ಮಾಂಸಮಂ ತಿನ್ನಲಪೇಕ್ಷೆ ಪುಟ್ಟಿ ತಿಂದೊಡೆ ದೂಷಿಪರೆಂದಗಿದು ಯೋಚಿಸಿ ನರಯಾಗ ಹಯಯಾಗ ಗಜಯಾಗ ಫಣಿಯಾಗ ಖರಯಾಗ ಗೋಯಾಗ ಮೃಗ…….ತಾನು ಪೇಳ್ದ ಸೂತ್ರಗಳಂ ವೇದಸೂತ್ರಮೆಂದು ಪೆಸರಿಟ್ಟು ಸಕಲ ಜನಂಗಳಿಂ ಸ್ವಯಂಭೂಯವೆಂದು ಪೆಸರಂ ಪ್ರಸಿದ್ಧಿಯಂ ಮಾಡಿ ಅಡಗಂ ಸೇವಿಸಲ್ ಮಾಡಿದ ಸೂತ್ರಮೆಂತೆಂದೊಡೆ…………….

ಶ್ಲೋಕ || ……………ಗ್ರೇಷು ಮರುದ್ದೇವೋ ಜಿಹ್ವಾಗ್ರೇಷು ಸರಸ್ವತೀ
ಕರ್ಣಯೋತಶ್ವಿನೀದೇವಿ ಚಕ್ಷಪಿ ಶಸಿಭಾಸ್ಕರಃ ||
ಕಕುದೇವ ಜಗತ್ಸರ್ವಂ ನಕ್ಷತ್ರ ಗ್ರಹ ತಾರಕಾಃ
ರುಷಯೋ ರೋಮಕೂಪೇಷು ತಪಃ ಕುರ್ವಂತಿ ಸರ್ವದಾ ||

ಅಪಾನೇ ಸರ್ವತೀರ್ಥಾನಿ……………….
ಶ್ರೀಯಾಂ ದೇವಿ ರಾಮೋಲಾಂಗುಲಮಾಶ್ರಿತಃ
ಚತ್ವಾರಃ ಸಾಗರಾ ಪೂರ್ಣಗಪಾಂಗೇಷು ಪಯೋರ್ವರಾ
ಖುಲೇಷು ಜಂಬುಕಾ ದೇವ ಖುರಾಗ್ರೇಷು ಚ ಪನ್ನಗಾ
ಜಠರೇ ಪೃಥಿವೀ ಸರ್ವಾಸಶ್‌ಐಲವನಕಾನನಾ
||

ಎಂದಿಂತು………….ರೋಪಿಸಿ ಕೊಲುವುದಕ್ಕೆ ಮಾಡಿದ ಸೂತ್ರಮೆಂತೆನೆ

ಶ್ಲೋಕ ||ಕತೃಯಜ್ಞಂ ಸುರಾಪಾನಂ ಗೋಸನೇಗವಸಂಗಮಂ
ಗವಾದುಹೇ ಪಶೂಂ ಹನ್ಯಾ ರಾಜಸೂಯೇಚ ಭೂಭುಜಾಂ ||

ಬ್ರಹ್ಮೇಚ ಬ್ರಾಹ್ಮಣಂ ಜುಹುಯಾಕ್ ದ್ಯತ್ಯೇಚ ವರ ವೈಶ್ಯಜಂ
ತಪಸೇಜುಹುಯಾತ್ ಶೂದ್ರಂ ಜಪಂ ಮಂತ್ರಕ್ರಮೇಣಚ
||

ಎಂದಲ್ಲದೆ

ಶ್ಲೋಕ ||ಅವ್ರಣೇಮೃಗಶಾಬೇಚ ಪ್ರತ್ಯಕ್ಷಂ ಮೃತದರ್ಶನೇ
ತತ್ಕಣಂ ಭಾವಯೇತ್ ಪುಣ್ಯಂ ತ್ಯಕ್ತಂ ಚೇನ್ನರಕವ್ರಜೇತ್ ||

ಎಂದಿಂತನೇಕತೆರದ ಸೂತ್ರಂಗಳಂ ಕಲ್ಪಿಸಿ ಯಾಗೋದ್ಯೋಗಮಂ ಮಾಳ್ಪಾಗಳ್ ಬ್ರಾಹ್ಮಣರಂ ತನ್ನ ಮುಖದಿಂ ಕ್ಷತ್ರಿಯರಂ ಭುಜದಿಂ ವೈಶ್ಯರಂ ಮೊಣಕಾಲೊಳುಂ ಶೂದ್ರರಂ ಪಾದದಿಂ ಪುಟ್ಟಿಸಿ ಸಕಲ ಸುರಸಮಿತಿಯಂ ಕರೆಯಲಟ್ಟಲೆಲ್ಲರುಂ ತಮ್ಮ ತಮ್ಮ ಕಾಂತೆಯರ್ವೆರಸನೇಕ ವಿಭವದಿಂ ಬಂದು ಸರೋಜಸಂಭವನಂ ಕಂಡು ಯಾಗ ಮಂಡಪದೊಳಬ್ಜಜನೋಲಂಗೊಟ್ಟಿರಲಲ್ಲಿಗೆ ಸರಿಸ………….ತಂ ಈಶ್ವರಂ ಸಕಲ ಶೃಂಗಾರಂವೆರಸು ಅತ್ಯುತ್ಸವದಿ ನೃತ್ಯಮನಾಡುತ್ತಂ ಗಗನಮಾರ್ಗದಿಂ ಬೇಗದಿಂ ಬರುತ್ತಿಪ್ಪಾಗಳ್ ರುದ್ರಾಣಿ ಲಲಾಟ ಕದಪು ಕುಚಯುಗ್ಮ ಮೊದಲಾಗೆ ನಖಕ್ಷತಾದಿಗಳಿರೆ ಕಂಡು ದೇವಕೋಟಿಗಳೀಕ್ಷಿಸಿ ನಕ್ಕಡೆ ಧಾತೃ ಕಂಡು ಲಜ್ಜಿತಮನನಾಗಿಯರ ತಗು………….ಗಿಂದ ಲ್ಲಿಗೆ ತಕ್ಕ ಸೂತ್ರಮಂ ಮಾಡಿದನೆಂತೆನೆ

ಶ್ಲೋಕ ||ವಿದ್ಯಾವೃತ್ತ ವಿಹೀನ್‌ಯಾ ಶೂದ್ರಕರ್ಮೋಪಜೀವಿನಃ
ತೇಸಂತಿ ದೂಷಿತಾ ಶ್ರಾದ್ಧೇನಾಂಗಹೀನ ಗುಣಾದ್ದೀನಾಃ ||

ಎಂದಳಿಯನಂ ಮಗಳುಮನವಜ್ಜೆಗೆಯ್ದು ಪೋಗಲ್ವೇಳೆ ಭವಾನಿ ಕೋಪದಿಂ ತಂದೆಯಪ್ಪ ಪಿತಾ……………..ನಮೆಂಸಾತಿಗೆಯಂ ಕಿತ್ತಿಕ್ಕಿ ಹೋಮಕುಂಡದೊಳ್ ಬಿದ್ದು ಸತ್ತುರಿದು ಭಸ್ಮ ಮಾಗಲೀಶಂ ಹಾ ಸತಿ ಮಹಾಸತಿ ಎಂದಾ ಕರುಳ್ಮಾಲೆಯ ಕೊರಳೊಳಾಂತು ಹೋಮಕುಂಡದುರಿಯಂ ನಂದಿಸಿ ಬೂದಿಯೆಲ್ಲಮಂ ತನ್ನ ಶರೀರಕ್ಕೆ ಲೇಪಿಸಿಕೊಂಡು ಆಸ್ತಿಯೆಲ್ಲವ ಅವಯವಂಗಳೊಳ್ ಧರಿಸಿ ಕಳಮ……………..ಳಲಿ ಬಳಲಿ ಸುಯ್ದು ಮತ್ತಂ ದಿಙ್ಞೊಡನಾಗಿ ತನ್ನ ತಾನರಿಯದೆ ಭ್ರಮಣೆಯಿಂದೇಕಾರಣ್ಯಮಂ ಪೊಕ್ಕಾ ವನದೊಳ್ ತಿರುಗುತ್ತಿರೆ ಮನ್ಮಥಂ ಕಂಡು

ವೃತ್ತ ||  ಆಯುಂ ಸ ಭುವನತ್ರಯ ಪ್ರಥಿತಸಂಯಮಂ ಶಂಕರೇ
ಬೀಭರ್ತಿವಪುಷಾಧುನಾ ವಿರಹ ಕಾತರಃ ಕಾಮಿನೀಂ
ಅನೇನಖಲು ನಿರ್ಜಿತಾವಯಮತಿಪ್ರಿಯಾಯಾಃ ರವಂ
ಕರೇ ಗೋಸತಾಡಯತ್ ಜಯತಿಜಾತಹಾಸಸ್ಮರಃ ||

ಅಂತು ಕಾಮಂ ತನ್ನರಸಿಯ ಕೈಪೊಯ್ದು ನಗುತ್ತಿರೆ ಮುಂದೆ ಕೆಲಂಬರ್ ತಾಪಸರ್ ಈತನಾರೆನೆ ಕೆಲರ್ ಪೂರ್ವಸಿದ್ಧನೆಂದರ್ , ಕೆಲರ್ ಪೂರ್ವದರ್ಶನಿಯೆಂದರ್. ಕೆಲಬರೀತಂ ಉನ್ಮತ್ತಪಿಶಾಚ………ಕೆಲರೀತನೀಶ್ವರಂ ಮುಕ್ತಿಯಂ ಪಡೆಯಲೆಮದುಗ್ರೋಗ್ರ ತಪಂಬಟ್ಟನೆಂದೊಡೀಯಾಕಾರದಿಂದೀತಂ ಸಾಯುಜ್ಯಮಪ್ಪಡೆ ದುಷ್ಟರುಂ ದುರಾತ್ಮರುಂ ದುಶ್ಚಿತ್ತರುಂ ದುರ್ಮುಖರುಂ ಪಿಶಾಚರುಂ ಕೋಪಿಗಳುಂ ಪಾಪಿಗಳುಂ ಕಾಮಿಗಳುಂ ಕಳವಳರುಂ ಕಷ್ಟದುಷ್ಟರುಂ ಸ್ವರ್ಗಾಪವರ್ಗ ಪಡೆವಡೆ ಪೂರ್ವೋಕ್ತಿಯಿಂತಿಪ್ಪದು.

ಸೂತ್ರ ||ರಜ್ಜಾಬಧಾತಿವಾಯುಂ ಮೃಗಯತಿ ಸಜಲೇ ಮತ್ಸಕಾನಾಂ ಚ
ಮಾರ್ಗಂವಂಧ್ಯಾಸ್ತ್ರೀಷಂಡಕಾನಾಮಭಿಷಷಿತಸುತಂ
ವಾಲುಕಾಭ್ಯಶ್ಚತೈಲಂ………….ಪತುವಕಲಿತಂ………………….
ವೃಷಾಣೇಪಿದುಗ್ಧಂ ಸರ್ವಾರುಂ ಚ ಪ್ರವೃತ್ತೇನರಸ
ಶುರೀಹಯೋ ಮೋಕ್ಷ ಮಚ್ಚೇತ್ಸುಖಾನಿ ||

ಎಂಬುದು ಕೆಲಂಬರೀತಂ ಕೃತಾರ್ಥನಿವನೆನೆ ಶೈವನಾದಡೆ ಸಿದ್ಧಾಂತಕ್ಕೆ ವಿರೋಧ ಮೆಂದಿಂತೆಂದರ್.

ಸೂತ್ರ || ………………..ಲೆ ಸಮುದ್ರೇ
ಕಾಷ್ಠೇಲೋಷ್ಠಿಷ್ಟಕಾಭ ಸಜಲ ಸುಪವನೇ ಸ್ಥಾವರೇ ಜಂಗಮೇ
…………………ಮಸುರ ಸುರಪುರೇ ಪುತ್ರಪುಷ್ಟೇ
ತೃಣಾಗ್ರೇ ಸರ್ವವ್ಯಾಪಿ ಶಿರೋಯಂ
ತ್ರಿಭುವನಭುವನೇ ನಾಸ್ತಿ ಚೇದನ್ಯದೇವಃ ||

ಇಂತು ಸ………………………ವಂ ಕೇಳುತ್ತಾ ಲೋಕಭ್ರಮಣೆಯಿಂ ಬರುತ್ತ ಹಿಮವದ್ಗಿರಿಯ ಸಮೀಪಕ್ಕೆ ಪರಿದುನ್ನತರ್ಥಂಗಳ್ಗೆರಂಕೆಯಿರ್ದುದರಿಂದಖಿಲ ಲೋಕಮಂ ಬಯಸಿ ತಾಳ………..ಮೇಹಂಬಡೆಯದೆ ತ್ರಿ………………ತಮಾಗೆಯಿಂದ್ರಂ ಕೇಳಿ ಕೋಪದಿಂ ವಜ್ರಾಯುಧದಿಂ ಗಿರಿಗಳೆರಂಕೆ ಮುರಿವಂತೆ ತನ್ನ ವಜ್ರಾಯುಧದಿಂ ತರಿದೊಡೆರಂಕೆಗಳ್ ಮುರಿದು ಭೂಮಿಗುರುಳ್ವಾಗಲ್…………..ಗಂ ಬೆರಸಿ ಪುಟ್ಟಿದುದರಿಂ ಕಾಮಾಗ್ನಿ ಪ್ರಬಲೆ ಮಹಾ ರೌದ್ರರೂಪಿನಿಂದ ಮುನ್ನ ಭಸ್ಮ ಮಾದ ಭವಾನಿ ತತ್ಷಣದೊಳ್ ಪುಟ್ಟಿ ನವಯವ್ವನದಿಂ ಹಿಮವತ್ಪರ್ವತದ ಸಮೀಪದೊಳಿರ್ದ ಧವಳನೀಶಂ ಕಂ……………ಳಪ್ಪೆಯೆಂದೊಡಂಬಡಿಸಿ ಗಿರಿರಾಜನಿಂ ಧಾರಾಗ್ರಹಣಮಪ್ಪಾಗಲ್ ಬ್ರಹ್ಮನು ಪುರೋಹಿತನಾಗಿ ಹೋಮಕುಂಡಪ್ರದಕ್ಷಿಣಮಂ ಮಾಡುವಾಗಲಾ ಗಿರಿಜೆಯ ಹಿಂಭಾವದ ವಿಲಾಸಮನೀಕ್ಷೆ……………….ಕಾಮಾತುರನಾಗಿ ಪರವಶದಿಂ ಕಾಮಂ ಕೆರಳಿ ಶುಕ್ಲಂ ಸಡಿಲ್ದು ಸೇರಲು ಕಲಶದೊಳ್ ಪೊಕ್ಕಡೆ ಅಗಸ್ತ್ಯನೆಂದು ಕಲಶಜನುಂ ಪುಟ್ಟಿದಂ. ವೃಷಭನ ಪಜ್ಜೆಯೊಳುಗೆ ಭೂಮಿಯಿಂದೆ ವಾಲಖಿಲ್ಯಾದಿಯೊಳ್ ಕೊ ……………ಬಂದಲ್ಲಿ ಮುಂದೆ ಸಾಗುತ್ತಿರೆ ಪುತ್ತದೊಳ್ ಪೊಕ್ಕೊಡೆ ವಾಲ್ಮೀಕಿಯುದಯಿಸಿದಂ. ಭಸ್ಮದೊಲಗೆ ಭೂರಿಶ್ರಮಂ ಪುಟ್ಟಿದುಸಲ್ಲಾದೊಳುವೆ ಶಲ್ಯನುಂ ಕ್ಷ್ಯಾಮಿಯೊಳುರ್ವಶಿಯು ತನ್ನಿಂದ್ರಿಯದಿಂದಮೆ ಪುಟ್ಟಿತಿರ್ದೊಡಾ ಗಿಡಂ ಲಿಂಗವನೆಡಗೈಯಿಂ ಪಿಡಿದು ನಡೆದಾಗಲೆ ಲಿ………….ನುಂಗೆ ಶಕುನಿ ಪುಟ್ಟಿದನಿಂತು ಪಲಂಬರುದಿಸಿದಡಂ ತನ್ನ ಲಿಂಗಮ ರೂಡಿಯಲು ಸರಸಿಯೊಳನೇಕರು ಪುಟ್ಟಿ ಮಿಕ್ಕಿಂದ್ರಿಯಮಂ ಕಮಲದೊಳ್ ಬಿಟ್ಟೊಡಲ್ಲಿ ಪದ್ಮಿನಿಯೆಂಬಳ್ ಪುಟ್ಟಿ ನವಯುವ್ವನಮಾಗಲಾಕೆ ಎನ್ನ ಸುರತಕ್ಕೆ ತಕ್ಕಳೆಂದು ಕೈಯಂ ಪಿಡಿದಿರೆ ಮಗಳೆ ನೀನೆನ್ನೊಳ್ ಕೂಡೆನೆ ನೀಂ ಪಿತನಪ್ಪುದರಿಂದೆಂತು ಕೂಡಲಕ್ಕುಮೆನೆ ವೇದಸೂತ್ರಮಂ ಪೇಳ್ದಾ ವಾಕ್ಯಂ ಮಾತರಮುಪೈತಿ ಸ್ವನಾತಮುಪೈತಿಕಚಕಾ ಮೂರ್ತಿನಾ ಪುತ್ರಲೋಕನಾಸ್ತಿ ತತ್ಸರ್ವಂ ಪರವೊಲಿದುಃ ತಸ್ಮಾತ್ ಪುತ್ರಾರ್ಥಂ ಮಾತರಂ ಸ್ವಸಾರಂ…………..ಮಾತಿ ||

ಶ್ಲೋಕ || ಮಾತಾ ಪುತ್ರಾ ಭಗಿನ್ಯಾಚ ಪುತ್ರಾರ್ಥಂ ಪ್ರಾರ್ಥಿತಾ ನರಃ
ಯೋರು………………..ತ್ಪೂಮಾನ್ ಸಭಲೆ ಸ್ರಹಹಾ ಪುನಃ
ನಷ್ಟಿಮೃತೇ ಪ್ರವ್ರಜೇ……………..ಪರಿಲೇಪತಾಪಂಚ
ಸ್ವಾಪತ್ಪುನಾರೀಣಾಂ ಪತಿರನ್ಯೋ ವಿಧೀಯತೇ ||
ಅಹಿಪಿಶಿ ಹಿವಕಾಯಾ ಯದಿಪೂರ್ವಂ ನರೋಮೃತಃ
ಸಾಜೇತ ಕ್ಷತಯೋರಿಶ್ಚ ಪುನಃ ಸಂಸಾರಮರ್ಹತಿ
ಅಷ್ಟಾವರ್ಷಾಣ ದೀಕ್ಷೇಚ ಬ್ರಾಹ್ಮಣೇ ಪೋಷಿತಂ ವರತಿಃ
ಅಪ್ರಸೂಕಾಚ ಚತ್ವಾರಿ ಪುರೋತೋವ್ಯಂ ಸಮಾಶರೇತ್ ||

ಎಂದಿವಾದಿಯಾದನೇಕ ಶಾಸ್ತ್ರಮಂ ಪೇಳಿಯವಳನೊಡಂಬಡಿಸಿ

ಶ್ಲೋಕ || ತವಚಿತ್ತೇ ಮಮ ಚಿತ್ತಂ ಸಂದದಾಮಿ
ತವ ಹೃದಯೇ ಮಮ ಹೃದಯಂ
ಸಂದದಾಮಿ ತಥಾಸ್ತೇಷು ಮಮಾಸ್ಥಿ ರಸ್ಸ……………………..ಮಿ
ತವ ಪ್ರಾಣೇಷು ಮಮ ಪ್ರಾಣಾನ್ ಸಂದದಾಮಿ ಸ್ವಾಹಾ ||

ಎಂದು ಮಂತ್ರಮನುಚ್ಚರಿಸಿ ವಶ್ಯಂ ಮಾಡಿಕೊಂಡು ದಿವ್ಯ ಷಣ್ಮಾಸಂ ಸುರತ ಕ್ರೀಡೆಯಂ ಮಾಡುತ್ತ ತನ್ನಂ ತಾನರಿಯದೆ ಪ್ರಸನ್ನಚಿತ್ತನಾಗಿ ಕೂಡುತಿರೆ ಸರ್ವ ಗೀರ್ವಾಣರರಿದು ನೆರೆದು ವಿಧಾತನ ಪೊಲ್ಲದ ನೆಗಳ್ತೆಗೆ ಪಿರಿದು ದೂಷಿಸಿ ಗಂಧರ್ವರಾತನ ಸಂಭೋಗಂ ಕೆಡುವಂತೆ ಮಾಡಿಮೆಂದು ಕಳುಹಿಸಲವರ್ ಬಂದಬ್ಬರಿಸಿ ಎಬ್ಬಿಸಲ್ ಶಾಪಂ ಗೊಡುವನೆಂದು ಸುರತಗೃಹದ ಬಾಗಿಲೊಳ್

ಶ್ಲೋಕ ||ಓಂ ಭೂರ್ಭವಃ ಸ್ವ ತತ್ಸವಿತುರ್ವರೇಣ್ಯಃ………
………ದೇವಸ್ಯಧಿಮಹಿಧಿಯೋ ಯೇನಃ ಪ್ರಚೋ ||
ದಯಾತ್ ಆಪೋ ಜೋತಿರಸೋಮೃತಂ ||

ಎಂದು ಪಾಡಿದ ಗೀತಕ್ಕೆ ಗಾಯತ್ರಿ ಎಂದು ಪೆಸರಿಟ್ಟು ಪರಂ ಅರ್ವಿಸೆ ಸುರತಮಂ ಮಾಣ್ದು ವನಿತೆಗೆ ಭಾರಿ ಗರ್ಭಮಾಗಿರ್ದುದನರಿದು ಪೂರ್ವೋಕ್ತಮಂ ನೆನೆದನದೆಂತೆನೆ

ಶ್ಲೋಕ ||ಪೊಸ್ತಕಂ ಪ್ರತ್ಯಯಾಧೀತಂ ಸಾಧಿತಂ ಗುರುಸನ್ನಿಧೀಂ
ನಭಾವಂತೇ ಸಭಾಮಧ್ಯೇ ಜಾರಗರ್ಭಯಿವ ಸ್ತ್ರೀಯಃ ||

ಎಂದು ಲೋಕಾಪವಾದಕಂಜಿ ತನ್ನ ಲಿಂಗದಿಂದಾಕೆಯ ಬಸುರೊಳಿರ್ದು ಗರ್ಭವ ನಾಕರ್ಷಣಂಗೆಯ್ದು ತನ್ನಂಡದೊಳಿಟ್ಟನದರಿಂದಡವಾತಮಾದುದು. ಆ ಸುರತ ಗೃಹದಿಂ ಪೊರಮಟ್ಟು ಸ್ಮರವಿಕಾರಂ ಪಿಂಗದೆ ದೇಶಭ್ರಮಣೆ ಬರುತ್ತಂ ಸ್ವರ್ಗದ ರಂಭೆ ಊರ್ವಶಿ ಮೊದಲಾದ ದೇವಕಾಂತೆಯರಂ ಕೂಡಲ್ ಚಿಂತಿಸಿ ತನ್ನ ಮನದೊಳಿಂತೆಂದಂ

ಶ್ಲೋಕ ||ಯದ್ದೂರಂ ಯದ್ದುರಾರಾಧ್ಯಂ ಯಚ್ಚದೂರೇ ವ್ಯವಸ್ಥಿತಂ
ತತ್ಸರ್ವಂ ತಪಸಾ ಸಾಧ್ಯಂ ತಪೋಹಿದುರತಿಕ್ರಮಂ ||

ಎಲ್ಲಾ ಕಾರ್ಯಗಳು ತಪದಿಂ ಸಾಧ್ಯಮೆಂದು ಮೂರುವರೆ ದಿವ್ಯ ಸಾಸಿರಯುಗಂ ಪತಂಬಡದಿಂದ್ರನರಿದು ತಲೆಗುಸಿದು ಗಲ್ಲದೊಳ್ ಕೈಯನಿಟ್ಟು ಚಿಂತಾಕ್ರಾಂತನಾಗಿರೆ ಬೃಹಸ್ಪತಿಯು ಕಂಡಿದನೆಂದು ಬೆಸಗೊಳ್ವುದುಂ ಬ್ರಹ್ಮ ನೆನ್ನ ಪದವಿಯಂ ಪಡೆಯಲೆಂ [ದು] ತಪಮನಾಚರಿಸಿ ಬಪ್ಪನೆಂಬುದು ಗುರುವೆಂದಂ

ವೃತ್ತ || ತಾವತ್ತಪೋ ವರ್ಷ ಚೇತಸಿ ತತ್ವಚಿರಾಣಾಮೇ
ವೃ…..ತ ವಿಜಯಂ ಪರಮಶ್ಚಮಶ್ಚ
ಯಾವನೃಪ ಪ್ರಕೃತಿಮುಖಂ ಹರಿಣೇತ್ಪಣಾನಾಂ
ಶೃಂಗಾರವೃತ್ತಿ ಬಹುದಾಹೃತ ಕಾಮಸೂತ್ರಃ ||

ಎನೆ ತರುಣಿಯರೊಳತ್ಯಧಿಕಮಾದ ತಿಲೋತ್ತಮೆಯಂ ಕರೆದು ಬ್ರಹ್ಮನ ತಪ…………ತಪೋವನಮಂ ಪೊಕ್ಕು ನಾನಾ ರಾಗದಿಂ ಹಾವಾದಿಗಳಿಂದಿದಿರೊಳ್ ನಿಂದು ನರ್ತಿಸಿದೊಡೆ ಕಣ್ದೆರೆದು ನೋಡಿ ಸಾರೆಯಿದಿರಂ ಬಿಟ್ಟು ದಕ್ಷಿಣ ಭಾಗದೊಳ್ ನಟಿಸುವುದು ತಿರುಗಿದೊಡಪಹಾಸ್ಯಮಕ್ಕುಮೆಂದವಳನೀಕ್ಷಿಸಲನುವಂ ಕಾ…………….ವೀರಯಂಗಾಬ್ದಂ ಪೋಗಿದೊಡ್ಡವರೊಳೆ ಸಾವಿರ ಯುಗಾಬ್ದ ಕೊಂದು ಮುಖಂ ಬಲದೊಳು ದಿಸಲೆಂದೊಂದಕ್ರಮಂ ಪಡೆದೀಕ್ಷಿಸುತ್ತಿರಲಾಕೆ ಬೆಂಗಡೆಗೆಯ್ದಿ ನರ್ತಿಸುವುದಂ ಮುನ್ನಿನಂದದಿ ಸಾಸಿ………….ತೆಯ್ದಿದೊಡಂತೆ ಮುಖಮೊದಂ ಪಡೆದಂತು ಬಹುಲರಾಗ ದಿಂದವೈದುರ್ಮುಖನಾಗೆಯಾ ದೇವಕಾಂತೆಯಾಕಾಶಕ್ಕೆ ನೆಗೆದು ನರ್ತಿಸುತ್ತಿಪ್ಪು………….. ಡಲೈನೂರು…… ನೋಡುತ್ತಿರ್ದೊಡಾಕೆ ತಪಂಗೆಟ್ಟುದನರಿದು ದೇವ ಲೋಕಕ್ಕೆ ಪೋದಳ್

ಇತ್ತಲಜನಾಕೆಯಂ ಕಾಣದೆ ಕಳವಳಪೋಗಿ ಕಂಗೆಟ್ಟಳಲಿ ಮೇಲಣ ಮುಖದಿಂ ಸುರ ವಿದ್ಯಾಧರಾದಿಗಳಂ ನುಂಗು……. ಭ್ರಮಣೆಯಿಂ ದೀಪನೊಡನೆ ಕೈಲಾಸಮಂ ಸಾರ್ದಲ್ಲಿರ್ಪುದುಂ ರುದ್ರಾಣಿಯಾರತಿಯಂ ತನ್ನ ಪತಿಗೆತ್ತಲೆಂದು ಬಂದೈದು ಮುಖದರಿಬ್ಬರಂ ನೋಡಿ ಮಧ್ಯದೊಳ್ ನಿಂದೊ………ಣ ತಲೆಯೆಂಬಿವು ಜಲಾ ಬ್ರಹ್ಮಕಪಾಲಂ ಕರಮಂ ಕಚ್ಚಿ………ನ ಪರಮೈಶ್ವರ್ಯಮೆಲ್ಲಮಂ ನುಂಗಿ ಭಿಕ್ಷಾಟನದಿಂ ತಿರುಗಿಸುತ್ತಿರ್ದೊಡಿತ್ತ ವಿರಿಂಚಿಯು ವ್ಯಸನದೆಸಕದಿಂ ಕಣ್ಣಾಣ………….ಕದಿರೊರಗಿದ ಪೆಣ್ಗರಡಿಯಂ ಕಂಡದಂ……….ದಿಂ ನೆರೆವಾಗಲದು ತನ್ನ ನಖದಿ ಕಚ್ಚಿ ಸೀಳ್ದೊಡೆ ಮೇಲೆ ಪುರುಷರು ಸ್ತ್ರೀಯರ ನೆರೆವಲ್ಲಿ ಚೇಷ್ಟಿಸುವರೆಂದವಲ್ಲಿಂದಿತ್ತಲಂತೆಗೆಯ್ವರಾ ಬ್ರಹ್ಮನ ಶುಕ್ಲದಿ ಕರಡಿಯ ಬಸಿರೊಳು ಜಾಂಬವಮುನಿಯುದಯಿಸಿದಾದಡೆ ತಪೋವನಕ್ಕೆ ಪೋದನದಂ ಕಂಡು ತ್ರಿದಶರೆಲ್ಲಂ ಪರಿಹಾಸಂಗೆಯ್ಯೆ ಲಜ್ಜಿಸಿ ಮುಂದೆ ಬರುತ್ತಮಮರಾವತಿಯ ಬಹಿರ್ಭಾಗದೊಳೂರ್ವಶಿಯೆಂಬ ಪಣ್ಯಾಂಗನೆಯಂ ಕಂಡೊಡಂಬಡಿಸಿಯಾಕೆಯಂ ನೆರೆದು ಮುನ್ನಾಕರ್ಷಿಸಿದ್ಧ ಗರ್ಭಮನಾಕೆಯುದರಕಿಕ್ಕಲು ವಿಶಿಷ್ಟನೆಂಬ ಮಗಂ ಪುಟ್ಟಲಾತಂಗೆ ತನ್ನ ಪದವಿಯಂ ಕೊಡಲವನೊಂದು ದಿನಂ ಬ್ರಾಹ್ಮಣರ್ಗೆ ವಂದನೆಯಂ ಮಾಡಲವರ್ ವೇಶ್ಯಾಪುತ್ರನೆಂದು ಪ್ರತಿವಂದನೆಯಂ ಮಾಡದಿರೆ ಲಜ್ಜೆಯಿಂ ವೇದಪರ್ವತದೊಳ್ ತಪಂಗೆಯ್ದ ತಿವೃದ್ದನಾಗಿ ತಪಕ್ಕೆ ದೇಹಂ ತಾಳದಿರೆ ಹಲವು ದೇಶಂಗಳಂ ನೋಡುತ್ತ ಬಪ್ಪಲ್ಲಿಯೊರ್ವೆ ಮಾತಂಗಿ ರೂಪವರ್ತಿ ಪೋಗುತ್ತಿರಲಾಕೆಗೆ ಸೋಲ್ತು ಕೈಯಂ ಪಿಡಿದೊಡಂಬಡಿಸಿ ಕೂಡಿದೊಡಾಕೆಗೆ ಶಕುನಿಯೆಂಬ ಮಂಗಂ ಪುಟ್ಟಿ ತಂದೆಯಂತುಗ್ರೋಗ್ರ ತಪಂ [ಬಟ್ಟು]ಕರಂ ವೃದ್ಧನಾಗಿ ದೇಶಭ್ರಮಣೆಯಿಂ ಬರುತ್ತ ಗೌರಮಗ್ರಾಮಮೆಂಬ ಊರೊಳೊರ್ವೆ ಪೊಲತಿಯಂ ಕಂಡಾಕೆಯಂ ಕೂಡಲುಜ್ಜುಗಿಸಲಾಂ ಪೊಲತಿಯೆನೆ ಸ್ತ್ರೀಯರ್ಗೆ ದುಃಕುಲವುಮಶುಚಿತ್ವಮುಮಿಲ್ಲೆಂದಿಂತೆಂದಂ

ಶ್ಲೋಕ || ಅಜಾಶ್ವಮುಖಶಾಮೇದ್ಯಃ ಕಾರೋಮೇದ್ಯಸ್ತು ಪೃಷ್ಟತಃ
ಬ್ರಾಹ್ಮಣಃ ಪಾದತೋಮೇದ್ಯ ಸ್ತ್ರೀಯೋಮೇದ್ಯಾಸ್ತು ಸರ್ವತಃ ||

ಅದಲ್ಲದೆ

ಶ್ಲೋಕ || ಕಾಮಃ ಪುಣ್ಯವಶಾಜ್ಞಾತಃ ಕಾಮಿನೀಪುಣ್ಯಪ್ರೇರಿತಾ
ಸೇವ್ಯಾಸೇವ್ಯಂ ಸ ಕರ್ತವ್ಯಂ ಬ್ರ…………….. ಮಃ ಕುಲಾದಪಿ ||

ಎಂದಾಕೆಯೊಳ್ ನೆರೆಯಲಾಕ್ಷಣದೊಳೆ ಪರಾಶರಂ ಪುಟ್ಟಿ ವಿಂದ್ಯಗಿರಿಯೊಳ್ ತಂದೆಯಂತತಿವೃದ್ಧನಾಗಿ ವಿಹಾರಾರ್ಥಂ ಬರುತ್ತ ಗಂಗೆಯೊಳಂಬಿಗಸುತೆ ಮತ್ಸ್ಯಗಂಧಿಯೆಂಬ ಕನ್ನೆಯು ನಾವೆಯನಿಕ್ಕಲಾ ನದಿಯ ಮಧ್ಯದೊಳಾಕೆಯಂ ಕೂಡಿ ತಡಿಗೈದಲಾ………ಯಿಂದ ದಂಡ ಕಮಂಡಲ ಜೀವಸೂತ್ರ ವೇದರಸುಸ್ತುತ ಸಮೇತಂ ಕೃಷ್ಣದ್ವೈಪಾಯನನೆಂಬ ವೇದವ್ಯಾಸಂ ಪುಟ್ಟಿ ತಪದೊಳಿರ್ದು ತಾಯೊಡಹುಟ್ಟಿದಾ ಮತ್ಸ್ಯ……………. ಗಲ್ದಿರಂಬೆಯಂಬಾಲೆಯಂಬಿಕೆಯರೆಂಬ ಮೂವರಂ ನೆರೆಯೆ ಧೃತರಾಷ್ಟ್ರನುಂ ಪಾಂಡುವುಂ ಪುಟ್ಟಿದರೆಂದಿಂತು ಕಲ್ಪಿಸಿ ಪುಷ್ಕರ ಬ್ರಹ್ಮಾಂಡಪುರಾಣಮಂ ಮಾಡಿದಂ

ಶ್ಲೋಕ || ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ಜಾಯತೇ ದ್ವಿಜಃ
ನಿಜ ಜಾತಿ ಸಮುತ್ಪನ್ನ ತಪಸಾ ಶ್ರೇಷ್ಠ ಭವೇತ್‌ ||

ಊರ್ವಶೀಗರ್ಭಸಂಭೂತೋ ವಶಿಷ್ಟಸ್ಯ ಮಹಾಮುನಿಃ
ತಪಸಾ ಬ್ರಾಹ್ಮಣೋಜಾ………. ಜ್ವಾನಿರಕಾರಣಂ
||

ಮಾತಂಗಿಗರ್ಭಸಂಭೂತೋ ಶಕ್ತಿಶ್ಯೈವ ಮಹಾಮನೀ
ತಾಪಸಾನ ಚಾಂಡಾಲಗರ್ಭಸಂಜಾತಃ ಪಾರಾಶರಮಹಾಮುನಿಃ
||

ಕೈವರ್ತಿಗರ್ಭಸಂಭೂತೇ ವ್ಯಾಸೋನಾಮ ಮಹಾಮುನಿಃ
ಹರಿಣೀಗರ್ಭಸಂಭೂತೋ ವಿಶ್ವಾಮಿತ್ರಮಹಾಮುನಿಃ
||

ಮೃಗಗರ್ಭಸಮುತ್ಪನ್ನ ಋಷಿಶೃಂಗಮಹಾಮುನಿಃ
ಶುನಕೀಗರ್ಭಸಂಭೂತ ಸುತೋನಾಮ ಅರಣೀಗರ್ಭಾರಣ್ಯಮುನಿಃ
||

ಹಸ್ತಿವ್ಯಾತ ಚಲೋದಾರ ಜಲೂಕ್ಯಾ ಕೇಶಕಂಬಲಃ
ಅಗಸ್ತ್ಯಾಗಪ್ತಿ ಪುಚ್ಚಶ್ಚ ಕೌಶಿಕಃ ರುಶಸ್ತಸಿನಾತ್‌
||

ಕದಿನ್ಯಾಕದಿನೋಜಾತಃ ತೀರ ಗುಲ್ಮಶ್ಚಗುಲ್ಮಕಃ
ದ್ರೋಣಗರ್ಯ……..ಕಲ ಶಾಕ್ತಿತ್ತಿರಸ್ತಿತ್ತಿರಿಚರಃ
||

ರೇಣುಕಾಜ್ಜನಯೇಂದ್ರಾಮಂ ವಾಸುಪಿತೃಂ ನಂದನೇಮುನಿಃ
ಶೂದ್ರಾದಿ ಕಿಲಸಂಪನ್ನೋ ಗುಣತಾನ್ ಬ್ರಾಹ್ಮಣೋ ಭವೇತ
||

ಬ್ರಾಹ್ಮಣೋ ಕ್ರಿಯಾಹೀನೋ ಶೂದ್ರಾಪತ್ಯಸಮೋ ಭವೇತ ||

ಎಂದಿಂತನೇಕ ಪರ್ಯಯಂಗನಂ ಮತ್ತಂ ಬ್ರಹ್ಮಂ ಲೋಕಷೃಷ್ಟಿಯಂ ಮಾಡಲೀಶಂ ಲಯಂ ಮಾಳ್ಪನೆಂದು ವಿಷ್ಣು ತನ್ನುದರದೊಳೀರೇಳು ಲೋಕಮಂ ತನ್ನ ಪೊಟ್ಟೆಯೊಳ್ ಧರಿಸಿ ಬ್ರಹ್ಮನರಿಯದಂತು ಪೋಗಿಯಗಸ್ತ್ಯನ ಕಮಂಡಲಮಗಸೆಯ ಮರದ ಕೊಳೆಯೊಳಿರಲದರ ಪಿಪ್ಪಲಿದ್ವಾರದಿಂದೊಳಪೊಕ್ಕು ಸಪ್ತಸಮುದ್ರ ಮಧ್ಯದ ವಟರುಕ್ಷದ ಮೇಲೇರಿ ಒಂದಾಲದೆಲೆಯ ಮೇಲೊರಗಿ ಮತ್ತೊಂದೆಲೆಯಂ ಮುಚ್ಚಿ ವಟಪತ್ರಶಯನನಾಗಿರ್ಪಿನ……………ತ್ತಂ ಬಂದಾ ಪಿಪ್ಪಲಿದ್ವಾರದಿಂ ಪೊಕ್ಕು ಸಪ್ತ ಸಮುದ್ರಸ್ಥಲಂಗಳಂ ದಿವ್ಯ ಷಣ್ಮಾಸಂಬರಂ ತಾಲದೆಲೆಯನೊಂದೊಂದಾಗಿ ಕೂಡಿಸಿ ಅಲ್ಲಿ ಪಟ್ಟಿರ್ದು ವಿಷ್ಣುವಂ ಕಂಡಾತ ತಾಯಿಪೊಟ್ಟೆಯಂ ಪೊಕ್ಕು ಲೋಕಾಲೋಕಮೆಲ್ಲಮಂ ಸೃಜಿಸಿ ನವದ್ವಾರದಿಂ ಪೊರಮಡದಿರೆ ನಾಭಿಕಮಲದಿಂದೀರೇಳು ಲೋಕಂ ಪೊರಮಡಿಸಿ ಪಿಂತನೆ ತಾಂ ಬರಲೆಲ್ಲಾ ಶರೀರಂ ಪೊರಮಟ್ಟು………….ಡನೆಂದು ಮತ್ತಮೀಗಳೊಸರ್ವ ಜೀವಂಗಳೆಡೆಹದುಂ ರಚಿಸುತ್ತಂ ಮೌಂಜಿ ದಂಡ ಕಮಂಡಲಾದಿಗಳಿಂ ಸತ್ಯಲೋಕದೊಳಿಪ್ಪನೆಂದು ಪುಷ್ಕರ ಬ್ರಹ್ಮಾಂಡಪುರಾಣದೊಳಿಂತಸಂಭಾವ್ಯಗಳನೇಕಮಾಗಿ ರಚಿಸಿ ಇಂತಪ್ಪ ಬ್ರ………………….. ಸ್ರದಿಪ್ಪರುಮೆಂದು

ಮತ್ತಂ ವಿಷ್ಣು ದಶಾವತಾರಮನೆತ್ತಿ ತಿರ್ಯಗ್ಜಾತಿಯೊಳ್ ಪುಟ್ಟಿಯಜ್ಞಾನಿಯಾಗಿ ಜನನ ಮರಣಕೊಳಗಾಗಿ ಗೋಪಾಳಗೃಹದೊಳ್ ಬೆಳೆದು ನವನೀತಚೋರನಾಗಿ ಶಿಶುತ್ವದೊಳ್ ರಾಂ…………ಯರಂ ಕಂಡಾಗಳೆ ಕೂಡುವಾಸೆಯಿವಂತನದಿಂ ತಿರೆಗಳನ್ನೆತ್ತಿಕೊಂಡು ಭಗೇಕ್ಷಣಪ್ರೀತನಾಗಿಯು ಜಾರಚೋರಶಿಖಾಮಣಿಯೆನಿಸಿ ಮೋಹಿನಿಯ ರೂಪಾಗಿರ್ದು ಮುನ್ನ ದ್ವಾರಾವತಿಯೊಳ್ ಪದಿನಾರು ಸಾಸಿರ………ಣಿಯದೆ ವಿಂದ್ಯಾಟವಿಯನೆಯ್ದಿ ರಾಜಿಮತಿ ಚಂದ್ರಮತಿಯೆಂಬರಂ ಕೂಡಿಯೊಂದು ದಿನ ರಾತ್ರಿಯೊಳ್ ಸಂಕೇತಗೃಹದ ಬಾಗಿಲಂ ಮಿಡಿಯೆ ಗೋಪಾಕಾಂತೆಯಿಂತೆಂದಳ್

ವೃತ್ತ ||  ಅಂಗುಲ್ಯಾಕಃ ಕವಾಟಃ ಪ್ರಹರತಿಕುಟಿಲೇ ಮಾಳವಃ ಕಿಂ ವಸಂತೋ
ನೋಚಕ್ರೀ ಕಿಂ ಕುಲಾಲೋ ನಹಿ ಧರಣಿಧರಃ ಕಿಂ ದ್ವಿಜಿಹ್ವ ಪಣೀಂದ್ರಾ
ಸೀನಾಹಂ ಘೋರಾ ಹೇ ಮರ್ದಿತ್ವಮಸಿಲಗಪತಿ ಮೋಹರಿಃ ಕಿಂ ಕಪೀಂದ್ರಃ
ಇತ್ಯೇವಂ ಗೋಪಕನ್ಯಾ ಪ್ರತಿವಚನಜಡಃ ಪಾತುವಶ್ಚಕ್ರಪಾಣಿಃ ||

ಎಂದಿವಲ್ಲದೆ ಪರಾಂಗನಾಸಂಗನಿರತನಾಗಿ ಕುಂಡಗೊಳಕ ಮಾತೃ ಪಿತೃ ಭ್ರಾತೃ ಗುರು ಸ್ವಾಮಿದ್ರೋಹಿಗಳೆ ತನಗೆ ಬಂಧುಗಳಾಗೆ ನರನ ಸಾರಥಿಯಾಗಿ ಪೃಥಾತನೂಭವರ್ ಪೇಳೆ ಕೌರವನ ಸಮಿಪಕ್ಕೆ ಹೇರಿಗನಾಗಿ ಪೋದನೆಂದಿವು ಮೊದಲಾದ ಮಹಾ ವಿಷ್ಣು ಕಥನಮಂ ಭಾಗವತವೆಂದು ರಚಿಸಿ

ಶ್ಲೋಕ ||ಆದಿಶಕ್ತಿ ಮಯಂ ಬೀಜಂ ಬೀಜಶಕ್ತಿಮಯಂ ಶಿವಃ
ಶಿವಶಕ್ತಿಮಯಂ ವಿಷ್ಣುಃ ಸರ್ವಂ ವಿಷ್ಣುಮಯಂ ಜಗತ್ ||

ಮತ್ತಂ ಪರಮೇಶ್ವರಂ ಚರಾಚರಜೀವಂಗಳಂ ನಮಗೆ ಕೊಡುವನಾಗಿಯು ಬ್ರಹ್ಮಕಪಾಲಂ ಕರಮಂ ಕಚ್ಚಿ ಸಕಲೈಶ್ವರ್ಯಮೆಲ್ಲ ಮನಾಹಾರಂಗೊಂಡೊಡತಿ ದರಿದ್ರನಾಗಿ ಲೋಕತ್ರಯಂಗಳೊಳ್ ತಿರಿದು ಭಿಕ್ಷಾವೃತ್ತಿಯಿಂದಿಪ್ಪುದುಂ ಪಾರ್ವತಿ ನಾನಾ ಪ್ರಕಾರದಿಂ ಬುದ್ಧಿಯಂ ಪೇಳಿ ವಿಸ್ತರಿಸಿದೊಡೊಂದು ಬೆಟ್ಟದ ತಪ್ಪಲೊಳ್ ಕ್ಷುಧಾ ತೃಷೆಯಿಂ ಬಳಲ್ದಳುತ್ತಮಿರಲ್ ಕೇಶವಂ ಕೇಳ್ದು ನೋಡಲ್ ಬಪ್ಪುದುಮದನರಿದತಿ ಲಜ್ಜೆಯಿಂ ಸರ್ಪನ ಗುಡಿಯೊಳ್ ಬಿಗಿದ ಗಜಾಜಿನಮಂ ಕೌಪೀನಂ ಮಾಡಿ ಇದಿರೆದ್ದು ಬಪ್ಪಿನಮುರಗಂ ಗಡುರಡನಂ ಕಂಡು ಜಿಗಿದೋಡಿದೊಡೆ ನಗ್ನರೂಪಿಂ ಕಂಡು ತನ್ನವಸ್ಥೆಯಂ ಪೇಳೆ ಬ್ರಹ್ಮಕಪಾಲಮಂ ನಿನಗಾವುದು ಇಚ್ಛೆಯದು ಸಲಿಸುವೆನೆಮದೊಡೆ ಲೋಕತ್ರಯ ದೊಳಿಪ್ಪ ಸರ್ವ ಶ್ರುತಿಗಳರುಡಿಗಯಲ್ಲಮಂ ದಂಡಮಾತ್ರಮುಳಿಯದ ತೆರದಿಂ ದೇವನೆ ಸಂಪೂರ್ಣಮಾಗಿ ತುಂಬಿದೊಡೆ ಬಿಡುವೆನೆಂಬುದು ನೀನತಿಭರದಿಂದೆನ್ನ ಹಸ್ತಕ್ಕೆ ಬಂದೊಡೆ ನಿನಗೆ ತೃಪ್ತಿಯಪ್ಪಂತು ರಕ್ತಮನೀವೆನೆಂದು ಕೇಶವಂ ಕೈಯಂ ನೀಡಿದೊಡಾ ಶಿವನ ಹಸ್ತಮಂ ಬಿಟ್ಟು ಹರಿಯ ಹಸ್ತಕ್ಕೆ ಬಪ್ಪ ಸಮಯದೊಳ್ ತನ್ನ ಹಸ್ತಮಂ ಪತ್ರರಿಸದೆ ತನ್ನ ಹಸ್ತಮಂ ಪಿಂದಕ್ಕೆ ಸರಿಯಲಾ ಕಪಾಲ ಭೂಮಿಯೊಳ್ ಬಿರ್ದು ಹಿಡಿ ಶಾಪಮನೆಂದಡೆ ಹೊತ್ತಡೆಯೆಂದಚ್ಯುತಂ ತನ್ನುಗುರೊ…………ದೆಯಂ ಸೀಳಿಯಾ ಕಪಾಲಂ ತುಮಬುವಷ್ಟು ರಕ್ತಮಂ ತುರೆಸಹಿತಮುಣುವಷ್ಟಂ ತುಂಬಲು ತನ್ನೆದೆಯಂ ಮುಚ್ಚಿದರಘಳಿಗೆಯೊಳೆ ನೊರೆಯಲೊಂದೊಂದು ಭತ್ತದ ಪ್ರಮಾಣು ತಗ್ಗಿದಾಗಳ್ ಕಪಾಲಂ ಸಂಪೂರ್ಣಮಿಲ್ಲೆಂದೊಡೆ ವಿಷ್ಣುವೆಂದನೀ ಕಡಮೆಯಂಬು ತುಂಬಲ್ ಮೂರ……………………. ಮನೆತ್ತಿಯಸಂಖ್ಯಾತಕ್ಷೋಹಿಣಿ ಚತುರಂಗಬಲ ಮೊದಲಾಗೆ ಕೊಂದು ರಕ್ತಮಂ ತುಂಬುವೆನೆಂದಾ ಬ್ರಹ್ಮಕಪಾಲಮಂ ತುಂಬಲೋಸುಗಂ ಪರಶುರಾಮ ಶ್ರೀರಾಮ ಕೃಷ್ಣಾವತಾರಮನೆತ್ತಿದನೆಂದುಂ ಮತ್ತಂ ಬ್ರಾಹ್ಮಣರ್ ಮಾಳ್ಪ ಸಮಾರಾಧನೆಯ ಪಂಕ್ತಿಗೆ ಮಾಂಡವ್ಯ………………………ದೊಡೆಮ್ಮ ಪಂಕ್ತಿಗೆ ಸಲ್ಲನೆಂದು ತಿರಸ್ಕರಿಸಲಾತಂ ನಾ ಮಾಡಿದ ದೋಷವೇನೆಂಬುದುಂ

ಶ್ಲೋಕ ||ಅಪುತ್ರಸ್ಯ ಗತಿರ್ನಾಸ್ತಿ ಸ್ವರ್ಗೇನೈವಚ ನೈವಚ
ತಸ್ಮಾ ತ್ಪುತ್ರಮುಖಂ ದೃಷ್ಟ್ವಾಪಶ್ಚಾದ್ಭವತಿ ಭಿಕ್ಷುಕಃ ||

ಎಂದು ವೇದಶಾಸ್ತ್ರಮುಳ್ಳುದರಿಂ ನಿನಗೆ ಪುತ್ರನಲ್ಲದುದರಿಂ ಗತಿಯಿಲ್ಲ. ಯೋಗ್ಯ……… ಲೆಂದೊಡೆನಗೇನೆಂಬುದಂ ನೀನೆಲ್ಲಾದರು ಪುತ್ರೋತ್ಪತ್ತಿಯಂ ಮಾಡೆನೆ ನಾನತಿ ವೃದ್ಧನು ಕಂಡೊಡೆ

ವೃತ್ತ ||  ಯಾವದ್ಭ್ರಮದ್ಭ್ರಮರ ವಿಭ್ರಮ ಕೇಶಪಾಶಂ
ತಾವದ್ಭವಂತಿ ಹಿ ನೃಣಾಂ ಸುಲಭಾಯುವರ್ಯಃ
ಡಿಂಡೀರ ಪಿಂಡ ಪರಿ ಪಾಂಡುರ ತುಂಡಮುಂಡಂ
ಚಂಡಾಲವತ್ ಪರಿಹರಂತಿ ನರಂ ತರುಣ್ಯಃ ||

ಎಂದು ಮಾಂಡವ್ಯಚೇತಿ ಕೊಳೆ ಮಾತೃ ಪುತ್ರಾ ಭಗಿನ್ಯಾಯೆಂಬ ವೇದೋಕ್ತಮಂ ಪೇಳೆ ತನ್ನ ತಂಗಿಯಪ್ಪ ಡಿಂಡಿಭೆಯೆಂಬ ರಂಡೆಯಂ ಕೂಡಿರ್ದು ಛಾಯೆಯೆಂಬತಿ ರೂಪವತಿಯಪ್ಪ ಕನ್ನೆಯಂ ಪಡೆಯಲಾಕೆಯು ಶೈಶವಮಂ ಪತ್ತುವಿಡಲು ತಾವಿರ್ವರು ಯಾತ್ರೆಯಂ ಪೋಗಲು ಚೆನ್ನೆಯಪ್ಪ ಕನ್ನೆಯನಾರ ಬಳಿಯೊಳಿರಿಸಲೆಂದು ಯೋಚಿಸುತ್ತಂ ಪರಮೇಶನ ಬಳಿಯೊಳಿರುಸುವುದೆಂದ ಡಿಂಡಿಭೆಗೆ ಮಾಂಡವ್ಯಗಾತನು ಮಹಾ ವ್ಯಸನಿಯಪ್ಪುದರಿಂ ಗಿರಿಜೆಯಂ ಕೂಡಿರ್ದು ಒಂದು ದಿನಂ ಮೀಯಲೆಂದುಮೆಯಂ ಬೆತ್ತಲೆ ಕುಳ್ಳಿರಲೀಶಂ ನಿಂದಾಕೆಯ ಯೋನಿಯನೀಕ್ಷಿಸುತ್ತಿರಲೆರಡು ಹಸ್ತದಿಂದಕ್ಷಿ ದ್ವಯಮಂ ಮುಚ್ಚಿರ್ಪಡೆಯೊಳೊಂದಕ್ಷಿಯಂ ……………….. ತ್ರಿಣೇತ್ರನಾಗಿ ಮಹಾ ಮೈಥುನದಿಂದಿರ್ದು ಒಂದು ದಿನಂ ಗಂಗಾನದಿಗೆ ಪೋಗಿರೆ ಗಂಗೆ ಸ್ತ್ರೀಯ ರೂಪದಿಂದಿರ್ದೊಡಾಕೆಯನೊಡಂಬಡಿಸಿ ಕೂಡಿರ್ದುಬೇಗ ಬರ್ಪೆನೆಂದಾಕೆಯನಲ್ಲಿರಿಸಿ ಕೈಲಾಸ ಗಿರಿಗೆ ಬಂದು ರುದ್ರಾಣಿಯೊಳ್ ಕೂಡತ್ತ ತಡೆದಿರೆ ಜಾಹ್ನವಿಯರಸುತ್ತಂ ಕೈಲಾಸಕ್ಕೆ ಬಂದಾ ಪರಮೇಶನ ಬಳಿಯೊಳ್ ನಿಂದಿರ್ಪುದು ಹೈಮವತಿಯಿಂತೆಂದಳ್

ಸೂತ್ರ || ಕಾತ್ವಂ ಸೌಂದರಿ ಜಾಹ್ನವೀ ಕಿಮಹತೇ ಭರ್ತಾಹರೋನನ್ವಸಾ
ವಂಭಸ್ತ್ವಂ ಕಿಲ ಕೇತ್ಸಿಮನ್ಮಥರಸಂ ಜಾನತ್ಯಯಂ ತೇ ಪತಿ
ಕ್ಷಿ ಸಾಮಿಸತ್ಯಮಿದಂ ನಹಿಪ್ರಿಯತಮೇ ಸತ್ಯಂತುತಃ ಕಾಮಿನಾಂ
ಇತ್ಯೇವಂ ಹರಜಾಹ್ನವೀ ಗಿರಿಸುತಾ ಸಂಜಲ್ಪನಃ ಪಾತು ವಃ || (?)

ಎಂದಿತು ಜಲ್ಪಿಸಿ ಕೂಡಿರೆ ಗಿರಿಜೆ ಪಿರಿದು ಕೋಪಿಸುವುದುಂ

ಆರ್ಯೆ || ತಾ ಗವುರೀದೋಸಿವಿಯಾ ಪಾಯೇಪಡಿಯಾಣ ಪರಮದೇವೇಣ
ಸೋಂತುಂಮಂದೇವಸಿವಂ ಪರಮಪ್ಪಾರಿಂಘವಿಳಯೇಣ ||

ಅಂತತಿಕೋಪದಿಂ ಚಿಂತಾಕ್ರಾಂತೆಯಾಗಿ ತನ್ನ ಮನದೊಳಿಂತೆಂದಳ್

ವೃತ ||   ಸಂಧ್ಯಾರಾಗವತಿಸ್ವಭಾವ ಚಪಲಾ ಗಂಗಾದ್ವಿಜಿಹ್ವಫಣೀ
ಚಂದ್ರೋಲಾಂಛನ ವಕ್ರೆ ಏವ ಮಲಿನೋ ಜಾತ್ವೇವ ಮೂರ್ಖೋ ವೃಷಃ
ಕಷ್ಟಂ ದುರ್ಜನಸಂಕಟೇ ಪತಿಗೃಹೇ ವಾಸ್ತವ್ಯಮೇತತ್ಯಥಂ
ದೇವಿನ್ಯಸ್ತ ಕಪಾಲ ಪಾಣಿತಲಕಾ ಚಿಂತಾನ್ವಿತಾ ಪಾತುವಃ ||

ಅಂತುಮ್ಮಳಿಪುತ್ತಿರ್ದು ವಿರಹದಿಂ ಗಂಗೆಯಂ ಬಿಡಿಸೆಂದು ಷಣ್ಮುಖನನೀಶನಲ್ಲಿ ಗಟ್ಟಿದೊಡೆ ಪೋಗಿ ತಂದೆಯೊಳಿಂತೆಂದಂ

ಸೂತ್ರ || ಅಂಬಾಕುಪ್ಯತಿರಾಥ ಮೂರ್ಧ್ನಿ ನಿಹಿತಾ ಗಂಗೇಯಮುಸೃಜ್ಯತಾ
ವಿದ್ವನ್ ಷಣ್ಮುಖಕಾದತಿಮಹಿ ಚಿರಂತಸ್ಯಾಪ್ತಿತಾ
ಯಾವದ್ ದೋಷಾಡಾರವಶಾದ……………………..ತಂ
ಬೋಧಿರ್ಜಲಧಿ ಪಯೋಧಿರುದಧಿರ್ವಾರಾಂ ನಿಧಿರ್ವಾರಿಃ ||

ಪೊರಸಂಚಾರಾರ್ಥ ಪೋಗಿ ರಾತ್ರಿಯೊಳ್ ತಡೆದು ಬಂದು ತವಹಂ ಮಿಡಿಯೆ

ವೃತ್ತ ||  ಕಾನಾದ್ವಾರಾಗ್ರತಸ್ಥಃ ಹವತಿ ಪಶುಪತೀ ಕಿಂ ವೃ……………….ನಾರ್ಧನಾರಿಃ
ಕಿಂ ಪಂದೋನೈವ ಶೂರಿ ಕಿಮಪಿಸಚರುಜಃ ವಾಪ್ರಿಯೇ ನೀಲಕಂಠಃ
ಬ್ರೂಹಿತೇ ಕಿಂ ಮಯ…………….ಯರ್ಷ್ಮಾ………………ಧಿ ||

ಎಂದು ಪೆಳೆ ಬಿಡದಿರ್ದು ಒಂದು ದಿನಂ ಸಂಚಾರಾರ್ಥ ಶ್ರೀಕಂಠಂ ಪೋಗೆ ಉಮಾದೇವಿ ಪುರುಷನಗಲ್ಕೆಗೆ ಸೈರಿಸಲಾರದೆ ತನ್ನ ಬೆಮರಿಂ ಮೂಗ………ರ್ವ ಸ್ತ್ರೀರೂಪಂ ಮಾಡಿ ಬಾಗಿಲೊ…………..ಸಂಗಳು ಪಾವರಿಯರಂದರೊಳಳ್ಕಿ ರುದ್ರನೆಲ್ಲರೊಳುಂ ಕ್ರೀಡಿಸಿ ಪಾರ್ವತಿ ಪೊರ್ದದಂತಿಪ್ಪುದು ಒಮ್ಮೆ ವಿನಾಯಕಂ ವಿಹಾರಾರ್ಥಂ ಪೋಗಿ ಕೈಲಾಸದ ಪಂಗಿಗೆ ಬಂದು ಮಹೋಲ್ಲಾಸಂ ಪುಟ್ಟಿ ನಿಜದಂತಾಗ್ರದಿಂದಾ ಗಿರಿಯ ವಿದಿಯಲಾ ಪಾರ್ವ………….ರಿಯತ್ಯಂತ ಭಯದಿಂ ಬಂದೀಶ್ವರನಂ ತಬ್ಬಿ ತಕ್ಕೈಸಲು ಮನದೆಗೊಂಡು ಗಿರಿಜೆಯಂ ತನ್ನ ವಾಮಾಂಗದರ್ಧಶರೀರದೊಳ್ ಪುಗಿಸಿಕೊಂಡಾ ಗಂಗೆಯಂ ಜಡೆಯೊಳ್ ತಾಳ್ದನಂತು

ವೃತ್ತ ||  ಅಳಿ ನೀಲಾಳಕ ಭಾಸುರ…….. ಜಟಾಲೋಲೇಕ್ಷ ಮುಗ್ರೇಭಕ್ಷಣಂ
ತಿಲಕಾರ್ಧಂ ನಯವಾರ್ಧಮುನ್ನತ ಕುಚಂ ರಮ್ಯೋರು ವಕ್ಷಸ್ಥಲಂ
ವಲಯಾಂಕಂ ಫಣಿಕಂಕಣಂ ಸುವಸನಂ ವ್ಯಾಘ್ರಾಜಿನಂ ಲೀಲಯಾ
ಲಲಿತಂ ಭೀಷಣಮರ್ಧನಾರಿಘಟಿತಂ ರೂಪಂ ಶಿವಃ ಪಾತುವಃ ||

ಅಂತು ಅರಂ ಕೂಡದ ಗಂಗೆಯಂ ತಲೆಯೊಳಾಂತಂ ಅರ್ಧನಾರೀಶನಾದತಿ ಕಾಮಿಯವನ ಬಳಿಯೊಳೆ ಕನ್ನೆಯನಿರಿಸಲಾಗದೆಂದಾ ವಿಷ್ಣುವಿನ ಸಮೀಪದೊಳಿರಿಸಲಾತಂ ಜಾರ ಚೋರರೊಳಗಗ್ರಗಣ್ಯ ಕಮಲಾಸನಂ ತನ್ನ ಮಗಳನೆ ಸ್ವೀಕರಿಸಿ ಪೆಣ್ಗರಡಿಯೊಳ್ ಕೂಡಿದನಾತಂ ಸ್ತ್ರೀರೂಪಿನ ನಾಯನಾದರುಂ ಬಿಡುವನಲ್ಲ, ಚಂದ್ರನ ಬಳಿಯೊಳಿ ರಿಸಲೆಂದೊಡಾತಂ ವಿಶ್ವಾಮಿತ್ರನ ಪೆಂಡತಿಯಂ ಕಂಡಾಕೆಗೆ ಸೋಲ್ತು ಕೂಡುವಾಗಲಾಕೆಯ ಪತಿ ಬರೆ ಮಂಜಾಗಿ ಪೋಗೆಂದರಂತೆ ಪೋಗುತ್ತಿರೆ ಕಂಡು ತಿಳಿದಾ ಋಷಿಯ ಕೋಪಿಸಿ ಮೃಗಾಜಿನಂದಿಂದಿಡೆ ತಾಗಿವೆಟ್ಟು ಕಲಂಕನಾಗಿಯು ಕ್ಷೀಣಮಂ ಪೊರ್ದುತಿಪ್ಪಂ, ಶಕ್ರನೊಳಿರಿಸುವಮೆಂದೊಡಾತಂ ಗೌತಮಯತಿಯ ಪೆಂಡತಿ ಅಹಲ್ಯೆಯಂ ಕಂಡೊಡಂಬಡಿಸಿ ಕೂಡತ್ತಿರಲಾತಂ ಕಂಡು ನಿನ್ನ ಮೆಯ್ಯೊ[ಳ್ ] ಸಾವಿರ ಯೋನಿಯಾಗಲೆಂದು ಶಾಪಮನಿತ್ತೊಡಂತೆಯಾಗೆ ಲಜ್ಜಿತನಾಗಿಯಾತಂಗೆ ನಮಸ್ಕರಿಸಿ ನಾನೆಸಗಿದ ತಪ್ಪಂ ಕ್ಷಮಿಯಿಸುವುದೆಂದು ಬೇಡಿಕೊಳ್ಳಲಾ ಯೋಗಿ ಕರುಣಿಸಿ ಸಾಸಿರ ಕಣ್ಣಾಗಲೆಂದು ಕುಡೆ ಸಹಸ್ರಾಕ್ಷನಾದಂ.

ಸೂರ್ಯನ ಬಳಿಯೊಳಿರಿಸಲೆನಲಾತಂ ಶೌರಿಪುರದಂಧಕವೃಷ್ಟಿಯ ಸುತೆಯಪ್ಪ ಕುಂತಿ ನಾಲ್ನೀರ್ಮೀಯಲ್ ನಿರಂಬರದಿಂ ಕುಳ್ಳಿರಲಾಕೆಯ ಯೋನಿಯಂ ಕಂಡು ರಮಿಸಿದೊಡಾಕೆ ಗರ್ಭಮಾಗಿಯಾಕೆಯ ಕಿವಿಯೊಳ್ ಕರ್ಣಂ ಪುಟ್ಟಿದನದರಿಂದಿನ್ನಾರ ಬಳಿಯೊಳಿರಿಸಲೆಂದು ಚಿಂತಿಸಿ ಯಮಂ ಬಾಲಬ್ರಹ್ಮಚಾರಿ ದೂಷಣವಿದೂರನೆಂದಾ ಕನ್ನೆಯಂ ಯಮಪುರಿಗೊಯ್ದು ಯಮನ ಸಮಿಪದದೊಳಿರಿಸಲಾಕೆಯ ಸೌಂದರ್ಯಮಂ ನೋಡಿಯಿಂತೆಂದಂ

ಶ್ಲೋಕ || ಸಂಸರ್ಗ ದುರ್ಬಲಾಂ ಜೀರ್ಣಾಂ ದೃಶ್ಯಂತಿಮಪ್ಯಗಚ್ಛತಿಂ
ಕುಷ್ಠಿನಿಂ ದುರ್ಭಗಾಂ ಕಾಣಾಂ ವಿರೂಪಾಂ ಕ್ಷೀಣವಿಗ್ರಹಾಂ
ನಿಂದಿತಾಂ ನೇವ್ಯ ಜಾತಿಯಾಂ ಸ್ವಜಾತಿಯಾಂ ತಪಸ್ವಿನೀಂ
ಬಾಲಾಂ ನೀತ್ವಾಂ ನಿರತ್ವಿತ್ರಿಂ ಕಾಮಿಣಃ ಕಿಂತಂ ಪ್ರವರ್ತತೇ ||

ಎಂದಾಕೆಯಂ ಸ್ವೀಕರಿಸಿ ಪಗಲು ನುಂಗಿ ರಾತ್ರಿಯೊಳುಗುಳಿ ಕೂಡಿರ್ದೊಂದು ದಿನಂ ಗಂಗಾಸ್ನಾನಕ್ಕೆ ಪೋಗಿ ಛಾಯೆಯಂ ಲತಾಮಂಡಪದೊಳಿರಿಸಿ ಅನುಷ್ಠಾನಂ ಮಾಡಲ್ ಪೋಗೆಯಗ್ನಿಕಂಡಾಕೆಗೆ ಸೋಲ್ತು ತನ್ನ ಸಖನಾದ ವಾಯುವಿಂದಾಕೆಯನೊಡಂಬಡಿಸಿ ಕೂಡುವ ಸಮಯದೊಳ್ ಯಮಂ ಬಪ್ಪುದರಿದಾ ಅಗ್ನಿಯಂ ಛಾಯೆ ನುಂಗಿರ್ದೊಡವಳಂ ಯಮಂ ನುಂಗಿ ತನ್ನಾಲಯಕ್ಕೆ ಬರ್ಪುದುಮಾತನ ಪೊಟ್ಟೆಯೊಳ್ ಛಾಯೆ ಅಗ್ನಿಯನುಗುಳಿ ಆನಂದದಿಂ ಕ್ರೀಡಿಸುತ್ತಿರ್ದಳಂತಿಪ್ಪುದುಂ ಲೋಕದೊಳೆಲ್ಲಾ ಅಗ್ನಿಯಿಲ್ಲದೆ ದ್ವಿಜರ ಹೋಮಕ್ರಿಯೆಯೆಲ್ಲ ಮಂತರಿಸೆ ತ್ರೈಲೋಕ್ಯದೊಳೆಲ್ಲಾ ಸಂತಾಪಂ ಪುಟ್ಟಿ ಸುರಾಸುರರ್ ನೆರೆದು ವಾಯುವಂ ಕೇಳಲೆಲ್ಲರ್ಗೌತಣಮಾಡಿಸಿರ್ವರಂ ಬರಿಸಿ ಎಲ್ಲರ್ಗೊಂದೊಂದಾಸನಮನಿಟ್ಟು ಯಮಂಗೆ ಮೂರಾಸನಮನಿಕ್ಕೆ ಶಂಕಿಸಲೊಂದಾಸನದೊಳ್ ಕುಳ್ಳಿರಿಸಿ ಛಾಯೆಯನುಗುಳೆಂದುಗುಳಿಸಿಯಾಕೆಯನೊಂದಾಸನದೊಳಿರಿಸಿ ಯಾಕೆಯಂ ಬಗ್ಗಿ ಸಿಯಗ್ನಿಯನುಗುಳಿಸುವಾಗಲಾಕೆಯ ಗಡ್ಡ ಮೀಸೆಗಳೆಲ್ಲಂ ಉರಿದು ಪೋಗಲಂದಿಂದಿತ್ತಲೆಲ್ಲಾ ಸ್ತ್ರೀಯರ್ಗಂ ಗಡ್ಡಮಿಸೆ ಪೋಗಲೆಂದುಂ

ಮತ್ತಂ ಶತಬಲಿಯೆಂಬಸುರಂ ದೇವರ್ಕಳಂ ಸಂಹರಿಸಿ ತನ್ನ ಪದಮಂ ಸಹಸ್ರಬಲಿಯೆಂಬ ಮಗಂಗಿತ್ತು ತಪದಿಂ ಪರ್ವತದೊಳಿರೆ ದೇವರ್ಕಳೆಲ್ಲ ಸಹಸ್ರಬಲಿಯ ಪರಿಭವಿಸಲೀತನಂ ಕೊಂದಲ್ಲದಾಗನೀತಂ ತಾಪಸನಾದುದರಿಂದಾಯುಧದಿ ಕೊಲ್ಲಲಾಗದೆಂದಾಳೋಚಿಸಿ ವಜ್ರಕಂಟಕಜಿಹ್ವೆಯ ಗೋವಿನಿಂದಾತನಂ ನೆಕ್ಕಿಸೆಂದು ಸಾಯಲವನ ಶಿರಸ್ಸಿನಸ್ಥಿಯೊಳರ್ಧಂ ಶಕ್ರಂಗೆ ವಜ್ರಾಯುಧವರ್ಧ ಹರಿಗೆ ಚಕ್ರಮುಮಾಯ್ತು ಸೃಷ್ಠಿವಸ್ಥಿಯರ್ಧ ಹರಂಗೆ ಪಿನಾಕಂ ಅರ್ಧಗಾಂಡೀವಮೆಂಬ ಬಿಲ್ಲಾಗಲದಂ ವರುಣಂಗೀಯಲಾತಂ ಪಾವಕಂಗಿತ್ತಡವಂ ಪಾರ್ಥಂಗೆ ಕೊಟ್ಟನದಲ್ಲದೆಯುರದೆಲುಗಳೆಲ್ಲ ಸುರಾಸುರರ್ಗನೇಕಾಯುಧಂಗಳಾದವು. ಕೈಕಾಳ ತೊರಯೆಲುಗಳು ಸಪ್ತಶತ ಗದೆಗಳಾದವು. ಕೌರವಂಗೆ ನೀಲಮುಖಿಯುಂ ಭೀಮಂಗೆ ರುಧಿಯೋದ್ಗಾರಿಯುಂ ಯಮಂಗೆ ಕಾಲದಂಡಂ ಉಳಿದೆಲ್ಲಾ ಎಲುಗಳುಂ ಲೋಕತ್ರಯಂಗಳೊಳಸಾಧಾ ರಣಂಗಳಪ್ಪ ದ್ವಾತ್ರಿಂಶ ಭೇದಂಗಳಾದಾಯುಧಂಗಳಾದುವು. ದೇವಾಸುರ ಯುದ್ಧದೊಳೀತಂ ಪಿನಾಕದಿ ಗೆಲ್ದು ಗಾಂಡೀವಾಸ್ತ್ರದಿಂ ದೇವೇಂದ್ರನಂ ಪರಿಭವಿಸಿ ಶಲ್ಯದ ಜಾಣದಿಂ ಸೈಂಧವನಂ ತರಿದು ಹಿರಿಯಣ್ಣನ ಯಾಗಕ್ಕಂ ಲಂಕೆಯ ವನಮಂ ತಂದಂದು ನಾಗಲೋಕಕ್ಕೆ ಬಂಡೆಯನಿಕ್ಕಿ ವಾಸುಕಿಯಂ ಧುರದೊಳೆ ಗೆಲ್ದಾತನ ಪುತ್ರಿಯಂ ಮದುವೆನಿಂದು ಪ್ರತಿಸಂಧಿ ಸಿಂಹಂ ಸಹಸ್ರಬಲಾನ್ವಿತನಪ್ಪ ನಾರಾಯಣಂಗೆ ಮಲ್ಲಯುದ್ಧದೊಳ್ ಸೋಲದ ಬಾಹುಬಳ ಭೀಮಂ ಕುಲಬಲನೆಂಬ ರಾಕ್ಷಸನಿಂ ಪಿಡಿಪೆತ್ತಂ ಪಾರ್ಥನಿಂದ್ರಕೀಲದೊಳ್ ಮಯಂ ಸೂತರ ನಿಮಿತ್ತ ಹರನಂ ಗೆಲ್ದಂ. ಘೋಸಾಯಿಯೆಂಬ ಬ್ರಾಹ್ಮಣಿಯಂ ಯಮಪುರಿಗೊಯ್ಯಲಾಯಮನೊಳ್ ಕಾದಿ ಕಟ್ಟಿಯಾ ಬ್ರಾಹ್ಮಣಿಯಂ ತಂದರು. ತನ್ನ ಬಾಣದ ಗರಿನಿಮಿತ್ತಂ ಗರುಡನ ಪಕ್ಕಮಂ ಕಳ್ವಾಗಲಡ್ಡಬಂದ ಕೃಷ್ಣನಂ ಕಟ್ಟಿ ಏಳುದಿವಸಂಬರಂ ನೆಲಮಾಳಿಗೆಯೊಳಿಕ್ಕಿ……….ಯನೊಬ್ಬನೆ ದೇವೇಂದ್ರನೊಳ್ ಕಾದಿ ಶರಪಂಜರಮಂ ಕಟ್ಟಿ ಐರಾವತಮನಿಳಿಯಿಸಿ ವಿದ್ಯಾಯುಧ ಸಾಮರ್ಥ್ಯದಿಂ ಬಟ್ಟೆಯೊಳ್ ಬೇಡರಿಂ ಸುಲಿಯಿಸಿಕೊಂಡನೆಂದುಂ

ಮತ್ತಂ ಕಿರುಕುಣಿಕೆಯ ಬೆರಳುದ್ದದಗಸ್ತ್ಯಮುನಿ ಸಮುದ್ರಮಂ ಪೀರ್ದು ಪೊಟ್ಟೆ ಯೊಳಿಟ್ಟಿರ್ದನೆಂದುಂ ಮತ್ತಂ ಪರಮೇಶಂ ದಾರುಕನೆಂಬ ವನದೊಳಿರ್ದ ತಾಪಸನ ವಧೂಟಿ……………. ನಿಚ್ಚ ನಿಚ್ಚಂ ಕೂಡುತ್ತಮಿರಲಾತ ಕಂಡು ಕೋಪದಿಂ ಲಿಂಗಂ ಪರಿದುಬೀಳಲೆಂದು ಶಾಪವಿಕ್ಕಲಂತೆ ಬೀಳ್ವುದು ಹರಿದ ಲಿಂಗಂ ತಾಪಸನ ಪಣೆಯಂ ಪತ್ತೆಂದು ಪ್ರತಿಶಾಪವಿಕ್ಕಲಾತನ ಪಣೆಯಂ ಪತ್ತಿದೊಡೀಶನೆಂದರಿದು ನಮಿಸಿ ಬೇಡಿ ಕೊಂಡೊಡಿದಂ ಬಿಡಿಸಲ್ ಕೈಲಾಸಗಿರಿಗೆ ಬಪ್ಪುದೆಂದು ಪೋಗಲಾ ಲಿಂಗಂ ಬೆಳೆಯೆ ಪಲಂಬರ್ ಪಾಸರ್ ಪೊತ್ತುಬಂದಾಗಳ್ ಗಿರಿಜೆಯು ಕಂಡಟ್ಟಹಾಸದಿಂ ನಗುತ್ತಿರಲಾ ಲಿಂಗಂ ಕಳೆದು ಬೆಟ್ಟದಿಂ ಮರಳ್ದು ನದಿ ಪರ್ವತ ವನ ನಾಡುವೀಡೆಲ್ಲ ಮನರೆಯುತ್ತ ಬರೆ ಲೋಕಮೆಲ್ಲಂ ಪಾರ್ವತಿಗೆ ಮೊರೆಯಿಡೆ ಕರುಣಿಸಿ ಲಿಂಗಮಂ ತನ್ನ ಯೋನಿಯೊಳ್ ತಡೆಯಲಿಲ್ಲ ಕೀಲಿಸಿ ಕ್ರೀಡಿಸುತ್ತ ನಿಂದೊಡಾನು ಪೊಸ ನಲ್ಲರೊಳು ಶಿವಲಿಂಗಮೆಂದು ಎಲ್ಲರು ಪೂಜಿಸಿದರೆಂದುಂ. ಮತ್ತಮೀಶ್ವರಂ ಸರ್ವಗತನೆಂದು

ಶ್ಲೋಕ || ಸ್ಥಾವರಂ ಜಂಗಮಂ ಚೈವ ತ್ರೈಲೋಕ್ಯಂ ಸಚರಾಚರೈ
ಏಕೋದೇವ ತ್ರೀಣಿಲೋಕೇ ಪೂಜನೀಯೋ ನ ಸಂಶಯಃ ||

ಲಿಂಗಮಧ್ಯೇ ಜಗತ್ಸರ್ವಂ, ಮತ್ತಂ ಅಯೋಧ್ಯಾಪುರದೊಳ್ ತೃತೀಯ………… ಸ್ನಾನಂಗೆಯ್ದೊಂದೆಡೆಯೊಳ್ ಪವಡಿಸಿ ಒರ್ವರ ತೋಳ್ ತೊಡೆ ಸೋಂಕಿಂಗೆ ಗರ್ಭಮಾಗಿ ಭಗೀರಥ ಪುಟ್ಟಿದಂ. ಶೌರಿಪುರದ ನರಪತಿವೃಷ್ಣಿಯ ತನುಜೆ ಗಾಂಧಾರಿಯು ವ್ಯಾಸನ ಪುತ್ರ ಹುಟ್ಟುಗುರುಡನಪ್ಪ ದೃತರಾಷ್ಟ್ರಂಗರಸಿಯಾಗಿರ್ದೊಂದು ದಿನಂ ನಾಲ್ನೀರ್ಮಿಂದು ವನದೊಳ್ ಬರುತ್ತಂ ಪವಿತ್ರಮಾದ ಪನಸವೃಕ್ಷಮಂ ಕಂಡು ಆಲಿಂಗನಂಗೆಯ್ಕೆ ಗರ್ಭಮಾಗಿ ನವಮಾಸಂ ನೆರೆಯಲೊಂದು ಪನಸಫಲಮಂ ಪೆತ್ತಡದರ ಬೀಜಕ್ಕೊಂದೊಂದು ದುರ್ಯೋಧನಾದಿ ನೂರ್ವರ್ ಮಕ್ಕಳ್ ಪುಟ್ಟಿದರೆಂದುಂ

ಮತ್ತಂ ವಿಷ್ಣುವಿನನುಜೆಯಪ್ಪ ಸುಭದ್ರೆಯಂ ಅರ್ಜುನಂಗರಸಿಯಾಗಿ ಗರ್ಭಮಾಗಲಚ್ಯುತಂ ತನ್ನ ಮನೆಗೆ ಬರಿಸಿರ್ದು ರಾತ್ರಿಯೊಳ್ ಶಯನದೊಳಿರಲಾಕೆಗೆ ಚಕ್ರವ್ಯೂಹಪ್ರಸಂಗಮಂ ಪೇಳುತ್ತಿರ್ದಡೆ ಹೂಂಕೊಳುತ್ತಿರ್ದು ನಿದ್ರೆ ಬಂದೊಡೆ ಪೊಟ್ಟೆಯ ಶಿಶು ಹೂಂಕೊಳುತ್ತಿರ್ದನೆಂದುಂ. ಮಯನೆಂಬ ಋಷಿಯು ಸರಸಿಯೊಳ್ ತನ್ನ ಕೌಪೀನದ ಸ್ವಪ್ನೇಂದ್ರಿಯಮಂ ತೊಳೆಯಲಾ ಶುಕ್ಲಮನೊಂದು ಮಂಡೂಕಂ ನುಂಗಲದಕ್ಕೆ ಗರ್ಭಮಾಗಿ ಪೆಣ್ಗೂಸಂ ಪಡೆಯಲ್

ಮತ್ತೊಂದು ದಿವಸಂ ಮಯಂ ಸಂಧ್ಯಾವಂದನಾರ್ಥ ಪೋಗೆಯಲ್ಲಿರ್ದ ಪೆಣ್ಣಂ ಕಂಡು ತನ್ನ ಮಗಳೆಂದು ದಿವ್ಯಜ್ಞಾನದಿಂದರಿದು ತನ್ನಾಶ್ರಮಕ್ಕೆ ಕರೆತಂದು ಮಂಡೋದರಿಯೆಂದು ಪೆಸರಿಟ್ಟು ಸಲಹುತ್ತಿರಲೊಂದು ದಿನಮಾಕೆಯು ಸ್ನಾನಮಂ ಮಾಳ್ಪಾಗಲ್ ಮಯನ ಕೌಪೀನಮಂ ಕಟ್ಟಿಕೊಂಡೋಡುತ್ತಿರ್ದ ಇಂದ್ರಿಯಂ ಯೋನಿಯೋಳೇರಿ ಗರ್ಭಿಣಿಯಾದೊಡೆ ಮಯನರಿದು ಗಂಡನಿಲ್ಲ………..ಗರ್ಭಮಪ್ಪೊಡಾಕೆಯ ಗರ್ಭಮನೇಳುನೂರು ವರ್ಷಂಬರಂ ಸ್ತಂಭಿಸಿರ್ದೊಡೆ ರಾವಣಂ ಪಾಪರ್ದಿ ನಿಮಿತ್ತಂ ಬಂದರಣ್ಯದೊಳಿರ್ದ ತಾಪಸಶ್ರಮದೊಳಿರ್ದಾ ಕನ್ನೆಯಂ ಕಂಡು ಸೋಲ್ತು ಬೇಡಿ ಮದುವೆಯಿಂ ಲಂಕೆಗೊಯ್ದು ಸಲಹುತ್ತಿರಲಾ ಗರ್ಭ ಬಲಿದು ಇಂದ್ರಜಿತು ಪುಟ್ಟಿ ಪ್ರತಾಪಿಯಾದನೆಂದು……….ಉದ್ಧಾಂಕನೆಂಬ ಋಷಿ ತನ್ನ ಕೌಪೀನಂ ಪ್ರಕ್ಷಾಲಿಸಿ ಪಿಂಡಿದೊಡಲ್ಲಿ ಪತ್ತಿದಿಂದ್ರಿಯಂ ಕಮಲದೊ[ಳ್ ] ರಂಜಿಸುತ್ತಿರಲಲ್ಲಿಗಯೋಧ್ಯಾಪುರಪತಿ ರಘುವೀರನ ಮಗಳಪ್ಪ ಚಂದ್ರನಂ ತಿವಿಯಲ್ ಬಂದಾ ಕರ್ಣಿಕೆಯೊಳಿರ್ದ ಶುಕ್ಲಮಂ ಕಂಡಾಘ್ರಾಣಿಸಲವಳ್ಗೆ ಗರ್ಭಮಾಗಿ ನವಮಾಸಂ ನೆರೆದು ತೃಣಬಿಂದುವೆಂಬಂ ಪುಟ್ಟಿ ಜಾರಕುಮಾರನೆಂದೆಲ್ಲ ಕಾಡುತ್ತಿರಲೊಂದು ದಿನಂ………….ವಜ್ರಮತಿಯಂ ರಘುಭೂಪನಂ ಬೇಡಿ ಮದುವೆಯಾದನೆಂದುಂ

ಮತ್ತಂ ರಾಮನರಸಿಯಂ ರಾವಣಂ ಕೊಂಡುಪೋಗೆ ರಾಮಂ ರಾವಣನ ಮೇಲೆತ್ತಿಪೋಗಲು ಕಡಲ ದಾಂಟಲಶಕ್ಯಮಾಗಿರಲು ಕಪಿಗಳದ್ರಿಗಳಂ ಕಿತ್ತು ಪೊತ್ತು ಬಂದು ಸಮುದ್ರಕ್ಕೆ ಸೇತುಗಟ್ಟಿದರ್.

ಶ್ಲೋಕ || ಏಕೇತೇ ಮಮಬಾಹುರಃ ಸುರಪತೇ ದೋರ್ದ …………….. ಡೂಹರಾ
ಸೋವ…………………… ಜಗತ್ಪರಾಶರನಕರೋ ಲಂಕೇಶ್ವರೋ ರಾವಣಃ ||
ಸೇಕುಂಭಶ್ವಮಿದುಂ ಶ್ರುಣಾಮಿ ಕವಿಭಿಃ ಪಶ್ಯಾಮಿ ಲಂಕಾ
ಪೃಥಾ ಜೀವದ್ಭಿಸ್ತುವಪಶ್ಯತೇ ಕಿಮದವಾಕಿಲ ವಾನ……………….ಯತೇ ||

ರಾವಣಂ ಮುನ್ನ ಸಂಚರಿಸುತ್ತಿರ್ದಲ್ಲಿ ಕೈಲಾಸಗಿರಿಯಂ ಕಂಡಿದಾವುದೆನೆ ಇದು ಕೈಲಾಸಗಿರಿ ಇಲ್ಲಿ ಪಿರಿಯನಪ್ಪೀಶ್ವರನಿಪ್ಪನೆನಲೆನ್ನಿಂ ಪಿರಿಯನಾರೆಂದು ಕೋಪಿಸಿ ಪುಷ್ಪಕದಿಂದಿಳಿದು ತನ್ನಿಪ್ಪತ್ತು ತೋಳ್ಗಳಿಂದಾ ಗಿರಿಯಂ ಕಿತ್ತೆತ್ತಲಾ ಗಿರಜೆಯಂಜಿ ಈಶನನಾಗಲಿಂಗಿಸಲೀಶನರಿದು ಉಂಗುಟದಿಂದೊತ್ತಿ ಮಿಡುಕಂದಂತಾಗೆ ತೋಳ್ಗಳ್ ಸಿಕ್ಕಲಂಜಿ ಈಶನಿಂ ಬಿಡಿಸಿಕೊಂಡೀತುಂ ದೊಡ್ಡವನೆಂದು ತನ್ನ ಪತ್ತು ಶಿರಮಂ ಕೊಯ್ದರ್ಚಿಸಿ ಚಂದ್ರಹಾಸಮಂ ಪಡೆದನೆಂದುಂ

ಮತ್ತಮೊರ್ವ ಪತಿಯು ಪುರುಷಮೇಘದ ರವಮಂ ಕೇಳ್ದು ಗರ್ಭಮಾಗಿ ಬರಿಯ ತಲೆಯಂ ಪೆತ್ತು ಮನೆ ಮನೆ ಪಾಲ್ಮೊಸರಿಂ ಬೆಳೆದು ದಧಿಮುಖನೆಂಬನ್ವರ್ಥಮಾಗಿಯಗಸ್ತ್ಯಂ ತೀರ್ಥಯಾತ್ರೆಗೆ ಪೋಗಲ್ ಬರಲೆನ್ನ ಗೃಹಕ್ಕಭ್ಯಾಗತನಾಗೆಂದೊಡೆ ನಿನಗೆ ಕಳತ್ರರಿಲ್ಲದುದರಿಂ ನೀನುಂ ಗೃಹಿಣಿಯಂ ಮಾಡಿಕೊಂಡು ಗೃಹಸ್ಥನಾದಲ್ಲದೆ ಆಗದೆಂಬುದು ದಧಿಮುಖಂ ತಮ್ಮ ತಾಯಲ್ಲಿಗೆ ಬಂದೆನಗೆ ಮದುವೆಯಂ ಮಾಡೆಂದು ಕಾಡಿದೊಡೊರ್ವಬಡವಂಗೆ ಸಾಲ್ವನಿತು ದ್ರವ್ಯಮಂ ಕೊಟ್ಟು ಕಿರುಗೂಸಂ ಮದುವೆಯಂ ಮಾಡಲಾಕೆ ಬೆಳೆದು ಯವ್ವನಮಾಗಿಯಾ ತಲೆಯಂ ನೆಲಹಿನೊಳಿಟ್ಟು ಪೊತ್ತು ಭಿಕ್ಷಾಟನದಿಂ ಜೀವಿಸುತ್ತಿರ್ದೊಂದೂರ ಚಾವಡಿಯೊಳಿರ್ವರ್ ಜೂಜನಾಡುತ್ತಿರ್ದರಾ ತೊಲೆಯೊಳ್ ನೆಲಹಂ ಕಟ್ಟಿ ಬೀಯಮಂ ತರಲೂರಿಗೆಯ್ದೆ ಜೂಜುಗಾರರ್ ತಮ್ಮೊಳ್ ತಾವೆ ಕಲಹಮಾಗಿಯೊಬ್ಬನ ತಲೆಯಂ ಕತ್ತಿಯಿಂ ಕತ್ತಿರಿಸಲಾ ತಲೆ ಪರಿದುಬೀಳಲಾ ಮುಂಡದೊಳೀ ದಧಿಮುಖಂ ಪತ್ತಿ ಕುಳ್ಳಿರ್ದೊಡಾಕೆ ಬಂದು ಸರ್ವಾವಯವಮಂಬಡೆದಿರ್ದ ಗಂಡನಂ ಕಂಡು ಸಂತೋಷದಿಂ ಸಮೀಪದೊಳ್ ಕುಳ್ಳಿರ್ದೊಡಾ ಜೂಜುಗಾರನರಸಿ ಬಂದು ತನ್ನ ಗಂಡನೆಂದು ವಾಗ್ವಾದಮಾಗೆ ಧರ್ಮಾಧಿಕರಣರ್ ನೆರೆದಿಂತೆಂದರ್

ವೃತ್ತ ||  ಸರ್ವೇಷು ಪಾನೇಷು ಜಲಪ್ರಧಾನಂ | ಸರ್ವೇಂದ್ರಿಯಾಣಾಂ ನಯನಪ್ರಧಾನಂ
ಸರ್ವೌಷಧೀನಾಮಶನಪ್ರಧಾನಂ ಸ…………………………….. ||
…………………….೦ಬುದರಿಂ ಶಿರಮಾರದಾಕೆಗೆ ಪತಿಯೆಂದು ನಿಶ್ಚೈಸಿದರಂ.

ಮತ್ತಂ ರಾಜಾಜ್ಞೆಯಿಂ ವಾಲಿಯಸುತಂ ರಾವಣನರಮನೆಯಂ ಪೊಕ್ಕವನಂ ನಿರಾಕರಿಸೆಯವಂ ತನ್ನ ಚಂದ್ರಹಾಸದಿನಿಕ್ಕಡಿಯಾಗೆ ಭೂಮಿಯೊಳಿರೆ ಕಂಡು ಹನುಮನಾಯೆರಡಂ ಕೂಡಿಸಿ ಪತ್ತಿಸಿ ಜೀವಂಬಡೆದನೆಂದುಂ ಮತ್ತಮುಗ್ರನೇತ್ರಂ ದುಂದುಭಿಯ ಶಿರಮನರಿದು ಗರುಡಂಗಿತ್ತಡದನಾರ್ ತಿಂದಡಂತಿರವಿರೆಯೆತ್ತಲಾ ದುಂದುಭಿಯಬ್ಬೆ ಭೀಮಸೇನನರಸಿ ಹಿಡಿಂಬೆಯ ಗರ್ಭದೊಳ್ ನೆಲಸಿ ನವಮಾಸಂ ನೆರೆದು ಮುನ್ನಂ ಪುಟ್ಟಲೆಲ್ಲರುಂ ಪೇಸಿ ಕಾಡಿನೊಳ್ ಬೀಸಾಡಿರೆ ಮುನ್ನೀ ಧರೆಗಮಲ ………………. ತಿಂದುಪಮ …….. ಪಕ್ಷೀಂದ್ರಂ ಕಚೆರಡು ತಾಪಸನ ಮುಂಡಮಂ ಕಿತ್ತಿಂ ಮದ್ದು ತೈಲ ಎಲವಗೊಡುತ್ತಂ ಪುರಕ್ಕೆ ಅಟ್ಟಿಜಮಾತೆಯ………….ನಾರೆಂದು ಕೇಳೆ ನಿನ್ನ ಮಗನೆಂದು ತನ್ನ ವೃತ್ತಾಂತಮಂ ಪೇಳೆ ಸಂತಸದಿಂ ಘಟೋತ್ಕಚನೆಂದು ಪೆಸರಿಟ್ಟರತ್ತಲ್ ಗರುಡಂ ಪರಮೇಶ್ವರನಲ್ಲಿಗೆಯ್ದಿ ನೀನಿತ್ತ ವೀರಂ ಪೆರ್ಮುಂಡದೊಳ್ ಪತ್ತಿ ಪೋದನೆನೆಯಾತಂ ಸಾಮರ್ಥ್ಯಪುರುಷ ನಾಲ್ಕು ಬನ್ನಿಧ್ವಜಮಾಗೀರೆಂಟು ನಿಯಮಿಸೆ ಬಂದುಧ್ವಮಾದನಾತಂಗುಧ್ರಜನಾಗಿ ಬಹುಕಾಲ……………ವೆಂದುಂ

ಆದಿಕ್ಷತ್ರಿಯನೀಶ್ವರನಂ ಬೇಡಿದಂದು ಪಿಂಡಮನಿರ್ವರ್ ಪೆಂಡಿರ್ಗೆ ಪಚ್ಚು ಗೊಟ್ಟೊಡೋರೋರ್ವರ ಅರ್ಧಾರ್ಧ ಶರೀರಮಂ ಪೆತ್ತು ತಿಪ್ಪೆಯೊಳಿಡಲಿಂದ ಜರೆಯೆಂಬಳ್ ಸಂಧಿಸಿದೊಡೆ ಜರಾಸಂಧನಾಮದಿಂ ಭೀಮನೊಳ್ ಕಾದಿ ಭಿನ್ನನಾದೊಡಂ ಪತ್ತಿ ಬಂದಿರಿಯಲ್ ಸೀಳಿದೊಡಂ ಮತ್ತೆ ಪತ್ತಿ ಮತ್ತೆ ಭೀಮನೊಳ್ ಕಾದಿದನೆಂದುಂ…………..

ಇಂತನೇಕಾನೃತಮಾಗಿ ಪುರಾಣಮಂ ಕಲ್ಪಿಸಿ ಪಾಂಡುಪುತ್ರ್ ಪೆಣ್ಣ ತಂದವೆಂದು ತಾಯಿಗೆ ಪೇಳೆ ಪಂಚುಗೊಳಿಮೆನಲ್ ಐವರು ದ್ರೌಪದಿಗೆ ಗಂಡನಾಗಿದ್ದು ಕರ್ಣನಂ ಬಯಸಿರ್ದಳೆ ತಮ್ಮ ಅನೇಕಮಂ ಕಲ್ಪಿಸಿ ಮಾಳದ ಪಕ್ಷದೊಳ್ ಬ್ರಾಹ್ಮಣರುಂಡೊಡೆ ಕೊಟ್ಟವರ ಪಿತೃ ಪಿತಾಮಹರ್ಗೆ ಬಸುರು ತುಂಬಿ ತೃಪ್ತಿಯಪ್ಪುದು.

ಸೂತ್ರ || ಕುಯೋನಿ ಜಾನಾಂ ಮಧು ಮದ್ಯ ಮಾಂಸಂ
ತದಾನ ಮೈಯಾಂಚ ತಥಾ ಪರೇಷಾಂ
ಪ್ರಣೀತ ಚಕ್ರಧರಂ ಸುಭೌಜ್ಯಂ
ಸ್ಥಲೇನೃತೇ ಭೋಗಯವಸ್ಥಿತಾನಾಂ ||

ವೃತ್ತ ||  ಕದನ್ನಮೈಯಾಂ ವಿಧಿತಪ್ರಣೀಯಾ
ಕದನ್ನಮೈಯಾಂ ವಿಧಿತಸ್ಥವಿಪ್ರಾ
ತಸ್ಮಾತ್ ಪ್ರಜಂತು ಭೇದಾ ಪ್ರಿಯಃ
ನದ್ರವ್ಯ ಮಾಲ್ಯಾದಿಪು ನೈಕ ಕಾಮಃ ||

ಸಾಯುಜ್ಯಮಾಯಾತಿ ಪುರೇಣ ಪುಂಸಾಂ
ಯೋಗಾಸ್ಥಿತಾಯೇ ಪಿತರ ಪ್ರಬುದ್ಧಾ
ಕ್ವಚಿದಿವಂ ದಿವ್ಯ ಮನುಷ್ಯಬಾಧಂ
ಪತಂತ್ರಿ ಯದ್ವಾಪಿಸಿದಂ ನಭುಕ್ತಿಂ
|| (?)

ಆ ಪಿತೃಗಳ ತೃಪ್ತ್ಯರ್ಥಮಾಗಿ ಜಲಚರ ಸ್ಥಳಚರ ಖಚರಂಗಳೆಂದೀ ತ್ರಿಚರಂಗಳ ಮಾಂಸಮಂ ಪಂಚಭಕ್ಷ್ಯಹಿತ………………….[ಬ್ರಾ]ಹ್ಮಣರ್ಗಿಕ್ಕಲ್‌ತನಗಿಹಪರಸುಖ ವಪ್ಪುದೆಂದುಂ

ಪೂರ್ವದೊಳ್ ರಾಮಾದಿಕ್ಷತ್ರಿಯರುಂ ಮರೀಚಿ ಮೊದಲಾದೆಲ್ಲ ಋಷಿಗಳುಂ ಬ್ರಾಹ್ಮಣಾದಿಗಳೆಲ್ಲಾ ಮಾಂಸಾಹಾರದೊಳೆ ಬದುಕಿದರದರಿಂ ಸಪ್ತ್ಯವ್ಯಸನದಿಂ ಪಾಪಮಿಲ್ಲ……….ರ್ಥದಿಂ ಕಾಮ್ಯಾರ್ಥಂ ಲೋಭಾರ್ಥದಿಂ ಶರೀರಪೋಷಣಾರ್ಥದಿಂ ಜೀವಘಾತಮಂ ಮಾಡಲಕ್ಕುಂ ಸ್ವಪರಹಿತಾರ್ಥಂ ಪುಸಿಯಂ ನುಡಿಯಲ್‌ಮೂರು ದಿನದ ಗ್ರಾಸಮಂ ಕದ್ದಡಂ, ಪುತ್ರಾರ್ಥ ಪರದಾರಸಂಗಮಂ ಮಾಳ್ಪುದೆಂದ ವೇದ ಪುರಾಣದೊಳ್ ಪೇಳಿ ‘ಆಪತ್ಕಾಲೇ ನಾಸ್ತಿ ಮರ್ಯಾದಾ’ ಎಂದು ತನ್ನ ಮಾತಾ ಪಿತೃ ಬಂಧು ಮೊದಲಾದಿಷ್ಟಜನರಂ ತನ್ನಾಪತ್ತಿನೊಳೆ ದಾಕ್ಷಿಣ್ಯಮಿಲ್ಲದೆ ಬಾಧಿಸಲಕ್ಕುಮೆಂದಿಂತು ವಿಪರೀತಾಗಮಮಂ ಪ್ರಕಟಿಸಿ ಬ್ರಾಹ್ಮಣರನೋದಿಸೆ ಎಲ್ಲರು ಎಲ್ಲರು ಒಪ್ಪಿದರಲ್ಲಿ ಕೆಲರ್ ಪಾಪಭೀರುಗಳ್ ಮದ್ಯಮಾಂಸಸೇವನೆಗಸಹ್ಯರಾಗಿ ಬಿಟ್ಟಿರ್ದರಾಗಳ್ ಜಿನಮತಕ್ಕಿತರಮಾಗಿ ರಚಿಸಿದ ವೇದಪುರಾಣಮೆಂತು ಒಪ್ಪುವುದು. ಪೂರ್ವವೇದದೊಳ್ ಜಿನಸ್ತವಮನನೇಕರೊಳಿಪ್ಪುದವೆಂತೆಂದೊಡೆ

ವೇದವಾಕ್ಯ || ಅರ್ಹಂ ಭಜೇ ರುಷಿಸಾಯಂತಾಗಿಳನಾನರ್ಹನ್‌ನಿಷ್ಕಯಜತಾ ವಿಶ್ವರೂಪಂ
ಅರ್ಹನ್‌ನಿದಂ ದಯಸೇ ವಿಶ್ವಮದ್ಭುತಂ ಸಯಾಂಕಾಜಿಯಾತ್‌ರುದ್ರಸತ್ವಂಮಸ್ತಿ ||

ಎಂದಿದಾದಿಯಾದ ಜಿನಸ್ತುತಿಯುಂಟಪ್ಪುದರಿಂದಾರ್ಹತ ವಾಕ್ಯಮಂ ಮೀರಿದ ವೇದ ಪುರಾಣಂ ಕುಮತಿಯಿಂ ಪುಟ್ಟಿದ ಕುಕೃತಿಗಳಲ್ಲದೆ ಪ್ರಮಾಣಮಲ್ಲೆಂದು ಪೇಳ್ದರಾಗಳ್ ಅಷ್ಟಾದಶಪುರಾಣಂಗಳಾದವಲ್ಲಿ ಭಾಗವತದ ಸಂಭವಪರ್ವದ ಕಥೆ ಸಂಕ್ಷೇಪಮೇನೆಂದೊಡೆ ನೈಮಿಷಾರಣ್ಯದೊಳಿರ್ದ ಶೌನಕಾದಿ ಋಷಿಗಳ್ಗೆ ಸೂತನೆಂಬ ಪೌರಾಣಿಕಂ ಬಂದು ಹೇಳಿದ್ದು ಮುನ್ನಾ ಪ್ರಳಯದೊಳ್ ವೇದಂಗಳೆಲ್ಲಂ ಪೋಗಿರ್ದವು. ಕಡೆಯೊಳ್ ಬ್ರಹ್ಮ ಎಮ್ಮ ವ್ಯಾಸಂಗೆ ಪೇಳೆಂದು ನಿಯಮಿಸಿದಂ. ಕೃಷ್ಣಂ ಭೂಭಾರಮನಿಳುಹಲೋಸುಗ ವಾಸುದೇವಂಗೆ ಮಗನಾಗಿಪ್ಪನಾ ಭಾರತವ ಕೇಳೆಂದು ಮಾಳ್ದೆಯೊಳ್ ಲೋಕಾನುಗ್ರಹಾರ್ಥಮಾಗಿ ಪಂಚಮವೇದವೆಂದು ಭವಿಷ್ಯೋತ್ತರ ಪುರಾಣಮಂ ರಚಿಸಿ ತನ್ನ ಶಿಷ್ಯರ್ ಎಲ್ಲಾ ವೈಶಂಪಾಯನ ಜಯಿಮಿನಿಯರ್ಗೆ ನಾಲ್ಕು ಪ್ರತಿಯಾಗಿ ಬರೆಯಿಸಿ ದೇವಲೋಕಕ್ಕಂ ಪಾತಾಳಲೋಕಕ್ಕಂ ಬ್ರಹ್ಮಲೋಕಕ್ಕಂ ಜೈಮಿನಿಕುಲರಕಿನಾವರೆರಗಿದರಿಂ ಕಳುಹಿಸಿ ಜನಮೇಜಯಂಗೆ ವೈಶಂಪಾಯನನ ಕೈಯೊಳೊಂದಂ ಕಳುಹಿಸಲಲ್ಲಿ ಕೇಳಿದೆನೆಂದು ಸೂತಂ ಶೌನಕಾದಿಗಳ್ಗೆ ಪೇಳ್ದಂ.

ಆ ಕಥಾಪ್ರಾರಂಭ ತ್ರೈತಾದ್ವಾಪರಸಂಧಿಯೊಳಾದಿಪುರುಷನಾದ ಪರಶುರಾಮಂ ಕುರುಕ್ಷೇತ್ರದೊಳಿಪ್ಪತ್ತೊಂದು ವೇಳೆ ಕ್ಷತ್ರಿಯರುಂ ಕೊಂದೊಡವರ ರಕ್ತವೈದು ಮಡುವಾಗಿ ಹರಿದೊಡವರೊಳ್ ಮುಳುಗಿ ಕೋಪಮುಂ ಶಾಂತಮಾಗಲಾ ಮಡುವಿಂಗೆ ಶಮಂತಪಂಚಕಮೆಂದಾದವು. ಆ ನದಿಯಲ್ಲಿ ಮಿಂದು ಪಿತೃದೇವತೆಗಳ್ಗೆ ಪಿಂಡತಿಲೋದಕಂಗೊಟ್ಟಧೋಲೋಕದೊಳಿರ್ದ ತನ್ನ ಪಿತೃದೇವತೆಗಳನೂರ್ಧ್ವಲೋಕಕ್ಕೆ ಕಳುಹಿದನು. ಆ ನದಿಗಳಲ್ಲಿ ಪರೀಕ್ಷದ್ರಾಜನ ಮಗಂ ಜನಮೇಜಯಂ ಸತ್ರಯಾಗಮಂ ಮಾಡಿ ಮಗಳ್ಗೆ ಸಾಲ್ವನಿತು ದ್ರವ್ಯಮಂ ಕೊಟ್ಟು ಹಸ್ತಿನಾಪುರಿಗೆ ಬಂದು ಸಂಘೆಯೆಂದ ಮಾತಂ ನೆನೆದು ಪೌರೋಹಿತಕ್ಕೆ ಋಷಿಗಳಾರುಂ ಬಾರದಿರೆ ಸೋಮಶ್ರವನರ್ಥಾಪೇಕ್ಷೆಯಿಂ ಬಂ…….. ಬ್ರಹ್ಮತೇಜಸ್ಸು ಕ್ಷತ್ರಿಯತೇಜಸ್ಸನುಂಟುಮಾಡಿ ಪೋಗೆ ಜನಮೇಜಯಂ ಸುಖವಿರ್ದನಾ ಕಾಲದೊಳು ಬೈದಋಷಿಯುದಂಕಂಗೆ ಸಕಲ ವೇದಮಂ ಕಲಿಸಿ ಪೋಗಿ ಬದುಕೆಂದೊಡಾತಂ ಗುರುದಕ್ಷಿಣೆಗೊಟ್ಟಲ್ಲದೆ ಪೋಗೆನು ನಿನ್ನಷ್ಟಮಾವುದೆನಲಾ ಬೈದನ ಸ್ತ್ರೀಯು ತಾನು ನಾಲ್ನೀರ ಮಿಂದ ಹೊತ್ತಿಗೆ ಪೌಷ್ಯನ ಪೆಂಡಿತಯ ಕುಂಡಲವಮಂ ತಂದುಕೊಟ್ಟರೆ ಕೃತಕೃತ್ಯನಪ್ಪೆಯೆನಲುದಂತನು ಪೌಷ್ಯನಪಟ್ಟಣಕ್ಕೆಪೋಪ ದಾರಿಯೊಳೊಂದು ವೃಷಭಂ ಸಗಣಮನಿಕ್ಕಲದಂ ಭಕ್ಷಿಸಿ ಬಾಯ್ದೊಳೆಯದೆ ಪೋಗಲಾಕೆಯಶುಚಿಗಳ್ಗೆ ಕಾಣಿಸಿಕೊಳದಿರೆ ಆಚಮನಂಗೈದಾಕೆಯಂ ಕಂಡುಬಪ್ಪಲ್ಲಿ ಭೋಜನಂ ಮಾಡಿಸಲೊಂದು ತಲೆಯನದಿರನ್ನದೊಳಿರೆ ನೀನಂಧಕನಾಗೆಂದು ಶಾಪಂಗೊಡಲ್‌ನೀ ನನ್ನಪತ್ಯನಾಗೆಂದಾ ಪೌಷ್ಯಂ ಪ್ರತಿಶಾಪಮನಿಕ್ಕೆ ಕುಂಡಲಮಂ ತರುವಲ್ಲಿ ಮಾರ್ಗದೊಳ್ ತಕ್ಷಕನೆಂಬ ಕಾಳೋರಗ ಕೊಂದು ಭೂವಿವರದೊಳ್ ಪಾತಾಳಲೋಕಕೆಯ್ದಲಾ ಉದಂತಂ ಶೇಷ ವಾಸುಕಿ ಮೊದಲಾದಷ್ಟಕುಲನಾಗಂಗಳಂ ನುತಿಸುತಿರಲವರ್ ಪ್ರಸನ್ನರಾಗದಿರೆ ಒಬ್ಬ ದಿವ್ಯಪುರುಷನೊಂದು ಕುದುರೆಯನೇರಿಬಂದು ದುಷ್ಟರಾದರ್ಗೆ ದುಷ್ಟ ತನಮಂ ತೋರಬೇಕೆಂದು ಪೇಳಿ ನಾನೇರಿದ ಕುದುರೆಯ ಕಿವಿಯನೂದೆನಲ್‌ಉದಲದರ ಪೃಷ್ಟದಿಂ ಪ್ರಳಯಕಾಲದಗ್ನಿ ಹೊರಟು ಪಾತಳಮಂ ಸುಡೆ ತಕ್ಷಕನಂಜಿ ಕುಂಡಲ ಮೊದಲಾಗಿ ತಾನಾ ಕುದುದರೆಯನೇರಿ ಪಾತಾಳಲೋಕಕೆಯ್ದಲಲ್ಲಿ ಆಕಾಶದೊಳೊಂದುಪ ಅಧ್ಯಾಯ ಕೆಲದಿವೋಪಾಗ್ನಿ ಒಂದು ಕಡೆಯತಿಧಾವಲ್ಯವಾಗಿರಲಾ ಪಟವನಾಶ್ರಯಿಸಿಪ್ಪಿರ್ವರ್ ಸ್ತ್ರೀಯರ್ ಸುತ್ತಲು ಹನ್ನೆರಡು ಚಕ್ರಮನರುವತ್ತುಮೂರರಕಂಬಮದೆಲ್ಲಮಂ ಬೈದಋಷಿಗೆ ಹೇಳಿ ತತ್ಪತ್ನಿಗೆ ಕುಂಡಲಮಂ ಕುಡೆ ಬೈದನೆಂದಂ ನೀ ಕಂಡ ವೃಷಭನೈರಾವತ ಮೇಲೇರಿರ್ದನಿಂದ್ರ ಸಗಣಮೇಲಮೃತಸಿತಾಷ್ಠಿತ ಪಟ ಶುಕ್ಲ ಕೃಷ್ಣಪಕ್ಷಂ ಅಹೋ ರಾತ್ರಿ ಸ್ತ್ರೀಯರ್ ಧಾತೃ ವಿಧಾತೃಗಳ್ ಚಕ್ರಂಗಳು ಮಾಸಂಗಳು ಷಟ್ಕುಮಾರರೆ ಭಟರುಗಳು ಕುದುರೆ ಅಗ್ನಯನೇರಿದಂ ಪರ್ಜನ್ಯನು ಆ ಇಂದ್ರನು ತನ್ನ ಸಖನೆಂದು ಬೈದಋಷಿ ಪೇಳಿ ಬೀಳ್ಕೊಂಡು ಪೋಗಿ ಉದಂತಕನನೇಕ ಕಾಲ ತಪಂಬಟ್ಟಿರ್ದು ತಕ್ಷಕಂ ತನಗೆ ಮಾಡಿದಪಕಾರಮಂ ನೆನೆದು ಜನಮೇಜಯನಲ್ಲಿಗೆ ಬಂದು ಎಲೆ ರಾಜಾ ನಾನು ಗುರುಪತ್ನಿಯ ಬಯಕೆಯಂ ಸಲಿಸಲು ಪೌಷ್ಯನಪತ್ನಿಯ ಕುಂಡಲಮಂ ತರುವಲ್ಲಿ ತಕ್ಷಕವೆಂಬ ದುಷ್ಟೋರಗನೆನ್ನನನೇಕ ತೆರದಿಂ ಪರಿಭವಿಸಿದಂ. ನಿನ್ನ ತಂದೆಯಪ್ಪ ಮಹಾಚಕ್ರೇಶ್ವರಂ ಪರೀಕ್ಷಿದ್ರಾಜಂಗೆ ಬ್ರಾಹ್ಮಣಶಾಪನಿಮಿತ್ತ ಸರ್ಪಕಂಟಕಮಾದೊಡೆ ಸಮುದ್ರಮಧ್ಯದೊಳ್ ಕಾಪಿರಿಸಿ ಈ ಮಹಾಋಷಿಗಳ್ ಮಂತ್ರದಿಂ ಪರಿಹರಿಸಲ್‌ಬಂದು ತಕ್ಷಕಂಗೆ ಸಾಮರ್ಥ್ಯಮಂ ಕೊಡಲವರಂ ಮಾಣಿಸಿ ಇಂದ್ರವಾರುಣಿ ಪಣ್ಣಿನೊಳ್ ಸೂಕ್ಷ್ಮರೂಪನಾಗಿ ಪೋಗಿ ಕೊಂದನದರಿಂ………ಕುಲಮೆಲ್ಲಂ ಕೆಡುವಂತೆ ಸರ್ಪಯಾಗಮಂ ಮಾಡೆಂದು ಪೇಳ್ದನದರಿಂ ಯಜ್ಞಮಂ ತೊಡಗಿದನೆನ್ನಲು ಅಗ್ನಿದೇವರಿಗೆ ಸರ್ವಭಕ್ಷತ್ವಮ ಬಂದುದೆಂತೆಂದೊಡೆ ಬ್ರಹ್ಮದೇವರ ಹೃದಯದಲ್ಲಿ ಪುಟ್ಟಿದ ಭೃಗುಮಹಾ ಋಷಿಯು ತನ್ನ ಸ್ತ್ರೀಯೊಡನೆ ತಪಂಗೆಯ್ಯುತ್ತ ಮಹಾಟವಿಯೊಳಿರ್ದು ಒಂದು ದಿನಂ……………..ಅನುಷ್ಠಾ………..ಪೋಗಿ ಬರ್ಪಿನಮಗ್ನಿ ಹೋತ್ರ ಗೃಹಮನಲಂಕರಿಸಿಯಗ್ನಿಯಂ…………………..ನೋಡೆಂದು ಪೇಳಿ ಪೋಗಲಂತಿಪ್ಪುದುಂ ಪೌಲೋಮನೆಂಬ ರಾಕ್ಷಸಂ ಮಾರ್ಗ ಬರುತ್ತಾಕೆಯಂ ಕಂಡು ಸೋಲ್ತು ಅಗ್ನಿಯಂ ಕರೆದೇಕಾಂತದಿಂದೀಕೆ ಯಾರಿವಳ ಪೆಸರೇನೆಂದೊಡೆ ತಾನು ಕರ್ಮಸಾಕ್ಷಿಯಪ್ಪುದರಿಂದ ಸತ್ಯಮನಾಡಲಾಗದೆಂದಿರ ಭೃಗುಮಹಾಋಷಿ ಪತ್ನಿ ಪುಲೋಮೆಯಂ……..ಪುಲೋಮನಿವಳ್ ಪೌಲೋಮೆಯೆಂದು ಸೂಕರಾಕಾರದಿಂದಾಕೆಯಂ ಕೊಂದು ಪೋಗಲವಳ್ ಪನ್ನೆರಡು ವರ್ಷದ ಗರ್ಭಿಣಿಯಾಗಿರ್ದೊಡಾಕೆಯ ಗರ್ಭದರ್ಭಕಂ ಸಕಲ ವೇದಶಾಸ್ತ್ರಸಂಪನ್ನನಾಗಿರ್ದು ತಾಯ ಕಣ್ಣ ನೀರು ಮಹಾ ನದಿಯಾಗಿ ಹರಿದೊಡಾಗಳೆ ಪೊಟ್ಟೆಯೊಳಿರ್ದ ಬಾಲಕಂ ಕೊಂದಿಂದಾಕೆಯ ಬಾಯಿಂದಂ ಭೂಮಿಗೆ ದುಮುಕೆ ತನ್ನ ಕರದಿಂ ಪುಲೋಮನಂ ಭಸ್ಮ ಮಾಡಲಾಕೆಯು ಪುತ್ರರಹಿತಂ ಪರ್ಣಶಾಲೆಗೆ ಬಂದಳಿತ್ತಲಾಕೆಯ ಕಣ್ಣನೀರ ನಂದಿಯಂ ಸತ್ಯಲೋಕದಿಂ ಬ್ರಹ್ಮಂ ಬಂದು ಚೆನ್ನಾಗಿ ಮಿಂದು ಆ ನದಿಗೆ ಮಧೂಸರೆಯೆಂದು ಪೆಸರಿಟ್ಟು ಪೋದನಿತ್ತ ಭೃಗು ಋಷಿ ಕಂದಮೂಲಪತ್ರಾದಿಗಳಂ ಕೊಂಡುಬಂದು ಮಗನಂ ಕಂಡು ಸಂತೋಷದಿಂ ಪೆಂಡತಿಯಂ ನುಡಿಸೆ ದುಗುಡದಿಂ ತನ್ನ ಪೋದ ಬಂದ ವೃತ್ತಕಮಂ ಪೇಳ್ದು ಅಗ್ನಿ ದೇವರು ಪುಲೋಮೆಯೆಂದು ಪೇಳ್ದುದಕ್ಕೆ ಕೋಪಿಸಿ ನೀನು ಮಹಾಕ್ರೂರನು ಸರ್ವ ಭಕ್ಷಕನಾಗಿ ಪೋಗೆಂದು ಶಾಪಂಗುಡಲಗ್ನಿಯು ನಾನು ಪ್ರತಿಶಾಪಂಗುಡಲರಿಯದನಲ್ಲ ಬ್ರಹ್ಮದೇವಂಗಂಜುವೆ ನಾನು ಕರ್ಮಸಾಕ್ಷಿಯಾದುದರಿಂ ಸತ್ಯಮಂ ನುಡಿದೊಡಿಂತಾಯಿತೆಂದು ಚಿಂತಿಸುತ್ತಿರೆ ಬ್ರಹ್ಮಂ ಬಂದು ಅಗ್ನಿಯನ್ನುರಿಸಿ ನಿನ್ನಿಂದಲೆ ಲೋಕಂ ಬದುಕುವುದಲ್ಲದೆ ನಿನ್ನ ಮುಖದಿಂದೆ ಪಡೆವಳು(?) ಪಿತೃದೇವರು ಹವಿರ್ಭಾಗಂಗೊಂಡು ತೃಪ್ತರಪ್ಪರ್. ಭೃಗುಋಷಿಯ ಶಾಪಮಮೋಘಂ ನೀನು ಸರ್ವಭಕ್ಷಕನಾಗಿಯು ಪರಮಪಾತ್ರನುಂ ಪೂಜ್ಯನುಂ ಎಲ್ಲಾದೇವರೊಳಧಿಕನುಂ ಎಂದು ವರಮಂ ಕೊಟ್ಟಿತು.

ಅಲ್ಲದೆ ಯಮಪತ್ನಿಯಪ್ಪ ಛಾಯೆಗೆ ಸೋಲ್ತು ವಾಯುವಂ ಒಡಂಬಡಿಸಿ ಕೂಡುವಾಗ ಯಮಂ ಬಂದೊಡೆಯಾಕೆ ನುಂಗಲು ಛಾಯೆಯನಾ ಯಮಂ ನುಂಗಿದೊಡಾತನ ಪೊಟ್ಟೆಯೊಳಗ್ನಿಯನುಗುಳಿ ಕ್ರೀಡಿಸುತ್ತಿರ್ದಡೆ………ಯಿಲ್ಲದೊಡೆಲ್ಲಾ ನೆರೆದು ಯಮನಿಂ ಛಾಯೆಯ ಮರಳಿಸಿಯಾಕೆಯಿಂದಗ್ನಿಯನುಗುಳಿಸುವಂದು ಸ್ತ್ರೀಯರ ಗಡ್ಡಮೀಸೆಯಗಳು ಪೋದವು. ಆಗಳ್ ಕಾಲಂ ದಂಡಮನೆತ್ತಿ ಕೊಂಡಟ್ಟಲವಂ ಬರೆ………ರುವಿನ.ತ್ರ ಭೃಗುಸುತಂ ಚ್ಯವನನಾತನ ಸುತಂ ಪ್ರಮಿತಿಯಾತನ ಪುತ್ರಂ ಋರುವೆಂಬ ಮಹಾಋಷಿಯು ಸ್ಥೂಲಕೇಶನಾಶ್ರಮದೊಳ್ ವಿದ್ಯಾಭ್ಯಾಸಂ ಮಾಳ್ಪಾಗಲಾ ವಿಶ್ವಾ …………….ಬೆಳೆಯುತ್ತಿರೆಯಾಕೆಯೊಳತಿಪ್ರೀತಿಯಾಗೆ ರುರುವೆಂಬನು ಮದುವೆ ಯಾಗಿರಲಾಕೆ ಸರ್ಪದಷ್ಟದಿಂ ಸಾಯಲಾರರು ಅತ್ಯಂತ ದುಃಖಿತನಾಗಿ ತ್ರಿಮೂರ್ತಿಗಳ್ಗೆ ಮೊರೆಯಿಟ್ಟಾರಾದರು ತನ್ನ ಸತಿಯ ವಿಷವಂ ಕಳೆದೊಡೆ ತಾನುಮಾ ……………ದಿರೆ ತನ್ನಾಯುಷ್ಯದೊಳಾಕೆಗೆ ಅರ್ಧಾಯುಷ್ಯಂಗೊಟ್ಟೆಬ್ಬಿಸಿ ಕಾಲದಂಡೋಪಮದಂಡವಂ ಕೊಂಡ………….ಯೊಳೆಡೆಯಿಲ್ಲದೆ ದಿನಂಪ್ರತಿ ಎಲ್ಲಾ ಭೂಮಿಯೊಳುಳ್ಳ ಸರ್ಪಜಾತಿಗಳೆಲ್ಲಮಂ ಕೊಲ್ಲುತ್ತ ಬಹಳ ದಿನಂ ಚರಿಸುತಿರ್ದೊಂದು ದಿನಂ ………….ಪಾಂತು ನಾನು …………..ಮುಖ್ಯನೆಂದೆನೆ………..ಖಗಮುಖ್ಯಂವೆರಸಿ ಅಗ್ನಿಹೋತ್ರಂ ಮಾಳ್ಪಲ್ಲಿ ಹಿಂದಳಿಂದಾ ದರ್ಭೆಯಂ ಹಾವೆಂದಾತನ ಮೇಲಿಟ್ಟೊಡಾತಂ ಬೆದರಿನೋಡಿ ಕೋಪಿಸಿ ಇತ್ತಲೆ ಹಾವಾಗೆಂದು ಶಾಪಮನಿಕ್ಕಿದೊಡಂ ಬೇಡಿಕೊಂಡೊಡೆ ಭೃಗುವಂಶದ ರುರುವೆಂಬನಂ ಕಂಡಾಗ ವಿಮೋಚನಮೆಂದದರಿಂದೆನಗೆ ವಿಶಾಪಮಾಯ್ತು. ನೀನೀ ಅಪಕೃತ್ಯಮಂ ಬಿಟ್ಟು ಕಳೆ ಬ್ರಾಹ್ಮಣನಾಗಿ ರುರು ಅಪಕೃತ್ಯಮಪ್ಪ ದುರಾಚಾರದೊಳ್ ತಡೆಯಲಾಗದೆಂದು ಸರ್ಪಂಗಳೆಲ್ಲವು ಜನಮೇಜಯನ ಯಜ್ಞದೊಳ್ ಸಂಹಾರವಪ್ಪದೆಂದು ಸರ್ಪವಧೆಯಂ ಬಿಡಿಸದನೆಂಬ ರುರುಚರಿತಮಂ.

ಮತ್ತಂ ಕಶ್ಯಪಪ್ರಜಾಪತಿಯು ಪಲಕಾಲಂ ತಪಸ್ಸುಮಾಡಿ ದಕ್ಷಪ್ರಜಾಪತಿಯ ಮಕ್ಕಳಪ್ಪ ಪದಿಮೂರು ಸ್ತ್ರೀಯರಂ ಪರಿಣಯಮಾಗೆ ಪನ್ನೆರ್ವರ್ ಪೆಂಡಿರ್ಗೆ ಮಕ್ಕಳಾದವು. ವಿನತೆಗು ಕದ್ರುವೆಗು ಮಕ್ಕಳಿಲ್ಲದಿರೆ ಪುರುಷನ ಸೇವೆಗೆಯ್ದು ಮೆಚ್ಚಿಸಿ ಮಕ್ಕಳಂ ಬೇಡಿಕೊಂ[ಡೊ]ಡಾತ ಕರುಣದಿಂ ಕದ್ರುವೆಗೆ ಸಾಸಿರ ಪುತ್ರರಂ ವಿನತೆಗಿರ್ವರಂ ಕೊಡುವೆನೆಂದು ವರಮಂ ಕೊಟ್ಟು ಪುತ್ರಕಾಮೇಷ್ಠಿಯಂ ಮಾಡೆಲ್‌ಎಲ್ಲಾ ಋಷಿಗಳಂ ದೇವರ್ಕಳಂ ಮನುಷ್ಯರಂ ಬರಿಸಿ ತಾನು ಮಾಳ್ಪ ಯಜ್ಞಕ್ಕೆ ಸಹಾಯವಾಗಿ ದ್ರವ್ಯಮಂ ಕುಡುವುದೆನಲೆಲ್ಲರ್ ಕೊಟ್ಟರ್. ಅಂಗುಷ್ಠಪ್ರಮಾಣ ದೇಹಿಗಳಪ್ಪ ವಾಲಖಿಲ್ಲ ಮಹಾ ಋಷಿಗಳ್ ವೃಕ್ಷದೊಳ್ ತಲೆಕೆಳಗಾಗಿ ಸೂರ್ಯಕಿರಣಮನಾಹಾರಂಗೊಳುತ್ತಿರ್ದ ನಾಲ್ವರ್ ಮುನಿಗಳ್ ದರ್ಭೆಯಂ ತಲೆಯೊಳಿಟ್ಟುಕೊಂಡು ಅರ್ಥವಿಲ್ಲದೆ ನಡುಗುತ್ತಂ ಬಪ್ಪುದಂ ದೇವೇಂದ್ರಂ ಕಂಡು ನಗುವುದಂ ಎಲೋ ಇಂದ್ರ ನೀನು ಕಶ್ಯಪಂಗೆ ಮಗನಾಗಿ ಪುಟ್ಟೆಂದು ಶಾಪಮನಿಕ್ಕಿದೊಡಂ ಪುರುಹೂತಂ ಭಯಂಗೊಂಡು ಶಾಪಮಂ ಮರುಳ್ಚುವುದೆಂದು ಬೇಡಿಕೊಂಡಡೆಮ್ಮ ನವನವಮೋಘ ವಾಗ್ಸೃಷ್ಟಿಗುಪಸೃಷ್ಡಿಯಂ ಮಾಡಲಾಗದೆಂಬುದು ಅತಿದೈನ್ಯದಿಂ ನಾಂ ಪುತ್ರನಾದರು ಪಕ್ಷಿಕುಲಕ್ಕಾದರು ಇಂದ್ರವಪ್ಪತ್ತೆ ಮಾಳ್ಪುದೆನೆ ಹಾಗೆ ಆಗಲಿಯೆಂದು ತಪೋವನಕ್ಕೆ ಪೋದರ್.

ಇತ್ತ ಕಶ್ಯಪ ಪ್ರಜಾಪತಿಯು ಯಜ್ಞಾಸಂಪತ್ತಿಯೊಳಿರ್ವರ್ಗಂ ಪುತ್ರಭಿಕ್ಷೆಯನಿಕ್ಕ ಲೋರೊರ್ವರೈನೂರು ವರ್ಷ ಗಬ್ಬಮಂ ತಾಳಿ ಕುದ್ರುವೆ ಸಾವಿರ ವಿನತೆ ಎರಡು ಅಂಡಂಗಳಂ ಪೆತ್ತು ಸಲಹುತ್ತಿರೆ ಸಹಸ್ರ ವರುಷಂ ಬಲಿದು ಮೊಟ್ಟೆಯೊಡೆದು ಕದ್ರುವಿಗೆ ಶೇಷ ವಾಸುಕಿ ಮೊದಲಾದ ಸಾಸಿರ ಸರ್ಪಂಗಳಾಗೆ ವನಿತೆಯು ಸೈರಿಸದೆ ತನ್ನದೊಂದು ಮೊಟ್ಟೆಯನೊಡೆಯಲ್‌ಕೆಳಭಾಗವು ಭಾರವಾಗಿರೆ ಮೊಗಮಂ ನೋಡಿ ಎನ್ನಂ ಬಲಿವನಕಂ ಇರಿಸದಾದೆ ನಿನ್ನ ಸವತಿಯಾಗೆಂದು ಶಾಪಂಗೊಟ್ಟು ಇನ್ನೊಂದರೊಳ್ ಪುಟ್ಟುವಾತಂ ಬಹುಪರಾಕ್ರಮಿಯಪ್ಪನಾತನಿಂ ಶಾಪಂ ಪಿಂಗುವುದೆಂದು ತಾನು ಸೂರ್ಯಂಗೆ ಸಾರಥಿಯಾದನಿತ್ತಲೊಂದು ದಿನಂ ವಿನತೆಯುಂ ಕದ್ರುವೆಯುಂ ಸಮುದ್ರ ಮನೆಯ್ದಿ ಅಲ್ಲಿಗೆ ಬಂದಿರ್ದ ಉಚ್ಚೈಶ್ರವಮಂ ಕಂಡದರ ಧಾವಲ್ಯಮಂ ಕಂಡು ಆಶ್ಚರ್ಯಂಬಡೆ ಕದ್ರುವೆಯದರೊಳ್ ಕಪ್ಪುಂಟೆಂದು ಪೇಳ್ದು ಇಲ್ಲದೊಡಾನು ನಿನಗೆ ದಾಸಿಯಪ್ಪೆನಲ್ಲದೊಡೆನಗೆ ನೀನು ದಾಸಿಯಾಗೆಂದು ಪ್ರತಿಜ್ಞೆಗೆಯ್ದು ಮರುದಿನಂ ಕದ್ರು ತನ್ನ ಮಕ್ಕಳಂ ಕರೆದು ಉಚ್ಚೈಶ್ರವದೊಳ್ ಕಪ್ಪಂ ತೋರಮೆನಲೆಲ್ಲರು ಪಾಪಕ್ಕಂಜಿ ಒಪ್ಪದಿರೆಲಾಕೆಯು ನೀವೆಲ್ಲರು ಜನಮೇಜಯನ ಯಜ್ಞದೊಳ್ ಸಂಹಾರಮಾಗಿಯೆಂದು ಶಾಪಂಗುಡೆ ಬ್ರಹ್ಮದೇವರರಿದು ಕಾರಣ ಸರ್ಪಂಗಳು ಮುಳಿವನೆಂತೆನೆ ಜರತ್ಕಾರು ಮಹಾಋಷಿಗಳು ಅಸ್ತಿಕಂ ಬದುಕಿಸುವನೆಂದು ಪೇಳಲಿತ್ತ ಕದ್ರುವೆಯ ಮಕ್ಕಳೊಳು ಎಲ್ಲಾಪತ್ರನೆಂಬ ಸರ್ಪಂಗೆ ದಿವ್ಯಜ್ಞಾನಂ ಪುಟ್ಟಿ ಅಸ್ತಿಕನಿಂ ಕಾರಣವಹ ಸರ್ಪಂಗಳು ಬದುಕುವ ಸ್ಥಿತಿಯಂ ಶೇಷ ವಾಸುಕಿ ತಕ್ಕಕ ಕರ್ಕೊಟಾದಿಗಳ್ಗೆ ಪೇಳಿ ಜರತ್ಕಾರು ಮದುವೆಯಾಗಿ ಮಗನಂ ಪಡೆವದಾವಗಮೆಂದು ಯೋಚಿಸುತ್ತಿರ್ದರಂತು.

ಮತ್ತಂ ತಾಯ ಶಾಪಕ್ಕಂಜಿ ಕರ್ಕೋಟಕಂ ಸೂಕ್ಷ್ಮರೂಪದಿಂ ಉಚ್ಛೈಶ್ರವದ ಪುಚ್ಚಪ್ರದೇಶದೊಳ್ ವತ್ಸಮಾಗಿರೆ ಈರ್ವರಂ ಕಂಡು ಕದ್ರುವೆಗೆ ವಿನ………………..ಶ್ರಯಿಸಿದವುರೆಸಮಲನೇಕ ದಿವ್ಯಸಂವತ್ಸರ ಬ್ರಹ್ಮನಂ ಕುರಿತು ತಪಸ್ಸಂ ಮಾಡಿ ಭೂಭಾರಮಂ ಧರಿಸಿದಂ. ಬಳಿಕಮೈನೂರು ವರ್ಷಕ್ಕೆ ಗರುಡನು ಅಂಡಮನೊಡೆದು ಬ್ರಹ್ಮಲೋಕಂ ಬ…………….. ನೀನೆನ್ನ ದಾಸಿಯ ಪುತ್ರನಾದುದರಿಂದೆನ್ನ ಮಕ್ಕಳಂ ಪೊತ್ತು ದಿನಚರಿಯೊಳನೇಕ ದ್ವೀಪ ಸಮುದ್ರ ಪರ್ವತಾದಿಗಳೊಳಾಡಿಸಿ ಬರ್ಪುದೆಂದು ನಿಯಮಿಸಲಂತೆ ಸರ್ಪಂಗಳಂ ಪೊತ್ತಾಡಿಸುತ್ತಿರ್ದೊಂದು ದಿನ …….ಸರ್ಪಂಗಳಂ ಕದ್ರು ಕಂಡು ಕೋಪಿಸಿ ಇಂದ್ರನನುಮತಿಸೆ ಮಳೆಯಂ ಕರೆಯಲಾ ಶೈತ್ಯದಿಂ ಬದುಕಿರ್ದವು ಗರುಡರು ಕದ್ರು ಕೋಪಿಸಿದುದಕ್ಕೆ ತಾಯಲ್ಲಿಗೆ ಬಂದು ನಾನು ಬ್ರಹ್ಮಾಂಡಂಗಳಂ ಪಿಡಿದೊಂದರೊಳೊಂದಂ ಕು ……………..ದಾ ಸತ್ವದೊಳಿಪ್ಪುದಕ್ಕೆ ಕಾರಣವೇನೆಂದಂ ಕೇಳ್ವುದು ವಿನತೆಯ ತನಗೆ ಅರುಣನಿಂದಾದ ಶಾಪವು ನಿನ್ನಿಂದಲೆ ಬಿಡಲುಬೇಕೆನೆ ಕದ್ರುವೆಯಲ್ಲಿಗೆ ಬಂದು ನಿನ್ನಭೀಷ್ಟವಾವುದದಂ ತಂದುಕೊಟ್ಟಪೆನೆಂದು ದಾಸಿತ್ವಮಂ ಕಳೆವು………ತಂದೀವುದೆನಲಂತೆಗೆಯ್ವೆನೆಂದು ತಾಯಲ್ಲಿಗೆ ಬಂದು ಆಹಾರಮಂ ಬೇಡಿಯವಳ್ ಪೇಳಿದಂತೆ ಹಿಮವತ್ಪರ್ವತವು ಲವಣಸಮುದ್ರವು ಕೂಡಿ ದೀಶಾನಮೂಲೆಯೊಳರುವತ್ತು ಯೋಜನದ ಕಿರಾತದೇಶದೊಳಿರ್ದ ಬೇಡಸಮೂಹವೆಲ್ಲಮಂ ನುಂಗುವಲ್ಲಿ ವ್ಯಾಧಸುತೆಯ ಕೂಡಿರ್ದ ಬ್ರಾಹ್ಮಣಂ ಗಂಟಲಂ ಸುಡಲಾತಂ ಕುಟುಂಬ ಸಹಿತಂ ಬಿಟ್ಟು ಉಲಿದೆಲ್ಲರಂ ನುಂಗಿ ಸಾಲದೆ ತಂದೆಯಪ್ಪ ಕಶ್ಯಪನಲ್ಲಿಗೆ ಬಂದು ಗ್ರಾಸಮಂ ಬೇಡೆ ವಿಭಾವಸುವು ಸುಪ್ರತೀತರೆಂಬಿರ್ವರ್ ತಂದೆಯ ಧನನಿಮಿತ್ತಂ ಪೋರಿ ನೀನು ಆನೆಯಾಗಿರು ನೀನು ಆನೆಯಾಗೆಂದೊಡೊರ್ವರ್ ಶಾಪಂಗೊಂಡು ಹಿಮವತ್ಪರ್ವತದೀಶಾನದಿಕ್ಕಿನೊಳು ಆರು ಯೋಜನದಗಲ ಹನ್ನೆರಡು ಯೋಜನದುದ್ದದಾನೆಯುಂ ಮೂರು ಯೋಜನದಗಲ ಹತ್ತು ಯೋಜನದುದ್ದಮಾಗಿ ಜಲಾಸನದೊಳನೇಕ ಕಾಲದಿಂ ವೈರದಿಂ ಕಾದುತ್ತಿದಪ್ಪವನಂ ಭಕ್ಷಿಸೆನಲಲ್ಲಿಗೆಯ್ದಿ ಭೋರ್ಗರೆದೆರಗಿಯವನೆರಡೆರಡು ಕೈಯಿಂ ಪಿಡಿದುಕೊಂಡು ಶುಚಿಪ್ರದೇಶದೊಳ್ ಬರುತ್ತಿರೆ ರೋಹಿಣಿಯೆಂಬ ವಟವೃಕ್ಷವು ಸಾವಿರ ಯೋಜನದುದ್ದಮೈನೂರು ಯೋಜನ ಶಾಖೆಯುಳ್ಳ ವೃಕ್ಷವು ತನ್ನ ಕೊಂಬಿನ ಮೇಲೆ ವಿಶ್ರಮಿಸಿ ಭಕ್ಷಿಸುವುದೆಂದು ಬೇಡಿಬಂದೊಡಂತೆಗೆಯ್ವೆನೆಂದಾ ಶಾಖೆಯನೇರಿ ಕುಳಿತೊಡಾ ಶಾಖೆ ಮುರಿಯಲದನವಲೋಕಿಸಿ ತಲೆಕೆಳಗಾಗಿ ಸೂರ್ಯಕಿರಣಹಾರದಿಂ ತಪಿಸುವ ವಾಲಖಿಲ್ಯಋಷಿಗಪಾಯಮಪ್ಪುದೆಂದಾ ಶಾಖೆಯಂ ಬಾಯೊಳ್ ಕಚ್ಚಿ ರಜಕಚ್ಛಪಂಗಳು ಸಹಾ ತಂದೆಯ ಬಳಿಗೆ ಬರೆ ಕಶ್ಯಪಂ ಮುಖಂಗಳಂ ಕಳ …….ಸಿ ಶಾಖೆಯಂ ತೊಲಗಿಸಿದೊಡಾ……. ಕಚ್ಛುಹಾರಳಂ ತಿಂದು ದೇವಲೋಕಕ್ಕೆ ಪೋಗಿ ದೇವೇಂದ್ರನೊಡನೆ ಘೋರಯುದ್ಧಂ ಮಾಡೆ ಮೆಚ್ಚಿ ಸುಪರ್ಣ ನಾಮಮಂ ಕುಡೆ ನಾರಾಯಣಂಗೆ ವಾಹನಮಾಗುವೆ ಎನಗಪರಾಧಂ ಮಾಡಿದ ಕದ್ರುವಿನ ಮಕ್ಕಳಪ್ಪ ಸರ್ಪಕುಲಮಂ ಭಕ್ಷಿಸ…….ವರಮ………..ಕೊಂಡಮೃತಕಲಶಮಂ ತಂದು ಕದ್ರುವಿಗೊಪ್ಪಿಸಲದಂ ದರ್ಭೆಯಪೀಠದೊಳಿರಿಸಲಿಂದ್ರಂ ಗರುಡಂಗಿತ್ತವರಕ್ಕೂಣಯಮಪ್ಪುದೆಂದು ಸೂಕ್ಷ್ಮರೂಪದಿಂ ಪಿಂದೆ ಬಂದಮೃತದ ಕಲಶಮಂ ಕೊಂಡು ಪೋಗಲ್‌. ಇತ್ತಲ್‌ಸರ್ಪಂಗಳೆಲ್ಲಂ ಅಮೃ……..ಸೇವಿಸಿ ಕರ್ಮಾನುಷ್ಠಾನುಂ ಮಾಡಿ ಬಂದು ನೋಡಲಲ್ಲಿ ಕಲಶಮಿಲ್ಲದಿರೆ ಕಲಶಂ ಕುಳುಕೀಳಬ್ಬೆಯ ಮೇಳಿರ್ದಮೃತದ ಪನಿಯಂ ನಾಲಗೆಯಿಂ ನೆಕ್ಕಿದೊಡದರ ಸುಂಕಿದಂ ನಾಲಗೆ ಸೀಳಿ ಎರಡಾಗಲಂದಿಂದಾ ಸರ್ಪಂಗಳು ದ್ವಿಜಿಹ್ವೆಯಾದವೆಂದು.

……………. ಜರತಾರುವೆಂಬ ಋಷಿಯ ಮದುವೆಯಾಗದೆ ಬ್ರಹ್ಮಚರ್ಯದಿಂದನೇಕ ಕಾಲಂ ಚರಿಸುತ್ತೊಂದಡವಿಯ ಪೊಕ್ಕಡಲ್ಲಿ ಒಂದು ಜೀರ್ಣಮಾದ ಮಹಾಕೂಪದೊಳೊಂದು ಗರಿಕೆಯ ಬೇರಂ ಪಿಡಿದಧೋಮುಖವಾಗಿ ತನ್ನ ಪಿತೃದೇವತೆಗ……… ಲಾ ಗರಿಕೆಯಬೇರಂ ಮೂಷಕಂಗಳ್ ಕಡಿದೊಂದು ಬೇರುಳಿದಿರಲದಂ ಜರತ್ಕಾರು ಕಂಡೀಗೊಂದು ಮಹಾತಪಸ್ಸೆಂದು ತಾನು ಮಾಳ್ಪಿನಿದತ್ಯುಗ್ರತಪಮಿದರ ಫಲವೇನು ನಾನು ಮಾಡುವೆನಿದರ ಫಲಮೇನೆಂದೊಡವರೆಂದರೆಮ್ಮ ಮಠದೊಳು ಜರತ್ಕಾರುವೆಂಬ ಮಹಾ ಪಾಪಿಷ್ಠಂ ಪುಟ್ಟಿದನಾತಂ ಮಕ್ಕಳಿಲ್ಲದೆ ಬಹುಕಾಲದಿಂ ತಪಂಗೆಯ್ವನಾತನಿನ್ನಾದರು ಮಗನಂ ಪುಟ್ಟಿಸಿದೊಡಾವೆಲ್ಲರು ಊರ್ಧ್ವಲೋಕಕ್ಕೆ ಪೋಪೆವಿಲ್ಲದೊಡಾತಂ ಸತ್ತಾಗಲೆಯಾತನೊಡನೆಲ್ಲರುಮಧೋಗತಿಯೆಯ್ದುವೆವಾ ಮಹಾಪಾಪಿಯಂ ಕಂಡರೆ ಪೇಳ್ವುದೆನೆ ನಾನೆ ಜರತ್ಕಾರುವೆಂಬೆಂ ಸಂಸಾರಂ ಪೊಲ್ಲದೆಂದಿಷ್ಟುದಿನಂ ಬ್ರಹ್ಮಚರ್ಯದೊಳಿರ್ದೆನೀಗಲೋ ನೀವು ಪುತ್ರರಿಲ್ಲದವರ್ಗೆ ಪರಲೋಕಮಿಲ್ಲೆಂದುದರಿಂದಂತೆ ಮಾಳ್ಪೆನೆಂದು ತನ್ನ ಪೆಸರಿನ ಜರತ್ಕಾರಿಯೆಂಬ ಸ್ತ್ರೀಯಂ ಪರಿಗ್ರಹಿಸಿಲು ಸ್ವರ್ಗಮರ್ತ್ಯಂಗಳೊಳರಿಸಿ ಕಾಣದೆ ಪಾತಾಳಕ್ಕೆಯ್ದಿ ವಾಸುಕಿಯ ತಂಗಿಯಪ್ಪ ಜರತ್ಕಾರೆಯನೊಡಗೊಂಡು ಬರೆ ವಾಸುಕಿಯು ತನ್ನ ಕುಲ ಗೋತ್ರ ಪಾವನವಾಯ್ತೆಂದು ಮದುವೆಯಂ ಮಾಡೆ ತನಗಾವಾಗಯಿವಳು ಅಪ್ರಿಯಂ ಮಾಳ್ಪಳಾಗಲೆ ಬಿಡುವೆನೆಂದೊಡೆ ವಾಸುಕಿಯು ಮುನಿಯ ಚಿತ್ತವೃತ್ತಿಗೆ ಸರಿಯಾಗಿರೆಂದು ಜರತ್ಕಾರೆಗೆ ಪೇಳಿದಡಂತಿರುತ್ತಿಪುದು ಕೆಲವು ಕಾಲದಿಂ ಮೇಲಾಕೆಯು ಗರ್ಭಿಣಿಯಾಗಿ ಗರ್ಭದೊಳು ಬಾ ………ವೆಜನಪ್ಪ ಕುಮಾರಂ ಪನ್ನೆರಡು ವರ್ಷಂಬರಂ ಪೊಟ್ಟೆಯೊಳ್ ಬೆಳೆಯುತ್ತಿರಲಾಗಿ ಒಂದುದಿನಂ ಋಷಿಯು ಭೋಜನಮಂ ಮಾಡಿ ಬರಲೀಕೆಯಿಂದಾ ಸ್ತ್ರೀಯ ತೊಡೆಯ ಮೇಲೊರಗಿ ನಿದ್ರೆಗೆಯ್ಯುತ್ತಿರಲಸ್ತಮಯಕಾಲಮಾಗೆ ಋಷಿಗಳೆಲ್ಲ…….. ದೋಷ ಬಂದಿತೆಂದು ಎಚ್ಚರಿಸೆ ನದ್ರೆ ಗೆಡಿಸಿ ಏಕೆ ಎಬ್ಬಿಸಿದೆಯೆನೆ ಭೀತಿಯಿಂ ಕೈಮುಗಿದು ಸೂರ್ಯಾಸ್ತಮಯಕಾಲವೆನೆ ನಾನೇಳುವರಿಗೆ ಸೂರ್ಯಾಸ್ತಮಾನ ಹೇಗಾದೀತು ಎನೆ ……………………….ಗರ್ಭದೊಳುಭಯಕುಲೋದ್ಧಾರಕನಪ್ಪ ಮಗಂ ಪುಟ್ಟುವನೆಂದು……………..ಭೂವಿವರದಿಂ ಪಾತಾಳಕ್ಕಿಳಿದು ವಾಸುಕಿಯ…………………ಯ ಗರ್ಭದಲಿರ್ದು ಬೆಳೆದು ಪುಟ್ಟಿದೊಡದಕ್ಕೆ ಜಾತನಾಮಕರ್ಮಾದಿಗಳಂ ಮಾಡಿಸಿ ಆಸ್ತಿಕನೆಂದು ಪೆಸರಿಟ್ಟು ಉಪನಯನಾದಿಯಂ ಮಾಡಿಸಿ ಚ್ಯವನಮಹಾಋಷಿಯ ಮನವಪ್ಪ ಪ್ರಮದಿ………………ಲಿತ್ತ ಜನಮೇಜಯಂ ರಾಜ್ಯಂಗೆಯ್ಯುತ್ತಿರ್ದೊಂದು ದಿನಂ ಉದಂಕೃಷಿಯು ಪೇಳ್ದ ಸರ್ಪಯಾಗಮಂ ನೆನೆದು ಮಂತ್ರಿ ಪುರೋಹಿತಾದಿಗಳಂ ಬರಿಸಿ ತನ್ನ ತಂದೆಯಪ್ಪ ಪರೀಕ್ಷದ್ರಾಜನಂತಪ್ಪನಂ ಕೊಂದುದೆಂತೆಂದು ಕೇಳಿದೊ……………ಜ್ರಮಂ ಕೆಡದಂತೆ ಅರುವತ್ತು ವರುಷ ರಾಜ್ಯಂಗೆಯ್ಯುತ್ತಿರ್ದೊಂದು ದಿನಂ ಬೇಂಟೆಗೆಯ್ದಿಯನೇಕ ಪ್ರಾಣಿಗಳಂ ಕೊಂದು ಒಂದು ಪಂದಿಯನೆಸೆಯಲದು ನೆಟ್ಟಂಬು ಸಹಿತಮೋಡುತ್ತಿರಲದರ ಬೆನ್ನೊಳ್ ರಥಮನೇರಿ ಪೋಗಲದು ಕಾಣದಿರೆ ಶಮಿಕನೆಂಬ ಋಷಿಯು ಧ್ಯಾನಾರೂಢನಾಗಿರ್ದನಂ ಕೇಳಿದೊಡಾತಂ ನುಡಿಯದಿರಲೊಂದು ಸತ್ತ ಪಾವಂ ತನ್ನ ಬಿಲ್ಲಿನ ಕೊಪ್ಪಿನಿಂದೆತ್ತಿ ಋಷಿಗಳೆಲ್ಲರ್ ಕಾಣ್ಬಂತಾ ಮುನಿಯ ಕೊರಲೊಳಿಕ್ಕಿ ಹಸ್ತಿನಾಪುರಕ್ಕೆ ಬಂದೊಡಾ ಮುನಿಯ ಮಗಂ ಶೃಂಗಿಯೆಂಬವಂ ಬಂದು ತನ್ನ ತಂದೆಯ ಕೊರಲ ಪಾವಂ ಕಂಡೆಡಬಲದೊಳಿರ್ದ ಋಷಿಗಳಿಂ ಪರೀಕ್ಷದ್ರಾಜಂ ಮಾಡದನೆಂದರಿದು ಕೋಪಿಸಿ ಇಂದಿಂಗೇಳನೆ ದಿವಸಕ್ಕಾತನು ತಕ್ಷಕದಿಂದ ಸಾಯಲೆಂದು ಶಾಪಮಂ ಕೊಟ್ಟು ಪಿಂಗಿಸೆಯಾ ರುಷಿಯು ಮಗನು ಪರೀಕ್ಷಿದ್ರಾಜಂ ಮಹಾಚಕ್ರಿಧರನಾತಂಗೆ ಶಾಪಮನಿಕ್ಕಿದೆಯಶಮಿತನು ದೇಶಂ ಬಿಟ್ಟು ರಾಜಂಗೆ ಪೇಳಿ ಕಳುಹಿಸಲಾತನರಿದು ಭೀತನಾಗಿ ಸಮುದ್ರತೀರದೊಳೇಳು ನೆಲೆಯುಪ್ಪರಿಕೆಯ ಉಪ್ಪರಿಕೆಯೊ…….ಹರಿಕಥೆಯಂ ಕೇಳುತ್ತ ಮರಸುತ್ತಲ್‌ಮೂವಳಸಾಗಿ ಪರಿಜನಂ ಕಾಯ್ದಿಪ್ಪಿನ ತಕ್ಷಕಂ ಬಂದು ಕಡೆಯ ಬಾಗಿಲೊಳಿರಲ್‌ಮಂತ್ರ ಯಂತ್ರ ತಂತ್ರಾದಿಗಳಂ ಮುನ್ನ ಬ್ರಹ್ಮಂ ಲೋಕ ಸೃಷ್ಟಿಯೊಳ್ ಸಮಸ್ತ…………ನಿರ್ಮಿಸಿ ಕಶ್ಯಪಂಗೆ ಪೇಳಿರ್ದುದರಿಂದಾ ಕಶ್ಯಪಂ ಪರೀಕ್ಷದ್ರಾಜಂಗೆ ವಿಷಾಪಹಾರಂ ಮಾಡಿ ಪಿರಿದು ದ್ರವ್ಯಮಂ ಕೊಳಲೆಂದು ಬರಲಾತನಂ ತಕ್ಷಕಂ ಕಂಡು ಕೇಳಿಯಂತಾಗರಿ ವಟವೃಕ್ಷಮಂ ದಹಿಸುವೆನದಂ ಪಡೆವುದೆಂದು ಮುಂದಿರ್ಲಾಲದ ಮರಮಂ ನೋಡಿದೊಡದು ಭಸ್ಮವಾಗಿ ಪೋಪುದು ಕಶ್ಯ………..ಭಿಮಂತ್ರಿಸೆ ಮೊದಲಿಂ ಗಳಿತಮಾಗಿ ಶಾಖೋಪಶಾಖೆ ಪತ್ರಾದಿಗಳ್ ಶುಕಬಳಗಂ ನೆರೆದಿಪ್ಪುದು ತಕ್ಷಕನಾತಂಗೆ ಸಾಲ್ವನಿತು ಧನಮಂ ಕೊಟ್ಟು ಆತಂಗೆ ಸಾವು ತಪ್ಪದೆಮದು ಕಳುಹಿಸಿ ಬಿಟ್ಟು ಈರ್ವರ್ ನಾಗಕುಮಾರರಂ ಬ್ರಾಹ್ಮಣರಂ ಮಾಡಿ ವೇದ…………ನೆಯ…………..ಯೊ……..ತಾನು ಸೂಕ್ಷ್ಮರೂಪಿನಿಂದದರೊಳಡಗಿರಲಾ ಬ್ರಹ್ಮಚಾರಿಗಳ್ ವೇದ ಘೋಷಣೆಯಿಂ ಕೈಗಾಣಿಕೆಯಂ ಕೊಡಲದಂ ವಾಸಿಸಿ ತನ್ನ ಕರಾದಿಯಿಂ ಕೆತ್ತಿ ನೋಡಲಲ್ಲಿರ್ದ ತಕ್ಷಕಂ ಪ್ರಳಯಕಾಲದ ಸಿಡಲಂತಾರ್ಭಟಿಸಿ ಕಚ್ಚಿ ಕೊಂದನೆಂದು ಪೇಳೆ ಜನಮೇಜಯಂ…………….ವೇದಿಮಧ್ಯ………..ಳ್ಬಿದ್ದು ದಹನಮಪ್ಪಂತೆ ಸರ್ಪಯಾಗಮಂ ಮಾಡಲೆಂದು ವ್ಯಾಸಂ ಮೊದಲಾದ ಋಷಿಯರಂ ಬರಿಸಿ ಬೆಸಗೊಳೆ ಸರ್ಪಯಜ್ಞಂ ವೇದಪ್ರಮಾಣಮಿಲ್ಲಾದೊಡಂ ಆಶ್ವಲಾಯನ ಬೋಧಾಯನ ಆಪಸ್ತಂಭ ಜೈಮಿನೀಯ ಮೆಂಬ ಸೂತ್ರ…….ಯದೊಳಿ………..ಸಮಕಟ್ಟಂ ತರಿಸಿ ಯಜ್ಞಶಾಲೆಯಂ ಮಾಳ್ಪಲ್ಲಿ ವಾಸ್ತುಶಾಸ್ತ್ರಮಂ ಬಲ್ಲವರೆಂದರಿ ಯಜ್ಞ ಸಂಪೂರ್ಣವಾಗಿ ನಡೆಯದೆಂದರು ಬಿಡದೆ ಮಾಡಿದೊಡಲ್ಲಿ ಮಂತ್ರದಿಂ ಸ್ವರ್ಗ ಮಾರ್ತ್ಯ ಪಾತಾಳಂಗಳಿರ್ದ ಸರ್ಪಂಗಳೆಲ್ಲಂ ವೇದಿ ಮಧ್ಯದೊಳ್ ಬಿದ್ದು ಸಾಯೆ ಕಾರಣ ಸರ್ಪಂಗಳ್ಗೆ ಮಂತ್ರ ಹದಿಯದಿರೆ ಗರುಡೋ ದ್ಗಾರಮಂತ್ರಮಂ ಪ್ರಯೋಗಿಸೆ ವಾಸುಕಿಯು ತನ್ನ ವಿಕಾರಿನೇಯನಪ್ಪ ಆಸ್ತಿಕಂಗರಿಪಲಾತಂ ಉದಾತ್ತನುದಾತ್ತ ಸ್ವರಿತ ಪ್ರಚಯದಿಂ ವೇದೋಚ್ಛಾರಣೆಯ ಜಪ್ಪಿನ ತಕ್ಷಕಂ ದೇವೇಂದ್ರನ ಮರೆವುಗೆ ಇಂದ್ರನು ಸಹಿತ ಮಂತ್ರಂಗಳೆಳೆದುತರಲಾ ತಕ್ಷಕನತಿಭೀತನಾಗಿ ಮೊರೆಯಿಡುತ್ತಾ ಬಪ್ಪನಂ ಕಂಡಭಯವಿತ್ತು ಜನಮೇಜಯನಲ್ಲಿಗೆಯ್ದಿ ತನ್ನ ಪ್ರಭಾವಮಂ ತೋರಿ ಮೆಚ್ಚಿಸಿ ಇಷ್ಟರಲ್ಲಿ ಯಜ್ಞಮಂ ಬಿಡುವುದೆಂದು ಬಿಡಿಸಿದಂ. ಅವಭೃತಸ್ನಾನಾನಂತರ ಆ ಯಜ್ಞದ ಫಲಮಂ ಕೊಟ್ಟನು.