ಪಾರಮಾರ್ಥ ಜ್ಞಾನವಿಲ್ಲದೆ ನೂರುಸಾವಿರ
ದೇಹದೊಳಗತಿ ಘೋರ ತಪದಾಪ್ತಾನಾದರು
ತೋರ ದೈತ್ಯಾನಂದೂ || ಸಾರುತಿದೆ ||

ತನ್ನ ನಿಜವನು ತಿಳಿಯಲಾರದೆ ಭಿನ್ನ ಭಾವನೆ
ಯಿಂದ ಕಲ್ಕಿರ ಮಣ್ಣು ಬೊಂಬೆಗಳನ್ನು ಪೂಜಿಸೆ
ಜನ್ಮ ಬಾಧೆಯು ತೊಲಗದೆಂದು || ಸಾರುತಿದೆ ||

ಜಾತಿವೇದವ ಜೀನಪರಮಾರ ಬೇದವಳಿಯದ
ಮನುಜ ಧರೆಯೊಳು ವೇಧಭಾರವ ಪೊತ್ತು
ತಿರುಂಗುವ ಮದಿಗರ ಮೆರೆಕತ್ತೆಯೆಂದೂ || ಸಾರು ||

ಜಾತಿಗೆ ನೀತಿಗಳಿಲ್ಲ ದಿಂತ್ಮಿಗೆ ಜಾತಿಯನು ಕಲ್ಪಿಸುತ
ಕರ್ಮದ ಮಾತನಾಡುವ ನರನೆ ಕಾಲನ ದೂತ
ಪಾಶಕ್ಕೆ ಬಿದ್ದನೆಂದರೆ || ಸಾರುತಿದೆ ||

ಕಂದ ಮೂಲಗ ತಿಂದು ನದಿಯೊಳು ಮಿಂದು
ಭೂವಿಯರ್ಧನೆ ಪಟೆ ಪಿಟಿ ಎಂದು ಮಂತ್ರದ
ಜಪಿಸಿದರು ಭವ ಬಂದವೆಂದಿರು ತೋರಿಸಿದೆಂದೂ || ಸಾರುತಿದೆ ||

ತತ್ವಮಸಿ ಮತ್ಯರ್ಧದೊಳಗಿನ ತತ್ವವರಿಯದೆ
ಶಂಬು ಪೂಜೆಯ ಹತ್ತುಸಾವಿರ ವರುಷ ದೈವರು
ಮೃತ್ಯುವೆಂದಿಗೂ ತಪ್ಪದೆಂದೂ || ಸಾರುತಿದೆ ||

ತನುವೆ ತಾನೆಂದರಿತು ತನ್ನೊಳು ತನುವಿನ
ಗುಸುರಿದ ಜಾತಿಕರ್ಮವೆಣಿಸಿ ಕರ್ಮಕ್ಕಾ
ಗಿಯಲಿ ಬೇಯಕ ಮನುಜನಿಗೆ ಭವ ತೊಲಗದೆಂದು || ಸಾರುತಿದೆ ||

ನಾನು ನೀನದಿವೆಂಬ ಬಾವಗಳೇನು
ತೋರದ ಸಚ್ಛಿದಾನಂದನುಭವ ಸುಜ್ಞಾನ
ತಳೆದಿರೂ ಮಾನವನು ಪರಮಾತ್ಮನೆಂದೂ || ಸಾರುತಿದೆ ||

ಸತ್ಯ ವಸ್ತುವ ಮರೆತು ವಿದ್ಯೆಯ
ಸತ್ಯವೆಂದುಸುರುತ್ತ ಕರ್ಮಕೆ ಭೃತ್ಯರಾಗಿಹ ಮೂಢ
ಮನುಜರು ಸುತ್ತು ಜನಿಸುತ್ತಿರುವರೆಂದು || ಸಾರುತಿದೆ ||

ನಾರಿ ಒಲಿದೊಡೆ ಪತಿಯ ಮನುಕನುಸಾರಮಾಗಿ
ರತಿಯೊಳು ಮುನಿವೊಡೆ ಮುರಿಸುವಳವನೊಡಲ್ಲನು
ದುನಾರಿಯೇ ಹಿರಿ ಮಾರಿಯೆಂದೂ || ಸಾರುತಿದೆ ||

ಸಾಯುವರು ದುಃಖಕ್ಕಿಯಲ್ಲಿ ಕಡುಬೇಯವನ್ನು
ನೋಡುತ್ತ ಎನಗಿ ಕಾಯ ಸುಸ್ಥಿರವೆಂದು ನಂಬಿದ
ನಾಯಿಗುಂಟೇ ಸಖ್ಯವೆಂದೂ || ಸಾರುತಿದೆ ||

ಬಾದೆಗೊಳಿಸುತ ತನುವ ಸರ್ವ ಗೋದೆಯಿದೆ
ಬಹು ವೃತಂಗಳ ಸಾಧಿಸಿರದರಿಂದಲೇ ಭವ
ಬಾದೆಯೆಂದಿಗು ತೊಲಗದೆಂದೂ || ಸಾರುತಿದೆ ||

ಎಷ್ಟುದಿನ ಧರೆಯೊಳಗೆ ಬಾಳ್ದರೂ ನಷ್ಟವಾಗದೆ
ನಿಲ್ಲದೀ ತನು ಭ್ರಷ್ಟಂದನುರಿತು ತತ್ವದ ಬಿಟ್ಟು
ಬರಿದೆ ಕೆಟ್ಟರೆಂದೂ || ಸಾರುತಿದೆ ||

ಸ್ವರ್ಗ ಭೋಗವ ಬಯಸಿ ನಿರ್ಮಲ
ನಿರ್ಗಣವಪ್ಪಿಯ ವಸ್ತುವನು ಹರಿ
ಭರ್ಗನಾಮದಿ ಪೂಜೆಸುವಗಪ ವರ್ಗವೆಂದಿಸು
ದೊರೆಯದೆಂದೂ || ಸಾರುತಿದೆ ||

ಪರಮ ಸದ್ಗುರು ಶಂಕರಾರ್ಯನ
ಚರಣಕಮಲವ ಪಿಡಿದು ತತ್ವವನರಿತು
ಬ್ರಹ್ಮಾನಂದದೊಳಗಿಹ ನರನೇ ಸಂಘದೀಶನೆಂದೂ || ಸಾರುತಿದೆ ||
ಶೃತಿ ಸಾರುತಿದೆಯಲ್ಲಾ ||