ಶ್ರೀಜನಸ್ತುತರಖಿಳ ಕ
ಳಾಸದನರ್ ಮೋಹತಿಮಿರಮಂ ಕಳೆದು ಕರಂ
ಭಾಸುರ ವಿಚಾರದಕ್ಷರ್
ವೈಷ್ಯಮ್ಯಮನುಳಿದುಳಿದು ಕೇಳ್ವುದೀ ಸತ್ಕೃತಿಯಂ

ಮತ್ತಮೀ ಜಂಬೂದ್ವೀಪದ ಭರತಕ್ಷೇತ್ರದಾರ್ಯಾಖಂಡದರಾಜಪುರಮನಾಳ್ವ ಸತ್ಯಂಧರಮಹಾರಾಜನಾತನ ಪಟ್ಟಮಹಾದೇವಿ ವಿಜಯಾವತಿ ಮಂತ್ರಿ ಸುಬುದ್ದಿಯಾಪುರದೊಳ್ ಕಾಷ್ಠಾಂಗಾರ ಶೂದ್ರನನವರತಂ ಕಾಷ್ಠಮಂ ತಂದು ಪುರದೊಳ್ ಮಾರುತ್ತಂ ಜೀವಿಸುತ್ತಿರ್ದೊಂದು ದಿವಸಂ ಕಾಷ್ಠಮಂ ಪೊತ್ತುಗ್ರಾಸಮಿಲ್ಲದೆ ಬಳಲುತ್ತುಂ ಬಿಸಲಿಂಗಾರದೆವಿಲಾಸಿನಿಯೆಂಬವೇಶ್ಯೆಯಗೃಹದ ಭಿತ್ತಿಯಂ ನೆಮ್ಮಿ ಛಾಯಾಶ್ರಯದೊಳ್ ನಿಂದಿಪ್ಪುದುಂ ಮೇಲಣುಪ್ಪರಿಗೆಯೊಳಾ ಸೂಳೆ ಬೊಜಗನೊಳ್ ಸರಸವಾಡುತ್ತರ್ದಾ ವಿಟಂ ಕಾಷ್ಠಾಂಗಾರನಂ ಕಂಡು ನಿನ್ನನನಾಂ ವರಿಸಲ್ ಬಂದೆನೆಂದು ವಿಲಾಸನಿಗಂ ಪೇಳೆಯವಳ್ ಕೋಪಿಸಿ ಅವನ ವಿಕಾರಮನೀಕ್ಷಿಸಿ ಈ ಪಾಪಿಯಂ ನೆರೆವುದರಿಂಕೃಶಾನುವಿನೊಡಗೂಡುವುದು ಲೇಸಂದವನಂ ಕೆಡೆನುಡಿದವನ ಮೇಲುಗಿದೊಡಾ ಕಾಷ್ಠಾಂಗಾರಕನತಿಪಿಕುಪಿತನಾಗಿ ಪೋಗಿ ಈ ಸೂಳೆಗೊತ್ತಯೆನಿತೆಂದು ಪರದಿಯಂ ವಿಚಾರಿಸಲಾಕೆಯ ಹರ್ಮ್ಯದೊಳ್ ನುರು ಹೊನ್ನುಳ್ಳಂ ಬಂದೊಡೆ ಪ್ರಥಮ ಘಂಟೆಯಂ ಧ್ವನಿಗೆಯ್ದು ಪೋಗಬೇಕು ಐವತ್ತು ಹೊನ್ನ ತಂದವಂ ಎರಡನೆಯ ಘಂಟೆಯಂ ಬಾಜಿಸಬೇಕು, ವಿಶಂತಿ ಹೊನ್ನಂ ತಂದಂ ಮೂರನೆಯ ಘಂಟೆಯಂ ಬಾಜಿಸಬೇಕು.ಇಂತುತ್ತಮಮಧ್ಯಮ ಜಘನ್ಯ ಭೇದಮಪ್ಪುದೆಂದು ಪೇಳೆ ಛಲಗ್ರಾಹಿಯಾಗಿ ದಿನಂಪ್ರತಿ ನಾಲ್ಕೈದು ಪೋರೆ ಪುಳ್ಳೆಗಳಂ ತಂದು ವಿಕ್ರಯಮಂ ಮಾಡಿ ಪೊನ್ನಂ ಕೂಡಿಸುತ್ತರ್ದೊಂದು ದಿನಮರಣ್ಯದೊಳೋರ್ವ ಮಹಾನುಭಾವರಪ್ಪ ಯೋಗಿಗಳಂಕಂಡು ಪೊಡೆವಿಟ್ಟು ಪರವೀವುದೆಂದೊಡೆವರಣುವ್ರತಂಗಳಂ ಪೇಳೆ ಕೊಳ್ಳಲಾರದಿರೆ ಪೌರ್ಣಮಿಯೊಳ್ ಸ್ತ್ರೀಸೇನಾವೃತ್ತಿಯಂ ಕೈಕೊಂಡು ಕೆಲವಾನುದಿವಸಕ್ಕೆ ನೂರು ಪೊನ್ನಂ ಪಡೆದು ಸರ್ವಾಂಲಂಕಾರವನಾಂತಾ ವೇಶ್ಯಾವಾಟಮಂ ಪೊಕ್ಕು ವಿಲಾಸಿನೀಗೃಹದ ಶತಪೊನ್ನಿನ ಘಂಟೆಯಂ ಬಾಜಿಸುವುದುಂ ಸಖಿಯರ್ವೆರಸಿದಿರ್ವಂದುಪಚಾರದಿಂ ಮಂಚವನೇರಿಸಿದರನ್ನೆಗಂ ನಿಮ್ಮ ಗೃಹದೊಳುತ್ಸವಮೇನೆಂಬುದುಂ ಇಂದು ಪೌರ್ಣಮಿಯನೆ ಒತ್ತೆಯ ಕೊಟ್ಟು ಕೆಲಹೊತ್ತಿರ್ದು ವಂಚಿಸಿ ಪೋಗೆ ವಿಲಾಸಿನಿ ಬೊಜಗನಂ ಕಾಣದೆ ಕೊಟ್ಟ ಧನಂ ಋಣಮಪ್ಪುದೆಂದಾ ಮರುದಿವಸಮರಸಂಗರಿಪಿದೊಡರಸಂ ಪುರದಬಾಗಿಲೆಲ್ಲಮಂ ಮುಚ್ಚಿಸಿ ಒಂದು ಬಾಗಿಲುತಗೆದಲ್ಲಿಯವಳಂ ನಿಲಿಸಿ ನಿನ್ನ ಮನೆಗೆ ಬಂರ್ದನಂ ಪಿಡಿವುದೆಂದಾ ಪುರದೊಳಿರ್ದ ಪುರುಷರೆಲ್ಲಮಂ ಪೊರಮಡಿಸರೆಲ್ಲರುಂ ಪೋಪಾಗಳವಂ ಕಂಬಳಿ ಜೊತ್ತಿಗೆ ಪರಶುಸಹಿತವಾಗಿ ಕಾಷ್ಠಾಂಗಾರಂ ವೃತ್ತಾಂತಮಂ ಸವಸ್ತರಂ ಪೇಳೆ ಸೂಳೆಯರ ದುರ್ಗುಣಾದಿಗಳಂ ಪೇಳಿಯವಳಂ ನಿರಾಕರಿಸಿ ಕಳೆದು ಮೆಚ್ಚಿಯಾತಂಗೆ ಮಂತ್ರಿಪದಮಂ ಕುಡೆ ಪಾವಿಂಗೆ ಪಾಲೆರೆದಂತೆಯವಂ ದುಷ್ಟಬುದ್ಧಿಯಂ ಯೋಚಿಸಿ ರಾಜಸೇವಕವರ್ಗಮನೊಳಗುಮಾಡಿಕೊಂಡರಸನಂ ಕೊಂದು ರಾಜ್ಯಮಂ ಕೊಳ್ಳಲೆಂದು ಚತುರಂಗಬಲಂ ಕೂಡಿಸಿ ಸನ್ನದ್ಧನಾಗಿಪ್ಪುದುಂ ಸತ್ಯಂಧರನರಿದು ತನ್ನರಿಸಿ ವಿಜಯಾವತಿ ಗರ್ಭಿಣಿಯಂ ಕೇಕಿಯಂತ್ರದೊಳೇರಿಸಿ ಕಳೆದು ತಾನುಂ ಏಕಾಂಗವೀರನಾಗಿ ಕೈದುಗೊಂಡು ರಣಮಂಡಲಮಂ ಪೊಕ್ಕನೇಕ ಬಲಮಂ ತವಿಸಿ ನಿರ್ವಾಹಮಿಲ್ಲದುದನರಿದು ಕೈದುವಂ ಬಿಸುಟು ಸರ್ವಸಂಗಪರಿತ್ಯಾಗಂಗೈದು ನಿಶ್ಚಲನಾಗಿ ರಿಪುಗಳಿಂ ಸತ್ತು ಸ್ವರ್ಗಕೆಯ್ದಲ್.

ಇತ್ತ ಕೇಕಿಯಂತ್ರ ವಿಜಯಾವತಿಯನೊಯ್ದು ಏಪಿನಾಂತರದೊಳಿಳಿವೆ ವಟವಿಟಿಪಿಯ ಕೆಳಗಿರ್ಪುದುಂ ನವಮಾಸಂ ನೆರೆಯಲ್ ಪೊತ್ರೋತ್ಪತ್ತಿಯಪ್ಪುದುಂ ದುಃಖಿತೆಯಾಗಿರೆ ಗಂಧೋತ್ಕಟನೆಂಬ ರಾಜಶ್ರೇಷ್ಠಿ ಪೋಗುತ್ತಿರ್ದಳುತ್ತಿರ್ಪ ಬಾಲಕನ ಸ್ವರಂಗೇಳ್ದಲ್ಲಿಗೆ ವಪ್ಪುದುಂ ವಿಜಯಾವತಿ ಮೈಗರೆಯಾ ಶಿಶುವಂ ಕಂಡತ್ಯಾದರದಿಂ ಕೊಂಡುಪೋಗಿ ತನ್ನರಸಿಗಿತ್ತು ಆಕೆಯ ಪೆಸರಿಟ್ಟಾಗಳಾ ಪುರದೊಳ್ ಪುಟ್ಟಿದ ನೂರ್ವರ್ ತ್ರೈವರ್ಣಿಕರ ಮಕ್ಕಳನವನೊಡನಾಡುವಂತಾಗೆ ನೇಮಿಸೆ ಕುಮಾರಕಂಬಳೆದುವಿದ್ಯಂಗಳಂ ಕಲ್ಪಿನಮೊಂದು ದಿವಸವೊರ್ವರಾಚರ್ಯರ್ ಭಸ್ಮಕವ್ಯಾಧಿಯಂ ಭಿಕ್ಷೆಗೆವರೆ ಜೀವಂಧರನವರ್ಗೆ ಸಾಲ್ವನಿತು ಅನ್ನಮನಿಕ್ಕಲುಂಡಾಗಳೆ ರೋಗಂ ಪೋದೊಡವರುಂ ಕುಮರಂಗುಪಕಾರಂಗೆಯ್ಯಲೆಂದಲ್ಲೆ ನಿಂತು ಸಕಲ ಗ್ರಂಥಂಗಳಂ ಕಲಿಸಿಶಸ್ತ್ರಶಾಸ್ತ್ರವಾಹನಾರೋಹಣಾದಿಗಳಂ ಕಲಿಸೆ ಕಲ್ತು ಶೌರ್ಯವೀರ್ಯ ಪರಾಕ್ರಮಯುತನಾಗಿರಲಾ ಪುರಕ್ಕೆ ಪರರಾಯರ ಬಲಂ ಬಂದು ತುರುವಂ ಕೊಂಡೊಯ್ಯುತ್ತಿರೆ ಕಾಷ್ಠಾಂಗಾರಂ ಪುರಕ್ಕೆ ಪರರಾಯರ ಬಲಂಬಂದು ತುರುವಂ ಕೊಂಡೊಯ್ಯುತ್ತಿರೆ ಕಾಷ್ಟಾಂಗಾರಂ ತಿರುಗಿಸಲಾರದೆ ಮುಗುಳೆ ಜೀವಂಧರಂ ಕೇಳ್ದು ಪುರಜನಸಹಿತಂ ಪೋಗಿ ಅವರನಂಜಿಸಿ ತುರುವಂ ತಿರುಗಿಸೆ ಮತ್ತೊಂದು ದಿನಂ ಮತಂಗಜಂ ಮದವೇರಿ ಸಂಹರಿಸುತ್ತುಂ ಬರುತ್ತಿರಲಾರುಂ ಪಿಡಿಯದಿರೆಜೀವಧರನದರೊಳ್ ಪೊಣರ್ದು ಮೇಲೇರಿ ತಿರುಗಿಸಿ ತಂದು ಕಟ್ಟಿಲಿವಾದಿಯಾಗಾ ಕುಮಾರನ ಶೌರ್ಯದೇಳ್ದೆಯಂ ಕಂಡು ಸೈರಿಸದೆ ಕೊಲಲ್ಬಗೆದೆತ್ತಿಬಪ್ಪುದುಂಅವನದೊಳ್ ಕಾಷ್ಠಾಂಗಾರನನಿಕ್ಕಿ ಜಯಲಕ್ಷ್ಮಿಯಂಪಡೆದದ ರಾಜ್ಯದೊಳ್ ನಿಂದು ಋಷ್ಯಾಶ್ರಮದೊಳಿರ್ದ ತಾಯಂ ಬರಿಸಿ ಎಣ್ಬರ್ ಪಟ್ಟಮಹಾದೇವಿಯರಾಗೆ ವಿದ್ಯಾಗುರೂಪದೇಶದಿಂ ಮೈತ್ರಿ ಪ್ರಮೋದ ಕಾರುಣ್ಯ ಮಾಧ್ಯಸ್ಥಮೆಂಬ ಮಹಾಪುರುಷಸ್ವಭಾವಗುಣಂಗಳಳವಡೆ ಮತ್ತಮಾ ರಾಜ್ಯಂ.

ಪರಸ್ತ್ರೀಷು ಸಜಾತ್ಯಂಧೋ ದುಷ್ಕಾರ್ಯೇಷು ಸದಾಲಸಃ
ಮೂಕಃ ಪರಾಪವಾದೇಷು ಪಂಗುಃ ಪ್ರಾಣಿವಧೇಹು ಚ

ಈ ಪ್ರಕಾರದಿಂ ಸದ್ಧರ್ಮಮಮಬಿಡದೆ ರಾಜ್ಯಮನಾಳುತ್ತಿರಲಾ ದೇಶಂ ರಾಜನೈತಿಯಾಗೆ ಪ್ರಜೆಪರಿವಾರಂಗಳ್ ಜೀವಂಧರನಂಕಮಾಲೆಯಿಂ ಜೋಗುಳವಾಡುತ್ತಿರೆ ಕ್ಷತ್ರಚೂಡಾಮಣಿಯೆಂದಾ ಮಹಾರಾಜಂಗೆ ಪೆಸರಾಗೆ ಸುಖಮಿರಲೊಂದು ದಿವಸಂ ಬೌದ್ಧಾದಿ ಷಣ್ಮತದವರ್ ಬಂದು ತಂತಮ್ಮ ಮತಪ್ರಮೇಯಮಂ ಪೇಳೆ ಅರಸಂ ಸತ್ಯಸಾಗರನೆಂಬ ಮಂತ್ರಿಯಂ ಮೊದಮನೀಕ್ಷಿಸಲಾತಂ ಬೆಸಗೊಳೆ ಶೂನ್ಯವಾದಿಗಳ್ ಜೀವಭಾಸಮಂ ಪ್ರಕಟಂ ಮಾಡಿ

ಭಸ್ಮೀಭೂತಸ್ಯದೇಹಸ್ಯ ಪುನರಾಮನಂ ಕುತಃ
ತಸ್ಮಾತ್ ಸುಖೈಷೀ ಜೀವೋಯಂ ಋಣಂ ಘೃತಂ ಪಿಬೇತ್

ಅಹಿಂಸಾ ಪರಮೋಧರ್ಮಮೆಂಬುದುಂಡಾಗಿಯುಂ ಕರ್ಮಕರ್ತೃವಾಗಿಯುಂ ಭೋಕ್ಷವಲ್ಲಂ

ಮಾಂಸಸ್ಯ ಮರಣಂ ನಾಸ್ತಿ ಮಾಂಸಸ್ಯ ವೇದನಾ
ವೇದನಾ ಮರಣಾಭಾವೇಕೋ ದೋಷೋ ಮಾಂಸಭಕ್ಷಣಾತ್

ಎಂದು ನಿಜಾಭಿಪ್ರೇತಾರ್ಥಮಂ ಪ್ರಕಟಿಸೆ ಕೆಲಂಬರ್ ಪುಣ್ಯಪಾಪಂಗಳ್ ಸ್ವಾಧೀನಮಲ್ಲದುದರಿಂ ಈಶ್ವರಾಧೀನಮೆಂದು.

ಪಾತಾಳೇಚಾಂತರಿಕ್ಷೇ ವಶದಿಶಿಭುವನೇ
ಸರ್ವವ್ಯಾಪಿ ಶಿವೋಯಂ

ಎಂದುಮೀಶ್ವರಂಗೆ ಪಂಚವಿಂಶತಲೀಲಾಮೂರ್ತಿಯಂ ಪ್ರಕಟಿಸಿ ಶೈವಸಿದ್ಧಾಂತಾದ್ಯಂತಮಂ ಪೇಳೆ ಕೆಲಂಬರ್ ವಿಷ್ಣುಪಕ್ಷಮಂ ಪಿಡಿದು ಜಲೇ ವಿಷ್ಣು ವಿಷ್ಣುಸ್ಸರ್ವಂ ವಿಷ್ಣುಮಯಂ ಜಗತ್ ಎಂದರ್. ಕೆಲಂಬರ್ ವೃದ್ಧರಂಮಾತಾಪಿತೃಗಳಂಪೂಜಿಸಲದು ಧರ್ಮಮೆಂದರ್.ಮತ್ತೆ ಕೆಲಂಬರ್

ನಷ್ಟಂ ಕುಲಂ ಕೂಪ ತಾಕವಾಫೀಪ್ರಭ್ರಷ್ಟರಾಜ್ಯಂ ಶರಣಾಗತಂ ಚ
ಗ್ರಾ ಬ್ರಾಹ್ಮಣಂ ಜೀರ್ಣ ಸುರಾಲಯಂ ಚ ವಿನಿರ್ಮಿತಂ ಧರ್ಮಮಿತಿ ಪ್ರಸಿದ್ಧಮ್

ಎಂದರ್. ದೇವರೆಗಳಂ ಹಿಂಸಾದಿಗಳಿಂ ಪೂಜಿಸೆಯುಂ ದುಷ್ಟರಂ ದುಷ್ಟಮೃಗಂಗಳಂ ಕೊಂದೊಡಂ ಧಮ್ಮಪ್ಪುದೆಂದು ನುಡಿವ ಮಾತಂ ಕೇಳ್ದು ಸತ್ಯಸಾಗರಮಂತ್ರಿ ಸರ್ವಜ್ವನಿರೂಪಮಂ ಕೇಳ್ದನಾದುದರಿಂದಿಂತೆಂದಂ.ಧರ್ಮಮೆಂದಾಗಲೆ ಸರ್ವರು ಪೇಳ್ದುದು ಹಿತ್ತಾಳೆಯು ಸುವರ್ಣಮಪ್ಪುದಂ ಪಾಲಂ ಕೊಳ್ವುದೆನೆ ಕ್ಷೀರ ಸಾಮಾನ್ಯದಿಂದಿಕ್ಕೆಯ ಕೊಂಡೊಡೆ ಪ್ರಾಣಂ ಪೋಗದಿರದಂತೆ ಬುದ್ಧಿವಡೆದರ್ ಧರ್ಮಮಂ ಕೊಳ್ವಲ್ಲಿ ಪರೀಕ್ಷಿಸಿಕೊಳ್ಳಬೇಕೆಂತೆಂದೊಡೆ.

ಯಥಾ ಚತುರ್ಭಿಃಕನಕಂ ಪರೀಕ್ಷ್ಯತೇ
ನಿಘರ್ಪಣ ಛೇದನ ತಾಪತಾಡನೈಃ
ತಥಾ ಚತುರ್ಭಿಃ ಕನಕಂ ಪರೀಕ್ಯ್ಷ ತೇ
ಶುತೇನ ಶೀಲೇನ ಕುಲೇನ ಕರ್ಮಣಾಂ

ಎಂಬುದರಿಂ ಬುದ್ಧಿವಂತರ್ ಪರೀಕ್ಷಿಸಿಕೊಳ್ವರಲ್ಲಿ ಕ್ರೋಧಮಾನಮಾಯಾ ಲೋಭ ಮೋಹಂಗಳಂ ಬಿಟ್ಟು ಯಥಾತಥ್ಯಮಂ ನಂಬುವುದುಪಂಡಿತ ಲಕ್ಷಣಂ.ಲಬ್ಧರಿಗರ್ಥಂ ಸ್ತಬ್ದರಿಗಂಜಲಿ ಮೂರ್ಖರ್ಗವರಿಚ್ಛೆಯದರಿಂ ಪಂಡಿತರಪ್ಪುದು ದುರ್ಲಭಂ. ಕಣ್ಣಿಲ್ಲದವಂ ವಸ್ತುಗಳಂ ಕಾಣದಂತೆ ಸಮ್ಯಗ್ದರ್ಶನಮಿಲ್ಲದವಂ ಧರ್ಮಮನರಿಯನೆಂತೆದೊಡೊರ್ವಂ ಹುಟ್ಟುಗರುಡಂ ಬಾಲಕರಿಗೆ ಪಾಲನೆರೆಯಲದು ರೋದನಮಂ ಮಾಡುತ್ತಿರಲಾ ದನಿಯಂ ಕೇಳಿ ಮತ್ತೊರ್ವ ಕುರಡನಂ ಬೆಸಗೊಳೆ ಮಗುವಿಂಗೆ ಪಾಲನೆರೆವರೆಂದೊಡೆ ಪಾಲೆಂತಿಪ್ಪುದೆನೆ ಶ್ವೇತವರ್ಣಮಾಗಿಹುದೆಂದೊಡಾ ಬಿಳಿಯ ವರ್ಣಮೆಂತೆನೆ ಬೆಳಕಪಕ್ಷಿಯ ಗರಿಯಂತೆಂಬುದುಂ. ಆ ಪಕ್ಷಿ ಹೆಂಗಿಹುದೆನೆ ಕೊಕ್ಕರೆಯ ಹಾಗಿಪ್ಪುದೆಂದು ತನ್ನ ಕೈಯಂ ಬಾಗಿಸಿತೋರಲು ತನ್ನ ಕಯಯಿಂದೆಳವಿನೋಡಿ ಈ ಉದ್ದಗಾತ್ರಮಪ್ಪಪಾಲನೆಂತು ನುಂಗಲ್ಪಕ್ಕು ಕೊಲ್ಪರದಂ ಬಿಡಿಸಲೆಂದು ಪೋಗುತ್ತೆ ಕಣ್ಣಾಗದೆ ಬಾವಿಗೆ ಬಿದ್ದನೆಂಬಂತೆ ವಿಚಾರಜ್ಷಮಿಲ್ಲದೆಧರ್ಮಮಂ ಕೊಂಡೊಡನರ್ಥಕಮಕ್ಕುಂ.

ಮತ್ತಂ ಸದ್ ಜ್ಞಾನಶತ್ರುತಮಂ ಕೆಳದಿರ್ದವಂ ಪೋಲ್ವನದೆಂತೆದೊಡೆ ಓರ್ವ ಪಾರ್ವಂ ಕಿವುಡನಾಗಿ ರಾಜನಂ ಬಹುದಿವಸದಿಂದಾರ್ಶರಯಿಸಿರ್ದು ತನ್ನ ದರಿದ್ರಮಂ ಪೇಳುತಿರ್ಪುದಮರಸಂ ಕರುಣಿಸಿಈತಂಗೆ ಜೀವನಮಂ ಮಾಡಲೆಂದಿರ್ದು ಪುಣ್ಯದಿನಸಂ ಬರಲೆಲ್ಲರ್ಗಂ ಭೂರಿದಾನಮಂಕೊಡುವಾಗಳೀ ಪಾರ್ವನಂ ನೋಡಲಿಲ್ಲದೊಡೆ ಪರ್ಗೆಡೆಗಳಂ ಕಳುಹಿಸಿ ಬರವೇಳಲಾ ವೇಳೆಯೊಳಿಪಾರ್ವ ತನ್ನ ಪೆಂಡತಿಯೊಳತ್ಯಂತ ಕಲಹಮಾಗೆ ಕೋಪಿಸಿ ನಿನ್ನ ಕೈಯೊಳೆನ್ನಮನಿಕ್ಕುಲುಣ್ಣೆನೆಂದು ಸೂರುಳಿಟ್ಟು ತೋರಿ ಕರೆವುದುಂ ಯಾರು ಪೇಳಿದಾಗ್ಯೂ ಆ ರಂಡೆಗೆ ಕೈಯನ್ನಮನುಣ್ಬೆನಲ್ಲೆಂದು ಕೋಪಮೆಂಬ ಕ್ರೂತವ್ಯಾಘ್ರನಂ ಪರಿಹರಿಸಿ ಚಾರಿತ್ರಶೀಲಮುಳ್ಳುದೆ ಸದ್ಧರ್ಮಂ.

ಶ್ಲೋಕ || ದಯಾಮೂಲೋ ಭವೇದ್ಧರ್ಮಃ ಕ್ರೊಧಮನಾದಿ ವರ್ಜಿತಃ ಇತಿ ಅನ್ಯಮತೇ
ಸತ್ಯಾದುತ್ಪದ್ಯತೇ ಧರ್ಮಃದಯಾ ವಾನೇನ ವರ್ಧತೇ
ಕ್ಷಮಯಾ ಸ್ಥಾಪ್ಯತೇಧರ್ಮಃ ಕ್ರೋಧ ಲೋಭಾದ್ವಿನಶ್ಯತಿ ||
ಪುಣ್ಯ ಏಕೋ ಮಹಾಬಂಧುಃ ಪಾಪ ಏಕೋ ಮಹಾರಿಪಪುಃ ||

ಎರಡಕ್ಕು ದಾಹರಣಂ –

“ಪರೋಪಕಾರಿ ಪುಣ್ಯಾಯ ಪಾಪಾಉ ಪರಪೀಡನಮ್”, ಇತಿ |
ಮಾಂಸಾಶಿಷು ದಯಾ ನಾಸ್ತಿ ನ ಸತ್ಯಂ ಮದ್ಯಪಾಯಿಹು |

ಎಂದು ಬ್ರಾಹ್ಮಣನ ಭಕ್ಷಿಪ ವ್ಯಾಘ್ರನಾದೊಡಂ ಕೊಲ್ಲಲಾಗದು ಕೊಂದೊಡಿವಂಗೆ ಸಂರಕ್ಷಣಾನಂದ ರವದ್ರಮಾಗೆ ನರಕಮಪಪುದೆಂದವರಭಿಪ್ರೇತಾರ್ಥಮಂ ಬಿಡಿಸಿ ಜೀವಧರೆಂಗೆದಂ ‘ಎಲೆ ಪ್ರಭುವೆ ನಿನಗೆದೃಷ್ಟ ಶ್ರುತಾನುಭವಮಂ ಪೇಳ್ವೆನೆಂದಿಂತೆಂದಂ ‘ಎಲೆ ರಾಜಾ ನೀಮುಂ ನಮುಂ ಕುಮಾರಕಾಲದೊಳ್ ಶ್ರೀವೀರವರ್ಧಮಾನ ಸ್ವಾಮಿಯ ಕೇಲವಜ್ಞಾನಪೂಜೆಗೆ ನೆರೆದ ದೇವರ್ಕಳಂ ನೋಡಿ ಸ್ವಾಮಿಯಂ ವಂದಿಸಿ ರಾಜಗೃಹಕ್ಕೆ ಬಂದು ಶ್ರೇಣಿಕನಂ ಕಂಡು ಬಪ್ಪಲ್ಲಿ ಆ ಪುರದ ವೈಶೋತ್ತಮಂ ನಾಗದತ್ತನ ಪೆಂಡತಿ ಶ್ರೂತಧರಮುನಿಗಳು ಬೆಸಗೊಂಡಳೆಲೆ ಸ್ವಾಮೀ ನಮ್ಮ ಹಿಂದಣ ವನಪ್ರದೇಶದೊಳೊಂದು ಮಂಡೂಕಂ ಪುಟ್ಟಿಪ್ಪುದದೆನ್ನ ಕಾಣುತ್ತುಂ[ಕೂಕಿರಿ] ಯುತೆನ್ನೊಡನೊಡೆನೆಯ್ದುತ್ತುಂ ಕಾರಣಮೇನೆಂದೊಡಾ ಮುನಿಗಳವಧಿಯಿಂದರದೆಂದರ್

ಈ ಮರದೊಳ್ ದೇವದತ್ತನೆಂಬ ವೈಶ್ಯನಾತಂಗೆ ನಾಗದತ್ತನೆಂಬ ಮಗಂ ಪುಟ್ಟಿ ಸುದರ್ರನ ಮಗಳ್ ನೀ ಭಗದತ್ತೆಯಾಗಿರೆ ನಿನ್ನಂ ಕಂಡು ಜನ್ಮಾಂತರ ಸ್ನೇಹದಿಂ ನಿನ್ನಂ ಮದುವೆಯಾಗಿಅತ್ಯಸಕ್ಷನಾಗಿರ್ದಾರ್ತದಂ ಸತ್ತು ಮಂಡೂಕನಾಗಿರ್ದುನೀಗ ಬೋಧಿಸೆ ನಿರ್ಮೋಹನಾಗಿ ಭವಸ್ಮರಣೆ ಬಂದು ಉಪದೇಶಮಂ ಕೈಗೊಂಡಿರ್ದು ಈ ಪುರದರಸಂ ಸಮವಸರಣಕ್ಕೆ ಪೋಪಾಗಳ್ ಧರ್ಧುರನೊಂದು ಪುಷ್ಪಮಂ ಕಚ್ಚಿ ಭಕ್ತಿಯಿಂ ಪೋಪೆನೆಂದು ರಾಜಬೀದಿಯೊಳ್ ಬರ್ಪಿನಂ ಶ್ರೇಣಿಕಂ ಏರಿದಾನೆ ಮೆಟ್ಟಿ ಸತ್ತಾಗಳೆ ಸೌಧರ್ಮಕಲ್ಪದೊಳ್ ಪಾಸಿನಪೊರೆಯೊಳ್ ದಿವ್ಯಗಂಧ ವಸ್ತ್ರಾಭರಣ ಮಾಲ್ಯಾದ್ಯಲಂಕೃತನಗಿ ಅವಧಿಯಿಂದರಿದು ಶ್ರೀ ವೀರವರ್ಧಮಾನಸ್ವಾಮಿ ಸೇವೆಯಂ ಮಾಡಲ್ಬಪ್ಪೆನೆಂಬ ಋಷಿ ವಾಕ್ಯಮಂ ಕೇಳ್ದಲ್ಲಿಗಾಮುಂ ಪೋಗಿಯಾ ಕಪ್ಲಯಂ ಬೋಧಿಸೆ ತನ್ನ ಚೇಷ್ಟೆಯನುಳಿದು ಧರ್ಮಮಂ ಕೈಕೊಂಡು ಶಾಂತನಾದುದಕ್ಕಾಶ್ಚರ್ಯಂಬಟ್ಟು ಬಂದುದು ದೃಷ್ಟಂ.

ಇನ್ನು ಶ್ರೂತಮಾವುದೆಂದೊಡೆ ಭೂತಿಳಕಪುರದ ದೃಢಸೂರ್ಪಂಗೆ ಧನ್ಚಂತರಿಯೆಂಬ ಪೆಸರಾಗಿ ರಾಜಪುರೋಹಿತ ಮಗಂ ವಿಶ್ವಾನುಲೋಪಂ ಅವರೀರ್ವರ್ಗತಿ ಸ್ನೇಹಮಾಗೆ ಕಿಚ್ಚುಂ ಗಾಳಿಯುಂ ಕೂಡಿದಂತೆ ಧನ್ವಂತರಿಯುಂ ವಿಸ್ವಾನುಲೋಮನುಂ ಕೂಡಿ ಸಪ್ತವ್ಯಸನದಿಂ ಮತ್ತರಾಗಿ ಪುರದೊಳ್ ಪ್ರಜಾಕ್ಷೋಭಂ ಮಾಡುತಿಪ್ಪುದುಂ ಪ್ರಜೆಗಳಸಿರಿಂಗೆ ಬಿನ್ನವಿಸೆ ಮೂರುವೇಳೆ ಪೇಳಿದಾಯೂ ಆಜ್ಞೆಯಂ ಮೀರಿ ತುಂಟತನವಂ ಮಾಡೆ ಭೂಪಂ ಕೋಪಿಸಿ ಪುರದಿಂ ಪೊರಮಡಿಸೆ ಧನ್ವಂತರಿಯ ತಾಯುಂ ಈರ್ವರ್ ಪೆಂಡಿರ್ ಸಹಿತಂ ಪರದೇಶಕೆಯ್ದಿ ಗಜಪುರದ ಚೋರರೊಳ್ ಕೂಡಿ ಕಳವಿನೊಳತಿ ನಿಪುಣರಾಗೆ ಅರಸಿನಾಜ್ಞೆಯೊಳೆ ಐನೂರೈನೂರ್ವರ್ ಕಳ್ಳಭಂಟರ್ಗೆ ಗೊತ್ತಾಗಿರಲದೆ ಸೌಖ್ಯಮಾಗೆ ತಾಮೀರ್ವರುಮೀ ಸುಖಕ್ಕೆ ವಿಘ್ನಮಕ್ಕುವುದುರಿಂದ ಅರೊರೆವ ಮಾತಂ ಕೇಳದೊಪ್ಪೆವೆಂದೊಬ್ಬರೊಬ್ಬರೊಳ್ ಭಾಷೆಯಿಂ ಮಾಡಿರ್ದೊಂದು ದಿನಂ ಪೊರಗಣಿಂ ಪಟ್ಟಣಕ್ಕೆ ಬಪ್ಪಲ್ಲಿ ಆನೆ ಮದವಿಂ ಬರುತ್ತಿರ್ದವರನಟ್ಟುತ್ತುಂ ಬರೆ ಪೋಗಲೇನುಮಂ ಕಾಣದೆ ಉದ್ಯಾನವನದ ಸಿದ್ಧಕೂಟ ಚೈತ್ಯಾಲಯಮಂ ಪೋಗಲನಿತಕ್ಕೆನೇಸರ್ಪಟ್ಟೊಡೆ ವೃಷ್ಟಿ ಕರೆಯುತ್ತಿರಲಾ ಚೈತ್ಯಾಲಯದೊಳೊರಗಿ ನಿಲಲಲ್ಲಿ ಧರ್ಮಾಚಾರ್ಯರರ್ ಅಷ್ಟೋಪವಾಸದಿಂ ತಮ್ಮ ಪುಗುವುದೆಂದೋರೋರ್ವರುಂ ಕರ್ಣ ವಿವರದೊಳರಲೆಯಂ ಬಲಿದು ಮಲಗಿರ್ಪಿನಂ ಯತಿಗಳ್ ಧರ್ಮಮುಳ್ಳನಂ ಕಾಮಧೇನುಸ್ತನದಂತೆ ಧರ್ಮಮಿಲ್ಲದ ನಿರ್ಭಾಗ್ಯನಪ್ಪೆನಲ್ಲೆಂದುಪರಿಷ್ಟನಾಗಿ ಬೆಳಗಿನ ಜಾವಂಬರಂ ಧರ್ಮಸ್ವರೂಪಮಂ ಕೇಳ್ದು ಸಂತುಷ್ಟನಾಗಿ ಮುನಿಗಳ್ಗೆರಗಿ ಎನಗೊಂದು ವ್ರತಮಂ ದಯೆಗೆಯ್ದುದೆಂದು ಬೇಡಿದೊಡವರ್ ಭವ್ಯಜೀವಮೆಂದರಿದೀತಂಗೆ ತಕ್ಕ ವ್ರತಮಂ ಪೇಳೆ ನಡೆಯದೆಂದು ಬೋಳಮುಂಡೆಯಂ ನೋಡಿಯುಂಬುದೆಂದಾ ವ್ರತಮಂಕೊಂಡು ತನ್ನ ಮನೆಯ ಸಮೀಪದೊಳಿಪ್ಪ ಕುಂಭಕಾರನ ತಲೆಯಂ ನೋಡಿಯುಣ್ಣುತ್ತರಲೊಂದು ದಿನಮಾತಂ ಮಣ್ಣಗುಂಡಿಯನೆಯ್ದುದೊಡಲ್ಲಿಗೆ ಪೋಗಿ ಕಂಡೆನೆಂದು ಬರಲತಂಗೆ ನಿಕ್ಷೇಪಂ ಸಿಕ್ಕಿ ಅದಂ ತಂದುಕುಡುವುದುಂ ನಂಬಿ ಮುನಿಯಲ್ಲಿಗೆಯ್ದಿ ನೀವ್ ಕೊಟ್ಟು ವ್ರತದಿಂ ವಿಪಿನಾಂತರದೊಳ್ ಕ್ಷುತಪಿಸಾಸದಿಂ ಬಳಲ್ದಲ್ಲಿರ್ದ ಫಲಾದಿಗಳಂ ತನ್ನಿಮೆಂದು ತಂತಮ್ಮ ಭೃತ್ಯರಂ ಬೆಸಸಲವರ್ ನೋಡಿದೊಡತಿಶಯಮಪ್ಪ ವಿಷಪಕ್ವಫಲಮಂ ತಂದಿಯಳ್ ಧನ್ವಂತರಿಯು ಇದಾವ ವಿಶ್ವಾನುಲೋಮನೀ ಸುಖಕ್ಕಿತರನಾಗಿ ನಾನರಿಯದಂತು ಮುನ್ನಿನ ಪ್ರತಿಜ್ಞೆಯಂ ಬಿಟ್ಟು ವ್ರತಮನಾಂಯೆಂದು ಕೋಪಿಸಿದೊಡಾನುಂ ಕೊಳ್ವೆನಲ್ಲೆಂದು ಬಿಡಲ್ ಉಳಿದವರೆಲ್ಲರುಂ ತಿಂದು ಸಾಯೇ ವಿಸ್ಮಯಂಬಟ್ಟು ಅವರ್ ತಂದಿರ್ದ ಧನಮೆಲ್ಲಮಂ ಕೊಂಡು ಮತ್ತಂ ಭಂಟರಂ ಕೂಡಿಸಿ ಧನ್ವಂತರಿಯು ಗುರುಗಳಲ್ಲಿಗೆಯ್ದಿ ಕೊಟ್ಟ ವ್ರತಂ ಸಫಲಮಾಯ್ದಿನ್ನೊಂದಂ ಕೊಡುವುದುದೆನೆ ಪುತ್ತಿನ ಬಳಿಯೊಳಿರ್ದ, ಹಿಟ್ಟಿನ ಭಂಡಿ ಮೊದಲಾಗೆಅರ್ಪಿಸಿರ್ದು ಕೊಳ್ಳಲಾಗದೆಂದೊಡೆ ಮುನ್ನಿನಂತೆಯ್ದು ಬರ್ಪಾಗಳವಂ ತಂದು ಕುಡಲಲ್ಲಿ ವಿಷಮಿಶ್ರಮಾಗಿರಲೆಲ್ಲರುಮ ಸತ್ತು ಇವರ್ಗೆ ಧನಮೆಲ್ಲಂ ದೊರಕೊಳೆ ನಾಲ್ಕನೆಯ ವ್ರತಂಪೌರ್ಣಮಿಯಂದು ಮದ್ಯಮಾಂಸದತೊರವಿ ಪರದೇಶದಿಂ ಬರುತ್ತಂ ಅದರೊಳಿಚ್ಛೆಯಾಗಿ ಧನ್ವಂತರಿಜನಂಗಳುಂ ಮಾಂಸಮಂ ವಿಶ್ವಾನುಲೋಮನರ್ ಮಧ್ಯಮಂ ತರಲ್ ಪೋಗಿ ಧನಮಂ ಕಳೆಯಲೆಂದರವರರಯದಂತುವಿಷಮಂ ಬೆರಸಿ ತಪ್ಪುದುಂ ಭಕ್ಷಿಪ ಸಮಯದೊಳ್ ಇಂದು ಪುಣ್ಣಮೆಯೆನಲ್ ಧನ್ವಂತರಿ ಮುಟ್ಟದಿರ್ಪುದುಂ ವಿಶ್ವಾನುಲೋಮನುಂ ತೊರೆದೊಡೆ ಉಳಿದಿದ್ದವರೆಲ್ಲಂ ತಿಂದು ಸಾವುದುಂ ಎಲ್ಲರ ದ್ರವ್ಯಮಂ ಕೊಂಡು ಮುನಿಗಳಂ ವಂದಿಸಿ ಮತ್ತೊಂದು ವ್ರತಮಂ ಬೇಡೆ ಜೀವಿಗಳ ಕೊಲ್ವಾಗಳ್ ಪಿಂದಕ್ಕೆರಡಿಯನಿಟ್ಟು ಕೊಳ್ವುದೆಂಬ ವ್ರತಮಂ ಕೈಕೊಂಡಿರ್ಪನ್ನೆಗಂ.

ದೂರದೇಶಮಂ ಬಿಟ್ಟಿರ್ದು ತನ್ನ ಪೆಂಡತಿಯ ಗುಣಮಂ ನೋಳ್ವನೆಂದು ಮಧ್ಯರಾತ್ರಿಯೊಳ್ ಬೇಳುವೆಯಂ ತಾಳ್ದು ಕವಾಟೋಧ್ಘಾಟನದಿಂದೊರ್ವನೆ ಪೋಗಿ ತನ್ನ ಗರಹಮಂ ಪೊಕ್ಕು ನೋಳ್ವಾಗಳ್ ದೀಪಂ ಸಣ್ಣನಾಗುರಿಯುತ್ತಿರೆ ಮಂಚಾಗ್ರದೊಳವರ ತಾಯಿ ಗರ್ಭಿಣಿಯಾಗಿರ್ದ ತನ್ನ ಸೊಸೆ ರಕ್ಷಣಾರ್ಥಂ ಪುರುಸವೇಷದಂದಾಯುಧಂಬೆರಸು ಸೊಸೆಯನಪ್ಪಿ ಮಲಗಿರ್ಪುದಂಕಂಡು ಪರಪುರುಷನೆಂದು ಈರ್ವರುಮಂ ಪೊಡೆವೆನೆಂದು ಒರೆಯಿಂ ಕತ್ತಯನುರ್ಚಿ ಎತ್ತಿ ಪೊಡೆವಾಗಳ್ಪಿಂದಕ್ಕೆರಡು ಪಜ್ಜೆಯಂ ತೆಗೆಯಲಾ ಖಡ್ಗಾಗ್ರದಿಂ ಮೇಲಿರ್ದ ನೆಲವಿನ ಭಾಂಡಂ ತಾಗಿ ಬೀಳಲಾಶಬ್ದದಿಂದವರೆಬ್ಬೆ ಎಚ್ಚೆತ್ತು ಧನ್ವಂತರಿ ಚಿರಂಜೀವಿಯಾಗೆಂದು ಕುಳ್ಳಿರಲಾಶ್ಚ್ಮಾಗಿ ವ್ರತಂಗಳಫಲಮಂ ಕೊಂಡಾಡಿ ಈ ಸಂಸಾರದಜ್ಞಾನಾಂಧಕಾರಕ್ಕೆಬೆಚ್ಚಿ ನಿರ್ವೆಗಂಪುಟಟಿ ತಾಂ ಗಳಿಸಿರ್ದ ಪೊನ್ನೆಲ್ಲಮಂ ತಾಯಿಗಂ ಪೊಂಡತಿಗಂ ಕೊಟ್ಟು ವೈರಾಗ್ಯದಿಂಗುರುವಿನ ಸನ್ನಿಧಿಯನೆಯ್ದಿ ನಮಸ್ಕಾರಂಗೆಯ್ದು ನಿಮ್ಮಂತಪ್ಪ ವ್ರತಂಗಳೆಲ್ಲಮನಿತ್ತು ದೀಕ್ಷೆಯಂ ಪಾಲಿಸುವುದುದೆಂಬುದಮವರಿಂತೆಂದರ್.

ಇಲ್ಲಿ ನೀಂ ದೀಕ್ಷೆಯೊಳೆಲೋಕಪ್ರಸಿದ್ಧಯೊಳ್ ವ್ಯಸನಿಯುಂ ನಿಕೃಷ್ಟನುಂ ಕಳ್ಳನುಮಾದುದರಿಂದಪಹಾಸ್ಯಂಗೆಯ್ದರಲ್ಲದೆ ಭಕ್ರಿಯಿಂ ವೃಯಾಪೃತ್ಯಮಂ ಮಾಡರದರಿಂ ಧರಣಿಭೂಷಣಮೆಂಬ ಪರ್ವತಾಗ್ರದೊಳನೇಕ ದಾಪಸರುಂಟಲ್ಲಿ ಸಮ್ಯಕ್ ತಪೋನಿಧಿಗಳ್ ಧರ್ಮಪಾಲರೆಂಬಾಚಾರ್ಯರಪ್ಪರಲ್ಲಿಗೆ ಲೇಖನಮನಿತ್ತಪೆವಲ್ಲಿಗೆ ನೀಂ ಪೋಗಿ ದೀಕ್ಷೆಗೊಂಡೊಂಡೆ ಪ್ರಸಿದ್ಧಿವಡೆದು ಸದ್ಗತಿಯಂ ಪಡೆದಪೆ ಪೋಗೆಂದು ಲೇಖಮಂಕುಡೆ ಕೊಮಡು ತನ್ನಮಿತ್ರನಂ ಕಂಡು ತದ್ವೃತ್ತಾಂತಮಂ ಪೇಳೆ ಆತಂ ಬೆರಗಾಗಿ ಅಂತಾದೊಡಾನುಂ ಬಪ್ಪೆನೆನ್ನ ಸತಿಯನೆನ್ನ ತಾಯ ಬಳಿಗೊಯ್ದಿರಿಸಿ ಬಪ್ಪೆಂನಾಳೆಯವರೆಗಿಲ್ಲಿರ್ಪುದೆಂದು ಪೇಳಿ ಪೋಗಿ ಒಂದಿಷ್ಟು ತಡೆಯಲಾತನ ಮೇಲಣಾಸೆಯೇನೆಂದಯ ಧರಣಿಭೂಷಣಪರ್ವತಮನೆಯ್ದಿ ಧರ್ಮಪಾಲರಂ ಕಂಡು ವಂದಿಸಿ ಲೇಖನಮನಿತ್ತವರಿಂದುಪದೇಶಮನಾಂತು ದೀಕ್ಷೆಗೊಂಡು ಧ್ಯಾನಮೌನನುಷ್ಠಾನದಿಂ ಯೋಗನಿಯಮಿತನಾಗಿ ಕಾಯೋತ್ಸರ್ಗಮೀರಲಿತ್ತ ವಿಶ್ವಾನುಲೋಮಂ ಬಂದು ಧನ್ವಂತರಿ ಪರ್ವತಕ್ಕೆ ಪೋದೆನೆಂದು ತಾನುಂ ಬಂದಾ ಪರ್ವತಮಂ ಪತ್ತಿ ನೋಳ್ವಾಗಳಲ್ಲಿ ಏಕದಂಡಿ ತ್ರಿದಂಡಿ ಹಂಸ ಪರಮಹಂಸರ್ ಮೊದಲಾದನೇಕ ತೆರೆದ ತಪಸ್ವಿಗಳಿರಲೊರ್ವ ಪಂಚಾಗ್ನಿ ಮಧ್ಯಗತನಾಗಿರ್ದಕೌಶಿಕನೆಂಬ ತಾಪಸನಲ್ಲಿಗೆಯ್ದಿ ನೆನ್ನೆ ದಿವಸಂ ನನ್ನ ಮಿತ್ರನೋರ್ವಂ ತಪಂಗೆಯ್ಯಲ್ ಬಂದನಾತನೆಲ್ಲಿರ್ಪನೆದು ಬೆಸಗೊಳಲ್ ಏನು ಕಾರಣಮೆನೆ ತನ್ನ ನಿಜವೃತ್ತಾಂತಮಂ ಪೇಳೆ ಕೇಳ್ದಂತಾದೊಡೆನ್ನ ತಪದಿಂ ದೇವತ್ವಮಪ್ಪುದಿದಂ ಕೈಕೊಂಡೆನ್ನ ಶಿಷ್ಯನಪ್ಪುದೆನೆ ಎನಗಾತನ ಕ್ರಮವೇ ಕ್ರಮಮಾಗಿರ್ಪುದದರಿಂ ಅವನಂಕಂಡು ಬಪ್ಪೆನೆನಲಾತಂ ಕ್ಷಪಣಕರೊಳ್ ದೀಕ್ಷೆಗೊಂಡಿರ್ದಪಂ ನಿನ್ನಂ ನುಡಿಸನೆಂಬುದುಂ ಆರನೆನ್ನೊಳಿರ್ದಿಷ್ಟತೆಗಂ ಎನ್ನಲೀಗಳ್ ನುಡಿಯದರ್ದೊಡೆ ನಿನ್ನ ತಪಮೆ ಶರಣೆಂದು ಪೇಳಿ ತಪೋನುಷ್ಠಾನದಿಂ ಮೌನಮಂ ಕೈಕೊಂಡು ಧ್ಯಾನಾರೂಢನಾಗಿ ನಿಯಮದಿಂ ನಿಂದಿರ್ದ ಧನ್ವಂತರಿಯೋಗಿಯಂಕಂಡು ನಿಡಿಸಿದೊಡಂ ನುಡಿಯದಿರೆ ಕೋಪಿಸಿ ಬಂದಾ ಕೌಶಿಕನ ಶಿಷ್ಯನಾಗಿ ಪಂಚಾಗ್ನಿಯಿಂ ತಪಿಸುತ್ತುಂ ಭಸ್ಮಾಂಗನುಂ ಜಟಾಮಕುಟನುಂ ಕೌಪಿನಚರ್ಮದಂಡಧರನುಮಾಗಿಬ್ರಹ್ಮಚರ್ಯದಿಂದಿರುತ್ತಿರಲಾ ಧನ್ವಂತರಿಮುನಿಯುಂ ತ್ರಿದಿನಾಂತರದಿಂ ಮೇಲೆ ಕೈಯೆತ್ತಿ ಮಿತ್ರಾನುರಾಗಮಾಗಿ ಬಂದು ವಿಶ್‌ಆನುಲೋಮತಾಪಸಿಯಲ್ಲಿಗೆ ಬಂದು ಬೋಧಿಸಿದೊಡಂ ತಾಂ ಮಾಳ್ಪ ತಪಮಂ ಪ್ರಶಂಸೆಗೆಯ್ಯಲಿಂತೆದಂ.

ವೃತ್ತ || ಮೀನಃ ಸ್ನಾನಪರಃ ಫಣಿಪವನಭುಜಗ ಮೇಷಸ್ತು ಪರ್ಣಾಶನೋ
ನೀರಾಶೀ ಸ್ಫಟ ಚಾತಕಸ್ತ್ವನುದಿನಂ ಶ್ವೇತೇ ಬಿಲೇ ಮೂಷಕಃ |
ಭಸ್ಮೋದ್ಧೂಲಿತ ತತ್ಪರಃ ಖಲು ಖರೋ ಧ್ಯಾನಾಧಿರೂಢೋ ಬಕಃ
ಏವಂ ನಿಪ್ಪಲಿತಂವಿವೇಕರಹಿತಂ ಜ್ಞಾನಂಪ್ರಧಾನಂ ತಪಃ ||

ಎಂಬುದು ಕೋಪಿಸಿದೊಡೆ ಮತ್ತಮಿಂತೆದಂ

ಶ್ಲೋಕ || ಪಕ್ಷಿಣಾಂ ಕಾಕಶ್ವಾಂಡಾಲಃ ಮೃಗೇ ಚಾಂಡಾಲ ಗರ್ದಭಃ
ಯತೀನಾಂ ಕೋSಪಿ ಚಾಡಾಲಃ ಸರ್ವಚಾಂಡಾಲದೂಪಕಃ ||

ಎಂಬುದರಿಂ ಸಮತಾಭಾವವಂ ತಾಳೆಂದು ಬೋಧಿಸೆ ಕೇಳದಿಪ್ಪುದಂ ನಿನ್ನ ತಪಸ್ಸಿನ ಫಲಮಂ ಮುಂದಣ ಗತಿಗಳೊಳ್ ಕಾಣಲಕ್ಕುಮೆಂದು ಪೋಗೆ ಧನ್ವಂತರಿಮುನಿ ಅನಶನಾದಿತಪದೊಳ್ ನೆಗಳ್ದು ಸಮಾಧಿವಡೆದು ಪದಿನಾರನೆಯ ಅಚ್ಯುತಕಲ್ಪದ ಉಪಪಾತತಳ್ಪದೊಳುದ್ಭುವಿಸಿ ಅಂತಮೂಹೂರ್ತದೊಳೆ ದಿವ್ಯ ಗಂಧಮಾಲ್ಯವಸ್ತ್ರಾಭರಣಭೂಷಿತನಾಗಿ ದ್ವಾವಿಂಶತಿ ಸಮುದ್ರೋಪಮ ಪರಮಾಯುಷ್ಯನುಂ ಇಪ್ಪತ್ತೆರಡುಸಾವಿತವರ್ಷಕ್ಕೊಮ್ಮೆಪರಮಾಮೃತ ಮಾಸಿಕಾಹಾರನುಂ ಮನಃಪ್ರವಿಚಾರ ಸುಖಸಂತೃಪ್ತನುಂ ವೈಕ್ರೀಯಕಶರೀರನುಂ ಅಣಿಮಾದಿ ಸದ್ಗುಣೈಶ್ಚರ್ಯೋಪೇತನುಂ ಪತೀಂದ್ರ ಸಾಮಾನಿಕಾತ್ಮರಕ್ಷಕ ಪಾರಿಷದಾಭಿಯೋಗ್ಯ ಕಿಲ್ಪಿಷಾದಿ ತ್ರಯಂತ್ರಿಂಶಲ್ಲೋಕಪಾಲ ಸಮನ್ವಿತನುಂ ಷಷ್ಠ ಪೃಥ್ವೀಗತಾವಧಿಜ್ಞಾನ ಸಂಪನ್ನಚ್ಯುತೇಂದ್ರನಾದಂ.

ವಿಶ್ವಾನುಲೋಮನು ತಪದಿಂಮುಡಪಿ ದೇವಗತಿವಡೆದು ವ್ಯಂತರೇಂದ್ರನ ವಾಹನದೇವನಾಗಿ ಉಪಪಾದದೊಳೆ ದಿವ್ಯಾಭರಣವಸ್ತ್ರಾದಿಗಳಿಂದಲಕೃತನುಂ ವೈಕ್ರೀಯಕಶರೀರನುಂ ಮಾನಸಿಕಾಮೃತಾಹಾರನುಂ ಅಣಿಮಾದಿ ಗುಣೈಶ್ವರ್ಯನಾಗಿ ಪುಟ್ಟಿದನಂತೀರ್ವರುಂ ನಂದೀಶ್ವರ ಮಹಾಪೂಜೆಗೆ ಚತುರ್ವಿಕಾಯಾಮರರೊಡನೈದಿ ಎಂಟು ದಿವಸಂ ಪೂಜಿಸಿ ಮೇರುಪ್ರದಕ್ಷಿಣಂಗೆಯ್ದು ತಂತಮ್ಮ ದೇವಲೋಕಕ್ಕೆ ಪೋಪಾಗಲಾಧನ್ವಂತರಿನಚ್ಯುತೇಂದ್ರನ್ ವಿಶ್ವಾನುಲೋಮಚರವಾಹದೇವನಂ ಏನೈ ನಿನ್ನ ಪೂರ್ವಜನ್ಮದೊಳೆ ಸಮ್ಯಕ್ ತಪಮನಾಚರಿಸದೆ ಸಾಮಾನ್ಯವಾಗಿ ಪುಟ್ಟಿದೆಯೆಂದು ಪೂರ್ವಪ್ರಪಂಚಮೆಲ್ಲಮಂ ಪೇಳಿ ಬೋಧಿಸಿದೊಡಂ ತಪದೊಳ್ ನಾನಾಚರಿಸುವುದುದೇ ಮಹಾತಪಂ ಅದರೊಳ್ ಸಮಗ್ರ ದೃಢಚಿತ್ತನಲ್ಲದುದರಿಂ ನೂನಮಾಗಲ್ ಅರಿದಿಂತಾದುದು. ಸಮಗ್ರಂ ನೆಗಳ್ದೊಡೆ ನಿನ್ನ ದೇವತ್ವದಿಂದಧಿಕಮಂ ಪಡೆವೆನೆನೆ ಸಮಗ್ರ ತಪಮಾವುದೆಂದೊಡೆ ಮಹಾರಣ್ಯ ಮಧ್ಯದೊಳ್ ಕಲ್ಲಕಂಭದಂತೆ ದೇಹಮೆಲ್ಲಮಂ ಬಳ್ಳಿ ಸುತ್ತಿ ಪುತ್ರಮೆದ್ದು ದುಸ್ಸಹಮಾಗಿ ಧ್ಯಾನಾರೂಢನಾಗಿರ್ದ ಜಮದಗ್ನಿಯಂ ತೋರುವುದುಂ ಆತನ ಮನಮಂ ಪರೀಕ್ಷಿಸಲೆಂದಿರ್ವರುಂ ಗೀಜಗಪಥತ್ರಿಮಿಥುನಂಗಳಾಗಿ ಜಮದಗನಿಯ ಗಡ್ಡದೊಳ್ ನೇಲುವ ಕೂರ್ಚದೊಳ್ ಗೂಡನಿಕ್ಕಿ ಕ್ರಮದಿಂದಿರುತ್ತೆ ಗಂಡುಪಕ್ಷಿ ಎಲೆ ಪ್ರಿಯೆ ಮೇರುಗಿರಿಯೊಳ್ ಖಗೇಂದ್ರಂಗೆ ವಿವಾಹಮಾಗುವುದರಿಂ ಅಲ್ಲಿಗೆ ಪೋಗಿ ನಾಳೆ ಬರ್ಪೆ ನೀನಿಲ್ಲಿರ್ಪುದೆಂದು ಪ್ರಾರ್ಥಿಸೆ ನೀ ಬಪ್ಪುದಿಲ್ಲದರಿಂ ಪೋಗಲಾಗದೆನೆ ಎನ್ನಾಣೆ ನಿನ್ನಾಣೆ ದೇವರಾಣೆ ಬಂದಪನೆಂದನೇಕ ಸೂರುಳಂ ಮಾಡಿದೊಡಂ ನಂಬದಿರೆ ಆದರೆ ನೀವಾದ ಸೂರುಳಂ ಪೇಳಲದಂ ಸೂರುಳ್ತು ಪೋಪೆನೆನಲಂತಾದೊಡೆ ನೀಂ ನಾಳೆ ತಡೆದೆಯಾದೊಡೀ ಜಮದಗ್ನಿ ಸತ್ತೊಡಾವಗತಿಗೆ ಪೋಪನಾ ಗತಿಗೆ ಪೋಪೆನೆಂದು ಸೂರುಳ್ತು ಪೋಗೆಂಬುದತಿಭೀತಿಯಿಂ ಗಂಡುಪಕ್ಷಿ ಅಂತಪ್ಪ ಸೂರುಳ್ತು ಪೇಳಬಹುದೆ ಎಂದೆರಡು ಪಕ್ಷಂಗಳಿಂ ಕಿವಿಯಂ ಮುಚ್ಚಿ ಇಂಥಾ ಪಾಪದಸೂರುಳಂ ಕೇಳಬಹುದೆ ಎಂಬುದುಂ ಜಮದಗ್ನಿ ಕೋಪಿಸಿ ತನ್ನೆರಡು ಕೈಯಿಂ ಪೊಸೆಸೊಡೆ ಪಕ್ಕಿಗಳೆರಡುಂ ಪಾರಿ ತಮ್ಮ ದೇವತ್ವದ ನಿಜರೂಪಂ ತೋರೆ ಜಮದಗ್ನಿ ವಿಷಣ್ಣಚಿತ್ತನಾಗಿ ಭಯಗೊಂಡು ತಪಮಂ ಬಿಟ್ಟೆರಗಿ ಎನಗಾವ ಗತಿಯಪ್ಪುದೆನೆ ದೇವರ್ಕಳಿಂತೆಂದರ್

ಶ್ಲೋಕ || ಅಪುರಸ್ಯ ಗತಿರ್ನಾಪ್ತಿಸ್ವಗೋನೈವಚ ನೈವ ಚ
ತಸ್ಮಾತ್ಪತ್ರ ಮುಖಂ ಚೃಷ್ಟ್ವಾ ಪಶ್ವಾದ್ಭವತಿ ಭಿಕ್ಷುಕಃ ||

ಎಂದು ಪೇಳ್ವ ವೇದೋಕ್ತಮಂ ಬಿಟ್ಟು ತಪಂಗೆಯ್ದೊಡೆ ನಿನಗೆ ದುರ್ಗತಿಯಪ್ಪುದರಿಂದೇನೆಂಬುದುಂ ನಿಶ್ಚಯಿಸಿ ಕನ್ಯಾರ್ಥಿಯಾಗಿ ಪೋಗಿ ರೇಣುಕೆಯಂ ಪ್ರಗ್ರಹಿಸಿದರಂ.

ಅತ್ತಲ್ ಧನ್ವಂತರಿಚರಂ ವಿಶ್ವಾನುಲೋಮಚರಂಗೆ ಮಹಾತಪಸ್ವಿಯ ದೃಢಚಿತ್ತಮುಂ ವಿಚಳಮಾಯ್ತು ಈ ಸಮ್ಯಕ್ತವಿಲ್ಲದವರ ಚಾರಿತ್ರ್ಯಮಧಿಷ್ಠಾನವಿಲ್ಲದ ಗೋಪುರದಂತೆ ಕೆಡುವುದೆಂದು ಪೇಳಿ ಪೋಗುತ್ತಿರಲತ್ತ ರತ್ನಪರಾಧಿಪಂ ಪದ್ಮರಾಜನೆಂಬರಸಂ ಪುಗಲಲ್ಲಿ ಅತ್ಯಂತ ಪ್ರಕಾಶಮಾದ ದೀಪ್ತ ತಪೋಬುದ್ಧಿಯುಳ್ಳ ಭಾಸ್ಕರಯೋಗಿಗಳ್ ನಿಂದಿರ್ದರವರಂ ಕಂಡಾಶ್ಚರ್ಯದಿಂದೆರಗಿ ಎಲೆ ಸ್ವಾಮಿ ನಿಮ್ಮಂತಪ್ಪದೇಹದೀಪ್ರಿಯುಳ್ಳರೀ ಮರ್ತ್ಯರೊಳುಂಟೊ ಪೇಳಿಮೆನೆ ನಮ್ಮ ದೇಹಮೇನು ಚಂಪಾಪುರದೊಳುರಿಸಿದ ಶ್ರೀಮದ್ ವಾಸುಪೂಜ್ಯರೆಂಬ ತೀರ್ಥಂಕರಪರಮದೇವರ್ ಕೇವಲಜ್ಞಾನಾರ್ಕರೊಪ್ಪುತಿರ್ಪರ್.ಅವರ್ಗಂ ನಮಗಂ ಮೇರು ಸರ್ಪಪನ್ಯಾಯಮಪ್ಪುದೆನೆ ಭಕ್ತಿ ಪುಟ್ಟಿಯವರ್ಗಂ ವಂದಿಸಿ ಬಂದು ವಾಸುಪೂಜ್ಯಸ್ವಾಮಿಯಂ ಕಾಣ್ಬನ್ನೆಗಂ ಆಹಾರನಿವೃತ್ತಿಯೆಂದು ಭೇರಿಯಂಪೊಯಿಸಿ ಚತುರಂಗಂಬೆರಸು ಪೋಗುವುನಂ ಕಂಡಿವನಂ ತಿರುಗಿಸಲೆಂದಾ ದೇವರ್ಕಳ ಉತ್ಪಾತಂಗಳಂ ತೋರುದೊಡಾತಂ ಶಂಕಿಸದೆ ಪೋಗುತ್ತಿರೆ ಮಂತ್ರಿನಿಯೋಗಿಗಳಾರದೆ ಪೇಳಿದೊಡಂ ಪೋಗುತ್ತಿರಲತಿವೃಷ್ಟಿಯಿಂ ಬಲವೆಲ್ಲಂ ಕೆಸರೊಳ್ ಮುಳುಗೆ ತಾನೇರಿದಾನೆ ಪಜ್ಜೆಯಂ ತೆಗೆಯದೆ ಪಿಂದೆ ಸಾರ್ವುದದಂ ವಾಸುಪೂಜ್ಯಾಯ ನಮಃ ಎಂದು ಮುಂದಣ್ಗೆ ನೂಂಕುತಿರ್ಪುದಮವನಂ ತಿರುಗಿಸಲಾರದೆ ದೃಡವ್ರತಕ್ಕೆ ಮೆಚ್ಚಿ ಸಮತಳಮಾಗೆ ಮಾರ್ಗಮಂಮಾಡಿ ತಂತಮ್ಮ ನಿಜಸ್ವರೂಪದಿಂಪದ್ಮರಾಜನಂ ಪೂಜಿಸಿಯಾತನೊಡನೆ ಸಮವಸರಣಮನೆಯ್ದಿ ದೇವಾದಿದೇವನಂ ವಂದಿಸಿ ಧರ್ಮಸ್ವರೂಪಮುಂ ಕೇಳ್ದು ವಿಶ್ವಾನುಲೋಪಚರದೇವಂ ಸಮ್ಯಕ್ತ್ವಮಂ ಕಯಕೊಳೆ ಈರ್ವರ್ ದೇವರುಂ ತಮ್ಮ ಲೋಕೆಮನೈದುವಾಗಳ್ ರಾಜಗೃಹಪಟ್ಟಣದ ಶ್ಮಶಾನಭೂಮಿಯೊಳ್ ರಾತ್ರಿ ಪ್ರತಿಮೆಯೊಳಿರ್ದ ರಾಜಶ್ರೇಷ್ಠಿ ಜಿನದತ್ತನೆಂಬ ಗೃಹಿಯಂಕಂಡಿವನಂ ಚಲಿಸುವಮೆಂದು ಅನೇಕೊಪಸರ್ಗಂ ಮಾಡಿದೊಡಂ ಚಿತ್ತಚಲನಮಾಗದಿರೆಬಿಟ್ಟು ಈರ್ವರುಂ ಮಾರ್ಗಸ್ಥರಾಗಿ ಪೋಗುತ್ತಮೊರ್ವ ಈ ನಿಂದೆರ್ಪನಾರೆನೆ ಜಿನದತ್ತನೀತಂ ಮರುಳಂ ಇವನಿಲ್ಲಿ ತಪಂಗೆಯ್ವಂ ಇವನ ಮಗಂ ಸತ್ತಂ ಮನೆಯ ಸರ್ವಸ್ವಮಂ ಈತನ ಪೆಂಡತಿಯ ಈ ಪೂರ್ವರಾತ್ರಿಯೊಳರಸಂ ಕವರ್ದುಕೊಂಡಂ. ಈತನದಂ ವಿಚಾರಿಸದಿರ್ಪ ನಿರ್ಭಾಗ್ಯನೆಂದಾಡಿದಾಗ್ಯು ಅವಲಿತನಾಗಿರ್ದೊಡಂ ಮೆಚ್ಚಿ ಆತನ ಯೋಗಾವಸಾನಂಬರಮಿರ್ದಾತಂಗೆ ಬಹುರೂಪಿಣಿಯನಾಕಾಶಗಾಮಿನಿ ವಿದ್ಯಮಂ ಕೊಟ್ಟು ಪೂಜಿಸಿ ತಮ್ಮದೇವಲೋಕಕ್ಕೆ ಪೋದರ್. ಇತ್ತಲಾ ವಿದ್ಯಮಂ ಕಲಿಯಲೆಂದು ವರಸೇನನೆಂಬ ಪುಷ್ಟವಟು ಆ ಜಿನದತ್ತನ ದೇವತಾರ್ಚನೆಗೆ ಪುಷ್ಟಪಂಗಳಂ ತರುತ್ತಂ ಪನ್ನೆರಡು ವರುಷುಂಬರಂ ಶುಶೂಷಾದಿಗಳಂ ಮಾಡುತ್ತಿರಲವಂ ಪ್ರಸನ್ನತೆಯಿಂದುಪದೇಶಂಗೊಟ್ಟಂ ಎಂತೆದೊಡೊಂದು ಪರೇತ ಭೂಮಿಯ ವಟವೃಕ್ಷದ ಈಶಾನದಿಶಾಶಾಖೆಯೊಳ್ ನೂರೆಂಟು ಕಾಲ ದರ್ಭೆಯ ನೆಲಹಂ ಕಟ್ಟಿ ಕೆಳಗೆ ಬತ್ತೀಸಾಯುಧಂಗಳಂ ಜಾಜ್ವಲ್ಯಮಾನಂಗಳಂ ಊರ್ಧ್ವಮುಖಮಾಗಿರಿಸಿ ತನುಂ ನೆಲವಿನೊಳ್ ಕುಳಿತು ಅರ್ಚನಾಪೂರ್ವಕಂ ಮಂತ್ರಮಂ ಜಪಿಸುತ್ತಂಏಕ ಸಮಯದೊಳ್ ನೂರೆಂಟುಕಾಲಂ ಛೇದಿಸೆ ಭೂಪತನದೊಳೆ ಆಂಗುಷ್ಠಪ್ರಸವೆ ಮೊದಲಾದ ದೇವತೆಗಳ್ ಬೆಸಗೊಳ್ವರೆಂದು ಜಿನದತ್ತಂ ಪುಷ್ಟವಟುವಿಂಗುಪ್ರದೇಶಂಗೈದಾ ಮಂತ್ರೋಪದೇಶಮಂ ಮಾಡಲಾ ಪ್ರಕಾರದೊಳೆ ಮಾಡಿ ನಲಹೆನೆಲ್ಲಂ ಕುಯ್ಯಲಂಜುತ್ತುಂ ಒಂದೊಂದು ಕಾಲಂ ಕೊಯ್ಯ್ಯುತ್ತುಂ ಕಟ್ಟುತ್ತುಂ ಇರಲಾ ಪುರಹರಸಿನರಸಿ ವನವಿಹಾರಕ್ಕೆ ಪೋಗುತ್ತಿರಲ್ ಸೌಂದರಿಯೆಂಬ ವೇಶ್ಯಾಸ್ತ್ರಿಯುಂ ಅರಸಿಯ ಕೊರಳೊಳಿರ್ದ ಸೂರ್ಯಪ್ರಭಾನಾಮಪದಕಮಂ ಕಂಡು ಅತ್ಯಾಸಕ್ತಿಯಾಗಿ ತನ್ನ ಬೊಜಗಂ ವಿಜಯಾಪುರದರಸನ ಮಗಂ ಲಲಿತಾಂಗನಂ ದುಷ್ಟಬುದ್ಧಿಗೆ ನಿರ್ಧಾಟಿಸಿದೊಡಾತಂ ಕಳ್ಳರೊಳ್ ಸೇರಿ ಅಂಜನಘಂಟಿಕಾದಿಗಳಿಂ ಚೋರಶಿಖಾಮಣಿಯಾಗಿರ್ಪುದನರಿದಾ ಸೂಳೆ ತನ್ನಭಿಪ್ರಾಯಮಂ ಪೇಳೆಲಲಿತಾಂಗನಸಾಧ್ಯಮೆಂದೊಡಾ ಸೂಳೆ ತನ್ನಂಬಿಡುವುನೆಂಬುದುಂ ಸಮರಾತ್ರಿಯೊಳ್ ಅದೃಶ್ಯದಿನರಮನೆಯನೈದಿ ಕಟ್ಟಾಂಗ ನಿಕಟದೊಳ್ ನೇಳಿತಿರ್ದ ಪದಕಮಂ ಕೊಂಡು ಬರ್ಪು ಸಮಯದೊಳದರ ಪ್ರಭಾವಕ್ಕೆ ದ್ವಾರಪಾಲರ್ಕಲಕರವಮಂ ಮಾಡಲೋಡಿ ಬಂದು ಪಟ್ಟಣಮಂಪೊರದೊಡೆ ಬೆನ್ನಟ್ಟಿ ಬರುವ ರಾಜದೂತರಂ ಕಂಡು ಪದಮನೀಡಾಡಿ ಪೋಗುವಲ್ಲಿ ಪಿತೃವನದಾಲದಮರದ ಮೇಲೆ ದೀಪಮಂ ಕಂಡಲ್ಲಿಗೈದಿ ಬಂದು ನಲಹಿನೊಳಿರ್ದ ಪುಷ್ಪವಟುವಂ ನೀನಾರೀ ವ್ಯವಸಾಯಮೆನೆಂದು ಬೆಸಗೊಳಿಲಾತಂ ತನ್ನ ನಿಜವೃತ್ತಾಂತಮಂ ಸವಸ್ತರಂ ಪೇಳೆ ಕೇಳ್ಸು ಜಿನದತ್ತಂಸೂಕ್ಷ್ಮಪ್ರಾಣಿಯಂ ಕೊಲ್ವನಲ್ಲೀತನಂಕೊಲ್ಲನದರಿಂದೀ ಶಸ್ತ್ರಂಗಳಿಂ ಪ್ರಾಣಭಯಮಿಲ್ಲೆಂದಂತರಂಗದೊಳ್ದೃಢನಾಗಿ ಆತನಾಗ್ರಹದಿಂದಿಳುಹಿಸಿ ನೆಲಹಿನೊಳಿರ್ದೊಂದೆ ಸಮಯದೊಳೆ ನೆಲವಿನ ಕಾಲೆಲ್ಲಮಂ ಕೊಯ್ಯೆ ಆಯುಧಾಗ್ರಮಂ ಮುಟ್ಟುವಸಮಯದೊಳೆ ದೇವತೆಗಳಾಂತು ಬೆಸನಂ ಬೇಡೆ ಜಿನದತ್ತನೆಲ್ಲಿರ್ಪನಲ್ಲಿಗೊಯ್ವುದೆನೆ ಆಕ್ಷಣದೊಳೆ ಮಹಾಮೇರುಪರ್ವತಾಗ್ರದ ಭದ್ರಶಾಲವನದ ಚೈತ್ಯಾಲಯದ ಮುಖಮಂಟಪದೊಳಿಳುಹಿದೊಡಲ್ಲಿರ್ದಚಾರಣಪರಮೇಷ್ಠಿಗಳಿಂ ದೀಕ್ಷೆಯಂ ಕೈಗೊಂಡು ಉಗ್ರೋಗ್ರತಪದಿಂ ಕೇವಲಜ್ಞಾನಿಯಾಗಿ ಮೋಕ್ಷಲಕ್ಷ್ಮಿಯಂ ಕೈಕೊಂಡೆಅವರಪರನಿರ್ವಾಣಕಲ್ಯಾಣಕ್ಕೆ ಶತಮುಖಾದಿ ದೇವರ್ಕಳೆಲ್ಲಂ ಒಂದು ತತ್ಕಲ್ಯಾಣಪೂಜೆಯಂ ಮಾಡಿ ಆನಂದನೃತ್ಯಮನಾಡಿದರ್ ಎಂಬೀ ಶ್ರೂತದ ಕಥೆಯನೆಲ್ಲರುಂ ಪೇಳ್ವೆರೆಂದು ಕ್ಷತ್ರಚೂಡಾಮಣಿ ಜೀವಂಧರಂಗೆ ಸತ್ಯಸಾಗರಮಂತ್ರಿ ಪೇಳ್ದು ಮತ್ತಂ ಅನುಭವಮನಿಂತೆಂದಂ.

ನೀಮುಮಾಮುಂ ಕುಮಾರಕಾಲದೊಳೋರಗೆಯವರಂ ಕೂಡಿಕೊಂಡುದ್ಯಾನಕ್ಕೆ ಪೋಗಲಲ್ಲಿ ಮಕ್ಕಳಾಟಕ್ಕೆ ಹುಡುಗರೆಲ್ಲರೊಂದು ನಾಯಂ ಕೊಲುತ್ತಟ್ಟಿಬರೆ ಅದು ಬಾವಿಯೊಳ್ ಬಿಳ್ದು ಕಂಠಗತಪ್ರಾವಾಗಿಪ್ಪಿನಂ ನೀವುಂ ಕಂಡದಂತೆಗೆದು ಧರ್ಮೋಪದೇಶಮಂ ಪೇಳಿ ಪಂಚಮಂತ್ರಮನದರ ಕಿವಿಯೊಳ್ ಪೇಳೆಸತ್ತು ಸ್ವರ್ಗದೊಳ್ ದೇವನಾಗಿನಾಮುಂವನವಿಹಾರಮಂ ಮಾಡಿ ಪುರಮಂ ಪುಗುವಾಗಲಾದೇವನವಧಿಯಿಂದರಿದು ಬಂದು ದಿವ್ಯಗಂಧಮಾಲ್ಯವಸ್ತ್ರಾಲಂಕಾರಂಗಳಿಂಪೂಜಿಸಿ ರತ್ನಹಾರಮನಿತ್ತು ಪೋದನಾಹಾರಂ ನಿನ್ನ ಕೊರಳೊಳ್ ಮೆರೆವುದದನುಭವಂ ಎಂದಿತು ದೃಷ್ಟಶ್ರುತಾನುಭೂತಮಂ ಪೇಳಿ ಜೀವತ್ವಮಂ ಸದ್ಧರ್ಮಮಂ ಪೇಳ್ದೊಡೆಲ್ಲಮಂ ನಂಬಿ ಸದ್ಧರ್ಮಮಂ ಕೈಕೊಂಡೊಡೆ ಜೀವಂಧರಮಹಾರಾಜಂ ವೈರಾಗ್ಯಪರನಾಗಿ ನೂರ್ವರರಸುಗಳುಂ ದಿಜವೃಂದಂಮೊದಲಾಗಿ ಸಮವಸರಣಮನೆಯ್ದಿ ತ್ರಿಲೋಕಾಧೀಶ್ವರರಾರ್ಚಿತ ಶ್ರೀ ವೀರವರ್ಧಮಾನಸ್ವಾಮಿಗಳ ಶ್ರೀಪಾದಮೂಲದೊಳ್ ದೀಕ್ಷೆಯಂ ಕೈಕೊಂಡಂ.