ಶ್ರೀಸುಜನಸ್ತುತರಖಿಲ ಕ
ಳಾಸದನರ್ ಮೋಹತಿಮಿರಮಂ ಕಳೆದು ಕರಂ
ಭಾಸುರ ವಿಚಾರದಕ್ಷರ್
ವೈಷಮ್ಯವನುಳಿದು ಕೇಳ್ವುದೀ ಸತ್ಕೃತಿಯಂ

ಈ ಪ್ರಕಾರದೊಳು ತತ್ವಾಭಾಸಂಗಳನೇಕವಿಧಮ…………..ಸುತ್ತಿರಲಿತ್ತಲು ಭದ್ರಿಳಾಪುರದ ಮೇಘರಥನೆಂಬರಸಂ ನಾನಾವಿಧದಾನಂ ಕುಡಲಿಚ್ಛೆ ಪುಟ್ಟಿ ಸಿದ್ಧಾಂತದೊಳ್ ವಿಚಾರಿಸಿದೊಡಲ್ಲಿ ಜಯಾದತ್ತಿಯುಂ ಸಮದತ್ತಿಯಮನ್ವಯದತ್ತಿಯು ಪಾತ್ರದತ್ತಿಯಮೆಂಬ ಚತುರ್ವಿಧಮಂ ಕೇಳಿ ಪಾತ್ರಾಪಾತ್ರಂಗಳಂ ನೋಡದೆ ಸ್ವೇಚ್ಛೆಯಿಂ ನಾನಾ ದಾನಂಗುಡಲ್ ಚಿಂತಿಸುತ್ತಿಪ್‌ಉದುಮಾತನ ಮಂತ್ರಿ ಸತ್ಯಕೀರ್ತಿಯೆಂಬವಂ ಪುರೋಹಿತನಪ್ಪ ಭೂತಿಶರ್ಮನ ಮಗ ಮುಂಡಶಾಲಾಯನನೆಂಬಂ ತನ್ನ ವಿದ್ಯಾಬಲದಿಂದರಸಿನ ಚಿತ್ತವೃತ್ತಿಯನರಿದು ಭೂದಾನ ಕನ್ಯಾದಾನ ಸುವರ್ಣ ವಸ್ತ್ರಾಭರಣ ಫಲ ತಾಂಬೂಲ ಗಜಾಶ್ವ ಗೋಮಹಿಷಾದಿ ಕೂಷ್ಮಾಂಡ ಧಾನ್ಯಗಳಂ ಸಂಕಲ್ಪಪೂರ್ವಕಂ ನಾಲ್ಕಾಶ್ರಮವಿಡಿದ ಭೌತಿಕರ್ಗೆ ಕುಡಲಕ್ಕುಮದೞಿಂ ಸ್ವರ್ಗಾಪವರ್ಗಮಂ ಪಡೆವರೆಂದನೇಕ ಗ್ರಂಥಮಂ ಕಲ್ಪಿಸಿ ದಶದಾನಂಗಳು ಮುಖ್ಯಮೆಂದರಿಪೆ ಮೇಘರಥಂ ಸಂತೋಷಂಬಟ್ಟಾತನಂ ಪ್ರಶಂಸೆಗೆಯ್ದು ನಾನಾ……..ಪ್ರಕ್ರಮದೊಳೆ ದಶದಾನಂಗೊಟ್ಟನಂದಿಂದಿತ್ತಲು ದಶದಾನಂ ಪ್ರಕಟಮಾಗಿರ್ದುದಿತ್ತಲು ಷೋಡಶ ಮಹಾದಾನಮೆಂದು ಸದ್ಧರ್ಮಮಂ ಬಿಟ್ಟು ಕುಧರ್ಮಮನನುಕರಿಸಿರ್ದಾಗಳು ಕುಪಾತ್ರಂಗಳಿಗೆ ಕೊಡುತ್ತಾ ಬಂದರು.

ಮತ್ತಂ ಹಸ್ತಿನಾಪುರದ ಮಹಾಪದ್ಮನೆಂಬರಸಂ ಶ್ರುತಸಾಗರರೆಂಬ ತಪೋನಿಯತರಲ್ಲಿ ದಾನ ಪೂಜೆ ಶೀಲೋಪವಾಸಂಗಳೆಂದು ಶ್ರಾವಕಧರ್ಮಂ ನಾಲ್ಕು ತೆರನಲ್ಲಿ ದಾನಂ ಧಾತೃ ಪಾತ್ರ ದೇಯಮೆಂದುಮುಭಯಕುಲಶುದ್ಧಮಂ ತ್ರೈವರ್ಣಿಜನು ಶ್ರದ್ಧಾದಿ ಸಪ್ತಗುಣ ನವವಿಧ ಪುಣ್ಯಸಹಿತಂ ಹಿನಾಂಗನಲ್ಲದವಂ ಧಾತೃವಕ್ಕುಂ.

ಶ್ಲೋಕ || ದಾನದೀಕ್ಷಾ ತ್ರಿವರ್ಣಾನಾಂ ಚತುರ್ಥಾ ದಾನಯೋಗ್ಯತಾ
ಪಂಚಮಾಶ್ಚಾಂತ್ಯಜಾತಿನಾಮ ದೀಕ್ಷಾದಾನ ಯೋಗ್ಯತಾ ||

ಎಂಬುದರಿಂ ವರ್ಣತ್ರಯೋದ್ಭವರು ಮುಂದೆ ದುಷ್ಷಮಕಾಲದೊಳಪ್ಪ ಚತುರ್ಥರುಂ ಪಂಚಮರುಂ ದಾನಂಗುಡಲು…… ದಯೋಗ್ಯರು ಪಾತ್ರ ಉತ್ತಮ ಮಧ್ಯಮ ಜಘನ್ಯಮೆಂದು ಸತ್ಪಾತ್ರಂ ತ್ರಿವಿಧಂ ಕಾಲಾಪೇಕ್ಷೆಯಿಂ ಕುಪಾತ್ರಮಪಾತ್ರಮೆಂಬೆರಡುಮಪ್ಪವು.

ವೃ ||     ಉತ್ಕೃಷ್ಟಪಾತ್ರಮಣಗಾರಮಣುವ್ರತಾದ್ಯಂ
ಮಧ್ಯಂವು………………………………….
…………………………ನಿಕಾಯಯುತಂ ಕುಪಾತ್ರಂ
ಯುಗೋಜ್ಝಿತಂ ನರಮಪಾತ್ರಮಿದಂ ತು ವಿದ್ಧಿ ||

ಸತ್ಪಾತ್ರಕ್ಕಂ ಆಹಾರಾಭಯ ಭೈಷಜ್ಯಮೆಂಬ ಚತುರ್ವಿಧ ದಾನಂಗಳಂ ಕುಡುವುದು.

ಶ್ಲೋಕ ||ಶ್ರದಾ ………………………………………. ಭಾ ದಯಾಕ್ಷಾಂತಿ
ಏತೇ ಸಪ್ತ ಗುಣಾ ……………………….. ದಾತಾರಂ ಪ್ರಚುರಂ ಸಂತಿ ||
ಗೀತಿ ||   ಸ್ಥಾಪನಮುಚ್ಚೈಸ್ಥಾನಂ | ಪಾದೋದಕಮರ್ಚನಂ ಪ್ರಣಾಮಂಚ
ವಾಕ್ಕಾಯ ಹೃದಯಶುದ್ಧಿಂ | ಯೇಷಣಶುದ್ಧಿಂ ಚ ನವವಿಧ ಪುಣ್ಯಂ ||

ಇಂತು ದಾನಮಂ ಕೃತಕಾರಿತಾನುಮೋದದಿಂದೀಯೆ ಉತ್ತಮಾದಿ ಭೋಗಭೂಮಿಯೊಳ್ ಪುಟ್ಟಿ ದಶವಿಧ ಕಲ್ಪವೃಕ್ಷಂಗಳಿಂ ಭೋಗೋಪಭೋಗಂಗಳನನುಭವಿಸಿ ಕ್ರಮದಿಂ ಸ್ವರ್ಗಾಪವರ್ಗಮಂ ಪಡೆವರ್.

ಶ್ಲೋಕ ||ದಾನಂ ಪೂಜಾಚ ಶೀಲಂ ಚ ಪ್ರೋಷಧಂಚ ಚತುರ್ವಿಧಂ
ತಚ್ಛಾನ್ನಾಭಯಭೈಷಜ್ಯಶಾಸ್ತ್ರದಾನ ಪ್ರಭೇದತಃ ||
ಪಾತ್ರಾಪಾತ್ರ ವಿಭೇದೇತದ್ದಿಥಾ ಪರಿಕೀರ್ತ್ಯತೇ
ಪಾತ್ರಂ ತ್ರವಿಧಮುತ್ಕೃಷ್ಟಂ ಮಧ್ಯಮಂಚ ಜಘನ್ಯಕಂ ||
ಸ್ವಾಧ್ಯಾಯ ಧ್ಯಾನಸಂಪನ್ನ್ಯಾಯೋ ಮೂಲಗುಣಪಾಲಕಃ
ಕ್ರೋಧಮಾನಾದಿಭಿಸ್ತ್ಯಕಃ ಸಪಾತ್ರಸ್ಯಾದಿಮೋತ್ತಮಃ ||
ಸಂತುಷ್ಟಾಯಃ ಸ್ವದಾರೇಷು ಪಂಚಾಣೂವ್ರತಪಾಲಕಃ
ಸಮ್ಯಗ್ದೃಷ್ಟಿಗುರೌಭಕ್ತಃ ಸಪಾತ್ರೋ ಮಧ್ಯಮೋಭವೇತ್ ||
ವ್ರತಹೀನಃ ಸುಸಮ್ಯಕ್ತೋ ಜಿನಧರ್ಮೇ ಮಹಾರುಚಿಃ
ಸಜಘನ್ಯೋ ಬವೇತ್ಪಾತ್ರೋ ಮುನೀಂದ್ರೈಃ ಪರಿಕೀರ್ತಿತಃ ||
ಸಮ್ಯಕ್ತ್ವೇನ ವ್ರತೇನೇನೋ ಗುರುದೇವೌ ಚ ನಿಂದತಃ
ಮಿಥ್ಯಾದೃಷ್ಟಿರಪಾತ್ರಾ ಸಾಭಣ್ಯತೇ ತತ್ದರ್ಶಿಭಿಃ ||
ನಿಃಫಲಂ ಜಾಯತೇ ಯದ್ದದ್ಬೀಜಮುಷರಭೂಮಿಗಂ
ತದ್ವದನಂ ಪ್ರಧಾನಾಮಪಾತ್ರಾ ಯದೀಯಮಾನಂ ಮಹೀತಲೇ ||
ಏಕವಾಪಿಜಲಂ ಯದ್ವದ್ಯಾತಿನಿಂ ಚಕ್ಷುಮೂಲಯೋಃ
ಅಪಾತ್ರಪಾತ್ರಯೋರಂನಂ ತದ್ವೃತ್ತಿತ್ತಮದೂರತಾ ||
ನನಸ್ಯತಿಘೃತಂ ದುಗ್ಧಂ ಶುದ್ಧಪಾತ್ರೇ ನಿವೇಶಿತಂ
ತದಾಮಪಾತ್ರವಿನ್ಯಸ್ತಂ ಸ್ವಂಪಾತ್ರಂ ನಯತಿಧ್ರುವಂ ||
ಏಕಕೂಪ ಜಲಂ ಪೀತಂ ದೀನ್ವಾಭಿಷಣಭೋಗಿನಾ
ದೀನಾಮೃತಂ ಭವೇತ್ ಪೀತಂ ಫಣಿಪೀತ ವಿಷಂ ಪರಂ ||
ವಟಬೀಜಂ ಯಥಾತುಚ್ಛಂ ಸುಕ್ಷೇತ್ರಿತ್ರೇಪಂ ನಿವೇಶಿತಂ
ಬಹುವಿಸ್ತೀರ್ಣತಾಂ ಯಾತಿ ಪಾತ್ರದತ್ತಂ ತಥಾಶನಂ ||
ಸೌಧರ್ಮೀಶಾನ ಮಹೇಂದ್ರ ಬ್ರಹ್ಮ ಬ್ರಹ್ಮೋತ್ತರಾದಿಷು
ತಲ್ಪೇಷು ತೇಪು ಜಾಯಂತೇ ಮಾನವಾಃ ಪಾತ್ರದಾನತಃ ||
ಸೌರ್ಧಮ …………… ಕ್ರಿದಂತಿ ಸತತಂ ಸುರಾಃಸುಖೇನಾ
ಮೃತ್ಯುಪರ್ಯಂತ ಭಾವಶೋಕ ವಿವರ್ಜಿತಾಃ ||
ಸತ್ಪಾತ್ರಾ ಪ್ರದಾತಾನ್ನಂ ಸ್ವಶಕ್ತ್ಯಾಶಕ್ತಿಪೂರ್ವಕಂ
ಮದೃಷ್ಟಿಮಾನವಾ ಕೇಶಿಜ್ಜಾಯಂತೇ ಭೋಗಭೂಮಿಜಾಃ ||
ಅಪಾತ್ರದಾನಿ ವನಿತೇ ಚಿಷ್ಟಿವಾತು ………… ಶ್ರುತ್ವಾಷಣ್ಣವತಿಷ್ಟಪಿ
ಅಂತರ್ದ್ವೀಪೇಷು ಜಾಯಂತೇ ಲಾಂಗೂಲೈಕಾಂಘ್ರಿಮಾನವಾಃ ||
ಹಿರಣ್ಯಭೂಮಿಣಾ ಕನ್ಯಾದಾನಾನಿ ಹರಿಚಕ್ಷಣೈಃ
ನದೇಯಾ ನಿಯತಸ್ತಾ ವಿದುಃ ಮಹಿಮಾನಿ ಜನ್ಮನಾಂ ||
ಹಿರಣ್ಯಾಚ್ಛಾತ್ರೇ ಚಿಂತಸ್ಯ ದಮನಾಗಮನಾಧಿಷು
ತನ್ನಿಮಿ………. ಭವೇನ್ಕೃತ್ಯುಸ್ತ ಸ್ಮಾರನ್ನೈವದೀಯತೇ ||
ವಧನ್ನಿವಾಸ್ಕೃಶನ್ನೂರ್ವಿನ್ಗುರ್ವಿಣಿಷ್ಠುವಸಂಸ್ಥಿತಾಂ
ತಸ್ಮಾನ್ನಯುಜ್ಯತೇ ವಿದ್ವಿಕಲ್ಪಮಿದಾನೀಂಕದಾಚನ ||
ಬಂಧನಾತ್ ತಾಡನಾನ್ನಿತ್ಯಂ ದುಃಖಂ ಗೋರ್ಜಾಯತೇ ಯತಃ
ತಸ್ಮಾನ್ನಯುಜ್ಯತೇ ಧಾತುಂ ………. ದಾನಂ ಭ್ಯದೇಹಿಭಿಃ ||
ಕನ್ಯಾಯಾ ಜಾಯತೇ ರಾಗೋ ರಾಗೋತ್ ಕರ್ಮನಿಬಂಧನಂ
ಕರ್ಮಣಾನಂತ ಸಂಸಾರೇ ತಸ್ಮಾತ್ ತದ್ದಾನ ವರ್ಜನಂ ||
ಲಬ್ದೋಹಿರಣ್ಯದಾನಾದಿಂ ನ್ಸೃಪ್ತಿರ್ನ್ವೈನಾಸ್ತಿ ದೇವೀವನಂ
ಆಗ್ನೇರ್ಯಧನೈರ್ನಾಸ್ತಿ ವದಿಭಿಶ್ಚ ಸರಿತ್ಪತೇಃ ||
ಕಂಠೋಷ್ಠಮಾನ ಋಕ್ತಸ್ಯ ದಿವ್ಯಾನ್ನೇ ಸಮುಪಸ್ಥಿತೇ
ನ ಕಾಂಕ್ಷಾಜಾಯತೇ ತಸ್ಮಿನ್ ತಪ್ಯ ಕಿಂಚಿನ್ಮನಾಗವಿ ||
ಅನ್ನದಾನಾತ್ಪರಂ ನಾಸ್ತಿ ದಾನಮನ್ಯನ್ಮಹೀತಲೇ
ಪ್ರಾಣಿನಾಂ ದೇಹಸಂತಾಪಿ ನಾಶನಾತ್ ಪ್ರಾಣಧಾರಣಾತ್ ||
ದಾನಮಿಚ್ಛತಿ ಚೇದ್ದಾತುಂ ದದ್ಯಾದ್ವಭಯಪೂರ್ವಕಂ
ದಾನಂ ಸರ್ವ ಜನಾನಂ ದಂಸಂ ಸಾರದ್ಭೇದನಕ್ಷಮಂ ||
ದೇಹಿನಾಮೃತಭಿ ರೂನಿವಾಂ ಪ್ರಾಣಾನ್ಯೋಯವಿರಕ್ಷತಿ
ಸನಿರ್ಭಯೋ ಭವೇದ್ಯತ್ಮಾತ್ಯುಗತಿಂ ದನಪಶ್ಯತಿ ||
ರೋಗೇಣಾಂಗ ವಿನಾಶಸ್ಯಾದಂಗನಾಶೇ ಕುತಪ್ಪಪಃ
ತಪೋಭಾಗೇಪವರ್ಗಸ್ಯಾ ಸೌಖ್ಯಂ ದೂರತರಂ ಭವೇತ್ ||
ತಸ್ಮಾತ್ ತದ್ದೃಷ್ಟಪಾತ್ರೇ……. ವೈಸಜ್ಯಂ ದೀಯತೇ
ಸದಾ ಸ್ವಯಂ ಭವತಿ ನಿರೋಗ್ಯೋ ರೂಪವಾನನ್ಯಜನ್ಮನಿ ||
ಸಾಧುಭ್ಯೋ ವಿಬುಧೇ ಶಾಸ್ತ್ರಂ ಲೇಖಯಿತ್ವಾ ಸ್ವಶಕ್ತಿತಃ
ವ್ಯಾಖ್ಯಾಯತೇ ದವಾಶೇಷಾಂ ಶಾಸ್ತ್ರದಾನಂಕಮಭ್ಯತೇ ||
ವಿವರ್ತಿನಿಕಲಂ ಶಾಸ್ತ್ರಂ ಶಾಸ್ತ್ರದಾನ ಫಲಾತ್ಸ್ವಯಂ
ತೃತ್ವಾಷ್ಟ ಕರ್ಮನಿರ್ಮೂಲಂ ಲಭತೇ ಶಾಶ್ವತಂ ಪದಂ ||

ವೃತ್ತ ||  ಆಹಾರ ದಾನಾರ್ಜಿತ ಪುಣ್ಯಪುಂಜಾ
ದೀರ್ಘಾಯುರಾರೋಗ್ಯ ಯಶಃ ಸುಖಾನಾಂ
ಸುರಾಣಾಮಕಿಲಾಮೃತಾನಾಂ
ಸ್ವಾಮೀ ಭವೇತ್ಸಿದ್ಧಿ ವಧೂಪ್ರಿಯಾಸ್ತೇ ||

ಇಂತು ಪಾತ್ರವರಿತಾಹಾರಭಯಭೈಷಜ್ಯ ಶಾಸ್ತ್ರಮೆಂಬ ಚತುರ್ವಿಧ ದಾನಮಾವಾಸಸಹಿತಂ ಪ್ರವಹಿಸುತ್ತಿಪ್ಪುದು ಮೇಘರಥನೆಂಬರಸನ ಚಿತ್ತವೃತ್ತಿಯನರಿದಾತನ ಪುರೋಹಿತನ ಮಗಂ ಮುಂಡಶಾಲಾಯ …………….. ಮಹಾದಾನಮೆಂದು ಪ್ರಕಟಿಸಿದರು. ಪಾತ್ರಾಪಾತ್ರ ಸ್ವರೂಪ

ವೃತ್ತ ||  ಸಂತಪ್ತಾಯಸಿ ಸಂಸ್ಥಿತಸ್ಯ ಪಯೋನಾಮಾಪಿ ನಶ್ರೂಯತೇ
ಮುಕ್ತಾಕಾರತಯಾ ತದೇವ ನಳಿನೀಪತ್ರಸ್ಥಿತಂ ದೃಶ್ಯತೇ
ಅಂತಃ ಸಾಗ ……….. ಕುಮರ್ದಹೇತ್ತವಜು ಷೋ ಏವ ವಿಡ್ಡಾವೃತ್ತಯಃ
……………………………………………………………………………
ಅನ್ಯಮತ ಷೋಡಶ ದಾನಂಗಳೊಳು

ವೃತ್ತ || ತುರಗಶತಸಹಸ್ರಂ ಗೋಕುಲಂ ವೀಭೂತಿ ದಾನಂ
ಕನಕರಜತ ಪಾತ್ರಂ ಮೇದಿನೀ ಸಾಗರಾಂತಂ
…………………………………………. ಭವತಿ ಸಮಾನಂ
ಅನ್ನದಾನಂ ಪ್ರಧಾನಂ ||

ಇದು ದಾನಲಕ್ಷಣಂ.

ಇನ್ನು ಪೂಜೆಯೆಂಬುದು ಸರ್ವಜ್ಞಪ್ರತಿಬಿಂಬ ಕುಂತಶತಾಲಲಕ್ಷಣದಿಂ ಮಾಡಿಸಿಯತಿಶಯವೆನ್ನೆ ಚೈತ್ಯಾಲಯಮಂ ನಿರ್ಮಿಸಿ ಸಕಲವಾ ………………… ಯಿಂ ಸ್ಥಾಪಿಸಿ ನಿತ್ಯ ಮಹಾಮಹಾದಿ ವಿಧಾನಂ ಮೊದಲಾಗೆ ಅಭಿಷೇಕಾದಿ ಷಡ್ವಿಧ ……………………………………….. ದೇವರಾಧನೆಯಂ ಮಾಳ್ಪುದು.

ಉಪೇಂದ್ರ

ವಜ್ರ ||   ಜಿನಾಭಿಷೇಕಾರ್ಜಿತಪುಣ್ಯಪುಂಜಾತ್
ಸಮಗ್ರ ರಾಜ್ಯಾಭಿಷವಂ ಲಭಂತೇ
ಸುರಾಸುರೈಸ್ಸಾರ ಮನುಷ್ಯಲೋಕೇ
ನರಾಧಮಂತೇ ವರಸಿದ್ಧಿ ವಧ್ವಾ ||
ಯತೀಂದ್ರ ಪಾದಾಂಬುರುಹಾರ್ಚನೀಯಾ
ಸಮಾಪ್ನುಯಾತ್ ಶ್ರೀ ಶ್ರುತಕೀರ್ತಿಕಾಂತ
ಉತ್ತುಂಗ ಪೀನಸ್ತನ ಕಾಮಿನೀನಾಂ
ಸಕಾಮದೇವೋ ಹರಿವಿಕ್ರಮಸ್ಯಾತ್ ||

ಎಂದು ಪೂಜಾಫಲಮಂ ಪೇಳಿ ಶೀಲಮಂ ಪೇಳ್ದರ್. ರಾತ್ರಿಭೋಜನದಿಂದನೇಕ ಪ್ರಾಣಘಾತವಾಗಿ ಮಹಾಪಾಪಕ್ಕೆ ಬೀಜಸ್ವರೂಪವಾದುದರಿಂದ ಹಿಂಸಾವ್ರತ ರಕ್ಷಣಾರ್ಥಂ ಇರುಳ ಆಹಾರಂ ತೊರೆವುದು.

ಶ್ಲೋಕ ||ಪುತ್ರ ಮಿತ್ರಾದಿ ಬಿರ್ದೊರೋವಿಜ್ಞಾನಾದಿ ನಿರ್ಜಿತಃ
ಭೀತಮೂರ್ತಿ ಸದಾದುಃಖಿ ನಾರಕೀ ರಾತ್ರಿಭೋಜನಾತ್ ||

ಎಂಬುದರಿಂ ಸೂರ್ಯಾಸ್ತಮಾನಕ್ಕೆ ಎರಡು ಘಳಿಗೆಯಿಂ ತೊಡಗಿ ಉದಯಮಾದೆರಡು ಘಳಿಗೆವರೆಗು ಊಟ ಮಾಡುವುದು ದಿಗ್ವ್ರತಮು ಹಿಂಸಾದಾನಾ ಪಧ್ಯನನು ಶ್ರುತಿಯಂ ತೋರೆ ಭೋಗೋಪಭೋಗ ಪರಿಮಾಣದೆ ಶಾವಕಾಶಿಕೆ ಸಾಮಾಯಿಕ ಪ್ರೋಷಧನಿಯಮ ವೈಯಾಪೃತ್ಯ ಮೊದಲಾದುವೆಲ್ಲಂ ಶೀಲವ್ರತಮೆಂಬುದು.

ವೃತ್ತ ||  ಭವಂತಿ ಶೀಲವ್ರತ ರಕ್ಷಣಾನ್ ನರಾಃ
ಕಾಂತಾ ಮನೋಜಾಸ್ಸುರಸಂಘಪೂಜಿತಾ
ಸಜ್ಞಾನ ದೃಗ್ವೀರ್ಯ ಸುಖಾಬ್ಧಿಸೇವಿಕಾಃ
ತೇ ಮುಕ್ತಿಲಕ್ಷ್ಮೀವರ ಸುಪ್ರಸಿದ್ಧಾಃ ||

ಪರ್ವದಿನದೊಳು ನೂರಿಪ್ಪತ್ತು ಘಳಿಗೆ ಅನ್ನ ಪಾನ ಖಾದ್ಯ ಲೇಹಮೆಂಬ ಚತುರ್ವಿಧಾಹಾರಮಂ ತೊರೆದು ಭೋಗೋಪಭೋಗ ವಸ್ತುವಂ ಪೊರ್ದದೆ ಜಾಗರಣೆಯಿರ್ದು ಪಂಚಸೂನಂ ಬಿಡುವುದು

ವೃತ್ತ ||  ಯತ್ ಪೂರ್ವಾಜಿತ ಕರ್ಮಶೈಲಕುಲಿಶಂ ಮತ್ ಕಾಮದಾವಾನಲ
ಜ್ವಾಲಾಜಾಲಜಂ ಯದುಗ್ರಕರಣ ಗ್ರಾಮಾಹಿ ಮಂತ್ರಾಕ್ಷರಂ ||
ಯಃ ಪ್ರತ್ಯೂಹತಮಃ ಸಮೂಹದಿವ ಸಂಯಲ್ಲಬ್ಧಿ ಲಕ್ಷ್ಮಿಲತಾ
ಮೂಲಂ ತದ್ವಿವಿಧಂ ಯಥಾ ವಿಧಿ ತಪಃ ಕುರ್ವೀತವೀತಸ್ಪೃಹಃ ||

ಎಂದೀ ತೆರದ ಗೃಹಸ್ಥಧರ್ಮಮಂ ಪೇಳಿ ಯತಿಧರ್ಮಮನಿಂತೆಂದರು. ಉತ್ತಮತ್ವಮಾದಿ ಹತ್ತು ಧರ್ಮಮುಂ ಅಹಿಂಸಾದಿ ಪಂಚಮಹಾವ್ರತಗಳುಂ ಈರ್ಯಾ ಸಮಿತ್ಯಾದಿ ಪಂಚಸಮಿತಿಯುಂ ಸ್ಪರ್ಶನೇಂದ್ರಿಯಾದಿ ಪಂಚೇಂದ್ರಿಯ ಜಯಕಚೋತ್ಯಾದಿ ನಸಮತಾದಿ ಷಡಾವಶ್ಯಕ ಕ್ರಿಯಾಚೇಲಕ್ಯಮಸ್ನಾನದಂತಕರ್ಷಣಂ …………… ಜನಮೇಕಭುಕ್ತಮೆಂಬಿಪ್ಪತ್ತೆಂಟು ಮೂಲಗುಣಂಗಳುಂ ದ್ವಾದಶ ವಿಧ ತಪಮುಂ ಪಂಚಾಚಾರಮುಂ ಗುಪ್ತಿತ್ರಯಮುಂ ಮೊದಲಾಗೆ ಮೂವತ್ತಾರು ಗುಣಮುಂ ಪದಿನೆಂಟು ಸಾಸಿರಂಗಳುಂ ಎಂಬತ್ತುನಾಲ್ಕು ಲಕ್ಷ ಗುಣಂಗಳು ಸಹಿತಮಾಗಿಯೊಪ್ಪುವ ಅನಗಾರಧರ್ಮಮಂ ಧರ್ಮಭಟ್ಟಾರಕರ್ ಬೆಸಸೆ ಮಹಾಪದ್ಮ ಮಹಾರಾಜಂಗರಿಯೆ ಪೇಳ್ವುದುಂ ಸಂಸಾರ ಶರೀರಭೋಗಂಗಳೊಳು ಹೇಯಂ ಪುಟ್ಟಿ ನಿರ್ವೇಗಮಾಗೆ ತನ್ನ ಮಕ್ಕಳು ಪದ್ಮನುಂ ವಿಷ್ಣುಕುಮಾರರಂ ಕರೆದು ಪದ್ಮಂಗಧಿರಾಜ ಪಟ್ಟಿಂಗಟ್ಟಿ ವಿಷ್ಣುವಿಂಗೆ ಯುವರಾಜಪದಮಂ ಕುಡಲಾತಂ ಸಂಸಾರಭೋಗಮನೊಲ್ಲದೆ ವೈರಾಗ್ಯ ಪರನಾಗಿರ್ದೊಡಾ ವಾತ್ಸಲ್ಯರತ್ನಾಕರಂವೆರಸು ಶ್ರುತಸಾಗರಮುನೀಂದ್ರರಿಂದೀಕ್ಷೆಗೊಂಡು ಗ್ರೋಗ್ರ ತಪಂಗೆಯ್ದು ಮಹಾಪದ್ಮ ಯೋಗೀಂದ್ರನಷ್ಟಾಪದಗಿರಿಯೊಳ್ ಕರ್ಮಕ್ಷಯ್ದುಗೆಯ ನಿರ್ವಾಣಮಂ ಪಡೆದನಾಗಿ [ವಿ]ಷ್ಣು ಮುನಿಯು ಗುರುಸೇವೆಯೊಳೆ ತಪದಿಂ ವಿಕ್ರಯರ್ದಿ ಪುಟ್ಟಿರಲಿತ್ತ………. ನಗರದ ಜಯವರ್ಮನೆಂಬರಸನಾತನ ಮಂತ್ರಿ ಬಲಿಯೆಂಬನಾತನನುಜರು ಶುಕ್ರನುಂ ಬೃಹಸ್ಪತಿಯುಂ ಪ್ರಹ್ಲಾದನೆಂಬ ರತಿಪ್ರವೀಣರಾಗಿ ವಿದ್ಯಾಗರ್ವ ಪಿರಿದಾಗಿ ಮಿಥ್ಯಾತ್ವಕರ್ಮಮುದಯಮಾಗಿ ಆಶ್ಲಕದೊಳ್ ನಂಬುಗೆಯು ಪುಟ್ಟಿರಲೊಂದುದಿನಮಾ ಪುರದ ಬಹಿರುದ್ಯಾನವನ[ದ]ತ್ತ ಸಕಲಾಗಮ ಪಾರಾವಾರ ಪಾರಂಗತರಪ್ಪ ಅಕಂಪನಾಚಾರ್ಯರೈನೂರ್ವರ್ ಮುನಿಸಮೂಹಂಬೆರಸು ಬಂದಿರ್ದೊಡಾ ವಾರ್ತೆಯಂ ವನಪಾಲನಿಂದರಿದು ಪುರಜನ ಪರಿಜನ ಸಮೇತನಾಗಿ ತನ್ನ ಮಂತ್ರಿಯ ಗರ್ವಮಂ ಬಿಡಿಸಲೆಂದು ನಿನ್ನ ಮನದೊಳಾವುದೊಂದು ಸಂದೇಹಮುಂಟದಂ ದಿವ್ಯಮುನೀಂದ್ರರಿಂ ಕೇಳಿ ಧರ್ಮಕರ್ಮಸ್ವರೂಪಮಂ ತಿಳಿಯಲ್ ಬಪ್ಪುದೆನೆ ಬಲಿ ನುಡಿದಂ ಜೀವನುಂ ಧರ್ಮಕರ್ಮಮನುಪಾರ್ಜಿಸಿ ತತ್ಫಲಮಂ ಮರುಭವದೊಳುಂಬನೆಂಬೀ ಗಾವಿಲತನಮೇಕೆ ಜೀವಮನಾರು ಕಂಡಿಪ್ಪರ್ ಪರಿತ್ರಯಮೆಲ್ಲಿ ಸತ್ತವರೆಲ್ಲಿ ಕಂಡರ್. ಬರುವಲಿಯರ ಮಾತಂ ಕೇಳ್ದರಿಯದೆ. ದೆಸೆಗೆಟ್ಟು ಜೀವಮುಂ ಗತಿಯುಂ ಪುಣ್ಯಪಾಪಿಗಳುಮುಂಟೆಂದು ಇಹದ ಸುಖಕಿತವನಾಗವೇಡಾ ಜೀವಂ ಉಂಟೆಂಬುದಕ್ಕೆ ಶುಭಾಶುಭ ಕರ್ಮಂ ಕಟ್ಟಿ ಮುಂದಣ ಭವದೊಳುಂಬೆನೆಂಬುದಕ್ಕಂ ಸ್ವರ್ಗ ನರಕಂಗಳಿಪ್ಪುದಕ್ಕಂ ಸಾಕ್ಷಿಗಳಾರುಮಿಲ್ಲಮಿವೆಲ್ಲಂ ಗಾಳಿಯಂ ಗಂಟಿಕ್ಕುವಂತೆ ಮಾಯಾವ್ಯವಹಾರಮಿದಕ್ಕೆ ನಿಮ್ಮ…………….ದ ಭೋಗೋಪಭೋಗಂಗಳಂ ಕೆಡಿಸಿ ಒಡಲಂ ದಂಡಿಸಬೇಡೆಂಬ ಮಂತ್ರಿಯ ನುಡಿಯಂ ಕೇಳ್ದರಸಂ ನೊಂದು ಸೂರ್ಯನಿದಿರೊಳ್ ಜ್ಯೋತಿ ರಿಂಗಣಂ ಸುಳಿಯದಂತೆ ತನ್ನ ಮನದ ಮಿಥ್ಯಾಂಧಕಾರಮಂ ಮುನೀಂದ್ರನ ವಾ……….. ಬಲಿಯಂ ತನ್ನ ಕುಬುದ್ಧಿ ಕುಶ್ರುತಿಯಿಂ ಯೋಗಿಯ ವಾಕ್ಯಮಂ ಗೆಲ್ಲರಸನಂ ಮೆಚ್ಚಿಸುವೆನೆಂದು ಬರ್ಪಿನ ಜಯವರ್ಮಮಹಾರಾಜಂ ಪಾದಮಾರ್ಗದಿಂ ಬಂದಾ ಮುನೀಂ ………………. ಲ್ಲಾ ಋಷಿಯರುಮಂಗುರುಪರಿವಿಡಿಯಿಂ ಪಾದಾರ್ಚನೆ ನಮಸ್ಕಾರಮಂ ಮಾಡಿ ಕುಳ್ಳಿರ್ಪುದುಮದನ ಫಣಿ ವಿಷಹರಮಂತ್ರಮಾದ ಮೋಕ್ಷದ ನಿಚ್ಚಣಿಗೆಯೆನಿಪ ಸಧರ್ಮಸ್ವರೂಪಮಂ ಕೇಳ್ದೆಲ್ಲರುಂ ಸಂತುಷ್ಟರಾಗಿ……….. ನಿರ್ದ ಬಲಿಯುಂ ವಿಷಮಂ ಕಿಡಿಸುವ ಪತಂಗದ ಪುಳುವಿನಂತೆ ಬರಗೊಳಿಸಿದೀವ ತೆರದಿ ಜಿನಾಭಾಸಮನೆತ್ತಿ ವಾದಿಸೆ ದೃಷ್ಟಶ್ರುತಾನುಭೂತದಿಂ ನಿಜ ವಾಗ್ವಜ್ರಘಾತದಿಂ ಬಲಿಯ ಗರ್ವಪರ್ವತಮಂ ಚೂರ್ಣೀಕೃತಂ ಮಾಡೆ ಬಲಿಯು ಸಿಗ್ಗಾಗಿ ಕೇದಗೆಯೇರಿದ ಕೋಡಗದಂತೆ ಸಿಡಿಮಿಡಿಗೊಂಡು ಕ್ರೋಧಮಂಕುರಿಸಿ ಮುನೀಂದ್ರನಂ ಕೊಲಲ್ ಬಗೆದಾ ರಾತ್ರಿಯೊಳು ಯೋಗಂಗೊಂಡು ಕಾಯೋತ್ಸರ್ಗದೊಳಿರ್ದಕಂಪಾನಾಚಾರ್ಯನಂ ನಿಶಿತಮಪ್ಪಾಯುಧದಿಂ ಕೊಲಲ್‌ಬಗೆದೊಡಿವನ ದೇವತೆಗಳಾತನಂ ಸ್ತಂಭಿಸಿದೊಡೆಯರಸನರಿದಾ ಬಲಿ ಬೃಹಸ್ಪತಿ ಶುಕ್ರ ಪ್ರಹ್ಲಾದರೆಂಬ ನಾಲ್ವರುಮಂ ಕವರ್ತೆಗೊಂಡು ಪುರದಿಂಪೊರಮಡಿಸಲತ್ಯಂತ ದುಃಖದಿಂ ದೇಶಾಂತರದಿಂ ಭೋಗೋಪಭೋಗಮಂ ಪಡೆಯದೆ ಹಸ್ತಿನಾಪುರಮಂ ಪೊಕ್ಕಿರ್ದರಾಗಳ್ ಪದ್ಮಮಹಾರಾಜನ ಮೇಲೆ ಪರರಾಯರೆತ್ತಿ ಬಂದಿಪ್ಪುದುಂ ಬಲಿಯು ಪದ್ಮಮಹಾರಾಜನಂ ಕಂಡಾ ರಿಪುಜಯಕ್ಕೆ ಬೆಸನಂ ಬೇಡಿಕೊಂಡು ಬಲಂವೆರಸಿ ಪೋಗಿ ಸಿಂಹಕೀರ್ತಿಯ ಬಲನನಟ್ಟಿಕೊಂಡು ಪೋಗಿ ಕುಂಭಪುರಮಂ ಕೊಂಡಾತನಂ ಕಟ್ಟಿ ತಂದೊಪ್ಪಿಸುವುದು ಪದ್ಮಮಹಾರಾಜಂ ಮೆಚ್ಚಿನಿಂ ಮೆಚ್ಚಿದುದಂ ಬೇಡಿಕೊಂಬುದೆನೆ ಬಲಿಯೆಂದಂ ದೇವರುವಾನೆಂದು ಬೇಡುವೆನ್ನೆವರಂ ಭಂಡಾರದೊಳೆ ಇಪ್ಪುದಾನುಂ ಬೇಡಿದಾಗಲೀವುದೆನೆ ಆತಂಗೆ ಮಂತ್ರಿಪದಮನಿತ್ತು ಸುಖಮಿರ್ಪಿನಮಾ ಪೊಳಲ ಸಮೀಪ ಬಡಗಣದೆಸೆಯ ಸಿತಗಿರಿಯ ಗುಹಾವಾಸಕ್ಕಕಂಪನಾಚಾರ್ಯರೈನೂರ್ವರ್ ಮುನಿಸಮುದಾಯಂಬೆರಸು ವರ್ಷಾಕಾಲದ ಚಾತುರ್ಮಾಸಯೋಗಮಂ ಕೈಕೊಂಡಿಪ್ಪುದು ಬಲಿಯರಿದರಸುವ ಬಳ್ಳಿ ಕಾಲ ಸುತ್ತಿದಂತೀಗಲರಸಿಕೊಲ್ವ ಪಗೆ ಎನ್ನ ಕೈಗೆ ಸಿಕ್ಕಿದನೆಂದು ಪದ್ಮಮಹಾರಾಜನಲ್ಲಿಗೆವಂದೆನ್ನ ಮೆಚ್ಚಂ ದಯಗೆಯ್ವುದೆಂದೇಳು ದಿವಸಂಬರಂ ರಾಜ್ಯಾಧಿಕಾರಮಂ ಬೇಡಲಾತಂ ಕೊಟ್ಟ ವಾಕ್ಯಂ ತಪ್ಪಲಾಗದೆಮದಾತಂಗೆ ರಾಜ್ಯಮನೊಪ್ಪಿಸಿಯರಮನೆಯೊಳ್ ಪದಿನೈದು ದಿವಸಂಬರಂ ಶಿಶ್ಚಿಂತನಾಗಿರಲಾ ಬಲಿಯಂ ಮುನಿಸಮುದಾಯಮನನೇಕೋಪಸರ್ಗಂಗೆಯ್ದು ಕೊಲಲುದ್ಯೋಗಿಸಿ ಅರಸಂ ಸಮ್ಯಗ್ದೃಷ್ಟಿಯಪ್ಪುದರಿಂದರಿದೊಡೆನ್ನ ಪರಿಭಾವಿ ……… ರ್ಮಾಣನದರಿನುಪಾಯಾಂತರದಿಂ ಕೊಲ್ವೆನೆಂದು ರಾಜ ರಾಷ್ಟ್ರ ಸುಖಮಿಪ್ಪಂ ಶಾಂತಿಯಂ ಮಾಳ್ಪೆನೆಂದು ಲಕ್ಷ ಪಾರ್ವರ್ಗಂ ಸತ್ರಯಾಗಂ ಮಾಡಲ್ ನಿಯಮಿಸಿಯಾ ಪರ್ವತದೊಳರೆಗಾವುದ ವಿಸ್ತಾರ ಭೂಮಿ ಶೋಧನೆಯಂ ಮಾಡಿಸಿ ಷೋಡಶಮಹಾದಾನಂಗಳಂ ಮಾಡುತ್ತಾ ತಾನುಂ ಗುಹೆಯ ಬಾಗಿಲಿಗೆ ಬಂದು ಹಿಡಿಯಲ್ಲಿ ಐನೂರ್ವರ್ ಮುನಿಗಳ್ ಮಾಡುತ್ತಾ ಸಹಿತಂ ಶಾಂತರಸಭರಿತ ನಿಶ್ಚಲರಾಗಿ ಯೋಗಮಂ ಕೈಗೊಂಡು ಅನುಪ್ರೇಕ್ಷಾಭಾವನೆಯಿಂದಿರ್ದಕಂಪನಾಚಾರ್ಯನಂ ಕಂಡು ಸಿಕ್ಕಿದನೆಂದು ನೆನೆದು ಈ ಭಾಷೆಯೊಳೆ ನಾನು ಪ್ರಾಣಿಗಳಿರ್ದೊಡೆ ಪೊರಮಡುವಂತೆ ಗುಹೆಯ ಬಾಗಿಲ್ಗೆ ಪುಳ್ಳಿಗಳಂ ತಂದು ಒಟ್ಟಿ ಕಿಚ್ಚಂ ಹಾಕಿಸಲುದ್ಯೋಗಿಸಿಯನೇಕ ಜನಂಗಳಿಂ ಪುಳ್ಳಿಗಳನೊಟ್ಟಿಸಿ ಮಹೋಪಸರ್ಗದಿಂ ಕೊಲಲ್ ಬಗೆದುಮಿಪ್ಪಿನಮಿತ್ತಲ್ ವಿದೇಹವಿಷಯದ ಮಿಥಿಲಾಪುರದೊಳವಧಿಜ್ಞಾನಿಗಳಪ್ಪ ಧರ್ಮರುಚಿಜಿಷ್ಣುಮುನಿಗಳ್ ಅನೇಕ ಋಷಿ ಸಮುದಾಯಂಬೆರಸು ಯೋಗನಿಯೋ[ಗ]ದೊಳಿರ್ದು ಆಕಾಶದೊಳ್ ಶ್ರವಣನಕ್ಷತ್ರಂ ತಲ್ಲಣಿಸುತ್ತಿರಲವಧಿಯಿಂದೀ ಮುನೀಂದ್ರೋತ್ತಮರುಪಸರ್ಗಮನರಿದು ಹಸ್ತಿನಾಪುರದ ಸಿತಗಿರಿಯೊಳೈನೂರ್ವರ್ ಮುನಿಗಳ್ ಸಹಿತಮಾಗಿ ಯೋಗದೊಳಿರ್ದಕಂಪನಾಚಾರ್ಯರ್ಗೆ ಬಲಿಯು ಮಹೋಪಸರ್ಗಂ ಮಾಡಿ ನರಕಮುಖಕ್ಕೆ ಭಾಜನನಪ್ಪಂ. ವಾತ್ಸಲ್ಯಧರ್ಮಪ್ರಭಾವನೆ ನಿಮಿತ್ತಮಾರಾದರುಂ ಪೋಗಿಯದಂ ಬಾಧಿಸುವುದೆಂತು ಪರಮಾವಧಿಜ್ಞಾನಿಗಳಪ್ಪ ಜಿಷ್ಣುಮುನಿಗಳ್ ತಮ್ಮ ಶಿಷ್ಯರ್ಗೆ ಪೇಳೆ ಪುಪ್ಪುದೇವನೆಂಬ ಬ್ರಹ್ಮಚಾರಿಯದುವಿಂದಾ ಮಹಾಪಾತಕನಂ ಕೋಡಗಗಟ್ಟು ಕಟ್ಟಿ ಸಮುದ್ರದೊಳಿಕ್ಕುವೆನೆಂದು ತನ್ನ ವಿದ್ಯಾಸಾಮರ್ಥ್ಯಮಂ ತೋರಿದೊಡಾತನ ನಿಲಿಸಿ ವಾತ್ಸಲ್ಯರತ್ನಕರನಪ್ಪ ವಿಷ್ಣುಮುನಿಯಂ ಕಳುಹಿಸಲಾತಂ ಪ್ರಣಾದನಾನಿಮಿತ್ತಂ ಹಸ್ತಿನಾಪುರಮನೆಯ್ದಿ ಪದ್ಮಮಹಾರಾಜನರಮನೆಯಂ ಪುಗಲಾತಂ ಮುನಿಚರಣಗಳಿಗಭಿನಮಿಸಿ ಬೆಸಗೊಳೆ ಮಹಾಮುನೀಂದ್ರರ್ಗೆ ಬಲಿಯು ಮಾಳ್ಪುಪಸರ್ಗಮಂ ಪೇಳಲರಸನಾಸ್ಫೋಟಿಸಿ ತಾನೆ …………… ಲದಕಾನೆ ಸಾಲ್ಗುಮೆಂದು ನಿಲ್ಲಿಸಿ ಅಣಿಮಾದಿ ಗುಣಸಂಪನ್ನನಪ್ಪುದರಿಂ ಶೋಭಾಯಮಾದ ಕಿರಿದು ಶರೀರಮಾಗೆ ವಾಮನರೂಪಂ ಕೈಕೊಂಡು ದರ್ಭೆಪವಿತ್ರ ಧವಳಾಂತರೀಯೋತ್ತರೀಯಂ ವೇದಮೆಂದುದಾತ್ತಾನುದಾತ್ತ ಸ್ವರಿತ ಪ್ರಚಯ………… ತ್ಯಾಶ್ಚರ್ಯಮಾದ ವಾಮನರೂಪಂ ಕಂಡತಿಭಕ್ತಿಯಂ ನಮಸ್ಕಾರಂಗೆಯ್ದು ಮನಸಾಭೀಷ್ಟಮೇನದಂ ಕೊಡುವನೆಂದೊಡೆಮ್ಮ ನಿತ್ಯಾನುಷ್ಠಾನಕ್ಕೆಮ್ಮಡಿಯೊಳ್ ಮೂರಡಿ ಭೂಮಿಯನೀವುದೆ ………. ಯಲು ಬಂದ ಬಲಿಯಂ ಬೃಹಸ್ವತಿಶುಕ್ರರ್ ಬಂದು ತಡೆದೊಡಾ ವಿಷ್ಣುಮುನಿಯು ತನ್ನ ಪವಿತ್ರದಿಂದಾತನ ಮುಖಂ ಕಾಗಲಾ ಶುಕ್ರನದೊಮದು ಕಣ್ಣು ದರ್ಭೆ ತಾಗಿ ಪೋಗಲಂದಿಂದಿತ್ತಲ್ ಶುಕ್ರಂ ಕಂಗಳನೆಂದು ಕಲ್ಪಿಸಿದರಾ ವಿಷ್ಣುಮುನಿ ವಾಮನರೂಪಿಂ ಬೆಳೆದು ವಿಕ್ರಿಯೆಯಿಂ ಭೂಮಿಯೆಲ್ಲ ಮೊಂ[ದ]ಡಿಗಳತೆಯಾಗಲಾಕಶದೊಳೊಂದಡಿ ಮಾನುಷೋತ್ತರವ ಸುತ್ತಲಿನ್ನೊಂದಡಿಗೆಡೆಯಿಲ್ಲದೆ ನಿಲ್ವಿನ ದೇವರ್ಕಳೆಲ್ಲಂ ನೆರೆದು ಪಂಚಾಶ್ಚರ್ಯದಿಂ ಪೂಜಿಸಿ ಪೊಡೆವಟ್ಟರಾಗಳಕಂಪನಮುನೀಂದ್ರಂಗೆ ಋಷಿಸಮುದಾಯಕ್ಕಮುಪಸರ್ಗಮಂ ಪಿಂಗಿಸಿ ವಿಷ್ಣುಮುನಿಯು ಸ್ವಸ್ಥಾನಮನೆಯ್ದಿದನೆಲ್ಲರ್ ವಿಷ್ಣುದೇವರೆಂದು ಪ್ರಶಸಂಗೆಯ್ದರ್.

ಮತ್ತಮಯೋಧ್ಯಾನಗರದೊಳ್ ಸಹಸ್ರಬಾಹುವೆಂಬರಸಂ ರಾಜ್ಯಂಗೆಯ್ವಾಗಳ್ ಜಮಗದ್ನಿರಾಮನೆಂಬ ತಾಪಸನನೇಕ ಕಾಲಮರಣ್ಯದೊಳ್ ಕಲ್ಲಪುತ್ಥಳಿಯಂತಿರುತ್ತಿರೆ ದೇವತೆಗಳಿರ್ವರಾತನಂ ಪರೀಕ್ಷಿಸಲ್ ಆ ಕಾರಣದಿಂ ಭಗ್ನತಪನಾಗಿ ಬಂದು ಕನ್ಯಾದಾನಮೆಂದರಸನಂ ಬೇಡಲಾತಂ ತನ್ನ ಎಣ್ಬರ್ ಕುಮಾರಿಯರೊಳಾರಂ ಒಪ್ಪಿಸಿಕೊಂಡೊಡಾಕೆಯ ಕುಡುವೆನೆಂದೊಡಾರುಮೊಪ್ಪದಿರೆ ಕಿರಿಯ ರೇಣುಕಿಯಂ ಕುಡಲಕೆಯಂ ತನ್ನಾಶ್ರಮಕ್ಕೊಯ್ದಿರಿಸಿರ್ದಾಕೆಯಂ ಸ್ವೀಕರಿಸಿ ಕಾಮಭೋಗದೊಳಿರಲಾಕೆಯ ಗರ್ಭದೊಳಿಂದುರಾಮನುಂ ಪರಶುರಾಮರೆಂಬಿರ್ವರ್ ತನಯರಾಗಿ ಬೆಲೆದರೊಂದು ದಿನಂ ರೇಣುಕಿಯಣ್ಣಂ ವೈರಾಗ್ಯದಿಂ ದೀಕ್ಷೆಗೊಂಡು ಋದ್ಧಿಪ್ರಾಪ್ತನರಣ್ಯಚರ್ಯಮಾರ್ಗದಿಂ ಬರಲವರಂ ನಿಲ್ಲಿಸಿ ನವವಿಧ ಪುಣ್ಯ ಸಪ್ತಗುಣದಿಂ ತನುಜರ್ವೆರಸಾಹಾರದಾನಂ ಗೊಡಲವರ್ ಪರಸಿಪೋಪಾಗ ಎನಗಂ ಬಳುವಳಿ ಕೊಡಲಿಲ್ಲವೆಂದಡ್ಡಗಟ್ಟಿದೊಡೆ……….. ಮಂ ಹೇಳಿ ಕಾಮಧೇನುವಿದ್ಯಮನದಂ ರಕ್ಷಿಸಲ್ ಪರಶುವಿದ್ಯಮಂ ಪರಶುರಾಮಂಗಿತ್ತು ಪೋಗಲಾ ವಿದ್ಯೆಯಿಂ ಕಾಮಧೇನುವಂ ಪಡೆದು ಸುಖಮಿರಲೊಂದು ದಿನಂ ಸಹಸ್ರ ಬಾಹು ಕೃತವೀರಂಬೆರಸು ಚತುರಂಗದೊಡನೆತ್ತಿ ….. ತನಂ ಜಮದಗ್ನಿರಾಮಂ ನಿಲಿಸಿಯಾತಂಗಮವನ ದಳಮೆಲ್ಲಕ್ಕಂ ಮೃಷ್ಟಾನ್ನಪಾನಾದಿಗಳಿಂ ತೃಪ್ತಿಪಡಿಸಲತ್ಯಾಶ್ಚರ್ಯಮಾಗೆ ಅರಸನೀ ತಾಪಸಂಗಿಂತಪ್ಪ ಸಾಮರ್ಥ್ಯಮೆಂತಾದುದೆಂದು ಕೇಳಲ್ ಕೆಲರೆಂದರಾತನೊಳ್ ಕಾಮಧೇನುಮಿಪ್ಪುದೆಂದು ಪೇಳಲದಂ ಬೇಡಿಸಿದೊಡಂ ಕುಡದಿಪ್ಪುದುಂ ಬಲಸಹಿತಂ ಬಂದಾ ಜಮಗದ್ನಿರಾಮನಂ ಕೊಂದು ಕಾಮಧೇನುವಂ ಕೊಂಡು ಪೋಗಲಿತ್ತಲಿಂದುರಾಮ ಪರಶುರಾಮರ್ ಸಮಿದ್ಧರ್ಭೆಯಂ ತರಲ್ಬೋಗಿರ್ದು ಬಂದೊಡವರಬ್ಬೆ ಬಸುರಂ ಪೊಯ್ದು ದುಃಖಿಸಲೇನೆಂಬುದುಮರಸಂ ನಿಮ್ಮ ತಂದೆಯನಿಕ್ಕಿ ಕಾಮಧೇನುವನೊಯ್ದನೆಂಬುದುಂ ಪರುಷಗೊಡಲಿತನೆತ್ತಿಕೊಂಡೆಯ್ದಿ ಏಕಾಂಗ ವೀರನಾಗಿ ಪಟ್ಟಣಮಂ ಪೊಕ್ಕರಸನ ಚತರುಂಗಬಲಮೆಲ್ಲಮಂ ಕೊಂದು ಇದಿರಾದ ಸಹಸ್ರಬಾಹುವಂ ನೆಲಕ್ಕಿಕ್ಕಿ ರಾಜ್ಯದರಸುಗಳನೆಲ್ಲ ಇಪ್ಪತ್ತೊಂದು ಬಾರಿ ತವಿಸಿ ರಾಜ್ಯಮನಾಳುತ್ತಮನೇಕ ಅಗ್ರಹಾರ ಛತ್ರಾದಿಗಳಂ ಮಾಡಿಸಿದ್ದನಾ ಸಹಸ್ರಬಾಹುವಿನರಸಿ ಚಿತ್ರಮತಿ ಗರ್ಭಿಣಿಯಾಗಿರ್ದು ಪತಿವಿಯೋಗದೊಳ್ ತಪ್ಪಿಸಿಕೊಂಡು ಪೋಗಿ ಕೌಂಡಿಲ್ಯಶ್ರಮದೊಳೆ ಬಾಲಕನಂ ಪಡೆದು ಸಂಭೌಮನೆಂಬ ಪೆಸರಾಗಲಾತಂ ಬೆಳೆದು ಕಿರುಜವ್ವನದೊಳೆ ಪರಶುರಾಮನಂ ಕಡೆಗಾಣಿಸಿ ಚಕ್ರವರ್ತಿಯಾಗಿರ್ದು ಬಹ್ವಾರಂಭ ಪರಿಗ್ರಹನಾಗಿ ಜಿಹ್ವಾಲಂಪಟದಿಂ ಸಮುದ್ರತೀರದೊಳ್ ವ್ಯಂತರಂ ಜನ್ಮಾಂತರದಿಂ ಕೊಲೆ ಸತ್ತು ದುರ್ಗತಿಗೆ ಸಂದಂ.

ಮತ್ತಮಾ ಸಾಕೇತನಗರದ ……….. ಳಾನಂದನೆಂಬ ನೃಪಂ ಪುಟ್ಟಿ ಶ್ರಾವಕನೆಲೆಯೊಳ್ ನಿರಂತರಂ ನಡೆದುಮುಪಾಸಕಾಚಾರದೊಳೆ ನಡೆಯುತ್ತಂ ಸೂರ್ಯಬಿಂಬದೊಳಿಪ್ಪ ಕೃತ್ರಿಮ ಚೈತ್ಯಾಲಯದ ದೇವದೇವಂಗೆ ದಿನಂಪ್ರತಿಯೊಳರ್ಘ್ಯಪಾದ್ಯಾದಿಗಳಿಂ ಪೂಜಿಸಿ ನಮಸ್ಕರಿಸುತ್ತಿರ್ದನದರಿಂದಲ್ಲಿಂದಿತ್ತಲೆಲ್ಲರ್ ಸೂರ್ಯನಮಸ್ಕಾರಮಂ ಮಾಡುತ್ತಂ ಕೆಲಂಬರ್ ಸೂರ್ಯನೆ ದೇವರೆಂದು ಮತ್ತಂ ಸೌರಮತಮಾಯ್ತು.

ಮತ್ತಮಯೋಧ್ಯಾಪುರದ ಸಗರನೆಂಬ……… ವರ ಕಾರಣಮಾಗೆ ವಿಶ್ವಭಟಾರ ಬೆಸವಳಿಕಾವ್ಯದಿಂ ಮಧುಪಿಂಗಳಂ ದೀಕ್ಷೆವಡೆದು ಕ್ರೋಧದಿಂ ಸತ್ತು ಮಹಾಕಾಳಾಸುರನಾಗಿ ಸಗರವಂಶನಿರ್ಮೂಲನಂ ಮಾಡಲ್ ಪರ್ವತನೆಂಬಂಗಥರ್ವಣವೇದಮ ಚತುಃಷಷ್ಠಿಮರಿ ……………ಯಜ್ಞಮಂ ನಿರ್ಮಿಸಿ ಸಗರ ವಿಶ್ವಭೂಪಾಲಸಾದಿಗಳಂ ನೆಗಳಿಸಿಯಧೋಲೋಕಮಂ ಪುಗಿಸಿದಂದಿಂದಿತ್ತ ಲೌಕಿಕರೆಲ್ಲ ಹಿಂಸಾಯಾಗದುಂ ತಪ್ಪಿಸಿ ರಾಜಾದಿಗಳ್ಗೆ ಉಪದೇಶಂಗೆಯ್ದು ಪಶು ಮೊದಲಾದವಂ ಕೊಂದು……….. ಅಯೋಧ್ಯಾಪುರದ ರಾಮಸ್ವಾಮಿಯು ತ್ರಿಜಗದ್ಭೂಷಣಮೆಂಬ ಪಟ್ಟದಾನೆಯು ಮದಂ ಪುಟ್ಟಿ ಜನರಂ ವಧಿಯಿಸುತ್ತಂ ಬಪ್ಪಾಗಳ್ ಭರತನಂ ಕಂಡು ಜಾತಿಸ್ಮರನಾಗಿ ಪುಲ್ಲಂ ಕವಳಮಂಕೊಳ್ಳದೆ ಭರತನಂ ಬಿ………. ಪೂರ್ವಭವಪ್ರಪಂಚಮಂ ಕೇಳಿ ವ್ರತಮಂ ಕೈಕೊಂಡು ಮಧ್ಯಾಹ್ನಕಾಲದೊಳ್ ಮನೆಮನೆಬಾಗಿಲ್ಗೆಯ್ದಿ ಪ್ರಾಸುಕಮಾದಕುದ್ದಾಹಾರಮಂ ಕೊಂಡು ಕಾಲಂಗಂಡೊಡೆ ದೇವಲೋಕದೊಳುದಿಸಲಿತ್ತಲಾ ಪುರಜನಂ ಅವರಿಂದ್ರನ ಕಲೇವರಮಂ ಮಾಡಿಸಿ ಪೂರ್ವಮೇರೆ ನನಗಡಲೆ ಅಕ್ಕಿ ಚಿಕುಳಿ ತಂಬಿಟ್ಟು ಮೊದಲಾದವುಗಳಿಮದರ್ಚಿಸಿ ವರಮಂ ಪಡೆದು ವಿಘ್ನಂಗಳಂ ಜಯಿಸಿದುದರಿಂ ವಿಘ್ನೇಶ್ವರನುಡಿವ ಸಮೂಹಕ್ಕಧೀಶನಾದುದರಿಂ ಗಣೇಶನೆಂದು ಪೆಸರಿಟ್ಟರ್. ಅಲ್ಲಿಂದಿತ್ತಲ್ ಸರ್ವರು ಭಾದ್ರಪದ ಶುದ್ಧ ಚೌತಿ ಮೊದಲಾಗೆ ಗಣೇಶನಂ ಪೂಜಿಸುವರ್. ತತ್ಪುತ್ರೆಂದು ಕೆಲಂಬರ್ ಗಾಣಾಪತ್ಯರಾದರ್.

ಮತ್ತಂ ವಜ್ರಬಾಹುವೆಂಬರಸಂ ವನವಿಹಾರಕ್ಕೆ ಪೋಗಿ ಶ್ರೀಶೈಲದೊಳೆ ಮತ್ತಿಯ ವೃಕ್ಷದೊಳು ಮಲ್ಲಿಕಾಲತಾರೋಹಣಮಾಗಿರಲಲ್ಲಿ ದೇವತಾಸಂಕಲ್ಪದಿಂ ಪೂಜಿಸಲಲ್ಲಿ ಮಲ್ಲಿಕಾರ್ಜುನನೆಂದು ಪೆಸರಾಯ್ತು. ಆ ಕಾಲದೊಳ್ ಭಾರದ್ವಾಜ ಕಾಶ್ಯಪಾದಿ ಋಷಿಗಳ್ಗಂ ಕಪಿಳಸಿದ್ಧಾಂತ ಮರ್ಯಾದೆಯಿಂದಲೆ ದೇವತಾಭೇದಂಗಳಂ ವಿಂಗಡಿಸಿ ಬ್ರಹ್ಮ ವಿಷ್ಣು ಮಹೇಶ್ವರರೆಂದಿವರ ಕಥೆಯ ಇತಿಹಾಸಂಗಳೆಂದು ದೃಷ್ಟ ಶ್ರುತಾನುಭವಕ್ಕಂ ವಿರೋಧಮಾಗಿಯು ಜನರೆಲ್ಲಂ ನಂಬಿಸಿ ಆಗಮಪ್ರಮಾಣಮೆಂದು ಸೃಷ್ಟಿ ಸ್ಥಿತಿಲಯಕ್ಕೆ ಬ್ರಹ್ಮಾದಿಗಳೆ ಕರ್ತೃಗಳೆಂದುಂ ವಿಪರೀತಮಾಗೆ ರಚಿಸಲಲ್ಲಿ ಕೆಲಂಬರ್ ವಿಷ್ಣುಪಕ್ಷಮಂ ಪಿಡಿದು ವಿಷ್ಣುದೇವರೆಂದರ್. ಕೆಲಂಬರ್ ಕೆಲರ್ ರುದ್ರಾದೇವತಾ ಎಂದೀಶ್ವರನೆ ದೇವನೆಂದು ನಂಬಿ ಸರ್ವೋತ್ಕೃಷ್ಟನೆಂದುಮವರವರೊಳೆ ಭೇದಂಗಳ್ ಪುಟ್ಟಿರಲಲ್ಲಿ ಮೂದೇವರುಮೊಂದೆಂದು ಅನುಮಾನಮಾಗೆ ಕೆಲರೆಂದರು.

ಶ್ಲೋಕ ||ಆದಿಶಕ್ತಿಮಯಂ ಬೀಜಂ ಬೀಜಶಕ್ತಿಮಯಂ ಶಿವಃ
ಶಿವಶಕ್ತಿಮಯಂ ವಿಷ್ಣುಃ ಸರ್ವಂ ವಿಷ್ಣುಮಯಂ ಜಗತ್ ||
ಕಾರ್ಯಂ ವಿಷ್ಣು ಕ್ರಿಯಾ ಬ್ರಹ್ಮಕಾರ …….. ಮಹೇಶ್ವರಃ
ಏಕಮೂರ್ತಿ ತ್ರಯೋಭಾಗಾಃ ಬ್ರಹ್ಮ ವಿಷ್ಣು ಮಹೇಶ್ವರಃ ||

ಎಂದನೇಕ ತೆರೆದ ಪೂರ್ವಾಪರವಿರೋಧಮಾಗೆ ಶಾಸ್ತ್ರಮಂ ಕಲ್ಪಿಸಿದರವರೊಳ್ ಭಾಟ್ಟ ಪ್ರಭಾಕರ ಮೀಮಾಂಸಕ ವೈಭಾಷ್ಯಕ ಶೋತಾಂತ್ರಿಕ ಯೋಗಾಚಾ …….. ದಿವರ್ಗೆ ಪರಸ್ಪರ ವಿರೋಧಂ ಪುಟ್ಟಿ ತಮ್ಮ ಶಾಸ್ತ್ರಂಗಳಿಂ ವಿರೋಧಂ ಪುಟ್ಟಿ ವಾದಿಸುತ್ತಮಿರ್ದರ್. ಅಗಲಯೋಧ್ಯೆಯೊಳ್ ಸಹಸ್ರರಥಕುಮಾರಂ ಶತರಥನೆನಿಸಿದಜಮಹಾರಾಜನನರಣ್ಯನೆಂದು ಪೊಗಳಿಸಿಕೊಂಡು ರಘು……….. ಸಮ್ಯಕ್ತ್ವಚೂಡಾಮಣಿಯೆನಿಸಿರ್ದು ಕೆಲಮತದವರನುಪದೇಶದಿಂ ಸನ್ಮಾರ್ಗಮಂ ಪೊರ್ದಿಸಿದಂ

ಕಂ ||      ಇಂತೀ ಕಥೆಯಂ ಕೇಳ್ವರ
ಭ್ರಾಂತಿಯು ನೆರೆಕೆಟ್ಟು ಬಳಿಕಮಾಯುಂ ಶ್ರೀಯುಂ
ಸಂತಾನವೃದ್ಧಿ ಸಿದ್ಧಿಯ
ನಂತ ………………………………… ನಿಸಂಗುಂ

ಗದ್ಯ ||   ಇದು ಸತ್ಯಪ್ರವಚನ ಕಾಲಪ್ರವರ್ತನ ಕಿಂಚಿದದ್ಭುತ ವಿಬುಧೇಂದು ವಿರಚಿತಮಾದ ರಾಜಾವಲೀ ಕಥಾಸಾರದೊಳ್ ಷಣ್ಮತಾದಿಯುತ್ಪತ್ತಿನಿರೂಪಣಂ

ತೃತೀಯಾಧಿಕಾರಂ