ಶ್ರೀಮತ್ ಸಮಸ್ತ ಭುವನಶಿ

ರೋಮಣಿ ಸದ್ವಿನಯ ವಿನಮಿತಾಖಿಲಜನಚಿಂ
ತಾಮಣಿಗಭಿವಂದಿಸಿ ನಾ
ನೀ ಮಹಿಮೆಯೊಳ್ ಪೇಳ್ವೆನಖಿತ ರಾಜಾನ್ವಯಮಂ

ಅದೆಂತೆಂ……………………. ಭಾವರೂಪದಿಂ ನಮಸ್ಕಾರಂಗೆಯ್ದು ಚತುರ್ವಿಧ ಫಲಾಪೇಕ್ಷೆಯಂ ಕುರಿತು ಸಮ್ಯಜ್ಞಾನಿಗಳಪ್ಪ ದೇವಮಾನುಷ್ಯರಂ ನುತಿಯಿಸುತ್ತಂ ಕಥಾವತಾರಮಂ ಪೇಳ್ವೆನಿದಂ ಮಕ್ಷುಕ……………………….. ದುರ್ಜನರಂ ಗಣಿಯಿಸದೆ ಕಳಹಂಸನಂತೆಯುಂ ಕಾಮಧೇನುವಂತೆಯುಂ ಕೈಕೊಳ್ಳ ಸತ್ಪುರುಷರು ಪ್ರಶಂಸೆಗೆಯ್ಯಲೆಂದು ಪ್ರಾರ್ಥಿಸುವೆನದೆಂತೆನೆ

ವೃತ್ತ ||  ಸಂತಃ………………………….. ಚಾಂ ವಿಚಾರ………………
ತಾಂ ಸೂತಂಭಃ ಕಮಲಾನಿ ತತ್ಪರಿಮಲಂ ವಾತಾ ವಿತನ್ವತಿಯತ್
ಕಿಂ ವಾಭ್ಯರ್ಥನಯಾನಯಾಯೆದಿ ಗುಣೋಸ್ತ್ಯಾಸಂತಿತೇ
ಸ್ವಯಂ ಕರ್ತಾರಂ ಪ್ರಥಿತಂ ನ ಚೇದತಯಶಃ ಪ್ರತ್ಯರ್ಥಿನಾತೇನಕಿಂ ||

ಅದಲ್ಲದೆ

ಶ್ಲೋಕ ||ಪದ್ಮಾನಿಬೋಧಯತ್ಯರ್ಕಃ ಕಾವ್ಯನಿಕುರುತೇ ಕಪಿಃ
ತತ್ ಸೌರಭಂ ನಭಸ್ವಂತಃ ಸ್ವಂತಃ ತನ್ವಂತು ತದ್ಗುಣಾಃ ||

ಎಂಬುದರಿಂ ಈ ಕಥೆಯಂ ಸತ್ಪುರುಷರು ದೋಷಂಗಳಂ ಬಿಟ್ಟು ಗುಣಂಗಳಂ ಗ್ರಹಿಸಿ ಮೆರೆವಂತೆ ಮಾಳ್ಪುದು. ಈ ರಾಜಾವಲಿ ಕಥಾಪೀಠಿಕೆಯೊಳು ಕಿಂಚಿತು ಲೋಕ ಸ್ವರೂಪಮಂ ಕಾಲಪ್ರಪಂಚಮಂ ಪೇಳ್ವೆನಲ್ಲಿ ಲೋಕಂ ಅಧೋಲೋಕಮೆಂದು ಮಧ್ಯಮ ಲೋಕಮೆಂದು ಊರ್ಧ್ವಲೋಕಮೆಂದು ಮೂರು ಭೇದಮಪ್ಪುದೆಂತೆಂದೊಡೆ ಎತ್ತೆತ್ತಂ ನೋಳ್ಪೊಡನಂತಾನಂತಮಾದಾಕಾಶದ ನಟ್ಟನಡುವೆ ಅಸಾಧ್ಯನಿಧನಮುಮಕೃತ್ರಿಮಮುಂ ಸ್ವಾಭಾವಿಕಮುಂ ನಿತ್ಯಮುಂ ಜೀವಾದಿ ಷಡ್ದ್ರವ್ಯಭರಿತಮುಂ ವೇತ್ರಾಸನ ಝಲ್ಲರಿ ಮೃದಂಗಸಮಾನಮುಂ ಪೂರ್ವಾಪರಗತ ಸಪ್ತೈಕ ಪಂಚೈಕ ರಜ್ಜು ವಿಸ್ತಾರಮುಂ ದಕ್ಷಿಣೋತ್ತರಗತ ಸಪ್ತರಜ್ಜಾಯಾಮಮುಂ ಚತುರ್ದಶ ರಜ್ಜೂತ್ಸೇಧಮುಂ ಘನೋದಧಿ ಘನಾನಿಲ ತನುವಾತ ವಾಯುತ್ರಯವೇಷ್ಟಿತಮಪ್ಪುದು.

ದಕ್ಷಿಣೋತ್ತರ ತಟಂಗಳೊಳೆಂಟೆಂಟು ಜನಪದಂಗಳಾಗೆ ಪೂರ್ವವಿದೇಹದೊಳು ಪದಿನಾರಂ ಅಪರವಿದೇಹದೊಳ್ ಪದಿನಾರುಂ ಭರತಮೊಂದುಂ ಐರಾವತಮೊಂದುಂ ಕೂಡಿ ಮೂವತ್ತುನಾಲ್ಕು ಕ್ಷೇತ್ರಂಗಳಕ್ಕುಂ. ಅವರೊಳಾರ್ಯಾ ಖಂಡಮುಂ ಮ್ಲೇಚ್ಛಖಂಡಂಗಳೆಂದಪ್ಪವು. ಆ ಆರ್ಯಾಖಂಡಂಗಳೊಳು ಪುಣ್ಯಪಾಪಮಂ ಸಮಾನಮಾಗಿ ಮಾಡಿದ ಜೀವಂಗಳು ಮನುಷ್ಯರಾಗಿ ಪುಟ್ಟುವರು. ಈ ಪೇಳ್ದ ವಿವರಂಗಳು ಧಾತಕೀಷಂಡ ದ್ವೀಪದ ಪೂರ್ವ ಪಶ್ಚಿಮದ ಮೇರುಗಳಿಗೆ ಎರಡು ವಿಧವಾಗೆ ಪುಷ್ಕರಾರ್ಧದೊಳ್ ಎರಡು ವಿಧಮಾಗೆ ಪೂರ್ವವಿದೇಹದೊಳಗೆಂಬತ್ತು ಅಪರ ವಿದೇಹದೊಳೆಂಬತ್ತು ಭರತದೊಳೈದುಂ ಐರಾವತದೊಳೈದುಂ ಕೂಡಿ ನೂರೆಪ್ಪತ್ತು ಕರ್ಮಭೂಮಿಗಳಪ್ಪವು. ಇದು ಮಧ್ಯಮಲೋಕದ ವರ್ಣನಂ.

ಮತ್ತಂ ದೇವಲೋಕಂ ಭವನ ವ್ಯಂತರ ಜೋತ್ಯಷ್ಕ ಕಲ್ಪಾಮರರೆಂದು ನಾಲ್ಕು ಭೇದಮಪ್ಪದು. ಅಲ್ಲಿ ಅಸುರಕುಮಾರರುಂ ನಾಗಕುಮಾರರುಂ ಸುವರ್ಣಕುಮಾರರುಂ ದ್ವೀಪಕುಮಾರರುಂ ಉದಧಿಕುಮಾರರುಂ ವಿದ್ವತ್ಕುಮಾರರುಂ ಸ್ತನಿತಕುಮಾರರುಂ ದ್ವೀಪಕುಮಾರರುಂ ಅಗ್ನಿಕುಮಾರರುಂ ವಾತಕುಮಾರರುಮೆಂದು ಪತ್ತು ತೆರನಕ್ಕು.ಅಲ್ಲಿ ಇಂದ್ರ ಪ್ರತೀಂದ್ರಂಗಳಿಪ್ಪವು. ವ್ಯಂತರಲೋಕದೊಳು ಲೋಕಪಾಲ ತ್ರಾಯತ್ರಿಂಶ ಸಾಮಾನಿಕ ಅಂಗರಕ್ಷಕ ಪಾರಿಷತ್ರಯ ಆನೀಕ ಪ್ರಕೀರ್ಣಕ ಅಭಿಯೋಗ ಕಿಲ್ಬಿಷರೆಂದಿವರು ಭವನವಾಸಿಕರ್ಗಂ ಕಲ್ಪವಾಸಿರ್ಗಪ್ಪವು. ನಾನಾ ವಿಗುರ್ವಣೆಯುಳ್ಳ ದೇವಿಯರು ಓರೋರ್ವರ್ಗೆ ಮೂವತ್ತಿಬ್ಬರಪ್ಪರು. ವೈಕ್ರಿಯ ……………….. ದಿವ್ಯ ಮಾಲ್ಯ ವಸ್ತ್ರಾಭರಣ ಭೂಷಿತರುಂ ಅಮೃತಾಹಾರಮುಳ್ಳರಪ್ಪರು. ಅಲ್ಲಿ ಇಂದ್ರರ ಭವನಂಗಳು ಹನ್ನೆರಡು ಸಾವಿರ ಯೋಜನಮುಳ್ಳವು. ಏಳು ಕೋಟಿಯು ಎಪ್ಪತ್ತೆರಡು ಲಕ್ಷ ಅಕೃತ್ರಿಮ ಚೈತ್ಯಾಲಯ …….. ಕ ಲೋಕದೊ……… ನರರುಂ ಕಿಂಪುರುಷರುಂ ಮಹೋರಗರುಂ ಗಂಧರ್ವರುಂ ಯಕ್ಷರುಂ ರಾಕ್ಷಸರುಂ ಭೂತರುಂ ಪಿಶಾಚರುಮೆಂದು ಎಂಟು ಭೇದಮಕ್ಕುಂ. ಹ್ರದ ದ್ರುಮ ಪರ್ವತ ಮೊದಲಾದವರೊಳು ಸ್ವ …….. ಬ್ಬೊಬ್ಬ ಇಂದ್ರರ್ಗೆ ಇಬ್ಬಿಬ್ಬರ್ ದೇವಿಯರುಂ ದ್ವಿಸಹಸ್ರವಲ್ಲಭದೇವಿಯರುಂ ವಿಚಿತ್ರ ವಿಕ್ರಿಯಾ ಶಕ್ತಿಯುಕ್ತೆಯರಪ್ಪರುಂ. ಅಲ್ಲಿ ಅಸಂಖ್ಯಾತ ವಿಮಾನಂಗಳೊಳು ಅಸಂಖ್ಯಾತ ಚೈತ್ಯಾ ………….. ಮೇಲೆ ಜ್ಯೋತಿರ್ಲೋಕಂಗಳೊಳು ಚಂದ್ರಾದಿತ್ಯ ಗ್ರಹ ನಕ್ಷತ್ರ ಪ್ರಕೀರ್ಣಕ ತಾರಕ ಭೇದಂಗಳಿಂ ಪಂಚವಿಧಮಪ್ಪರುಂ. ಅಲ್ಲಿ ಚಂದ್ರಾದಿತ್ಯದನೇಕರುಂ ಗ್ರಹಂಗಳೆಂಬತ್ತೆಂಟು ಭೇದ ಕೃತ್ತಿಕಾದಿ ನಕ್ಷತ್ರಂಗಳಿಪ್ಪತ್ತೆಂಟು ಭೇದ ಪ್ರಕೀರ್ಣಕ ತಾರಕಾ ವಿಮಾನಂಗಳ ಸಂಖ್ಯೆಯರುವತ್ತಾರು ಸಾಸಿರದೊಂಬೈನೂರ ಇಪ್ಪತ್ತೈದು ಕೋಟಿಗಳಕ್ಕುಂ. ಚಿತ್ತೆಯಿಂ ಮೇಲೆ ಏಳುನೂರು ಯೋಜನಂ ಪೋದಲ್ಲಿ ಗಗನಾಂತರದೊಳು ತಾರೆಗಳುಂ ಅಲ್ಲಿಂ ಮೇಲೆ ಹತ್ತು ಯೋಜನದೊಳು ಸೂರ್ಯರ ವಿಮಾನಂಗಳು, ಅಲ್ಲಿಂ ಮೇಲೆ ಎಂಬತ್ತು, ನಾಲ್ಕು, ನಾಲ್ಕು, ಮೂರು, ಮೂರು, ಮೂರು ಯೋಜನಂಗಳು ಕ್ರಮದಿಂ ಪೋದಲ್ಲಿ ಚಂದ್ರನುಂ ನಕ್ಷತ್ರಮುಂ ಬುಧನುಂ ಶುಕ್ರನುಂ ಬೃಹಸ್ಪತಿಯುಂ ಮಂಗಳನುಂ ಶನೈಶ್ಚರನುಂ ಎಂಬಿವರುಗಳು ಮೇಲಣ ಲೆಕ್ಕದ ಯೋಜನಕ್ರಮದೊಳಿಪ್ಪರುಂ. ಆ ವಿಮಾನಂಗಳೆಲ್ಲರ ಮಧ್ಯಂಗಳೊಳು ಒಂದೊಂದು ಚೈತ್ಯಾಲಯಂಗಳಿಪ್ಪವು. ಚಂದ್ರರವಿಮಾನದಿಂ ಕೆಳಗೆ ಚಿಂಚನ್ಯೂನ ಯೋಜನಮಾತ್ರದೊಳೆ ಸರ್ವ ರಾಹುವಿನ ವಿಮಾನಮಿರ್ಕು. ಷಣ್ಮಾಸಕ್ಕೊರ್ಮೆ ಪುಣ್ಣಮಿ ಕಡೆಯೊಳು ಪ್ರಚ್ಛಾದಿ ಗ್ರಹಣಮಕ್ಕುಂ.

ಮತ್ತಂ ನಿತ್ಯರಾಹುವಿನ ವಿಮಾನಂ ಸ್ವಭಾವದಿಂ ಪುಣ್ಣಮಿ ಪಾಡ್ಯದಾರಭ್ಯ ದಿನಂಪ್ರತಿ ಬಿಂಬ ಷೋಡಶಭಾಗಮಂ ಮುಚ್ಚುತ್ತಾಬಪ್ಪುದು. ಅಮಾವಾಶಿ ಪಾಡ್ಯದಾರಭ್ಯ ಬಿಟ್ಟುಬಪ್ಪುದು. ಸೂರ್ಯಬಿಂಬದಧೋಭಾಗದೊಳು ಅರಿಷ್ಟಮೆಂಬ ಕೇತುವಿನ ವಿಮಾನಂ ಪ್ರಚ್ಛಾದಿಸಿ ಷಣ್ಮಾಸಕೊರ್ಮೆ ಗ್ರಹಣಮಕ್ಕುಂ. ಅಲ್ಲಿ ವಿಮಾನಂಗಳ ಅಧೋಭಾಗದೊಳು ಸೂರ್ಯಕಾಂತ ಚಂದ್ರಕಾಂತಕಿರಣಂಗಳನುಳ್ಪ ಗೋಳಕಾಕಾರ ರತ್ನಂಗಳಿಂದೊಪ್ಪುವ ವಿಮಾನಂಗಳಂ ಸಿಂಹ ಸಿಂಧುರ ಮಹೋಕ್ಷ ಜಟಿಲಾಶ್ಚಂಗಳಾಕಾರದ ದೇವರ್ಕಳು ಪೂರ್ವಾದಿಯಾಗಿ ವಿಮಾನಂಗಳಂ ನಡೆಸುವರು ಮನುಷ್ಯಕ್ಷೇತ್ರದಿಂದತ್ತ ಸ್ಥಿರಮಾಗಿಪ್ಪವು. ಭವನವಾಸಿಗಳಾದಿ ಜ್ಯೋತಿಷ್ಕಸರುಗಳ್ಗೆಲ್ಲಾ ಆಯುಷ್ಯಂಗಳು ಪಲ್ಯಪ್ರಮಾಣದೊಳೆ ಅಪ್ಪರು. ಈ ಜ್ಯೋತಿಷ್ಕರು ಸಾಸಿರದನೂರಿಪ್ಪತ್ತೊಂದು ಯೋಜನದಿಂ ಮೇರುಗಿರಿಯಂ ಬಿಟ್ಟು ಪ್ರದಕ್ಷಿಣದಿಂ ಚರಿಸುವರು. ಮತ್ತಂ ಮೇರುವಿನ ಚೂಳಿಕೆಯಿಂ ಮೇಲೆ ವಾಲಾಗ್ರಮಂ ಬಿಟ್ಟು ಸೌಧರ್ಮಕಲ್ಪದ ಉಡುವಿಮಾನಮಿಪ್ಪುದು. ಮೇಲೆ ಸೌಧರ್ಮ ಈಶಾನ ಸನತ್ಕುಮಾರ ಮಹೇಂದ್ರ ಬ್ರಹ್ಮಬ್ರಹ್ಮೋತ್ತರ ಲಾಂತವ ಕಾಪಿಷ್ಟ ಶುಕ್ರ ಮಹಾಶುಕ್ರ ಶತಾರ ಸಹಸ್ರಾರ ಆತನ ಪ್ರಾಣತ ಆರಣ ಅಚ್ಯುತಂಗಳೆಂಬೀ ಪದಿನಾರು ಸ್ವರ್ಗಂಗಳು ದಕ್ಷಿಣೋತ್ತರದೊಳು ಯುಗಳಂಗಳಾಗಿ ಎಂಟು ಸಾಲಪ್ಪವು. ಈ ಪದಿನಾರು ಕಲ್ಪಂಗಳೊಳು ಇಂದ್ರಕ ಶ್ರೇಡೀಬಂಧ ಪ್ರಕೀರ್ಣಭೇದಂಗಳಿಂ ರತ್ನಮಯ ವಿಮಾನಂಗಳೊಳು ನಿರಂತರದಿಂ ಒಂದು ಸಾಗರ ಮೊದಲಾಗಿ ಇಪ್ಪತ್ತೆರಡು ಸಾಗರೋಪಮಪರ್ಯಂತುಂ ಪರಮಾಯುಷ್ಯರಾಗಿ ಕ್ರೀಡಿಸುವರು. ಅಲ್ಲಿಂ ಮೇಲೆ ನವಗ್ರೈವೇಯಕ ನವಾಣುದ್ದಿಶಾ ಪಂಚಣೋತ್ತರೆಯ ಮಧ್ಯೆ ಸರ್ವಾರ್ಥಸಿದ್ಧಿಯಿಂ ಮೇಲೆ ಹನ್ನೆರಡು ಯೋಜನಂ ಪೋದಲ್ಲಿ ಮೂಲೋಕಾಗ್ರದೀಷತ್ಪ್ರಾಗ್ಭಾರಮೆಂಬೆಂಟನೆಯ ಭೂಮಿಯ ನೀಳ ಏಳು ರಜ್ಜು ದಕ್ಷಿಣೋತ್ತರದೊಳಕ್ಕು. ಪೂರ್ವಾಪರದೊಳೊಂದು ರಜ್ಜುವಿಸ್ತಾರವದರ ಮಧ್ಯದೊಳು ನಾಲ್ವತ್ತೈದು ಲಕ್ಷ ಯೋಜನ ಬಾಹುಲ್ಯಮಪ್ಪ ಸಿತಾವನಿಯೆಂಬ ಸಿದ್ಧಶಿಲೆಯ ಮೇಲೆ ಘನೋದಧಿ ಘನಾನಿಳ ತನುವಾತ ಕಿಂಚನ್ಯೂನ ಕ್ರೋಶ ಪ್ರಮಾಣಮಕ್ಕು. ಆ ತನುವಾತದೊಳು ಜಘನ್ಯ ಮಧ್ಯಮೋತ್ಕೃಷ್ಟದಿಂ ಶುದ್ಧಾತ್ಮರಾದ ಸಿದ್ಧರಾಶಿಯಿಪ್ಪುದು. ಆ ಸಿದ್ಧತ್ವಕ್ಕೆ ಮಧ್ಯಮ ಲೋಕದೊಳು ನಿರ್ಮಳ ಸಹಜಾತಾನುಷ್ಠಾನದಿಂ ಕರ್ಮಮಲಕಲಂಕ ನಿರ್ಮೂಲನಮಾಗೆ ಶುದ್ಧಾತ್ಮಂ ಪುಟ್ಟುಗುಂ. ಆಸ್ಥಾನಂ ಸಿದ್ಧಸ್ವಾತ್ಮೋಪಲಬ್ದಿ ಪರಮ ಶಾಶ್ವತಂ ಪವಿತ್ರಂ ಕಲ್ಯಾಣಂ ಸುಗತಿ ಲೋಕೋತ್ತರ ಪರಮಪದಂ ಅಕ್ಷಯಂ ಅನಂತಂ ಶಾಶ್ವತಂ ಅಜರಾಮರಂ ಅಭವ್ಯರ್ಗಗಮ್ಯಂ ಸಮ್ಯಜ್ಞಾನಿಗಳಿಂ ಬಯಸೆ ಪಡುವ ಮೋಕ್ಷಮೆಂಬುದುಂ ಅಲ್ಲಿಪ್ಪ ಸಿದ್ಧರುಂ ನಿರಾವರ್ಣರುಂ ನಿಷ್ಠಿತಾರ್ಥರುಂ ನಿತ್ಯರುಂ ಅನಂತಜ್ಞಾನದರ್ಶನ …………….. ರೂಪರುಂ ಅಚ್ಛೇದ್ಯರುಂ ಅಭೇದ್ಯರುಂ ಅಕ್ಷಯರುಂ ಅವ್ಯಾಬಾಧರುಂ ಅಗುರುಲಘು ಅಪ್ರಮೇಯ ಶುದ್ಧಾತ್ಮ ಲೋಕಾಲೋಕವ್ಯಾಪಕ ಸಿದ್ಧಪರಮೇಷ್ಠಿಗಳ್ಗಮನವರತಂ ತ್ರಿಕಿರಣಶುದ್ಧಿಯಿಂ ನಮಸ್ಕರಿಸಿ ಸ್ತು …………….. ಪ್ರಾಯಂ.

ಶ್ಲೋಕ || ಕರ್ಮಾಷ್ಟಕ ವಿನಿರ್ಮುಕ್ತಂ ಮೋಕ್ಷಲಕ್ಷ್ಮೀನಿಕೇತನಂ
ಸಮ್ಯಕ್ತ್ವಾದಿ ಗುಣೋಪೇತಂ ಸಿದ್ಧಚಕ್ರಂ ನಮಾಮ್ಯಹಂ ||

ಮತ್ತಂ ಅಣಿಮಾ  ಗರಿಮಾ ಲಘಿಮಾ ಪ್ರಾಪ್ತಿಃ ಪ್ರಾಕಾಮ್ಯಂ ಈ ಸತ್ವ…. ಲಯಂಗಳು ಭವನಲೋಕದೊಳು ೭೭೨೦೦೦೦೦ ವ್ಯಂತರಜ್ಯೋತಿರ್ಲೋಕದೊಳು ಸಂಖ್ಯಾತಾಸಂಖ್ಯಾಗಂಗಳು. ಕಲ್ಪ ಕಲ್ಯಾತೀತಂಗಳೊಳು ೮೪೯೭೦೨೩. ಮತ್ತಂ ಮಧ್ಯಮಲೋಕಂಗಳೊಳು…….. ಸೌಮನಸ ಪಾಂಡುಕಮೆಂಬ ಚತುರ್ವನಂಗಳೊಳು ಪ್ರತ್ಯೇಕ ನಾಲ್ಕು ನಾಲ್ಕಾಗೆ ೧೬, ಐದು ಮೇರುವಿಗೆ ೮೦, ಜಂಬೂವೃಕ್ಷ ೫, ಶಾಲ್ಮಲಿಯೊಳು ೫, ಹಿಮವದಾದಿ ಕುಲಪರ್ವತಂಗಳೊಳು ೩೦, ವಿಜಯಾರ್ಧಂಗಳೊಳು ೧೭೦,…… ಕ್ಷಾರಪವ್ವತಂಗಳೊಳು ೧೦೦, ವಿಶ್ವಾಕಾರಪರ್ವತಂಗಳೊಳು ೪, ಮಾನುಷೋತ್ತರ ನಗದೊಳು ೪, ನಂದೀಶ್ವರದ್ವೀಪದ…..೦ ಜನ ದಧಿಮುಖರತಿಕರ ಭೇದದಿಂ ದಿಕ್ಕುವೊಂದಕ್ಕೆ ಪದಿಮೂರಾಗಲು ಚತುರ್ದಿಕ್ಕಿಂಗೆ ೫೨ ಚೈತ್ಯಾಲಯಮಿಪ್ಪವು ಕುಂಡಲಪರ್ವತದೊಳು ೪, ರುಚಕದೊಳು ೪, ಅಂತು ನಾ ೪೫೮ ಗೂಡಿ ೮೫೬೯೭೪೮೧ ಚೈತ್ಯಾಲಯಮಿಪ್ಪವು. ಅವೆಲ್ಲಕ್ಕಂ ದ್ರವ್ಯಭಾವದಿಂ ನಮಸ್ಕಾರಮಂ ಮಾಳ್ಪೆಂ.

ಶ್ಲೋಕ|| ಗಾಂಗೇಯಕಲಶಾನೇಕಾಪತಾಕಾದ್ಧ್ವಜ ಶೋಭಿತಾನ್ ||
ಮಣಿಸ್ವರ್ಣಮಾಯಾನಿತ್ಯಂ ಸ್ಮರಾಮಿ ಶ್ರೀ ಜಿನಾಲಯಾನ್ ||

ಇಂತು ಅಕೃತ್ರಿಯ ಚೈತ್ಯಾಲಯ ಒಂದೊಂದರೊಳು ಸಲಕ್ಷಣದಿಂ ದಶತಾಲ ಲಕ್ಷಣಮುಳ್ಳ ಐನೂರ ಪುರ…….. ಪ್ರಮಾಣಿನ ನೂರೆಂಟು ನೂರೆಂಟು ಪ್ರತಿಮೆಗಳು ಮನೋಹರಂಗಳಾಗಿಪ್ಪಮವೆಲ್ಲಕ್ಕಂ ಭಕ್ತಿಭರಾ ನಮ್ರತೆಯಿಂ ನಮವಸ್ಕರಿಸುವೆಂ.

ವೃತ್ತ|| ಕೋಟ್ಯಾರ್ಹತ್‌ಪ್ರತಿಮಾ ಶತಾನಿನವತಿಃ ಪಂಚೋತ್ಕರಾವಿಂಶತಿಃ
ಪಂಚಾಶತ್ತ್ರಿಯುತಾ ಜಗತ್ಸುಗಣಿತಾ ಲಕ್ಷಾ ಸಹಸ್ರಾಣಿತು
ಸಪ್ತಾಗಾಪಿ ಚ ವಿಂಶತಿರ್ ನವಶತದ್ಯೂನಂ ಶತರ್ಥಂ ಮತಾ
ಸ್ತಾನಿತ್ಯಾತ್ಪುರುತುಂಗಪೂರ್ವಮುಖ ಸತ್ಪರ್ಯಂಕ ಬಂಧಾಃಸ್ತುವೇ ||

ಅಂತು ೯೨೫೫೩೨೭೯೪೮ ಈ ಸಂಖ್ಯೆಯ ಅಕೃತ್ರಿಮ ಜಿನಬಿಂಬಂಗಳ್ಗಂ ವ್ಯಂತರ ಜ್ಯೋತಿಷ್ಕಲೋಕದ ಅಸಂಖ್ಯಾತ ಜಿನಬಿಂಬಂಗಳ್ಗಂ ಮಧ್ಯಮಲೋಕದಕೃತ್ರಿಮಮಪ್ಪ ಬಿಂಬಂಗಳ್ಗಂ ನಮಸ್ಕರಿಸಲೋಲಸ್ಕರ ಕಿಂಚಿತ್ ಲೋಕಸ್ವರೂಪಮಂ ಪೇಳಲ್ಪಟ್ಟುದು.

ಮತ್ತಂ ಕಾಲಸ್ವರೂಪಮೆಂತೆಂದೊಡೆ ಅನಂತಾನಂತಮಪ್ಪತೀತ ಕಾಲಮಂ ಅದಂ ನೋಡಲನಂತಗುಣಮಪ್ಪನಾಗತಕಾಲಮುಂ ಏಕಸಮಯಾದಿ ವರ್ತಮಾನಕಾಲಮುಮೆಂದು ವ್ಯವಹಾರಕಾಲಂ ಮೂರು ಭೇದಮಕ್ಕುಂ. ನಿತ್ಯಾನಿತ್ಯಮೆಂದೆರಡು ಭೇದಮಪ್ಪುದು. ಪಂಚ ಭರತೈರಾವತಂಗಳ್ಗೆ ಪ್ರತ್ಯೇಕ ದಶಕೋಟಾಕೋಟಿ ಸಾಗರೋಪಮಸ್ಥಿತಿಯುಳ್ಳ ಉತ್ಸರ್ಪಿಣಿ ಅವಸರ್ಪಿಣಿಗಳೆಂದು ಶುಕ್ಲ ಕೃಷ್ಣಪಕ್ಷದಂತೆ ಉತ್ಸೇಧಾಯುರ್ಬಳಾದಿಗಳು ಪೆಚ್ಚುತ್ತಂ ಕುಂದುತ್ತಮಿಪ್ಪವು. ಅವಸರ್ಪಿಣಿಯೊಳು ಸುಷಮ ಸುಷಮಮುಂ, ಸುಷಮಮು, ಸುಷಮ ದುಷ್ಷಮಮುಂ, ದುಷ್ಷಮ ಸುಷಮಮು, ದುಷ್ಷಮಮುಂ ಅತಿದಷ್ಟುಮಮುಮೆಂದು ಆರು ಭೇಮಪ್ಪುದು. ಇದೆ ಉತ್ಸರ್ಪಿಣಿಯೊಳು ಆರೋಹಣಿಯಪ್ಪವು. ಅಲ್ಲಿ ಮೊದಲ ಸುಷಮ ಸುಷಮಾದಿ ಮೂರು ಕಾಲಂಗಳು ನಾಲ್ಕು ಮುರು, ಎರಡು ಕೋಟಾಕೋಟಿ ಸ್ಥಿತಿಯನುಳ್ಳ ಉತ್ತಮ ಮಧ್ಯಮ ಜಘನ್ಯಮೆಂಬ ಮೂರು ಭೋಗಭೂಮಿಗಳಪ್ಪವವರೊಳು ಸ್ತ್ರೀ ಪುರುಷರು ಮೂರು ಎರಡು ಒಂದು ಕ್ರೋಶ್ನೊನ್ನತ ಶರೀರರುಂ, ಮೂರು ಎರಡು ಒಂದು ಪಲ್ಯೋಪಮಸ್ಥಿತಿಯುಳ್ಳ ಪರಮಾಯುಷ್ಯರುಂ ತ್ರಿದಿನಾಂತರಿತ ಬದರೀಫಲ ಮಾತ್ರ, ದ್ವಿದಿನಾಂತರಿತಾಕ್ಷ ಮಾತ್ರ ಏಕದಿನಾಂತರಿತಾಮಳಕ ಪ್ರಮಾಣ ಅಮೃತಾಹಾರಿಗಳುಂ ತರುಣ ದಿವಾಕರ ಶರಶ್ಚಂದ್ರಾಭ ಪ್ರಿಯಂಗು ಶ್ಯಾಮವರ್ಣಶರೀರರುಂ ಸಮಚತುರಸ್ರ ಸಂಸ್ಥಾನವಜ್ರ ವೃಷಭನಾರಾಚ ಶರೀರಸಂಹನನರುಂ ದ್ವಾತ್ರಿಂಶಚ್ಛುಭಲಕ್ಷಣಲಕ್ಷಿತರುಂ ಮಾರ್ದವಾರ್ಜನ ಗುಣೋಪೇತರುಂ ಸತ್ಯಮೃಷ್ಟತರ ಸುಭಾಷಿತರುಂ ಮೃದುಮಧುರನಿನದರುಂ ನವನಾಗಸಹಸ್ರಬಳಸಮನ್ವಿತರುಂ ಕ್ರೋಧ ಲೋಭ ಮದ ಮಾತ್ಸರ್ಯ ಮಾನವರ್ಜಿತರುಂ ಸಹಜ ಶರೀರರುಂ ಅನಪವರ್ತ್ಯಾಯುಷ್ಯರುಂ ಗರ್ಭಾರ್ಭಕ ಬಾಲಕುಮಾರ ಯವ್ವನ ಮರಣಪರ್ಯಾಯೋಪೇತರುಂ ಮಧ್ಯಮಸ್ಥವಿರ ವೃದ್ಧ ಸ್ವೇದ ಜ್ವರಿತ ಪರ್ಯಾಯ ………… ರುಂ ಭ್ರಾತೃ……. ಗಿನಿವಿಕಲ್ಪರಹಿತರುಂ ಪರಸ್ವರಪ್ರೀತರುಂ ಅನ್ಯೋನ್ಯಾನುಕೂಲರಾಗಿ ದಂಪತಿಗಳು ಸುಖಮುಖನ್ಯಾಯದಿಂ ಸಂಕಲ್ಪಮಾತ್ರದಿಂದಮೆ ದಶವಿಧ ಕಲ್ಪವೃಕ್ಷಂಗಳ್ ತಮಗೆ ಕುಡುವ ನಿರತಿಶಯ ಭೋಗೋ……… ಗಂಗಳಂ ಭೋಗಿಸಿ ನಿಜಾಯುರವಸಾನಮೊಂಬತ್ತು ತಿಂಗಳುಂಟೆನೆ ಜೀವಯುಗಲಮೆ ಬಂದು ನೆಲಸೆ ಗರ್ಭಮಂ ತಾಳ್ದಿ ಷಣ್ಮಾಸ ಪ್ರಮಾಣದ ಭುಜ …………….. ದೊಳೆನಾಯುಷ್ಯಂ ಕಟ್ಟಿ ಭವಚ್ಯುತಿಯೊಳ್ ಮಿಥುನಂಗಳು ಸೀತುಮಾಗುಳಿಸಿಯುಂ ಲೋಕಾಂತರಿತರಾಗಿ ಸದೃಷ್ಟಿಗಳು ಸೌಧರ್ಮ ದ್ವಿಕದೊಳು ಕುದೃಷ್ಟಿಗಳು ಭುವನತ್ರಯದೊಳ್ ಪುಟ್ಟಲೊಡಮವರ ಶರೀರಂಗಳ್ ಮಂಜು ಕರಗುವಂತೆ ಕ …………..ದು ಉತ್ತಮದೊಳ್ ಮೂರು ದಿವಸಂ ಮಧ್ಯಮ ದೊಳೈದು ದಿವಸಂ ಜಘನ್ಯಭೂಮಿಯೊಳೇಳು ದಿವಸಂ ಕ್ರಮದಿಂದಂಗುಷ್ಠಲೇಹನಮುಂ ಅನಿತೆ ದಿವಸಕ್ಕೆ ಅಂಬೆಗಾಲುಂ ತಳರ್ದದಿಯು ………….. ಸಮ್ಯಕ್ತ್ವಗ್ರಹಣಮಕ್ಕುಂ. ಈ ಕ್ರಮಂ ಉತ್ತಮ ಭೋಗಭೂಮಿಯೊಳು ಇಪ್ಪತ್ತೊಂದು (೨೧) ದಿನಂ ಮಧ್ಯಮ ೩೫ ಜಘನ್ಯಕ್ಕೆ ೪೯ ದಿನಂಗಳಕ್ಕುಂ.

ಕಂ ||      ಪಗಲಿರುಳೊಡೆಯ……………..
……………………………..ವಿಷಸ
ರ್ಷಗಣಂ ಮಳೆ ಮಾಗಿ ತಗು
ಳ್ವ ಗಾಳಿ ಕಾಳ್ಗಿಚ್ಚುಮಿನಿತುಮಿಲ್ಲಾ ಮಹಿಯೊಳ್

ಮತ್ತಮತ್ತೀ ವಿಕಲೇಂದ್ರಿಯಂಗಳು ಅಸಾಜ್ಞೆ ಪಂಚೇಂದ್ರಿಯ ಜಲಚರಂಗಳು ಮಿಲ್ಲ. ಸ್ಥಲಚರಂಗಳು ವಿಹಗಂಗಳು ಮಿಥುನಂಗಳಾಗಿ ಪುಟ್ಟಿ ಕ್ಷೇತ್ರತ್ವಭಾವದಿಂ ಪರಸ್ಪರ ವೈರಮಿಲ್ಲದೆ ರಸರಾಸಾಯನೋಪಮಾನಮಪ್ಪ ತೃಣ……. ತ್ರ ಪುಷ್ಪ ಫಲಾದಿಗಳಂ ತಿಂದು ನಿರ್ಭರಮಪ್ಪ ನೀರ್ಗಳಂ ಕುಡಿದು ತ್ರಿಪಲ್ಯೋಪಮಾದಿ ಆಯುಷ್ಯಂಗಳಿಂ ಬರ್ದು ಕಡೆಯೊಳು ಸುಖಮರಣದಿಂ ದೇವಗತಿಗೆ ಸಲ್ವವು. ಇಂತು ಒಂಬತ್ತುಕೋಟಿ ಕೋಟಿ ಸಾಗರೋಪಮಂ ತ್ರಿವಿಧಭೋಗಭೂಮಿಗೆ ಸಲ್ಗು. ಮತ್ತಂ ನಾಲ್ವತ್ತೆರಡು ಸಾವಿರ ವರ್ಷಂ ಕುಂದಿದೊಂದು ಕೋಟಾಕೋಟಿ ಸಾಗರೋಪಮಮಪ್ಪ ದುಃಷಮ ಸುಷಮಮೆಂಬ ನಾಲ್ಕನೆಯ ಅನವಸ್ಥಿತ ಕರ್ಮಭೂಮಿಯಪ್ಪುದುಮಾ ಯುಗದ ಮೊದಲ ಮನುಷ್ಯರು ಕ್ರಮಹಾನಿಯಿಂ ಪಂಚಶತ ಧನುರುತ್ಸೇಧ ಶರೀರರುಂ ಪೂರ್ವ ಕೋಟಿ ಪರಮಾಯುಷ್ಯರುಂ ಪ್ರತಿದಿನಾಹಾರಿಗಳುಂ. ಪಂಚವರ್ಣ ಶರೀರರುಂ ಮಹಾಬಲಪರಾಕ್ರಮರುಂ ನಾನಾ ಭೋಗೋಪಭೋಗಾನುಭುಕ್ತರುಂ ಧರ್ಮಾನುರಕ್ತರಪ್ಪಾ ಕಾಲದೊಳು ತ್ರಿಷಷ್ಟಿಮಹಾಪುರುಷರು ಪುಟ್ಟುವರಾ ಕಾಲದೊಳೆ ಪುಣ್ಯಮುಂ ಪಾಪಮುಂ ಮಾಡಿ ನರಕ ತಿರ್ಯಗ್‌ಮನುಷ್ಯ ದೇವತ್ವಮಂ ಮೋಕ್ಷಮಂ ಪಡೆವರು. ಮತ್ತಂ ದುಃಷಮಮೆಂಬೈದನೆಯ ನವಸ್ಥಿತ ಕರ್ಮಭೂಮಿಯ ಕಾಲಮಿಪ್ಪತ್ತೊಂದು ಸಾಸಿರ ವರುಷಮಕ್ಕುಮೀ ಕಾಲದ ಮನುಷ್ಯರು ಕ್ರಮಹಾನಿಯಿಂ (೧೨೦) ವಿಂಶತ್ಯುತ್ತರ ಶತಸಂವತ್ಸರಾಯುಷ್ಯರುಂ ಸಪ್ತರತ್ನಿಪ್ರಮಾಣಶರೀರರುಂ ರೂಕ್ಷವರ್ಣರುಂ ಬಹ್ವರಿಗಳುಂ ಹೀನಸತ್ವ ಸತ್ಯ ಶೌಚಾಚಾರ ಭೋಗೋಪಭೋಗಾದಿಗಳಿಗೊಡೆಯರುಂ ಆ ಕಾಲದಂತ್ಯದಿನ ಪೂರ್ವಹ್ನದೊಳ್ ಧರ್ಮಮುಂ ಮಧ್ಯಾಹ್ನದೊಳರಸನುಂ ಕಾಲಸ್ವಭಾವದಿಂ ಸಾಯಾಹ್ನದೊಳಗ್ನಿಯುಂ ಕೆಡುಗುಂ. ಮತ್ತಮತಿ ದುಃಷಮಮೆಂಬಾರನೆಯ ಕಾಲಮಿಪ್ಪತ್ತೊಂದು ಸಾಸಿರ ವರ್ಷಂ ಕ್ರಮದಿಂ ಕುಂದುತ್ತಂ ಬರಲಂದಿನ ಮನುಷ್ಯರಿಪ್ಪತ್ತು ವರುಷಾಯುಷ್ಯರುಂ ಇಮ್ಮೊಳ ನಿಡಿಯರುಂ ಧೂಮ್ರವರ್ಣರುಂ ಅನವರತಾಹಾರಿಗಳುಂ ಕಡೆಯೊಳ್ ಪಂಚದಶ ವರ್ಷಾಯುಷ್ಯರುಂ ಒಂದು ಮೊಳ ನಿಡಿಯರಕ್ಕುಂ. ಆ ಕಾಲದೊಳು ಷಟ್ಕರ್ಮಂಗಳು ಕುಲಧರ್ಮಂಗಳು ಜಾತಿ ಭೇದಂಗಳು ಮೊರೆಯುಂ ಅರಸನುಂ ಇಲ್ಲ. ಮನುಷ್ಯರೆಲ್ಲಂ ವಸ್ತ್ರಮಾಲ್ಯಾಲಂಕಾರಶೂನ್ಯರಾಗಿ ಮತ್ಸ್ಯಾದಿಗಳೆ ತಮಗಾಹಾರಮಾಗೆ ಪಶುಮೃಗಪಕ್ಷಿಗಳಂತೆ ಜೀವಿಸುವರು. ಆ ಕಾಲದ ಕಡೆಯೊಳು ನಾಲ್ವತ್ತೊಂಬತ್ತು ದಿನಮುಂಟೆನಲೇಳು ದಿವಸಂ ತೀವ್ರ ವಾತಮುಂ ಅತ್ಯುಗ್ರ ಶೀತಮುಂ ಕ್ಷಾರಮುಂ ವಿಷವೃಷ್ಟಿಯುಂ ಪರುಷಮುಂ ಅಗ್ನಿಯುಮೇಳೇಳು ದಿವಸಮಾಗೆ ದಂದಹ್ಯಮಾಗಿ ಭರತ್ಯೆರಾವತದಾರ್ಯಾಖಂಡಮೆಲ್ಲಮುಂ ಪ್ರಳಯಕಾಲಾನಲಾರ್ಚಿಗಳಿಂ ಕ್ಷುಲ್ಲಕಪರ್ವತಮುಂ ಉಪಸಮುದ್ರ ಕುತ್ಸಿತ ನದಿ ನದಾದಿಗಳುಮುಪಭೂಮಿ ಭೂಬಾಗಮೆಲ್ಲಂ ಸಮತಳಮಕ್ಕುಂ. ಮತ್ತೇಳುದಿವಸಂ ರಜಮುಂ ಧೂಮಮುಂ ವ್ಯಾಪಿಸಿಪ್ಪುದು. ಇವು ಮೂರುಂ ಅನವಸ್ಥಿತ ಕರ್ಮಭೂಮಿಗಳಕ್ಕುಂ. ತದನಂತರಂ ಕೃಷ್ಣಪಕ್ಷದ ಕಡೆಯ ಸಮಯದೊಳ್ ಶುಕ್ಲಪಕ್ಷಮಪ್ಪಂತೆ ಉತ್ಸರ್ಪಿಣಿಕಾಲಂ ಪುಟ್ಟುಗುಂ. ಮೊದಲೊಳ್ ಮುನ್ನಿನಂತೆ ನಾಲ್ವತ್ತೊಂಬತ್ತು ದಿನಮೇಳೇಳು ದಿವಸಂ ಅಮೃತಮಯ ವರ್ಷಮಾಗೆ ಬಳಿಕ ಇಪ್ಪತ್ತೊಂದು ಸಾವಿರ ವರ್ಷಮಾಕಾಲದೊಳೊಮ್ಮೊಳದುದ್ದ ಪದಿನೈದು ವರ್ಷಮಾಯುಷ್ಯಮಾಗೆ ಪೆಚ್ಚುತಂ ಮೃಷ್ಟತರ ಮೃತ್ತಿಕಾಹಾರದಿಂ ವಿಜಯಾರ್ಧ ಗಂಗಾಸಿಂಧುಗಳ ವಿಳಾಸಗುಹೆಯೊಳು ವಿದ್ಯಾಧರರು ವ್ಯಂತರರು ಕರುಣದಿಂ ಕೊಂಡೊಯ್ದಿರಿಸಿರ್ದ ಮನುಷ್ಯ ಪಶು ಪಕ್ಷಿ ಮೃಗ ಮೃಗಜಾತಿಗಳು ಪೆರ್ಚಿ………….. ಮುಂದಣ ದುಃಷಮಕಾಲಂ ಪುಟ್ಟುವಿನ ವಿಂಶತಿ ಶತ ವರ್ಷಾಯುಷ್ಯರುಮೇಳುಮೊಳ ನಿಡಿಯರಾಗಲಾ ಕಾಲದ ಕಡೆಯೊಳು ಕನಕ ಮೊದಲಾದ ಮನುಗಳುತ್ಪತ್ತಿಯಿಂ ಷಟ್ಕರ್ಮಮುಂ ಕುಲಭೇದಮುಂ ಧರ್ಮಮುಂ ಪ್ರಕಟಮಾಗೆ ಮುಂದೆ ದುಃಷಮ ಸುಷಮಮೆಂಬ ಮೂರನೆ ತಾಣದೊಳು ಮಹಾಪದ್ಮ ಪ್ರಭತೀರ್ಥಕರು ಮೊದಲಾಗೆ ತ್ರಿಷಷ್ಟಿಶಲಾಕಾಪುರುಷರುತ್ಪತ್ತಿಯಕ್ಕುಂ. ಆ ನಾಲ್ವತ್ತಿಚ್ಛಾಸಿರ ವರ್ಷಂ ಕುಂದಿದೊಂದು ಕೋಟಿಕೋಟಿ ಸಾಗರೋಪಮಸ್ಥಿತಿಯುಳ್ಳಾ ಕಾಲದ ಕಡೆಯೊಳಮೈನೂರು ಚಾಪೋತ್ಸೇಧರುಂ ಪೂರ್ವಕೋಟಿ ಪರಮಾಯುಷ್ಕರಪ್ಪರು. ಅಲ್ಲಿಂದತ್ತ ಜ ……….ವಿಧ ಭೋಗಭೂಮಿಯಾಗಲಾ ಕಾಲದಿಂದತ್ತಲವಸರ್ಪಿಣಿಕಾಲಂ ಬಪ್ಪುದು. ಇಂತು ಶುಕ್ಲಕೃಷ್ಣಪಕ್ಷದಂತೆ ವಿಂಶತಿ ಕೋಟಾಕೋಟಿ ಸಾಗರೋಪಮ ಸ್ಥಿತಿಯಿಂ ಅವಸರ್ಪಿಣಿಯುತ್ಸರ್ಪಿಣಿ ಕಾಲಂಗ …………. ರು ಹುಂಡಾವಸರ್ಪಿಣಿ ಕಾಲಮೆಂದಪ್ಪುದಾ ಕಾಲದೋಷಂ ಅನೇಕಮಾಗಿ ವಿಪರೀತಂಗಳಪ್ಪವವಂ ಆಗಮದೊಳರಿದುಕೊಂಬುದು. ಇಂತು ಕಾಲಸ್ವಭಾವಂ ಸರ್ವ …………. ಕಾರಂ ಪೇಳ್ವರದು ನಿಶ್ಚಯಮಾಗದು.

ಈ ಪ್ರಕಾರದೊಳೆ ಕಥಾಮುಖದೊಳು ಲೋಕಸ್ವರೂಪಮಂ ಕಾಲಸ್ವರೂಪಮಂ ಯಥಾಸ್ಥಿತಿಯಿಂ ಪೇಳ್ದು ಈ ಹುಂಡಾವಸರ್ಪಿಣಿ ಚ ………… ರ್ಮೊದಲಾಗೆ ಅನೇಕ ರಾಜರುಗಳ ಪುಟ್ಟಿ ವರ್ತಿಸಿದ ಪ್ರಪಂಚಮಂ ಕಿಂಚಿತ್ತ ಪೇಳ್ವೆನದೆಂತೆಂದೊಡೆ

ಕಂ || ಶ್ರೀಸುಜನಸ್ತುತರಖಿಳಕ
ಳಾಸದನರ್ ಮೋಹತಿಮಿರಮಂ ಕಳೆದು ಕರಂ
ಭಾಸುರ ವಿಚಾರದಕ್ಷರ್

ವೈಷಮ್ಯಮನುಳಿದು ಕೇಳ್ವುದೀ ಸತ್ಕೃತಿಯಂ

ಅದೆಂತೆಂದೊಡೀ ಹುಂಡಾವಸರ್ಪಿಣಿಯ ತೃತೀಯಕಾಲದ ಕಡೆಯೊಳೊಂದು ಪಲ್ಯಾಷ್ಟಮ ಭಾಗದಂತ್ಯದೊಳು ಪ್ರತಿ ಶ್ರುತಿ ಮೊದಲಾಗೆ ಪದಿನಾಲ್ಕು ಮನುಗಳು ಪುಟ್ಟಿ ಕರ್ಮಭೂಮಿಸ್ಥಿತಿಯುಂ ಜಾತಿರಂಗ ಕಲ್ಪವೃಕ್ಷದ ಪ್ರಭಾಹಾನಿಯಿಂದಾಷಾಢದ ಪೌರ್ಣಮಿಯೊಳು ಜ್ಯೋತಿರ್ಲೋಕದ ಸೂರ್ಯಚಂದ್ರದರುಶನಂ ಮೊದಲಾಗೆ ನಾಭಿವಿಕರ್ತನಂ ಕಡೆಯಾಗುಳ್ಳ ಕರ್ಮಭೂಮಿಯ ಸ್ಥಿತಿಗಳಂ ಉಪದೇಶಂಗೆಯ್ದರವರಾ ಯುರುತ್ಸೇಧ ಮನ್ವಂತರಂಗಳಂ ಸಿದ್ಧಾಂತದೊಳ್ ತಿಳಿಯಲಪ್ಪುದಾ ಕಡೆಯ ಪದಿನಾಲ್ಕನೆ ಮನುವಪ್ಪ ನಾಭಿರಾಜನರಸಿ ಮರುದೇವಿಮಹಾದೇವಿಯವರ್ಗೆ ಆದಿಬ್ರಹ್ಮಂ ವಿದೇಹದೊಳನೇಕ ತಪಂಗೆಯ್ದು ಸರ್ವಾರ್ಥಸಿದ್ಧಿಯೊಳ್ ಪುಟ್ಟಿ ಮೂವತ್ತುಮೂರು ಸಮುದ್ರೋಪಮಕಾಲದಿಂ ಭರತಕ್ಷೇತ್ರದೊಳ್ ಪ್ರಥಮ ತೀರ್ಥಂಕರವಾಗಿ ಪುಟ್ಟುವ ಪದಿನೈದು ತಿಂಗಳುಂಟೆನ ಗರ್ಭಾವತರಣಕಲ್ಯಾಣಪೂರ್ವಕಮಾಗಿ ಪುಟ್ಟಿ ಜನ್ಮಾಭೀಷೇಕ ಮನಾಂತು ಬೆಳೆದು ಸೃಷ್ಟಿಕರ್ತನಾದಂ

ವೃತ್ತ || ಯದ್ಗರ್ಭಾವತರೇಗೃಹೇ ಜನಯಿತುಃ ಪ್ರಾಗೇವಶಕ್ರಾಗ್ಜ್ಞ್ಯಯಾ
ಷರ್ಣಾಷಾ………..ತ ಚಾರುರತ್ನಕನಕಂ ವಿತ್ತೇಶ್ವರೊ ವರ್ಷತಿ
ಭಾತ್ಯೂರ್ವಿಮಣೀ ಗರ್ಭಿಣೀ ಸರ ಸರಿನ್ನಿರೋಕ್ಷಿತ ಷೋಡಶಸ್ವಪ್ತೇ
ಕ್ಷ್ಯಾಮುದಿತಾ ……….. ಜಂತಿ ಜನನಿಂ ಶ್ರೀದಿಕ್ಕುಮಾರ್ಯೋಸಿಸಃ ||

ಅಂತು ಆದಿಪರಮೇಶ್ವರಂ ತ್ರಿಜ್ಞಾನಧರನಾಗಿ ನವಮಾಸಂ ನೆರೆದು ಪುಟ್ಟಿದೊಡೆ ಚತುರ್ನಿಕಾಯಾಮರ್ ನೆರೆದು ಜನ್ಮಾಭಿಷೇಕಕಲ್ಯಾಣಮಂ ಮಾಡಿದರು.

ವೃತ್ತ || ಪ್ರಚ್ಛನ್ನಂ ಜನನೀಮುಪಾಸ್ಯಶಯನಾದಾನೀಯಶಚ್ಛಾರ್ಪಿತಂ
ಯನ್ನತ್ವಾಸ ಚತರ್ನಿಕಾಯ ವಿಬುಧ ಶ್ರೀಮತ್ಕರೀಂದ್ರ ಶ್ರಿತಃ
ಸೌಧರ್ಮೋಂಕನಿವೇಷಿತಂ ಸುರಗಿರಿಂ ನಿತ್ವಾಂಬು ಸಿಂಚಾಂಬ …..
ಸಂಯೋಜ್ಞೋಪಚರತ್ಯಜಸ್ರಮಸಮೈಭೋಗೈಸ್ಸಭಾಸೈಸನಃ ||

ಅಂತಾದಿಪರಮೇಷ್ಠಿಯಂ ಪಂಚಶತಶೀಲಿಮುಖಂ ಸ …….. ತ್ಸೇಧನುಂ ಚತುರುತ್ತರಾಶೀತಿ ಪೂರ್ವಲಕ್ಷ ಪರಮಾಯುಷ್ಯನುಂ ತಪ್ತತಪನೀಯಚ್ಛಾಯಾಂಗನುಂ ಅಷ್ಟೋತ್ತರಶತ ಶುಭಲಕ್ಷಣನುಂ ನವಶತ ವ್ಯಂಜನಾಲಂಕೃತನುಮಾಗಿ ವೃಷಭೇಶನೆಂಬ ನಾಮಮಂ ತಾಳ್ದು ಇಪ್ಪತ್ತು ಲಕ್ಷ ಪೂರ್ವೆ ಕುಮಾರಕಾಲಂ ಸಲ್ವಿನಮಾ ಕಾಲದೊಳು ಕಲ್ಪವೃಕ್ಷಂಗಳಲ್ಪಫಲದಂಗಳಾಗೆ ಪ್ರಜೆಗಳ್ಗೆಲ್ಲಂ ಕ್ಷುಧಾ ತೃಷಾಪೀಡಿತರಾಗಿ ಬಂದೆರಗಿ ಜೀವನೋಪಾಯಮಂ ಬೆಸಗೊಳ್ವುದುಮಾದಿಪಿತಾಮಹನವಧಿಯಿಂ ವಿದೇಹಸ್ಥಿತಿಯಂ ತಿಳಿದು ಬಂದ ಪ್ರಜಾನೀಕಮನುತ್ತಮ ಮಧ್ಯಮ ಜಘನ್ಯಮೆಂದು ಮೂರು ಭಾಗಮಾಗೆ ನಿಲಿಸಯವರ್ಗೆ ಅಸಿಯುಂ ಮಸಿಯುಂ ಕೃಷಿಯುಂ ವಾಣಿಜ್ಯಮುಂ ಶಿಲ್ಪಮುಂ ಪಾಶುಪಾಲ್ಯಮೆಂಬ ಷಟ್ಕರ್ಮಂಗಳನುಪದೇಶಂಗೆಯ್ವಾಗಳು ದೇವೇಂದ್ರಂ ಬಂದು ಆರ್ಯಾಖಂಡದೊಳು ಕೌಶಲ್ಯ ಮೊದಲಾದೈವತ್ತಾರು ದೇಶಂಗಳಂ ಅಯೋಧ್ಯಾದಿ ಮಹಾ ರಾಜಧಾನಿಗಳಂ ನಿರ್ಮಿಸಿ ಅಲ್ಲಲ್ಲಿ ಭೂಪತಿಗಳೆಂದಿಟ್ಟುಪೋದನಿತ್ತಲು ಲೋಕೇಶನಪ್ಪ ಪುರುದೇವಂ ಯಶಸ್ವತಿ ಸುನಂದೆಯೆಂಬ ಮಹಾಸತಿಯರು ಲೋಕವ್ಯವಹಾರಕ್ಕೋಸ್ಕರ ವಿವಾಹವಿಧಿಯಂ ಕೈಕೊಂಡು ಭರತ ವೃಷಭಸೇನ ಬಾಹುಬಲಿಗಳ್ ಮೊದಲಾಗೆ ನೂರೊರ್ವರ್ ಕುಮಾರರುಂ ಬ್ರಾಹ್ಮಿ ಸೌಂದರಿಯರೆಂಬಿರ್ವರ್ ಕುಮಾರಿಯರಂ ಪಡೆದು ರಾಜ್ಯದೊಳ್ ನಿಂದು ಷಟ್ಕರ್ಮವ್ಯವಹಾರಮಂ ಜಾತಿಭೇದಮಂ ಕುಲಚರ್ಯಮಂ ಯಥೋಚಿತಮುಪದೇಶಂಗೆಯ್ದು ಅಕ್ಷರಲೇಖ್ಯ ಮೊದಲಾದರುವತ್ತುನಾಲ್ಕು ಕಲಾ ವಿದ್ಯಮಂ ಹಾರಯಷ್ಟಿ ಮೊದಲಾದ ಶಿಲ್ಪವಿದ್ಯಮೆಲ್ಲಮಂ ತನುಜರ್ಗೆಲ್ಲಾಮುಪದೇಶಂಗೆಯ್ದು ಕೃಷಿಯಮುಪದೇಶಂಗೆಯ್ದಲ್ಲಿ ಮನುಗಳಿಂ ಶಿಕ್ಷಿಸಲ್ಪಟ್ಟ……. ಗ್ರಹಿಸಿ ಭೂಮಿಯನುತ್ತು ಕಾಡೊಳ್ ಬೆಳೆದೊರಗಿರ್ದ ಧಾನ್ಯಬೀಜಮಂ ಬ್ರಹ್ಮೋಪದೇಶದಿಂ ಬಿತ್ತಿಬೆಳೆವಲ್ಲಿ ಪೈರು ಸಂದಿಗ್ಧಮಾಗೆ ಪ್ರಬಲವಾಗದಿಪ್ಪುದು ಸೃಷ್ಟ್ಯೋಪ ದೇಶದಿಂ ಹರಗಣಮಂ ಮಾಡೆ ಪೈರಂ ತಿನ್ನಲದಕ್ಕೆ ಮುಖ…….. ದಹದಿನೈದನೆಯ ಮನುವಪ್ಪ ಆದಿಬ್ರಹ್ಮಂ ಸೃಷ್ಟಿಕರ್ತನಾದಂ. ಭರತೇಶ್ವರಂ ಹದಿನಾರನೆಯ ಮನುವುಂ ಪ್ರಥಮ ಚಕ್ರಿಯುಂ ಅಂತ್ಯಬ್ರಹ್ಮನುಮಾಗಿ ಭರತಗಟ್ಟಳೆಯಂ……….. ಪಾಯಮಂ ತೋರಿಸಿದುದರಿಂದಾ ವಂಶಕ್ಕೆ ಇಕ್ಷ್ವಾಕುವಂಶಮೆಂದಾಯ್ತು.

ಮತ್ತಂ ಸೋಮಪ್ರಭುಮಹಾರಾಜಂಗಂ ಕುರುರಾಜಾಭಿಧಾನಮನಿಟ್ಟುದರಿಂ ಚಂದ್ರವಂಶಕ್ಕೆ ಕುರು……………ಹರನಾಮಮನಿಟ್ಟುದರಿಂ ಹರಿವಂಶಮಾಯ್ತು. ಅಕಂಪಂಗೆ ಶ್ರೀನಾಥನಾಮವನಿಟ್ಟುದರಿಂ ನಾಥವಂಶಮಾಯ್ತು. ಅಕಂಪಂಗೆ ಶ್ರೀನಾಥನಾಮವನಿಟ್ಟುದರಿಂ ನಾಥವಂಶಮಾಯ್ತು. ಕಾಶ್ಯಪಂಗೆ ಉಗ್ರಾಭಿದಾನ ಮನಿಟ್ಟುದರಿಂದುಗ್ರವಂಶಮಾಯ್ತಿಂತು ಕ್ಷತ್ರಿಯರು……….ಪೆಸರಾಗೆ ವಿಷಯವಿಭಾಗಮಂ ಗ್ರಾಮ ನಗರಾದಿ ವಿಕಲ್ಪಮೆಲ್ಲಮಂ ಆಷಾಢ ಬಹುಳ ಒಂದರೊಳು ಕೃತಯುಗಾದಿಯಾಗೆ ಆದಿಬ್ರಹ್ಮಂಗೆ ಅರುವತ್ತುಮೂರು ಲಕ್ಷ ಪೂರ್ವೆಯು ರಾಜ್ಯಪಾಲಂ ಸಲ್ವಿನ ನೀಲಾಂಜನಾ ನೃತ್ಯವ್ಯತಿಕರದೊಳು ತ್ರಿವಿಧ ನಿರ್ವೇಪರಾಯಣನಾಗೆ

ವೃತ್ತ ||  ಕಿಂಕುರ್ವಾಣ ಸುರೇಂದ್ರರುಂದ್ರ ವಿಷಯಾನಂದಾದ್ವಿರಕ್ತಸ್ತುತೋ
ಯೋಲೌಕಾಂತಿಕನಾಕಿಭಿಃ ಶಿಬಿಕಯಾ ನಿಷ್ಕ್ರಮ್ಯಗೇಹಾನ್ಮ ಹೈ
ರ್ದ್ದಿವ್ವೈರ್ಸ್ಸೀದ್ಧನತಿದ್ಧಯಾವನರುಂ ಪೂತ್ವಾಪರಂ ದೀಕ್ಷಯಾ
ಭುಂಕ್ತೇ ಶುದ್ಧ ನಿಜಾತ್ಮ ಸಂವಿದಮೃತಂ ಸತ್ವಂಪ್ಪುರಸ್ಯೇಷನಃ ||

ಅಂತು ತ್ರಿಲೋಕೇಶ್ವರನಪ್ಪ ಆದಿಪರಮೇಶ್ವರನು ದೀಕ್ಷಾವನದೊಳು ಸಿದ್ಧ ನಮಸ್ಕಾರಪೂರ್ವಕಂ ಪಂಚಮುಷ್ಟಿಯಿಂ ತಲೆಯಂ ಪರಿದು ವಸ್ತ್ರಾಭರಣಂಗಳಂ ತೊಲಗಿಸಿ ಬಾಹ್ಯಾಭ್ಯಂತರ ಪರಿಗ್ರಹಂಗಳಂ ದ್ರವಭ್ಯಾವದಿಂ ತೊರೆವುದುಂ ಕಚ್ಛ ಮಹಾಕಚ್ಛ ವೃಷಭಸೇನರು ಮೊದಲಾದವರುಂ ಭರತೇಶ್ವರನ ಪೆಂಡತಿ ಅನಂತಸೇನೆಯ ಮಗನಪ್ಪ ಮರೀಚಿ ಮೊದಲಾಗೆ ನಾಲ್ಸಾಸಿರ ಅರಸುಮಕ್ಕಳು ವೈರಾಗ್ಯಮಿಲ್ಲದೆ ಸ್ವಾಮಿಯಂತೆ ದ್ರವ್ಯೃಷಿಗಳಾಗಿ ಬಳಸಿರ್ಪುದುಂ ಲೋಕೇಶಂ ಧ್ಯಾನಮೌನದೊಳು ಅರುದಿಂಗಳ್ಗಲ್ಲದೆ ಕೈಯೆತ್ತೆನೆಂದು ಪ್ರತಿಮೆನಿಂದು ಬಳಸಿರ್ದ ಋಷಿಗಳು ಕ್ಷುತ್ಪಿಪಾಸಾದಿ ಪರೀಷಹಂಗಳಂ ಸೈರಿಸಲಾರದೆ ಕಂದಮೂಲಫಲಾಹಾರ ನಿಮಿತ್ತ ಭಸ್ಮದಂಡ ವಲ್ಕಲಾದಿಗಳಂ ಧರಿಸಿ ಕೆಲಂಬರು ಕಾದಿರ್ದರು, ಕೆಲಂಬರು ಸರಿದರು. ಆರುದಿಂಗಳಿಂ ಮೇಲೆ ಭಿಕ್ಷಾರ್ಥಮಾಗಿ ಗ್ರಾಮಪುರಾದಿಗಳೊಳು ಚರಿಸಲು ವಸ್ತ್ರವಾಹನಂಗಳಂ ತೋರೆ ಅಂತರಾಯಮಾಗೆ ಮುಂದುರುದಿಂಗಳಿಗೆ ಸೋಮಪ್ರಭಮಹಾರಾಜನ ಕುಮಾರಂ ಶ್ರೇಯಾಂಸನೆಂಬೊಂ ಸ್ವಪ್ನಂಗಂಡು ಭವಸ್ಮರಣೆ ಪುಟ್ಟಿ ಮುನ್ನ ಶ್ರೀಮತಿಯಾದ ಭವದೊಳು ವಜ್ರಜಂಘಂವೆರಸು ಸರ್ಪಸರೋವರದೊಳು ಚಾರಣಋಷಿಗಳ್ಗೆ ಆಹಾರ ದಾನಮಂ ಕೊಟ್ಟ ವಿಧಿಯು ಭವಸ್ಮರಣೆಯಾಗೆ ಮರುದಿವಸಂ ಬೀದಿಯೊಳ್ ಬರ್ಪ ಮಹಾ ಮುನಿಯಂ ಕಂಡು ಸ್ಥಾಪನೆ ಮೊದಲಾದ ನವವಿಧ ಪುಣ್ಯಮುಂ ಶ್ರದ್ಧಾದಿ ಸಪ್ತಗುಣಸಮನ್ವಿತನುಮಾಗಿ ಇಕ್ಷುರಸಮಂ ಕೈಯೊಳೆರೆಯೆ ನಿರಂತರಾಯಮಾಗೆ ಹನ್ನೆರಡು ಕೋಟಿಯುಮೈವತ್ತು ಲಕ್ಷ ರೈ…………..ರ…………ವೃಷ್ಟಿಯುಂ ದೇವದುಂದುಭಿಗಳುಂ ದೇವರ್ಕಳ ಪ್ರಶಂಸೆಯುಂ ಸುಗಂಧಶೀತಲಮಪ್ಪ ತೆಂಗಾಳಿಯುಂ ಪುಷ್ಟವೃಷ್ಟಿಯುಮೆಂಬೀ ಪಂಚಾಶ್ಚರ್ಯಮಾಗೆ ಭರತೇಶಂ ಮೊದಲಾದನೇಕರುಂ ಬಂದು ಶ್ರೇಯಾಂಸನಂ ಪೂಜಿಸಿದರಂದಿಂದಿತ್ತ

ಆ ವೈಶಾಖ ಶುದ್ಧ ೩ ಯೊಳು ಅಕ್ಷಯದಾನಮೆಂದು ಕೊಂಡೊಡೆ ಅಕ್ಷತೃತೀಯಮೆಂಬ ಪರ್ವತಿಥಿಯಾದುದು. ಇಂತು ಧ್ಯಾನಮೌನಾನುಷ್ಠಾನದಿಂ ಸಹಸ್ರ ಸಂವತ್ರರಂ ಛದ್ಮಸ್ಥಕಾಲಂ ಸಲೆ ಪುರಿಮತಾಳಪುರದ ಬಹಿರುದ್ಯಾನವನದ ವಟವಿಟ ಪಿಯಡಿಯೊಳು…….ರ್ಮ ಶುಕ್ಲಧ್ಯಾನದಿಂ ಕರ್ಮಂಗಳಂ ಕೆಡಿಸಿದುದೆಂತೆಂದೊಡೆ

ವೃತ್ತ ||  ಸಮೃಗ್ದೃಷ್ಟಿ ಕೃಶಾಕೃಶ ವ್ರತ ಶುಭೋತ್ಸಾಹೇಷುತಿಷ್ಠನ್ ಕ್ವಚಿ
ದ್ಧರ್ಮಧ್ಯಾನ ಬಲಾದಯತ್ನಗಲಿತಾನ್ರಾಯುಸ್ತ್ರಯಸ್ಸಪ್ತಯಃ
ದೃಷ್ಟಿಘ್ನಪ್ರಕೃತಿಃ ಸಮಾತಪ ಚತುರ್ಜಾತಿರ್ಸ್ತ್ರಿನಿದ್ರಾದ್ವಿಧಾ
ಶ್ವಭ್ರಸ್ಥಾವರ ಸೂಕ್ಷ್ಮ ತಿರ್ಯಗುಭಯೋದ್ಯಾತಾಂಸ್ಕಷಾಯಾಷ್ಟಕಂ ||

ವೃತ್ತ ||  ಕ್ಲೈವ್ಯಂ ಸ್ತ್ರೈಣಮಥಾದಿಮೇನ ನವಮೇ ಹಾಸ್ಯಾದಿ ಷಟ್ಕಂ ನೃತಾಂ
ಕ್ಷಿಪ್ತೋದಿಭೆ ಪೃಥಕೃದಾದಿ ದಶಮೇಲೋಭಂ ಕಷಾಯಾಂ ತತಃ
ನಿದ್ರಾಂಸಪ್ರಚಲಾಮುಪಾತ್ಯಸಮಯೇ ದೃದ್ವಿಘ್ನವಿಘ್ನಾಂಶ್ಚ ತುರ್ದಿಃ
ಪಂಚಕ್ಷಿಪತೇ ಪರೇಣ ಚರಮೇ ಶುಕ್ಲೇನ ಸೋಹರ್ನಸಿ ||

ದ್ರವ್ಯಂ ಭಾವ ಮಹಾತಿಸೂಕ್ಷ್ಮಮದಿಯನ್ನುಕ್ಷ್ಯಾವಿತರ್ಕೇಸ್ಫುರ
ನ್ನರ್ಥವ್ಯಂಜನಮಂಗನಿರಪಿ ಪೃಥಕ್ತೇನಾಪಿ ಸಂಕ್ರಾಮತಾ
ಕರ್ಮಾಂಶಾನನವಸ್ಥಿತೇ ನಮನಸಾ ಪ್ರೌಢಾರ್ಭಕೋತ್ಸಾಹವತ್
ಕುಂಠೇನ ದ್ರಮಿಮಾಣುಶಃ ಪರಶುವಾದಿ………………………..

……………ಣೆ ಮೋಹದಿಪಾಭಜನ್ನುರು ಯಥಾಖ್ಯಾತಾದಿ ರಾಜ್ಯಶ್ರೀಯಂ ಯೋ ಶುದ್ಧ ಸ್ವಾತ್ಮ ವಿನಿರ್ವಿಚಾರ ವಿಲಸತ್ ಪೂರೋದಿತಾರ್ಥ ಶ್ರುತಃ ಸ್ವಚ್ಛಂದೋಜ್ವಲಜ್ವಲ ಚಿದಾನಂದೈಕ ಭಾವೋಗಲಚ್ಛೆಶಾರಿವ್ರಜವೈ………………………

…………………….ಶರ್ಯವಿಘಾತಿಘಾತಿದುರಿತಚ್ಛೇದೋದ್ಗತಾನಂತ ದೃ
ಕ್ಸಂವಿದ್ವೀರ್ಯಸುಖಾತ್ಮಿಕಾಂ ತ್ರಿಜಗತಾಕೀಣೇ ಸದಸ್ಯಾಸ್ಥಿತಃ
ಜೀವನ್ಮುಕ್ತಿ ಮೃಷೀಂದ್ರ ಚಕ್ರಿಮಹಿತತ್ಸ್ತೀರ್ಥಚತುತ್ರಿಂಶತಃ
ಕುವಾ……………………………………………………… ||

……………….ರಮೇಶ್ವರಂಗೆ ಜ್ಞಾನಾವರಣೀಯ ದರ್ಶನಾವರಣೀಯ ಮೋಹನೀಯ ಅಂತರಾಯಂಗಳೆಂಬ ಘಾತಿತುಷ್ಟಯಂಗಳು ಅಪ್ರಮತ್ತಗುಣಸ್ಥಾನದಿಂ ತೊಟ್ಟು ಸಯೋಗಿ ಕೇವಲಿಗು…………………..ಯುಂ ಜನ್ಮಮುಂ ಮೃತ್ಯವುಂ ಭಯಮುಂ ಸ್ಮಯಮುಂ ರಾಗಮುಂ ದ್ವೇಷಮುಂ ಮೋಹಮುಂ ಚಿಂತಾ ರತಿ ನಿದ್ರಾ ವಿಷ್ಮಯ ವಿಷಾದ ಸ್ವೇದ ಭೇದಂಗಳೆಂಬ ಪದಿನೆಂಟು……………….ಣುಗಳು ಬೇರ್ಪಟ್ಟು ಪೋಪಿನ ಅಚ್ಛಾಯತ್ವಮ ಪ್ರಾಣಿವಧ ಮೊದಲಾದತಿಶಯಂಗಳಿಂ ಭೂಮಿಯಿಂ ಮೇಲೆ ಐದು ಸಾವಿರ ಬಿಲ್ಲಂತರದೊಳು ನಿಲ್ವುದುಂ ದೇವೇಂದ್ರನಾ………………..ವಸರಶೊಮಂ ರಚಿಯಿಸಿದಂ.

ಇತ್ತಲು ಭರತೇಶ್ವರಂ ಓಲಗದೊಳಿರ್ದಂದು ಆದಿಬ್ರಹ್ಮಂಗೆ ಕೇವಲಜ್ಞಾನ ಮಾದುದಂ ಅರ್ಕಕೀರ್ತಿಯೆಂಬ ಕುಮಾರಂ ಪುಟ್ಟಿದುದಂ ಆಯುಧಾಗಾರದೊಳ್ ಸುದರ್ಶನಚಕ್ರರತ್ನ ಪುಟ್ಟಿದುದೀ ಮೂರು ಒಸಗೆಯಂ ಪೇಳೆ ಧರ್ಮಾರ್ಥಕಾಮ ಫಲದೊಳು ಧರ್ಮಮೆ ಮುಖ್ಯಮಪ್ಪುದರಿಂ ಮೊದಲು ಪೂಜೆಗೆಯ್ದು ಬಂದು ಚಕ್ರಪೂಜೆಯಿಂದಾ ದ್ವಿಜದ ವಿಜಯದಷ್ಟಮಿಯೊಳೆ ದಿಗ್ವಿಜಯೋದ್ಯೋಗಂಗೆಯ್ದು ಜೀವಾಜೀವ ರತ್ನಂಗಳೊಂದೊಂದು ಯಕ್ಷಸಹಸ್ರ ರಕ್ಷಿತಂಗಳಪ್ಪ ಪದಿನಾಲ್ಕು ಮಹಾರತ್ನಂಗಳಂ ಕಾಲ ಮಹಾಕಾಲಾದಿ ನವನಿಧಿಗಳಂ ಪಡೆದು ಶಕ್ತಿತ್ರಯಸಮನ್ವಿತನಾಗಿ ಆಂತರಂಗಾರಿಷಡ್ವರ್ಗವಿಜಯನುಂ ಸಪ್ತಾಂಗರಾಜ್ಯಸಂಪನ್ನನುಂ ನ್ಯಾಯನಿಹಿತ ಪ್ರಜಾಪಾಲನ ಮತಿಪಾಲನ ಕುಲಪಾಲನಾತ್ಮಪಾಲನ ಸಮಂಜಸತ್ವಲಕ್ಷಣ ಕ್ಷಾತ್ರ ಧರ್ಮಮಂ ಪಾಲಿಸುತ್ತ ಮಾಗಧ ಪರತ ಪ್ರಭಾಸಾಮರರೆಂಬ ವ್ಯಂತರದೇವರನೆರಗಿಸಿಕೊಂಡು ವಿಜಯಾರ್ಧಪರ್ವತದ ದೇವಖಾತದ ವಜ್ರಕವಾಟಮನೊದೆದು ಹಿಮತ್ಪರ್ವತಂಬರಂ ನಡೆದಾ ದೇವನಿಂ ಪೂಜಿಸಿಕೊಂಡು ಮ್ಲೇಚ್ಚಖಂಡಮಂ ಬಾಯ್ಕೇಳಿಸಿ ವಿದ್ಯಾಧರರಪ್ಪಾ ವಿಯಚ್ಚರರೆಲ್ಲರನೆರಗಿಸಿಕೊಂಡು ವೃಷಭಾದ್ರಿಯೊಳ್ ತನ್ನ[೦]ಕಮಾಲೆಯಂ ಬರೆಯಿಸಿ ಸ್ವಾಜ್ಞಾನಿರರ್ಗಳನಾಗಿ ಷಡ್ಖಂಡಾಧೀಶ ಸಾಮ್ರಾಜ್ಯ ಪದಮನಾಂತು ಪೌದನಾಪುರದ ಬಳಿಗೆ ಬಪ್ಪುದು ನಿಜಾನುಜನಪ್ಪ ಬಾಹುಬಲಿ ಮಹಾರಾಜಂ ತನಗೆರಗದೆ ಒಡ್ಡಿ ನಿಲ್ವುದುಂ ಕಾಲದೋಷಮೆಂದು ಧರ್ಮಾಧಿಕರಣರಿರ್ವರುಂ ಸೋಲ್ವರಲ್ಲ ಬಲಮೆಲ್ಲಂ ಲಯಮಪ್ಪುದೆಂದು ದೃಷ್ಟಿಯುದ್ಧ ಜಲಯುದ್ಧ ಮಲ್ಲಯುದ್ಧಂಗಳಂ ಮಾಳ್ಪುದು. ಭುಜಬಲಿಯುಂ ಗೆಲ್ಲಂಗೊಂ[ಡು] ತನ್ನ ಕಷಾಯೋದಯಕ್ಕೆ ತಾನೆ ನಿಂದಿಸಿಕೊಂಡು ತ್ರಿವಿಧ ನಿರ್ವೇಗದಿಂ ಜಿನದೀಕ್ಷೆಗೊಂಡು ಕಿಂಚಿನ್ಮಾನದಿಂ ಪೃಥ್ವಿಯೊಳ್ ಚರಿಸುತ್ತಿಪ್ಪುದು. ಗೊಮಟನಾಥನೆಂಬ ಪೆಸರಾದ ವ್ಯಂತರವಚನದಿಂದೊಂದು ಸುತ್ತಿನ ಮೇಲೆ ಮುಟ್ಟುಪವಾಸದಿಂ ಕಾಯೋತ್ಸರ್ಗದೊಳ್ ನಿಂತು ಧ್ಯಾನಮೌನಾನುಷ್ಠಾನಂಗೆಯ್ಯೆ ಭರತೇಶಂ ಬಂದೆರಗಿದೊಡೊಂದು ಸಂವತ್ಸರದೊಳು ಶ್ರೇಣ್ಯಾರೋಹಣದಿಂ ತ್ರಿಲೋಕ ತ್ರಿಕಾಲದೋಳೀ ಕೇವಲಜ್ಞಾನಂ ಪುಟ್ಟೆ ಪದಿನೆಂಟು ದೋಷದಿವನಲ್ಲು… ವನಂತ ಪರಮಾಣು ಪುದ್ಗಲಂಗಳು ಪೋಗೆ ಶರೀರಂ ಲಘುವಾಗೆ ಗಾಜಿನ ಜ್ಯೋತಿ ಪೊರಗೆ ರಂಜಿಸುವಂತೆ ಪರಮಾತ್ಮನ ಪ್ರಕಾಶಂ ಪೊರಪೊಣ್ಮೆ ಭೂಮಿಯ ಹಂಗಂ ಬಿಟ್ಟು ನೀರೊಳಿರ್ದ ಕೆಸರು ಕಳೆದಲಾಬು ಮೇಲೆ ನೆಗೆವಂತೆ ನೆಗೆದೈಸಾಸಿ…. ಮಾರಂ ಬಿಟ್ಟು ಆಕಾಶದೊಳ್ ನಿಲೆ ಅನಂತಜ್ಞಾನದರ್ಶನ ವೀರ್ಯಸುಖಸ್ವರೂಪದಿ ನಿಲ್ವುದುಂ ಶಕ್ರನಾಜ್ಞೆಯಿಂ ಕುಬೇರಂ ಗಂಧಕುಟಿಯಂ ನಿರ್ಮಿಸುವುದುಂ ಕೈಲಾಸಪರ್ವತಶಿಖರದೊಳೊಪ್ಪುತಿರ್ದ ಆದಿಬ್ರಹ್ಮನ ಸಮವಸರಣಮಂ ಪೊಕ್ಕು ಸಯೊ… ಕೇವಲಿಗಳೊಳಂ ಕೂಡಿದಂ.

ವೃತ್ತ ||  ಸಕಲ ನೃಪಸಮಾಜೇ ದೃಷ್ಟಿಮಲ್ಲಾಂಬು ಯುದ್ಧೈ
ರ್ವಿಜಿತ ಭರತ ಕೀರ್ತಿರ್ಯ ಪ್ರವವ್ರಾಜಮುಕ್ತೈ
ತೃಣಮಪಿ ವಿಗಣಯ್ಯ ಪ್ರಾಜ್ಯ ಸಾಮ್ರಾಜ್ಯಭಾರಂ
ಚರಮತನು ಧರಾಣಾಮಗ್ರಣೀಸ್ಸೋವತಾ… ||

ಮತ್ತಿತ್ತಲಂತ್ಯಬ್ರಹ್ಮನಪ್ಪ ಭರತಚಕ್ರೇಶ್ವರನರುವತ್ತುಸಾಸಿರ ವರ್ಷಂ ದಿಗ್ವಿಜಯಂಗೆಯ್ದು ಮನುವಪ್ಪುದರಿಂ ಭೂಮಿಯೊಳ್ ವರ್ತಿಸುವ ಸಕಲ ಪ್ರಪಂಚೆಲ್ಲಮಂ ನಿರ್ಮಿಸಿ ಭರತನಟ್ಟಲೆಯಾಗಿ ಅಯೋಧ್ಯೆಗೆ ಬಪ್ಪಲ್ಲಿ ರತ್ನಮಯ ಕೈಲಾಸಪರ್ವತಮನೆಯ್ದಿ ತ್ರಿಲೋಕ ಸಂದಣಿಸಿ ರನ್ನಗನ್ನಡಿಯಂತೆ ದ್ವಾದಶ ಯೋಜನ ವಿಸ್ತಾರಮಾದ ಪುರುಪರಮೇಶ್ವರನ ಸಮವಸೃತಿಯಂ ಗಗನದೊಳಿರ್ದೊಡಾ ತ್ರಿಕೋಕಸ್ವಾಮಿಯ ವಂದನಾರ್ಥ ಪರಿಮಿತಜನಂಬೆರಸಾ ಪರ್ವತಮನೇರಿ ಸೋಪಾನ ರೋಹಣಂಗೆಯ್ದು ಮಾನಸ್ತಂಭ ಧೂಳೀಸಾಲ ಜಲಖಾ…..ಪೊಗಳುತ್ತಂ ನಮಸ್ಕಾರಂಗೆಯ್ದನೆಂತೆಂದೊಡೆ

ವೃತ್ತ ||  ಗತ್ವಾಕ್ಷಿತೇರ್ಪಯಃ ಪಂಚಸಹಸ್ರಮದಾ
ತ್ಸೋಪಾನವಿಂಶತಿ ಸಹಸ್ರ ವಿರಾಜಾಮಾತಾಃ
ತೇಜೇ ಸಭಾಧನದ ನಿರ್ಮಿತ ಯತ್ವತೀಯ
………………………………………………      ||೧ ||

……..ಬಸಾಲೋಕೆದಿಚ ಸಾಲ ಇಹ ಕೇದಿರದೋಪಿ ಸಾಲಃ
ಭೇದಿಚ ಭಾತಿ ಸಠಜಕ್ರಮಣ ಯದೀಯಾ
ತಸ್ಮೈನಮಸ್ತ್ರಿಭುವನ ಪ್ರಭವೇಜಿ ನಾಯ         ||೨ ||

ಪ್ರಾಸಾದ ಚೈತ್ಯನಿ……………….
…………………………………….
…………ದಸಿಯಪ್ಪ ಸದಾ ವಿಭಾತಿ    ||೩ ||

ಮಾಲಾಮೃಗೇಂದ್ರಕಮಲಾಂಬರ…ಯ
ಮಾತಂಗ ಗೋಪತಿ ರಥಾಂಗ ಮಯೂರ ಹಂಸಾ:
……………………………………………………
……………………………………………………            ||೪ ||

ನಿರ್ಗ್ರಂಥಕಲ್ಪವನಿತಾವ್ರತಿತಾಚ ಭೌಮ
ನಾಗಸ್ತ್ರೀಯೋ ಭವನ ಭೌಮಭಕಲ್ಪದೇವಾಃ
ಕೋಷ್ಠಸ್ಥಿತಾ ನೃಪಶ…. ನಮಂತಿಯಸ್ಯ
ತಸ್ಮೈ……………………………………….      ||೫ ||

ಭಾಷಾ ಪ್ರಭಾವಲಯ ವಿಷ್ಟರ ಪುಷ್ಟ
……..ದ್ರುಮತ್ರಿಮ…..ದುಂದುಭಿಚಾಮರಾಣಿ
ಛತ್ರತ್ರಯೇಣ ಸಹಿತಾ ವಿಲಸಂತಿ ಯಸ್ಯ
ತಸ್ಮೈ………………………………………..     ||೬ ||

ಶೃಂಗಾರರತ್ನ ಕಲಶಧ್ವಜ ಸುಪ್ರತಿಷ್ಠ
………ತಾತಪತ್ರವಧ ದರ್ಪಣ ಚಾಮರಾದೈಃ
ಪ್ರತ್ಯೇಕಮಷ್ಟಶತತಾನಿನಿ ಚಾತಿಯಸ್ಯ
ತಸ್ಮೈ………………………………………..     ||೭ ||

ಸ್ತಂಭಪ್ರತೋಲಿನಿಧಿಮಾರ್ಗತಟಾಕನಾಪಿ
ಕ್ರೀಡಾದ್ರಿಧೂಪಘಟ ತೋರಣನಾಜ್ಯಶಾಲಾಃ
ಸ್ತೋಕಾಶ್ಚಚೈತ್ಯ ಶರಣಪಿಚಯತ್ಸಖಾಯಾಃ

ತಸ್ಮೈ ನಮಸ್ತ್ರಿಭುವನ ಪ್ರಭವೇ ಜಿನಾಯ        ||೮ ||

ಸೇನಾಪತಿ ಸ್ಥಪತಿ ಹರ್ಮ್ಯಾ ಪತಿರ್ದಿಪಾಶ್ಚ
ಸ್ತ್ರೀಚರ್ಮ ಚಕ್ರಮಣಿ ಕಾಕಿಣಿ ಕಾಪುರೋಧಾಃ
ಛತ್ರಾಸಿದಂಡಪತಯಃ ಪ್ರಣಮಂತಿ ಯಸ್ಯ
ತಸ್ಮೈ ನಮಃಸ್ತ್ರೀಭುವನಪ್ರಭವೇ ಜಿನಾಯ      ||೯ ||

ದೇವವ್ಯಕ್ತಿ ವಿಶೇಷ ಸಂವ್ಯವಹೃತಿನ್ಯತ್ತುಲ್ಲ್ಯಸಲ್ಲಾಚ್ಚನ
ಶ್ರೀಮತ್ವತ್ಕ್ರಮ ಪದ್ಮಯುಗ್ಮ ಸತತೋಪಾಸಾನಿಯುಕ್ತಂ ಶುಭೈಃ
ಯಕ್ಷದ್ವಂದ್ವಮವಶ್ಯಮೇತದುಚಿತೈಃ ಪ್ರಾಚ್ಛೈರಿದಾನಿಂತನೈ
ರ್ದೇವೇಂದ್ರ….ಮಾನ್ಯವೇರಿವಮುದೋಸ್ಯಷ್ಟದ್ಛಿರಿ….ಷತೇ       ||೧೦ ||

ಇಂತು ಸಮವಸರಣ ವಿಭೂತ್ಯಷ್ಟಮಹಾಪ್ರಾತಿಹಾರ್ಯ ಚತುತ್ರಿಂಶದತಿಶಯ ಬಹಿರಂಗಲಕ್ಷ್ಮಿಗಂ ಆಶೇಷ ದೋಷಾವರಣವಿನಮಸಮುದ ಮದ್ಭೂತಾನಂತಜ್ಞಾನದರ್ಶನ ವೀರ್ಯಸುಖಮೆಂಬಂತರಂಗ ಮಹಾಲಕ್ಷ್ಮಿ ಗಮಧೀಶ್ವರನಾದಾದಿ ಪರಂಜ್ಯೋತಿಯ ಗಂಧಕುಟಿಯಂ ಭರತ ವಿರಿಂಚಿಯ ಭಕ್ತಿಧರಾನಮ್ರನಾಗಿ ಮೂರು ಸೂಳು ಬಲವಂದು ಸಾಷ್ಟಾಂಗದಿಂ ವಿನಮಿತನಾಗಿ ವಸ್ತುರೂಪ ಗುಣಸ್ತೋತ್ರಶತಸಹಸ್ರದಿಂ ನುತಿಯಿಸಿ ಮುನ್ನ….ತಪರಾಧ ಮರೀಚಿನ…..ನದಾಗುಳಿದ ಕಚ್ಛಾದಿಗಳೆಲ್ಲಂ ಪುನರ್ದೀಕ್ಷೆಗೊಂಡು ಖುದ್ಧಿಯೊಡೆದು ಗಣಧರಪದವನಾಂತಿರ್ದರಲ್ಲಿ ಚತುರ್ಥಜ್ಞಾನ ಸಂಪನ್ನರಪ್ಪ ವೃಷಭಸೇನಗಣಾಗ್ರಣಿಗಳ್ ಮೊದಲಾದೆಂಬತ್ತು ನಾಲ್ವರ್ ಗಣಧರಂ ಸಪ್ತವಿಧ ಋಷಿಸಮೂಹಂ ವಂದಿಸಿ ಪನ್ನೊಂದನೆ ಮನುಷ್ಟಕೋಷ್ಠದೊಳುಪವಿಷ್ಟನಾಗಲು ತ್ರಿಲೋಕಸ್ವಾಮಿಯ ಶ್ರೀಮುಖಾಬ್ಜದಿಂಧೋಂಕಾರಪೂರ್ವಕಮಾಗಿ ಶ್ರವ್ಯ ನವ್ಯ ದಿವ್ಯಧ್ವನಿಯ ಸರ್ವಾರ್ಧಮಾಗಧಿಯ ಭಾಷೆಯೊಳೇಳುನೂಱುಪದಿನೆಂಟು ಭಾಷೆಯುಕ್ತಮಾಗಿ ಪುಟ್ಟಿತದೆಂತೆನೆ

ವೃತ್ತ ||  ಗಂಭೀರಂ ಮಧುರಂ ಮನೋಹರತರಂ ದೋಷವ್ಯಪೇತಂ…
ಕಂಠೋಷ್ಠಾದಿ ವಜೋನಿಮಿತ್ತರಹಿತಂ ನೋದಾತರೋದೋಡಕಂ
ಸ್ವಸ್ಟಂ ತತ್ರ….ಷ್ಟವಸ್ತು ಕಥಕಂ ನಿಃಶೇಷ ಭಾಷಾತ್ಮಕಂ
ದೂರಾಸನ್ನಸಮಂ ಸಮರ….ರು ಸಮಂ ಜೈನಂ ನಭಃ ಪಾತುಮಾಂ ||

ಅಂತು ದಿವ್ಯಧ್ವನಿ ಪುಟ್ಟೆ ತ್ರಿಕಾಲಮಂ ತ್ರಿಲೋಕಮಂ ಷಡ್ದ್ರವ್ಯಾಮರ ಪಂಚಾಸ್ತಿಕಾಯಮಂ ಸಪ್ತತ್ತ್ವಮಂ ನವಪದಾರ್ಥಮಂ ಷಡ್ವಿಧಕಾಯಲೇಶ್ಯವ್ರತ ಸಮಿತಿಗತಿ ಜ್ಞಾನಚಾರಿತ್ರ……ರ್ಥಪ್ರಪಂಚೆಲ್ಲಮಂ ವೃಷಭಸೇನಗಣಧರರು ವಿಸ್ತರಿಸಿ ಪೆಳ್ವುದುಂ ಚಕ್ರೇಶ್ವರಂ ಮುನ್ನಮೆ ಮುನ್ನೂರುಮೂವತ್ತಾರು ತೆರದ ಮ..ಸ್ಥಾನ ಸಂಪನ್ನಪ್ಪುದರಿಂ ದ್ರವ್ಯಭಾವ ಶ್ರುತಜ್ಞಾನಮಂ…..ಧ್ಯಾಕ್ಷರ ನಿಷ್ಪ್ರತ್ಯಕ್ಷರ ಸಂಸ್ಥಾನಾಕ್ಷರಮೆಂದಕ್ಕು. ಮತ್ತಂ ಪರ್ಯಯಂ ಪರ್ಯಾಯ ಸಮಾ……. ಕ್ಷತ ಸಮಾಸ ಪದ ಪದಸ………….ಅನುಯೋಗಸಮಾಸ, ಪ್ರಾಭೃತಕ, ಪ್ರಾಭೃತಕಸಮಾಸ, ಪ್ರಾಭೃತಕ, ಪ್ರಾಭೃತಕ, ಪಾಭೃತಕ ಪ್ರಾಭೃತಕಸಮಾಸ, ವಸ್ತುಸಮಾಸ, ಪೂರ್ವಂ, ಪೂರ್ವಸ…. ವೃದ್ಧಿಸಂಖ್ಯಾತ ಭಾವವೃದ್ಧಿ, ಸಂಖ್ಯಾತಗುಣವೃದ್ಧಿ ಅಸಂಖ್ಯಾತ ಗುಣವೃದ್ಧಿ, ಅನಂತಗುಣವೃದ್ಧಿಯುಮೆಂಬಾರು ವೃದ್ಧಿಯಿಂ ಪೆರ್ಚಿ ಪರ್ಯಾಯ…………….ತ ಗುಣಿತಮಕ್ಷತಜ್ಞಾನಂ ಅಲ್ಲಿ ಮೂವತ್ತುಮೂರು ವ್ಯಂಜನಂಗಳುಮಿಪ್ಪತ್ತೇಳು ಸ್ವರಂಗಳು ನಾಲ್ಕು ಯೋಗ ವಾಹಂಗಳು ಕೂಡಿ ಅರುವತ್ತು ನಾಲ್ಕಿವನೇಕಾದಿನಕ್ಷ ಸಂಚಾರಂ ಮಾ…..ರ ಅಕ್ಷರ ಸಮಾಸಾದಿ ಜ್ಞಾನಂಗಳು ವಸ್ತುಸಮಾಸಂ ಪದಿನಾಲ್ಕು ಭೇದಂಗಳು ಪೆರ್ಚುತ್ತಂ ಪೋಗೆ……ದ ಪೂರ್ವಂ ಆಗ್ರಾಹಣಿಯಿಂ ವೀರ್ಯಾನುವಾದಂ ಅಸ್ತಿನಾಸ್ತಿ ಪ್ರ………. ಪ್ರತ್ಯಾಖ್ಯಾನಂ ವಿದ್ಯಾನುವಾದಂ ಕಲ್ಯಾಣವಾದಂ ಪ್ರಾಣಾವಾಯಂ ಕ್ರಿಯಾವಿಶಾಲಂ ಲೋಕಬಿಂದುಸಾರಂ ಎಂದಪ್ಪವೀ ದ್ರವ್ಯಶ್ರುತದಕ್ಷರಂಗಳಿಂ ಚತುದರ್ಶ….. ಸೂತ್ರ ಕೃತಾಂಗಂ ಸ್ಥಾನಾಂಗಂ ಅಂತಕೃದ್ದಶಾಂಗಂ ಅನುತ್ತರೋಪಪಾ…. ದಾಂಗೆಮೆಂದು ಪನ್ನೆರಡಂಗಮಪ್ಪುದು. ಅಲ್ಲಿ ಪರಿಕರ್ಮಸೂತ್ರ ಪ್ರಥಮಾನುಯೋಗಂ ಪೂರ್ವಗತ ಚೂಲಿಕೆಯುಮೆಂದು ದೃಷ್ಟಿವಾದಾಂಗಮೈದು ತೆರಂ. ಅಲ್ಲಿ ಚಂದ್ರಪ್ಪಜ್ಞ……..ರ ಪ್ರಜ್ಞಪ್ತಿ ವ್ಯಾಖ್ಯಾಪ್ರಜ್ಞಪ್ತಿಯೆಂದು ಪರಿಕರ್ಮಮೈದು ತೆರಂ. ಸ್ಥ ಲಗತ ಜಲಗತಮಯಾ…………….ರೂ ಆಕಾಶಗತಮೆಂದು ಚೂಲಿಕೆ ಐದು ತೆರ. ಇವರ ಪ್ರಪಂ………ನಂ ವಂದನೆ ಪ್ರತಿಕ್ರಮತೊ ವೈನಯಿತ ಕೃತಿಕರ್ಮ ದಶವೈತಾಳಕ ಅನುತ್ತರಾಧ್ಯನ ಕಲ್ಯವ್ಯವಹಾರ ಕಲ್ಪಾಕಲ್ಪ ಮಹಾಕಲ್ಪ ಪುಂಡರೀಕ ಮಹಾಪುಂಡರೀಕ ವ್ಯತಿರಿಕೆಯೆಂದಪ್ಪವು……ವತ್ತು ಮೂರು ಕಕ್ಷಮುಮೈವತ್ತೆಂಟುಸಾರಿರದೈದು ಸಮಮಪ್ಪುದು ಕೋಟಿಶ್ಯತಂ ದ್ವಾದಶ ಚೈತ್ರ…… ಲಕ್ಷಣ್ಯಾಸಿತಿತ್ರ್ಯಧಿಕಾನಿಜೈ ಪಂಚಾದಶಾಷ್ಟ ಚ ಸಹಸ್ರಸಂಖ್ಯಾ…… ಸಶ್ರೋತೃ ಮುಖ್ಯನಾಗಿ ಪುರುಪಿತಾಮಹನಪ್ಪ ಸರ್ವಜನಮುಖಕಮಲವಿನಿರ್ಗತ ದ್ವಾದಶಾಂಗ………ಪೂರ್ವೆ ಚತುರತ್ತುಯೋಗ……ಮಹಾದೇವ ಶಾಸ್ತ್ರಮನದಿ ಮಹಾ………………..

ಗಾಹೆ ||  ಬಾರಹಂ ನಾಣಿಂ ಜಾ | ಹೆ ಸಂಣಯತಿಲಯೊವರಿತ್ತವಂ ಕಹರಾ |
ಚೊದ್ದ ಸ ಪುಂ…… | ಣ ಚಟವೇ ಚ ವಸುಧಾದೇವಿ ||

ಇಂತು ಶ್ರುತಜ್ಞಾನಮಲ್ಲದೆ ಚ………….. ಪುಸಿಯೆನಿಸಿ ಅಯೋಧ್ಯಾಪುರಮಂ ಪೊಕ್ಕು ನರ ಸುರ ವಿದ್ಯಾಧರರಿಂ ಸಹಸ್ರದೆಂಟು ಸುವರ್ಣಘಟ……… ಗಂಗಾಸಿಂಧ್ಯಾದಿ ಪುಣ್ಯೋದಕದಿಂ ಸಾರನ್ಯೂಜ್ಯಾಭಿಷೇಕಮ………..ರು ದಶಾಂಗಭೋಗಮನನುಭವಿಸುತ್ತಮಾದಿಬ್ರಹ್ಮ ನಿರೂಪಿಸಲ್ಪಟ್ಟ ಸಪ್ತಮಾಂಗದೊಳು ಉಪಾಸಕಾಚಾರದೊಳು ಚಾತುರ್ವರ್ಣ ಚತುಃ ಸಂಘನುಂ…. ದೀಕ್ಷೆಗೆ ಯೋಗ್ಯರನಾರೈದು…………ದೊಳು ಹರಿತಾರಿ ತುರಂಗಳಂ ಕೆದರಿಸಿರೆ ಕೆಲಂಬರಾ ಅಂಕುರಂಗಳಂ ಮೆಟ್ಟಿ ಬಂದರು. ಕೆಲಂಬರು ಅಂಕುರಂಗಳಂ ಮೆಟ್ಟದೆ ನಿಂದೊಡವರಂ ಪ್ರಾಸುಕಮಪ್ಪ ಬಟ್ಟೆಯೊಳೆ ಬರಿಸಿ…….ವೆಂಬ ಸರ್ವಜ್ಞ ವಚನಮಂ ಕೇಳಿದುದರಿಂದೀ ಸರ್ವ ದಿನದೊಳು ಪಾಪಭೀರುಗಳಾಗಿ ಮೆಟ್ಟಿ ಬರಲಿಲ್ಲವೆಂದು ಪೇಳಿ……..ಚಾರಿತ್ರಾನುಷ್ಠಾನಕಂ ಪರಮಾತ್ಮಭಾವನೆಗಂ ಮೆಚ್ಚಿ ಇವರೆ ವರ್ಣ…………ಪಂಚಾಸ್ತಿಕಾಯ ೫ ಸಪ್ತತ್ತ್ವ ೭ ನವಪದಾರ್ಥ ೮ ಮಾದಿ ಇಪ್ಪತ್ತು ಏಳು ಸಂಕಲ್ಪಮಾಗೆ ನವದೇವತಾರು…………..ದಿ ಒಂಬತ್ತು ಪುರಿ ಮಾಡಿ ಸಮ್ಯಗ್ದರ್ಶನ ಜ್ಞಾನ ಚಾರಿತ್ರಮೆ ರತ್ನತ್ರ……….ಪ್ಮಿಮಿರ್ತೆರ…….ನಾನ ಶಂಬರ…………ಯರಿದು ಮಂತ್ರಸೂನಂ ಮಾಡಿ ವಂದಾದಿಯಾಗವರವರ ಸ್ಥಾನಶಂಕೆಯ ಉಪಹಿತಮಂ ಶ್ರಾವಣ ಶುದ್ಧ ಪೌರ್ಣಮಿ ಶ್ರವಣನಕ್ಷತ್ರ………ತ್ತವೃತ್ತಿ ಮಂತ್ರಕ್ರಿಯಾ ದೇವತಾಲಿಂಗ ಕಾಮಾನ್ನ ವಿಷಯಂಗಳೆಂಬ ದಶ ಶುದ್ಧಿಗಳಂ ತ್ರಾತಿಷ್ಟೋ…………. ಬ್ಬಾನ ನಯಕ್ರಿಯೆ ಸಂಪತ್ತು ಮೂರುಂ ಪ್ರಕಟಿಸಿ ಮತ್ತಂ ಪಕ್ಷಾನ್ವಯದಿಂದುಳಿದಿರ್ದರಂ ನೂರೈನಾಲ್ವತ್ತೆ………….ಸ್ನನ ದಾನ ಪ್ರತಿ ಗ್ರಹಣಮೆಂಬಾರ್ಯಾಪಂಕ್ತಿ ಕರ್ಮಂಗಳೊಳು ಕರ್ಮಠರಂ ಕೂಡಿ ಅತಿಚಾರ ವಿದ್ಯಾದಿ ಧರಾದಿ ಧಾರಣದೊಳ್ ನಿಲಿಸಿ ವರ್ಣತ್ರಯಾದಿಗಳ್ಗೆ ಬ್ರಾಹ್ಮಣರತ್ಯುತ್ಕೃಷ್ಟರೆಂ……. ಪೂಜಿಸಿ ಗ್ರಾಮಕ್ಷೇತ್ರ ಗೃಹವಸ್ತುಗಳಂ ಕೊಟ್ಟು ಇಂದ್ರ ಪಟ್ಟಂಗಟ್ಟಿ ನಮಸ್ಕರಿಸಿದಂ………..

ವೃತ್ತ ||  ಬ್ರಹ್ಮತನೂಭವರ್ ದವಿಜರಿವರ್ ವರ್ಣೋತ್ತಮರ್ ಶೀಲತತ್ಪರರಾಚಾರ
ಸದ್ಭಾವಾರ್ಕತೇಜೋಜ್ವಲರ್ ದುರಘವ್ರಾತವಿನಾಶ ತರ್ಜಿತ ಮತಾದಿ…………………ಶೇಷರ್ವರ್ಧ………………………………..
ಎಂದಿಂ ಚಕ್ರವರ್ತಿಯಂ
ಅಂದಾ ಬ್ರಾಹ್ಮಣಸಮೂಹಂ ಪೂಜೆ ಮುದ
ದಿಂದಿತ್ತನವರ್ಗೆ ಪರಮಾ
ನಂದಾವಾಂಛಿತಮನಿನಿಸು ತೊಡಕಿಲ್ಲದವೊಲ್

ಶ್ಲೋಕ || ಕ್ಷತ್ರಿಯೇಷು ಕುಮಾರೇಷು ಯೇ ಆದೇ ವ್ರತ ಪರಾಯಣಾಃ
ಸೃಷ್ಟಾಸ್ತೇ ಬ್ರಾಹ್ಮಣಾ ಯಶ್ಚಾದ್ಭರತೇತಾಂತ್ಯ ವೇದಸಾ ||

ಬ್ರಾಹಣರ್ಗೆ ತ್ರಿಕಾಲಸಂಧ್ಯಾಪಾಸನೆ ರಾಜಾಚಾರ ಜಪ ದೇವ ಋಷಿ ಪಿತೃ ತರ್ಪಣನೈತ್ವ ದೇವರಾಧನಾರ್ಹ ಪ್ರತ್ಯಾಹವನೀಯ ದಕ್ಷಿಣಕಾಗಿ ತ್ರೇತಾಸೇವಾನು ಪಂಚಮಹಾಯಜ್ಞಗಳು ಸಲ್ವ……….ನಿರವದ್ಯಮಪ್ಪ ವಸ್ತುಗಳಿಂ ದಯಾಮಯ ಮಹಾಯಜ್ಞಗಳಿಂ ನಿತ್ಯ ನೈಮಿತ್ತಿಕಾ ತೀರ್ಥಯಾತ್ರಾ ಪ್ರತಿಷ್ಠಾಷ್ಟಮಿ ಚತುರ್ದಶಿ ಅಷ್ಟಾಹ್ನಿಕಾ ಸರ್ವ ವಿಶಿಷ್ಟ ದಾನವ್ರತಾದಿ ನೈಮಿತ್ತಿಕಾಚಾರದಿಂ ನೆಗಳ್ದು ಕಡೆಯೊಳಂ ಸಲ್ಲೇಖನವಿಧಿಯಿಂ ವಿಶಿಷ್ಟ ಸನ್ಯಸನದಿಂ ಸಮಾಧಿಮರಣಮಾಗೆ ಶತಕ್ರತುಯಜ್ಞದಿಂ ಶ್ರೇಷ್ಠನಾಗಿ ಮಾನ್ಯರಪ್ಪ ಲೋಕಾಂತಿಕರಾಗಿ ದೇವಬ್ರಾಹ್ಮಣರಪ್ಪ ಬ್ರಹ್ಮಚಾರಿಗಳಾಗಿಯು ನೂರೆಪ್ಪತ್ತು ಕ್ಷೇತದೊಳುದಿಸಿದ ತೀರ್ಥಂಕರ ಪರಮದೇವರ ಪರಿನಿಷ್ಕ್ರಮಣ ಕಲ್ಯಾಣದೊಳು ಪ್ರತಿಬೋಧಿನಿಕ್ರಮದಿಂ…………..

ಮತ್ತಮುಳಿದ ನಾಲ್ಕು ವಂಶದೊಳು ಇಕ್ಷ್ವಾಕು ಕುರು ಹರಿ ಉಗ್ರ ನಾಥಮೆಂಬ ವರೊಳುದ್ಭವಿಸಿ ದಕ್ಷರಿಯಕುಮಾರರ್ಗೆ ನ್ಯಾಹವಿಹಿತ ಪ್ರಜಾಪಾಲನ ಕುಲಪಾಲನಾತ್ಮ ಪಾಲನ ಸಮಂಜಸತ್ವ ಲಕ್ಷಮೆಂಬ ಕ್ಷತ್ರಿಯಧರ್ಮಮಂ ಕೈಕೊಳಿಸಿ

ಶ್ಲೋಕ ||ನಿರ್ಜಿತಾರಾತಿ………..ಯ ಸಮನ್ವಿತಾಃ ||
ಸಪ್ತಾಂಗರಾಜ್ಯ ಸಂಪನ್ನಾಃ ಕ್ಷತ್ರಿಯಾ ಇತಿ ಸಂಸ್ಮೃತಾಃ ||

ದುಷ್ಟನಿಗ್ರಹ ಶಿಷ್ಟಪಾಲನೆಯಿಂ ಪ್ರಜಾರಕ್ಷಣೆಯಿಂ ಪ್ರಜೆಗಳ್ ಮಾಳ್ಪ ವ್ಯವಸಾಯದೊಳು ಷಡ್ಭಾಗವಾಶೇಷಂಗೊಂಡು ಜೀವಿಸುವರು. ವೈಶ್ಯರು ಜಲ ಸ್ಥಲ ಯಾತ್ರೆಗೈದು ನ್ಯಾಯದಿಂ ವ್ಯವಹಾರಂಗೈದು ವಾಣಿಜ್ಯಾದಿಗಳಂ ಮಾಡಿ ದಾನ ಪೂಜೆ ಶೀಲೋಪವಾಸ ಸಹಿತಂ ನಡೆವುದೆಂದು ನಿಯಮಿಸಿ ಆ ತ್ರೈವರ್ಣಿಕರ್ಗೆ ಗರ್ಭಾದಾನ ಮೊದಲಾಗೆ ತ್ರಿಪಂಚಾಸತ್ಕ್ರಿಯಂಗಳು ಸಮಾನಮಪ್ಪುದರಿಂ ಸಜ್ಜಾತಿ ಮೊದಲಾದ ಸಪ್ತ ಪರಮಸ್ಥಾನ ಭಾಗಿಗಗಳಪ್ಪರು.

ಶ್ಲೋಕ ||ದೇವಪೂಜಾನುರೋಪಾಸ್ತಿ ಸ್ವಾಧ್ಯಾಯಸ್ಸಂಯಮಂ ತಪಃ
ದಾನಂ ಚೇತಿ ಗೃಹಸ್ಥಾನಾಂ ಷಟ್ಕರ್ಮಾ ದಿನೇ ದಿನೇ ||

ಈ ವರ್ಣತ್ರಯಂಗಳೊಳೆ ಬ್ರಹ್ಮಾಚಾರಿ ಗೃಹಿ ವಾನಪ್ರಸ್ಥ ಭಿಕ್ಷುಕಮೆಂಬ ನಾಲ್ಕಾ ಶ್ರಮಮುಂ ಋಷಿ ಆರ್ಯಿಕಾ ಶ್ರಾವಕ ಶ್ರಾವಿಕಾಭೇದಮಪ್ಪ ಚತುರ್ವಿಧಾಶ್ರಮ ಮಪ್ಪುದೆಂದುಮವರ ಸಪ್ರಪಂಚಮಂ ಪೇಳ್ದು ನಿಯಮಿಸಿ

ಶ್ಲೋಕ ||ಮನುಷ್ಯಜಾತಿರೇಕೈವ ಜಾತಿನಾಮೊದಯೋದ್ಭವಃ
ವೃತ್ತಿಭೇದಾಹಿ ತದ್ಭೇದಾ ಬ್ರಾಹ್ಮಣಾದಿ ದ್ವಿಜಾತಯಃ ||
ಕೇವಲಜ್ಞಾನ ಸಂಭೂತೇರ್ಹೇತು ಸಕಲ ಸಂಯಮಃ
ತಸ್ಯೋತ್ಪತ್ತಿ ತ್ರಿಕರ್ಣೇಷು ತಚದೀಕ್ಷಾಚ ತತ್ಪರೇ ||
ವಣೋತ್ತಮಾ ಬ್ರಾಹ್ಮಣಾಃ ಶೂದ್ರಾವರ್ಣಾಧಮಾ ಮತಾಃ
ಹೀನವೃತ್ತಿ ಭವೇಚ್ಛೂದ್ರಾಃ ಬ್ರಹ್ಮಜ್ಞಾನೇನ ಬ್ರಾಹ್ಮಣಾಃ ||
ಅಧಿರ್ಯಾಪನೇ ದಾನಂ ಪ್ರತಿಚ್ಛೆ………….ಜ್ಞೋಸಹಿತಂ ಚ
ಲಿಂಗಂತೇಷಾಂ ಪ್ರಕಲ್ಪಿತಂ ||
ತಪಃ ಶ್ರುತಂಚ ಜಾತಿಶ್ಚತ್ರಯಂ ಬ್ರಾಹ್ಮಣ್ಯಕಾರಣಂ
ತಪಃ ಶ್ರುತಾಭ್ಯಾಂ ಯೋ ಹೀನೋ ಜಾತಿಬ್ರಾಹ್ಮಣ ಏನ ಸಹ ||

ಮತ್ತಮೀ ವರ್ಣತ್ರಯಕ್ಕಂ ವೇದಾಸಕ್ತರು ಶೂದ್ರರೆಂದವರೊಳು ರಜ………………….ರು ಅಸ್ಪೃಶ್ಯರು ಪ್ರಜಾಬಾಹ್ಯರು ಸೇವಾ ಕೃಷಿ ಮೊದಲಾದವರಿಂ ಜೀವಿಸುವ ಪ್ರಜೆಗಳು ಅದಾರವರು.

ಶ್ಲೋಕ || ಬ್ರಹ್ಮ ಕ್ಷತ್ರಿಯ ವಿಟ್ಛೂದ್ರಾದೋತಿವರ್ಣಚತುಷ್ಟಯೇ
ದಾ…………………………………………………. ||
………………………………..ಸಕಲ ಸಂಯಮಃ
ತಸ್ಯೋತ್ಪತ್ತಿ ಸ್ತ್ರೀವರ್ಣೇಷು ಚತುರ್ಥಾದಾನಯೋಗ್ಯತಾಃ ||

ಎಂದವರವರ ವೃತ್ತಿಯೊಳ್ ನಿಲಿಸಿ ಮತ್ತಂ ಪದಿನೆಂಟಂ ನಿರ್ಮಿಸಿದನದೆಂತೆಂದೊಡೆ

ವೃತ್ತ ||  ಬ್ರ…………………………………

ಇಂತತ್ಯವೇದಸಂ ಆದಿಬ್ರಹ್ಮೋಪದೇಶದಿಂ ಸಕಲ ಪ್ರಪಂಚಮಂ ನಿರ್ಮಿಸಿ ಒಂದು ದಿನ ನಿಶಿಯೊಳು ಪದಿನಾರು ಸ್ವಪ್ನಂಗಳಂ ಕಂಡಾದಿಪುರುಷನಿಂ ಹುಂಡಾವಸರ್ಪಿಣಿ ದೊಷಭರತಿಮಪ್ಪ ಫಲಮಂ ಕೇಳ್ದಾಡಾ ತ್ರಿಲೋಕೇಶ್ವರಚೂಡಾಮಣಿಯು ಸಮವಸರಣ ವಿಭೂಯಿಂದುಭಯಲಕ್ಷ್ಮಿ ಸಂಪತ್‌ಸಮೇತವಾಗಿ ಪರಮಾತ್ಮ ಪರಂಜ್ಯೋತಿ ನಿರಂಜನ ವೀತರಾಗ ನಿರ್ವಿಕಲ್ಪನು ಮುನ್ನ ನೊಸಲೊಳು ಜ್ಞಾನಲೋಚನಂ ಪುಟ್ಟಿ ಘಾತಿಕರ್ಮಾಟವಿಯಂ ಸುಟ್ಟು ಜಾತಿಜರಾಮರಣಮೆಂಬ ತ್ರಿಪುರದಹನನಾದುದರಿಂ ತ್ರಿಣೇತ್ರ ಭಾಳಾಕ್ಷ ಜ್ವಾಲಾನೇತ್ರ ತ್ರಿಪುರಾಂತಕನುಂ ಧರ್ಮಸ್ವರೂಪ ಪುಣ್ಯ ಸ್ವರೂಪನಾಗಿ ತ್ರಿಲೋಕಾದರವರ್ತಿಗಳಾದೆಲ್ಲಾ ಪುರಷರ್ಗಂ ಶ್ರೇಷ್ಠನಾದುದರಿಂ ಪುರುಷೋತ್ತಮನುಂ ಕ್ಷಾಯಿಕ ಸಮ್ಯಕ್ತ್ವಾದಿ ಗುಣಂಗಳಂ ಸ್ವೀಕರಿಸಿದುದರಿಂ ಹರಿಯುಂ ಸ್ವಪರಕರ್ಮ ನಿರ್ಮೂಲನಾದುದರಿಂ ಹರನುಂ ಸುಖಸ್ವರೂಪದಿಂ ಸಂಭೂತ ಸ್ವಯಮೇವ ಪರೋಪದೇಶಮಂತರೇಣ ಮೋಕ್ಷಮಾರ್ಗಮನುತಿಷ್ಠನ್ನವಂತ ಚತುಷ್ಠಯಾದ್ಯೇಭವತೀತಿ ಸ್ವಯಂಭೂಷಿಚರ ಮಹಿಮಯೆ ದಂಡಕನಾಟಪ್ರಕರಾಲೋಕಪೂರಣತ್ವಾ ದ್ವಿಭುಃ ವಿಶ್ವವ್ಯಾಪಿತ್ಯತೃಣೀಜಯಟಿಲ ಇತಿ ಜಿಷ್ಣುಃ ಮಹಾ…………….ಈಶ್ವರಶ್ಚ ಮಹೇಶ್ವರಃ ಪರಮಪದೇ ನಿತ್ಯಂ ತಿಷ್ಠತೀತಿಸ್ಥಾಣುಃ ಆತ್ಮ ಸಂತಾನಕೆ ಕ್ಷಯ ನಿಧನ ಸತ್ಪಾತ್ಪುರಾಣಃ ಪೂರ್ವೇಷಾಮಪಿ ಪುರುಷಾಣಾಂ ಪೂರ್ವ ಇತ್ಯರ್ಥಃ ಜ್ಞಾನದಿ ಸ್ವರೂಪಕ್ಕೆ……………..ಣಿ ವಿವಿಧ ದ್ರವ್ಯಾಣಿ ಚೇಷಾನ್ಗುಣಾನ್ವರ್ಯಾಯಾನಸಿ ಭೂತ ಭಾವಿಚವತಃ ಸರ್ವ ಪದೋ ಬೂಪಿತೇ ಯುಗಪತ್ಪ್ರತೀಕ್ಷಣಮತಸ್ಸರ್ವಜ್ಞ ಇತ್ಯುಚ್ಚತೇನ ಇತಿ ಸುಷ್ಟಗ ತಸ್ಸುಗತಃ ಅನವಾಲೋಚನಂ………….ಲಕ್ಷಣಕನ್ಯಾವತ್ ಅಜಿತಃ ಪರವಾದಿನಾಜೇತುಮಶಕ್ತಿ ತಾತೃತ್ಪಾತ್ ಪಶೂನ್ ಮಂದಬುದ್ಧಿನಪಿ ಧರ್ಮೋಪದೇಶೇನ ಪಾತೇತಿ ಪಶುಪತಿಃ ತೀರ್ಥಂ ಪ್ರವಚನಂ ರತಾಲ್ಪೋಷ್ಠ ಪುಟವ್ಯಾಪರಾರರಹಿತ ಮೃದು ಮಧುರ ಶ್ರವ್ಯ……….ಭಾಷಾಂಕರೋರಿತಿ ತೀರ್ಥಂಕರಃ ತಂ ಸುಖಂ ಕರೋತಿ ಶಂಕರಃ ಸಕಲ ಕರ್ಮನಿಷ್ಟನ್ವಾತ್ ಸಿದ್ಧಃ ಬುದ್ಧ್ಯತೇ ಸ್ವಸ್ಮೀನ್ಸ್ವರೂಪಂ ಜಾನಾತೇತಿ ಬುದ್ಧಃ ಉಮಾಕೀರ್ತಿಲ್ಲಕ್ಷ್ಮೀಶ್ಚತಯೋಪತಿಃ ಕೀರ್ತಿವಲ್ಲಭೋ ಲಕ್ಷ್ಮಿ ಪರಿಶ್ಚೇತಿ ಉಮಾಪತಿಃ ವಿಶ್ವರ್ಯಾನ ಸಕಲ ಸಂಪತ್ಸಮೇತೋ ಭಗವಾನ್ ಸದಾಮಂಗಲೋ ನಾಮ ಸದಾಶಿವಃ ಬರ್ದ್ಧಜರಯೋರ್ನ ಅರ್ಧನಾರೀರಃ ಯೋಗ್ಯತಾದರ್ಹಸಾರ್ವಃ ತಾಸ್ತಾ ದೇವಾನಾಂ ದೇವೋ ದೇವ ದೇವಃ ಜಗತಾಂ ನಾಕಃ ಜಗಂ ನಾದಃ ಬೃಂಹಂತಿ ಬ್ರಹ್ಮಾ ಸುರನರಾದಿ ಮುಖ್ಯತ್ವಾತ್ಸುರಲೈಷ್ಠ ಪರಮೇವ ಗಹನ ವ್ಯಸನ ಪ್ರಾಪಣ ಹೇತೂನ್ ಮರ್ಜಯಕರ್ಮಠ ಕರ್ಮಾರಾತಿನ್ ಜಯಂತಿ ನಿರ್ಮೂಲಯಂತಿತಿ ಜಿನಾಃ ಅಪ್ರಮತ್ತಾದಿ ಗುಣಸ್ಥಾನವರ್ತಿನಿ ಏವ ದೇಶಜಿನಾಃ ತೇಷಾಂ ಪತಿಃ ಜಿನಪತಿಃ ಏವಂ ವಿಧಃ ಸಮವಸರಣ ವಿಭೂತ್ಯಷ್ಟಮಹಾಪ್ರಾತಿಹಾರ್ಯ ಚತುಃತ್ರಿಂಶದತಿಶಯಂ ದ್ವಾದಶ ಗಣ ಪರಿವೇಷ್ಠಿತ ಶರೇಂದ್ರಪಂಡಿತ ಪಾದಾರವಿಂದ್ವಂದ್ವ ಪರಮಾತ್ಮ ಪರಮಾಪ್ತನಂ ದೇವೇಂದ್ರಂ ಸಹಸ್ರೇಕ್ಷಗಣದಿಂದೀಕ್ಷಿಸುತ್ತಂ ನವಸಹಸ್ರ ಗಣನಾಮಾವಲಿಗಳಿಂ ವಸ್ತುಸ್ತವ ರೂಪಸ್ತವ ಗುಣಸ್ತವಂಗಳಿಂ ನುತಿಸುವಂ ನಾಗೇಂದ್ರನು ಸಹಸ್ರ ಜಿಹ್ವೆಗಳಿಂ ಪೊಗಳುತ್ತೆ………ಭತ್ತೆರಡು ಲೆಕ್ಕದ ಸಪ್ತವಿಧ ಋಷಿಗಳ ಸಮೂಹಮಂ ೧೬೦೪೯೨ ಮೂರುವರೆ ಲಕ್ಷ ಆರ್ಯಿಕೆಯರುಂ (೩೫೦೦೦೦) ಎಂಟು ಲಕ್ಷ ಮನುಷ್ಯ ಸ್ತ್ರೀಪುರುಷರುಂ (೮೦೦೦೦೦)……………… ವತ್ತಾರು ದೇಶಂಗಳೊಳು ಚರಿಸುತ್ತ ಭವ್ಯಜನ ಸಸ್ಯಂಗಳಂ ಧರ್ಮಾಮೃತವರ್ಷದಿಂ ಸ್ವರ್ಗಾಪವರ್ಗಮನೆಯ್ದಿಸುತ್ತಮೆಂಟು ಖರ್ವಮುಂ ನಾಲ್ಕು ನಿರ್ಬುದಮುಂ ಒಂಬತ್ತರ್ಬುದಮುಂ (ಒಂಬೈನೂರ ತೊಂಬತ್ತೊಂಬತ್ತು ಕೋಟಿಯುಂ) ತೊಂಬತ್ತೊಂಬತ್ತು ಲಕ್ಷಮುಂ ತೊಂಬತ್ತೊಂಬತ್ತು ಸಾಸಿರ ವರ್ಷಂ ವಿಹಾರಿಸಿ ಆ ವೈಭವಮಂ ವಿಸರ್ಜಿಸಿ ಕೈಲಾಸಪರ್ವತದ ಸಿದ್ಧಶಿಲೆಯೊಳು ಪಲ್ಯಂಕಾಸನದಿಂ ಸೂಕ್ಷ್ಮಕ್ರಿಯಾ ಪತಿಪಾತಿವ್ಯುಪರತ ಕ್ರಿಯಾದಿವೃತ್ತಿಯೆಂಬ ಕಡೆಯೆರಡು ಸುಕೃತ್ಯಾನಂದದಿಂ ದಗ್ಧ ರಜ್ಜುವಿನಂತಿರ್ದ ಅಘಾತಿಕರ್ಮಂಗಳಂ ಪದಿನಾಲ್ಕು ದಿವಸದೊಳೆ ಕೆಡೆಸಿ ಮಾಘ ಬ ೧ ಆರಭ್ಯ ಚತುರ್ದಶಿ ಪರ್ಯಂತಮಿರ್ದಾ ಬೆಳಗಪ್ಪ ಜಾವದೊಳು ಅಭಿಜಾತವೆಂಬ ಮುಹೂರ್ತದೊಳೆ ಶುದ್ಧಾತ್ಮಧ್ಯಾನಯೋಗದಿಂ ಸಕಲ ಕರ್ಮ ವಿಮುಕ್ತನಾಗಿ ಅನಂತಜ್ಞಾನ ಅನಂತದರ್ಶನ ಅಂತವೀರ್ಯ ಅನಂತ………….ಪರಮ ಕ್ಷಾಯಿಕ ಸಮ್ಯಕ್ತ್ವ ಅವ್ಯಾಬಾಧ ಅವಗಹತ್ವ ಅಗುರುಲಘುತ್ವಮೆಂಬೀ ಅಷ್ಟಗುಣಂಗಳಾಗೆ ಅಸ್ತಿತ್ವ ವಸ್ತುತ್ವ ಪ್ರಮೇತ್ಯಾದಿ ಗುಣಾನ್ವಿತನಾಗಿಯು ಗುಣಸ್ಥಾನ ಮಾರ್ಗಣಾಸ್ಥಾನ ರಹಿತನಾಗಿ ವ್ಯವಹಾರ ನಯಾಪೇಕ್ಷೆಯಿಂ ಕಿಂಚಿದ್ಯೂನ ಪರಮನೇಹಾಕಾರಗವತಸಿಕ ಮೂಷಾ ಗರ್ಭಾಕಾಲಚ್ಛಾಯಾಬಿಂಬದಂತೆ ಸಾಕಾರನುಂ ನಿಶ್ಚಯನಯದಿಂ ನಿರಾ ಕಾರನುಮಾಗಿ ಪಂಚ ಹ್ರಸ್ವಾಕ್ಷರೋಚ್ಛಾರಣಕಾಲದೊಳು ತ್ರಿಲೋಕಶಿಖರಮಾದಿ ಪ್ರತ್ಯಾರಮೆಂಬಷ್ಟಮ ಪೃಥ್ವಿಯ ಮಧ್ಯ ನಾಲ್ವತ್ತೈದು ಲಕ್ಷ ಮಹಾಯೋಜನ ಶ್ವೇತ ದ್ವೇತ್ರಾಕಾರಮಾಗಿಪ್ಪ ಸಿದ್ಧಶಿಲಾಗ್ರವತನುವಾತವಾಯುವಿನೊಳು ಶಾಶ್ವತ ನಿತ್ಯ ನಿರಂಜನ ನಿರ್ವಿಕಲ್ಪ ನಿರ್ಭಾ ನಿರಪೇಕ್ಷ ಷಷ್ಠಿ ತಾಚ್ಛಾಚಲೋನಂತಾನಂತ ಸಾಖ್ಯ ಸಿದ್ಧ ಪರಮೇಷ್ಠಿ ಲೋಕಾಗ್ರವಾಸಿಗಳುಂ ನಿಶ್ಚಯದಿಸ್ತ ಲೋಕಾಲೋಪವ್ಯಾಪಿಯುಮಾಗಳೆ ದೇವೇಂದ್ರನಾಸನಕಂಪದಿಂ ಚತುರ್ನಿಕಾಯಮರರೊಡವೆರಸಿಯನೇಕ ವಿಭವ ವೀರಸಿದ್ಧ ಶಿಲೆಯನರ್ಚಿಸಿ ಚತುರಸ್ರಕುಂಡದೊಳು ಕೃತ ಶರೀರಮನನ್ನಿಂದ್ರಕಿರೀಟೋದ್ಭವ ದಿವ್ಯಗಾರ್ಹಪತ್ಯ ವಹ್ನಿಯೊಳೆ ಚಂದನಾದಿಂಧನಂಗಳಿಂ ಸಂಸ್ಕರಿಸಿ ತದಿ…ಯಂ ಸ್ವಶರೀರದೊಳ್ ಧರಿಸಿ ಆನಂದನೃತ್ಯಮನಾಡಿ ಪರಿನಿರ್ವಣಕಲ್ಯಾಣಮಹೋತ್ಸವಮಂ ಮಾಡಿ ಪೋಗಲಂದಿಂದಿತ್ತಲಾ ರಾತ್ರಿಗೆ ವೀರರಾತ್ರಿಯೆಂದು ವರುಷಂಪ್ರತಿ ಪೂಜಿಸುತ್ತಾ ಬಂದರು.

ವೃತ್ತ ||  ದೇವವ್ಯಕ್ತಿ ವಿಶೇಷ ಸಂವ್ಯವಹೃತಿ ವ್ಯಕ್ತುಲ್ಲಸ…………………
……………..ತ್ರಿಮರ್ವತ್ಕ್ರಮ ಪದಯುಗ್ಮ ಸತತೋಪಾಸಾನಿಯುಕ್ತಂ
ಸುಖೈರ್ಯಕ್ಷ ದ್ವಂದ್ವಮವಶ್ಯಮೆ ತದುಚಿತೈಃ
ಪ್ರಾಚೈರಿದಾನಿಂತನೈರ್ದೇಂದ್ರೈರಪಿ ಮಾನ್ಯತೆ ಕಿಮು ದೋಷ್ಯೆಷ್ಯದ್ಭಿದಿಷ್ಯೇಷ್ಯತೆ ||
ತ್ರ್ಯಂಗೋಪಾಂಗಪೂರ್ಣಯ ಗರ್ಭ ಗಯ ಪ್ರತ್ಯೇಕ ನೀಚೈಃ
ಕುರೇನಿ ದ್ಯಂಚನ್ಯಕರದ್ವಿಸಪ್ತತಿ ಪಾಂಮೂರಯೋಗೇಕ್ಷಣೇ
ಆದೇಯಂ ಸ ನಿಜಾನುಪೂರ್ವ್ಯನೃಗತಿಃ ಪಂಚಾಕ್ಷ ಜಾತಿಯಶಃ
ಪರ್ಯಾಪ್ತಸ್ತೋತ್ರಪಂಚಾಧರಾಣಿ ಸುಭಗಂ ಮರ್ತ್ಯಾಯುರುಚ್ಚೈ ಕುಲಂ ||
ತೇದ್ಯೇನಾನ್ಯತರೇಣ ತೀರ್ಥಕೃದಿಮಾಸ್ತ್ರ್ಯ ಗ್ರೋಗ್ರಶಾಪ್ಯಂತಿಮೇ
ನಿಷ್ಕೃತ್ಯ ಪ್ರಕೃತಿರನುಕ್ತಮಸಮೋಚ್ಛೆನ್ನ ಕ್ರಿಯಾದ್ಯಾನತಃ
ಯಃ ಪ್ರಾಪ್ತೋ ಜಗದಗ್ರಮೇಕಸಮಯೇನೋರ್ದಂಗಮಾತ್ಮಾಷ್ಟಭಿಃ
ಸಮ್ಯಕ್ತ್ವಾದಿ ಗುಣೈರ್ವಿಭಾತಿ ಸಭರಾನತ್ರಾರ್ಪಿತೋ ವ್ಯಾಜಗತ್ ||
ದೌಗಂಧೌರ ಸುವರ್ಣ ಗಂಧನನಘಃ ಸಂಘಾತಕಾಸ್ತ್ರಿ
ಪರಿರಜನ ನಿರ್ಭರ ಚಿದಾನಂದೇನಯೇನೋಳ್ಪಿತಂ ದೇಹಂ
ಇಂತಂ ಬಾಹ್ಯ ಮತಾಂತರಂ ಜಿನಪತೇರೂಪಂ ಲೀಲಾ……………….
ಸುರೇಸಾಕಾರೇ ಯದಿವಾವಿರತ್ರನಿದಿವತ್ಸಂಸ್ಥಾಸ್ಯ………………………
…………………………………………………………………………….
…………….ವ್ಯಾಪ್ತಾಶಾಧರ ಶ್ರುತೇತ್ರಯಂ ಶೋಧಿವ್ಯಾತ್ರಿಯೊಮುಕ್ತಚ ||

ಎಂದೀ ಪ್ರಕಾರದೊಳೆ ಲೋಕಂಗಳ್ಗೆ ಜೀವನೋಪಾಯ ಮೊದಲಾದವೆಲ್ಲಮಂ ಸೃಷ್ಟಿಸಿ ಸಕಲ ಕರ್ಮಂಗಳ………ತ್ರಿಕರಣಶುದ್ಧಿಯಿಂ ಪೂಜಿಸಿ ನುತಿಸಿ ನಮಸ್ಕರಿಸುತ್ತಂ ನ….ವಣಕದಾ ಪ್ರಪಂಚಮಂ ಕಿಂಚಿತಂ ಪೇಳ್ವೆನಾ ಆದಿಪರಮೇಶ್ವರಂ ಮುಕ್ತನಾದಾನಂತರಂ ತದುಪದೇಶಕ್ರಮದೊಳೆಯನೇಕ………. ಪ್ರಗ್ರಸುತಂಗೆ ರಾಜ್ಯಮಂ ಕೊಟ್ಟು ಸರ್ವಸಂಗ ಪರಿತ್ಯಾಗಂಗೆಯ್ದಾಗಳೆ ಮನಃಪರ್ಯಯ ಕೇವಲಜ್ಞಾನಂ ಪುಟ್ಟಿ ಆ ದಿನದೊಳೆ ಮೋಕ್ಷಮಂ ಪಡೆದನಾತನ ತನುಜನರ್ಕಕೀರ್ತಿ………..ನೆಂಬನಾತನಂತು ನೂತನ ಪರಂಪರೆಯಿಂ ಬಲನುಂ ಸುಬಲನು ಮಹಾಬಲನುಮತಿಬಲನುಂ ಅಮಿತ ಬಲನುಂ ಶುಭಕಂಠನುಂ ಭದ್ರನುಂ ರವಿತೇಜನುಂ ಶಶಿಯುಂ ಪ್ರ………….ನುಂ ಅತಿ ವೀರ್ಯನುಂ ಮೊದಲಾಗಿ ಚತುರ್ದಶ ಲಕ್ಷ ರಾಜಕುಮಾರರು ಕ್ರಮದಿಂದುಬ್ಧಬಿಸಿ ಮಹಾಮಂಡಲಿಕರಾಗಿರ್ದು ಸ್ವರ್ಗಾಪವರ್ಗಮಂ ಪಡೆದರು. ಬಾಹುಬಲಿವಂಶಜರು ಚಂದ್ರವಂಶಮೆಂದು ಬಲ………..ಭುಜಬಲ ಮನೋಬಲ ವಾಗ್ಬಲ ಕಾಯಬಲರೆಂದಿವರು ಕೃದಿವಾಸಂತಾನದೊಳು ಪುಟ್ಟಿದ ಪದಿನಾಲ್ಕು ಲಕ್ಷ ರಾಜರಾಳಿ ಸಂಗತಿಪ್ರಾಪ್ತರಾದರು ಮುನ್ನ ಅರ್ಯವೇಧಸನಪ್ಪ ಭರತನ ಮಗಂ ಮರೀಚಿಯಂ ಫಲಮೂಲಾದಿಗಳಿಂ ತಿಂದು ಜಟಾವಲ್ಕಲದಂದ ಭಸಿತಮಂ ಧರಿಸಿ ಸರ್ವಜ್ಞರಿಂ ಭವ್ಯನೆಂದರಿದು ವಿದ್ಯಾವಿಶಾರದನಾಗಿಯರುವತ್ತುಮೂರು ಸಹಸ್ರ ಮರೀಚಿಗಳನುತ್ಪಾದಿಸಿ ತನ್ನ ಶಿಷ್ಯರು ಮೂರು ಲಕ್ಷಕ್ಕಮುಪದೇಶಂಗೆಯ್ದು ಕಾಲದೋಷದಿಂ ಮಿಥ್ಯಮಂ ಪ್ರಕಟಿಸಿದನವರೊಳೆ ಭೀಮಾವಳಿಯೆಂಬ ಪ್ರಥಮ ರುದ್ರಂ ಪುಟ್ಟಿ ಸಾಧಿತವಿದ್ಯನಾಗಿರುತಾನತಂದಾರಾಧಿಸಿ ಪ್ರಸನ್ನಮಾಗೆ ಜಟಾಮಕುಟಧಾರಿಯುಂ ತ್ರಿಶೂಲಕುಂಡಲ ಫಣಿಭೂಷಣನಾಗಿ ವಿದ್ಯಾಬಲದಿಂ ಮರೀಚಿಯ ಶಿಷ್ಯರೊಳ್ ಕೂಡಿ ಕೆಲವು ಬ್ರಾಹ್ಮಣರ್ವೆರಸಿ ಕಶ್ಯಪನೆಂಬ ಪಾರಿವ್ರಾಜಕಂ ಬ್ರಾಹ್ಮಣಜನ್ಮದಿಂ ನಿತ್ಯಕರ್ಮಾನುಷ್ಠಾನವೆ ಮೋಕ್ಷಸಾಧನಂ ಬ್ರಾಹ್ಮಣ ಆದಿಬ್ರಹ್ಮಮುಖವಚನದಿಂದಾದುದರಿಂ ವದನಜರೆಂದುಂ ಕ್ಷತ್ರಿಯಂ ಭುಜಬಲಪರಾಕ್ರಮದಿಂದಾದುದರಿಂ ಬಾಹುಜರೆಂದಂ ವೈಶ್ಯಜಂ ಜಂಘಾಬಲದಿಂ ಜಲಸ್ಥಲ ಯಾತ್ರೆಯಿಂ ಜನಿಸುವುದರಿಂದೂರುಜರೆಂದುಂ ಶೂದ್ರು……….ಪಾದಸೇವೆಯಿಂ ಜೀವಿಸುವುದರಿಂ ಪಾದಜರೆಂದಂ ಬ್ರಾಹ್ಮಣನೆಂದಹಂಕಾರಮಂ ತಾಳ್ದು ವರ್ಣಾನಾಂ ಬ್ರಾಹ್ಮಣೋ ಗುರುಃ ಎಂಬುದರಿಂ ದೇವಗುರು ಬ್ರಾಹ್ಮಣರೆಂದಿವರು ಸಮನೆಂದು ಮತ್ತಂ ಕರ್ಮಹೀನನಾದ ಬ್ರಾಹ್ಮಣಂ ಚಾಂಡಾಲನೆಂದುಂ…………ಜನ್ಮನಾಂ ಜಾಯತೇ ಶೂದ್ರಃ ಕರ್ಮಣಾಂ ಜಾಯತೇ ದ್ವಿಜಃ ಎಂದು ಕಪಿಲಸಿದ್ಧಾಂತದೊಳು ಶಾಸ್ತ್ರಮನುತ್ಪಾದಿಸಿ ಜೈನಮಾರ್ಗಮೆಂಬೀ ಸಂಘಸಮುದಯದೊಳೆ ವರ್ತಿಸುತ್ತಿರ್ದು ಸ್ಯಾದ್ವಾದಶಾಸ್ತ್ರಮಂ ನೋಡಿ ತಿಳಿದು ನಡೆಯದೆ ಜಡರಾದರು. ಅಯೋಧ್ಯಾ……ದೊಳು ಇಕ್ಷ್ವಾಕುವಂಶಜರುಂ ಸೂರ್ಯವಂಶಜರುಂ ಪೌದನಾಪುರದೊಳು ಇಕ್ಷ್ವಾಕು ಸೋಮ ವಂಶಜರುಮಿರ್ದು ರಾಜ್ಯಮಂ ಪಾಲಿಸುವರು. ಕುರುವಂಶ ಸೋಮವಂಶಜರು ಹಸ್ತಿನಾಪುರದೊಳುಮುಳಿದ ಹರಿವಂಶ ಉಗ್ರವಂಶ ನಾಥವಂಶಜರು ಸುಯೋಧನ……..ಭದ್ರಿಳಾತಾ ಕಂಡಿ ವಾರಣಾಶಿ ಚಂದ್ರಪುರಿ ಚಂಪಾಪುರಿ ರತ್ನಪುರಿ ಮೊದಲಾದೈವತ್ತಾರು ಪಟ್ಟಣಂಗಳೊಳೆ ಇರುತ್ತ ಕ್ಷತ್ರಿಯಧರ್ಮಮಂ ಬಿಡದೆ ಪ್ರಜಾಪಾಲನೆಯಂ ಮಾಡಿ ಕಡೆಯೊಳೆ ತಮ್ಮ ತಮ್ಮ ಪುತ್ರಿಗೆ ರಾಜ್ಯಭಾರಮಂ ಕೊಟ್ಟು ಜಿನದೀಕ್ಷೆಯಂ ಸ್ವೀಕರಿಸಿ ಸ್ವರ್ಗ ಮೋಕ್ಷಮಂ ಪಡೆದರು.

ಇಂತೀ ಕಥೆಯಂ ಕೇಳ್ವರ
ಭ್ರಾಂತಿಯ ನೆರೆಕೆಟ್ಟು ಬಳಿಕಮಾಯುಂ ಶ್ರೀಯುಂ
ಸಂತಾನವೃದ್ಧಿ ಸಿದ್ಧಿಯ
ನಂತಸುಖಂ ತಪ್ಪದಿದು ಪರಮಾರ್ಥಂ (?)                    ||೧ ||

ಅಱಯದ ಮನುಜರ್ಗಿದು ಬಂ
ಧುರ ಲೋಚನಮಾದಿ ಕಾಣ್ಗುಮರಿತ ಮಹಾಸ
ತ್ಪುರುಷರ ಕೈಗನ್ನಡಿಯಂ
ತರಿಯದೆ ಭ್ರಾಂತಿಕರ ಮೋಹತಿಮಿರಾಂಜನಮುಂ           ||೨ ||

ನೀರುಂ ಪಾಲುಂ ಬೆರಸಿರ
ಲಾರೈದು ಪಾಲದೊಂ ಕಳಹಂಸನವೊಲ್‌
ಸಾರಾರವನುವ ವಿ
ಚಾರಿಗಳೀ ಕೃತಯನರಿದು ನೆಗಳ್ವುದು ನಿರುತಂ (?)        ||೩ ||

ಗದ್ಯ ಇದು ಪರಮಾರ್ಹತಪ್ರಣೀತ ಸತ್ಯಪ್ರವಚನ ಕಾಲಪ್ರವರ್ತನ ಕಥಾರ್ಣ ವೋದ್ಧೃತ ದೇವಚಂದ್ರದ್ವಿತ ವಿರಚಿತ ರಾಜಾವಲಿ ಕಥಾಸಾರದೊಳಾದಿಬ್ರಹ್ಮಸೃಷ್ಟಿ ವಿವರಣಂ.

ಪ್ರಥಮಾಧಿಕಾರಂ

 

* ಇದು ಚ ಹಸ್ತಪ್ರತಿ. ಈ ಪ್ರತಿಗೂ ಪಠ್ಯಕ್ಕೆ ಬಳಸಿರುವ ಕ ಮತ್ತು ಗ ಪ್ರತಿಗಳಿಗೂ ತುಂಬಾ ವ್ಯತ್ಯಾಸವಿದೆ. ಈ ಚ ಪ್ರತಿ ಅಸಮಗ್ರವಿದ್ದು ಪಂಚಮಾಧಿಕಾರಕ್ಕೆ ಕೊನೆಗೊಳ್ಳುತ್ತದೆ.