೫೧. ಝಿಗನ್ ಬಾಗ್ ಬಾರ್ಥೊ ಲೋಮಿಯಸ್ (೧೬೮೨೧೭೧೯)

ಬಾರ್ಥೋಲೋಮಿಯಸ್ ಜರ್ಮನ್ ಮಿಶನರಿಯಾಗಿದ್ದರು. ಬಹುಕಾಲದ ಹಿಂದೆಯೇ ಸುಮಾರು ೧೭ನೇ ಶತಮಾನಕ್ಕಾಗಲೇ ಭಾಷಾತ್ಮಕ ಪ್ರಕ್ತಿಯೆಯನ್ನು ಪ್ರಾರಂಭಿಸಿದವರು ಜರ್ಮನ್, ಲ್ಯಾಟಿನ್, ಭಾಷೆಗಳ ಜೊತೆಗೆ ತಮಿಳು ಭಾಷೆಯನ್ನು ಕರಗತ ಮಾಡಿಕೊಂಡದವರು. ಪ್ರಪ್ರಥಮವಾಗಿ ಬೈಬಲನ್ನು ತಮಿಳಿಗೆ ಅನುವಾದಿಸಿದರು.

ಝಿಗನ್ ಬಾಗ್ ೧೬೮೨ರಲ್ಲಿ ಸಾಕ್ಸೋನಿ (Saxony) ಯಲ್ಲಿ ಜನಿಸಿದರು. Balle ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದರು. ಡೆನ್ಮಾರ್ಕ್‌ ರಾಜನ ವಿನಂತಿ ಮೇರೆಗೆ ೧೭೦೬ ಸೆಪ್ಟಂಬರ್‍ನಲ್ಲಿ ಅವರು ಟ್ರ್‍ಯಂಕುಬಾರ್‍ಗೆ ಬಂದಿಳಿದರು. ಭಾರತಕ್ಕೆ ಬಂದ ಮೊದಲು ಪೊಟೆಸ್ಟೆಂಟ್ ಮಿಶನರಿಯಾಗಿದ್ದರು. ತಮಿಳನ್ನು ಕ್ರಮಬದ್ಧವಾಗಿ ಕಲಿತು ಬೈಬಲನ್ನು ತಮಿಳಿಗೆ ಭಾಷಾಂತರಿಸಿದರು.

ತಮಿಳು ವ್ಯಾಕರಣವನ್ನು ಲ್ಯಾಟಿನ್ನಲ್ಲಿ ಬರೆದರು. ತಮಿಳು-ಜರ್ಮನ್ ನಿಘಂಟನ್ನು ಸಿದ್ಧಪಡಿಸಿದರು. ತಮಿಳಿನ ಕಾವ್ಯಗಳನ್ನು ನೀತಿವೆನ್ಬಾ, ಕನ್ರೈವೆಂದನ್, ಉಲಗನೀದಿಗಳನ್ನು ತಮಿಳಿನಿಂದ ಭಾಷಾಂತರಿಸಿದರು. ಜರ್ಮನ್‌ನಲ್ಲಿ ಹಿಂದು ಧರ್ಮ ಮತ್ತು ದಕ್ಷಿಣ ಭಾರತದ ಸಮಾಜದ ಬಗೆಗೆ ಬರೆದಿದ್ದಾರೆ. ಚಿಕ್ಕ ಮಕ್ಕಳಿಗಾಗಿ ತಮಿಳು ಮಾಧ್ಯಮದಲ್ಲಿ ಪಠ್ಯಪುಸ್ತಕ ರಚಿಸಿದರು. ಇವರ ‘Geneology of South Indian Gods’ ಮತ್ತು ೧೭೧೬ರಲ್ಲಿ ರಚಿಸಿದ ಗ್ರಮುಟಿಕಾದಮುಲಿಕಾ ಮಹತ್ವದ ಕೃತಿಗಳು. ೧೭೧೬ರಲ್ಲಿ ಟ್ರ್‍ಯಾಂಕುಬಾರ್‍ನಲ್ಲಿದ್ದಾಗ ಗ್ರಮುಟಿಕಾ ದಮುಲಿಕಾ ಪ್ರಕಟಿಸಿದರು. ಜನಜೀವನ ಅರ್ಥೈಸಿಕೊಂಡು ಬರೆದ ೧೮೬೭ರಲ್ಲಿ ಮದರಾಸಿನಲ್ಲಿ ಸಂಪಾದಿತವಾದ Geneology of Malabar gods’ ಪ್ರಕಟಿತವಾಯಿತು. ಕೆಲವು ಕಡೆ `South Indian Gods ಎಂಬುದಾಗಿದೆ. ಗ್ರಮುಟಿಕಾ ದಮುಲಿಕಾ ಕೃತಿಯ ತಮಿಳು ಅಥವಾ ಮಲಬಾರಿ ಭಾಷೆಯನ್ನು ಕಲಿಯುವ ವಿಧಾನಗಳನ್ನು ವಿವಿಧ ಉದಾಹರಣೆಗಳೊಂದಿಗೆ ವಿವರಿಸುತ್ತದೆ.

೫೨. ಟಿ.ಪಿ. ಮೀನಾಕ್ಷಿ ಸುಂದರಮ್ (೧೯೦೧೧೯೮೦)

೨೦ನೇ ಶತಮಾನದ ದ್ರಾವಿಡ ಭಾಷಾ ವಿಜ್ಞಾನಿಗಳಲ್ಲಿ ಮೀನಾಕ್ಷಿ ಸುಂದರಂ ಹೆಸರು ಬಹಳ ಪ್ರಸಿದ್ಧವಾದುದು. ತಮಿಳು ಭಾಷೆ ಮತ್ತು ಸಾಹಿತ್ಯ ಕುರಿತಾಗಿ ಸಾಕಷ್ಟು ಚಿಂತನೆ ನಡೆಸಿದರು.

೧೯೦೧ರಲ್ಲಿ ಮದ್ರಾಸಿನಲ್ಲಿ ಜನಿಸಿದರು. ಆಣ್ಣಾಮಲ್ಲೈ ವಿಶ್ವವಿದ್ಯಾಲಯದಲ್ಲಿ ತಮಿಳಿನ ಪ್ರೊಫೆಸರ್‌ಆಗಿ ಕಾರ್ಯನಿರ್ವಹಿಸಿದರು. ೮೦ಕ್ಕೂ ಹೆಚ್ಚು ಸಂಶೋಧನಾತ್ಮಕ ಲೇಖನಗಳನ್ನು ಬರೆದ ಇವರು ತಮಿಳಿನ ಸಾಹಿತ್ಯ ಮತ್ತು ಭಾಷೆ ಚರಿತ್ರೆ ಕುರಿತು ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳು ತಾರ್ಕಿಕ ಸಂಬದ್ಧತೆಯನ್ನು, ವಸ್ತುನಿಷ್ಠತೆಯನ್ನು, ಹೆಚ್ಚಿನ ಒಳನೋಟಗಳನ್ನು ಒಳಗೊಂಡಿವೆ. ಇವರಿಗೆ ಎಲ್ಲ ದ್ರಾವಿಡ ಜ್ಞಾನವಿತ್ತು. ಹಿಂದಿ, ಸಂಸ್ಕೃತ ಹಾಗೂ ಕೆಲವು ವಿದೇಶಿ ಭಾಷೆಗಳನ್ನು ಬಲ್ಲವರಾಗಿದ್ದರು. ಚರಿತ್ರೆ, ಭಾಷಾವಿಜ್ಞಾನ, ಸಾಹಿತ್ಯ, ಮನೋವಿಜ್ಞಾನ, ತತ್ವಶಾಸ್ತ್ರ, ಜಾನಪದ, ಧರ್ಮ ಇವುಗಳನ್ನೆಲ್ಲ ಇವರ ಬರಹಗಳು ಒಳಗೊಳ್ಳುತ್ತವೆ. ಡಿ. ಆಲ್.ಎ. ನೊಂದಿಗೆ ಸಾಕಷ್ಟು ಒಡನಾಟವಿತ್ತು.

೫೩. ಡಿ.ಎಲ್. ನರಸಿಂಹಾಚಾರ್‍ (೧೯೦೬೧೯೭೧)

ಡಿ.ಎಲ್.ಎನ್. ರವರು ಸಂಶೋಧಕರಾಗಿ, ನಿಘಂಟುಕರರಾಗಿ ಚಿರಪರಿಚಿತರಾಗಿದ್ದಾರೆ. ಕನ್ನಡವಷ್ಟೇ ಅಲ್ಲದೇ ಸಂಸ್ಕೃತ, ಪಾಲಿ ಮತ್ತು ಪ್ರಾಕೃತದಲ್ಲೂ ಪರಿಣಿತಿ ಇತ್ತು. ಪ್ರಾಚೀನ ಕೃತಿಗಳನ್ನು ವ್ಯಾಖ್ಯಾನಸಹಿತ ಸಂಪಾದನೆ ಮಾಡಿದ್ದಾರೆ. ಪಂಪಭಾರತ ದೀಪಿಕಾ ಎಂಬುದು ಪಂಪಭಾರತದ ಮೇಲಿನ ವ್ಯಾಖ್ಯಾನವಾಗಿದೆ. ಕುಮಾರವ್ಯಾಸನ ವ್ಯಾಸಪರ್ವ, ಕೇಶಿರಾಜನ ಶಬ್ಧಮಣಿ ದರ್ಪಣಿ ಮತ್ತು ಶಿವಕೋಟ್ಯಾ ಚಾರ್ಯನ ವಡ್ಡಾರಾಧನೆ; ವ್ಯಾಖ್ಯಾನಸಹಿತ ಸಂಪಾದಿಸಿದರು. ಕವಿಕೃತಿಗಳ ಬಗೆಗೆ ಸಾಕಷ್ಟು ವಿಶ್ಲೇಷಣಾಪೂರ್ವಕ ಮಾಹಿತಿ ಇಲ್ಲದೆ ಕನ್ನಡ ಗ್ರಂಥ ಸಂಪಾದನೆ ಎಂಬ ಕೃತಿಯ ಭಾರತೀಯ ಭಾಷೆಗಳಲ್ಲಿನ ಪಠ್ಯ ಸಂಪಾದನಾ ಕ್ಷೇತ್ರದಲ್ಲಿ ಮಹತ್ವದ ಪ್ರಯತ್ನ ಕನ್ನಡ ನಿಘಂಟು ಕೃತಿಯ ಪ್ರಧಾನ ಸಂಪಾದಕರು ಶಬ್ಧ ವಿಹರ ಎಂಬ ಕೃತಿಯಲ್ಲಿ ಸಂಶೋಧನಾ ಪ್ರಬಂಧಗಳನ್ನು ಕ್ರೋಢೀಕರಿಸಲಾಗಿದೆ. ವ್ಯಾಕರಣ, ಛಂದಸ್ಸು ಎಂಬೆಲ್ಲ ಅಂಶಗಳನ್ನು ಲೇಖನಗಳು ಬಳಗೊಂಡಿವೆ.

ಭಾಷಾ ವಿಜ್ಞಾನ, ಸಾಹಿತ್ಯ ವಿಮರ್ಶೆ, ಟೀಕಾಟಿಪ್ಪಣಿ ಸಂಪಾದನೆ ಇವುಗಳಿಂದ ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಕೆಲಸ ಮಾಡಿದರು. ಅವರ ವಿದ್ವತ ಪ್ರಸ್ತಾವನೆಗಳೇ ಮುಂದಿನ ಚಿಂತನೆಗೆ ಅಡಿಪಾಯಗಳಾಗಿವೆ. ಹಲವಾರು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ. ಜರ್ಮನ್‌ ಭಾಷೆಯನ್ನು ಕೊನೆಗಾಲದಲ್ಲಿ ಕಲಿತರು.

೫೪. ಥಾಮಸ್ ಬರೋ (೧೯೦೬)

ದ್ರಾವಿಡ ಭಾಷಾ ಕ್ಷೇತ್ರದಲ್ಲಿ ಇತ್ತೀಚಿನ ಹೆಸರುಗಳಲ್ಲಿ ಬರೋ ಅವರದ್ದು ಅತಿ ವಿಶಿಷ್ಟ ಹೆಸರು. ದ್ರಾವಿಡ ಭಾಷಾ ವಿಕಾಸಕ್ಕೆ ಇವರ ಕೊಡುಗೆ ಅಪೂರ್ವ. ಸಂಸ್ಕೃತದಲ್ಲಿ ಅಪಾರ ಜ್ಞಾನವಿದ್ದರೂ, ಗ್ರೀಕ್, ಲ್ಯಾಟಿನ್ ಭಾಷೆಗಳನ್ನು ಅರಿತಿದ್ದರೂ ದ್ರಾವಿಡಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಕೇವಲ ಗ್ರಾಂಥಿಕ ದ್ರಾವಿಡ ಭಾಷೆಗಳ ಕುರಿತಷ್ಠೇ ಅಲ್ಲದೇ ನಿಗ್ರಾಂಥಿಕ ದ್ರಾವಿಡ ಭಾಷೆಗಳನ್ನು ಸುದೀಭೂಷಣ ಭಟ್ಟಾಚಾರ್ಯರೊಂದಿಗೆ ಕ್ಷೇತ್ರಕಾರ್ಯ ಕೈಗೊಂಡು ಸಂಗ್ರಹಿಸಿದವರು.

ಥಾಮಸ್ ಬರೋ ಇಂಗ್ಲೆಂಡಿನಲ್ಲಿ ೧೯೦೬ ಜೂನ್ ೨೯ರಂದು ಜನಿಸಿದರು. ಕೇಂಬ್ರಿಡ್ಜ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದುಕೊಂಡರು. ಖರೋಷ್ಠಿ ಶಾಸನಗಳನ್ನು ಅಧ್ಯಯನ ಮಾಡಿ ೧೯೩೨ರಲ್ಲಿ ಖರೋಷ್ಠಿ ಶಾಸನಗಳ ಭಾಷೆ ಪ್ರಕಟಿಸಿದರು. ದ್ರಾವಿಡ ಭಾಷಾ ಅಧ್ಯಯನವನ್ನು ಬ್ರಿಟಿಷ್ ಮ್ಯೂಸಿಯಮ್ ನಲ್ಲಿ ಕೆಲಸಕ್ಕೆ ಸೇರಿದಾಗಲೇ ಆರಂಭಿಸಿದರು. ಪೂರ್ವ ದ್ರಾವಿಡ ಭಾಷೆಯ ಸ್ವರಗಳ ಕುರಿತಾಗಿ ಚಿಂತನೆ ನಡೆಸಿ ಪದಾದಿಯಲ್ಲಿ ಫೋಷ ಧ್ವನಿಮಾಗಳು ಇದ್ದುವೇ? ಇಲ್ಲವೇ? ಹಾಗೂ ಸಂಸ್ಕೃತದಲ್ಲಿರುವ ದ್ರಾವಿಡ ಪದಗಳು ಎಂಬ ವಿಷಯಗಳ ಬಗ್ಗೆ ಲೇಖನ ಪ್ರಕಟಿಸಿದರು. ದ್ರಾವಿಡ ಬುಡಕಟ್ಟು ಭಾಷೆಗಳ ಕುರುತಾಗಿ ಕ್ಷೇತ್ರಕಾರ್ಯ ಕೈಗೊಳ್ಳಲು ಭಾರತಕ್ಕೆ ಬಂದರು. ದ್ರಾವಿಡ ಇಂಡೋ ಆರ್ಯನ್ ಚಿಂತನೆಯನ್ನು ಹಾಗೂ ತೌಲನಿಕ ದ್ರಾವಿಡ ಭಾಷಾ ವಿಜ್ಞಾನದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದರು. ೧೯೬೧ರಲ್ಲಿ ದ್ರಾವಿಡ ಜ್ಞಾತಿ ಪದಕೋಶವನ್ನು ೧೯೬೨ರಲ್ಲಿ ಇಂಡೋ ಆರ್ಯನ್‌ನಿಂದ ದ್ರಾವಿಡ ಪದ ಸ್ವೀಕರಣ ಎಂಬ ಕರತಿಗಳನ್ನು ಎಮಿನೋ ಅವರೊಂದಿಗೆ ರಚಿಸಿದ್ದಾರೆ. ಇವರ ದ್ರಾವಿಡ ಅಧ್ಯಯನವನ್ನು ಮೂರು ರೀತಿಯಲ್ಲಿ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ೧ ತೌಲನಿಕ ದ್ರಾವಿಡ ಶಾಸ್ತ್ರ, ೨. ದ್ರಾವಿಡಿಯನ್ ಮತ್ತು ಇಂಡೋ ಯುರೋಪಿಯನ್ ಅಧ್ಯಯನ ೩. ಬುಡಕಟ್ಟು ಭಾಷೆಗಳ ಅಧ್ಯಯನ ಮತ್ತು ವಿವರಣೆ.

ಬರೋ ಅವರು ಸುದೀಭೂಷಣ ಭಟ್ಟಾಚಾರ್ಯರೊಂದಿಗೆ ಕ್ಷೇತ್ರಾಧ್ಯಯನ ಮಾಡಿ ಹಲವಾರು ದ್ರಾವಿಡ ಬುಡಕಟ್ಟು ಭಾಷೆ ಸಂಸ್ಕೃತಿಗಳನ್ನು ಅರ್ಥೈಸಿಕೊಂಡರು. “ದ್ರಾವಿಡ ನಿಷ್ಟತ್ತಿಕೋಶ” ದಲ್ಲೂ ಈ ಮಾಹಿತಿಯನ್ನು ಬಳಸಿಕೊಂಡಿದ್ದಲ್ಲದೆ ಆ ಭಾಷೆಗಳ ಬಗೆಗೆ ಕೆಲವು ಪ್ರಕಣಗಳನ್ನು ಹೊರತಂದರು. ಬರೋ ಅವರು ಏಳು ಸಂಶೋಧನಾತ್ಮಕ ಲೇಖನಗಳು ದ್ರಾವಿಡ ಭಾಷಾ ವಿಜ್ಞಾನವನ್ನು ಹೆಚ್ಚಾಗಿ ಚರ್ಚಿಸುತ್ತವೆ. (ಭಾರತಶಾಸ್ತ್ರದ ಬಗೆಗೂ ಅಷ್ಟೇ ಅಧಿಕೃತವಾಗಿ ಮಾತನಾಡಬಲ್ಲ ಇವರು ಭಾರತಶಾಸ್ತ್ರದ ಬಗೆಗೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ.)

ಕೃತಿಗಳು :

  • Field Notes of kolami (Kinwail Dialect)1955
  • A Comparative Vocabulory of Gondi Dialect-1960
  • Some note on the kuvi dialectets as spoken by the knttia kandhs of North East korput.
  • Notes on kavi With a Short vocabulory

ಈ ಕೃತಿಗಳನ್ನು ಭಟ್ಟಾಚಾರ್ಯ ಅವರೊಂದಿಗೆ ರಚಿಸಿದ್ದಾರೆ.

ಬರೋ ಅವರು Some Dravidian words in sanskrit ನಲ್ಲಿ ಕೆಲವು ದ್ರಾವಿಡಿಯನ್ ಶಬ್ದಗಳು ಸಂಸ್ಕೃತದಲ್ಲಿ ನುಸುಳಿದ್ದನ್ನು ಬಳಕೆಯಾಗಿದ್ದನ್ನು ಈ ಸಂಶೋಧನಾ ಪ್ರಬಂಧದಲ್ಲಿ ಚರ್ಚಿಸಲಾಗಿದೆ.

ಉದಾ : ಸಂಸ್ಕೃತಿ Atta tower or Strong point on a wall Servicing for defence ಸ್ತಂಭ ಆಥವಾ ರಕ್ಷಣೆಗಾಗಿ ಇರುವ ಗೋಡೆಯ ಮೇಲಿನ ಶಕ್ತಿಶಾಲಿ ಸ್ಥಳ.

attka- attaka -attalaka-ವಿಕ್ಷಣ ಸ್ತಂಭ

ತೆಲುಗು att, adi- ಒಂದು ಕಟ್ಟಡದ ಎದುರಿಗೆ ಇರುವ ಶಕ್ತಿಯುತ ಸ್ಥಳ / ಅಡೆತಡೆ

ಕನ್ನಡ -ad,d,al-ಅಡೆತಡೆ

ತಮಿಳು -atai –ತಡೆ ಒಡ್ಡು

ಸಂಸ್ಕೃತಿ addana- ಕವಚ ಈ ರೀತಿ ೫೦ ಶಬ್ದಗಳ ವಿವರವಿದೆ.

ಅದರಂತೆ ಸಂಸ್ಕೃತದಲ್ಲಿ ದ್ರಾವಿಡಿಯನ್ ಪದಗಳ ಸೇರುವಿಕೆ ಕೆಲವು ನಿಯಮಗಳನ್ನು ಇಲ್ಲಿ ತಿಳಿಸಲಾಗಿದೆ. ಒಂದು ಪದ ದ್ರಾವಿಡ ಭಾಷೆಯ ಮೂಲವಾಗಿದ್ದರೆ ಅದು ದ್ರಾವಿಡದಿಂದ ಇಂಡೋ -ಯುರೋಪಿನ ಸಂಸ್ಕೃತ ಭಾಷೆಗೆ ಹೋಗಿದೆ ಎಂದು ತಿಳಿಯಬೇಕು.

೫೫. ನರಸಿಂಹಾಚಾರ್‌ ಎಸ್.ಜಿ. (೧೮೬೨೧೯೦೭)

ನರಸಿಂಹಾಚಾರ್‌ ಅವರು ಭಾಷಾಂತರಕಾರರಾಗಿ, ಪ್ರಾಚೀನ ಕೃತಿಗಳ ಸಂಪಾದಕರಾಗಿ ಮಹತ್ವದ ಸ್ಥಾನ ಪಡೆದುಕೊಂಡಿದ್ದಾರೆ. ಕನ್ನಡ ಸಾಹಿತ್ಯದ ಆರಂಭ ಘಟ್ಟದ ಸಾಹಿತಿಯಾಗಿ ಸಾಕಷ್ಟು ಆಧುನಿಕ ಚಿಂತನೆಗಳನ್ನು ಕನ್ನಡಿಗರಿಗೆ ಒದಗಿಸಿದರು. ಆದಿಪುರಾಣ ಮತ್ತು ಜಗನ್ನಾಥ ವಿಜಯ ಕೃತಿಗಳನ್ನು ಹಾಗೂ ರಾಮಾನುಜ ಅಯ್ಯಂಗಾರರೊಂದಿಗೆ ಗದಾಯುದ್ಧ, ಮಲ್ಲಿನಾಥಪುರಾಣ, ಲೀಲಾವತಿ ಪ್ರಬಂಧ ಸಂಪಾದಿಸಿದರು. ಆರ್‌ ನರಸಿಂಹಾಚಾರ್ಯರೊಂದಿಗೆ ಕರ್ನಾಟಕ ಕವಿಚರಿತೆ (ಸಂಪುಟ ೧) ಸಿದ್ಧಪಡಿಸಿದರು.

೫೬. ನರಸಿಂಹಚಾರ್ಯ ಆರ್. (೧೮೬೧೧೯೩೬)

ಆರ್‍. ನರಸಿಂಹಚಾರ್ಯರವರು ಆಚಾರ್ಯಪುರುಷರು. ಒಬ್ಬ ವಿದ್ವಾಂಸರಾಗಿ ಸಂಶೋಧಕರಾಗಿ ಕನ್ನಡಕ್ಕೆ ಅವರ ಕೊಡುಗೆ ಅಪಾರ. ತಮಿಳು ಮತ್ತು ಕನ್ನಡವನ್ನು ಏಕಕಾಲಕ್ಕೆ ಬಲ್ಲ ಇವರು ತಮಿಳಿನ ಕವಿತೆಗಳನ್ನು ನೀತಿವಾಕ್ಯ ಮಂಜರಿಗಳೆಂಬ ಶೀರ್ಷಿಕೆಯಲ್ಲಿ ಅನುವಾದಿಸಿ ಕೊಟ್ಟಿದ್ದಾರೆ. ಸಾವಿರಾರು ಕವಿಗಳನ್ನು ಎಕತ್ರವಾಗಿಸಿ ಸಶಾಸ್ತ್ರೀಯವಾಗಿ ಒಂದೆಡೆ ಜೋಡಿಸಿಕೊಟ್ಟಿರುವ ಕವಿಚರಿತೆಯ ೩. ಸಂಪುಟಗಳಿಗಾಗಿ ೩೫ ವರ್ಷಗಳಷ್ಟು ಸುರ್ಧಿರ್ಘವಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರತಿ ಕವಿಯ ಹಿನ್ನೆಲೆಯನ್ನು ಅಧ್ಯಯನ ಮಾಡಿ ವಿವರ ಒದಗಿಸಿದ್ದಾರೆ. ಕವಿ ಕಾಲ ನಿರ್ಣಯವನ್ನು ಕೊಟ್ಟಿದ್ದಾರೆ.

ರಾ.ನರಸಿಂಹಾಚಾರ್ಯರು ಮಂಡ್ಯ ಜಿಲ್ಲೆಯಲ್ಲಿ ೧೮೬೦ರಲ್ಲಿ ಜನಿಸಿದರು. ಮೈಸೂರು ಸರ್ಕಾರಿ ಇಲಾಖೆಯಲ್ಲಿ ಭಾಷಾಂತರಕಾರರಾಗಿ ಕೆಲಸ ಮಾಡಿ ೧೮೯೯ರಲ್ಲಿ ಪ್ರಾಕ್ತನ ಇಲಾಖೆಗೆ ಸೇರಿದರು. ಲೂಯಿರೈಸ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯದಲ್ಲಿ ನಿರತರಾದರು. ಕವಿಚರಿತೆಯ ಪ್ರತಿಸಂಪುಟದ ಮುನ್ನುಡಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ ಇತಿಹಾಸ ಕುರಿತು ಸಮಗ್ರವಾಗಿ ಬರೆಯುತ್ತಾರೆ. ಮೊದಲ ಸಂಪುಟದಲ್ಲಿ ಕನ್ನಡ ಭಾಷೆಯ ಮೂಲ, ಪಂಚದ್ರಾವಿಡ ಭಾಷೆಯಾಗಿ ಕನ್ನಡ ದ್ರಾವಿಡ ಭಾಷೆಗಳ ಪ್ರಾಚೀನತೆ ದ್ರಾವಿಡ ಭಾಷಾ ಪ್ರದೇಶ ಹಾಗೂ ಕನ್ನಡದ ಪ್ರಾಚೀನತೆ ಕುರಿತು ಎರಡನೆಯ ಸಂಪುಟದಲ್ಲಿ ಕನ್ನಡ ಪ್ರದೇಶವನ್ನಾಳಿದ ರಾಜವಂಶಗಳ ವಿವರ ಕನ್ನಡ ನಾಡಿನ ಮಹಿಮೆ ಕುರಿತು ಬರೆದಿದ್ದಾರೆ. ಮೂರನೇಯ ಸಂಪುಟದಲ್ಲಿ ದ್ರಾವಿಡ ಪದ ನಿಷ್ಟತ್ತಿ, ದ್ರಾವಿಡ ಗೌಡ ಭಾಷೆಗಳು ದ್ರಾವಿಡ ಭಾಷೆಯಾಗಿ ಕನ್ನಡದ ಸ್ಥಾನ ಇತ್ಯಾದಿ ವಿಚಾರಗಳನ್ನು ಸಮಗ್ರವಾಗಿ, ಸವಿಸ್ತಾರವಾಗಿ ಚರ್ಚಿಸಿದ್ದಾರೆ. ಅಲ್ಲದೆ ಕನ್ನಡ ಶಾಸನಗಳನ್ನು ಕುರಿತು ಶಾಸನಪದ್ಯ ಮಂಜರಿಯನ್ನು ರಚಿಸಿಕೊಟ್ಟಿದ್ದಾರೆ. ಇದರಲ್ಲಿ ೧೪೬೩ ಶ್ಲೋಕಗಳಿವೆ.

ಬಿ.ಎಲ್. ರೈಸ್ ಅವರೊಂದಿಗೆ ಕೆಲಸ ಮಾಡುತ್ತಲೆ ಕನ್ನಡ ತಮಿಳು ಶಾಸನಗ ಬಗ್ಗೆ ಅಧ್ಯಯನ ನಡೆಸಿದರು. ೧೯೦೬ರಲ್ಲಿ ಓರಿಯಂಟಲ್ ರಿಸರ್ಚೆ ಇನ್ಸಿಟ್ಯೂಟ್‌ನ ನಿರ್ದೇಶಕರಾದರು. ಇಲ್ಲಿ ೧೦೦ಕ್ಕೂ ಹೆಚ್ಚು ಶಾಸನಗಳನ್ನು ಸಂಗ್ರಹಿಸಿ ಸುಕ್ತ ವಿಮರ್ಶೆಯೊಂದಿಗೆ ಪ್ರಕಟಿಸಿದರು. ಇವರ ನೇತೃತ್ವದಲ್ಲಿ ಚಂದವಳ್ಳಿಯಲ್ಲಿ ಹಳೇಬೀಡಿನಲ್ಲಿ ಉತ್ಖನನ ನಡೆಯಿತು. ಹಳೇಬೀಡಿನಲ್ಲಿ ರೋಮನ್, ಚೈನಿಸ್ ನಾಣ್ಯಗಳು ಸಿಕ್ಕವು ೮ರಿಂದ ೧೯ನೇ ಶತಮಾನದವರಿಗಿನ ಕವಿಚರಿತೆಯ ಜೊತೆಗೆ Hoysala architecture and sculpture’ ಕೃತಿ ರಚಿಸಿದವರೂ ಇವರೇ. ಇವರ ಸಂಶೋಧನಾತ್ಮಕ ಪ್ರಬಂಧಗಳು Indian antiguary & Journal of Mythic Society’ ನಲ್ಲಿ ಪ್ರಕಟಗೊಂಡಿವೆ.

೫೭. ನಾರಾಯಣ ಪಣಿಕ್ಕರ್. ಆರ್‍ (೧೮೮೯೧೯೫೯)

ನಾರಾಯಣ ಪಣಿಕ್ಕರ್‌ ಅವರು ಮಲೆಯಾಳ ಭಾಷೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಹೆಸರು. ಸಾಹಿತ್ಯ ಚರಿತ್ರೆಕಾರರಾಗಿ, ನಿಘಂಟುಕಾರರಾಗಿ, ಭಾಷಾಂತರಕರಾಗಿ, ಇತಿಹಾಸ ಸಂಶೋಧಕರಾಗಿ ಅವರದು ಬಹುಮುಖ ಪ್ರತಿಭೆ. ಏಳು ಸಂಪುಟಗಳಲ್ಲಿ ಮಲೆಯಾಳಮ್ ಸಾಹಿತ್ಯ ಚರಿತ್ರೆ ಸಿದ್ಧಪಡಿಸಿದರು. ೧೯೨೮ರಲ್ಲಿ ಪ್ರಥಮ ಸಂಪುಟವನ್ನು ೧೯೫೧ರಲ್ಲಿ ಏಳನೇ ಸಂಪುಟ ರಚಿಸಿದರು. Ezhettacham ರ ಮಹಾಭಾರತವನ್ನು ವ್ಯಾಖ್ಯಾನದೊಂದಿಗೆ ಸಂಪಾದಿಸಿದರು. Adikeralacharitam Tiruvitamkur Charitam Mugalaprabhasam ಎಂಬ ಚಾರಿತ್ರಿಕ ಕೃತಿಗಳನ್ನು ಅಲ್ಲದೆ, Kaniyan Nambiar, Mahatma Gandhi Ezuttachamರ ಜೀವನ ಚರಿತ್ರೆಗಳನ್ನು ಇಂಗ್ಲೀಷ್ ಮಲಯಾಳಮ್ ಬೃಹತ್ ಶಬ್ದಕೋಶವನ್ನು ೧೯೩೧ರಲ್ಲಿ ನವಯುಗ ಭಾಷಾ ನಿಘಂಟು (೧೯೫೧)ರಲ್ಲಿ ಪ್ರಕಟಿಸಿದರು. ಮಲಯಾಳಮ್ ಕ್ಷೇತ್ರದ ಮೂಲಕ ದ್ರಾವಿಡ ಚಿಂತನೆಗೆ ಕೊಡುಗೆ ನೀಡಿದ್ದಾರೆ.

೫೮. ನಾರಾಯಣ ಪಿಳ್ಳೈ ಪಿ.ಕೆ. (೧೯೧೦೧೯೮೭)

ನಾರಾಯಣ ಪಿಳ್ಳೈಯವರು ಸಂಸ್ಕೃತ ಮಲಯಾಳಂ ಉಭಯ ಭಾಷಾ ವಿಶಾರದರು. ಮಲಯಾಳಮ್ ಸಾಹಿತ್ಯ ಸಂಶೋಧನೆಗೆ ಆಧುನಿಕ ಸಂವೇದನೆಯನ್ನು ಒದಗಿಸಿದವರು. ಕೇರಳ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಮತ್ತು ಮಲೆಯಾಳಮ್ ನಲ್ಲಿ ಸಂಶೋಧನೆಗಳಿಗೆ ಮಾರ್ಗದರ್ಶನ ಮಾಡಿದರು. ಪ್ರಾಚೀನ ಕೃತಿಗಳನ್ನು ಶೋಧಿಸಿ ಪರಿಷ್ಕರಿಸಿ ಪ್ರಕಟಿಸಿದರು ಮಲಯಾಳಮ್‌ನ ಪಾಟ್ಟು ಪ್ರಕಾರದ ರಾಧಕಥಾ ಪಾಟ್ಟು ಮತ್ತು ಭಾರತನ್ ಪಾಟ್ಟುಗಳನ್ನು ಶೋಧಿಸಿ ತೆಗೆದರು. ಅಯ್ಯ ಪಿಳ್ಳೈ ಆಸನ್ ಮತ್ತು ಅಯ್ಯಾನ ಪಿಳ್ಳೈ ಆಸನ್ ಎಂಬ ಸಹೋದರರು ಈ ಪಾಟ್ಟುಗಳನ್ನು ರಚಿಸಿದ್ದಾರೆ. ಇವರಿಬ್ಬರೂ ತಿರುವನಂತನಪುರಮ್ ಸಮೀಪದಲ್ಲಿರುವ ಕೋವನಮ್ ಪ್ರದೇಶದವರು. ಈ ಪಾಟ್ಟುಗಳಿರುವ ಹಸ್ತಪ್ರತಿಗಳನ್ನು ದೀರ್ಘಕಾಲ ಸಂಶೋಧನೆ ನಡೆಸಿ ವ್ಯಾಖ್ಯಾನಸಹಿತ ಸಂಪಾದಿಸಿದರು.

೫೯. ಪರಮೇಶ್ವರ ಅಯ್ಯರ್, ಉಲ್ಲೂರು (೧೮೭೭೧೯೪೯)

ಪರಮೇಶ್ವರ್‌ ಅಯ್ಯರ್‌ ಅವರು ಮಲಯಾಳಮ್ ಭಾಷೆಯ ಶ್ರೇಷ್ಠ ಸಂಶೋಧಕ ರಾಗಿದ್ದರು. ಮಲಯಾಳಮ್ ಸಾಹಿತ್ಯ ಚರಿತ್ರೆಯ ೫ ಸಂಪುಟಗಳನ್ನುಸಿದ್ಧ ಪಡಿಸಿದರು. ಪಾರಂಪರಿಕ ಶೈಲಿಯನ್ನೇ ಅಳವಡಿಸಿಕೊಂಡು Kerala Sahitya Charitam ಎಂಬುದು ಜೀವನದ ಸಾಧನೆಯಾಗಿದೆ. ಹಸ್ತಪ್ರತಿಗಳನ್ನು ಶಾಸನಗಳನ್ನು ಶೋಧಿಸಿದರು. ಐತಿಹಾಸಿಕ, ಸಾಹಿತ್ಯಿಕ ಮತ್ತು ಭಾಷಾಶಾಸ್ತ್ರೀಯ ನೆಲೆಯಲ್ಲಿ ಅವರು ಕೆಲಸ ಮಾಡಿದ್ದಾರೆ.

೬೦. ಪೊಳಲಿ ಶೀನಪ್ಪ ಹೆಗಡೆ (೧೮೯೦೧೯೬೬)

ಪೊಳಲಿ ಶೀನಪ್ಪ ಹೆಗಡೆಯವರು ತುಳುನಾಡಿನ ಪ್ರಮುಖ ಇತಿಹಾಸಕಾರರು. ಪೊಳಲಿ ಶೀನಪ್ಪ ಹೆಗಡೆಯೆಂದೇ ಪ್ರಸಿದ್ಧರಾದ ಇವರ ಹೆಸರು ನಂದಳಿಕೆ ಆಮುಣಿಂಜೆಗುತ್ತು ಶೀನಪ್ಪ ಹೆಗಡೆ, ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳ ಪಾಂಡ್ಯ ರಾಯನ ಆಳಿಯಕಟಟು ಇವರ ಪ್ರಮುಖ ಕೃತಿ.

ಹೆಗಡೆಯವರು ತುಳುನಾಡಿ ಇತಿಹಾಸಧ್ಯಾಯನಕ್ಕೆ ಸಮಬಂಧಿಸಿದಂತೆ ತುಳುನಾಡಿನ ಸ್ಥಳೀಯ ಅರಸು ಮನೆತನಗಳ ಬಗೆಗೆ ಸಾಕಷ್ಟು ಅಧ್ಯಯನ ನಡೆಸಿದ್ಧಾರೆ. ಮೌಖಿಕ ಸಾಹಿತ್ಯ ಐತಿಹ್ಯ ಮತ್ತು ಸ್ಥಳಿಪುರಾಣಗಳನ್ನು ಸಾಕಷ್ಟು ಸಂಗ್ರಹಿಸಿದ್ದಾರೆ. ಕೃತಿಯಲ್ಲಿ ೩.೨ ಅಧ್ಯಾಯಗಳಿವೆ. ಅಳಿಯಕಟ್ಟಿನ ಕುರಿತಾಗಿರುವುದರಿಂದ ಚಾರಿತ್ರಿಕ ಅಂಶಗಳು ಕಡಿಮೆ. ಅಳುಪ ಅರಸರ ವಿವರವಿಲ್ಲದಿರುವುದು ಗಮನೀಯ ಸಂಗತಿ. ಏಳು ಶಾಸನಗಳನ್ನು ಒದಗಿಸಿದ್ದರೂ ಅವುಗಳ ವಿಶೇಷತೆ ಇಲ್ಲ. ಕೆಲ ತುಳು ಅರಸು ಮನೆತನಗಳಾದ ಬಂಗ, ಅಚಿ, ಜೌಡಿ, ಸಾಮಂತ ಮುಂತಾದವರ ವಿಚಾರ, ತುಳು ಜನಜೀವನಗಳ ಮಾಹಿತಿಯಿದೆ.