‘ದ್ರಾವಿಡ ಅಧ್ಯಯನಕಾರರು’ ಎಂಬ ವೈಯಕ್ತಿಕ ಯೋಜನೆಯನ್ನು ಕೈಗೊಳ್ಳಲು ಅನುಮತಿ ನೀಡಿದ ಮಾನ್ಯ ಕುಲಪತಿಗಳಿಗೂ, ಮಾನ್ಯ ಕುಲಸಚಿವರಿಗೂ, ಮಾನ್ಯ ಅಧ್ಯಯನಾಂಗದ ನಿರ್ದೇಶಕರಿಗೂ, ಮಾನ್ಯ ಉಪಕುಲಸಚಿವರು (ಶೈಕ್ಷಣಿಕ) ಮತ್ತು ಭಾಷಾ ನಿಕಾಯದ ಡೀನರಿಗೂ ನನ್ನ ಹೃತ್ವೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ದ್ರಾವಿಡಾಧ್ಯಯನಕಾರರು ಎಂಬ ವಿಷಯ ವಿಭಾಗದಲ್ಲಿ ಆಗಾಗ ಕೇಳಿ ಬರುತ್ತಿತ್ತು. ಆದರೂ ಅಧ್ಯಯನ ಯೋಗ್ಯ ಎಂಬುದು ನನಗೆ ಗೊತ್ತಾಗಿರಲಿಲ್ಲ. ವಿಭಾಗದ ಸಹ ಪ್ರಾಧ್ಯಾಪಕರಾದ ಶ್ರೀ. ಸಿ. ವೆಂಕಟೇಶರವರೊಂದಿಗೆ ಯೋಜನೆಯ ಬಗ್ಗೆ ಮಾತನಾಡುತ್ತಿರುವಾಗ ವಿಭಾಗಕ್ಕೆ ತಕ್ಕುದಾದ ವಿಷಯವೆಂದು ದ್ರಾವಿಡಾಧ್ಯಯನಕಾರರ ಬಗೆಗೆ ಮಾಹಿತಿ ಕೋಶ ಮಾಡಬಹುದೆನ್ನುವ ಉಪಯುಕ್ತ ಸಲಹೆ ನೀಡಿದರು. ನಂತರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಮಾಧವಪೆರಾಚೆ ಹಾಗೂ ಪ್ರಾಧ್ಯಾಪಕರಾದ ಡಾ.ಸುಬ್ಬಣ್ಣ ರೈ ಅವರುಗಳು ಮಾಹಿತಿ ಸಿಗುವ ವಿವರಗಳನ್ನು ತಿಳಿಸಿಕೊಟ್ಟರು. ಒಂದು ಕಡೆಗೆ ದ್ರಾವಿಡ ಅಧ್ಯಯನಕಾರರ ವಿವರವನ್ನು ಸಂಗ್ರಹಿಸಬೇಕೆಂಬ ಹೊಸ ಆಶಯದೊಂದಿಗೆ ಯೋಜನೆಯನ್ನು ಪ್ರಾರಂಭಿಸಿದ ನನಗೆ ದ್ರಾವಿಡ ಅಧ್ಯಯನ ನಡೆದು ಬಂದ ದಾರಿ, ದ್ರಾವಿಡ ಅಧ್ಯಯನ ಒಳಗೊಳ್ಳುವ ವಿಭಿನ್ನ ಶಿಸ್ತುಗಳು ಇತ್ಯಾದಿ ಹೊಸ ಹೊಸ ವಿಷಯಗಳ ವಿವರಗಳನ್ನು ತಿಳಿಯುವಂತಾಯಿತು. ದ್ರಾವಿಡ ಅಧ್ಯಯನಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿಗಳನ್ನು ಒಂದೆಡೆ ಒದಗಿಸಿದ ತೃಪ್ತಿಯಿದೆಯಾದರೂ ಇದೊಂದು ಸಣ್ಣ ಚುಕ್ಕೆ. ಇದಕ್ಕೆ ಸಾವಿರಾರು ಚುಕ್ಕೆಗಳು ಸೇರಬೇಕಾಗಿದೆ. ಈ ಅವಕಾಶ ಹಾಗೂ ಅಗತ್ಯತೆಯನ್ನು ಮನಗಾಣಿಸಿಕೊಟ್ಟ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗಕ್ಕೆ ನಾನು ಚಿರಋಣಿ.

ಇನ್ನು ವಿಷಯ ಸಂಗ್ರಹಕ್ಕೆ ಹೋದಾಗ ಪುಣಾ ಡೆಕ್ಕನ್ ಕಾಲೇಜ್‌ನ ಗ್ರಂಥಾಲಯದವರು, ಬೆಂಗಳೂರಿನ ವಿಥಿಕ್ ಸೊಸೈಟಿಯವರು, ಮಂಗಳೂರಿನ ಥಿಯೊಲಾಜಿಕಲ್ ಗ್ರಂಥಾಲಯದವರು ಹಾಗೂ ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯದವರು ನನಗೆ ಅಪಾರ ನೆರವು ನೀಡಿದ್ದಾರೆ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ನನ್ನೊಂದಿಗಿದ್ದು ನೆರವು ನೀಡಿದ ಪತಿ ಮತ್ತು ಮಗ ಆಶುತೋಷ್‌ಗೆ, ಪ್ರಕಟಣೆಗೊಳಿಸಿದ ಪ್ರಸಾರಾಂಗದ ಸರ್ವರಿಗೂ. ಸಮರ್ಥವಾಗಿ ಅಕ್ಷರ ಸಂಯೋಜಿಸಿಕೊಟ್ಟ ಶ್ರೀ ಬಸವರಾಜ್ ಎಚ್.ಬಿ. ಅವರಿಗೂ, ವಿಭಾಗದ ಶ್ರೀ ಗುರುಮೂರ್ತಿ ಮತ್ತು ಶ್ರೀ ಲಿಂಗಪ್ಪ ಕೆ. ಅವರುಗಳಿಗೂ ನನ್ನ ಅನಂತಾನಂತ ಕೃತಜ್ಞತೆಗಳು.

ಕೃತಿಯ ಪ್ರಕಟಣೆಯ ಬಗೆಗೆ ವಿಶೇಷ ಆಸಕ್ತಿ ವಹಿಸಿದ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ಸಹಾಯಕ ನಿರ್ದೇಶಕರುಗಳಾದ ಶ್ರೀ ಬಿ. ಸುಜ್ಞಾನಮೂರ್ತಿ ಹಾಗೆಯೇ ಮುಖಪುಟ ವಿನ್ಯಾಸ ಮಾಡಿದ ಶ್ರೀ ಕೆ.ಕೆ.ಮಕಾಳಿ ಅವರಿಗೂ ಅಕ್ಷರಸಂಯೋಜನೆ ಮಾಡಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್ ಶ್ರೀಮತಿ ರಶ್ಮಿ ಕೃಪಾಶಂಕರ್‌ಅವರಿಗೂ ಕೃತಜ್ಞತೆಗಳು.

ಡಾ. ಸುಚೇತಾ ನವರತ್ನ