ಶ್ರೀಸುಜನಸ್ತು ತರಖಿಳಕ
ಕಾಸದನರ್ ಮೋಹತಿಮಿರಮಂ ಕಳೆದು ಕರಂ
ಭಾಸುರ ವಿಚಾರದಕ್ಷರ್
ವೈಷಮ್ಯಮನುಳಿದು ಕೇಳ್ವುದೀ ಸತ್ಕೃತಿಯಂ

ಮುಂದಳ ಕಥೆಯೆಂತೆಂದೊಡೆ ಆ ಆದಿಬ್ರಹ್ಮನ ಸಂತಾನಮೈವತ್ತು ಲಕ್ಷಕೋಟಿ ಸಾರೋಪಮ ಕಾಲಂ ಸಲ್ವಿನಮಯೋಧ್ಯಾಪುರದೊಳ್ ಜಿತಶತ್ರುಮಹಾರಾಜನೆಂಬರಸಂ ರಾಜ್ಯಮಂ ಪ್ರತಿಪಾಲಿಸುತ್ತಿರಲಾ ಕಾಲದೊಳೆರಡನೆ ತೀರ್ಥಾವತಾರಮಾಗಲಲ್ಲಿ ವಿಜಯಸಾಗರನೆಂಬರಸಂಗಂ ಸಗರನೆಂಬೆರಡನೆಯ ಚಕ್ರವರ್ತಿಯಾದನಾಂತಂಗೆ ಭಗೀರಥಂ ಮೊದಲಾದರುವತ್ತು ಸಾಸಿರ್ವರ್ ತಂದೆಯೊಳ್ ಬೆಸನಂ ಬೇಡಿಕೊಂಡು ಪೋಗಿ ಪಿಂದೆ ಭರತೇಶ್ವರಂ ಕೈಲಾಸಪರ್ವತದೊಳ್ ರತ್ನಮಯವಾಗಿರ್ದೆಪ್ಪತ್ತರಡು ಚೈತ್ಯಾಲಯಮಂ ಅರ್ಕಕೀರ್ತಿಯು ಕೈಲಾಸಪರ್ವತವನ್ನು ಅಷ್ಟಾಪದಮಾಗಿಯುಂ ಮಾಡಿರಲದಕ್ಕೆ ಮನುಷ್ಯರ್ ಪೋಗದಂತೆ ಗಂಗಾನದಿಯಂ ತಂದು ಕೈಲಾಸಕ್ಕೆ ಖಾತಿಕೆಯಂ ಮಾಡಿ ಬಂದು ಕಡೆಯೊಳ್ ತಪಮಂ ಕೈಕೊಂಡು ತನ್ನದೀತೀರದೊಳ್ ದೇವತೆಗಳಿಂದ ಭಿಷಿಕ್ತನಾಗಿ ಪೂಜಿಸಿಕೊಂಡಲ್ಲಿಂ ಬಂದು ಕಾಶೀನದೀತೀರದೊಳಿರೆಯಲ್ಲಿಯು ದೇವರ್ಕಳ್ ಪೂಜಿಸಲಾ ನದಿಗೆ ಗಂಗೆಯೆಂಬ ಪೆಸರಿಟ್ಟುದರಿಂದ ಪುಣ್ಯ ತೀರ್ಥಮಾಯ್ತು ಭಗೀರಥಂ ಗಂಗೆಯಂ ತಂದನೆಂದು ಭಾಗೀರಥಿಯೆಂದ ಪೆಸರಾಯ್ತು. ಆ ಇಕ್ಷ್ವಾಕುವಂಶದರಸುಗಳ್ ವಿನೀತಾಪುರ ಶ್ರಾವಸ್ತಿ ಕೌಶಂಬಿ ವಾರಣಾಸಿ ಚಂದ್ರಪುರ ಮೊದಲಾದ ಪಟ್ಟಣದೊಳಿರ್ದರ್.

ಹರಿವಂಶದರಸುಗಳ್ ಪೌದನಾಪುರ ಕಾಕಂದಿ ಭದ್ರಿಳಾ ಚಂಪಾನಗರಿ ಮೊದಲಾದವರೊಳಿರ್ದರ್. ಕುರುವಂಶದವರ್ ಹಸ್ತಿನಾಪುರಾದಿಗಳೊಳಿರ್ದರ್ ಉಗ್ರವಂಶದವರ್ ಕಾಶೀಪಟ್ಟಣಗಳೊಳಿರ್ದರ್, ನಾಥವಂಶದವರ್ ಕುಂಡಿನಾಪುರ ಮೊದಲಾದವರೊಳಿರ್ದು ರಾಜ್ಯಮಂ ಪ್ರತಿಪಾಲಿಸಿರ್ದರ್, ಅಯೋಧ್ಯಾನಗರದೊಳ್ ಸುಪ್ರತಿಷ್ಠ ಸುಭಾಹು ಯಶೋಬಾಹು ಅಜಿತಂಜಯಂ ಮೊದಲಾಗೆ ಅನೇಕ ರಾಜರುಗಳ್ ಆಳುತ್ತಿರೆಯಾಗಳ್ ಭೀಮನೆಂಬ ರಾಕ್ಷಸಂ ವಿಜಯಾರ್ಧದಿಂ ತೋಯದ ವಾಹನನೆಂಬರಸನಂ ತನ್ನ ಲಂಕಾದ್ವೀಪಕ್ಕೊಯ್ದುರಿಸಿದಂ. ಆತನ ವಂಶಪರಂಪರೆಯಿಂದವರ ರಾಕ್ಷಸಂ ಮೊದಲಾಗೆ ಪೌಲಸ್ತ್ಯನೆಂಬನಾದಂ ಮತ್ತಂ ಭದ್ರಿಳಾಪುರದ ಮೇಘರಥ ಅತ್ರಿಯಂಗೀರಾದಿ ಋಷಿಗಳೈನೂರ್ವರ್ (೫೦೦) ಕಪಿಲಸಿದ್ಧಾಂತಾನುಭವಿಗಳಾಗಿರ್ದರಾ ಕಾಲದೊಳ್ ಕಾಲಾದಿ ವಾದಂಗಳ್ ಪ್ರಕಟಮಾದುವವಾವುವೆಂದಡೆ ನೂರೆಂಬತ್ತು (೧೮೦) ಕ್ರಿಯಾವಾದಮುಂ ಎಂಬತ್ತುನಾಲ್ಕು (೮೪) ಆದಿಕ್ರಿಯಾವಾದಮುಂ ಅಜ್ಞಾನವಾದಮರವತ್ತೇಳುಂ (೬೭) ವೈಣಯಿಕವಾದಂ ಮೂವತ್ತೆರಡು (೩೨) ಕೂಡಿ ಮುನ್ನೂರರುವತ್ತುಮೂರು (೩೬೩) ವಾದಂಗಳಲ್ಲಿ ಸ್ವಪರ ನಿತ್ಯಾನಿತ್ಯಂಗಳಿಂ ಕಾಲ ಈಶ್ವರ ಆತ್ಮ ನಿಯತಿ ಸ್ವಭಾವವೆಂದೈದು ಭೇದಮಲ್ಲಿ ಲೋಕದೊಳುಳ್ಳ ಸಕಲ ಪದಾರ್ಥಂಗಳ್ ಚರಾಚರ ಜೀವಂಗಳುತ್ಪತ್ತಿ ಸ್ಥಿತಿಲಯ ಲಾಭಾಲಾಭಂ ಮೊದಲಾದೆಲ್ಲಕ್ಕಂ ಕಾಲುಮೆ ಪ್ರಧಾನಂ.

ಶ್ಲೋಕ || ಕಾಲಃ ಸೃಜತಿ ಭೂತಾನಿ ಕಾಲಃ ಸಂಹರತಿ ಪ್ರಜಾಃ
ಸರ್ವೇಕಾಲಸ್ಯ ವಶಗಾಃನ ಕಾಲಃ ಕಸ್ಯ ಚಿದ್ವಶೇ ||
– ಏವಂ ಪ್ರಕಾರೇಣವಾದಃ

ಅಜ್ಞ ಜಂತುರನೀಶೋಯಮಾತ್ಮನಂ ಸುಖದುಃಖಯೋಃ
ಈಶ್ವರಪ್ರೇರಿತೋ ಗಚ್ಛೇತ್ಸ್ವರ್ಗ ವಾ
sಸ್ವರ್ಗಮೇವವಾ ||
– ಇತೀಶ್ವರವಾದಃ

ಏಕೋ ಜೀವಃ ಮಹಾತ್ಮ ಪುರುಷ ಏವ ಸರ್ವಗತಃ
ಸರ್ವಾಂಗನಿಗೂಡಃ ಸಚೇತನಃ ನಿರ್ಗುಣಃ ಪರಮ
||
– ಇತ್ಯಾತ್ಮವಾದಃ

*ಏಕಸಮಯೇ ಏಕಪ್ರದೇಶೇ ಏಕ ಏಕೇನ ಏಕಂಏಕ ಪುರುಷಸ್ಯ
ನಿಯಮೇನಸ್ಯಾಚ್ಚೇತ್ ತತ್ಕಾಲೇ ಕ್ಷೇತ್ರೇಚ ತೇನ ತತ್ತಸ್ಯ ಭವೇದಿತಿ
||
– ನಿಯತಿವಾದಃ

ಮುಳ್ಳಿಂಗೆ ಮೊನೆಯನಾರುಂ ಪುಟ್ಟಿಸುವರಿಲ್ಲದಂತೆ ಮೇಗ ಪಕ್ಷಿ ಸ್ಥಾವರ
ಜಂಗಮಾದಿ ನಾನಾ ಸ್ವರೂಪ ಸಮಸ್ತಂಗಳ್ ಸ್ವಭಾವಂಗಳೆಂದು ನಿಶ್ಚೈಸುವುದು
– ಸ್ವಭಾವವಾದಃ

ಕುದೇವ ಕುದೃಷ್ಟಿ ಕುರಾಜ ಕುಲಿಂಗಿ ಕುತ್ಸಿತಜ್ಞಾನಿ ಅಜ್ಞಾನವೃದ್ಧ ಬಾಲಕ
ಮಾತೃವಿಪರೀತ ದೃಕ್‌ವಾದಃ
ಸ್ವಚ್ಛಂದ ದೃಷ್ಟ್ಯಾ ವಿಕಲ್ಪಾಃ ಪಾಷಂಡಿನಾಂ ವ್ಯಾಕುಲ [ಹೇತವಶ್ಚೇತ್] ಅಜ್ಞ
ಜೀವಾನಾಂ ಮನೋಹರಾಭವಂತಿ
ಪೌರುಷಮೇವ ಸರ್ವಂ ಪೌರುಷಂ ವಿನಾ ನಹಿ ಎಂಬುದು ಪೌರುಷವಾದಃ
ದೈವಬಲಂ ವಿನಾ ಪೌರುಷಂ ನಾಸ್ತಿ ದೈವಬಲಮೇ ಮುಖ್ಯವೆಂಬುದು
– ದೇವತಾವಾದಃ

ಏಕಹಸ್ತೇನ ಶಬ್ದೋನ ಹಿ ಏಕಚಕ್ರೇಣ ರಥಂ ನ ಗಮಯತಿ
ತಥಾ ಸಂಯೋಗೇ ಏವ ಸಕಲ ಪದಾರ್ಥೋ ಭವತೀತಿ
ಪಂಗ್ವಂಧಯೋಸ್ಸಂಯೋಗೇ ಸತಿ ನಗರಂ ಪ್ರವಿಷ್ಟಮಿತಿ
– ಸಂಯೋಗವಾದಃ

ಲೋಕವಾರ್ತಾಪ್ರವರ್ತನಂ ನಿಶ್ಚಯಮಿತಿ ಲೋಕಪ್ರವಾದಃ
ಯಾವದ್‌ವಚನ ವಿಕಲ್ಪಾಸ್ತೇ ನಯವಾದಾ ಭವಂತಿ

ಎಂದೀ ವಾದಂಗಳೊಂದೊಂದಂ ಪಿಡಿದು ನಡೆವರ್ ಮತ್ತಂ ಷಣ್ಮತಂಗಳ್ ಪುಟ್ಟಿದವು. ನಯ್ಯಾಯಿಕಂ ಕಾಣಾದಂ ಮಿಮಾಂಸಕಂ ಸಾಂಖ್ಯಂ ಬೌದ್ಧಂ ಚಾರ್ವಾಕಂ ಎಂಬೀ ಆರು ಮತಂಗಳವರೊಳು ಜಟಾವಿಶೇಷ ಯೌಗ ಪಾಶುಪತ ನೈಯಾಯಿಕ ಪಾದವಂತ ಸೃಷ್ಟಿ ಸಂಹಾರಕಾರಕ ಈಶ್ವತಃ ಕೇಚಿನ್ನಿರೀಶ್ವರಶ್ಶಿವೋ ದೇವತಾ ಪ್ರಮಾಣ ಪ್ರಮೇಯ ಸಂಶಯ ಪ್ರಯೋಜನ ದೃಷ್ಟಾಂತ ಸಿದ್ಧಾಂತ ಅವಯವ ತರ್ಕ ನಿರ್ಣಯವಾದ ಜಲ್ಪ ವಿತಂಡಾ ಹೇತ್ವಾಭಾಸ ಛಲ ಜಾತಿ ನಿಗ್ರಹಸ್ಥಾನಾನಿ ಷೋಡಶತತ್ತ್ವಾನಿ ಪ್ರತ್ಯಕ್ಷಮನುಮಾನಮುಪಮಾನಮಾಗಮಶ್ಚೇತಿ ಚತ್ವಾರಿಪ್ರಮಾಣಾನಿ ನಿತ್ಯಾನಿತ್ಯ ನಿರ್ಣಯಾದೇಕಾಂತವಾದಃ ದುಃಖಜನ್ಮ ಪ್ರವೃತ್ತಿ ಮಿಥ್ಯಾಜ್ಞಾನಾನಾಮುತ್ತರೋತ್ತರ ಪಾಯೇ ತದನಂತರಾ ಭಾವಾತಿ ತತ್ತ್ವಜ್ಞಾನಮ್ ತಸ್ಮಾತ್ ಭವತಿ. ಷಡಿಂದ್ರಿಯಾಣಿ ಷಡ್ಬುದ್ಧಯಃ ಷಡ್ವಿಷಯಾಃ ಸುಖ ದುಃಖ ಶರೀರಂಚೆತ್ಯೇಕವಿಂಶತಿ ಪ್ರಭೇದ ಭಿನ್ನಸ್ಯ ದುಃಖಸ್ಯಾಂತೋ ತಚ್ಛೇದೋ ಮೋಕ್ಷ: – ಇತಿ ನೈಯಾಯಿಕ ಮತ ಪ್ರಮೇಯಮ್

ಕಾಣಾಸಮ್ ಶೈವದರ್ಶನಮ್ ತತ್ರ ಶಿವೋದೇವತಾಃ ದ್ರವ್ಯಗುಣ ಕರ್ಮ ಸಾಮಾನ್ಯ ವಿಶೇಷ ಸಮವಾಯಾಃ ಷಟ್ಟದಾರ್ಥಃ ತತ್ತ್ವಂ ಪ್ರತ್ಯಕ್ಷಾನುಮಾನಾಗಮ ಇತಿ ಪ್ರಮಾಣತ್ರಯಮ್. ವಾದೋ ಮೋಕ್ಷಮಾರ್ಗಶ್ಚ ನೈಯಾಯಿಕಮ್. ಬುದ್ಧಿ ಸುಖ ದುಃಖೇಚ ದ್ವೇಷ ಪ್ರಯತ್ನ ಧರ್ಮಾಧರ್ಮ ಸಂಸ್ಕಾರ ರೂಪಾಣಾಂ ನವಾನಾಂ ವಿಶೇಷ ಗುಣಾನಾಮತ್ಯಂತೊಚ್ಛೇದೋ ಮೋಕ್ಷಃ

ಜೈವಿಂನೀಯೊ ಮೀಮಾಂಸಕಃ ಭಾಟ್ಟ ದರ್ಶನಮ್ ತತ್ರ ದೇವತಾ ನಾಸ್ತಿ ನಿತ್ಯೇಭ್ಯೋ ದೇವಾತಾಖ್ಯ ಏವ ನಿಶ್ಚಯಃ ಬೋಧನಾಲಕ್ಷಣಂ ಧರ್ಮತತ್ತ್ವಂ ಪ್ರತ್ಯಕ್ಷ ಮನುಮಾನಮುಪಮಾನಮಾಗಮಾರ್ಥಾಪತ್ತಿ ಭಾವಾಶ್ಚೇತಿ ಷಟ್ಟ್ರಮಾಣಾನಿ ಪುರಾವೇದಪಾರಾಗಾಃ ಸ್ವರ್ಗಕಾಮೋಗ್ನಿಂ ಯಜೇದಿತಿ ದೇವನಿಹಿತಾನುಷ್ಠಾನಂ ಮೋಕ್ಷಮಾರ್ಗಃ ನಿತ್ಯ ನಿರತಿಶಯ ಸುಖಾಭಿವ್ಯಕ್ತಿರ್ಮೋಕ್ಷಃ

ಸಾಂಖ್ಯದರ್ಶನೇ ಮರೀಚಿದರ್ಶನಂ ತತ್ರ ಕೇಚಿನ್ನಿರೀಶ್ವರಃ, ಕೇಚಿದೀಶ್ವರದೇವತಾಃ ಕಪಿಲ ಏವಃ ಪಂಚವಿಂಶತಿತ್ತ್ವಾನಿ, ಸತ್ವ ರಜಸ್ತಮಸ್ಸ ಸಾದ್ವ್ಯವಸ್ಥಾಪ್ರಕೃತಿಃ ಮಹತೋಹಂಕಾರಃ, ಅಹಂಕಾರಾತ್ ಪಂಚತನ್ಮಾತ್ರಾಣಾಮೇಕಾದಶೇಂದ್ರಿಯಾಣಾಂ ತತ್ರ ಶಬ್ದಮಾತ್ರಾದಾಕಾಶಂ, ರೂಪ ತನ್ಮಾತ್ರಾತ್ತೇಜಃ, ಗಂಧ ತನ್ಮಾತ್ರತ್ಪೃಥಿವೀ, ರಸ ತನ್ಮಾತ್ರಾದಾಪಃ, ಸ್ಪರ್ಶ ತನ್ಮಾತ್ರಾದ್ವಾಯುಃ ಬುದ್ಧೀಂದ್ರಿಯಪಂಚಕಂ, ಕವೇಂದ್ರಿಯಪಂಚಕಂ ಚ ಏಕಾದರ್ಶನ ಮನಯಿತಿ ಅಮೂರ್ತಶ್ಚೈತನ್ಯರೂಪಃ ಕರ್ತಾಭೋಕ್ತಾಚ ಪುರುಷಪುಂಗವತ್ ಪ್ರಕೃತಿ ಪುರುಷಯೊಗತ್ ಪ್ರತ್ಯಕ್ಷ ಅನುಮಾನ ಶಬ್ದಪ್ರಮಾಣಾನಿತ್ಯೇಕಾಂತವಾದಃ ಪಂಚವಿಂಶತಿತತ್ತ್ವಜ್ಞಾನಂ ಮೋಕ್ಷಮಾರ್ಗಃ ಪ್ರಕೃತಿ ಪುರುಷ ವಿವೇಕ ದರ್ಶನಾನ್ನಿವೃತ್ತಾಯಾಂ ಪ್ರಕೃತಿ ಪುರುಷಾವಸ್ಥಾನಂ ಮೋಕ್ಷಃ

ಸೌಗತಃ ಶೂನ್ಯವಾದೀ, ಬೌದ್ಧಃ ಪದಾಭಿಕ್ಷುಕಃ, ತೇಷಾಂ ದರ್ಶನೇ ಬುದ್ಧೋ ದೇವತಾ, ದುಃಖಸಮುದಯ ಮೋಕ್ಷ ಮಾರ್ಗರೂಪಾಣಿ ಚತ್ವಾರ್ಯಾರ್ಯ ತತ್ತ್ವಾನಿ ತತ್ತ್ವಾನಿ ಪ್ರತ್ಯಕ್ಷಮನುಮಾನಂ ಚೇತಿದ್ವೇ ಪ್ರಮಾಣೇಕ್ಷಣೈಕಾಂತವಾದಾಃ ಸರ್ವೇ ಸರ್ವಕ್ಷಣಿಕತ್ವಂ, ಸರ್ವ ನೈರಾತ್ಮ್ಯವಾಸಾನಾ ಮೋಕ್ಷಮಾರ್ಗಃ ವಾಸನಾಕ್ಲೇಶ ಸಮುಚ್ಛೇದ ಪ್ರದೀಪಶ್ಚೈವ ಜ್ಞಾನಸಂತಾನಸ್ಯೋಚ್ಛೇದೋಮೋಕ್ಷಃ

ರಾಗಾದಿ ಕ್ಲೇಶಸಂತಾನ ವಾಸನೋಚ್ಛೇದಸಂಭವಃ
ಚತುರ್ಣಾಮಪಿ ಬೌದ್ಧಾನಾಂ ಮುಕ್ತಿರೇಷಾ ಪ್ರಕೀರ್ತಿತಾ

ನಾಸ್ತಿಕ ಲೋಕಾಯತಿಕ ಚಾರ್ವಾಕ ಇತಿ ತೇಷಾಂ ದರ್ಶನಂ ನಾಸ್ತಿ, ದೇವೋ ನಾಸ್ತಿ, ಜೀವೋ ನಾಸ್ತಿ, ಪಾಪಂ ನಾಸ್ತಿ, ಪರಲೋಕೋ ನಾಸ್ತಿ, ಮೋಕ್ಷಃ [ನಾಸ್ತಿ], ತತ್ತ್ವಾನಿ ಭೂತಾನಿ, ಪ್ರತ್ಯಕ್ಷಮೇವೈಕಂ ಪ್ರಮಾಣ, ಪೃಥಿವ್ಯಾಂ ವಿಷಮ ವಾಯನ್ಮಧ್ಯಾದಗೇಭ್ಯೋಮದ ಶಕ್ತಿವಚ್ಛೈನ್ಯಶಕ್ತಿಃ ಅದೃಷ್ಟ ಪರಿತ್ಯಾಗೇನ ದೃಷ್ಟ್ವ ಸುಖೋಪ ಭೋಗ ಏವ ಪುರುಷಾರ್ಥಃ ದುರ್ನಯ ಬಲಪ್ರಭಾವಿತ ಸತ್ತಾಕಾಹಿ ಬಲತ್ವೇತಿ ಪ್ರವಾದಃ ತಥಾಹಿ – ನೈಗಮನಯಾನುಸಾರಿಣಾ ನೈಯಾಯಿಕ ವೈಶೇಷಿಕೌ ಸಂಗ್ರಹಯಾನುಸಾರಿಣಃ ಸರ್ವೇ ಮೀಮಾಂಸಕಾಃ, ಶೇಷಾಣಾಮದ್ವೈತವಾದಃ, ಸಾಂಖ್ಯ ದರ್ಶನಸ್ಯ ಚ ವ್ಯವಹಾರ ನಯಾನುಸಾರಿಣ ಪ್ರಾಯಶ್ಚಾರ್ವಾಕಾಃ ಋಜುಸೂತ್ರನಯಾನುಸಾರಿಣೋ ಬೌದ್ಧಾಃ

ಶಬ್ದಾದಿನಯಾ ದೇವಲಂಬಿನೋ ವೈಯಾಕರಣಾದಯಃ ಏತೇನಿತ್ಯಾನಿತ್ಯಾದ್ಯನಂತ ಧರ್ಮಾತ್ಮಕೇ ವಸ್ತುನಿಸ್ವಾಭಿಶ್ರಿಪ್ರತೈಕ ಧರ್ಮಸಮರ್ಥನ ಪ್ರಮಾಣಾಃ ಶೇಷಧರ್ಮ ತಿರಸ್ಕಾರೇಣ ಪ್ರವರ್ತಆನ ದುರ್ನಯಾ ಇತ್ಯಾರ್ಹತಮತೇ ಸೂಚ್ಯತೇ ರೂಪ ರಸ ಗಂಧ ಸ್ಪರ್ಶ ಶಬ್ದಾಶ್ಚೇತಿ ಪಂಚಸ್ಕಂಧಾಃ ಆತ್ಮ ಸೌಗತಃ ಚಾರ್ವಾಕಃ ಪೃಥಿವ್ಯಾದಿ ಚತ್ವಾರಿ ಭೂತಾನಿ ಯೌಗಮತೇ ನೈಯಾಯಿಕೇ ಷೋಡಶ ವೈಶೇಷಿಕೇ ದ್ರವ್ಯಗುಣ ಸಾಮಾನ್ಯ ವಿಶೇಷ ಸಮವಾಯಾ ಸಮವಾಯಾಶ್ಚೇತಿ ಮೀಮಾಂಸಕಮತೇ ಭಾಟ್ಟೇ ದ್ರವ್ಯ ಗುಣಕರ್ಮ ಸಾಮಾನ್ಯ ಶಕ್ತಿ ಸಂಖ್ಯಾ ಸಾದೃಶ್ಯಾ ಭಾವಶ್ಚೇತ್ಯಷ್ಟೌ ಪದಾರ್ಥಾಃ ಪ್ರಭಾಕರೇ ದ್ರವ್ಯಗುಣ ಸಾಮಾನ್ಯ ಸಮವಾಯ ಶಕ್ತಿ ಸಂಖ್ಯಾ ಸಾದೃಶ್ಯಾನಿ ತ್ಯಷ್ಟೌ ವೇದಾಂತಿನಾಂತು ಬ್ರಹ್ಮಲಕ್ಷಣಾನಾಂತು ಏಕೇವ ಪದಾರ್ಥಃ ವ್ಯವಹಾರಿ ಭಾಟ್ಟ ಪ್ರತ್ಯಕ್ಷಾದಿ ನಿಮಿತ್ತಂ ಸ್ಮೃತಿಃ ಪ್ರತ್ಯಭಿಜ್ಞಾನ ತರ್ಕಾನುಮಾನಾಗಮಭೇದೇನ ಷಟ್ಪ್ರಮಾಣಾನಿ ಸಪ್ತವಿಂಶತಿ ತತ್ತ್ವಾನಿ ಮುಕ್ತೆಃ ಸ್ವರೂಪಂ ನಾನ್ಯಥಾ ಪ್ರತಿಪಾದಯಂತಿ ಪ್ರಮುಗ್ಧ ಲುಬ್ಧ ಲೋಕಾನಾ ತಥಾಹಿ ಸಕಲ ನಿಷ್ಕಲಾ ಪ್ರಾಪ್ತ ಮಂತ್ರತಂತ್ರಾಪೇಕ್ಷಾವೀಕ್ಷಣಾತ್ ಶ್ರದ್ಧ ಮಾತ್ರಾನುಸ್ಮರಣಾನೋಕ್ಷ ಇತಿ ತಾರ್ಕಿಕ ಸಿದ್ಧಾಂತ ವೈಶೇಷಿಕ ದ್ರವ್ಯ ಗುಣ ಸಾಮಾನ್ಯ ವಿಶೇಷ ಸಮಯಾವಾ ಭಾವಾನಾಂ ಪದಾರ್ಥಾನಾಂ ಸೌಧರ್ಮ ವೈಧರ್ಮ ಬೋಧಾ ಭಾಟ್ಟತತ್ರಾಭ್ಯಾಂ ಜ್ಞಾನಮಾತ್ರಾನ್ಮೋಕ್ಷಃ ಇತಿ ತಾರ್ಕಿಕ ವೈಶೇಷಿಕಾಃ ತ್ರಿಕಾಲಭಸ್ಮಧೂಲನೇ ವಾಗ್ಯುದ್ಧ ಪ್ರಧಾನ ಪ್ರದಕ್ಷಿಣೇ ಕರಣಾತ್ಮಕ ವಿಡಂಬನಾದಿ ಕ್ರಿಯಾಣಾಂ ರಾಗಾವಿಷ್ಟಾನುಷ್ಠಾನಾದಿವ ಮೋಕ್ಷ ಇತಿ ಪಾಶುಪತಾಃ ಸರ್ವೇಷಂ ಪೇಯಾಪೇಯ ಭಕ್ಷ್ಯಾಭಕ್ಷ್ಯಾದಿಷು ವಿಶಂಕಚಿತ್ತಾದ್ವ್ಯಕ್ತಾ ವೃತ್ತಾನ್ ಮೋಕ್ಷ ಇತಿ ಕೌಶಲ್ಯಾಚಾರ್ಯಃ

ತಥಾ ಚಿತ್ರಮತೋಕ್ತಿ:

ಮದಿರಾಮೋದ ಮೇದುರವದನಾಂತರಸ ಪ್ರಸನ್ನ ಹೃದಯಃ ಸರ್ವಪಾಶಾನ್ವಿತೇ ಶಕ್ತಿಃ ಮುದ್ರಾಸನ ಧರಃ ಸ್ವಯಮ್ || ಉಮಾಮಹೇಶ್ವರಂ ಯಮನೋ ನಿತ್ಯಮಂತ್ರೇಣ ಪಾರ್ವತೀಶ್ವರಾಧಯೇದಿತಿ ಮೋಕ್ಷಃ ಅಂಗಾರಾಗಾಂಜನಾದಿ ವತ್ಸ್ವಭಾವಾದೇವನ ಕಾಲುಷ್ಯೋತ್ಕರ್ಷ್ಯತಸ್ಯ ನ ಕುತಶ್ಚಿದಿತಿ ಜೈಮಿನೀಯಾಃ ಪರಬ್ರಹ್ಮ ದರ್ಶನಪರಾರ್ಧಶೇಷ ವೇದಸಂವೇದನಾ ವಿದ್ಯಾವಶಾನ್ಮೋಕ್ಷಃ ಇತಿ ವೇದಾಂತಿನಃ ಬುದ್ಧಿ ಸುಖದುಃಖೇಚ್ಛಾ ದ್ವೇಷ ಪ್ರಯತ್ನ ಧರ್ಮಾಧರ್ಮ ಸಂಸ್ಕಾರಾಣಾಂ ನವಾನಾಮಾತ್ಮ ಗುಣನಾಮತ್ಯಂತೋಚ್ಛಿತ್ತಿರಿತಿ ಕಾಣಾದಾಃ ಸಧರ್ಮಿಭಿಃ ಧರ್ಮಾಶ್ಚಿಂತ್ಯಂತೇ ತಥಾ ಪರಲೋಕಸ್ಯ ಭಾವಾತ್ಪರಲೋಕಾಭಾವೇತಸ್ಯಾ ಸೌಮೋಕ್ಷ ಇತಿ ಸಮಾಪ್ತ ಸಮಸ್ತ ನಾಸ್ತಿಕಾಧಿಪತ್ಯ ಬಾರ್ಹಸ್ಪತ್ಯಾ, ತಥಾ ನಿರಾಶ್ಯಯೋತ್ಪತ್ತಿಮುಕ್ತಿರಿತಿ, ತಥಾಗತಾಃ ದೀಪೋ ಯಥಾ ನಿರ್ವೃತಿಮಭ್ಯುಪೈತೀತಿ, ಇದ್ಧಿ ಮನೋಹಂಕಾರ ಕ್ಲೇಶಾಪನೋದಾಖಿಲೇಂದ್ರಿಯ ವಾಕ್‌ದ್ರಷ್ಟ್ರೃಸ್ಥಾನೇಮುಕ್ತಿ ಕಾಲ್ಪಲಾ (?) ಪ್ರಕೃತಿರ್ವಿಕೃತೇರ್ವಿವೇಕ ಖ್ಯಾತಿರಿತಿ ಸಾಂಖ್ಯಾಃ ಯಥಾಘಟ ವಿಘಟಿತೇಘಟಾಕಾಶಮಾಕಾಶಿ ಭವೇತ್ತಥಾ ದೇಹೋಚ್ಛೇದಾತ್ಸರ್ವ ಪ್ರಾಣಿಮೋಲೀಯುತ ಇತಿ ಬ್ರಹ್ಮಾದ್ವೈತವಾದಿನಃ

ಸದಾಶಿವಃ ಸದಾ ಕರ್ಮೋಚ್ಛಿತಃ ಸಾಂಖ್ಯೋಮುತ್ತಗುಣೋಜ್ಝಿತಃ
ಮಸ್ಕರೀಕಿಳಮುಕ್ತಾನಾಂ ಮನ್ಯತೇ ಪುನರಾಗತಿಂ
ಕ್ಷಣಿಕಂ ನಿರ್ಗುಣಂಚೈವ ಬುದ್ಧೋ ಯೋಗಶ್ಚಮನ್ಯತೇ
ಕೃತಕೃತ್ಯಂತಮೀಶಾನೋ ಮಂಡಲೀಚೋರ್ಧ್ವವರ್ತಿನಮ್
ಅಪೂರ್ವಲಾಭಮುದ್ಧಿಶ್ಯ ಜನಸ್ಸರ್ವಃ ಪ್ರವರ್ತತೇ
ನಹಿ ಮೂಲವಿನಾಶಾಯ ಪ್ರೇಕ್ಷಾವಾನ ಕಶ್ಚಿದೀಹತೇ

ಈ ಪ್ರಕಾರ ನಾನಾವಿಧ ಶ್ರದ್ಧಾಭಾವದಿಂದೊಂದು ಸಮಯಮಂ ಪಿಡಿದು ಕೆಲವು ಕಾಲಂ ಸಲೆ ಭದ್ರಿಳಾಪುರದ ಮೇಘರಥನೆಂಬರಸನಾತನ ಮಂತ್ರಿ ಸತ್ಯಕೀರ್ತಿಯೆಂಬಂ ಪುರೋಹಿತಂ ಭೂತಿಶರ್ಮನ ಮಗಂ ಮುಂಡಶಾಲಾಯನಂ ಅರಸನ ಚಿತ್ತವೃತ್ತಿಯನರಿದು ದಶ ದಾನಂಗಳ ಪ್ರಶಂಸೆಗೆಯ್ದುವಕ್ಕಂ ಗ್ರಂಥಗಳಂ ರಚಿಸಿದನಂದಿಂದಂ ದಶದಾನಂ ಪ್ರವರ್ತಿಸುತ್ತಿಪ್ಪುದು. ಮತ್ತಂ ಚಂಪಾನಗರಿಯೊಳ್ ಪದ್ಮರಥನೆಂಬರಸಂ ಬಲಿ – ಬ್ರಹ್ಮಸ್ಪತಿ – ಶುಕ್ರರೆಂಬ ಬ್ರಾಹ್ಮಣರ್ಗೆ ಮೆಚ್ಚಿ, ಸಪ್ತದಿನಂಬರಂ ರಾಜ್ಯಭಾರಮನೀಯೆ ಮಹಾಮುನಿಗಳ್ಗುಪಸರ್ಗಮಾಗಿರಲ್ ವಿಷ್ಣುಮಿನಿ ವಾಮನಾವತಾರದಿಂ ಬಂದ ಮೂರಡಿ ಭೂಮಿಯಂ ಬೇಡಿ ಬಳೆದು ಭೂಮಿಯೆಲ್ಲವೊಂದಡಿಯಾಗಲಾಕಾಶದೊಳೊಂದಡಿಯಿಡೆ ಮತ್ತೊಂದಡಿಗೆಡೆಯಿಲ್ಲದಿರಲಾಗ ತ್ರಿಲೋಕದವರ್ ಪೂಜಿಸಿದರ್. ತದನಂತರಂ ಸಹಸ್ರಬಾಹುವೆಂಬರಸನಯೋದ್ಯೆಯೊಳಿರ್ದು ರಾಜ್ಯಂಗೆಯ್ವಂದು ಜಮದಗ್ನಿರಾಮಂ ದೇವತೆಗಳ ಕಾರಣದಿಂ ಭಗ್ನತಪನಾಗಿ ಬಂದು ಕನ್ಯಾದಾನಮಂ ಬೇಡಿದೊಡರಸನ ತನೂಚೆಯರಾರುಮೊಲ್ಲದಿದೆ ಕಿರಿಯ ರೇಣುಕೆಯೆಂಬೀ ಬಾಲಿಕೆಯಂ ಕುಡಿ ತನ್ನಾಶ್ರಮಕ್ಕೊಯ್ದು ಬೆಲೆಯಲು ಕಾಮ ಭೋಗದೊಳಿರಲಾಕೆಗೆ ಇಂದು ರಾಮ ಪರಶುರಾಮರ್ (?) ಪುಟ್ಟಿರಲೊಂದು ದಿನಂ ರೆಣುಕೆಯಣ್ಣನಪ್ಪಂ ಸಪ್ತರ್ಧಿಸಂಪನ್ನ ಮಹಾಮುನಿಗಳ ಅರಣ್ಯ ಚರಿಗೆವರೆ ರೆಣುಕೆ ನಿರಂತರಾಯಮಹಾರಮಂ ಕುಡೆ, ಕೊಂಡುಪೋಪರಂ ತಡೆದೆನಗೆ ಬಳುವಳಿಯಂ ಕೊಡಲಿಲ್ಲೀಗಂ ಕೊಡುವುದೆಂದು ಬೇಡುವುದುಂ ಕರುಣಿಸಿ ಸಮ್ಯಗ್ದರ್ಶನಮಂ ಕೈಕೊಳಿಸಿ, ಕಾಮದೇನುವಿದ್ಯಮಂ ಕೊಟ್ಟು ತದ್ರಕ್ಷಣಾರ್ಥಂ ಪರಶುವಿದ್ಯಮಂ ರಾಮಂಗಿತ್ತು ಪೋಗಲಾ ವಿದ್ಯೆಯಿಂದ ಕಾಮಧೇನುವಂ ಪಡೆದಿರೆ ಸಹಸ್ರಬಾಹು ಕೃತವೀರಂವೆರಸು ವನವಿಹಾರಕ್ಕೆ ಬರಲಾತನಂ ಜನದಗ್ನಿ ರಾಮಂ ನಿಲಿಸಿ ಚತುರಂಗಸಹಿತಮಾಗೆಲ್ಲರ್ಗಂ ನಾನಾ ವಿಧಾಹಾರಂಗಳಿಂ ತೃಪ್ತಿಯಂ ಮಾಡಿಸಲರಸನೀತಂಗೀ ಸಾಮರ್ಥ್ಯವೆಂತಾದುದೆನೆ ಕಾಮಧೇನುವಿಪ್ಪುದಂ ಪೇಳ್ವುದುಮದಂ ಬೇಡಿದೊಡೀಯದಿರೆ ಬಲಂಬೆರಸು ಬಂದು ಜಮದಗ್ನಿಯಂ ಕೊಂದು ಕಾಮಧೇನುವಂ ಕೊಂಡುಪೋಗಲನಿತರೊಳಿಂದು ರಾಮ – ಪರಶುರಾಮರ್ ಸಮಿದ್ದರ್ಭೆಯಂ ತರಲ್ಪೋಗಿರ್ದುವರೆ ರೇಣುಕೆ ಎದೆಯಂ ಪೊಯ್ದುಕೊಳ್ಳಲದ ಲೆಕ್ಕಿಸುತ್ತಿರ್ದೊಡಿಪ್ಪತ್ತೊಂದು ವೇಳೆಯಾಗಿ ನಿಲ್ವುದುಮಿದೇನೆಂದು ಬೆಸಗೊಳಲರಸಂ ಬಂದು ನಿಮ್ಮ ತಂದೆಯಂ ಪರಿಹರಿಸಿ ಕಾಮಧೇನುವನೊಯ್ದನೆಂಬುದುಂ, ಕೋಪಿಸಿ ಪರುಷಗೊಡಲಿಯಂ ಕೊಂಡೆಯ್ದಿ ಪಟ್ಟಣಮಂ ಪೊಕ್ಕು ಏಕಾಂಗವೀರನಾಗಿ ಚತುರಂಗಬಲಮೆಲ್ಲಮಂ ಕೊಂದು ಇದಿರಾದ ಸಹಸ್ರಬಾಹುಮಂ ಕೊಂದು ರಾಜ್ಯಮನಾಳುತ್ತುಮನೇಕಾಗ್ರಹಾರ ಸತ್ರಾದಿಗಳಂ ಮಾಡಿಸಿ ಇಪ್ಪತ್ತೊಂದು ವೇಳೆ ಕ್ರತ್ರಿಯರಂ ನಿರ್ಮೂಲನಂ ಮಾಡಿ ರಾಜ್ಯಮನಾಳುತ್ತಿರಲಾ ಸಹಸ್ತಬಾಹುವಿನರಸಿ ಚಿತ್ರಮತಿ ಗರ್ಭಿಣಿಯಾಗಿರ್ದು ತನ್ನ ಪತಿಯ ಕಾಲ್ವೊಗಳಂಜಿ ಪುರಮಂ ಪೊರಮಟ್ಟು ಶಾಂಡಿಲ್ಯಂ ಋಷ್ಯಾಶ್ಯಮದೊಳಿರ್ದು ಬಾಲಕನಂ ಪಡೆದು, ಸುಭೌಮನೆಂಬ ಪೆಸರಾಗಲಾತಂ ಬೆಳೆದು, ನವಯವ್ವನನಾಗಿ ಬಂದು ಪರಶುರಾಮನಂ ಕಡೆಗಾಣಿಸಿ ಚಕ್ರವರ್ತಿಯಾಗಿರ್ದಂ ಜಿಹ್ವಾಲಂಪಟದೊಳ್ ಸಮುದ್ರತೀರದೊಳ್ ವ್ಯಂತರನಿಂದಪಗತಜೀವಿಯಾದಂ. ಮತ್ತಮಾ ಸಾಕೇತನಗರದೊಳಾನಂದಮಹಾರಾಜಂ ಗುರೂಪದೇಶದಿಂ ಸೂರ್ಯಬಿಂಬದೊಳಿರ್ಪ ದೇವನಂ ತ್ರಿಕಾಲದೊಳರ್ಘ್ಯಪಾದ್ಯಾದಿಗಳಿನಷ್ಟವಿಧಮಪ್ಪರ್ಚನೆಯಿಂದರ್ಚಿಸುತ್ತುಂ ಸ್ತುತಿಸಿ ನಮಸ್ಕಾರಮಂ ಮಾಡಲಂದಿಂದಿತ್ತಲ್ ಸೂರ್ಯದೇವರುಪಾಸನೆಯಂ ಮಾಡುತ್ತುಂ ಬಂದರಲ್ಲಿ ಸೌರಮತಮಾಯ್ತು.

ಮತ್ತ ಮಯೋಧ್ಯಾಪುರದ ರಾಮಸ್ವಾಮಿಯ ತ್ರಿಜಗದ್ಭೂಷಣನೆಂಬ ಪಟ್ಟದ ಗಜೇಂದ್ರಂ ಮದದಿಂ ಬಪ್ಪವಸರದೊಳ್ ಭರತಂ ಬರೆ ಕಂಡು ಜಾತಿಸ್ಮರನಾಗಿ ಪೂರ್ವಭವಮಂ ತಿಳಿದಾ ಭರತನೊಡನಿರ್ದು ಪುಲ್ಲು ಕವಳಮಂ ಕೊಳ್ಳದಿರಲದರ ವೃತ್ತಾಂತಮಂ ತ್ರಿಜ್ಞಾನದರಸಂಗೆ ತಿಳಿಪೆಯದಕ್ಕೆ ವ್ರತನಿಯಮಂ ಕುಡೆ ಜ್ಞಾನಿಯಾಗಿರ್ಕೈಕೊಂಡು ಮಧ್ಯಾಹ್ನದೊಳ್ ಮನೆ ಮನೆ ಬಾಗಿಲೊಳ್ ಬಂದು ಪ್ರಾಸುಕಮಾಗಿ ಶುದ್ಧಾಹಾರಮಂ ಕೊಟ್ಟೆಡೆಯೊಳ್ ಕೊಂಡೊಡದಕ್ಕೆ ನೆನೆದಕ್ಕಿ ಕಡಲೆ ಚಿಗುಳಿ ತಂಬಿಟ್ಟು ಹಣ್ಣುಕಾಯಂ ಕೊಡುತ್ತಿರ್ದೊಡದು ಕಾಲಮಂ ಕಂಡು ದೇವನಾಗೆಯದರ ಪ್ರತಿರೂಪಂ ಶಿಲೆ ಮೊದಲಾದವರೊಳ್ ಮಾಡಿ ಪೂಜಿಸಲಾದೇವಂ ಪ್ರತ್ಯಕ್ಷವಾಗಿ ಜನರ ಮನೋಭಿಷ್ಟಮಂ ಸಲಿಸುತ್ತಿರೆ ದೇವಸಮೂಹಕ್ಕಧೀಶನಾದುದರಿಂ ಗಣೇಶನೆಂದು ಭಾದ್ರಪದ ಶುದ್ಧ ಚತುರ್ಥಿಯಲ್ಲ ಪ್ರತಿಷ್ಠೆಯಂ ಮಾಡಿದರ್.

ಮತ್ತಂ ವಜ್ರಬಾಗುವೆಂಬರಸಂ ವನವಿಹಾರಕ್ಕೆ ಪೋದಲ್ಲಿ ಒಂದುರಮ್ಯ ಪ್ರದೇಶದೊಳ್ ವಂತೀಯವೃಕ್ಷಕ್ಕೆ ಮಲ್ಲಿಕಾಲತೋರೋಹಣಮಾಗಿರಲಿಲ್ಲ ಗೆಯ್ದಿ ನೋಡಲತಿಶಯಮಾಗಿರಲಲ್ಲಿ ದೇವತಾ ಮಹತ್ವಮಂ ಕಂಡೆಲ್ಲಮಂ ಕಡೆಲ್ಲರುಂ ಪೂಜಿಸಲವರವರ್ಗೆ ವರಮಂ ಕೊಟ್ಟುದರಿಂ ಮಲ್ಲಿಕಾರ್ಜುನನೆಂದಲ್ಲಿಂ ಬಳಿ[ಕ] ಸರ್ವರ್ ಪೂಜಿಸಿದರ್. ಆ ಕಾಲದೊಳ್ ಭಾರದ್ವಾಜ ಕಾಶ್ಯಪಾದಿಋಷಿಗಳ್ ಸಕಲ ಶಾಸ್ತ್ರಾದಿಗಳಂ ಕಲ್ತು ದೇವತಾ ಭೇದಂಗಳಂ ವಿಂಗಡಿಸಿ, ಬ್ರಹ್ಮ – ವಿಷ್ಣು – ಮಹೇಶ್ವರರ ಕಥಾಪ್ರಪಂಚಮಂ ಇತಿಹಾಸಂಗಳನನೇಕ ಪ್ರಕಾರವಾಗಿ ರಚಿಸಿ ಅರಸನ ಸಭೆಯೊಳ್ ಪೇಳಿ ಪೂಜ್ಯರಾದರ್. ಅದರೊಳ್ ಬ್ರಹ್ಮ ಸೃಷ್ಟಿಕರ್ತನಾತಂ ಶ್ರೇಷ್ಠನೆಂದರ್. ಕೆಲರ್ ಮಹಾವಿಷ್ಣುವೇ ಕರ್ತ್ರವೆಂದರ್, ಕೆಲಂಬರ್ ಈಶ್ವರಂ ಸರ್ವಶ್ರೇಷ್ಠನೆಂದರ್. ಇಂತು ಸಂವಾದಮಾಗಲೆಲ್ಲರುಂ ಸಮ್ಮತಿಸಿ ಮೂವರಂ ಸಮವೆಂದರ್.

ಆದಿಶಕ್ತಿಮಯಂ ಬೀಜಂ ಬೀಜಶಕ್ತಿಮಯಂ ಶಿವಃ
ಶಿವಶಕ್ತಿಮಯೋ ವಿಷ್ಣುಃ ಸರ್ವಂ ವಿಷ್ಣುಮಯಂ ಜಗತ್
||
ಕಾರ್ಯೋ ವಿಷ್ಣುಃ ಕ್ರಿಯಾಬ್ರಹ್ಮಾ ಕಾರಣಂ ತು ಮಹೇಶ್ವರಃ
ಏಕಮೂರ್ತೆಸ್ತ್ರಯೋ ಭಾಗಾಃ ಬ್ರಹ್ಮಾ ವಿಷ್ಣು – ಮಹೇಶ್ವರಾಃ |

ಎಂದನೇಕತೆರದ ಶಾಸ್ತ್ರಃಗಳಂ ಮಾಡಿದರಲ್ಲಿ ಭಾಟ್ಟ – ಪ್ರಭಾಕರ – ಮೀಮಾಂಸಕ – ವೈಶೇಷಿಕ – ಸೌತ್ರಾಂತಿಕ – ಯೋಗಾಚಾರ – ಮಾಧ್ಯಮಿಕರೆಂಬಿವರ್ಗೆ ಪರಸ್ಪರ ವಿರೋಧಂ ಪುಟ್ಟಿ ತಮ್ಮ ತಮ್ಮ ಶಾಸ್ತ್ರಾದಿಂ ವಾದಮಂ ಮಾಡುತ್ತಿರ್ದರ್. ರಾಮಪ್ರಪಿತಾಮಹನಜ ಮಹಾರಾಜಂ ಅನರಣ್ಯನೆನಿಸಿರ್ದಂ.

ಇದು ಸತ್ಯಪ್ರವಚನ ಕಾಲಪ್ರವರ್ತನದೊಳ್ ಕಿಂಚಿತ್ತನೆತ್ತಿ ವಿಬುಧೇಂದಂ ವಿರಚಿತಮಾದ ರಾಜಾವಲಿ ಕಥಾಸಾರದೊಳ್ ಷಣ್ಮತೊತ್ಪತ್ತಿ ೠೠೠ ವರ್ಣನಂ

ದ್ವಿತೀಯಾಧಿಕಾರಂ