೧೦೧. ಸ್ಟ್ಯಾನ್ಲಿ ಪಿ.ರೈಸ್

ಸ್ಟ್ಯಾನ್ಲಿ. ಪಿ. ರೈಸ್ ಎಂಬುವರು ಉರಿಯಾ ಜನಾಂಗದ ಆಚಾರವಿಚಾರಗಳನ್ನು ಅಧ್ಯಯನ ಮಾಡಿ Occasional Essays on Native South Indian Life’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಗಂಜಾಮ್ ಭಾಗದ ಉರಿಯಾ ಜನರ ಬಗ್ಗೆ ಈ ಪುಸ್ತಕದಲ್ಲಿ ಹೇಳಲಾಗಿದೆ. ಗಂಜಾಮನ ಜನ ತಮ್ಮ ಜ್ಞಾತಿ ಬಾಂಧವರಿಂದ ದೊರವಾಗಿರುವ ಬಗ್ಗೆ ದುಃಖ ಪಡುತ್ತಾರೆ. ದ್ರಾವಿಡಿಯನ್ ವಂಶಕ್ಕೆ ಸೇರಿದರೂ ಅಲ್ಲಿಂದ ಬೇರ್ಪಟ್ಟ ಬಗ್ಗೆ ಖೇದವಿದೆ.

ಉರಿಯಾ ಜನರಿಗೆ ಬೇರೊಂದು ಸಮುದಾಯದಿಂದ ಭಿನ್ನವಾಗಿ ಗುರುತಿಸಲು ಮತ್ತು ತನ್ನ ಜಾತಿ ವರ್ಗದಲ್ಲಿ ಗುರುತಿಸಿಕೊಳ್ಳಲು ಎರಡು ಹೆಸರುಗಳಿವೆ. ಹೆಸರುಗಳು ಸ್ಥಳೀಯ ಭಾಷೆಯಲ್ಲಿ ಇವೆ. ಸಂಸ್ಕೃತ / ಹಿಂದೂ ದೇವತೆಗಳ ಹೆಸರೂ ಇರುವದಿಲ್ಲವಾದರೂ ಇತ್ತೀಚಿನ ದಿನಗಳಲ್ಲಿ ಪರಿಷ್ಕ್ರತ ರೂಪ ಕಾಣುತ್ತೇವೆ.

ಆಚಾರ / ವಿಜಾರಗಳ ಬಗ್ಗೆ ಬರೆಯುತ್ತಾ ಕೆಲ ಅಂಶಗಳನ್ನು ತಿಳಿಸುತ್ತಾರೆ. ಉರಿಯಾ ಜನ ಸೆರೆ- ಕುಡಿಯುವುದಿಲ್ಲ. ಸಭ್ಯ ಮತ್ತು ಕಾನೂನು ಪಾಲಕರು. ಸ್ತ್ರೀಯರ ರಕ್ಷಣೆ ಚೆನ್ನಾಗಿದೆ. ಕೇಸರಿ ಬಣ್ಣದ ಉಡಿಗೆ ತೊಡಿಗೆಯನ್ನು ಸ್ತ್ರೀಯರು ಬಳಸುತ್ತಾರೆ. ಊಟಕ್ಕೆ ಕೂಡುವಾಗ ಬಳಸುವ ಉಡಿಗೆಯನ್ನು ಮನೆಯ ಹೆಣ್ಣು ಮಗಳೇ ಒಗೆಯುತ್ತಾಳೆ. ಧೋಬಿಗಳಿಗೆ ಕೊಡುವುದಿಲ್ಲ. ರೈತ ಸಮುದಾಯದ ಉರಿಯಾ ಸ್ತ್ರೀಯರು ಕೆಲಸಕ್ಕೆ ಹೊರಗೆ ಹೋಗುವುದು ಕಡಿಮೆ.

೧೦೨. ಶೇಖರ್‌ ಎ.ಸಿ.

ಶೇಖರ್‍ರವರು ಇತ್ತೀಚಿನ ದ್ರಾವಿಡ ಭಾಷಾಶಾಸ್ತ್ರಜ್ಞರಾಗಿ ಅದರಲ್ಲೂ ಮಲಯಾಳಂ ಭಾಷೆ ಮತ್ತು ಸಾಹಿತ್ಯ ಕುರಿತು ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಮಲಯಾಳಂ ಭಾಷೆಯ ಬೆಳವಣೆಗೆಯ ವಿವಿಧ ಸ್ತರಗಳನ್ನು ಅಧ್ಯಯನ ಮಾಡಿ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಮಲಯಾಳಂ ಭಾಷೆಯೊಂದಿಗೆ ತಮಿಳು ಭಾಷೆಯನ್ನು ಕರಗತ ಮಾಡಿಕೊಂಡವರು.

ಶೇಖರ ಅವರು An Evolution of Malayam ಕೃತಿಯನ್ನು ರಚಿಸಿದ್ದಾರೆ. ಆಧುನಿಕ ರೀತಿಯಿಂದ ಮಲೆಯಾಳಂ ಭಾಷೆಯನ್ನು ನೋಡುವ ವಿಭಿನ್ನ ದೃಷ್ಟಿಕೋನ ಇದರಲ್ಲಿದೆ. ತಮಿಳು ಮತ್ತು ಮಲೆಯಾಳಂ ಶಾಸನಗಳನ್ನು ಮತ್ತು ಭಾಷಾಧ್ಯಯನವನ್ನು ಅತ್ಯಂತ ಅಸಕ್ತಿಯಿಂದ ನಿರ್ವಹಿಸಿದರು. ಸಿ. ಆರ್‌. ಶಂಕರನ್ ಅವರೊಂದಿಗೆ Tamil Speech sounds as Described by Tolkappiyam and Nannul ಮತ್ತು Middle Dravidian Morpholgy ಎಂಬ ಸಂಶೋಧನಾತ್ಮಕ ಪ್ರಬಂಧವನ್ನು ಸಿ. ಆರ್‍. ಶಂಕರನ್ ಅವರ ಜೊತೆ ಪ್ರಕಟಿಸಿದರು.

೧೦೨. ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯರು

ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯರು ದೇಶಿ ವಿದ್ವಾಂಸರು ಭಾಷಾವಿಜ್ಞಾನದಲ್ಲಿ ಚಿಂತನೆ ನಡೆಸುವ ಕಾಲಕ್ಕಾಗಲೇ ದ್ರಾವಿಡ ಭಾಷೆ ಕುರಿತು ಅಧಿಕೃತವಾಗಿ ಹೇಳಿದ್ದಾರೆ. ಚನ್ನಪಟ್ಟಣದಲ್ಲಿರುವ ಸದರದಾಲತ್ತು ಕೋರ್ಟಿನಲ್ಲಿ ಪ್ಲೀಡರಾಗಿ ಕೆಲಸ ನಿರ್ವಹಿಸುತ್ತಿದ್ದರು. ೧೮೩೪ರಲ್ಲಿ ಹೊಸಗ್ನಡ ನುಡಿಗನ್ನಡಿಯೆಂಬ ಹೊಸಗನ್ನಡ ವ್ಯಾಕರಣವು ಎಂಬ ಕೃತಿ ರಚಿಸಿದ್ದಾರೆ. ಮುನ್ನುಡಿಯಲ್ಲಿ ದ್ರಾವಿಡ ವಿಷಯಕವಾಗಿ ಕೆಲವು ಮಾತುಗಳನ್ನು ಸ್ಟಷ್ಟವಾಗಿ ಬರೆದಿರುತ್ತಾರೆ, ವಿಂಧ್ಯಪರ್ವತಕ್ಕೆ ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೆ ದ್ರಾವಿಡದೇಶವು ಅದರಲ್ಲಿ ಪಾಂಡ್ಯ ಚೋಳ ತೋಂಡಿರವೆಂಬ ಮೂರು ದೇಶಗಳು ಮಾತ್ರ ಶುದ್ಧ ದ್ರಾವಿಡವಾಗಿ ನಿಂತವು ಅವರಲ್ಲಿಯೂ ಅಗಸ್ತ್ಯ ಸೂತ್ರ ತೊಲುಕಾಪ್ಯ ಮೊದಲಾದ ವ್ಯಾಕರಣ ಗ್ರಂಥಗಳು ಇವೆ. ಆ ದ್ರಾವಿಡದೇಶಗಳಿಗೂ ವಿಂಧ್ಯ ಪರ್ವತಕ್ಕೂ ಮಧ್ಯದಲ್ಲಿ ದ್ರಾವಿಡವು ಸಂಸ್ಕೃತವೂ ಸ್ವಭಾವದಿಂದಲೂ ವಿಕಾಶವನ್ನು ಹೊಂದಿ ಕೇರಳ, ತೌಳಿದ ಕರ್ನಾಟಕಾಂದ್ರಗಳೆಂಬ ನಾಲ್ಕು ಭಾಷೆಗಳಾದವು. ಇವು ದ್ರಾವಿಡಾಭಾಷಗಳಾದ್ದರಿಂದಲೇ ಈ ಭಾಷೆಗಳು ದ್ರಾವಿಡವೂ ಸೇರಿ ಪಂಚದ್ರಾವಿಡ ಪ್ರಸಿದ್ಧಿಯನ್ನು ಹೊಂದಿದವು. ದ್ರಾವಿಡದಲ್ಲಿ ವಯವಾರ್ಥವುಳ್ಳ ಪದಗಳು ಈ ನಾಲ್ಕು ಭಾಷೆಯಲ್ಲೂ ಅವ್ಯಯವಾರ್ಥವಿಲ್ಲದೆ ಬಂದಿರುವದ್ದರಿಂದ ಈ ನಾಲ್ಕಕ್ಕೂ ಅದು ಮೂಲಭಾಷೆಯಾಯಿತು. ಆದರೆ ಕೇರಳದಲ್ಲಿ ಸಂಸ್ಕೃತ ದ್ರಾವಿಡಗಳೆರಡೂ ತಮ್ಮ ವಿಭಕ್ತಿಪ್ರತ್ಯಯ ಲೋಪಿಸಿದೆಯೋ ಬಂದು ಸೇರುತ್ತವೆ. ಕೇರಳ ತೌಳಿವ ಭೇದಗಳು ಮತ್ತು ಆ ಭಾಷೆಗಳಲ್ಲಿ ವಿಸ್ತಾರವಾಗಿ ಕಾವ್ಯಗಳೂ ಕಾಣಬರಲಿಲ್ಲ ಎಂಬುದಾಗಿ ದ್ರಾವಿಡ ಸಂಬಂಧಿಸಿದ ವಿಚಾರಗಳನ್ನು ಅಧಿಕೃತವಾಗಿ ತಿಳಿಸುತ್ತಾರೆ. ಆ ಕಾಲಕ್ಕೆ ಎಷ್ಟು ಸ್ಟಷ್ಟವಾಗಿ ದೇಶಿಯ ವಿದ್ವಾಂಸರು ಮಾತನಾಡಿದ ಸಂದರ್ಭ ಎಂದರೆ ಕೃತಿ ಎನ್ನಬಹುದು. ಅಷ್ಟಾಗಿ ಪ್ರಸ್ತಾಪಿತವಾಗದೇ ಇರುವದು ಗಮನಾರ್ಹ ಅಂಶವೆನಿಸಿದೆ.

೧೦೪. ಡಾ. ಹರ್ಮನ್ ಮೊಗ್ಲಿಂಗ್ (೧೮೧೧೧೮೮೧)

ಹರ್ಮನ್ ಮೊವ್‌‌ಗ್ಲಿಂಗ್ ಒಬ್ಬ ಪ್ರಮುಖ ಬಾಸೆಲ್ ಮಿಶನರಿ, ಹರ್ಮನ್ ತಂದೆ ಪ್ರಾಧ್ಯಾಪಕರಾಗಿ, ಡೀನ್ ಹಾಗೂ ಪಾದ್ರಿಯಾಗಿ ಸೇವೆ ಸಲ್ಲಿಸಿದ್ದರು. ಮೊವ್‌‌ಗ್ಲಿಂಗ್ ಕ್ಷೇತ್ರಕಾರ್ಯಾಧ್ಯಯನದ ಮೂಲಕ ಸಂಸ್ಕೃತಿಯ ಆಳ ಅಗಲಗಳನ್ನು ಅರ್ಥೈಸಿಕೊಂಡು ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಕ್ರಿ.ಶ. ೧೮೩೪ರಲ್ಲಿನ ಮಿಶನ್ ವರದಿಯಲ್ಲಿ ದಕ್ಷಿಣ ಮಹಾರಾಷ್ಟ್ರವೆನ್ನುವ ಪ್ರದೇಶವು ಕನ್ನಡ ನಾಡು ಎಂದು ಬರೆದರು. ಕೊಡಗಿನಲ್ಲಿ ಸೇವೆ ಸಲ್ಲಿಸುವಾಗ ಕೊಡಗಿನ ಜನ ಜೀವನ ಮಾಹಿತಿ ಸಂಗ್ರಹಿಸಿ ಕೊಡಗಿನ ಚರಿತ್ರೆ ಹಾಗೂ ಕೂರ್ಗ ಮೆಮೋರೀಸ್ ಎಂಬ ಪುಸ್ತಕಗಳನ್ನು ರಚಿಸಿದರು. ಇದೇ ಮುಂದೆ ದಾಸ್ ಕೂರ್ಗ್‌ಲ್ಯಾಂಡ್ ಎಂದು ಜರ್ಮನಿಗೆ ಭಾಷಾಂತರಗೊಂಡಿದೆ. ಇದರಲ್ಲಿ ಕೊಡಗಿನ ಹಾಡಿನ ವರ್ಣನೆ ಇದೆ.

ಹರ್ಮನ್ ಮೊವೆಗ್ಲಿಂಗ್ ಒಬ್ಬ ಜರ್ಮನ್ ಮಿಶನರಿ ಬಾಸೆಲ್ ಸಂಸ್ಥೆಗಾಗಿ ನಿಯುಕ್ತಿಗೊಂಡಿದ್ದರು. ತಮ್ಮ ಹೆಚ್ಚು ಕಾಲವನ್ನು ಪಶ್ಚಿಮಘಟ್ಟಗಳಲ್ಲಿ ಕಳೆದಿದ್ದರು. ಮಂಗಳೂರು ಸಮಾಚಾರ ಪತ್ರಿಕೆಯಲ್ಲಿ ಕನ್ನಡ ಭಾಷೆಯಲ್ಲಿ ಮೊದಲು ಪ್ರಾರಂಭಿಸಿದರು ೧೮೩೪ರಲ್ಲಿ ಕನ್ನಡದಲ್ಲಿ ರಚಿಸಿದ ಬಿಬ್ಲಿಯೊಥಿಕಾ ಕರ್ನಾಟಕ ಕೃತಿಗೆ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡರು. ಅಲ್ಲದೇ ಹಲವಾರು ಕನ್ನಡ ಕೃತಿಗಳನ್ನು ಜರ್ಮನಿಗೆ ಭಾಷಾಂತರಿಸಿದರು.

ಹರ್ಮನ್ ಮೊವೆಗ್ಲಿಂಗ್ ೧೮೧೧ರಲ್ಲಿ ಜರ್ಮನಿಯ Brackenein ಪಟ್ಟಣದಲ್ಲಿ Badenwuttemberg ರಾಜ್ಯದಲ್ಲಿ ಜನಿಸಿದರು. ದಿವ್ಯಜ್ಞಾನ ಪದವಿಯನ್ನು ವಿಶ್ವವಿದ್ಯಾಲಯ ಟ್ಯೂಬಿಂಗ್ಟೆನ್ ನಲ್ಲಿ ಪೂರೈಸಿ ಬಾಸೆಲ್ ಮಿಶನ್ಗೆ ಸೇರಿದರು. ೧೮೩೬ರಲ್ಲಿ ಬಾಸೆಲ್ ಮಿಶನ್‌‌ಗೆ (ಮಂಗಳೂರಿನ) ಮಿಶನರಿಯಾಗಿ ಬಂದರು ಮಿಶನರಿಯಾಗಿ ಮೊಟ್ಟಮೊದಲು ಪತ್ರಿಕೆಯನ್ನು ಪ್ರಾರಂಭಿಸಿ ಜುಲೈ ೧, ೧೮೪೩ರಲ್ಲಿ ಮೊದಲ ಸಂಚಿಕೆ ಬಿಡುಗಡೆಗೊಳಿಸಿದರು. ನಂತರ ೪ ಪುಟಗಳಲ್ಲಿ ೧೫ ದಿನಗಳಿಗೊಮ್ಮೆ ಪ್ರಕಟವಾಯಿತು. ಇದರಲ್ಲಿ ಮಂಗಳೂರಿನ ಸ್ಥಳೀಯ ಕಾನೂನು ಪರಿಚಯ, ಪುರಂದರದಾಸರ ಸಾಹಿತ್ಯ ಮತ್ತು ನೀತಿ ಕಥೆಗಳು ಇದ್ದವು. ೧೮೪೪ ಮೇ ೧ರಲ್ಲಿ ಬಳ್ಳಾರಿಯಲ್ಲಿ ಕರ್ನಾಟಕ ಸಮಾಚಾರ ಎಂಬುದಾಗಿ ಪರಿವರ್ತನೆಗೊಂಡು ಪ್ರಕಟಗೊಂಡಿತು. ಮತ್ತು ಇವರು ಉತ್ತರ ದಕ್ಷಿಣ ಭೇದವಿಲ್ಲದೆ ಸಮಗ್ರ ಕರ್ನಾಟಕ ಪರಿಭಾಷೆಯನ್ನು ಕರ್ನಾಟಕ ಸಮಾಚಾರ ಮೂಲಕ ಕಂಡುಕೊಂಡರು.

೧೮೪೮ರಲ್ಲಿ ಕನ್ನಡ ಸಾಹಿತ್ಯ ಬಗ್ಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿ ೩೦೦ಕ್ಕೂ ಹೆಚ್ಚು ಗಾದೆಗಳನ್ನು ಸಂಗ್ರಹಿಸಿದರು. ಅಲ್ಲದೆ ೨೦ ಕನ್ನಡ ಕಾವ್ಯಗಳನ್ನು ಸಂಪಾದಿಸಿದರು. (ವೈಗಲ ಅವರೊಂದಿಗೆ) ಅಲ್ಲದೆ ಬಿಬ್ಲಿಯಾಥಿಕಾ ಕರ್ನಾಟಕಾ ಎಂಬ ಬೃಹತ್ ಸಂಪುಟವನ್ನು ರಚಿಸಿದರು. ಕನ್ನಡದ ಪ್ರಾಚೀನ ಕಾವ್ಯಗಳ ಹಸ್ತ ಪ್ರತಿಗಳನ್ನು ಸಂಗ್ರಹಿಸಿ ಅವುಗಳನ್ನು ಸಂಪಾದಿಸಿದರು. ಅವುಗಳೆಂದರೆ ರಾವಣ ದಿಗ್ವಿಜಯ (ಯಕ್ಷಗಾನ ಪ್ರಸಂಗ) ೭೬೦ ಪುಟಗಳ ಬಸವಪುರಾಣ, (ಹರಿಭಕ್ತಿಸಾರ ಕನಕದಾಸ) ಲಕ್ಷ್ಮೀಶನ ಜೈಮಿನಿ ಭಾರತ, ಬಿಬ್ಲಿಯಾಥಿಕಾ ಕರ್ನಾಟಕ ೧೭೦ ದಾಸರ ಪದಗಳ ಸಂಗ್ರಹ ದಾಸರ ಪದಗಳು.

ಕೊಡಗಿನಲ್ಲಿ ವಾಸಿಸುತ್ತಿರುವಾಗ ದಾಸ್ ಕೂರ್ಗ್‌ಲ್ಯಾಂಡ್ ಮತ್ತು ರಾಜೇಂದರ್‍ನಾಮ್ ಎಂಬ ಪುಸ್ತಕಗಳನ್ನು ಸಂಪಾದಿಸಿದರು. ರಾಜೇಂದರ್‍ನಾಮೇಯಲ್ಲಿ ಕನ್ನಡ ಭಾಷೆಯಲ್ಲಿ ಬಳಕೆಯಲ್ಲಿದ್ದ ಸಂಯುಕ್ತ ವ್ಯಂಜನಗಳನ್ನು (double consonats) ಒಂದರ ಮುಂದೊಂದು ಬರುವಂತೆ ಜೋಡಿಸಿದರು. ಮುದ್ರಣ ತ್ವರಿತತೆಗ ಹಾಗೂ ಮಕ್ಕಳಿಗೆ ಓದಲು ಇದರಿಂದ ಸಹಾಯಕವಾಗುವುದೆಂಬುದು ಅವರ ವಾದವಾಗಿತ್ತು. ಒತ್ತಕ್ಷರಗಳಾಗಿ ಎರಡು ಸಾಲಿನಲ್ಲಿ ಅರ್ಧವ್ಯಂಜನ ಬಳಸಿ ಬರೆಯುವ ಹೊಸ ಕ್ರಮ ಜಾರಿಗೆ ತಂದರು. ಕೂರ್ಗ್ ಮೆಮೋರಿಸ್ ಎಂಬ ಪ್ರಾಚೀನ ಐತಿಹಾಸಿಕ ಕೃತಿಯೊಂದನ್ನು ಪ್ರಕಟಿಸಿದರು. ಕೊಡವರ ಸಾಮಾಜಿಕ ಬದುಕು ರೀತಿ ನೀತಿಗಳನ್ನು ಇದರಲ್ಲಿ ಬರೆಯಲಾಗಿದೆ ಜರ್ಮನಿ ಭಾಷೆಯಲ್ಲಿ ಕನಕ ಮತ್ತು ಪುರಂದರದಾಸರ ೨೪ ಕೀರ್ತನೆಗಳನ್ನು ಭಾಷಾಂತರಿಸಿದರು. ಅಲ್ಲದೆ ಕನ್ನಡ ಇಂಗ್ಲಿಷ್ ಶಬ್ದಕೋಶದ ಕನಸನ್ನು ಕಂಡವರಾಗಿದ್ದರು.

೧೦೫. ಹಿರೇಮಠ ಆರ್. ಸಿ (೧೯೨೦)

ಆರ್‌.ಸಿ. ಹಿರೇಮಠರವರು ಕನ್ನಡ ಭಾಷೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪ್ರತಿಮ ವಿದ್ವಾಂಸರು. ಅನೇಕ ಕನ್ನಡ ಪುಸ್ತಕಗಳ ಸಂಪಾದನೆಯೊಂದಿಗೆ ಭಾಷಿಕ ಆಸಕ್ತಿ ಇವರ ಗುಣ. ವೀರಶೈವ, ಜೈನ ಸಾಹಿತ್ಯದಲ್ಲೂ ಇವರ ಪರಿಶ್ರಮವಿದೆ. Structure of Kannada ಮತ್ತು Genesis and Growth of Dravidian ಇವರ ಅತ್ಯಂತ ಮಹತ್ವದ ಕೃತಿಗಳು. ದ್ರಾವಿಡ ಭಾಷಾ ವಿಜ್ಞಾನಕ್ಕೆ ಇವು ಮಹತ್ತರ ಕೊಡುಗೆಗಳು.

ಅವರ The Structure of kannada ಕೃತಿಯಲ್ಲಿ ಡಾ. ಹಿರೇಮಠರವರು ಕೆಲವು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ದ್ರಾವಿಡ ಭಾಷಾ ವರ್ಗದಲ್ಲಿ ಕನ್ನಡ ಅತ್ಯಂತ ಪ್ರಮುಖ ಭಾಷೆಯೆನಿಸಿದೆ. ದಾಕ್ಷಿಣಾತ್ಯ ಭಾಷೆಗಳಲ್ಲಿಯೇ ಅತೀ ಹೆಚ್ಚು ಪ್ರದೇಶವ್ಯಾಪ್ತಿ ಕನ್ನಡಕ್ಕೆ ಅನೇಕ ಉಪಭಾಷೆಗಳಿವೆ. ಉತ್ತರ ಕರ್ನಾಟಕ ಅಥವಾ ಧಾರವಾಡ, ಕಾರಾವಾರ, ಮೈಸೂರಾ ಕನ್ನಡ ಪ್ರಮುಖವಾದುವು. ಕೃತಿ ಧಾರವಾಡ ಕನ್ನಡವನ್ನು ಕುರಿತಾಗಿದೆ. ಧಾರವಾಡ. ಬೆಳಗಾಂ ಬಿಜಾಪುರಗಳಲ್ಲಿ ಇದರ ಬಳಕೆಯಲ್ಲಿದೆ. ಅದರಲ್ಲೂ ಇದು ಆಡುಮಾತು ಕುರಿತಾಗಿದೆ.

೧೦೬. ಹೆನ್ರಿಗಸ್ ಹೆನ್ರಿಕ್ (೧೫೨೦೧೬೦೮)

ಹೆನ್ರಿಕ್ ಜೆಸುಯಿಟ್ ಮಿಶನರಿಯಾಗಿ ಪೋರ್ಚುಗಲ್‌‌ನಿಂದ ೧೫೬೪ರಲ್ಲಿ ಗೋವಾಕ್ಕೆ ಬಂದರು. ನಂತರ ಮಿಶನರಿ ಚಟುವಟಿಕೆ ಹಿನ್ನೆಲೆಯಲ್ಲಿ ತಮಿಳ್ನಾಡಿಗೆ ಕಳುಹಿಸಲಾಯಿತು. ತಮಿಳು ಭಾಷೆಯನ್ನು ಚೆನ್ನಾಗಿ ಕಲಿತುಕೊಂಡ ಹೆನ್ರಿಕ್ ತಮಿಳು ವ್ಯಾಕರಣ ಮತ್ತು ನಿಘಂಟು ಸಿದ್ಧಪಡಿಸಿದರು. Tambiran Vanakkam ಎಂಬ ಕೃತಿ ಪ್ರಥಮವಾಗಿ ಮುದ್ರಿತಗೊಂಡಿತು. ಹೆನ್ರಿಕ್ ಐತಿಹಾಸಿಕ ಮಹತ್ವದ Documenta Indica ಎಂಬ ಕೃತಿಯನ್ನು ಪ್ರಕಟಿಸಿದರು.

೧೦೭. ಹೆರಾಲ್ಡ್ ಸ್ಟೇನ್ಸರ್

ಹೆರಾಲ್ಡ್ ಸ್ಟೇನ್ಸರ್‌ ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ವ್ಯಾಕರಣದ ಬಗ್ಗೆ ಕೃತಿಯೊಂದನ್ನು A Kanaresr Grammar with Graduated exercises ೧೯೧೪ರಲ್ಲಿ ರಚಿಸಿದ್ದಾರೆ.ಕನ್ನಡ ಸಮಾಸಗಳ ಬಗ್ಗೆ ದೀರ್ಘವಾಗಿ ಬರೆಯುತ್ತಾರೆ. ಕನ್ನಡ ಸಮಾಸಗಳು ಕನ್ನಡದ್ದೆ ಎಂಬುದನ್ನು ತಿಳಿಸುತ್ತಾರೆ. ಕನ್ನಡದ ಕ್ರಿಯಾಸಮಾಸ, ಗಮಕ ಸಮಾಸ, ವೀಪ್ಸಾ ಸಮಾಸಗಳು ಸಂಸ್ಕೃತದಲ್ಲಿ ಇಲ್ಲವೆಂಬುದನ್ನು ಪ್ರತಿಪಾದಿಸುತ್ತಾರೆ. ಕ್ರಿಯಾಸಮಾಸ, ಗಮಕ ಸಮಾಸದಲ್ಲಿ ಬೆರಕೆ ಪದಗಳಿಗೆ ಯಾವ ದೋಷವಿಲ್ಲವೆಂಬುದನ್ನು ಸ್ಟಷ್ಟಪಡಿಸುತ್ತಾರೆ.