ವೃತ್ತ || ಮನದೊಳ್ಸಾಸಿರದೆಂಟುನೂರು ಕುಹಕಂ ಮಾತ್ಸರ್ಯದೊಳ್ ಕೋಟಿ ವಂ
ಚನೆಯೊಳ್ ಚೋರಶಿಖಾಮಣೀವಪುರ್ವಿನೋಳ್ತೋರ್ವಳ್ಜಗಜ್ಜಾಲಮಂ
ಜನಿತಂಗಾಲಿಗೆಯೊಳ್ಜಗತ್ರಯದದಾಳಾಪಮಂ ಕಣ್ಗಳೊಳ್
ಸನುಮಾನಂಗನ ಮಾಳ್ಪ ನಾರಿಯರನಾವಂ ಗೆಲ್ವವಂ ಲೋಕದೊಳ್ (?) ||

ಮುಕ್ತಿಮಾರ್ಗದ ಕಾಪಿನ ನಾಯ್ಗಳಾದ ಸ್ತ್ರೀಯರಂ ಪೊರ್ದಿದಂಗಿಹ ಪರಂ ಕೆಡುವುದೆಂದೀ ವೃತ್ತಾಂತಮನಾಂ ಪೇಳ್ವುದುಮಾತನೆಂದಂ

ಶ್ಲೋಕ || ಕಾಮಃ ಪುಣ್ಯವಶಾಜ್ಜಾತಃ ಕಾಮಿನೀ ಪುಣ್ಯಪ್ರೇರಿತಃ
ಸೇವ್ಯಾಸೇವ್ಯಂ ನ ಕರ್ತವ್ಯಂ ಸ್ತ್ರೀರತ್ನಂ ದುಷ್ಕುಲಾದಪಿ ||

ಅದರಿಂ ನಿನ್ನ ವಂಚನಮನೆಂತು ನಂಬುವುದೆಂದು ಮತ್ತಮೀಶ್ಚರಂ ಕೈಲಾಸದೊಳೆ ಗಿರಿಜೆಯೊಡನಿರ್ದು

ವೃತ್ತ || ಭ್ರೂಲಾಸೋತ್ಸವಿನೀ ಸವಿಭ್ರಮಗತಿರ್ಮೂರ್ಚ್ಛಾ ನಿತಂಬಸ್ಥಲೀ
ಸಂಕೀರ್ಣೀವಯಸಿ ಸ್ಮಿತಾರ್ಧಭಣಿಶಿಃ ಸಾ ಪಾರ್ವತೀ ಪಾತು ವಃ
ಯಸ್ಯಾ ಕರ್ಣತಟಂ ದೃಶಾವಗಮತಾ ತೂರ್ಣಂ ತ ದಂತಃ ಪಥೇ
ದೃಷ್ಟಾದೃಷ್ಟಮಪೀಶ್ವರಂ ಹೃದಿ ಕೃತಾಧಿಷ್ಠಾನಮುತ್ಕಂಠಿತಾ ||

ಪಾಣೌಕಂಕಣಮುತ್ಪಣಃ ಫಣಿಪತಿರ್ನ್ನೇತ್ರಂ ಜ್ವಲತ್ಪಾವಕಂ
ಕಂಠೇ ಕೂಜಿತಕಾಲಕೂಟ ಕುಟಿಲೋ ವಸ್ತ್ರಂ ಗಜೇಂದ್ರಾಜಿನಮ್
ಗೌರೀಲೋಚನಲೋಭಸಾಯ ಸುಭಗೋ ವೇಷೋ ವರಸ್ಯೇತಿಮೇ
ಗಂಡೋಲ್ಲಾಸಿವಿಭಾಷಿತಃ ಪಶುಪತೇರ್ಹಾಸೋದ್ಗಮಃ ಪಾತು ವಃ ||

ಇಂತಿರ್ದ ಶಿವಂ ಗಂಗೆಯಂ ಸ್ವೀಕರಿಸಿ ಜಡೆಯೊಳಿಟ್ಟುಮಿರೆ

ವೃತ್ತ || ಸಂಧ್ಯಾ ರಾಗವತೀ ಸ್ವಭಾವಚಪಲಾ ಗಂಗಾ ದ್ವಿಜಿಹ್ವಃ ಫಣೀ
ಚಂದ್ರೋ ವಕ್ರತನು ಸ್ವಭಾವಮಲಿನೋ ಜಾತ್ಯೇವ ಮೂರ್ಖೊ ವೃಷಃ
ಇತ್ಥಂ ದುರ್ಜನ ಸಂಕಟೇ ಪತಿಗೃಹೇ ವಾಶ್ತವ್ಯಮೇ ತತ್ಕಥಂ
ದೇವೀನ್ಯಸ್ತಕಪೋಲ ಪಾಣಿತಲಕಾ ಚಿಂತಾನ್ವಿತಾ ಪಾರ್ವತೀ ||

ಏಕಂ ಧ್ಯಾನನಿಮಿಲನಾನ್ಮುಕುಲಿತಂ ಚಕ್ಷುರ್ದ್ವಿತೀಯಂ ಪುನಃ
ಪಾರ್ವತ್ಯಾ ವಿಪುಲೇ ನಿಶಂಬಫಲಕೇ ಶೃಂಗಾರಚಾರಾಲಸಮ್
ಅನ್ಯದ್ದೂರಸಿಕೃಷ್ಟಚಾಪಮದನಕ್ರೋಧಾನಲೋದ್ದೀಪಿತಂ
ಶಂಭೋರ್ಭಿನ್ನರಸಂ ಸಮಾಧಿಸಮಯೇ ನೇತ್ರತ್ರಯಃ ಪಾತು ವಃ ||

ಸ್ಮರಮಂದಿರಮಂ ರುದ್ರಂ
ನಿರೀಕ್ಷಿಸುತ್ತಿರಲು ಗೌರಿಹಸ್ತದ್ವಯದಿಂ
ಮರಸಲು ನಯನದ್ವಯಮಂ
ಭರದಿಂ ಭಾಳಾಕ್ಷನಾದನೆಂಬರ್ ಕೆಲಬರ್

ಮತ್ತಂ ಜಾಹ್ನವಿ ಶಿವನ ಜಡೆಯೊಳಿಪ್ಪುದರಿದುಂ

ವೃತ್ತ || ಮೌಳೌ ಕಿಂ ನು ಮಹೇಶ ಮಾನಿನಿ ಜಲಂ ವಕ್ತ್ರಂ ಕಿಮಂಭೋರುಹಂ
ಕಿಂ ನೀಳಾಳಕವೇಣಿಕಾ ಮಧುಕರಾಃ ಕಿಂ ಭ್ರೂಲತಾ ವೀಚಿಕಾ
ಕಿಂ ನೇತ್ರೇ ಶಫರೌ ಚ ಕಿಂ ಸ್ತನಯುಗಂ ಪ್ರೇಂಖದ್ರಥಾಂಗದ್ವಯಂ
ಪಾಶಂ ಕಾಮಿತಿ ವಂಚಯನ್ ಗಿರಿಸುತಾಂ ಗಂಗಾಧರಃ ಪಾತುವಃ ||

* * *

ವೃತ್ತ || ಕಾಮಿನಿ ಜಾಹ್ನವೀಕಿಮಹ ಕೇ ಭರ್ತಾ ಹರೋನನ್ವಸೌ
[ಅಭ್ಯಸ್ತಂ] ಕಿಲ ಮನ್ಮಥೋರಥರಸಂ ಜಾನಾತ್ಯಯಂ ತೇ ಪತಿಃ
ನಿತ್ಯಂ ಸ್ವಾಮಿ… ನಿಹಾಪ್ರಿಯತಮೇ ಸತ್ಯಂ ಕುತಃ ಕಾಮಿನಾಂ
ಇತ್ಯೇವಂ ಹರಜಾಹ್ನವೀಗಿರಿಸುತಾ ಸಂಜಲ್ಪಿತಂ ಪಾತು ವಃ ||

ಅಂತು ಪಾರ್ವತಿ ಕುಪಿತೆಯಾಗಿ ಈಶ್ವರನಂ ಭಂಗಿಸೆ ಮುನಿಸಿಂ ಪರಮೇಶಂ ಗಿರಿಜೆಯಂ ಬಿಟ್ಟು ಪೋಗಿಯನೇಕ ದಿವಸಮಿರಲಾತನಂ ತಿಲಿಪಿ ಗಂಗೆಯಂ ಬಿಡಿಸಲಾರುಮಂ ಕಾಣದೆ ಷಣ್ಮುಖಂ ಪ್ರಾಜ್ಞನೆಂದು ಕಳುಹಿಸಲಾತಂ ಪೋಗಿ

ವೃತ್ತ || ಅಂಬಾ ಕುಪ್ಯತಿ ತಾತ ಮೂರ್ಧ್ನಿ ನಿಹಿತಾ ಗಂಗೇಯಮುತ್ಸೃಜ್ಯತಾಂ
ವಿದ್ವನ್ ಷಣ್ಮುಖ ಕಾ ಗತಿರ್ಮಯಿ ಚಿರಂ ತಸ್ಯಾಸ್ಸಿತಾಯಾ ವದ
ದೋಷೋದ್ಘಾತವಶಾದಶೇಷವದನಾತ್ಪ್ರತ್ಯುತ್ತರಂ ದತ್ತವಾ
ನಂಬೋಧಿರ್ಜಲಧಿಃ ಪಯೋಧಿರುದಧಿರ್ವಾರಾನ್ನಿಧಿರ್ವಾಃರಿಧಿಃ ||

ಎಂದೊಡಂ ಗಂಗೆಯಂ ಬಿಡಿದಿರಲು ಪಾರ್ವತಿ ಅತ್ಯಂತ ವಿರಹತಾಪದಿಂದೀರ್ವರುಂ ಬೇಯುತ್ತುಮಾರಿಂದಂ ಕೂಡಿಸಲಾಗದಿರಲೊಂದು ದಿವಸಂ ವಿನಾಯಕಂ ಸಂಚರಿಸಿ ಬಂದು ಉಲ್ಲಾಸದೊಳೆ ಕೈಲಾಶಶೈಲಮನೆರಡು ಕೋಡಿಂದಂ ನೂಂಕಲಂದು ಗಾಳಿಗೆ ಚಳಿಸುಚಲದಲದಂತೆ ಚಲಿಸಲು ರುದ್ರಾಣಿ ಭಯಂಗೊಂಡೀಶನನಪ್ಪಿಕೊಂಡಳೆಂಬುದುಂ ಮತ್ತಂ ಗಜಾಸುರಂ ಪರಮೇಶ್ವರನಂ ಕುರಿತು ತಪಂಗೆಯ್ದೊಡಾತಂಗೆ ಪ್ರತ್ಯಕ್ಷಮಾಗಿ ಬೇಡಿದಭೀಷ್ಟಮಂ ಕುಡುವೆ ಬೇಡೆಂಬುದೆನಗೆಲ್ಲಾ ವರಂಗಳಂ ಮೊದಲೆ ಕೊಟ್ಟಿರ್ದಪೆ ಈಗಲು ತ್ರಿಕಾಲದಲ್ಲು ನಿನ್ನ ಜಪಿಸಿ ಧ್ಯಾನಿಸಲು ನೀನೊಂದು ಕಡೆಯಾಗಿ ನನ್ನ ಕಂಠದೊಳಿಪ್ಪುದೆನ್ನನುಂ ಕರಾಟಕಮಾಗಲದಂತೆ ರಂಧ್ರಂ ಮಾಡಿ ಕಾವಿದಾರದೊಳು ಕಂಠಕ್ಕೆ ಕಟ್ಟಿಕೊಂಡನೇಕದಿನಂ ಪೋಗಲಿತ್ತ ಕೈಲಾಸದೊಳ್ ಗಿರಿಜೆ ಪ್ರಾಣೇಶಂ ಬಾರದಿರ್ದುದಕ್ಕಾಶ್ಚರ್ಯಂಬಟ್ಟು ಈಶನಿರವಂ ಕಾಣದೆ ಚಿಂತಾಕ್ರಾಂತೆಯಾಗಿ ದುಃಖಿಸುತ್ತಿರ್ದೊಮ್ಮೆ ನಾರದಂ ಬರೆ ಶಿವನೆಲ್ಲಿ ಸಿಕ್ಕಬಿರ್ದನಾರಯ್ವುದೆಂದು ದುಃಖದಿಂ ಪೇಳಲಾತನಂ ಕರಸಿ ಪೇಳ್ದಪೆನೆಂದು ಪೋಗಿ ಜಗತ್ರಯದೊಳೆಲ್ಲಿಯು ಕಾಣದೆ ಮತ್ತೊಂದು ದಿನಂ ಗಜಾಸುರನ ಪಟ್ಟಣಮನೆಯ್ದಿ ಆತನಂ ಕಂಡು ಕೊರಳೊಳಿರ್ದ ಕವಡೆಯನಿದೇನೆನಲಾತನೀಶ್ವರಂ ಸಿಕ್ಕಿದ ವೃತ್ತಾಂತಮಂ ಪೇಳೆ ಕೇಳ್ದು ಬಂದಾ ಪ್ರಪಂಚಮಂ ಹೈಮವತಿಗರಿಪಿಯಾತಂ ಇನ್ನು ಬಪ್ಪುದಘಟಿತನವಂಗೆ ಸಿಕ್ಕಿ ಪೋದನೆನಲತ್ಯಂತ ದುಃಖಿತೆಯಾಗಿ ಮೃಡನಂ ಬರಿಸಲಾವುದುಪಾಯಮದಂ ನೀವೆ ಮಾಳ್ಪುದೆಂದು ಬೇಡಿಕೊಳಲೆನ್ನಿಂದಂ ಸಾಧ್ಯಮಿಲ್ಲ ವೈಕುಂಠಪತಿಯ ನಿನ್ನಲ್ಲಿಗೆ ಕಳಿಪುವೆನೆಂದಾತನೊಳಾಳೋಚಿಸಿ ನಂದಿಕೇಶ್ವರನಂ ಕೌಲೆಬಸವನಂ ಮಾಡಿಯನೇಕ ಸುವರ್ಣ ರತ್ನಾಭರಣ ದುಕೂಲಾದಿಗಳಂ ಪೊದಯಿಸಿ ಅನೇಕ ಆಟಂಗಳಂ ಕಲಿಸಿ ತಾನುಂ ಹೆಳವಮಲ್ಲನೆಂದಾಂ ಬಸವನಾಟಕೆ ಜನರೆಲ್ಲ ಮರುಳಾಗೆ ಗಜಾಸುರನ ಪಟ್ಟಣಮನೆಯ್ದ ಲಾತನುಂ ನೀನುಂ ಮೆಚ್ಚಿದುದೇವೆನೆಂದು ನೂರೆಂಟು ತೆರದಾಟಮಂ ತೋರಿಸಿ ಸಕಲವೆಲ್ಲ ಬಿರಿದು ಈ ಬಸವಂಗುಂಟು ನಿನ್ನ ಕಂಠದೊಳಿಪ್ಪ ಕವಡೆಯನೀವುದದನೀ ಬಸವನ ಪಣೆಯೊಳ್ಕಟ್ಟುವೆನೆಂದು ಬೇಡಲತಿ ವಿಸ್ಮಿತನಾಗಿ ಭಾಷೆಗೆ ತಪ್ಪಲಾಗದೆಂದು ವಿಷಣ್ಣಚಿತ್ತದಿಂದಾಕವಡೆಯಂ ಕುಡಲದಂ ಬಸವನ ಪಣೆಯೊಳ್ ಕಟ್ಟಿ ಶಿವನ ಸೆರೆಯಂ ಬಿಡಿಸಿ ಕೈಲಾಸಕ್ಕೆ ತಂದು ಕಾತ್ಯಾಯಿನಿಯೊಡಗೂಡಿಸಿದನೆಂಬ ಕೌಲೆಬಸವನಾದ ಕಥೆಯಂ ಪೇಳಿ ಮತ್ತಂ ಪಾರ್ವತಿಯು ಮಾಳ್ಪಾ ವನಭೋಜನಾಭಿಲಾಷೆಯಂ ಪತಿಗರಿಪುತ್ತಿರಲೊಮ್ಮೆ ಶಂಕರಂ ಕುಟುಂಬಂವೆರಸಿ ವನಮನೈದಿ ಭಕ್ಷ್ಯಾದಿಗಳಂ ಮಾಳ್ಪನ್ನೆಗಂ ವಿನಾಯಕಂ ವನದೊಳ್ ಚರಿಯಿಸುತ್ತ ನಾನಾ ಫಲಂಗಳಂ ತಿಂದು ಬರುತ್ತಂ ಮುಂದೆ ಮುಂದೆ ಪೋಗಿ ಫಲಂಗಳಂ ತಿಂದು ಬರುತ್ತಿರಲಾ ವನದ ಪಣ್ಣುಫಲಾದಿಗಳೆಲ್ಲ ತೀರೆ ಮುಂದಕ್ಕೆ ಪೋಪುದು ಗಜಾಸುರನ ಪುರೋದ್ಯಾನದೊಳಿರ್ದ ಫಲಂಗಳಂ ತಿನ್ನುತ್ತಮಿರಲಾಗಳವನ ನೀರೀಕ್ಷಣ ನಿಮಿತ್ತಂ ಗಜ ಭಕ್ಷಣಂಗೆಯ್ಯಲ್ಬಂದ ಗಜಾಸುರಂ ಬಂದು ಲಂಬೋದರನಂ ಕಂಡಿದೊಂದು ವಿಚಿತ್ರಮಾದ ಆನೆಯಮರಿಯೆಂದು ಸಮೀಪಕ್ಕೆ ಬಂದದರ ರೂಪುಮನಾಟಮುಮಂ ನೋಡಿ ಪೆಗಲೇರಿಸಿಕೊಂಡಿಂದಿನ ಗ್ರಾಸಕಪ್ಪುದೆಂದು ಪೊತ್ತು ಪುರಕ್ಕೆ ಬಪ್ಪಿನಂ ಆತನ ಪುತ್ರಿ ಸೌಧಾಗ್ರದೊಳಿರ್ದಾ ಬಪ್ಪ ತಂದೆಯ ಪೆಗಲೊಳಿರ್ದಾನೆಯಮರಿಯಂ ಕಂಡತ್ಯಂತ ಮೋಹದಿಂ ತಂದೆಯಂ ಬೇಡಿಕೊಂಡು ತನ್ನ ಹರ್ಮ್ಯದೊಳಿರಿಸಿದೊಡಾಗಲು ಗಜಾನನಂ ಗ್ರಾಸಮಂ ಬೇಡಲತಿಮಮತೆಯಿಂದನ್ನ ಪಾನ ಖಾದ್ಯಲೇಹಾದಿಯನೇಕ ತೆರದ ಭಕ್ಷ್ಯಮಂ ತರಿಸಿ ಕುಡಲುದರಪೂರಿತಮಾಗಿ ಭುಂಜಸಿ ನೂರೊಂದು ತಾಳಗಳರಿದು ಕಾಲ ಮಾರ್ಗ ಕ್ರಿಯ ಅಂಗ ಗ್ರಹ ಜಾತಿ ಕಲೆ ಲಯ ಯತಿ ಪ್ರಸ್ತಾರಮೆಂಬೀ ದಶಪ್ರಾಣಂಗಳ ಲಕ್ಷಣಂದಪ್ಪದೆ ನಿಚ್ಚ ನಿಚ್ಚ ನರ್ತಿಸುತ್ತಂ ಅವಳಿಚ್ಛೆಯಂ ಸಲಿಸುತ್ತಲಿರಲತ್ತ ವನಭೋಜನಕ್ಕೆ ವಿನಾಯಕಂ ಬಾರದಿರ್ದೊಡಂ ಪರಮೇಶಂಗರಿಪಿದೊಡಿಂದು ನಾಳೆಯೆಂದರಸಿ ತರದಿಪ್ಪುದು ದುಃಖಮಾಗಿರ್ದೊಂದು ದಿನ ನಾರದಂ ಬಂದೊಡಾತನಂ ವಿನಯದಿಂ ಮನ್ನಿಸಿ ಎನ್ನ ಪಿರಿಯಮಗಂ ವಿಘ್ನರಾಜನಪಾರದಿನದಿಂ ಬಾರದುದರಿನ್ನಾತನೆಲ್ಲಿಪ್ಪನದನಾರೈದು ಬರಲಪ್ಪುದೆಂದು ಬೇಡಿದೊಡಾತಂ ದಿನಂಪ್ರತಿ ಮೂರುಲೋಕಮೆಲ್ಲಮಂ ಸಂಚರಿಸಿ ಬಪ್ಪನಪ್ಪದರಿಂ ಗಜಾಸುರನ ಪಟ್ಟಣಮನೆಯ್ದಿದಲ್ಲಿ ಉಪ್ಪರಿಕೆಯ ಮೇಲೆ ಅಂದುಗೆ ಗೆಜ್ಜೆ ಮೊದಲಾದ ನಾದಮಂ ಕೇಳ್ದಲ್ಲಿಗೆಯ್ದಿ ನೋಳ್ಪುದುಂ ಗಜಾಸುರಪುತ್ರಿ ಇದಿರೆದ್ದು ನಮಿಸಿ ಉನ್ನತಾಸನದೊಳ್ಕುಳ್ಳಿರಿಸೆ ಈ ನಾಟ್ಯವೇನೆಂದು ಬೆಸಗೊಳಲೆಮ್ಮ ತಂದೆ ವನದೊಳೀ ಸುರಲೋಕದಾನೆಮರಿಯಿರಲಿದಂ ಭಕ್ಷಿಸಲೆಂದು ತಪ್ಪುದುಮದಂ ನಾಂ ಬೇಡಿಕೊಂಡಾಡಿಸುತ್ತಿಪ್ಪೆನೆಂಬುದು ನಾರದನೆಂದನೀತಂ ಪರಮೇಶ್ವರನ ಜೇಷ್ಠಪುತ್ರಂ ವಿನಾಯಕಂ ಪಾರ್ವತಿಯುಮೀತನ ನೆಲೆಯನರಿಯದುಮ್ಮಳಿಸುತಿಪ್ಪಳಿವನನೀಗಳೆ ಕಳುಹಿಸದೊಡೀತನಿಂದಲೆ ನಿಮಗಪಾಯಂ ತಪ್ಪದೆಂದು ಗಜಾಸುರಂಗಂ ಪೇಳ್ವುದುಂ ವಿನಾಯಕಂ ಪೋಪನೆಂದು ತನಗೆ ಕೊಟ್ಟಿಪ್ಪ ವರಮಂ ನೆನೆದು ಗರ್ವದಿಂದ್ವೈಮಾತುರಂಗೆ ಸಂಕಲೆಯನಿಕ್ಕಲದಂ ನಾರದಂ ಬಂದು ಹೈಮವತಿಗರಿಯಪೇಳಲಾಕೆಯತಿ ಕೋಪದಿಂ ನಿಜಪತಿಯಂ ಕೂಡಿದೊಂಡು ಬಂದಾ ಗಜಾಸುರನನಿಕ್ಕ ಮಗನಂ ತಪ್ಪುದೆನಲವಳಿಗೆ ರುದ್ರನೆಂದನಾತಂಗೆ ಮುನ್ನ ಭಾಷೆಯಂ ಕೊಟ್ಟಿಪ್ಪೆನದರಿಂದಾತನೊಳು ಮುನಿವೆನಲ್ಲೆಂದು ಸುಮ್ಮನಿರ್ದೊಡಾ ರುದ್ರಾಣಿ ಕೋಪಾನಳದಂದಹ್ಯಮಾಗೆ ದೇಹದೊಳೇಳು ರೂಪಾದವು. ಬ್ರಹ್ಮಾಣಿ ಮಹೇಶ್ವರಿ ಕೌಮಾರಿ ವೈಷ್ಣಾವಿ ವಾರಾಹಿ ಐಂದ್ರಿ ಚಾಮುಂಡಿಯುಮೆಂಬ ಸಪ್ತರೂಪಾಗಿ ಭೂಮಿಯಲ್ಲಿ ಆತನ ರಕ್ತಬಿಂದು ಮಾತ್ರ ಬೀಳ್ದೊಡಂ ಸಹಸ್ರ ಗಜಾಸುರರಪ್ಪುದರಿಂ ದುರ್ಗಿಯು ತನ್ನ ನಾಲಗೆಯಂ ಭೂಮಿಯೊಳೆಲ್ಲಾ ಪಾಸಿ ಆತನಂ ಯುದ್ಧದೊಳೆ ಕೊಂದು ವಿನಾಯಕನಂ ತಂದಳೆಂದು ಪೇಳ್ವುದು.

ಮತ್ತಮೊರ್ಮೆ ಕೈಲಾಸದೊಳೆ ಚಂಡಿಕೆಯುಮೀಶ್ವರಂ ಸಂಚರಿಸಲು ಪೋಗಿ ತಡೆದಿರೆ ಕಾಮಾತುರದಿಂ ವಿಗುರ್ವಿಸೆ ಮೂವತ್ತೀರ್ವರು ದಾಕ್ಷಾಯಣಿಯ ರೂಪಿನೊಳೆ ಅತ್ಯಂತ ಸೌಂದರ್ಯವಿಲಾಸಮಾಗಿ ಚನ್ನೆಯರಾದ ಕನ್ನೆಯರೊಗೆಯಲಾ ಕುಮಾರಿಯರಂ ಬಾಗಿಲೊಳಿರವೇಳಲೀಶಂ ಬಂದು ಮೇನಕಾತ್ಮಜೆ ಹಲವು ರೂಪದಳೆಂದವರೊಳೆ ಭ್ರಮಿಸಿದನೆಂಬುದುಂ ಮತ್ತಂ ರಾತ್ರಿಯೊಳು ದೇವಿಯಂ ಬಿಟ್ಟು ಹೋರಸಂಚಾರಂ ಮಾಡಿ ಬಂದು ಬಾಗಿಲೊಳೆ ನಿಂದು

ವೃತ್ತ || ಕೋ ವಾ ದ್ವಾರಾಗ್ರತಸ್ಥಃ ಸುದತಿ ಪಶುಪತಿಃ ಕಿಂ ವೃಷೋ ಸಾರ್ಧನಾರೀ
ಕಿಂ ಷಂಡೋ ನೈವ ಶೂಲೀ ಕಿಮಪಿ ಚ ಸುರುಜಾ ನೋ ಪ್ರಿಯೇ ನೀಲಕಂಠಃ
ಬ್ರೂಹಿ ತ್ವಂ ಕಿಂ ಮಯೂರೋ ನ ಹಿ ವಿದಿತಶಿವಃ ಕಿಂ ಪುರಾಣೋಶೃಗಾಲ
ಶ್ಚೇತ್ಯೇವಂ ಹೈಮವತ್ಯಾ ಪ್ರತಿವಚನ ಜಡಃ ಪಾತು ವಃ ಪಾರ್ವತೀಶಃ ||

ಎಂದನೇಕ ತೆರದ ವಕ್ರೋಕ್ತಿಯಪ್ಪುದಲ್ಲದೆ

ವೃತ್ತ || ಪಾಣೌ ಕಂಕಣಮುತ್ಫಣಃ ಫಣಿಪತಿರ್ನ್ನೇತ್ರಜ್ವಲತ್ಪಾವಕಃ
ಕಂಠೇ ಕೂಣಿತಕಾಲಕೂಟಕುಪಿತೋ ವಸ್ತ್ರಂ ಗಜೇಂದ್ರಾಜಿನರ್ಮ
ಗೌರೀಲೋಚನಲೋಭನಾಯ ಸುಭಗೋ ವೇಷೋ ವರಸ್ಯೇತಿ ಮೇ
ಗಂಡೋಲ್ಲಾಸ ವಿಭಾಸಿತಃ ಪಶುಪತೇರ್ಹಾಸೋದ್ಗಮಃ ಪಾತು ವಃ ||

ಅದಲ್ಲದೆ ಬ್ರಹ್ಮನೂರ್ವಸಿಯಂ ನೀರೀಕ್ಷಿಸಲು ಮೂರು ಸಾವಿರ ವರ್ಷದ ತಪಸಿನ ಫಲಕ್ಕೆ ದಕ್ಷಿಣಾದಿ ತ್ರಿಮುಖಮಂ ಪಡೆದು ಮೇಲೆ ನೋಡಲು ಐನೂರು ವರ್ಷ ತಪದ ಫಲಕ್ಕೆ ಗಾರ್ದಭಸಿರದಂತೆ ಮೇಲೊಂದು ಮುಖಮಂ ಪಡೆದೊಡಾಕೆ ಸ್ವರ್ಗಮನೆಯ್ದಿದೊಡೆ ಬ್ರಹ್ಮ ಮರುಳಾಗಿ ಚರಿಯಿಸುತ್ತುಂ ಕೈಲಾಸಮನೆಯ್ದಿಪ್ಪುದುಂ ಭವಾನಿಯು ತನ್ನ ಪತಿಗಾರತಿಯನೆತ್ತಲು ಬಂದೀರ್ವರು ಪಂಚವಕ್ತ್ರರಂ ನೋಡಿ ಅನುಮನದಿಂ ನಿಲಲೀಶ್ವರಂ ಕೋಪಿಸಿ ತನ್ನ ಕೈಯುಗುರ್ಗಳಿಂ ಬ್ರಹ್ಮನ ನಡುವಣ ತಲೆಯಂ ಚಿಗುಟಿದೊಡಾ ಬ್ರಹ್ಮಕಪಾಲಮೀಶ್ವರನ ಕರಮಂ ಕಚ್ಚಿ ಆಹುತಿಯಂ ಬೇಡಿದೊಡೆ ತನ್ನ ಪರಮೈಶ್ವರ್ಯಮನೊಂದಿಲ್ಲದಿತ್ತೊಡಂ ತೃಪ್ತಿಪಡೆಯದಿರೆ ತಾನು ಉಣ್ಬಲುಡಲುಮಿಲ್ಲದೆ ಬ್ರಹ್ಮಕಪಾಲಮಂ ಪೊರೆಯಲಿಲ್ಲದೆ ತ್ರಿಲೋಕದೊಳು ಭಿಕ್ಷಾಟನಮಂ ಮಾಡುತ್ತಂ ಕೇವಲ ದಾರಿದ್ರದಿಂದೊರಲುತ್ತಿರಲುಮೆಯಿಂತೆಂದಳು

ವೃತ್ತ || ಕೃಷಿತೋ ನಾಸ್ತಿ ದುರ್ಭಿಕ್ಷಂ ಜಪತೋ ನಾಸ್ತಿ ಪಾತಕಮ್
ಮೌನತಃ ಕಲಹೋ ನಾಸ್ತಿ ನಾಸ್ತಿ ಜಾಗರತೋ ಭಯಮ್ ||

ಎಂಬುದರಿಂ

ಶ್ಲೋಕ || ಕೃಷ್ಣಾತ್ಪ್ರಾರ್ಥಯ ಮೆದಿನೀಂ ಧನಪತೇರ್ಬೀಜಂ ಬಲಂ ಲಾಂಗಲಂ
ಪ್ರೇತೇಶಾನ್ಮಹಿಷಂ ವೃಷೋಸ್ತಿ ಭವತಃ ಫಾಲಂ ತ್ರಿಶೂಲದಪಿ ಶಕ್ತಾಹಂ ತವ ಪಾನಭಕ್ತಕರಣೇ ಗೋರಕ್ಷಣೆ ಷಣ್ಮುಖಃ
ದಿಗ್ದಾಹಂ ತವ ಭಿಕ್ಷಯಾ ಕುರು ಕೃಷಿಂ ಗೌರೀತ್ಯವೋಚಚ್ಛಿವಃ ||

ಎಂದನೇಕತೆರದಿಂ ಬುದ್ಧಿಗಲಿಸಲು ದಶಮಕ್ಕೆ ಗುರು ಬಂದು ಎಲ್ಲೂ ನಿಲಲೆಡೆಯಿಲ್ಲದೆ

ಶ್ಲೋಕ || ಹರಿಣಾಪಿ ಹರೇಣಾಪಿ ಬ್ರಹ್ಮಾಣಾಪಿ ಸುರೈರಪಿ
ಲಲಾಟಲಿಖಿತಾರೇಖಾ ಪರಿಮಾರ್ಷ್ಪುಂ ನ ಶಕ್ಯತೇ ||

ಅದರಿಂದೊಂದು ಕಾನನಮನೆಯ್ದಿ ಚಿಂತಾಕ್ರಾಂತನಾಗಿರಲದಂ ವಿಷ್ಣು ಕೇಳಿ ಬರಲೆಂದಿಪ್ಪಿನಮಾ ಬರವಂ ಕೇಳಿ

ವೃತ್ತ || ಕೃಷ್ಣಸ್ಯಾಗಮನಂ ನಿಶಮ್ಯ ಸಹಸಾ ಕೃತ್ವಾ ಫಣೀಂದ್ರಂ ಗುಣಂ
ಕೌಪೀನಂ ಪರಿಧಾಯ ಚರ್ಮ ಕಠಿಣಂ ಶಂಭುಃ ಪುರೋ ಧಾವತಿ
ದೃಷ್ಟ್ವಾ ಕೃಷ್ಣರಥಂ ಸಕಂಪ ಹೃದಯಃ ಸರ್ಪಃ ಪತದ್ಭೂತಲೇ
ಕೃತ್ತಿರ್ವಿಸ್ಫುಲಿತಾಪ್ರಿಯಾನತನಮುಖೋ ನಗ್ನಃ ಶಿವಃ ಪಾತು ವಃ ||

ಅಂತಾಗಿ ಬ್ರಹ್ಮಕಪಾಲಂ ಕಚ್ಚಿ ತನಗಾದ ದುಃಖಮಂ ಪೇಳೆ ಚಕ್ರಪಾಣಿಯೆಂದನೆಲೆ ಕಪಾಲವೆ ನಿನಗೆ ತೃಪ್ತಿಯಪ್ಪಂತು ಮಾಳ್ಪೆ ಪರಮೇಶನಂ ಬಿಟ್ಟೆನ್ನ ಕೈಗೆ ಬಪ್ಪುದೆಂದು ತನ್ನ ಕರತಳಮನೊಡ್ಡಿಕರೆವುದುಂ ನೀ ಬಹು ಚಾಳಕನಪ್ಪುದರಿಂ ನಂಬಲರಿದೆಂದೊಡಂ ನಂಬಿಸೆ ಈಶನ ಹಸ್ತದಿಂ ಕೃಷ್ಣನ ಹಸ್ತಕ್ಕೆ ನೆಗೆದು ಬಪ್ಪಲ್ಲಿ ತನ್ನ ಕೈಯಂ ತೆಗೆವುದು ಭೂಮಿಯೊಳ್ಬಿದ್ದು ಹಿಡಿ ಶಾಪಮನೆನಲಾಕ್ಷಣದೊಳೆ ತನ್ನುರಮನುಗುರಿಂ ಸೀಳ್ದಾನೆ ಶುಂಡಿಲಗಾತ್ರ ರಕ್ತಧಾರೆಯನಾ ಕಪಾಲಂ ತುಂಬುವುಂತೆ ಬಿಡಲದು ಪೂರಮಾಗಿ ನೊರೆಯುಗಲೆದೆಯಂ ಮುಚ್ಚಿದೊಡೆ ಆ ನೂರೆಯಿಂಗಿ ಬತ್ತದನಿತು ಕಡಮೆಯಾಗೆ ಇದಕ್ಕಾವುದುಮೆಂದೊಡೆ ಕೃಷ್ಣನೆಂದನೀ ನೊರೆ ಹಿಂಗಿ ಬತ್ತದ ಪ್ರಮಾಣ ಕಡಮೆಯಾದುದಕ್ಕೆ ಮುಂದೆ ಪರಶುರಮ ರಾಮ ಕೃಷ್ಣನೆಂದು ಮೂರುಂ ಅವತಾರಮನೆತ್ತಿ ಅನೇಕ ಕೋಟಿ ಬಲಮಂ ಕೊಂದುಂ ಆ ರಕ್ತದಿಂ ತುಂಬುವೆನೆಂದವತಾರಮನೆತ್ತಿದನೆಂಬುದಂ ತಿಳಿದುದ ನೀಂ ಸ್ತ್ರೀವಿಷಯವಿಲ್ಲದರಾರಿಪ್ಪರೆಂದು ಪೇಳ್ವುದುಂ ಇಂತಿದೆಲ್ಲಂ ವ್ಯಸನಿಗಳಪ್ಪ ಕವಿಗಳ ಚಾತುರ್ಯಮಲ್ಲದೆ ಸತ್ಯಮಲ್ಲೆಂದು ಕಾಣ್ಬುದು ಸರ್ವವ್ಯಾಪಿ ಶಿವೋಯಂ ಎಂದಣುರೇಣುತೃಣಾದಿಗಳೊಳೆಲ್ಲಂ ವ್ಯಾಪಿಯೆಂಬ ಶೈವಸಿದ್ಧಾಂತ ವಿರೋಧಮೆನೆ ವಿಷ್ಣುವುಂ ಸರ್ವ ವ್ಯಾಪಕಂ ಚಿತ್ಸ್ವರೂಪನೆಂದು ಮತ್ತಂ ಗೋಪಾಂಗನಾ ಲೋಲಂ ರಾಧಾಸಂಬೋಗಕೇಳೀವಿಲಾಸಂ ನವನೀತಚೋರಂ ಪರಸ್ತ್ರೀರತಂ ಬೌದ್ಧಾವತಾರಂ ಸ್ತ್ರೀಯರ ವಸ್ತ್ರಾಪಹಾರನಾಗಿ ಅವರ ನಗ್ನರೂಪ ಭಗಾವಲೋಕನ ಭ್ರಾಂತಂ ಜಾರ ಚೋರ ಶಿಖಾಮಣೀ ಮಾಯಾವಿ ಎಂಬುದುಂ ಬ್ರಹ್ಮಂ ಗಿರಿಜಾ ಕಲ್ಯಾಣದೊಳೆ ಪುರೋಹಿತನಾಗಿ ಗೌರಿಯ ರೂಪಿಂಗಳುಪಲು ಕಳೆ ಸಡಿಲಿ ಸುರಿಯುತ್ತಮಲ್ಲಿ ಕುಂಭಜಂ ವಾಲ್ಮೀಕಿ ಮೊದಲಾದ ಅನೇಕ ಋಷಿಗಳುತ್ಪತ್ತಿಯಾದಡಂ ಉಳಿದಿಂದ್ರಿಯಮಂ ಪದ್ಮದೊಳ್ಬಿಟ್ಟಲ್ಲಿ ಪುಟ್ಟಿದ ಭಾರತಿಕುವರಿಯೊಳೆ ಸುರತಕ್ರೀಡೆಯೊಳು ಬಹುದಿವಸಮಿರ್ದು ತುಂಬುರನಾರದರ ಗೀತಮಂ ಕೇಳಿ ಏಲ್ವಾಗಲಾಕೆಗೆ ಗರ್ಭಮಾಗಿರ್ದುದನಾಗ್ರಹಿಸಿದುದರಿಂ ದಂಡಂ ಲೋಕದಿಂದಧಿಕಮಾಯ್ತೆಂಬುದಿಂತಾದಿ ಅನೇಕಮುಪಾಧಿಕಮಂ ಪೇಳ್ವುದಿದು ಸಂಕ್ಷೇಪಮಾತ್ರಂ ಪೇಳ್ದೆನಿದೆಲ್ಲಂ ಪೂರ್ವಾಪರ ವಿರುದ್ಧಮಾಗಿ ತೋರುತಿಪ್ಪುದು.

ವೃತ್ತ || ಶಂಭು ಸ್ವಯಂಭು – ಹರಯೋ ಹರಿಣೇಕ್ಷಣಾನಾಂ
ಯೇನಾಕ್ರಿಯಂತ ಸತತಂ ಗೃಹಕುಂಭದಾಸಾಃ
ವಾಚಾಮಗೋಚರ ಚರಿತ್ರ ಪವಿತ್ರತಾಯಾ
ತಸ್ಮೈ ನಮೋ ಭಗವತೇ ಮಕರಧ್ವಜಾಯ ||

ಶ್ಲೋಕ || ಮತ್ತೇಭಕುಂಭದಲನೇ ಭುವಿ ಸಂತಿ ಶೂರಾಃ
ಕೇಚಿತ್ಪ್ರಚಂಡ ಮೃಗರಾಜವಧೇsಪಿ ದಕ್ಷಾಃ
ಕಿಂ ತು ಬ್ರವೀಮೀ ಬಲಿನಾಂ ಪುರತಃ ಪ್ರಸಹ್ಯಾ
ಕಂದರ್ಪದರ್ಪದಲನೇ ವಿರಲಾ ಮನುಷ್ಯಾಃ ||

ಎಂದು ಹೆಣ್ಣು ಹೊನ್ನು ಮಣ್ಣೆಂಬೀ ಮೂರರ ಆಸೆಯಂ ತೊರೆದು ಸಕಲೋಪಾಧಿ ನಿರ್ಮುಕ್ತರಾಗಿ ಸರ್ವಜ್ಞರಾದ ಮಹಾಪುರುಷ ಇನ್ನಪ್ಪ ಮಹಾ ಪುರುಷರುಮಪ್ಪರು. ಸ್ತ್ರೀಯರೊಳು ಮಹಾಪುರುಷರ ಸವಿತ್ರಿಗಳು ಯಶಶ್ವತಿ, ಸುನಂದಾ, ಸೀತಾ, ತಾರಾ, ಮಂಡೋದರಿ, ರೇವತಿ, ಪ್ರಭಾವತಿಯರ್ವೊದಲಾದ ಪುಣ್ಯಸ್ತ್ರೀಯರವರಿಂದಂ ಸ್ವರ್ಗಾಪವರ್ಗಕ್ಕೆ ಕಾರಣಮಪ್ಪುದು. ಪುರುಷಂಗೆ ಸುಗುಣಮುಳ್ಳ ಸ್ತ್ರೀ ದೊರಕಿದೊಡೆ ಉಭಯ ಲೋಕ ಸೌಖ್ಯಂ ದೊರೆಕೊಳ್ಗುಂ,

ಶ್ಲೋಕ || ವಸ್ತ್ರ ಮುಖ್ಯಮಲಂಕಾರಂ ಘೃತಮುಖ್ಯಂ ತು ಭೋಜನಮ್
ಗುಣಮುಖ್ಯಾಸ್ತು ನಾರ್ಯಸ್ತ್ಯುಃ ವಿದ್ಯಾಮುಖ್ಯಾಸ್ತು ಬ್ರಾಹ್ಮಣಾಃ ||
ಅನುಕೂಲಾಂ ವಿಮಲಾಂಗೀಂ ಕುಲಜಾಂ ಕುಶಲಾಂ ಸುಶೀಲ ಸಂಪನ್ನಾಮ್
ಪಂಚಲಕಾರಾಂ ಭಾರ್ಯಾಂ ಪುರುಷಃ ಪುಣ್ಯೋದಯಾಲ್ಲಭತೇ ||

ವೃತ್ತ || ಕಾರ್ಯೇಷು ಮಂತ್ರಿ ಕರಣೇಷು ದಾಸೀ | ಭುಕ್ತೇಷು ಮಾತಾ ಶಯನೇಷುವೇಶ್ಯಾ
ಧರ್ಮಾನುಕೂಲಾ ಕ್ಷಮಯಾ ಧರಿತ್ರೀ | ಷಟ್ಕರ್ಮನಾರೀ ಕುಲಮುದ್ಧರಂತಿ ||

ಎಂದಿಂತು ಧರ್ಮಶಾಸ್ತ್ರ ವಿನೋದದಿಂದಾಮೀರ್ವರುಂ ಪೋತ್ತುಗಳೆದಾ ಮರುದಿವಸಂ ಅಗ್ರಹಾರಮಂ ಪುಗಲಲ್ಲಿ ವಿಪ್ರರೆಲ್ಲಂ ವಾಣಿಜ್ಯ ರಾಜಸೇವಾದಿಗಳಿಂದಿರಲು

ಶ್ಲೋಕ || ಕೃಷಿವಾಣಿಜ್ಯಗೋರಕ್ಷಾ ರಾಜಸೇವಾ ಚಿಕಿತ್ಸಕಾಃ
ಯೇ ವಿಪ್ರಾಃ ಪ್ರತಿಪದ್ಯಂತೇ ಏತೇ ಕೌಲೇಯ ಬ್ರಾಹ್ಮಣಾಃ ||

ಎಂದಲ್ಲಿಂ ಪೋಗಿ ಶಾಹೋಜಿರಾಯನಂ ಕಾಣಲಾತಂ ಮರ್ಯಾದೆಯಿಂದಿದಿರೆದ್ದಿಚ್ಛಾಕಾರಮಂ ನುಡಿದುಚಿತಾಸನದೊಳ್ಕುಳ್ಳಿರಿಸಿ ನಮ್ಮ ಪೂರ್ವಾಪರ ಸಂಬಂಧಮಂ ಕೇಳ್ದು ಯೋಗ್ಯ ಬ್ರಾಹ್ಮಣರೆಂದಾನತನಾಗಿ ತಪದಿಂ ರಾಜ್ಯಂ ರಾಜ್ಯದಿಂ ನರಕಮೆಂಬುದು ನಿಶ್ಚಯಮೇ ಪೇಳಿಂ ಎನಲದು ನಿಶ್ಚಯಂ ಈ ಭವದೊಳಾವುದೊಂದು ವಸ್ತುವಂ ವ್ರತಂ ಮಾಡಿ ಬಿಟ್ಟಡಂ ಒಂದಕ್ಕೆ ನೂರಾಗಿ ಮುಂದಣಭವಕ್ಕೆ ಬಪ್ಪುದು, ಇಚ್ಛಾ ನಿರೋಧಂ ತಪಃ ಎಂಬುದರಿಂ ಭೋಗೋಪಭೋಗ ವಸ್ತುಗಳೊಳಾಸೆಯಿಲ್ಲದೆ ಬಿಟ್ಟು ವೈರಾಗ್ಯದಿಂದಿಪ್ಪುದದುವೇ ತಪಸೆಂಬುದರಿಂ ವಿಶೇಷ ಭೋಗೋಪಭೋಗಮುಳ್ಳ ರಾಜ್ಯಸುಖಮಪ್ಪುದದರೊಳು ಮತ್ತನಾಗದೆ ಜ್ಞಾನದಿಂ ತತ್ವಮನರಿದುಂ ಈ ರಾಜ್ಯದೊಳಪ್ಪ ಸುಖಂ ಸ್ಥಿರವಿಲ್ಲೆಂದು ಭಾವಿಸುತ್ತಂ ಉದಾಸೀನದಿಂ ನೀರೋಳಿರ್ದ ನೀರೇಜ ಪತ್ರಂ ಎಂತು ನೀರಂ ಸೋಂಕದಿಪ್ಪಂತೆ ಬಾಹ್ಯಾಭ್ಯಂತರ ಜ್ಞಾನಸಂಪನ್ನನಾಗಿ ಭೋಗದೊಳಿರ್ದಡಂ ಭೂಮಿಯೊಳ್ ಪೂಳ್ದ ಲೋಹಂ ಕೆಡವುದಲ್ಲದೆ ಸುವರ್ಣಮೆಷ್ಟು ದಿವಸಮಿರ್ದೊಡಂ ಕೆಡದಂತೆ ಜ್ಞಾನಿಯಂ ಕರ್ಮಂ ಕೆಡಿಸಲಾರದು, ಅದರಿಂ ರಾಜಂಗೆ ಅಂತರಂಗದೊಳು ನಿಶ್ಚಯಜ್ಞಾನಂ ದೊರೆಕೊಂಡೊಡೆ ಈಗಲು ಧರಾಪತಿ ನಾಳೆ ಭವಕ್ಕೆ ಸ್ವರ್ಗಪತಿ ಮುಂದೆ ಮುಕ್ತಿಪತಿಯಪ್ಪಂ. ಮರುಳಾಗಿ ನಿರ್ದಯನಹಂಕಾರಿ ವ್ಯಸನಿಯಾದವಂಗೆ ನರಕಂ ತಪ್ಪದೆಂಬುದುಮಾಕ್ಷಣದೊಳೆ ವಿದ್ವಾಂಸರೊಳು ಸಜ್ಜನರಪ್ಪ ನಾಲ್ವರಂ ಬರಿಸಿ ತನ್ನ ಜ್ಞಾನಂ ಜಾರಿದೊಡಾಗಳೆ ಕೂಡುವಂತೆ ತಾನು ಪೂವಾಪರದೊಳುಂ ದಕ್ಷಿಣೋತ್ತರದೊಳುಂ ನಾಲ್ವರುಂ ನಾಲ್ದೆಸೆಯೊಳ್ನಿಂದು ಒಂದು ಮುಹೂರ್ತವಾಗಲ ಹರ್ನಿಶಿಯೊಳು ಬಿಡದೆ

ಶ್ಲೋಕ || ತ್ಯಜ ದುರ್ಜನಸಂಸರ್ಗಂ ಭಜ ಸಾಧು ಸಮಾಗಮಮ್
ಕುರು ಪುಣ್ಯಮಹೋರಾತ್ರಂ ಸ್ಮರ ರೂಪಮನಿತ್ಯತಾಮ್ ||

ಎಂದೀ ನಾಲ್ಕು ಚರಣಂಗಳೊಳೊಂದೊಂದು ಚರಣಮಂ ಪೂರ್ವಾದಿಯಾಗಿ ನಿಂದಾತನ ಕಿವಿಯೊಳ್ಪುಗುವಂತೆ ಪೇಳಿಮೆಂದವರ್ಗೆ ವಿಶೇಷ ಜೀವನಕ್ಕೆ ಸಂಬಳಂಗೊಟ್ಟು ಎಚ್ಚರಿಸಲು ನಿಯಮಿಸಿದನೆಮಗಂ ಭೂರಿದಾನಂಗೊಟ್ಟು ಕಳುಹಿಸಲಲ್ಪಿಂ ಮಾರ್ಗಮಾಗೆ ಶ್ರವಣಬೆಳ್ಗುಳಕ್ಕೆ ಬಂದಾ ಮಠದ ಜೈನತಪಸ್ವಿಗಳಂ ಕಾಣಲವರು ನಾಲ್ಕು ಜನ ಮಹಾ ವಿದ್ವಾಂಸರು ಸಹಿತಂ ಧರ್ಮಪ್ರಸಂಗದೊಳಿರ್ದೆಮ್ಮೆ ವಿಚಾರಪೂರ್ವಕಂ ಕುಳ್ಳಿರಿಸಿ ಪ್ರಸಂಗಿಸೆದೆವವರೊಳ್

ಶ್ಲೋಕ್ || ಸಕಲೋಪಾಧಿನಿರ್ಮುಕ್ತಂ ಜ್ಞಾನಾನಂದೈಕ ರೂಪಕಮ್
ನಿಷ್ಕಳಂಕಂ ನಿರಾಪೇಕ್ಷಂ ವಂದೇ ಸತ್ವಹಿತಪ್ರದಂ ||
ಕ್ಷುಧಾ ತೃಷಾ ಭಯಂ ದ್ವೇಷೋ ರಾಗೋ ಮೋಹಶ್ಚ ಚಿಂತನಮ್
ಜರಾ ರುಚಾ ಚ ಮೃತ್ಯುಶ್ಚ ಸ್ವೇದಃ ಖೇದೋ ಮದೋರತಿಃ ||
ವಿಸ್ಮಯೋ ಜನನಂ ನಿದ್ರಾ ವಿಷಾದೋsಷ್ಟಾದಶ ಸ್ಮೃತಾಃ
ತ್ರಿಜಗತ್ಸರ್ವಭೂತಾನಾಂ ದೋಷಾಃ ಸಾಧಾರಣಾ ಇಮೇ ||
ಏತೈರ್ದೋಷೈರ್ವಿನಿಮುಕ್ತಃ ಸೋsಯಮಾತ್ಮಾ ನಿರಂಜನಃ
ವಿದ್ಯಂತೇ ಯೇಷು ತೇ ನಿತ್ಯಂ ತೇ ಚ ಸಂಸಾರಿಣಃ ಸ್ಮೃತಾ ||
ಸಂತಿ ಕ್ಷುಧಾದಯೋ ದೋಷಾಃ ಕಿಯಂತಶ್ಚೆಜ್ಜೆನೇಶಿನಃ
ನಿರಾಗೋ ವೀತರಾಗೋಸೌ ಪರಮಾತ್ಮಾ ಕಥಂ ಭವೇತ್ ||

ವೃತ್ತ || ಯೋ ವಿಶ್ವಂ ವೇದವೇದ್ಯಂ ಜನನಜಲನಿಧೇರ್ಭಂಗಿನಃ ಪಾರದೃಶ್ಪ್ವಾ
ಪೂರ್ವಾಪರ್ಯಾವಿರುದ್ಧಂ ವಚನಮನುಪಮಂ ನಿಷ್ಕಳಂಕಂ ಯ ದೀಯಮ್
ತಂ ವಂದೇ ಸಾಧು ವಂದ್ಯಂ ಸಕಲ ಗುಣನಿಧಿಂ ಧ್ವಸ್ತದೊಷಡ್ವಿಷಂತಂ
ಬುದ್ಧಂ ವಾ ವರ್ಧಮಾನಂ ಶತದಳನಿಳಯಂ ಕೇಶವಂ ವಾ ಶಿವಂ ವಾ ||
ಭವಬೀಜಾಂಕುರ ಜನನ | ರಾಗಾದ್ಯಾಃ ಕ್ಷಯಮುಪಾಗತಾಃ
ಯಸ್ಯ ಬ್ರಹ್ಮಾ ವಾ ವಿ | ಷ್ಣುರ್ವಾ ಮಹೇಶ್ವರೋ ವಾ ನಮಸ್ತಸ್ಮೈ ||

ಎಂಬುದರಿಂ ಸುಗುಣಮುಳಂ ದೆವನಲ್ಲದೆ ರಾಗಾದ್ಯುಪಾಧಿಸಹಿತನೆಂದು ಪೇಳ್ವುದರಿಂ

ಶ್ಲೋಕ || ಪ್ರಮದಾ ಭಾಸತೇ ಕಾಮಂ ದ್ವೇಷಮಾಯುಧ ಸಂಗ್ರಹಃ
ಅಜ್ಞಾನಂ ಅಕ್ಷಸೂತ್ರಂ ಚ ಭಾವೇ ಕಮಂಡುಲುಃ ||

ವೃತ್ತ || ದ್ವೇಷಂ ವಾ ಭಯಮಸ್ತ್ರತೋ ವಸನತೋ ಲಜ್ಜಾ ಸುರಕ್ಷಾಂ ತನೋಃ
ಸ್ಮಾತ್ಮಾಧೀನಸುಖಾತ್ಯಯಂ ವಿವಶತಾಂ ಸ್ತ್ರೀತ್ವಾಶುಚಿತ್ವಂ ತೃಷಾಂ
ಕುಂಡೀತೋ ಜಪಮಾಲಿಕಾಶ್ರಯಣತೋsಜ್ಞತ್ವಪ್ಟನ್ನತಾ
ರಾಗಂ ಭೋಗಮಲಂಕೃತೇ ಪ್ರಥಮತೊ ವಂದೇ ಕಥಂ ಮಾದೃಶಾನ್ ||

ಇಂತು ಪೇಳಲೆಂತೆನೆ ವಿಶ್ವಾಸಿಯಪ್ಪ ವೀತರಾಗನೆಮಗಿಷ್ಟಮಪ್ಪ ಸ್ವರ್ಗ ಮುಕ್ತಿ ಸುಖಮನೆಂತು ಕೊಡುವನಾತನಂ ನುತಿಸಿದೊಡಂ ನಿಂದಿಸಿದೊಡುಂ ಪ್ರೀತಿಕೋಪಮಿಲ್ಲದುದರಿಂದೆಂದು ಕೆಳಲಿಂತೆಂದರು

ಬೇಸಗೆಯೊಳ್ಬಟ್ಟೆವೋಪ ಮನುಜಂ ಮಹಾಛಾಯಮಾಗಿರ್ಪ ವೃಕ್ಷಮಂ ಕಂಡು ಪೊರ್ದಿದರೆ ತಾಪಮಂ ಕೆಡಿಸದಿಪ್ಪುದೆ ಪೊರ್ದದವನಂ ಪೊರ್ದೆಂದು ಪೇಳ್ವುದೆ ಇಲ್ಲ ! ಕಲ್ಪವೃಕ್ಷಂ ಬೇಡಿದೊಡೆ ಮನಸಾಭೀಷ್ಟಮೆಲ್ಲಮಂ ಕುಡುವುದು ಬೇಡದಿರ್ದಂವಂಗೆ ಕುಡದಂತೆ

ಶ್ಲೋಕ || ಅನಾತ್ಮಾರ್ಥ ವಿನಾ ರಾಗೈಃ ಶಾಸ್ತಾ ಶಾಸ್ತಿ ಸತೋ ಹಿತಮ್
ಧ್ವನನ್ ಶಿಲ್ಪಿಕರಸ್ಪರ್ಶಾನ್ಮುರಜಃ ಕಿಮಪೇಕ್ಷ್ಯತೇ ||

ಎಂದು ಮತ್ತಮಿಂತೆದರು

ಶ್ಲೋಕ || ವಿರಿಂಚಿರ್ಜಗತಃ ಕರ್ತಾ ಸಹಾರ್ತಾ ಗಿರಿಜಾಪತಿಃ
ರಕ್ಷಕಃ ಪುಂಡರಿಕಾಕ್ಷ ಇತ್ಯೂಚುಃ ಶ್ರುತಿವೇದಿನಃ ||
ಭಸ್ಮಸಾತ್ಕುರುತೇ ರುದ್ರಃ ತ್ತ್ರೈಲೋಕ್ಯಂ ಸ್ವಲ್ಪ ಚಿಂತಯಾ
ತಪೋ ಸಂವಸತಿ ಕ್ವಾಸೌ ಗಂಗಾಗೌರೀ ಸಮನ್ವಿತಃ ||
ಗ್ರಾಮಮೇಕತರಂ ಹಂತಿ ಸ ಪಾಪೀ ಭಣ್ಯತೇ ಜನೈಃ
ಯೊ ವಿಶ್ವಂ ನಿರ್ದಹನ್ ಶಂಭುಸ್ಸಕಥಂ ಯಾತಿ ಪೂಜ್ಯತಾಮ್ ||
ಚರಾಚರಮಿದಂ ವಿಶ್ವಂ ಸಶೈಲವನಸಾಗರಮ್
ಕೃತ್ವಾಸ್ವೋದರ ಮಧ್ಯಸ್ಥಂ ಸಂರಕ್ಷತಿ ಜನಾರ್ದನಃ ||

ಮತ್ತಂ

ಶ್ಲೋಕ || ಮಾತೃದ್ರೋಹೀ ಪಿತೃದ್ರೋಹೀ ಭ್ರಾತೃದ್ರೋಹೀ ತಥೈವ ಚ
ಸ್ವಾಮಿದ್ರೋಹೀ ಗುರುದ್ರೋಹೀ ಷಡೇತೇ ಮಮ ಬಾಂಧವಾಃ ||

ವೃತ್ತಂ || ಕಾನೀನಸ್ತು ಪಿತಾಮಹಃ ಸಮಭವತ್ ಪಿತ್ರಾದಯೊ ಗೋಲಕಾಃ
ತತ್ಪುತ್ರಾಃ ಪೃಥಗನ್ಯತಾತ ಜನಿತಾಃ ಕುಂಡ್ಯಾಹ್ಯಮೀ ಪಾಂಡವಾಃ
ಪಂಚಾನಾಂ ದ್ರುಪದಾತ್ಮಜಾ ಸಹಚರೀ ಯದ್ದೇಹತಾಬಾಂಧವಾಃ
ಶ್ರೀಕೃಷ್ಣೇನ ಕುಲಂ ಕಲಂಕಮಲಿನಂ ನೀತಂ ಜಗದ್ವಂದ್ಯತಾಮ್ ||

ಇತ್ಯಾದ್ಯನೇಕ ಭೇದಾಭೇದ ವಿಪರ್ಯಾಯಮಂ ಪೇಳ್ವುದುಂ ಏಕಮೂರ್ತಿಗೆ ವಿಕಲ್ಪದಿಂ ನಾನಾರೂಪಂ ಪೇಳ್ವರೆಲ್ಲಾಮೋರ್ವನೆ ಅಲ್ಲದೆ ಬೇರಿಲ್ಲ ”ಏಕಮೂರ್ತೇಃ ತ್ರಯೋ ಭಾಗಾಃ ಬ್ರಹ್ಮ ವಿಷ್ಣು ಮಹೇಶ್ವರಾಃ” ಎಂಬುದುಂ” ಏಕಾ ಮೂರ್ತಿಸ್ತ್ರಯೋ ಭಾಗಾಃ ಸತ್ಯಂ ಸ್ಯಾದೀದೃಶಂ ವಚಃ ನ ಶ್ಯವೊ ವಂದತೇ ವಿಷ್ಣುಂ ಹರಿಭಕ್ತಾಸ್ತು ನೋ ಶಿವಮ್” || ಎಂಬುದುಮೇಕೋದೇವ ಎಂಬುದಲ್ಲದೆ ಭಿನ್ನವಿಲ್ಲೆಂದಾನಿಂತೆಂದಂ

ವೃತ್ತ || ಯಂ ಶೈವಸ್ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನೋ
ಬೌದ್ಧಾ ಬುದ್ಧ ಇತಿ ಪ್ರಮಾಣಪಟವಃ ಕರ್ತೇತಿ ನೈಯಾಯಿಕಾಃ
ಅರ್ಹನ್ನಿತ್ಯಪಿ ಜೈನಶಾಸನರತಾಃ ಕರ್ಮೇತಿ ಮೀಮಾಂಸಕಾಃ
ವಿಷ್ಣು ರ್ವೈಷ್ಣವ ಶಾಸನಾದಿ ಜಗತಾಂ ದೇವೋ ಯುಗಾದೀಶ್ವರಃ ||

ಎಂದಪೇಕ್ಷ ಸಮಾಧಾನಮಾಗೆ ಪೇಳ್ದು ಸದ್ಗುರುವಿನುಪದೇಶದಿಂದರಿಯಲಕ್ಕು ಮೆಂಬುದುಂ “ಸ್ವಯಂ ತರನ್ ತಾರಯಿತುಂ ಸಮರ್ಥಃ” ಎಂಬುದರಿಂ ಗುರುವಪ್ಪಾತಂ ಜ್ಞಾನದೃಷ್ಟಿಯಿಂದ ಜ್ಞಾನಂಧಕಾರಂ ಪಿಂಗಿ ಮೋಕ್ಷಮಾರ್ಗಮಂ ಕಂಡರಿವಾತಃ ತನ್ನ ಪೊರ್ದಿದ ಜ್ಞಾನಲೋಚನಮಿಲ್ಲದರು ತಿಳಿವಂತು ಮೋಕ್ಷಮಾರ್ಗಮಂ ತೋರಿ ಸಂಸಾರಶರಧೀಯಂ ದಾಂಟಿಸುವಂ ಜ್ಞಾನಿಮಿಲ್ಲದ ಗುರುವಂ ಪೊರ್ದಿ ಮುಕ್ತಿ ಮಾರ್ಗಮಂ ಕಣ್ಬೆನೆಂಬಾತಂ ಕುರುಡಂ ಕುರುಡನಂ ನಂಬಿ ಪೋಗುತ್ತಮಿಬ್ಬರುಂ ಕುಳಿಯೊಳ್ಬಿದ್ದರಂತೆ ಸಂಸಾರದೊಳೆ ಬೀಳ್ವರಲ್ಲದೆ ಮುಕ್ತಿಯ ಕಾಣರದರಿಂ ಗುರೂಪದೇಶಮಿಲ್ಲದ ಜ್ಞಾನ ಚಾರಿತ್ರಾದಿ ಸಾಮಗ್ರೀಯಮೆಲ್ಲಂ ಅನಾಥಬಲದಂತಪ್ಪುದಾ ಗುರುವೆಂತೆಂದೊಡೆ

ಶ್ಲೋಕ || ವಿಷಯಾಶಾವಶಾತೀತೋ ನಿರಾರಂಭೋ ಪರಿಗ್ರಹಃ
ಜ್ಞಾನಧ್ಯಾನತಪೋರಕ್ತ ಸ್ತಪಶ್ವೀ ಸಂಪ್ರಶಸ್ಯತೇ ||

ಹೀಗಲ್ಲದೆ

ಶ್ಲೋಕ || ಸಂಗ್ರಂಥಾರಂಭಹಿಂಸಾನಾಂ ಸಂಸಾರಾವರ್ತವರ್ತಿನಾಮ್
ಪಾಷಂಡಿನಾಂ ಪುರಸ್ಕಾರೋ ಜ್ಞೇಯಂ ಪಾಷಂಡಿಮೋಹನಮ್ ||

ಎಂಬುದರಿಂ ನದೀಮೂಲ ಋಷೀಮೂಲಮನರ್ಥಕಮೆಂದು ನಾನಾ ಪ್ರಕಾರಮಂ ಕಲ್ಪಿಸಿ ವಿಪರೀತ ಮಿಥ್ಯಾ ಕರ್ಮೋದಯದಿಂ ಸ್ವೇಚ್ಛೆಯಿಂ ಶಾಸ್ತ್ರಮಂ ಕಲ್ಪಿಸಿಪ್ಪುದರಿಂ ಜ್ಞಾನಶೂನ್ಯರು ನಂಬುವರು ವಿಶ್ವಾಮಿತ್ರ ಪರಾಶರ ಪ್ರಭೃತಯೋವಾ ತಾಂಬು ಪರ್ಣಾಶನಾಃ ತೇಪಿ ಸ್ತೀಮುಖ ಪಂಕಜಂ ಸುಲಲಿತಂ ದೃಷ್ಟಾಪಿ ಮೋಹಗತಾಃ ನೀಚಜಾತಿಸಮುದ್ಭವರುಂ ಆಸೆ ರೌದ್ರ ಮೋಹಾದಿಗಳೊಳ್ ಕೂಡಿದ ನಿಷ್ಕರುಣಿಗಳುಂ ವಂಚಕರುಂ ಡಂಬಕರುಂ ಸ್ತ್ರೀಯರ ಸೇವಿಸುವ ಕೊಳಕರುಂ ಮುಕ್ತಿಮಾರ್ಗಮನರಿವರಲ್ಲದರಿಂ ರಾಗದ್ವೇಷಾದಿ ವಿಷಯಮುಳ್ಳರಂ ಬಿಟ್ಟು ಸದ್ಗುರುವಂ ಪೊರ್ದುವುದೆಂದೊರೆಯುತ್ತಿರಲು ನೀವು ವೇದಬಾಹ್ಯರೆಂಬುದರಿಂ ವೇದವಿಲ್ಲದ ಬ್ರಾಹ್ಮಣನೆಂತಪ್ಪನೆಂಬುದುಂ ತರ್ಕಕರ್ಕಶಮನೆತ್ತಿ ನಮ್ಮನೆ ವೇಧಬಾಹ್ಯರೆಂದಾರೋಪಿಸಿ ಅಪೌರುಷೇಯಮಾದನಂತ ವೇದ ಶಾಸ್ತ್ರಂ ಸರ್ವಜ್ಞಮುಖಜನಿತಮಾಗಿ ಅನಾದಿ ಸಂಸಿದ್ಧಮಾಗಿ ವರ್ತಿಸುತ್ತಿಪ್ಪುದುಂ. ಈ ಹುಂಡಾವಸರ್ಪಿಣೀಕಾಲದೋಷದಿಂದಾದಿಯೊಳೆ ಮರೀಚಿಯೆಂಬಂ ಮಿಥ್ಯಾಕರ್ಮೋದಯದಿಂ ಕಪಿಲ ಸಿದ್ಧಾಂತಮಂ ಮಾಡಿರ್ದನದರಿಂದಲೆ ಷಟ್‌ಶಾಸ್ತ್ರಂಗಳು ಪುಟ್ಟಿದವಲ್ಲಿ ಬಹುಕಾಲಂ ಪೋಗಲರುವತ್ತು ಸಾಸಿರ ದೇವತೆಗಳ್ಗಧಿಪಂ ಮಹಾಕಾಳನೆಂಬೊಂ ತನ್ನ ಶತ್ರುವಿಧ್ವಂಸನ ನಿಮಿತ್ತ ವಿದ್ಯಾನುವಾದ ಶಾಸ್ತ್ರಮನೆತ್ತಿ ಅಥರ್ವಣೇದಮೆಂದು ಚತುಃ ಪಷ್ಟಿ ಮರೀಚಿಗಳನುತ್ಪಾದಿಸಿ ಪರ್ವತನೆಂಬ ಬ್ರಾಹ್ಮಣಂ ವಿಪರೀತಗ್ರಾಹಿಯಾತಂಗೆ ಕೊಟ್ಟು ಹಿಂಸೆಯಿಂ ಪುಣ್ಯ ಬಪ್ಪುದೆಂದು ವಿಧಿಪೂರ್ವಕಮಂತ್ರದಿಂ ಮಾಳ್ಪುದೆಂದು ಪೋಗಲಾಪೊತ್ತಿಗೆ ಸಮುದ್ರದೊಳ್ ಬೀಳ್ವುದುಂ ಒಂದು ಮಹಾಮತ್ಸ್ಯ ಜನಿದು ಕರೆಯೊಳುಗುಳ್ದಿರೆ ರಾವಳೇಶ್ವರಂ ಕಂಡದಂ ನೋಡಿ ಪೋಗಿದ್ದುದಂ ಖಂಡಿಸಿ ಬೇಕಾದನಿತಂ ಸಂಗ್ರಹಿಸಿ ತಂದು ಪರ್ವತಂ ತನ್ನ ಕಾರ್ಯಕ್ಕಾಗಿ ಹದಿನೆಂಟು ವಿದ್ಯಾದೇವತೆಗಳಂ ಮಹಾಕಾಳನಿಂ ಪಡೆದು ಅಜೈರ್ಹೋತವ್ಯಮೆಂಬ ಸೂತ್ರಕ್ಕೆ ತರುವಾಚಿಯಂ ಬಿಟ್ಟು ಪಶುವಾಚಿಯಂ ನಂಬಿ ಅಥರ್ವಣದೊಳೆ ಸರ್ವಾಭಿ ಪ್ರೇತಾರ್ಥಮಾಗೆಯಾ ವೇದಮಂ ವ್ಯಾಸಂ ನಾಲ್ಕಾಗಿ ಮಡಿಯವಕ್ಕವಯವಂ ಮೊದಲಾದವಂ ಮಾಡಿದನದರೊಳು ಯಜು ರುಕ್ ಸಾಮ ಮೂರಕ್ಕೆ ಪನ್ನಹನಸು ಮೊದಲಾಗಾದುದದರಿಂದ ನಿಮ್ಮ ವೇದಕ್ಕೆ ಕರ್ತೃವಿಲ್ಲ ವಕ್ತೃಪ್ರಮಾಣದಿಂ ವಚನಪ್ರಮಾಣಂ, ವಕ್ತೃಪ್ರಮಾಣವಿಲ್ಲದುದರಿಂ ವಚನಪ್ರಮಾಣಮಿಲ್ಲದರಿಂದಾ ವೇದಂ ಕರ್ಮಕಾಂಡ ವಿಶೇಷಮಲ್ಲದೆ ಮುಕ್ತಿಮಾರ್ಗವಿಲ್ಲದಿವರು ನಿರ್ಶಯಮಿಲ್ಲ ಪೂರ್ವಾಪರವಿರೋಧಮಪ್ಪುದದರಿಂ ನೀವೂ,

ಶ್ಲೋಕ || ಮಾನವಂ ವ್ಯಾಸವಾಶಿಷ್ಠಂ ವಚನಂ ವೇದಸಮ್ಮತಮ್
ಅಪ್ರಮಾಣಂ ಹಿ ಯೋ ಬ್ರೂಯಾತ್ಸಭವೇತ್ ಬ್ರಹ್ಮಘಾತಕಃ ||

ಎಂಬುದುಂ

ವೃತ್ತ || ಸಾಂಖ್ಯಂ ಯೌಗಮತಂ ವಿಶೇಷ ರಚಿತಂ ವೈಶೇಷಿಕಂ ವೈ ಪುನಃ
ಬ್ರಹ್ಮಾದ್ವೈತಮತಂ ಚ ವೈಷ್ಣವಮತಂ ಮಾಧ್ವಂ ಚ ರಾಮಾನುಜಮ್
ಭಾಟ್ಟಂ ವಾ ಪ್ರಥಿತಂ ಪ್ರಭಾಕರಮತಂ ನಿತ್ಯಂ ವಿರೋಧಾಸ್ಪದಂ
ಲೋಕೇ ಸಂಪ್ರತಿ ವೈ ಪರಸ್ಪರಮಿದಂ ವೇದಾಃ ಪ್ರಮಾಣಂ ಕಥಮ್ ||

ಅದರಿಂ

ಶ್ಲೋಕ || ಶ್ರುತಂ ಸುವಿಹಿತಂ ವೇದಂ ದ್ವಾದಶಾಂಗಮಕಲ್ಮಷಮ್
ಹಿಂಸೋಪದೇಶಯದ್ವಾಕ್ಯಂ ನ ವೇದೋsಸೌಕೃತಾಂತವಾಕ್ ||

ಅದರಿಂದೆಮಗೆ ಮಿಥ್ಯಾವೇದಂ ಪ್ರಮಾಣಮಿಲ್ಲ ವೇದಶಾಸ್ತ್ರ ಮಾವುದೆಂದೊಡೆ

ಶ್ಲೋಕ || ಆಪ್ತೋಪಜ್ಞಮನುಲ್ಲಂಘ್ಯಮದೃಷ್ಟೇಷ್ಟವಿರೋಧಕಮ್
ತತ್ವೋಪದೇಶಕೃತ್ಸರ್ವಂ ಶಾಸ್ತ್ರಂ ಕಾಪಥಘಟ್ಟನಮ್ ||

ವೃತ್ತ || ಅಪೌರುಷೇಯಾನಖಿಲಾನ ದೋಷಾ | ನಶೇಷವಿದ್ಭಿರ್ವಿಹಿತ ಪ್ರಕಾಶಾನ್
ಪ್ರಕಾಶಿತಾರ್ಥಾನ್ಪ್ರಯಜೇ ಪ್ರಮಾಣಂ | ಪ್ರವೇದಯ ದ್ವಾದಶದಿವ್ಯವೇದಾನ್ ||

ಎಂದು ಮರುಮಾತಿಂಗೆಡೆಯಿಲ್ಲದಂತೆ ಪ್ರಮಾಣನಿರ್ಣಯಮಂ ಪೇಳ್ದರೆಂದು ಚತುರ್ಮುಖಶಾಸ್ತ್ರಿಗಳು ರಾಜಒಡೆಯರವರ ಸಭಾಮಧ್ಯದೊಳು ಪೇಳುತ್ತಿಪ್ಪುದು ಕತಿಪಯಶಾಸ್ತ್ರಿಗಳೆಂದರು ನೀವು ಬಿರಿದುಳ್ಳ ಚತುರ್ಮುಖಶಾಸ್ತ್ರಿಗಳಾಗಿಯು ಬೌದ್ಧರ ಮಾತಿಂಗೆ ಪ್ರತ್ಯುತ್ತರವಿಲ್ಲದೆ ಆ ಶಾಸ್ತ್ರಮಂ ಪ್ರಕಟಿಸುವುದಿದು ಬಹು ಹಸನಾಗಿದೆಯೆಂದು ದುರ್ವ್ಯಾಜ್ಯಮನಾಡುವುದುಂ ಶಾಸ್ತ್ರಿಗಳೆಂದರು ಅಹಂಕಾರದಿಂ ಸತ್ಯಮತಮನರಿಯದೆ ಗುಣಕ್ಕೆ ಮತ್ಸರಂ ಮಾಳ್ಪಾತಂಗಿಹಪರದೊಳು ಸೌಖ್ಯಂ ದೊರೆಯಲಾರದದರಿಂದಜ್ಞಾನತ್ವದಿಂ ಮತಭೇದಮಂ ಕಾಣದೆ ಅನಾದಿಮಪ್ಪಾರ್ಹತಮತಮಂ ಬೌದ್ಧ ಮತಮೆಂದು ವಿಚಾರವಿಲ್ಲದೆ ಮಾತನಾಡಿದರೆ ಹ್ಯಾಗೆ ರಾಗದ್ವೇಷಮೋಹಗ್ರಸ್ಥರಾದರ್ಗೆ ದೇವಾದೇವ ಗುರ್ವಗುರು ಧರ್ಮಾಧರ್ಮ ಕಾರ್ಯಾಕಾರ್ಯ ಕೃತ್ಯಾಕೃತ್ಯ ಗುಣಾಗುಣಂಗಳು ತಿಳಿಯಲ್ಬಾರದು

ಶ್ಲೋಕ || ಅದೇವೇ ದೇವತಾ ಬುದ್ಧಿರತತ್ವೇ ತತ್ವನಿಶ್ಚಯಃ
ಮಿಥ್ಯಾತ್ವಾವಿಲಚಿತ್ತಸ್ಯ ಜೀವಸ್ಯಾ ಜಾಯತೇ ಯಥಾ ||
ಮಧುರಂ ಜಾಯತೇ ತೀಕ್ಷ್ಣಂ ತೀಕ್ಷ್ಣಂ ತು ಮಧುರಾಯತೇ
ಪಿತ್ತಜ್ವರಾರ್ತ ಜೀವಸ್ಯ ವೈಪರೀತ್ಯಂ ತಥಾಖಿಲಮ್ ||
ಮದ್ಯಪಾನಾತ್ಯದಾಸೇವೋ (?) ನ ಜಾನಾನ್ಯಹಿತಂ ಹಿತಮ್
ಧರ್ಮಾಧರ್ಮಂ ನ ಜಾನಾತಿ ಮಿಥ್ಯಾವಾಸನಯಾ ತಥಾ ||

ಎಂಬುದರಿಂ ಜೈನಮತ ಆದ ನಿರ್ದೋಷವಾದಂತಾದ್ದು. ಅಲ್ಲಿ ಗುರುಗಳ ಬಳಿಯೊಳಿರುವ ವಿದ್ಯಾಂಸರು ಚತುಃಶಾಸ್ತ್ರಪಂಡಿತರು ಷಡ್ಭಾಷಾಕವಿಚಕ್ರವರ್ತಿಗಳು ಅನೇಕ ತರ್ಕಕರ್ಕಶರು ಕಾವ್ಯ ನಾಟಕಾಲಂಕಾರ ಸಂಗೀತನಿಪುಣರು ವ್ಯಾಕರಣಂಗಳು

ಶ್ಲೋಕ || ಇಟಂಶ್ಚಂದ್ರಶ್ಚಾಪಿಶಲಃಕಾಶಕೃಚ್ಛಾಕಟಾಯನಃ
ಪಾಣಿನ್ಯಮರಜೈನೇಂದ್ರಾಃ ಭವಂತ್ಯಷ್ಟೌ ಸುಶಾಬ್ಧಿಕಾಃ ||

ಎಂಬುದಲ್ಲದೆ ಕೌಮಾರಾದಿಗಳ ವ್ಯಾಖ್ಯಾನಂಗಳೆಲ್ಲಮಂ ಬಲ್ಲರು ಪಿಂಗಲ ವರ್ಧಮಾನ ನಾಗರಾಜ ಸೈತವ ಕಾಶ್ಯಪ ವೃತ್ತರತ್ನಾಕರ ರತ್ನಮಂಜೂಷೆ ಛಂದೋರ್ನವಾದಿ ಶಾಸ್ತ್ರಪಾರಗಳು ಸಾಂಖ್ಯ ಸೌಗತ ಚಾರ್ವಾಕ ಯೌಗ ಮೀಮಾಂಸಕಾದಿಗಳಿಂ ಜಯಿಸಲಶಕ್ಯಮಪ್ಪುದರಿಂದಜಿತರು ಮತ್ತಂ ಯೋಗಿಣಿ ಸಂಗಿನಿ ಪ್ರಜ್ಞಾನಿ ಪ್ರಜ್ಞಪ್ತಿಗಳೆಂಬ ಮಹಾವಿದ್ಯದೊಳತಿನಿಪುಣರಾಗಿಪ್ಪರವರೊಳೆ ಮಾತನಾಡುವ ಸಾಮರ್ಥ್ಯರಾರುಮಿಲ್ಲ ಮಂತಿರ್ದೊಡಂ ನೀವು ನಮ್ಮಲ್ಲಿಯಿರುವಂಥಾ ವೇದ ಮಹಾಭಾರತ ರಾಮಾಯಣ ಮೊದಲಾದೆಲ್ಲಾ ಶಾಸ್ತ್ರಂಗಳನ್ನು ಪುಸಿಕಲ್ಪನೆಯಂ ಬೀರಿ ನೀವು ಪೇಳಿದ ನಾಮ ಲಿಂಗಾನುಶಾಸನ ಮೊದಾಲಾದ ನಿಘಂಟುಗಳೊಳಗೆಲ್ಲ ಶಬ್ದಂಗಳು ಸಂಭವಪರ್ವದೊಳೆ ನಿರ್ಣೈಸಿದ ಪ್ರಕಾರ ಆದಿತೇಯ ಮೊದಲಾದವಂ ಪ್ರಯೋಗಿಸಿರ್ಪರೆಂತು ಪುಸಿಯಂ ಬಿಡಿ ಎಂದು ಕೇಳ್ದೊಡೆ ಪೂರ್ವದೊಳೆ ಮಹಾಕವಿಗಳ್ಗೆ ವಿಪರೀತ ಮಿಥ್ವಾತ್ವ ಪುಟ್ಟಿ ಕಾಲದೋಷದಿಂ ದೈವಸಹಾಯಮಾಗೆ ಸ್ವೇಚ್ಛಾಬುದ್ಧಿಯಿಂದ ಇತಿಹಾಸಂಗಳಂ ಕಲ್ಪಿಸಿದ್ದರೆ ಆ ಪುರಾಣಂಗಳಂ ನೋಡಿ ಆ ಮರ್ಯಾದೆಯಲ್ಲಿ ಶಬ್ದಗಳಂ ನೋಡಿ ವಾಲ್ಮೀಕಿ ವ್ಯಾಸಾದಿಗಳು ನಿಘಂಟಂ ಮಾಡಿರ್ದುದರಿಂದ ಲೋಕರೂಢಿಯಾಗಿರ್ದುದರಿಂದಾ ಶಬ್ದಂಗಳಂ ಸರ್ವತ್ರ ಸಮಾನಮಾಗಿ ಪೇಳ್ದರಲ್ಲದೆ ಪ್ರಮಾಣಶಬ್ದಂಗಳಲ್ಲವವಂ ಬಿಟ್ಟರೆ ಆರುಂ ನೋಡರು ಎಂದು ನಮ್ಮ ಶಾಸ್ತ್ರಗಳೆಲ್ಲಂದು ಶ್ರುತಿಯೆಂಬರೆಂದು ಪೇಳೆ ರಾಜ ಒಡೆಯರ ಸಭೆಯೊಳಿರ್ದ ಮಿಥ್ಯಾಗ್ರಸ್ತರಾದ ವಿದ್ವಾಂಸರೆಲ್ಲಂ ಕೋಪಿಸಿ ಈ ಶಾಸ್ತ್ರಿಯು ಪರಮತಮಂ ಕೊಂಡಾಡಿ ತನ್ನ ಮತಮಂ ದೂಷಿಸುವನೀತ ಪತಿತನಾಗಲ್ವೇಳ್ಕು ನಮ್ಮ ಸಭೆಗೆ ಯೋಗ್ಯನಲ್ಲನೆಂದು ಕೆಲಂಬರು ನಿರಾಕರಿಸುವುದುಂ ಕೆಲಂಬರೆಂದರು ತಮಗೆ ತಿಳಿವಷ್ಟಂ ಪೇಳ್ದೊಡೆ ದೋಷಮೇನೆಂಬುದು ಚತುರ್ಮುಖಶಾಸ್ತ್ರಿ ತನ್ನೊಳಿಂತೆಂದಂ

ಶ್ಲೋಕ || ಮೂರ್ಖೈರಪಕ್ವ ಬೋಧೈಶ್ಚ ಸಹಾಲಾಪೈಶ್ಚತುಷ್ಫಲಮ್
ವಾಚಾ ವ್ಯಯಂ ಮನಸ್ತಾಪಂ ತಾಡನಂ ದುಷ್ಪ್ರವಾದನಮ್ ||

ಎಂದು ಮೌನದಿಂ ರಾಜಒಡೆಯರಿಂ ಯಥೋಚಿತಮರ್ಯಾದೆಯಿಂ ಪೊರಮಟ್ಟು ಪೋಪ ಶಾಸ್ತ್ರಿಯಂ ಕೆಲಂಬರಿದೇಕೆ ಮೌನದಿಂ ಪೋಪಿರವರಾಡಿದ ಮಾತಿಂಗೆ ಪ್ರತ್ಯುತ್ತರಂಗೊಡದೆ ಪೋದಪಿರೆನೆ ಶಾಸ್ತ್ರಿಯೆಂದಂ ಚರ್ಮದೃಷ್ಟಿಯಿಲ್ಲದಂಗೆ ಲೋಕದೊಳುಳ್ಳ ಪಧಾರ್ಥಮೆಂತು ಕಾಣಲರಿಯನಂತೆ ಜ್ಞಾನದೃಷ್ಟಿಯಿಲ್ಲದಂಗೆ ಶುದ್ಧ ತತ್ವಂಗಳಿಂದೆಷ್ಟು ಪ್ರಕಾಶಮಂ ತೋರಿದೊಡಂ ಕಾಣನದರಿಂ ಕಾಷಾಯೋದಯಮಾಗಿ ಕ್ಲೇಶಾಯಾಸದಿಂ ಸಾಯ್ಗುಮಲ್ಲದೆ ತಿಳಿವನಲ್ಲೆಂದು ಮತ್ತಮಿಂತೆಂದಂ ”ಸ್ಥಾನಸ್ಥಾನೇಷು ಪೂಜ್ಯಂತೇ” ಎಂಬುದರಿಂದ

ವೃತ್ತ || ಉಡುಗಣಪರಿವಾರೋ ನಾಯಕೋಪ್ಯೋಷಧೀನಾಂ
ಅಮೃತಮಯಶರೀರಃ ಕಾಂತಿಯುಕ್ತೋsಪಿ ಚಂದ್ರಃ
ಭವತಿ ವಿಗತರಶ್ಮಿರ್ಮಂಡಲಂ ಪ್ರಾಪ್ಯ ಭಾನೋಃ
ಪರಸದನನಿವಿಷ್ಟಃ ಕೋ ಲಘುತ್ವಂ ನ ಯಾತಿ ||

ನ್ಯಾಯವೆಂಬುದು ಬಲಿಷ್ಠಕ್ಕಿದಿರಾಗದದರಿಂ ಜನಬಲ ಧನಬಲ ಅಧಿಕಾರಿ ಬಲಮುಳ್ಳವರು ಪಿಡಿದ ಅನ್ಯಾಯವೆ ಕಾಲದೋಷದಿಂ ನ್ಯಾಯಮಪ್ಪುದು ಸತ್ಯವಾದಿಯ ಮಾತು ಬೋಡ ಔಡುಗಚ್ಚಿದಂತೆ ನಿಲ್ಲದು.

ಉಪಜಾತಿ || ಯಸ್ಯಾಸ್ತಿ ವಿತ್ತಂ ಸ ನರಃ ಕುಲೀನಃ ಸ ಪಂಡಿತಃ
ಸ ಶ್ರುತವಾನ್ ಗುಣಜ್ಞಃ
ಸ ಏವ ವಕ್ತಾ ಸ ಚ ದರ್ಶನೀಯಃ
ಸರ್ವೇ ಗುಣಾಃ ಕಾಂಚನಮಾಶ್ರಯಂತಿ ||

ತಥಾ –

ಶ್ಲೋಕ || ಜ್ಞಾನವೃದ್ಧಾಸ್ನಪೋವೃದ್ಧಾಃ ವಯೋವೃದ್ಧಾ ಬಹುಶ್ರುತಾಃ
ಇತ್ಯೇತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ ||

ಅಸತ್ಯದನ್ಯಾಯಿಗರು ನಾಲ್ವರ ಮಧ್ಯದೊಳೋರ್ವ ಸತ್ಯವಾದಿಯ ನ್ಯಾಯಂ ಗೆಲಲಾರದು. ಯಾತ್ರೆಗೆಯ್ದಿಂ ಬಪ್ಪ ದ್ವಿಜರೆಣ್ಬರು ಮಾರ್ಗದೊಳು ಕ್ಷುದ್ಬಾಧೆ ತಿಣ್ಣಮಾಗೆ ಪಚನಮಂ ಮಾಡಲು ಪಾತ್ರೆಯಿಲ್ಲದೆ ಒಂದು ತೊರೆ ಬಳಿಯ ರಜಕನ ಬಾನಿಯಿರ್ದೊಡದರೊಳೆ ಅನ್ನಮಂ ಮಾಡಿಯುಣ್ಬಲ್ಲಿ ಓರ್ವಂ ಪೇಸಿಯುಣಲೊಲ್ಲದೆ ಸ್ಥಳಕ್ಕೆ ಬಂದಲ್ಲಿ ಅವರ ದುರಾಚಾರಮಂ ಪೇಳಲೆಲ್ಲರು ಈತನೇ ಕ್ಷುಧಾತುರನಾಗಿ ತಾನೇ ಮಾಡಿ ತಿಂದನೆಂದೊರ್ವಂಗೆ ಪ್ರಾಯಶ್ಚಿತ್ತಮಂ ಮಾಡಿದರದರಿಂ ನಾಲ್ವರನ್ಯಾಯಮಂ ಪಿಡಿದೊಡೊರ್ವನ ನ್ಯಾಯಂ ನಿಲಲರಿಯದಿದು ಕಾಲದೋಷಮದಲ್ಲದೆ ಬಲ್ಲಿದಂ ಪೇಲ ತಿಂದೊಡೆ ಅವುಷಧಿಯ ಕೊಂಡನೆಂಬರು ಬಡವಂ ತಿಂದೊಡೆ ಹೊಟ್ಟೆಗಿಲ್ಲದೆ ತಿಂದನೆಂದು ದುಃಕರ್ಮಪೂರಿತ ಜೀವಂಗಳ್ಗೆ ಧರ್ಮಶಾಸ್ತ್ರಮರೋಚಕಮಪ್ಪುದು ಸ್ವಭಾವಂ ಚರ್ಮಖಂಡಮಂ ಜಗಿವ ಶ್ವಾನಂಗೆ ತುಪ್ಪಮೆಂತರೋಚಕಮಂತೆ ಕರ್ಮಂಗಳೊಳೆಲ್ಲಾ ಮೋಹನೀಯ ಕರ್ಮಂ ದೊಡ್ಡಿತ್ತಾದುದರಿಂದಾ ಕರ್ಮೋದಯದಿಂ ನಿಶ್ಚಯ ನಯಮಂ ಬಿಟ್ಟು ವ್ಯವಹಾರನಯಾವಲಂಬಿಗಳಾಗಿ ಸದ್ಭೂತಾಸದ್ಭೂತ ವ್ಯವಹಾರದೊಳುಪಚರಿತಾನುಪಚರಿತ ಭೇದಂಗಳಂ ನಿಶ್ಚಯಮೆಂಬ ನಂಬುಗೆಯಿಂ ಗತಿಗೆಡುವರಲ್ಲದೆ ನಿರ್ಶಚಯಮಂ ನಂಬಲಾರರೆಂದುಂ ಸ್ವರ್ಗದೊಳಿಪ್ಪ ದೇವಂಗಮಮೇಧ್ಯಮಧ್ಯದೊಳಿಪ್ಪ ಕೀಟಕಕ್ಕಂ ಸಮಾನವಾಂಛೆಯಲ್ಲದೆ ಸಕಲ ಜೀವಂಗಳು ನಾನು ನನ್ನದೆಂಬ ಮೋಹಮಂ ಬಿಡಲರವದರಿಂದವರೊಳು ನುಡಿದೊಡಂ ವ್ಯರ್ಥಮಲ್ಲದೆ ಸ್ವಾರ್ಥಮಾಗದೆಂದು ಜೈನ ಬ್ರಾಹ್ಮಣರೊಳು ಪ್ರಸಂಗಿಸುತ್ತಂ ಶ್ರೀ ಆದಿಪರಮೇಶ್ವರನ ಬಸದಿಗೆ ಬಂದು ಸಾಷ್ಟಾಂಗ ಪ್ರಣಾಮಂಗೆಯ್ದು ಶ್ರಾವಕರೊಳ್ ವಿನಯಮಂ ನುಡಿದು ಚತುರ್ಮುಖಶಾಸ್ತ್ರಿ ನಂಜನಗೂಡಿಗೆಯ್ದಿ ವಟುಗಳಿಗೆ ಅಧ್ಯಯನಮಂ ಪೇಳುತ್ತ ಹತ್ತೆಂಟು ವರುಷಮಿರ್ದು ನಂಬೀರ ನಂಜಪ್ಪಯ್ಯಗೆ ತರ್ಕ ವ್ಯಾಕರಣ ಕಾವ್ಯ ನಟಕ ಛಂದೋಲಂಕಾರಾದಿಗಳಂ ವೇದಾಧ್ಯಯನಂ ಮೋದಲಾಗೆ ಉಪದೇಶಂಗೆಯ್ದು ಸನ್ಮಾರ್ಗದಾಗಮಮಂ ತಿಳುಹಿಸಿದೊಡಾತಂ ಆದೀಶ್ವರರ ಸ್ತೋತ್ರಮಂ ಪಂಚರತ್ನಮೆಂದೈದು ಕನ್ನಡ ವೃತ್ತಮಂ ಪೇಳಿದಂ. ಅತ್ತಂ ಶ್ರೀರಂಗಪಟ್ಟಣದೊಳು ರಾಜಒಡೆಯರು ಕೆಲದಿವಸಂ ರಾಜ್ಯಂಗೆಯ್ದು ಕಾಲಂಗಾಣಲು ಸದಾಶಿವರಾಯನ ಸೇನಾಪತಿಯಪ್ಪ ರಾಮರಾಯನ್ ಆಂಧ್ರ ಕರ್ನಾಟಾದಿ ದೇಶಂಗಳಂ ವಶಂ ಮಾಡಿ ತನ್ನಾಳ್ದನ ರಾಜ್ಯಮೆಲ್ಲಮಂ ತಾನೇ ಸ್ವೀಕರಿಸಿ ಶ್ರೀರಂಗಪಟ್ಟಣಮಂ ಕೊಂಡಲ್ಲಿರ್ದ ರಾಜಪುತ್ರರಂ ಇಪ್ಪತ್ತುಮೂರು ಹಳ್ಲೀಯಂ ಕೊಟ್ಟು ಮಹಿಸೂರಲ್ಲಿರಿಸಿ ತಾನು ತನ್ನ ಮಗಂ ತಿರುಮಲರಾಯನು ಪಟಟಣದೊಳಿರ್ದು ಸ್ವಲ್ಪದಿವಸದಲ್ಲೆ ಕಾಲಂಗಂಡೊಡಾ ತಿರುಮಲಕಾಯಂ ಪಟ್ಟಣದೊಳಿರ್ದನ್. ಇತ್ತಲ್‌ಮಹಿಸೂರ ಚಾಮರಾಜಂಗೆ ಮೂವರ್ ಮಕ್ಕಳೊಳು ಕಿರಿಯ ಚಾಮರಾಜಂಗೆ ನಾಲ್ವರು ಸುತರವರೊಳು ಪಿರಿಯರಾಜನೃಪಂ ದಿಗ್ವಿಜಯೊದ್ಯೋಗಂಗೆಯ್ದು ಕೆಲಕೆಲ ನೃಪರಂ ಸಾಧಿಸಿ ಕಪ್ಪಂಗೊಳ್ಳುತ್ತಂ ಸ್ವಾಧೀನಮಾಗೆ ನರಸರಾಜನು ಇಮ್ಮಡಿರಾಜರೆಂಬ ಅಣುಗರ್ವೆರಸಿ ತಿರುಮಲರಾಜನ ಮೇಲೆತ್ತಿಪೋಗಿ ಪಟ್ಟಣದಿಂ ಪೊರಮಡಿಸಿ ಅಲ್ಲಿಗಧೀಶನಾಗಿ ನಂಜರಾಜನಂ ಸದೆದು ಪದಿನಾಡು ಮುಂತಾದ ರಾಜ್ಯಮಂ ಕೊಂಡು ಸುಖದಿಂ

ಅರಿನೃಪಗಿರಿಕುಲಿಶಂ ಸುರ
ಧೀರನಜೇಯ ಶೌರ್ಯನಖಿಲಜನಾಳಿ
ಸುರಭೂಜ ಷಣ್ಮತಂಗಳ
ಪರಿಪಾಲಿಸಿಯರಸುಗೆಯ್ದನಾ ರಾಜನೃಪಂ
ಇಂತೀ ಕಥೆಯಂ ನೆರೆ ಸಂ
ತತ ಕೇಳ್ವರಿಗೆ ಬುದ್ಧಿ ಬಲ ಸದ್ಞಾನಂ
ಸಂತಾನ ಸೌಖ್ಯಸಂಪದ
ಸಂತತ ದೊರೆಕೊಳ್ಗು ಭ್ರಾಂತಿವಿಚ್ಛಿತ್ತತೆಯಿಂ

ಇದು ಸತ್ಯಪ್ರವಚನ ಕಾಲಪ್ರವರ್ತನ ಸಾರೋದ್ಧೃತ ದೇವಚಂದ್ರಧರಾಮರ ವಿರಚಿತ ರಾಜಾವಲೀ ಕಥಾಸಾರದೊಳ್ ಚತುರ್ಮುಖಶಾಸ್ತ್ರಿ ನಿವೇದಿತ ಕಥಾ ಪ್ರರೂಪಣಂ

ದಶಮಾಧಿಕಾರಂ