ಈ ಪುಸ್ತಕವನ್ನು ಪ್ರಕಟಿಸಲು ಎಲ್ಲ ರೀತಿಯಲ್ಲೂ ಪ್ರೋತ್ಸಾಹಿಸಿದ ಮಾನ್ಯ ಕುಲಪತಿಗಳಾದ ಡಾ. ಎಂ.ಎಂ. ಕಲಬುರ್ಗಿಯವರಿಗೆ ನಾನು ಕೃತಜ್ಞನಾಗಿದ್ದೇನೆ. ಕ್ಷೇತ್ರಕಾರ್ಯ ಸಂದರ್ಭದಲ್ಲಿ ನನ್ನೊಂದಿಗೆ ಸುತ್ತಾಡಿ ಹಳ್ಳಿಯನ್ನು ಅರ್ಥಮಾಡಿಕೊಳ್ಳುವ ಕೆಲಸವನ್ನು ಸುಲಭಗೊಳಿಸಿದ ನನ್ನ ಸಂಶೋಧನಾ ವಿದ್ಯಾರ್ಥಿ ಸಿದ್ದಪ್ಪನವರಿಗೆ ನಾನು ಆಭಾರಿಯಾಗಿದ್ದೇನೆ. ಈ ಪುಸ್ತಕದ ಹಸ್ತಪ್ರತಿಯನ್ನು ಓದಿ ಸೂಕ್ತ ಸಲಹೆ ನೀಡಿದ ಡಾ. ಸದಾನಂದ, ಡಾ.ಕೆ.ವಿ. ನಾರಾಯಣ, ಡಾ. ಟಿ.ಆರ್. ಚಂದ್ರಶೇಖರ, ಡಾ. ರಹಮತ್, ಡಾ. ಟಿ.ಪಿ. ವಿಜಯ ಮತ್ತು ತಾರಕೇಶ್ವರ ಅವರಿಗೆ ಕೃತಜ್ಞನಾಗಿದ್ದೇನೆ. ಕನ್ನಡ ಭಾಷೆ ತಿದ್ದಿ ಸಹಕರಿಸಿದ ಶ್ರೀಧರ ಪಿಸ್ಸೆ ಮತ್ತು ಶ್ರೀ ಜನಾರ್ಧನ ಅವರಿಗೆ ಕೃತಜ್ಞತೆಗಳು. ನನ್ನ ಕೃತಿಯ ಪ್ರಕಟನೆಯ ಹಿನ್ನೆಲೆಯಲ್ಲಿ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಎಂ.ವಿ.ನಾವಡ, ಪುಟ ವಿನ್ಯಾಸ ಮಾಡಿದ ಶ್ರೀ ಸುಜ್ಞಾನಮೂರ್ತಿ, ಮುಖಪುಟವನ್ನು ರಚಿಸಿದ ಶ್ರೀ ಕೆ.ಕೆ.ಮಕಾಳಿ ಹಾಗೂ ಅಕ್ಷರ ಸಂಯೋಜಿಸಿದ ಋತ್ವಿಕ್ ಕಂಪ್ಯೂಟರ್ಸ್ ಅವರಿಗೆ ನನ್ನ ಕೃತಜ್ಞತೆಗಳು.

* * *

ಈ ಪುಸ್ತಕ ಮರು ಮುದ್ರಣಗೊಳ್ಳಲು ಪ್ರೋತ್ಸಾಹಿಸಿದ ಮಾನ್ಯ ಕುಲಪತಿಗಳಾದ ಡಾ.ಎ. ಮುರಿಗೆಪ್ಪ ಅವರಿಗೂ ಕುಲಸಚಿವರಾದ ಡಾ. ಹಿ.ಚಿ. ಬೋರಲಿಂಗಯ್ಯ ಅವರಿಗೂ ಪುಸ್ತಕ ವಿನ್ಯಾಸ ಮಾಡಿ ಅಚ್ಚುಕಟ್ಟಾಗಿ ಪ್ರಕಟವಾಗಲು ಸಹಕರಿಸಿದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೂ, ಮುಖಪುಟ ರೂಪಿಸಿದ ಶ್ರೀ. ಕೆ.ಕೆ. ಮಕಾಳಿ ಅವರಿಗೂ ಹಾಗೂ ಅಕ್ಷರ ಸಂಯೋಜಿಸಿದ ಯಾಜಿ ಗ್ರಾಫಿಕ್ಸ್‌ನ ಸವಿತಾ ಯಾಜಿ ಅವರಿಗೂ ನನ್ನ ಕೃತಜ್ಞತೆಗಳು.

ಎಂ. ಚಂದ್ರಪೂಜಾರಿ