೧೧. ಇಸ್ರೇಲ್ ಎಂ. (೧೯೩೨).

ಇಸ್ರೇಲ್ ಅವರು ಈ ಶತಮಾನದ ದ್ರಾವಿಡ ಭಾಷಾಶಾಸ್ತ್ರಜ್ಞರಲ್ಲಿ ಪ್ರಮುಖರಾಗಿದ್ಧಾರೆ. ತೌಲನಿಕ ದ್ರಾವಿಡ ಅಧ್ಯಯನ, ತಮಿಳು ಭಾಷಾಶಾಸ್ತ್ರ ಮತ್ತು ಪ್ರಾಚೀನ ತಮಿಳು ಸಾಹಿತ್ಯದಲ್ಲಿ ಸಾಕಷ್ಟು ಅಧ್ಯಯನ ನಡೆಸಿದ್ದಾರೆ.

ಇಸ್ರೇಲ್ ರವರು ೧೯೩೨ರಲ್ಲಿ ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಪಿಎಚ್ ಡಿ. ಪಡೆದ ನಂತರ ಮಧುರೈ ಕಾಮರಾಜ ವಿಶ್ವವಿದ್ಯಾಲಯದಲ್ಲಿ ವೃತ್ತಿ ಜೀವನ ಆರಂಭಿಸಿದರು. ಟಿ.ಬರೋ ಅವರೊಂದಿಗೆ ಕಾರ್ಯನಿರ್ವಹಿಸುತ್ತಲೇ ತೌಲನಿಕ ದ್ರಾವಿಡ ಅಧ್ಯಯನವನ್ನು ಅರಿತುಕೊಂಡ ಇವರು ೧೦೦ ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಮತ್ತು ೪ ಕೃತಿಗಳನ್ನು ಪ್ರಕಟಿಸಿದ್ದಾರೆ. ನಾಲ್ಕು ಕೃತಿಗಳ ವಿವರ ಹೀಗಿದೆ. ‘A Grammar of Kuvi Language’, The Treatment of morphology in Tolkappiyam ಗಳು ಪ್ರಸಿದ್ಧ ಕೃತಿಗಳೆನಿಸಿವೆ.

೧೨. ಉಳ್ಳಾಲ ನರಸಿಂಗರಾವ್

ಉಳ್ಳಾಲದ ನರಸಿಂಗರಾವ ಅವರು ವ್ಯವಹಾರಿಕವಾಗಿ ಬಳಕೆಯಲ್ಲಿರುವ ಪದಗಳನ್ನು ಸಂಗ್ರಹಿಸಿ ಪದಕೋಶವೊಂದನ್ನು ರಚಿಸಿಕೊಟ್ಟಿದ್ದಾರೆ. ೧೮೯೧ ರಲ್ಲಿ ‘ A Kisamwar Glossary of kanarese words’ ಎಂಬುದನ್ನು ಸಮಕಲಿಸಿದ್ದಾರೆ. ಕೃತಿಯಲ್ಲಿ ಜಗತ್ತಿನ ವ್ಯವಹಾರಕ್ಕೆ ಅಗತ್ಯವಿರುವ ಎಲ್ಲ ವ್ಯವಹಾರದ ವಸ್ತು ವಿಷಯಗಳ ನಮೂದೆ ಇಲ್ಲಿದೆ. Accounts and book keeping. ಬಾಂಧವ್ಯ ಮತ್ತು ಸಂಬಂಧಗಳು, ಕೃಷಿ ವಾಸ್ತು ಶಾಸ್ತ್ರ. ವನಸ್ಪತಿಶಾಸ್ತ್ರ. ನ್ಯಾಯಕ್ಕೆ ಸಂಬಂಧಿಸಿದ ಪದಗಳು, ಬಣಗಳು, ವಾಣಿಜ್ಯ ಅಪರಾಧಶಾಸ್ತ್ರ ಮತ್ತು ಅರಕ್ಷಕ ಪಡೆ, ಭೂದಾಖಲೆ, ಔಷಧ, ಪಶುವೈದ್ಯಕೀಯ ಸಂಗೀತ ಭೂವಿಂಗಡನೆ ಕಂದಾಯ, ಮೌಲ್ಯಯುತ ಹರಳುಗಳು, ಅಳತೆ ಮತ್ತು ತೂಕ ಇತ್ಯಾದಿ ಹೀಗೆ ಎಲ್ಲ ವಸ್ತುವಿಷಯಗಳ ಪದಕೋಶವಿದಾಗಿದೆ.

೧೩. ಎಡ್ಗರ್‌ ಥರ್ಸ್ಟನ್

ಎಡ್ಗರ್ ಥರ್ಸ್ಟನ್ ರವರು ಭಾರತದ ಎಲ್ಲ ಸಮುದಾಯಗಳ ಕುರಿತ ಒಂದು ದೀರ್ಘ ಸಮೀಕ್ಷೆ ನಡೆಸಿದರು. ಅದನ್ನು “Castes and Tribes of southern India” ಎಂಬುದಾಗಿ ಸಂಪುಟಗಳಾಗಿ ಪ್ರಕಟಿಸಿದರು. ೧೯೦೧ರಲ್ಲಿ ಭಾರತ ಸರ್ಕಾರದಿಂದ ಇಡೀ ದೇಶವನ್ನು ಸುತ್ತಿ ವ್ಯವಸ್ಥಿತ ಹಾಗೂ ವಿವರವಾದ ಜನಾಂಗೀಯ ಸಮೀಕ್ಷೆ ಮಾಡಲು ಅನುಮತಿ ಸಿಕ್ಕಿತು. ಪ್ರತಿಯೊಂದು ಪ್ರಾಂತ್ಯಕ್ಯೂ ಒಬ್ಬ ಸುಪರಿಡೆಂಟನ್ನು ನಿಯಮಿಸಲಾಯಿತು. ೩೦೦ಕ್ಕಿಂತ ಹೆಚ್ಚು ಜಾತಿ, ಬುಡಕಟ್ಟುಗಳ ೪೦,೦೦೦,೦೦೦ಕ್ಕಿಂತ ಹೆಚ್ಚು ಜನರಿಂದ ಕೂಡಿರುವ ೧,೫೦,೦೦೦ ಸ್ಕ್ವೇರ್‍ಮೈಲಿ ವ್ಯಾಪಿಸಿರುವ ಜನರ ಪದ್ಧತಿ, ರೂಢಿ ನಡವಳಿಕೆಗಳನ್ನು ಪ್ರಾತಿನಿಧಿಕವಾಗಿ ರೂಪಿಸಲಾಗಿದೆ, ಮೈಸೂರು ಪ್ರಾಂತ್ಯ ಮತ್ತು ಬಾಂಬೆ ಪ್ರಾಂತ್ಯದಲ್ಲಿ ಈ ಅಧ್ಯಯನ ಸಮೀಕ್ಷೆ ಆಗಲಿಲ್ಲವಾದರೂ ಅವನ್ನು Anthropometry ಅಧ್ಯಯನಕ್ಕಾಗಿ ಅಳವಡಿಸಲಾಯಿತು

ತಲೆ ಅಳತೆಯ ಮಾದರಿಗಳಲ್ಲಿ ತುಳು, ಕನ್ನಡ, ತೆಲುಗು, ಮಲಿಯಾಳಮ್ ಮತ್ತು ತಮಿಳು ಭಾಷಿಕರ ಸಮಾವೇಶವಿದ್ದಂತೆ ಕೆಲವು ಮರಾಠಾ ಪಂಗಡಗಳ ವಿವರಗಳು ಸೇರಿಕೊಳ್ಳುತ್ತವೆ ಎಂಬ ಅಂಶವನ್ನು ಮನಗಾಣಿಸಲಾಯಿತು. ತಮಿಳು ಜನರು ೧೫,೫೪೩,೩೮೩, ತೆಲಗು – ೧೪,೦೯,೩೦೪ ಮಲಯಾಳಮ್ – ೨೮,೫೪೧,೪೫ ಹಾಗೂ ಕನ್ನಡ- ೧೫,೩೦,೬೮೮ ಒರಿಯಾ-೧೮೦೯೨೨೬, ಹಾಗೆಯೇ ಗದಬಾ, ತುಳು ಕೊರಗ, ಬೆಳ್ಳಾರಿ, ತೋಡ, ಕೋಟಿ, ಬಡಗ ಇರುಳಿ, ಕುರುಂಬ, ಕೂರವ ಜನರ ಜನಾಂಗೀಯ ವಿವರಗಳು ಇಲ್ಲಿವೆ. ಈ ಸಂಪುಟಗಳು ನಿಘಂಟುವಿನ ರೂಪದಲ್ಲಿದ್ದು ವರ್ಣಮಾಲೆಯನುಸಾರ ಜಾತಿ ಮತ್ತು ಬುಡಕಟ್ಟುಗಳ ವಿವರಗಳನ್ನು ಒದಗಿಸಲಾಗಿದೆ.

ಮಾನವ ಶರೀರ ರಚನಾಶಾಸ್ತ್ರ ಕುರಿತು ಅನೇಕ ವಿಷಯಗಳನ್ನು ಊಹೆ ಮಾಡಿದ್ದಾರೆ. ಥರ್ಸ್ಟನ್ ಅವರ ಪ್ರಕಾರ ಮಾನವ ಸಂತತಿಯಲ್ಲಿ ಎರಡು ಪ್ರಾಥಮಿಕ ವಿಭಾಗಗಳಿವೆ ಒಂದು ಗರಿಗರಿಯಾದ / ಉಣ್ಣೆಯ ರೀತಿ ಇರುವ ಕೂದಲುಳ್ಳವರು ನೀಗ್ರೋಸ್ ಎರಡನೆಯದಾಗಿ ನಯವಾದ ಕೂದಲುಳ್ಳುಳ್ಳ ದ್ರಾವಿಡ ಜನರು ಗಾಢತ್ವಚೆ, ಕೂದಲು ಮತ್ತು ಕಣ್ಣು ಸುರುಳಿಯಾದ ಕಪ್ಪು ಕೂದಲು, ಉದ್ದನೆಯ ಕಪಾಲ, ವಿಕಸಿತವಾದ ಹುಬ್ಬು ಇವೆಲ್ಲ ಆಸ್ಟ್ರೇಲಿಯಾ ಮತ್ತು ಡೆಕ್ಕನ್ ಭಾಗದ ಜನರ ಲಕ್ಷಣಗಳು, ವಿಲಿಯಮ್ ಟರ್ನ್‌ಋðð ಆಸ್ಟ್ರೇಲಿಯನ್ ಮತ್ತು ದ್ರಾವಿಡಿಯನ್ ಲಕ್ಷಣಗಳೆರಡೂ ಒಂದೇ ಎಂದರೆ ಥರ್ಸ್ಟನ್ ಬೇರೆ ಎಂದಿದ್ದಾರೆ. ಒಟ್ಟಿನಲ್ಲಿ ದ್ರಾವಿಡವನ್ನು ಜನಾಂಗೀಯ ನೆಲೆಯಲ್ಲಿ ಸರ್ವೇಕ್ಷಣೆ ನಡೆಸಿದ ಏಕೈಕ ವ್ಯಕ್ತಿ. ಅವರಷ್ಟು ದೀರ್ಘವಾಗಿ ಮತ್ತು ಎಲ್ಲ ವಿಧದಲ್ಲೂ ಚರ್ಚೆ ನಡೆಸಿದ ವ್ಯಕ್ತಿ ವಿರಳ ಎಂತಲೇ ಹೇಳಬಹುದಾಗಿದೆ. Castes & Tribes ಬಹುತೇಕ ಎಲ್ಲ ನೆಲೆಗಳಲ್ಲೂ ಆಕರವಾಗಿ ನಿಲ್ಲಬಲ್ಲ ಏಕೈಕ ಗ್ರಂಥವೆನಿಸಿದೆ.

೧೪. ಎಮ್. ವಿನ್ ಸ್ಲೋವ್

ವಿನ್ ಸ್ಲೋವ್ ತಮಿಳು ನಿಘಂಟುಕಾರರಲ್ಲಿ ತಮ್ಮದೇ ಆದ ಅನನ್ಯತೆ ಹೊಂದಿದ್ದಾರೆ. ಆಧುನಿಕ ತಮಿಳಿನ ಆಧಿಕೃತ ನಿಘಂಟು ‘ತಮಿಳು ಲೆಕ್ಸಿಕಾನ್’ ಗೆ ವಿನೆಸ್ಲೋ ನಿಘಂಟಿನ ಆಧಾರವಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಹೀಗೆ ತಮಿಳು ನಿಘಂಟು ಚರಿತ್ರೆಯಲ್ಲಿ ಹೊಸತನ ವ್ಯಕ್ತಪಡಿಸಿದ ಇವರ ಕ್ರಮ ಗ್ರಾಹ್ಯವೆನಿಸಿದೆ. ೧೮೬೨ರಲ್ಲಿ ಯೇ ಇವರ ನಿಘಂಟು ಹೊಸ ರೂಪದೊಂದಿಗೆ ರಚಿತಗೊಂಡಿದೆ.

ಹೊಸ ತಮಿಳು ನಿಘಂಟಿನ ಅವಶ್ಯಕತೆಯನ್ನು ಹಾಗೂ ಅದಕ್ಕಾಗಿ ಶ್ರಮಿಸಿದ ಹಲವರನ್ನು ಸ್ಮರಿಸುತ್ತಾರೆ ವಿನ್ ಸ್ಲೋವ್. ವಿದ್ಯಾರ್ಥಿಗಳಿಗೆ ಕಾವ್ಯ ಮತ್ತು ಗದ್ಯವನ್ನು ಓದುವ ಸಾಮರ್ಥ್ಯಕ್ಕೆ ನಿಘಂಟು ಆಗತ್ಯವಿದೆ. ಡಾ. ರಾಟ್ಲರ್‍ರವರ ನಿಘಂಟು ಲಭ್ಯವಿದ್ದು ಅದು ತೀರ ಪ್ರಾಥಮಿಕ ಅಲ್ಪಶಬ್ದ ಭಂಡಾರದಿಂದ ಕೂಡಿದುದಾಗಿದೆ. ಇದರಲ್ಲಿ ಜ್ಯೋತಿಷ್ಯಶಾಸ್ತ್ರ ಪೌರಾಣಿಕ ಮತ್ತು ವೈಜ್ಞಾನಿಕ ಪದಗಳು ತೀರ ಪರಿಮಿತವಾಗಿವೆ. ಇದು ಶ್ರೀಲಂಕಾ ತಮಿಳಿಗಿಂತ, ದೇಶಿಯ ತಮಿಳಿಗೆ ಹೊಂದುತ್ತವೆ ಎಂಬುದಾಗಿ ತಿಳಿಸುತ್ತಾರೆ.

ಇನ್ನು ರೆವರೆಂಡ್ ವಿನ್ ಸ್ಲೋವ್ ಅವರ ‘ತಮಿಳು -ಇಂಗ್ಲಿಷ್ ನಿಘಂಟು ೬೬೦೦೦ ಪದಗಳಿಂದ ಕೂಡಿದೆ. ಇದರಲ್ಲಿ ಅನೇಕ ಹೊಸ ಅಂಶಗಳು ಅಡಕವಾಗಿವೆ. ಅವುಗಳೆಂದರೆ ಕ್ರಿಯಾಧಾತುಗಳನ್ನು ಮೂಲ ಅನೇಕ ಹೊಸ ಅಂಶಗಳು ಅಡಕವಾಗಿವೆ. ಅವುಗಳೆಂದರೆ ಕ್ರಿಯಾಧಾತುಗಳನ್ನು ಮೂಲ ಆಕರವಾಗಿಸಿ ನಂತರ ಕಾಲ, ಪ್ರತ್ಯಯ, ಉತ್ತಮ ಪರುಷ ಪ್ರತ್ಯಯ, ಕೃದಂತ ಪ್ರತ್ಯಯಗಳನ್ನು ಅದರ ತದ್ಧಿತ ಸಂಬಂಧದೊಂದಿಗೆ ಉದಾಹರಣೆ ಸಹಿತ ವಿವರಿಸಲಾಗಿದೆ. ಸಂಸ್ಕೃತಿ ಪದಗಳನ್ನು ನಕ್ಷತ್ರ ಚಿಹ್ನೆಯಿಂದ ಗುರುತಿಸಲಾಗೆದೆ. ಇವುಗಳಿಗೆ ಇಂಗ್ಲಿಷ್ ಮತ್ತು ತಮಿಳು ಭಾಷೆಯಲ್ಲಿ ಅರ್ಥವಿವರಿಸಲಾಗಿದೆ.

೧೫. ಎಡ್ವರ್ಡ್ ಪಿ. ರೈಸ್.

ಎಡ್ವರ್ಡ್ ಪಿ.ರೈಸ್ ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತಾಗಿ ಅಧ್ಯಯನ ಮಾಡಿದ್ದಾರೆ. ಕನ್ನಡ ಕುರಿತು ಸಾಕಷ್ಟು ಅಧ್ಯಯನ ನಡೆಸಿದ ಹಿನ್ನೆಲೆಯಲ್ಲಿ ‘A History of kanarese literature’ ಕೃತಿ ರಚಿಸಿದ್ದಾರೆ, ಇದು ಕಲ್ಕತ್ತಾ ಅಸೋಸಿಯೇಷನ್ ಪ್ರೆಸ್ ನಿಂದ ೧೯೧೫ ರಲ್ಲಿ ಪ್ರಕಟಗೊಂಡಿದೆ.

ಕೃತಿಯಲ್ಲಿ ಮೊದಲು ಕನ್ನಡ ಭಾಷೆ ಮತ್ತು ನಾಡು ದ್ರಾವಿಡ, ಭಾಷೆಗಳು ಕನ್ನಡನಾಡು, ಕನ್ನಡ ಭಾಷೆ ವರ್ಣಮಾಲೆ ಮತ್ತು ಶೈಲಿ, ಐತಿಹಾಸಿಕ ಬದಲಾವಣೆಗಳು, ನೆರೆ ಭಾಷೆಗಳ ಪ್ರಭಾವಗಳ ಚರ್ಚೆಯಿದೆ. ನಂತರ ಕನ್ನಡ ಸಾಹಿತ್ಯದ ಪ್ರಾಚೀನತೆ, ಕ್ರಿ.ಶ. ೧೧೯೦ರವರೆಗಿನ ಜೈನರ ಕಾಲ, ೧೧೬೦ರ ನಂತರ ವೀರಶೈವಯುಗ, ೧೧೬೦ರಿಂದ ೧೬೦೦ರವರೆಗೆನ ವೀರಶೈವ ಕವಿಗಳು. ೧೧೬೦ರ ನಂತರ ವೀರಶೈವಯುಗ, ೧೧೬೦ರಿಂದ ೧೬೦೦ ರವರೆಗಿನ ವೈಷ್ಣವ ಸಾಹಿತ್ಯ ೧೭-೧೮ನೇ ಶತಮಾನದ ಕನ್ನಡ ನಾಡಿನ ಸಂಸ್ಕೃತ ಕವಿಗಳು ಎಂಬುದಾಗಿ ೧೨ ಅಧ್ಯಾಯಗಳಲ್ಲಿ ಕನ್ನಡ ನಾಡು ನುಡಿಯ ಸಮಗ್ರ ಚಿತ್ರಣವನ್ನು ಇಲ್ಲಿ ಕಾಣಬಹುದಾಗಿದೆ.

ಇನ್ನು ಕೆಲವು ಅಂಶಗಳನ್ನು ತಿಳಿಸುತ್ತಾರೆ ಪಶ್ಚಿಮ ಕರಾವಳಿಯಾದ ಗೋವಾದಿಂದ ಪ್ರಾರಂಭವಾಗಿ ಗಂಗೆಯ ರಾಜಮಹಲ್‌ಗೆ ಎಳೆದ ರೇಖೆಯ ರೇಖೆಯು ಉತ್ತರದ ಆರ್ಯನ್ ಭಾಷೆ ವರ್ಗವನ್ನು ಮತ್ತು ದಕ್ಷಿಣದ ದ್ರಾವಿಡಿಯನ್ ಭಾಷೆಗಳ ವಿಭಜನಾ ರೇಖೆ ಆಗಿವೆ, ೮ ಎನ್ನುವ ಅಕ್ಷರ ೧೨ ನೇ ಶತಮಾನ ಮತ್ತು ರ ಎನ್ನುವ ಅಕ್ಷರ ೧೮ನೇ ಶತಮಾನದಲ್ಲಿ ಕೈಬಿಟ್ಟು ಹೋಗಿವೆ. ಇವು ಸಂಸ್ಕೃತದಲ್ಲಿ ಸಿಗುವುದಿಲ್ಲ ಎಂಬುದನ್ನು ತಿಳಿಸುತ್ತಾರೆ.

 

೧೬. . ಮ್ಯಾನರ್‍

ಮ್ಯಾನರ್‍ತುಳು ಭಾಷೆಯ ನಿಘಂಟು ರಚನಕಾರರು ಕೆಮರೆರ್‌ ಮತ್ತು ರೆ ಅಮ್ಮನ್ ಅವರಿಂದ ಮೊದಲು ೧೮೨೮ ರಲ್ಲಿ ಪ್ರಾರಂಭಗೊಂಡ ಈ ನಿಘಂಟು ಪ್ರಕ್ತಿಯೆ ೧೮೮೮ ರಲ್ಲಿ ಮ್ಯಾನರ್‍ಅವರಿಂದ ಪರಿಪೂರ್ಣತೆ ಪಡೆಯಿತು.

ರೆವರೆಂಟ್ ಕೆಮ್ಮರರು ೨೦೦ ತುಳು ಶಬ್ದ ಸಂಗ್ರಹ ಮಾಡಿಕೊಟ್ಟಿರು. ನಂತರ ಮ್ಯಾನರ್‍ ಕೆಲವು ಸ್ಥಳೀಯರ ನೆರವಿನೊಂದಿಗೆ ೧೮,೦೦೦ ಶಬ್ದಗಳಿಂದ ತುಳು ಇಂಗ್ಲಿಷ್ ಕೋಶವನ್ನು ಸಿದ್ಧಪಡಿಸಿದರು. ಮಂಗಳೂರಿನ ಸುತ್ತಲಿನ ಪರಿಸರದ ತುಳು ಭಾಷಾ ರೂಪಗಳಿಗೆ ಕನ್ನಡ ರೋಮನ್ ಲಿಪಿಯಲ್ಲಿ ಬರೆದರು. ತುಳು ಉಚ್ಚಾರಣೆಗಾಗಿ ಕೆಲವು ವಿಶೇಷ ಚಿಹ್ನೆಗಳನ್ನು ಬಳಸಿದ್ದಾರೆ. ಯಾವುದೇ ಭಾಷಾ ವೈಜ್ಞಾನಿಕ ತಳಹದಿ ಇಲ್ಲದೆ ತುಳು ಭಾಷಾ ವ್ಯತ್ಯಾಸಗಳನ್ನು ಗಮನಿಸದೆ, ವಿವಿಧ ವೃತ್ತಿ ಸಂಪ್ರದಾಯ ಇತ್ಯಾದಿ ಪದಗಳ ಬಳಕೆ ಇಲ್ಲದೇ ಮೂಡಿ ಬಂದಿರುವ ಕೋಶ ಎಂಬ ಕೂರತೆ ಎಂಬ ಕೂರತೆ ಇದ್ದರೂ ಆ ಕಾಲದ ಮಹತ್ವದ ಮತ್ತು ಆದಿಕೋಶವೆಂದು ಇದು ಪ್ರಸಿದ್ದಿ ಪಡೆದಿದೆ. ಕೆಲ ಸಂಸ್ಕೃತ ಶಬ್ದಗಳು ನುಸುಳಿವೆ.

ಇಷ್ಟಾದರೂ ಕೋಶ ತನ್ನದೇ ಕೆಲವು ವಿಶಿಷ್ಟತೆಗಳೊಂದಿಗೆ ರಚಿತಗೊಂಡಿದೆ ಎಂಬದನ್ನು ಗಮನಿಸಬಹುದಾಗಿದೆ. ಸುಮಾರು ನೂರು ವರ್ಷಗಳ ಕೆಳಗೆ ಪ್ರಕಟವಾದ ಈ ನಿಘಂಟಿನಲ್ಲಿ ಭಾಷಾ ವೈಜ್ಞಾನಿಕ ರೀತಿಯಲ್ಲಿ ಶಬ್ದಗಳನ್ನು ಕನ್ನಡ ಲಿಪಿಯಲ್ಲೂ ಡಯಾಕ್ರಿಟಿಕಲ್ ಚಿಹ್ನೆಗಳನ್ನು ಹಾಕಿದ ರೋಮನ್ ಲಿಪಿಯಲ್ಲೂ ಬರೆದು, ಮಾರ್ಧನ್ಯ ವ್ಯಂಜನಕ್ಕೆ ಟ, ಡ, ಣ, ಘ ಇತ್ಯಾದಿಗಳನ್ನು ತುಳು ಭಾಷೆಯ; ವಿಶಿಷ್ಟ ಎ ಕಾರಕ್ಕೆ ಪ್ರತ್ಯೇಕ ಚಿಹ್ಹೆಗಳನ್ನು ನೀಡಿದ್ದಾರೆ. ಸರಿಯಾದ ಉಚ್ಚಾರಣೆಗೆ ಸಹಾಯ ಮಾಡಿ ಶಬ್ದಗಳ ವ್ಯಾಕರಣ ರೂಪ, ಬೇರೆ ಬೇರೆ ಅರ್ಥ ವಿಶೇಷ, ಸಾಧಿತ ಶಬ್ದಗಳು ಇತ್ಯಾದಿಗಳಿಗೆಲ್ಲ ಇಂಗ್ಲಿಷ್ ಅರ್ಥಗಳನ್ನು ನೀಡಲಾಗಿದೆ. ತುಳುನಾಡಿನ ಸುಮಾರು ಆರುನೂರು ವಿಶಿಷ್ಟ ಗಿಡಮರಗಳ ಹೆಸರುಗಳೂ ಅದರಲ್ಲಿವೆ. ಕ್ರೈಸ್ತ ಮಿಶನರಿಗಳ ವಿದ್ವತ್ ಕೆಲಸಕ್ಕೆ ಇದು ಸಾಕ್ಷಿಯಾಗಿದೆ. ಇದರಲ್ಲಿ ಹದಿನೆಂಟು ಸಾವಿರ ಶಬ್ದಗಳಿವೆ.

ಕೋಶ ಕಾರ್ಯದ ಜೊತೆಗೆ ಪಾಡ್ದನಗಳನ್ನು ಸಂಗ್ರಹಿಸಿ ೧೮೮೬ರಲ್ಲಿ ಪಾಡ್ದನೊಳು ಎಂಬ ಕೃತಿಯನ್ನು ಪ್ರಕಟಿಸಿದರು, ಇದು ತುಳು ಜನಪದ ಮಹಾಕಾವ್ಯಗಳ ಮೊದಲ ಸಂಗ್ರಹ ಕೃತಿಯೆನಿಸಿದೆ. ಈ ಸಂಕಲನದಲ್ಲಿ ೨೧ ತುಳು ಪಾಡ್ದನಗಳಿವೆ. ನೂರು ವರ್ಷಗಳ ಹಿಂದೆಯೇ ಇಷ್ಟೊಂದು ಸಮರ್ಪಕವಾದ ಬೃಹತ್ತಾದ ಪಾಡ್ದನಗಳಿವೆ. ನೂರು ವರ್ಷಗಳ ಹಿಂದೆಯೇ ಇಷ್ಟೊಂದು ಸಮರ್ಪಕವಾದ ಬೃಹತ್ತಾದ ಪಾಡ್ದನ ಸಂಪುಟ ಪ್ರಕಟಗೊಂಡಿದ ಪಾಡ್ಡನಗಳ ಬಗ್ಗೆ ಅಧ್ಯಯನ ಮಾಡುವವರಿಗೆ ಮ್ಯಾನರ್ ಅವರ ಪಾಡ್ಡನೊಳು ಕೃತಿ ಬಂದು ಮಹತ್ವದ ಆಕರವಾಗಿದೆ. ಈ ಕೃತಿಯಲ್ಲಿ ಆರಂಭದ ಇಪ್ಪತ್ತು ಪಾಡ್ಡನಗಳು ತುಳು ಭಾಷೆಯಲ್ಲಿ ಕನ್ನಡ ಲಿಪಿಯಲ್ಲಿ ಇವೆ. ಪಿಲಿಚಾಮುಂಡಿ ಎಂಬ ಕೊನೆಯ ಪಾಡ್ಡನ ಇಂಗ್ಲಿಷ್ ಭಾಷೆಯಲ್ಲಿದೆ. ಈ ಕೃತಿಯಲ್ಲಿ ಇರುವ ಎಲ್ಲ ಇಪ್ಪತ್ತೊಂದು ಪಾಡ್ಡನಗಳು ತುಳುನಾಡಿನ ಪ್ರಮುಖ ಭೂತಗಳಿಗೆ ಸಂಬಂಧಪಟ್ಟಿವೆ. ಈ ಕೃತಿಯಲ್ಲಿರುವ ಪಾಡ್ದನಗಳು ೧. ಬೊಬ್ಬರ್ಯೆ ೨. ಪಂಜುರ್ಲಿ ೩. ಪಂಜುರ್ಲಿ ೪. ಜುಮಾದಿ ೫ ಸಾರಾಳ ಜುಮಾದಿ ೬. ಜಾರಂತಾಯೆ. ೭ ಕಾಂತುನೆಕ್ರಿಭೂತ ೮.ಮಗ್ರಂವಾಯೆ ೯. ಕಲ್ಕುಡ ೧೦. ಕಲ್ಲುರ್ಟಿ ೧೧. ಪೊಸಮಹರಾಯ ೧೨. ಪೊಸಮಹರಾಯ ೧೩. ಅತ್ತಾವರದೆಯ್ಯೊಂಗುಳು ೧೪. ಮುಡದೇರ ಕಾಳಭೈರವೆ ೧೫. ತೊಡಕಿನಾರ್‍ ೧೬. ದೇಯಿಬೈದೈದಿ ೧೭. ಕೋಟಿ ಚಿಂಣಯೆ ೧೮. ಕೋಟಿ ಚನ್ನಯ ೧೯. ಧೂಮಾವತಿ ಭೂತ ೨೦. ಪಂಜುರ್ಲಿ ೨೧. ಪಿಂಚಾಮುಂಡಿ.

`On Bhutas’ ಎಂದು ಬರ್ನೆಲರ ಕೃತಿಯಲ್ಲಿ ಕೆನರಾ ಜಿಲ್ಲೆಯ ಬಗ್ಗೆ ಬರೆಯುತ್ತಾರೆ ತುಳುನಾಡು ಎನ್ನುವುದು ಭೂತಗಳಿಗಾಗಿಯೇ ಇರುವ ನಾಡು ಎಂಬ ನಂಬಿಕೆಯ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಅದರಲ್ಲಿ ಅರೆದೈವಿಕ ಮತ್ತು ಅರೆಮಾನುಷ ಸಂಕರವನ್ನು ಗುರುತಿಸುತ್ತಾರೆ. ಇದೇ ರೀತಿ ಜಾತಿ, ಸ್ಥಾನ ಯೋಗ್ಯತೆ ಇವುಗಳ ಮೇಲಿಂದ ಭೂತಗಳ ವರ್ಗಿಕರಣ ಹೇಗೆ ಆಗುತ್ತದೆ ಎಂಬುದನ್ನು ಬರೆಯುತ್ತಾರೆ. ಭೂತಗಳ ದ್ರಾವಿಡಿಯನ್ ಪದ್ಧತಿಯ ಪೂಜಾ ವಿಧಾನ ಕೂಡ ಹೇಳುತ್ತಾರೆ ಅದೇ ರೀತಿ ಕೆಲವು ಕೋಡಿ ಬಿದ್ಯಾ ಮತ್ತು ಚೆನ್ನಯ ಬಿದ್ಯಾ ಎಂಬ ವ್ಯಕ್ತಿಗಳು ಸತ್ತ ಮೇಲೆ ಬಿದೇರ್ಲು ಭೂತಗಳಾಗಿ ಮಾನ್ಯತೆ ಪಡೆದದ್ದನ್ನು ಹೇಳುತ್ತಾರೆ. ಬ್ರಾಹ್ಮಣರಷ್ಟೇ ಪೂಜಿಸುವ ಬ್ರಹ್ಮರಾಕ್ಷಸ ಇತರರು ಪೂಜಿಸುವ ಕುಂಬೆರ್ಯಿ ತರಹದ ಭೂತಗಳು, ಗರುಡಿ ಭೂತಗಳು ಸಮಾಜದ ಎಲ್ಲ ಶೂದ್ರ ವರ್ಗದವರಿಂದ ಮಾನ್ಯತೆ ಪಡೆಯುವ ಕುರಿತು ಇಲ್ಲಿ ವಿವರಿಸುತ್ತಾರೆ.

೧೭. ಎಲ್.ವಿ. ರಾಮಸ್ವಾಮಿ ಅಯ್ಯರ್

ದ್ರಾವಿಡ ಭಾಷಾ ವಿಜ್ಞಾನದಲ್ಲಿ ಭಾರತೀಯರ ಹೆಸರು ಬೆರಳಣಿಕೆಯಷ್ಟು. ಅದರಲ್ಲಿ ಅಯ್ಯರ್‍ಅವರದ್ದು ಪ್ರಮುಖ ಹೆಸರು. ದ್ರಾವಿಡ ಭಾಷಾ ತೌಲಿನಿಕ ವ್ಯಾಕಣದಲ್ಲಿ ಅವರು ಸಾಕಷ್ಟು ಅಧ್ಯ ಯನ ಮಾಡಿದ್‌ಅರೆ. ದ್ರಾವಿಡ ಭಾಷಾಕ್ಷೇತ್ರದಲ್ಲಿ ಯಾವುದೇ ಹೆಚ್ಚಿನ ಸಂಶೋಧನೆ ನಡೆಯದಿರುವ ಕಾಲಕ್ಕೆ ಒಬ್ಬರೇ ಸಾಕಷ್ಟು ಕೆಲಸ ನಿರ್ವಹಿಸಿದ್ದಾರೆ. ತೌಲನಿಕ ದ್ರಾವಿಡ, ತಮಿಳು, ಮಲಯಾಳಂ ಆಸಕ್ತಿ ಕ್ಷೇತ್ರಗಳಾಗಿದ್ದವು.

ಅಯ್ಯರ್‍ರವರು ಕೇರಳದ ತ್ರಿಚೂರ್‍ನಲ್ಲಿ ಜನಿಸಿದರು. ತಮ್ಮ ವಿದ್ಯಾಭ್ಯಾಸದ ನಂತರ ಎರ್‍ನಾಕುಲಂ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ಭಾಷಾಶಾಸ್ತ್ರ ಬೋಧಿಸುತ್ತಿದ್ದರು. ಅಯ್ಯರ್‍ ಅವರ ಮಾತೃಭಾಷೆ ತಮಿಳು ಅವರು ಜೀವನ ನಡೆಸಿದ್ದು ಮಲೆಯಾಳೆ ಭಾಷಿಕ ಪ್ರದೇಶದಲ್ಲಿ. ತಮಿಳು, ಮಲಯಾಳಂಗಳಷ್ಟೇ ಅಲ್ಲದೆ ಕನ್ನಡ, ತೆಲುಗು, ಇಂಗ್ಲಿಷ್, ಫ್ರೆಂಚ್, ಪಾರ್ಸಿ, ಹಿಂದಿ ಬಂಗಾಳಿ ಭಾಷೆಗಳಲ್ಲೂ ಪರಿಣಿತರಾಗಿ ಬಹುಭಾಷಾ ವಿಶಾರದವರಾಗಿದ್ದರು, ದ್ರಾವಿಡ ಶಬ್ದ ನಿಷ್ಟತ್ತಿಯಿಂದ ಹಿಡಿದು ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣದವರೆಗು ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಇದಕ್ಕೆ ದ್ರಾವಿಡ ಭಾಷಾ ನಿಷ್ಟತ್ತಿಕೋಶ ಉತ್ತಮ ಉದಾಹರಣೆ, ತಮಿಳುಭಾಷೆಯ, ಧ್ವನಿವ್ಯವಸ್ಥೆ, ಮಲಯಾಳಮ್ ಆಕೃತಿಮಾಗಳ ವಿಕಾಸ, ದ್ರಾವಿಡದಲ್ಲಿ ಪ್ರೇರಣಾರ್ಥಕ ಕ್ರಿಯಾಪದಗಳು ದ್ರಾವಿಡ ಭಾಷೆಗಳಲ್ಲಿ ಕೆಲವು ಪ್ರತ್ಯಯಗಳು, ತಮಿಳು ಮಲಯಾಳಮ್ ವ್ಯರ್ತ್ಯಸ್ಪರ್ಶಧ್ವನಿಗಳು ಎಂಬ ಲೇಖನಗಳನ್ನು, ಲೀಲಾತಿಲಕವೆಂಬ ಮಲಯಾಳಮ್ ವ್ಯಾಕರಣಕ್ಕೆ ವ್ಯಾಖ್ಯಾನವನ್ನು ರಚಿಸಿದ್ದಾರೆ.

ಅವರು ಮಲಯಾಳಂ ಭಾಷಾಜ್ಞಾನವನ್ನು ಕುರಿತು ೩ ಕೃತಿಗಳನ್ನು ರಚಿಸಿದ್ದಾರೆ. ‘A Brief account of Malayalam phaneties’,`Grammar in Lilatilakam’and ‘The Evolution of malayalam Morpholgy’ ಮಲಯಾಳಂನ ಸ್ಥಿತ್ಯಂತರಗಳನ್ನು ಕೃತಿ ದಾಖಲಿಸುತ್ತದೆ. ಇವರು ದ್ರಾವಿಡ ಭಾಷೆಗಳಾದ ತುಳು, ಕೊಡಗು, ಕುಯಿಸಿ ಗೊಂಡಿ, ಬ್ರಾಹು ಈ ಮತ್ತು ಕುರುಖ್ ಗಳ ಬಗೆಗೆ ಸಾಕಷ್ಟು ಲೇಖನ ಬರೆದಿದ್ದಾರೆ ದ್ರಾವಿಡ ಭಾಷೆಗಳ ಕ್ರಿಯಾಪದ ವ್ಯವಸ್ಥೆ ಕುರಿತು ಅಧ್ಯಯನನಡೆಸಿ The kurukh verb, The kuiverb, the morphology, the old the Tamil verbs, Tulu Verbs ಬಗೆಗೆ ಉಪಯುಕ್ತ ಮಾಹಿತಿ ಬದಗಿಸಿದ್ದಾರೆ. ಅವರ ಸಂಶೋಧನಾತ್ಮಕ ಬರಹಗಳು ‘Dravidiansandhi’,`Dravidian Naminal inflection.’post positions in Dravidian and the k- dialects of Dravidian’ ದ್ರಾವಿಡ ಭಾಷಾವಿಜ್ಞಾನಕ್ಕೆ ಗಮನಾರ್ಹ ಕೊಡುಗೆಗಳೆನಿಸಿವೆ.

ಮಲಯಾಳಮ್ ಭಾಷೆಯ ಶಿಕ್ಷಾಶಾಸ್ತ್ರ, ಸ್ವನಮೀಮಾಂಸೆ ಪದರಚನೆ. ವಿಕಾಸಕ್ರಮಗಳನ್ನು ವಿಶ್ಲೇಷಿಸಿದ್ದಾರೆ. ಮಲಯಾಳ ಭಾಷಾ ಪ್ರಾಚೀನ ಕೃತಿಗೆ ಸಂಬಂಧಿತ ಭಾಷಾ ಸಾಮಗ್ರಿಯನ್ನು ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ತಮಿಳು, ಕನ್ನಡ, ತೆಲುಗು ಭಾಷೆಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಅವುಗಳೆಂದರೆ ‘ದಕ್ಷಿಣ ಹಿಂದೂ ದೇಶಿದ ದ್ರಾವಿಡ ಭಾಷೆಗಳಲ್ಲಿ ಸಾದೃಶ್ಯ ವೈದೃಶ್ಯಗಳು, “ತಿರುವಳ್ಳುವರ್‌ರವರ ಕುರುಳ್ ಭಾಷೆ’ ಕಲಿತ್ತೂಗೈ ಭಾಷೆ’ ನಾಮಪ್ರತ್ಯಯಗಳು’ ಎಂಬ ಲೇಖನಗಳು ಸಂಶೋಧನೆ ಫಲವಾಗಿ ಮೂಡಿಬಂದಿವೆ.

೧೮. ಎಡ್ವಿನ್ ಎಚ್. ಟಟಲ್. (೧೯೨೯)

ದ್ರಾವಿಡ ಭಾಷಾ ವಿಜ್ಞಾನ ಕ್ಷೇತ್ರದಲ್ಲಿ ಎಡ್ವಿನ್ ಆವರದು ದ್ರಾವಿಡ ಅಧ್ಯಯನ ಪ್ರಾರಂಭದ ಘಟ್ಟದಲ್ಲಿ ಅಚ್ಚಳಿಯದ ಹೆಸರು, ಭಾಷಾಶಾಸ್ತ್ರದಲ್ಲಿಯೇ ಹೆಚ್ಚು ಸಂಶೋಧನೆ ನಡೆಯುತ್ತಿರುವ ಕಾಲಕ್ಕೆ ದ್ರಾವಿಡ ಕ್ಷೇತ್ರಕ್ಕೆ ತಮ್ಮ ಅಧ್ಯಯನ ಮೀಸಲಿಟ್ಟ ಇವರು ದ್ರಾವಿಡ ಭಾಷ ಕ್ಷೇತ್ರದ ಹರಹನ್ನು ವಿಸ್ತರಿಸಿದವರು. ದ್ರಾವಿಡ ಭಾಷೆಗಳ ಜೊತೆಗೆ ರೋಮನ್ಸ್ ಭಾಷೆ, ಉಪಭಾಷೆಗಳನ್ನು ಅಧ್ಯಯನ ನಡೆಸಿದರು. ಅಮೇರಿಕದ ಭಾಷಾ ವಿಜ್ಞಾನಗಳಲ್ಲಿ ದ್ರಾವಿಡಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟ ಇವರು ಸೆಪ್ಟಂಬರ್ ೩೨. ೧೮೭೯ ರಂದು ಜನಿಸಿದರು. ಉನ್ನತ ಶಿಕ್ಷಣವನ್ನು ಯೇಲ್ ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡರು. ೧೯೧೫ರಿಂದ ದ್ರಾವಿಡ ಭಾಷಾ ಕುರಿತು ಚಿಂತನೆ ಪ್ರಾರಂಭಿಸಿದ ಇವರು ದ್ರಾವಿಡೇತರ ಭಾಷೆಗಳ ಬಗೆಗೂ ಹಲವಾರು ಲೇಖನಗಳನ್ನು ರಚಿಸಿದ್ದಾರೆ. ಹಲವಾರು ಕೃತಿಗಳಿಗೆ ಉಪಯುಕ್ತ ವಿಮರ್ಶೆ ಮಾಡಿದ್ದಾರೆ. ಅಮೇರಿಕಾದ Language ಮತ್ತು Journal of American Oriental Society ಪತ್ರಿಕೆಗಳಿಗೆ ಅನೇಕ ಕೃತಿಗಳ ವಿಮರ್ಶೆ ಹಾಗೂ ಸಂಶೋಧನಾತ್ಮಕ ಲೇಖನ ಬರೆದಿದ್ದಾರೆ.

ಅಮೇರಿಕದ ಭಾಷಾ ವಿಜ್ಞಾನಿಗಳಲ್ಲಿ ದ್ರಾವಿಡ ಭಾಷೆಗಳ ಅಭ್ಯಾಸಕ್ಕೆ ಹೆಚ್ಚು ಬರಹವನ್ನು ಮೀಸಲಿಟ್ಟವರಲ್ಲಿ ಎಂ.ಬಿ. ಎಮಿನೋ ಅವರನ್ನು ಬಿಟ್ಟರೆ ಎಡ್ವಿನ್ ಟಟಲ್ ಅವರ ಹೆಸರು ಪ್ರಮುಖವಾಗಿ ನಿಲ್ಲುತ್ತದೆ ಎಂಬುದು ವಿದ್ವಾಂಸರ ಅಭಿಮತ, ಟಟಿಲರವರ ದ್ರಾವಿಡ ಕ್ಷೇತ್ರದ ಕೊಡುಗೆಯನ್ನು ಗಮನಿಸಿದಾಗ ಈ ಮಾತು ಅಕ್ಷರಶ: ಸತ್ಯವೆನಿಸುತ್ತವೆ. ಮಧ್ಯದ್ರಾವಿಡ ಭಾಷೆಗಳು ದಕ್ಷಿಣ ಭಾಷೆಗಳಿಗಿಂತ ಹೆಚ್ಚು ಮೂಲದ್ರಾವಿಡ ಭಾಷೆಗಳ ಗುಣಲಕ್ಷಣಗಳನ್ನು ಹೊಂದಿವೆ ಎಂಬುದನ್ನು ಪ್ರತಿಪಾದಿಸಿದವರಲ್ಲಿ ಟಟಲ್ ಒಬ್ಬರು. ಅವರು ದ್ರಾವಿಡ ವಿಷಯ ಕುರಿತು ಹಲವು ಪ್ರಬಂಧಗಳನ್ನು ರಚಿಸಿದ್ದಾರೆ. “Etymology of dravidian words.’ comparative Dravidian and affinities of the Dravidian language family dravidian Notes Dravidian Researches, Dravidan Development Dravidian bone dravidian land 2. Dravidian Negation Dravidian’ I We and you Dravidian wrighia Rice Dravidian and nubian, Finnic and Dradivian and History and Tamil’ R’

೧೯. ಕಮಿಲ್ ಜೈಲೆಬಿಲ್ (೧೯೨೭೨೦೦೯)

ಕಮಿಲ್ ಜೈಲೆಬಿಲ್ ಇತ್ತೀಚಿನ ದ್ರಾವಿಡ ಭಾಷಾ ವಿಜ್ಞಾನಿಗಳಲ್ಲಿ ಅತ್ಯಂತ ಹೆಸರುವಾಸಿಯಾದವರು ಬಹುಶಃ ಶೈಕ್ಷಣಿಕ ದೃಷ್ಟಿಯಿಂದ ಇವರ ಸಂಶೋಧನೆಗಳು ಹೆಚ್ಚು ಮಹತ್ವದಾಯಕವಾಗುತ್ತವೆ. ಭಾಷಾತ್ಮಕ ವಿಕಾಸದ ನೆಲೆಯಲ್ಲಿ ಇವರದ್ದು ಬಹು ಮುಖ್ಯ ಕೊಡುಗೆ. ತಮಿಳು ಸಾಹಿತ್ಯ, ಸಂಸ್ಕೃತಿಗಳನ್ನು ಅರಿತವರು, ಭಾಷಾವಿಜ್ಞಾನಿ, ಚಿಂತಕ, ಅನುವಾದಕ ಹೀಗೆ ಬಹುಮುಖಿ ಪ್ರತಿಭೆ.

ಜೈಲೆಬಿಲ್ ೧೯೨೭ರಲ್ಲಿ ಜೆಕೋಸ್ಲೊವಾಕಿಯಾದ ಟ್ರೇಗನಲ್ಲಿ ತಮ್ಮ ವಿದ್ಯಾಭ್ಯಾಸ ನಡೆಸಿ ನಂತರ ಉನ್ನತ ಶಿಕ್ಷಣವನ್ನು ಕೆರೊಲಿನ್ ವಿಶ್ವವಿದ್ಯಾನಿಲಯದಲ್ಲಿ ಪಡೆದುಕೊಂಡರು. ೧೯೫೬ರಲ್ಲಿ ಭಾರತವನ್ನು ಸಂದರ್ಶಿಸಿದ್ದರು. ಅನೇಕ ಅಕಾಡೆಮಿಗಳಲ್ಲಿ ಸೇವೆ ಸಲ್ಲಿಸಿದ ಇವರಿಗೆ ದ್ರಾವಿಡ ಅತ್ಯಂತ ಆಸಕ್ತಿ ಕ್ಷೇತ್ರವಾಗಿತ್ತು. ತಮಿಳಿನ ಉಪಭಾಷೆಗಳ ಸಮೀಕ್ಷೆ ನಡೆಸಿ. ದ್ರಾವಿಡ ಭಾಷೆಯ ರಾಚನಿಕ ವಿಶ್ಲೇಷಣೆಯ ಪುಸ್ತಕಗಳನ್ನು ಪ್ರಕಟಿಸಿದರು. ಹಾಗೂ ತಮಿಳು ಭಾಷಾ ಇತಿಹಾಸ ಕೃತಿಯನ್ನು ಹಾಗೂ ಮಲಯಾಳಂನಿಂದ ಅನುವಾದಗಳನ್ನು ಮಾಡಿದ್ದಾರೆ ತಮಿಳು- ಮಲೆಯಾಳಂ ಅಲ್ಲದೇ ಇತರ ದ್ರಾವಿಡ ಭಾಷೆಗಳ ತುಲನಾತ್ಮಕ ಅಧ್ಯಯನ ನಡೆಸಿ. ೧೯೭೦ರಲ್ಲಿ’ ದ್ರಾವಿಡ ತೌಲಿಕ ಧ್ವನಿಯಾ ವ್ಯವಸ್ತೆ ಅಲ್ಲದೇ ಇರುಳು ಭಾಷೆಯನ್ನು ಕುರಿತು ಪುಸ್ತಕ ಬರೆದರು. ಹಾಗೂ ದ್ರಾವಿಡ ಆಕೃತಿಮಾ ವಿಜ್ಞಾನ, ತುಲನಾತ್ಮಕ ದ್ರಾವಿಡ ಭಾಷಾರಚನೆ’ ಗಳನ್ನು ಪ್ರಕಟಿಸಿದರು.

1977 ರಲ್ಲಿ “Comparative Dravidian Marphology”, 1973 “The trala Language”, 1967ರಲ್ಲಿ ಅಂಡ್ರೊನೋವ್ ಮತ್ತಿರರರೊಂದಿಗೆ Introduction to the Historical Grammar of Tamil Language”, ೧೯೭೪ರಲ್ಲಿ “History of Tamil Literature”, 1973ರಲ್ಲಿ “Smile of murugan 1986 ರಲ್ಲಿ “Literary Conventions in Akam Poetry “, 1990ರಲ್ಲಿ ‘Dravidian Linguistice An introduction ಹಾಗೂ ೧೯೭೦ರಲ್ಲಿ Comparative Dravidian Phonolgy “ಯನ್ನು ಪ್ರಕಟಿಸಿದರು, ಆವರು ಸಂಗಂ ಸಾಹಿತ್ಯವನ್ನು ಝೆಕ್ ಮತ್ತು ಇಂಗ್ಲೀಷಿಗೆ ಅನುವಾದಿಸಿದರು.

ತಮಿಳಿನ ಬಗ್ಗೆ ಅನೇಕ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದರು.

  1. The Enclitic Vowels (a,e,o)in modem Tamil.
  2. On Emphasis and Intenification in tamil
  3. Short Remarks on old Tamil syntax
  4. Short Remarks on a problem of old tamil Verbal Flexion and Innovations in spoken Tamil

ಅವರು ‘The Siddha quest for Immortality’ ಎಂಬ ಪುಸ್ತಕವನ್ನು ಪ್ರಕಟಿಸಿದರು. ದಕ್ಷಿಣ ಭಾರತದಲ್ಲಿ ಒಂದು ಸಮಾಜವಿದೆ. ಅದುವೇ ತಮಿಳಿನ ಸಿದ್ಧರ ಜನಾಂಗ ಅವರು ಹೇಳುವ ಔಷಧಶಾಸ್ತ್ರವು ದೀರ್ಘ ಆಯುಷ್ಯ ಮತ್ತು ಅತೀಂದ್ರಿಯ ಆಮರತ್ವದ ಹುಡುಕಾಟದ ಪ್ರಯತ್ನ ಆಗಿದೆ. ನಿಗೂಢವಾದ ಮತ್ತು ಲೈಂಗಿಕ ಕರ್ಮೇಕಾಂಡಗಳು ಅವರನ್ನು ವೈದಿಕ ಪದ್ಧತಿಯಿಂದ ದೂರ ಮಾಡಿವೆ. ಇಲ್ಲಿ ಸಿದ್ಧರ ಧಾರ್ಮಿಕ ನಂಬಿಕೆಗಳು, ತಂತ್ರವಿಧಿ, ರಸವಿದ್ಯೆ, ಔಷಧಶಾಸ್ತ್ರ, ಕಾವ್ಯ ಕಟ್ಟುವ ಸ್ಥುರಣ ಸಂಪ್ರದಾಯ ಸೇರಿವೆ, ದೀರ್ಘ ಆಯುಷ್ಯ ಸಿದ್ಧರಿಗೆ ಅತಿ ಪ್ರಮುಖ ವಿಷಯ ಹಾಗಾಗಿ ಮನುಷ್ಯ ಆರೋಗ್ಯ ಪಡೆಯಲು ಅನುಸರಿಸಬೇಕಾದ ಪದ್ಧತಿಗಳನ್ನು ಇಲ್ಲಿ ಹೇಳಲಾಗಿದೆ. ಹೆಣ್ಣನ್ನು ದೇವಿ ಎಂದು ತಾಂತ್ರಿಕ ವಿಧಿವಿಧಾನಗಳಿಂದ ಪೂಜಿಸಲಾಗುತ್ತದೆ. ಸಿದ್ಧರ ಪ್ರಕಾರ ಶರೀರವನ್ನು ಶುದ್ಧೀಕರಿಸಬೇಕು, ಜೀವನವನ್ನು ಪವಿತ್ರ ಗೊಳಿಸಬೇಕು. ದೇಹ ಮತ್ತು ಜೀವ ಒಂದಾಗಿ ಶಾಶ್ವತ ಸ್ಥಿತಿಗೆ ತಲುಪಬೇಕು, ಸಿದ್ಧರ ಕಾವ್ಯರಚನೆ ಶಕ್ತಿಯುತ, ತೀವ್ರ ಸಂವೇದನಶೀಲ, ಸಂಕೀರ್ಣ ಕುತೂಹಲ ಹುಟ್ಟಿಸುವ ಒಗಟು, ಸ್ಥುರಣ, ಜ್ಞಾನ, ತಿಳುವಳಿಕೆಗಳನ್ನು ಹಾಗೂ ಸ್ಥಳೀಯ ಅಂಶಗಳನ್ನು ಋಜುಂತೆ, ಅಕೃತ್ರಿಮತೆಗಳನ್ನು ಕೃತಿ ಪ್ರತಿಪಾದಿಸುತ್ತದೆ. ಅವರ ನಂಬಿಕೆಗಳು ವಿಸ್ಮಯಕಾರಿಯಾಗಿದೆ, ಶೂನ್ಯತ್ವವನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಕೃತಿ ೧೬ ವಿಭಾಗಗಳಿಂದ ಕೂಡಿದೆ. ಸಿದ್ಧರ ಔಷಧಶಾಸ್ತ್ರ, ತಾತ್ವಿಕ ವಿಚಾರ, ನಂಬಿಕೆಗಳು, ಸಿದ್ಧಯೋಗ, ತಂತ್ರವಿದ್ಯೆ. ದೈನಂದಿನ ಚಟುವಟಿಕೆ ದೀರ್ಘ ಜೀವನದ ಗುಟ್ಟು ಮೊದಲಾದ ವಿಷಯಗಳಿವೆ.

೨೦. ಕುಯಿಷರ್‌ ಎಘ್ ಬಿ.ಜಿ. (೧೯೦೭೨೦೦೩)

ಫ್ರಾನ್ಸಿಸ್ ಬರ್ನಾಟಸ್ ಜಾಕೋಬಸ್ ಕುಯ್ಪಿರ್‌ ಬಹುಭಾಷಾ ವಿದ್ವಾಂಸರು. ವೈದಿಕ ಸಂಸ್ಕೃ ಸಂಸ್ಕೃತ, ಹಳೆಯ ಜರ್ಮನ್, ಬಾಲ್ಟಿಕ್, ಸ್ಲಾವಿಕ್, ಹಳೆಯ ಇರಾನಿಯನ್ ಭಾಷಾ ಪ್ರಮೀಣರಾಗಿದ್ದರು. ಇಂಡೋ-ಯುರೋಪಿನ ಭಾಷೆಗಳು ಮತ್ತು ಭಾರತೀಯ ತತ್ವವು (Indology) ಆಸಕ್ತಿಯ ಕ್ಷೇತ್ರವಾಗಿತ್ತು. ಇಂಡೋ-ಇರಾನಿಯನ್, ಇಂಡೋ ಆರ್ಯನ್‌ ಅವರ ಭಾಷಾಧ್ಯಯನ ಮತ್ತು ಪೌರಾಣಿಕತೆ, ಇಂಡೋ-ಯುರೋಪಿಯನ್, ದ್ರಾವಿಡ, ಮುಂಡಾ ಭಾಷೆಗಳು ಇವರ ಆಸಕ್ತಿಯ ಕ್ಷೇತ್ರಗಳಾಗಿದ್ದವು.

Francis Jacobus Dernardas Kuiper ನೆದರಲ್ಯಾಂಡಲ್ Gravenhageನಲ್ಲಿ ಹುಟ್ಟಿದರು. ೧೯೦೭ರಲ್ಲಿ ಜನಿಸಿದ ಕುಯ್ಪಿರ್ ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಲೇಡನ್ ನಲ್ಲಿ ಮುಗಿಸಿದರು. ದ್ರಾವಿಡ ಅಧ್ಯಯನದಲ್ಲೂ ಆಸಕ್ತಿ ಪಡೆದು ತಮಿಳು ಮತ್ತು ಮುಂಡಾ ಭಾಷೆಗಳನ್ನು ಕುರಿತು. ನಂತರ ದ್ರಾವಿಡ ಅಧ್ಯಯನದಲ್ಲಿ ಸಂಶೋಧನ ನಡೆಸಿದರು. ವೈದಿಕ ಸಾಹಿತ್ಯದಲ್ಲಿ ಎರವಲು ಪಡೆದ ದ್ರಾವಿಡ ಪದಗಳ ಅಧ್ಯಯನ ಅತ್ಯಂತ ಮಹತ್ವದ ಕೊಡುಗೆ. ಏಕಕಾಲದಲ್ಲಿ ಪ್ರಾಚೀನ ಸಂಸ್ಕೃತ ಮತ್ತು ದ್ರಾವಿಡ ಸಂಗತಿಗಳನ್ನು ಅಧ್ಯಯನ ಮಾಡಿದರು, ಅವರ ಕೃತಿಗಳು Indology ಗೆ ಸಂಬಂಧಿಸಿದರೆ. Ancient Indian Cosmologony, Aryans in Rigveda’ ಲೇಖನಗಳು ಇಂಡೋ-ಅರ್ಯನ ದ್ರಾವಿಡ ಚಿಂತನೆಗಳ ತೌಲನಿಕ ಸಂಬಂಧವನ್ನು ಹೇಳುತ್ತವೆ. Notes on vedic noun inflection, Proto Munda Words in Sanskrit, Rigvedic loan words and Genesis of a Linguistic area ಎಂಬುವುಗಳು ವ್ಯಾಪಕವಾದ ಅಧ್ಯಯನ ಸಾಧ್ಯತೆಯನ್ನು ಒದಗಿಸುತ್ತವೆ.

ವೈದಿಕ (ವೇಕಿಕ್), ಇಂಡೋ ಇರಾನಿಯನ್. ಇಂಡೋ- ಯುರೋಪಿನ್ ಭಾಷೆಗಳ ಕೆಲವು ವಿಶಿಷ್ಟ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿದರು. ದ್ರಾವಿಡ ವಿಷಯ ಕುರಿತು ಹಲವಾರು ಕೃತಿಗಳನ್ನು ರಚಿಸಿದರು. ಅವುಗಳೆಂದರೆ Periodization of Some Changes in Dravidian, The correlation of voiced and unvoiced Consonants at the beginning of words and their loans in Sanskrit, Phonology and Morphology of old Tamil ಇದರ ಜೊತೆಗೆ ಮುಂಡಾ ಭಾಷೆಗಳು ಅವುಗಳ ಪ್ರಭೇದಗಳು ಅದರ ಧ್ವನಿ, ಶಬ್ದಶಾಸ್ತ್ರ, ರಚನಾ ವಿಷಯಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದರು. Proto Mundas in Sanskrit’ ಎಂಬ ವಿಷಯಗಳನ್ನು ವಿಶೇಷವಾಗಿ ಸಂಶೋಧನೆ ಮಾಡಿದರು,