. ಅಪ್ಪಾದುರೈ. ಕೆ. (೧೯೦೭.)

ಅಪ್ಪಾದುರೈಯವರು ನಿಘಂಟುಕಾರರಾಗಿ, ಭಾಷಾಂತರಕಾರರಾಗಿ, ತಮಿಳು ಭಾಷೆ ಮತ್ತು ಸಾಹಿತ್ಯ ವಿದ್ವಾಂಸರಾಗಿ ಬಹುಮುಖಿ ಪ್ರತಿಭೆಯುಳ್ಳವರು. ಅಲ್ಲದೇ ಜೀವನಚರಿತ್ರೆ, ಭಾಷಾಧ್ಯಯನ, ಇತಿಹಾಸ ಸಂಸ್ಕೃತಿ ಮತ್ತು ಶಾಸ್ತ್ರೀಯ ಸಾಹಿತ್ಯಗಳಲ್ಲೂ ಪರಿಣಿತಿ ಪಡೆದು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರು ರಚಿಸಿರುವ ‘Kazhagam English-Tamil Pocket Dictionary’ ಕೃತಿಯು ತಮಿಳಿನಲ್ಲಿರುವ ವೈಜ್ಞಾನಿಕ ಮತ್ತು ತಾಂತ್ರಿಕ ಪದಗಳನ್ನು ಅಧಿಕೃತವಾಗಿ ನೀಡುತ್ತದೆ. ‘Canka Illakkiya Manpu’, ‘Tamil Mulakkam and moli valam’ ‘Tennattupp orkalankal’ ‘Ayirattammuru antukatka Murpatta Tamilkam’ ಎಂಬ ಕೃತಿಗಳು ತಮಿಳು ಭಾಷಾಶಾಸ್ತ್ರವನ್ನು, ತಮಿಳುನಾಡಿನ ಇತಿಹಾಸದ ವಿಭಿನ್ನ ನೋಟಗಳನ್ನು ಮತ್ತು ಜೀವನಚರಿತ್ರೆಗಳನ್ನು ಒಳಗೊಳ್ಳುತ್ತವೆ.

. ಆಶರ್. ಆರ್. . (೧೯೨೬-)

ರೋನಾಲ್ಧ್ ಇ. ಅಶರ್ ಒಬ್ಬ ಬ್ರಿಟಿಷ್ ಭಾಷಾವಿಜ್ಙಾನಿ. ಮಲಯಾಳಂ ಮತ್ತು ತಮಿಳು ಭಾಷೆ ಮತ್ತು ಸಾಹಿತ್ಯ ಇವರ ಅಧ್ಯಯನ ಕ್ಷೇತ್ರವಾಗಿದೆ. ದಕ್ಷಿಣ ಭಾರತದಲ್ಲಿ ೧೯೫೦ ಹಾಗೂ ೧೯೬೦ ದಶಕಗಳಲ್ಲಿ ಕ್ಷೇತ್ರಕಾರ್ಯ ಕೈಗೊಂಡು ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅದರಲ್ಲೂ ತಮಿಳು ಮತ್ತು ಮಲಯಾಳಂ ಭಾಷಾಕ್ಷೇತ್ರಕ್ಕೆ ಈ ಸಂಶೋಧನಾ ಪ್ರಬಂಧಗಳು ಸಂಬಂಧಿಸಿವೆ. ‘The verb in spoken Tamil’ (1966). Existential, Possessive, locative and copulative sentenses in Malayalam (1968)’ The Tamil Ranaissance and the beginning of the Tamil novel (1970) Tamil loan wods in English (1973), ‘Translation and linguistic bridge building (1981) Intervolic plosives in Tamil (with T. Balasubramaniam, 1984) Relativisation in Jaftna Tamil (with A Vellupillai 1986). ಇವೇ ಮೊದಲಾದವು.

ಆಶರ್‌ ಎಡಿನ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದ ಪ್ರಾಧ್ಯಾಪಕರಾಗಿದ್ದರು ಅಲ್ಲದೇ ಹಲವಾರು ವಿ.ವಿ ಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಆಶರ್‍ರವರು Encyclopedia of Language and linguistics ಸಂಪುಟಗಳ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ವೈಕಂ ಮಹಮ್ಮದ ಬಷಿರ್‌ ಮೊದಲಾದ ಮಲಯಾಳಂ ಲೇಖಕರನ್ನು ಇಂಗ್ಲಿಷಿಗೆ ಪರಿಚಯಿಸಿದ್ದಾರೆ.

. ಅನಂತಕೃಷ್ಣ ಅಯ್ಯರ್‌ ಎಲ್.ಕೆ. (೧೮೯೧)

ಅನಂತಕೃಷ್ಣ ಅಯ್ಯರ್‍ರವರು ದ್ರಾವಿಡ ಸಂಸ್ಕೃತಿ ನೆಲೆಯಲ್ಲಿ ಹೆಚ್ಚು ಕಾರ್ಯನಿರ್ವಹಿಸಿದ್ದಾರೆ. ಮಾನವಶಾಸ್ತ್ರೀಯ ನೆಲೆಯಲ್ಲಿ ಜಾತಿ ಮತ್ತು ಬುಡಕಟ್ಟುಗಳ ಬಗೆಗೆ ಹೆಚ್ಚು ಚಿಂತನೆ ನಡೆಸಿದರು. ಅಷ್ಟು ಪೂರ್ವಕಾಲಕ್ಕಾಗಲೇ ದೇಶಿಯ ವಿದ್ವಾಂಸರೊಬ್ಬರು ಮಾನವಶಾಸ್ತ್ರೀಯ ನೆಲೆಯಲ್ಲಿ ಅಧ್ಯಯನ ನಡೆಸಿದುದು ಗಮನಾರ್ಹವೆನಿಸಿದೆ.

ಫಾಲಘಾಟ್‌ನಲ್ಲಿ ಅಯ್ಯರವರು ೧೮೭೧ ಜನಿಸಿದರು. ಮದ್ರಾಸನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪೂರೈಸಿದರು. ಮಾನವಶಾಸ್ತ್ರದ ವಿದ್ಯಾರ್ಥಿಯಾದ ಇವರು ಸ್ವತಃ ಮಾನವಶಾಸ್ತೀಯ ವಿದ್ವಾಂಸರಾದರು. ಇಡೀ ದೇಶದ ಮಾನವಶಾಸ್ತ್ರೀಯ ಪರೀಕ್ಷಣೆಯಿಂದ ಸಾಕಷ್ಟು ಮಾಹಿತಿ ದೊರೆಯಿತು. ಅದರಲ್ಲೂ ಕೊಚ್ಚಿ ಪ್ರದೇಶದಲ್ಲಿ ಪ್ರತಿಯೊಂದು ಜನಾಂಗದ ರೂಢಿ, ಸಂಪ್ರದಾಯಗಳು, ಮಾಹಿತಿ ಕಲೆಹಾಕಿ ಪ್ರತಿ ಸಮುದಾಯದ ಬಗೆಗೂ ಬರೆದರು. ಅಲ್ಲದೆ ಕೊಚ್ಚಿಯ ಜಾತಿ ಮತ್ತು ಸಮುದಾಯಗಳ ಬಗೆಗೆ ಸಂಪುಟವೊಂದನ್ನು ರಚಿಸಿದರು.ಈ ಸಂಪುಟ ೧೮ ಅಧ್ಯಾಯಗಳನ್ನು ಹೊಂದಿದೆ ೧೯೪೨ರಲ್ಲಿ ಎರಡನೆಯ ಸಂಪುಟ ಪ್ರಕಟಿಸಿದರು. ೩೩ ಸಮುದಾಯಗಳ ಸಮಗ್ರ ವಿವರ ಇಲ್ಲಿದೆ. ೧೯೨೪ರಿಂದ ೧೯೨೨ರವರೆಗೆ ಮೈಸೂರಿನಲ್ಲಿ ಸರ್ವೇ ನಡೆಸಿ ‘Mysore castes & tribes’ ಸಂಪುಟ ಹೊರತಂದರು. ಮೈಸೂರಿನ ಸಮಗ್ರ ಸಮುದಾಯ ವಿವರ ಇಲ್ಲಿದೆ.

ಜನಾಂಗೀಯ ಸರ್ವೇಕ್ಷಣೆ ನಡೆಸುವಾಗ ಪ್ರತಿ ಪ್ರಾಂತಗಳಿಗೆ ಅಧೀಕ್ಷಕರನ್ನು ನಿಯಮಿಸಿ, ಜನರ ರೂಢಿ, ಸಂಪ್ರದಾಯ, ಜಾತಿಗಳು, ಬುಡಕಟ್ಟುಗಳು ಉಳಿದ ವಿಷಯಗಳನ್ನು ಸಂಗ್ರಹಿಸಲಾಯಿತು. ಆ ಮೂಲಕ ವಿವರಗಳನ್ನು ಪ್ರಬಂಧನ ರೂಪದಲ್ಲಿ, ಸಂಗ್ರಹಿಸಲಾಯಿತು. ಆ ಮೂಲಕ ವಿವರಗಳನ್ನು ಪ್ರಬಂಧದ ರೂಪದಲ್ಲಿ ಬುಡಕಟ್ಟುಗಳ ಮತ್ತು ಜಾತಿಗಳ ಸಂಪುಟಗಳ ಮಾದರಿಯಲ್ಲಿ ಕೊಡಲಾಗುತ್ತಿತ್ತು. ೧೯೦೩ರಲ್ಲಿ ಮೈಸೂರಿಗೆ ಸಂಬಂಧಿಸಿದಂತೆ ಜನಾಂಗೀಯ ಸಮೀಕ್ಷೆಯನ್ನು ದಿವಂಗತ ದಿವಾನ್ ಬಹದ್ದೂರ ಎಚ್.ವಿ. ನಂಜುಂಡಯ್ಯ ಅವರ ನೇತೃತ್ವದಲ್ಲಿ ೧೬-೧೭ ವರ್ಷಗಳ ಕಾಲ ನಡೆಯಿತು. ೩೪ ಪ್ರಬಂಧಗಳನ್ನು ಇದರ ಕುರಿತಾಗಿ ಪ್ರಕಟಿಸಲಾಯಿತು. ಉಳಿದ ೫೦ ಪ್ರಬಂಧಗಳಿಗೆ ಮಾಹಿತಿ ಕಲೆಹಾಕಲಾಯಿತು. ನಂತರ ಕೆಲಸ ಸ್ಥಗಿತಗೊಂಡಿತು. ಆ ನಂತರ ಮೈಸೂರ ಮಹಾರಾಜರ ಸೂಚನೆಯಂತೆ ಈ ಸಮೀಕ್ಷೆಯನ್ನು ಪೂರ್ತಿಗೊಳಿಸಲು ಅನಂತಕೃಷ್ಣ ಅಯ್ಯರ್‍ರವರಿಗೆ ಜವಾಬ್ದಾರಿ ಹೊರಿಸಲಾಯಿತು. ಮತ್ತೊಂದು ಹಂತದ ಸರ್ವೆ ನಡೆಸಲಾಯಿತು. ಪ್ರತಿಯೊಂದು ಬುಡಕಟ್ಟು ಮತ್ತು ಜಾತಿಗೆ ಸಂಬಂಧಿಸಿದ ಮಾಹಿತಿ, ಕೆಲವು ಹೊಸ ಬುಡಕಟ್ಟು, ಜಾತಿಗಳ ವಿವರ, ಬುಡಕಟ್ಟುಗಳ ವಿವಾಹ ವ್ಯವಸ್ಥೆ, ಇವುಗಳ ವಿಶ್ಲೇಷಣೆಯಿದೆ. ಈ ಕೆಲಸ ೧೦ ವರ್ಷ ನಡೆದು ೭೦೦ ಪುಟಗಳಿಗಿಂತ ಹೆಚ್ಚು ವಿಷಯ ಇಲ್ಲಿದೆ.

ಮೂರು ಸಂಪುಟಗಳಲ್ಲಿ ವರ್ಣಮಾಲೆ ಆಧಾರಿತ ವಿವರಗಳಿವೆ. ಮಾನವಶಾಸ್ತ್ರ, ವಂಶಶಾಸ್ತ್ರ ಮತ್ತು ಜನಾಂಗ ವಿವರಣೆ ಇತ್ಯಾದಿ ವಿಷಯಗಳು ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ಉಪಯುಕ್ತವಾಗಿದೆ. ವಂಶಿಕ ಮತ್ತು ಸಾಂಸ್ಕೃತಿಕ ಅಧ್ಯಯನದಿಂದ ಮೈಸೂರು ತೀವ್ರ ಆಸಕ್ತಿಕರ ಪ್ರದೇಶ, ಉತ್ತರ, ಪೂರ್ವ ಮತ್ತು ದಕ್ಷಿಣ ದಿಕ್ಕಿನ ಜನರ ಸಾಹಚರ್‍ಯ, ಸಂಪರ್ಕ, ವಸಾಪತಿನಿಂದಾಗಿ ವಿವಿಧ ಸಮುದಾಯಗಳು ಪ್ರಭಾವಿತಗೊಂಡಿವೆ, ಜೊತೆಗೆ ಸ್ವತಂತ್ರ ಅಸ್ತಿತ್ವವಿದೆ. ಜೈನ, ಲಿಂಗಾಯತ, ಇಸ್ಲಾಂ ಚಳುವಳಿಗಳ ಪ್ರೇರಣೆ, ಜಾತಿ ಮತ್ತು ಮತಧರ್ಮದ ಹಿನ್ನಲೆಯಲ್ಲಿ ಮೈಸೂರು ಪ್ರಾಂತ್ಯ ಭಿನ್ನತೆ ಪಡೆಯುವ ಅಂಶಗಳನ್ನು ಮುನ್ನುಡಿಯಲ್ಲಿ ತಿಳಿಸಲಾಗಿದೆ.

. ಅನಂತನಾರಾಯಣ ಎಚ್. ಎಸ್. (೧೯೩೧)

ಎಚ್.ಎಸ್. ಅನಂತನಾರಾಯಣ ಅವರು ದೇಶಿಯ ಭಾಷಾತಜ್ಞರು. ಇಂಡೋ ಆರ್ಯನ್ ಮತ್ತು ದ್ರಾವಿಡ ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು. ಸಂಸ್ಕೃತ. ಪ್ರಾಕೃತ, ಪಾಲಿ ಭಾಷೆಗಳನ್ನು ತಮಿಳಿನ ಉಪಭಾಷೆಯಾದ ಸಂಕೇತಿಯನ್ನು ಅರ್ಥೈಸಿಕೊಂಡಿದ್ದರು.

ಅನಂತನಾರಾಯಣ ಅವರು ಬಿ.ಎ. ಪದವಿಯನ್ನು ಸಂಸ್ಕೃತ ವಿಷಯದೊಂದಿಗೆ ಮೈಸೂರು ವಿ.ವಿ.ದಿಂದ ಪಡೆದು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಆಧುನಿಕ ಭಾಷಾವಿಜ್ಞಾನದಲ್ಲಿ ತರಬೇತಿ ಪಡೆದರು. ಡೆಕ್ಕನ್ ವಿ.ವಿಯಿಂದ ೧೯೬೨ರಲ್ಲಿ ಪಿಎಚ್.ಡಿ. ಪದವಿಯನ್ನು‘Studies in the language of Taittiriya Brahmana’ ವಿಷಯದಲ್ಲಿ ಪಡೆದರು. ಉಸ್ಮಾನಿಯಾ ವಿ.ವಿಯಲ್ಲಿ ವೃತ್ತಿ ಜೀವನ ನಡೆಸಿದರು. ಪ್ರಾಕೃತ, ಸಂಸ್ಕೃತ ಜ್ಞಾನದ ಹಿನ್ನೆಲೆಯಲ್ಲಿ ಕೆಲವು ಕೃತಿಗಳನ್ನು ರಚಿಸಿರುವ ಇವರು ದ್ರಾವಿಡ ಚಿಂತನೆಯ ಕುರಿತಾಗಿಯೂ ಕೃತಿ ರಚಿಸಿದ್ದಾರೆ.

  • sound changes in sanketi, a Tamil dialect (1968
  • The Karnataka theory and case grammar (1970)
  • The Influence of sanskrit grammatical tradition in the decription of the syntax of Kannada (1978)
  • Remarks on Nested case relation and subject in Tamil (1981)
  • The verb morpholgy of sanketi Tamil (1955)
  • Tolkappiyam and Astadyayi A Comparative. ಇತ್ಯಾದಿ.

. ಅಯ್ಯರ್‌ ವಿ. ವಿ.ಎಸ್. (೧೮೮೧೧೯೨೫)

ಅಯ್ಯರ್‍ರವರು ಬಹುಮುಖಿ ಪ್ರತಿಭೆ, ವಿಮರ್ಶಕ, ಅನುವಾದಕ ಹಾಗೂ ಕಥೆಗಾರರಾಗಿ ಅವರು ಪ್ರಸಿದ್ದರು. ತಮಿಳಿನ ಸಾಹಿತ್ಯವನ್ನು ಇಂಗ್ಲಿಷಿಗೆ ಭಾಷಾಂತರಿಸಿದರು. ಪಾಂಡಿಚೆರಿಯಲ್ಲಿರುವಾಗ ಕಂಬ ರಾಮಾಯಣದಿಂದ ಪ್ರಭಾವಿತರಾಗಿ ಕಂಬರಾಮಾಯಣವನ್ನು ಇಂಗ್ಲಿಷಿನಲ್ಲಿ ಪ್ರಕಟಿಸಿದರು. ಟ್ಯಾಗೋರರ ಕಥೆಗಳನ್ನು ತಮಿಳಿಗೆ ಮತ್ತು ತಿರುಕ್ಕುರಳ್ ನ್ನು ಇಂಗ್ಲಿಷಿಗೂ ಭಾಷಾಂತರಿಸಿದರು.

ವರಾಹನೇರಿ ವೆಂಕಟೇಶ ಸುಬ್ರಮಣಿಯಮ್ ಅಯ್ಯರವರು ೧೮೮೧ರ ಏಪ್ರಿಲ್ ೨ ರಿಂದ ತಿರುಚನಾಪಳ್ಳಿಯಲ್ಲಿ ಜನಿಸಿದರು. ‘ಕಂಬ’ ರಾಮಾಯಣ ಮತ್ತು ತಿರುಕ್ಕುರಳನ್ನು ಇಂಗ್ಲಿಷಿಗೆ ಅನುವಾದಿಸಿದರು. ಕಾನೂನು ವಿದ್ಯೆ ಕಲಿತರು. ಜೂನಿಯರ್‌ ಲಾಯರ್‌ ಆಗಿ ೧೯೦೨ರಲ್ಲಿ ಪ್ಲೀಡರ್‌ ಆದರು. ಕಂಬಸ್ ಕವಿತ್ಯೆ ಇದೂ ಅವರ ಇಂಗ್ಲೀಷ ಕೃತಿಯಾದ ‘kamban A Study’ ಯ ತಮಿಳು ಅನುವಾದ.

. ಅಚ್ಯುತ ಮೆನನ್ (೧೮೮೭೧೯೬೩)

ಅಚ್ಯುತ ಮೆನನ್‌ರವರದು ಬಹುಮುಖ ಪ್ರತಿಭೆ, ನ್ಯಾಯ, ಆಡಳಿತ, ಇತಿಹಾಸ ಹೀಗೆ ಹಲವು ಆಯಾಮಗಳಲ್ಲಿ ಪರಿಣಿತರು ಕೋಮಾಟಿಲ್ ಅಚ್ಯುತ ಮೆನನ್ ಅವರು ತ್ರಿಚೂರನಲ್ಲಿ ಜನಿಸಿದರು. ಶಿಕ್ಷಣವು ತ್ರಿಚೂರ, ಎರ್‍ನಾಕುಲಂ ಮತ್ತು ಮದ್ರಾಸ್‌ಗಳಲ್ಲಿ ನಡೆಯಿತು. ತ್ರಿಚೂರ ಕೋರ್ಟಿನಲ್ಲಿ ನ್ಯಾಯವಾದಿಯಾಗಿ ವೃತ್ತಿಜೀವನ ಆರಂಭಿಸಿದರು. ನಂತರ ನ್ಯಾಯಧೀಶ ಇನ್ನಿತರ ಉನ್ನತ ಹುದ್ದೆಗಳನ್ನು ಅಲಂಕರಿಸಿದರು.

ಇಷ್ಟೇ ಅಲ್ಲದೆ ಕೇರಳ ಇತಿಹಾಸ ಸಮಿತಿ ಸಂಸ್ಥಾಪಕರು. ನಂತರ ಇದು ಕೇರಳ ಇತಿಹಾಸ ಅಸೋಸಿಯೇಷನ್ ಆಯಿತು. ಇತಿಹಾಸಕಾರರಾಗಿ ಮೆನನ್ ಕೆಲವು ಕೃತಿಗಳು ಇತಿಹಾಸ ಕುರಿತು ಹಲವು ವಿವರಗಳನ್ನು ಬಿಚ್ಚಿಡುತ್ತವೆ. “The Place names of kochi” South India & China’ Ancient Kerala’ ಇತ್ಯಾದಿಗಳು ಅವರ ವಿದ್ವತ್ತನ್ನು ಪ್ರಕಟಿಸುತ್ತವೆ.

. ಅಬರ್ಕ್ರೊಂಬಿ

ಅಬರ್‍ಕ್ರೊಂಬಿ ಅವರು ಕೊಡಗಿನ ಬಗ್ಗೆ ಚರಿತ್ರೆಯನ್ನು ಇಂಗ್ಲೀಷಿನಲ್ಲಿ ಬರೆದಿದ್ದಾರೆ. ‘ರಾಜೇಂದ್ರನಾಮೆ’ ಎಂಬುದು ಪೋಲೇರಿ ವೀರರಾಜೇಂದರ ಒಡೆಯರು ಬರೆಸಿದ ಕೊಡಗಿನ ಚರಿತವು ಮದರಾಸಿನ ಅಧಿಪತ್ಯ ಅಪ್ಪಣೆಯಿಂದ ಪ್ರಕಟಿಸಿದ್ದಾರೆ. ಈ ಕೊಡಗಿನ ಚರಿತೆಯ ಕೃತಿಯಲ್ಲಿ ಒತ್ತಕ್ಷರಗಳನ್ನು ಸರಳ ಸಾಲಿನಲ್ಲಿ ಬರೆಯಲಾಗಿದೆ. ಕ್ಲಿಷ್ಟತೆಯನ್ನು ನಿವಾರಿಸುವುದು ಇದರ ಉದ್ದೇಶವಾಗಿದೆ. ಕನ್ನಡ ರೂಢಿಗತ ಬರವಣೆಗೆಯ ಶೈಲಿಗಿಂತ ಇದು ಭಿನ್ನವಾದರೂ ರೂಢಿಯಿಂದ ಸರಿಹೋಗಬಹುದು. ಕನ್ನಡ ಕಲಿಯುವವರಿಗೆ ಇದು ಸರಳ ಶೈಲಿಯೆನಿಸುತ್ತದೆ. (ರಾಜೇಂದ್ರನಾಮ ಅತ್ಯಂತ ಪುರಾತನ ಕೃತಿ. ೧೬ ಪುಟಗಳಲ್ಲಿರುವ ಈ ಕೃತಿ ಕೊಡಗಿನ ಪೂರ್ವ ಇತಿಹಾಸ ಹಾಗೂ ವೀರಾಜೇಂದ್ರನ ಸಮಕಾಲೀನ ಘಟನೆಗಳನ್ನು ಹೇಳುತ್ತದೆ. ವೀರರಾಜೇಂದ್ರನ ಮೃತ್ಯು ಪತ್ರ ಇಂಗ್ಲೀಷ್ ಅನುವಾದದಲ್ಲಿದೆ.)

. ಅಬೆ ಜೆ.. ದುಬೋಯಿಸ್

ದುಬೋಯಿಸ್ ದಕ್ಷಿಣ ಭಾರತದ ಜನರ ನಡತೆ, ಆಚರಣೆ, ಸಮುದಾಯ ಇತ್ಯಾದಿ ಅಂಶಗಳ ಬಗೆಗೆ ೧೮೭೧ರಲ್ಲಿ ಕ್ಷೇತ್ರಾಧ್ಯಯನದಿಂದ ಸಂಗ್ರಹಿಸಿದ ಮಾಹಿತಿಯನ್ವಯ ಕೃತಿಯೊಂದನ್ನು ರಚಿಸಿದ್ದಾರೆ. ‘Description of the character, manners and customs of the people of India and of other Institution’ ಎಂಬುದು ದಕ್ಷಿಣ ಭಾರತದ ವಿವರಗಳನ್ನು ಒಳಗೊಳ್ಳುತ್ತವೆ. ಕೃತಿಯಲ್ಲಿ ಕೃಷ್ಣೆಯ ಭಾಗದಲ್ಲಿನ ಜನರ ಕುರಿತು ಹೇಳುತ್ತೇನೆ ಎಂದು ಹೇಳುತ್ತಾರೆ. ನದಿಯ ಆ ಕಡೆ (ಉತ್ತರದಲ್ಲಿ) ನದಿಯ ಈ ಕಡೆ (ದಕ್ಷಿಣದಲ್ಲಿ) ಆಚಾರ- ವಿಚಾರ, ರೂಢಿ, ಸಂಪ್ರದಾಯಗಳಲ್ಲಿ ವ್ಯತ್ಯಾಸವಿದೆ, ತಮಿಳು, ತೆಲುಗು, ಕನ್ನಡ, ಜನರ ನಡುವೆ ಸಮಾನಾಂಶಗಳು ಇರುವಂತೆ ವ್ಯತ್ಯಾಸಗಳೂ ಇವೆ ಎನ್ನುತ್ತಾರೆ. ಅಲ್ಲದೇ ಭಾರತದ ಇತಿಹಾಸ ರಚಿಸಲು ಯುಕ್ತ ಆಕರಗಳು ಇವೆ. ಮೂರ್ತಿ ಪೂಜೆ ಮತ್ತು ಅತಿಮಾನವತ್ವ ನಂಬಿಕೆಗಳ ವಿಶಿಷ್ಟ ಮನೋಧರ್ಮವನ್ನು ವಿವರಿಸುತ್ತಾರೆ.

. ಆಂಜನೇಯಲು, ಕುಂದರ್ಟಿ (೧೯೨೨೧೯೮೭)

ಆಂಜನೇಯಲು ಒಬ್ಬ ಕವಿ, ನಾಟಕಕಾರ ಮತ್ತು ವಿಮರ್ಶಕರಾಗಿ ಬಹುಮುಖಿ ಪ್ರತಿಭೆ ಪಡೆದವರು. ಆಧುನಿಕ ದೃಷ್ಟಿಕೋನದಿಂದ ಸಾಹಿತ್ಯಿಕ ಚಿಂತನೆಯನ್ನು ಆರಂಭಿಸಿದರು. ಸಾಂಪ್ರದಾಯಿಕ ನೆಲೆಯಿಂದ ಸಾಹಿತ್ಯ ಯಾತ್ರೆ ಆರಂಭಿಸಿದ ಇವರು ಆಧುನಿಕ ಚಿಂತನೆ, ಸಂವೇದನೆಗಳನ್ನು ಬೆಳೆಸಿಕೊಂಡರು. ಮುಕ್ತ ಛಂದಸ್ಸನ್ನು ಪ್ರತಿಪಾದಿಸಿದರು. ಇವರ ಮಹತ್ವದ ಕೃತಿ ತೆಲಂಗಾಣ ನಿಜಾಮಶಾಹಿ ಆಡಳಿತದ ವಿರುದ್ಧ ಹೋರಾಟ ನಡೆಸಿದವರು. ೧೯೭೦ರಲ್ಲಿ ಆಂಧ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೭೬ ಸೋವಿಯತ್ ಲ್ಯಾಂಡ್ ಪ್ರಶಸ್ತಿ ಇತ್ಯಾದಿ ಭಾಜನರಾಗಿದ್ದರು.

೧೦. ಆಂಡ್ರೊನೋವ್ ಎಂ.ಎಸ್.

ದ್ರಾವಿಡ ಭಾಷಾ ವಿಜ್ಞಾನದಲ್ಲಿ ಮೈಕೆಲ್ ಎಸ್. ಆಂಡ್ರೋನೋವ್ ಅವರದು ಮಹತ್ಸಾಧನೆ. ಜೈಲೆಬಿಲ್ ಆಂಡ್ರೋನೋವ್ ಜಂಟಿಯಾಗಿ ದ್ರಾವಿಡ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ, ತಮಿಳು ಭಾಷಾಧ್ಯಯನದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಮಾಸ್ಕೋ ಓರಿಯೆಂಟಲ್ ಇನ್ಸಿಟ್ಯೂಟ್ ನಲ್ಲಿ ಬಂಗಾಲಿ, ಸಂಸ್ಕೃತಗಳನ್ನು ಅಧ್ಯಯನ ಮಾಡಿದರು. ಇದೇ ಸಂಸ್ಥೆಯಲ್ಲಿ ೧೯೫೪ರಲ್ಲಿ ಎಂ.ಎ., ಪದವಿ ಪಡೆದರು,‘Dravidian ಸಾಕಷ್ಟು ಕೊಡುಗೆ ನೀಡಿದ್ದಾರೆ, ತಮಿಳು ಭಾಷಾಧ್ಯಯನದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಮಾಸ್ಕೋ ಓರಿಯೆಂಟಲ್ ಇನ್ಸಿಟ್ಯೂಟ್ ನಲ್ಲಿ ಬಂಗಾಲಿ, ಸಂಸ್ಕೃತಗಳನ್ನು ಅಧ್ಯಯನ ಮಾಡಿದರು. ಇದೇ ಸಂಸ್ಥೆಯಲ್ಲಿ ೧೯೫೪ರಲ್ಲಿ ಎಂ.ಎ., ಪದವಿ ಪಡೆದರು, ‘Dravidian elements in Bengali’ ಎಂಬ ವಿಷಯದಲ್ಲಿ ಪಿ ಎಚ್. ಡಿ ಪಡೆದರು ನಂತರ ಭಾರತಕ್ಕೆ ಬಂದು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ೧೯೬೦ರಲ್ಲಿ ತಮಿಳು ಕುರಿತಾಗಿ ಸಂಪ್ರಬಂಧವೊಂದನ್ನು ಬರೆದರು. ೧೯೭೧ರಲ್ಲಿ ತಮಿಳು ಭಾಷಾ ವಿಜ್ಞಾನದಲ್ಲಿ ಡಿ.ಲಿಟ್ ಪಡೆದರು. ಹಲವಾರು ರಷಿಯನ್ ಭಾಷಾತಜ್ಞರಿಗೆ ದ್ರಾವಿಡ ಭಾಷೆಯ ಬಗೆಗೆ ಆಸಕ್ತಿ ಮಾಡಿಸಿದರು. ತೌಲನಿಕ ದ್ರಾವಿಡ ಭಾಷೆಗಳ ಕುರಿತಾಗಿ ಸಂಶೋಧನಾತ್ಮಕ ಲೇಖನಗಳನ್ನು. ಕೃತಿಗಳನ್ನು ಸಿದ್ಧಪಡಿಸಿದ್ದಾರೆ, ‘A Sketch of dravidian Comparative Grammer ಎಂಬುದನ್ನು ರಷ್ಯನ್ ಭಾಷೆಯಲ್ಲಿ ೧೯೬೫ರಲ್ಲಿ, ಇಂಗ್ಲೀಷ್‌ನಲ್ಲಿ ೧೯೭೦ರಲ್ಲಿ ಪ್ರಕಟಿಸಿದರು. ಇದೊಂದು ಮಹತ್ವದ ಕೊಡಗೆಯಾಗಿದೆ ‘ The tamil Language’ ಎಂಬುದನ್ನು ೧೯೭೦ ರಲ್ಲಿ ರಷ್ಯನ್ ಭಾಷೆಯಲ್ಲಿ ೧೯೭೭ ರಲ್ಲಿ ಇಂಗ್ಲೀಷ್‌ನಲ್ಲಿ ಸಿದ್ಧಪಡಿಸಿದರುIThe kannada Language’ ಎಂಬುದನ್ನು ರಷ್ಯನ್ ಭಾಷೆಯಲ್ಲಿ ೧೯೬೨ರಲ್ಲಿ English ನಲ್ಲಿ ೧೯೬೯ರಲ್ಲಿ ‘The Brahui Script’, ೧೯೬೮ ರಲ್ಲಿ Russian-Tamil Dictionary, ೧೯೬೧ ‘Malayalam-Russaian Dictionary’ ಗಳನ್ನು ರಚಿಸಿದ್ದಾರೆ. ೧೯೬೪ ರಲ್ಲಿ `Material for Bibliography of Dravidian Iingustics’ ಎಂಬ ಸಂಶೋಧನಾ ಪ್ರಬಂಧವೊಂದನ್ನು ಮಂಡಿಸಿದ್ದಾರೆ.

ಆಂಡ್ರೋನೋವ್ ಭಾಷೆಯ ಕುರಿತಾಗಿ ಒಂದು ವಿಶಿಷ್ಟವಾದವನ್ನು ಮಂಡಿಸಿದ್ದಾರಲ್ಲದೇ ಈ ವಾದವನ್ನು ಹಲವಾರು ತಮಿಳು ವಿದ್ವಾಂಸರು ಸ್ವೀಕರಿಸುವಂತೆಯೂ ಆಗಿದೆ. ಸಾಹಿತ್ಯದ ಭಾಷೆ ಮತ್ತು ಮಾತೃಭಾಷೆ ಎಂಬ ವರ್ಗೀಕರಣ ಸಲ್ಲದು ಸಾಹಿತ್ಯ ಭಾಷೆಗಿಂತ ಭಿನ್ನವಾದ, ಪ್ರಭೇದಗಳಿಗಂತ ಭಿನ್ನವಾದ ಒಂದು ಸ್ವತಂತ್ರ ತಮಿಳು ಅಸ್ತಿತ್ವದಲ್ಲಿದ್ದು ಅದು ತನ್ನದೇ ಧ್ವನಿ, ಶಬ್ದಶಾಸ್ತ್ರ ಹಾಗೂ ವಾಕ್ಯ ರಚನೆಯಲ್ಲಿ ಭಿನ್ನವಾಗಿದೆ. ಈ ಸ್ವತಂತ್ರ ಭಾಷೆಯೂ ಪ್ರಮಾಣ ಬದ್ಧವಾದ ಸಮಕಾಲೀನ ತಮಿಳು ಎನಿಸಿದ್ದು ಮುಖ್ಯವಾಹಿನಿ, ಪ್ರಾದೇಶಿಕ, ಸಾಮಾಜಿಕ, ಶೈಕ್ಷಣಿಕ, ಹಾಗೂ ಇದರಂತೆ ಇರುವ ಉಳಿದ ವಿಷಯಗಳಿಂದ ಇದು ಮುಕ್ತವಾಗಿದೆ ಇಂತಹ ಆಡುಭಾಷೆಯ ಉಗಮ ಹೊಸ ಪ್ರಕ್ರಿಯೆಯಾಗಿದೆ.