೩೧. ಗುಂಡರ್ಟ್ ಹರ್ಮನ್

ಗುಂಡರ್ಟ್ ಅವರು ಮಲಯಾಳಂನ ವ್ಯಾಕರಣ ಪಿತಾಮಹ, ಮಲಯಾಳಂ ಭಾಷಾ ತಜ್ಞರಾಗಿ ಇವರು ತುಂಬ ಪ್ರಸಿದ್ಧರು. ಗುಂಡರ್ಟ್ ಬಹು ಭಾಷಾ ವಿದ್ವಾಂಸರು ಕೂಡ ಜರ್ಮನ್, ಪಎಂಚ್, ಇಂಗ್ಲೀಷ್, ಗ್ರೀಕ್, ಹಿಬ್ರು, ಲ್ಯಾಟಿನ್ ಭಾಷೆಗಳನ್ನು ಭಾರತಕ್ಕೆ ಬರುವ ಪೂರ್ವದಲ್ಲಿಯೇ ಅಧ್ಯಯನ ಮಾಡಿದ್ದರು. ಇಂಡಿಯಾಕ್ಕೆ ಬಂದ ನಂತರ ಹಿಂದೂಸ್ತಾನಿ, ಬಂಗಾಲಿ, ಮಲಯಾಳಂ, ತೆಲುಗು, ಕನ್ನಡ ಮತ್ತು ತಮಿಳುಗಳನ್ನು ಕಲಿತರು.

ಹರ್ಮನ್ ಗುಂಡರ್ಟ್ ಅವರು ಫೆಬ್ರವರಿ ೪, ೧೮೧೪ ರಲ್ಲಿ ಜರ್ಮನಿಯ ಸ್ಟುಟಿಗಾರ್ಟಿನಲ್ಲಿ ಜನಿಸಿದರು, ಧಾರ್ಮಿಕ ಶಿಕ್ಷಣ ಜೊತೆಗೆ ತತ್ವಶಾಸ್ತ್ರ ಮತ್ತು ಭಾಷಾಶಾಸ್ತ್ರಗಳಲ್ಲಿ ಪಿ ಎಚ್.ಡಿ. ಪದವಿ ಪಡೆದುಕೊಂಡರು. ೧೮೩೬ ರಲ್ಲಿ ಭಾರತಕ್ಕೆ ಬಂದು ಮದ್ರಾಸ್‌ನಲ್ಲಿ ನೆಲೆಗೊಂಡರು. ಮದ್ರಾಸ್‌ನ ನೆಬ್ಬೂರಿನಲ್ಲಿಯೇ ತಮ್ಮ ಧಾರ್ಮಿಕ ಕಾರ್ಯದ ಜೊತೆಗೆ ಸಾಹಿತ್ಯಿಕ ಮತ್ತು ಭಾಷಿಕ ಕಾರ್ಯಗಳನ್ನು ಪ್ರಾರಂಭಿಸಿದರು ಮೊದಲಿಗೆ ಶಾಲಾ ಉಪಾಧ್ಯಾಯರಾಗಿ ಕಾರ್ಯ ಪ್ರಾರಂಭಿಸಿದ ಇವರು ಶಾಲಿಯಲ್ಲಿ ಹೊಸ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದರು. ಧಾರ್ಮಿಕ ಜೊತೆ ಜೊತೆಗೆ ಹಲವಾರು ವಿಷಯಗಳನ್ನು ಅಧ್ಯಯನ ಮಾಡಿದ ಪರಿಣಾಮ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಈ ಕೃತಿಗಳು ಧಾರ್ಮಿಕ ಭಾಷಿಕ, ಈತಿಹಾಸಿಕ ವಸ್ತು ವಿಷಯಗಳನ್ನೊಳಗೊಂಡಿವೆ. ಅನೇಕ ತಮಿಳು ಕೃತಿಗಳನ್ನು ಜರ್ಮನ್‌ಗೂ ಮತ್ತು ಇಂಗ್ಲೀಷಿಗೂ ಭಾಷಾಂತರಿಸಿದ್ದಾರೆ.

ಗುಂಡರ್ಟ್ ಅವರು ಮಲಯಾಳಂ ಗಾದೆಗಳನ್ನು ಲ್ಯಾಟಿನ್ ಭಾಷಾಂತರರೊಂದಿಗೆ ಸಂಗ್ರಹಿಸಿದರು. ಪೌಲಿನೋ ಮೊದಲ ಗಾದೆಗಳ ಸಂಗ್ರಹಕರಾದರೆ ಗುಂಡರ್ಟ್ ಎರಡನೆಯವರಾಗುತ್ತಾರೆ. Ayirattirunu rrupalamcol’ (ಆಯಿರತ್ತಿರುನೂರ್‍ಪಳಂಚೋಲ್) ಎಂಬುದು ಗಾದೆಗಳ ಸಂಗ್ರಹದ ಕೃತಿಯಾಗಿದೆ. ಪಾಠಮಾಲಾ ಮತ್ತು ಮಲಯಾಳಂರಾಜ್ಯಮ್ ಎಂಬ ಪಠ್ಯಪುಸ್ತಕಗಳು ಮಲಯಾಳಂನ ಪ್ರಾಚೀನ ಮತ್ತು ಪ್ರಸಿದ್ದ ಕಾವ್ಯಗಳನ್ನು ಹಾಗೂ ಮಲಯಾಳಿ ಚರಿತ್ರೆ ಮತ್ತು ಭೌಗೋಳಿಕತೆಯನ್ನು ವಿವರಿಸುತ್ತವೆ. ಅಲ್ಲದೇ ಮಲಯಾಳಿ ವ್ಯಾಕರಣ ಕುರಿತು Malayala Bhasha Vyakaranam ಮತ್ತು Malayala vyakaranam Codyottaram’ ಕೃತಿಗಳನ್ನು ಬರೆದರು. ಈ ಕೃತಿಯಲ್ಲಿ ಅಕ್ಷರಕಾಂಡ, ಪದಕಾಂಡ ಮತ್ತು ವಾಕ್ಯಕಾಂಡಗಳೆಂಬ ಭಾಗಗಳಿವೆ. ಅಕ್ಷರಕಾಂಡದಲ್ಲಿ ಸ್ವರ, ವ್ಯಂಜನಾದಿಗಳ ಬಗ್ಗೆ ಪದಕಾಂಡದಲ್ಲಿ ನಾಮಪದ, ಕ್ರಿಯಾಪದಗಳ ಬಗ್ಗೆ. ವಾಕ್ಯಕಾಂಡದಲ್ಲಿ ಸಾಹಿತ್ಯಿಕ ಮತ್ತು ಆಡು ಭಾಷೆಗಳನ್ನು ಉದಾಹರಿಸುತ್ತಾ ಪದಗಳ ಅರ್ಥವ್ಯತ್ಯಾಸವಾಗುವ ಪರಿಯನ್ನು ಕಾಣಬಹುದು. ತಮಿಳು ಮತ್ತು ಸಂಸ್ಕೃತಿ ಸಂಪ್ರದಾಯಗಳನ್ನು ಆಧಾರವಾಗಿಟ್ಟುಕೊಂಡು ಅಲ್ಲಲ್ಲಿ ತನ್ನದೇ ಆದ ಪದಪ್ರಯೋಗದ ಮೂಲಕ ಕೃತಿ ರಚಿಸಿದ್ದಾರೆ. ತನ್ಮೂಲಕ ಮಲಯಾಳಂನ ಗಮನಾರ್ಹ ಅಂಶಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ ಮಲಯಾಳಂ ೧೨ ಸ್ವರಗಳು ಮತ್ತು ೧೮ ವ್ಯಂಜನಗಳನ್ನುಳ್ಳದು. ಮಿಕ್ಕ ಕೆಲವನ್ನು ಸಂಸ್ಕೃತದಿಂದ ಪಡೆದುಕೊಳ್ಳಲಾಗಿದೆ. ಕ್ಷ ಅಕ್ಷರವನ್ನು ವರ್ಣಾಕ್ಷರವೆಂದು ಗುಂಡರ್ಟ್ ಒಪ್ಪಿಲ್ಲ. ಇದೊಂದು ಸಂಯುಕ್ತಾಕ್ಷರವೆಂದು ತಿಳಿಸಿದರು. ಅಲ್ಲದೆ ಋ ಮತ್ತು ರ ಗಳ ಸ್ಥಾನವನ್ನು ನಿರ್ದಿಷ್ಟಪಡಿಸಿದ್ದಾರೆ.

ಚೋದ್ಯೋತ್ತರಮ್ ಶಾಲಾ ಮಕ್ಕಳಿಗಾಗಿ ಬರೆದಿದ್ದಾರೆ. ಪ್ರಶ್ನೋತ್ತರವಾಗಿ ಇದು ಮೂಡಿಬಂದಿದೆ ಮಲಯಾಳಂ ಇಂಗ್ಲೀಷ್ ನಿಘಂಟು ೧೮೭೨ರಲ್ಲಿ ರಚಿತಗೊಂಡಿತು ಆಡು ಮಾತಿನಲ್ಲಿ ಬಳಕೆಯಲ್ಲಿದ್ದ ಎಲ್ಲ ಪದಗಳನ್ನು ಇಂಗ್ಗೀಷ್ ಅರ್ಥದೊಂದಿಗೆ ಹಾಗೂ ಮಲಯಾಳಂ ಇಂಗ್ಲೀಷ ಮಿಶ್ರಣದೊಂದಿಗೆ ವಿವರವನ್ನು ಕೊಡಲಾಗಿದೆ. ಗುಂಡರ್ಟ್ ಅವರಿಗೆ ಮಲಯಾಳಂ ಭಾಷಾನಿಷ್ಟತ್ತಿಯ ಬಗ್ಗೆ ಸ್ಪಷ್ಟತೆ ಇತ್ತು ಮಲಯಾಳವು ದ್ರಾವಿಡ ಅಥವಾ ತಮಿಳರ ಉಪಭಾಷೆ ಎಂಬುದನ್ನು ರಚಿಸಿದರು. ೧೪೯೮ರಲ್ಲಿ ಪೋರ್ಚುಗೀಸರು ಕ್ಯಾಲಿಕಟ್‌ನಲ್ಲಿ ನೆಲೆಗೊಂಡಿದ್ದನ್ನು ಇದು ತಿಳಿಸುತ್ತದೆ. ಕೇರಳೋತ್ಪತ್ತಿ ಎಂಬ ಕೃತಿಯಲ್ಲಿ ದಂತಕಥೆಗಳು ಇವೆ.

೩೨. ಗೋವಿಂದ ಪಿಳ್ಳೈ ಪಿ. ( ೧೮೩೯೧೯೦೭) or (೧೮೫೩೧೮೯೭)

ಗೋವಿಂದ ಪಿಳ್ಳೈ ಮಲಯಾಳಂ ಭಾಷಾ ವಿಜ್ಞಾನಿಗಳು. ಅತ್ಯಂತ ವಿಚಕ್ಷಣತೆಯಿಂದ ಮಲಯಾಳಂ ಶಾಸ್ತ್ರೀಯ ಸಾಹಿತ್ಯವನ್ನು ಅಧ್ಯಯನ ಮಾಡಿದವರು. ಗೋವಿಂದ ಪಿಳ್ಳೈ ಅವರು History of Malayalam Literature ಮೊಟ್ಟ ಮೊದಲ ಪ್ರವರ್ತಕರು ಹಾಗೂ ೧೮೮೧ ರಲ್ಲಿ Malayalam Bhasha Charitam’ ಪ್ರಕಟಿಸಿದವರು ಇದು ಮಲಯಾಳಂ ಸಾಹಿತ್ಯ ಕುರಿತ ಅಧಿಕೃತ ಸಂಶೋಧನಾ ಕೃತಿಯೆನಿಸಿದೆ.

ಗೋವಿಂದ ಪಿಳ್ಳೈಯವರು ತಾಳೆಗರಿ ಹಸ್ತಪ್ರತಿಗಳನ್ನು ಹಲವಾರು ಮಾಹಿತಿಗಳನ್ನು ಸಂಗ್ರಹಿಸಿ ಮಲಯಾಳಂ ಭಾಷಾ ಚರಿತ್ರೆ ಬರೆದರು. ಮೌಖಿಕ ಮತ್ತು ಪೌರಾಣಿಕ ಐತಿಹ್ಯಗಳನ್ನು ಒಳಸಿದರು, ಅವರ ಇನ್ನಿತರ ಕೃತಿಗಳು Basha naisadha Campu ಮತ್ತು Daksayaga Kilippattu Roman History ಮತ್ತು A Hand book of Travancore

೩೩. ಗೋದಾವರ್ಮ ಕೆ. (೧೯೦೨೧೯೫೨)

ಆಧುನಿಕ ಭಾಷಾವಿಜ್ಞಾನ ಕ್ವೇತ್ರದಲ್ಲಿ ಗೋದಾವರ್ಮ ಅವರದು ವಿಶಿಷ್ಟ ಪ್ರತಿಭೆ ಮಲಯಾಳಂ ಭಾಷಾಕ್ಷೇತ್ರಕ್ಕೆ ಇವರದು ಅಪ್ರತಿಮ ಕೊಡುಗೆಯಿದೆ. ಇಂಡೋ ಆರ್ಯನ್ ವಿಷಯದಲ್ಲೂ ಜ್ಞಾನವಿದ್ದ ಇವರು ತೌಲನಿಕವಾಗಿ ಅಧ್ಯಯನ ಕೈಗೂಂಡು ಕೃತಿ ಪ್ರಕಟಿಸಿದ್ದಾರೆ. ೧೯೫೧ರಲ್ಲಿ Kerala Bhasha Vijnaniyam ಪ್ರಕಟಿಸಿದರು ಆಧುನಿಕ ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದಂತೆ ೧೯೪೬ ರಲ್ಲಿ Indo Aryan loan words in Malayalam ರಚಿಸಿದರು ಇವರು ಅನೇಕ ಸಂಶೋಧನಾತ್ಮಕ ಪ್ರಬಂಧಗಳನ್ನು ಸಂಗ್ರಹಿಸಿ ೪ ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ, ‘Karialidarpanam’ ‘Vicaravihi’ ‘Pabandhalatika’ ಮತ್ತು ‘Prabandhasamharam’.

ಪ್ರಖ್ಯಾತ ಭಾಷಾ ವಿಜ್ಞಾನಿ ಗೋದಾವರ್ಮ ಅವರು ೧೯೦೨ರಲ್ಲಿ ಕಿಲ್ಲಿಮಾನೂರು ಎಂಬಲ್ಲಿ ದಕ್ಷಿಣ ಕೇರಳದ ಪರಿಸರದಲ್ಲಿ ಜನಿಸಿದರು. ಸಂಸ್ಕೃತ ಮತ್ತು ಮಲಯಾಳಂನ್ನು ಏಕಕಾಲಕ್ಕೆ ಬಲ್ಲ ಇವರು ಸಾಕಷ್ಟು ಪ್ರೌಢಿಮೆ ಪಡೆದುಕೊಂಡವರು. ಸಂಸ್ಕೃತದಲ್ಲಿ ಎಂ.ಎ. ಪದವಿಯನ್ನು ಮದ್ರಾಸ್ ವಿ.ವಿ ದಲ್ಲಿ ಪಡೆದುಕೊಂಡು ತ್ರಿವೇಂದ್ರಮ್‌‌ನ ಕಾಲೇಜೊಂದರಲ್ಲಿ ಮಲೆಯಾಳಂ ಅಧ್ಯಾಪಕರಾದರು. ನಂತರ ಲಂಡನ್ ವಿ.ವಿ ದಲ್ಲಿ Indo-Aryan loan words in Malayalam ಎಂಬ ವಿಷಯಕವಾಗಿ ಪಿ.ಎಚ್.ಡಿ ಪದವಿ ಪಡೆದುಕೊಂಡರು. ಇವರ ಅನೇಕ ಬರಹಗಳು ವೈಜ್ಞಾನಿಕ ದೃಷ್ಟಿಕೋನ, ಸೂಕ್ಷ್ಮ ಗ್ರಾಹಿತ್ವದಿಂದಾಗಿ ಸೃಜನಶೀಲತ್ವ ಮತ್ತು ವಿಮರ್ಶಕ ನಿಲುವನ್ನು ಏಕಕಾಲಕ್ಕೆ ಪಡೆದುಕೊಳ್ಳುತ್ತವೆ.

೩೪. ಚಾರ್ಲಸ್ ಗ್ರೋವರ್

ಚಾರ್ಲಸ್ ಗ್ರೋವರ್‍ರವರು ಕನ್ನಡ ಜಾನಪದ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಸಾಂಪ್ರದಾಯಿಕವಾಗಿ ಬಳಕೆಯಲ್ಲಿದ್ದ ವಸ್ತುವಿಶೇಷಗಳನ್ನು ಸಂಗ್ರಹಿಸಿ ಕೃತಿರೂಪದಲ್ಲಿ ಪ್ರಕಟಿಸಿದವರು ೧೮೭೧ರಲ್ಲಿ ಚಾರ್ಲಿಸ್ ಗ್ರೋವರ್‍ರವರು Folk songs of Southern India ಎಂಬ ಗ್ರಂಥವನ್ನು ಪ್ರಕಟಿಸಿದರು. ದಕ್ಷಿಣ ಭಾರತದ ವಿವಿಧ ಭಾಷೆಯ ಜನಪದಗೀತೆಗಳು ಇದರಲ್ಲಿವೆ ತೆಲುಗು, ತಮಿಳು, ಮಲಯಾಳ, ಬಡಗ ಕೊಡಗು ಭಾಷೆಯ ಗೀತೆಗಳು ಇಲ್ಲವೆ Canarese Folksongs ಎಂಬ ಕೃತಿಯಲ್ಲಿ ಕನ್ನಡದ ಹಲವಾರು ಗೀತೆಗಳನ್ನು ಸಂಗ್ರಹಿಸಲಾಗಿದೆ. ಒಟ್ಟಿನಲ್ಲಿ ನಾಡುನುಡಿಯ ಮೂಲಕ ಸಂಸ್ಕೃತಿಯೊಂದರ ಅನಾವರಣ ಇಲ್ಲಿದೆ.

Folksongs of Southern India ಎರಡು ಪ್ರಮುಖ ಉದ್ದೇಶಗಳನ್ನು ಇಟ್ಟುಕೊಂಡಿದೆ. ಜನರ ನಿಜವಾದ ಭಾವನೆಗಳನ್ನು ತಳ್ಳಿಹಾಕಲು ಸಾಧ್ಯವೇ ಇರದಂತಹ ಅಸ್ತಿತ್ವ ಪುರಾವೆಯನ್ನು ಪತ್ತೆ ಹಚ್ಚುವ ಮೂಲಕ ಯುರೋಪಿಯನ್ನರು ತಾವು ನಿಜವಾಗಲೂ ಎಲ್ಲಿದ್ದೇವೆ ಏನಾಗಿದ್ದೇವೆ ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡುವುದು, ಎರಡನೆಯದಾಗಿ ಕೃತಿಕಾರನಿಗಿಂತ ಹೆಚ್ಚು ಪ್ರೆತಿಭಾಶಾಲಿಯಾದ ಜನರು ಈ ದಿಕ್ಕಿನಲ್ಲಿ ಹೆಚ್ಚಿನ ಪರಿವೀಕ್ಷಣೆಗೆ ತೊಡಗಿ ದ್ರಾವಿಡಿಯನ್ ಕಾಲದ ಸರ್ವಶ್ರೇಷ್ಠ ಅಂಶಗಳ ಕೃತಿಗಳು ಹೊರಬರಲು ಈ ಸಂಪುಟ ಪ್ರೇರಣೆ ಒದಗಿಸಲಿ ಎಂಬುದು. ಜನರ ದೃಷ್ಟಿ ಈ ಬೃಹತ್ ಮಹತ್ತಿನ ದೇಶ್ಯ ಸಾಹಿತ್ಯದೆಡೆಗೆ ಹೊರಳಲಿ ಎಂಬ ಆಶಯ ಎಂಬುದನ್ನು ಕೃತಿಕಾರರು ತಿಳಿಸಿದ್ದಾರೆ.

ಕೃತಿಯು ವಿವಿಧ ಭಾಷೆಗಳ ಜನಪದ ಹಾಡುಗಳನ್ನು ಒಳಗೊಂಡಿದೆ. ಕನ್ನಡ ೧೫ ಬಡಗ ೬೫, ಕೂರ್ಗ್ ೪೦ ತಮಿಳ್ ೧೪೭, ಕುರಳ್ ೨೦೧ ಮಲಯಾಳಂ ೨೦೬, ತೆಲಗು ೨೬೧ ಇವುಗಳನ್ನು ಇಂಗ್ಲಿಷ್‌ನಲ್ಲಿ ಅನುವಾದ ಮಾಡಲಾಗಿದೆ ಮರಣ ಜೀವನ ಪ್ರಾಮಾಣಿಕತೆ ದೇವರಲ್ಲಿ ಭಕ್ತಿ ನಾನೇಕೆ ನಗುತ್ತೇನೆ, ದೇಹ ಮತ್ತು ಆತ್ಮ ಪಾಪದ ಸಮುದ್ರವನ್ನು ಹೇಗೆ ದಾಟುವುದು. ಸಹಾಯಕ್ಕಾಗಿ ದೊರೆ, ದುಃಖ ಪ್ರಾಮಾಣಿಕ ಇತ್ಯಾದಿ ವಿಷಯಗಳ ಸಂಗ್ರಹವಿದೆ.

ತಮಿಳಿನ ಅದ್ವೈತ ಹಾಡುಗಳು, ಕೆಲಸಗಾರರ ಹಾಡುಗಳ, ಮಲೆಯಾಳಂನ ಕೃಷ್ಣ ರಾಧಾ ಹಾಡುಗಳು, ಕಾಳಿಯ ಬೆಳಗಿನ ಹಾಡುಗಳು, ತೆಲುಗಿನ ಕರ್ಮಕಾಂಡಗಳು, ಜಾತಿ ಮರಣ, ನೈತಿಕ ಮೌಲ್ಯಗಳು, ಹೆಂಡತಿ, ಬ್ರಾಹ್ಮಣರು, ಗಾದೆ ಮಾತುಗಳು ಅಂತಿಮ ತತ್ವಜ್ಞಾನ ಇವುಗಳ ವಿವರವಿದೆ. ಒಟ್ಟಿನಲ್ಲಿ ಜನಜೀವನದ ಸಮಸ್ತ ವಿವರ ಇಲ್ಲಿದೆ.

೩೫. ಚಿನ್ನ ಸೀತಾರಾಮಶಾಸ್ತ್ರಿ (೧೮೭೮೧೯೬೪)

ಸೀತಾರಾಮ ಶಾಸ್ತ್ರೀಯವರು ವಜಾಲಾ ನಿವಾಸಿ. ತೆಲುಗು ಭಾಷೆ ಮತ್ತು ವ್ಯಾಕರಣಶಾಸ್ತ್ರಗಳಲ್ಲಿ ಪರಿಣಿತರಾಗಿದ್ದರು. ಅವರು ಆಂಧ್ರ ವ್ಯಾಕರಣ ಸಂಹಿತ ಸರ್ವಸ್ವಮು ಎಂಬ ಕೃತಿಯನ್ನು ಎರಡು ಸಂಪುಟಗಳಲ್ಲಿ ರಚಿಸಿದ್ದಾರೆ. ದ್ರಾವಿಡ ಭಾಷೆಗಳಲ್ಲಿ ಒಂದಾದ ತೆಲುಗಿನ ಎಡ ಭಾಷಿಕ ಅಧ್ಯಯನ ಇದಾದರೆ ಇನ್ನು ದ್ರಾವಿಡ ವಿಚಾರವಾಗಿಯೇ ದ್ರಾವಿಡ ಭಾಷಾ ಪರಿಶೇಲನಮು ಕೃತಿ ರಚಿಸಿದ್ದಾರೆ. ಇದು ದ್ರಾವಿಡ ಭಾಷಾಶಾಸ್ತ್ರದ ಮೇಲೆ ಬರೆದ ಗ್ರಂಥವಾಗಿದೆ.

೩೬. ಚೆಲ್ಲಾ ರಾಧಾಕೃಷ್ಣ ಶರ್ಮ (೧೯೨೯೧೯೯೮)

ಚೆಲ್ಲಾ ರಾಧಾಕೃಷ್ಣ ಶರ್ಮರು ಕವಿ, ಕಾದಂಬರಿಕಾರ, ಶಿಕ್ಷಕ ಅನುವಾದಕ, ಭಾಷಣಕಾರ, ಆಟಗಾರರಾಗಿ ಬಹುಮುಖಿ ವ್ಯಕ್ತಿತ್ವ ಹೊಂದಿದವರು. ಶರ್ಮ ಅವರು ತೆಲುಗು ತಮಿಳಿನ ಸೇತುವೆಯಾಗಿ ಕೆಲಸ ಮಾಡಿದರು.

ಜನವರಿ ೬, ೧೯೨೮ ರಂದು ಕೃಷ್ಣಾ ಜಿಲ್ಲೆಯಲ್ಲಿ ಜನಿಸಿದರು. ಪೊನ್ನೇರಿ ಮತ್ತು ನೆಲ್ಲೋರನಲ್ಲಿ ಶಿಕ್ಷಣ ಪಡೆದರು. ಪದವಿಯಲ್ಲಿ ವಿಜ್ಞಾನ ವಿಷಯದಲ್ಲಿ ಅನುತ್ತೀರ್ಣನಾಗಿದ್ದರಿಂದ ತೆಲುಗು ಸಾಹಿತ್ಯ ಬಾಂಧವ್ಯದ ಬಗೆಗೆ ಅಧ್ಯಯನ ನಡೆಸಿದರು ಅವರ ಪ್ರಥಮ mlitt ಸಂಶೋಧನಾ ಕೃತಿ ತೆಲುಗು ಸಾಹಿತ್ಯದಲ್ಲಿ ತಮಿಳು ಅಂಶಗಳು (Tamil elements in Telugu and Tamil: A Comparative study’ ಇವನ್ನು ಸ್ಪಷ್ಟಪಡಿಸುತ್ತದೆ. ಅವರ ಪಿಎಚ್. ಡಿ. ಪ್ರಬಂಧ ಇದೇ ಆಶಯ ಬಿಂಬಿಸುತ್ತದೆ. ೧೯೫೨ರಲ್ಲಿ ಸಿಲಪ್ಪದಿಕಾರಮ್ ತಮಿಳು ಕೃತಿಯನ್ನು ಮಣಿ ಮಂಜೀರಮ್. ಎಂದು ತೆಲುಗಿಗೆ ಅನುವಾದಿಸಿದರು. ತಿರುಕ್ಕುರಳನ್ನು ತಮಿಳ್ ವೇದಮ್ ಎಂದು ತೆಲುಗಿಗೆ ಅನುವಾದಿಸಿದರು. ಸುಬ್ರಮಣ್ಯ ಭಾರತಿ ಅವರ ಜೀವನ ಚರಿತ್ರೆ, ತಮಿಳು ಸಾಹಿತ್ಯದ ಇತಿಹಾಸ ಮತ್ತು ಆಧುನಿಕ ಸಾಹಿತ್ಯ ನಿರ್ಮಾಪಕರ ಪ್ರವೇಶಿಕ ಇವು ಅವರ ಇನ್ನಿತರ ಕೃತಿಗಳು.

೧೯೮೬ ರಲ್ಲಿ ತಮಿಳುವಿಂದು ಎಂಬ ೧೬ ಪ್ರಬಂಧಗಳ ಸಂಕಲನ ಬಂದಿತು ಇದರಲ್ಲಿ ತಮಿಳು ನಾಣ್ಣುಡಿಗಳು, ಅವಯ್ಯಾರ್‍ರಾಜಾಜಿ ಭಾರತಿದಾಸನ್ ಲಘುಕಾವ್ಯ ಹಾಗೂ ನವಲಾರ ಸೋಮಸುಂದರಶಾಸ್ತ್ರಿ ಇತ್ಯಾದಿ ವಸ್ತು ವಿಷಯಗಳಿವೆ. ಕಟ್ಟಾ ವರದರಾಜುವಿನ ರಾಮಾಯಣ ಕರಿಕಾಲಜೋಳ ಕಲ್ಲನೈಯನ್ನು ಕಟ್ಟಿದ ಸಂಗತಿ, ನನ್ನೇ ಗೌಡನ ಕುಮಾರಸಂಭವ ದಲ್ಲಿ ಚೋಳ ರಾಜಧಾನಿ urayur ರಿನ ಮೂಲದ ಬಗ್ಗೆ ಪ್ರಬಂಧಗಳಲ್ಲಿ ವಿಶ್ಲೇಷಿಸಿದ್ದಾರೆ. ತಮಿಳಿನಿಂದ ತೆಲುಗಿಗೆ Kadupulo Garadi (1965), Adavani Enugu Katha (1967) Bharati Cheppina Pillala Kathalu (1982) ಇತ್ಯಾದಿ

ದಕ್ಷಿಣ ಭಾರತದ ಇತಿಹಾಸದ ಬಗ್ಗೆ ಕೆಲವು ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ೧೭ನೇ ಶತಮಾನದಲ್ಲಿ ಮದುರೈಯನ್ನು ಆಳಿದ ತೆಲುಗು ಅರಸರ ಬಗ್ಗೆ, ತಮಿಳು ಜಾನಪದ ಸಾಹಿತ್ಯದಲ್ಲಿ ೧೬೨೩-೫೯ರಲ್ಲಿ ಆಳಿದ ತಿರುಮಲ ಅರಸರ ಬಗ್ಗೆ ತಮಿಳು ಜಾನಪದ ಸಾಹಿತ್ಯದಲ್ಲಿ ೧೬೨೩-೫೯ರಲ್ಲಿ ಆಳಿದ ತಿರುಮಲ ನಾಯಕ ಎಂಬ ಬ್ರಾಹ್ಮಣ ಸೇನಾಧಿಪತಿಯ ಬಗೆಗಿನ ಎರಡು ಲಾವಣಿಗಳ ಬಗ್ಗೆ ತಿಳಿಸುತ್ತಾರೆ. ರಾಮಪ್ಪಯನ್ ಅಮ್ಮನೈ ಮತ್ತು ಇರವಿಕ್ಕು ತಿಪಿಳ್ಳೈ ಪೊರ ಎಂಬ ಈ ಲಾವಣಿಗಳಲ್ಲಿ ರಾಮನಾಡದ ಸೇತುಪತಿಯ ವಿರುದ್ದ ಯುದ್ದದಲ್ಲಿ ರಾಮಪ್ಪಯನನ ನೇತೃತ್ಪ ಗುಣಗಳ ವಿವರಣೆಯಿದೆ.

೩೭. ಜಗದೀಶ ಅಯ್ಯರ್‌ ಪಿ. ವಿ.

ಅಯ್ಯರ್‌ ತಮ್ಮ ಕೃತಿ South Indian Festivities ಯನ್ನು ವೈಜ್ಞಾನಿಕವಾಗಿ ಬರೆದಿದ್ದಾರೆ, ಆರಾಧನೆ, ಉತ್ಸವ, ಸಂಸ್ಕಾರಗಳ ಹಿಂದಿನ ತತ್ವ ಉದ್ದೇಶಗಳನ್ನು ಇಲ್ಲಿ ವಿವರಿಸಿದ್ದಾರೆ ಖುತುಮಾನಕ್ಕನುಗುಣವಾಗಿ ಬರುವ ವಿವಿಧ ವಾರ್ಷಿಕ ಹಬ್ಬ ಆಚರಣೆ ಸಂಸ್ಕಾರಗಳನ್ನು ಪಟ್ಟಿ ಮಾಡಿದ್ದಾರೆ. ಅದರಲ್ಲಿಯೂ ದಕ್ಷಿಣ ಭಾರತದ ವಿಷಯಕ್ಕೆ ಸಹಜವಾಗಿ ಒತ್ತು ಕೊಡಲಾಗಿದೆ. ಆಚರಣೆಯ ಹಿಂದಿನ ತಾತ್ವಿಕತೆ ಸಾಮಾನ್ಯರಿಗೆ ಅರ್ಥವಾಗಿರುವುದಿಲ್ಲ ಮತ್ತು ಬ್ರಹ್ಮವಿಷ್ಣು ಮಹೇಶ್ವರರಲ್ಲಿ ಬ್ರಹ್ಮನಿಗೆ ಸಂಬಂಧಿಸಿದ ಉತ್ಸವಗಳು ಕಡಿಮೆ ಎಂಬುದನ್ನು ಕೃತಿ ವಿವರಿಸುತ್ತದೆ.

ಕೃತಿಯಲ್ಲಿ ವಿವಿಧ ಹಬ್ಬ ಆಚರಣೆಗಳ ವಿವರವಿದೆ. ಮೊದಲಲ್ಲಿ ಭೋಗಿ ಪಂಡಿಗೈ ದಕ್ಷಿಣಾಯನದ ಕೊನೆಯ ದಿನ ಆನೆಯ ಮೇಲೆ ಕುಳಿತಿರುವ ಇಂದ್ರ ಉಪಾಸನೆ, ಸಂಕ್ರಾಂತಿ ಮಕರ ಸಂಕ್ರಮಣದ ಉತ್ಸವಕ್ಕಾಗಿ ಚೋಳ ರಾಜ ಕುಲೋತ್ತುಂಗ ಭೂದಾನ ಮಾಡಿದ ವಿವರವಿದೆ. ಗೋಪೂಜಾ ಸಂಕ್ರಾಂತಿಯ ಮರುದಿವಸ ರಥಸಪ್ತಮಿ, ತೈಪೂಸಮ್ ಪುಷ್ಯ ನಕ್ಷತ್ರ ಇರುವ ದಿನದ ಆಚರಣೆ, ಮಾಸಿಮಾಘಿ ಮಾಘು ಮಾಸದ ಹುಣ್ಣಿಮೆ, ಮಹಾಶಿವರಾತ್ರಿ, ರಾಮನವಮಿ ಚೈತ್ರವಿಷು ಸೂರ್ಯ ಮೇಷ ಪ್ರವೇಶಿಸುವ ದಿನ ಚೈತ್ರಪೂರ್ಣಿಮೆ ಆಚರಣೆ ವೈಕಾಸಿ ವಿಶಾಖ, ವೈಖಾಖದಲ್ಲಿ ಧರ್ಮಪುತ್ರನ ಪೂಜೆ, ಆದಿಪುರಮ್, ಆಷಾಡ ಶಕ್ತಿದೇವಿಗೆ ಸಮರ್ಪಣೆ, ವ್ಯಾಸಪೂಜಾ ಆಷಾಡ ಪೂರ್ಣಿಮೆ, ಅವನಿಮೂಲಮ್ ಭಾದ್ರಪದ ಮಾಸದ ಮೂಲನಕ್ಷತ್ರ ಅಸುರ ದೇವತೆ Nirrith ನ ಕಾಲ, ಸ್ಕಂದಷಷ್ಟಿ ಸುಬ್ರಮಣ್ಯಮ್ ಪೂಜೆ, ಕಾರ್ತಿಕೈ, ವೃತಮ್ ಕೃತ್ತಿಕಾ ಹುಣ್ಣಿಮೆ ದಿನ ಪಂಚಮಹಾಭೂತಗಳ ಪೂಜೆ ಆರುದ್ರ ಮೃಗಶಿರ ನಕ್ಷತ್ರ ಅಧಿಪತ್ಯ ಹೊಂದಿರುವ ಮಾರ್ಗಶಿರ ರುದ್ರನಿಗೆ ಅರ್ಚನೆ, ದ್ರಾವಿಡಿಯನ್ ಸೌರ ತಿಂಗಳುಗಳು ಚಿತ್ರೈ, ವೈಖಾಸಿ, ಆವುನಿ, ಆಡಿ, ಪುಟ್ಟಾಸಿ, ಐಪಸ್ಸಿ, ಕಾರ್ತಿಕೈ, ಮಾರ್ಗೈ, ತೈ ಮಾಸಿ, ಫಂಗುಣಿ, ಇತ್ಯಾದಿಗಳ ಕುರಿತು ಸಮಗ್ರ ಮಾಹಿತಿಯಿದೆ.

.. ಜಾನ್ ಫೆಯಿತ್ ಫುಲ್ ಫ್ಲೀಟ್ (೧೮೪೨೧೯೧೭)

ಜಾನ್ ಎಫ್ ಫ್ಲೀಟ್ ಶಾಸನಶಾಸ್ತ್ರದಲ್ಲಿ ಶಾಶ್ವತವಾದ ಹೆಸರು. ಶಾಸನದ ಮೂಲಕ ಐತಿಹಾಸಿಕ, ಸಾಂಸ್ಕೃತಿಕ ವಿವರಗಳನ್ನು ಜಗತ್ತಿಗೆ ಪರಿಚಯಿಸಿಕೊಟ್ಟ, ಮೊದಲಿಗರು, ಭಾರತದ ಚಾರಿತ್ರಿಕ ವಿವರಗಳನ್ನು ಒಂದೆಡೆ ದಾಖಲಿಸಿ ಅದರ ಅಧ್ಯಯನಕ್ಕೆ ದಾರಿ ತೋರಿಸಿಕೊಟ್ಟಿ ಇವರು ಸಂಶೋಧಕರಿಗೆ ಮಾರ್ಗದರ್ಶಿಯಾಗಿದ್ದಾರೆ.

ಜಾನ್ ಫ್ಲೀಟ್ ಚಿಸ್ವಿಕ್ ನಗರದಲ್ಲಿ ೧೮೪೭ರಲ್ಲಿ ಜನಿಸಿದರು. ಲಂಡನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪೂರೈಸಿ, ೧೮೬೭ ರಲ್ಲಿ ಭಾರತಕ್ಕೆ ಬಂದರು. ದಕ್ಷಿಣ ಭಾರತಕ್ಕೆ ಉನ್ನತಾಧಿಕಾರಿಯಾಗಿ ಬಂದರು ಕರ್ನಾಟಕಕ್ಕೆ ಸಂಬಂಧಿಸಿ ಅನೇಕ ಸಂಶೋಧನೆ ಕೈಗೊಂಡರು. ಶಾಸನಗಳನ್ನು ಸಂಗ್ರಹಿಸಿ ಅದರ ವಿವರಗಳನ್ನು ದಾಖಲಿಸುವ ಮಹತ್ ಕಾರ್ಯ ನಿರ್ವಹಿಸಿದರು. ಇಂಡಿಯಾನ್ ಎಂಟಿಕ್ವೆರಿಯಲ್ಲಿ ೧೮೭೨ ರಿಂದ ೧೯೧೦ ರವರೆಗೂ ಹಲವಾರು ಲೇಖನಗಳನ್ನು ಪ್ರಕಟಿಸಿದರು. ಅಲ್ಲದೇ ಪಾಳಿ, ಸಂಸ್ಕೃತ ಮತ್ತು ಹಳಗನ್ನಡದ ಶಾಸನಗಳು ಎಂಬ ಸಂಕಲನವನ್ನು ೧೮೭೮ರಲ್ಲಿ ಪ್ರಕಟಿಸಿದರು. ಆರಂಭದ ಗುಪ್ತದೊರೆಗಳು ಮತ್ತು ತರುವಾಯ ಬಂದ ಶಾಸನಗಳು ಎಂಬ ಕೃತಿಯನ್ನು ರಚಿಸಿದರು ಶಾಸನಗಳ ಆಧಾರದ ಮೇಲೆ ಗುಪ್ತರ ಖಚಿತಕಾಲವನ್ನು (೩೧೯-೩೨೦) ಎಂದು ವಿಶ್ಲೇಷಿಸಿದರು. ೧೮೯೫ರಲ್ಲಿ ಮುಂಬೈ ಪ್ರಾಂತ್ಯಕ್ಕೆ ಸೇರಿದ್ದ ಕರ್ನಾಟಕ ಜಿಲ್ಲೆಗಳ ಶಾಸನಗಳು ಎಂಬ ಕೃತಿಯನ್ನು ಬರೆದರು. ದ್ರಾವಿಡ ಸಂಸ್ಕೃತಿ ನೆಲೆಯಿಂದ ಅದರಲ್ಲೂ ಕನ್ನಡ-ಕರ್ನಾಟಕ ಕುರಿತಾಗಿ ಪ್ಲೀಟ್ ಅವರ ಸೇವೆ ಅಮೋಘ, ಅನನ್ಯ.

“The dynasties of the kanarese districts of the Bombay Presidency” (From the earliest historical times to the Muhammadan conguest of A.S. 1818) ಎಂಬ ಕೃತಿಯಲ್ಲಿ ಪ್ಲೀಟ್ ಬಾಂಬೆ ಪ್ರಾಂತ್ಯದ ಕನ್ನಡ ಪ್ರದೇಶಗಳ ಕುರಿತು ವಿವರಿಸಿದ್ದಾರೆ. ೫ನೇ ಶತಮಾನದ ಮಧ್ಯಭಾಗದಿಂದ ೧೬ನೇ ಶತಮಾನದವರಿಗೆನ ಐತಿಹಾಸಿಕ ಸಂಗತಿಗಳಿವೆ. ಆಸುಪಾಸಿನ ಮೈಸೂರು, ಮದ್ರಾಸ್, ಹೈದರಾಬಾದ್ ಪ್ರಾಂತ್ಯದ ಕನ್ನಡ ಪ್ರದೇಶಗಳನ್ನು ಕೃತಿ ಒಳಗೊಂಡಿದೆ. ಆಧುನಿಕ ವರ್ಣಮಾಲೆ ಬೆಳವಣಿಗೆ ಮತ್ತು ದೇಶಭಾಷೆಗಳ ಬೆಳವಣಿಗೆಯ ವಿವರಣೆ ಜೊತೆಗೆ ಹಳೆಯ ಮತಗಳ ಸ್ಖಾಲಿತ್ಯ / ನಾಶ ಮತ್ತು ಹೊಸ ಮತಧರ್ಮಗಳ ಬೆಳವಣಿಗೆ ವಿವಿಧ ಭೂ ಒಡೆತನಗಳ ಉದಯ ಮತ್ತು ಈಗಿನ ಭೂಭಾಗದ ವಿಂಗಡನೆ ಹಾಗೆ ವಿವಿಧ ಐತಿಹಾಸಿಕ ಮತ್ತು ಪ್ರಾಚೀನ ವಸ್ತುಗಳ ಮೇಲಿನ ವಿವೇಚನೆ ಇಲ್ಲಿದೆ.

ಕನ್ನಡ ಜಾನಪದ ಆಕರಗಳನ್ನು (ಲಾವಣಿಗಳನ್ನು) ಜನಪದ ಗೀತೆಗಳನ್ನು ಸಂಗ್ರಹಿಸುವುದರ ಮೂಲಕ ಅವುಗಳ ಬಗೆಗೆ ಇಂಡಿಯನ್ ಎಂಟಿಕ್ವೆರಿಯಲ್ಲಿ ೧೮೮೫ -೯೦ರ ಅವಧಿಯಲ್ಲಿ ೫ ಜಾನಪದ ಲಾವಣಿಗಳನ್ನು ಕುರಿತು ಬರೆದರು. ಅಲ್ಲದೇ ಜಾನಪದ ಮೌಖಿಕ ಆಕರಗಳ ಮೂಲಕ ದೇಶವೊಂದರ ಐತಿಹಾಸಿಕ ಮತ್ತು ಸಾಂಸ್ಕೃತಿಕ ವಿವರಗಳನ್ನು ಪಡೆಯಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿರು.

ಬಾಂಬೆ ಪ್ರೆಸಿಡೆನ್ಸಿಯ ಕನ್ನಡ ಜಿಲ್ಲೆಗಳಲ್ಲಿನ ಬೆಳಗಾವಿ, ಕಲಾಟಗಿ ಮತ್ತು ಧಾರವಾಡ ಇವುಗಳ ಜೊತೆಗೆ ಕೊಲ್ಹಾಪುರ, ಮಿರಜ ಹಾಗೂ ಉಳಿದ ಭಾಗಗಳನ್ನು ಸದರ್ನ ಮರಾಠಾ ಕಂಟ್ರಿ ಎಂದು ಕರೆಯಲಾಗುತ್ತದೆ. ಈ ರೀತಿ ಕರೆಯುವ ಹೆಸರು ತಪ್ಪಾದ ಗ್ರಹಿಕೆಯಿಂದ ಕೂಡಿದ. ಪುಲಕೇಶಿ II ಆಡಳಿತದ ಪ್ರಾಚೀನ ಶಾಸನಗಳಲ್ಲಿ ಕೂಡ ಈ ಭಾಗವನ್ನು ಮತ್ತು ಇಂದಿಗೂ ಮಹಾರಾಷ್ಟ್ರ ಎನ್ನುವುದು ಹಿಂದೂಸ್ತಾನ ಪ್ರಾಚೀನ ಆರ್ಯ ವಸಾಹತ್ತಿನ ದಕ್ಷಿಣಕ್ಕೆ ಇರುವ ದೊಡ್ಡ ಮತ್ತು ಸಾಪೇಕ್ಷವಾಗಿ ಗೊತ್ತಿಲ್ಲದ ಪ್ರದೇಶ ಅಷ್ಟೇ ಹೊರತು ಈಗ ವ್ಯಾಖ್ಯಾನಿಸಿರುವಂತೆ ಮರಾಠಾ ಎಂಬ ಪ್ರದೇಶ ಸೂಚಿಪದ ಅಲ್ಲ ಎಂಬುದಾಗಿ ವಿಶ್ಲೇಷಿಸುತ್ತಾರೆ. ಕೆಲವು ಪ್ರಾಕೃತ ಪದಗಳು ಅಲ್ಲಿ ಇಲ್ಲಿ ಬಂದಿದ್ದ ವಾದರೂ ಈ ಶಾಸನಗಳು ಒಂದೋ ಶುದ್ಧ ಸಂಸ್ಕೃತದಲ್ಲಿ ಅಥವಾ ಶುಧ್ಧ ಕನ್ನಡದಲ್ಲಿ ಆಥವಾ ಈ ಎರಡೂ ಭಾಷೆಗಳ ಸಂಯೋಜಿತ ಮಾದರಿಯಾಗಿ ಸಿಗುತ್ತವೆ ಎಂದಿದ್ದಾರೆ. ಅಡಿಟಿಪ್ಪಣಿಯಲ್ಲಿ Sir William Elliot ಅವರ ಈ ರೀತಿಯ ಕೆಲಸವನ್ನು ಉಲ್ಲೇಖಿಸಲಾಗಿದೆ.

೩೯. ಜಾರ್ಜ್ ಮ್ಯಾಥೆನ್ (೧೮೧೯೧೮೭೦)

ರೆ.ಜಾರ್ಜ್ ಮ್ಯಾಥೆನ್ ಮಲಯಾಳಂನ ದೇಶೀಯ ಚಿಂತಕರಾಗಿ ಗಮನಾರ್ಹ ಎನಿಸುತ್ತಾರೆ. ಧಾರ್ಮೀಕ ಕ್ರೈಸ್ತ ಕೃತಿಗಳನ್ನು ರಚಿಸಿದ ಇವರು ಮಲೆಯಾಳಂ ಭಾಷೆ, ವ್ಯಾಕರಣ ಇತ್ಯಾದಿ ವಿಷಯಗಳನ್ನು ಗುಂಡರ್ಟ ಅವರ ನಂತರ ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಕಂಡುಬರುತ್ತದೆ.

ಜಾರ್ಜ್ ಮ್ಯಾಥೆನ್ ಕೇರಳ ಕ್ರಿಶ್ಚಿಯನ್ ಮಿಶನರಿಗಳಲ್ಲಿ ಬಬ್ಬರು ಮಲಯಾಳಂ ಸಾಹಿತ್ಯ ಕ್ಷೇತ್ರಕ್ಕೆ ಇವರ ಕೊಡುಗೆಯಿದೆ. ಮಲಯಾಳಂ ಬೆಳವಣಿಗೆ ಮತ್ತು ಆಧುನೀಕರಣದಲ್ಲಿ ಇವರ ಪರಿಣಿತ ಇದೆ. ಧಾರ್ಮಿಕ ಹಾಗೂ ಶೈಕ್ಷಣಿಕ ವಿಷಯಗಳಲ್ಲಿ ಆಸಕ್ತಿಯಿಂದಲೆ ಇವರು ಕಾರ್ಯನಿರ್ವಹಿಸಿದರು,

ತಮ್ಮ ವಿದ್ಯಾಭ್ಯಾಸವನ್ನು ಕೊಟ್ಟಾಯಮ್ ಮತ್ತು ಮದ್ರಾಸನಲ್ಲಿ ಪೂರೈಸಿದರು. ರೆ. ಜಾರ್ಜ್ ಮ್ಯಾಥೆನ್ ಕ್ರಿ.ಶ.೧೮೧೯ರಲ್ಲಿ ಜನಿಸಿದರು. ಮಲಯಾಳಂ ವ್ಯಾಕರಣ ಕುರಿತು ಅವರು Malayalamayute Vyakaranam ಎಂಬುದಾಗಿ ೧೮೧೬ ರಲ್ಲಿ ಪ್ರಕಟಿಸಿದರು.

ಗುಂಡರ್ಟಿ ವ್ಯಾಕರಣ ೧೮೫೧ರಲ್ಲಿ ಹೊರಬಂದಿತು. ಮ್ಯಾಥೆನ್ಸ್ ವ್ಯಾಕರಣ ತನ್ನದೇ ಆದ ಸೈದ್ದಾಂತಿಕ ನಿಲುವಿನಿಂದಾಗಿ ಜನಪ್ರಿಯ ಆವೃತ್ತಿಯಾಗಲಿಲ್ಲ, ವಿದ್ವಾಂಸರಿಗೆ ಮತ್ತು ಸಂಶೋಧನಾರ್ಥಿಗಳಿಗೆ ಉಪಯುಕ್ತವಾಯಿತು. ೧೮೪೧ರಲ್ಲಿ Vedasamyukti ಎಂಬ ಗದ್ಯಕೃತಿಯನ್ನು ರಚಿಸಿದರು. ಇದು ಜೋಸೆಫ್ ಪೌಲ್ಡರ್‍ನ ಧಾರ್ಮಿಕ ಕೃತಿಯೊಂದರ ಅನುವಾದವಾಗಿತ್ತು ಹೀಗೆ ಮಲಯಾಳಂನ ಬೆಳವಣಿಗೆಯಲ್ಲಿ ಮ್ಯಾಥೆನ್ ಪಾತ್ರವಿದೆ. ಮಲೆಯಾಳಂ ಗದ್ಯಶೈಲಿಯ ಆಧುನೀಕರಣದ ಹಿನ್ನೆಲೆಯಲ್ಲಿ ಇವರ ಪ್ರಭಾವ ಮಹತ್ವದ್ದಾಗಿದೆ.

೪೦. ಜಾಕೋಬ್ ಫ್ರಾನ್ಸಿಸ್ (೧೫೫೮೧೬೩೨)

ಜಾಕೋಬ್ ಫ್ರಾನ್ಸಿಸ್ ಇಟಾಲಿಯನ್ ಮಿಶನರಿ ಭಾರತದ ಧರ್ಮ ಮತ್ತು ತತ್ವಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದವರು. ಜಾಕೋಬ್ ಇಟಲಿಯ ನೇಪಲ್ಸ್ ಹತ್ತಿರ ಕಾಪುವಾನಲ್ಲಿ ಜನಿಸಿದರು. ೧೫೮೮ರಲ್ಲಿ ಮಿಶನರಿ ಚಟುವಟಿಕೆಗಳ ಅಗತ್ಯಕ್ಕಾಗಿ ಭಾರತಕ್ಕೆ ಬಂದ ಇವರು ಕೊಚ್ಚಿಯಲ್ಲಿದ್ದರು.

ಜನರೊಂದಿಗೆ ಸಂಪರ್ಕಿಸುತ್ತಾ ಹಲವಾರು ವಿಷಯಗಳನ್ನು ಅರಿತುಕೊಂಡರು. ಭಾರತದ ಸಂಪ್ರದಾಯ, ಸಾಮಾಜಿಕ ರೀತಿ-ನೀತಿಗಳನ್ನು ಕುರಿತು ಬರೆದರು. ಅತೀ ಪ್ರಾಚೀನ ಕಾಲಕ್ಕಾಗಲೇ ನೀಲಗಿರಿಯ ತೋಡರ ಬಗ್ಗೆ ಇವರು ಬರೆದರು. ಇದು ಅವರ ಕ್ಷೇತ್ರಾಧ್ಯಯನ ಪರಿಕಲ್ಪನೆ ಸಂಸ್ಕೃತಿ ಚರ್ಚೆಗಳನ್ನು ಮುಕ್ತವಾಗಿ ವಿಶದೀಕರಿಸುತ್ತದೆ. ನೀಲಗಿರಿಯ ತೋಡರೊಂದಿಗೆ ಆತ್ಮೀಯ ಸಂಬಂಧವು ಸಂಸ್ಕೃತಿಕತೆಯನ್ನು ಅರ್ಥಮಾಡಿಕೊಳ್ಳಲು ಉಪಯುಕ್ತವಾಯಿತು.