ಶ್ರೀಸಂಜನಸ್ತುತರಖಿಳ ಕ
ಳಾಸದನರ್ ಮೋಹತಿಮಿರಮಂ ಕಳೆದು ಕರಂ
ಭಾಸುರ ವಿಚಾರದಕ್ಷರ್

ವೈಷಮ್ಯಮನುಳಿದು ಕೇಳ್ವುದೀ …….

…………… ಲಕ್ಷಕೋಟಿ ಸಲ್ವಿನಮಾಕಾಲದ ಸ್ತ್ರೀಪುರುಷರು ನಾನೂರೈವತ್ತು ಚಾಪೋನ್ನತರುಂ ಎಪ್ಪತ್ತೆರಡು ಲಕ್ಷ ಪೂರ್ವೆ ಪರಮಾಯುಷ್ಯರುಮಾಗಿರ್ದೊಡಾಗಳು ಸಾಕೇತ ಪುರದ ಜಿನಶತ್ರು…… ಕಂ ಪಂಚಕಲ್ಯಾಣಸಂಪತ್ತಿಯಿಂ ಚತುತ್ರಿಂಶರತಿಶಯ ಸಮವಸರಣ ವಿಭೂತ್ಯಷ್ಟಮಹಾಪ್ರಾತಿಹಾರ್ಯ ಬಹಿರಂಗ ಲಕ್ಷ್ಮಿಯನಂತಜ್ಞಾನಾದ್ಯಂತರಂಗ ಲಕ್ಷ್ಮಿಗಂನಾಥನಾಗಿ ಮುಕ್ತಿಯನೆಯ್ದಿದನಾ ….. ವತಿಗಂ ಸಗರನೆಂಬೆರಡನೆಯ ಸಕಲ ಚಕ್ರಿಯ ಅರವತ್ತುನಾಲ್ಕು ಸಾಸಿರ ಕುಮಾರರು ನಿಚ್ಚ ನಿಚ್ಛಂ ತಂದೆಯಂ ಬೆಸನಂ ಬೇಡುತಿರ್ದೋಡಾವುದುಮಂ ಕಾಣದೆ ಮುನ್ನ ಭರತೇಶ್ವರಂ ಕೈಲಾಸಗಿರಿಯೊಳು ರತ್ನಮಯಮಾಗಿ ಮಾಡಿಸಿರ್ದ ಭೂತ ಭವಿಷ್ಯದ್ವರ್ತಮಾನ ತೀರ್ಥಂಕರ ಚೈತ್ಯಾಲಯಂಗಳಾತನ ಸುತನಪ್ಪ ಅರ್ಕಕೀರ್ತಿಯಾ ಪರ್ವತಮನೇರಲು ಮನುಷ್ಯರ್ಗಶಕ್ಯಮಪ್ಪಂತು ಪರ್ವತಮಂ ಖಂಡಿಸಿ ಅಷ್ಟಾಪದಮಾಗೆ ಮಾಡಿಪ್ಪನಾ ಗಿರಿಗೆ ಗಂಗಾನದಿಯ ಕಾಲ್ವೆಯಂ ತಂದು ವೇಷ್ಟಿಸುವುದೆಂದು ಭಗೀರಥ ಮೊದಲಾದ ಸುತರ್ಗೆ ಬೆಸಸಲಾತಂ ಪೋಗಿ ಪ್ರಯತ್ನದಿಂದನುಜರ್ಗಾದಿತ್ಯಭವ ಸಗರನ ಮಿತ್ರನಾದ ದೇವಂ ಬಂದು ಬೋಧಿಸಿದೊಡಂ ನಿರ್ವೇಗಮಾಗದೊಡೆ ಕುಮಾರರಲ್ಲಿಗೆಯ್ದಿ ನಾಗೇಂದ್ರಂ ಕೋಪಿಸಿ ಎಲ್ಲರಂ ದಹಿಸಿದಂತೆ ಪರವಶರಂ ಮಾಡಿ ತಾನುಂ ಬ್ರಾಹ್ಮಣವೇಷದಿಂದೊಂದು ಮೃತಕಪುತ್ರನಂ ಪೊತ್ತು ಸಗರನಲ್ಲಿಗೆ ಬಂದು ಬೇಡಿದುದಂ ಕೊಡುವ ಬಿರುದುಳ್ಳವ ನೀನೆನ್ನ ಪುತ್ರಂಗೆ ಜೀವಮಂ ದಯಗೆಯ್ವುದೆಂದು ಕಾಡಿದೊಡಂ ನಿನ್ನ ಮಗನ ಜೀವಂ ಬಳೆವಡೆಯೆಂದು ಸಾಯದಿರ್ದವರ ಮನೆಯ ಪುಲ್ಲಂ ತಂದೀಯಲದರಿಂ ಪ್ರಯೋಗಿಸಲಕ್ಕುಮೆಂದು ಮತ್ತಮಧ್ರುವಾಶರಣಾದಿಯನುಪ್ರೇಕ್ಷೆಯಂ ನಿಶ್ವಯಮಪ್ಪ ತತ್ವೋಪದೇಶಂ ಮಾಡಲಾದೊಡೀ ನಿಶ್ಚಯಂ ಎನಗೊ ನಿನಗುಮಪ್ಪುದೊ ಎನಲು ಚಕ್ರಿಯೆಂದನೆನಗೆ ಮೊದಲ್‌ನಿನಗೆ ಕಡೆಯೆನಲಾದೊಡೆ ನಿನ್ನರುವತ್ತುನಾಲ್ಸಾಸಿರ ಕುಮಾರರು ದಹನವಾದರೆನೆ ಅಂತಃಪುರದ ಜನರು ಹಾಹಾರವದಿಂ ಕವಿದು ಕಾಲ…. ಬಿದ್ದು ಪೊರಳುತ್ತಿರಲಾ ದುಃಖಮಂ ಸೈರಿಸಿ ತ್ರಿವಿಧನಿರ್ವೇಗದಿಂ ತಪಮಂ ಕೈಕೊಂಡೊಡಾ ವಾರ್ತೆಯನಾ ಕುವರರನೆಬ್ಬಿಸಿ ದೇವಂ ಪೇಳ್ದುದುಮನಿಬರುಂ ತಪೋನಿರತರಾದರು. ಭಗೀರಥಂ ಗಂಗೆಯಂ ತಂದು ಕೈಲಾಸಕ್ಕೆ ಖಾತಿಕೆಯಂ ಮಾಡಿ ದ್ವಾದಶವಿಧ ತಪದಿಂ ದೇವರ್ಕಳಿಂ ಗಂಗಾದಿ ಜಲಂಗಳಿಂದಭಿಷೇಕಾ…. ಬಂದು ಕಾಶಿತ್ರಿವೇಣೀತೊರೆಯ ತಟದೊಳು ಯೋಗದೊಳ್ ನಿಲ್ವುದುಂ ತಪಃಪ್ರಭಾವಕ್ಕೆ ದೇವರ್ಕಳ್ ನೆರೆದು ಗಂಗಾತೀರ್ಥಮಂ ತಂದು ಪಾದಾಭಿಷೇಕಂಗೆಯ್ದೊಡಾ ತೀರ್ಥೋದಕಂ ತೊರೆಯೊಳ್ ಪರಿಯಲಂದಿಂದಿತ್ತಲಾ ನದಿಗೆ ಗಂಗೆಯೆಂಬ ಪೆಸರಾಗಿ ಭಗೀರಥ ಗಂಗೆಯಂ ತಂದಂ…….. ವತಿಯೆಂದು ಕೊಂಡಾಡುವರು.

ಮತ್ತಮಾ ಕಾಲದೊಳು ಜಿತಶತ್ರುವೆಂಬೆರಡನೆ ರುದ್ರಂ ಪುಟ್ಟಿಯನೇಕ ವಿದ್ಯಮಂ ಕಲ್ತು ಮಿಥ್ಯಮಂ ಪೊರ್ದಿ ಮಹಾಗಜಮಂ ಕೊಂದಾ ಚರ್ಮಮಂ ಪೊದೆದು ಭಸ್ಮ ರುದ್ರಾಕ್ಷಿ ತ್ರಿಶೂಲ ಫಣಿಕುಂಡಲಾದಿಗಳಂ ಧರಿಸಿ ಕೈಲಾಸದೊಳೆ ಚರಿಸುತ್ತಿದ್ದಧೋಗತಿ ಪ್ರಾಪ್ತನಾದಂ. ಆ ಅಜಿತತೀರ್ಥಸಂತಾನಕಾಲಂ ಮೂವತ್ತು ಲಕ್ಷಕೋಟಿ ಸಲ್ವಿನಮಾಕಾಲದೊಳು ನಾನೂಱುಧನುರುತ್ಸೇಧಮುಮಱುವತ್ತುಲಕ್ಷ ಪೂರ್ವಾಯುಷ್ಯಮಾಗಲಾ ಕಾಲದೊಳು ಶ್ರಾವಸ್ತಿನಗರಾಧಿಪತಿ ಜಿತಾರಿಮಹಾರಾಜನರಸಿ ವಸುಷೇಣಾದೇವಿ ಪುತ್ರನಾಗಿ ಶಂಭವಭಟ್ಟಾರಕನುದಿಸಿ ತ್ರಿಲೋಕಸ್ವಾಮಿಯಾಗಿ ಮುಕ್ತಿಯಂ ಪಡೆದಂ. ಆತನ ಸಂತಾನಂ ಪತ್ತು ಲಕ್ಷಕೋಟಿ ಸಾಗರಂ ಸಲೆ ಮುನ್ನೂರೈವತ್ತುಮೂರು ಉತ್ಸೇದಮೈವತ್ತು ಲಕ್ಷ ಪೂರ್ವೆ ಪರಮಾಯುಷ್ಯಮಾಗೆ ಅಯೋಧ್ಯಾಧೀಶ್ವರ[ಸ್ವಯಂ] ಬರ ಮಹಾರಾಜಂಗಂ ಸಿದ್ಧಾರ್ಥಾಮಹಾದೇವಿಗಭಿನಂದತೀರ್ಥಂಕರರುದಿಸಿ ಕೈವಲ್ಯದ ರಮಾಕಾಂತನಾದನಾತನ ಸಂತಾನಂ ನವಲಕ್ಷಕೋಟಿ ಸಾಗರೋಪಮ ಕಾಲಂ ಸಲ್ವಿನ ಮುನ್ನೂರು ಕಾರ್ಮುಖೋನ್ನತಮುಂ ನಾಲ್ವತ್ತು ಲಕ್ಷ ಪೂರ್ವಾಯುಷ್ಯಮಾಗೆ ಜಿನಪುರದ [ಘೋಷ] ರಥಮಹಾರಾಜಂಗಂ ಮಂಗಲಾವತಿಮಹಾದೇವಿಗಂ ಗರ್ಭಾವತರಣಕಲ್ಯಾಣಪೂರ್ವಕಂ ಪುಟ್ಟಿದ ಶ್ರೀಸುಮತಿತೀರ್ಥಂಕರಂ ಕರ್ಮಾಷ್ಟಕವಿನಿರ್ಮುಕ್ತನಾಗಿ ನಿರ್ವಾಣ ಪ್ರಾಪ್ತನಾದಂ. ಆ ಸಂತಾನಂ ತೊಂಬತ್ತು ಸಹಸ್ರಕೋಟಿ ಸಾಗರ ಕಳಿಯೆ ಕೌಶಂಬಿ ಪುರಾಧಿಪನರುಣಮಹಾರಾಜಂಗಂ ಸುಸೀಮದೇವಿಗುದ್ಭವಿಸಿದ ಶ್ರೀಪದ್ಮಪ್ರಭಸ್ವಾಮಿ ಮೂವತ್ತು ಲಕ್ಷಾಯುಷ್ಯಮಿನ್ನೂರೈವತ್ತು ಚಾಪೋನ್ನತಮಾಗೆ ತೀರ್ಥಂಕರ ವಿಭೂತಿಯನಾಂತು ಶ್ರೇಯೋಲಕ್ಷ್ಮಿಯಂ ಕೈಕೊಂಡಂ.

ಅಲ್ಲಿಂದಿತ್ತಲಾ ಸಂತಾನಂ ಒಂಬತ್ತು ಸಹಸ್ರಕೋಟಿ ಸಾಗ …………. ಸಲೆ ವಾರಣಾಸಿಪುರದ ಸುಪ್ರತಿಷ್ಠಮಹಾರಾಜಂಗಂ ಪೃಥ್ವೀಮಹಾದೇವಿಗಮುದ್ಭವಿಸಿದ ಸುಪಾರ್ಶ್ವ ಭಟ್ಟಾರಕಂಗಿಪ್ಪತ್ತು ಲಕ್ಷ ಪೂರ್ವಾಯುಷ್ಯಂ ಇನ್ನೂರು ಚಾಪೋತ್ಸೇಧನುಮಾಗಿ ರಾಜ್ಯಕಾಲದೊಳು ದೀಕ್ಷೆಗೊಂಡು ಉಪಸರ್ಗಮಂ ಸೈರಿಸಿ ಕೇವಲಜ್ಞಾ………….. ಯು ನಿಃಶ್ರೇಯಸ ಸುಖಪ್ರಾಪ್ತನಾದಂ.

ಆ ತೀರ್ಥಸಂತಾನಮೊಂಬೈನೂರು ಕೋಟಿ ವರ್ಷಂ ಸಲೆ ಚಂದ್ರಾಪುರದ ಮಹಾಸೇನಮಹಾರಾಜಂಗಂ ಲಕ್ಷ್ಮಣಾಮಹಾದೇವಿಗಂ ಚಂದ್ರಪ್ರಭತೀರ್ಥಂಕರನುದಿಸಿ ನೂರೈವತ್ತು ಮಾರುದಯದೇಹಂ……………

ಆ ತೀರ್ಥಸಂತಾನಂ ತೊಂಬತ್ತು ಕೋಟಿ ವರ್ಷಂ ಸಲೆ ಚಂದ್ರಾಪುರದ ಮಹಾಸೇನಮಹಾರಾಜಂಗಂ ಲಕ್ಷ್ಮಣಾಮಹಾದೇವಿಗಂ ಚಂದ್ರಪ್ರಭತೀರ್ಥಂಕರನುದಿಸಿ ನೂರೈವತ್ತು ಮಾರುದಯದೇಹಂ…….

ಆ ತೀರ್ಥಸಂತಾನಂ ತೊಂಬತ್ತು ಕೋಟಿ ಸಾಗರಂ ಸಲೆ ಕಾಕಂದಿಪುರದ ಸುಗ್ರೀವ ಮಹಾರಾಜಂಗಂ ಜಯರಾಮಾಮಹಾದೇವಿಗಮುದಿಸಿದ ಪುಷ್ಪದಂತರೆಂಬ ಸುವಿಧಿ ತೀರ್ಥಂಕರಂಗೆರಡು…………ಬ ಮೂರನೆಯ ರುದ್ರಂ ಉಮೆಯೆಂಬ ಕನ್ನೆಯಂ ಸ್ವೀಕರಿಸಿ ಸ್ವೇಚ್ಛೆಯಿಂ ವಿಕೃತವೇಷನಗಿ ಬೇಂಟೆ ಮೊದಲಾದ ವ್ಯಸನಂಗಳಂ ತಾಳ್ದು ಮಹಾವ್ಯಾಘ್ರನಂ ಕೊಂದಾ ಚರ್ಮಮಂ ಪೊದೆದು………. ಸಾಗರೋಪಮಂ ಕಳಿಯೆ ಆ ಕಾಲದ ಕಡೆಯೊಳ್ ಪಲ್ಯೋಪಮದ ಚತುರ್ಭಾಗಕಾಲಂ ಸದ್ಧರ್ಮಮಂ ಪೇಳ್ವರುಂ ಕೇಳ್ವರುಂ ಧರಿಸಿ ನಡೆವರುಮಿಲ್ಲದೆ ವ್ಯಸನಿಗರಾಗಿ ಮಿಥ್ಯಮಂ ಪೊರ್ದಿ ಕಾಲಾದಿ ವಾದಂಗಳು ಪುಟ್ಟಿದವು……… ಮಿಥ್ಯಂಗಳು ಪ್ರಬಳಮಾದವು. ಆರುಭೇದದ ತತ್ತ್ವಂಗಳು ಪುಟ್ಟಿದವಷ್ಟರೊಳು ಭದ್ರಿಳಾಪುರದ ದೃಢರಥಮಹಾರಾಜಂಗಂ ಸುನಂದಾ ಮಹಾದೇವಿಗಂ ಪುಟ್ಟಿದ ಶೀತಳತೀರ್ಥಂಕರಂಗೊಂದು ಲಕ್ಷ ಪೂರ್ವಾಯುಷ್ಯಂ ಪೂರ್ವೆಯೆಂಬುದು ಎಂಬತ್ತುನಾಲ್ಕುಮಂ ವರ್ಧಿಸಿ ಎಪ್ಪತ್ತು ಖರ್ವಮುಮೈವತ್ತಾರು ಅರ್ಬುದ ಮತ್ತು ತೊಂಬತ್ತುಮೂರುನ್ನತ ಶರೀರಪ್ರಮಾಣಮಾಗೆ ಪಂಚಕಲ್ಯಾಣದಿಂ ಪಂಚಮಜ್ಞಾನಮಂ ಪಡೆದು ಪಂಚಸಂಸಾರಮಂ ದಾಂಟಿಸುವ ಸದ್ಧರ್ಮಮಂ ಭವ್ಯರ್ಗುಪದೇಶಂಗೆಯ್ದು ಪಂಚಮಗತಿಪ್ರಾಪ್ತನಾದಂ.

ಆ ಕಾಲದೊಳೆ ವಿಶ್ವಾನನನೆಂಬ ನಾಲ್ಕನೆ ರುದ್ರಂ ವಿದ್ಯಾಸಾಧನೆಯಿಂದನೇಕ ತೆರದಿಂ ವಿಪರೀತ ಮಿಥ್ಯಮಂ ಪ್ರಕಟಿಸಿ ಕಶ್ಯಪಂಗಂ ಮೇನಕಿಗಂ ಪುಟ್ಟಿದ ಗೌರಿಯಂ ಪರಿಗ್ರಹಿಸಿ ಲೀಲಾಸ್ವರೂಪಂ ತೋರಿ ಅಧೋಗತಿಗೆ ಸಂದನಾ ಕಾಲದೊಳೆ ಮುಂಡ ಶಾಲಾಯನನೆಂಬ ಪಾರ್ಥನಿಂದವಧಾನಂ ಪ್ರಕಟಮಾಯ್ತು. ಆ ಸಂತಾನಮರುವತ್ತಾರು ಲಕ್ಷಮಿಪ್ಪತ್ತಾರು ಸಾಸಿರ ವರ್ಷಂ ಕುಂದಿದೊಂಡು ಕೋಟಿ ಸಾಗರಕಾಲಂ ಸಲೆ ಕಡೆಯೊಳ್ ವಿಶ್ವಾನಳನೊಳೊಂದು ಪಲ್ಯಕಾಲಂ ಸದ್ಧರ್ಮಮಂ ತರಿಸಿಪ್ಪುದು ಸಿಂಹಪುರಾಧಿಪತಿ ವಿಷ್ಣುಮಹಾರಾಜಂಗಂ ವೇಣುಮಹಾದೇವಿಗಂ ಪುಟ್ಟಿದ ಶ್ರೇಯಾಂಸಭಟ್ಟಾರಕಗೆಂಬತ್ತುನಾಲ್ಕು ಲಕ್ಷ ವರ್ಷ ಪರಮಾಯುಷ್ಯಮೆಂಬತ್ತು ದಂಡೋನ್ನತ ಶರೀರನಾಗಿ ಕೇವಲಜ್ಞಾನಿಯಾಗೆ ಸಮವಸರಣದೊಳ್ ಈಶ್ವರಯುಕ್ಷನುಂ ಗೌರಿದೇವಿಯಕ್ಷಿಯುಂ ಓಲಗಂಗೊಡೆ ಕಡೆಯೊಳು ಮುಕ್ತಿಶ್ರೀಯಂ ಕೈಕೊಂಡನಾ ಕಾಲದೊಳು ಪ್ರಥಮ ರಾಮ ಕೇಶವರು ಪೌದನಾಪುರದ ಪ್ರ……… ಮಹಾರಾಜಂಗಂ ವಿಜಯಾವತಿ ಮೃಗಯಾವತಿಗಂ ವಿಜಯನೆಂಬ ಬಲರಾಮನಂ ತ್ರಿಪೃಷ್ಟನೆಂಬ ಕೇಶವರಾಗಿ ಅಶ್ವಗ್ರೀವನೆಂಬ ಖೇಚರಚಕ್ರವರ್ತಿಯವನ ಚಕ್ರದೊಳೆ ಕೊಂದು ತ್ರಿಖಂಡಮಂಡಲಾಧೀಶ್ವರಮಾಗಿರ್ದು ಕೇಶವಂ ಕೃಷ್ಣಲೇಶ್ಯದಿ ಸಪ್ತಮ ಪೃಥ್ವಿಗಿಳಿದಂ. ವಿಜಯಂ ತಪದಿಂದ……… ಮ ಪಡೆದನಶ್ವಗ್ರೀವನಧೋಗಾಮಿಯಾದಂ. ಭೀಮನೆಂಬ ವಿದ್ಯಾಧರಂ ನೈಷ್ಠಿಕಬ್ರಹ್ಮಚಾರಿಯಾಗಿ ನಾರದನಾಗಿರ್ದು ಸ್ವಭ್ರಮನೆಯ್ದಿದನಾಗಳ್ ಸುಪ್ರತಿಷ್ಠನೆಂಬೈದನೆಯ ರುದ್ರನಾದನಾ ಸಂತಾನಮೈವತ್ತುನಾಲ್ಕು ಸಾಗರೋಪಮಕಾಲಂ ಸಲ್ವಿನ ಕಡೆಯೊಳ್ ಪಲ್ಯೊ……. ತುರ್ಭಾಗೆಯೊಳೆ ರುದ್ರಾದಿಗಳಿಂ ಮಿಥ್ಯಾತ್ವಂ ಪಿರಿದಾಗಿ ಸದ್ಧರ್ಮಂ ಕೆಟ್ಟಿರ್ದೊಡೆ ಚಂಪಾಪುರಧೀಶ್ವರನಪ್ಪ ವಸುಪೂಜ್ಯಮಹಾರಾಜಂಗಂ ವಿಜಯಾ ಮಹಾದೇವಿಗಂ ವಾಸುಪೂಜ್ಯತೀರ್ಥಂಕರ ಪರಮದೇವ ಪುಟ್ಟಿ ಎಪ್ಪತ್ತೆರಡು ಲಕ್ಷ ವರ್ಷಾಯುಷ್ಯಮಯಪ್ಪತ್ತು ಕಾ……. ನತನಾದನಾ ಕಾಲದೊಳ್ ದ್ವಾರಾವತಿ ಪುರದೊಳಚಲನಂ ದ್ವಿಪೃಷ್ಟನೆಂಬ ರಾಮಕೇಶವರಾಗಿ ತಾರಕನೆಂಬ ಪ್ರತಿಕೇಶವನಂ ಅವನ ಚಕ್ರಂ ಕೊಂದು ಅರ್ಧಚಕ್ರಿಗಳಾದರಾಗಳ್ ಮಹಾಭೀಮನೆಂಬೆರಡನೆ ನಾರದನಾದಂ ಅಗಳೆ ಅಚಲನೆಂಬಾರನೆ ರುದ್ರನಾದನಾ ಸಂತಾನಕಾಲಂ ಮೂವತ್ತು ಸಾಗರೋಪಮದ ಕಡೆಯೊಳೊಂದು ಪಲ್ಯೋಪಮಂ ಧರ್ಮಂ ಕೆಡಲಾಗಳ್ ಕಾಪಿಲ್ಯಪುರಾಧಿಪಂಕೃತವರ್ಮಮಹಾರಾಜಂಗಂ ಜಯಶ್ಯಾಮಾಮಹಾದೇವಿಗಂ ಗರ್ಭಾವತರಣಪೂರ್ವಕಂ ಪುಟ್ಟಿದ ವಿಮಲತೀರ್ಥಂಕರರುವತ್ತು ಲಕಷ ವರ್ಷಾಯುಷ್ಯನರವತ್ತು ಚಾಪೋನ್ನತನಾಗಲತ್ತಲ್‌ದ್ವಾರಾವತಿಯೊಳ್ ಸುಧರ್ಮ ಸ್ವಯಂಬುಗಳೆಂಬ ಬಲ ಕೇಶವರ್ ಪ್ರತಿಕೇಶವಂ ಮೇರಕಂ ರುದ್ರನೆಂಬ ಮೂರನೆ ನಾರದಂ ಪುಂಡರೀಕಮೆಂಬೇಳನೆ ರುದ್ರನುಮಾದರಾ ಕಾಲ ತೊಂಬತ್ತು ಸಾಗರೋಪಮಂ ಸಲ್ವಿನ ಸಾಕೇತ ನಗರದ ಸಿಂಹಸೇನಮಹಾರಾಜಂಗಂ ಲಕ್ಷ್ಮೀಮತಿಮಹಾದೇವಿಗಂ ಸ್ವರ್ಗಾವತರಣ ಕಲ್ಯಾಣಪೂರ್ವಕಂ ಪುಟ್ಟಿದನಂತತೀರ್ಥೇಶ್ವರಂಗೆ ಮೂವತ್ತು ಲಕ್ಷ ವರುಷಾಯುಷ್ಯಂ ಐವತ್ತು ಚಾಪೋನ್ನತವಾಗಿ ಧರ್ಮಾಮೃತಮಂ ಕರೆದು ಶಿವಲೋಕಪ್ರಾಪ್ತನಾದನಾ ಅನಂತನ ನೋಂಪಿಯಂ ಭಾದ್ರಪದ ಶು ೧೪ ಯೊಳು ವೃಷಭಾದಿ ತೀರ್ಥಂಕರ್ ಪದಿನಾಲ್ಕು ಸಂಕಲ್ಪದಿಂ ಪದಿನಾಲ್ಕು ಅಷ್ಟವಿಧಾರ್ಚನೆ ಬಾಯಿನಂಗಳಂ ಪದಿನಾಲ್ಕು ಗಂಟಿನ ಸೂತ್ರಮಂ ಕಟ್ಟಿ ಉಪವಾಸ ಮೊದಲಾದ ಕ್ರಮಮಂ ಜಯಗಣಧರರುಪದೇಶಂ ಗೆಯ್ದರಾ……. ಪ್ರಭನಂ ಪುರುಷೋತ್ತಮರೆಂಬ ರಾಮಕೇಶವರುಂ ದ್ವಾರಾವತಿಯೊಳ್ ಪುಟ್ಟಿ ಶುಂಭನೆಂಬ ಪ್ರತಿಕೇಶವಂ ಗೆಲ್ದರ್ಧಚಕ್ರಿಯಾದರಾಗಳ್ ಮಹಾರುದ್ರನೆಂಬ ನಾಲ್ಕನೆಯ ನಾರದನುಮತಿಗಂಧರನೆಂಬೆಂಟನೆಯ ರುದ್ರನುಮಾ ………… ಕಾಲಂ ಸಲೆ ಕಡೆಯ ಪಲ್ಯೋಪಮರ್ಧಕಾಲಂ ಧರ್ಮವ್ಯುಚ್ಛಿನ್ನವಾಗಿರೆ ತತ್ಕಾಲದೊಳ್ ರತ್ನಪುರದ ಭೌಮರಾಜಂಗಂ ಸುಪ್ರಭಾದೇವಿಗುದಿಸಿದ ಧರ್ಮಭಟ್ಟಾರಕಗೆ ಪತ್ತು ಲಕ್ಷ ವರ್ಷಾಯುಷ್ಯಂ ನಾಲ್ವತ್ತೈದು ಬಿಲ್ಲು ………. ರು ಕೈಟಭನೆಂಬ ಪ್ರತಿವಾಸುದೇವನುಂ ಕಾಳನೆಂಬ ನಾರದನುಂ ಅಭಿತನಾಭಿಯೆಂಬೊಂಬತ್ತನೆಯ ರುದ್ರನುಮಾದರ್ ||೧೫ ||

ಆ ಕಾಲದೊಳಯೋಧ್ಯಾಪುರದೊಳ್ ರುಘವನೆಂಬ ಮೂರನೆ…….. ನುಭವಿಸಿ ವ್ರತಿಯಾಗಿ ಸ್ವರ್ಗಮನೆಯ್ದಿದಂ. ಮತ್ತಂ ಸನತ್ಕುಮಾರನೆಂಬೊಂ ನಾಲ್ಕನೆ ಷಡ್ಖಂಡಾಧೀಶ್ವರಂಮುಕ್ತನಾದಿಂ ಬಳಿಯ ಮೂರು ಸಾಗರೋಪಮ ಕಾಲಂ ಸಲ್ವಿನ ಕಡೆ ಪಲ್ಯ ಚತುರ್ಭೂತಕಾಲಂ ಧರ್ಮ ಕಿಡಲನಿತರೊಳ್……………… ಮಹಾರಾಜಂ ಗಮೈರಾದೇವಿಗುದ್ಭವಿಸಿದ ಶ್ರೀಶಾಂತೀಶ್ವರಂ ಪದಿನಾರನೆ ತೀರ್ಥಂಕರನೈದನೆ ಸಾರ್ವಭೌಮನಾದನಾಗಳ್ ನಾಲ್ವತ್ತುನೂರುನ್ನತಮಾಗೆ ವರನಿದಿ ಚತುರ್ದಶ ರತ್ನದಿಂ ದಶಾಂಗಭೋಗಮನಾಂತಿರ್ದು ಪರಿನಿಷ್ಕ್ರಮಣ ಕೇವಲಜ್ಞಾನ ನಿರ್ವಾಣ ಕಲ್ಯಾಣಮನೆಯಿದ್ದನಾ ಕಾಲದೊಳ್ ಪಿಠನೆಂಬ ಹತ್ತನೆಯ ರುದ್ರನಾದಂ. ಆ ಸಂತಾನಧರ್ಮ ಪಲ್ಯಕಾಲಂ ಸಲ್ವಿನಮಾ ಪುರದೊಳೆ ಶೂರಸೇನ ಶ್ರೀಮತಿಗರ್ಭಜನಾರನೆ ಸಕಳ ಚಕ್ರಿಯುಂ ಪದಿನೇಳನೆ ತೀರ್ಥಂಕರನುಮಾಗಿ ಮೂವತ್ತೈದು ಮಾರುನ್ನತಂ ತೊಂಬತ್ತೈದು ಸಾವಿರ ವರ್ಷಾಯುಷ್ಯಮಾಗಿ ಶಿವಲೋಕಪ್ರಾಪ್ತನಾದನಾತನ ಸಂತಾನ ಕಾಲಂ ಸಾವಿರ ಕೋಟಿ ವರುಷಂ ಕಳಿಯೆ ಮಿಥಿಲಾಪುರದರಸಂ ಕುಂಭರಾಜಗಂ ಪ್ರಭಾವತಿಮಹಾದೇವಿಗಂ ಪುಟ್ಟಿದ ಮಲ್ಲಿತೀರ್ಥಂಕರ ಕಾಲದ ಹಿಂದೆ ನೆಂದಿಬಲದೇವಂ ಪುಂಡರೀಕಹರಿಯುಂ ಸುಭೌಮನೆಂಬ ಸಕಲ ಚಕ್ರಿಯುಮಾದರಾಗಲಿಪ್ಪತ್ತೈದು ಚಾಪೋನ್ನತಿಯುಮೈವತ್ತೈಸಾಸಿರ ವರ್ಷಾಯುಷ್ಯಮಾಗಲಾ ಕಾಲಂ ಸಲ್ವಿನ ವಾರಣಾಶಿಪುರದೊಳ್ ಪದ್ಮನೆಂಬೊಂಬತ್ತನೆ ಸಕಲ ಚಕ್ರಿಯಾದಂ ದುರ್ಮುಜನೆಂಬೇಳನೆಯ ನಾರದನಾದಂ. ಆ ಮಲ್ಲಿತೀರ್ಥಂಕರ ಸಂತಾನಮೈವತ್ತುನಾಲ್ಕು ಲಕ್ಷ ವರುಷಂ ಪ್ರವರ್ತಿಸುತ್ತಿರಲ್‌ರಾಜಗೃಹನಗರದ ಸುಮಿತ್ರಮಹಾರಾಜಂಗಂ ಪದ್ಮಾವತಿಯ ……… ಗುದಿಸಿದ ಮುನಿಸುವ್ರತತೀರ್ಥಂಕರರಿಗೆ ಇಪ್ಪತ್ತು ದಂಡೋದಯಂ ಮೂವತ್ತು ಸಹಸ್ರ ವರುಷಾಯುಷ್ಯನಾಗಿ ಶಿವಲೋಕಪ್ರಾಪ್ತನಾದನಂತರಂ ಭೋಗಪುರದೊಳು ಹರಿಷೇಣನೆಂಬ ಪತ್ತನೆ ಚಕ್ರಿಯಾದಂ.

ಮತ್ತಮಯೋಧ್ಯಾಪುರದ ದಶರಥಂಗಮಪರಾಜಿತಾ…………..ಮ ಲಕ್ಷ್ಮಣರೆಂಬೆಂಟನೆ ರಾಮಕೇಶವರಾಗಿ ರಾಕ್ಷಸಕುಲದ ರಾವಣಂ ಲಂಕೆಯೊಳೆ ಪ್ರತಿಕೇಶವನಾಗಿರ್ದು ರಾಮನರಸಿ ಸೀತೆಯನ್ನೊಯ್ಯೆ ಮೇಲೆತ್ತಿಪೋಗೆ ಆತನ ಚಕ್ರದಿಂ ಕೊಂದು ತ್ರಿಖಂಡಪತಿಗಳಾಗಿರ್ದು ಲಕ್ಷ್ಮಣಂ ಗತಜೀವಿಯಾಗೆ ಆತನ ವಿಯೋಗದಿಂ…………. ಸರ್ವಸಂಗಪರಿತ್ಯಾಗಂಗೆಯ್ದು ಕೇವಲಿಯಾಗಿ ತ್ರಿಲೋಕಶಿಕರಶೇಖರನಾದನಾ ಕಾಲದೊಳು ನರಕಮುಖನೆಂಬೆಂಟನೆ ನಾರದನಾದಂ. ಆ ತೀರ್ಥಸಂತಾನಮಾರು ಲಕ್ಷ ವರ್ಷಂ ಪೋಗೆ ಮಿಥಿಲಾಪುರದ ಜಯವರ್ಮಮಹಾರಾಜಂಗಂ ಕರ್ಬಲಾಮಹಾದೇವಿಗಂ ನಮಿತೀರ್ಥಂಕರನುದಿಸಿದನಾತನ ದೇಹೋತ್ಸೇಧಂ ಪದಿನೈದು ದಂಡೋನ್ನತಂ ಪತ್ತುಸಾಸಿರ ವರ್ಷಾಯುಷ್ಯಮಾಗೆ ಭ್ರುಕುಟಿಚಾಮುಂಡಿಗೆ ಸ್ವಾಮಿಯಾಗಿ ಶಿವಲೋಕಕ್ಕೆ ಸಂದನಾ ಕಾಲದೊಳಯದಿನವೊಂದಿ ಪನ್ನೊಂದನೆ ಪೂರ್ವಭೌಮನಾದನಾ ಸಂತಾನಮೈದು ಲಕ್ಷ ವರುಷಂ ಸಲೆ ಶೌರಿಪುರದ ಸಮುದ್ರವಿಜಯಮಹಾರಾಜಂಗಂ ಶಿವದೇವಿ ಮಹಾದೇವಿಗಂ ಪುಟ್ಟಿದ ನೇಮಿತೀರ್ಥಂಕರಂಗೆ ಪತ್ತು ಚೌಪೋನ್ನತಂ ಸಹಸ್ರ ವರುಷಾಯುಷ್ಯಾಮಾಗೆ ಬಲ ವಾಸುದೇವರ್ಗೆ ಪರಮಸ್ವಾಮಿಯೆನಿಸಿ ಊರ್ಜಯಂತ ಗಿರಿಯೊಳು ಮುಕ್ತಿಶ್ರೀಯಂ ಕೈಕೊಂಡಂ.ಪ್ರತಿಕೇಶವಂ ಜರಾಸಂಧಂ ಕೃಷ್ಣನ ಮೇಲೆತ್ತಿ ಬಂದೊಡಾತನ ಚಕ್ರದೊಳೆ ಕಡೆಗಾಣಿಸಿ ಮೂರು ಖಂಡಮಂ ಹೊದಿಸಿದರಾಗಳ್ ಅಧೋಮುಖನೆಂಬೊಂಬತ್ತನೆ ನಾರದನಾದಂ. ಮತ್ತಂ ಕೆಲದಿನದೊಳ್ ಬ್ರಹ್ಮದತ್ತನೆಂಬಂ ಪನ್ನೆರಡನೆ ಸಕಲಚಕ್ರಿ ಚತುರ್ದಶ ರತ್ನಕಧಿಪನಾಗಿ ದಕ್ಷಿಣ ಭರತಖಂಡಮಂ ಸಾಧಿಸಿಯುತ್ತರ ದಿಗ್ವಿಜಯಂಗೆಯ್ದಲ್ಲಿ ವಿಜಯಾರ್ಧದ ತಮಿಶ್ರಗುಹೆಯೊಳ್ ಮೃಗಯಾ ವ್ಯಸನದಿಂ ಸತ್ತೇಳನೆ ನರಕಂಬೊಕ್ಕಂ. ಆ ಸಂತಾನಮೆಂಬತ್ತು ಮೂರು ಸಾಸಿರದೇಳು ನೂರೈವತ್ತು ವರುಷಂ ಸಲೆ ಕಾಶಿದೇಶದ ವಾರಣಾಸಿಪುರದ ವಿಶ್ವಸೇನಮಹಾರಾಜಂಗಂ ಬ್ರಾಹ್ಮಿಲಾದೇವಿಗಂ……. ರ್ಥಂಕರಂಗೊಂಬತ್ತು ರತ್ನಿ ಪ್ರಮಾಣೋತ್ಸೇಧಮುಂ ನೂರು ವರ್ಷಾಯುಷ್ಯನಾಗಿ ಕುಮಾರಕಾಲದೊಳೆ ಪರಿನಿಷ್ಕೃಮಣದಿಂ ಕಮರಭರನೆಸಗಿದ ಘೋರೋಪಸರ್ಗಮಂ ಸೈರಿಸಿ ಕೇವಲಿಯಾಗಿ ಸಮವಸರಣದೊಳ್ ಧರ್ಮೋಪದೇಶಂಗೈಯ್ಯುತ್ತ ವಿಹಾರಿಸಿ………. ಪಾರ್ಶ್ವತೀರ್ಥಂಕರಸಂತಾನಮಿನ್ನೂರೈವತ್ತು ವರುಷಂ ಸಲೆ ಕುಂಡಿನಾಪುರ ಸಿದ್ಧಾರ್ಥಮಹಾರಾಜಂಗಂ ಪ್ರಿಯಾಕಾರಣಿಗಂ ಪುಟ್ಟಿದ ಸನ್ಮತಿ ಮಹತಿಮಹಾವೀರ ವರ್ಧಮಾನರೆಂಬ ಕಡೆಯ ತೀರ್ಥಂಕರಂಗೆ………….. ತ್ರಿಕಾಲ ತ್ರಿಲೋಕಂ ಮೊದಲಾದೆಲ್ಲಾ ಪ್ರಪಂಚಮಂ ದಿವ್ಯಧ್ವನಿಯಿಂ ಭವ್ಯಜನಂಗಳಂ ಬೋಧಿಸಿ ಸಿದ್ಧಲೋಕಮಂ ಪಡೆದನು. ಆಗಳ್ ದುಷ್ಷಮ ಸುಷಮಮೆಂಬ ಚತುರ್ಥಕಾಲಂ ಮೂರು ವರ್ಷ……. ವಿತ್ತಲಾ ತೀರ್ಥಸಂತಾನಂ ಆರುನೂರೈದು ವರುಷಮೈದು ತಿಂಗಳು ಸಲೆ ವಿಕ್ರಮಾರ್ಕಂ ಪುಟ್ಟಿ ಧನವನಿಂದಿತ್ತ ನೂರಮೂವತ್ತಾರು ವರುಷಂ ಸಲೆ ಶಾಲಿವಾಹನಶಕರಾಜಂ ಪುಟ್ಟಿದನಾತನ ಶಕೆ ಸಾಲಿ ………….. ತ್ತು ಸಂದ ವಿಳಂಬಿ ಸಂವತ್ಸರದೊಳು ಕನಕಗಿರಿ ಶ್ರೀವಿಜಯನಾಥಸ್ವಾಮಿ ಶ್ರೀಪಾದಸೇವಾಸೇವಕ ಮಲೆಯೂರ ಗ್ರಮದ ಕರಣಿಕಾಗ್ರಗಣ್ಯ ಶ್ರೀವತ್ಸಗೋತ್ರದಾರ್ಹತಿ ವಿಪ್ರದೇವ ದ್ವಿಜಸೂನು ದೇವಚಂದ್ರನೆಂಬೆನಾನೀ ರಾಜಾವಲಿಕಥೆಯಂ ಪ್ರಾರಂಭಿಸಲು ಇಷ್ಟದೇವತಾಸ್ತವನಿಮಿತ್ತಮಾಗಿ ನೂರೆಪ್ಪತ್ತು ಕ್ಷೇತ್ರದೊಳಾದ ಭೂತ ಭವಿಷ್ಯದ್ವರ್ತ ಮಾನ ತೀರ್ಥಂಕರಂ ಈ ಭರತಕ್ಷೇತ್ರದ ವರ್ತಮಾನ ತೀರ್ಥಂಕರ ಜನಕರಪ್ಪನಾದಿರಾಜಂ ಮೊದಲಾಗೆ ಸಿದ್ಧಾರ್ಥಮಹಾರಾಜಾಧಿತವಾದ ಪಿತೃಗಳಂ ವೃಷಭಸೇನಾದಿ ಗೌತಮಾಂತ್ಯಮಾದ ಗಣಧರರಂ ಬ್ರಾಹ್ಮಿ ಮೊದಲಾಗಿ ಚಂದನಾಂತ್ಯಮಾದಾರ್ಯಿಕೆಯರಂ ಭರತಾದಿ ಶ್ರೇಣಿಕಾಂಡ ಶ್ರೋತೃಗಳಂ ಪ್ರತಿಶ್ರುತಿ ಮೊದಲಾದ ಮನುಗಳಂ ಭರತಾದಿ ಬ್ರಹ್ಮದತ್ತಾಂತ್ಯ ದ್ವಾದಶ ಚಕ್ರಿಗಳಂ ವಿಜಯಾದಿ ಬಲಭದ್ರಾಂತಮಾದ ನವಬಲದೇವರಂ ತ್ರಿಪಿಷ್ಟಾದಿ ಕೃಷ್ಣಾಂತ್ಯ ವಾಸುದೇವಂ ತಾರಕಂ ಮೊದಲಾದ ಜರಾಸಂಧಾಂತ್ಯ ಪ್ರತಿವಾಸುದೇವರಂ ಭೀಮಾದ್ಯಧೋಮುಖಾಂತ್ಯ ನವನಾರದರಂ ಭೀಮಾವಳಿ ಮೊದಲಾಗಿ ಸಾತ್ಯಕಿಯಾಂತ್ಯ ಏಕಾದಶರುದ್ರರಂ ಆ ಸುರೇಂದ್ರಾದಿ ತ್ರಿಂಶದೀಂದ್ರರಂ ಯಕ್ಷಾದಿ ಪಂಚದಶತಿಥಿ ದೇವರುಂ ಸೂರ್ಯದ್ಯಷ್ಟಾಶೀತಿ ಗ್ರಹಂಗಳಂದೊನಮಿಬಾದಿಮಾತಂಗಾತು ಚತುರ್ವಿಂಶತಿ ಯಕ್ಷರಂ ಚಕ್ರೇಶ್ವರ್ಯಾದಿ ಸಿದ್ಧಾ ……………. ಯಿತ್ಯಂತ ಚತುರ್ವಿಂಶತಿ ಶಾಸನದೇವತೆಯಗಲಂ ಜಯಾದ್ಯಷ್ಟಮಹಾದೇವಿಯರಂ ರೋಹಿಣ್ಯಾದಿ ಷೋಡಶವಿದ್ಯಾದೇವಿಯರಂ ಇಂದ್ರಾದಿದಶಲೋಕಪಾಲಕಂ ಸೋಮಾದಿ ರಾಕ್ಷಸಾದಿ ದ್ವಾರಪಾಲರಂ ಶ್ರ್ಯಾದಿ ಮೊದಲಾಷ್ಟದಿಕ್ಕನ್ನೆಯರಂ ವಾಸುಕಿ ಮೊದ ……….. ಲಷ್ಟಕುಲದರುವತ್ತಾರು ಸಾಸಿರ ನಾಗದೇವತೆಗಳಂ ಬೃಹದ್ಯಾರ್ಯಾದಿ ಪರ್ಜನ್ಯ ಮೊದಲಾದ ವಾಸ್ತುದೇವತೆಗಳಂ ಸತತ ದೇವತಾ ಸತ್ಕ್ರಿಯಾದೇವತಾ ವೇಸ್ಮದೇವತಾ ಕುಲದೇವತಾಭೇದದಿಂ ನಾಲ್ಕು ವಿಧ ಮಪ್ಪುದರಿಂದೆಲ್ಲಾ ಸದ್ದೇವತೆಗಳನೀ ಕಥಾಪ್ರಾರಂಭ……….. ಸುತ್ತಂ ಪೇಳ್ದೆನಿಂತು ದೇವತಾಭೇದಂಗಳನಾದಿಸಿದ್ಧಮಾಗೊಪ್ಪುತ್ತಿರೆ

ಮುನ್ನ ಮರೀಚಿಪಾರಿವ್ರಾಜಕಂ ಕಪಿಲಸಿದ್ಧಾಂತಮಂ ಕಲ್ಪಿಸಲದಂ ಅತ್ರಿ ಅಂಗೀರಾದಿ ಬ್ರಾಹ್ಮಣರಂ ಪಿಡಿದು ಪಂಚಮಿಥ್ಯಾತ್ವಮಂ ಪ್ರಕಟಿಸಿದರಾ ಮಿಥ್ಯಾತ್ವಂ ಏಕಾಂತ ವಿನಯ ವಿಪರೀತ ಸಂದೇಹ ಸಂಶಯಮಜ್ಞಾನಮೆಂದೈದು ಭೇದಮಾಗಿಯವರೊಳು ಏಕಾಂತಮೆಂಬುದು ಅಸ್ತ್ಯೇವನಾಸ್ತ್ರ್ಯೇವ ನಿತ್ಯಮೇನಾನಿತ್ಯಮೇವ ಏಕಮೇವಾನೇಕಮೇವ ತತ್ತ್ವಮಿಥ್ಯಾದಿ ಸರ್ವದಾವಧಾರಣರೂಪಾಭಿಪ್ರಾಯ ಏಕಾಂತ ಮಿಥ್ಯಾತ್ವಂ ನಾಮ                 ||೧ ||

ವಿನಯಮೆಂಬುದು ಸಮ್ಯಗ್ದರ್ಶನಾದಿ ನಿರಪೇಕ್ಷಾ ಗುರುಪಾದ ಪೂಜಾದಿ ಲಕ್ಷಣೇನ ವಿನಯೇನೈವ ಮೋಕ್ಷ ಇತ್ಯಭಿಪ್ರಾಯೋ ವಿನಯಮಿಥ್ಯಾತ್ವಂ ನಾಮ    ||೨ ||

ಅಹಿಂಸಾದಿ ಲಕ್ಷಣ ಸದ್ಧರ್ಮ ಫಲ ಸ್ವರ್ಗಾಪವರ್ಗಸ್ಯ ಹಿಂಸಾದಿ ಪಾಪಫಲತ್ವೇನ ಪರಿಚ್ಛಿಂದಾನೋಭಿಪ್ರಾಯೋ ವಿಪರೀತ ಮಿಥ್ಯಾತ್ವಂ ನಾಮ ||೩ ||

ಸಂದೇಹಮೆಂಬುದು ಪ್ರತ್ಯಕ್ಷಾದಿನಾ ಪ್ರಮಾಣೇನ ಪರಿಗೃಹ್ಯಮಾಣಸ್ಯ ಅರ್ಥಸ್ಯ ದೇಶಾಂತರೇ ಕಾಲಾಂತರೇಚೈತತ್ವರೂಪಧಾರಣಾಪಪತ್ತೇಸ್ತತ್ಸ್ವರೂಪ ನಿರೂಪ ಕಾಣಾಮಾಪ್ತಾದಿಮಾನದಂದಹ್ಯಮಾನಾನಾಮಪಿ ಪರಸ್ಪರ ವಿರುದ್ಧ ಶಾಸ್ತ್ರೋಪದೇಶಕಾ ನಾಮ ಪಂಚತತ್ತ್ವನಿಶಾಯಾ ಭಾಷಾದಿತಿದಮೇವ ತತ್ವಮಿದಂಕಭವತಿರಿ ಪರಿಚ್ಛೆತ್ತುಮ ಶಕ್ಯಮಿತ್ಯಭಯಾಂಶಾವಲಂಬ್ಯಭಿಪ್ರಾಯಃ ಸಂಶಯಮಿಥ್ಯಾತ್ವಂ ನಾಮ      ||೪ ||

ಅಜ್ಞಾನಂ ವಿಚಾರ್ಯಮಾಣೇ ಜೀವಾದಿಪದಾರ್ಥಂ ತಿಷ್ಠಂತಿ ತತಃ ಸರ್ವಜ್ಞಾನ ಮೇವಜ್ಞಾನಂ ನಾಸ್ತಿಕ್ಯಭಿನಿವೇಶಃ ಅಜ್ಞಾನ ಮಿಥ್ಯಾತ್ವಂ ನಾಮ       ||೫ ||

ಈ ಪಂಚ ಮಿಥ್ಯಾತ್ವಂ ಭಾವದಿಂ ಸರ್ವತ್ರಂ ವರ್ತಿಸುತ್ತಿರ್ದೊಡೀ ಕಾಲದೋಷದಿಂ ದ್ರವ್ಯಮಿಥ್ಯಾತ್ವಂ ಪುಟ್ಟೆ ಕಡೆಯೊಳ್ ಏಕಾಂತಕ್ಕೆ ಬುದ್ಧದರ್ಶನಂ ವಿನಯದೊಳು ತಾಪಸರುಂ ವಿಪರೀತದೊಳ್ ಬ್ರಾಹ್ಮಣರುಂ ಸಂಶಯದೊಳಿಂದ್ರದರ್ಶನಂ ಅಜ್ಞಾನದೊಳ್ ದುಸ್ಯರಿಸೂರನಾದರ್ಶನಂ ಪುಟ್ಟಿ ವರ್ತಿಸುತ್ತಿರ್ದಲ್ಲಿ ಕಾಲಾದಿ ವಾದಂಗಳ್ ಪುಟ್ಟಿದವಲ್ಲಿ ಕ್ರಿಯಾವಾದಂಗಳು ನೂರೆಂಬತ್ತು (೧೮೦) ಅಕ್ರಿಯಾವಾದ ಎಂಬತ್ತು ನಾಲ್ಕು (೮೪) ಅಜ್ಞಾನ…………….ತೆರಡು ಕೂಡಿ ನೂರಮೂವತ್ತಮೂರು ವಾದಮವರೊಳು ಸ್ವಪರ ನಿತ್ಯಾನಿತ್ಯಂಗಳಿಂ ಕಾಲ ಈಶ್ವರ ಆತ್ಮ ನಿಯತಿ ಸ್ವಭಾವಮೆಂದೈದುತೆರನಲ್ಲಿ ಲೋಕದೊಳುಳ್ಳ ಚರಾಚರ ಶಿವಂಗಳುತ್ತಪತ್ತಿಸ್ಥಿತಿಲಯದೊ……………ಕಾಲಃ ಸೃಜೋ ಭೂತಾನಿಕಾಲಃ ಸಂಹರತಿ ಪ್ರಜಾಃ ಸರ್ವೇ ಕಾಲಸ್ಯವಸಗಾಃ ನಕಾಲಃ ಕಸ್ಯ ಚಿತ್ವತಿ || ಏವಂ ಪ್ರಕಾರೇಣ ಈಶ್ವರವಾದಃ ||

ಶ್ಲೋಕ || ಆಜ್ಞಾಜಂತುರನಿಶೋಯಂ ಆತ್ಮಾನಾಂ ಸುಖದು…………….
………………………………………………………………….
ಮಹಾತ್ಮಾ ಪುರುಷದೇವ ಸರ್ವಾಂಗ ಸರ್ವ [ಗತ] ನಿರ್ಗೂಢ
ಸಚೇತನ ನಿರ್ಗುಣ ಪರಮ ಇತ್ಯಾತ್ಮವಾದಃ
ಏಕಸಮಯೇ ಏಕಪ್ರವೇಶೇ ಏಕೇನ ಏಕಂ
ಏಕ ಪುರುಷಸ್ಯ ನಿಯಮೇನ ಸ್ಯಾಚೇತ್ಯಾರೇ ಕ್ಷೇತ್ರೇಚ
ತೇನ ತದಾಸ್ಯ ಭವೇದಿತಿ ನಿಯತಿವಾದಃ

……………….ಮೃಗಪತಿ ಸ್ಥಾವರ ಜಂಗಮಾದಿ ನಾನಾ ಸ್ವರೂಪ ಸಮಸ್ತಂಗಳೆಲ್ಲಂ ಸ್ವಭಾವಂಗಳೆಂದು ನಿಶ್ಚೈಸುವುದು ಸ್ವಭಾವನಾದಃ || ಕುದೇವತು ದೃಷ್ಟಿತುರಾಜಕುಲಿಂಗಿ ಕುತ್ಸಿತ ಜ್ಞಾನಿ ಅಜ್ಞಾನಿ ವೃದ್ಧ ಬಾಲ ಕವಿ ಪರೀತ ವೃಕ್ತಿತ್ವ ಮಾತೃ ಪ್ರವೃತ್ತಿಗಳೆ ಮನ ವಚನ ಕಾಯದಿಂ ಮಾಳ್ಪ…………ಪೂಜಾದಿಗಳಂ ಮಾಳ್ಪ…………….ಸದ್ಗತಿ ಸಾಧನಮೆಂಬಿವು ವೈನೇಯಕವಾದ.

ಸ್ವಪರನಿತ್ಯಾನಿತ್ಯಮೆಂಬ ನಾಲ್ಕರಿಂ ನವಪದಾರ್ಥಂ ಅಸ್ತಿಯೆಂದುಚ್ಚರಿಸಲು ಭಂಗ ಮಕ್ಕುಮವಂ ಕಾಲಾದಿಗಳೈದರಿಂದುಚ್ಚರಿಸಿ ೧೮೦ ಕ್ರಿಯಾವಾದಮಕ್ಕುಂ. ಪುಣ್ಯ ಪಾಪಮೆಂಬೆರಡು ಪದಾರ್ಥಂಗಳಂ ಬಿಟ್ಟುಳಿದ ಸಪ್ತ ಪದಾರ್ಥಂಗಳಂ ಕಾಲ ಈಶ್ವರ ನಿಯತಿ ಸ್ವಭಾವಮೆಂಬೀ ನಾಲ್ಕರಿಂ ನಾಸ್ತಿಯೆಂಬುದು ೭೦ ವಂಗಮಕ್ಕು. ಮತ್ತಂ ಸಪ್ತ ಪದಾರ್ಥಂ ನಿಯತಿಯಿಂ ಕಾಲದಿಂ ನಾಸ್ತಿಯೆಂಬೀ ೧೪ ಗೂಡಿ ೮೪ ಅಕ್ರಿಯಾವಾದಂಗಳು, ನವಪದಾರ್ಥಂಗಳು. ಅಸ್ತಿ ನಾಸ್ತಿ ಅವಕ್ತವ್ಯಂ ಅಸ್ತ್ಯವಕ್ತವ್ಯಂ ನಾಸ್ತ್ಯ ನಾಸ್ತ್ಯವಕ್ತವ್ಯಂ ಅಸ್ತಿನಾಸ್ತ್ಯವಕ್ತವ್ಯಮೆಂಬೇಳರಿಂದರುವತ್ತುಮೂರು ಭಂಗಮಕ್ಕು (೬೩). ಮತ್ತಂ ಅಸ್ತಿ ಮೊದಲಾದ ನಾಲ್ಕು ಪಂಕ್ತಿದ್ವಯದಿಂದಾದ ನಾಲ್ಕುಗೂಡಿ ಅಜ್ಞಾನವಾದಂಗಳರವತ್ತೇಳು ತೆರನಕ್ಕು. ಮನವಚನಕಾಯಂಗಳಿಂ ಕುದೇವ ಕುರಾಜ ಕುತ್ಸಿತಜ್ಞಾನಿ ಕುಲಿಂಗಿ ಅಜ್ಞಾನಿಯಾದ ವೃದ್ಧ ಬಾಲಕ ವಾಮಾಕ್ಷಿಮಾತೃ ವಿಪರೀತ ದೃಕ್ಪಿತೃಗಳ್ಗಂ ವಿನಯಮಂ ಮಾಳ್ಪುದಿಂತು ೩೨ ವೈನಯಿಕವಾದಮಕ್ಕುಂ. ಸ್ವಚ್ಛಂದವೃಷ್ಟಿಗಳಿಂ ಕಲ್ಪಿಸಲ್ಪಟ್ಟು, ಈ ಮುನ್ನೂರರುವತ್ತುಮೂರು ವಾದಂಗಳಜ್ಞಾನಿಜೀವಂಗಳ್ಗೆ ಮನೋಹರಂಗಳಪ್ಪವು. ಪೌರುಷಮೆ ಮುಖ್ಯಮೆಂಬುದುಂ ಪೌರುಷವಾದಂ, ದೈವಬಲವಿಲ್ಲದೆ ಪೌರುಷದಿಂದೇನು ಆಗದೆಂಬುದು ದೇವತಾವಾದಂ. ಏಕಹಸ್ತೇನಶಬ್ದಂ ನಹಿ ಏಕಚಕ್ರೇಣರದನಗಮಯತಿ ತಥಾ ಸಂಯೋಗೈಸ್ಸಕಲ ಪದಾರ್ಥಂ ಭವತಿ ಸಂಯೋಗದಿನಾನಹಿ ವಿಪಿನಾಂತೇ ಪಂಗು ರಂಧಸ್ಸಂಯೋಗೇ ಸತಿನಗರಂ ಪ್ರವಿಷ್ಟ ಇತಿ ಸಂಯೋಗವಾದಃ ಲೋಕವಾರ್ತಾ ನಿಶ್ಚಯಮೆತ್ತಲಾನುಪುಟ್ಟಿನ ಲೋಕಪ್ರಸಿದ್ಧಿಯಂ ದೇವತೆಗಳಾದೊಡಂ ಕಳೆಯಲಾಗದದರಿಂ ಜನವಾಡಿಕೆಯೆ ನಿಶ್ಚಯಮೆಂಬುದು ಲೋಕಪ್ರವಾದಃ.

ಇಂತು ಪಿತ್ತಜ್ವರಿತಂಗೆ ಮಧುರಾಹಾರಂ ಕಹಿಯಪ್ಪಂತು ಸಚ್ಛಾಸ್ತ್ರಮನೊಲ್ಲದೆ ಮಿಥ್ಯಾತ್ವದಿಂ ನಾನಾ ವಿಧ ಶಾಸ್ತ್ರಮಂ ಪ್ರಕಟಿಸಿ ಕೆಲಕಾಲಂ ಸಲ್ವಿನಂ ನೈಯಾಯಿಕಂ ಮೊದಲಾಗೆ ಷಣ್ಮತಂಗ……….ದವೆಂತೆನೆ ನೈ ಯಾಯಿಕಂ ಕಾಣಾದಂ ಮೀಮಾಂಸಕಂ ಸಾಂಖ್ಯಂ ಬೌದ್ಧ ಚಾರ್ವಾಕಮೆಂಬೀ ಆರು ಮತಂಗಳಾದವವರೊಳು ಜಟಾವಿಶೇಷ ಯೌಗ ಪಾಶುಪತಾಕ್ಷಪಾದಮತ ಸೃಷ್ಟಿಸಂಹಾರಕಃ ನೈಯಾಯಕಃ ಈಶ್ವರೋ ದೇವತಾ ಚಿನ್ನಿರೀಶ್ವರಃ

ಶ್ಲೋಕ || ಅಕ್ಷಪಾದಮತಾದೇವಃ ಸೃಷ್ಟಿಸಂಹೋ…………..ಪ್ರಮಾಣ ಪ್ರಮೇಯ ಸಂಶಯಃ ||
ಪ್ರಯೋಜನ ದೃಷ್ಟಾಂತ ಸಿದ್ಧಾಂತವಯನ ತರ್ಕನಿರ್ಣಯವಾದ ಜಲ್ವವಿತಂತ ಹೇತ್ವಾ ಭಾ
ಸಚ್ಛಲಜಾತಿ ವಿಗ್ರಹಸ್ಥಾನಾನಿತಿ ಷೋಡಶ ತತ್ವಾನಿ ಅರ್ಥೇಪಲಬ್ಧಿ ಕರಣಂ
ಪ್ರತ್ಯಕ್ಷಾನುಮಾನೋಪಮಾನಾಗಮಚತ್ವಾರಿ ಪ್ರಮಾಣಾನಿ ನಿತ್ಯಾನಿತ್ಯಾದೇಕಾಂ
……….. ಜನ್ಮ ಪ್ರವೃತ್ತಿ ಮಿಥ್ಯಾಜ್ಞಾನಾಮುತ್ತರೋತ್ರರಾಪಾಯೇತ್
ರತಂತರನಾಣಮೋಕ್ಷಪೂರ್ವಃ ಷಡಿಂದ್ರಿಯಾಣಿ ಷಡ್ಬುದ್ಧಯಃ
ಷಡ್ವಿಷಯಾಃ ಸುಖದುಃಖಶರೀರಂ ಚಿತ್ತೈಕವಿಂಶತಿ
ಪ್ರಭೇದಬೀಯ ದುಃಖಶಾಂತ್ಯತ್ಯಂತಚ್ಛೇದೋ ಮೋಕ್ಷಃ ||
ಸಮ್ಮತಲ್ಲೋಕಾ ಅರ್ಥೋಪಲಬ್ಧಿಕ……………ಣಂ ಕಚ್ಛಮರ್ವಿನಂ

ಶ್ಲೋಕ || ಪ್ರತ್ಯಕ್ಷಮನುಮಾನಂ ಬಾಹ್ಯಪ್ರಮಾಣಶಬ್ದಂ ತದಾ
ಷಡಿಂದ್ರಿಯಾಥಸಂಕಲ್ಪೋತ್ಪನ್ನಮವ್ಯಭಿಚಾರಿಕಂ ||
ವ್ಯವಸಾಯಾತ್ಮಕಂ ಜ್ಞಾನಂ ವ್ಯಪದೇಶ ವಿವರ್ಜಿತಂ
ಪ್ರತ್ಯಕ್ಷಮನುಮಾನಂ ಚ ತತ್ಪೂರ್ವಂ ತ್ರಿವಿಧಂ ಭವೇತ್ ||
ಪೂರ್ವನಚ್ಚಿಷಕಶ್ಚೈವಬ ದ್ರಷ್ಟಂ ಸಾಮಾನ್ಯವತ್ತತಃ
…………ದ್ಯ ಕಾರಣಾತ್ ಕಾರ್ಯಮನುಮಾನಂಹಿನೀಯತೇ
ಯಥಾರೋಲಂಬ ಗವಲಾವ್ಯಲಾಂಧ ಮಲಿನತ್ಪಿಷಾ
ದೃಷ್ಟಿವ್ಯಭಿಚರಂತಿ ಹನೈವ ಪ್ರಾಯಃಪಯೋಮುವ
ಕಾರ್ಯಾತ್ಕಾರಣಾನುಮಾನಂ ಯಶ್ಚತಚ್ಛೇಷವಸ್ತತಂ ||
ತದಾದಿಪನದಿಪೂರಾದೇಣೂವಕ್ಷೋಯದೋಪದಿ
ಎಚ್ಚಸಾಮಾನ್ಯವೊದದೃಷ್ಟಂತ ದೇವಂಗತಿಪೂರ್ವಿಕಾ
ಪುಂಸಿದೇಶಾಂತರಪ್ರಾಪ್ತಿರ್ ಯಥಾಸೂರ್ಯೋಪಿಸಾತಥಾ
ಪ್ರಬದ್ಧ ವಸ್ತು ಸಾಧರ್ಮ್ಯಾದ ಪ್ರಸಿದ್ಧಸ್ಯಸಾಧನಂ
ಉಪಮಾನಂ ಸಮಾಖ್ಯಾತಂ ಯಥಾದೌರ್ಗಚಯಸ್ತಥಾ ||
ಶಾಬ್ದಮೀಶೋಪದೇರಸ್ತಮಾನಮೇವಂ ಚತುರ್ವಿಧಂ
ಪ್ರಮೇಯತ್ವಾತ್ಮ ದೇಹಾರ್ಥ ಬುದ್ಧೀಂದ್ರಿಯಸುಖಾದಿವತ್ ||
ಕಿಮೇತದಿತಿಸಂಬುದ್ದಾ ಪ್ರಾಪ್ತಿರ್ಯೇ ಸಂಶಯೋ ಮತಃ
ಪ್ರವರ್ತಯತ ತೀರ್ಥತ್ವಾ ತತ್ತುಸಾಧ್ಯಾ ಪ್ರಯೋಜನಂ ||
ದೃಷ್ಟಾಂತಸ್ತು ಭವೇದ್ವೇಷಾ ನಿರೋಧವಿಷಯೋದಯಃ
ಸಿದ್ಧಾಂತಸ್ತು ಚತುರ್ಭೇದಾತ್ ಸರ್ವತಂತ್ರಾದಿ ಭೇದತಃ ||
ಪ್ರತಿಜ್ಞಾಹೇತು ದೃಷ್ಟಾಂತೋಪನಯೋಭಿಗದಂಸ್ತಥಾ
ಅವಯವಾಃ ಪಂಚಕರ್ತಾ ಸಂವೇಹೋ ಪರಮೋದವೇತ್ ||
ಯಥಾಕಾಕಾದಿ ಸಂಸಾರಾತ್ಸ್ಥಾಣುನಾಭವ್ಯದುಂ ವ್ರಹಿ
ಊರ್ಧ್ವಸಂದೇಹತರ್ಕಾಭ್ಯಾಂ ಪ್ರತ್ಯಯೋ ನಿರ್ಣಯೋ ಮತಃ ||
ಆಚಾರ್ಯಶಿಷ್ಯಯೋಃ ಪತ್ಪಂ ಪ್ರತಿಪಕ್ಷ ಪರಿಗ್ರಹಾತ್
ಯಥಾ ತಥಾಭ್ಯಾಪಹೇತೋ ಕಸಾವಾದ ಅದಾಹೃತಃ ||
ವಿಜಿಗೀಷು ತಥಾ ಯಾ ತುಚ್ಛ ಅಜೋತ್ಯಾದಿ ದೂಷಣಾತ್
ಸಂಜಲ್ಪಸಾಧಿತಂ ದಾಯಾ ಪ್ರತಿಪಕ್ಷವಿವರ್ಜಿತಾಃ
ಹೇತ್ವಾಭಾಸಾ ಅಸಿದ್ಧಾದ್ಯಾಚ್ಛಲಯಾ ಸೋನಶೋಧಕಂ ||
ಜಾತಯೋ ದೂಷಣಾ ಭಾಷಾಃ ಪಕ್ವಾದ್ಯಾದೂ……………
…………….ತಂ ಪರೋ ಯೇ ನ ನಿಗ್ರಹ್ಯತೇ
ಪ್ರತಿಜ್ಞಾಹಾನಿ ಸ ನ್ಯಾಸ ವಿರೋಧಾದಿತಿ ಭೇದವತ್ ||
ನೈಯಾಯಿಕ ಮತಸ್ಯೇಷಃ ಸಮಾಸಾತಥಿತೋಂ ಜಸಾ
ಸಾಂಖ್ಯಾದಿರಥ ಭಾವಾನಾಮಿದಾನಿಂ ಮತ ಉಚ್ಯತೇ ||

ಮತ್ತಂ

ವೇದಾಂತಿ ಬ್ರಹ್ಮವಾದಿಕಾ……………….ತ………..ದೇವತಾ
ದ್ರವ್ಯಗುಣ ಕರ್ಮಸಾಮಾನ್ಯ ವಿಶೇಷ ಸಮವಾಯ ಷಟ್
ಪದಾರ್ಥಸ್ತತ್ವಂ
ಪ್ರತ್ಯಕ್ಷಾನುಮಾನಾಗಮೇತಿ ತ್ರಿವಿಧ ಪ್ರಮಾಣಂ
ವಾದೋ ಮೋಕ್ಷಮಾರ್ಗಶ್ಚ ನೈಯಾಯಿಕವತ್ ||
ಬುದ್ಧಿ ಸುಖದುಃಖೇಚ್ಛಾ……………………………..
…………………………….ತೈಂ ತೋಚ್ಛೇದ್ಗೋಮೋಕ್ಷಃ ||
ಇತಿ ವೇದಾಂತಿವಾದಃ         ||೨ ||

ಜೈಮಿನೀಯೋ ಮಿಮಾಂಸಕಃ ಭಾಟ್ಟದರ್ಶನಂ
ತತ್ರ ದೇವತಾ ನಾಸ್ತಿ ನಿತ್ಯೇಭ್ಯೋ ದೇವತಾಭ್ಯ ಏಕ ನಿಶ್ಚಯಃ
ಬೋಧನಾ ಲಕ್ಷಣಂ ಧರ್ಮತತ್ವಂ ಪ್ರತ್ಯಕ್ಷಾನುಮಾನ
………………..ಪ್ರಮಾಣಾನಿ
ಪುರಾ ವೇದ ಪಾಠಃ ಸ್ವರ್ಗಕಾಮೋಗ್ನೀರ್ಯ ಜೇತ
ಇತಿ ದೇವವಿಹಿತಾನುಷ್ಠಾನಂ ಮೋಕ್ಷಮಾರ್ಗಃ
ನಿತ್ಯ ನಿರತಶಯ ಸುಖಾಭಿವ್ಯಕ್ತಿಃ ಮೋಕ್ಷಃ
ಇತಿ ಜೈಮಿನೀಯಕಂ ಪ್ರಮೇಯಃ       ||೩ ||

ಸಾಂಖ್ಯದರ್ಶನೇ ಮರೀಚಿದರ್ಶನಂ ತತ್ರಕೇಚಿದ್ವೀಶರಃ
ಕೇಚೇನ್ನಿರೀಶ್ವ………………………………………ಯೇವ
ಪಂಚವಿಂಶತಿ ತತ್ವಾನಿ ಸತ್ವರಜಸ್ತಮ
ಸಸ್ಸಾಥ್ಯ ವ್ಯವಸ್ಥಾ ಪ್ರಕೃತಿಃ
ಮಹತೋಹಂಕಾರಃ ಅಹಂಕಾರಾತ್ ಪಂಚತನ್ಮಾತ್ರಾಣಾಂ
ಏಕಾದಶ ಚೇಂದ್ರಿಯಾಣಾಂ ತತ್ರ ಶಬ್ದ ತನ್ಮಾತ್ರಾದಾಕಾಶಂ
ರೂಪತನ್ಮಾತ್ರಾತ್ತೇಜಃ ಗಂಧತನ್ಮಾತ್ರಾತ್ಪೃಥುವೀ
ರಸತನ್ಮಾತ್ರಾದಾಪಃ ಸ್ಪರ್ಶತನ್ಮಾತ್ರಾದ್ವಾಯುಃ
ಬುದ್ಧೀಂದ್ರಿಯ ಪಂಚಕಮೇಂದ್ರಿಯ ಪಂಚಕಂ ಚ
ಏಕಾದಶ ಮನು ಇತಿ ಅಮೂರ್ತಶ್ಚೈತನ್ಯರೂಪಃ
ಕರ್ತಾವೋತ್ತಾಚ ಪುರುಷಪುಂಗಧವತ್ ಪ್ರಕೃತಿಪುರುಷ ಯೋಗಾತ್
ಪ್ರತ್ಯಕ್ಷಾನುಮಾನಶಬ್ದ ಪ್ರಮಾಣಾನಿತ್ಯೇಕಾಂತವಾದಃ
ಪಂಚವಿಶಂತಿ ತತ್ವಜ್ಞಾನಂ ಮೋಕ್ಷಮಾರ್ಗಃ
ಪ್ರಕೃತಿ ಪುರುಷವಿವೇಕ ದರ್ಶನಾಗ್ನಿ ವೃತ್ತಾಯಾಂ
ಕೃತೌಪುರುಷಾವಸ್ಥಾನಂ ಮೋಕ್ಷಃ ಇತಿ ಸಾಂಖ್ಯಮತಪ್ರಮೇಯಃ    ||೪ ||

ಸೌಗತಃ ಶೂನ್ಯವಾದಿ ಬೌದ್ಧಃ ಪದಾದರ್ಶನೇ ಬುದ್ಧೋದೇವತಾ
ದುಃಖಸಮುದಯ ಮೋಕ್ಷಮಾರ್ಗರೂಪಾಣಿ ಚತ್ವಾರ್ಯಾರ್ಯಸತ್ವಾನಿ ತತ್ವಾನಿ
ಪ್ರತ್ಯಕ್ಷಮನುಮಾನೇಚ್ಚ ಪ್ರಮಾಣೇಕ್ಷಣೈಕಾಂತವಾದಃ
ಸರ್ವಾಣಿ ಸರ್ವಂ ಕ್ಷಣಿಕತ್ವಂ ಸರ್ವ ನೈರಾತ್ಮಕಾಸನಾ
ಮೋಕ್ಷಮಾರ್ಗವಾಸನಾಶ್ಚೈವ ಸಮುಚ್ಛೇದ ಪ್ರದೀಪಸ್ಯೈ
ಜ್ಞಾನಸಂತಾನಸ್ಯೇಚ್ಛೇದೋ ಮೋಕ್ಷಃ ಜೀವೋ ನಾಸ್ತಿ ಕರ್ಮಕರ್ತಾ ನ ಭೋಕ್ತಾ
ರಾಗಾದಿ ಕ್ಲೇಶಸಂತಾನ ನಾ ಸ ನೋಚ್ಛೇದಸಂಭವಃ
ಚತುರ್ಣಾಮಪಿ ಬೌದ್ಧಾನಾ ಮುಕ್ತಿರೇಷಾಃ ಪ್ರಕೀರ್ತಿತಾಃ ||೫ ||

ನಾಸ್ತಿಕ ಬಾರ್ಹಸ್ಪತ್ಯ ಲೋಕಾಯತಿಕ ಚಾರ್ವಾಕೋ ಇತಿ
ತೇಷಾಂ ವರ್ಧನಂ [ಚ] ನಾಸ್ತಿ ದೇವೋ ನಾಸ್ತಿ ಜೀವೋ ನಾಸ್ತಿ
ಪಾಪಂ ಚಾಸ್ತಿ ಪರಲೋಕೋ ನಾಸ್ತಿ ಚತ್ವಾರಿ ಭೂತಾನಿ
ಪ್ರತ್ಯಕ್ಷಮೇಕೈಕಂ ಪ್ರಮಾಣಂ ಪೃಥಿವ್ಯಾಂ ವಿಷಮ
ವಾಯಾತ್ಮಧ್ಯಾಂಗೇಭ್ಯೋಮವಶಕ್ತಿವ ಚೈತನ್ಯಃ
ಅದೃಷ್ಟ ಪರಿತ್ಯಾಗೇನ ದೃಷ್ಟ ಸುಖೋಪಯೋಗೇನ
ಭೋಗೇವ ಪುರುಷಾರ್ಥಃ ದುರ್ನಯಪ್ರಬೋಧಿತ
ಸತ್ತಾ ಕಾಹಿ ಬಲತ್ವೇತಿ ಪ್ರವಾದಃ ತಥಾಹಿ
ನೈಗಮ ನಯಾನುಸಾರಿಣೋ ನೈಯಾಯಿಕ ವೈಶೇಷಿಕಾ
ಸಂಗ್ರಹನಯಾನುಸಾರಿಣಸ್ಸರ್ವೇಮೀಮಾಂಸಕಾ…………..
ನೈಯಾಯಕಶ್ಚ ವೇದಾಂತಿ ಜೈಮಿನೀಯಸ್ತತಃ ಪರಃ
ಸಾಂಖ್ಯ ಬೌದ್ಧಶ್ಚ ಚಾರ್ವಾಕೋ ಭುವನೇ ಷಣ್ಮತೋ ಭವೇತ್ ||
ಶೇಷಾಣಾಮದ್ವೈತವಾದಾಃ ||
ಸಾಂಖ್ಯದರ್ಶನಸ್ಯ ಚ ವ್ಯವಹಾರನಯಾನುಸಾರಿಣಃ
ಪ್ರಾಯಶ್ಚಾರ್ವಾಕಾಃ ಋಜುಸೂತ್ರನಯಾನುಸಾರಿಣೋದಾಃ
ಶಬ್ದಾದಿನಯಾವಲಂಬಿನೋ ವೈಯಾಕರಣಾದಯಃ
ಏತೇ ನಿತ್ಯಾನಿತ್ಯಾದ್ಯನಂತ ಧರ್ಮಾತ್ಮನೇವಸ್ತು ನಿವ್ವ………….
………………ರ್ಮ ಸಮರ್ಥನ ಪ್ರಮಾಣಾಃ
ಶೇಷಧರ್ಮಶಿರಪಾರೇಣ ಪ್ರವರ್ತಮಾನ ದುರ್ನಯಾ
ಇತ್ಯೋರ್ಹನ್ಮತೇಸೋಚ್ಯತೇ
ರೂಪರಸ ಗಂಧಸ್ಪರ್ಶ ಶಬ್ದಾಶ್ಚೇತಿ ಪಂಚಸ್ಕಂಧಾ
ಆತ್ಮಾ ಸೌಗತಮಿ ಮೃಥುವ್ಯಾದಿ ಚತ್ವಾರಿ ಭೂತಾನಿತಿ ಚಾರ್ವಾಕಃ ||
ಯೋಗಮತೇ ನೈಯಾಯಿಕೇ…………ದಶ ವೈಶೇಷಿಕ
ದ್ರವ್ಯಗುಣ ಸಾಮಾನ್ಯ ವಿಶೇಷ ಸಮವಾಯಾ ಸಮಾವಾಯಾಶ್ಚೇತಿ
ಮೀಮಾಂಸಕ ಮತೇ ಭಾಟ್ಟಃ ದ್ರವ್ಯಗುಣಕರ್ಮ ಸಾಮಾನ್ಯ
ಶಬ್ದೋಕ್ತಿ ಸಂಖ್ಯಾ ಸಾದೃಶ್ಯಾ ಭಾವಾಶ್ಚೇತಿ ಅಷ್ಟಾ ಪದಾಥಾಃ
ಪ್ರಭಾಕರೇ ದ್ರವ್ಯಗುಣ ಸಾಮಾನ್ಯ ಸಮವಾಯಃ ಶಕ್ತಿಸಾಂಖ್ಯ
ಸಾದೃಶ್ಯಾನಿತ್ಯಷ್ಟಾ ವೇದಾಂತಿನಾಂತು ಬ್ರಹ್ಮಲಕ್ಷಣಾನಾಂ ತು ಏಕೇವಪದಾರ್ಥಃ
ವ್ಯವಹಾರೀ ಭಾಟ್ಟ ಪ್ರತ್ಯಕ್ಷಾದಿ ನಿಮಿತ್ತ ಸ್ಮೃತಿಃ
ಪ್ರತ್ಯಭಿಜ್ಞಾನ ತರ್ಕಾದನುಮಾನಾದುಪ ಭೇದೇನ ಷಟ್ಟಮಾಣಾಃ
ಸಪ್ತವಿಂಶತಿತತ್ವಾನಿ ಮುಕ್ತಿಃ ಸ್ವರೂಪಂ ನಾನ್ಯಥಾ
ಪ್ರತಿಪಾದಯಂತಿ ಪ್ರಮುಗ್ಧಃ ಲುಬ್ಧ ಲೋಕಾಯತಿಮತಾನಾಂ
ತದಾಹಿ ಸಕಲ ನಿಷ್ಕಲಾಪ್ರಾಪ್ತ ಮಂತ್ರತಂತ್ರಾಪೇಕ್ಷಾ
ವೀಕ್ಷಣಾಚ್ಛ್ರದ್ಧಾಮಾತ್ರಾನುಸ್ಮರಣಾನ್ಮೋಕ್ಷ
ಇತಿ ತಾರ್ಕಿಕಸಿದ್ಧಾಂತಃ ವೈಶೇಷಿಕಾಃ
ತ್ರಿಕಾಲಭಸ್ಮಧೂಲಸೇವ್ಯಾಗದ್ದುತ ಪ್ರದಾನ ಪ್ರವಕ್ಷಿಣೀ
ಕರಣಾತ್ಮಕ ವಿಡಂಬನಾದಿ ಕ್ರಿಯಾಣಾಮಾವಿಷ್ಟಾನಾಮ
ನುಷ್ಟಾನಾದಿವ ಮೋಕ್ಷ ಇತಿ ಪಾಶುಪತಾಃ
ಸರ್ವೇಷು ಪೇಯಾಪೇಯಾ ಭಕ್ಷ್ಯಾಭಕ್ಷ್ಯಾದಿಷು ವಿಶಂಕಚಿತ್ತಾ
ದ್ವೃತ್ತಾನೋನ್ಮತ ಇತಿ ಕೌಶಲ್ಯಾಚಾರ್ಯಸ್ತದಾ ಚಿತ್ರಮತೋಕ್ತಿಃ
ಮಧುರಾಮೋದ ಮೇದುರ ವದನಾಂತ ರಸಪ್ರಸನ್ನ ಹೃದಯಃ
ಸರ್ವಸಾರ್ಶನಿವೇಶ ಶಕ್ತಿಃ ಮುದ್ರಾಸನಧರಃ
ಸ್ವಯಮುಮಾಮಹೇಶ್ವರಾಯ ಮಾಣೋ ನಿತ್ಯಾ
ಮಂತ್ರೇಣ ಪಾರ್ವತೀಶ್ವರಮಾರಾಧಯೇದಿತಿ ಮೋಕ್ಷಃ
ಅಂಗಾರಾಜನಾದಿ ವತ್ಸಭಾವಾದೀನ ಕಾಲುಪ್ಯೇತರ್ಷಾತಸ್ಯವ
ಕುತ ಚಿಶ್ಚಿದ್ವಿದ್ಮಿತಿ ಜೈಮಿನೀಯೋಃ ಪರಬ್ರಹ್ಮದರ್ಶನ
ವರಾದಶೇಷ ವೇದಾಸಂತೇವನಾ ವಿದ್ಯಾವಶಾನ್ಮೋಕ್ಷ ಇತಿನಃ
ಬುದ್ಧಿ ಸುಖದುಃಖೇಚ್ಛಾ ದ್ವೇಷಪ್ರಯತ್ನಾ
ಧರ್ಮಾಧರ್ಮ ಸಂಸ್ಕಾರಾಣಾಂ ನವಾನಾಮಾತ್ಮಗುಣಾನಾ
ಮತ್ಯಂತೋಚ್ಛಿತಿರಿತಿ ಕಾಣಾದಾಃ
ಸದ್ಧರ್ವಿಣಂ ನಿತ್ಯಧರ್ಮಶ್ಚಿತ್ಯನೇಕತತಃ
ಪರಲೋಕಿನ್ಯ ಭಾವಾತ್ಪರಲೋಕಾ ಭಾವೇ
ತಸ್ಯಾಸಾಮೋಕ್ಷ ಇತಿ ಸಮಾಪ್ತಃ
ಸಮಸ್ತ ನಾಸ್ತಿಕಾಧಿಪತ್ಯಾ ಬಾರ್ಹಸ್ವತ್ಯಾಃ
ತಥಾ ನಿರಾಶ್ರಯೋತ್ಪತ್ತಿ ಮುಕ್ತಿರಿತಿ ತಾದಗತಃ ||

ವೃತ್ತ ||  ದೀಪೋಯಪಾನಿ ಶೃತಿಮಭ್ಯುಪ್ಯೇತಿ……………….
………………………..ಕ್ಷಂ ದಿನಂತಕಾಂತದ್ವಿದೀಶಂನ
ಕಾಪಿಲ್ಲೇಹಕ್ಷಯಂ ಕೇವಲಮೇತಿ ಶಾಂತಿಃ
ಬುದ್ಧಿ ರ್ಮನೋಹಂಕಾರಕ್ಲೇಶಾಪನೋದಾ
ಸಂಕಾಶಖಿಲೇಂದ್ರಿಯವಾದೃಷ್ಟುಸ್ಥಾನೇ
ಮುಕ್ತಿಕಾಲ್ಪಿತಾ ಪ್ರಕೃತಿರ್ವಿಕೃತೇವಿವೇಕ ಖ್ಯಾತಿರಿತಿ ಸಾಂಖ್ಯಾಃ
………………………………………………………………….
…………………………………………..ಪ್ರಾಣಿಲಿಯಂ…………
ಯಥಾಘಟ ವಿಘಟತೇ ಘಟಾಕಾಶಮತಾಕಾಸಂ ಭವೇತ್
ತಥಾ………….ಹೊಚ್ಛೇದಾತ್ ಸರ್ವಪ್ರಾಣೀ ಲೀಯತ ಇತಿ ||
ಇತಿ ಬ್ರಹ್ಮಾದ್ವೈತವಾದಿನಃ ||
ಕತಃ ಶೀಲೋನಾಸ್ಮಿತಿ ಚಾರ್ವಾಕಾದಿ ಮತಭ್ರಾಂತಿಃ
ಜೀವೋನಿರ್ಗುಣೇತಿ ಸಾಂಖ್ಯ ನೈಯಾಯಿಕ ಮತಭ್ರಾಂತಿಃ
ಪೃಥಿವ್ಯಪ್ತೇಜೋ ವಾಯು ಗರ್ಭಾದಿ………….
…………………………………ಪರಿಣಾಮ ಶರೀರಮೇವ
ಚೈತನ್ಯಮನಂತ ಭೂತಮತಭ್ರಾಂತಿಃ
ಜೀವೋನೋ ಕರ್ತಾ ಇತಿ ಸಾಂಖ್ಯಮತೇ ಭ್ರಾಂತಿಃ ||
ಶರೀರೈಕಪದೇತಿ ಪರಮಾಣು ಸಹಸ್ರ ಭಾಗಮಿತೋ
ಇತಿ ಮೀಮಾಂಸಕಾದಿ ಮತಭ್ರಾಂತಿಃ ||
ಸ್ವಕೃತ ಪುಣ್ಯ ಪಾಪಫಲಂ ನಭೋಕ್ತ………..ಬೌದ್ಧಮತಭ್ರಾಂತಿಃ
ಈಶ್ವರ ಕೋಪ ಪ್ರಸಾದಾ ನರಕಾದಿ ದುಃಖಂ
ಸ್ವರ್ಗಾದಿ ಸುಖಂ ಭವತೀತಿ ವೈಶೇಷಿಕ ಮತಭ್ರಾಂತಿಃ ||
ಸದಾ ಶುದ್ಧೋಜೀವ ಇತಿ ಸಾಂಖ್ಯ ಸದಾಶಿವಾದಿ ಮತಭ್ರಾಂತಿಃ
ಜೀವೋ ನ ಮುಕ್ತ ಇತಿ ಕರ್ಮ ಮೀಮಾಂಸಕ ಮತಭ್ರಾಂತಿಃ
ಯುಕ್ತಾತ್ಮಪರ್ಯಾಯ ಮಾತೃವೇ ನವದ್ರವ್ಯರೂಪಂ
ನ ಭವತೀತಿ ಶುದ್ಧ ಸ್ವರೂಪಂ ಆತ್ಮಂ ನ ಭವತಿ
ತ್ಯಕ್ತ ಬೌದ್ಧಮತಭ್ರಾಂತಿಃ ||
ಜಲೇ ನಿಮಘ್ನಂ ಘಟ್ಟಚ್ಛಿಂದೇ ಜಲೇತಿಷ್ಠತಿ ಪಯತ್ರ ಮುಕ್ತಸ್ಯ
ಶೈವತಿಷ್ಠರಿತಿ ಮಂಡಲಿದರ್ಸನಭ್ರಾಂತಿಃ ||

ಇತಿ ನಾನಾವಿಧ ತತ್ವಂ ಪ್ರಕಟಮಾಯ್ತು.

ಶ್ಲೋಕ || ಸದಾಶಿವಃ ಸದಾಕರ್ಮ ಸಾಂಖ್ಯೇಮುತ್ತಮಣೋಜೈತಃ
ಮಸ್ಕರಿಕಿನ್ನ ಮುಕ್ತಾನಾಂ ಮನ್ನತೇ ಪುನರಾಗತಿಃ
ಕ್ಷಣಿಕಂ ನಿರ್ಗುಣಂ ಜೈನ ಬುದ್ಧೌಯೌಗಶ್ಚಮನ್ಯತೇ
ಕೃತಕೃತ್ಯಂತಮೀಶಾನೋ ಮಂಡಲೀ ಬೌದ್ಧಪತ್ತಿನಂ ||
ಅಪೂರ್ವಲಾಭಮುದ್ಧಿಶ್ಯ ಜನಃ ಸರ್ವಪ್ರವರ್ತತೇ
ನಹಿ ಮೂಲವಿನಾಶಾಯ ಪ್ರೇಕ್ಷವಾನ್ಯದೀಯತೇ ||

ಇಂತು ಮತಭೇದಂಗಳು ಪುಟ್ಟಿ ಒಂದೊಂದರೊಳು ಪಕ್ಷವಿಡಿದು ವಾದಿಸುತ್ತಿರ್ದರೀ ಆರು ಮತದವರು ಮೂಲಮತಮಪ್ಪಾರ್ಹತಮತದೊಳು ವಾದಿಸಿಯನೇಕ ಜನರು ದರ್ಶನಭ್ರಷ್ಟರಾಗಿಯು ಸಂಘದೊಳೆ ಕೂಡಿರ್ದರು.

ಹುಂಡಾವಸರ್ಪಿಣಿಯು ಬಂ
ದಂಡಲೆಯುತ್ತಿಪ್ಪುದಾರು ಬಿಡಿಸುವರುಂಟೇ
ಚಂಡಾಂಶು ಪೋಗೆ ಗೂಗೆಯ
ಹಿಂಡುಂ ಕಲಕಲವ ಮಾಳ್ಪರವಮೆ ಸ್ವಭಾವಂ

ಒಂದೊಂದು ಕಾಲದೊಳು ಕಾಣ
ದೊಂದೊಂದು ಪರಿಯೊಳಿಹುದದು ಕಾಲದ ಮಾಟಂ
ಕುಂದುತ ಪೆರ್ಚುತಲಿಪ್ಪುದು
ಸಂದೇಹ ಲೇಪಂದಮಾರಣ್ಯಕಾರೂ ತಪ್ಪುದು (?)

ಇಂತೀ ಕಥೆಯಂ ಕೇಳ್ವರ
ಭ್ರಾಂತಿಯು ನೆರೆಕೆಟ್ಟು ಬಳಿಕಮಾಯುಂ ಶ್ರೀಯುಂ
ಸಂತಾನ ವೃದ್ಧಿಸಿದ್ಧಿಯ
ನಂತಸುಖಂ ತಪ್ಪದಪ್ಪುದಿದು ಪರಮಾರ್ಥಂ

ಇದು ಪರಮಾರ್ಹತಪ್ರಣೀತ ಸತ್ಯಪ್ರವಚನ ಕಥಾರ್ನವೋದ್ಧೃತ ದೇವಚಂದ್ರದ್ವಿಜ ವಿರಚಿತ ರಾಜಾವಲಿ ಕಥಾಸಾರದೊಳ್ ಷಣ್ಮತೋತ್ಪತ್ತಿ ವರ್ಣನಂ.

ದ್ವಿತೀಯಾಧಿಕಾರಂ