ಇಂದು ನಮ್ಮವ್ವಗ
ನಿಂಬೆಹಣ್ಣಿನ ಪೂಜೆ
ಗಂಧದ ಪೂಜೆ ಉದಯಾಕ         ೧

ಭಾಗ್ಯದ ಸಂಪನ್ನಿ
ಬಾಗಿಲಿಗೆ ಬಂದರ
ತೂಗುವ ಮಂಚ ಇಳಿವ್ಯಾರ         ೨

ಪಟ್ಟಿದಂಚಿನ ಸೀರಿ
ಗಟ್ಟೀಸಿ ಉಡಿ ತುಂಬಿ
ಉಡಿಯಾಗ ಹೂವ ಕಟ್ಟ್ಯಾರಲ್ಲ      ೩

ಉಡಿಯಾಗ ಹೂ ಇಟ್ಟರ
ಕೊಟ್ಟಾಳ್ರಿ ಜಗದಂಬ
ಮಾಲಿ ಹೆಣಿದಾಳ ಹಗಲೆಲ್ಲ ೪