ಶ್ರೀಸುಜನಸ್ತುತರಖಿಲಕ
ಳಾಸದನರ್ ಮೋಹತಿಮಿರಮಂ ಕಳೆದು ಕರಂ

ಭಾಸುರ ವಿಚಾರದಕ್ಷರ್

ವೈಷಮ್ಯಮನುಳಿದು ಕೇಳ್ವುದೀ ಸತ್ಕೃತಿಯಂ

ಮುಂದಣ ಕಥಾಸಂಗತಿಯೇನೆಂದೊಡೆ ಚಂಪಾನಗರದರಸಂ ದಂತಿವಾಹನನಾತ ನರಸಿ ಪದ್ಮಾವತಿ [ಗರ್ಭ] ಮಾದೊಡಾಕೆಯ ಬಯಕೆಯಂ ತೀರ್ಚಲೆಂದಾನೆಯೇರಿ ತನ್ನರಸಿಯಂ ಕೂಡಿ ವನವಿಹಾರಕ್ಕೆ ಪೋಗಲಾ ದ್ವೀಪಂ ಪೂರ್ವಜನ್ಮದ ವೈರಯಪ್ಪುದರಿದಿರ್ಪರಂ ಮಹಾವಿಪಿನಾಂತರಕೊಯ್ದೆಲ್ಲಿಯುಂ ನಿಲ್ಲದೆ ಮಾವತಿಗನಂ ಕಳೆದೊಂದೆಡೆಯೊಳ್ ನಿಲ್ಲದೆ ತಿರುಗುತ್ತೊಂದು ಮರದಡಿಯಂ ಪುಗಲರಸನಾ ಮರದ ಕೊಂಬಂಪಿಡಿದು ಪತ್ತಿದೊಡರಸಿಯಂ ಕೊಂಡೊಯ್ದು ದೇಶಾಂತರದೊಳೊಂದು ಸರೋವರ ಸೋಪಾನದೊಳಿಳಿಪಿ ಪೋಪುದುಮಾ ಸರೋವರಕ್ಕೊರ್ವ ವೈಶ್ಯಂ ಕಮಲಮಂ ಕೊಳಲ್‌ಬಂದು ಕಂಡು ನೀವಾರೆಂಬುದುಂ ಪದ್ಮಾವತಿಯು ತನ್ನ ವೃತ್ತಾಂತಮಂ ಪೇಳೆ ಕೇಳ್ದು ತನ್ನನುಜಾತೆಗೆ ಸಮಾನಮೆಂದು ಕರೆದೊಯ್ದು ಇವಳನಾದರಿಸೆಂದು ತನ್ನರಸಿಗಪೈಸಲವಳ್ ಕೋಪದಿಂ ತನ್ನ ಮನೆಯಿಂ ತಗುಳೆ ಸ್ಮಶಾನಮಂ ಪುಗಲಲ್ಲಿ ಪ್ರಸವವಾಗಲೊರ್ವ ವಿದ್ಯಾಧರನ ವಿದ್ಯಮೆಲ್ಲಮಂ ಧರಣೀಂದ್ರಂ ವಿನಾಶಕ್ಕೆ ಸಲಿಸಲಾತಂ ಬೇಡಿಕೊಳೆ ಉಜ್ಜೈನಿಯ ಪ್ರೇತಾವಾಸದೊಳ್ ಪುಟ್ಟಿದಾತಂಗೆ ಪ್ರಸನ್ನನಾಗಿ ನಿನ್ನ ವಿದ್ಯಂಗಳೆಲ್ಲಂ ಕೈಸಾರ್ಗುಮೆಂಬಾದೇಶಮಿರ್ದುದರಿಂದಾ ವಿದ್ಯಾಧರಂ ತನ್ನ ಸತಿಯುವೆರಸಿ ಕಾಯ್ದುಕೊಂಡಿರ್ದಾ ಕೂಸಂ ಬೇಡಿಕೊಂಡು ತನ್ನಾವಾಸದೊಳೆ ಸಲಹಿದೊಡೆ ಕರಕಂಡುವೆಂಬ ಪೆಸರಿಂ ಬೆಳೆದು ನವಯವ್ವನದೊಳ್ ಧರಣೀಂದ್ರಂ ಪ್ರಸನ್ನನಾಗೆ ವಿದ್ಯಾಧರಂಗೆ ವಿದ್ಯಂ ……………. ಮಾಡೆ ಆ ಪೊಳಲರಸಂಗೆ ಸಂತಾನಮಿಲ್ಲದುದರಿಂದಾನೆಯನರ್ಚಿಸಲದು ಕರಕಂಡುವಂ ಪೂಜಿಸಿಕೊಂಡೊಯ್ದು ಸಿಂಹಾಸನಮನೇರಿ ಪಟ್ಟಂಗಟ್ಟಲರಸುಗೆಯ್ಯುತ್ತಿರಲ್‌

ಇತ್ತ ಚಂಪಾಪುರದ ದಂತಿವಾಹನಂ ಮನಗೆಂಬುದರಿಯದೆ ಮೇಲೆತ್ತಿದೊಡಾಗಳ್ ಪದ್ಮಾವತಿಯು ಋಷ್ಯಾಶ್ರಮದೊಳಿರ್ದು ಜಿನಮುನಿಯಿಂ……………. ತದ್ವೃತ್ತಾಂತಮೆಲ್ಲಮಂ ಪೇಳಿದೊಡಂ ದಂತಿವಾಹನನರಿದು ತನ್ನ ಮಗನಂ ಚಂಪಾಪುರಕ್ಕರಸನಂ ಮಾಡಿ ತಾನುಮುಜ್ಜೈನಿಯೊಳಿರ್ದನಿತ್ತಲಾ ಚಂಪಾಪುರದ ದಕ್ಷಿಣದಗ್ಭಾಗದೊಳ್ ಪರ್ವತದೊಳೊಂದು ……………..ಯುದಕಮಂ ತಂದೆರೆದು ನಾನಾ ಪುಷ್ಪಂಗಳಿಂ ಪೂಜಿಸಿ ಪ್ರದಕ್ಷಿಣೆ ನಮಸ್ಕಾರಮಂ ಮಾಡುತ್ತಿರಲಾ ವಾರ್ತೆಯಂ ಕರಕಂಡುಮಹಾರಾಜಂ ಕೇಳಿ ಪೋಗಿಯಾ ಪುತ್ತಮನಗೆಯಿಸಲಲ್ಲಿ ಸಾ …… ಸಹಸ್ರ ಪೆಡೆಯುಳ್ಳ ನಾಗೇಂದ್ರಂ ಪ್ರಸನ್ನನಾಗಲರಸಾ ವಲ್ಮೀಕದ ಪ್ರತಿಮೆಗೆ ಮಹಾಮಹ ಪೂಜೆಯಂ ಮಾಡಿಸಿ ಪೊಡವಡೆದಜಂ ಸಮತೆಯಿಂ ನೋಡಿ ಶುಭಪರಿಣಾಮದಿಂ ಸತ್ತು ಸದ್ಗತಿಗೆ ಸಂದುದಲ್ಲಿಂದಿತ್ತಲ್‌ಕರಕಂಡುಮಹಾರಾಜಂ ಮೊದಲಾದ ಸರ್ವರು ಸರ್ಪನ ಪ್ರತಿ ಕೃತಿಯಂ ಮಾಡಿಸಿ ಪೂಜಿಸಿ ಬಹುಪುತ್ರರಂ ಪಡೆದುದರಿಂದಿತ್ತ ನಾಗರಪ್ರತಿಷ್ಠೆಗೆಯ್ವರ್.

ಮತ್ತಂ ಚಂಪಗಾನೆಯೆಂಬೂರೊಳ್ ಒಬ್ಬ ಗೌಂಡನ ಪೆಂಡತಿ ನೋಂಪಿಕ್ರಮದೊಳ್ ದೇವತಾಸಂಕಲ್ಪದಿಂ ಪುತ್ತಮನರ್ಚಿಸಲ್‌ಕಂಡೆಲ್ಲರ್ ಪುತ್ತಕ್ಕೆ ಪಾಲು ತುಪ್ಪವಂ ನೆರೆದರ್ಚಿಸಿ ಪುಷ್ಯ ಶುದ್ಧ ಪಂಚಮಿಯೊಳ್ ನಾಗರಂ ಪೂಜಿಸುತ್ತಾ ಬಪ್ಪರ್.ಮತ್ತಂ ಕೆಲದಿವಸಂ ಸಲ್ವಿನಮಯೋಧ್ಯಾನಗರದಜಮಹಾರಾಜನರಣ್ಯಮೆಲ್ಲಮಂ ಪುರಂಗಳಂ ಮಾಡಿಸಲಾತಂಗನರಣ್ಯನೆಂಬ ಪೆಸರಾದುದಾಗಳ್ ಮಿಥ್ಯಮಂ ಪೊರ್ದಿ ನಾನಾ ಶಾಸ್ತ್ರಮಂ ಕಲ್ಪಿಸಿರ್ದ ಋಷಿಗಳು ಬ್ರಾಹ್ಮಣಾದಿಗಳ್ ತಮ್ಮೊಳೆ ದೇವರು ಮೂರ್ತಿ ಸ್ವರೂಪನೆಂದೊಡೆ ಉಪಾದಿಯಪ್ಪುದದರಿಂ ನವ್ಯಕ್ತರೂಪನೆಂದು ತಮ್ಮತಮ್ಮೊಳೆ ಸಂವಾದಮಾಗಿ

ಶ್ಲೋಕ || ಅಚಿಂತ್ಯಾವ್ಯಕ್ತರೂಪಾಯ ನಿರ್ಗುಣಾಯ ಗುಣಾತ್ಮನೇ
ಸಮಸ್ತ ಜಗದಾಧಾರ ಮೂರ್ತಯೇ ಬ್ರಹ್ಮಣೇ ನಮಃ ||
ನಿರಾಕಾರ ಪರಂಜ್ಯೋತಿನಿರ್ವಿಕಲ್ಪ ಚಿದಾತ್ಮನೇ
ನಿರ್ವಿಕಲ್ಪಾಯ ನಿತ್ಯಾಯ ನಮೋ ಶಾಶ್ವತರೂಪಿಣೇ ||

ಎಂದು ಪಿಂಡಸ್ಥಧ್ಯಾನಮನಾಶ್ರಯಿಸಿ ರೂಪಂಗೊಂಡು ದೇವರೆಂಬುದು ಮತವಲ್ಲ ಮದರಿಂ ನಿಷ್ಕಳಂಕ ………ತ್ರಮೆ ಸಾಲ್ಗುಮೆಂದು ಗೋಳಕಾಕೃತಿಯಿಂ ಲಿಂಗಮಂ ಮಾಡಿ ಪೂಜಿಸಿದರ್.

ಶ್ಲೋಕ || ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ
ಲಿಂಗಾದ್ಬಾಹ್ಯಂ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್
‌ ||

………………..ಸಿ ಪೂಜಿಸಲಲ್ಲಿಂದಿತ್ತ ಕೆಲಂಬರ್ ಈಶ್ವರನ ಲಿಂಗಮೆಂದದಕ್ಕೆ ನಾನಾ ಕಥೆಯಂ ಕಲ್ಪಿಸಿದರ್.ಮತ್ತಂ ಸ್ವಸ್ತಿಕಾವತಿಯೊಳ್ ವಿಶ್ವಾವಸುಮಹಾರಾಜಂಗೆ ವಸುವೆಂಬ ಮಗನಾದನಾ ಪುರದ ಪಾರ್ವಂ ಕ್ಷೀರ[ಕದಂಬನೆಂಬನಾತಂ]ಗೆ ನಾರದನುಂ ಪರ್ವತನುಮೆಂಬಿರ್ವರ್ ಮಕ್ಕಳಾಗಲಾ ಕ್ಷೀರಕದಂಬನಲ್ಲಿ ವಿಶ್ವಾವಸುರಾಜಪುತ್ರನಪ್ಪ ವಸುವುಮುಪಾಧ್ಯಾಯನ ಮಕ್ಕಳಿರ್ವರುಂ ಪೆರಗೆ ಐನೂರ್ವರ್ ವಟುಗಳ್ ವಿದ್ಯಾಭ್ಯಾಸಂಗೆಯ್ವುತ್ತುಂ ಪನ್ನೆರಡು ವರ್ಷಂ…….. ಳಂ ಕಲ್ತು ಯಥೋಪ ದಿಷ್ಟಗ್ರಾಹಿಯಾಗಿ ಶಾಸ್ತ್ರಮೆಲ್ಲನೊಳ್ಳಿತ್ತಾಗಿಕ್ಕೆಲಂ ಪರ್ವತಂ ನಾರದನೊಳ್ ವೈಷಮ್ಯದಿಂ ವಿಪರೀತಗ್ರಾಹಿಯಾಗಿ ಅಜೈರ್ಹೋತವ್ಯಮೆಂಬ ಸೂತ್ರಾರ್ಥಮಂ ಪಶುವಾಚಿಯೆಂದು ಚರ್ಚಿಸಿ ತನ್ನ …………. ತ್ತಿರ್ಪಿನಂ ನಾರದಂ ಸಂವಾದಂಗೆಯ್ದು ಧರ್ಮಾಧಿಕರಣದಲ್ಲಿ ಅಲ್ಲಿಗೊಯ್ದಡಲ್ಲಿ ಪರ್ವತಂ ತನ್ನಭಿಪ್ರೇತಾರ್ಥಮಂ ನುಡಿದೊಡೆಲ್ಲರುಮಾತನಂ ಪಂಚತಾಳಂಗುಟ್ಟಿ ಊರಿಂ ಪೊರಮಡಿಸಲರಣ್ಯಭ್ರಮಣದಿಂ ದುಃಖಂಗೆಯ್ಯುತ್ತಿರ್ಪಿನಮರುವತ್ತುಸಾಸಿರ ದೇವತೆಗಳ್ಗಧೀಶಂ ಮಹಾಕಾಳಾಸುರಂ ತಾನು ವಿಹರಣಾರ್ಥಂ ಪೋಗುತ್ತಿರ್ದೀ ಪರ್ವತನಂ ಕಂಡೀತನಿಂದೆನ್ನ ವೈರಿಯಪ್ಪ ಸಾಕೇತದರಸಂ ಸಗರ ವಿಶ್ವಭೂ ಸುಲಸೆ ಮೊದಲಾದರಂ ಪಾಪದೊಳ್ ನೆಗಳ್ಚಿಯುಮುಪಾಯದಿಂದ ಪಾಯಮಾಗೆ ತದ್ವಂಶಮಂ ನಿರ್ಮೂಲನಮಾಗೆ ನರಕಾದಿ ದುರ್ಗತಿಗೆಯ್ದಿಸಲೀತನೆ ಸಾಲ್ಗುಮೆಂದು ವೃದ್ಧಬ್ರಾಹ್ಮಣನಾಗಿ ಬಂದು ಪರ್ವತಂಗೆ ಪುಸಿವಿನಯದಿಂ ನಿಮ್ಮಯ್ಯಂ ಕ್ಷೀರಕದಂಬನುಮಾನುಂ ಸಹಾಧ್ಯಾಯಿಗಳೆಂದು ನಿನ್ನಭಿಪ್ರೇತಾರ್ಥಮೆ ನಿಶ್ಚಯಮೆಂದು ವೇದಶಾಸ್ತ್ರವೆಂದಥರ್ವಣಮರುವತ್ತಾರು ಸಾಸಿರ ಮರೀಚಿಗಳನುತ್ಪಾದಿಸಿಕೊಟ್ಟು ಶ್ಯಾದ್ಯಭಿಚಾರಂಗಳಂ ಕಲಿಸಿ ನಾಲ್ಸಾಸಿರ ದೇವತೆಗಳನವಂಗಪ್ಪೈಸಿಕೊಟ್ಟು ಅಯೋಧ್ಯೆಗೆ ಕಳಿಪೆ ಸಗರವಿಷಯಕ್ಕೆ ಜ್ವರ ಮೊದಲಾದ ರುಜೆಯಂ ಮಾಡಿ ತಜ್ಛಾಂತಿ ಹೇತುವಾಗೆ ಯಜ್ಞ ಕ್ರಿಯೆಯನೊಡರ್ಚುತ್ತಂ ಪಶುಪ್ರಾಣಿಗಳಂ ಯಜ್ಞಮುಖದಿಂ ಕೊಂದಾ ಪ್ರಾಣಿಗಳೆಲ್ಲಂ ಸ್ವರ್ಗಕ್ಕೆ ಬೊಂದಿಗೆವೆರಸಿ ಪೋಪಂತೆ ತೋರಿಸುತ್ತ ಲೋಕಂ ನಂಬಿ ನಿಶ್ವಚಯಮೆಂಬಂತೆ ತೋರಿಸಿ ಮತ್ತಂ ಅರವತ್ತು ಸಾಸಿರ ಪಶುಗಳಂ ಸಗರನಪಟ್ಟದ ಕುದುರೆಯನಾತನರಸಿ ಸುಲಸೆಯು ಯಜ್ಞಮುಖದೆ ಬೇಳೆಯವರಂ ವಿಮಾನದೊಳ್ ಸ್ವರ್ಗಮಂ ಪಡೆದೆವೆಂದು ತೋರಿಸಿ ಪೋಪಂತೆ ಮಾಡಿ ಸಕಲ ಜನಮೆಲ್ಲಂ ನಂಬಿ ಯಜ್ಞಮುಖದಿ ಮರಣಕಾಂಕ್ಷಿತರಾಗಿಪ್ಪುದಿದೆಲ್ಲಮಂ ನಾರದಂ ಕೇಳ್ದುಮನೇ…………ಸತಿಗೆ ಪೊ………೦ಡಂ ಮಾಡಿ ಮಹಾಕಾಳನ ದೇವತೆಗಳವರ ಮೋಹನವಿದ್ಯೆಯಿಂ ಪೂರ್ವ ಸಪ್ತಕ ಮಾಡಿ ಮೊದಲು ತನ್ನ ಪಿತನಾದ ಕ್ಷೀರಕದಂಬಂ ಪಶುನಾಚಿಯೆಂದು ಪೇಳಿರ್ದನದಕ್ಕೆ ವಸುರಾಜಂ ಸಾ ………………….. ೦ಚಿಕಾ ………..ದಿಂ ಸಿಂಹವಿಷ್ಟರದೊಳೆ ತನ್ನ ಸತ್ಯದಿಂದಂತರಿಕ್ಷದೊಳಿಪ್ಪಂ ಸತ್ಯವಸುವೆಂದಿರ್ದೊಡಾತನಂ ಬೆಸಗೊಳೆ ಮುನ್ನ ಕ್ಷೀರಕದಂಬಂಗೆ ಗುರುದಕ್ಷಿಣೆ……. ಕೊಟ್ಟಿರ್ದುದರಿಂ ಸರ್ವ…….. ಹದಿಂದಲ್‌ಮೂರು ವೇಳೆ ಬೆಸಗೊಂಡಾದ್ಯುಪರ್ವತನಣಂ ಪ್ರೇತಾರ್ಥಮೆ ಪರಮಾತ್ಮಮೆಂದು ಬಾಯ್ದೆರೆಯಲೊಡನೆಭೂಮಿ ಬಾಯ್ದೆರೆದು ವಸುರಾಜನ ಸಿಂಹವಿಷ್ಟರಂ ಫಣಿಕೂಪಮಂ ಮಲೆವ……… ವಿಮಾನದೊಳಿಟ್ಟು ಎನ್ನ ಪಥ್ಯದಿಂ ಸ್ವರ್ಗಮಾದುದೆಂದು ಪೇಳಿ ಶಾಪಂ ತಾಗಿ ತೋರಿಸಿದೊಡೆ ನಾರದಪ್ರಭೃತಿಗಳೆಲ್ಲಂ ವಿಷಣ್ಣಚಿತ್ತರಾಗಿ ಹಿಂಸಾಯಜ್ಞ ಮಾಡಿ ಮಾಡಿಸಿದರ್. ಮೊದಲ ಭಟ್ಟರು ಪ್ರಾಣಿಗಳ್ವೆರಸು ನರಕಂಬೊಕ್ಕರೆಂದು ನಿಶ್ಚೈಸಿರ್ದರಾ ನಾರದಂ ಪೋಗಿ ಜನ್ಮಾಂತರದ ಮಿತ್ರನಪ್ಪಾದಿತ್ಯಾಭದೇವನಂ ಬರಿಸಿ ಮಹಾಅನ್ಯಾಯಮಪ್ಪ ಹಿಂಸಾಧರ್ಮಮಂ ಪ್ರಕಟಿಸಿದೊಡದಕ್ಕೆ ಕಾಲದೋಷದಿಂ ದೈವಂಗಳ್ ಸಹಾಯಮಾಗೆ ಈಗಲಯೋಧ್ಯೆಗೆ ಪೋಗಿ ಯಜ್ಞಕ್ಕೊಡರ್ಚಿದ ಪರಿದಕ್ಕೇಗೆಯ್ವೆಮೆನೆ ಅಸುರಕುಮಾರರ್ಗಂ ನಾಗಕುಮಾರರ್ಗಂ ವಿರೋಧಮಪ್ಪುದರಿಂದಾ ದೇವಂ ನಾಗರಂ ಕೂಡಕೊಂಡಾ ಯಜ್ಞಶಾಲೆಯ ಪರಿಹರಿಸುತ್ತಂಬರೆ ಯಜ್ಞ ವಿಘ್ನಮಾಗೆ ಮಹಾಕಾಳಂ ಕೋಪಿಸಿ ಸಿಡಿಲಾಗಿ ಬಂದು ಸಗರನಂ ಪೊಯ್ದುಕೊಂದಂ. ವಿಶ್ವಭೂ……..ಯಮಂ ಮಾಡಲ್‌ಯಾಗಂ ಮಾಳ್ಪುದಕ್ಕೆ ನಾಲ್ಕು ದಿಕ್ಕಿನೊಳ್ ಜಿನಪ್ರತಿಮೆಯನಿಟ್ಟರ್ಚಿಸುವುದೆಂದು ಪೇಳೆ ಮತ್ತಂ ಯಜ್ಞಮಂ ತೊಡಗೆ ಜಿನಪ್ರತಿಮೆಯನಿರಿಸಿ ಓಂ[ಅ]ರ್ಹಂ ಎಂದಿವು ಮೊದಲಾದ ಮಂತ್ರಂಗಳಿಂ ಅರ್ಚಿಸಿ ದೊಡಾದಿತ್ಯಾಭದೇವಂ ಬಂದದ ಮುರಿಯಲವನ ವಿಮಾನಂ ಭಗವದ್‌ಪ್ರತಿಬಿಂಬಾಲಂ ಘನಮಾಗದಿರೆ ವಿಷಣ್ಣಮನನಾಗಿ ಪೋದಂ…………….ತಂ ವಿಶ್ವಭೂಪ್ರಭೃತಿಗಳಂ ಯಜ್ಞಮುಖದೊಳ್ ಕೊಂದೊಡೆ ಮಹಾಕಾಳಸುರಂ ತನ್ನ ವೈರಿಗಳ ವಂಶಂ ನಿರ್ಮೂಲನಮಾಗಿ ನರಕಂಬೊಕ್ಕುದನರಿದು ಬಂದು ಎನ್ನ ವೈರಿಸಂಹಾರಾರ್ಥಂ ಮಾಡಿಸಿ ವೈರಿಹಿಂಸಾರೂಪಮಪ್ಪ ಯಜ್ಞಂ ಪುಸಿಯಿದನಾರು ಮಾಡಲಾಗದು. ಅಹಿಂಸಾರೂಪಮಪ್ಪ ಪಂಚಮಹಾಯಜ್ಞದೊಳ್ ನೆಗಳ್ವುದುವೆಂದುಸಾರಿ ……………ಕೊಂಡೊಡಿಲ್ಲಿ ಕೆಲಂಬರ್ ಬಿಡದೆ ನಡಸುತ್ತಾ ಬರೆದರೀ ವೃತ್ತಾಂತಮಂ ರಾಮಕಥಾವತಾರದೊಳ್ ಬರೆದಿರ್ಪೆ……….. ಸವಿಸ್ತರಮಂ ತಿಳಿವುದು.

ಅಲ್ಲಿಂದಿತ್ತಲಯೋಧ್ಯಾಪುರ ದಶರಥಮಹೀನಾಥಂಗ………ಭೆಯೆಂಬ ನಾಲ್ವರ್ಗಂ ರಾಮನುಂ ಲಕ್ಷ್ಮಣನುಂ ಭರತನುಂ ಶತ್ರುಘ್ನರೆಂಬ ನಾಲ್ವರ್ ತನಯರವರೊಳ್ ರಾಮಲಕ್ಷ್ಮಣರ್ ಬಲ ವಾಸುದೇವರಪ್ಪುದರಿಂ ಬೆಳೆಯಲ್‌ರಾಮಂಗೆ ಜನಕರಾಯ…………..ಯಂ ಮದುವೆನಿಲಲ್‌ರಾಮಂಗೆ ರಾಜ್ಯಮನಿತ್ತು ದಶರಥಂ ತಪೋರಾಜ್ಯಂಬಡುವಲ್ಲಿ ಕೈಕೆಗೆ ಮೆಚ್ಚಂ ಬೇಡಿ ಭರತಂಗೆ ರಾಜ್ಯಂಗೊಟ್ಟು……….. ಅರಣ್ಯಮಂ ದೇಶಾಂತರಂಗಳ ಚರಿಸುತ್ತಂ ದಂಡಕಾರಣ್ಯಮಂ ಪೊಕ್ಕಿರ್ದೊಡಲ್ಲಿ ಲಕ್ಷ್ಮಣಂಗೆ ಶಂಬೂಕಂ ಸಾಧಿಸಿಲಿರ್ದ ಕೈಸಾರ್ದಾತನುಂ ಸಾಯ್ವುದುಮವರಬ್ಬೆ ಶೂರ್ಪನಖಿ ಬಂದು ಕಂಡಾಗ್ರಹದಿಂ ರಾಮಲಕ್ಷ್ಮಣರಂ ಕೊಲಲ್…………………………ಕೂಡದಿರ್ದೊಡಂ ಕೋಪಂ ದ್ವಿಗುಣಸಿ ತನ್ನ ಪರಿವಾರಂಗಂ ಮೈದುನರಪ್ಪ ತ್ರಿಸೀತಾದಿಗಳ್ಗಂ ಮೊರೆಯಿಟ್ಟು ತನ್ನಗ್ರಜಂ ಲಂಕೇಶ್ವರನಪ್ಪ ರಾವಣಂಗರಿಪಿದೊಡಾತಂ ಬರ್ಪಿನ ಖರದೂಷಣರಸಂಖ್ಯಾತಬಲಂಬೆರಸು ಕಾಳಗಕ್ಕೆ ದಂಡಕಾರಣ್ಯದೊಳೊಡ್ಡಿ ನಿಲ್ವುದು ರಾಮಂ ತನ್ನ ವಜ್ರಾವರ್ತಚಾಪಕ್ಕೆ ಕೈನೀಡಿದೊಡಂ ಲಕ್ಷ್ಮಣಂ ಮಾಣಿಸಿ ಸೀತೆಯಂ ರಾಮನಂ ದಂಡಕಾರಣ್ಯದ ವಟವಿಟಪಿಯಡಿಯೊಳಿರಿಸಿ ಪೋರಿ ಮಹಾಯುದ್ದಂಗೆಯ್ದು ಖರದೂಷಣಾದಿಗಳನಿಕ್ಕುವನ್ನೆಗ ರಾವಣಂ ಬಂದು ಸೀತೆಯಂ ಕಂಡು ಭವಬದ್ಧ ಸ್ನೇಹದಿಂ ಸುತೆಯೆಂಬುದರಿಯದೆ ತನ್ನವಲೋಕಿನಿಯಿಂ ರಾಮನಂ ಸಿಂಹನಾದದಿಂದ್ಗಲ್ಚಲ್ ಜಟಾಯುವಂ ಕಾವಲಿಟ್ಟು ರಾಮಂ ಪೋಪುದು ರಾವಣಂ ಬಂದಾ ಸೀತೆಯನುಪಾಯದಿಂ ವಿಮಾನಮನೇರಿಸಿ ಲಂಕೆಗೆ ಪೋಪಾಗಳ್ ಸೀತೆಯತ್ಯಂತ ಶೋಕಾಕುಳೆಯಪ್ಪುದುಂ ಜಟಾಯು ಅಡ್ಡಂ ಬಂದು ರಾವಣನನಿರಿಯಲ್ ಬರೆ ಕೋಪಿಸಿ ಎರಡು ಪಕ್ಷ ಮುರಿಯಲವನಿಯೊಳ್ ಬೀಳೆ ತಾಂ ಪೋಗಿ ಸೀತೆಯನೊಡಂಬಡಿಸಲಾರದೆ ಪ್ರಮದವನದ ಶಿಂಶುಪವೃಕ್ಷದಡಿಯೊಳ್ ಸೆರೆಯನಿಕ್ಕಲಿತ್ತ ರಾಮಲಕ್ಷ್ಮಣರ್ ಖರದೂಷಣರ ಬಲಸಹಿತಂ ಕೊಂದು ಬಂದಾ ಮರದಡಿಯೊಳ್ ಸೀತೆಯಂ ಕಾಣದೆ ಹಂಬಲಿಸಿ ಪಾತಾಳಲಂಕೆಗೆ ವಿರಾಧಿತನ ನರಸಂ ಮಾಡಿ ಜಟಾಯುವಂ ಬೋಧಿಸಿ ಗತಿಗಾಣಿಸಿ ತಾಮುಂ ಪಾತಾಳಲಂಕೆಯೊಳಿಪ್ಪುದು ಸುಗ್ರೀವ ಹನುಮಾಂಗದ ಜಾಂಬವ ನಳ ನೀಳಾದಿಗಳ್ ಬಂದೋಲಗಿಸುತ್ತಂ ಸೀತೆಯಂ ರಾವಣನೊಯ್ದಿದುದಂ ರತ್ನಜಟೆಯಿಂದರಿದಲ್ಲಿಗೆ ಹನುಮ ಪೋಗಿ ಸುದ್ದಿಯಂ ತರಿಸಿ ಮತ್ತೊಮ್ಮೆ ಹನುಮಂತಂ ಪೋಗಿ ಲಂಕಾದಹನಮಂ ಮಾಡೆ ರಾವಣನನು…………..ತಮಂ ಪೇಳೆ ಕೇಳದೆ ಕೋಪಿಸಲನೇಕ ಬಲಂವೆರಸು ರಾಮನೊಳ್ ಕೂಡಿ ಪ್ರಭಾಮಂಡಲಂ ಮೊದಲಾದನೇಕ ಭೂಚರ ಖೇಚರಬಲ ಸಹಸ್ರ ಅಕ್ಷೋಹಿಣಿಬಲಂಬೆರಸು ಸಮುದ್ರಮಂ ದಾಂಟಿ ಹಂಸದ್ವೀಪದೊಳ್ ಬಿಟ್ಟು ಹನುಮಂತಂ ಲಂಕೆ……….ಕಿತ್ತು ಲಂಕೆಯಂ ಸುಡೆ ರಾವಣಂ ಕುಂಭ ನಿಕುಂಭ ಕುಂಭಕರ್ಣ ಮೊದಲಾಗೆ ಒಡಹುಟ್ಟಿದರುಂ ಇಂದ್ರಜಿತು ಮೇಘವಾಹನ ಅತಿಕಾಯರ್ ಮೊದಲಾದ ಮಕ್ಕಳುಂ ಹಸ್ತ ಪ್ರಹಸ್ತ ‘ಮೊದಲಾದನೇಕ ವಿದ್ಯಾಧರಬ……ಪೊಣರ್ಚಿ ರಾವಣಂ ತನ್ನ ಚಕ್ರದಿಂ ಲಕ್ಷ್ಮಣನನಿಟ್ಟಿ…………..ವದು ಕೇಶವನಂ ಬಲವಂದು ನಿಲೆಯಾ ಚಕ್ರದೊಳೆ ರಾವಣನಂ ಕೊಂದು ಸೀತೆಯಂ ತಂದು ವಿಭೀಷಣಂಗೆ ಪಟ್ಟಂಗಟ್ಟಿ ರಾಮಲಕ್ಷ್ಮಣರ್ ತ್ರಖಂಡಮಂಡಲ………….ಜ್ಯಾಭಿಷೇಕಮನಾಂತು ಸುಖಿಮಿರ್ದು ಜನಾಪವಾದಕ್ಕಾಗಿ ಸೀತೆಯನರಣ್ಯದೊಳ್ ಬಿಡಿಸಲ್ ಗರ್ಭಿಣಿ ಸೀತೆ ಪುಂಡರೀಕಿಣಿಪುರದೊಳ್ ಲವಾಂಕುಶರೆಂಬ ಮಕ್ಕಳ್ ಪುಟ್ಟಿ ಬೆಳೆದು ನಾರದನಿಂತೆಂದವನರಿಪ……ಲಂದು ಯುದ್ಧಂ………..ಳ್ಕೂಡಿ ಸೀತೆಯು ದೀಪ್ಯದಿಂ ತನ್ನ ಶೀಲಮಂ ತೋರಿ ತಪಂಗೊಳೆ ಲಕ್ಷ್ಮಣಂ ರುಜೆಯಿಂದ ಆರ್ತರೌದ್ರದೊಳೆ ಕಾಲಂಗಂಡು ಪಂಕಪ್ರಭೆಗೆಯ್ದಿದಂ, ಮುಂದೆ ತೀರ್ಥಂಕರನಾಗಿ ಮುಕ್ತಿಯಂ ಪಡೆದಂ. ರಾಮಸ್ವಾಮಿಯು ಅನುಜನ ಕಳೇವರಮಂ ಜನ್ಮಾಂತರಮೋಹದಿಂದರುದಿಂಗಳ್ವರಂ ಪೊತ್ತಿರ್ದು ನಿರ್ಮೋಹನಾಗಿ ಸಂಸ್ಕರಿಸಿ ಜಿನದೀಕ್ಷೆಗೊಂಡು ತಪದಿಂ ಘಾತಿಕರ್ಮಮಂ ಕೆಡಿಸಿ ಮತಿಶ್ರುತಾವಧಿ ಮನಃಪರ್ಯಯಜ್ಞಾದಿಂ ಸಪ್ತರ್ದಿಸಂಪನ್ನಂ ಲೋಕ ಕಾಲಕರ್ಮ ದ್ರವ್ಯಗುಣಪರ್ಯಯ ತ್ರಿಕಾಲ…………ಚರಾನಂತದರ್ಶನ ವೀರ್ಯಸುಖಮೆಂಬಂತರಂಗ ಸಂಪತ್ಸಮೃದ್ಧಿಯಿಂ ಸಕಲ ಪದಾರ್ಥಯುಗಪದವಲೋಕನ ಕೇವಲಜ್ಞಾನದಿಂ ಕರ್ಮಲೇಪಂ ಕಳೆದೊಡಂಗದೊಳಗಣನಂತ ಪರಮಾಣುಗಳಗಲಿ ಪೋದೊಡೆ ಪರಮಾತ್ಮಂ ಶುದ್ಧನಾಗಿ ಅಘವಾಗೈದು ಸಾಸಿರ ಚಾಪಮಂ ಭೂಮಿಯಂ ಬಿಟ್ಟಾಕಾಶದೊಳ್ ನಿಲ್ವುದುಂ ಪುರುಂದರಂ ಚತುರ್ನಿಕಾಯಾಮರರ್ವೆರಸಿ ಬಂದು ಕೇವಲಪೂಜೆಯಂ ಮಾಡಿ ಕುಬೇರನಿಂ ಗಂಧಕುಟಿಯಂ ನಿರ್ಮಿಸೆ ತ್ರಿಲೋಕಂ ಸಂದಣಿಸಿದ ಗಂಧಕುಟಿಯೊಳ್ ದಿವ್ಯಭಾಷೆಯಿಂ ಧರ್ಮಾಮೃತವೃಷ್ಟಿಯಿಂ ಭವ್ಯಸಸ್ಯಮಂ ತಣಿಪಿ ಕಡೆಯೊಳ್ ತುಂಗಪರ್ವತದೊಳೆ ಸುಗ್ರೀವ ಹನುಮ ಗವಯ ನೀಳ ಮಹಾನೀಳರ್ ರಾಮಾಸ್ವಾಮಿಯೊಡನೆ ಮೋಕ್ಷಲಕ್ಷ್ಮಿಯಂ ಕೈಕೊಂಡರ್ ಇತ್ತ ರಾಮಸುತರ್ ವಿಜಯ ರಾಮ ಮೊದಲಾದನೇಕರ್ ಲಕ್ಷ್ಮಣಕುಮಾರರಾದಿ ರಾಜ್ಯಂಗೆಯ್ದು ಕೈವಲ್ಯಪ್ರಾಪ್ತರಾದರೀ ಕಥೆಯಂ ರಾಮಕಥಾವತಾರದೊಳರಿದುಕೊಂಬದು. ಇಂತು ಇಕ್ಷ್ವಾಕು ಕುರು ನಾಥ ಉಗ್ರ ಹರಿವಂಶದೊಳೆ ತೀರ್ಥಂಕರರಂ ಚಕ್ರವರ್ತಿ ಬಲಾಚ್ಯುತ ರುದ್ರ………..ಸಿ ಪ್ರಸಿದ್ಧಿವಡೆದರ್.

ಮತ್ತಂ ಹರಿವಂಶದೊಳ್ ದ್ವಿಜರನೇಕಂ ಪುಟ್ಟಿ ಪಾರಿವ್ರಾಜಕರಾದರಿದು ಶ್ರುತಿಗಳು ಮಾಡಿದರಲ್ಲಿ ರುದ್ರಭೂತಿಯೆಂಬಂಗಲಂ ಕುಮಾರಿಯೆಂಬಳ್ದಂ ಶಿಶುಮುದಯಿಸಿದೊಡಂ ರುಜೆಯಿಂ ಜೀವಂ ವೇದನಾಸಮುದ್ಘಾತಮಾಗೆ ಸೂಕ್ಷ್ಮ ಪಾಪದಿಂಡಿನಿರ್ದೋ………….ದೆಂದು ಮತ್ತಮದ ಗತಿಯಲ್ಲಿಟ್ಟು ನೋಳ್ಪಾಗ ಸೂಕ್ಷ್ಮಶ್ವಾಸಮಂ ತಿಳಿದು ಜೀವಮಿಪ್ಪುದೆಂದು ತೊರೆದು ಬಂದು ಬದುಕಿದೊಡದಕ್ಕೆ ವಾಲ್ಮೀಕಿಯೆಂದು ಪೆಸರಿಡಲ್ ಬೆಳೆದು ಪಂಡಿತನಾಗಿ ಪಾರಿವ್ರಾಜಕನಾಗಿ ಕುಮತಿ ದುರ್ವೃತ್ತಿಯಿಂದಿತಿಹಾಸಂಗಳತೀತಮಂ ಮಾಡಿ…………..ಮತ್ತಮಾ ಹರಿವಂಶದೊಳೆ ಯದುವೆಂಬಂ ಪುಟ್ಟಿ ಪ್ರಸಿದ್ಧಿ ಪಡೆದುದರಿಂ ಯದುವಂಶಮೆಂದಾಯ್ತು. ಮತ್ತಂ ಶೂರವೀರರ್ ಪುಟ್ಟಿ ಶೌರಿ ಪುರಮಂ ಮಾಡಿದರ್. ಆ ಶೌರಿಪುರದ ಅಂಧಕವೃಷ್ಟಿಗಂ ಸಮುದ್ರವಿಜಯಂ ಮೊದಲಾದ ಹತ್ತು ಕುಮಾರರಾದರ್ , ಕಿರಿಯ ವಸುದೇವಂಗೆ ಬಲ…………….ಟ್ಟಿದರ್.

ಅತ್ತಲ್ ಹಸ್ತಿನಾಪುದೊಳ್ ಶಾಂತಿ ಕುಂಥು ಅರಚಕ್ರವರ್ತಿಗಳ್ ಪುಟ್ಟಿ ಶಿವ ಲೋಕದೊಳ್ ಶಾಶ್ವತಸುಖಪ್ರಾಪ್ತರಾದರ್. ಇತ್ತಲನೇಕ ವತ್ಸರಂ ಕಳಿಯಲಾ ವಂಶದೊಳ್ ಶಕ್ತಿಯೆಂಬರಸಂ[ಗಂ] ಸುಧಾರಿಣಿಯೆಂಬರಸಿಗಂ ವಶಿಷ್ಟನೆಂಬ ಮಗನಾದೊಡಾತಂ ರಾಜ್ಯದೊಳಿರ್ದು [ಪ] ರಾಶನುಂ ಶಂತುನುಮೆಂಭಿರ್ವರ್ ಮಕ್ಕಳಾಗೆ ಶಂತಂಗೆ ಪಟ್ಟಂಗಟ್ಟಿ ಪರಾಶರಂಬೆರಸು ಪರಿವ್ರಾಜಕನಾಗಿ ಪಂಚಾಗ್ನಿಮಧ್ಯದೊಳ್ ತಪಂಗೆಯ್ಯುತ್ತಿರಲಾ ಮಾರ್ಗದೊಳ್ ವೀರಭದ್ರರೆಂಬ ಮಹಾತಪೋಧನರ್ ತೀರ್ಥವಂದನಾ ನಿಮಿತ್ತಂ ಪೋಗುತ್ತಿಪ್ಪರಂ ಕರೆದೆನ್ನ ತಪಸ್ಸಾಮರ್ಥ್ಯದಿಂದಗ್ಗಳಮುಂಟೆಯೆಂಬುದುಮೀ ತಪದಿಂ ಸಾವಧ್ಯಮುಪ್ಪುದರಿಂ ನಿಷ್ಟನ್ನತೆಯಾಗಲರಿಯದೀ ಕಾಯಕ್ಲೇಶದಿ ಸ್ವರ್ಗಾದಿ ಸುಖಮಂ ಮಾಲ್ಕುಮೆನಲತ್ಯಂತ ಕೋಪದಿಂ ಸಾವಧ್ಯಮೆಲ್ಲಿಪ್ಪುದು ತೋರೆಂದಾಗ್ರಹಂ ಗೆಯ್ಯಲಲ್ಲಿರ್ದ ಪುಳ್ಳಿಯಂ ಕುಠಾರದಿಂ ಸೀಳಿಸಿದೊಡಲಿರ್ದ ಕ್ರಿಮಿ ಪಪೀಲಿಕ ಸರ್ಪಂಗಳಾದಿ ನಾನಾ ಜೀವರಾಶಿಗಳ್ ಬೆಂದು ಕೆಲವು ಒರಲುತ್ತಿರ್ದ ಪ್ರಾಣಿಗಳಂ ತೋರಿ ತಪಕ್ಕೆ ಜ್ಞಾನಮೆ ಕಾರಣಮನಶನಾದಿ ತಪಂಗಳ್ ಮುಕ್ತಿಸಾಧನಮೆಂಬುದು ವಶಿಷ್ಟಂ ವಿಶಿಷ್ಟ ಮಾದನಶನಾದಿ ತಪಮಂ ಕೈಕೊಂಡು ಏಕೋಪವಾಸ ಪಕ್ಷಫೊವಾಸಂಗಳಂ ಮಾಡಿ ಬಳಿಕಂ ನಿರವದ್ಯಮಾಗಿ ಮಾಸೋಪವಾಸಮಂ ಕೈಕೊಂಡು ಮಧುರಾಪುರದ ಬಹಿರುದ್ಯಾನದೊಳ್ ಕಾಯೋತ್ಸರ್ಗದಿಂ ಧ್ಯಾನಾರೂಢನಾಗಿರ್ಪ್ಪುದಂ ತತ್ಪುರಾಧಿಪನಪ್ಪ ಸೋಮವಂಶದುಗ್ರಸೇನಮಹಾರಾಜಂ ಪುರಜನಸಮೇತಂ ವನವಿಹಾರಾರ್ಥಂ ಬಂದಾ ಋಷಿಯಂ ಕುಂಡುಮೀ ತಪಸ್ವಿಗಳ ಮಾಸೋಪವಾಸದ ಪಾರಣೆಯಂ ನಾವೆ ಮಾಡಿಸುವೆವೀ ಪೊಳಲೊಳಾರುಂ ಚರಿಗೆ ಮಾಸಿಸಲಾಗದೆಂದು ಘೋಷಿಸಲಾ ಮುಮುಕ್ಷು ಕೈಯೆತ್ತಿಕೊಂಡು ಮಾಸೋಪವಾಸದ ಪಾರಣೆಗೆಂದು ಪಟ್ಟಣಮಂ ಪೊಕ್ಕು ಚರಿಸುತ್ತಿರಲರಸನ ಪಟ್ಟದಾನೆಗೆ ಮದವೇರಿ ಕಂಭಮಂ ಕಿಳ್ತು ಜನಕ್ಷೋಭಮಂ ಮಾಡಲಾ ವ್ಯತಿಕರದಿಂ ಮುನೀಂದ್ರನಂ ನಿಲಿಸಲ್ ಮರೆಯೆ ಮುನಿಗಳಲಾಭದಿಂ ಪೋಗಿ ಬಳಿಕೊಂದು ತಿಂಗಳು ತಪಂಗೆಯ್ದು ಚರಿಗೆವರೆಯಾ ದಿವಸಮರಮನೆಯು ಕಿಚ್ಚು ತಗುಳಿರಲದರಿಂ ಯತೀಂದ್ರನಂ [ನಿಲಿಸಲ್ ಮರೆಯಲಾ ಸಂಯಮಿಗಲಾಭಮಾಗೆ ತಪೋ] ವನಮನೆಯ್ದಿ ಬಳಿಕೊಂಡು ತಿಂಗಳು ತಪಂಗೆಯ್ದು ತ್ರಿಮಾಸೋಪವಾಸದಿಂ ಶಕ್ತಿಗುಂದಿ ಚಂದ್ರಗತಿಯಿಂ ವೀದಿಯೊಳ್ ಚರಿಯಿಸುತ್ತ ಗೃಹ ಗೃಹಂಗಳ ಬಾಗಿಲೊಳ್ ಪಂಚ ಸಪ್ತಾಚ್ಛಾಸಂಬರಂ ನಿಂದಿರ್ದರಮನೆಯ ಬಾಗಿಲೊಳ್ ನಿಲೆಯರಸಂ……………ಯೋಗಿಂದ್ರನ ಲಾಭದಿಂ ತಪೋವನಕ್ಕೆ ಪೋಗಲ್ ತ್ರಾಣಂ ನಂದಿ ತರಗೆಲೆಯಂತೆ ತೂರಾಡುತ್ತಂ ಪೋಪ ಯತೀಶ್ವರನಂ ಪುರಜನಂ ಕಂಡೀ ಯತಿ ಯೋಗಿಪುರದರಸಂಗೆ ಸುವೈರದಿಂ ತಾನುಂ ನಿಲಿಸಂ ಮತ್ತಾರುಮಂ ನಿಲಿಸಲಾಗದೆಂದು ನಿಯಮಿಸೆ…………..ಪಿದಾದಗೆ ಅವಸಾನಕಾಲಮಾಗಲಾ ಮುನಿಪನ ತಪಸ್ಸಾಮರ್ಥ್ಯ ಪ್ರತ್ಯಕ್ಷಮಾಗಿರ್ದೇಳು ದೇವತೆಗಳ್ ಬರ………….ಬೆಸನಾವುದೆಂದು ಕೇಳೆ ಮುಂದಣ ಭವಕ್ಕೊದಗಿಮೆಂದು ಪೇಳಿ ಕಷಾಯೋದಯದಿಂದರಸನೊಳ್ ವೈರದಿಂ ಶರೀರಮಂ………..ಬ್ಬಸಗೊಳೆ ನೆಲಸಿದೊಡಾಕೆಗೆ ತನ್ನರಸನುದರಮಂ ಸೀಳ್ದು ರಕ್ತಪಾನಮಂ ಮಾಡಲೆಂಬ ಬಯಕೆಯಾಗಲದನಾರೈದು ತಿಳಿದು ಮಂತ್ರಿಗಳ್ ರಸ ರುಧಿರ ಮೇದೋಸ್ಥಿಯಿಂ ಕೃತ್ರಿಮದರಸನಂ ಮಾಡಿ ಗೃಹದೊಳಿಟ್ಟಾಕೆಯ ಕೈಯೊಳ್………ಕೃತ್ರಿಮರೂಪನನಿಕ್ಕಿ ರುಧಿರಮಂ ಪೀರಿ ಕಡೆಯೊಳಾ ಪತಿ ಸತ್ತನೆಂದು ಮೂರ್ಛೆಯೋಗಿ ಸಾಯಲ್‌ಬಗೆದೊಡರಸನಂ ತೋರಿ ಸುಖಮಿಪ್ಪಿನಂ ನವಮಾಸಂ ನೆರೆದುಮುತ್ಪಾತಂಗಳಂ ತೋರಿ ಬೆಸಲೆಯಾಗೆ ಪುತ್ರಮುಖಾವಲೋಕನಂಗೆಯ್ಯಲ್ ಬಾಲಕನ ಕಡೆಗಣ್ಣೊಳ್ ಕಿಡಿ ಸೂಸಲಾ ಶಿಶುವಿನಿಂದ ಸಹಾಯಮಪ್ಪುದೊಂದು ಮಂಜೂಷೆಯೊಳಾ ಕೂಸನಿರಿಸಿ ಅವತಾರ ಲೇಖಪತ್ರಮಂ ಬರೆದಿಟ್ಟು ಪರಿವ ಜಗುನೆಯೊಳಾ ಮಂದಾಸು ತೇಲುತ್ತಂ ಪೋಪಂತಾಗಿ ಮಾಡಿ ಬಿಟ್ಟಾದಡು ಬರುತ್ತಿರ್ದೊಡೆ ಕೌಶಂಬಿಪುರದ ಕಿರಾತಂ ಕಂಡು ಕೊಂಡುಪೋಗಿ ಶಿಶುವಂ ನೋಡಿ ಕಂಸನೆಂದು ಪೆಸರಿಟ್ಟು ಸಲಹಿದೊಡತಿಪ್ರಬಳನಾಗಿ ಬೆಳೆದು ಪ್ರಚಂಡನಾದುದರಿಂ ಪಟ್ಟಣಮಂ ಕ್ಷೋಭಿಸುತ್ತಿರಲೆಲ್ಲರುಂ ಕೂಡಲ್ಲಿ ಪೊರಮಡಿಸಿದೊಡಂ ಶೌರಿಪುರಮಂ ಪೊಕ್ಕಲ್ಲಿ ವಸುದೇವನಲ್ಲಿಗೆ ಬಂದು ಬಿಲ್ವಿದ್ಯಂ ಮೊದಲಾಗೆಯನೇಕ ರಾಜವಿದ್ಯಮಂ ಕಲ್ತು ಸಮರ್ಥನಾಗಿ ಸಿಂಹರಥನಂ ಪಿಡಿದು ಜರಾಸಂಧಂಗೆರಗಿಸುವುದುಂ ಪ್ರತಿಜ್ಞೆಗೆಯ್ದಿರ್ದುದರಿಂ ಜರಾಸಂಧಂ ತನ್ನ ಮಗಳ್ ಜೀವಂಜಸೆಯುಮನರ್ಧರಾಜ್ಯಂ ಕೊಡುವಲ್ಲಿ ಯುಗ್ರಸೇನಮಹಾರಾಜನ ಮಧುರೆಯಂ ಕೊಂಡು ತಂದೆತಾಯಿಗಳನಸಿಯ ಪಂಜರದೊಳಿಕ್ಕಿದೊಡಾ ಉಗ್ರಸೇನನ ತಮ್ಮನಪ್ಪ ದೇವಸೇನನ ಕುಮಾರನತಿಮುಕ್ತನೆಂಬಂ ವೈರಾಗ್ಯದಿಂ ದೀ[ಕ್ಷೆ] ಗೊಂಡವಧಿಜ್ಞಾನಿಯಾಗಿರ್ದಡಾತನ ತಂಗಿಯಪ್ಪ ದೇವಕೀ ದೇವಿಯಂ ವಸುದೇವಂಗೆ ಮದುವೆಯಂ ಮಾಡಿ ಕಂಸಂ ತನ್ನ ಪೆಸರಂ ಪೇಳ್ದೊಡೆ ಪರಿವ ಪಾವುಂ ಉರಿವ ಕಿಚ್ಚುಂ ನಿಲ್ದುವಂತತ್ಯಂತ ಚಂಡವಿಕ್ರಮದಿಂ ರಾಜ್ಯಂಗೆಯ್ವುದುಂ ಸುಖಮಿರ್ಪಿನಮೊಂದು ದಿ…………ತಿಮುಕ್ತಮುನಿ ಚರಿಗೆವರೆ ದೇವಕೀದೇವಿಯಾ ಮುನೀಂದ್ರನಂ ನಿಲಿಸಿ ಬಿಕ್ಷೆಯಂ ಮಾಳ್ಪಾಗಲ್ ಜೀವಂಜಸೆ ಬಂದು ಸರಸದಿಂದೆಲೆ ಭಾವಾ ಬತ್ತಲೆಯಿರ್ದಪೆ ಈ ವಸ್ತ್ರಮಂ ಕೊಳ್ಳೆಂದು ಕೆಲದೊಳಿರ್ದ ಮೈಲಿಗೆಯ ಸೀರೆಯಂ ಮುಂದಿಕ್ಕಿ ದೊಡಂತರಾಯ………೦ಡು ಪೋಪ ಮುನಿಗಡ್ಡಂ ಬಂದು ದೇವಕಿಯು ಗರ್ಭಮಾಗೆ ಎಂತಪ್ಪ ಮಗನಂ ಪಡೆವಳ್ ಪೇಳೆಂದು ಕಾಡಿದೊಡೆ

ಮುನಿಯೆಂದಂ ನಿನ್ನ ಪತಿಯಂ ಪಿತನುಮಂ ನೆಲಕ್ಕಿಕ್ಕುವಂತಪ್ಪ ಪುರುಷಂ ಪುಟ್ಟುವನೆಂದು ಪೇಳಿಪೋಪುದುಂ ಚಿಂತಾಕ್ರಾಂತೆ……………ಕೇಳಿ ನಿಶ್ಚೆಸಿ ಸತಿಯಂ ಸಂತೈಸಿರ್ಪಿನ ಕೆಲದಿವಸದಿಂ ದೇವಕಿಯು ಗರ್ಭಮಾಗೆ ಮುನಿವಚನಮಂ ನೆನೆದು ತನ್ನ ಗೃಹದೊಳೆ ಪ್ರಸವವಾಗಲೆಂದು ಕಂಸಂ ವಸುದೇವನಂ ಬೇಡಿ ದೇವಕಿಯಂ ತನ್ನ ಗೃಹಕ್ಕೊಡಗೊಂಡು ಬಂದು ಆಕೆಯ ಮೂರು ಸೂಳ್ [ಪೆತ್ತಮ]ಳ್ಗ ಳಂ ನೈಗಮದೇವಂ ಕೊಂದು ಪೋಗಿಯಾಯುಷ್ಯವಿಲ್ಲದ ಪೆಣ್ಗೂಸುಗಳಂ ತಂದಿರಿಸಲಾಗಳೆ ಪರಿಹಿರಿಸುತ್ತಿರಲ್ ಮತ್ತೆ ಗರ್ಭಮಾಗೆ ಏಳು ತಿಂಗಳ ರಾತ್ರಿಯೊಳ್ ಕೃಷ್ಣಂ ಪುಟ್ಟಿದೊಡಾರುಮರಿಯದಂತು ವಸುದೇವನುಂ ಬಲಭದ್ರನುಂ……………………….. ವನೆತ್ತಿಕೊಂಡು ಪುರದ ಬಾಗಿಲ್ಲೆ ಬಂದು ಕವಾಟಮಂ ತೆರೆಯಲನುವಿಲ್ಲದಿರಲಾ ಮಾಣವಕನ ಪಾದಸ್ಪರ್ಶನದಿಂ ಬಾಗಿಲ್ ತೆರೆಯ ಪೊರೆಗ ಬಂದು ಕತ್ತಲೆಯೊಳ್ ಬಟ್ಟೆಗಾಣದಿರೆ ಕೃಷ್ಣನ ಪುಣ್ಯದೇವತೆ ವೃಷಭಾಕಾರದೊಳ್ ತನ್ನ ಕೋಡಿನಲ್ಲಿ ದೀಪಮಂ ಬೆಳಗುತ್ತಂ ಮುಂದೆ ನಡೆದೊಡದರ ಬೆನ್ನಬಿಡದೆ ಪೋಗಲದು ಮುಂದಿಪ್ಪ ಜಗುನೆಯಂ ಪೊಕ್ಕಡೆ ಜಲಸ್ತಂಭದಿಂ ಮಾರ್ಗಮಾದೊಡಾ ತೀರಮಂ ಕಳಿದು ಮುಂದಿಪ್ಪ ಕೃಷ್ಣದೇವಿಗೃಹಮಂ ಪುಗಲಾ ವೃಷಭಂ ಅದೃಶ್ಯಮಾಗಲಾ ಸಮಯದೊಳೆ ತುರುಪಟ್ಟಿಯ ನಂದಗೋಪನೊಂದು ಪೆಣ್ಗೂಸನೆತ್ತಿಕೊಂಡು ಬಂದು ಎಲೆ ದೇವಿ ಪಲವು ಸೂಳ್ ನಿನಗೆ ಪರಸಿ ಗಂಡುಸಂತಾನಮನೀವುದೆಂದೊ ಡೀಗಲ್ ಪೆಣ್ಗೂಸಂ ಕೊಟ್ಟೆ ನೀನೆ ಕೊಳ್ಳೆಂದೊಂದು ಪೆಣ್ಗೂಸಂ ದೇವಿಯ ಮುಂದಿಟ್ಟು ತಿರುಗಿದಡಾ ಕೂಸನೆತ್ತಿಕೊಂಡ ಬಾಲಕನನಿರಿಸಿ ಪುತ್ರನಂ ಕೊಟ್ಟೆ ಕೊಂಡುಪೋಗೆಂದು ದೇವಿ ನುಡಿದಂತೆ ಪೇಳೆ ತಿರುಗಿ ಬಂದು ನೋಡಲ್ಲಿರ್ದ ಗಂಡುಶಿಶುವಂ ಕಂಡು ದೇವಿಯಿತ್ತಳೆಂದತ್ಯಂತ ಸಂತೋಷದಿಂದೆತ್ತಿಕೊಂಡು ಪೋಪುದುಮಿತ್ತಲಾ ಪೆಣ್ಗೂಸನೆತ್ತಿಕೊಂಡು ಬಂದು ನೇಸರ್ ಮೂಡಿದಾಳಗ್ ದೇವಕೀದೇವಿಯಂ ಪೆಣ್ಣಂ ಹಡೆದಳೆದೊಂಡೆ ಕಂಸನದರ ಘೋಣನರಿಯಸಲದು ಬೆಳೆದು ತನ್ನ ವಿರೂಪಿಗೆ ಕೊಕ್ಕರಿಸಿ ವಿಂಧ್ಯಪರ್ವತದೊಳ್ ತಾಪಸರೂಪಿನೊಳಿರ್ದು ಕಾಲಾಂತರದೊಳ್ ವಿಂಧ್ಯದೇವ[ತೆಯಾಗಿ] ಪೂಜಿಸಿ ಕೊಂಡಳ್.

ಅತ್ತಲ್ ನಂದಗೋಪಂ ಬಾಲಕನಂ ತನ್ನ ಪೆಂಡತಿ ಯಶೋದೆಗೆ ತೀವಿಕೊಟ್ಟಳೆಂದು ಕೃಷ್ಣನೆಂದು ಪೆಸರಿಟ್ಟು ಕೊಡೆಯತ್ಯಾದರದಿಂ ಸಾಕುತ್ತಿರ್ದೊಡೆ ಬಿದಿಗೆಯ ಹೆರೆಯಂತೆ ದಿನದಿ……………[ಮ]ಧುರಾಪುರದೊಳ್ ಬೆಳೆಯುತ್ತಿರ್ದಪನೆಂದು ಪೇಳ್ದೊಡೆ ತದ್ವಿನಾಶಕಾರಣಮಂ ಕಾಣದತಿಚಿಂತಾಕ್ರಾಂತನಾ…………ಗೆಯ್ದಿರ್ದೇಳು ದೇವತೆಗಳ್ ಬಂದು ಬೆಸನಾವುದೆನೆ ಎನ್ನ ವೈರಿಯೊರ್ವನೆಲ್ಲಿರ್ಪನವನಂ ಪರಿಹರಿಸುವುದೆಂದೊಡಂತೆಗೆಯ್ವೆನೆಂದು ಪೂತನಿಯು ಮೊದಲಾದೇಳು ದೇವತೆಗಳು ತಮ್ಮ ತಮ್ಮ………………ಪರಿಭವಿಸಲಾರದೆ ಕೆಂಗೆಟ್ಟುಪೋದವು. ಕೃಷ್ಣಂ ಬಾಲತ್ವದೊಳೆ ಪೂತನಿ ಮೊದಲಾದೇಳು ದೇವತೆಗಳಂ ಪರಿಭವಿಸಿ ಕಳೆದು ಗೋಪಾಲನಾಗಿ ಗೋವರ್ಧನ ಪರ್ವತಮನೇಳು ದಿವಸಂಬರಂ ಎಡಗೈಯೊಳೆತ್ತಿ ಕಾಳಾಹಿಯಂ ಕೊಂದು ಕಮಲಮಂ ತಂದು ವ್ಯಾಲಿಶಯನಮನೇರಿ ಕಾಲದಂಡೊಪಮ ಶಾರ್ಙ್ಗಯೆಂಬ ಚಾಪಮನೇರಿಸಿ ಪಾಂಚಜನ್ಯಮೆಂಬ ಪಂಚಮುಖ ಶಂಖಮಂ ಪೂರಿಸಿ ಮದದಾನೆಯ ಕೊಂಬಂ ಕಿಳ್ತು ಚಾಣೂರಮಲ್ಲ ಮೊದಲಾದ ಜಟ್ಟಿಗಳಂ ನೆಲಕಿಕ್ಕಿ ತನ್ನ ಮೇಲ್ವಾಯದ್ದುಬಂದ ಕಂಸನ ಮಿದುಳಂ ಕಿತ್ತು ಜರಾಸಂಧಂ ಕಾಲಯವಂ ಬಲಸಹಿತಮಟ್ಟಿಬರೆ ಸಮುದ್ರದೊಳೇಳು ದಿನಂ ದರ್ಭಾಸನದಿಂ ಇಂದ್ರಂ ದ್ವಾರಾವತಿಪುರಮಂ ಪಡೆದು ಪಟ್ಟಮನಾಂತಿರ್ದು ಶಿಶುಪಾಲನಂ ಕೊಂದು ವಿಜಯಾರ್ಧಗಿರಿಯನೇರಿ ಜಾಂಬವನಂ ಕಡೆಗಾಣಿಸಿ ಹಿರಣ್ಯ ಕಶಿಪುವಂ ಕೊಂದು ಮುರನಂ ಮರಣಂ ಮಾಡಿ ದ್ರೌಪತಿಗಾಗಿ ಎರಡನೆ ದಿವಿಯನೆಯ್ದಿ ಶಂಖಮಂ ಪೂರಿಸಿ ದೈತ್ಯರೆಲ್ಲರಂ ಸದೆದು ಮಧುಕ್ಕೆಟಭನಂ ವಧಿಸಿ ಬಂದು ಜರಾಸಂಧನನಾತನ ಚಕ್ರದಿಂದಂ ಕೊಂದು ಚಕ್ರಿಯಾಗಿ ಪಾಂಡವರಂ ಪರಿಪಾಲಿಸಿ ತಾನು ದಿಗ್ವಿಜಯದೊಳು ವರತ ಮಾಗಧ ಪ್ರಭಾಸಾಮರರೆಂಬ ವೆಂತರದೇವರಿಂ ಪರಿಪಾಲಿಸಿ ತಾನು ದಿಗ್ವಿಜಯದೊಳು ವರತ ಮಾಗಧ ಪ್ರಭಾಸಾಮರರೆಂಬ ವೆಂತರದೇವರಿಂ ಕಟಕ ಕಟಿಸೂತ್ರ ಕುಂಡಲ ಕೇಯೂರ ಹಾರ ಕೌಸ್ತುಭ ಪ……………….ಮಣಿಮುದ್ರಿಕಾದ್ಯಾಭರಣಂಗಳಂ ಪಡೆದು ಪೀತಾಂಬರಾದಿ ದಿವ್ಯ ವಸ್ತ್ರಂಗಳಂ ಛತ್ರ ಚಾಮರ ಗರುಡಧ್ವಜಾದಿ ಮಹಾಪತಾಕೆಗಳಂ ರತ್ನ ಸಿಂಹಾಸನಂ ನವರತ್ನ ಮಣಿತೋರಣ ಪ್ರಾಸಾದ ಶಿಖರಾದಿ ದಿವ್ಯಮಪ್ಪ ಗೃಹಶಯ್ಯಂಗಳ್ಗಂ ಸಪ್ತಾಂಗ ರಾಜ್ಯಕ್ರಮದಿ……………..ರಿಯು ದೇವತೆಗಳಿಂ ಸಹಸ್ರ ಸುವರ್ಣ ಘಟಂಗಳೊಳ್ ತೀವಿದ ಸುಗಂಧ ತೀರ್ಥೋದಕದಿಂದಭಿಷಿಕ್ತನಾಗಿ ಸತ್ಯಭಾಮಾ ರುಕ್ಮಿಣಿ ಸುಸೀಮಾ ಲಕ್ಷ್ಮೀ ಜಾಂಬವತಿ ಗೌರಿ ಗಾಂಧಾರಿ ಪದ್ಮಾವತಿಯರೆಂಬೆಣ್ಪರ್ ಪಟ್ಟಮಹಾದೇವಿಯರ್ ಮೊದಲಾಗೆ ಪದಿನಾರು ಸಾಸಿ[ರಮಂತಃಪುರಮುಂ] (೧೬೦೦೦), ರಮಣವಾರಿಯುಂ ಯಕ್ಷ ಸಹಸ್ರ ರಕ್ಷಿತಂಗಳಪ್ಪ ಚಕ್ರಗದಾ ಶಂಖ ಖಡ್ಗದಂಡ ಧನುಶ್ಯಕ್ತಿಗಳೆಂಬೇಳು ರತ್ನಂಗಳಾಗೆ ಬಲರಾಮಂಗೆ ಮುಸಲ ಹಲ ಗದಾ ರತ್ನ ಮಾಲೆಯೆಂಬ ನಾಲ್ಕು ರತ್ನಂಗಳಾಗೆ ಪದಿನಾರು ಸಾಸಿರ ಮಕುಟಬದ್ಧರ್ (೧೬೦೦೦) ನೂರುಪದಿಂ]ಬರ್ ವಿದ್ಯಾಧರಮಹಾರಾಜರುಂ (೧೧೨), ಎಣ್ಸಾಸಿರ್ವರ್ ಗಣಬದ್ಧ ದೇವರುಂ (೮೦೦೦), ನಾಲ್ವತ್ತೆಂಟು ಲಕ್ಷ ಗಜಂಗಳುಂ (೪೮, ೦೦, ೦೦೦), ಅನಿತೆ ರಥಂಗಳುಂ (೪೮,೦೦,೦೦೦), ಎಂಟು ಕೋಟಿ ಜಾತ್ಯಶ್ವಮುಂ, ಒಂಬತ್ತು ಕೋಟಿಯು ನಾಲ್ವತ್ತೆರಡು ಲಕ್ಷ ಪದಾ[ತಿಯುಂ ೯೪೨, ೦೦, ೦೦೦], ಪದಿನಾರು ಸಾಸಿರ ವಿಷಯಂಗಳುಂ (೧೬೦೦೦), ಒಂಬೈಸಾಸಿರದೆಂಟುನೂರೈವತ್ತು ದ್ರೋಣಾಮುಖಂಗಳುಂ (೯೮೫೦) ಇಪ್ಪತ್ತೈಸಾಸಿರ ಪತ್ತನಂಗಳುಂ (೨೫೦೦೦), ಪನ್ನಿಚ್ಛಾಸಿರೆ ಖರ್ವಡಂಗಳುಂ (೧೨೦೦೦) ಅನಿತೆ ಮಡಂಬಂಗಳುಂ (೧೨೦೦೦), [ಎಣ್ಘಾಸಿರ] ಖೇಡಂಗಳುಂ (೮೦೦೦), ಇಪ್ಪತ್ತೆಂಟಂತರದ್ವೀಪಂಗಳುಂ ನಾಲ್ವತ್ತೆಂಟು ಕೋಟಿ ಗ್ರಾಮಂಗಳುಂ (೪೮, ೦೦,೦೦, ೦೦೦) ಒಂದು ಕೋಟಿ ಸ್ವಬಂಧುಗಳ್ವೆರಸು ಸಹಸ್ರವರ್ಷಂ ಸುಖಮಿರ್ದು ಕಾಲಾನಂತರ ಕೃಷ್ಣನ ಪಿರಿಯಯ್ಯನಪ್ಪ ಸಮುದ್ರವಿಜಯನುಂ…………..ಶಿವದೇವಿಮಹಾದೇವಿಯುವೆರಸಿ ಶುಚೀದೇಹವನಾಂತಿಪ್ಪುದುಂ ವಿಂಶತಿ…………ಕರನಪ್ಪ ಶ್ರೀ ನೇಮಿಭಟ್ಟಾರಕರುದಿಸುವರೆಂದು ದೇವೇಂದ್ರ ನುಡಿಯೆ ನಿಯಮಿಸಿ ಆಲಂಕರಣ…………. ಗರ್ಭಕ್ಕವತರಿಸಲರುದಿಂಗ……….೦ದಿಗೆ ದಿನಂ………..ಕೋಟಿ ಸುವರ್ಣರತ್ನಮಯವನು…………. ದಿಕ್ಕನ್ನೆಯರಾ ವಿಶ್ವೇಶ್ವರಿಗೆ ಗರ್ಭಶೋಧನೆಗೆಯ್ದು ತೀರ್ಥಜಲದಿ ಸ್ನಾನಗೆಯ್ಸಿ ಗಂಧಮಾಲ್ಯ ವಸ್ತ್ರಾಭರಣಂಗಳಿಂ ದೇವತೆಗಳಲಂಕರಿಸಿದೊಡೆ………… ಯೊಳ್……………….ರನಿರ್ದು ಹಸ್ತಿಂದ್ರಾದಿ…………ನಿಜವದನ ಮಂ………………………ಸ್ವಪ್ನಂಗಳಂ……………………… ಸ್ವರ್ಗಲೋಕದಹ ಮಿಂದ್ರಂ ಮೂವತ್ತು ಮೂರು ಸಮುದ್ರೋಪಮಕಾಲಂ ದಿವ್ಯ ಸುಖಮನನುಭವಿಸಿ ಬಂದಾ ದೇವಿಯ ಗರ್ಭಕ್ಕವತರಿಸಿ ನವಮಾಸಂ ನೆರೆದು ಗರ್ಭ…………ಗಳಿಲ್ಲದೆ ನಿರ್ಮಲದಿಂ ಶ್ರಾವಣ ಶುದ್ಧ ಷಷ್ಠಿಯೊಳೆ ಚಿತ್ತಾನಕ್ಷತ್ರದೊಳ್ ತ್ರಿಜ್ಞಾನಧರಂ ಪುಟ್ಟಿಕಲ್ಪಾ………………..ವ್ಯಂತರಲೋಕದೊಳುಂ ಜ್ಯೋತಿರ್ಲೋಕದೊಳುಂ ಸ್ವಭಾವದಿಂ ಘಂಟಾ ನಾದಮುಂ ಶಂಖಧ್ವನಿಯುಂ ಭೇರೀನಿನಾದಮುಂ ಸಿಂಹನಾದಮುಂ ಕ್ರಮದಿ……….ಪ್ಪವು……………ನಕಂಪದಿ ಸೌಧಮೇಂದ್ರಂ ಚತುರ್ನಿಕಾಯಾಮರರೆಲ್ಲ ತಮ್ಮತ………………ಸಹಿತಂ ವಾದಿತ್ರಸಹಿತಂ ಬಂದಾಕಾಶದೊಳ್ ನಿಂದು……………………ದೇವೇಂದ್ರನಾಜ್ಞೆಯಿಂ ಬಂದಾ ಸೂತಿಕಾಗೃಹಮಂ……………..ಮಾಯಾನಿದ್ರೆಯಂ ಬರಿಸಿ ಮಾಯದ ಶಿಶುವನಿರಿಸಿ ಜಗತ್ಪತಿಯಪ್ಪ ಬಾಲಕನನೆತ್ತಿಕೊಂಡು ಬಂದಿಂದ್ರನಿಗೀಯೆ ಭಕ್ತಿಪೂರ್ವಕಂ ನಮಸ್ಕರಿಸಿ ಶತಚಂದ್ರನಭಸ್ಥಲ ವಿಲಾಸಮಪ್ಪ ಮುಖದ ದೇವಕಾಂತೆಯರ…………………ಶಕ್ರಂ ತನ್ನಂಕದೊಳಿಟ್ಟು ಬೆಳ್ಗೊಡೆವಿಡಿದು ಕಾರ್ಯಾತ್ರಿಕ ಸಮೇತಂ ದೇವ ನಿಕಾಯಂ ಧರೆಯಿಂ ಮೇಲೆ ತೊಂಬತ್ತೊಂಬತ್ತು ಸಾವಿರ ಮಹಾಯೋಜನೋನ್ನತಮಪ್ಪ ನವರತ್ನಮಯ ಸುದರ್ಶನ ಮಹಾಮೇರು ಶಿಖರಿಯ ಮೇಗಣ ಪಾಂ…………………ಶಿಲೆಯೊಳ್ ಷಟ್ಕುಮಾರರ್ ಭೂಮಿಶೋಧನಾದಿಗಳಂ ಮಾಡಿ ಅಧಿವಾಸನಾ ವಿಧಿಯಿಂ ಜಗತ್ಪತಿಯಪ್ಪ ನೇಮಿಕುಮಾರನಂ ಸ್ಥಾಪಿಸಿ ರಾಜನ ವಿಧಿಯಂ ಶಕ್ರನೆಸಗೆ ಇಂದ್ರಾದಿ ದಶಲೋಕಪಾಲರ್ ತಂತಮ್ಮ ವಾಹನಾಯುಧವಧೂ……..ನ್ನೆಗಳ್ವೆರಸಿ ನಿಲೆ ಮಂಗಲಪಾತ್ರೆಗಳೊಳ್ ಮಂಗಲದ್ರವ್ಯಮನಾಂತು ದೇವಾಂಗನಾನಿಕುರುಂಬಂ ನಿಲೆ ಕಿನ್ನರ ಕಿಂಪುರುಷ ಗರುಡ ಗಂಧರ್ವಾಂಗನಾ ಕದಂಬ ವೀಣಾದಿ ವಾದ್ಯಮನಾಂತು ಗೀತ ಗಾನಾದಿಗಳಿಂ ಪಾಡುತ್ತಮಿರೆ ಉಳಿದಸಂಖ್ಯಾತ ವೃಂದಾರಕರೆಲ್ಲಮಾ ಮೇರು ವಿಂದೈದು ಕೋಟಿಯುಂ ಪತ್ತು ಲಕ್ಷವೈವತ್ತುಸಾಸಿರ ಮಹಾಯೋಜ[ನ]ದಾಚೆ ರಾಜಿಸುವ ಐದನೆ ಕ್ಷೀರಸಮುದ್ರಂ ದ್ವಂದ್ವಪಾರ್ಶ್ವದೊಳ್ ಪಂಕ್ತಿಯಾಗಿ ನಿಂದೋಂಕಾರಪೂರ್ವಕಮಷ್ಟ ಯೋಜನೋನ್ನತ ಸುವರ್ಣಘಟಂಗಳೊಳ್ ಕ್ಷೀರಾಬ್ಧಿಯೊಳ್ ತೀವಿ ತಂದಂಬೆಯಿಂ ಬಪ್ಪ ಪೂರ್ಣಕಳಶಂಗಳಂ ಶ್ರೀಕುಮಾರನ ಬಲಕೆಡಗಡೆಯೊಳ್……….. ರ್ಮೇಶಾನೇಂದ್ರರ್ ನಿಂದು ಭಕ್ತಿ ಸಾಸಿರ ರೂಪಾಗಿ ಸಾವಿರ ಸಾವಿರ ಭುಜಂಗಳಂ ಪಡೆದು ಏಕಸಮಯದೊಳಸಂಖ್ಯಾತ ಕುಂಭಂಗಳ ಮೃತಧಾರಾವಪುವಿಂದರ್ಹದ್ಬಾಲಕನಂ ಮಜ್ಜನಂಬುಗಿಸಿ ದಿವ್ಯ ಗಂಧೋದಕ……… ವ್ಯವಸ್ತ್ರಾಭರಣ ಮಾಲ್ಯಾದಿಗಳಿಂದಲಂಕರಿಸಿ ಷೋಡಶೋಪಚಾರದಿಂ ಪೂಜಿಸಿ ದೇವೇಂದ್ರಂ ಸಾಸಿರ ನಯನಂಗಳಂ ಪಡೆದೀಕ್ಷಿಸಿ ನಾಗೇಂದ್ರಂ ನುತಿಯಿಸಲ್‌ಸಹಸ್ರ ಜೆಹ್ವೆಗಳಂ ಪಡೆದು ಕೊಂಡಾಡಿಯು ಪುರಕ್ಕಂ ಬಿಜಯ……. ಧರ್ಮರಥಕ್ಕಂ ನೇಮಿಯಪ್ಪುದರಿಂ ನೇಮಿಭಟ್ಟಾರಕನೆಂದು ಪೆಸರಿಟ್ಟಾನಂದನಾಟ್ಯಮನಾಡಿ ಅಮೃತಾಹಾರಾದಿ ಭೋಗಂಗಳಂ ಮಾಡಲ್‌ಸುರರಂ ನಿಯಮಿಸಿ ಚತುರ್ನಿಕಾಯಾಮರರ್ವೆರಸು ಇಂದ್ರನಿಂದ್ರಲೋಕಕ್ಕೆ ಪೋದಂ. ಇಂತು……..ಲ್ಯಾಣಮನಾಂತು ಕುಮಾರಕಾಲಂ ಸಲೆ ಸಂಸಾರ ಶರೀರಭೋಗಂಗಳೊಳ್ ಹೇಯಂ ಪುಟ್ಟಿ ನಿರ್ವೇಗಮಾನಸವಾಗೆ ಬ್ರಹ್ಮ ಸ್ವರ್ಗಾಂತ್ಯದ ಸಾರಸ್ವತಾದಿ ಇಪ್ಪತ್ತು ನಾಲ್ಕು ಭೇದಮಪ್ಪ ಲೋಕಾಂತಿದೇವರರಿದು ಬಂದರ್ಚಿಸಿ ಪ್ರತಿ ……………….. ಯದಮರರ್ವೆರಸಿ ಪುರಂದರಂ ಬಂದು ಪರಿನಿಷ್ಕ್ರಮಣಕಲ್ಯಾಣ ವಿಶೇಷಪೂಜೆಯಂ ಮಾಡಿ ದಿವ್ಯಮಾದ ತನ್ನ ಸಿವಿಗೆಯೊಳ್ ಕುಳ್ಳಿರಿಸಿ ಭೂಚರರೇಳಡಿಯಂ …………. ತ್ತು ದೀಕ್ಷಾ……… ಕೊಯ್ದಿರಿಸಿ ಪೂಜಿಸಿ ವಿಶಾಲಮಪ್ಪ ………….ತಳದೊಳ್ ಪೂರ್ವಾಭಿಮುಖದಿ ಪಲ್ಯಂಕಾಸನದೊಳ್ ಸಿದ್ಧನಮಸ್ಕಾರಮಂ………………………………ನಂ ಪುಟ್ಟಿ ಧ್ಯಾನಮೌನಾದಿ……………..ದಿಂದಿಪ್ಪುದೆಂದು ಮೂರು ಗುಣಂಗಳುಂ ಮೂವತ್ತಾರು ಉನ್ನತ ಗುಣಂಗಳ್ವೆರಸಿ ಎಂಬತ್ತುನಾಲ್ಕು ಲಕ್ಷ ಸದ್ಗುಣಂಗಳುಂ…………………..ಸಹಸ್ರ ………..ಗಳು………..ಲಂ ಸಲ್ವಿನಂ ವಂಶವೃಕ್ಷದಡಿಯೊಳೆ ಘಾತಿಕರ್ಮ ಚತುಷ್ಟಯಂಗಳಂ ಘಾತಿಸಿ ಲೋಕತ್ರಯ ಕಾಲತ್ರಯ ವಿವಿಧ ದ್ರವ್ಯಗುಣಪರ್ಯಾಯ ವಸ್ತುಪರಿಚ್ಛೇದಕ ಸಕಲ ಪದಾರ್ಥ ಯುಗಪದವಂತನಪ್ಪ ವಿಶ್ವವಿಮಲ ಕೇವಲಜ್ಞಾನಂ ಪುಟ್ಟಿ………………… ದರುವತ್ತುಮೂರು ಕರ್ಮಗಳೊಡನೆ ಜರೆ ಜನ್ಮ ಮರಣ ಭಯ ಚಿಂತಾ ನಿದ್ರಾತಂಕ ದೋಷ ಲೋಭ ಕಾಮ ರೋಗ ಕ್ಷುಧಾ ತೃಷಾದಿ ಪದಿನೆಂಟು ದೋಷಂಗಳ್ ಧ್ಯಾನಂಗಳಿಂ ಬೆಂದುರಿದು ಕರಿದು ಭಸ್ಮಂಗಳಾಗೆ ಪರಮಾತ್ಮಜ್ಯೋತಿಪ್ರಭಾ ಸಾಮರ್ಥ್ಯದಿಂ………………ತ ಪರಮಾಣುಗಳಡಗಿ ತೆಪರ ಕಳೆದಲಾಬುವಂತೆ ಲಘುವಡೆದು ನವಕೇವಲಬ್ಧಿಯಾಗಿ ಭೂಮಿಯಿಂ ಮೇಲೈಸಾಸಿರ ದಂಡಂ ಪೋಪಾಕಾಶದೊಳ್ ನಿಲ್ವುದುಮಿಂದ್ರನರಿದು ಬಂದು ಸುರಸಮಿತವೆರಸು ……………ಶತಸಹಸ್ರಂಗಳಿಂ ನುತಿಸುತಿರ್ದ…………….ಧರಣಿಯಿಂ ತೊಟ್ಟು ಇಪ್ಪತ್ತು ಸಾಸಿರ ಸೋಪಾನಂಗಳ್ ನವರತ್ನದುಮಾಗೆ ಧೂಳೀಸಾಲ ಮಾನಸ್ತಂಭ ಸರೋವರ…………. ಗೋಪುರ ಸಹಿತಂ ವೃತ್ತಾಕಾರಮಾಗೆ ಜಲಖಾತಿಕಾ ಪುಷ್ಪವಾಟಿಕೆ………ಳ್ಳ ಸಾಲವೇದಿಗಳಿಂದೊಂಬತ್ತು ಸುತ್ತಿನ ಭಿತ್ತಿಗಳಿಂದಾಕಾಶಸ್ಫಟಿಕದೆರಡು ಭಿತ್ತಿಯಿಂದೊಳಗೆ ಪೀಠದ್ವಯಂಗಳಂ ಬಳಸಿದನಾ ಭೂಮಿಯೊಳ್ ದ್ವಾದಶ ಗಣಂಗಳಿಗೆ ಮೇಲಣ ರತ್ಮಮಯಸಿಂಹಾಸನ……….. ಪ್ರಾತಿಹಾರ್ಯ ಚತುತ್ರಿಂಶರತಿಶಯಸಮನ್ವಿತನಾಗಿ ಕಂಠೋಷ್ಠಾದಿ ನಿಜೋನಿಮಿತ್ತಮಿಲ್ಲದ ದಿವ್ಯಧ್ವನಿಯಂ ಸಮಸ್ತ ಪದಾರ್ಥಮಂ ಧರ್ಮಾಮೃತಮಂ ಭವ್ಯರ ಶ್ರೋತ್ರಂಗಳಂ ತಣಿಯಿಸುತ್ತ……………ಯಣರ್ ಪಾಂಡವರ್ಸಹಿತಂ ವಂದನಾರ್ಥಂ ಪೋಗಲುದ್ಯುಕ್ತರಾದಾರಾ………………..ವರ ವಂಶವೆಂತೆಂದೊಡೆ ಮುನ್ನ ಶಕ್ತಿಯೆಂಬರಸಂ ಕಂಸಂಗೆ ಪಟ್ಟಂಗಟ್ಟಿ ಪರಾಸರಂಬೆರಸು……………… ಮಿಥ್ಯಾತಪದೊಳಾವರ್ತಿಸಿ ಕಾಲಂ………….. ಹಸ್ತಿನಾಪುರಕ್ಕನತಿ ದೂರಮಪ್ಪ ಸತ್ಯವಸುಂಧರಿಯ ಮಧ್ಯವರ್ತಿ ಯಮುನಾನದೀ ಸಮೀಪದ ತಾಪಸಾಶ್ರಮದೊಳಿರಲಿತ್ತ ವತ್ರುವತಿಯೆಂಬ ರಾಜಧಾನಿಯನಾಳ್ವ ವಸುವೆಂಬರಸಂ ಸೂಳೆಗೇರಿಯೊಳ್ ಬರುತ್ತಲ್ಲಿ ಸೇರಿರ್ದ ಮೇನಕಿಯೆಂಬಳಂ ಕಂಡು ಸೋಲ್ತವಳಂ ಪರಿಗ್ರಹಿಸಿರ್ದೊಡಾಕೆಗೆ ಪೆಣ್ಣು ಒಂದೆರಡು ಮಕ್ಕಳಾದೊಡಮಿರ್ವರಂ ಪೂರ್ವಕೃತ ಪಾಪೋದಯದಿಂ………….. ಕಪೋಲ ಸುತಾರವ ದೇಹಮಾಗಲ್‌ಮತ್ಸ್ಯಗಂಧಿಯು ಮತ್ಸ್ಯನುಮೆಂಬ ಪೆಸರಾಗಿ ಹೇಸಿಕೆ ಪುಟ್ಟಿ ಪಟ್ಟಣಮಂ ಪೊರಮಟ್ಟು ಯಮುನಾನದಿಯಂ……… ಪೊಕ್ಕಲ್ಲಿ ನಾವಿಕರೊಳ್ಕೂಡಿ ನಾವೆಯನಾಡಿಸುತ್ತಿರ್ದೊಂದಿನಮಾ ನದೀತೀರದೊಳ್ ಕೈಯಿಕ್ಕಿ ನಿಂದಿರ್ದ ಯಮಧರರೆಂಬ ಸ…………….ದರ್ಧಿಪ್ರಾಪ್ತರಂ ಕಂಡವರಂ ಬಂದಿಸಿಯವಗಾದ ಪಾಪದಿಂದಿನಿತು ದುರ್ಗಂಧಮಾದುದೆನಲವರಿಂತೆಂದರ್.

ನೀನೀ ಭವಕ್ಕೆ ಮೂರನೆಯ ಭವದೊಳೆ ಶಬರಾಲಯದೊಳ್ ಶಬರಿಯಾಗಿ ನಿನ್ನ ಪತಿಯೊಡನೆ ಮಿನುಗ……….ದಿತಂದಿನಲಾ ನೆಲೆಯೊಳ್…………………….ಮಿರ್ದವರತಮುಂ……………ಮಸೆಯುತ್ತಿರಲೊರ್ವಂ ಕಂಡೀ ಮುನೀಂದ್ರಂಗುಪಸರ್ಗಂಗೆಯ್ಯದಿರಿ ನಿಮಗನಂತ ಪಾಪಂ ಪೊರ್ದುಗುಮೆಂದಾಗ್ರಹಂಗೆಯ್ಯಲಾ ಜಪಿಸುವಾ ಪ್ರದೇಶಮಶುಚಿ ಮಾಡಿ ಪೊಲ್ಲಮೆಗೆಯ್ಯೆ…………….. ದಂಪತಿಗಳ್ ಈ ಸಮೀಪದ ತಾಪಸಾಶ್ರಮಮಂ ಪೊಕ್ಕು ಬ್ರಹ್ಮಚರ್ಯಂ ಮೊದಲಾದ ಮಿಥ್ಯಾತ್ವತನು ಮಾಡಿ ಸೌಧರ್ಮಂಗೆ ಭೋಗಸ್ತ್ರೀಯಪ್ಪರಿ ಯಾಗಿದು ಭೌಮವಿಹಾರದೊಳ್ ಜಿನಮುನಿಯಂ ನಿಂದಿಸಿದುದರಿಂತಾದುದೆಂದು ಪೇಳೆ ಭಯಭ………………..ಯತ್ಯ್ರೀಪಾದ ಮೂಲದೊಳು ವಿನಮಿತೆಯಗಿಪ್ಪುದಮಾ ಮುನಿಯ ದೇಹಸ್ಪರ್ಶಮಾದ ಸಮಿರನ ಸೋಂಕಿನಿಂದಾಕೆಯ ದುರ್ಗಂಧ ಪೋಗಿ ಸುಗಂಧಿಯಾಗಲಾಕೆ ತನ್ನದೀ ತೀರದೊಳಿಪ್ಪಿನ ಪರಾಸರಂ ವಿಹಾರಾರ್ಥಂ ಬಂದಾಕೆಯಂ ಕಂಡು ……..ಯ್ದು ಸುಖಮಿರೆ ಕೆಲವಾನು ದಿವಸಕ್ಯಾಕೆ ಗರ್ಭಮಾಗಿ ನವಮಾಸಂ ನೆರೆದು ವ್ಯಾಸನೆಂಬ ಮಗನಂ ಪೆತ್ತಳಾತನನಳುಪಿ ಪರಾಸರಂ ಛಂದೋಲಂಕಾರ ಕಾವ್ಯ ನಾಟಕ ತರ್ಕ ಶಬ್ದಾಗಮಂ ಮೊದಲಾಗಿ ಅಥರ್ವಣವೇದಮಂ ಕಲಿಸಿರ್ಪಿನಂ.

ಇತ್ತಲ್‌ಹಸ್ತಿನಾಪುರದೊಳ್ ಶಂತಂ ರಾಜ್ಯದೊಳ್ ನಿಂದೊಂದು ದಿನಂ ಪರಿಮಿತ ಜನವೆರಸಿ ವಿನವಿಹಾರಕ್ಕೆ ಪೋದೊಡಲ್ಲಿಯೊರ್ವ ಚರಸ್ತ್ರೀಯು ಭೀಕರಮಾದೊಂದು ಪವನಂ ನಿರ್ಮಿಸಿ ತನ್ನಾ ತರಣ…………ತ್ತಿಗಲಲ್ಲಿ……….ನೀನಾರಿದೇನೆಂದೊಡೀ………ಕೂಪದೊಳ್ ಬಿದ್ದವನಂ……………..ದುವುದೆಂಬುದು ಬಳಿಕ ಪೇಳ್ವೆನೆಂದೊಡಂ ಪ್ರಯತ್ನದಿಂದೆ………….ಕೊಟ್ಟೊಡಾಂ ವಿಜಯಾರ್ಧದ ಪೃಥ್ವೀಪಾಲಕ ವಜ್ರಚಾಪ ವಿಯಚ್ಚರ ಪುತ್ರಿ ಲಕ್ಷ್ಮಿಯಂ …………..ಚೈತ್ಯಾಲಯದೊಳ್ ಚಾರಣಮುನಿಗಳಿಂ ಧರ್ಮೋಪದೇಶಮಂ ಸಂಸಾರಭೋಗದೊಳ್ ನಿರ್ವೇಗಮಾಗಿ ದೀಕ್ಷೆಗೊಳಲಿರ್ದೊಡೆ ಯತೀತನ ಪುತ್ರನಾದುದರಿಂ ನೀನು ಮದುವೆಯಾಗಿ ಪುತ್ರರಂ ಪಡೆದೆನ್ನ ರಾಜ್ಯಕ್ಕರಸನಂ ಮಾಡಿ ಪೋಪುದೆಂದು ಪ್ರಾರ್ಥಿಸೆ……….. ವಾದೇಶದಿಂ ಬಂದೆ ನೀನೆನಗೆ ………. ಮಾದೊಡಾಂಬಡೆದ ಮಕ್ಕಳಂ ಗಂಗೆಯೊಳ್…………… ದೀಕ್ಷೆಗೆ ಪೋಪುದಕ್ಕೆ ಒಪ್ಪಿದೊಡಾಂ ವಿದ್ಯೆಯಂ ಗಂಗೆಯಿಂ ಪೊರಮಟ್ಟು ಬಪ್ಪೆನೆನಲಂತೆಗೆಯ್ವೆನೆಂದು ಶುಭದಿನಮುರ್ಹೂತದೊಳ್ ವಿಭವದಿಂ ಗಂಗಾತಟದೊಳ್ ಬೀಡಂಬಿಡಲ್‌ಪ್ರವಾಹದಿಂ ಪೊರಮಟ್ಟು ಬಂದುದರಿಂ ಗಂಗಾರಿಯೆಂಬ ಪೆಸರಾಗಲಾಕೆಯಂ ಮದುವೆನಿಂದು ಸುಖಮಿರ್ದು ಆಕೆಗೆ ಮೂರು ಸೂಳ್ ಪುಟ್ಟಿದ ಮಕ್ಕಳಂ ವಿದ್ಯೆಯಿಂ ಗಂಗೆಯೊಳ್ ಬಿಟ್ಟು ಪೃಥ್ವೀತಿಲಕಕ್ಕೆಯ್ದಿಸಿ ಬಳಿಕ್ಕಂ ಪುಟ್ಟಿದ ಶಿಶುವಂ ಗಂಗಾರಭಸಕ್ಕಂಬೆ ಕೊಂಡುಬಂದು ಭೀಷ್ಮ…………….ಸಲಹಿ ಸಾಧಿತ ವಿದ್ಯ ಜಾತಿವಿದ್ಯ ಸಕಲ ವಿದ್ಯದೊಳ್ ಕೆಲವು ವಿದ್ಯೆಗಳಂ ಕಂ………ರಂಗಿತ್ತು ತಾನುಂ ಗಂಗಾನದಿಯಂ ಪೊಕ್ಕು ಪೋಗಿ ಜನಕನಂ ಮಕ್ಕಳುಮಂ ನೋಡಿ ಗಂಗಾದೇವಿ ತಪಂಬಟ್ಟಳ್

ಇತ್ತಲ್‌ಶಂತನಾಕೆಯ ವಿರಹದಿಂ ತೊಳಲುತ್ತಂ ಗಂಗಾತೀರ………….ನೋಳ್ಪಾಗಳಲ್ಲಿಯ ತಾಪಸಾಶ್ರಮದೊಳೊರ್ವಳತಿರೂಪಿನ…………ಇವಳಾರ ಮಗಳೀಕೆಯವರೆಂದರೀಕೆಯ…………ಧರನೀಕೆಯಂ ಶತ್ರುಭಯದಿಂ ತಂದಿರಿಸಿದನೆಂಬುದು ಕಾಯ್ದಿರ್ದೊಡಂ ಬಂದರೆ ತನಗೆ ಬೇಡಿದೊಡೆ ನಿನಗೆ ಸಮರ್ಥನಪ್ಪ ಕುಮಾರಂಗಾರನೆಯ……………. ಪ್ರಬಲರಾದರದರಿಂದ ಸಲ್ಲದೆಂದು ಕಂದನಿರೆ ಪುರಕ್ಕೆ ಕೊಂಡು ಚಿಂತಾಕ್ರಾಂತನಾಗಿರ್ದ ತಂದೆಯ………….ರಿದು ತಾಪಸಾಶ್ರಮನೆಂಬ ತಾನೀ ಜನ್ಮದೊಳ್ ಮದುವೆಯನೊಲ್ಲೆ………………..ರ್ದು ಪ್ರತಿಜ್ಞೆಯಂ ಮಾಡಿಯಾ ಸತ್ಯವರಿತುಂ ತನ್ನ ಪತಂ[ಗೆ] ದೀಕ್ಷೆಗೊಡಿಸಿ ತಾನುಂ ಬ್ರಹ್ಮಚರ್ಯಮನಾಂತಿರ್ಪುದು ಶಂತನಾಕೆಯೊಳಿಷ್ಟಭೋಗ ಕಾಮಸುಖಮನನುಭವಿಸಿರ್ದು ಚಿತ್ರವೀರ್ಯ ವಿಚಿತ್ರವೀರ್ಯರೆಂಬಿರ್ವರ್ ಕುಮಾರ………… ಯಾದುದಕ್ಕೆ ಮರುಗಿ ನಿರ್ವೇಗಮಾಗಿ ದೀಕ್ಷೆಗೊಳಲ್‌

ಇತ್ತಲ್‌ಚಿತ್ರವೀರ್ಯ ವಿಚಿತ್ರವೀರ್ಯರ್ ಕೌಶಿಕರಾಜನ ಪುತ್ರಿಯರಂ ತಮಗೆ ಬೇಡಿದೊಡಂ ನಿರಾಕರಿಸೆ ಬಲಂಬೆರಸಿರ್ವರುಂ…….. ಚಿತ್ರವೀರ್ಯನಶಕ್ತನಾಗಿ ಬರೆ ಗಾಂಗೇಯಂ ಕೇಳ್ದು ಎತ್ತಿಸಾರಿಯಾತನಂ ಪರಿಭವಿಸಿ ತತ್ಪುರತ್ರಿಯರಪ್ಪ ಅಂಬೆಯಂ ಬಾಲೆಯಂಬಿಕೆಯರೆಂಬ ಮೂವರ್ ಕನ್ನೆಯರಂ ತಂದು ವಿಚಿತ್ರವೀರ್ಯಂಗೆ ಮದುವೆಯಂ ಮಾಡಲೆಂದಿ………. ಕಾಲಮಾದೊಡೆ ಸತ್ಯವತಿಯು ಭೀಷ್ಮಂಗೆಂದಳ್ ನೀವೀ ಸ್ತ್ರೀಯರಂ ಪರಿಗ್ರಹಿಸಿ ಪಟ್ಟಮಂ ಮಾಳ್ಪುದೆಂದು ಪ್ರಾರ್ಥಿಸಿದೊಡಂ

ವೃತ್ತ || ಉದಯ ತಿ ಯದಿ ಭಾನುಃ ಪಶ್ವಿಮೇ ದಿಗ್ವಿಭಾಗೇ
ಪ್ರಬಲರಿಯದಿ ಮೇರುಃ ಸಿತತಾಯಾತು ವಹ್ನಿಃ
ಪ್ರ …………………… ಸದ್ಧತುರ್ವನಾಕ್ರಿಮಿಃ
………………………ಸುನರುಂತಂ ಭಾಷಿತಂ ಸಜ್ಜನಾನಾಂ ||

ಎಂದೊಡಂಬಡದಿಪ್ಪುದುಂ ಚಿಂತಾಕ್ರಾಂತರಾಗೆ ಮಂತ್ರಿಗಳ್ ಯೋಚಿಸಿ ಪರಾಸರಪುತ್ರನಪ್ಪ ವ್ಯಾಸನಿಪ್ಪುದನರಿದು ಗಾಂಗೇಯನೊಡಗೊಂಡು ಪೋಗಿ ತಾಪಸಾಶ್ರಮದೊಳಿರ್ದ ವ್ಯಾಸನನೊಡಂಬಡಿಸಿ ತಂದು ಮೂವರಂ ಮದುವೆಯಂ ಮಾಡಿ ಪಟ್ಟಂಗಟ್ಟಿದೊಡಾತಂ ಸುಖದಿಂ ಕೆಲದಿವಸಮಿರ್ದೊಡಂಬೆಗಂಧಕನಪ್ಪ ಧೃತರಾಷ್ಟ್ರನುಮಂಬಾಲೆಗೆ ಪಾಂಡುವುಮಂಬಿಕೆಗೆ ವಿದುರನುಮೆಂಬ ಮೂವರ್ ಕುಮಾರರುದ್ಭವಿಸೆ ಬೆಳೆದೊಡಾ………….. ಪಾರಿವ್ರಾಜಕದೀಕ್ಷಿತನಾಗಿ ದಾಕ್ಷಿಣಾಂತ್ಯ ಕವಿಚಕ್ರಿಯೆನಿಸಿ ದೇವತೆಗಳ ಸಹಾಯದಿಂ ಮಿಥ್ಯಾವೇದಮಂ ಪ್ರಕಟಿಸುತ್ತಿರ್ದನಿತ್ತಲ್‌ಗಾಂಗೇಯಂ ಧೃತರಾಷ್ಟ್ರಂಗೆ ಶೌರಿಪುರದಂಧಕವೃಷ್ಣಿಯನುಜನಪ್ಪ ನರಪತಿವೃಷ್ಣಿಯ ತನುಜೆ ಗಾಂಧಾರಿಯಂ ಮದುವೆಯಂ ಮಾಡಲಾಕೆಯ ಗರ್ಭದೊಳ್ ದುರ್ಯೋಧನಂ ದುಶ್ಯಾಸನಂ ದುರ್ದರ್ಶನಂ ದರ್ಮರ್ದನರ್ ಮೊದಲಾಗೆ ನೂರ್ವರ್ ಕುಮಾರರುಂ ದುಶ್ಯಲೆಯೆಂಬೊರ್ವ ಕುಮಾರಿಯು ಪುಟ್ಟಿದೊಡಾ ದುಶ್ಯಲೆಯಂ ಸಿಂಧುದೇಶಾಧಿಪತಿಯಪ್ಪ ಸೈಂಧವಂಗೆ ಕೊಟ್ಟು ಸುಖಮಿರ್ದರ್

ಮತ್ತಂ ಪಾಂಡುವಿಗೆ ಅಂಧಕವೃಷ್ಣಿಯ ಸುತೆಯಾದ ಕುಂತಿಯಂ ಬೇಡಿದೊಡೆ ರುಜೋಪೀಡತನೆಂದು ಕುಡದಿರೆ ಒಂದು ದಿನಂ ಪಾಂಡುರಾಜಂ ವನವಿಹಾರದಿಂ ಬರುತ್ತಂ ಸರೋವರವೇದಿಕೆಯೊಳ್ ಖೇಚರಂ ಮರೆದಿರ್ದ ಕಾಮಮುದ್ರಿಕೆಯ ಕೊಂಡಾತನರಸುತ್ತಿರಲದಂ ಕುಡೆ ನೀನು ಸತ್ಪುರುಷನೆಂದು ಈ ಮುದ್ರಿಕೆಯಿಂ ಸರ್ವ ರುಜೋಪಹಾರಮಪ್ಪಿನ……….೦ದು ಮಂತ್ರೋಪದೇಶಂಗುಡೆಯದರಿಂ ಕಾಮರೂಪನಾಗಿ ಕುಂತಿಯೊಳಾಸಕ್ತನಾಗಿ ಶೌರಿಪುರೋದ್ಯಾನದೊಳಾರೋಹಣದೊಳಿರ್ಪ ಕುಂತಿಯಲ್ಲಿಗೆಯ್ದಲಾಕೆ ಕಂಡು ಕಾಮಬಾಣವರಗತೆಯಾಗಲಾಕೆಯ ಸಖಿಯರ್ ಗಾಂಧರ್ವವಿವಾಹಂ ಮಾಡಿ ಕೂಡಿದೊಡೆ ಗರ್ಭಮಾಗಿ ನವಮಾಸಂ ನೆರೆದು ಕೂಸಂ ಪೆತ್ತೊಡೆ ತಂದೆತಾಯಿಗಳರಿದು ಗುಪ್ತದಿಂದಾ ಶಿಶುವಂ ಮಂದಾಸಿನೊಳಿಕ್ಕಿ ಸೋಮವಂಶಜನೆಂದು ಬರೆದು ಯಮುನಾನದಿಯೊಳ್ ಬಿಡಲ್‌ಪೋಗುತ್ತಿರೆ……..ಸಾನನ……. ರಂ ಕೊಂಡು ತತ್ಪುರದರಸಂ ಸೂ…….ತನ ಪುತ್ರನಪ್ಪುದರಿಂದಂ ಕರೆಸಿ ರಾಧೆಗಿತ್ತು ಮಗನಂ ಪಡೆದಳೆಂದು ಜಾತನಾಮಕರ್ಮಂಗಳಂ ಮಾಡಿ ಕರ್ಣಯುಗದೊಳ್ ಬೆರಳನಿಟ್ಟಿರ್ದುದರಿಂ ಕರ್ಣನೆಂದು ಸೂರ್ಯಪುತ್ರನೆಂದು ಪೆಸರಾಗೆ ಬೆಳೆಯುತ್ತಿರಲಿತ್ತಲಂಧಕ ವೃಷ್ಟಿಯು ಪಾಂಡುವಿಗೆ ಕುಂತಿಯ…………….. ತದನುಜೆ ಮದ್ರಿಸಹಿತಂ ಕುಡುವುದೆಂದಿರ್ವರ ಮದುವೆನಿಂದು ಕೆಲದಿನ ಮಕ್ಕಳಿಲ್ಲದಿರೆ ದಾನ ಧರ್ಮಂ ಮಾಡಿ…………………. ಗರ್ಭಮಾಗಿ ಯುಧಿಷ್ಠಿರಂ ಪುಟ್ಟಿ…………… ಕಂಕಪತ್ರನೆಂದು ಪೆಸರಾಗಲನಂತರಂ ಮೂಲಾನಕ್ಷತ್ರದೊಳುಂ ಭೀಮಂ ಪು……ಪಂ ಚರಮದೇಹಿಯೆಂದರಿದು ಪುಣ್ಯದೇವತೆಗಳ……….. ರಿಲಾವಾರದಿಂ ಬಳಸಿ ರಕ್ಷಿಸುತಿರಲರಸನರಿದು ತೆಗೆದುಕೊಂಡು ಬಂದು………ಯನಿಕ್ಕೆ ಇಂದ್ರಪ್ರಸ್ಥದೊಳಿರ್ದವರೊಳ್ ಭೀಮಂಗೆ ತಿಲಕಪ್ರಸ್ಥಮಂ ಅರ್ಜುನಂಗೆ ಕಣಯಪ್ರಸ್ಥಮಂ ನಕುಲಂಗೆ ನಾಗಪ್ರಸ್ಥಮಂ ಸಹದೇವಂಗೆ ಸುವರ್ಣಪ್ರಸ್ಥಮಂ ಧರ್ಮಜಂ……..ಅರ್ಜುನನಂ ಬರಿಸಿ ಕೃಷ್ಣಾನುಜೆಯಪ್ಪ ಸುಭದ್ರೆಯಂ ಮದುವೆಯಂ ಮಾಡಿಯನೇಕವನರ್ಘ್ಯ ವಸ್ತುವಾಹನಂಗ……….ಮೆಲ್ಲಮಂ ದುರ್ಯೋಧನಂ ಗೆಲ್ದು ಪಾಂಡುಪುತ್ರರಂ ಪನ್ನೆರಡು ವರುಷಂ [ವನವಾಸಮಂ] ಒಂದು ವರುಷಮಜ್ಞಾತವಾಸಮಂ ಮಾಡಲಾಗಳ್ ಅರ್ಜುನಂ ವಂಶಮಹೀರುಹದೊಳ್ ಕಟ್ಟಿ ನೇಲುತಿರ್ದ ಇಂದ್ರರಥನೆಂಬ ವಿದ್ಯಾಧರನಂ ತನ್ನ ಬಾಣಪ್ರಯೋಗದಿಂದಾ ಕೊನೆಯಂ ಛೇದಿಸಿ ಅಂತು ನಾಗಪಾಶಮಂ ಬಿಡಿಸಿಯವನ ಶತ್ರುವಂ ಜಯಿಸೆ ಇಂದ್ರರಥ ಕಿಂಶದ್ರುಮದ ಭಂಜಿನಿ ತ್ರಿಲೋಕಕ್ಷೋಭಿನಿ ಮನೋಭೀಷ್ಟಸಿದ್ಧಿನಿಯೆಂಬ ವಿದ್ಯಂಗಳಂ ಪಡೆದು ತನ್ನ ವಿಭವಮಂ ತೋರಲ್‌ಬಂದು ದುರ್ಯೋಧನನಂ ಕಟ್ಟಿ ಇಂದ್ರರಥಂ ಕೊಂಡೊಯ್ಯಲಾತನಂ ಧರ್ಮಜಂ ಭಾನುಮತಿ ಮೊದಲಾದ ಸ್ತ್ರೀಯರ ಮೊರೆಯಂ ಕೇಳಿ ಬಿಡಿಸಿ ಕಳುಹಿಸಿಪ್ಪಿನ ಜನ್ಮಾಂತರಸಂಬಂಧದಿಂ ಧಾತಕೀಷಂಡದ್ವೀಪದ ಮೂಡಣ ಮಂದರದ ಭರತಕ್ಷೇತ್ರದ ವಿಜಯಾರ್ಧದ ಪದ್ಮರಥನೆಂಬ ಖೇಚರಂ ವಿಹಾರಾರ್ಥಂ ಬರುತಿರ್ದು ಗರ್ಭಿಣಿ ದ್ರೌಪದಿಯಂ ಕಂಡೆತ್ತಿಕೊಂಡು ಪೋಗಿ ತನ್ನ ಭಾವನಪ್ಪ ವಾಸುದೇವನಾದರ್ಧ ಚಕ್ರಿಯರಮನೆಯೊಳ್ ಸೆರೆಯನಿಟ್ಟೊಡದಂ ಸಾಧುಗಳಿಂದರಿದು ಬಲನಾರಾಯಣ ಭೀಮಾರ್ಜುನರ್ ವಿಯನ್ಮಾರ್ಗದಿಂ ಪೋಗಿ ತತ್ಪುರೋದ್ಯಾನದೊಳಿರ್ದುಮಾ ಕೇಳವನುಂ ಪದ್ಮರಥನುಂ ಸಮವಸರಣದೊಳಿರೆ ನಿಮ್ಮಂ ತದ್ರಾಜಧಾನಿಯನೆಯ್ದಿ ದ್ರೌಪತಿಯಂ ತಪ್ಪುದುಂ ಬರ್ಪಾಗಳ್ ವಾಸುದೇವಂ ನಿಜಪಾಂಚಜನ್ಯಮಂ ಪೂರಿಸಿ ಭಯಂಗೊಳಿಸಿ ಬಂದರಿಂತು ಪಾಂಡುಪುತ್ರರ್ ಪನ್ನೆರಡು ವರುಷಂ ಕಳಿಯೆ ವಿರಾಟರಾಯನ ಪುರದೊಳ್ ಧರ್ಮರಾಯಂ ಬ್ರಾಹ್ಮಣನಾಗಿಯು ಭೀಮಂ ಪಾಚಿಗನರ್ಜುನಂ ನಟ್ಟುವನುಂ ನಕುಲನಶ್ವ ಶಿಕ್ಷಕಂ ಸಹದೇವಂ ವೈದ್ಯನುಮಾಗಿಂತು ಧೂಪಪರಾವರ್ತದಿಂದಿರ್ದು ಕೀಚಕನಂ ಪರಿಭವಿಸಿ ಗೋಗ್ರಹಣದೊಳೆ ನಿಯಮಂ ತೀರೆ ದುರ್ಯೋಧನನರಿದು ತನ್ನ ಸೇನಾ ನಾಯಕರಪ್ಪ ಕರ್ಣ ಕೃಪ ಕೃತವರ್ಮ ಭಗದತ್ತ ಸೈಂಧವ ಶಲ್ಯ ಅಶ್ವತ್ಥಾಮ ಭೂರಿಶ್ರವರ್ ಮೊದಲಾಗೆ ಸಾಹಸಿಗರ್ವೆರಸು ಕುರುಕ್ಷೇತ್ರದೊಳೊಡ್ಡಿನಿಲೆ ಕೃಷ್ಣಂ ಪಾಂಡವರ್ಗೆ ಸಾರಥಿಯಾಗೆ ಮಹಾಯುದ್ಧಂಗೆಯ್ದು ಕೌರವರಂ ಕೊಂದು ಗೆಲ್ಲಂಗೊಂಡು ಹಸ್ತಿನಾಪುರದೊ………..ರಂ ಪಲಕಾಲಂ ರಾಜ್ಯಸುಖದೊಳಿರ್ದರ್

ಇತ್ತ ಚಕ್ರಿಯಪ್ಪ ಕೃಷ್ಣಂ ಸಹಸ್ರವರ್ಷಂ ರಾಜ್ಯತ್ರಿಖಂಡಮಂ ಪಾಲಿಸುತ್ತಿರ್ದೊಂದು ಸಮುದ್ರವಿಜಯಾದಿ ಜನಕರುಂ ಶಿವದೇವ್ಯಾದಿ ಜನನಿಯರುಂ ಅಕ್ರೂರಾದಿ ಸಹೋದರರುಂ ಮನ್ಮಥಾದಿ ಸುತರುಂ………….ತ್ರಾದಿಗಳ್ ಸತ್ಯಭಾಮಾದಿ ಸ್ತ್ರೀಯರ್ವೆರಸು ಊರ್ಜಯಂತಪರ್ವತಕ್ಕೆ ನೇಮಿತೀರ್ಥಂಕರವಂದನಾನಿಮಿತ್ತ ಪೋಗಿ ಸಮವಸರಣಗಿರಿಯಿಂದಾ ಚತುರ್ದಿಕ್ಕಿನೊಳೆಸೆವ ರತ್ನಮಯಸೋಪಾನಮಿಪ್ಪತ್ತು ಸಾಸಿರಮಂ ತಂದು ಕೆಳಗಣ ಪಾದಲೇಪೌಷಧಿಯುಳ್ಳ……………… ಪಾದಮಂ ಮೆಟ್ಟಿದೊಡೈಸಾಸಿರ ಚಾಪೋತ್ಸೇಧಮನೇರಿ ಮೇಲೆ ಧೂಳಿಪಾದಿ ಮಾನಸ್ತಂಭ ಸರೋವರಮುಪ್ಪರಿಕೆ ವಸತಿ ಜಲಖಾತಿಕಾ ಪುಷ್ಪವಾಟಿಪ್ರಾಕಾರ ನಾಂಟ್ಯತಾಲಮುಪವನ ವೇದಿಕಾ ಧ್ವಜಮಾಗಿ ಪಾಲಕಲ್ಪವೃಕ್ಷಮುಪವದಸ್ತೂಪ ಹರ್ಮ್ಯವೇದಿಯಿಂದೊಳಗಣಾಕಾಶ ಸ್ಫಟಿಕಮಯ ಕೋಂಟೆಯೆರಡುಸಹಿತಮಾದ ಒಂಭತ್ತು ಪುತ್ತಿನ ಭಿತ್ತಿಗಳೊಳಗಣ ಪೂರ್ವಮಪ್ಪ ಸಂಪತ್ತಿಯನೀಕ್ಷಿಸುತ್ತ ಗಂಧಕುಟಿಯ ಮಧ್ಯದೊಳ್ ಪೀಠತ್ರಯದ ಸಿಂಹಾಸನಮನಾ……………….. ಗಳಂತರದೊಳ್ ಕೋಟಿ ಚಂದ್ರಾದಿತ್ಯ ಕಾ…………………ದಷ್ಟ ಮಹಾಪ್ರಾತಿಹಾರ್ಯಸಮನ್ವಿತ ಚತುಃಸ್ತ್ರಿಂಶದತಿಶಯದಿಂದೊಪ್ಪುವ ನೇಮೀಶ್ವರಂ ಬಳಸಿರ್ಪ ಕೇವಲಿಜಿನರು ಸಾವಿರದಪದಿನೈವರುಂ ಗಣಧರ ಪೂರ್ವಧರ ಅವಧಿಮನಃಪರ್ಯಯ ತೀಕ್ಷ್ಣ…………. ಕವಾದಿಗಳೆಂಬ ಸಪ್ತವಿಧ ಋಷಿಗಳ್ ಪದಿನೇಳು ಸಾಸಿರದ ನೂರಿಪ್ಪತ್ತರುವರುಂ ಸಾಸಿರದ ನಾನೂರ್ವರಜ್ಜಿಯರುಂ ಒಂದು ಲಕ್ಷ ಶ್ರಾವಕರುಂ ಮೂರು ಲಕ್ಷ ಶ್ರಾವಕಿಯರುಮಸಂಖ್ಯಾತ ದೇವದೇವಿಯರುಂ ಸಂಖ್ಯಾತ ತಿರ್ಯಜ್ಞಾತಿಗಳುಮೋಲಗಿಸುತ್ತಿರೆ ವಾಸಾದೇವಂ ಮಾತಾ ಪಿತೃ ಭ್ರಾತೃ ಪುತ್ರ ಪೌತ್ರ ಬಂಧುಗಳ್ವೆರಸು ಗಂಧಕುಟಿಯಂ ತ್ರಿಃಪ್ರ ದಕ್ಷಿಣಂಗೆಯ್ದು ಸಾಷ್ಟಾಂಗವಿನತನಾಗಿ ವಸ್ತುಗುಣ ರೂಪಸ್ತವಂಗಳಿಂದನೇಕ ಶತಸಹಸ್ರಂಗಳಿಂ ಭಕ್ತಿಗೆಯ್ದು ಗುರು ………………ಗಿ ಗಣಧರಾದಿಗಳ್ಗಭಿನಮಿಸಿ ದಿವ್ಯಾರ್ಚನೆಗಳಿಂದರ್ಚಿಸಿ ಪನ್ನೊಂದನೆ ಮನುಷ್ಯವರ್ಷದೊಳ್ ಕುಳ್ಳಿರ್ದು ಕೈಗಳೆರಡಂ ನೊಸಲೊಳಿಟ್ಟು ಸರ್ವಜ್ಞಧಿಕರಾದ ಪರಮಾತ್ಮಲೋಕಕ್ಕಾಪ್ತ ಭಗವದರ್ಹತ್‌ಭಟ್ಟಾರಕ ಜೀವಮಿತ್ರ ನೇಮಿತೀರ್ಥಂಕರ ಸದ್ಧರ್ಮಮಂ ದಯಗೆಯ್ದುದೆಂದು ಭಕ್ತಿಯಿಂ ಬೆಸಗೊಳ್ವುದು ಸರ್ವಜ್ಞ ಶ್ರೀವದನಾರದಿಂ ಮೃದು ಮಧುರ ಶ್ರವ್ಯ ನವ್ಯ ದಿವ್ಯ ಭಾಷೆಯಿಂದೋಂಕಾರಧ್ವನಿಯು ಕಂಠೋಷ್ಠಾದಿ ವಚೋನಿಮಿತ್ತಮೆಂದೇಳುನೂರ ಸದಿವೆಂದು ಕ್ಷುಲ್ಲಕ ಭಾಷೆಯೊಳ್ ಕೂಡಿದ ಸರ್ವಾರ್ಧಮಾಗಧಿಭಾಷೆಯುದಿಸಿದೊಡದಂ ವರದತ್ತಗಣಧರರ್ ಪ್ರತಿರಚನೆಯಂ ಮಾಡಿ ವಾಸುದೇವಂಗರಿಪಿದರಲ್ಲಿ ತ್ರಿಕಾಲದೊಳಪ್ಪ ಶಲಾಕಾಪುರುಷರ್ ಗಣಧರಕೇವಲಿಗಳ್ ಸಮ್ಯಕ್ತ್ವಜನಿತ ಭವವಾದಿ ಮುಕ್ತಿಗೆಯ್ದಿದವರಿಗವರವರ ಕಥಾಸಂಬಂಧಮಂ ಪೇಳ್ವ ಇತಿಹಾಸಮಂ ಪೇಳ್ವ ಪ್ರಥಮಾನುಯೋಗ ವೇದಮಂ ತ್ರಿಲೋಕಪ್ರಪಂಚಮನೆಲ್ಲಂ ಗಣಿಯಿಸಿ ಪೇಳ್ವ………….ಕರ ಧರ್ಮಮಂ ಸವಿಸ್ತರಂ ಪೇಳ್ದ ಚರಣಮಕ್ಕುಗ ವೇದಮಂ ಷಡ್ದ್ರವ್ಯ ಪಂಚಾಸ್ತಿಕಾಯ ಸಪ್ತತತ್ವ ನವಪದಾರ್ಥಂಗಳಂ ಪೇಳ್ವ ದ್ರವ್ಯಾನುಯೋಗವೇದಮೆಂದಿಂತು ಚತುರ್ವೇದದ ದ್ವಾದಶಾಂಗ ಶ್ರುತ ಚತುರ್ದಶ ಪೂರ್ವೆ ಪ್ರಕೀರ್ಣಕಾದಿಗಳಂ ಪೇಳೆ ಕೇಳ್ದು ಪಿತೃ ಮಾತೃ…………………ಭೂತಭಾ…………ಭವಾನಲೀಗಳ್ ಸತ್ಯಭಾವೆನ್ಮೋದ ಕೃಷ್ಣನ ಸ್ತ್ರೀಯರಂಗಳ ಭವಾವಲಿಯಂ ಕೇಳ್ದು ನಾರಾಯಣಂ ಶ್ರೋತೃಮುಖ್ಯನಾಗೆ ಭಟ್ಟಾರಕರು ಮತಂ ತತ್ವಂಗಳು ಹೇಯೋಪಾದೇಯಮೆಂದಿತ್ತೆರನಲ್ಲಿ ಸಂಸರಣಂ………………ಹೇಯಂಗಳ್ ಮೋಕ್ಷ ಮೋಕ್ಷ ಕಾರಣಂಗಳುಪಾದೇಯಂಗಳು ದ್ರವ್ಯ ಕ್ಷೇತ್ರಕಾಲ ಭವಭಾಗದಿಂ ಸಂಸಾರಮೃದು ಭೇದಂ. ಮಿಥ್ಯಾದರ್ಶನಾ ವ್ರತಕಷಾಯ ಪ್ರಮಾದಕಷಾಯ ವಿರತಿ ಜ್ಞಾನಾವರಣಾದಿಗಳ್ ಸಂಸಾ……..ಯೊರದಿಂದಾತ್ಮಸ್ವರೂಪ ಲಾಭಂ ಮೋಕ್ಷಂ ಸಮ್ಯಗ್ದರ್ಶನ ಜ್ಞಾನ ಚಾರಿತ್ರಂಗಳೆ ಮೋಕ್ಷಹೇತುಗಳೆಂದು ಪೇಳಿಯಿನ್ನು ಪನ್ನೆರಡು ವರುಷಕ್ಕೆ ದೀಪಾಯನನಿಂದಲಾಸುರೆಯಿಂದಲು ದ್ವಾರಾವತಿ ಕಿಚ್ಚೆದ್ದು ನೀರೊಳಡಗುವುದು. ದೀಪಾಯನಂ ಜರತ್ಕುಮಾರಾದಿ ಕೆಲಂಬರ್ ಭಾವೀಕಾಲದೊಳ್ ಮುಕ್ತರಪ್ಪರ್. ಪ್ರದ್ಯುಮ್ನನುಂ ಖಗನುಂ ಮೊದಲಾದ ಯಾದವಕುಲಜರೆಲ್ಲರ್ ತಪದಿಂದ ಸ್ವರ್ಗಾಪಿವರ್ಗಮಂ ಪಡೆವರ್ , ಪಾಂಡುಪುತ್ರರೊಳ್ ಯುಧಿಷ್ಠಿರನುಂ ಭೀಮಾನುಮರ್ಜುನರೆಂಬೀ ಮೂವರ್ ತಪದಿಂದುಪಸರ್ಗಮಂ ಸೈರಿಸಿ ತುಂಗಪರ್ವತದೊಳಪವರ್ಗಪ್ರಾಪ್ತರಪ್ಪರ್. ನಕುಳ ಸಹದೇವರ್ ಸರ್ವಾರ್ಥಸಿದ್ಧಿಯಂ ಪಡೆವರ್. ನೀನುಂ ಜರತ್ಕುಮಾರನ ಶರದಿಂ ಲೋಕಾಂತರಿತಂ ವಾಳಿಕಪ್ರಭೆಯಂ ಪೊಕ್ಕುಬಂದು ಭಾವೀಕಾಲದೊಳೆ ತಿರ್ಥಂಕರಪರಮದೇವನಾಗಿ ಮೋಕ್ಷಲಕ್ಷ್ಮಿಯ ವಲ್ಲಭನಾಗುವೆಯೆಂದು ಪೇಳ್ದೊಡಾನಂದದಿ ಭಗವತ್ಸರ್ವಜ್ಞನುತಿಗೆಯ್ದು ಪೊರಮಟ್ಟು ಬೀಳ್ಕೊಂಡು

ಶಾ ||     ಆರಾರ್ ದೀಕ್ಷೆಗಪೇಕ್ಷೆಗೆಯ್ವರವರಂ ಬಾರಿಪ್ಪೆನಲೆಂದು ತ
ಚ್ಛ್ರೀರಾಮಾರಮಣಂ ನಿಯಾಮಿಸಿ ಬಳಿಕ್ಕಂ ಸರ್ವ ಗೀರ್ವಾ
ಣಾರಾಧ್ಯಾಂಗ್ರಿಯುಗಂಗಳಂ ನಲವಿನಿಂ ಬೀಳ್ಕೊಂಡು ಪೋತಂದು ತ
ತ್ಸಾರದ್ವೈವಭವನೆಯ್ದಿದಂ ನೃಪಯುತಂ ದ್ವಾರಾವತೀದ್ವಾರಮಂ || (?)

ಅಂತೆಯ್ದಿ ನೃಪಾಲಯಮಂ ಪೊಕ್ಕು ಸನಾಭಿಗಳ್ ಸಹಿತಂ ಸರ್ವಜ್ಞನಿರೂಪಿತಂ ತಪ್ಪದೆಂದು ನುಡಿಯುತ್ತಿಪ್ಪುದುಂ ಭೌತಿಕರೆಲ್ಲ ನೆರೆದು ತಚ್ಛಾಂತಿಹೇತುವಾಗೆ ಯಜ್ಞಕ್ರಿಯೆಯಂ ಮಾಡಿ ಕಳಿದೆವೆಂದು ಬಹುಪ್ರಕಾರದಿಂ ಯಾಗಮಹಾತ್ಮ್ಯ ಫಲಮನಸಾಧಾರಣಂ ಮಾಡಿ ಕೇಳಿ ಯಾಗೋದ್ಯೋಗದಿಂ ವಿಪರೀತಾನೃ………..ರಿರ್ಪುದುಂ ಸುದೃಷ್ಟಿಗಳೆಂದರ್ ಯಜ್ಞಮೆಂಬುದು ದೇವಪೂಜಾದಿಗಳ್ ನಿರವದ್ಯಂಗಳಪ್ಪ ವಸ್ತುಗಳಿಂ ಮಂತ್ರಪೂರ್ವಕಂ ದಾನಪೂಜಾಗ್ನಿಹೋತ್ರ ಶೀಲೋಪವಾಸಂಗಳಂ ಮಾಳ್ಪುದಲ್ಲಿ ಕ್ಷೇತ್ರ ಕಾಲ ಶರೀರ ಮಂತ್ರ ವಸ್ತುಶುದ್ಧಿಯೆಂದೈದು ಶುದ್ಧಿಯಿಂ ಪಂಚ ಮಹಾಯಜ್ಞಮನ………………. ದಿನಮಾಚರಿಸಲಿಹದೊಳಪ್ಪ………………… ಮಾತೃವಿಘ್ನಂಗಳಂ ಕೆಟ್ಟು ಸುರರೊಳ್ ಮಾನ್ಯರಾದ ಲೌಕಾಂತಿಕದೇವರಾಗಿಪ್ಪರ್. ಪರಮಬ್ರಹ್ಮಪರಿನಿಷ್ಕ್ರಮಣ…………ದ್ಯೋಸಲು ಯೋಗ್ಯರಪ್ಪರ್. ಅಲ್ಲದೆ ಹಿಂಸಾಯಜ್ಞಮಾರ್ಗದಿಂ ಬಂದುದಲ್ಲ ಕಾಲದೋಷದಿಂ ಮಹಾರಾ………………..ದಾನವೈರಿಯ ಸಂಹಾರನಿಮಿತ್ತಂ ವೇದನಿರೂಪಣೆ ದರ್ಪಣದೊಳೆ ನಿರ್ಮಿಸಿ ಪರ್ವತನೆಂಬ ವಿಪರೀತಗ್ರಾಹಿಯಪ್ಪ ವಿಪ್ರಂಗೆ ಕಲಿಸಿ ಹಂಸಾಯಜ್ಞಮಂ ಸಾಮಾನ್ಯ ದೇವತೆಗಳಂ ಕೂಡಿಸಿ ಮಾಡಿಸಿ ಪಡೆದಂ ಪಾಪಭೀರುಗಳಲ್ಲದೆ ಅಹಿತ………ಯಲ್ಲದೆ ಪುಣ್ಯಮಾಗದೆಂದು ವಿಪರೀತ ತಪೋನುಷ್ಠಾನದಿಂ ಸಕಲ ಭುವನಪ್ರಮಾಣಭೂತನಪ್ಪ ವ್ಯಾಸಂ ವೇದಮಂ ಯಜುರುಕ್ಸಾ ಮಾಥರ್ವಣಭೇದದಿ ನಾಲ್ಕು ತೆರನಂ ಮಾಡಿಯವರೊಳಥರ್ವಣಮಂ ಮಂತ್ರತಂತ್ರಾದಿಗಳಿಂ ವಾದವಿದ್ಯಾಪ್ರಯೋ……….ಳುಮಾಗೆಯುಳಿದ ಮೂರಕ್ಕಂ ಗೋಪಾಂಗಮಂ ಸಮಗ್ರಂ ವಿರಚಿಸಿ ಧರ್ಮಶಾಸ್ತ್ರಮೆಂದು ಪೆಸರಿಟ್ಟು ತಂದ ಶಿಷ್ಯರಪ್ಪ ಜಯಿಮಿನಿಯುಂ ಸುಮಂತುವುಂ ಪಯಿಳವನುಮುಂ ವೈಶಂಪಾಯನನುಮೆಂಬ ನಾಲ್ವರ್ಗಮರಿಪಿ ಜಗದೊಳು ನಡೆವುದಲ್ಲದೆ ಯಜ್ಞಂ ಪ್ರಮಾಣಮಲ್ಲೆಂದು ಪೇಳ್ದು ಅಶ್ವಮೇಧಾದಿ ಮಾಳ್ಪ ಯಜ್ಞಮಂ ಋಷಿವೇದ ನರಪತಿಯಿಂದುಪಲಕ್ಷಿತಮಪ್ಪ ಹಸ್ತಿನಾಪುರದ ಮಹಾಸಭೆಯೊಳೆ ಸೂತನೆಂಬಂ ವಿವಿಧ ಪುರಾಣಂಗಳಂ ನಿರೂಪಣೆಗೆಯ್ಯೆ ಕೇಳ್ದು ಆತಂಗೆ ರೋಮಹರ್ಷನೆಂದು ಪೆಸರಂ ಕೊಟ್ಟು ನರಕಾದಿ ದುಃಖದಿಂ ನಿರಾಕರಣದಿಂ ಸುಖಸಾಧನಮಾವುದೆನೆ ಶೀಲೋಪವಾಸಾದಿಗಳನರಿಪಿ ಮುನ್ನ ವಿಶ್ವಭೂಕಥಾಸಂಬಂಧದೊಳೆ ಬಂದ ಯಜ್ಞಮಂ ಬ್ರಹ್ಮಾಂಡಪುರಾಣಸಮಾನಮಪ್ಪ ಯಜ್ಞಾಧಿಕಾರಂ ಪರ್ವತನಾರದವಿಸಂವಾದದೊಳು ನೆಗಳ್ದುದನರಿಪಿ ಪಶುವಧೆಯ ಯಜ್ಞಕ್ಕಂ ದೂಷಣಂ ಮಾಡಿ ಮುನಿಸದ್ಭೂತಮಪ್ರಾಪ್ತಮಹಿಮಸಂಭವಮಪ್ಪ ದೇವಯಜ್ಞಮಂ ಪರಮಸ್ಥಾನಗತಮಪ್ಪ ಸಿದ್ಧಪೂಜಾಗೋಚರ ಪಿತೃಯಜ್ಞಮಂ ಬ್ರಹ್ಮಾಂಡಪುರಾಣ ಸಮಾನಸಂಹಿತೆಯೊಳ್ ತಪೋದ್ಭೂತಪೂತಪಾದದೊಳ್ ಬಣ್ಣಿಸಿದುದೆಲ್ಲಮಂ ಎಲ್ಲರ್ ಕೇಳ್ದು ಹಿಂಸಾಯಜ್ಞಂ ಪಾಪಪುಂಜಮಹಿಂಸಾದಿ ವ್ರತಶೀಲಾದಿ ದೇವಾರ್ಚನಂಗಳ್ಗೆ ಪ್ರಮಾಣಭೂತಂಗಳ್ ಸ್ವರ್ಗಾದಿ ಮುಕ್ತಿಸಾಧನಮೆಂದು ಮಹಾರಾಜಸಭೆಯೆಲ್ಲಂ ನಿಶ್ಚೈಸಿದರ್.

ಈ ಪ್ರಕಾರದೊಳ್ ಶೌರಿಪುರದೊಳ್ ಎಂಟನೆಯ ಚಕ್ರೇಶ್ವರನಪ್ಪ ನಾರಾಯಣ ಪುತ್ರ ಪೌತ್ರ ಪ್ರಪೌತ್ರಾದಿಗಳ್ ಅನೇಕ ಸಂವತ್ಸರ ರಾಜ್ಯಸುಖಮನನುಭವಿಸಿದರಂತಾ ವಂಶದೊಳ್ ಹರಿಕೇತು ಮೊದಲಾಗೆ ಸುಮಿತ್ರಮಹಾರಾಜ ಮುನಿಸುವ್ರತಭಟ್ಟಾರಕರ್ ನೇಮಿತೀರ್ಥಂಕರರಾದಿ ಪುಟ್ಟಿದರಲ್ಲದೆ

||     ನೆಗಳ್ದೀ ಯಾದವವಂಶಜರ್ ಪುರುಧರಾತ್ರೀಸೋಮ ಶ್ರೀಪಾಲ ಭೀ
ಮಗ ಜಂಬೂಕುಳ ಸಿಂಹವಿಕ್ರಮ ಯಯಾತಿ ಶ್ರೀಪ್ರಭಂ ಪದ್ಮಸಾ
ಸಿಗ ಸೂರ್ಯಪ್ರಭ ಚಂದ್ರಚೂಳ ನಹುಷಂ ಶ್ರೇಯಾಂಸ ಗೋಪಾಲರಾ
ದಿಗಳತ್ಯಂತ ಯಶಃಶ್ರಿಯಂ ಪಡೆದ ಧಾತ್ರೀಪಾಲರಾದರ್ ಪರಲ್ ||

ಇಂತೀ ಕಥೆಯಂ ಕೇಳ್ವರ

ಭ್ರಾಂತಿಯುಂ ನೆರೆಕೆಟ್ಟು ಬಳಿಕಮಾಯುಂ ಶ್ರೀಯುಂ
ಸಂತತ ವೃದ್ಧಿ ಸಿದ್ಧಿಯ
ನಂತಸುಖಂ ಇಹಪರಂಗಳೊಳ್ ದೊರೆಕೊಳ್ಗುಂ
||

ಇದು ಸತ್ಯಪ್ರವಚನ ಕಾಲಪ್ರವಚನ ಸರ್ವಜ್ಞನಿರೂಪಿತಮಂ ತೆಗೆದು………..ವಲಿಕಥಾಸಾರದೊಳ್ ಪದ್ಮನಾಭವಿಭೂತಿ ಪಾಂಡವಪಾರ್ಥಾವೇದೋತ್ಪತ್ತಿ ವರ್ಣನಂ

ಚತುರ್ಥಾಧಿಕಾರಂ