೪೧. ಜಾರ್ಜ್ ಅಬ್ರಹಾಮ್ ಗ್ರಿಯೆರ್ಸನ್ (೧೮೫೧೧೯೪೧)

ಭಾರತದ ಭಾಷೆ- ಉಪಭಾಷೆಗಳ ಕುರಿತು ಎಕತ್ರ ಸೂತ್ರೀಕರಿಸದ ಮಹಾತ್ಮ ಜಾರ್ಜ್ ಅಬ್ರಹಾಮ್ ಗ್ರಿಯೆರ್ಸನ್ ಇಡೀ ಭಾರತವನ್ನು ಸರ್ವೇ ನಡೆಸಿದ ಇವರು ಭಾರತ ಭಾಷಾ ಪರಿವೀಕ್ಷಣೆ (Linguistic Survey of India) ಕೃತಿಯನ್ನು ರಚಿಸಿದರು, ಇದು ಸಂಪುಟಗಳ ರೂಪದಲ್ಲಿ ವಿಮರ್ಶಾತ್ಮಕ ಬರಹದ ಮೂಲಕ ಪ್ರಕಟಗೊಂಡಿದೆ. ಗ್ರಿಯೆರ್‍ಸನ್ ಸಂಸ್ಕೃತಿ ಹಿಂದಿ, ಬಿಹಾರಿನ ಉಪಭಾಷೆಗಳು ಹೀಗೆ ಅನೇಕ ಭಾಷೆ, ವ್ಯಾಕರಣಗಳನ್ನು ಅಧ್ಯಯನ ಮಾಡಿದ್ದರು.

ಗ್ರಿಯೆರ್‍ಸನ್ ಜನೆವರಿ ೭, ೧೮೫೧ರಲ್ಲಿ ಡಬ್ಬಿನ್ ನಗರದ ಹತ್ತಿರದಲ್ಲಿ ಜನಿಸಿದರು. ಕೇಂಬ್ರಿಡ್ಜನಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಭಾರತದ ನಾಗರಿಕ ಸೇವೆಯ ಕ್ರಿಯಾಶೀಲ ಅಧಿಕಾರಿಯಾಗಿದ್ದರು. ೧೮೭೩ರಲ್ಲಿ ಸಿವಿಲ್ ಸರ್ವಿಸ್‌‌ಗಾಗಿ ಭಾರತಕ್ಕೆ ಬಂದರು ಉತ್ತರ ಭಾರತದ ಮೌಖಿಕ ಪರಂಪರೆ ಮತ್ತು ಭಾಷೆಗಳಿಗೆ ಸಂಬಂಧಪಟ್ಟಂತೆ ಕೆಲಸ ಮಾಡಿದರು. ಆದರಲ್ಲೂ ಬಿಹಾರ ಪ್ರಭೇದಗಳು, ಔಂಧ ಮತ್ತು ಬ್ರಜ್‌ನ ಹಿಂದಿ ಭಾಷೆ, ಕಾಶ್ಮೀರಿಗಳ ಬಗೆಗೆ ತಿಳಿದುಕೊಂಡಿದ್ದರು. ೧೮೮೫ ರಲ್ಲಿ Bihar Peasant Life ಕೃತಿಯಲ್ಲಿ ಭಾಷಿಕ ಪ್ರಾದೇಶಿಕ, ಭೌಗೋಳಿಕ, ಕೃಷಿ ವ್ಯವಸಾಯಕ್ಕೆ ಸಂಬಂಧಿಸಿದ ಶಬ್ದಗಳ, ವ್ಯವಸಾಯ ಕ್ರಮಗಳ ಮಾಹಿತಿಯಿದೆ.

ಗ್ರಿಯರ್‍ಸನ್ Linguistic Survey of India ಕೃತಿಯು ಸ್ಥಳೀಯರೊಡನೆ ಸರಕಾರದ ಸಂಪರ್ಕದ ಉದ್ದೇಶ ಹೊಂದಿತ್ತು. ದೇಶಿ ಸಂಸ್ಕೃತಿಯ ಉಜ್ವಲತೆಯನ್ನು ಇದು ಪರಿಚಯಿಸಿತು. ಆರ್ಯ ಭಾಷೆಗಳ ಬಗೆಗೆ ಹೆಚ್ಚಿನ ಮಾಹಿತಿ ಇದ್ದರೂ ನಾಲ್ಕು ಮತ್ತು ಆರನೇ ಸಂಪುಟಗಳಲ್ಲಿ ದ್ರಾವಿಡ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ. ನಾಲ್ಕನೇ ಸಂಪುಟವು ದ್ರಾವಿಡ ಮತ್ತು ಮುಂಡಾವರ್ಗದ ಭಾಷೆಗಳ ಬಗ್ಗೆ ತಿಳಿಸುತ್ತದೆ. ಆರನೇ ಸಂಪುಟವು ತಮಿಳು, ಮಲಯಾಳಂ ಕನ್ನಡ ಕುರುಖ್, ಮೊಲ್ತೋ, ಕುಯೀ, ಗೊಂಡಿ, ಕೋಲಾಮಿ, ನಾಯ್ಕಿ, ತೆಲುಗು ಮತ್ತು ಬ್ರಾಹು ಈ ಭಾಷೆಗಳ ವಿವರ ಒಳಗೊಂಡಿದೆ ಪ್ರತಿ ಪ್ರಾಂತಭಾಷೆ ಉಪಭಾಷೆ, ಬಳಸುವ ವಿವರ, ಭಾಷೆ ಕುರಿತ ಸಾಹಿತ್ಯಿಕ ಆಕರ, ಜೊತೆಗೆ ಶಬ್ದ ಸಂಗ್ರಹ ಮತ್ತು ಮಾದರಿ ವಾಕ್ಯಗಳನ್ನು ಸೇರಿಸಲಾಗಿದೆ. ೧೭೯ ಭಾಷೆಗಳ ೫೪೪ ಭಾಷಾ ಪ್ರಭೇದಗಳು ಇಲ್ಲಿವೆ. ವಿಲಿಯಮ್ ಜೋನ್ಸ್ ಆದಿಯಾಗಿ ಎಲ್ಲ ಭಾಷಾತಜ್ಞರ ಭಾಷಿಕ ಕೊಡುಗೆಗಳ ವಿಶ್ಲೇಷಣೆಯಿದೆ. ಒಟ್ಟು ೧೧ ಸಂಪುಟಗಳಲ್ಲಿ ೧೯೦೨. ೨೭ರವರೆಗೆ ರಚಿತಗೊಂಡಿದೆ. ಇದೊಂದು ಬೃಹತ್ ಭಾರತದ ಎಲ್ಲ ಬಗೆಯ ಸಂಶೋಧನೆಗೆ ಆಕರ ಗ್ರಂಥವಾಗಿದೆ.

೫೨. ಜಾರ್ಜ್ ವುರ್ಥ (೧೮೨೦೧೮೬೯)

ಜಾರ್ಜ್‌ವುರ್ಥ ಮಿಶನರಿಯಾಗಿ ೧೮೪೫ ರಲ್ಲಿ ಕನ್ನಡ ನಾಡಿನಲ್ಲಿ ನೆಲೆಸಿದರು. ಧಾರ್ಮಿಕ ಚಟುವಟಿಕೆಗಳೊಂದಿಗೆ ಸಾಹಿತ್ಯ ಸೇವೆಯನ್ನು ಮಾಡಿದರು. ಕನ್ನಡ ಮತ್ತು ಸಂಸ್ಕೃತಗಳೆರಡನ್ನು ಕಲಿತುಕೊಂಡರು. ಕ್ರಿ.ಶ. ೧೮೯೪೫ರಲ್ಲಿ ಧಾರವಾಡದಲ್ಲಿ ವೀರಶೈವರ ಬಗ್ಗೆ ಆಸಕ್ತಿಯಿಂದ ತಿಳಿದುಕೊಂಡರು.

೧೮೭೫ರಲ್ಲಿ ಮದ್ರಾಸ ಸರ್ಕಾರದ ಆದೇಶದ ಮೇರಿಗೆ ಪ್ರಕ್ಕಾವ್ಯ ಮಾಲಿಕೆಯೊಂದನ್ನು ಸಿದ್ಧ ಪಡಿಸಿದರು. ಕನ್ನಡ ಸಾಹಿತ್ಯವನ್ನು ಮೊದಲಬಾರಿಗೆ ಧಾರ್ಮಿಕ ಘಟ್ಟಗಳಾಗಿ ಗುರುತಿಸಿ ಸಾಹಿತ್ಯ ಚರಿತ್ರೆಗೊಂದು ನೆಲೆ ಕಲ್ಲಿಸಿದವರು. ಬ್ರಾಹ್ಮನ್, ವೀರಶೈವ ಮತ್ತು ಜೈನ ಎಂಬ ೩ ಭಾಗಗಳೊಂದಿಗೆ ವಿಷಯವನ್ನು ಅವಲೋಕಿಸಿದ್ದಾರೆ. ೧೮೬೫ರಲ್ಲಿ Royal Asiatic Society ಮುಂಬಯಿ ಪತ್ರಿಕೆಯಲ್ಲಿ ಬಸವ ಪುರಾಣ ಹಾಗೂ ಚನ್ನಬಸವ ಪುರಾಣಗಳ ಬಗ್ಗೆ ಬರೆದಿದ್ದಾರೆ.

೫೩. ಜಾನ್ ಮೆಕೆರಲ್

ಜಾನ್ ಮೆಕೆರಲ್ ೧೮೦೪ರಲ್ಲಿ ಮದ್ರಾಸಿಗೆ ಬಂದರು. ಕೆನರಾ ಜಿಲ್ಲೆಯಲ್ಲಿ ಸಬ್ ಕಲೆಕ್ಟರ್‌ಆಗಿದ್ದಾಗ ಕನ್ನಡ ವ್ಯಾಕರಣ ರಚಿಸಿದರು. ಜಾನ್ ಮೆಕೆರಲ್ ಅವರು ಕನ್ನಡ ಭಾಷಾ ವ್ಯಾಕರಣವನ್ನು ೧೮೨೦ ರಲ್ಲಿಯೇ ರಚಿಸಿದ ಮಹಾನುಭಾವರು Grammar of the Karnataka Language’ ಕೃತಿಯಲ್ಲಿ ಕನ್ನಡ ಭಾಷೆಯ ವ್ಯವಹಾರಿಕ ಸಂಗತಿಗಳನ್ನು ಅಚ್ಚುಕಟ್ಟಾಗಿ ಸಂಗ್ರಹಿಸಿದ್ದಾರೆ. ಕೆಲ ಉದಾಹರಣೆಗಳ ಮೂಲಕ ಇದನ್ನು ಸ್ಪಷ್ಟಪಡಿಸಬಹುದಾಗಿದೆ. ೧) ಕನ್ನಡದಲ್ಲಿ ಋ ಖೂ ಲೃ ಲೂ ಎಂಬ ನಾಲ್ಕು ಅಕ್ಷರಗಳು ಇಲ್ಲ ಇದನ್ನು ದಕ್ಷಿಣ ಭಾರತದಲ್ಲಿ rii, rii, lii,lii ಎಂದು ಉಚ್ಚರಿಸುತ್ತಾರೆ. ೨. ಕನ್ನಡ ಅಂಕಿಗಳನ್ನು ೧.೨.೩… ಇತ್ಯಾದಿ ಬರೆಯುತ್ತಾರೆ. ೩. ಗಣಿತದ ಕೆಲ ಅಂಶಗಳನ್ನು ಅಪೂರ್ಣಾಂಕ, ಒಂದು, ಮುಕ್ಕಾಲು, ಅರೆ ಕಾಲು ಮೂರು ಮುಕ್ಕಾಣಿ, ವರಹ, ಪಗೋಡಾ ಮುದ್ದರಣ ಇತ್ಯಾದಿ ೪. ರೂಪಾಯಿಯನ್ನು ಪಾವಲಿ, ಅಣೆ ಎಂದು ೫. ಅಳತೆಯನ್ನು ಕೊಳಗ, ಬಳ್ಳಿ ಮಾನ, ನಾಲಿಗೆ, ಗಿದ್ನ, ಚಿಟ್ಟಿ ೬. ತೂಕವನ್ನು ಖಂಡ, ಮಣ, ಧಡೆ, ಸೇರು ಪಾವು ೭. ರೂಪಾಯಿಯನ್ನು ಪಾವಲಿ, ಆಣೆ ಎಂದು ೮. ಆಳತೆಯನ್ನು ಕೊಳಗ, ಬಳ್ಳಿ, ಮಾನ, ನಾಲಿಗೆ ಗಿದ್ನ ಚಿಟ್ಟಿ ೯. ತೂಕವನ್ನು ಖಂಡ, ಮಣ ಧಡೆ ಸೇರು ಪಾವು ೧೦. ದೂರವನ್ನು ಹರವಾರಿ, ಗಜ, ಮೊಳ, ಹೆಚ್ಚೆ, ಗೇಣು, ಅಂಗುಲವೆಂದು ೧೧. ಪಾಕ್ಷಿಕವನ್ನು ಪಾಡ್ಯ, ಬಿದಿಗೆ ಇತ್ಯಾದಿ ವಿವರಿಸುತ್ತಾರೆ. ಈ ಆಳತೆ, ಮಾಸ, ದೂರ ಇತ್ಯಾದಿಗಳ ಕೋಷ್ಟಕವನ್ನು ಕೊಟ್ಟಿದ್ದಾರೆ. ಕಲಿಯಲು ಸುಲಭ ಸಾಧ್ಯವಾಗುವಂತೆ ಈ ಕೃತಿ ರಚಿತಗೊಂಡಿದೆ.

೪೪. ಜಾರ್ಜ್‌ ಯು. ಪೋಪ್ (೧೮೨೦೧೯೦೮)

ಜಾರ್ಜೆ ಯು. ಪೋಪ್ ಒಬ್ಬ ಪಾಶ್ವಿಮಾತ್ಯ ಮಿಶನರಿ ಹಾಗೂ ದ್ರಾವಿಡ ಭಾಷಾ ಹರಿಕಾರರು. ಇಂಡೋ ಯುರೋಪಿಯನ್ ಭಾಷಾ ಕ್ಷೇತ್ರವನ್ನು ಜಗತ್ತಿಗೆ ತೋರಿಸಿಕೊಟ್ಟವರು. ದ್ರಾವಿಡ ಭಾಷಾ ಅಧ್ಯಯನ ಕ್ಷೇತ್ರವನ್ನು ತೋರಿಸಿಕೊಟ್ಟ ಆಚಾರ್ಯ ಪುರುಷರು. ತಮಿಳು ವ್ಯಾಕರಣ ತಜ್ಞರಾಗಿ ಅನುವಾದಕರಾಗಿ ಸಾಕಷ್ಟು ಹೆಸರು ವಾಸಿಯಾಗಿದ್ದಾರೆ. ಪ್ರಪ್ರಥಮವಾಗಿ ತತ್ವಶಾಸ್ತ್ರ ಮತ್ತು ಗಣಿತ ಶಾಸ್ತ್ರವನ್ನು ತಮಿಳಿನಲ್ಲಿ ಬೋಧಿಸಿದರು.

ಪೋಪ್ ಅವರು ೧೮೨೦ ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದರು. ೧೮೩೯ರಲ್ಲಿ ಭಾರತಕ್ಕೆ ಬಂದ ಇವರು ಮದರಾಸಿನಲ್ಲಿ ನೆಲೆಸಿದ್ದರು. ತಮಿಳು, ಕನ್ನಡ ಸಂಸ್ಕೃತ, ಗ್ರೀಕ್ ಲ್ಯಾಟಿನ್ ಹಿಬ್ರು ಇತ್ಯಾದಿ ಭಾಷೆ. ಸಾಹಿತ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದರು. ತಮಿಳು ವ್ಯಾಕರಣವೊಂದನ್ನು ಶಾಲಾ ಮಕ್ಕಳಿಗಾಗಿ ಸಿದ್ಧಪಡಿಸಿಕೊಟ್ಟ ಇವರು ತಿರುಕ್ಕುರಳ್ ನಾಲಡಿಯರ್‍, ಮತ್ತು ಮಣಿಮೇಖಲೈ ಮುಂತಾದ ತಮಿಳು ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿದರು. ತಮಿಳು ಭಾಷಾ ವಿಷಯಕವಾಗಿ ಹಲವು ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿದರು, ತಮಿಳು ಭಾಷಾ ಅಧ್ಯಯನದ ಮೂಲಕ ದಕ್ಷಿಣ ಭಾತರ ದ್ರಾವಿಡ ಭಾಷಾ ಕುಟುಂಬದ ಬಗೆಗೂ ಬರೆದರು. ಅವುಗಳೆಂದರೆ

  1. A Hand book of the ordinary dialect of the Tamil language.
  2. A First catechism of Tamil Grammar
  3. A Catechism of Tamil Grammar
  4. A larger grammar of the Tamil language in both its dialects
  5. Out lines of the grammar of the Toda language.
  6. Notes on the south Indian of Dravidian family languages.
  7. On the study of the Indian Veruaculers.

`Notes of the South Indian of Dravidian family of languages’ ಎಂಬ ಕೃತಿಯಲ್ಲಿ ದ್ರಾವಿಡ ಭಾಷೆಗಳು ತುರಾನಿಯನ್ ಭಾಷಾ ವರ್ಗಕ್ಕಿಂತ ಆರ್ಯಭಾಷಾ ವರ್ಗಕ್ಕೆ ಹತ್ತಿರವಾಗಿವೆ ಎಂದು ಹೇಳುತ್ತಾರೆ. ತಮಿಳು ಇಂಗ್ಲಿಷ್ ನಿಘಂಟು ೧೮೫೯ರಲ್ಲಿ, A Tamil Poetical anthology with Grammatical notes and vocabalory’ ೧೮೫೯ರಲ್ಲಿ A Catalogue of Tamil books in the library of the British Museum ಎಂಬುವುದು ಮಹತ್ವದ ಕೃತಿಗಳೆನಿಸಿವೆ. ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಪೋಪ್ ಹೆಸರಿನಲ್ಲಿ ವಿದ್ಯಾಲಯವೊಂದು ಕಾರ್ಯನಿರ್ವಹಿಸುತ್ತಿದೆ.

೪೫. ಜಾರ್ಜ್ ಕೆ. ಎಂ. (೧೯೧೪.)

ಜಾರ್ಜ್ ಕೆ. ಎಮ್. ಅವರು ಮಲೆಯಾಳಂ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿದವರು. ಮಲೆಯಾಂ ಸಾಹಿತ್ಯ ಚರಿತ್ರೆಕಾರರಾಗಿ ಹಾಗೂ ವಿಮರ್ಶಕರಾಗಿ ಇವರು ಕಾರ್ಯನಿರ್ವಹಿಸಿದ್ದಾರೆ. ಮಲೆಯಾಳಂ ವಿಶ್ವಕೋಶದ ಸಂಪಾದಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ಜಾರ್ಜ್ ತಮ್ಮ ವೃತ್ತಿ ಜೀವನದಲ್ಲಿ ಮೊದಲು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿದರು. ಕೇರಳ ಸಾಹಿತ್ಯ ಅಕಾಡೆಮಿಯ ಭಾರತೀಯ ತೌಲನಿಕ ಸಾಹಿತ್ಯದ ಸಂಪುಟಗಳು, ಮಲೆಯಾಳಂ ಸಾಹಿತ್ಯದ ಮೇಲೆ ಪಾಶ್ಚಾತ್ಯ ಪ್ರಭಾವ, ಮಲೆಯಾಳಂ ವ್ಯಾಕರಣ ಮತ್ತು ಓಮಗ, ದಕ್ಷಿಣ ಭಾರತದ ಹೆಸರುಗಳು, ತಮಿಳು ಸಾಹಿತ್ಯದ ಚರಿತ್ರೆಗಳು ಇವರ ಕೃತಿಗಳಾಗಿವೆ. ೧೯೫೬ರಲ್ಲಿ ಸಾಹಿತ್ಯ ಚರಿತ್ರ ಪ್ರಸ್ಥಾನಂ ಜಳಿಲೂಡೆ ಎಂಬುದನ್ನು ರಚಿಸಿದ್ದಾರೆ.

ಪ್ರಖ್ಯಾತ ಮಲೆಯಾಳಂ – ಇಂಗ್ಲಿಷ್ ಭಾಷಾತಜ್ಞರು ಮದ್ರಾಸ್‌ನಲ್ಲಿ ಕ್ರಿಶ್ಷಿಯನ್ ಕಾಲೇಜ್‌ನಲ್ಲಿ ಮಲಯಾಳಂ ಬೋಧಿಸುತ್ತಿದ್ದರು. ಅಲ್ಲದೆ Chicago & Indian Institute of Advanced Study ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. A Survey of Malayalam Literature, Western infuence many branched tree Perspectives of Indian Literary Tradition ಕೃತಿಗಳು ಅಲ್ಲದೇ Comparative Indian Literature (2 Vols) ಸಂಪಾದಿಸಿರುವರು.

೪೬. ಜೂಲ್ಸ್ ಬ್ಲಾಕ್ (೧೮೮೦೧೯೫೩)

ಜೂಲ್ಸ್ ಬ್ಲಾಕ್ ೨೦ನೇ ಶತಮಾನದ ಮಹತ್ವದ ಸಂಶೋಧಕರು ಭಾರತಾಧ್ಯಯನ (Indology) ವಿದ್ವಾಂಸರಾದರೂ ದ್ರಾವಿಡ ಕ್ಷೇತ್ರಕ್ಕೆ ಇವರ ಕೊಡುಗೆ ಅಪೂರ್ವ. ಕಾಲ್ಡವೆಲ್ ನಂತರ ಭಾಷಾಕ್ಷೇತ್ರವನ್ನು ಹಲವು ನಿಟ್ಟಿನಲ್ಲಿ ವಿಸ್ತರಿಸಿದವರು.

ಬ್ಲಾಕ್ ೧೯೦೬ರಲ್ಲಿ ಭಾರತಕ್ಕೆ ಬಂದು ತಮಿಳುನಾಡಿನ ಪಾಂಡಿಚೆರಿ ಮತ್ತು ಕಾರೈಕಲ್‌ಗಳಲ್ಲಿ ನೆಲೆಸಿದ್ದರು. ತಮಿಳು ಭಾಷೆಯನ್ನು ಚೆನ್ನಾಗಿ ಅರಿತುಕೊಂಡರು. ಇತರ ದ್ರಾವಿಡ ಭಾಷೆಗಳನ್ನು ಕರಗತ ಮಾಡಿಕೊಂಡು, ದ್ರಾವಿಡ ವ್ಯಾಕರಣಾತ್ಮಕ ಸ್ವರೂಪವನ್ನು ಅಧ್ಯಯನ ಮಾಡಿದರು. ಜೂಲ್ಸ್ಬಬ್ಲಾಕ್ ದ್ರಾವಿಡ ಶಾಸ್ತ್ರವನ್ನು ಕುರಿತು ೧೯೪೬ರಲ್ಲಿ ‘Structure grammaticale des langues dravidiennes’ ಕೃತಿ ರಚಿಸಿದರು. ಇದಲ್ಲದೆ ಬ್ಲಾಕ್ ಹಲವಾರು ಸಂಶೋಧನಾತ್ಮಕ ಲೇಖನಗಳನ್ನು ದ್ರಾವಿಡ, ತಮಿಳು ಭಾಷಾವಿಜ್ಞಾನ, ಇಂಡೋ ಆರ್ಯನ್ ಮತ್ತು ದ್ರಾವಿಡದೊಂದಿಗಿನ ಸಂಬಂಧಗಳ ಕುರಿತಾಗಿ ಬರೆದರು. ೧೯೦೬ರಲ್ಲಿ ಭಾರತಕ್ಕೆ ಬಂದು ಪಾಂಡಿಚೆರಿಯಲ್ಲಿ ಮತ್ತು ಕಾರೈಕಲ್ ಗಳಲ್ಲಿ ನೆಲೆಸಿ ತಮಿಳು ಭಾಷೆಯನ್ನು ಕರಗತ ಬಂದು ಪಾಂಡಿಚೆರಿಯಲ್ಲಿ ಮತ್ತು ಕಾರೈಕಲ್‌‌ಗಳಲ್ಲಿ ನೆಲೆಸಿ ತಮಿಳು ಭಾಷೆಯನ್ನು ಕರಗತ ಮಾಡಿಕೊಂಡರು, ತಮಿಳಿನೊಂದಿಗೆ ಇತರ ದ್ರಾವಿಡ ಭಾಷೆಗಳನ್ನು ಅಧ್ಯಯನ ಮಾಡಿದ ಇವರು ದ್ರಾವಿಡ ವ್ಯಾಕರಣ ರಚನೆಯ ಬಗ್ಗೆ ಅಧ್ಯಯನ ಮಾಡಿದರು. ಕಾಲ್ಡ್ ವೆಲೆಗೆ ಗೋಚರಿಸದೇ ಇದ್ದ ದ್ರಾವಿಡ ಬುಡಕಟ್ಟು ಭಾಷೆಗಳ ಬಗೆಗೆ ಇವರು ತಿಳಿಸಿದರು. ಇದೇ ರೀತಿಯಲ್ಲಿ ಇಂಡೋ ಆರ್ಯನ್ ವಿಷಯದಲ್ಲೂ ಸಾಕಷ್ಟು ಕೃತಿಗಳನ್ನು ನೀಡಿದ್ದಾರೆ. ಅಶೋಕನ ಶಾಸನಗಳ ಭಾಷಿಕ ಅಂಶಗಳ ಬಗೆಗೆ, ಮರಾಠಿ ಭಾಷೆಯ ಬಗೆಗೆ ಕೂಡ ಅಧ್ಯಯನ ಮಾಡಿ ಹಲವಾರು ಲೇಖನಗಳನ್ನು ರಚಿಸಿದರು. ಇವರು ಭಾಷಿಕ ನೆಲೆಯನ್ನು ವಿಸ್ತರಿಸಿದಲ್ಲದೆ, ಬೆಳವಣೆಗೆಯನ್ನು ಮಾಡಿದರು. ಹಾಗಾಗಿಯೇ ಕಾಲ್ಡ್ ವೆಲ್ ದಾರಿಯನ್ನು ಮುರಿದುಕಟ್ಟಿದ ಶ್ರೇಯಸ್ಸು ಬ್ಲಾಕ್ ಜೂಲ್ಸ್ ಗೆ ನಿಲ್ಲುತ್ತದೆ. Formation of Marati Language’ ಬಗ್ಗೆ ಪಿಎಚ್.ಡಿ. ಸಲ್ಲಿಸಿದರೂ ಭಾಷಾವಿಜ್ಞಾನಿಯಾಗಿ ಇಂಡೋ ಆರ್ಯನ್ ಆಷ್ಟೇ ಅತ್ಯುತ್ತಮ ಸಂಶೋಧನಾಸಕ್ತಿಯನ್ನು ದ್ರಾವಿಡ ವಸ್ತುವಿಷಯದಲ್ಲೂ ಹೊಂದಿರುವುದು ಇವರ ವಿಶಿಷ್ಟತೆಯಾಗಿದೆ.

೪೭. ಜೆ. ಬ್ರಿಗೆಲ್ಲ

ಬ್ರಿಗೆಲ್ಲರು ತುಳು ಭಾಷೆಗೆ ಸಂಬಂಧಿಸಿದಂತೆ ಮೊಟ್ಟಮೊದಲ ವ್ಯಾಕರಣ ಕೃತಿಯೊಂದನ್ನು ನೀಡಿದರು. ವಿದೇಶಿಯರಿಗಾಗಿ ತುಳು ಕಲಿಸಲು ಇದು ರಚಿತಗೊಂಡರೂ ದೇಶಿಯ ನೆಲೆಯಲ್ಲಿ ಇದು ಸಂಚಲನ ಉಂಟುಮಾಡಿದ ಕೃತಿ. ಈ ಕೃತಿಯ ೩ ವಿಭಾಗಗಳನೊಳಗೊಂಡಿದೆ ಧ್ವನಿ, ಶಬ್ದವ್ಯುತ್ಪತ್ತಿ ಹಾಗೂ ವಾಕ್ಯರಚನೆ, ಧ್ವನಿ ವಿಭಾಗದಲ್ಲಿ ವರ್ಣಮಾಲೆ, ಉಚ್ಚಾರಣೆ, ಸಂಧಿ ಎಂಬ ೩ ಅಧ್ಯಾಯಗಳಿವೆ. ಎರಡನೆಯ ವಿಭಾಗದಲ್ಲಿ ಶಬ್ದಗಳ ವರ್ಗೀಕರಣ ಹಾಗೂ ವಾಗರ್ಥಭೇದ ಎಂಬ ೨ ವಾಗರ್ಥಭೇದದಲ್ಲಿ ನಾಮಪದ, ಸರ್ವನಾಮ, ಸಂಖ್ಯಾವಾಚ ಕ್ರಿಯಾಪದ ಹಾಗೂ ಅವ್ಯಯಗಳ ಬಗ್ಗೆ ವಿವರಣೆಯಿದೆ. ೩. ಭಾಗದಲ್ಲಿ ವಾಕ್ಯರಚನೆ, ಶಬ್ದಗಳ ಸ್ಥಾನ ನಿರ್ದೇಶಿತ ಅರ್ಥ ಹಾಗೂ ಪ್ರಯೋಗ ವಿಧಾನ ವಿಶೇಷಣಾರ್ಥಕ ಘಟಕಗಳು, ವಾಕ್ಯಘಟಕಗಳ ರಚನೆ ಹಾಗೂ ಅವುಗಳ ರೂಪ, ವಾಕ್ಯ ಜೋಡಣೆ ಎಂದು ೫ ಅಧ್ಯಾಯಗಳಿವೆ. ಅನುಬಂಧದಲ್ಲಿ ತುಳು ಪದ್ಯಗಳಿವೆ. ೫೦ ಗಾದೆಗಳಿವೆ, ಇಲ್ಲಿ ಬ್ರಾಹ್ಮಣರ ಉಪಭಾಷೆಯ ಕೆಲವು ವಿಶಿಷ್ಟ ಶಬ್ದಗಳ ಬಗ್ಗೆ ಮಾಹಿತಿಯಿದೆ ಎಂದು ಡಾ. ಅರ್ತಿಕಜೆಯವರು ಪ್ರತಿಪಾದಿಸುತ್ತಾರೆ.

ತುಳು ವರ್ಣಮಾಲೆಯ ಕುರಿತು ಬ್ರಿಗೆಲ್ಲರು ಬರೆಯುತ್ತಾ ಆ, ಇ, ಉ, ಋ, ಎ, ಒ ಆರು ಹೃಸ್ಟ ಹಾಗೂ ಅವುಗಳ ದೀರ್ಘಸ್ವರಗಳನ್ನು ಗುರುತಿಸುತ್ತಾರೆ. ಹಾಗೆಯೇ ಈ, ಔ ಎಂಬ ಸಂಯುಕ್ತ ಸ್ವರಗಳನ್ನು ‘ಉ’ ಕಾರವನ್ನು, ಅಂ, ಆಃ ಎಂಬ ಅನುಸ್ವಾರಗಳನ್ನು ಗುರುತಿಸಿ ತುಳುವಿನಲ್ಲಿ ೧೫ ಸ್ವರಗಳಿವೆ ಎನ್ನುತ್ತಾರೆ. ವ್ಯಂಜನಗಳಲ್ಲಿ ೨೫ ವರ್ಗೀಯ ಹಾಗೂ ೯ ಅವರ್ಗೀಯ (Classified) ವ್ಯಂಜನಗಳನ್ನು ಗುರುತಿಸಿದ್ದಾರೆ, ಈ ರೀತಿ ತುಳುವಿನ ವರ್ಣಮಾಲೆಯನ್ನು ಗುರುತಿಸಿಕೊಳ್ಳುವಾಗ, ಬ್ರಿಗೆಲ್ಲರು ಕನ್ನಡ ವರ್ಣಮಾಲೆಯನ್ನು ಆಧಾರವಾಗಿಟ್ಟು ಕೊಂಡಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಈ ವರ್ಣಮಾಲೆಯನ್ನು ಹಿನ್ನೆಲೆಯಲ್ಲಿ ತುಳು ವರ್ಣಮಾಲೆಯ ಉಚ್ಚಾರಣಾ ಕ್ರಮದ ಬಗ್ಗೆಯೂ ಅವರು ವಿವರಣೆ ನೀಡಿದ್ದಾರೆ. ಸಂಧಿಯ ಕುರಿತು ವಿವೇಚಿಸುವಾಗ ಲೋಪ, ಆಗಮ ಹಾಗೂ ಆದೇಶ ಸಂಧಿಗಳನ್ನು ಹೇಳಿ ಒಂದೆರಡು ಉದಾ. ಗಳನ್ನು ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಭಾಷಾ ವಿಶ್ಲೇಷಣೆ ದೃಷ್ಟಿಯಿಂದ ಮಹತ್ವ ಪಡೆಯದೇ ಹೋದರೂ, ವಿದ್ವಾಂಸರು ಭಾಷಾಭ್ಯಾಸಿಗಳಿಗೆ ಇದೊಂದು ಆಕರಗ್ರಂಥ, ಜನಸಾಮಾನ್ಯರ ಆಡುಮಾತಿನ ಬಗ್ಗೆಯೂ ವ್ಯಾಕರಣ ಗ್ರಂಥದಲ್ಲಿ ಇಲ್ಲ. ಹಾಗಾಗಿ ಲೇಖಕರೇ ಹೇಳಿಕೊಂಡಂತೆ ತುಳುಭಾಷೆಯನ್ನು ಕಲಿಯುವವರಿಗೆ ಇದು ಉಪಯುಕ್ತವೆನಿಸಿದೆ.

೪೮. ಜೆ. ಸ್ಟರ್ರಕ್ ಮತ್ತು ಹೆರಾಲ್ಡ್ ಸ್ಟುವರ್ಟ್

ಸರಕಾರದ ಅಗತ್ಯತೆಗಾಗಿ ರಚಿತಗೊಂಡ Manuals of South Canara ದ ಮೊದಲ ಸಂಪುಟವನ್ನು ಸ್ಟರ್‍ರಕ್ ರೂಪಿಸಿದ್ದಾರೆ. ೧೮೯೪ ರಲ್ಲಿ ತುಳುನಾಡಿನ ಜನ, ವರ್ಗ, ಭಾಷೆ, ವೃತ್ತಿ ಮತಧರ್ಮ ಆಚರಣೆಗಳನ್ನು ಅಂಕಿ ಅಂಶಗಳ ಸಮೇತ ದೃಢಪಡಿಸಿದ್ದಾರೆ. ಕೇವಲ ಸಾಂಸ್ಕೃತಿಕ ನೆಲೆಯಷ್ಟೇ ಅಲ್ಲದೆ ಕೊರಗ ಮತ್ತು ಬೆಳಾರಿ ಪಂಗಡಗಳ ಭಾಷೆಗಳನ್ನು ಭಾಷಾ ವಿಜ್ಞಾನದ ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ.

ಸ್ಟರ್‍ರಕ್ ೧೮೮೪-೮೭ ರ ಅವಧಿಯಲ್ಲಿ ಈ ಸಂಪುಟ ಸಿದ್ಧಗೊಳಿಸಿದ್ದಾರೆ. ಈಸ್ಟ್ ಇಂಡಿಯಾ ಕಂಪನಿ ಜಿಲ್ಲಾವಾರು ಅಂಕಿ ಅಂಶಗಳನ್ನೊಳಗೊಂಡ ಗೆಝೆಟಿಯರ್‌ ಸಿದ್ಧಪಡಿಸಲು ಸೂಚಿಸಿದಾಗ ಈ ರೀತಿಯ ಸಂಪುಟಗಳು ನಿರ್ಮಾಣಗೊಂಡವು. ಇವು ಆಯಾ ಪ್ರದೇಶದ ಸಮಗ್ರ ಮಾಹಿತಿಯನ್ನು ಬದಗಿಸುತ್ತವೆ. ವೈವಿಧ್ಯ ವಸ್ತು ವಿಷಯಗಳೊಂದಿಗೆ ಗ್ರಂಥ ಋಣ, ಆಕಾರಾದಿ ಸೂಚಿ, ಭೂಪಟಗಳನ್ನು ಇದು ಒಳಗೊಂಡಿದೆ. ೧೮೬೨ರಲ್ಲಿ ದಕ್ಷಿಣ ಕನ್ನಡ ವಿಭಾಗಿಸಲ್ಟಟ್ಟ ಮೇಲೆ ಮದ್ರಾಸ್ ಸರ್ಕಾರಕ್ಕೆ ಒಳಪಟ್ಟಿತು. ೧೮೯೪ರಲ್ಲಿ ದಕ್ಷಿಣ ಕನ್ನಡದ ಪ್ರಥಮ ಪ್ರಥಮ ಸಂಪುಟವನ್ನು ಜಾನ್ ಸ್ಟರ್‍ರಕ್ ಹಾಗೂ ೧೮೯೫ರಲ್ಲಿ ಹೆರಾಲ್ಡ್ ಸ್ಟವರ್ಟ್ ಎರಡನೇ ಸಂಪುಟ ಸಂಪಾದಿಸಿಕೊಟ್ಟರು. ಆಕಾಲಕ್ಕೆ ಕಾಸರಗೋಡು ಕೂಡ ಈ ಪ್ರದೇಶಕ್ಕೆ ಸೇರಿತ್ತು. ಮೊದಲನೇ ಸಂಪುಟ ಜಿಲ್ಲೆಯ ಸಾಮಾನ್ಯ ವರ್ಣನೆ, ಚರಿತ್ರೆ ಮತ್ತು ಪುರಾತತ್ವೇಯ ಪರಿಸರ, ಆದಾಯ ಆಡಳಿತ, ಜನಜೀವನ, ಕೃಷಿ ಮತ್ತು ವಾಣಿಜ್ಯ ಹಾಗೂ ಎರಡನೆಯ ಸಂಪುಟ ಭೌಗೋಳಿಕ ವಿವರ ಜನಸಂಖ್ಯೆ, ಧರ್ಮ, ಭಾಷೆ ಮದುವೆ, ಮಳೆಗಾಲದ ಬಗ್ಗೆ ಸಾವರ್ಜನಿಕ ಸ್ವಾಸ್ಥ್ಯ, ಶಿಕ್ಷಣ, ಸಂಪರ್ಕ, ಕೃಷಿ ಮತ್ತು ವಾಣಿಜ್ಯ ವಿಷಯಗಳನ್ನೊಳಗೊಂಡಿದೆ. ಉಪ್ಪು ಮತ್ತು ಅಬಕಾರಿ ವ್ಯವಸ್ಥೆ, ಆದಾಯ, ಆಡಳಿತ ಮತ್ತು ಕಾನೂನು.

ಸಂಪುಟ ೧ ರಲ್ಲಿ ಮತ ಭಾಷೆ ವಿಷಯ ಪ್ರಸ್ತಾಪದಲ್ಲಿ ದಕ್ಷಿಣ ಕನ್ನಡದ ಜನ ದ್ರಾವಿಡಿನ್ ವಂಶಕ್ಕೆ ಸೇರಿದವರಾಗಿದ್ದು ಸ್ಪಲ್ಪ ಪ್ರಮಾಣದಲ್ಲಿ ಆರ್ಯನ್ ವಂಶದ ಬೆರಕೆಯಿದೆ ಜೈನರು ಶೇಕಡಾ ೧೧ ಕ್ಕಿಂತ ಕಡಿಮೆ ಇದ್ದಾರೆ. ಇದಕ್ಕೆ ಹಿಂದುತ್ವಕ್ಕೆ ಮರಳಿದ ಜನಕಾರಣ ಅಥವಾ ತಮ್ಮ ಮೂಲ ದ್ರಾವಿಡಿಯನ್ ವಂಶಕ್ಕೆ ತೆರಳಿರಬಹುದು. ತುಳು ಭಾಷಿಕರು ಸಂಖ್ಯೆಯ ಅರ್ಧದಷ್ಟಿದ್ದಾರೆ. ಚರಿತ್ರೆ ಅಧ್ಯಾಯದಲ್ಲಿ ತುಳುನಾಡು ಕೇರಳ ಅಥವಾ ಚೇರರಾಜ್ಯದ ದ್ರಾವಿಡಿಯನ್ ಸಾಮ್ಯಾಜ್ಯದ ಭಾಗವಾಗಿರುವುದನ್ನು ಉಲ್ಲೇಖಿಸುತ್ತಾರೆ. ಈ ಸಾಮ್ರಾಜ್ಯ ಕ್ರಿ.ಪೂ. ೩ರ ಅಶೋಕನ ಶಿಲಾಶಾಸನದಲ್ಲಿ ಉಲ್ಲೇಖಗೊಂಡಿರುವುದನ್ನು ಹಾಗೂ ಜಿಲ್ಲೆಯಲ್ಲಿ ಪ್ರಚಲಿತವಿದ್ದ ಅಳಿಯ ಸಂತಾನಕಟ್ಟಿನ ಬಗ್ಗೆ ತಿಳಿಸಿದ್ದಾರೆ. ಇನ್ನು ಸಂಪುಟ ೨ರಲ್ಲಿ ೧೮೯೧ರಲ್ಲಿ ಮಾಡಿದ ಅಂಕಿ ಅಂಶಗಳಿಂದ ವಿವಿಧ ಮಾತೃಭಾಷಾ ವಿವರಗಳನ್ನು ಒದಗಿಸಿದ್ದಾರೆ. ಆರೆ, ಬೆಲ್ಲಾರಾ, ಕನ್ನಡ, ಕೊರಗ, ಮಲೆಯಾಳಮ್, ತಮಿಳ್, ತೆಲುಗು, ತುಳು, ಉರಿಯಾ, ಕೊಡಗು ಇತ್ಯಾದಿ.

೪೯. ಜೇಮ್ಸ್‌ . ಕ್ಯಾಂಬೆಲ್

ಜೇಮ್ಸ್‌ ಕ್ಯಾಂಬೆಲ್ ಅವರು ಬ್ರಿಟಿಷ್ ಅಧಿಕಾರಿಯಾಗಿದ್ದರು. ೧೮೪೩ರಲ್ಲಿ ಬಾಂಬೆ ಪ್ರೆಸಿಡೆನ್ಸಿಯ ಜಿಲ್ಲೆಗಳ ವಿವರಗಳನ್ನು. ಸಂಖ್ಯಾವಾಚಿ ಮಾಹಿತಿಗಳನ್ನು ಕಲೆಹಾಕಲು ಆಯೋಜಿಸಲಾಗಿತ್ತು. ಗೆಝೆಟಿಯರ್‌ ಮಾದರಿಯಲ್ಲಿ ಜಿಲ್ಲಾವಾರು ಮಾಹಿತಿಗಳು ಲಭ್ಯವಾಗಬೇಕೆಂಬದು ಬ್ರಿಟಿಷ್ ಅಧಿಪತ್ಯದ ಕನಸಾಗಿತ್ತು. ಈ ಹಿನ್ನಲೆಯಲ್ಲಿ ಕ್ಯಾಂಬೆಲ್ ರವರು ೧೮೬೮ ರಲ್ಲಿ ಈ ಕಾರ್ಯವನ್ನು ವಹಿಸಿಕೊಂಡು KANARA’ ಎಂಬ ಬೃಹತ್ ಸಂಪುಟವನ್ನು ೧೮೮೨ ರಲ್ಲಿ ಸಿದ್ಧಪಡಿಸಿದರು. ಭಾರತೀಯರಿಗೆ ಅಪರಿಚಿತವಾಗಿದ್ದ ವಿವಿಧ ಜಿಲ್ಲೆಗಳ ಸಂಪೂರ್ಣ ಚಿತ್ರಣ ಕೊಡುವುದು ಇದರ ಉದ್ದೇಶವಾಗಿತ್ತು. ಅಷ್ಠೇ ಅಲ್ಲದೆ ಆಡಳಿತ ನಡೆಸುವ ಸಮೂಹಕ್ಕೆ ಈ ತರಹದ ಚಿತ್ರಣವೂ ಪರಿಣಾಮಕಾರಿ ಆಡಳಿತ ನೀಡಲು ಸಹಾಯವಾಗಲಿ ಎಂಬ ಉದ್ಧೇಶವೂ ಇತ್ತು.

೫೦. ಜ್ಞಾನಸಂಬಂಧನ್ ವಿ.ಎಸ್.

ಜ್ಞಾನಸಂಬಂಧನ್ ತಮಿಳಿನ ಮಹಾನ್ ವಿಮರ್ಶಕ ಹಾಗೂ ವಿದ್ವಾಂಸರು. ತಮಿಳಿನ ಸಾಹಿತ್ಯವನ್ನು ಅದರಲ್ಲೂ ಕಂಬ ರಾಮಾಯಣದ ಕುರಿತಾಗಿ ಸಾಕಷ್ಟು ಅಧ್ಯಯನ ನಡೆಸಿ ವಿಮರ್ಶಿಸಿದ್ಧಾರೆ. Ravanan Matciyam Vilciyam ಎಂಬುದಾಗಿ ೧೯೪೫ರಲ್ಲಿ Kamban kalaiನ್ನು ೧೯೫೦ರಲ್ಲಿ Thambiyar lruvar ೧೯೬೧ರಲ್ಲಿ Arasiyar Muvar ೧೯೬೪ರಲ್ಲಿ ಸಂಶೋಧನಾತ್ಮಕ ಲೇಖನಗಳನ್ನು ರಚಿಸಿದ್ದಾರೆ. ಪೆರಿಯ ಪುರಾಣವನ್ನು ಕುರಿತು ವಿಮರ್ಶಿಸಿದ Desiya lllakkiyam ಎಂಬುದು ವಿಮರ್ಶಾ ಲೇಖನಗಳನ್ನು ಅಲ್ಲದೆ ವಿಮರ್ಶಾ ಮಾನದಂಡಗಳ ಚರ್ಚೆಯನ್ನು ಒಳಗೊಳ್ಳುತ್ತವೆ.