ಭಾರತ ಹಲವು ಭಾಷೆಗಳ ದೇಶ, ಹಲವು ಭಾಷೆಗಳು ಹಾಗೂ ಆಯಾ ಭಾಷೆಗಳಿಂದಾದ ಸಾಹಿತ್ಯ ಸಂಸ್ಕೃತಿಗಳು ಹಲವು. ಇವುಗಳಲ್ಲಿ ಒಂದು ಬಗೆಯ ಸಾಮ್ಯಸೂತ್ರ ಜೊತೆಗೆ ಭಿನ್ನ ಬಗೆಯ ಆಯಾಮಗಳಿರುವುದು ಸಹಜ. ಭಾಷೆ ಶತಮಾನಗಳಿಂದ ತನ್ನನ್ನು ವಿಸ್ತರಿಸಿಕೊಳ್ಳುತ್ತಲೇ, ಬೆಳೆಯುತ್ತಲೂ ಇದೆ. ಒಮ್ಮೊಮ್ಮೆ ಪಲ್ಲಟಗೊಳ್ಳುತ್ತಲೂ ಇದೆ. ಭಾಷೆಯು ಲಿಖಿತ ರೂಪ ಪಡೆದು ಸಾಹಿತ್ಯ ಸೃಜನೆಯಾದರೆ, ಅಲಿಖಿತ ರೂಪ ಪಡೆದು ಮೂಖಿಕ ಆಕರವಾಗುತ್ತದೆ. ಇದು ಇಡೀ ಭಾರತದ ಸ್ವರೂಪ, ಔತ್ತರೇಯ ಮತ್ತು ದಾಕ್ಷಿಣಾತ್ಯ ಎಂಬ ವರ್ಗೀಕರಣದಲ್ಲೂ ಇದು ಇನ್ನೂ ಹತ್ತು ಹಲವು ಆಯಾಮ ಹಾಗೂ ಸೂತ್ರ ರೂಪಗಳನ್ನು ಪಡೆದುಕೊಳ್ಳುತ್ತದೆ.

ದ್ರಾವಿಡ ಎಂಬುದು ಆರ್ಯಕ್ಕೆ ವಿರುದ್ಧವಾದ ಅಥವಾ ಆರ್ಯೇತಕ ಕಲ್ಪನೆಯಾಗಿ ನಮ್ಮ ಮುಂದಿದೆ. ಹಲವಾರು ಇತಿಹಾಸ ತಜ್ಞರು, ಮಾನವಶಾಸ್ತ್ರಜ್ಞರು, ಭಾಷಾತಜ್ಞರು, ಸಾಂಸ್ಕೃತಿಕ ಚಿಂತಕರು ಈ ವಿಚಾರವಾಗಿ ಸಾಕಷ್ಟು ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಸಾಂಸ್ಕೃತಿಕ ಚಿಂತಕರು ಈ ವಿಚಾರವಾಗಿ ಸಾಕಷ್ಟು ಅಭಿಪ್ರಾಯಗಳನ್ನು ಮಂಡಿಸಿದ್ದಾರೆ, ಔತ್ತರೇಯ ಎಂಬುದು ಆರ್ಯಾವರ್ತ, ಆರ್ಯರಿಗೆ ಸಂಬಂಧಿಸಿದ್ದು ಎಂಬ ಅರ್ಥಗಳಿವೆ ಪ್ರಾದೇಶಿಕ ನೆಲೆಯಲ್ಲಿ. ಹಾಗಿರುವಲ್ಲೂ ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮಾದಿಗಳಲ್ಲೂ ಆರ್ಯದ್ರಾವಿಡ ಭಾಷೆ ಸ್ಕೃಸಂಸ್ಕೃತಿಗಳೆರಡೂ ಪ್ರಚಲಿತದಲ್ಲಿವೆ. ಹಾಗಾಗಿಯೇ ಆರ್ಯ-ದ್ರಾವಿಡ ಪರಿಕಲ್ಪನೆಯು ಭೌಗೋಳಿಕ, ಭಾಷಿಕ ಜನಾಂಗೀಯ ಐತಿಹಾಸಿಕ ನೆಲೆಯನ್ನು ಮೀರಿ ನಿಂತ ಚಿಂತನೆಯಾಗಿದೆ.

ದ್ರಾವಿಡ ಅಧ್ಯಯನವೆಂಬ ಪರಿಕಲ್ಪನೆಯು ಕೂಡಾ ಭಾಷಿಕ / ಸಾಂಸ್ಕೃತಿಕ ಎಂಬ ನಿರ್ದಿಷ್ಟ ಚೌಕಟ್ಟಿಗೆ ಸೀಮಿತಗೊಳ್ಳದೇ ಇವುಗಳನ್ನು ಒಳಗೊಂಡ ಒಂದು ವೃತ್ತಲೇಖಾ ಖಂಡವಾಗಿದೆ ಎಂದರೆ ಅತಿಶಯೋಕ್ತಿ ಏನಲ್ಲ. ಈ ಗ್ರಾಫ್‌ನಲ್ಲಿ ಭಾಷಿಕ ಅಧ್ಯಯನದ ಪಾಲು / ಅಂಶ ಹೆಚ್ಚಾಗಿಯೇ ಕಂಡು ಬರುತ್ತದೆಯಾದರೂ ಸಾಹಿತ್ಯ ಸಂಸ್ಕೃತಿ ನೆಲೆಯಲ್ಲಿಯೂ ಈಗಾಗಲೇ ಚರ್ಚೆಗೊಳಗಾಗಿದೆ. ಈ ಚರ್ಚೆಗಳು ಭಾಷಿಕ ಅಧ್ಯಯನಗಳಷ್ಟು ಸಂಖ್ಯೆಯಲ್ಲಿ ಹೆಚ್ಚಿಲ್ಲದ ಕಾರಣದಿಂದಲೂ ಅಥವಾ ಕಾರಣಾಂತರಗಳಿಂದ ಗೌಡವಾಗಿರುವುದು ಗಮನಿಸಬೇಕಾದ ಅಂಶವೆನಿಸಿದೆ, ಭಾಷೆ-ಸಾಹಿತ್ಯ-ಸಂಸ್ಕೃತಿಗಳು ಒಂದಕ್ಕೊಂದು ಪೂರಕ ಪ್ರೇರಕ ಹಾಗಾಗಿಯೇ ಆ ಚರ್ಚೆಗಳನ್ನು ದಾಖಿಲಿಸುವುದು ಅಗತ್ಯ ಕೂಡಾ. ದಕ್ಷಿಣ ಭಾರತ ಆಥವಾ ಡೆಕ್ಕನ್ ಎಂಬ ಪ್ರಾದೇಶಿಕ / ಐತಿಹಾಸಿಕ ಕಲ್ಪನೆಯು ದ್ರಾವಿಡ ಎಂಬರ್ಥದಲ್ಲಿಯೇ ಚರ್ಚೆಯಾಗಿದೆ. ಹೀಗೆ ಹಲವಾರು ಅಂಶಗಳನ್ನೂಳಗೊಂಡ ಈ ಚರ್ಚೆಗಳನ್ನು ಒದಗಿಸಿದ ಚಿಂತಕರನ್ನು ಕುರಿತು ಮಾಹಿತಿಯನ್ನು ಒಂದೆಡೆ ಕೊಡುವ ನೆಲೆಯಲ್ಲಿ ಯೋಜನೆಯೊಂದನ್ನು ರೂಪಿಸಿಕೊಳ್ಳಲಾಗಿದೆ. ದ್ರಾವಿಡ ಚಿಂತಕರು ಅಥವಾ ಅಧ್ಯಯನಕಾರರು ಪರಿಭಾವಿಸಿಕೊಂಡ ಹಲವು ಕಲ್ಪನೆಗಳನ್ನು ವಿಶ್ಲೇಷಿಸುವುದು ಇಲ್ಲಿ ಪ್ರಮುಖ ಆದ್ಯತೆಯಾಗಿದೆ. ಭಾಪಿಕ-ಸಾಹಿತ್ಯಿಕ, ಐತಿಹಾಸಿಕ, ಮಾನವಶಾಸ್ತ್ರೀಯ, ಪುರಾತತ್ವೀಯ, ಭೌಗೋಳಿಕ, ಜಾನಪದ, ಜನಾಂಗೀಯ, ಸಾಂಸ್ಖೃತಿಕ ನೆಲೆಗಳಲ್ಲಿ ನಡೆದಿರುವ ಅಧ್ಯಯನ ವಿಧಾನಗಳನ್ನು ಹಾಗೂ ಅದಕ್ಕಾಗಿ ಅನುಸರಿಸಿದ ಕ್ರಮವನ್ನು ಅಧ್ಯಯನ ಮಾಡುವುದು ನಂತರದ ಉದ್ದೇಶವೆನಿಸಿದೆ.

ದ್ರಾವಿಡ ಎಂಬ ಚರ್ಚೆ ಯಾವಾಗ ಮೊದಲಾಯಿತು ಎಂಬ ವಿಷಯಕ್ಕೆ ಇದಮಿತ್ಥರ ಎಂಬ ಸಾಧ್ಯತೆ ಇರದಿದ್ದರೂ ಮಿಶನರಿಗಳು ಭಾರತಕ್ಕೆ ಬಂದ ನಂತರ ದ್ರಾವಿಡ ಪರಿಕಲ್ಪನೆ ಪುನಾರಚನೆಗೊಂಡು ವಿಸ್ತೃತ ಅಧ್ಯಯನ ಸಾಧ್ಯತೆಯೊಡನೆ ದಾಪುಗಾಲು ಇಟ್ಟಿತು. ೧೭೪೮ರಲ್ಲಿ ಸರಾ ವಿಲಿಯಮ್ ಜೋನ್ಸ್ ‘ರಾಯಲ್ ಎಶಿಯಾಟಿಕ್ ಸೊಸ್ಕೆಟಿ ಆಫ್ ಬಂಗಾಲ’ ಸ್ಥಾಪಿಸಿದ ಮೇಲೆ ಹಲವಾರು ಚಿಂತಕರು ಭಾರತಾಧ್ಯಯನ (Indology) ನೆಲೆಯಲ್ಲಿ ಭಾಷೆ, ಧರ್ಮ, ಜನಾಂಗ, ಸಂಸ್ಕೃತಿ ಇತ್ಯಾದಿಗಳ ವಿಚಾರಗಳನ್ನು ಅಧ್ಯಯನ ಮಾಡಲು ತೊಡಗಿದರು. ನಂತರ ಇದು ದ್ರಾವಿಡ ಕಲ್ಪನೆಗೆ ರಹದಾರಿಯಾಯಿತು ಎನ್ನುವುದು ಸ್ಪಷ್ಟ. ಮ್ಯಾಕ್ಸ್ ಮುಲ್ಲರ್‌ಅವರನ್ನು ಇಲ್ಲಿ ಉದಾಹರಿಸಬಹುದಾಗಿದೆ.

ನ್, ಥರ್ಟ್ಸನ್, ಗ್ರೇಗ್ ಸನ್, ಹಿಸ್ಲೋಪ, ಹಾರ್ಕನೇಸ್, ಶಾರ್ಟ, ರಿವರ್ಸ, ಎಸ್.ಸಿ. ರಾಯ್ ಮೊದಲಾದವರು ಗೊಂಡ, ತೊದ, ಇರುಳಿ ಇತ್ಯಾದಿ ದ್ರಾವಿಡ ಮೂಲನಿವಾಸಿಗಳ ಬಗೆಗೆ ಚಿಂತನೆ ನಡೆಸಿದರು. ನಂತರದ ಘಟ್ಟದಲ್ಲಿ ಎಮಿನೋ, ಬರೋ ಭಟ್ಟಾಚಾರ್ಯ; ಜೂಲ್ಸ್ ಬ್ಲಾಕ್, ಕಾಲ್ಡ್‌ವೆಲ್ ಮೊದಲಾದವರು ಭಾಷಿಕ ನೆಲೆಯಲ್ಲಿ ಅಧ್ಯಯನ ಮಾಡತೊಡಗಿದರು, ಭಾಷಿಕ ಅಧ್ಯಯನವನ್ನು ತೌಲನಿಕ ದ್ರಾವಿಡ ಭಾಷಾ ವಿಜ್ಙಾನವಾಗಿ ಇವರು ಬೆಳೆಸಿದರು. ನಂತರದ ಘಟ್ಟದಲ್ಲಿ ಭ. ಕೃಷ್ಣಮೂರ್ತಿ, ಪಿ.ಎಸ್. ಸುಬ್ರಮಣ್ಯಂ ಕಮಿಲ್ ಜ್ವೆಲೆಬಿಲ್ ಆಯಂಡ್ರೋನೋವ್, ಇಸ್ರೇಲ್, ಮಹಾಪಾತ್ರ ಮೊದಲಾದವರು ಈ ಚರ್ಚೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಜಾನ್ ಮೊದಲಾದವರು ಶಾಸನಗಳನ್ನು, ಹಸ್ತಪ್ರತಿಗಳನ್ನು ಸಂಗ್ರಹಿಸಿದರು. ಹೀಗೆ ಹಲವಾರು ಹಂತಗಳಲ್ಲಿ ಪ್ರಾರಂಭವಾದ ಅಧ್ಯಯನ ಹಲವು ಭಿನ್ನ ಬಗೆಯ ಚಿಂತನೆಗಳನ್ನು ನಮ್ಮ ಮುಂದಿಟ್ಟಿದೆ.

ಕೇವಲ ವಿದೇಶಿ ವಿದ್ವಾಂಸರಷ್ಟೇ ಅಲ್ಲದೆ ಇವರಿಗೆ ಸಹಾಯವಾಗಿ ಕೆಲವೊಮ್ಮೆ ಸ್ವತಂತ್ರ ನೆಲೆಯಾಗಿ, ಇವರ ಜೊತೆಗೆ ದೇಶಿಯ ವಿದ್ವಾಂಸರು ಕೈ ಜೋಡಿಸಿದ್ದಾರೆ. ಮತ್ತು ಮುಂದುವರಿಸುತ್ತಿದ್ದಾರೆ ಕೂಡ. ಈ ಎಲ್ಲಾ ಅಂಶಗಳನ್ನು ಮನಗಂಡು ಈ ಚರ್ಚೆಯ ಕೆಲ ಅಂಶಗಳನ್ನು ಒಂದೆಡೆ ದಾಖಲಿಸುವ ಕೆಲಸವನ್ನು ಇಲ್ಲಿ ನಿರ್ವಹಿಸಲಾಗಿದೆ. ಇದೊಂದು ಮಾಹಿತಿ ಕೋಶವಾಗಿದೆ. ತನ್ಮೂಲಕ ಕೆಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ದ್ರಾಮಿಡ ಚಿಂತನೆಯ ಸ್ಪರೂಪವೇನು? ಇದೊಂಡು ಸೈದ್ಥಾಂತಿಕ ದಾಖಲಾತಿಯೇ? ಭಾಷಿಕತೆ ಇದರ ಮುಲ ನಂತರದಲ್ಲೂ ಈ ಬಗೆಯಲ್ಲಿ ಚಿಂತನೆ ನಡೆಸುವ ಸಾಧ್ಯತೆಯನ್ನು ಹಾಗೂ ಪರಿಪೂರ್ನತ್ಪದೆಡೆಗಿನ ಪ್ರಯತ್ನವನ್ನು ಅಧ್ಯಯನ ಸಾಧ್ಯತೆಯಾಗಿ ಪರಿಗಣಿಸಬಹುದು.

ಮಾಹಿತಿ ಸಂಗ್ರಹದ ನೆಲೆಯಲ್ಲಿ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಮೂಲಕ ವಿರಾಡ್ರೂಪವನ್ನು ಒಂದೆಡೆ ತರಲು ಪ್ರಯತ್ನಿಸಲಾಗಿದೆ. ಈ ವಿರಾಡ್ರೂಪ ಸಂರಚನೆಯಲ್ಲಿ ಹಲವಾರು ಮನಸ್ಸುಗಳ ಕೊಡುಗೆಯಿದೆ. ದೇಶಿ-ವಿದೇಶಿ ನೆಲೆಯಲ್ಲಿ ಹಲವಾರು ಅಲಕ್ಷಿತ ವಿದ್ವಾಂಸರುಗಳ ಅಹರ್ನಿಶಿ ಕೊಡುಗೆಯಿದೆ. ಹಲವರು ಮಾತ್ರ ಪದೆ ಪದೇ ಕಾಣಿಸಿಕೊಳ್ಳುತ್ತಾರಾದರೂ ಕೆಲ ಹೆಸರುಗಳು ನೇಪಥ್ಯಕ್ಕೆ ಸರಿದಿವೆ, ಭಾಷೆಯು ಚರ್ಚೆಯ ಮುಂಚೂಣಿಯಲ್ಲಿದೆ. ಅದರ ಸಮಪಾಲು ಆಂಶಗಳಾದ ಸಾಹಿತ್ಯ ಸಂಸ್ಕೃತಿಗಳು ಒಪ್ಪದದಲ್ಲಿ ಚರ್ಚೆಯಾಗದೇ ಬಿಡಿ ಬಿಡಿಯಾಗಿ ದೊರೆಯುತ್ತವೆ. ಹಾಗಾಗಿ ಪ್ರಾರಂಭದಿಂದ ೧೯೫೦ರವರೆಗಿನ ಚಿಂತನೆಗಳು ಇಡೀ ದಕ್ಷಿಣ ಭಾರತದ ಸರ್ವೇಕ್ಷಣೇಯಾಗಿ ನಿರೂಪಿತವಾಗಿರುವುದು ಇದಕ್ಕೆ ಹಿನ್ನೆಲೆಯಾಗಿರಬಹುದು. ಈ ಅಧ್ಯಯನದಿಂದ ದ್ರಾವಿಡಾಧ್ಯಯನಕಾರರು ಸಂಸ್ಕೃತವನ್ನು ಮತ್ತು ಇತರ ಇಂಡೋ ಆರ್ಯನ್ ಭಾಷೆಗಳನ್ನು ಅಗತ್ಯಪೂರ್ವಕವಾಗಿ ಅಧ್ಯಯನ ಮಾಡಿರುವುದು ಕಂಡುಬರುತ್ತದೆ. ವಿದ್ವಾಂಸರುಗಳು ಕೂಡ ಪೂರ್ವಕವಾಗಿ ಅಧ್ಯಯನ ಮಾಡಿರುವುದು ಕಂಡುಬರುತ್ತದೆ. ವಿದ್ವಾಂಸರುಗಳು ಕೂಡ ಕೇವಲ ದ್ರಾವಿಡ, ಕೇವಲ ಆರ್ಯ ಎನ್ನದೇ ಎರಡೂ ಭಾಷಾಜ್ಙಾನ ಅಗತ್ಯವೆನ್ನುವುದನ್ನು ಪ್ರತಿಪಾದಿಸಿದ್ದಾರೆ, ಹಾಗಾದಲ್ಲಿ ತೌಲನಿಕ ಅಧ್ಯಯನಕ್ಕೆ ಪರಿಪೂರ್ಣತೆ ಒದಗುವುದು ಎಂಬುದು ವಿದ್ವಾಂಸರ ಅಭಿಮತ.

ದ್ರಾವಿಡ ಅಧ್ಯಯನವೆಂಬುದು ಕೇವಲ ಭಾಷೆ, ಜನಾಂಗೀಯ, ಪ್ರಾದೇಶಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕವೆಂಬ ವಿಭಾಗಗಳಿಂದ ಅಧ್ಯಯನ ಮಾಡುವಂತಹ ವಸ್ತು ವಿಷಯವಷ್ಟೇ ಅಲ್ಲದೇ ಇನ್ನೂ ಹಲವು ಹಲವಾರು ಸಾಧ್ಯತೆಗಳೂಡನೆ ಚರ್ಚಿಸಬೇಕಾದ ಪರಿಕಲ್ಪನೆಯಾಗಿದೆ. History, Ethonolgy, Anthropology, Socio-Linguistical ನೆಲೆಯಲ್ಲಿಯೂ ಹಾಗೂ South Asia, South India, Deccan ಹೀಗೆ ಹಲವಾರು ನಿಟ್ಟಿನಿಂದ ದ್ರಾವಿಡಾಧ್ಯಯನ ಸಾಧ್ಯತೆಯನ್ನು ೧೬-೧೭ ನೇ ಶತಮಾನದಿಂದ ಮೊದಲು ಮಿಶನರಿಗಳು, ನಂತರ ೧೭-೧೮ನೇ ಶತಮಾನಗಳಲ್ಲಿ ಬ್ರಿಟೀಷ್ ಅಧಿಕಾರಿಗಳು ವಿದ್ವಾಂಸರುಗಳು, ೧೯-೨೦ ನೇ ಶತಮಾನದಲ್ಲಿ ವಿದ್ಯಾವಂತ ಭಾರತೀಯ ಹಾಗೂ ವಿದೇಶಿಯ ವಿದ್ವಾಂಸರುಗಳು ಶೈಕ್ಷಣಿಕ ನೆಲೆಯಲ್ಲಿ ವಿಸ್ತರಿಸಿದರು. ದ್ರಾವಿಡಾಧ್ಯಯನವೆಂಬ ವಿಭಿನ್ನ ಶಿಸ್ತು ವಸ್ತು ವಿಷಯವನ್ನು ೨ ಹಂತಗಳಲ್ಲಿ ಚರ್ಚಿಸಬಹುದಾಗಿದೆ. ೧೬-೧೭ನೆಯ ಶತಮಾನದಲ್ಲಿ ಮಿಶನರಿಗಳು ಏಕೋಭಾವದಿಂದ ನಡೆಸಿದ ಸ್ಪ- ಅಧ್ಯಯನ, ಅಧ್ಯಾಪನಗಳ ಹಿನ್ನಲೆಯಲ್ಲಿ ಮಾಡಿಬಂದ ಸಂಗ್ರಹಿತ ದಾಖಲೆಗಳು ಅಥವಾ ವಿವರಣಾತ್ಮಕ ನಿರೂಪಣೆಯಲ್ಲಿ ಒಂದು ಹಂತವೆಂದು ಪರಿಗಣಿಸಿದರೆ, ನಂತರ ೧೭-೧೮ ನೆಯ ಶತಮಾನಗಳಲ್ಲಿ ವಸಾಹತು ಹಾಗೂ ನಿರಂಕುಶ ಪ್ರಭುತ್ಪದ ಹಿನ್ನೆಲೆಯಲ್ಲಿ ಬ್ರಿಟೀಷ್ ಆಧಿಪತ್ಯದ ಅಧಿಕಾರಿಗಳಾಗಿ ಸ್ಥಳೀಯ ವಿದ್ವಾಂಸರುಗಳ ಸಹಾಯದೊಂದಿಗೆ ನಡೆಸಿದ ಸಂಗ್ರಹ (ಸಂಪಾದನೆ). ವಿವರಣೆ ಮತ್ತು ವಿಶ್ಲೇಷಣಾತ್ಮಕ ಸ್ಪರೂಪವು ೨ನೇ ಹಂತವೆನಿಸುತ್ತದೆ. ಇಲ್ಲಿ ದೇಶದ ವಿದ್ವಾಂಸರುಗಳು ಸ್ಪಪ್ರಯತ್ನದ ಫಲವು ಅಲ್ಲಲ್ಲಿ ಗೋಚರಿಸುತ್ತದೆಯಾದರೂ ಸಂಖ್ಯಾಬಲದಿಂದ ವಿದೇಶಿ ವಿದ್ವಾಂಸರುಗಳು ಹೆಚ್ಚಿಗೆ ಕಂಡು ಬರುತ್ತಾರೆ. ನಂತರದ ಘಟ್ಟದಲ್ಲಿ ದೇಶಿ ಮತ್ತು ವಿದೇಶಿ ವಿದ್ವಾಂಸರುಗಳಿಬ್ಬರೂ ಶೈಕ್ಷಣಿಕ ನೆಲೆಯಲ್ಲಿ, ಸಂಶೋಧನಾಸಕ್ತರಾಗಿ ದ್ರಾವಿಡ ಅಧ್ಯಯನವನ್ನು ಕೈಗೊಂಡಿರುವುದನ್ನು ಗುರುತಿಸಬಹುದಾಗಿದೆ ಈ ಮೂರು ಹಂತಗಳಲ್ಲೂ ಭಾಷೆ ಅಥವಾ ಭಾಷಿಕ ಅಧ್ಯಯನ ಅತ್ಯುನ್ನತ ಸ್ಥಾನ ಪಡೆದುಕೊಂಡಿರುತ್ತದೆ. ನಂತರದ ಸ್ಥಾನ ಸಾಂಸ್ಕೃತಿಕ ಅಧ್ಯಯನ (ಜನಾಂಗೀಯ, ಮಾನವಶಾಸ್ತ್ರೀಯ, ಚಾರಿತ್ರಿಕ, ದಕ್ಷಿಣ ಭಾರತ ಇತ್ಯಾದಿ) ನಡೆದಿದೆ. ಕೊನೆಯ ಮತ್ತು ಮೂರನೆಯ ಸ್ಥಾನ ಸಾಹಿತ್ಯಿಕ ಅಧ್ಯಯನಕ್ಕೆ ಸೀಮಿತವಾಗಿರುತ್ತದೆ. (ತೊಲಕ್ಕಾಪ್ಪಿಯಂ ಕಂಬರಾಮಾಯಣ, ಶಿಲಿಪ್ಪದಿಗಾರಂ, ಮಣೀಮೇಖಲೈ ಇತ್ಯಾದಿ)

ಇನ್ನು ಭಾಷಿಕ ನೆಲೆಯಿಂದ ನೋಡುವುದಾದಲ್ಲಿ ನಿಘಂಟುಗಳು ವ್ಯಾಕರಣ ಗ್ರಂಥಗಳು ದ್ರಾವಿಡ ಭಾಷೆಗಳ ಅಧ್ಯಯನ (ಲಿಖಿತ ಮತ್ತು ಮೌಖಿಕ ಪರಂಪರೆಗಳನ್ನು ಉಳ್ಳ), ದ್ರಾವಿಡ ಭಾಷೆಗಳೂಳಗಿನ ತೌಲನಿಕ ಅಧ್ಯಯನ. ದ್ರಾವಿಡ ಆರ್ಯ ಭಾಷೆಗಳ ತೌಲನಿಕ ಅಧ್ಯಯನ ಈ ರೀತಿಯಾಗಿ ಹಲವು ವಿಧಗಳನ್ನು ಕಾಣಬಹುದಾಗಿದೆ. ಸಾಂಸ್ಕೃತಿಕ ಅಧ್ಯಯನ ಸಮುದಾಯ ಅಧ್ಯಯನಗಳನ್ನು ಬಳಗೊಂಡಿದೆ, ಸಾಹಿತ್ಯಿಕ ಅಧ್ಯಯನವು ಪ್ರಾಚೀನ ಕಾವ್ಯಗಳ (ಪಂಚ ದ್ರಾವಿಡ ಭಾಷೆಗಳಲ್ಲಿನ) ಸಂಪಾದನೆ ಮತ್ತು ಮರುವ್ಯಾಖ್ಯಾನ, ತೌಲನಿಕ ಸಾಹಿತ್ಯಾಧ್ಯಯನ ಪ್ರಾಚೀನ ಸಾಹಿತ್ಯ ವಿಮರ್ಶೆ ಮತ್ತು ವಸ್ತುನಿಷ್ಠ ವಿವರಗಳನ್ನೊಳಗೊಂಡಿದೆ.

ಪ್ರಸ್ತುತ ಅಧ್ಯಯನವನ್ನು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ನೆಲೆಯಿಂದ ನೋಡಬಹುದಾದರೆ, ಮೂರು ಕಾಲಘಟ್ಟಗಳಲ್ಲೂ ಈ ಮೂರು ರೀತಿಯ ಅಧ್ಯಯನಗಳು ನಡೆದಿವೆ. ಹಾಗಾಗಿ ಯಾವು ಘಟ್ಟದಲ್ಲಿ ಯಾವುದಕ್ಕೆ ಪ್ರಾಶಸ್ತ್ಯ ಎಂಬುದು ಗೊಂದಲವೆನಿಸುತ್ತದೆ. ಇನ್ನು ೧೭-೧೭-೧೯ನೇ ಶತಮಾನದ ಕಾಲಘಟ್ಟಗಳು ಇದಕ್ಕೆ ಸ್ಪಲ್ಪ ಹಿನ್ನಲೆ ಒದಗಿಸಬಹುದು ಎಂಬ ಆಶಯದಿಂದ ಅಧ್ಯಯನಕಾರನ ವರ್ಷದೊಂದಿಗೆ ಹೊಂದಿಸಿ ಕೊಳ್ಳಬಲ್ಲ ಸಾಧ್ಯತೆ ಇದೆ ಎನಿಸುತ್ತದೆ, ಈ ಕಾರಣ ಮೊದಲಿಗೆ ಮಿಶನರಿಗಳು ಕಲಿಯುವ ಮತ್ತು ಕಲಿಸುವ ಆಸಕ್ತಿಯಿಂದ ಟಿಪ್ಪಣಿ ಮಾಡಿಟ್ಟುಕೊಂಡು ಹೊರಬಂದ ಕೃತಿಗಳು ಹಾಗೂ ನಂತರ ಅಧಿಕಾರಿಯಾಗಿ ವಸಾಹತುಗಳ ಸಮಗ್ರ ಸಮೀಕ್ಷೆ ನಡೆಸುವ ಹಿನ್ನಲೆಯಲ್ಲಿ ಮೂಡಿಬಂದ ಬೃಹತ್ ಗಾತ್ರ ಸಂಪುಟಗಳ ವಿವರಣಾತ್ಮಕ ವ್ಯಾಖ್ಯಾನರೂಪ, ಆನಂತರ ವಸಾಹತುಶಾಹಿ ಕೊಡುಗೆಯಾಗಿ ಒದಗಿಬಂದ ಶೈಕ್ಷಣಿಕ ಅವಕಾಶಗಳು ಹಾಗೂ ವಿವಿಧ ಸವಲತ್ತುಗಳ ಹಿನ್ನಲೆಯಲ್ಲಿ ಮೂಡಿಬಂದ ಸಂಶೋಧನಾತ್ಮಕ ಪ್ರಬಂಧ, ಅಧ್ಯಯನ ಹಾಗೂ ಅಧ್ಯಯನಕ್ಕೆ ನಿಶ್ಚಿತ ಚೌಕಟ್ಟನ್ನು ಒದಗಿಸುವ ನಿಟ್ಟಿನಲ್ಲಿ ನಡೆದ ಪ್ರಯತ್ನಗಳು ಕಾಲಘಟ್ಟದ ಮಹಿಮೆಯನ್ನು ಸಮಗ್ರವಾಗಿ ಎತ್ತಿ ತೋರಿಸುತ್ತವೆ. ಆದರೂ ಕೆಲ ಕೊರತೆಗಳ ಹಿನ್ನೆಲೆಯಲ್ಲಿ ಅಕಾರಾದಿಯಾಗಿ ಇವುಗಳನ್ನು ಹೊಂದಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಇದೊಂದು ಚಿಕ್ಕ ಪ್ರಯತ್ನವಾಗಿದ್ದು ಹಲವು ಸಾಧ್ಯತೆಗಳನ್ನು ವಿಸ್ತರಿಸುವ ಆಶಯವೂ ಇದರಲ್ಲಿದೆ. ದ್ರಾವಿಡ ಅಧ್ಯಯನವನ್ನು ದಕ್ಷಿಣ ಭಾರತ, ದ್ರಾವಿಡ ಅಧ್ಯಯನ, ಜನಾಂಗೀಯ ಅಧ್ಯಯನ, ನಿಘಂಟುಕೋಶಗಳ ರಚನೆ ಮಾಡುವಲ್ಲಿ ಹಾಗೂ ಗುಂಡರ್ಟರವರು ರಚಿಸಿದ ಮಲಯಾಳದ ನಿಘಂಟು ಆ ಕಾಲದ ಏಕಭಾಷೆಯ ಅಗತ್ಯವಷ್ಟೇ ಅಲ್ಲದೆ ಇತರ ದ್ರಾವಿಡ ಭಾಷೆಗಳ ತೌಲನಿಕ ಶಬ್ದಗಳ, ಬಳಕೆ ಇತ್ಯಾದಿ ಅಂಶಗಳ ಚರ್ಚೆಯ ಮಹತ್ವದೆನಿಸುತ್ತದೆ, ಪ್ರತಿಯೊಬ್ಬರಿಗೂ ಒಂದಕ್ಕಿಂತ ಹೆಚ್ಚು ಭಾಷೆಗಳ ಅರಿವಿತ್ತು ಎನ್ನುವುದು ಗಮನಾರ್ಹ ಸಂಗತಿಯೇ ಹಾಗಾಗಿ ಈ ಕಾಲಕ್ಕೆ ಪಂಚದ್ರಾವಿಡ ಭಾಷೆಗಳಲ್ಲಿಯೇ ನಿರ್ದಿಷ್ಟ ಭಾಷೆಯ ಬಗೆಗೆ ನಡೆಸಿದ ಒಂದೊಂದು ಪ್ರಯತ್ನವು ದ್ರಾವಿಡ ಅಧ್ಯಯನದ ಮೊದಲ ಹೆಜ್ಜೆಗಳೆನಿಸಿವೆ. ಫ್ರಾಬ್ರಿಕ್ಯೂಸ್ ತಮಿಳು ನಿಘಂಟು, ಬ್ರೌನ್- ತೆಲುಗು ನಿಘಂಟು, ಗುಂಡರ್ಟ- ಮಲಯಾಳಂ ನಿಘಂಟು, ಮ್ಯಾನರ್‍ರವರ- ತುಳು ನಿಘಂಟು, ವ್ಯಾಕರಣ ಕೃತಿಗಳು, ಶಾಲಾ ಪಠ್ಯಪುಸ್ತಕಗಳು ಆಯಾ ಭಾಷೆಯನ್ನು ವಿದ್ವಾಂಸರೋರ್ವರು ಅದರಲ್ಲೂ ವಿದೇಶಿ ವಿದ್ವಾಂಸರು ಮರುವ್ಯಾಖ್ಯಾನಿಸಿದ ಬಗೆಯಾಗಿ ನೋಡಲು ಸಾಧ್ಯವಿದೆ. ನಂತರ ಭಾರತಕ್ಕೆ ಪೂರ್ಣ ಪ್ರಮಾಣದ ಚರಿತ್ರೆಯನ್ನೊದಗಿಸಬೇಕೆಂಬ ಪ್ರಯತ್ನದ ಅಂಗವಾಗಿ ಮೂಡಿಬಂದ ದಕ್ಷಿಣ ಭಾರತದ ಇತಿಹಾಸ, ದೇವಾಲಯ, ಕೈಫಿಯತ್ತು, ಆಕರ ಸಂಗ್ರಹ, ಆಚಾರ-ವಿಚಾರಗಳ ಸಂಪಾದನೆ, ವಿಶ್ಲೇಷಣೆಗಳೆಲ್ಲವೂ ಒಂದರ್ಥದಲ್ಲಿ ದ್ರಾವಿಡ ಪ್ರಾದೇಶಿಕ ಭೌಗೋಳಿಕ ನೆಲೆಯ ಚಿಂತನ- ಮಂಥನಗಳೇ ಆಗಿವೆ, ಅಲ್ಲದೆ ಸರ್ವೆಕ್ಷಣೆಗಳು ಒದಗಿಸಿದ ಭಾಷಿಕ, ಜನಾಂಗೀಯ, ಭೌಗೋಳಿಕ ವಿಷಯಗಳು ಪ್ರಾಚೀನ / ಐತಿಹಾಸಿಕ ವಿಷಯ ಅಧಿಕೃತತೆಗೆ ಆಕರಗಳಾಗಿ ನಿರ್ಮಾಣಗೊಂಡಿವೆ. ದ್ರಾವಿಡ ಅಧ್ಯಯನಕ್ಕಾಗಿ ನಡೆದ ಪ್ರಯತ್ನ ಹಾಗೂ ಬೇರೊಂದು ಆಕರ ನಿರ್ಮಾಣದಲ್ಲಿ ದ್ರಾವಿಡ ಅಧ್ಯಯನ ಸಾಧ್ಯತೆಯನ್ನು ಗುರುತಿಸುವುದು ಅಧ್ಯಯನದ ಸಾಧ್ಯತೆಯಾಗಿದೆ.

ದ್ರಾವಿಡ ಎಂಬ ಶಬ್ದ ಪುರಾಣೇತಿಹಾಸ- ಕಾವ್ಯಗಳಲ್ಲಿ ಅಲ್ಲಲ್ಲಿ ಚರ್ಚೆಯಾಗಿದೆಯಾದರೂ ಅದಕ್ಕೆ ಅದರದೇ ಸೀಮಿತತೆ ಪ್ರಾಪ್ತವಾಗಿದೆ. ಅದರ ವಿರಾಡ್ರೂಪ ದರ್ಶನ ಲಭ್ಯವಾಗುವುದೇ ವಸಾಹತುಶಾಹಿ ಕಾಲಘಟ್ಟದಿಂದ, ೧೬-೧೭ ನೆ ಶತಮಾನದಷ್ಟಕ್ಕಾಗಲೇ ಯುರೋಪಿನಲ್ಲಿ ಪ್ರಾರಂಭವಾಗಿದ್ದ ಶೈಕ್ಷಣಿಕ ಹಿನ್ನಲೆ ಒಂದು ಕಾರಣವಾದರೆ, ಹೊಸ ಸಂಸ್ಕೃತಿಯ ನೆಲೆಗಟ್ಟನ್ನು ಛೇದಿಸಲು ವಸಾಹತುಶಾಹಿಗಳ ಪ್ರಯತ್ನ ಇನ್ನೊಂದು ಪ್ರಬಲ ಕಾರಣವಾಗಿ, ಭಾಷೆ- ಸಂಸ್ಕೃತಿಗಳ ಅಧ್ಯಯನ ಭಾರತದಲ್ಲಿ ಮೊದಲಾಯಿತು. ಸಂಗ್ರಹ ಸಂಪಾದನೆ, ವ್ಯಾಖ್ಯಾನ, ವಿಮರ್ಶೆ, ಪರಿಷ್ಟರಣೆ, ಹೀಗೆ ವಿವಿಧ ಮಾರ್ಗಗಳಲ್ಲಿ ಇದಕ್ಕೆ ಚಾಲನೆ ದೂರೆಯಿತು, ಭಾರತದ ಭಾಷೆಗಳನ್ನು ಅರಿತುಕೊಳ್ಳಲು ಆರಂಭಿಸಿದ ಮ್ಯಾಕ್ಸ್ ಮುಲ್ಲರ್‌ ಆದಿಯಾಗಿ ಮಿಲಿಯಮ್, ಜೋನ್ಸ್ ಮೊದಲಾದವರು ಭಾರತದ ಭಾಷೆಗಳನ್ನು ಅಧ್ಯಯನ ಮಾಡತೊಡಗಿದರು, ಈ ಭಾಷೆಗಳು ಅದರಲ್ಲೂ ಉತ್ತರ ಭಾರತದ ಭಾಷೆಗಳು ಯುರೋಪಿನ್ ಭಾಷಾವರ್ಗಕ್ಕೆ ಸಂಬಂಧಿಸಿವೆಂಬುದನ್ನು ಮೊದಲು ಗುರುತಿಸಿ ಅವುಗಳಿಗೆ ಇಂಡೋ ಆರ್ಯನ ಭಾಷಾವರ್ಗವೆಂದು ಹೆಸರಿಸಿದರು. ಈ ಬಗೆಯ ಸಂಶೋಧನೆ ಮುಂದುವರೆದು ದಕ್ಷಿಣ ಭಾರತಕ್ಕೂ ವಿಸ್ತರಿಸಿಕೊಂಡಿತು ಮ್ಯಾಕ್ಸ್‌ಮುಲ್ಲರ್ ಒಂದು ರೀತಿಯಲ್ಲಿ ಭಾಷಾಧ್ಯಯನಕ್ಕೆ ತಳಹದಿ ರೂಪಿಸಿದರೆನ್ನಬಹುದು. ನಂತರದ ಇಂಡೋಆರ್ಯನ್ ಭಾಷಾಧ್ಯಯನ ಅನೇಕ ಭಾರತಾಧ್ಯಯನಾಸಕ್ತರ ಮೂಲಮಂತ್ರವಾಯಿತು. ನಂತರ ಇದು ಇಡೀ ಭಾರತದ ಭಾಷೆಗಳ ಸರ್ವೇಕ್ಷಣೆಗೆ ದಾರಿಯಾಗಿ ದಕ್ಷಿಣ ಭಾರತದ ಈ ಭಾಷೆಗಳಲ್ಲಿ ಸಹಸಂಬಂಧವಿದೆ ಎಂಬುದನ್ನು ತಿಳಿಸಿಕೊಟ್ಟರು. ಇದು ದ್ರಾವಿಡ ಚಿಂತನೆಗೆ ರಹದಾರಿಯಾಯಿತು. ನಂತರ ಕಾಲ್ದವೆಲ್ ಅದಕ್ಕೂಂದು ವ್ಯವಸ್ಥಿತ ರೂಪಕೊಟ್ಟರು ಇದಕ್ಕಿಂತಲೂ ಪೂರ್ವದಲ್ಲಿ ಶ್ರೀರಂಗಪಟ್ಟಣದ ಕೃಷ್ಣಮಾಚಾರಿಯವರು ಸಂಸ್ಕೃತದಿಂದ ಔತ್ತಿರೀಯ ಭಾಷೆಗಳು ಹುಟ್ಟಿದಂತೆ ತಮಿಳಿನಿಂದ ದಾಕ್ಷಿಣಾತ್ಯ ಭಾಷೆಗಳು ಹುಟ್ಟಿದವು ಎನ್ನುತ್ತಾರೆ. ಹಾಗೂ ಪಂಚದ್ರಾವಿಡ ಭಾಷೆಗಳು ಎಂಬ ಮಾತನ್ನು ತಿಳಿಸುತ್ತಾರೆ. ಹಾಗಾಗಿ Indologists ಗಳ ಅಧ್ಯಯನವೇ ದ್ರಾವಿಡ ಭಾಷಾಧ್ಯಯನ ಮೂಲವಾಯಿತೆನ್ನಬಹುದು ಮ್ಯಾಕ್ಸ್ ಮುಲ್ಲರ್ ದ್ರಾವಿಡ ಶಬ್ದವನ್ನು ತೇಲಿಸಿ ಬಳಸಿದ್ದಾರೆ. ನಂತರದವರು ಅದನ್ನು ಸ್ಥಿರಗೊಳಿಸಿದ್ದಾರೆ, ಈ ಹಿನ್ನಲೆಯಲ್ಲಿ ದ್ರಾವಿಡ ಅಧ್ಯಯನವನ್ನು ವೃತ್ತಲೇಖಾಖಂಡವಾಗಿ ಪರಿಭಾವಿಸಿಕೊಂಡರೆ ಭಾಷಿಕ ಅಧ್ಯಯನ ಹೆಚ್ಚು ಪಾಲು ಪಡೆದುಕೊಳ್ಳುತ್ತದೆ.

ದ್ರಾವಿಡ ಅಧ್ಯಯನ ಒಳಗೊಳ್ಳುವ ಹಲವಾರು ಅಂಶಗಳ ಮೂಲಕ ಅದನ್ನು ಪ್ರತಿಪಾದಿಸಿದವರನ್ನು ನೆನೆಯುವುದು ಅಗತ್ಯದ ಮಾತೆನಿಸುತ್ತದೆ. ದ್ರಾವಿಡಶಾಸ್ತ್ರದ ಪ್ರಾರಂಭದ ಹಂತದ ಚರ್ಚೆಗಳನ್ನು ಒಂದೆಡೆ ಶೇಖರಿಸುವುದು ಇದರಿಂದ ಸಾಧ್ಯವಾಗಿದೆ ಎನ್ನಬಹುದು. ಹಾಗಾಗಿ ವ್ಯಕ್ತಿಯೋರ್ವನ ಜೀವನ ಚರಿತ್ರೆಯನ್ನು ದಾಖಲಿಸುವಷ್ಟೇ ಆ ಮೂಲಕ ವ್ಯಕ್ತಿ ಕೊಡುಗೆ ಕೂಡ ಮಹತ್ವದೆನಿಸುತ್ತದೆ. ಈ ಹಿನ್ನಲೆಯಲ್ಲಿ ದ್ರಾವಿಡ ಅಧ್ಯಯನಕಾರರ ಬಗೆಗಿನ ವೈಯಕ್ತಿಕ ವಿವರಗಳನ್ನು ದ್ರಾವಿಡ ಅಧ್ಯಯನದ ನೆಲೆಯಲ್ಲಿ ಅವರ ಪರಿಶ್ರಮ ಹಾಗೂ ರಚಿತ ಕೃತಿಯ ವಿವರಗಳನ್ನು ಹಾಗೂ ಕಾರ್ಯಕ್ಷೇತ್ರದ ವಿವರಗಳನ್ನು ಒದಗಿಸಲಾಗಿದೆ.

ಒಟ್ಟಿನಲ್ಲಿ ದ್ರಾವಿಡ ಶಬ್ದ ಪಡೆದುಕೊಳ್ಳುವ ಹಲವಾರು ನಿಷ್ಟತ್ತಿಗಳನ್ನು ಗುರುತಿಸುವ ಮೂಲಕ ದ್ರಾವಿಡ ಚಿಂತನೆಗಳನ್ನು, ಚಿಂತಕರ ವಿವರಗಳನ್ನು ಒಂದು ಕಡೆಗೆ ದಾಖಲಿಸುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ. ದ್ರಾವಿಡ ಎಂದರೆ ಭಾಷಿಕ, ದ್ರಾವಿಡ ಎಂದರೆ ಎಲ್ಲೋ ಕೆಲವು ಚಿಂತಕರುಗಳನ್ನು ಮಾತ್ರ ಪರಿಗಣಿಸದೇ ಕೋಶ, ವ್ಯಾಕರಣ ಜನಾಂಗೀಯ ಅಧ್ಯಯನ, ಚಾರಿತ್ರಿಕ ಅಧ್ಯಯನ ಭೌಗೋಳಿಕ ಸರ್ವೇಕ್ಷಣೆ, ಪುರಾತತ್ವೀಯ ಅಧ್ಯಯನ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಅಧ್ಯಯನ ನಡೆಸಿ ದ್ರಾವಿಡ ಚಿಂತನೆಗೊಂದು ಚೌಕಟ್ಟು ಒದಗಿಸಿದ, ಅದರ ವ್ಯಾಪ್ತಿಯನ್ನು ವಿಸ್ತರಿಸಿದ ಚಿಂತಕರನ್ನು, ಚಿಂತನೆಗಳನ್ನು ಒಟ್ಟಿಗೆ ಸೇರಿಸುವ ತನ್ಮೂಲಕ ಆಯಾ ವಸ್ತುವಿಷಯಗಳಿಗೆ ಸಂಬಂಧಿಸಿದಂತೆ ಉದಾ ನಿಘಂಟು ಅದರ ಪೂರ್ವಸ್ಥಿತಿಯಿಂದ ಹಿಡಿದು ನಂತರದ ಕಾಲಘಟ್ಟಗಳಲ್ಲಿ ಬಂದಂತಹ ಹಲವಾರು ನಿಘಂಟುಗಳ, ನಿಘಂಟುಗಳ ಕರ್ತೃಗಳ ವಿವರ ತಿಳಿಯುವ ಮೂಲಕ ಅದಕ್ಕಿರುವ ಚರಿತ್ರೆಯೊಂದನ್ನು ಗುರುತಿಸುವ ಅಂಶವೂ ಇಲ್ಲಿದೆ, ಹಾಗಾಗಿ ಇದು ಅನೇಕ ವಿಷಯಗಳಿಗೆ ಮಾರ್ಗವಾಗಬಹುದು ಎಂಬ ಆಶಯದೊಡನೆ ಇದನ್ನು ಸಿದ್ಧಪಡಿಸಲಾಗಿದೆ.