ಪಾಂಡ್ಯ ಚೋಳ ಮೊದಲಾದ ದೇಶದಿಂ ಪೊರಮಡಿಸುವುದು, ಬೌದ್ಧರ್ ಸೋತು ಬಂದಡವರನಂತೆ ಗೆಯ್ವುದೆಂದು ಭಾಷಾಪತ್ರಮಂ ಬರೆಸಿಕೊಟ್ಟು ಸಭೆಯೊಳ್‌ತಾರಾಶಕ್ತಿದೇವಿಯ ಘಟಸ್ಥಾಪನೆಗೆಯ್ದು ಪೂಜಿಸ ಜವನಿಕೆಯನಿಟ್ಟು ಶೂನ್ಯವಾದಮನೆತ್ತಿ ಪದಿನೆಂಟು ದಿವಸಂಬರಂ ವಾದಂಗೆಯ್ದು ತಾರಾದೇವಿ ಸತ್ಯವಾಕ್ಯಮಂ ನಿಲಲೀಸದೆ ಪ್ರತಿವಾಕ್ಯಂ ಗೊಡುತ್ತಿರ್ದೊಡೆ ಪದಿನೇಳು ದಿವಸಂ ಕಳಿಯೆ ಯತೀಶ್ವರಂ ಚಿಂತಾಕ್ರಾಂತಸ್ವಾಂತರಂಗನಾಗಿ ವಿವಿಕ್ತಶಯನನಾಗೆ ಬೆಳಗಪ್ಪ ಸಮಯದೊಳಾಮ್ರಕೂಷ್ಮಾಂಡಿನಿಯು ಸ್ವಪ್ನದೊಳ್‌ನೀನು ಚಿಂತೆಯಂ ಬಿಡು ಪುನಃ ಪ್ರಶ್ನೆಗೆಯ್ದೊಡೆ ನಿರುತ್ತರಮಕ್ಕುಂ ಜಯಪ್ರದಮಪ್ಪುದೆಂದು ಪೇಳೆ ಬೆಳಗಾದಾಗಳಾ ಕ್ರಮದೊಳ್‌ಪೇಳ್ದು ಜಯಪತ್ರಂಗೊಂಡು ಬೌದ್ಧರಂ ಗೆದ್ದು ಘಟವಾದಮಂ ಜಯಿಸಿ ವಾಮಪಾದದಿಂದೊದೆದುಬಿಟ್ಟರ್.

ಅದೆಂತೆಂದೊಡೆ ಮುನ್ನ ಬೌದ್ಧರೆಲ್ಲರುಂ ಕೂಡಿ ಜೈನಮತಾನುಸಾರಿಗಳೊಳತ್ಯಂತ ವಿರೋಧದಿಂದಕಲಂಕಸ್ವಾಮಿಗಳಂ ಗೆಲ್ವೆವೆಂದು ಹಿಮಶೀತಲಮಹಾರಾಜನಲ್ಲಿ ಗೆಯ್ದಿ ನಿಜಾಭಿಪ್ರಾಯಮಂ ಪೇಳೆಯಾ ಮಹಾನುಭಾವರೊಳ್‌ನಿಮಗೆ ವಾದಂ ಸಲ್ಲದವರ್ ಸತ್ಯವಾದಿಗಳವರಿಂ ಮನದ ಸಂದಯಂ ಪಿಂಗಿ ನಿಶ್ಚಯಜ್ಞಾನ ಪುಟ್ಟಿ ಮುಂದಣ ಸದ್ಗತಿಸಾಧನಮಪ್ಪುದೆನೆ ಅದ್ವಯವಾದಿಗಳೆಂದರ್.

ಜೀವಂ ಧರ್ಮ ಕಕರ್ಮಮನುಪಾರ್ಜಿಸಿ ತತ್ಫಲಮನನ್ಯ ಭವಂಗಳೊಳ್‌ಉಂಬನೆಂಬುದು ಗಡಾ ಪುಸಿಯದರಿಂ ಪರತ್ರಯಮನಾರು ಕಂಡರ್ ಬರಿಯ ಮಾತಂ ಕೇಳಿ ದೆಸೆಗೆಟ್ಟು ಜೀವಮುಂ ಗತಿಯುಂ ಧರ್ಮ ಕರ್ಮಂಗಳುಮೊಳವೆಂಬೀ ಗಾವಿಲತನವೇಕೆ? ಸತ್ತವರನಾರು ಕಂಡರದರಿಂ ಜೀವಮುಂಟೆಂಬುದಕ್ಕಂ ಶುಭಾಶುಭಕರ್ಮಮೊಳವೆಂಬುದಕ್ಕಂ ತತ್ಫಲಮಂ ಮರುಭವದೊಳ್‌ಮಗುಳ್ದು ತಾವೆಯುಂಬರೆಂಬುದಕ್ಕಂ ಸ್ವರ್ಗಾಪವರ್ಗಮಿಪ್ಪುದಕ್ಕಂ ಸಾಕ್ಷಿಗಳಾರಿಪ್ಪರಲ್ಲದುದರಿಂದಿದೆಲ್ಲಂ ಗಾಳಿಯಂ ಗಂಟಿಕ್ಕುವಂತೆ ಮಾಯಾವ್ಯವಹಾರಮಿದಂ ನಂಬಿ ಮರುಳಾಗಿ ತಪದಿಂದೊಡಲನೊಣಗಿಸಿ ನಿಷ್ಕಾರಣಂ ರಾಜ್ಯದೊಳಾದ ಭೋಗೋಪಭೋಗಂಗಳಂ ಕೆಡಿಸವೇಡೆಂಬ ಸೌಗತಾಚಾರ್ಯನ ಮಾತನರಸಂ ಕೇಳಿ ತನ್ನೊಳಿಂತೆಂದಂ

ರವಿಯಿಲ್ಲದಂದು ಜ್ಯೋತಿರಿಂಗಣಂಗಳು ಪ್ರಕಾಶಿಸವು. ಸೂರ್ಯೋದಯಮಾಗಲ್‌ಕಾಣದಂತೆ ಕುವಾದಿಗಳಪ್ಪ ಧೂರ್ತರ್ ಮಹಾವಾದಿಗಳಿಲ್ಲದಂದು ಮುಕ್ಕಿ ಸೊಕ್ಕಿ ತೇಜಮಂ ತೋರ್ಪರ್. ಮಹಾವಾದಿಗಳಾಸ್ಥಾನದೊಳ್‌ಕುಂದಿ ಕುಸಿದೊಳ ಸಾರ್ದು ಕೇತಕಿಯನೇರಿದ ಕೋಡಗದಂತೆ ಸಿಡಿಮಿಡಿಗೊಂಡುಸುರದಿಪ್ಪರಲ್ಲದೆ ತಲೆಯೆತ್ತಲಣ್ಮರೆಂದು ಭಟ್ಟಾಕಲಂಕರಂ ಬರಿಸಿ ಮಹಾಸಭೆಯಂ ಪುಗಿಸಿ ವಿನಮಿತನಾಗಿ ಭಾಷಾಪತ್ರಿಕೆಯಂ ಬರೆಸಿ ಮೋಕ್ಷದ ನಿಚ್ಚಣಿಗೆಯೆನಿಪ ಜಿನಧರ್ಮಮಂ ಕೇಳುತ್ತಿರೆ ಷಡಭಿಜ್ಞಂ ಮೊರೆಯುಂ ಅಘಮುಂ ಅಳಿಪುಂ ಅರಿಪುಂ ಪರತ್ರಮುಂ ಜೀವನುಮಿಲ್ಲೆಂದು ಬಾಯ್ಗೆವಂದಂತೆ ನುಡಿವ ಮಾತಂ ಕೇಳಿ ಮುನೀಂದ್ರೋತ್ತಮನಿಂತೆಂದಂ

ಮೊರೆಯಿಲ್ಲಪ್ಪೊಡೆ ಸತಿಗಾದೆರಕಂ ತಂಗಿಗಂ ತಾಯ್ಗಮೇಕಾಗದು? ಲೋಕದೊಳ್‌ಪ್ರಸಿದ್ಧಮಪ್ಪುದೆ ಪೇಳ್ಗು. ಸೂಳೆಯೊಡನೆನಿತು ಕಾಲಮಿರ್ದೊಡಂ ಮಿಂಡರೆಂಬರಲ್ಲದೆ ಪೆರತಿಲ್ಲ. ಕರ್ಮವಶದಿಂ ತಾಯಿ ತಂಗಿಗಳುಪಿದೊಡೆ ಕೊಲೆಗಂ ಕವರ್ತೆಗಂ ಭಾಜನನಾಗಿ ಪಳಿಗಮಪಖ್ಯಾತಿಗಂ ನಿಲಯನಪ್ಪನದರಿಂ ಮೊರೆಯುಂಟೆಂದು ನಂಬುವುದು. ಪರಿಭವಮಾಗಿ ಸತ್ತ ಜೀವಂ ಭವಭವದೊಳುಂಬನೆಂಬ ನಾಣ್ಗಾದೆಯಿಂ ಮರುಭವಮುಂಟೆಂದರಿವುದು. ಮತ್ತಂ ಪರಿಣತರಪ್ಪವರ್ ಪರೀಕ್ಷಿಸಿ ನೋಳ್ಪುದು. ಜಗದೊಳ್‌ಕಲೆವೆರಸಿ ಮುನ್ನಿನ ರೂಪುವೆರಸಿ ಪುಟ್ಟುವ ಮಕ್ಕಳುಮಂ ಮೋಹದಿಂ ಕನಸುದೋರಿ ಬಂದು ಪುಟ್ಟುವ ಮಕ್ಕಳುಮಂ ಕಂಡು ಮರುಭವಮುಂಟೆಂದು ನಂಬುವುದು. ಅಂದಣಮನೇರಿ ಭೃತ್ಯರಂ ಕೂಡಿ ಐಶ್ವರ್ಯದಿಂದ ಸುಖಿಸುವರಂ ಕಂಡು ಮುನ್ನೆ ಮಾಡಿದ ಪುಣ್ಯದ ಫಲಮೆಂಬ ನಾಣ್ಣುಡಿಗೇಳಿ ಪುಣ್ಯದೇಳ್ಗೆಯುಂಟೆಂಬುದು. ಮತ್ತಂ ರೂಪುಯ ಲಾವಣ್ಯ ಚೆಲ್ವು ಸಿರಿ ಸೌಭಾಗ್ಯ ವಿಳಾಸ ನಿರುಜೆ ವಿಭವ ಭೋಗೋಪಭೋಗಮುಳ್ಳ ಸುಖಿಗಳಂ ಕಂಡು ಮುನ್ನ ಮಾಡಿದ ದಾನ ಪೂಜೆ ತಪದ ಫಲಮೆಂದು ನುಡಿವ ಲೋಕವಾರ್ತೆಯಿಂ ಧರ್ಮಮುಂ ಪೂರ್ವಭವಮುಮುಂಟೆಂದರಿವುದು. ಕುರುಡರಂ ಕುಂಟರಂ ತಿರಿಕರಂ ಮೊದಲಾದ ಕಷ್ಟಪಡುವರಂ ಕಂಡು ಮುನ್ನಿನ ಪಾಪದ ಫಲಮೆಂಬ ಜನವಾಕ್ಯದಿಂ ಪಾಪಮುಂಟೆಂದರಿವುದು. ಮತ್ತಂ ಕೋಳ್ಪಟ್ಟು ಪುಯ್ಯಲಿಡುವರಂ, ಕುತ್ತದಿಂ ಮರುಗುವರಂ, ಕೂಳ್ಪಂ ಪಡೆಯದವರಂ, ನಿರ್ಭಾಗ್ಯರಂ, ಕುರೂಪಿಗಳಂ ಪಂದೆಗಳ್‌ಮೊದಲಾದವರುಮಂ ಕಂಡಿವರ ಮುನ್ನಿನ ಕರ್ಮದ ಫಲಮೆಂಭ ಜನ ವಾಕ್ಯಮಂ ಕೇಳುತ್ತೆ ಕರ್ಮಮಿಲ್ಲೆಂಬ ಮರುಳ್ತನಮೇಕೆ ಅಳಿಪಿಂದುಗ್ರಪಾತನನನ್ಯ ವನಿತಾಸಕ್ತ ಗುಣಹೀನ ದುಶ್ಚರಿತ ಕೆಡುಕ ಪಾಪಿ ಸತ್ತನೊಳ್ಳಿತ್ತಾಯ್ತು ಧರ್ಮಹೀನಂ ನರಕಾರ್ಣವಂಬೊಕ್ಕಂ ಈತಂ ಸತ್ಪುರುಷಂ ಧಾರ್ಮಿಕಂ ಪರಹಿತಂ ಸಾಯಲಾಗದು ಸತ್ತೊಡಂ ಸ್ವರ್ಗಮಾಯ್ತೆಂಬುದಂ ಕೇಳ್ದು ಸ್ವರ್ಗಮಿಲ್ಲೆಂಬುದಾವ ಯುಕ್ತಿ? ಧರ್ಮಮಂ ತಾಳ್ದ ಮಹಾಪುರುಷರ್ಗೆ ಸ್ವರ್ಗಾಪವರ್ಗಮುಂಟೆಂದು ನಂಬುವುದುಮದರಿಂ ಜೀವಮುಂಟೆಂದು ನಂಭಲೀಯದ ಕುವಾದಿಗಳ ಕರ್ಣಣಿದ್ದು ಕುರುಡರುಂ, ಕಿವಿಯಿದ್ದು ಕಿವುಡರುಂ, ಕಾಲಿದ್ದು ಹೆಳವರುಂ, ಮಾತಿದ್ದು ಮೂಗರುಮಾಗಿ ನಿಂತಿಲ್ಲೆಂದು ಚರ್ಚಿಸಿ ನಿಗೋದಪ್ರಾಪ್ತರೆಂದು ಭಟ್ಟಾರಕರ್ ಬೆಸಸೆ ಶೂನ್ಯವಾದಿಗಳ್‌ತುಂಬುರುಗೊಳ್ಳಿ ಸಿಡಿವಂತೆ ಸಿಡಿಲ್ದು ಸಮುದ್ರದೊಡನೆ ಮಚ್ಚರಿಸಿ ಕೂಪಂ ಪೊಣರ್ವ ತೆರದಿನಂ ಗಜಮದಮರ್ದನದೊಳ್‌ತನ್ನಳವರಿಯದೆ ಮಾನಕಷಾಯ ತೀರ್ವೋದಯದಿಂ ಬುದ್ಧದಾಸಂ ತಾಂ ಪಿಡಿದ ಜೀವಾಭಾವಮನೆ ಬಲುವಿಡಿದಿಂತೆಂದಂ ಅರಹಂತನೆಂಬನೆಲ್ಲಿಪ್ಪನಾತನೊರೆದ ತಪದೊಳಾವುದು ಫಲ? ಕೊಲಲಾಗದೆಂಬ ಧರ್ಮಮೆತ್ತಿಪ್ಪುದದರಿಂ ಲಾಭಮೇನೆಂದು ಚರ್ಚಿಸೆ ಲೋಕದೊಳ್‌ನೆಲ್ಲುಂ ಪುಲ್ಲುಂ ಕಾಡುದ್ದುಂ ಉದ್ದುಂ ಕಾಡನಿಂಬೆಯುಂ ನಿಂಬೆಯುಂ ಪಲಸುಂ ಕಾಡಪಲಸುಂ ಊರಮ್ಮೆಯುಂ ಕಾಡೆಮ್ಮೆಯುಂ ಕತ್ತಲೆಯುಂ ಬೆಳಕುಂ ಸಜ್ಜನೆಯುಂ ಸೂಳೆಯುಂ ಸಜ್ಜನರುಂ ದುರ್ಜನರುಂ ಸಿರಿವಂತರುಂ ತಿರಿಕರುಂ ಅರಸರುಂ ಬಡವರುಂ ಮೊದಲಾಗೆಂತೊಳವಂತೆ ಧರ್ಮಮುಂ ಪಾಪಮುಮುಂಟಪ್ಪುದರಿಂದವರ ಫಲಮನೀವಂತಪ್ಪ ಅರ್ಹತ್ಸರ್ವಜ್ಞರಂ ತೋರಲಾ ಜಿನಸ್ವಾಮಿಯಂ ಪೊಗೆಯಿಸಿದೊಡೆ ಕಳ್ದೊಡೆ ಪರವನಿತೆಯರ್ಗಳಿಪಿದೊಡೆ ಪಿರಿದಂ ಬಯಸಿದೊಡೆ ಪೊಲ್ಲಮೆಂದು ಪೇಳ್ವ ಜಿನೇಂದ್ರಾಜ್ಞೆಯಂ ಮಿರಿದೊಡಾ ಪರಮೇರ್ಶವರನ ಸಾಮಂತದಂಡನಾಯಕರಂತೆ ಕೊಂದೊಡೆ ಕೊಲ್ಲುವ ಪುಸಿದೊಡೆ ನಾಲಗೆಯಂ ಕೀಳ್ವ ಕಳ್ದೊಡೆ ಶೂಲದೊಳಿಕ್ಕುವ ಪೆರರ ಪೆಂಡಿರ್ಗಳಿಪೆ ತಲೆಯನರಿವ ತಂತಮ್ಮ ಮೇರೆದಪ್ಪಿದೊಡೆ ದಂಡಂ ಕೊಳ್ವ ಭೂಪಾಲರ ನಾಡವರ ಮಾಟದಿಂ ಬಟ್ಟೆಗಳೂರಂ ಪೊರ್ದಿ ಪೋಪಂತೆ ಕೊಲೆ ಪುಸಿ ಕಳವನ್ಯಸ್ತ್ರೀಯತಿಕಾಂಕ್ಷೆಗಳಂ ಧರ್ಮವೆನ್ನದೆ ಜಿನವಲ್ಲಭನಮಾತನೆ ಪೊರ್ದಿ ಪೋಪಂತೆ ಕೊಲೆ ಪುಸಿ ಕಳವನ್ಯಸ್ತ್ರೀಯತಿಕಾಂಕ್ಷೆಗಳಂ ಧರ್ಮವೆನ್ನದೆ ಜಿನವಲ್ಲಭನಮಾತನೆ ಪೊರ್ದಿ ನಡೆದು ನಾನಾ ಸಮಯಿಗಳಿಂದ ಮುಂ ಕೊಲೆ ಪುಸಿ ಕಳವಾದಿಗಳಂ ಕೂಡಿದ ಮಾನವರುಂ ಪಂಚಮಹಾಪಾತಕರೆಂದು ಬೈವ ನಾಡವರ ಬೈಗುಳಿಂದಂ ಕೊಲೆಯಾದಿ ಪಂಚಮಹಾಪಾತಕಂಗಳಂ ಮಾಡಿದ ನಲ್ಲನೆಂದು ಕಿಚ್ಚು ಮೊದಲಾದ ದೀಪ್ಯದಿಂ ಶುದ್ಧರಾಗಿ ಪಾಪದಿಂದಂ ಮತ್ತಂ ಕೊಲ್ಲದ ಧರ್ಮದಿಂದ ಧರ್ಮಜನಂ ಗೌರಮನಂ ಸತ್ಯದೊಳ್‌ಕರ್ಣಾಂಶಾಖ್ಯನಂ ಕಳವಿಲ್ಲವೆಂಬುದರೊಳರ್ಜುನನಂ, ಶೌಚದೊಳ್‌ಗಾಂಗೇಯನಂ, ನಿಷ್ಪರಿಗ್ರಹದೊಳ್‌ರಾಮನಂ ಕೊಡುಂಕೊನೆದು ಪೊಗಳ್ವ ಪರಸಮಯಿಗಳ್‌ಬಕನಂ ಉತ್ತರನಂ ಸೂರ್ಪನಂ ರಾವಣನಂ ಕೌರವನನೇಕೆ ಪುರಾಣದೊಳ್‌ನುತಿಸರ್? ಮುದದಿಂ ಮೌನದೊಳಿಪ್ಪ ಜಿನಾಧೀಶ್ವರನೆಂತು ಸ್ವರ್ಗಾಪವರ್ಗಮಂ ಕುಡುವನೆನೆ ನೆಲನುಂ ಬಟ್ಟೆಯುಂ ವೃಕ್ಷಮುಂ ಸೊಡರುಂ ಮನೆಯುಂ ತೊರೆಯುಂ ಶಾಸ್ತ್ರಮುಂ ಪಶುಗಳುಂ ತೋಟಂಗಳುಂ ಕಾಮಧೇನು ಕಲ್ಪವೃಕ್ಷ ಚಿಂತಾಮಣಿಗಳೆಲ್ಲಂ ಮೌನದೊಳಿರ್ದಭೀಷ್ಟಮಪ್ಪ ವಸ್ತುವಂ ವೀತರಾಗನೋಜೆಯಳೆ ಕೊಡುವವು. ಅದು ಕಾರಣದಿಂ ಸಕಲಮೆಲ್ಲಂ ಜಿನೇಶ್ವರನಂತೆ ಮೌನಿಗಳಾಗಿ ಲೋಕೋಪಕಾರಂ ಮಾಳ್ಪವಲ್ಲದೆ ಜಿನರೋಜೆಯಂ ಮೀರದಿರವು. ಮತ್ತಂ ಸರ್ವಜ್ಞಂ ಉಡಿಗೆ ತೊಡಿಗೆ ಮಾದಲಾದನ್ಯವಸ್ತುಗಳ ಹಂಗಿಲ್ಲದತೀಂದ್ರಿಯ ಸಖನಪ್ಪುದರಿಂ ಬೆತ್ತಲೆ ನಿರ್ಗ್ರಂಥನಾಗಿಪ್ಪುದು ಪೊಲ್ಲಮೆಂದೊಡಾವುದೊಂದು ವಸ್ತುವಾದೊಡಂ ನಿರ್ಗ್ರಂಥಮಾಗಲ್ಲದೆ ಯೋಗ್ಯ ಮಾಗದುದೆಂತೆನೆ ನೆಲಂ ನಿರ್ಗ್ರಂಥಮಾಗೆ ಬೀಜಕ್ಕೆ ಬಲಂ, ಆಕಾಶಂ ನಿರ್ಗ್ರಂಥಮಾಗೆ ಶುಭಕಾರ್ಯಕ್ಕೊಳ್ಳಿತ್ತು, ನೀರು ನಿರ್ಗ್ರಂಥಮಾಗೆ ರೋಗಹರಂ, ಕಿಚ್ಚು ನಿರ್ಗ್ರಂಥಮಾದೊಡಡುಗೆಯ ಕಾರ್ಯಮಕ್ಕುಂ, ಸೂರ್ಯಂ ನಿರ್ಗ್ರಂಥಮಾಗೆ ದಿನಶುದ್ಧಿ, ಚಂದ್ರಂ ನಿರ್ಗ್ರಂಥಮಾಗೆ ರಾತ್ರಿ ಶುದ್ಧಿ, ಅಕ್ಕಿ ನಿರ್ಗ್ರಂಥಮಾಗಲ್‌ಅನ್ನದರುಚಿ, ರತ್ನಂ ನಿರ್ಗ್ರಂಥಮಾದೊಡೆ ಬೆಲೆ ಪೆರ್ಚುಗುಮಿಂತೆಲ್ಲಾ ವಸ್ತುಗಳ್‌ಗ್ರಂಥರಹಿತಮಾಗಲತಿಪೂಜ್ಯಂಗಳಂತೆ ಜಿನೇರ್ಶವರನ ತಪದ ನಿರ್ಗ್ರಂಥದಿಂದಲೆ ಲೋಕದ ಕಾರ್ಯಂಗಳೆಲ್ಲಂ ಸಿದ್ಧಿಯಕ್ಕುಂ