ಪ್ರಶ್ನೆ : ಭಾರತದಲ್ಲಿ ಇಂಗ್ಲಿಷ್ ಭಾಷೆಯ ಭವಿಷ್ಯ ಹೇಗೆ ?

ಉತ್ತರ   : ನಮ್ಮ ದೇಶದಲ್ಲಿ ಇಂಗ್ಲಿಷ್‌ನ ಭವಿಷ್ಯದ ಬಗ್ಗೆ ನನಗೆ ಸಂದೇಹವಿದೆ. ಇಂಗ್ಲೀಷ ಬುದ್ಧಿ ಜೀವಿಗಳು ಸಂವಹನದ ಭಾಷೆಯಾಗಿರುವುದು ನಿಜ, ಆದರೆ ಬುದ್ಧಿಜೀವಿಗಳಿಂದ ಮಾತ್ರ ಈ ವಿಶಾಲವಾದ ದೇಶ ನಿರ್ಮಾಣವಾಗಿಲ್ಲ. ವಾಸ್ತವವಾಗಿ ನಮ್ಮೆಲ್ಲಾ ಸಾಹಿತ್ಯಗಳೂ ರಾಷ್ಟ್ರೀಯ ಸಾಹಿತ್ಯಗಳೇ. ರಾಷ್ಟ್ರೀಯ ಆಗಬೇಕೆಂದರೆ ಐತಿಹಾಸಿಕವಾಗಬೇಕಾಗಿಲ್ಲ, ಭಾರತದಲ್ಲಿ ಇಂಗ್ಲಿಷ್ ಭಾಷೆಗೆ ಇರುವುದು ಕೇವಲ ಚಾರಿತ್ರಿಕವಾದ ಪ್ರಾಮುಖ್ಯತೆ.

ಪ್ರಶ್ನೆ: ಭಾರತೀಯ ಸಾಹಿತ್ಯದ ಸಾಹಿತ್ಯಕ ರಿವಾಜುಗಳ ಬಗ್ಗೆ ಹೇಳಿ ?

ಉತ್ತರ :          ನಮ್ಮ ಸಾಹಿತ್ಯದಲ್ಲಿ ಇತ್ತೀಚೆಗೆ ವಿದ್ಯಮಾನಗಳ ಬಗ್ಗೆ ಹೇಳಬೇಕೆಂದರೆ “ಆಧುನೀಕೋತ್ತರ” ಎಂದು ಕರೆಯುವ ರೀತಿಗಿಂತ ಕೊಂಚ ಭಿನ್ನವಾದುದು ಎಂಬುವುದು ಸ್ಪಷ್ಟ. ಯೂರೋಪಿನ್ ಸಂದರ್ಭದಲ್ಲಿ “ಆಧುನೀಕೋತ್ತರ”ಎನ್ನುವುದು ಆಧುನಿಕತೆಯ ತಾರ್ಕಿಕವಾದಂಥ ಬೆಳವಣಿಗೆಯಾಗಿದೆ ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿಯೂ ಅದು ಬಂದಿದೆ. ಭಾರತೀಯ ಸಾಹಿತ್ಯದ ಸಾಹಿತ್ಯಕ ನವೀನ ಮಾರ್ಗಗಳು ದೇಶದ ಪ್ರಜ್ಞೆಯಲ್ಲಾದಂಥ ಆಧ್ಯಾತ್ಮಿಕ ತಳಮಳದ ಸಂಕೇತವಾಗಿಯೇನು ಕಾಣಿಸಿಕೊಂಡಿಲ್ಲ. ನಮ್ಮ ಜನ ಆಧ್ಯಾತ್ಮಿಕವಾಗಿ ಬಳಲಿಲ್ಲ; ಅವರ ಪಾಲಿಗೆ ಸಾಹಿತ್ಯ ಎನ್ನುವುದು ಚೈತನ್ಯವನ್ನು ಪುನ್ಯಶ್ಚೇತನಗೊಳಿಸುವುದೇ ಆಗಿದೆ. ಹಾಗಂದ ಮಾತ್ರಕ್ಕೆ ಸಾಹಿತ್ಯದ ಮಾರ್ಗಗಳೇ ಇಲ್ಲ ಎಂದಲ್ಲ. ಸಾಹಿತ್ಯದ ಚಾರಿತ್ರಿಕ ಬೆಳವಣಿಗೆಯನ್ನು ನಾವು ಸ್ವೀಕರಿಸಿದ್ದೇವೆ. ಅಥವಾ ಊಹಿಸಿಕೊಂಡಿದ್ದೇವೆ; ಹಾಗಾಗಿ ಈ ‘ಟ್ರೆಂಡ್’ಗಳು ಒಂದನ್ನೊಂದು ಒಂದಾದ ಮೇಲೊಂದರಂತೆ ಕಾಣಿಸಿಕೊಳ್ಳುತ್ತವೆ.

ಪ್ರಶ್ನೆ : ಭಾರತದಲ್ಲಿ ದಲಿತ ಸಾಹಿತ್ಯದ ಭವಿಷ್ಯವೇನು ?

ಉತ್ತರ : ಭಾರತೀಯ ಸಾಹಿತ್ಯಗಳಲ್ಲಿ ದಲಿತ ಬರಹವು ಬಹಳ ಕುತೂಹಲಕಾರಿಯಾದ ಒಂದು ಅಂಶವಾಗಿದೆ. ದಲಿತರು ಬರೆಯಬೇಕು ಮತ್ತು ತಮ್ಮ ಬರಹಗಳ ಮೂಲಕವೇ ತಮ್ಮ ಅಸ್ಮಿತೆಯನ್ನವರು ಸ್ಥಾಪಿಸಬೇಕು. ಆದರೆ ಇಷ್ಟೇ ಸಾಕಾಗುವುದಿಲ್ಲ. ಇತರರೂ ಕೂಡ ಅವರನ್ನು ಸ್ವೀಕರಿಸಬೇಕು. ಇಲ್ಲದೇ ಹೋದರೆ ಅವರ ಬರಹ ಎಲ್ಲೋ ಒಂದು ಕಡೆ ನಿಂತು ಹೋಗಿ ಬಿಡುವ ಅಪಾಯವಿದೆ. ದಲಿತರ ಸ್ಥಿತಿ ಒಂದೇ ತೆರನಾಗಿರುವುಂಥದಲ್ಲ. ಆ ಸ್ಥಿತಿ ಬದಲಾಗಬೇಕು ಮತ್ತು ಇತರ ಸ್ಥಿತಿವಂತ ಜನಾಂಗಗಳ ಸಮಕ್ಕೆ ಅವರು ಬರಬೇಕು. ಈವತ್ತು ದಲಿತನಿಗೆ ಕೋಪವಿದೆ; ಮತ್ತು ಅವನು ಕೋಪಗೊಳ್ಳುವುದು ಸಹಜವೇ ಆಗಿದೆ. ಅದರೆ ಅವನ ಕೋಪದ ಉದ್ದೇಶವೇನು? ರಾಜಕೀಯ ಅಧಿಕಾರವ ಪಡೆಯುವ ಉದ್ದೇಶವೇ? ಸಂಸ್ಕೃತಿಯನ್ನು ಗಳಿಸುವ ಉದ್ದೇಶವೇ? ನನ್ನ ಪ್ರಕಾರ ಅವರಿಗೆ ಬೇಕಾಗಿರುವುದು ನ್ಯಾಯ ಹಾಗೂ ನ್ಯಾಯಕ್ಕಾಗಿ ಕೇಳಿಸುವ ಕೂಗು, ಮಾನವ ಅನುಕಂಪದ ಕೂಗೂ ಆಗಿದೆ. ರಾಜಕೀಯ ಅಧಿಕಾರಕ್ಕಾಗಿ ದಲಿತರು ಆಸೆ ಪಡೆದಿದ್ದರೆ ಭಕ್ತಿ ಚಳುವಳಿಯ ಕಾಲದಲ್ಲಿ ಸಂತರು ಕೈಗೊಂಡಿದ್ದ ರೀತಿಯಲ್ಲಿ ಅವರು ಸಾಂಸ್ಕೃತಿಕವಾಗಿ ಬಹು ಮಹತ್ವದ ಪಾತ್ರ ವಹಿಸುತ್ತಾರೆ. ದಲಿತ ಸಾಹಿತಿಗಳು ನಿಂತ ನೀರಾಗಲೂ ನಿರಾಕರಿಸುವುದಾದರೆ ಪ್ರಯೋಗಾತ್ಮಕವಾಗಿ ಬರೆಯುವುದನ್ನು ಅವರು ಶುರು ಮಾಡಬೇಕು.

ಪ್ರಶ್ನೆ: ಭಾರತೀಯ ಭಾಷೆಗಳೆಲ್ಲಾ ಸಾಹಿತ್ಯದ ಭವಿಷ್ಯವೇನು ?

ಉತ್ತರ : ಉಪಭೋಗ ಸಂಸ್ಕೃತಿಯ ಹೊಡೆತವಿದ್ದಾಗ್ಯೂ ಸಹ ಭಾರತೀಯ ಭಾಷೆಗಳ ಸಾಹಿತ್ಯದ ಭವಿಷ್ಯ ಉಜ್ವಲವಾಗಿಯೇ ಇದೆ. ನನ್ನ ದೃಷ್ಟಿಯಲ್ಲಿ, ಭಾರತದಲ್ಲಿ ಇಂಗ್ಲೀಷಗೆ ಉತ್ತಮ ಭವಿಷ್ಯವಿದೆಯೆಂದು ತಿಳಿಯಲಾರೆ; ಹಾಗೂ ನಮ್ಮ ಭಾಷೆಗಳನ್ನು ಇಂಗ್ಲಿಷ್ ಭಾಷೆ ನುಂಗಿ ಹಾಕಿಬಿಡುತ್ತದೆ ಎನ್ನುವ ವಾದ ಕೂಡ ಬಾಲಿಶವಾದದ್ದು, ಏಕೆಂದರೆ ಬ್ರೀಟಿಷರ ಆಳ್ವಿಕೆಯ ಕಾಲದಲ್ಲೂ ಅದು ಸಾಧ್ಯವಾಗಲಿಲ್ಲ.

ಪ್ರಶ್ನೆ:    ಪ್ರಸ್ತುತ ಬಿಜೆಪಿ ನಾಯಕತ್ವದ ಸರಕಾರದ ಸಂಸ್ಕೃತಿಯ ನಿಯಮಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ?

ಉತ್ತರ :          ಬಿಜೆಪಿ-ಶಿವಸೇನೆ ಮುಂತಾದ ಪಕ್ಷ ಗಳಿಂದಾಗಿರುವ ಪ್ರಸ್ತುತ ಸರಕಾರದ ಸಾಂಸ್ಕೃತಿಕ ನಿಯಮಗಳು ನಮ್ಮ ದೇಶದ ಸಾಹಿತ್ಯದ ಮತ್ತು ಇತರೆ ಲಲಿತ ಕಲೆಗಳ ಬೆಳವಣಿಗೆಗೆ ಅನುಕೂಲಕರವಾಗಿಲ್ಲ. ಎಲ್ಲಾ ನಿರಂಕುಶ ಸರಕಾರಗಳ ನೀತಿನಿಯಮಗಳಂತೆಯೇ ಈ ಸರಕಾರದ ನೀತಿ ನಿಯಮವೂ ಕೂಡ ಮೂರ್ಖತನದ್ದಾಗಿದೆ, ಹಾಗಾಗಿ ಕಲಾವಿದನಾದವನು ಇಂಥ ವಾತಾವರಣಕ್ಕೆ ಹೆದರಬೇಕಾದ ಪ್ರಮೆಯವೇ ಇಲ್ಲ. ಕಲಾವಿದ ತನ್ನ ಸ್ವಾಯುತ್ತತೆಯನ್ನು ತಾನೇಕಾಪಾಡಿಕೊಳ್ಳಬೇಕೇ ವಿನಃ ರಕ್ಷಣೆಗಾಗಿ ಅಧಿಕಾರದಲ್ಲಿರುವವರ ಕಡೆ ನೋಡಬಾರದು.

ಪ್ರಶ್ನೆ : ನಮ್ಮ ಸಾಹಿತ್ಯ ವಿಮರ್ಶೆ ಬಹುತೇಕ ಪಾಶ್ಚಾತ್ಯ ವಿಮರ್ಶೆಯಿಂದ ಪ್ರಭಾವಿತವಾಗಿದೆ. ಭಾರತದ ಸಾಹಿತ್ಯ ವಿಮರ್ಶೆಯ ಭವಿಷ್ಯವೇನು?

ಉತ್ತರ :          ಭಾರತೀಯ ಭಾಷೆಗಳ ಸಾಹಿತ್ಯ ವಿಮರ್ಶೆ ಈಗ ಸದೃಢವಾಗಿದೆ ಎಂದು ನನ್ನ ನಂಬಿಕೆ. ಆರಂಭಕಾದಲ್ಲಿ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ ಭಾರತೀಯರ ವಿಮರ್ಶೆಯ ಮೇಲೆ ಆಗಿತ್ತೆನ್ನುವುದು ನಿಜ; ಈಗಲೂ ಕೂಡ ನಮ್ಮ ಅನೇಕ ವಿಮರ್ಶಕರು ಪಾಶ್ಚಾತ್ಯ ವಿಮರ್ಶೆಯನ್ನು ಓದುತ್ತಿದ್ದಾರೆ. ಆದರೆ ಅವರಿಗೆ ಈಗ ಅರ್ಥವಾಗಿದೆ. ಪಾಶ್ಚಾತ್ಯಚಿಂತನೆ (ಥಿಯರಿಗಳು) ಹೆಚ್ಚು ಪ್ರಯೋಜನಕಾರಿಯಲ್ಲವೆಂದು. ಹಾಗೆಯೇ ವಿಮರ್ಶೆಯ ಜಬಾಬ್ದಾರಿ ಕೇವಲ ಸಾಹಿತ್ಯ ಕೃತಿಗಳ ಮೌಲ್ಯಮಾಪನಕ್ಕಷ್ಟೇ ಸೀಮಿತವಾಗಿಲ್ಲ. ಸಾಹಿತ್ಯದ ರೂಪ ಮತ್ತು ಅರ್ಥವನ್ನು ತಿಳಿಯುವುದು ವಿಮರ್ಶೆಯ ಕೆಲಸವಾಗಿದೆ ಈಗ.

ಸಂಸ್ಕೃತದ ಸಾಹಿತ್ಯ ಮೀಮಾಂಸೆ ಸಮಗ್ರವೂ, ಪ್ರಮುಖವೂ ಆಗಿರುವುದಾದರೂ ಎಲ್ಲಾ ಸಾಹಿತ್ಯವನ್ನೂ, ವಿಶೇಷವಾಗಿ ಆಧುನಿಕ ಸಾಹಿತ್ಯವನ್ನು ಕುರಿತು ವಿವರಿಸುವುದಿಲ್ಲ. ಚಾರಿತ್ರಿಕವಾದ ಸನ್ನಿವೇಶವೊಂದರಲ್ಲಿ ಜನಿಸಿರುವಂಥ ಆಧುನಿಕ ಸಾಹಿತ್ಯಗಳು ಕೇವಲ ಸಂಸ್ಕೃತ ಮೂಲದ ಅಥವಾ ಪಾಶ್ಚಾತ್ಯದ ಥಿಯರಿಗಿಂತ ಭಿನ್ನವಾದುದನ್ನು ಅಂದರೆ ಇವೆರಡರ ಸಂಯೋಗವನ್ನು ಬೇಡುತ್ತದೆ. ಹಾಗೆಯೇ ನಿರಾಕರಿಸುತ್ತವೆ ಕೂಡ.

ನಮ್ಮ ದೇಶದಲ್ಲಿ ಪ್ರತಿಯೊಂದು ಪ್ರದೇಶಕ್ಕೆ ಅಥವಾ ಗುಂಪಿಗೆ ಪ್ರತ್ಯೇಕವಾದಂಥ ಸೌಂಧರ್ಯ ಮೀಮಾಂಸೆಯಿತ್ತು ಎಂದು ನಾನುಭಾವಿಸಲಾರೆ. ಅನ್ವಯದಲ್ಲಿ ಬದಲಾವಣೆಗೊಂಡಂಥ ಸಂಸ್ಕೃತ ಮೀಮಾಂಸೆಯೇ ಎಲ್ಲ ಕಡೆ ಸ್ವೀಕಾರವಾಗಿರುವುದರಲ್ಲಿ ಅನುಮಾನವಿಲ್ಲ.

* * *