೨೧. ಕುಟ್ಟೀ ಕೃಷ್ಣ ಮುರಾರ್‍ (೧೯೦೦೧೯೭೩) (೧೯೧೧೧೯೭೪)

ಆಧುನಿಕ ಮಲೆಯಾಳಂ ಚಿಂತಕರಲ್ಲಿ ಮುರಾರ್‌ ಒಬ್ಬರು ಮಲೆಯಾಳಂ ವಿಮರ್ಶೆಯಲ್ಲಿ ಪಾಶ್ಚಾತ್ಯ ಚಿಂತನೆಗಳಿಂದ ದೂರವಿದ್ದು ತಮ್ಮದೇ ಛಾವು ಮೂಡಿಸಿದವರು. ಶಾಸ್ತ್ರೀಯ ಚಿಂತನೆಗೆ ಹೆಚ್ಚಿನ ಪ್ರಾಶಸ್ತ್ಯ ಕೂಟ್ಟಿವರು. ಸಂಸ್ಕೃತದಲ್ಲೂ ಪ್ರಾವಿಣ್ಯ ಪಡೆದುಕೊಂಡಿದ್ದರು. ಅನಂದರ್ಧನಾದಿಯಾಗಿ ಇತ್ತೀಚಿನ ಎಲ್ಲ ಬರಹಗಾರರನ್ನು ಕಟುವಾಗಿ ವಿಮರ್ಶಿಸಿದ್ದಾರೆ.

ವೃತ್ತಸಿಲ್ಪಮ್ ಎಂಬುದನ್ನು ಮಲಯಾಳಂ ಛಂದಸ್ಸನ್ನು ಕುರಿತು ಬರೆದಿದ್ದಾರೆ. ಇದು ಮಲಯಾಳಂ ಛಂದಸ್ಸಿನ ವ್ಯವಸ್ಥಿತ ಅಧ್ಯಯನ ಕೃತಿ. ಮಲಯಾಳಂ ಸಾಹಿತ್ಯವನ್ನು ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಹೆಚ್ಚಾಗಿ ಶಾಸ್ತ್ರೀಯ ನಿಲುವನ್ನು ಪ್ರತಿಪಾದಿಸುವ ಇವರ ಶೈಲಿಯನ್ನು ಕೃತಿಗಳಲ್ಲಿ ಕಾಣಬಹುದಾಗಿದೆ.

ಮುರಾರ್‍ರವರು ಮದ್ರಾಸ್ ವಿ.ವಿ.ಯಿಂದ ಸಾಹಿತ್ಯ ಶಿರೋಮಣಿ ಬಿರುದು ಪಡೆದುಕೊಂಡಿದ್ದಾರೆ. ಕೇರಳ ಕಲಾಮಂಡಲಮ್ ಮುಂತಾದ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮಲಯಾಳಂ ವಿದ್ವಾಂಸರಾದ ಇವರು ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ. ಮಲಯಾಳಂ ಶೈಲಿ ಮತ್ತು ವ್ಯಾಕರಣ ಮಹತ್ವದ ಕೃತಿಗಳೆನಿಸಿವೆ. Malayala Bhasha Shaili, Kalajivitham Thanne ‘ಗಳು ಮಹತ್ವದ ಕೃತಿಗಳೆನಿಸಿವೆ. ಪಾಶ್ಚಾತ್ಯ ಸೌಂದರ್ಯ ಶೈಲಿಯನ್ನು ಮತ್ತು ಭಾರತೀಯ ಸಾಂಪ್ರದಾಯಿಕ ನಿಲುವುಗಳನ್ನು ಇವರ ವಿಮರ್ಶೆ ಬಳಗೊಂಡಿದೆ.

೧೯೫೦ರಲ್ಲಿ Bharata Parayatamam ಕೃತಿ ಮದ್ರಾಸ್ ಸರ್ಕಾರ ಪ್ರಶಸ್ತಿ ಗಳಿಸಿತು ಕೇರಳ ಸಾಹಿತ್ಯ ಅಕಾಡೆಮಿ ಮತ್ತು ರಾಷ್ಟೀಯ ಪ್ರಶಸ್ತಿಗಳನ್ನು Kalajivitham Thanne ಪಡೆದುಕೊಂಡಿದೆ.

೨೨. ಕುಂಜನ್ ನಂಬಿಯಾರ್‍ (೧೭೦೫೧೭೭೦)

ಕುಂಜನ್ನಂಬಿಯಾರ ಅವರು ೧೭೫೮ರಲ್ಲಿ ತಿರುವನಂತಪುರಮ್‌ನಲ್ಲಿ ಕಾರ್ತಿಕ ತಿರುಮಲ ರಾಮವರ್ಮ ಅವರ ದರ್ಬಾರಿನಲ್ಲಿ ನೆಲೆಸಿದರು. ತುಳ್ಳಲ್ ಎಂಬ ನಾಟ್ಯಕಲೆಯನ್ನು ಶೋಧಿಸಿ ಜನಪ್ರಿಯಗೊಳಿಸಿದರು. ಚಕ್ಕೈಯಾರ್‍ಕೂಥುನಿಂದ ಈ ಹೊಸ ಪ್ರಕಾರವನ್ನು ಜನಪ್ರಿಯಗೊಳಿಸಿದರು. ಕೊತ್ತುವಿನ ಸಂಸ್ಕೃತ ಭೂಯಿಷ್ಠ ಶೈಲಿಯಿಂದ ಶುದ್ಧ ಮಲಯಾಳಮ್ ತುಳ್ಳಲ್ ಕಲೆಯನ್ನು ಜನಪ್ರಿಯಗೊಳಿಸಿದರು. ದ್ರಾವಿಡಿಯನ್ ವೃತ್ತಗಳನ್ನು ಬಳಸಿದ್ದಾರೆ. ಅಲ್ಲದೇ ವೃತ್ತಗಳನ್ನು ಅಭಿವೃದ್ಧಿಪಡಿಸಿ, ಮಲಯಾಳಮ್ ಭಾಷೆಯನ್ನು ಸದುಪಯೋಗ ಪಡಿಸಿಕೊಂಡವರು.

೨೩. ಕುಂಜನ್ ಪಿಳ್ಳೈ, ಎಳಮ್ ಕುಳಮ್ (೧೯೦೪೧೯೭೩)

ಕುಂಜನ್ ಪಿಳ್ಳೈಯವರು ಮಲೆಯಾಳಂನ ಪ್ರಮುಖ ಸಂಶೋಧಕರು, ಮಲಯಾಳಂ ಸಾಹಿತ್ಯವನ್ನು ಸಂಪಾದಕರಾಗಿ, ವ್ಯಾಖ್ಯಾನಕಾರರಾಗಿ ಸಾಕಷ್ಟು ಸಂಶೋಧಿಸಿದ್ದಾರೆ, ಇವರೊಬ್ಬ ಇತಿಹಾಸ ತಜ್ಞರಾಗಿರುವುದೊಂದು ವಿಶೇಷ. ಕುಂಜನ್ ಪಿಳ್ಳೈ ಅವರ Keralabhashayude Vikasaparinamangal ಎಂಬ ಕೃತಿಯ ಕೇರಳದಲ್ಲಿ ಮಲಯಾಳಂ ಭಾಷೆಯ ವಿವಿದ ಹಂತಗಳನ್ನು ದಾಖಲಿಸುತ್ತದೆ. ಶಾಸನಾಧಾರ, ಸಾಹಿತ್ಯಿಕ ಮತ್ತು ಐತಿಹಾಸಿಕ ಅಂಶಗಳಿಂದ ಈ ಹಂತಗಳನ್ನು ವಿವರಿಸುತ್ತಾರೆ. ಕುಂಜನ್ ಪಿಳ್ಳೈಯವರು ಮಲೆಯಾಳಂ ತಮಿಳಿನಿಂದ ಬಂದುದೆಂಬುದನ್ನು ಪ್ರತಿಪಾದಿಸುತ್ತಾರೆ. ೧೭ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದ ಇವರು Lalatilakam and Studies in Kerala History’ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ.

ಎಳುಮ್ ಕುಳಮ್ ಕುಂಜನ ಪಿಳ್ಳೈ ನವಂಬರ್‍ ೮, ೧೯೦೪ರಲ್ಲಿ ಜನಿಸಿದರು, ಕೇರಳದ ಇತಿಹಾಸ ತಜ್ಞರಾಗಿ ಪ್ರಸಿದ್ಧರು (Kollam Dist) ಕೊಳಮ್ ಜಿಲ್ಲೆಯ ಎಳಮ್ ಕುಳಮ್ ಹಳ್ಳಿಯ ಹತ್ತಿರದ Kalluvathukkal (ಕಳ್ಳುವತ್ತು ಕ್ಕಲ್) ನಲ್ಲಿ ಜನಿಸಿದರು. ಕೊಳಮ್ ಮತ್ತು ತಿರುವನಂತಪುರಮ್‌ಗಳಲ್ಲಿ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಪೂರೈಸಿದರು. ಅಣ್ಣಾಮಲೈ ವಿ.ವಿ. ದಿಂದ ಸಂಸ್ಕೃತದಲ್ಲಿ ಪದವಿ ಪಡೆದು ಶಿಕ್ಷಕ ವೃತ್ತಿಯನ್ನು ಸ್ವೀಕರಿಸಿದರು. ನಂತರ ತಿರುವನಂತಪುರಮ್‌ ಮಲಯಾಳಂ ಉಪನ್ಯಾಸಕರಾದರು. ತ್ರಿವೇಂದ್ರಮ್ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಮಲೆಯಾಳಂ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೊನೆಯಲ್ಲಿ ಸೇವೆ ಸಲ್ಲಿಸಿದರು.

ಭಾಷೆ ಸಾಹಿತ್ಯದ ನಂತರ ಭಾಷೆಯ ಇತಿಹಾಸ, ಸಂಸ್ಕೃತಿ ಮತ್ತು ಸಾಮಾಜಿಕ ಇತಿಹಾಸದೆಡೆಗೆ ಅವರ ಆಸಕ್ತಿ ಬೆಳೆಯಿತು. ತಮ್ಮ ಸಂಶೋಧನೆಗಾಗಿ ತಮಿಳ್, ಕನ್ನಡ, ತುಳು ಮತ್ತು ಪಾಲಿ ಭಾಷೆಗಳನ್ನು ಕಲಿತರು. Sir Mortimer wheeler ಜೊತೆಗೆ ಹರಪ್ಪಾ, ಚಂದ್ರವಳ್ಳಿ ಮತ್ತು ಬ್ರಹ್ಮಗಿರಿ ಉತ್ಪನದಲ್ಲಿ ಕಾರ್ಯನಿರ್ವಹಿಸಿದರು. ಕೇರಳವು ಸಂಗಮ್ ಕಾಲದ ತಮಿಳಕಂನ ಅವಿಭಾಜ್ಯ ಅಂಗ ಎಂದೆ ಭಾವಿಸಿದ್ದರು ಅದು ಕೇರಳವು ತನ್ನದೇ ಆದ ಮತ, ಸಮಾಜ, ಜಾತಿ ವರ್ಗ ಹೊಂದಿವೆ ಎಂಬ ಪೂರ್ವಸೂರಿಗಳ ವಿಚಾರಕ್ಕೆ ವ್ಯತಿರಿಕ್ತವಾಗಿತ್ತು. ತಮಿಳು ಮತ್ತು ಆಂಗ್ಲಭಾಷೆಯಲ್ಲಿ ಹಲವಾರು ವಿಚಾರಗಳ ಬಗ್ಗೆ ಬರೆದಿದ್ದಾರೆ. ಇವುಗಳಲ್ಲಿ ಕೆಲವು ಕೇರಳ ಇತಿಹಾಸಕ್ಕೆ ಸಂಬಂಧಿಸಿವೆ, ಕೆಲವು ವಿಚಾರಗಳು ಹೊಂದಿಲ್ಲವೆನಿಸಿದರೂ ಆ ಬಗೆಗಿನ ಪ್ರಯತ್ನ ಅವರ ಹಿರಿಮೆ, ಸಾಧನೆ ಇಂಗ್ಲಿಷ್ ನಲ್ಲಿ Studies in Kerala History & some problems in Kerala history’ ಹಾಗೂ ತಮಿಳಿನಲ್ಲಿ ‘Pandai Keralam’ ಬರೆದಿದ್ದಾರೆ.

೨೪. ಕೃಷ್ಣಸ್ವಾಮಿ ಅಯ್ಯರ್ ಎಸ್. (೧೮೭೯೧೯೪೭)

ಕೃಷ್ಣಸ್ವಾಮಿ ಅಯ್ಯರ್‍ರವರು ಬಹುಮುಖಿ ಪ್ರತಿಭೆ, ಪುರಾತತ್ವಜ್ಞ ಇತಿಹಾಸಕಾರ ಹಾಗೂ ಸಂಶೋಧಕರಾಗಿ ಅಯ್ಯರವರು ಬಹುಶ್ರುತರೆನಿಸಿದ್ದಾರೆ.

ಕೃಷ್ಣಸ್ವಾಮಿ ಅಯ್ಯರ್‍ರವರು ೧೫ ಏಪ್ರಿಲ್ ೧೮೭೬ರಲ್ಲಿ ಮದ್ರಾಸ್‌ನ ಮೈಲಾಪೂರಂನಲ್ಲಿ ಜನಿಸಿದರು. ಮದ್ರಾಸ್ ಮತ್ತು ಬೆಂಗಳೂರುಗಳಲ್ಲಿ ಶಿಕ್ಷಣ ಪಡೆದು ಬೆಂಗಳೂರು ಮತ್ತು ಕಲ್ಕತ್ತಾ ವಿ.ವಿ. ಗಳಲ್ಲಿ ಬೋಧನೆ ಮಾಡಿದರು. ದಕ್ಷಿಣ ಭಾರತ ಇತಿಹಾಸ ಕುರಿತು ಹಲವಾರು ಪುಸ್ತಕ ಪ್ರಕಟಿಸಿದ್ದಾರೆ. Beginnings of social indian history Cheran Vanchi Evolution Of Hindi Administrative Institiions in south indian hindu india history of tirupati Ramanuja His life an times South india and her muhammadam indian culture’. ಇವೇ ಅತ್ಯುತ್ತಮ ಕೃತಿಗಳೆನಿಸಿವೆ.

೨೫. ಕೃಷ್ಣಮೂರ್ತಿ . (೧೯೨೮.)

ಇತ್ತೀಚಿನ ದ್ರಾವಿಡ ಚಿಂತಕರಲ್ಲಿ ಭ. ಕೃಷ್ಣಮೂರ್ತಿಯವರದು ಪ್ರಸಿದ್ದ ಹೆಸರು ಭಾಷಾ ವಿಜ್ಞಾನಿಯಾಗಿ ದ್ರಾವಿಡ ಮತ್ತು ತೆಲುಗು ಭಾಷಾಧ್ಯಯನ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ಮಾಡಿದ್ದಾರೆ, ತೆಲುಗು ಮಧ್ಯದ್ರಾವಿಡ ಭಾಷೆಯಲ್ಲವೆಂಬುದನ್ನು ಮೊಟ್ಟಮೊದಲ ಬಾರಿಗೆ ಪ್ರತಿಪಾದಿಸಿದವರು.

ತೌಲನಿಕ ದ್ರಾವಿಡ, ಬುಡಕಟ್ಟು ಭಾಷೆಗಳು ಅಲ್ಲದೇ ತೆಲುಗು ಭಾಷೆಯ ವಿಭಿನ್ನ ಅಂಶಗಳನ್ನು ಅತ್ಯಂತ ಆಸಕ್ತಿಯಿಂದ ಅಧ್ಯಯನ ಮಾಡಿದರು, ೧೯೭೧ರಲ್ಲಿ ಇವರು ರಚಿಸಿದ ಕೃತಿ Telugu Verbal Bases: A comparative and descriptve Study’ಯು ಆಧುನಿಕ ದ್ರಾವಿಡ ಭಾಷಾ ವಿಜ್ಞಾನದಲ್ಲಿ ಅತ್ಯಂತ ಮಹತ್ವದೆನಿಸಿದೆ. ಇವರು Mandalika Vrittipado Kasam ಮತ್ತು A Dialect dictionary of Telugu occupational terms’ ಎಂಬ ಕೃತಿಗಳನ್ನು ಸಂಪಾದಿಸಿದ್ದಾರೆ. ಅಲ್ಲದೆ’ Proto Dravidian, ‘೧೯೬೮ ರಲ್ಲಿ ಅದೇ ವರ್ಷ Alternations of i / e and u / o into protodravidian ಹಾಗೂ Arealand Lexical diffusion of sound change ೧೯೭೮ ರಲ್ಲಿ Konda or kubi a dravidian Language ೧೯೬೯ರಲ್ಲಿ A Short outline of Telugu Phoneties ‘೧೯೭೭ ರಲ್ಲಿ ಮತ್ತು ‘A Grammar of modern Telugu ‘ ಎಂಬುದನ್ನು ೧೯೮೫ ರಲ್ಲಿ Jpl Gwynn ಅವರೊಂದಿಗೆ ಕಾರ್ಯನಿರ್ವಹಿಸಿ ಪ್ರಕಟಿಸಿದ್ದಾರೆ.

೨೬. ಕೇರಳ ಪಾಣಿನಿ (೧೮೬೩೧೯೧೮)

ಅನಂತಪುರ ರಾಜಾರಾಜವರ್ಮ ಅವರನ್ನು ಕೇರಳ ಪಾಣಿನಿ ಎಂದು ಕರೆಯುತ್ತಾರೆ. ಇವರು. ಕೇರಳ ಪಾಣಿನಿಯಂ ಎಂಬ ಮಲಯಾಳಂ ವ್ಯಾಕರಣ ಕೃತಿಯ ಕರ್ತೃ ಇದಲ್ಲದೆ ಇವರು ತತ್ವಶಾಸ್ತ್ರ, ಭಾಷಣಕಲೆ, ತರ್ಕ ಜ್ಯೋತಿಷ್ಯ ಖಗೋಳ, ವೈದ್ಯಕೀಯ ಕ್ಷೇತ್ರಗಳಲ್ಲೂ ಪರಿಣಿತರಾಗಿದ್ದರು. ಸಸ್ಕೃತ ಮಲಯಾಳಂಗಳಲ್ಲಿ ವಿಮರ್ಶಾತ್ಮಕವಾಗಿ, ಸೃಜನಾತ್ಮಕವಾಗಿ ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ.

೧೯೧೧ರಲ್ಲಿ ಮಹಾರಾಜಾ ಕಾಲೇಜಿಲನಲ್ಲಿ ಭಾರತೀಯ ಭಾಷೆಗಳ ಮೇಲ್ವಿಚಾರಕರಾಗಿ ನೇಮಕವಾದ ಇವರು ತದನಂತರ ತಮ್ಮ ಎಲ್ಲ ಗಮನವನ್ನು ಮಲೆಯಾಳಂ ಭಾಷಾಧ್ಯಯನಕ್ಕೆ ಮೀಸಲಾಗಿದ್ದರು. ಸಂಸ್ಕೃತ ಮತ್ತು ದ್ರಾವಿಡಿಯನ್ ಭಾಷೆಗಳ ಪ್ರಾಧ್ಯಾಪಕರೆಂದು ನೇಮಕವಾದ ಇವರು ಕೇರಳ ಪಾಣಿನಿಯಮ್ ಬರೆಯಲು ಉದ್ಯುಕ್ತರಾದರು.

ಕೇರಳ ಪಾಣಿನಿಯಂ ಮೂಲ ಆವೃತ್ತಿಯಲ್ಲಿ ೩೫೯ (aphorisms) ಸೂತ್ರಗಳಿದ್ದಲ್ಲಿ ಪ್ರತಿಯೊಂದಕ್ಕೂ ಪೂರ್ಣಪ್ರಮಾಣದ ವ್ಯಾಖ್ಯಾನವಿದೆ. ಕೃತಿಯಲ್ಲಿ ೪ ವಿಭಾಗಗಳಿವೆ. ಪ್ರಥಮ ಭಾಗದಲ್ಲಿ ಅಕ್ಷರಗಳು ಮತ್ತು ಅವುಗಳ ಗುಣಿತಾಕ್ಷರಗಳು (Letters and their combination) ವ್ಯಾಕರಣದ ಪಾರಿಭಾಷಿಕ ಪದಗಳ ಬಗ್ಗೆ ವ್ಯಾಖ್ಯೆ ಇದೆ. ಉಳಿದ ಭಾಗಗಳು Morphology, ವಾಕ್ಯರಚನೆ ಮತ್ತು ನಿಷ್ಟತ್ತಿ, ಕ್ರಿಯಾಪದ ಧಾತುಗಳ ಬಗ್ಗೆ ಉಲ್ಲೇಖವಿದೆ.

ಕೇರಳ ಪಾಣಿನಿಯಮ್‌ನ ಪರಿಷ್ಕೃತ ಆವೃತ್ತಿಯಲ್ಲಿ ಐತಿಹಾಸಿಕ ಅಂಶಗಳು ಒಳಗೊಳ್ಳುತ್ತವೆ. ೧೪ನೇ ಶತಮಾನದ ಲೀಲಾತಿಲಕಮ್ ಎಂಬ ವ್ಯಾಕರಣಗ್ರಂಥ ಇತ್ಯಾದಿ. ಆಕರಗಳನ್ನು ಬಳಸಿಕೊಳ್ಳಲಾಗಿದೆ. ಕಾಲ್ಡವೆಲ್‌ನ ಮಾಹಿತಿಯನ್ನು ಬಳಸಿಕೊಳ್ಳಲಾಗಿದೆ. ಅಲ್ಲದೆ ಸಂಸ್ಕೃತದಿಂದ ಪದಸ್ವೀಕರಣವನ್ನು ಕಡಿಮೆ ಮಾಡಲು ಬಯಸಿದರು. ಅನಿವಾರ್ಯವಾಗಿ ಸ್ವೀಕರಿಸುವಾಗ ಮಲೆಯಾಳಮ್, ಭಾಷೆಗೆ ಅನುಗುಣವಾಗಿ ಬದಲಾಯಿಸಿ ಸ್ವೀಕರಿಸಬೇಕು. ಸಂಸ್ಕೃತದ ನಿಯಮ ರಹಿತವಾದರೂ ಸರಿಯೇ ಮಲಯಾಳಂ ಗದ್ಯಕ್ಕೆ ಸಂಸ್ಕೃತ ಮಾದರಿ ಅಲ್ಲ ಎನ್ನುವುದು ಇವರ ನಿಲುವು.

ಪೂರ್ವಸೂರಿಗಳ Second syllable rhyme (ದ್ವಿತೀಯಾಕ್ಷರ ಪ್ನಾಸ) ಎಂಬುದನ್ನು ವಿರೋಧಿಸಿದರು. ಅನೇಕ ಚರ್ಚೆಗಳು ಇದರಿಂದ ಹುಟ್ಟಿಕೊಂಡವು. ನಂತರ ಕೇರಳ ವರ್ಗದ ಅಭಿಮತದಂತೆ ಸಂಪೂರ್ಣವಾಗಿ ಬಿಡದೇ ಹೋದರೂ ಕಾವ್ಯದ ಭಾವ ಮತ್ತು ಅರ್ಥಕ್ಕೆ ಒತ್ತು ಕೊಟ್ಟು ಸೃಜನಶೀಲತೆಯನ್ನು ಬೆಂಬಲಿಸಿದವರು. ಅಲ್ಲದೇ ಮಲಯಾಳಂ ತಮಿಳಿನ ಉಪಭಾಷೆ ಎಂದು ಪ್ರತಿಪಾದಿಸಿದರು.

೨೭. ಗಸ್ತಾವ್‌ಕೀ ಜ್ (೧೮೨೧೧೮೭೦)

ಒಬ್ಬ ಮಿಶನರಿಯಾಗಿ ಭಾರತಕ್ಕೆ ೧೮೪೫ರಲ್ಲಿ ಬಂದರು ಕರ್ನಾಟಕದ ಉತ್ತರ ಕರ್ನಾಟಕ ಪ್ರಾಂತದ ಬೆಟಗೇರಿ ಹಾಗೂ ಗುಳೇದಗುಡ್ಡದಲ್ಲಿ ನೆಲೆಸಿದರು. ದಕ್ಷಿಣ ಮಹಾರಾಷ್ಟ್ರ ಎಂದು ಕರೆಯಲ್ಪಡುತ್ತಿದ್ದ ಈ ಪ್ರಾಂತ್ಯದ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿ ಪುಸ್ತಕವೊಂದನ್ನು. ಈ ವಿಷಯವು ೧೮೬೬ ರ ಮಠಪತ್ರಿಕೆಯಲ್ಲಿ ಉಲ್ಲೇಖಗೊಂಡಿದೆ.

೨೮. ಗಂಗೊಳ್ಳಿ ಕೃಷ್ಣ ರಾವ್

ಗಂಗೊಳ್ಳಿ ಕೃಷ್ಣರಾವ್ ವಕೀಲರಾಗಿದ್ದರು. ದಕ್ಷಿಣ ಕನ್ನಡದಲ್ಲಿ ಪ್ರಚಲಿತವಿದ್ದ ಅಳಿಯಸಂತಾನ ಕಟ್ಟಿನ ಬಗೆಗೆ ಕಾನೂನು ರೀತಿಯ ವಿಷಯದೊಂದಿಗೆ ಇಲ್ಲಿ ವಿಶ್ಲೇಷಿಸಲಾಗಿದೆ. ಈ ಕುರಿತು. A treatise on Aliya- Satana law and usage 1898ರಲ್ಲಿ ಎಂಬ ಕೃತಿ ಬರೆದಿದ್ದಾರೆ.

ಕೃತಿಯಲ್ಲಿ ಈವರಿಗಿನ ಅಳಿಯ ಸಂತಾನದ ಬಗಾಗಿನ ಮೂಲಗಳೂ ಸಂಪೂರ್ಣವಾಗಿ ಇರದೇ ಇದ್ದರಿಂದ ಹಾಗೂ ಹಲವಾರು ಅಳಿಯ ಸಂತಾನದ ಕೇಸುಗಳಲ್ಲಿ ಅದರ ಕಾನೂನು ರೂಢಿಯ ಬಗೆಗಿನ ಸಂಶಯಗಳಿಗೆ ಆಧಾರ ಲಭ್ಯವಿಲ್ಲದುದನ್ನು ವಿವರಿಸಿ, ರಚನೆಯ ಹಿನ್ನಲೆಯನ್ನು ಹೇಳಿದ್ದಾರೆ. ಆದರೆ ಅವರೇ ಹೇಳಿರುವಂತೆ ಕೇವಲ ಇತ್ಯರ್ಥಗೊಂಡ ಕೇಸುಗಳ ವಿವರಗಳನ್ನು ಕಲೆಹಾಕುವದಷ್ಟೆ ಅವರ ಉದ್ದೇಶವಲ್ಲಿ ಬದಲಾಗಿ ಅದರಾಚೆಗಿನ ಈ ಕಟ್ಟೆಳೆಯ ತತ್ವಗಳ ಬಗ್ಗೆ ಒಂದು ಸರ್ವಸಾಮಾನ್ಯ ಚರ್ಚೆಯನ್ನು ಹುಟ್ಟುಹಾಕಿದ್ದಾರೆ ಆಸಕ್ತಿ ಇರುವವರೆಲ್ಲರಿಗೂ ಉಪಯುಕ್ತವಾಗಲಿ ಎಂಬುದು ಉದ್ದೇಶ. ಹಾಗಾಗಿ ವರದಿಯಾದ ಮತ್ತು ವರದಿಯಾಗದ ಕೇಸುಗಳ ನಡುವೆ ಯಾವುದೇ ವ್ಯತ್ಯಾಸ ಎಣಿಸಿಲ್ಲ.

ಕೃತಿಯಲ್ಲಿ ಅಳಿಯ ಸಂತಾನ ಕಟ್ಟು ಉಗಮ ಹಿಂದು ಮತ್ತು ಅಳಿಯ ಸಂತಾನ ಕಟ್ಟು ನಡುವಿನ ವ್ಯತ್ಯಾಸ, ವೈಶಿಷ್ಟ್ಯಗಳು, ಭೂತಾಳ ಪಾಂಡ್ಯನ ಕಟ್ಟು ಅದರ ಅಧಿಕೃತತೆ, ಕಟ್ಟುಗಳಲ್ಲಿನ ವಿಷಯಗಳು, ಬಲಿ ಸನ್ಮಾನ, ಜನನ ಮರಣಗಳ ಕರ್ಮಗಳು ಮತದ ವಿಚಾರ, ಕುಟುಂಬದ ಆಸ್ತಿಹಕ್ಕು, ವಿವಾಹ, ವಿವಾಹಗಳು ಕಾನೂನಿನ ಚೌಕಟ್ಟಿಗೆ ಬಳಪಡದಿರುವಿಕೆ, ಸಂಪ್ರದಾಯದ ಅಭಾವ, ವಿವಾಹ ವಯಸ್ಸು, ವಿಧವಾ ವಿವಾಹ ವಿಚ್ಚೇದನ ಇತ್ಯಾದಿ ಮಲಬಾರ ಹಾಗೂ ಅಳಿಯ ಸಂತಾನದ ಕಟ್ಟು ಪ್ರಾಚೀನ ಕಾಲದಲ್ಲಿ ವಿಸ್ತಾರರೂಪದಲ್ಲಿ ಇದ್ದುದರ ಬಗೆಗಿನ ಕುರುಹು ಇಲ್ಲಿ. ಜೊತೆಗೆ ಕುಟುಂಬದ ಆಸ್ತಿ ಒಡೆಯುವಂತೆಯೇ ಇಲ್ಲ ಎಂಬೆಲ್ಲ ವಿಷಯಗಳ ಕುರಿತು ಚಿಂತನೆ ಇದೆ.

ಅಲ್ಲದೇ ಟಿಟ್ಟಣಿ ೨೩ ರಲ್ಲಿ ಭೂತಾಳಿ ಪಂಡ್ಯನ ಕಟ್ಟುಕಟ್ಟಳೆ ಬಗ್ಗೆ ವಿಮರ್ಶೆ ಇದೆ. ಈ ಐತಿಹ್ಯದ ಬಗ್ಗೆ ಮೊದಲಲ್ಲಿ ಪ್ರಶ್ನೆ ಮಾಡಲಾಗಿದೆ. ಯಾವುದೋ ಘಟನೆಯ ಪರವಾಗಿ ನಡೆದ ಈ ಕಥೆಯು ಮುಂದೆಯೂ ಹೀಗೆ ಪ್ರಚಲಿತವಾಗುವ ಕಾರಣವೇನು? ಅಳಿಯ ಸಂತಾನ ಕಟ್ಟಿನಿಂದ ಜನರಿಗೆ ನಷ್ಟವಾಯಿತಲ್ಲದೇ ಲಾಭವೇನೋ ಆಗಲಿಲ್ಲ. ಹಾಗಾಗಿ ಆ ಕಟ್ಟು ಬಿಡುವ ಬಗೆಗಿನ ಬಗ್ಗೆ ಚಿಂತನೆಯನ್ನು ಬೇರೆ ಅಂಶಗಳಿಂದ ಪ್ರತಿಪಾದಿಸಲಾಗಿದೆ. ಹಿಂದೂಸ್ತಾನದ ರಾಜಧಾನಿಯಾದ ಕಲಕತ್ತಾ ಪಟ್ಟಣದಲ್ಲಿ ಲೆಜಿಸ್ಲೆಟಿವ್ ಕೌನ್ನಿಲ್ ಸಭೆಗೆ ಅರ್ಜಿ ಬರೆದು ಕೊಡುವ ಬಗೆಗೆ ಇಲ್ಲಿ ಚಿಂತನೆಯಿದೆ.

೨೯. ಗಾಡ್ ಫ್ರೆ ವೈಗಲ್ (೧೮೧೬೧೮೫೫)

ಗಾಡ್ ಫ್ರೆವೈಗಲ್ ೧೮೧೯ ರಲ್ಲಿ ತ್ಸೆಲ್ ಎಂಬ ಗ್ರಾಮದಲ್ಲಿ ಜನಿಸಿದರು. ಮೊದಲು ಕ್ರೈಸ್ತ ಶಿಕ್ಷಣವನ್ನು ಪೂರೈಸಿ ೧೮೩೫-೧೮೩೮ರವರೆಗೆ ಟ್ಯೂಬಿಂಗಲ್ ವಿಶ್ವವಿದ್ಯಾಲಯದಲ್ಲಿ ಅರಬ್ಬಿ ಮತ್ತು ಸಂಸ್ಕೃತಗಳನ್ನು ಕಲಿತರು. ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆಭಾರತೀಯರಿಗೆ ಹಾಗೂ ಜಾಗತಿಕ ಮಟ್ಟದಲ್ಲಿ ಮಹತ್ವವನ್ನು ತಿಳಿಸಿಕೊಟ್ಟರು. ಜರ್ಮನ್‌ನ ಒಂದು ಪ್ರತಿಷ್ಠಿತ ಪತ್ರಿಕೆ (ZDMG) ಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಬರೆದರು. ತೌಲನಿಕ ಅಧ್ಯಯನದ ಕಲ್ಪನೆಯನ್ನು ಮೊದಲ ಬಾರಿಗೆ ನೀಡಿದವರು. ಸಂಸ್ಕೃತ ಭಾಷೆ ದ್ರಾವಿಡ ಭಾಷೆಗಳಿಗೂ ಇರುವ ವ್ಯತ್ಯಾಸವನ್ನು ತೋರಿಸಿಕೊಟ್ಟರು. ಜನಪದ ಸಾಹಿತ್ಯವು ಶುದ್ಧ ಸಾಹಿತ್ಯವೆಂದು ತಿಳಿಸಿ ಯಕ್ಷಗಾನ ಪ್ರಸಂಗಗಳು ಹಾಗೂ ಜನಪದ ಹಾಡುಗಳನ್ನು ಸಂಗ್ರಹಿಸಿದರು. ಕರ್ನಾಟಕ ಶಬ್ದ ಮಂಜರಿಯನ್ನು ಕನ್ನಡದ ಅವರ ಕೋಶವೆಂದು ಇಂಗ್ಲಿಷಿಗೆ ಭಾಷಾಂತರಿಸಿದರು.

೩೦. ಗ್ರಿಬಲ್ ಜೆ.ಡಿ.

ಗ್ರಿಬಲ್ ಅವರು ದಕ್ಷಿಣ ಭಾರತದ ಇತಿಹಾಸಕ್ಕೆ ಹಲವು ಪೂರ್ವ ದಾಖಲೆಗಳನ್ನು ಇಟ್ಟುಕೊಂಡು ೧೩ನೇ ಶತಮಾನದ ಮಹಮ್ಮದೀಯರ ದಾಳಿಯ ನಂತರದ ದಕ್ಷಿಣ ಭಾರತದ ಚರಿತ್ರೆಯನ್ನು ವಿಶ್ಲೇಷಿಸಿದ್ದಾರೆ. ಅಲ್ಲದೆ ಭಾರತದ ಚರಿತ್ರೆ ಸುವ್ಯವಸ್ತಿತವಾಗಿಲ್ಲದ ಕಾರಣ ತಾನು ಚರಿತ್ರೆ ಬರೆಯಲು ತೊಡಗಿರುವುದಾಗಿ ಅವರೇ ಹೇಳಿಕೊಳ್ಳುತ್ತಾರೆ, ಡೆಕ್ಕನ್ ಎಂಬ ಪದವನ್ನು ದಂಡಕ ಎಂಬ ಶಬ್ದದಿಂದ ಬಂದಿರಬೇಕು ಎನ್ನುತ್ತಾರೆ. ರಾಮ ಇಲ್ಲಿ ವನವಾಸಕ್ಕಾಗಿ ಬಂದಿದ್ದುದನ್ನು ತಿಳಿಸುತ್ತಾರೆ. ಸಂಸ್ಕೃತದ ದಕ್ಷಿಣ ಪದ, ಪ್ರಾಕೃತ ಶಬ್ದ Dakkanin ಎಂಬ ಅಪಭ್ರಂಶ ರೂಪ ಎಂಬುದಾಗಿ ಪ್ರತಿಪಾದಿಸುತ್ತಾರೆ.

“The Deccan” ಕೃತಿಯಲ್ಲಿ ೩ ಭಾಗಗಳಿದ್ದು ೨೬ ಅಧ್ಯಾಯಗಳಿವೆ. ಡೆಕ್ಕನ್ ಎನ್ನುವುದು ಉತ್ತರಕ್ಕೆ ವಿಂಧ್ಯಪರ್ವತ ಮತ್ತು ಗೋದಾವರಿ (ಉತ್ತರಕ್ಕೆ) ಹಾಗೂ ತುಂಗಭದ್ರ ಮತ್ತು ಕೃಷ್ಣಾನದಿಗಳು (ದಕ್ಷಿಣಕ್ಕೆ) ಪರ್ವತಗಳ ಶ್ರೇಣಿಗಳು ಮತ್ತು ಸಮುದ್ರದ ಅಂಚಿನಿಂದ ಎರಡೂ ಕಡೆ ಆವೃತ್ತವಾಗಿರುವ ದಕ್ಷಿಣ ಭಾರತದ ಒಂದು ಭೂಭಾಗವಾಗಿ ಪರಿಗಣಿಸಲಾಗಿದೆ. ಈ ಭೂಭಾಗದ ವಿಸ್ತೀರ್ಣ ಇಂಗ್ಲೆಂಡ್‌ ಮತ್ತು ಐರ್ಯಲಂಡನ್ ಭೂಭಾಗಕ್ಕೆ ಸಮ. ಸಮುದ್ರ ಮಟ್ಟಕ್ಕಿಂತ ೧೦೦೦ ದಿಂದ ೨೦೦೦ ಮೇಲಕ್ಕೆ ಇರುವ ಪ್ರದೇಶ ಮಹಮ್ಮದೀಯರ ಪ್ರವೇಶವಾಗಿರುವ ಮುಂಚೆ ಇಲ್ಲಿ ಶಾಸನಗಳು ಮತ್ತು ಶಿಲ್ಪಕಲೆ ಇವುಗಳ ಹೊರತಾದ ಯಾವ ಮಾಹಿತಿ ಲಭ್ಯವಿರಲಿಲ್ಲಿ ಅಲ್ಲದೇ ಭಾರತದಂಥ ದೊಡ್ಡ ದೇಶದ ಕುರಿತು ಹೇಳುವಾಗ ಅವನು ಎಷ್ಟೇ ನಿಷ್ಠಾವಂತನಾದರೂ ಬಾಹ್ಯನೋಟ ಸಾಧ್ಯವೇ ವಿನಃ ಒಟ್ಟು ನೋಟವಲ್ಲ. ಹಾಗಾಗಿ ಮಾಹಿತಿಗಳ ಬಗೆಗೆ ಗೊಂದಲವಿದೆ, ಹಾಗಾಗಿ ಚದುರಿ ಹೋದ ತುಣುಕುಗಳನ್ನು ಒಂದು ಕಡೆ ಸೇರಿಸಿ ತರ್ಕಬದ್ಧವಾಗಿಸುವ ಪ್ರಯತ್ನ ಇಲ್ಲಿದೆ, ಅಲ್ಲದೆ ಗೆಝೆಟಿಯರಗಳು ಕಚೇರಿ ಆಚೆಗೆ ಪ್ರಚುರವಾಗಿಲ್ಲ ಎಂಬ ಮಾತನ್ನು ಅವರು ಹೇಳುತ್ತಾರೆ, ಹಾಗಾಗಿ ಈಗಾಗಲೇ ರಚಿಸಿಗೊಂಡ ಇತಿಹಾಸದ ಆಕರಗಳ ಸಮೀಕ್ಷೆ ಒದಗಿಸುತ್ತಲೇ ಸಮಗ್ರ ನೋಟ ಕೊಟ್ಟಿದ್ದಾರೆ. ಬಹುಶಃ ಡೆಕ್ಕನ್ ಕಲ್ಲನೆಯ ಪರಿಪೂರ್ಣ ಚಿತ್ರಣ ಇದಾಗಿದೆ.