೬೧. ಫರ್ಡಿನಾಂಡ್ ಕಿಟೆಲ್ (೧೮೩೨೧೯೦೩)

ಫರ್ಡಿನಾಂಡ್ ಕಿಟೆಲ್ ಒಬ್ಬ ಜರ್ಮನ್ ಮಿಶನರಿ. ನಿಘಂಟು, ವ್ಯಾಕರಣ, ಛಂದಸ್ಸುಗಳಲ್ಲಿ ಆಸಕ್ತಿಯಿಂದ ಕನ್ನಡದಲ್ಲಿ ಕಾರ್ಯನಿರ್ವಹಿಸಿದವರು. ಒಂದು ಸೂಕ್ತಿಯಂತೆ ಕನ್ನಡಕ್ಕೆ ಕಿಟೆಲ್ ತಮಿಳಿಗೆ ಬೆಶ್ಚಿ, ತೆಲುಗಿಗೆ ಬ್ರೌನ್ ಹಾಗೂ ಮಲಯಾಳಂಗೆ ಗುಂಡರ್ಟ ಆಚಾರ್ಯ ಪುರುಷರೆನಿಸಿದ್ದಾರೆ. ಸಂಸ್ಕೃತ, ಪರ್ಶಿಯನ್, ತಮಿಳ್ ಕೊಂಕಣಿ ಮತ್ತು ಮರಾಠಿ ಭಾಷೆಯಲ್ಲಿ ಪ್ರಾವಿಣ್ಯ ಪಡೆದವರಾಗಿದ್ದಾರೆ.

ಕಿಟೆಲ್ ರವರು ೧೮೩೨ರಲ್ಲಿ ಜರ್ಮನಿಯ ರೂಸ್ಟರ್‍ಹೇಪ್‌ನಲ್ಲಿ ಜನಿಸಿದರು. ಶಾಲಾ ವಿದ್ಯಾಭ್ಯಾಸದ ನಂತರ ಸ್ವಿಡ್ಜರ್‍ಲ್ಯಾಂಡ್‌ನಲ್ಲಿ ಬಾಸೆಲ್ ಮಿಶನ್‌ಗೆ ಸೇರಿದರು. ೧೮೫೩ರಲ್ಲಿ ಭಾರತಕ್ಕೆ ಬಂದರು. ೧೮೯೪ರಲ್ಲಿ ಕನ್ನಡ ಇಂಗ್ಲಿಷ್ ನಿಘಂಟು ರಚಿಸಿದರು. ಕನ್ನಡ ಗಾದೆಗಳನ್ನು ಸಂಗ್ರಹಿಸಿ ಅವುಗಳ ಮಹತ್ವದ ಬಗೆಗೆ ತಿಳಿಸಿದರು. ದ್ರಾವಿಡದಷ್ಟೇ ಕೆಲಸವನ್ನು ಇಂಡೋ ಆರ್ಯನ್ ಭಾಷೆ ಮತ್ತು ಸಂಸ್ಕೃತ ಕುರಿತು ನಿಖರವಾಗಿ ವಾದ ಮಂಡಿಸಬಲ್ಲವರಾಗಿದ್ದರು. ಕಿಟೆಲ್ ರವರು ದ್ರಾವಿಡ ಭಾಷೆ ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರವಾಗಿದ್ದು ಅದರ ಕೆಲ ಅಂಶಗಳನ್ನು ಇಲ್ಲಿ ತಿಳಿಸಬಹುದು.ಕಿಟೆಲರು ಕೋಶದ ಮುನ್ನುಡಿಯಲ್ಲಿ ಸಂಸ್ಕೃತದಲ್ಲಿನ ೪೨೦ ದ್ರಾವಿಡ ಮೂಲದ ಶಬ್ದಗಳನ್ನು ವ್ಯುತ್ಪತ್ತಿ ಸಹಿತ ಕೊಟ್ಟಿದ್ದಾರಲ್ಲದೇ ದ್ರಾವಿಡ ಭಾಷೆಯ ಪ್ರಭಾವವು ಸಂಸ್ಕೃತದ ಮೇಲೆ ಆಳವಾಗಿ ಆಗಿತ್ತೆಂಬುದನ್ನು ಪ್ರತಿಪಾದಿಸುತ್ತಾರೆ. ೧೮೭೩ರಲ್ಲಿ Indian antiquary ಯಲ್ಲಿ ಕೊಡಗರು ಆಚರಣೆಯಲ್ಲಿರುವ ಭೂತಾರಾಧನೆಯ ವಿಚಾರವನ್ನು ಪ್ರಸ್ತಾಪಿಸುತ್ತಾ ಕೊಡಗಿನಲ್ಲಿ ಅಚರಣೆಯಲ್ಲಿರುವ ಭೂತಾರಾಧನೆಯ ವಿಚಾರವನ್ನು ಪ್ರಸ್ತಾಪಿಸುತ್ತಾ ಕೊಡಗಿನಲ್ಲಿ ಆಚರಣೆಯಲ್ಲಿರುವ ಭೂತಾರಾಧನೆಯ ವಿಚಾರವನ್ನು ಪ್ರಸ್ತಾಪಿಸುತ್ತಾ ಕೊಡಗಿನಲ್ಲಿ ಆಚರಣೆಯಲ್ಲಿರುವ ಭೂತಾರಾಧನೆಯ ವಿಜಾರವನ್ನು ಪ್ರಸ್ತಾಪಿಸುತ್ತಾ ಕೊಡಗರು ಅಯ್ಯಪ್ಪ ಹಾಗೂ ಕಾಳಿಯನ್ನು ಭೂತಗಳೆಂದು ಕರೆಯುವುದಿಲ್ಲರಾದರೂ ಐಯ್ಯಪ್ಪ ಭೂತಗಳ ಒಡೆಯನಾಗಿರಬಹುದೆಂದೂ ಕಿಟೆಲ್ ಪ್ರತಿಪಾದಿಸುತ್ತಾರೆ. ಅಲ್ಲದೆ ಅಯ್ಯಪ್ಪನ ಇನ್ನೊಂದು ಹೆಸರು ಸಾಸ್ರಾವು. ತಮಿಳು ಹಾಗೂ ತುಳು ಜನರು ಭೂತಗಳ ಒಡೆಯನೆಂದು ಆರಾಧಿಸುತ್ತಾರೆ. ಇದೇ ರೀತಿ ಕುಟ್ಟಿಚಾಟ್ಟು, ಗುಳಿಗ (ನಾತಾ) ಕೊರಗ, ಕಲ್ಲುಕುಟ್ಟಿ, ಪಂಜುರ್ಲಿ ಭೂತವೆಂಬುದನ್ನು ಆಚರಣೆ ಸಮೇತ ವಿಶ್ಲೇಷಿಸುತ್ತಾರೆ. ಚಾಮುಂಡಿ ಹೆಣ್ಣು ಭೂತವೆಂಬುದನ್ನು ವಿವರಿಸುತ್ತಾರೆ. ಅಲ್ಲದೇ ದ್ರಾವಿಡ ಸಂಖ್ಯಾವಾಚಕಗಳ ಕುರಿತು ಹೇಳುತ್ತ ೧ ರಿಂದ ೧೦ ಮೂಲದ್ರಾವಿಡವು ಹಾಗೂ ಸಂಸ್ಕೃತದಲ್ಲಿ ಪೆಂಗು, ಪೂರ್ಜಾ, ತಗರಪೂರ್ಜಾ ದುರ್ವಗೊಂಡರು, ಉರಿಯಾ ಶಬ್ದಗಳನ್ನು ಕೆಲವು ಸಂಖ್ಯೆಗಳಲ್ಲಿ ಬಳಸುತ್ತಾರೆ ಎಂದು ಪ್ರತಿಪಾದಿಸಿದ್ದಾರೆ. ೧೮೩೪ರಲ್ಲಿ ದ್ರಾವಿಡ ಶಬ್ಧಗಳು ಎಂಬಲ್ಲಿ ನೀಲಗಿರಿಯಲ್ಲಿ ವಾಸಿಸುವ ಜನರಿಗೆ ‘’ಡ’’ಕಾರ ಉಚ್ಚಾರಣೆ ಬರುವುದಿಲ್ಲ. ಆದ್ದರಿಂದ ತೋಡ ಶಬ್ದವನ್ನು ತೊದ ಎಂದೂ ಕೋಟ ಶಬ್ದವನ್ನು ಕೋತ ಎಂಬುದಾಗಿ ಉಚ್ಚರಿಸುತ್ತಾರೆ ಎಂದು ತಿಳಿಸುತ್ತಾರೆ. ದಕ್ಷಿಣ ಭಾರತದ ಭಾಷಾಶಾಸ್ತ್ರದ ತೌಲನಿಕ ಸಮೀಕ್ಷೆ ಮಾಡಿದ್ದಾರೆ. ೧೯ನೇ ಶತಮಾನದ ಪ್ರಾರಂಭದಲ್ಲಿ ದಕ್ಷಿಣ ಭಾರತದ ಭಾಷೆಗಳಲ್ಲಿ ತುಲನೆ ಮಾಡಿದರು ತೃಪ್ತಿ ಎನಿಸುವುದಿಲ್ಲ. ದ್ರಾವಿಡ ಭಾಷೆಯನ್ನು ಸಿಥಿಯನ್ ಹಾಗೂ ಇಂಡೋ ಯುರೋಪಿಯನ್ ಕುಟುಂಬಗಳಿಗೆ ಸೇರಿದ್ದವೆಂದು ತಿಳಿಸುತ್ತಾರೆ. ಸಂಸ್ಕೃತ ಕನ್ನಡ ತೌಲನಿಕ ಅಧ್ಯಯನದಲ್ಲಿ ಮೂರ್ಧನ್ಯ ಧ್ವನಿಗಳಿರುವ ಶಬ್ದಗಳು ದ್ರಾವಿಡವು ಎನ್ನುತ್ತ ಪದ, ಪೆಣ್, ಪುಲೈ…. ಇತ್ಯಾದಿ ೧೪ ಶಬ್ದಗಳ ಬಗೆಗೆ ನಡೆಯಬೇಕೆಂದು ಸೂಚಿಸುತ್ತಾರೆ.

ನಾಗವರ್ಮನ ಕನ್ನಡ ಛಂದಸ್ಸು ಕೃತಿಯಲ್ಲಿ ದೇವಾಕ್ಷರ ರಗಳೆಗಳು ಕನ್ನಡದ್ದೆ ಕೊಡುಗೆ ಎಂಬುದನ್ನು ಕಿಟೆಲರು ತೋರಿಸಿದ್ದಾರೆ. ಉಪಜಾತಿ ಛಂದಸ್ಸು ಕನ್ನಡ ಭಾಷೆಯಿಂದ ಬಂದದ್ದೂ. ಅದೇ ರೀತಿ ಅಕ್ಷರ ಎನ್ನುವುದು ಕನ್ನಡದ ಛಂದಸ್ಸು ಎನ್ನುತ್ತಾರೆ. ೧೮೯೪ ರಲ್ಲಿ ಮಹತ್ವದ ಕೃತಿ ಕನ್ನಡ – ಇಂಗ್ಲೀಷ್ ನಿಘಂಟು ಪ್ರಕಟಿಸಿದರು. ಇದರಲ್ಲಿ ಸುಮಾರು ೪೨೦ ಸಂಸ್ಕೃತದಲ್ಲಿನ ಶಬ್ದಗಳು ದ್ರಾವಿಡಿಯನ್ ಮೂಲದವು ಎಂದು ತೋರಿಸಿಕೊಟ್ಟರು.

೬೨. ಫ್ರಾನ್ಸಿಸ್ ವೈಟ್ ಎಲ್ಲಿಸ್ (೧೭೮೦೧೮೧೯)

ಫ್ರಾನ್ನಿಸ್ ವೈಟ್ ಎಲ್ಲಿಸ್ ದ್ರಾವಿಡ ಭಾಷಾ ವಿಜ್ಞಾನದ ಆಚಾರ್ಯ ಪುರುಷರಲ್ಲೊಬ್ಬರು. ತೆಲುಗು ಭಾಷಾ ವಿಜ್ಙಾನದ ಜನಕರೆಂದೇ ಇವರನ್ನು ಕರೆಯಲಾಗಿದೆ. ಸಂಸ್ಕೃತ ತಂದ ಈ ಭಾಷೆಗಳು ಬಂದವುಗಳಲ್ಲಿ ದ್ರಾವಿಡ ಭಾಷೆಗಳಿಗೆ ಅವುಗಳದೇ ಅನನ್ಯತೆಯಿದೆ ಎಂಬುದನ್ನು ತಿಳಿಸಿಕೊಟ್ಟವರು. ಸಂಸ್ಕೃತದಿಂದ ಪ್ರಭಾವಿತಕೊಂಡಿರಬಹುದು. ಆದರೆ ಜನ್ಯ ಜನಕ ಸಂಬಂಧವಿಲ್ಲ ಎಂಬುದನ್ನು ಮೊಟ್ಟ ಮೊದಲಿಗೆ ತಿಳಿಸಿಕೊಟ್ಟವರು. ಕಾಲ್ಡವೆಲ್ ಪೂರ್ವದ ದ್ರಾವಿಡ ಭಾಷಾ ಚಿಂತಕರು.

ಎಲ್ಲಿಸ್ ೧೭೮೦ ರಲ್ಲಿ ಜನಿಸಿದರು. ೧೭೯೬ರಲ್ಲಿ ಭಾರತಕ್ಕೆ ಬಂದ ಇವರು ಮದರಾಸಿನಲ್ಲಿ ಕಾರ್ಯನಿಮಿತ್ತ ನೆಲೆಗೊಂಡರು. ಸಂಸ್ಕೃತ, ತೆಲುಗು ಇತ್ಯಾದಿ ಭಾರತೀಯ ಭಾಷೆಗಳನ್ನು ಅಧ್ಯಯನ ಮಾಡಿದರು. ಎ.ಡಿ. ಕ್ಯಾಂಪಬೆಲ್‌ನ ವ್ಯಾಕರಣದ ಮುನ್ನುಡಿಯಲ್ಲಿ ಸಂಸ್ಕೃತ ಭಾಷೆ ದ್ರಾವಿಡ ಭಾಷೆಗಳನ್ನು ಪ್ರಭಾವಿಸಿರಬಹುದು. ಆದರೆ ದ್ರಾವಿಡ ವರ್ಗವೇ ಬೇರೆ ಎಂದು ವಾದಿಸಿದರು. ಮಲೆಯಾಳಂ ತಮಿಳಿನ ಉಪಭಾಷೆಯೆಂಬುದು ಇವರ ಅಭಿಪ್ರಾಯವಾಗಿತ್ತು. ಮುನ್ನುಡಿಯಲ್ಲಿ ಅವರು ಹೀಗೆ ಹೇಳುತ್ತಾ. ತಮಿಳು, ತೆಲುಗು ಕನ್ನಡ ಮಲಯಾಳಂ ತುಳು ಕೊಡಗೆ, ರಾಜಮಹಲ್ ಗಿರಿಪ್ರದೇಶದ ಭಾಷೆ ಇವೆಲ್ಲ ಭಾಷೆಗಳಲ್ಲಿ ವಾಂಶಿಕ ಸಂಬಂಧವಿದೆ ಎಂದರು.

ಕಾಲ್ಡವೆಲ್ ಕೂಡ ಎಲ್ಲಿಸ್‌ರ ಕೊಡುಗೆಯನ್ನು ಸ್ಮರಿಸುತ್ತಾರೆ. ತೆಲುಗು ಭಾಷೆಯ ಮೂಲವು ಸಂಸ್ಕೃತೇತರವಾಗಿದೆ. ಇದಕ್ಕಾಗಿ ಸಂಸ್ಕೃತ ಧಾತುಗಳನ್ನು ಮತ್ತು ಪಟ್ಟಾಭಿ ರಾಮಶಾಸ್ತ್ರ ಸಂಪಾದನಾ ಪಟ್ಟಿಯಿಂದ ತೆಲುಗುಧಾತುಗಳನ್ನು ತೆಗೆದುಕೊಂಡು ಅಧ್ಯಯನ ನಡೆಸಿದರು. ತಮಿಳು, ತೆಲುಗು ಮತ್ತು ಕನ್ನಡ ಧಾತುಗಳ ಕ್ಲಿಷ್ಟ ತೌಲನಿಕ ಕೋಷ್ಟಕದ ಸಹಾಯದಿಂದ ಅವುಗಳಲ್ಲಿ ಜ್ಞಾತಿ ಸಂಬಂಧವನ್ನು ಪ್ರತಿಪಾದಿಸಿದರು. ತಮಿಳು, ಕನ್ನಡ ತೆಲಗು ಭಾಷೆಗಳ ಧಾತು ಕೋಷ್ಟಕದಿಂದ ಅವುಗಳಲ್ಲಿನ ಅಂತರ ಸಂಬಂಧವನ್ನು ತೋರಿಸಿಕೊಟ್ಟರು. ಹೀಗೆ ದಕ್ಷಿಣಭಾರತದ ಭಾಷೆಗಳು ಸಾಮಯಿಕ ಧಾತುಗಳನ್ನು ಮತ್ತು ಶಬ್ದಗಳನ್ನು ಹೊಂದಿದ್ದರೂ ಅವುಗಳ ಭಾಷಾನುಡಿಗಟ್ಟು ವೈಲಕ್ಷಣಗಳಲ್ಲಿ ಭಾರಿ ಅಂತರ ವ್ಯತ್ಯಾಸವಿದೆ ಎಂಬ ವಾದವನ್ನು ಇವರು ತಿ‌ರಸ್ಕರಿಸುತ್ತಾರೆ. ಸಂಸ್ಕೃತ ಮತ್ತು ಇಂಗ್ಲಿಷ್ ಪಠ್ಯಗಳಲ್ಲಿರುವ ರಚನಾ ವಿಧಾನವನ್ನು ವಿಶ್ಲೇಷಿಸಿ ತಮ್ಮ ಸಿದ್ಧಾಂತ ಪ್ರತಿಪಾದಿಸುತ್ತಾರೆ. ಫೋರ್ಟ್‌ಸೆಂಟ್ ಜಾರ್ಜೆ ಕಾಲೇಜ್ ಸ್ಥಾಪಕರಾಗಿ ಅಲ್ಲಿಯೇ ಮುದ್ರಣ ಯಂತ್ರವನ್ನು ಸ್ಥಾಪಿಸಿ ಹಲವಾರು ಕೃತಿಗಳ ಪ್ರಕಟಣೆ ಮಾಡುತ್ತಾರೆ.

Constanzo Beschi ಅವರ ತಮಿಳು ವ್ಯಾಕರಣ, Illakkana Surakkam ಅವರ ತಮಿಳು ವ್ಯಾಕರಣ. ರಾಮಾಯಣ ಉತ್ತರ ಕಾಂಡದ ತಮಿಳು ಅನುವಾದ ತಿರುಕ್ಕುರಳಿನ ಅನುವಾದ ಮತ್ತು ವ್ಯಾಖ್ಯಾನ. Campbell’s ಇತ್ಯಾದಿ ಪಂಚತಂತ್ರದ ತೆಲುಗು ಅನುವಾದ.

ಎಲ್ಲಿಸ್ ವೈಟ್‌ರ ಇನ್ನುಳಿದ ಕೊಡುಗೆಗಳೆಂದರೆ South Indian property ownership, hindu law, ಅಲ್ಲದೇ ೧೮೧೪ರಲ್ಲ Mirasi iand proprietary system of south india ವನ್ನು ಶಿರಸ್ತೇದಾರರ ಸಹಾಯದಿಂದ ಬರೆದರು. Indian Scholar Shankaracharya’ Series of lectures in Hindu law ಅಲ್ಲದೆ ತಿರುಕ್ಕುರಳ್ ನ ಕಾನೂನು ಮತ್ತು ಗುಣಗಳಿಗೆ ಸಂಬಂಧಿಸಿದ Arathapal ನ ೧೮ ಅಧ್ಯಾಯಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದರು. ತಮಿಳು, ತೆಲುಗು, ಮಲಯಾಳಂಗಳ ಮೇಲೆ ಸಂಪ್ರಬಂಧಗಳನ್ನು ರಚಿಸಿದರು.

೬೩. ಫ್ಯಾಬ್ರಿಕ್ಯೂಸ್, ಜೋನ್ಹ್ ಫಿಲಿಪ್ (೧೭೧೧೧೭೯೧)

ಫ್ಯಾಬ್ರಿಕ್ಯೂಸ್ ಡ್ಯಾನಿಲಷ್ ಹಲ್ಲಾ ಮಿಶನ್‌ನ ಮಿಶನರಿಯಾಗಿದ್ದರು. ಅತ್ಯುತ್ತಮ ಬೈಬಲ್ ಭಾಷಾಂತರಕಾರರಾದ ಇವರು ಭಾಷಾವಿಜ್ಞಾನಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಜರ್ಮನಿಯ ಫ್ಯಾಂಕ್ ಫ್ಯುಸ್ಟಮ್‌ನಲ್ಲಿ ೧೭೧೧ರಲ್ಲಿ ಜನಿಸಿದರು. ದೈವಿಕ ಮತ್ತು ಕಾನೂನು ಶಿಕ್ಷಣವನ್ನು ಪಡೆದು ಕೊಂಡು ೧೭೪೨ರಲ್ಲಿ ಡಚ್ ಮಿಶನ್ ಪ್ರತಿನಿಧಿಯಾಗಿ ದಕ್ಷಿಣ ಭಾರತಕ್ಕೆ ಬಂದರು, ೧೭೭೪ರಲ್ಲಿ ೩೩೫ ತಮಿಳು ಸಂಹಿತೆಗಳನ್ನು ಜರ್ಮನ್‌ಗೆ ಭಾಷಾಂತರಿಸಿದರು. ೧೭೭೭ರಲ್ಲಿ ಕ್ಷೇತ್ರಕಾರ್ಯ ಅಧ್ಯಯನದಿಂದ ಸಂಗ್ರಹಿಸಿದ ಅತ್ಯುತ್ತಮ ಶಬ್ದಗಳೊಂದಿಗೆ ತಮಿಳು ಇಂಗ್ಗಿಷ್ ನಿಘಂಟುನ್ನು ರಚಿಸಿದರು. ಇದು ಮೊದಲು ಪ್ರಯತ್ನವಾಗಿದ್ದು ನಂತರದ ಹಲವಾರು ನಿಘಂಟುಗಳಿಗೆ ಇಂದೊಂದು ಆಕರಕೋಶವಾಯಿತು, ಪಾಂಡಿಚೇರಿಯಲ್ಲಿನ ಪ್ರಿಂಟಿಂಗ್ ಪ್ರೆಸ್‌ಗೆ ಅಧಿಕಾರಿಯಾಗಿ ನಿಯಮಿಸಲಾಯಿತು. ನಂತರತ ತಮ್ಮದೇ ಹಾದಿಯಲ್ಲಿ ಮುನ್ನಡೆದು ೧೭೭೭೬ರಲ್ಲಿ ತಮಿಳು ಇಂಗ್ಲಿಷ್ ನಿಘಂಟು ಪ್ರಕಟಿಸಿದರು. ನಂತರ ಬೈಬಲಿನ ಎರಡು ಬಡಂಬಡಿಕೆಗಳನ್ನು ತಮಿಳಿಗೆ ಭಾಷಾಂತರಿಸಿದರು. ನಂತರ ೧೭೮೬ರಲ್ಲಿ ಇಂಗ್ಲೀಷ್ ತಮಿಳು ನಿಘಂಟುಗಳನ್ನು ೧೭೮೮ರಲ್ಲಿ ತಮಿಳು ವ್ಯಾಕರಣವನ್ನು ಇಂಗ್ಲೀಷ್ ನಲ್ಲಿ ಬರೆದರು.

ಫ್ಯಾಬ್ರಿಕ್ಯೂಸ್ ತಮಿಳು- ಇಂಗ್ಲೀಷ್ ನಿಘಂಟನ್ನು ೧೭೯೯ರಲ್ಲಿ ರಚಿಸಿದರು. ಒಟ್ಟು ೯೦೦vಪದಗಳಿವೆ. ಸಾಕಷ್ಟು ಪುನರ್‌ಮುದ್ರಣವನ್ನು ಕಂಡಿದೆ. (೧೮೯೭, ೧೯೩೩, ೧೯೭೪) ಇದು ಮುಂದಿನ ಅನೇಕ ನಿಘಂಟುಗಳಿಗೆ ದಾರಿದೀಪವಾಯಿತು.

೬೭. ಬರ್ನೆಲ್‌ .ಸಿ. (೧೮೪೦೧೮೮೨)

Arthur Coke Burnell ಅವರು ಒಬ್ಬ ಬ್ರಿಟಿಷ್ ಅಧಿಕಾರಿ, ಸಂಸ್ಕೃತ ವಿದ್ವಾಂಸರಾಗಿದ್ದರು. Gloucestershire St. Briavels ನಲ್ಲಿ ಜನಿಸಿದರು. ೧೮೬೦ರಲ್ಲಿ ಇಂಡಿಯನ್ ಸಿವಿಲ್ ಸರ್ವಿಸ್ ಗಾಗಿ ಮದ್ರಾಸಕ್ಕೆ ಬಂದರು ಅಲ್ಲಿ ಸಂಸ್ಕೃತ ಹಸ್ತಪ್ರತಿಗಳ ಸಂಗ್ರಹದಲ್ಲಿ ತೊಡಗಿದರು, ೧೮೭೦ರಲ್ಲಿ ೩೫೦ರಲ್ಲಿ ಇಂಡಿಯನ್ ಸಿವಿಲ್ ಸರ್ವಿಸ್‌ ಗಾಗಿ ರಲ್ಲಿ ೩೫೦ ಹಸ್ತಪ್ರತಿಗಳನ್ನು ಸಂಗ್ರಹಿಸಿ ಇಂಡಿಯಾ ಲೈಬ್ರರಿಗೆ ಕೊಟ್ಟರು. ೧೮೭೨ರಿಂದ ೧೮೨೨ರಿಂದ ೧೮೭೪ ರವರೆಗೆ ದಕ್ಷಿಣ ಕನ್ನಡದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದರು. ಈ ಅವಧಿಯಲ್ಲಿ ಬಾಸೆಲ್ ವಿಶನ್ ಮೂಲಕ ಹಲವು ವಿದ್ವತಪೂರ್ಣ ಕೃತಿಗಳನ್ನು ಹೊರತಂದರು. ಅವುಗಳಲ್ಲಿ Elements of South Indian Palacography’ (on some Pahalavi inscriptins in South india) ಇತ್ಯಾದಿ.

ಇದರ ಜೊತೆಗೆ Indian Antiguary ಯಲ್ಲಿ ಅವರು Castes of Bombay Presidency the jaina statue of Karakala, christian Missinon in South India Malabar Christians, ಇತ್ಯಾದಿ ಹಲವು ಪ್ರಬಂಧಗಳನ್ನು ಬರೆದರು. ಸಂಸ್ಕೃತ ಹಸ್ತಪ್ರತಿಗಳ ಮೇಲೆ ಅನುವಾದ, ಟಿಪ್ಪಣಿ ಪ್ರಕಟಿಸಿದರು. ಬರೆದರು, ಸಂಸ್ಕೃತ ಹಸ್ತಪ್ರತಿಗಳ ಮೇಲೆ ಅನುವಾದ, ಟಿಪ್ಪಣಿ ಪ್ರಕಟಿಸಿದರು, ಅವರು ಹಿಂದೂ ಕಾನೂನನ್ನು ವರ್ಗಿಕರಣ ಮಾಡಿ ಅದರ ಅಸ್ಪಷ್ಟತೆಯನ್ನು ಹೋಗಲಾಡಿಸಿದರು. ಸಂಸ್ಕೃತ ಹಾಗೂ ದಕ್ಷಿಣ ಭಾರತ ಭಾಷೆಗಳಲ್ಲದೆ ತಿಬೆಟಿಯನ್, ಅರೇಬಿಕ್, ಕಾವಿ, ಜವನಿಸ್ ಮತ್ತು ಕಾಪಟಿಕ್ ಭಾಷೆಗಳಲ್ಲಿ ಪ್ರವೀಣರಾಗಿದ್ದರು. ದಕ್ಷಿಣ ಕನ್ನಡದ ಭೂತಾರಾಧನೆಗೆ ಸಂಬಂಧಿಸಿದ ಮಾಹಿತಿಯನ್ನು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿ The devil worship of the Tuluvas’ ಪ್ರಕಟಿಸಿದ್ದಾರೆ.

ಈ ಕೃತಿಯು ಸಂಶೋಧನ ಪ್ರಬಂಧಗಳ ಮಾಲಿಕೆಯಾಗಿದ್ದು, ಪಾಡ್ಡನಗಳ ಸಂಕಲನವಾಗಿದೆ. ಇದರಲ್ಲಿ ೨೬ ಭೂತಗಳ ಪಾಡ್ಡನಗಳನ್ನು ಇಂಗ್ಲಿಷ್‌ನಲ್ಲಿ ಕೊಡಲಾಗಿದೆ. ಕೆಲವು ಪಾಡ್ಡನಗಳನ್ನು ರೋಮನ್ ಲಿಪಿಯಲ್ಲಿ ಲಿಪ್ಯಂತರ ಮಾಡಿ ಇಂಗ್ಲಿಷ್ ಅನುವಾದ ಕೊಡಲಾಗಿದೆ. ಆರ್‌.ಸಿ. ಟೆಂಪೆಲ್ ಅವರು ಇದನ್ನು ಸಂಪಾದಿಸಿ ಕೊಟ್ಟಿದ್ದಾರೆ. ತುಳುನಾಡಿನ ಭೂತಾರಾಧನೆಯನ್ನು ಇಲ್ಲಿ ವಿವಿಧ ಪ್ರಬಂಧಗಳಲ್ಲಿ ಚರ್ಚಿಸಲಾಗಿದೆ ಭೂತಾರಾಧನೆ ಕೆಳವರ್ಗದವರ ಆರಾಧನೆಯಾಗಿದ್ದು ಅದು ದ್ರಾವಿಡಿಯನ್ ಪರಂಪರೆಗೆ ಸೇರುತ್ತದೆ ಎನ್ನುವ ಅಂಶವನ್ನು ಚರ್ಚಿಸಲಾಗಿದೆ. ಬರ್ನೆಲ್ ಆಚರಣೆಗಳನ್ನು ಕ್ಷೇತ್ರ ಕಾರ್ಯದ ಮೂಲಕ ನೋಡಿದವರು. ತುಳುನಾಡಿನ ಪೂಜಾರಿ ಮಾಡುವ ಭೂತಾರಾಧನೆಯ ಮಂತ್ರಘೋಷಗಳ ಒಂದು ಸಂಕಲನ ಇಲ್ಲಿದೆ. ಮೊದಲಿನ ಇದು ಮೊಗ್ಲಿಂಗ್ ಸಂಗ್ರಹಿಸಿದ್ದು ನಂತರದ ೫ ಬರ್ನೆಲ್ ವಿನಂತಿಯ ಮೇರೆಗೆ ಮಂಗಳೂರಿನ ತಹಶಿಲ್ದಾರರು ಒಬ್ಬ ತಂತ್ರಿ (ತುಳು ಬ್ರಾಹ್ಮಣ) ಬರೆದುಕೊಟ್ಟಿದ್ದು. ಕೆಲವು ಬರ್ನೆಲ್ ಸಹಾಯಕರು ಬೇರೆ ಬೇರೆ ಕ್ಷೇತ್ರಗಳಿಂದ ಬರೆದು ಕೊಟ್ಟಿದ್ದು. ಕೆಲವು ಕಾಂತಾ ಎನ್ನುವ ಪೂಜಾರಿ ಹೇಳಿದ್ದು ಅವರ ನೃತ್ಯ ಪೂಜೆ ಭೂತರಾಧನೆ ಇವೆಲ್ಲವುಗಳ ಸಮಗ್ರ ವಿವರವಿದೆ. ಅಲ್ಲದೇ ತುಳುನಾಡಿನ ಭೂತಾರಾಧನೆಯಲ್ಲಿ ಶ್ರೇಣೀಕೃಕ್ರತ ಸಮಾಜದ ಪದ್ಧತಿಯಂತೆ ವಿವಿಧ ಆಚಾರಗಳನ್ನು ವಿವಿಧ ಪಂಗಡದವರ ದೈವಗಳನ್ನು ಇಲ್ಲಿ ವಿವರಿಸಲಾಗಿದೆ.

ಬರ್ನೆಲ್ ತಮ್ಮ ಕೃತಿ Elements of South Indian Paleography ಯಲ್ಲಿ ದಕ್ಷಿಣ ಭಾರತದ ಇತಿಹಾಸವನ್ನು ಅರಿಯುವಲ್ಲಿ ಶಾಸನಗಳು ಒದಗಿಸುವ ಮಾಹಿತಿ ಮತ್ತು ಅವುಗಳ ಮಹತ್ವದ ಬಗೆಗೆ ತಿಳಿಸುತ್ತಾರೆ. ಈಗಾಗಲೇ ನಡೆದ ಶಾಸನಾಧ್ಯಯನದ ಗೊತ್ತು ಗುರಿಗಳನ್ನು ವಿಮರ್ಶಿಸುತ್ತಲೇ ಅದರ ವಸ್ತುಸ್ಥಿತಿಯನ್ನು ವಿಮರ್ಶಿಸುತ್ತಾರೆ. ಶಾಸನಗಳಲ್ಲಿ ಅಕ್ಷರಗಳ ಗೊಂದಲಗಳನ್ನು ಬಗೆಹರಿಸಲು ಸಂಸ್ಕೃತ, ಮತ್ತು ದ್ರಾವಿಡನ್ ಭಾಷೆಗಳ ಜ್ಞಾನ ಅವಶ್ಯಕ ಎಂಬುದನ್ನು, ಶಾಸನ ಪಠ್ಯದ ಭಾಷೆ ಸಂಸ್ಕೃತ, ಸ್ಥಳನಾಮಗಳು ಕೂಡ ಸಂಸ್ಕೃತದಲ್ಲೇ ಇವೆ. ಮೂಲ ಸ್ಥಳೀಯ ಅಥವಾ ದ್ರಾವಿಡಿಯನ್ ರೂಪವನ್ನು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ. ಕನ್ನಡದಲ್ಲಿ ಮತ್ತು ತಮಿಳಿನಲ್ಲಿ ದಾಖಲೆಗಳು ಇವೆಯಾದರೂ ಬರವಣೆಗೆ ಶೈಲಿಯಲ್ಲಿ ವ್ಯತ್ಯಾಸಗಳಿವೆ. ಈ ಭಾಷೆಗಳ ಶಬ್ದ ಸಂಗ್ರಹ ಅಧ್ಯಯನ ನಡೆದಿದೆ, ಆದರೆ ಸಮರ್ಪಕತೆ ಸಾಧ್ಯವಾಗಿಲ್ಲ. ಈ ದಾಖಲೆಗಳಲ್ಲಿ ದ್ರಾವಿಡಿಯನ್ ಭಾಷೆಗಳ ಪ್ರಾಚೀನ ನಮೂನೆಗಳು, ದಕ್ಷಿಣ ಭಾರತದ ಭಾಷಾ ಪ್ರಭೇದಗಳ ತೌಲನಿಕ ಅಧ್ಯಯನಕ್ಕೆ ಅತ್ಯಂತ ಮಹತ್ವಪೂರ್ಣವಾಗಿದೆ ಎಂಬುದನ್ನು ವಿವರಿಸುತ್ತಾರೆ.

ಸ್ಥಳೀಯ ಪದಗಳಲ್ಲಿನ ಕಾಗುಣಿತದ ಅಶಿಸ್ತು (Local irregularities of spelling) ಕೂಡ ಭಾಷಾ ಪ್ರಭೇದದ ಸಾಹಿತ್ಯಿಕ ಇತಿಹಾಸದ ಮೇಲೆ ಬೆಳಕು ಚೆಲ್ಲೆಲ್ಲು ಸಹಾಯ ಮಾಡುತ್ತವೆ. ಕನ್ನಡ ಮತ್ತು ತೆಲುಗು ಸಂದರ್ಭಗಳಲ್ಲಿ ಹೆಚ್ಚು ಅನ್ವಯಿಸುತ್ತದೆ. ನಿಜವಾದ ಭಾಷಾ ನಮೂನೆಗಳು ಪ್ರಾಚೀನ ದಾಖಲೆಗಳಿಂದ ಲಭ್ಯವಾಗುತ್ತವೆ, ಭಾಷೆಯ ಇತಿಹಾಸಕ್ಕೆ ಇವು ಮಹತ್ವದ ಆಕರಗಳಾಗಿದೆ ಎಂಬುದನ್ನು ಪ್ರತಿಪಾದಿಸಿದ್ದಾರೆ.

೬೫. ಬಿ.ಎಲ್. ರೈಸ್

ಬಿ.ಎಲ್. ರೈಸ್ ಒಬ್ಬ ಮಿಶನರಿಯಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ೧೮೪೩ರಲ್ಲಿ ಬೆಂಗಳೂರಿಗೆ ಬಂದ ಇವರು ಕನ್ನಡ, ತೆಲುಗು, ತಮಿಳು ಮತ್ತು ಸಂಸ್ಕೃತ ಅಧ್ಯಯನ ಮಾಡಿದರು. ೧೮೬೨ರಲ್ಲಿ ಅರುಣೋದಯ ಪತ್ರಿಕೆ ನಡೆಸುತ್ತಿದ್ದರು. ಶಾಲಾ ಪಠ್ಯಪುಸ್ತಕಗಳನ್ನು ಬರೆದು. ಮೈಸೂರಿನಲ್ಲಿ ಪುರಾತತ್ವ ವಿಭಾಗದಲ್ಲಿ ನಿರ್ದೇಶಕರಾಗಿ ಮೈಸೂರು-ಕುರ್ಗ್ ಗೆಝೆಟಿಯರ್‌ ಪ್ರಕಟಿಸಿದರು. ಮೈಸೂರು ಮತ್ತು ಕೂರ್ಗ ಪ್ರಾಂತ್ಯದ ಹಲವು ಶಾಸನಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಪಂಪಭಾರತವನ್ನು ವಿಮರ್ಶಾತ್ಮಕವಾಗಿ ಸಂಪಾದಿಸಿದ ಪ್ರಥಮರು.

ಶಾಸನಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ ತೊಡಗಿದ ಬಿ.ಎಲ್. ರೈಸ್ ರವರು ೧೯೦೯ರಲ್ಲಿ Mysore and Coorg from the inscriptions ಕೃತಿ ರಚಿಸಿದರು, ಕೃತಿಯಲ್ಲಿ ಶಾಸನಗಳ ವಿಷಯವಾಗಿ ಸಾಕಷ್ಟು ವಿವರಗಳನ್ನು ನೀಡಿದ್ದಾರೆ. ಶಾಸನಗಳು ಕಲ್ಲು ಅಥವಾ ಧಾತುವಿನ ಮೇಲೆ ಕೆತ್ತಿದವುಗಳಾಗಿರುತ್ತವೆ. ಈ ಶಾಸನಗಳ ಪ್ರಾಥಮಿಕ ಉದ್ಧೇಶವೆಂದರೆ ಮಂದಿರ ಕಟ್ಟಿದ ವಿವರ, ಸಾರ್ವಜನಿಕ ಕಟ್ಟಡದ ವಿವರ, ದೇವರಿಗೆ / ಬ್ರಾಹ್ಮಣರಿಗೆ ಕೊಟ್ಟ ದಾನ / ದತ್ತಿ, ವೀರತನ / ಕಲಿತನದ ಗೌರವದ ಸೂಚಕವಾಗಿ (ವೀರಗಲ್ಲು) ಅಥವಾ ತ್ಯಾಗ / ಬಲಿದಾನದ (ಮಾಸ್ತಿಕಲ್ಲು) ಇತ್ಯಾದಿ. ಜೊತೆಗೆ ಆಳುವವರ ವಿವರಗಳು ಅವರ ಪೂರ್ವದ ಸಾಹಸಗಳು ಮತ್ತು ಉಳಿದ ವಿವರಗಳನ್ನು ಕೊಡುವ ಉದ್ದೇಶವಿದೆ.

ಶಾಸನ ಸಂಗ್ರಹ ದಿಸೆಯಲ್ಲಿ ಮೊದಲು (೧೬೭೭-೧೭೦೪) ರವರೆಗೆ ಆಳಿದ ಚಿಕ್ಕದೇವರಾಜ ಅರಸರು ಪ್ರಯತ್ನಿಸಿ ಸೂಚಿ ರೂಪದಲ್ಲಿ ಕೊಡಲು ಪ್ರಯತ್ನಿಸಿದರು, ಆದರೆ ೧೮ನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ಆಸಕ್ತಿ ತೋರಿಸಲಿಲ್ಲ. ನಂತರ ೧೭೯೯ರಲ್ಲಿ ಕರ್ನಲ್ ಮೆಕೆಂಝಿ ಹಾಗೂ ೧೮೬೫ರಲ್ಲಿ ಎಲ್. ಬೌರಿಂಗ್ ಫೋಟೋಗ್ರಾಫಿಯಲ್ಲಿ ಚಿತ್ರದುರ್ಗ ಹರಿಹರ, ಬೆಳಗಾವಿ ಪ್ರದೇಶಗಳಲ್ಲಿನ ೧೫೦ಕ್ಕೂ ಹೆಚ್ಚಿನ ಶಾಸನಗಳನ್ನು ಪ್ರಕಟಿಸಿದರು ಎಂಬ ಅಂಶಗಳನ್ನು ಕೃತಿ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

ಈ ಶಾಸನಗಳ ಮೂಲಕ ಇತಿಹಾಸವನ್ನು ಕ್ರಿ.ಪೂ. ೩ನೇ ಶತಮಾನಕ್ಕೆ ಕರೆದೊಯ್ಯಬಹುದು. ಉತ್ತರದ ಜೈನರು ಭದ್ರಬಾಹುವಿನ ನಾಯಕತ್ವದಲ್ಲಿ ಮತ್ತು ಚಂದ್ರಗುಪ್ತ ಮೌರ್ಯನ ಜೊತೆಗೆ ಆಗಮನ ಮತ್ತು ಶ್ರವಣಬೆಳಗೊಳದಲ್ಲಿ ಅವರ ಅಂತ್ಯ ಇವೆಲ್ಲ ಪೂರ್ಣ ಪ್ರಮಾಣದಲ್ಲಿ ಸ್ಥಾಪಿತವಾಗಿರದೇ ಇದ್ದರೂ ನಂತರ ಈ ವಿಷಯದಲ್ಲಿ ಭಿನ್ನವಾದದ್ದೇನೂ ಕಂಡುಬರಲಿಲ್ಲ. ಮೊಳಕಾಲ್ಮೂರು ತಾಲೂಕಿನ ಸಿದ್ಧಾಪುರ ಸಿದ್ಧ ಎಂಬಲ್ಲಿನ ಶಾಸನ ಪ್ರಕಾರ ಇಸಿಲ ಎಂಬಲ್ಲಿ ಮೌರ್ಯ ಸಾಮ್ರಾಜ್ಯದ ಸ್ಥಳೀಯ ಪ್ರಭೇದ ಇತ್ತು ಅಲ್ಲದೇ ಶಾಸನಗಳಿಂದ ಆಂಧ್ರ ಅಥವಾ ಶಾತವಾನರು ಮೌರ್ಯನಂತರದವರು, ಮಹಾವಳಿ ಮತ್ತು ಬಾಣರಾಜರಾ, ಕದಂಬರ ಉದಯ, ಗಂಗರ ಮೈಸೂರು ಮತ್ತು ಕೂರ್ಗ್‌ನಲ್ಲಿ ಹಲವು ಶತಮಾನ ಆಡಳಿತ ನಡೆಸಿರುವುದು ಸ್ಪಷ್ಟವಾಗಿದೆ ಎಂಬುದನ್ನು ರೈಸ್ ಪ್ರತಿಪಾದಿಸಿದ್ದಾರೆ.o

೬೬. ಬುಕಾನೆನ್ (೧೭೬೨)

ಫ್ರಾನ್ಸಿಸ್ ಬುಕಾನೆನ್ ಬ್ರಾನ್‌ಯಿಲ್ (Branziel)ನ ಸ್ಟಿರ್‍ಲಿಂಗ್ ಶೈರ್‍ (Stirling) ನಲ್ಲಿ ೧೫ನೇ ಅಕ್ಟೋಬರ್‍ ೧೭೬೨ನಲ್ಲಿ ಜನಿಸಿದರು. ತಂದೆಯಂತೆ ವೈದ್ಯಕೀಯ ವೃತ್ತಿ ಸ್ವೀಕರಿಸಿದರು. ತಮ್ಮ ಡಿಪ್ಲೋಮಾ ಶಿಕ್ಷಣದ ನಂತರ ೧೯೮೩ರಲ್ಲಿ ಪದವಿ ಪಡೆದರು. ೧೭೯೪ರಲ್ಲಿ ಈಸ್ಟ್ ಇಂಡಿಯಾ ಕಂಪನೆಯಲ್ಲಿ ಸರ್ಜನ್ ಆಗಿ ನೇಮಿಸಲ್ಪಟ್ಟರು, ಬೆಂಗಾಲಗೆ ಬಂದರು. ೧೮೦೦ರಲ್ಲಿ ಮಾರ್ಕ್ಷಿಸ್ ವೆಸ್ಲಿ ಮೈಸೂರು ಹಾಗೂ ಮಲಬಾರ್‍ಗಳಲ್ಲಿನ ಸಮಗ್ರ ಜನಜೀವನ ಸಂಸ್ಕೃತಿಯ ವಿವರ ನೀಡಲು ಆದೇಶಿಸುತ್ತಾನೆ. ಬುಕಾನನ ೨೩ನೇ ಏಪ್ರಿಲ್ ೧೮೦೦ ಪ್ರಾರಂಭಿಸಿದ ಪ್ರಯಾಣವನ್ನು ೬ನೇ ಜುಲೈ ೧೮೦೧ ರಲ್ಲಿ ಮುಗಿಸಿ ವರದಿ ನೀಡುತ್ತಾರೆ. ಈ ವರದಿ ರೂಪವೇ A journey from Madras Through the countries of Mysore Canara and Malabar ತಮ್ಮ ಪ್ರಯಾಣದ ನಿತ್ಯ ವರದಿಯನ್ನು ಇಲ್ಲಿ ಒದಗಿಸುತ್ತಾರೆ. ನಂತರ ೧೮೦೭ರಲ್ಲಿ ೩ ಸಂಪುಟಗಳಾಗಿ ಈ ವರದಿಯನ್ನು ಈಸ್ಟ್ ಕಂಪನಿ ಪ್ರಕಟಿಸಿತು. ಈ ಕೃತಿ ಪ್ರವಾಸ ಕೈಗೊಂಡ ಪ್ರದೇಶಗಳೆಲ್ಲದರ ಕೃಷಿ, ಕಲೆ, ವಾಣಿಜ್ಯ, ಧರ್ಮ, ನಡೆ ನುಡಿ, ಸಂಪ್ರದಾಯ, ಚರಿತ್ರೆ, ಪ್ರಾಕೃತಿಕ ಮತ್ತು ನಾಗರಿಕ ಅನನ್ಯತೆಗಳು, ಮೈಸೂರು ರಾಜರ ವಂಶಾವಳಿ. ಈಸ್ಟ್ ಇಂಡಿಯಾ ಕಂಪನಿಯ ವಸಾಹತುಗಳು ಇವೆಲ್ಲವುಗಳ ಸಮಗ್ರ ವಿವರವಿದೆ.

೧೭೯೯ರಲ್ಲಿ ಮೈಸೂರು ಯುದ್ಧ ಕೊನೆಗೊಂಡ ನಂತರ ಈಸ್ಟ್ ಇಂಡಿಯಾ ಕಂಪನಿ ತನ್ನ ವಸಾಹತುಗಳ ಸಮಗ್ರ ಭೌಗೋಳಿಕ ವಿವರ, ಸಾಮಾನ್ಯ ಅಂಕಿ ಆಂಶಗಳು ಇವುಗಳನ್ನು ವರದಿ ಮಾಡಲು ಕೆಲವರನ್ನು ನಿಯೋಜಿಸಿತ್ತು. ಫ್ರಾನ್ಸಿಸ್ ಬುಕಾನೆನ್ ಕೂಡ ೧೮೦೦ರಲ್ಲಿ ಈ ಕರಣವಾಗಿ ನಿಯೋಜಿಸಲ್ಟಟ್ಟಿರು. ೧೮೦೦ರಲ್ಲಿ ಬುಕಾನೆನರನ್ನು ದಕ್ಷಿಣ ಭಾರತದ ಪ್ರಾಂತಗಳಾದ ಮೈಸೂರು, ಮಲಬಾರ್‌ಮತ್ತು ಕೆನರಾಗಳಲ್ಲಿನ ಆಸಕ್ತಿದಾಯಕ ಇತಿಹಾಸ, ಧಾರ್ಮಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಕುರಿತು ವರದಿ ನೀಡಲು ನಿಯೋಜಿಸಲಾಗುತ್ತದೆ. ಬುಕಾನನರ ಈ ವರದಿಯಲ್ಲಿ ತುಳುನಾಡಿನ ಗುಲಾಮಗಿರಿ ಪದ್ಧತಿಯ ವಿವರ ಕೂಡ ಹೆಚ್ಚು ಮಹತ್ವದ್ದೆನಿಸುತ್ತದೆ. ತುಳುನಾಡಿನಲ್ಲಿ ದಾಸ್ಯಕ್ಕೆ ಒಳಗಾದ ವರ್ಗವೇ ಇತ್ತು. ಗುಲಾಮರು ಯಜಮಾನರ ಖಾಸಗಿ ಆಸ್ತಿಯಾಗಿರುತ್ತಿದ್ದರು. ಯಜಮಾನರು ಇವರನ್ನು ಇನ್ನೊಬ್ಬರಲ್ಲಿ ಒತ್ತೆ ಇಡಬಹುದಾಗಿತ್ತು. ಇವರ ಸ್ಥಿತಿ ವೆಸ್ಟ್ ಇಂಡೀಸ್ ಗುಲಾಮರಿಗಿಂತ ಕಡೆ ಹಾಗೂ ಕೆನರಾದ ಗುಲಾಮರನ್ನು ಕ್ರೂರವಾಗಿ ಹಿಂಸಿಸಲಾಗುತ್ತಿತ್ತು. ಅವರಿಗೆ ಬಳ್ಳೆಯ ಆಹಾರ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂಬದನ್ನು ಬುಕಾನೆನ್ ವರದಿ ಮಾಡುತ್ತಾರೆ. ಪ್ರತಿ ಕೃಷಿಕಾರ್ಮಿಕರನ್ನು ವಿಚಾರಿಸಿ ತಿಳಿದುಕೊಳ್ಳುತ್ತಿದ್ದ ಬುಕಾನೆನ್ ಅವರ ಕ್ಷೇತ್ರಾಧ್ಯಯನದ ವರದಿ ಹಾಗೂ ಕ್ರಮ ಗಮನೀಯ ಸಂಗತಿಯೆನಿಸಿದೆ. ಸಂಸ್ಕೃತಿ ನೆಲೆಯಿಂದ ಇದು ಅತ್ಯಂತ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಸಮಾಜ ವಿಜ್ಞಾನ ಪಂಡಿತರು ಸರ್ವೇಕ್ಷಣ ಮಾದರಿಯ ಈ ಗ್ರಂಥ ವೈಜ್ಞಾನಿಕ ದೃಷ್ಟಿಕೋನ ಪ್ರತಿಪಾದಿಸುತ್ತದೆ ಎಂದಿದ್ದಾರೆ.

೬೭. ಭಾಸ್ಕರ್‌ ಪಣಿಕ್ಕರ್‌ ಪಿ.ಟಿ. (೧೯೨೨೧೯೯೭)

ಭಾಸ್ಕರ್‌ ಪಣಿಕ್ಕರ್‌ ಅವರು ಕೇರಳ ಪ್ರಾಂತ್ಯದ ಸಾಮಾಜಿಕ ಕಾರ್ಯಕರ್ತರಾಗಿ ಪ್ರಖ್ಯಾತ ಬರಹಗಾರರಾಗಿದ್ದರು. ಕಮ್ಯಾನಿಸ್ಟ್ ಚಿಂತಕರಾಗಿ, ಜನಪ್ರಿಯ ವಿಜ್ಞಾನ ಬರಹಗಾರರಾಗಿದ್ದರು. ಹಲವು ವಿಶ್ವಕೋಶ ಮಾಲಿಕೆಯ ಸಂಪಾದಕತ್ವ ವಹಿಸಿಕೊಂಡಿದ್ದರು. ಅವರು ವಿಜ್ಞಾನ ಜನಪ್ರಿಯಗೊಳಿಸುವ ಚಳುವಳಿ ನೇತಾರರಾಗಿದ್ದರು.

ಭಾಸ್ಕರ್‌ ಪಣಿಕ್ಕರ್‌ ಅವರು ೧೫ ಅಕ್ಟೋಬರ್‍ ೧೯೨೨ರಲ್ಲಿ ಪಲಿಕ್ಕಡ ಜಿಲ್ಲೆಯ ಅಡಕ್ಕ ಪುತ್ತೂರನಲ್ಲಿ ಜನಿಸಿದರು. B.Sc ಮತ್ತು BT ವಿದ್ಯಾರ್ಹತೆ ಸಂಪಾದಿಸಿದ ಬಳಿಕ ಶಾಲಾಶಿಕ್ಷಕರಾಗಿ ಕೆಲಸ ನಿರ್ವಹಿಸಿದರು. ಕಮ್ಯಾನಿಸ್ಟ್ ಪಾರ್ಟಿ ಸೇರಿದರು. ಭೂಗತರಾಗಿ ಜೈಲುವಾಸ ಅನುಭವಿಸಿ ಮತ್ತೆ ಶಿಕ್ಷಕರಾಗಿ ಕೆಲಸ ಮಾಡಿದರು. ಅನಂತರ ಕೇರಳ ಶಿಕ್ಷಣ ಸಚಿವಾಲಯದ ಸೆಕ್ರೆಟರಿ ಆಗಿ ಸೇವೆ ಸಲ್ಲಿಸಿದರು, ೧೯೬೯-೭೧ ರವರೆಗೆ ವಿಶ್ವವಿಜ್ಞಾನ ಕೋಶಮ್ ೧೦ ಸಂಪುಟ ಸಂಪಾದಕರಾದರು. ಅಲ್ಲದೆ ದ್ರಾವಿಡ ವಿಜ್ಞಾನ ಕೋಶಮ್ ಮಕ್ಕಳಿಗಾಗಿ ಜೀವನ ಚರಿತ್ರ ಕೋಶಮ್ ಸಂಪಾದಕರಾಗಿ ಕಾರ್ಯನಿರ್ವಹಿಸಿದರು.

೬೮. ಮಹದೇವಶಾಸ್ತ್ರಿ ಕೆ. (೧೯೨೧)

ಕೋರಾಡ ಮಹದೇವಶಾಸ್ತ್ರೀಯವರು ತೆಲುಗಿನ ಆಚಾರ್ಯ ಪುರುಷರಲ್ಲಿ ಒಬ್ಬರು. ತೆಲಗು ಭಾಷೆ ಮತ್ತು ಸಾಹಿತ್ಯವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ ಇವರು ತೆಲುಗು ಭಾಷೆ ಮತ್ತು ಸಾಹಿತ್ಯವನ್ನು ಸಂಶೋಧನಾತ್ಮಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ಮಹದೇವ ಶಾಸ್ತ್ರಿಯವರು ಕಲ್ಕತ್ತಾ ವಿಶ್ವವಿದ್ಯಾಲಯದಿಂದ ತೆಲುಗು ವಾಜ್ಞಯದಲ್ಲಿಯೇ ಡಿ.ಲಿಟ್ ಪಡೆದುಕೊಂಡರು. ತಿರುಪತಿಯಲ್ಲಿ ತೆಲುಗು ಪ್ರೋಫಸರ್‌ಆಗಿ ಕಾರ್ಯ ಪ್ರಾರಂಭಿಸಿದರು. Historical Grammar of Telugu ಇವರ ಅತ್ಯಂತ ಮಹತ್ವದ ಕೃತಿಯೆನಿಸಿದೆ. ತೆಲುಗಿನಲ್ಲಿ ಸಂಸ್ಕೃತದಲ್ಲಿಯೂ ಸಾಕಷ್ಟು ಪರಿಣಿತಿ ಪಡೆದಿದ್ದರು. A Brief history of Telugu Literature ಮತ್ತು Andra Vanmaya Parichyam ಎಂಬ ವಿಮರ್ಶಾತ್ಮಕ ಬರಹಗಳನ್ನು ಬರೆದಿದ್ದಾರೆ, Colgne University ಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುವ ಸಮಯದಲ್ಲಿ ಜರ್ನಟ್ ಅವರೊಂದಿಗೆ ತೆಲುಗು ಕ್ರಿಯಾಪದ ವಿಷಯದ ಮೇಲೆ ಪ್ರಬಂಧ ರಚಿಸಿ ಅದು ತೆಲುಗು ಕಲಿಯುವವರಿಗೆ ಉಪಯುಕ್ತ ಆಕರವಾಗಿರುವಂತೆ ಮಾಡಿದ್ದಾರೆ. Dravidian Linguistical Association ಸೆಕ್ರೆಟರಿಯಾಗಿ ಕೆಲಸ ನಿರ್ವಹಿಸಿದ್ದಾರೆ.

೬೯. ಮರಿಯಪ್ಪ ಭಟ್ ಎಮ್. (೧೯೦೬೧೯೮೦)

ಮರಿಯಪ್ಪ ಭಟ್ ಅವರು ಪ್ರಸಿದ್ಧ ಭಾಷಾತಜ್ಞರು. ಭಾಷಾವಿಜ್ಞಾನದಲ್ಲಿ ಲಂಡನ್ ಸ್ಕೂಲ್ ಆಫ್ ಓರಿಯಂಟಲ್ ಮತ್ತು ಆಫ್ರೀಕನ್ ಸ್ಟಡೀಸ್‌‌ನಲ್ಲಿ ವಿಶೇಷ ಪರಿಣಿತ ಪಡೆದಿದ್ದರು. ವಿಮರ್ಶಾತ್ಮಕ ನಿಲುವಿನಿಂದ ಕನ್ನಡದ ಹಲವು ಕೃತಿಗಳನ್ನು ಸಂಪಾದಿಸಿದರು. ಖಗೇಂದ್ರ ಮಣಿದರ್ಪಣ, ಪಾರ್ಶ್ವನಾಥ ಪುರಾಣ ಘಟಕತಿಲಕಾ ಮತ್ತು ಅಭಿನವ ಮಂಗರಾಜನ ನಿಘಂಟು ಮೊದಲಾದವು. ಕೃತಿಗಳ ವಿಶೇಷತೆಗಳೊಡನೆ ಕವಿಗಳ ಬಗ್ಗೆಯೂ ವಿಶ್ಲೇಷಿಸಿದ್ದಾರೆ. ಕನ್ನಡ ಸಾಹಿತ್ಯ ಚರಿತ್ರೆ ನಿರ್ಮಾಣದಲ್ಲಿ ಇವು ಆಕರಗಳಾಗಬಲ್ಲವು ಮದ್ರಾಸ ವಿ.ವಿ ದಿಂದ ಪ್ರಕಟಗೊಂಡ ಕಿಟೆಲ್ ರ ಕನ್ನಡ ಇಂಗ್ಲೀಷ್ ನಿಘಂಟನ್ನುಪರಿಷ್ಕರಿಸಿ ಸಂಪಾದಿಸಿ ಕೊಟ್ಟಿದ್ದಾರೆ.

ಪ್ರಸಿದ್ಧ ನಿಘಂಟುಕಾರ, ಭಾಷಾವಿಜ್ಞಾನಿ, ವಿದ್ವಾಂಸರಾದ ಇವರ ಮೂರು ದಶಕಗಳ ಕಾಲ ಮದ್ರಾಸ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಗಾಗಿ ದುಡಿದವರು ೧೯೨೮ ತಮ್ಮ ಪದವಿ ಪಡೆದರು ಮದ್ರಾಸ ವಿ.ವಿ. ದಿಂದ ಎಂ. ಎ. ಪದವಿ ಪಡೆದರು. ೧೯೫೫ರಲ್ಲಿ United Kingdom ಗೆ ಹೋದ ಅವರು London School of Oriental & African studies ನಿಂದ ವಿಶೇಷ ಪರಿಣಿತ ಪಡೆದರು, ನಂತರ ಮದ್ರಾಸ್ ವಿ.ವಿ. ಯಲ್ಲಿ ಕನ್ನಡ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸಿದರು.

ಕನ್ನಡ ಮತ್ತು ತೌಲನಿಕ ದ್ರಾವಿಡ ಕುರಿತು ಅಧ್ಯಯನ ನಡೆಸಿದರು. ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಕುರಿತು ೪೦ ಸಂಶೋಧನಾತ್ಮಕ ಲೇಖನಗಳನ್ನು ಕನ್ನಡ ಸಂಸ್ಕೃತಿ ಎಂಬುದಾಗಿ ಪ್ರಕಟಿಸಿದ್ದಾರೆ. ರೆ. ಕಿಟೆಲ್ ರವರ ಕನ್ನಡ ಕನ್ನಡ -ಇಂಗ್ಲೀಷ್ ನಿಘಂಟನ್ನು ಅಮೂಲಾಗ್ರವಾಗಿ ಸಂಶೋಧಸಿ ಪರಿಷ್ಕರಿಸಿ ೧೯೬೮ರಲ್ಲಿ ಸಿದ್ಧಪಡಿಸಿದರು. ಹವ್ಯಕ ಪದಕೋಶ ರಚಿಸಿದ್ದಾರೆ. ಹವ್ಯಕ -ಇಂಗ್ಲಿಷ್ ನಿಘಂಟು ಪ್ರಧಾನ ಸಂಪಾದಕರಾಗಿದ್ದರು ಮೈಸೂರು ವಿ.ವಿ.ಯ ಇಂಗ್ಲಿಷ್‌-ಕನ್ನಡ ನಿಘಂಟು ಸಂಪಾದಕರಾಗಿ ೧೯೪೨ರಲ್ಲಿ ಗುಣವರ್ಧನ ಚಂದ್ರಹಾಸ, ೧೯೫೧ರಲ್ಲಿ ಮಂಗರಾಜ ನಿಘಂಟು, ೧೯೫೬ರಲ್ಲಿ ರಾಜಾಧಿತ್ಯನ ವ್ಯವಹಾರ ಗಣಿತ ಆಯ್ದ ಕನ್ನಡ ಶಾಸನಗಳು, ತೌಲನಿಕ ದ್ರಾವಿಡ ಶಬ್ದಕೋಶವನ್ನು ಇತರರೊಂದಿಗೆ ಸಂಪಾದಿಸಿದರು. ಎಂ. ಗೋವಿಂದರಾವ್ ಅವರೊಂದಿಗೆ ೧೯೫೨ ಅಚಣ್ಣ ವರ್ಧಮಾನ ಪುರಾಣ, ೧೯೫೪ ಪಾರ್ಶ್ವಪಂಡಿತ ಪಾರ್ಶ್ವನಾತ ಪುರಾಣ ಶ್ರೀಧರಾಚಾರ್ಯರ ಜಾತಕತಿಲಕಮ್ ೧೯೫೫, ಚಿಕ್ಕೂಪಾಧ್ಯಾಯರ ವಿಷ್ಟು ಪುರಾಣಮ್ ೧೯೫೨, ಶಂಕರ ಕೆದಿಲಾಯ್ ರೊಂದಿಗೆ Manner ನಿಘಂಟು ತುಳು ಇಂಗ್ಲಿಷ್ ಪರಿಷ್ಕಾರ ೧೯೫೭ರಲ್ಲಿ ೧೯೫೧ರಲ್ಲಿ ಹಳಗನ್ನಡ ಕಾವ್ಯ ಸಂಗ್ರಹ ೧೯೫೭ರಲ್ಲಿ ಹೊಸಗನ್ನಡ ಕಾವ್ಯಶ್ರೀ ೧೯೭೧ ಸರ್ವಜ್ಞನ ವಚನ ಸಂಗ್ರಹ ಸಿದ್ಧಪಡಿಸಿದರು.

ಎಂ. ಮರಿಯಪ್ಪ ಭಟ್ರ ಕೆಲವು ಲೇಖನಗಳ ಸಂಗ್ರಹ Dravidic Studiesನ ಬಗ್ಗೆ ಡಾ.ಕೆ.ವಿ. ತಿರುಮಲೇಶ್ ಅಭಿಪ್ರಾಯ ಹೀಗಿದೆ. ಇದರಲ್ಲಿ ಮಧ್ಯಯುಗದ ಕನ್ನಡ ಗಣಿತಕ್ಕೆ ಸಂಬಂಧಿಸಿದ ಎರಡು ಲೇಖನಗಳಿವೆ. ಬ್ರಿಟಿಷ್ ಭಾಷಾವಿಜ್ಞಾನ ಜೆ.ಆರ್‍. ಫರ್ತ್ ಛಂದಸ್ಸಿದ್ದಾಂತವನ್ನು ದ್ರಾವಿಡ ಭಾಷಾಧ್ಯಯನಕ್ಕೆ ಹೇಗೆ ಅನ್ವಯಿಸಬಹುದು ಎನ್ನುವುದನ್ನು ತಿಳಿಸಿದ್ದಾರೆ. ಕನ್ನಡ, ತಮಿಳು, ಮಲಯಾಳ, ತೆಲಗು ಮತ್ತು ತುಳು ಭಾಷೆಗಳಲ್ಲಿ ಬಹುವಚನ ಹೇಗೆ ಬಂತು ಎಂಬ ಚಿಂತನೆ ನಡೆಸುತ್ತಾರೆ. ಅಲ್ಲದೆ ಇನ್ನೊಂದು ಲೇಖನದಲ್ಲಿ ವಿಭಕ್ತಿ ಪ್ರತ್ಯಯ ಸಮಸ್ಯೆಯನ್ನು ದಕ್ಷಿಣ ಭಾರತದ ಭಾಷೆಗಳಿಗೆ ಸಂಬಂಧಿಸಿದಂತೆ ವಿವರಿಸುತ್ತಾರೆ. ಕಳೆದುಹೋದ ದ್ರಾವಿಡಿಯನ್ ಪದಗಳ ಜಿಜ್ಞಾಸೆ ನಡೆಸುತ್ತಾರೆ. ಹವ್ಯಕ ಎಂಬ ಉಪಭಾಷೆಯ ಬಗ್ಗೆ ಚಿಂತನೆ ನಡೆಸುತ್ತಾರೆ. ದ್ರಾವಿಡಿಯನ್‌ಗೆ ನಷ್ಟವೊದಗಿಸಿ ಇಂಡೋ ಆರ್ಯನ್‌ಗೆ, ಇಂಡೋ ಆರ್ಯನ್‌ಗೆ ನಷ್ಟ ಒದಗಿಸಿ ದ್ರಾವಿಡಿಯನ್‌ಗೆ ಪ್ರೋತ್ಸಾಹ ಕೊಡುವುದರಿಂದ ಸಂಶೋಧನೆಗೂ, ಸೈಧ್ಥಾಂತಿಕರಣಕ್ಕೂ ಅಡ್ಡಿಯಾಗುವುದು ಎಂದು ಅಭಿಪ್ರಾಯಪಡುತ್ತಾರೆ. ಎರಡೂ ಭಾಷಾವರ್ಗಗಳ ಜ್ಞಾನ ಅವಶ್ಯಕ ಎಂಬ ಮರಿಯಪ್ಪ ಭಟ್ಟರ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

೭೦. ಮರ್ರೆ ಬಾರ್ನಸನ್ ಎಮಿನೊ (೧೯೦೪)

ಎಮಿನೋ ಅವರು ದ್ರಾವಿಡ ಭಾಷಾ ವಿಜ್ಞಾನದ ಆಚಾರ್ಯಪುರುಷರಲ್ಲೊಬ್ಬರು. ಇತ್ತೀಚಿನ ಶತಮಾನ ದ್ರಾವಿಡ ಚಿಂತನೆಯನ್ನು ವಿಸ್ತರಿಸಿದವರು. ಮೂಲತಃ ಸಂಸ್ಕೃತ ವಿದ್ಯಾರ್ಥಿಯಾಗಿ ಗ್ರೀಕ್, ಲ್ಯಾಟಿನ್ ಇತ್ಯಾದಿ ಭಾಷೆಗಳನ್ನು ಅರಿತು ಇಂಡೋ ಯುರೋಪಿಯನ್ ತೌಲನಿಕ ಭಾಷಾ ವಿಜ್ಞಾನವನ್ನು ಬೋಧಿಸಿದವರು. ಇಷ್ಟಾದರೂ ದ್ರಾವಿಡ ಚಿಂತನೆಗೆ ಇವರ ಕೊಡುಗೆ ಅಮೋಘ. ಮಾನವಶಾಸ್ತ್ರ, ಜಾನಪದ ಸಂಸ್ಕೃತ, ಕ್ಷೇತ್ರಗಳಲ್ಲೂ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ.

ಬಿ.ಎ. ಪದವಿ ಡಾಲಹೌಸಿ ವಿ.ವಿ.ಯಲ್ಲಿ ಹ್ಯಾಲಿಫ್ಯಾಕ್ಸ್‌ನಲ್ಲಿ ೧೯೨೩ರಲ್ಲಿ ಪೂರೈಸಿ ಎಮಿನೋ ಅವರು ಕೆನಡಾದ ನೊವೆಸ್ಸಾಷಯೊಕ್ಸೆಯ ಲುನೆನಬರ್ಗ್ನಲ್ಲಿ ೧೯೦೪ರ ಫೆಬ್ರವರಿ ೨೮ರಂದ ಜನಿಸಿದರು. ಆಕ್ಸ್ ಫೆರ್ಡಿನಲ್ಲಿ Rhodes ಶಿಷ್ಯವೇತನ ೧೯೨೬ ಎಂ.ಎ. ಉನ್ನತ ವಿದ್ಯಾಭ್ಯಾಸವನ್ನು ಅಮೇರಿಕದ ನ್ಯೂಹೇವನಿನ್‌‌ಯೆಲ್ ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡರು. ೧೯೩೪ರಲ್ಲಿ ಕ್ಷೇತ್ರಕಾರ್ಯಕ್ಕಾಗಿ ಭಾರತಕ್ಕೆ ಬಂದರು. ಭಾರತದಲ್ಲಿ ಮಧ್ಯ ಹಾಗೂ ದಕ್ಷಿಣ ಭಾರತದ ಭಾಷೆಗಳ ಅಧ್ಯಯನ ಮಾಡಿದರು. ತೊದ, ಕೊಡಗು ಕೋಲಾಮಿ, ಕೋತ ನೀಲಗಿರಿ ಭಾಷೆಗಳ ಕುರಿತಾಗಿ ಹಲವಾರು ಲೇಖನ, ಕೃತಿಗಳನ್ನು ಬರೆದರು. ೧೯೫೬ರಲ್ಲಿ ದ್ರಾವಿಡ ಭಾಷೆಗಳು ಪಡೆದಿರುವ ಇಂಡೋ-ಆರ್ಯನ್ ಪದಗಳು ಎಂಬ ಕೃತಿಯನ್ನು ಬರೋ ಅವರೊಂದಿಗೆ ರಚಿಸಿದರು. ಬ್ರಾಹೂ ಈ ಮತ್ತು ತೌಲನಿಕ ವ್ಯಾಕರಣವೆಂಬ ಕೃತಿಯನ್ನು ಇವರಿಬ್ಬರೇ ಸಿದ್ಧಪಡಿಸಿದರು.

ಭಾರತದಲ್ಲಿ ಹಲವಾರು ಬುಡಕಟ್ಟು ಭಾಷೆಗಳನ್ನು ಕ್ಷೇತ್ರಾಧ್ಯಯನ ಮಾಡಿ ಅರಿತುಕೂಂಡ ಇವರು ಮಾನವಶಾಸ್ತ್ರೀಯ, ಭಾಷಾಶಾಸ್ತ್ರೀಯ ಮತ್ತು ತೌಲನಿಕ ಭಾಷಾಧ್ಯಯನಗಳಿಂದ ಎಮಿನೋ ಹಲವಾರು ರಚನೆಯನ್ನು ಪ್ರಕಟಿಸಿದರು.”Proto DravidianC. ೧೯೫೩ Todot, ಮತ್ತು Dravidian Kingship Terms ಹಾಗೂ ೧೯೫೮ರಲ್ಲಿ Numarals in comparative Linguistics (With Special reference to Dravidian) ೧೯೬೨ರಲ್ಲಿ The South Dravidian Languages ಇವೇ ಮೊದಲಾದವುಗಳು.

೧೯೬೧ರಲ್ಲಿ ಟಿ. ಬರೋ ಅವರೊಂದಿಗೆ Dravidian Ethnological Dictionary ಪ್ರಕಟಿಸುವದರೊಂದಿಗೆ ಹಲವಾರು ಪ್ರಕಟಣೆಗಳನ್ನು ನೀಡಿದರು. ೧೯೬೪ರಲ್ಲಿ Dravidian Linguistics, Ethnology and Folktalas, ೧೯೫೮ರಲ್ಲಿ Collected papers, ೧೯೪೬ರಲ್ಲಿ kota texts, ೧೯೫೫ರಲ್ಲಿ Kolami A Dravidian Language, ೧೯೭೧ರಲ್ಲಿ Toda Songs ೧೯೮೪ರಲ್ಲಿ Toda grammar and texts, ೧೯೬೨ರಲ್ಲಿ Dravidian Borrowings from indo aryan, 1980 Language and Linguistic Area” ಇತ್ಯಾದಿ.

ದ್ರಾವಿಡ ವಿಷಯದಲ್ಲಿ ನಾಲ್ಕು ರೀತಿಯಾಗಿ ಅಧ್ಯಯನ ಮಾಡಿದ್ದಾರೆನ್ನುವುದು ವಿದ್ವಾಂಸರ ಅಭಿಮತ, ಸಾಹಿತ್ಯ ಕೃತಿಗಳಲ್ಲಿ ಇಲ್ಲದ ಭಾಷೆಗಳ ವಿವರಣೆ, ಪ್ರತಿ ಭಾಷೆಗಳ ತೌಲನಿಕ ಮಿಮಾಂಶೆಯ ವಿವರಣಾತ್ಮಕ ಸೂಚಿ, ದ್ರಾವಿಡಿಯನ್ ಗುಂಪುಗಳಲ್ಲಿನ ಭಾಷೆಗಳ ತೌಲನಿಕ ಅಧ್ಯಯನ, ಭಾಷೆಯ ರಾಚನಿಕ ಕೂಡ ತೆಗೆದುಕೊಳ್ಳುವಿಕೆ ಮತ್ತು ಭಾಷೆಶಾಸ್ತ್ರದ ತಾತ್ವಿಕತೆ. ಬ್ರಾಹು ಈ ಭಾಷೆಯ ಕುರಿತು ಕೃತಿಗಳನ್ನು ರಚಿಸಿದ್ದಾರೆ. ಅವುಗಂದರೆ Brahui Demonstrative Pronouns (1960), North Dravidian Velar Stops (1961) New Brahui Etymologies (1962) Brahui & Dravidian comparative Grammar (1962)